Wednesday, August 5, 2026
Wednesday, August 5, 2026
Home Blog Page 79

Shimoga District Soldier Welfare and Rehabilitation Department ವೀರ್ ಪರಿವಾರ್ ಸಹಾಯತಾ ಯೋಜನೆಯಡಿ ಮಾಜಿ ಯೋಧರಿಗೆ ಉಚಿತ ಕಾನೂನು ನೆರವು ಮಾಹಿತಿ ಕಾರ್ಯಕ್ರಮ

0

Shimoga District Soldier Welfare and Rehabilitation Department ಶಿವಮೊಗ್ಗ ಜಿಲ್ಲಾ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಸಹಯೋಗದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ವೀರ್ ಪರಿವಾರ್ ಸಹಾಯತಾ ಯೋಜನೆಯಡಿ ಉಚಿತ ಕಾನೂನು ಸೇವೆಯನ್ನು ಒದಗಿಸಲಾಗುತ್ತಿದ್ದು, ಜೂ. 07 ರಂದು ಬೆಳಿಗ್ಗೆ 10.30 ಕ್ಕೆ ಶಿವಮೊಗ್ಗ ರಾಜ್ಯ ಸರ್ಕಾರಿ ನೌಕರರ ಭವನದ ಸಭಾ ಭವನದಲ್ಲಿ ಲಭ್ಯ ಕಾನೂನು ಸೇವೆಗಳ ಕುರಿತಂತೆ ವಿಸ್ತ್ರತ ಮಾಹಿತಿ ನೀಡುವ ಸಲುವಾಗಿ “ಕಾನೂನು ಅರಿವು” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮಕ್ಕೆ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಸೈನಿಕರು ಮತ್ತು ಕುಟುಂಬದವರು. ಮಾಜಿ ಸೈನಿಕರು, ವೀರ ನಾರಿಯರು ಹಾಗೂ ಮಾಜಿ ಸೈನಿಕರ ಅವಲಂಬಿತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಲಭ್ಯ ಕಾನೂನು ಸೇವೆಗಳ ಮಾಹಿತಿ ಪಡೆದುಕೊಳ್ಳುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

Shimoga District Soldier Welfare and Rehabilitation Department ಹೆಚ್ಚಿನ ಮಾಹಿತಿಗಾಗಿ 08182-220925 ನ್ನು ಸಂಪರ್ಕಿಸುವುದು.

ಯೋಗ ಪ್ರಾಣಾಯಾಮಗಳು ನಮ್ಮ ಪ್ರತಿನಿತ್ಯದ ಅವಿಭಾಜ್ಯ ಅಂಗವಾಗಬೇಕು- ಡಾ.ಸಿ.ವಿ.ರುದ್ರಾರಾಧ್ಯ

0

ಶಿವಮೊಗ್ಗದ ವಿನೋಬನಗರ -ಕಾಶಿಪುರದ ಕಲ್ಲಳ್ಳಿ ಶ್ರೀ ಶಿವಗಂಗಾ ಯೋಗ ಕೇಂದ್ರದ ಮುಖ್ಯ ಕಚೇರಿ ಯಲ್ಲಿ 38 ಕೇಂದ್ರದ ಶಿಕ್ಷಕರಿಗೆ ಹಾಗೂ ತರಬೇತುದಾರರಿಗೆ ಹಮ್ಮಿಕೊಳ್ಳಲಾದ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ರಾಧಾ ಡಾ. ಸಿವಿ ರುದ್ರಾರಾಧ್ಯರು ಮಾತನಾಡಿದರು.

ಒತ್ತಡದ ಪ್ರಪಂಚದಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ಒಂದು ದೊಡ್ಡ ಸವಾಲಾಗಿದೆ ಪ್ರತಿನಿತ್ಯ ಅನಾವು ಸೇವಿಸುವ ಆಹಾರದಲ್ಲಿ ಎಷ್ಟು ಪೌಷ್ಟಿಕಾಂಶ ಇದೆ ಹಾಗೂ ನಾರಿನಂಶ ಇದೆ ಎಂಬುದನ್ನು ಅರಿತುಕೊಳ್ಳಬೇಕು ಹಾಗೆ ಪ್ರತಿನಿತ್ಯ ಸಕಾರಾತ್ಮಕ ಭಾವನೆಯಿಂದ ನಮ್ಮ ಜೀವನ ಶೈಲಿಯನ್ನು ಮುಂದುವರಿಸುವುದರ ಜೊತೆಗೆ ಯೋಗ ಪ್ರಾಣಾಯಾಮ ಧ್ಯಾನ ಇವುಗಳು ನಮ್ಮ ಪ್ರತಿನಿತ್ಯದ ಅವಿಭಾಜ್ಯ ಅಂಗವಾಗಬೇಕು‌. ಇತ್ತೀಚಿನ ವರದಿಗಳ ಪ್ರಕಾರ ಯೋಗ ಪ್ರಾಣಾಯಾಮ ಧ್ಯಾನ ಮಾಡುವವರಿಗೆ ಆರೋಗ್ಯದ ಸಮಸ್ಯೆ ಹೆಚ್ಚಾಗಿ ಕಾಣುವುದಿಲ್ಲ ಅವರು ಸದಾ ಆತ್ಮವಿಶ್ವಾಸದಿಂದ ಕೂಡಿರುತ್ತಾರೆ ಪೋಷಕರು ಬಾಲ್ಯದಲ್ಲೇ ತಮ್ಮ ಮಕ್ಕಳಿಗೆ ಪ್ರತಿನಿತ್ಯ ಯೋಗ ಅಭ್ಯಾಸ ಮಾಡಿಸಿದರೆ ಯಾವ ಕಾಯಿಲೆಗಳು ಸಹ ಅವರ ಬಳಿ ಸುಳಿಯುವುದಿಲ್ಲ ಹಾಗೆ ನಮ್ಮ ಟ್ರಸ್ಟಿಗಳು ಮತ್ತು ಯೋಗ ಬಂಧುಗಳು ಹಾಗೂ ಶಿಕ್ಷಕರ ಸಹಕಾರದಿಂದ ಇಂದು ಶಿವಮೊಗ್ಗ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಉಚಿತವಾಗಿ ಸಾವಿರಾರು ಜನರು ಯೋಗ ಪ್ರಾಣಾಯಾಮ ಧ್ಯಾನವನ್ನು ಅಭ್ಯಾಸ ಮಾಡುತ್ತಾ ಆರೋಗ್ಯವಂತರಾಗಿ ಸಂಸಾರ ನಡೆಸುತ್ತಿದ್ದಾರೆ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಶಿವಗಂಗಾ ಯೋಗ ಕೇಂದ್ರದ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಶೇಖರಯ್ಯನವರು ಮಾತನಾಡುತ್ತಾ ನಮ್ಮ ಶಿವಗಂಗಾ ಯುವ ಕೇಂದ್ರ ವಿದೇಶದಲ್ಲಿಯೂ ಸಹ ಮನೆ ಮಾತಾಗಿದೆ ಹಾಗೆ ಪ್ರತಿಯೊಂದು ಕ್ಷೇತ್ರಗಳನ್ನು ಸಹ ತರಬೇತಿ ಬಹಳ ಮುಖ್ಯ ಶಿಕ್ಷಕರು ಪರಿಪಕ್ವವಾಗಿ ತರಬೇತಿಯನ್ನು ಪಡೆದರೆ ಶಿಬಿರಾರ್ಥಿಗಳಿಗೆ. ಅಭ್ಯಾಸ ಮಾಡಿಸಲು ಉತ್ತಮವಾಗುತ್ತದೆ ಯೋಗ ಪ್ರಾಣಾಯಾಮ ಧ್ಯಾನವನ್ನು ಸರಿಯಾದ ಕ್ರಮದಲ್ಲಿ ಅಭ್ಯಾಸ ಮಾಡದಿದ್ದರೆ ಅಡ್ಡ ಪರಿಣಾಮಗಳು ಆಗುತ್ತದೆ ಆದ್ದರಿಂದ ತರಬೇತಿಗಳು ಹೆಚ್ಚು ಮಹತ್ವವನ್ನು ಪಡೆದಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ 38 ಯೋಗ ಕೇಂದ್ರದ ಶಿಕ್ಷಕರು ಸಹ ಶಿಕ್ಷಕರು ಹಾಗೂ ಶಿವರಾತ್ರಿಗಳು ಉಪಸ್ಥಿತರಿದ್ದರು ಪ್ರಾರಂಭದಲ್ಲಿ ಯೋಗ ಶಿಕ್ಷಕರಾದ ಶ್ರೀಕಾಂತ್ ಅವರಿಂದ ಒಂದು ಗಂಟೆಗಳ ಕಾಲ ಯೋಗ ಧ್ಯಾನ ನಡೆಯಿತು. ಶಿಬಿರದಲ್ಲಿ ಯೋಗ ಶಿಕ್ಷಕರಾದ ಜಿಎಸ್ ಓಂಕಾರ್. ಹರೀಶ್. ಹಾಗೂ ಜಿ ವಿಜಯಕುಮಾರ್. ಲವಕುಮಾರ್ ನಾಗರತ್ನಮ್ಮ ಚಂದ್ರಶೇಖರ್ ಉಪಸ್ಥಿತರಿದ್ದರು.

ನಿಯೋಜಿತ ಸಿಎಂ ,ಡಿ.ಕೆ.ಶಿವಕುಮಾರ್ ಅವರಿಗೆ ಅಭಿನಂದನೆ

0

ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕರು ಹಾಗೂ ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಅವರ ನಿವಾಸದಲ್ಲಿ ರಾಜ್ಯ ಕಾಂಗ್ರೆಸ್ ಮುಖಂಡ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ ಶ್ರೀಕಾಂತ್ ಹಾಗೂ ಮಲೆನಾಡು ಅಭಿವೃದ್ಧಿ ಪ್ರಾಧಿಕಾರ ಹಾಗೂ ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಆರ್.ಎಂ. ಮಂಜುನಾಥ್‌ಗೌಡ ಅವರು ಅಭಿನಂದನೆಗಳನ್ನು ಸಲ್ಲಿಸಿದರು.

University of Agricultural ಜೂನ್ 2. ಕೃಷಿ ವಿವಿ ಇರುವಕ್ಕಿಯಲ್ಲಿ “ಅಡಿಕೆ ಸಮಗ್ರ ಕೃಷಿ” ಕಾರ್ಯಾಗಾರ, ಹೆಸರನ್ನು ಇಂದೇ ನೋಂದಾಯಿಸಿ

0

University of Agricultural ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ (ಶಿವಮೊಗ್ಗ), ವಿಸ್ತರಣಾ ನಿರ್ದೇಶನಾಲಯದ, ರೈತರ ತರಬೇತಿ ಸಂಸ್ಥೆಯು “ಅಡಿಕೆ ಕೃಷಿಯ ಸಮಗ್ರ ಬೇಸಾಯ”
ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತದೆ.

ಈ ಕಾರ್ಯಕ್ರಮವನ್ನು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ “ರೈತರ ತರಬೇತಿ ಸಂಸ್ಥೆ, ವರದಾ ಬ್ಲಾಕ್, ನೆಲ ಮಹಡಿ, ಇರುವಕ್ಕಿ” ಯಲ್ಲಿ ದಿನಾಂಕ: 02.06.2026 ರ ಬೆಳಗ್ಗೆ 10 ಗಂಟೆಗೆ ನೆರವೇರಿಸಲಾಗುತ್ತದೆ.

ಈ ತರಬೇತಿ ಕಾರ್ಯಕ್ರಮವು ಉಚಿತವಾಗಿದ್ದು, ಮೊದಲು ನೋಂದಾಯಿಸಿದ 50 ರೈತರಿಗೆ ಆದ್ಯತೆ ನೀಡಲಾಗುವುದು. ಆದುದರಿಂದ ಆಸಕ್ತ ರೈತರು ಮತ್ತು ರೈತ ಮಹಿಳೆಯರು, ರೈತರ ತರಬೇತಿ ಸಂಸ್ಥೆಯ ಸಿಬ್ಬಂದಿಯವರಿಗೆ ಫೋನ್ ಮುಖಾಂತರ ಸಂಪರ್ಕಿಸಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು.

University of Agricultural ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಲು ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆಗಳು 9958324261/ 8618715599 / 9448312978

ನಿಟ್ಡೂರು ಸನಿಹದ ತಟ್ಟೆಕೊಡ್ಲುನಲ್ಲಿ ವೃದ್ಧರು ಗುಂಡು ಹಾರಿಸಿಕೊಂಡು ಸಾವು

0

ಶಿವಮೊಗ್ಗ ಜಿಲ್ಲೆಯಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಹೊಸನಗರ ತಾಲ್ಲೂಕಿನ ನಿಟ್ಟೂರು ಸಮೀಪದ ತಟ್ಟೆಕೊಡ್ಲು ಗ್ರಾಮದಲ್ಲಿ 85 ವರ್ಷದ ವೃದ್ಧರೊಬ್ಬರು ಗುಂಡು ಹಾರಿಸಿಕೊಂಡು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಹೊಸನಗರ ತಾಲ್ಲೂಕಿನ ನಿಟ್ಟೂರು ಸಮೀಪದ ತಟ್ಟೆಕೊಡ್ಲು ಗ್ರಾಮದ ನಿವಾಸಿ ರಾಮಚಂದ್ರ ರಾವ್ (85) ಮೃತಪಟ್ಟವರು. ಮಧ್ಯರಾತ್ರಿ ಸುಮಾರು 1:30ರ ವೇಳೆಗೆ ಸಿಂಗಲ್ ಬ್ಯಾರಲ್ ಗನ್ ಬಳಸಿ ತಮ್ಮ ಮೇಲೆ ತಾವೇ ಗುಂಡು ಹಾರಿಸಿಕೊಂಡಿದ್ದಾರೆ ಎನ್ನಲಾಗಿದೆ.

ಗುಂಡೇಟಿನಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದು, ಘಟನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಮೂರು ದಿನಗಳ ಹಿಂದೆ ರಾಮಚಂದ್ರ ರಾವ್ ಅವರು ಬಿದ್ದು ತಲೆಗೆ ಗಾಯ ಮಾಡಿಕೊಂಡಿದ್ದರು. ಬಳಿಕ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರೂ, ಗಾಯದ ನೋವು ಕಡಿಮೆಯಾಗಿರಲಿಲ್ಲ ಎಂದು ತಿಳಿದುಬಂದಿದೆ.

ಅತಿಯಾದ ನೋವಿನಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿರಬಹುದೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಆದರೆ ಸಾವಿನ ನಿಖರ ಕಾರಣ ತನಿಖೆಯ ಬಳಿಕವೇ ಸ್ಪಷ್ಟವಾಗಬೇಕಿದೆ.

ಇದೇ ವೇಳೆ ಬಳಸಲಾದ ಗನ್‌ಗೆ ಮಾನ್ಯ ಪರವಾನಗಿ ಇತ್ತೇ ಎಂಬುದರ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೆ, ಘಟನೆ ನಡೆದ ಸಂದರ್ಭ ಮತ್ತು ಗನ್‌ನ ಟ್ರಿಗರ್ ಹೇಗೆ ಒತ್ತಲ್ಪಟ್ಟಿತು ಎಂಬ ಅಂಶಗಳನ್ನೂ ತನಿಖೆಗೆ ಒಳಪಡಿಸಲಾಗಿದೆ.

ತಟ್ಟೆಕೊಡ್ಲು ಗ್ರಾಮದಲ್ಲಿ ನಡೆದ ಈ ಪ್ರಕರಣ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಆತ್ಮಹತ್ಯೆಯೇ ಅಥವಾ ಬೇರೆ ಯಾವುದೇ ಕಾರಣವಿದೆಯೇ ಎಂಬ ಎಲ್ಲಾ ಆಯಾಮಗಳಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ವರ್ತಕರ ಸಂಘಟನೆಯು ವಿಶೇಷ ಸೇವಾಕಾರ್ಯಗಳನ್ನ ಕೈಗೊಂಡಿರುವುದು ಶ್ಲಾಘನೀಯ- ಪಿ.ಎಸ್.ಹಾಲಸ್ವಾಮಿ

0

ವರ್ತಕರ ಸಂಘದ ಸದಸ್ಯರ ಶ್ರೇಯೋಭಿವೃದ್ಧಿಗೆ ಸಂಸ್ಥೆಯು ನಿರಂತರ ಶ್ರಮಿಸುತ್ತಿದೆ ಎಂದು ದಿನಸಿ ವರ್ತಕರ ಸಂಘದ ಅಧ್ಯಕ್ಷ ಪಿ.ಎಸ್.ಹಾಲಸ್ವಾಮಿ ಹೇಳಿದರು.

