Thursday, August 6, 2026
Thursday, August 6, 2026
Home Blog Page 83

Sigandur Bridge ಸಿಗಂದೂರು ಸೇತುವೆ ಕೆಳಭಾಗ ಈಜಲು ಹೋದ ವ್ಯಕ್ತಿ ಸಾವು.

0

Sigandur Bridge ಶಿವಮೊಗ್ಗ ಸಿಗಂದೂರು ಸೇತುವೆ ಶರಾವತಿ ಹಿನ್ನೀರಿನಲ್ಲಿ ಮುಳುಗಿ ಆಂಧ್ರ ಮೂಲದ ಯುವಕ ಸಾವು
ಸಿಗಂದೂರು ಚೌಡೇಶ್ವರಿ ದೇವಿಯ ದರ್ಶನಕ್ಕಾಗಿ ಕುಟುಂಬಸ್ಥರು ಹಾಗೂ ಸ್ನೇಹಿತರೊಂದಿಗೆ ಬಂದಿದ್ದ ಆಂಧ್ರಪ್ರದೇಶ ಮೂಲದ ಯುವಕನು ಶರಾವತಿ ಹಿನ್ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬುಧವಾರ ನಡೆದಿದೆ.

ಮೃತರನ್ನು ಆಂಧ್ರಪ್ರದೇಶದ ರಾಯದುರ್ಗ ನಿವಾಸಿ ಉಮೇಶ್ (30) ಎಂದು ಗುರುತಿಸಲಾಗಿದೆ.

ಮಾಹಿತಿಯಂತೆ, ಬುಧವಾರ ಮಧ್ಯಾಹ್ನ ಉಮೇಶ್ ಅವರು ಸಿಗಂದೂರು ಸೇತುವೆಯ ಕೆಳಭಾಗದ ಮುಳುಗಡೆ ಪ್ರದೇಶದಲ್ಲಿ ಈಜಲು ನೀರಿಗೆ ಇಳಿದಿದ್ದರು. ಈ ವೇಳೆ ನೀರಿನ ತೀವ್ರ ಸೆಳೆತಕ್ಕೆ ಸಿಲುಕಿದ ಅವರು ನಿಯಂತ್ರಣ ಕಳೆದುಕೊಂಡು ನೀರಿನಲ್ಲಿ ಕೊಚ್ಚಿಹೋಗಿ ನಾಪತ್ತೆಯಾಗಿದ್ದರು.

Sigandur Bridge ಜೊತೆಯಲ್ಲಿದ್ದವರು ತಕ್ಷಣ ಸ್ಥಳೀಯರು ಹಾಗೂ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಕೂಡಲೇ ಸಾಗರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಸ್ಥಳೀಯ ಮೀನುಗಾರರು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಶೋಧ ಕಾರ್ಯಾಚರಣೆ ನಡೆಸಿದರು.

ಕೆಲವು ಗಂಟೆಗಳ ಸತತ ಕಾರ್ಯಾಚರಣೆಯ ಬಳಿಕ ಉಮೇಶ್ ಅವರ ಮೃತದೇಹವನ್ನು ನೀರಿನಿಂದ ಹೊರತೆಗೆದಿದ್ದಾರೆ.

ಈ ಸಂಬಂಧ ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Dr. Dhananjaya Sarji ಸಂಗೀತಕ್ಕೆ ಆಯುಸ್ಸು ಮತ್ತು ಆರೋಗ್ಯ ಎರಡನ್ನೂ ವೃದ್ಧಿಸುವ ಶಕ್ತಿಯಿದೆ- ಡಾ.ಧನಂಜಯ ಸರ್ಜಿ.

0

Dr. Dhananjaya Sarji ಸಂಗೀತ ನಮ್ಮ ಸಂಸ್ಕೃತಿಯ ಬಹು ವಿಶಿಷ್ಟವಾದ ಕಲೆ. ಈ ಕಲೆಗೆ ಮನುಷ್ಯನ ಆರೋಗ್ಯ ಮತ್ತು ಆಯುಸ್ಸು ಎರಡನ್ನೂ ವೃದ್ಧಿಸುವ ಶಕ್ತಿಯಿದೆ ಎಂದು ವಿಧಾನ ಪರಿಷತ್ತಿನ ಸದಸ್ಯರೂ ನುರಿತ ವೈದ್ಯರೂ ಆದ ಡಾ. ಧನಂಜಯ ಸರ್ಜಿ ಅವರು ಹೇಳಿದರು.

ಅವರು ಶಿವಮೊಗ್ಗ ಸಮೀಪ ಹೊಸಹಳ್ಳಿಯಲ್ಲಿ 27-05-2026ಂದು ಅಲ್ಲಿನ “ಸಂಕೇತಿ ಸಂಗೀತ ಸಭಾ”ದ ಬೆಳ್ಳಿಹಬ್ಬದ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.

ಮನುಷ್ಯನ ಚಿಂತೆ, ಅಶಾಂತಿಗಳನ್ನು ದೂರಮಾಡಿ ಸಂತೃಪ್ತಿ, ಆತ್ಮಶಾಂತಿಗಳನ್ನು ನೀಡಿ ವ್ಯಕ್ತಿಯ ಹೃದಯದ ಆರೋಗ್ಯಕ್ಕೆ ಸಂಗೀತ ಕಾರಣವಾಗುತ್ತದೆ ಎಂದು ಅವರು ತಿಳಿಸಿದರು.
ಜೀವನದಲ್ಲಿನ ಒತ್ತಡಗಳನ್ನು ದೂರಮಾಡಿ ವ್ಯಕ್ತಿಯ ಭಾವನಾತ್ಮಕ ಹೃದಯದ ಸಂತಸಕ್ಕೆ ಈ ಕಲೆ ಕಾರಣವಾಗುತ್ತದೆ, ದೀರ್ಘ ಉಸಿರಾಟದಿಂದ ಸಂಗೀತ ವ್ಯಕ್ತಿಯ ಶ್ವಾಸಕೋಶದ ಆರೋಗ್ಯವನ್ನು ಕೂಡ ಕಾಪಾಡುತ್ತದೆ ಎಂದರು.

