World Environment Day ವಿಶ್ವ ಪರಿಸರ ದಿನಾಚರಣೆ ಸಸಿ ನೆಡುವ ವನಮಹೋತ್ಸವ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು ನಿತ್ಯೋತ್ಸವವಾಗಲಿ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್.ಸುಂದರರಾಜ್ ಹೇಳಿದರು.
ಅವರು ಹೊಸಮನೆಯ ಪತಂಜಲಿ ಯೋಗ ಕಲಾ ಮಂದಿರದಲ್ಲಿ ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ, ಪತಂಜಲಿ ಕರ್ನಾಟಕ ರಾಜ್ಯ ಗ್ರಾಮ ಅರಣ್ಯ ಸಮಿತಿಗಳ ಒಕ್ಕೂಟ, ಪತಂಜಲಿ ಕರ್ನಾಟಕ ಜಾನಪದ ಕಲಾ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ಜೂ 05 ರಿಂದ 21 ರವರೆಗೆ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಮತ್ತು ಜಾನಪದ ಪರಿಸರ ಗೀತಾಗಾಯನ ಅಭಿಯಾನದಲ್ಲಿ ಪರಿಸರ ಪ್ರೇಮಿಗಳಿಗೆ ಸಸಿ ವಿತರಿಸಿ ಮಾತನಾಡಿದರು.
ಪ್ರಾಣ ಪಕ್ಷಿ ವನ ಸೇರಿದಂತೆ ನಮ್ಮ ಪರಿಸರವನ್ನು ಪ್ರೀತಿ ಮತ್ತು ಕಾಳಜಿಯಿಂದ ಉಳಿಸಿ ಮುಂದಿನ ಪೀಳಿಗೆಗೆ ನೀಡಿದರೆ ವಿಶ್ವ ಪರಿಸರ ದಿನಾಚರಣೆ ಸಾರ್ಥಕವಾಗುತ್ತದೆ ಆದ್ದರಿಂದ ಇಂದೇ ಈ ನಿಟ್ಟಿನಲ್ಲಿ ನಾವು ಸಂಕಲ್ಪ ತೋಡೋಣ ಎಂದರು.
World Environment Day ನ್ಯಾಷನಲ್ ಫಾರೆನ್ಸ್ ನೈಟಿಂಗೆಲ್ ಅವಾರ್ಡ್-2023ಕ್ಕೆ ಭಾಜನರಾದ ಸಿಸ್ಟರ್ ಟಿ.ನಾಗರತ್ನ ಮಾತನಾಡಿ ಕಳೆದ 20 ವರ್ಷಗಳಿಂದ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸಿದ್ದು ಸಾರ್ಥಕವಾಗಿದೆ.
ಇದೇ ತಿಂಗಳು 19ರಂದು ನವದೆಹಲಿಯ ರಾಷ್ಟçಪತಿ ಭವನದಲ್ಲಿ ರಾಷ್ಟಪತಿ ದ್ರೌಪಧಿ ಮುರ್ಮುರವರು ರಾಷ್ಟ್ರಮಟ್ಟದ ನ್ಯಾಷನಲ್ ಫಾರೆನ್ಸ್ ನೈಟಿಂಗೆಲ್ ಅವಾರ್ಡ್ ಪ್ರಧಾನ ಮಾಡುವರು. ಕರೋನ ವಾರಿರ‍್ಸ್, ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ, ಸಮಾಜಸೇವಕರಿಗೆ ಈ ಗೌರವ ಪ್ರಶಸ್ತಿಯನ್ನು ಅರ್ಪಿಸುವುದಾಗಿ ಹೇಳಿದರು..