ದಿನಸಿ ವರ್ತಕ ಸಂಘದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಬೆಳದಿಂಗಳ ಭೋಜನ ಕಾರ್ಯಕ್ರಮದಲ್ಲಿ ಮಾತನಾಡಿ, ಸದಸ್ಯರು ವ್ಯಾಪಾರ ವಹಿವಾಟಿನ ಜತೆಯಲ್ಲಿ ವಿಶೇಷ ಸೇವಾ ಕಾರ್ಯಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಅಶ್ವಥ್ ನಾರಾಯಣ ಶೆಟ್ಟಿ ಅವರು ಮಾತನಾಡಿ, ಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿ ಸದಸ್ಯರ ಪಾತ್ರ ಬಹಳ ಪ್ರಮುಖವಾಗಿದೆ. ತುಂಬಾ ಚಿಕ್ಕದಾಗಿ ಪ್ರಾರಂಭಿಸಿ ಈಗ ಬೃಹದಾಕಾರವಾಗಿ ಈ ಸಂಸ್ಥೆ ಬೆಳೆದಿದೆ ಎಂದು ತಿಳಿಸಿದರು.

ಎಸ್‌ಎಸ್‌ಎಲ್‌ಸಿ, ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವರ್ತಕ ಸಂಘದ ಸದಸ್ಯರ ಮಕ್ಕಳನ್ನು ಸನ್ಮಾನಿಸಲಾಯಿತು. ಶಿವಮೊಗ್ಗದಲ್ಲಿ 50 ವರ್ಷದಿಂದ ವ್ಯವಹಾರ ನಡೆಸುತ್ತಿರುವ 21ಕ್ಕೂ ಹೆಚ್ಚು ವರ್ತಕರ ಸಂಸ್ಥೆಗಳನ್ನು ಗುರುತಿಸಿ ಸನ್ಮಾನಿಸಲಾಯಿತು.

ವರ್ತಕರ ಸಂಘದ ಮಾಜಿ ಅಧ್ಯಕ್ಷ ಟಿ.ಆರ್.ಅಶ್ವತ್ಥ್ ನಾರಾಯಣ ಶೆಟ್ಟಿ, ಬಲಮುರಿ ರಮೇಶಪ್ಪ ಹಾಗೂ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಆಕಾಶವಾಣಿ ಕಲಾವಿದರಾದ ವಸಂತ ಮಾಧವ್ ಹಾಗೂ ಆದ್ಯ ಅವರು ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟರು.

ದಿನಸಿ ವರ್ತಕರ ಸಂಘದ ಕಾರ್ಯದರ್ಶಿ ಎಂ.ಪಿ.ನಾಗರಾಜ, ಎಪಿಎಂಸಿ ಮಾಜಿ ಅಧ್ಯಕ್ಷ, ಸೂಡ ಮಾಜಿ ಅಧ್ಯಕ್ಷ ಜ್ಯೋತಿಪ್ರಕಾಶ್, ದಿನಸಿ ವರ್ತಕರ ಸಂಘದ ನಿರ್ದೇಶಕರಾದ ರೇಣುಕಾ ಬಣಕಾರ, ಆನಂದ್, ಶ್ರೀಕಾಂತ್, ಪ್ರಸನ್ನ, ರಘುಪ್ರಸಾದ್, ನಂದಕುಮಾರ್, ನಟರಾಜ್ ತುಗ್ಗಲಹಳ್ಳಿ, ಸಿದ್ದಪ್ಪ, ರವಿ, ಶಿವಕುಮಾರ್, ರಮೇಶ್, ದೇವರಾಜ್, ಅಶೋಕ್, ಚನ್ನವೀರಪ್ಪ, ಅರ್ಚನಾ ಪ್ರಜ್ವಲ್ ಮತ್ತಿತರರು ಉಪಸ್ಥಿತರಿದ್ದರು.

ಇಂಥಾದ್ದೊಂದು ಅನುಭವ ನಿಮಗೂ ಆಗಿದೆಯೆ? ನೆನಪು- ಪ್ರಸಾದ್ ಶ್ರೀವತ್ಸ, ದಾವಣಗೆರೆ

0

ಯಾವಾಗಲೂ ಭೇತಾಳ ಕತೆಗಳನ್ನು ಓದುತ್ತಿದ್ದ, ಬರೆಯುತ್ತಿರುವ ನಾನು  ಈ ದೆವ್ವ ಭೂತಗಳೆಂದರೆ ನಂಬದವನು. ಯಾರಾದರೂ ದೆವ್ವ ಮೆಟ್ಟಿದ ವಿಷಯ ತಿಳದರೆ ತಾರ್ಕಿಕವಾಗಿ ವಿಚಾರಿಸಿ, ಅದನ್ನು ವೈಜ್ಞಾನಿಕವಾಗಿ ಅಲ್ಲಗಳೆಯುವ, ಹಾಗೂ ಅನುಭವವನ್ನು ಮಾತ್ರ ಸತ್ಯವೆಂದು ತಿಳಿಯುತ್ತಾ ಜೀವನದ ಇಪ್ಪತ್ತಾರು ಸಂವತ್ಸರಗಳನ್ನು ಕಳೆದವನು. ಮೊನ್ನೆ ನಮ್ಮ ಕಾಲೇಜಿನ ಒಂದು ಕಾರ್ಯಕ್ರಮವೊಂದನ್ನು ಮುಗಿಸಿ ಸಂಜೆ ನಾಲ್ಕಕ್ಕೆ ಮನೆಗೆ ಬಂದು ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು, ನಂತರ ಏಳು ಗಂಟೆಗೆ ಶಿರಾ ಗೆ ಹೋಗಿಬರುವುದಾಗಿ ತಿಳಿಸಿ ಹೊರಟೆ. ಅಲ್ಲಿ ಪಕ್ಕದ ಹಳ್ಳಿಯೊಂದರಲ್ಲಿ ಯಾರೋ ಒಬ್ಬರನ್ನು ಭೇಟಿಯಾಗುವುದಿತ್ತು. ನಾನು ಶಿರಾ ಗೆ ಹೊರಟದ್ದು ನನ್ನ ಮಿತ್ರರಾದ ಶ್ರೀ ರಘುನಾಥ್ ರನ್ನು ನೋಡಲು, ಅವರು ನಮ್ಮ ಊರಿಗೆ ಬರುವುದಾಗಿ ತಿಳಿಸಿದರು. ಬಹಳ ವರ್ಷಗಳ ತರುವಾಯ ಖುಷಿಯಿಂದ ಹೊರಟೆ. ಎಂಟು ಗಂಟೆಗೆ ಶಿರಾ ಸೇರಿದೆ ಅದು ನನ್ನ ಬೈಕ್ ನಲ್ಲಿಯೇ. ಅವರು ಬೆಂಗಳೂರು ಬಿಡುವುದು ತಡವಾದ್ದರಿಂದ ಒಂಭತ್ತು ಗಂಟೆಗೆ ಬಂದು ಶಿರಾದ ಬಸ್ ಸ್ಟ್ಯಾಂಡ್ ನಲ್ಲಿಳಿದು ನನಗೆ ಕರೆ ಮಾಡಿದರು. ನಾನೂ ಅವರೂ ಇಬ್ಬರು ಅವರ ಹಳೆಯ ಮಿತ್ರರೊಬ್ಬರನ್ನು ಭೇಟಿ ಮಾಡಿ, ಹತ್ತು ಗಂಟೆಗೆ ಶಿರಾದಿಂದ ಹೊರಟು ಬಂದೆವು. ಅರೆ ಇದರಲ್ಲೇನಿದೆ.? ಎಲ್ಲರು ಮಾಡಿದ್ದನ್ನೇ ನೀವು ಮಾಡಿದಿರಿ ಎನ್ನುವಿರಾ…? ಅಲ್ಲೇ ‌ಇರೋದು ಟ್ವಿಸ್ಟ್.

ಬರುತ್ತಾ ಅವರು ಶಿರಾದಿಂದಲೂ ನನ್ನೊಟ್ಟಿಗೆ ಮಾತನಾಡುತ್ತಾ ಬಂದರು. ಏಕೆಂದರೆ ನನ್ನ ಮೇಲೆ ಅವರಿಗೆ ಪ್ರೀತಿ ಬಹಳ. ” ಏನಪಾ  ಹೇಗಿದೆ ಕಾಲೇಜ್. ನಾಳೆ ನಾನು ನಿಮ್ಮ ಕಾಲೇಜಿಗೆ ಬರ್ತೀನಿ ಹಾಗೇ ಚಳ್ಳಕೆರೆಗೆ ಹೋಗ್ಬೇಕು. ನಿಮ್ ಕಾಲೇಜನ್ನೂ ನೋಡಿದ್ಹಾಗಾಗುತ್ತೆ. ” ಎಂದರು. ಮೊದಲೇ ನಾನು ಸ್ವಲ್ಪ ಮೂಡಿ ಕೆಲವೊಮ್ಮೆ ನನ್ನ ಜೊತೆಯಲ್ಲಿ ಯಾರು ಮಾತನಾಡುತ್ತಿದ್ದರೂ ಸಹಾ ನನ್ನ ಗಮನ ಬೇರೆಡೆಯೇ ಇರುತ್ತದೆ. ಅದರಲ್ಲಿ ರಾತ್ರಿ ಬೈಕ್ ರೈಡಿಂಗ್ ನಲ್ಲಿ ಅಂತೂ ಮಾತು ಸಂಪೂರ್ಣ ನಿಂತಿರುತ್ತದೆ‌. ಅದೇ ರೀತಿ ಅವರು ಏನನ್ನೋ ಹೇಳುತ್ತಿದ್ದರು, ನಾನೂ ಹ್ಞೂಂ, ಉಹ್ಞೂಂ ಎಂದೇ ಹೇಳುತ್ತಾ ಬೈಕ್ ಚಲಾಯಿಸಿದೆ. ಶಿರಾದಿಂದ ಕಗ್ಗಲಡುವಿಗೆ ಬಂದೆ ಆ ಊರಿನಲ್ಲಿ ಪಕ್ಷಿಧಾಮವಿದೆ ಹಲವಾರು ಬಗೆಯ ಪಕ್ಷಿಗಳು ಅಲ್ಲಿಗೆ ವಲಸೆ ಬರುತ್ತವೆ. ಅದನ್ನೇ ನೆನೆಯುತ್ತಾ ಬರುತ್ತಿರುವಾಗ, ಆ ಊರಿನಿಂದ ಬರುತ್ತಿರುವಾಗ ಇದ್ದಕ್ಕಿದ್ದಂತೆ ಜರ್ಕ್ ಹೊಡೆಯಿತು, ಆಗ ಅದು ಸಹಜವೇ ಆಗುವ ಪ್ರಕ್ರಿಯೆಯೆಂದುಕೊಂಡೆ ಮುಂದೆ ಬಂದೆ. ನೂರು ಮೀಟರ್ ಬರುವ ಹೊತ್ತಿನಲ್ಲಿ, ಒಂದು ಅಪ್ಪಟ ಬಿಳಿಯ ಬಣ್ಣದ ನಾಯಿ ರೋಡ್ ಕ್ರಾಸ್ ಮಾಡಿತು. ನಾನು ಅರೇ ಇದೇನಿದು ನಾಯಿ…? ಇಷ್ಟು ಬೆಳ್ಳಗೆ ಎಂದುಕೊಂಡೆ ಮತ್ತೆ ಮುಂದೆ ಹೊರಟೆ.

ಅಲ್ಲಿಂದ ಎರಡು ಮೀಟರ್ ಬರುವುದರೊಳಗೆ ಸಣ್ಣದಾಗಿ ಏನೋ ಒಂದು ರೀತಿಯ ಮಂಕು ಕವಿದಂತಾಯ್ತು, ಹೊರಟೆ, ಹೊರಟೆ, ಅವರು ಮಾತನಾಡುವುದನ್ನು ಕ್ರಮೇಣ ಕಡಿಮೆ ಮಾಡಿದರು, ನಂತರ ಇದ್ದಕ್ಕಿದ್ದ ಹಾಗೆ ಕಪಾಳಕ್ಕೆ ಹೊಡೆದಂತಾಯಿತು. ತಟ್ಟನೆ ನೋಡಿದರೆ ತಾವರೆಕೆರೆಯ ರಂಗನಾಥ ದೇವಾಲಯದ ಮುಂದೆ ನನ್ನ ಬೈಕ್ ನಿಂತಿದೆ‌. ಆಶ್ಚರ್ಯವಾಯ್ತು. ಅರೆರೆ ಶಿರಾದಿಂದ ನಮ್ಮೂರಿಗೆ ಎಲ್ಲಿಯೂ ಡೀವಿಯೇಷನ್ ಇಲ್ಲ ಕಗ್ಗಲಡುವೆಲ್ಲಿ,,,? ತಾವರೆಕೆರೆಯೆಲ್ಲಿ….? ಎಂದು ಚಿಂತಿಸಿದೆ.

ಕೊನೆಗೆ ತಾವರೆಕೆರೆಯ ಡಾಬಾ ಒಂದರಲ್ಲಿ ನಾನೂ ಅವರೂ ಟೀ ಕುಡಿದು. ಹೊರಟು ಬಂದೆವು, ಅಂತೂ ಇಂತೂ ರಾತ್ರಿ 01.00ಕ್ಕೆ ಮನೆ ಸೇರಿದೆವು.

ಅಷ್ಟರಲ್ಲಿ ಅಪ್ಪನಿಂದ 18-20 ಕಾಲ್ ಬಂದಿತ್ತು. ಮನೆಗೆ ಬಂದು ಹೇಳಿದೆ. ಬೈದರು, ಆಮೇಲೆ ಹೇಳಿದರು ಏನೋ confusion ಆಗಿರಬೇಕು. ಅಂತ. ಈಗಲೂ ನಮಗೆ ಹೇಗೆ ದಾರಿ ತಪ್ಪಿದೆನೆಂದು ತಿಳಿಯುತ್ತಿಲ್ಲ. ಬಂದದ್ದು ನಾಯಿಯೇ ಆಗಿದ್ದರೆ. ಅದರಿಂದ ನಾನು ಹೇಗೆ ದಾರಿ ತಪ್ಪಲು ಸಾಧ್ಯ….? ಅಥವಾ ಅದು ದೆವ್ವ ಎಂದಾದಲ್ಲಿ ಅದಕ್ಕೆ ನನ್ನ ಮೇಲೇನು ಸಿಟ್ಟು….?

ಒಟ್ಟಾರೆ ಇದೊಂದು ಉತ್ತಮ ಮೋಜಿನ ಕ್ಷಣವಾಯ್ತು. ಏಕೆಂದರೆ ನನ್ನ ಊರಿಗೂ ತಾವರೆಕೆರೆಗೂ ಸುಮಾರು 60-70ಕಿ.ಮೀ ಅಂತರವಿದೆ. ಅಷ್ಟೇ ಅಲ್ಲದೇ ನನ್ನ ಊರಿಗೆ ಹೋಗುವ ಮಾರ್ಗದಲ್ಲಿ ಯಾವುದೇ ಡೀವಿಯೇಷನ್ ಇಲ್ಲ. ಒಂದೇ ರಸ್ತೆ. ನಾನು ದಾರಿ ತಪ್ಪಿದ್ದಾದರೂ ಹೇಗೆ ?ಅದಕ್ಕೆ ಉತ್ತರ ಸಿಗುವುದು ಸಾಧ್ಯವೇ ಎಂಬುದೇ ನನ್ನ ಸಂದೇಹ.

Klive Special Article ದೇಗುಲದ ವಾಸ್ತು- ವಿನ್ಯಾಸ ಮತ್ತು ಮನುಷ್ಯ ಶರೀರ, ಒಂದು ವಿವೇಚನೆ ಲೇ: ದಿಲೀಪ್ ನಾಡಿಗ್. ಶಿವಮೊಗ್ಗ

0

Klive Special Article ದೇವಸ್ಥಾನದ ವಾಸ್ತುಶಿಲ್ಪ ಮತ್ತು ಮಾನವ ಶರೀರ ರಚನೆಯ ನಡುವಿನ ಸಂಬಂಧ

ವಿಮಾನ (Vimana): ಇದು ದೈವಿಕ ಉಪಸ್ಥಿತಿಯನ್ನು ಪ್ರತಿನಿಧಿಸುತ್ತದೆ. ಮಾನವನ ಶಿರಸ್ಸು (ತಲೆ) ಭಾಗವನ್ನು ಸೂಚಿಸುವ ಇದು, ದೇವಸ್ಥಾನದ ಪ್ರಮುಖ ಗೋಪುರ ಅಥವಾ ಶಿಖರವಾಗಿದೆ.

ಮಹಾ ಮಂಟಪ (Mahal Mandapam): ಇದು ಮಾನವ ದೇಹದ ಎದೆ (ವಕ್ಷಸ್ಥಳ) ಭಾಗಕ್ಕೆ ಹೋಲುತ್ತದೆ. ಇಲ್ಲಿ ಪ್ರಾಣಶಕ್ತಿ ಮತ್ತು ಆಧ್ಯಾತ್ಮಿಕ ಸತ್ವಗಳು ಒಂದಾಗುತ್ತವೆ.

ಗರ್ಭಗೃಹ (Garbhagruha – Sanctum): ಇದು ದೇವಸ್ಥಾನದ ಅತ್ಯಂತ ಪವಿತ್ರವಾದ ಒಳಕೋಣೆಯಾಗಿದೆ. ಇದು ಮನುಷ್ಯನ ಹೃದಯ ಅಥವಾ ಅಂತರಂಗಕ್ಕೆ ಸಮಾನವಾಗಿದ್ದು, ಇಲ್ಲಿ ದೇವತೆಯ ರೂಪದಲ್ಲಿ ‘ಆತ್ಮ’ ನೆಲೆಸಿರುತ್ತದೆ.