ಹೊಸಹಳ್ಳಿ-ಮತ್ತೂರು ಗ್ರಾಮಗಳ “ಸಂಕೇತಿ ಸಂಗೀತ ಸಭಾ” 2000ನೇ ಇಸವಿ ಡಿಸೆಂಬರ್‌ನಲ್ಲಿ ಆರಂಭಗೊಂಡು ಇದೀಗ ತನ್ನ ಬೆಳ್ಳಿಹಬ್ಬವನ್ನು ಆಚರಿಸಿಕೊಳ್ಳುತ್ತಿದೆ. ಇದರ ಅಂಗವಾಗಿ ಮೇ 27ರಿಂದ ಮೇ 31ರ ವರೆಗೆ 5 ದಿನಗಳ ಕಾಲ ವಿಶೇಷ ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. 30ರ ಸಂಜೆ 6ರಿಂದ 31ರ ಸಂಜೆ 6ರವರೆಗೆ 24 ಗಂಟೆಗಳ ನಿರಂತರ (ಅಹೋರಾತ್ರಿ) ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಈ ಎಲ್ಲ ಕಾರ್ಯಕ್ರಮಗಳು ಹೊಸಹಳ್ಳಿಯ ಗಮಕ ಭವನದಲ್ಲಿ ನಡೆಯುತ್ತಿರುವುದು ಸಂತಸದ ಸಂಗತಿ ಎಂದರು.

Dr. Dhananjaya Sarji ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕನ್ನಡ-ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ಧೇಶಕ ಹೆಚ್. ಉಮೇಶ್ ಅವರು, ಸಂಕೇತಿ ಸಂಗೀತ ಸಭಾ ಸದಾ ಚಟುವಟಿಕೆಯಿಂದ ಇದ್ದು ಸಂಗೀತ ಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಸರ್ಕಾರದಿಂದ ಅನುದಾನ ಬರಲಿ, ಬಿಡಲಿ ತನ್ನ ಕೆಲಸವನ್ನು ಮಾಡುತ್ತ ಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ ಬೆಳ್ಳಿಹಬ್ಬಕ್ಕೆ ಶುಭ ಕೋರಿದರು.

ಸಭಾದ ಅಧ್ಯಕ್ಷರಾದ ವಿದ್ವಾನ್ ಹೊಸಹಳ್ಳಿ ಕೆ. ವೆಂಕಟರಾಮ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಆರಂಭದಲ್ಲಿ ಭಾರ್ಗವ ಮತ್ತು ಸಂಧಾತ ಅವರಿಂದ ವೇದಘೋಷ, ವಿದ್ವಾನ್ ಗೀತಾ ವೆಂಕಟೇಶ್ ಅವರಿಂದ ಪ್ರಾರ್ಥನೆ, ಹೆಚ್.ಕೆ. ಕೇಶವಮೂರ್ತಿ ಅವರಿಂದ ಸ್ವಾಗತ ನಡೆಯಿತು. ಸಭಾದ ಕಾರ್ಯದರ್ಶಿ ಹೆಚ್.ಎಸ್. ವೆಂಕಟೇಶ ಕಾರ್ಯಕ್ರಮವನ್ನು ನಿರೂಪಿಸಿದರು.

ಉದ್ಘಾಟನಾ ಸಮಾರಂಭದ ನಂತರದಲ್ಲಿ ಮೊದಲ ದಿನದ ಸಂಗೀತ ಕಾರ್ಯಕ್ರಮ ವಿ-ವಿ-ವಿ (ವೀಣೆ-ವೇಣು-ವಯೊಲಿನ್) ನಡೆಯಿತು. ವಿದ್ವಾನ್ ಜೆ. ಯೋಗವಂದನಾ ಅವರಿಂದ ವೀಣೆ, ವಿದ್ವಾನ್ ಸ್ಮಿತಾ ಶ್ರೀಕಿರಣ್ ಅವರಿಂದ ವೇಣು ಮತ್ತು ವಿದ್ವಾನ್ ಅದಿತಿ ಕೃಷ್ಣಪ್ರಕಾಶ್ ಅವರಿಂದ ವಯೊಲಿನ್ ವಾದನವಿತ್ತು. ವಿದ್ವಾನ್ ದೀಪಿಕಾ ಶ್ರೀನಿವಾಸನ್ (ಮೃದಂಗ) ಮತ್ತು ವಿದ್ವಾನ್ ಭಾಗ್ಯಲಕ್ಷಿö್ಮÃ ಎಂ. ಕೃಷ್ಣ (ಮೋರ್ಚಿಂಗ್) ಪಕ್ಕವಾದ್ಯ ಸಹಕಾರ ನೀಡಿದರು. ಕಲಾವಿದರು ಬೆಂಗಳೂರು ಮತ್ತು ಮೈಸೂರಿನಿಂದ ಆಗಮಿಸಿದ್ದರು. 3 ಗಂಟೆಗಳ ಕಾಲ ಬಹಳ ಉತ್ತಮವಾಗಿ ಮೂಡಿಬಂದ ಸಂಗೀತ ಕಾರ್ಯಕ್ರಮ ಸಂಗೀತ ಕಲಾಭಿಮಾನಿಗಳಿಗೆ ಮುದ ನೀಡಿತು.

Agricultural University ಯುವಜನರಲ್ಲಿ ಜನಪದ ಅರಿವು ಮೂಡಿಸುವ ಅಗತ್ಯವಿದೆ-ಬಿ.ಟಾಕಪ್ಪ.