ಅಂತರಾಷ್ಟ್ರೀಯ ಯೋಗಪಟು ಬೆಂಕಿಶೇಖರಪ್ಪ ಮಾತನಾಡಿ, ಎಲೆಮರೆಕಾಯಿಯಂತೆ ಸಮಾಜಸೇವೆ ಸಲ್ಲಿಸುವ ವಿವಿಧ ಕ್ಷೇತ್ರದ ಸಾಧಕರನ್ನು ಯಾವುದೇ ಶಿಫಾರಸ್ಸು ಇಲ್ಲದೆ ಗುರುತಿಸಿ ಪ್ರೋತ್ಸಾಹಿಸಿ ಮಾರ್ಗದರ್ಶನ ಮಾಡುವ ನಿಸ್ವಾರ್ಥ ಸೇವೆಯನ್ನು ಪತಂಜಲಿ ಸಂಸ್ಥೆ ಕಳೆ 25ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯವಾದದ್ದು ಎಂದರು.
ಡಾ: ಪಿ.ಬಾಲಪ್ಪ ಮಾತನಾಡಿ ಕೆಳಹಂತದ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಅವರು ಜೀವನದಲ್ಲಿ ಉನ್ನತಮಟ್ಟದ ಸಾಧನೆಯನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದರು.
ಸಮಾಜಸೇವಕ ಶಂಕರ್, ಕನಕದಾಸರ ಪಾತ್ರದಲ್ಲಿ ನಿವೃತ್ತ ಇಂಜಿನಿಯರ್ ಆಡಳಿತಾಧಿಕಾರಿ ಎಂ.ಪೂವಯ್ಯ, ಕಡೂರಿನ ಪರಿಮಳ, ಸುಮ, ಷಣ್ಮುಖಿ ಉಷಾ, ಹೊನ್ನಾಳಿಯ ಸೌಮ್ಯಶ್ರೀನಿವಾಸ್, ಆರೋಗ್ಯ ಇಲಾಖೆಯ ಆಶಾ, ರಮೇಶ್, ಶೈಲಜಾ, ಶಿವಲಿಂಗರಾಜ ಒಡೆಯರ್, ಬಸವರಾಜ್ ಎನ್.ಉಪ್ಪಿನ್, ಅಕ್ಕಮ್ಮದೇವಿ, ವಿದ್ಯಾ ಟಿ.ಆರ್.ಸಂತೋಷ್, ಹಾಲೇಶ್ವರಯ್ಯ, ಚೇತನ, ಚಂದ್ರಶೇಖರ್, ಭಾಗ್ಯ, ನೇತ್ರಾವತಿ, ಫಕೀರ್‌ಸಾಬ್ ನದಾಫ್, ನರಸಿಂಹಮೂರ್ತಿ, ಮಂಜಮ್ಮ ಕೆ.ಹರಿಹರ, ಚಂದ್ರಕಲಾ, ಉಮಾಓಂಕಾರಪ್ಪ, ಪ್ರೇಮಾ, ಚೇತನ ಸಿಸ್ಟರ್, ಯುವರಾಜ್, ಕಲಾವಿದರಾದ ಸುಶೀಲ ಭವಾನಿಶಂಕರ್‌ರಾವ್, ಭವಾನಿ ಶಂಕರ್‌ರಾವ್, ಭದ್ರಾವತಿ ವಾಸು, ಜಿ.ಈ.ಶಿವಾನಂದಪ್ಪ, ಶೋಭ, ಮಂಜುನಾಥ್, ಸುಪ್ರಿಯಾ, ಭರತ್, ಹೊನ್ನಾಳಿ ಅಧ್ಯಕ್ಷ ಎಂ.ಬಾಬು, ಶಿವಾನಂದಪ್ಪ, ಧನಂಜಯ, ರಂಗನಾಥ್, ಉಪಸ್ಥಿತರಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಗೌ:ಅಧ್ಯಕ್ಷ ಎಂ.ಈಶ್ವರಪ್ಪ ನವುಲೆ ವಹಿಸಿದ್ದರು. ಕಲಾವಿದೆ ಸುಶೀಲಭವಾನಿಶಂಕರ್‌ರಾವ್ ಪ್ರಾರ್ಥಿಸಿದರು, ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಯೋಗಾಚಾರ್ಯ ಪತಂಜಲಿ ಜೆ.ನಾಗರಾಜ್ ಸ್ವಾಗತಿಸಿದರು. ಕಲಾವಿದೆ ಸುಮಿತ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾವಿದೆ ವಾಣಿ ನಿರೂಪಿಸಿದರು.