ಗೋಪುರ (Gopuram):** ಇದು ಭಗವಂತನ **ಪಾದಗಳನ್ನುಸಂಕೇತಿಸುತ್ತದೆ. ದೇವಸ್ಥಾನದ ಪ್ರವೇಶ ದ್ವಾರವಾಗಿರುವ ಇದು, ಮಾನವನ ಜೀವನದ ಭೂಸ್ಪರ್ಶ ಅಥವಾ ಸ್ಥಿರತೆಯ (grounding) ಅಂಶವನ್ನು ಪ್ರತಿಬಿಂಬಿಸುತ್ತದೆ.

ಚಕ್ರಗಳು ಮತ್ತು ದೇವಸ್ಥಾನದ ಜೋಡಣೆ (Chakras Alignment)

Klive Special Article ಈ ವಾಸ್ತುಶಿಲ್ಪದ ವಿನ್ಯಾಸವು ದೇವಸ್ಥಾನದ ವಿವಿಧ ಭಾಗಗಳನ್ನು ಮಾನವನ ದೇಹದಲ್ಲಿರುವ ಆಧ್ಯಾತ್ಮಿಕ ಚಕ್ರಗಳೊಂದಿಗೆ ಸಮೀಕರಿಸುತ್ತದೆ:

  • ಆಜ್ಞಾ ಚಕ್ರ (Ajna): ಇದು ಅಂತಃಪ್ರಜ್ಞೆ (intuition) ಮತ್ತು ಒಳನೋಟವನ್ನು ಪ್ರತಿನಿಧಿಸುತ್ತದೆ.
  • ವಿಶುದ್ಧ ಚಕ್ರ (Vishuddha): ಇದು ಸಂವಹನ (communication) ಮತ್ತು ಅಭಿವ್ಯಕ್ತಿಗೆ ಸಂಬಂಧಿಸಿದೆ.
  • ಅನಾಹತ ಚಕ್ರ (Anahata): ಇದು ಪ್ರೀತಿ, ಕರುಣೆ ಮತ್ತು ದಯೆಗೆ ಕೊಂಡಿಯಾಗಿದೆ.
  • ಮಣಿಪೂರ ಚಕ್ರ (Manipura): ಇದು ವೈಯಕ್ತಿಕ ಸಾಮರ್ಥ್ಯ ಮತ್ತು ಸ್ವಾಭಿಮಾನಕ್ಕೆ ಸಂಬಂಧಿಸಿದ್ದಾಗಿದೆ.
  • ಸ್ವಾಧಿಷ್ಠಾನ ಚಕ್ರ (Swadhisthana): ಇದು ಭಾವನೆಗಳು ಮತ್ತು ಪರಸ್ಪರ ಸಂಬಂಧಗಳಿಗೆ ಹತ್ತಿರವಾಗಿದೆ.
  • ಮೂಲಾಧಾರ ಚಕ್ರ (Muladhara): ಇದು ಬದುಕಿನ ಸ್ಥಿರತೆ ಮತ್ತು ಭೂಸ್ಪರ್ಶದ (grounding) ಸಂಕೇತವಾಗಿದೆ.

ಮುಖ್ಯ ಸಾರಾಂಶ:ದೇವಸ್ಥಾನದ ಈ ವಿನ್ಯಾಸವು ಭೌತಿಕ ಜಗತ್ತು ಮತ್ತು ಆಧ್ಯಾತ್ಮಿಕ ಲೋಕಗಳು ಪರಸ್ಪರ ಹೇಗೆ ಬೆಸೆದುಕೊಂಡಿವೆ ಎಂಬುದನ್ನು ತೋರ್ಪಡಿಸುತ್ತದೆ. ಅಂದರೆ, ದೇವಸ್ಥಾನವು ಕೇವಲ ಕಲ್ಲಿನ ಕಟ್ಟಡವಲ್ಲ, ಅದು ಮನುಷ್ಯನ ದೇಹ ಮತ್ತು ಆತ್ಮದ ಬೃಹತ್ ರೂಪ ಎಂಬ ನಂಬಿಕೆಯನ್ನು ಇದು ಒತ್ತಿಹೇಳುತ್ತದೆ.

B.Y. Raghavendra ದೇಶದ ತಳಮಟ್ಟದ ಸಾಧಕರ ಯಶಸ್ಸಿನ ಕತೆ ತಿಳಿಸುವ ಪ್ರಧಾನಿ ಮೋದಿ ಅವರ “ಮನ್ ಕಿ ಬಾತ್”- ಬಿ.ವೈ.ರಾಘವೇಂದ್ರ

0

B.Y. Raghavendra ಶಿಕಾರಿಪುರ ತಾಲ್ಲೂಕಿನ ಅಂಬಾರಗೊಪ್ಪದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರು ಸಾರ್ವಜನಿಕರೊಂದಿಗೆ ಮಾನ್ಯ ಪ್ರಧಾನಿಯವರ 111ನೇ “ಮನ್ ಕಿ ಬಾತ್” ವೀಕ್ಷಿಸಿದರು.

ದೇಶದ ಜನಸಾಮಾನ್ಯರ ಸಕಾರಾತ್ಮಕ ಚಿಂತನೆಗಳು, ಪ್ರೇರಣಾದಾಯಿ ಸಾಧನೆಗಳು ಹಾಗೂ ರಾಷ್ಟ್ರದ ಪ್ರಗತಿಯ ವಿವಿಧ ಆಯಾಮಗಳನ್ನು ದೇಶದಾದ್ಯಂತ ಹಂಚಿಕೊಳ್ಳುವ ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರ ಜನಪ್ರಿಯ ರೇಡಿಯೋ ಸರಣಿ ‘ಮನ್ ಕಿ ಬಾತ್’ (Mann Ki Baat) ಕಾರ್ಯಕ್ರಮದ 111ನೇ ಸಂಚಿಕೆ ಅಪಾರ ಚಿಂತನೆಗೆ ಒಳಮಾಡಿತು.