0

Agricultural University ಇರುವುಕ್ಕಿಯ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಆವರಣದಲ್ಲಿ “ನಿರಂತರ-2026” ಹೆಸರಿನಲ್ಲಿ ಸಾಂಪ್ರದಾಯಿಕ ದಿನ ಹಾಗೂ ಜಾನಪದ ಕಲಾ ಉತ್ಸವವನ್ನು ಮಂಗಳವಾರ ಸಂಭ್ರಮದಿಂದ ಆಚರಿಸಲಾಯಿತು. ಶ್ರೀ ಕಣ್ಣೂರೇಶ್ವರ ಜಾನಪದ ಕಲಾಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಈ ಉತ್ಸವವು ವಿದ್ಯಾರ್ಥಿಗಳು ಹಾಗೂ ಕಲಾಭಿಮಾನಿಗಳ ಗಮನ ಸೆಳೆಯಿತು.
ಸಾಂಪ್ರದಾಯಿಕ ಉಡುಪುಗಳಲ್ಲಿ ಕಂಗೊಳಿಸಿದ ವಿದ್ಯಾರ್ಥಿಗಳು ವಿವಿಧ ಸಂಸ್ಕೃತಿಯ ವೈವಿಧ್ಯತೆಯನ್ನು ಅನಾವರಣಗೊಳಿಸಿದರು. ಕಾರ್ಯಕ್ರಮವನ್ನು ಶಿಕ್ಷಣ ನಿರ್ದೇಶಕರಾದ ಡಾ. ಹೇಮ್ಲಾ ನಾಯ್ಕ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ವಿಶೇಷಾಧಿಕಾರಿಗಳಾದ ಡಾ. ಕೆ.ಸಿ. ಶಶಿಧರ್ ವಹಿಸಿದ್ದರು.
Agricultural University ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಾನಪದ ಕಲಾವಿದ ಬಿ. ಟಾಕಪ್ಪ ಕಣ್ಣೂರು ಜಾನಪದ ಕಲೆಗಳ ಮಹತ್ವವನ್ನು ವಿವರಿಸಿ, ಯುವಜನರಲ್ಲಿ ಜನಪದ ಸಂಸ್ಕೃತಿಯ ಅರಿವು ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು. ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.
ಇದೇ ವೇಳೆ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿಗಳಾದ ಡಾ. ಆರ್.ಸಿ. ಜಗದೀಶ್ ವಿವಿಧ ಕಲಾತಂಡಗಳನ್ನು ಅಭಿನಂದಿಸಿ, ಕಲಾವಿದರಿಗೆ ಸನ್ಮಾನ ಹಾಗೂ ನೆನಪಿನ ಕಾಣಿಕೆಗಳನ್ನು ವಿತರಿಸಿದರು. ಜಾನಪದ ಪರಂಪರೆಯನ್ನು ಉಳಿಸಿ ಬೆಳೆಸಲು ವಿಶ್ವವಿದ್ಯಾಲಯ ಸದಾ ಬೆಂಬಲ ನೀಡಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

K. H. Muniyappa ಸಚಿವ ಮುನಿಯಪ್ಪನವರು ಹೊಸ ಸಂಪುಟದಲ್ಲಿ ಡೀಸಿಎಂ ಆಗಲಿ- ಡಾ.ಶ್ರೀನಿವಾಸ ಕರಿಯಣ್ಣ.

0

K. H. Muniyappa ಕೆ.ಎಚ್. ಮುನಿಯಪ್ಪರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲು ಡಾ.ಶ್ರೀನಿವಾಸ ಕರಿಯಣ್ಣ ಅಗ್ರಹ.

ಶಿವಮೊಗ್ಗ: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು, ಸತತ ಏಳು ಬಾರಿ ಸಂಸತ್ ಸದಸ್ಯರಾಗಿ, ಕೇಂದ್ರ ಸಚಿವರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿರುವ, ದಲಿತ ಸಮುದಾಯದ ಹಿರಿಯ ನಾಯಕರಾದ ಶ್ರೀ ಕೆ.ಎಚ್. ಮುನಿಯಪ್ಪ ಅವರನ್ನು ಕರ್ನಾಟಕ ಸರ್ಕಾರದ ನೂತನ ಉಪ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಬೇಕೆಂದು ಶಿವಮೊಗ್ಗ ಗ್ರಾಮಂತರ ಕೇತ್ರದಲ್ಲಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ಮುಖಂಡ ಡಾ.ಶ್ರೀನಿವಾಸ ಕರಿಯಣ್ಣ ಕ್ರಾಂಗ್ರೆಸ್
ವರಿಷ್ಠರಲ್ಲಿ ಮನವಿ ಮಾಡಿದ್ದಾರೆ.

ಮುನಿಯಪ್ಪ ಅವರು 7 ಬಾರಿ ಲೋಕಸಭೆಗೆ ಆಯ್ಕೆಯಾಗಿ, ಕೇಂದ್ರದಲ್ಲಿ ಪ್ರಮುಖ ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿದ ಆಡಳಿತಾತ್ಮಕ ಅನುಭವ ಹೊಂದಿದ್ದಾರೆ.
ದಲಿತ ಸಮುದಾಯದ ಧ್ವನಿಯಾಗಿದ್ದಾರೆ, ದಶಕಗಳಿಂದ ಶೋಷಿತ ಸಮುದಾಯಗಳ ಹಕ್ಕುಗಳಿಗಾಗಿ ನಿರಂತರ ಹೋರಾಟ ಮಾಡಿ, ಸಾಮಾಜಿಕ ನ್ಯಾಯದ ಪರವಾಗಿ ನಿಂತ ನಾಯಕರಾಗಿದ್ದರಾರೆ.

K. H. Muniyappa ಅಲ್ಲದೆ ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಸಂಪೂರ್ಣ ಜೀವನವನ್ನೇ ಮುಡಿಪಾಗಿಟ್ಟು, ಪಕ್ಷ ಸಂಘಟನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ಕೇಂದ್ರ ಸಚಿವರಾಗಿದ್ದಾಗ ಕರ್ನಾಟಕಕ್ಕೆ ಹಲವಾರು ಯೋಜನೆಗಳನ್ನು ತಂದು, ರಾಜ್ಯದ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ ಅದ್ದರಿಂದ ಅವರಿಗೆ ಉಪ ಮುಖ್ಯ ಮಂತ್ರಿ ಸ್ಥಾನ ನೀಡ ಬೇಕು ಎಂದು ಅವರು ಅಗ್ರಹಿದ್ದಾರೆ.

ಸಾಮಾಜಿಕ ನ್ಯಾಯದ ಬದ್ಧತೆಯನ್ನು ಎತ್ತಿ ಹಿಡಿಯುವ ಕಾಂಗ್ರೆಸ್ ಪಕ್ಷವು, ಹಿರಿಯ ದಲಿತ ನಾಯಕರಾದ ಮುನಿಯಪ್ಪ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಮೂಲಕ ರಾಜ್ಯದ ದಲಿತ, ಹಿಂದುಳಿದ ಹಾಗೂ ಶೋಷಿತ ವರ್ಗಗಳಿಗೆ ಸರಿಯಾದ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಕಾಂಗ್ರೆಸ್ ನ ರಾಷ್ಟ್ರ ಮತ್ತು ರಾಜ್ಯಗಳ ಮುಖಂಡರಲ್ಲಿ ಶ್ರೀನಿವಾಸ ಕರಿಯಣ್ಣ ಮನವಿ ಮಾಡಿದ್ದಾರೆ.

image.png

M.S.Santosh ಉದ್ಯಮಿಗಳು, ಉದ್ಯೋಗಿಗಳು ಕಾನೂನನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು- ನ್ಯಾ.ಎಂ.ಎಸ್.ಸಂತೋಷ್.

0

M.S.Santosh ಶಿವಮೊಗ್ಗ, ಭದ್ರಾವತಿ ಕೈಗಾರಿಕಾ ಸಂಘವು ಕಾರ್ಮಿಕ ಇಲಾಖೆಯ ಸಹಯೋಗದೊಂದಿಗೆ ಅರ್ಥಪೂರ್ಣ ಕಾರ್ಮಿಕರ ದಿನಾಚರಣೆಯನ್ನು ಬುಧವಾರ ಯಶಸ್ವಿಯಾಗಿ ಆಯೋಜಿಸಿತು.

ಈ ಕಾರ್ಯಕ್ರಮವು ಕಾರ್ಮಿಕರ ಕಲ್ಯಾಣ, ನೌಕರರ ಹಕ್ಕುಗಳು, ಕೈಗಾರಿಕಾ ಸೌಹಾರ್ದತೆ, ಕೆಲಸದ ಸ್ಥಳದ ಸುರಕ್ಷತೆ ಮತ್ತು ಸುಸ್ಥಿರ ಕೈಗಾರಿಕಾ ಬೆಳವಣಿಗೆಗೆ ಕೈಗಾರಿಕೆಗಳು ಹಾಗೂ ಕಾರ್ಮಿಕರ ನಡುವಿನ ಸಮನ್ವಯದ ಮಹತ್ವದ ಕುರಿತು ಜಾಗೃತಿ ಮೂಡಿಸುವುದರ ಮೇಲೆ ಕೇಂದ್ರೀಕರಿಸಿತ್ತು.

ಈ ವೇಳೆ ಮಾತನಾಡಿದ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಶಿವಮೊಗ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರ ಕಾರ್ಯದರ್ಶಿಗಳಾದ ಸಂತೋಷ್.ಎಂ.ಎಸ್., ಕಾನೂನು ಅನುಸರಣೆ, ಆನ್‌ಲೈನ್ ಕಾನೂನು ಸೇವೆಗಳು, ಉದ್ಯೋಗದಾತ-ಉದ್ಯೋಗಿ ಸಂಬಂಧ ಮತ್ತು ಪ್ರಮುಖ ಕಾನೂನು ಅರಿವಿನ ವಿಷಯಗಳ ಕುರಿತು ನಿಮ್ಮ ಮೌಲ್ಯಯುತ ಮಾರ್ಗದರ್ಶನವು ಎಲ್ಲಾ ಭಾಗವಹಿಸುವವರಿಗೆ ಅಪಾರ ಸ್ಪಷ್ಟತೆ ಮತ್ತು ವಿಶ್ವಾಸವನ್ನು ನೀಡಿದೆ. ಉದ್ಯಮಗಳು ಮತ್ತು ಉದ್ಯೋಗಿಗಳು ಕಾನೂನು ವಿಷಯಗಳನ್ನು ಜವಾಬ್ದಾರಿಯುತವಾಗಿ ಹೇಗೆ ನಿರ್ವಹಿಸಬೇಕು, ಸರಿಯಾದ ಅನುಸರಣೆಯನ್ನು ಕಾಪಾಡಿಕೊಳ್ಳಬೇಕು ಮತ್ತು ಆರೋಗ್ಯಕರ ಕೆಲಸದ ವಾತಾವರಣವನ್ನು ನಿರ್ಮಿಸಬೇಕು ಎಂಬುದರ ಕುರಿತು ಹಂಚಿಕೊಂಡ ಪ್ರಾಯೋಗಿಕ ಒಳನೋಟಗಳು ನಿಜಕ್ಕೂ ಪ್ರಯೋಜನಕಾರಿಯಾಗಿದ್ದವು. ಅರಿವು, ಶಿಸ್ತು, ಪಾರದರ್ಶಕತೆ ಮತ್ತು ಉದ್ಯೋಗದಾತರು ಹಾಗೂ ಉದ್ಯೋಗಿಗಳ ನಡುವಿನ ಪರಸ್ಪರ ಗೌರವಕ್ಕೆ ನೀವು ನೀಡಿದ ಒತ್ತು, ಹೆಚ್ಚು ಕಾನೂನುಬದ್ಧವಾಗಿ, ಜಾಗೃತ ಮತ್ತು ಸೌಹಾರ್ದಯುತ ಕೈಗಾರಿಕಾ ವಾತಾವರಣದತ್ತ ಕೆಲಸ ಮಾಡಲು ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದೆ ಎಂದು ಹೇಳಿದರು.

ಶಿವಮೊಗ್ಗ ಭದ್ರಾವತಿ ಕೈಗಾರಿಕೆಗಳ ಸಂಘದ ಅಧ್ಯಕ್ಷರು ಹಾಗೂ ಮಾಚೇನಹಳ್ಳಿಯ ವಿಜಯ ಪ್ರೈವೇಟ್ ಲಿಮಿಟೆಡ್ ನ ಕಾರ್ಯನಿರ್ವಾಹಕ ನಿರ್ದೇಶಕರಾದ ಡಿ.ಜಿ.ಬೆನಕಪ್ಪ ಅವರು, ಉದ್ಯೋಗಿಗಳಿಗೆ ಹಣಕಾಸಿನ ಅರಿವು ಹಾಗೂ ಮಾಸಿಕ ಖರ್ಚು ನಿರ್ವಹಣೆ ಕುರಿತು ಮಹತ್ವದ ಜಾಗೃತಿ ಮೂಡಿಸಿದರು. ತಮ್ಮ ಉಪನ್ಯಾಸದಲ್ಲಿ ಆದಾಯಕ್ಕೆ ಅನುಗುಣವಾಗಿ ಖರ್ಚು ಮಾಡುವ ಅಗತ್ಯತೆ, ಅನಾವಶ್ಯಕ ವೆಚ್ಚಗಳನ್ನು ನಿಯಂತ್ರಿಸುವುದು, ಉಳಿತಾಯದ ಮಹತ್ವ ಹಾಗೂ ಭವಿಷ್ಯದ ಸುರಕ್ಷತೆಗಾಗಿ ಹಣವನ್ನು ಸಮರ್ಪಕವಾಗಿ ಯೋಜಿಸುವ ಕುರಿತು ವಿವರಿಸಿದರು.

M.S.Santosh ಕಾರ್ಮಿಕ ಇಲಾಖೆಯ ಅಧಿಕಾರಿಗಳು ಸಭೆಯನ್ನುದ್ದೇಶಿಸಿ ಮಾತನಾಡಿ, ಕಾರ್ಮಿಕ ಕಾನೂನುಗಳು, ಕಾರ್ಮಿಕರ ಪ್ರಯೋಜನಗಳು, ಸುರಕ್ಷತಾ ಕ್ರಮಗಳು ಮತ್ತು ಅನುಸರಣಾ ಕಾರ್ಯವಿಧಾನಗಳ ಕುರಿತು ಮೌಲ್ಯಯುತ ಮಾರ್ಗದರ್ಶನ ನೀಡಿದರು. ನೌಕರರ ಕಲ್ಯಾಣವನ್ನು ಬೆಂಬಲಿಸುವಲ್ಲಿ ಮತ್ತು ಆರೋಗ್ಯಕರ ಕೈಗಾರಿಕಾ ಸಂಬಂಧಗಳನ್ನು ಕಾಪಾಡಿಕೊಳ್ಳುವಲ್ಲಿ ಕೈಗಾರಿಕೆಗಳು ಮಾಡುತ್ತಿರುವ ಪ್ರಯತ್ನಗಳನ್ನು ಅವರು ಪ್ರಶಂಸಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ಉಪ ವಿಭಾಗದ ಕಾರ್ಮಿಕ ಅಧಿಕಾರಿ ವೇಣುಗೋಪಾಲ್.ಎಂ.ಪಿ.,
ಶಿವಮೊಗ್ಗ ಭದ್ರಾವತಿ ಕೈಗಾರಿಕೆಗಳ ಸಂಘದ ಉಪಾಧ್ಯಕ್ಷರಾದ ಎ.ಎಲ್.ಚಂದ್ರಶೇಖರ್, ಶಿವಮೊಗ್ಗ ಭದ್ರಾವತಿ ಕೈಗಾರಿಕೆ ಸಂಘದ ಕಾರ್ಯದರ್ಶಿ ರಾಜೇಶ್ – ಎಸ್ ಎಸ್ ಟಿ, ಶಿವಮೊಗ್ಗ 2 ನೇ ವೃತ್ತದ ಕಾರ್ಮಿಕ ನಿರೀಕ್ಷಕರಾದ ಸುಖಿತ.ಕೆ.ಸಿ., ಭದ್ರಾವತಿ 1 ನೇ ವೃತ್ತದ ಕಾರ್ಮಿಕರ ನಿರೀಕ್ಷಕರಾದ ಸುಪಿತ್ತಾ.ಜೆ.ವಿ., ಭದ್ರಾವತಿ 2 ನೇ ವೃತ್ತದ ಕಾರ್ಮಿಕ ನಿರೀಕ್ಷಕರಾದ ರಕ್ಷಿತ್.ಬಿ.ಎಂ., ಶಿವಮೊಗ್ಗ ಭದ್ರಾವತಿ ಕೈಗಾರಿಕೆಗಳ ಸಂಘದ ಖಜಾಂಚಿ ದಿನೇಶ್.ಹೆಚ್‌.ಎಲ್., ಕೌನ್ಸಿಲ್ ಮೆಂಬರ್ಸ್ ಶಿವಮೊಗ್ಗ ಭದ್ರಾವತಿ ಕೈಗಾರಿಕೆ ಸಂಘ, ಹಾಗೂ ಕಾರ್ಮಿಕರು ನೆರವೇರಿದರು. ಕೈಗಾರಿಕಾ ಪ್ರತಿನಿಧಿಗಳು, ಕಾರ್ಮಿಕರು, ಸಂಘದ ಸದಸ್ಯರು ಮತ್ತು ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

Padma Bhushan Award ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಡಾ.ಶತಾವಧಾನಿ‌ ಆರ್. ಗಣೇಶ್

0

Padma Bhushan Award ಕರ್ನಾಟಕದ ಪ್ರಸಿದ್ಧ ವಿದ್ವಾಂಸರಾದ
ಶತಾವಧಾನಿ ಆರ್.ಗಣೇಶ್ ಅವರು
ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕನ್ನಡಿಗರು ಹೆಮ್ಮೆ ಪಡುವ ಸರಸ್ವತಿಪುತ್ರ
ಡಾ.ಶತಾವಧಾನಿ ಆರ್.ಗಣೇಶ್.
ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರಿಂದ
ವಿಶೇಷ ಸಮಾರಂಭದಲ್ಲಿ
ಶ್ರೀಗಣೇಶ್ ಅವರು ಪ್ರಶಸ್ತಿ ಮತ್ತು ಪ್ರಮಾಣಪತ್ರ ಸ್ವೀಕರಿಸಿದರು

B.Y. Raghavendra ಡೀಮ್ಡ್ ಫಾರೆಸ್ಟ್ ಸಮಸ್ಯೆಗೆ ಪರಿಹಾರದ ಚರ್ಚೆಗೆ ಸಂಸದ ರಾಘವೇಂದ್ರ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ.

0

B.Y. Raghavendra ಶಿಕಾರಿಪುರ ತಾಲ್ಲೂಕಿನ ರೈತ ಬಾಂಧವರ ಹಾಗೂ ಸಾರ್ವಜನಿಕರ ದಶಕಗಳ ಪ್ರಮುಖ ತೊಂದರೆಗೆ ಕಾರಣವಾಗಿರುವ ಡೀಮ್ಡ್ ಫಾರೆಸ್ಟ್ (ಭಾವಿತ ಅರಣ್ಯ) ಸಮಸ್ಯೆಗೆ ತಾರ್ಕಿಕ ಹಾಗೂ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಿಕಾರಿಪುರದಲ್ಲಿ ಒಂದು ಮಹತ್ವದ ಜಂಟಿ ಸಮಾಲೋಚನಾ ಸಭೆಯನ್ನು ಸಂಸದ ಬಿ.ವೈ.ರಾಘವೇಂದ್ರ ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಉನ್ನತ ಮಟ್ಟದ ಸಭೆಯು ಶಿಕಾರಿಪುರ ಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ಬಿ.ವೈ. ವಿಜಯೇಂದ್ರ ಮತ್ತು ಪ್ರಮುಖರಾದ ಶ್ರೀ ಕೆ.ಎಸ್. ಗುರುಮೂರ್ತಿ ಅವರ ಉಪಸ್ಥಿತಿ ಹಾಗೂ ಜಂಟಿ ನೇತೃತ್ವದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.

ಸಭೆಯಲ್ಲಿ ತಾಲ್ಲೂಕಿನ ತಹಶೀಲ್ದಾರರು, ವಲಯ ಅರಣ್ಯಾಧಿಕಾರಿಗಳು (RFO) ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಲ್ಲಿ ಬರುವ ಜಮೀನುಗಳ ವಾಸ್ತವ ಸ್ಥಿತಿಗತಿ, ಗಡಿರೇಖೆ ಗೊಂದಲ ಆಗುತ್ತಿರುವ ತಾಂತ್ರಿಕ ಲೋಪದೋಷಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು.

B.Y. Raghavendra ಸಭೆಯ ಕೊನೆಯಲ್ಲಿ, ಇಲಾಖೆಗಳ ನಡುವಿನ ಗೊಂದಲಗಳನ್ನು ತಕ್ಷಣವೇ ನಿವಾರಿಸಲು ಜಂಟಿ ಸರ್ವೆ ನಡೆಸಬೇಕೆಂದು ಅಧಿಕಾರಿಗಳಿಗೆ ಸಂಸದರು ಮತ್ತು ಶಾಸಕರು ನಿರ್ದೇಶನ ನೀಡಿದರು. ಇದರೊಂದಿಗೆ, ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಿಂದ ಅರ್ಹ ಸಾಗುವಳಿ ಜಮೀನುಗಳನ್ನು ಮುಕ್ತಗೊಳಿಸಲು ಮತ್ತು ಮಲೆನಾಡಿನ ರೈತರ ಹಿತರಕ್ಷಣೆಯನ್ನು ಕಾಯ್ದುಕೊಳ್ಳಲು ಸರ್ಕಾರದ ಉನ್ನತ ಮಟ್ಟದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಕುರಿತು ಸಮಾಲೋಚಿಸಲಾಯಿತು. ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗದಂತೆ ಕಾನೂನಾತ್ಮಕವಾಗಿ ಮತ್ತು ಆಡಳಿತಾತ್ಮಕವಾಗಿ ಎಲ್ಲಾ ರೀತಿಯ ಪ್ರಯತ್ನಗಳನ್ನು ನಿರಂತರವಾಗಿ ಮುಂದುವರೆಸಲು ಸಭೆಯಲ್ಲಿ ನಿರ್ಧರಿಸಲಾಯಿತು

CM Siddharamaiah ಸೀಎಂ ಸಿದ್ಧರಾಮಯ್ಯನವರಿಗೆಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ ಸಲ್ಲಿಕೆ.

0

CM Siddharamaiah ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಮುಖ್ಯಮಂತ್ರಿಗಳ ಕಛೇರಿಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯಕ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯನ್ನು ಸಲ್ಲಿಸಿದರು.‌

CM Siddharamaiah ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ, ಸಮಾಜ ಕಲ್ಯಾಣ ಇಲಾಖೆ ಎಚ್.ಸಿ.ಮಹದೇವಪ್ಪ, ಕೃಷಿ‌ ಸಚಿವ ಚೆಲುವರಾಯಸ್ವಾಮಿ, ಶಾಸಕ ರಾಘವೇಂದ್ರ ಹಿಟ್ನಾಳ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತ ಕೆ.ದಯಾನಂದ ಹಾಗೂ ಇನ್ನಿತರರು‌ ಉಪಸ್ಥಿತರಿದ್ದರು.

High Court ಶಿವಮೊಗ್ಗಕ್ಕೆ ಹೈಕೋರ್ಟ್ ಸಂಚಾರಿ ಪೀಠ ಬೇಡಿಕೆ: ಜೆಸಿಐ ಶಿವಮೊಗ್ಗ ವಿವೇಕ್ ಬೆಂಬಲ.

0

High Court ಮಲೆನಾಡು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಸಾರ್ವಜನಿಕರ ಹಿತದೃಷ್ಟಿಯಿಂದ ಶಿವಮೊಗ್ಗದಲ್ಲಿ ಸಂಚಾರಿ ಹೈಕೋರ್ಟ್ ಪೀಠವನ್ನು ಸ್ಥಾಪಿಸಬೇಕೆಂಬ ನ್ಯಾಯಸಮ್ಮತ ಹೋರಾಟಕ್ಕೆ ಜೆಸಿಐ ಶಿವಮೊಗ್ಗ ವಿವೇಕ್ ಸಂಸ್ಥೆಯು ತನ್ನ ಸಂಪೂರ್ಣ ಬೆಂಬಲವನ್ನು ಘೋಷಿಸಿದೆ. ಇಂದು ನಗರದ ವಕೀಲರ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆ ಹಾಗೂ ಹೋರಾಟ ಕಾರ್ಯಕ್ರಮದಲ್ಲಿ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡು ಹೋರಾಟಕ್ಕೆ ಧ್ವನಿಗೂಡಿಸಿದರು. ಈ ಸಂದರ್ಭದಲ್ಲಿ ಶಿವಮೊಗ್ಗದ ಹಿರಿಯ ವಕೀಲರು ಗೌರವಾಧ್ಯಕ್ಷರು ಬಸಪ್ಪ ಗೌಡ್ರು ಶಿವಮೊಗ್ಗದಲ್ಲಿ ಸಂಚಾರಿ ಪೀಠಕ್ಕಾಗಿ ಹೆಚ್ಚಿನ ಬೆಂಬಲವನ್ನು ನೀಡಿದರು. ಹೆಚ್ಚಿನ ವಕೀಲರು ಇಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಜೆಸಿಐ ಶಿವಮೊಗ್ಗ ವಿವೇಕ್ ಸಂಸ್ಥೆಯ 2026ನೇ ಸಾಲಿನ ಅಧ್ಯಕ್ಷರಾದ ಜೆ ಸಿ ವಿಜಯಲಕ್ಷ್ಮಿ ಕದಂಬ ಅವರು, “ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಯಾಗುವುದು ಇಂದಿನ ತುರ್ತು ಅಗತ್ಯವಾಗಿದೆ. ಇದರಿಂದ ಈ ಭಾಗದ ಜನರಿಗೆ ಮತ್ತು ವಕೀಲರಿಗೆ ಕಾಲಹರಣ ಹಾಗೂ ಆರ್ಥಿಕ ಹೊರೆ ತಪ್ಪಲಿದ್ದು, ಶೀಘ್ರ ನ್ಯಾಯ ಸಿಗಲು ಸಹಕಾರಿಯಾಗಲಿದೆ. ಈ ಪವಿತ್ರ ಹೋರಾಟಕ್ಕೆ ನಮ್ಮ ಸಂಸ್ಥೆಯು ಸದಾ ಬೆಂಬಲವಾಗಿ ನಿಲ್ಲಲಿದೆ” ಎಂದು ತಿಳಿಸಿದರು.
“ನ್ಯಾಯದಾನ ಪ್ರಕ್ರಿಯೆ ಜನಸಾಮಾನ್ಯರ ಸನಿಹಕ್ಕೆ ಬರಬೇಕು. ಶಿವಮೊಗ್ಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾಗುವವರೆಗೂ ನಮ್ಮ ಬೆಂಬಲ ಮುಂದುವರಿಯುತ್ತದೆ.”

High Court ಕಾರ್ಯಕ್ರಮದಲ್ಲಿ ಸಂಸ್ಥೆಯ ಪೂರ್ವ ಅಧ್ಯಕ್ಷರಾದ (ಪಾಸ್ಟ್ ಪ್ರೆಸಿಡೆಂಟ್) ಪ್ರಮುಖರಾದ ಜೆ ಸಿ ಉದಯ ಕದಂಬ, ಜೆ ಸಿ ಕಾಟನ್ ಜಗದೀಶ್ ಜೆಸಿ ಸತೀಶ್ ಕುಮಾರ್ ಎಸ್ ಎಸ್ ಜೆ ಸಿ ಸಾಫ್ಟ್‌ವೇರ್ ಜಗದೀಶ್ ಸೇರಿದಂತೆ ನಗರದ ಜೆಸಿಐ ಸಂಸ್ಥೆಯ ಹಲವಾರು ಹಿರಿಯ ಹಾಗೂ ಕಿರಿಯ ಜೆಸಿ ಬಾಂಧವರು ಪಾಲ್ಗೊಂಡು ವಕೀಲರ ಹೋರಾಟಕ್ಕೆ ಸಾಥ್ ನೀಡಿದರು.

Breaking News ಸಿದ್ಧರಾಮಯ್ಯ ರಾಜೀನಾಮೆ? ಡಿ.ಕೆ.ಶಿವಕುಮಾರ್ ಗೆ ಸೀಎಂ ಪಟ್ಟ?.

