ಎಸ್ ಸಿ, ಎಸ್ ಟಿ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಫ್ರೀಶಿಪ್ ಕಾರ್ಡ್ ವಿತರಣೆ, ಶುಲ್ಕ ಕಟ್ಟದೆ ಫ್ರೀಶಿಪ್ ಕಾರ್ಡ್ ತೋರಿಸಿದರೆ ಕಾಲೇಜು ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ.
ಹಲವು ವಿದ್ಯಾರ್ಥಿಗಳು ಕಾಲೇಜು ಪ್ರವೇಶದ ಸಂದರ್ಭದಲ್ಲಿ ಹಣವಿಲ್ಲದೆ ಇರಬಹುದು. ಇದರಿಂದ ಅನೇಕ ಬಡ ಮಕ್ಕಳು ಶಿಕ್ಷಣದಿಂದ ದೂರ ಉಳಿಯುತ್ತಾರೆ.ಇದನ್ನು ತಪ್ಪಿಸಲು ಸರಕಾರ ಫ್ರೀಶಿಪ್ ಕಾರ್ಡ್ ಯೋಜನೆ ಜಾರಿಗೆ ತಂದಿದೆ.
ಫ್ರೀಶಿಪ್ ಕಾರ್ಡ್ ಬಡ ಮಕ್ಕಳು ಶಿಕ್ಷಣದಿಂದ ದೂರ ಉಳಿಯದೆ ಇರಲಿ ಎಂಬ ದೃಷ್ಟಿಯಿಂದ ರಚಿಸಲಾದ ಯೋಜನೆಯಾಗಿದೆ. ಫ್ರೀಶಿಪ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಬೇಕು. ನಂತರ ತಾವು ಪ್ರವೇಶ ಪಡೆದಿರುವ ಕಾಲೇಜಿಗೆ ಹೋಗಿ ಕಾರ್ಡನ್ನು ತೋರಿಸಿದಲ್ಲಿ, ಯಾವುದೇ ಶುಲ್ಕವಿಲ್ಲದೆ ಉಚಿತ ಪ್ರವೇಶ ಪಡೆಯಬಹುದು.
ಕಾಲೇಜಿಗೆ ಸಮಾಜ ಕಲ್ಯಾಣ ಇಲಾಖೆಯು ವಿದ್ಯಾರ್ಥಿವೇತನ ನೀಡಿ, ಏಳು ದಿನಗಳೊಳಗೆ ಶುಲ್ಕ ಕಟ್ಟುವ ಬಗ್ಗೆ ಪ್ರಮಾಣಪತ್ರವನ್ನು ನೀಡಬೇಕಾಗುತ್ತದೆ. ಇದರಿಂದ ಕಾಲೇಜು ಉಚಿತ ಪ್ರವೇಶ ನೀಡಲಿದೆ. ಉಚಿತ ಪ್ರವೇಶ ಪಡೆದ ನಂತರ ಕಾಲೇಜು ಶುಲ್ಕವನ್ನು ಸಮಾಜ ಕಲ್ಯಾಣ ಇಲಾಖೆ ಪಾವತಿಸಲಿದೆ.
ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ಎಸ್.ಎಸ್.ಪಿ ಪೋರ್ಟಲ್ ನಲ್ಲಿ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸುತ್ತಾರೆ. ಈ ವೆಬ್ ಪೋರ್ಟಲ್ ನಲ್ಲಿ ಹೋಗಿ ಕಾರ್ಡ್ ಗೆ ಅಪ್ಲೈ ಮಾಡಬೇಕು. ತದನಂತರ ಅದೇ ಪೋರ್ಟಲ್ ನಲ್ಲಿ ಫ್ರೀಶಿಪ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಬೇಕು. ಈ ಕಾರ್ಡ್ ಗೆ ವಿದ್ಯಾರ್ಥಿವೇತನದ ನಂಬರ್ ನೀಡಲಾಗಿರುತ್ತದೆ. ಈ ಯೋಜನೆಯಿಂದ ವಿದ್ಯಾರ್ಥಿಗಳು ಶುಲ್ಕ ಪಾವತಿಯ ಸಂಕಷ್ಟದಿಂದ ಪಾರಾಗಬಹುದು.
ಪ್ರಸ್ತುತ ಈ ಕಾರ್ಡ್ ಕೇವಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮಾತ್ರ ಜಾರಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೂ ಈ ಯೋಜನೆ ಜಾರಿಗೆ ತರುವ ಸಂಭವವಿದೆ.