ಇಂದು ಶಿಕಾರಿಪುರ ತಾಲ್ಲೂಕಿನ ಅಂಬಾರಗೊಪ್ಪ ಗ್ರಾಮದ ಬೂತ್ ಸಂಖ್ಯೆ 03 ರಲ್ಲಿ ಸ್ಥಳೀಯ ಜನಬಾಂಧವರೊಂದಿಗೆ
ಸಂಸದ ರಾಘವೇಂದ್ರ
ಮನ್ ಕಿ ಬಾತ್ ವಿಚಾರವನ್ನ ಹಂಚಿಕೊಂಡರು.

ಪ್ರತಿ ಬಾರಿಯಂತೆ ಈ ಬಾರಿಯೂ ಸಹ ಮಾನ್ಯ ಪ್ರಧಾನಿಯವರು ದೇಶದ ವಿವಿಧ ಭಾಗಗಳಲ್ಲಿ ಜಾಗೃತಿ ಮತ್ತು ಪ್ರೇರಣೆ ಮೂಡಿಸುತ್ತಿರುವ ತಳಮಟ್ಟದ ಸಾಧಕರ ಕಥೆಗಳನ್ನು ಹಾಗೂ ಸಾರ್ವಜನಿಕ ಸಹಭಾಗಿತ್ವದ ಮೂಲಕ ದೇಶ ಕಟ್ಟುವ ಮಹತ್ವದ ವಿಚಾರಗಳನ್ನು ನಮ್ಮ ಮುಂದೆ ಹಂಚಿಕೊಂಡರು. ಇಂತಹ ರಾಷ್ಟ್ರಚಿಂತನೆಗಳು ನಮ್ಮ ಪ್ರತಿಯೊಬ್ಬ ಕಾರ್ಯಕರ್ತರಿಗೂ ಮತ್ತು ಗ್ರಾಮಸ್ಥರಿಗೂ ಹೊಸ ಚೈತನ್ಯವನ್ನು ನೀಡುತ್ತವೆ ಎಂದು ಬಿ.ವೈ.ರಾಘವೇಂದ್ರ ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಪ್ರಮುಖರಾದ ಶ್ರೀ ಕೆ.ಎಸ್. ಗುರುಮೂರ್ತಿ, ಶ್ರೀ ವಸಂತ್ ಗೌಡ್ರು, ಶ್ರೀ ನಾಗಪ್ಪ, ಶ್ರೀ ಕೃಷ್ಣ ನಾಯ್ಕ್, ಶ್ರೀ ಸುಧೀರ್, ಶ್ರೀ ಬೆಣ್ಣೆ ಪ್ರವೀಣ್ ಹಾಗೂ ಸ್ಥಳೀಯ ಬೂತ್ ಅಧ್ಯಕ್ಷರಾದ ಶ್ರೀ ಕೃಷ್ಣ ನಾಯ್ಕ್ , ಪಕ್ಷದ ಮುಖಂಡರು ಮತ್ತು ಗ್ರಾಮದ ಹಿರಿಯರು, ಸಾರ್ವಜನಿಕ ಬಂಧುಗಳು ನನ್ನೊಂದಿಗೆ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ವೀಕ್ಷಿಸಿದರು.

B.Y. Raghavendra ಅನ್ನಸಂತರ್ಪಣಾ ಸೇವೆ ನಡೆಸಿದ ಸಂಸದ ಬಿ.ವೈ.ರಾಘವೇಂದ್ರ

0

B.Y. Raghavendra ಅಧಿಕ ಮಾಸದ ಪವಿತ್ರ ಸಂದರ್ಭದಲ್ಲಿ, ಇಂದು
ಸಂಸದ ಬಿ.ವೈ.ರಾಘವೇಂದ್ರ ಅವರು ಕುಟುಂಬದ ಸದಸ್ಯರೊಂದಿಗೆ ಶಿಕಾರಿಪುರದ ಪ್ರಸಿದ್ಧ ಶ್ರೀ ಹುಚ್ಚರಾಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು

ಇದೇ ಸುಸಂದರ್ಭದಲ್ಲಿ, ಸಂಸದ ಬಿ.ವೈ.ರಾಘವೇಂದ್ರ ಅ ವರು ತಮ್ಮ ತಂದೆಯವರಾದ ಸನ್ಮಾನ್ಯ ಶ್ರೀ ಬಿ. ಎಸ್. ಯಡಿಯೂರಪ್ಪನವರು ಹಾಗೂ ನಮ್ಮ ಕುಟುಂಬದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ “ಅನ್ನಸಂತರ್ಪಣಾ ಸೇವೆ” ಯಲ್ಲಿ ಪಾಲ್ಗೊಂಡು, ಭಕ್ತಾಧಿಗಳಿಗೆ ಪ್ರಸಾದ ವಿತರರಣೆ ಮಾಡಿದರು

B.Y. Raghavendra ಶ್ರೀ ಹುಚ್ಚರಾಯ ಸ್ವಾಮಿಯು ಎಲ್ಲರಿಗೂ ಸುಖ, ಶಾಂತಿ ಹಾಗೂ ಸಮೃದ್ಧಿಯನ್ನು ಕರುಣಿಸಲಿ ಎಂದು ಈ ಸಂದರ್ಭದಲ್ಲಿ ಬಿ.ವೈ.ರಾಘವೇಂದ್ರ ಪ್ರಾರ್ಥನೆ ಸಲ್ಲಿಸಿದರು.