0

Breaking News ನವದೆಹಲಿಯಲ್ಲಿ ರಾಜಕೀಯ ಚಟುವಟಿಕೆ ಬಿರುಸಾಗಿ ನಡೆದಿದೆ. ರಾಜ್ಯದ ಕಾಂಗ್ರೆಸ್ ನಾಯಕರು, ಶಾಸಕರು,ಸಚಿವರು , ಸಿದ್ಧರಾಮಯ್ಯ ಬೆಂಬಲಿಗರು,ಡಿ.ಕೆ.ಶಿವಕುಮಾರ್ ಬೆಂಬಲಿಗರು ರಾಷ್ಟ್ರದ ರಾಜಧಾನಿಯಲ್ಲಿ ಬೀಡುಬಿಟ್ಟಿದ್ದಾರೆ.
ಪಕ್ಷದ ಹೈಕಮಾಂಡ್ ನಲ್ಲಿ ಕೇವಲ ರಾಹುಲ್ ಗಾಂಧಿ, ವೇಣುಗೋಪಾಲ್ ಅವರ ಉಪಸ್ಥಿತಿಯ ಸಭೆ ಬಗ್ಗೆ ಉಲ್ಲೇಖಿಸಲಾಗುತ್ತಿದೆ.
ರಾಹುಲ್ ಗಾಂಧಿ ಅವರು ದೆಹಲಿ ರಾಜಕಾರಣಕ್ಕೆ ಪ್ರಮೋಷನ್ ಕೊಡುತ್ತೇವೆ ಬನ್ನಿ ಎಂದು ಸಿದ್ಧರಾಮಯ್ಯನವರಿಗೆ‌ಆಫರ್ ನೀಡಿದ್ದಾರಂತೆ.
ಆದರೆ ಇದು ಹಳೇಯ ಸುದ್ದಿ. ಯಾಕೆಂದರೆ ನನಗೆ ರಾಷ್ಡ್ರ ರಾಜಕಾರಣ ಪ್ರವೇಶ ಇಷ್ಟವಿಲ್ಲ ಎಂದು ಸಿದ್ಧರಾಮಯ್ಯ ತಿಳಿಸಿಯಾಗಿದೆ.

ಮಾಧ್ಯಮಗಳಂತೂ ಡಿ.ಕೆ .ಶಿವಕುಮಾರ್ ಸಿಎಂ ಪಟ್ಟ ಅಲಂಕರಿಸುವುದು ಗ್ಯಾರಂಟಿ ಎಮನದು ಸಾರುತ್ತಿವೆ.
ಏತನ್ಮಧ್ಯೆ ಸಿದ್ಧರಾಮಯ್ಯ ಬೆಂಬಲಿಗರು ,ಸಿದ್ಧರಾಮಯ್ಯನವರ ಪರ ರಾಜ್ಯದಾದ್ಯಂತ ಪ್ರತಿಭಟಿಸುವುದಾಗಿ ಹೇಳಿಕೆ ನೀಡಿರುವುದೂ ಹೊಸ ಸಂಚಲನಕ್ಕೆ ಕಾರಣವಾಗಿದೆ.
ಇಷ್ಟಾದರೂ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ತಮ್ಮ ರಾಜೀನಾಮೆಯ ಸುಳಿವನ್ನ ಕಿಂಚಿತ್ತೂ ಬಿಟ್ಟುಕೊಟ್ಟಿಲ್ಲ.
ಆದರೆ ಡಿ.ಕೆ.ಶಿವಕುಮಾರ್ ರಾಜ್ಯ ಕಾಂಗ್ರೆಸ್ ಪಕ್ದಷ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ದಟ್ಟ ,ನಿಖರ ಸುದ್ದಿ ಬರುತ್ತಿದೆ. ಅದಕ್ಕೆ ಪುಷ್ಠಿ ನೀಡುವಂತೆ ಪಕ್ಷದ ಉಸ್ತುವಾರಿ ರಣದೀಪ್ ಸುರ್ಜಿವಾಲ ಬೆಂಗಳೂರಿಗೆ ವಿಮಾನ ಏರಿದ್ದಾರೆ.
ಎಲ್ಲದರ ನಡುವೆ ಸಿದ್ಧರಾಮಯ್ಯನವರ ಭಾರವಾದ ‘ಮೌನ, ‘
ಬದಲಾವಣೆಯ ಬಗ್ಗೆ
ಗ್ಯಾರಂಟಿ ಸುಳಿವು ನೀಡುತ್ತಿದೆ.

Breaking News ದಾಖಲೆ ಅವಧಿಯ ಸಿಎಂ ಪಟ್ಟ ಅನುಭವಿಸಿದ ಸಿದ್ಧರಾಮಯ್ಯನವರ
ದೀರ್ಘ ಆಡಳಿತ ಕೊನೆ ತಲುಪುತ್ತಿರುವಂತಿದೆ.
” ಏನ್ ತೀರ್ಮಾನ ನಾಳೆ ಹೇಳ್ತೀನಿ” ಅಂತ ಪತ್ರಕರ್ತರಿಗೆ ಸಿದ್ಧರಾಮಯ್ಯ ಹೇಳಿದ್ದಾರೆ.
ಮಂತ್ರಿಮಂಡಲದಲ್ಲಿ
ಹುಟ್ಟಿಗೆ ಚಾತಕ ಪಕ್ಷಿಯಂತೆ ಕಾಯುತ್ತಿರುವ ಶಾಸಕರ ಮುಖದಲ್ಲಿ
ಮಿಂಚು ಕಾಣಲಾರಂಭಿಸಿದೆ.
ಸಚಿವ ಪಟ್ಟ ಕಳೆದುಕೊಳ್ಳುವ ಭೀತಿಯೂ ಹಲವು ಹಾಲಿ ಸಚಿವರನ್ನ ಕಾಡುತ್ತಿದೆ.
ಹೊಸ ಸೀಎಂ ,ಸುದ್ದಿಗೆ ಒಂದು ದಿನ ಕಾಯಬೇಕಿದೆ.