ದೇಶಾದ್ಯಂತ ಮಕ್ಕಳ ಮೇಲೆ ನಡೆದ ಸೈಬರ್ ದೌರ್ಜನ್ಯ ಪ್ರಕರಣಗಳು 2019 ಕ್ಕೆ ಹೋಲಿಸಿದರೆ 2020ರಲ್ಲಿ ಶೇ. 400ರಷ್ಟು ಹೆಚ್ಚಾಗಿದೆ. ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಜಾಸ್ತಿ ದಾಖಲಾಗಿರುವ ಐದು ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಸೈಬರ್ ದೌರ್ಜನ್ಯ ಪ್ರಕರಣಗಳು ಉತ್ತರಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ಕೇರಳ ಹಾಗೂ ಓಡಿಸಾ ರಾಜ್ಯಗಳಲ್ಲಿ ಅಧಿಕವಾಗಿ ದಾಖಲಾಗಿವೆ ಎಂದು ವರದಿಯಾಗಿದೆ.
“ಒಟ್ಟು 842 ಪ್ರಕರಣಗಳಲ್ಲಿ 238 ಪ್ರಕರಣಗಳು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಜೊತೆಗೆ ಅವುಗಳ ಚಿತ್ರೀಕರಣ ಮಾಡಿ ರವಾನಿಸಿದ ಪ್ರಕರಣಗಳಾಗಿವೆ” ಎಂದು ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (ಎನ್ ಸಿಆರ್ ಬಿ) ವರದಿ ತಿಳಿಸಿದೆ.
ಎನ್ ಸಿಆರ್ ಬಿ ವರದಿ ಪ್ರಕಾರ, 2019ರಲ್ಲಿ ದೇಶಾದ್ಯಂತ ಮಕ್ಕಳ ಮೇಲೆ ದೌರ್ಜನ್ಯ ಎಸಗಿದ ಕುರಿತು 164 ಕೇಸ್ ದಾಖಲಾಗಿದ್ದವು. ಅದೇ ರೀತಿ 2018ರಲ್ಲಿ 117 ಪ್ರಕರಣ, 2017ರಲ್ಲಿ 79 ಪ್ರಕರಣ ದಾಖಲಾಗಿದ್ದವು. ಮಕ್ಕಳು ಹೆಚ್ಚಿನ ಅವಧಿಯಲ್ಲಿ ಆನ್ಲೈನ್ನಲ್ಲಿಯೇ ಕಳೆಯುತ್ತಿರುವುದರಿಂದ ಇಂತಹ ಪ್ರಕರಣಗಳು ಜಾಸ್ತಿಯಾಗುತ್ತಿವೆ ಎಂದು ತಜ್ಞರು ತಿಳಿಸಿದ್ದಾರೆ.
ಈಗಿನ ಮಕ್ಕಳು ಅಂತರ್ಜಾಲದಲ್ಲಿ ಹೆಚ್ಚಿನ ಸಮಯ ಕಳೆಯುವುದು ಹೆಚ್ಚಾಗಿದೆ. ಇದರೊಂದಿಗೆ ಸ್ಮಾರ್ಟ್ ಫೋನ್ ಬಳಸುವುದು ಸುಲಭವಾಗಿದೆ. ಶೈಕ್ಷಣಿಕ ಕಾರಣಗಳಿಗಾಗಿ ಪೋಷಕರು ಮಕ್ಕಳಿಗೆ ಮೊಬೈಲ್ ಕೊಡಿಸುತ್ತಾರೆ. ಆದರೆ ಮಕ್ಕಳು ಆನ್ಲೈನ್ ನಲ್ಲಿ ಇರುವುದು ಅಪಾಯಕಾರಿಯಾಗಿದೆ. ಅಶ್ಲೀಲ ಚಿತ್ರಗಳ ವೀಕ್ಷಣೆ, ಲೈಂಗಿಕ ಪ್ರಚೋದನೆ, ದೌರ್ಜನ್ಯ, ಅಶ್ಲೀಲ ಚಿತ್ರಗಳ ರವಾನಿಸಿ ಹಲವು ರೀತಿಯಲ್ಲಿ ದೌರ್ಜನ್ಯಕೀಡಾಗುತ್ತಾರೆ ಎಂದು ಕ್ರೈಂ-ಚೈಲ್ಡ್ ರೈಟ್ಸ್ ಅಂಡ್ ಯು ಸಂಸ್ಥೆ ಸಿಇಒ ಪೂಜಾ ಮರ್ವಾಹ ತಿಳಿಸಿದ್ದಾರೆ.
ಮಕ್ಕಳ ಕೈಲಿ ಮೊಬೈಲ್: ದೌರ್ಜನ್ಯಕ್ಕೆ ಆಹ್ವಾನ
Date: