Wednesday, August 5, 2026
Wednesday, August 5, 2026
Home Blog Page 70

ನಮ್ಮ‌ ಮುಂದಿನ ಪೀಳಿಗೆಗೆ ಪ್ರಕೃತಿ ಉಳಿಸಿದರೆ ಸಾಕು, ಜೀವನ ಕಟ್ಟಿಕೊಳ್ಳುತ್ತಾರೆ- ರವೀಂದ್ರ ನಾಯಕ್

0

ಜೀವರಾಶಿ ಪ್ರಾರಂಭ ವಾಗಿರುವುದೇ ಪ್ರಕೃತಿಯಿಂದ, ಅದನ್ನು ಸುಸ್ತಿತಿಯಲ್ಲಿ ಇಟ್ಟು ಕೊಳ್ಳದೇ ಹೋದರೆ, ವಿಶ್ವದಲ್ಲಿ ಯಾವ ಜೀವಿಯು ಉಳಿಯುವುದಿಲ್ಲ. ನಾವು
ಮುಂದಿನ ಪೀಳಿಗೆಗೆ ಉಳಿಸಿಕೊಡುವ ಪ್ರಕೃತಿಯೇ, ಜೀವನ ಕಟ್ಟಿಕೊಳ್ಳಲು ಉತ್ತಮ ಕೊಡುಗೆ ಎಂದು ಸಹಾಯಕ ಅರಣ್ಯಾಧಿಕಾರಿ ರವೀಂದ್ರನಾಯ್ಕ್, ಶಿಕಾರಿಪುರದ ಯೂತ್ ಹಾಸ್ಟೆಲ್ಸ್ ಕುಮುದ್ವತಿ ಘಟಕ ಆಯೋಜಿಸಿದ್ದ ವಿಶ್ವ ಪರಿಸರ ದಿನ ಉದ್ಘಾಟಿಸಿ ಮಾತನಾಡುತ್ತಿದ್ದರು.

ಎಲ್ಲಾ ದೇಶಗಳಲ್ಲಿಯೂ ಪರಿಸರದ ಬಗ್ಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ನಮ್ಮ ದೇಶದಲ್ಲಿ ಜನಸಂಖ್ಯೆ ಸ್ಪೋಟದಿಂದ ಸ್ವಲ್ಪ ಹಿನ್ನಡೆ ಯಾಗಿದೆ. ನಾವೇಲ್ಲರು ಎಚ್ಚೆತ್ತು ಇಂದಿನಿಂದಲೇ ಪ್ರಕೃತಿ ಉಳಿಸುವ ವಾಗ್ದಾನ ಮಾಡೋಣ, ನಮ್ಮ ಮುಂದಿನ ಪೀಳಿಗೆಗೆ ಪ್ರಕೃತಿ ಉಳಿಸಿ ಕೊಟ್ಟರೆ ಸಾಕು, ಅವರು ಜೀವನ ಕಟ್ಟಿಕೊಳ್ಳುತ್ತಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಗಿರೀಶ್ ಕುಮಾರ್ ಮಾತನಾಡುತ್ತ, ನಮ್ಮ ಪೂರ್ವಜರು ನಮಗೆ ಅತ್ಯ ಅಮೂಲ್ಯ ಕೊಡುಗೆಯಾಗಿ ಪರಿಸರ ನೀಡಿದ್ದರು. ಆದರೆ ಆಧುನಿಕತೆ ಬೆಳೆದಂತೆ, ಅದರ ಬೆನ್ನತ್ತಿ ನಮ್ಮ ನಾಡನ್ನೇ ನಾವೆಲ್ಲರೂ ಸೇರಿ ನಾಶ ಮಾಡುತ್ತಿದ್ದೇವೆ. ಕಾಡು ಕಡಿಯುವುದನ್ನು ನೋಡಿ ಸುಮ್ಮನ್ನಿರುವುದು ನಾವೇ ಮರ ಕಡಿದಂತೆ. ಆದ್ದರಿಂದ ಎಲ್ಲರೂ ಪ್ರಕೃತಿ ರಕ್ಷಣೆಗೆ ಪಣ ತೊಡೋಣ ಆದಷ್ಟು ಸಸಿ ನೆಟ್ಟು ಆಗಿರುವ ನಷ್ಟವನ್ನು ಸರಿ ತೂಗಿಸಲು ಪ್ರಯತ್ನಿಸೋಣ ಎಂದರು.

ಪ್ರಸ್ಥಾವಿಕವಾಗಿ ಮಾತನಾಡಿದ ಯೂತ್ ಹಾಸ್ಟೆಲ್ಸ್ ರಾಜ್ಯ ಘಟಕದ ಛೇರ್ಮನ್ ಸುದರ್ಶನ್ ಪೈ ಯೂತ್ ಹಾಸ್ಟೆಲ್ ರಾಷ್ಟ್ರಾದ್ಯಂತ ಪ್ರಕೃತಿಯೊಂದಿಗೆ ಬೆರೆಯುವ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗುತ್ತದೆ. ಇದರಿಂದ ದೇಹಕ್ಕೆ ಹಸುವು, ಮನಃಶಾಂತಿ ದೊರಕುತ್ತದೆ ಮತ್ತು ಆರೋಗ್ಯವು ಸುದಾರಿಸುತ್ತದೆ. ಎಲ್ಲರೂ ಸದಸ್ಯಸತ್ವಪಡೆದು, ಚಾರಣದ ಸವಿ ಸವಿಯಬೇಕೆಂದು ಕೋರಿದರು.

ಕಾರ್ಯದರ್ಶಿ ಮಂಜುನಾಥ್ ಸ್ವಾಗತಿಸಿದರು, ಪುಟ್ಟಣ್ಣ ವಂದಿಸಿದರು, ರಾಜ್ಯ ಖಚಾಂಚಿ ಜಯರಾಮ್ ಪೂಜಾರಿ,
ಗೋಕುಲ್ ಹೊಂಡ ಸಿಬ್ಬಂದಿ, ಮುರುಳಿಧರ್ ನಗರದ ನಾಗರೀಕರು ಭಾಗವಹಿಸಿದ್ದರು.

Rotary Shimoga ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದಿಂದ ನಿರ್ಲಕ್ಷ್ಯ – ಎಂ.ಎನ್.ಸುಂದರ ರಾಜ್

0

Rotary Shimoga ನಾಡಿನ ಆದಾಯದ ಮೂಲ ಆಗಬೇಕಿದ್ದ ಪ್ರವಾಸೋದ್ಯಮ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಸಾಹಿತಿ, ಅಂಕಣಕಾರ ಎಂ.ಎನ್.ಸುಂದರ್‌ರಾಜ್ ಹೇಳಿದರು.

ರೋಟರಿ ಶಿವಮೊಗ್ಗ ಪೂರ್ವದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆಯ ಪ್ರವಾಸಿ ಸ್ಥಳಗಳ ಬಗ್ಗೆ ಮಾತನಾಡಿ, ನಾಡಿನ ಪ್ರಕೃತಿ ಸಂಪತ್ತು, ಜಲಪಾತಗಳು, ದೇವಾಲಯಗಳು, ಪಕ್ಷಿ ಧಾಮಗಳು, ಮತ್ತಿತರ ಅನೇಕ ಪ್ರೇಕ್ಷಣೀಯ ಸ್ಥಳಗಳು ಸಮೃದ್ಧವಾಗಿದೆ. ಆದರೆ ಅವುಗಳ ಸಂರಕ್ಷಣೆ ಮತ್ತು ಸರಿಯಾದ ಪ್ರಕಾರದ ಕೊರತೆ ಮತ್ತು ಮಾರ್ಗದರ್ಶನವಿಲ್ಲದೆ ಎಲ್ಲವೂ ನಿರ್ಲಕ್ಷಕ್ಕೆ ಒಳಪಟ್ಟಿದೆ ಎಂದು ತಿಳಿಸಿದರು.

ಸರ್ಕಾರದ ಪ್ರವಾಸೋದ್ಯಮ ಇಲಾಖೆ ಇಂತಹ ಸ್ಥಳಗಳ ಮಾಹಿತಿ ಪಡೆದು ಜನರನ್ನು ಆಕರ್ಷಿಸುವಲ್ಲಿ ವಿಫಲವಾಗಿವೆ. ಹೀಗಾಗಿ ಪ್ರವಾಸೋದ್ಯಮ ಒಂದು ಉದ್ಯಮವಾಗದೆ ನಿರುಪಯೋಗವಾಗಿದೆ. ಎಂದು ಹೇಳಿದರು.

ಪ್ರವಾಸೋದ್ಯಮದಲ್ಲಿ ರಾಜ್ಯ ತುಂಬಾ ಹಿಂದುಳಿದಿದೆ. ಅದಕ್ಕೆ ಮುಖ್ಯ ಕಾರಣ ಸರ್ಕಾರ ಮತ್ತು ಅಧಿಕಾರಿಗಳ ನಿರ್ಲಕ್ಷö್ಯ ಮನೋಭಾವನೆ. ಜಿಲ್ಲೆಯಲ್ಲಿರುವ 80ಕ್ಕೂ ಹೆಚ್ಚು ಪ್ರೇಕ್ಷಣೀಯ ಸ್ಥಳಗಳ ವಿವರವಾದ ಮಾಹಿತಿಗಳನ್ನು ಜನರಿಗೆ ತಲುಪಿಸಿದಲ್ಲಿ ಮತ್ತು ಅಂತಹ ಸ್ಥಳಗಳ ಬಗ್ಗೆ ಮಾರ್ಗದರ್ಶಕ ಫಲಕಗಳನ್ನು ಅಳವಡಿಸುವುದು ಮತ್ತು ಸಾಹಿತ್ಯವನ್ನು ಪ್ರಕಟಿಸುವುದರಿಂದ ಹೆಚ್ಚು ಹೆಚ್ಚು ಹೆಚ್ಚು ಪ್ರವಾಸಿಗರು ಬಂದು ಹೋಗಲು ಸಾಧ್ಯವಾಗುತ್ತದೆ. ದೇಶ ವಿದೇಶಗಳಿಂದ ವಿವಿಧ ರಾಜ್ಯಗಳಿಂದ ಪ್ರವಾಸಿಗರು ಹರಿದು ಬರಲು ಸಾಧ್ಯವಾಗಿ ರಾಜ್ಯದ ಆದಾಯ ಹೆಚ್ಚುತ್ತದೆ. ಈ ರೀತಿ ಮಾಡುವುದರಿಂದ ಅನೇಕ ಜನರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸಿ ಕೊಡುತ್ತದೆ ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಚಂಪಕ ಸರಸು, ಹೊಸನಗರ ತಾಲ್ಲೂಕಿನ ದೇವಗಂಗೆ, ಸಾಗರ ತಾಲ್ಲೂಕಿನ ದೇವರ ಗದ್ದೆ ಮತ್ತು ಹಿರೇಭಾಸ್ಕರ ಡ್ಯಾಮ್ ಸೇರಿ ಪ್ರಮುಖ ತಾಣಗಳಿವೆ. ಈ ಸ್ಥಳಗಳನ್ನು ಒಮ್ಮೆಯಾದರೂ ಸಂದರ್ಶಿಸಬೇಕು. ನಮ್ಮ ನಾಡಿನ ಅನೇಕ ಪ್ರವಾಸಿ ಸ್ಥಳಗಳು ದೇಶದಲ್ಲಿಯೇ ಪ್ರಸಿದ್ಧವಾಗಿದ್ದು, ಅವುಗಳ ಪ್ರಾಮುಖ್ಯತೆ ಅರಿಯಬೇಕು ಎಂದರು.

ಸುಂದರರಾಜ್ ಅವರನ್ನು ಸನ್ಮಾನಿಸಲಾಯಿತು. ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಕಿಶೋರ್ ಕುಮಾರ್, ಕಾರ್ಯದರ್ಶಿ ಬಿ.ಆರ್.ಧನಂಜಯ, ನಿಯೋಜಿತ ಜಿಲ್ಲಾ ಗವರ್ನರ್ ವಸಂತ ಹೋಬಳಿದಾರ್, ಡಾ. ಗುಡದಪ್ಪ ಕಸಬಿ, ಆದಿಮೂರ್ತಿ, ಶ್ರೀನಿವಾಸ ಗೌಡ, ಮನೋಹರ, ಗಣೇಶ, ವಿಜಯಪ್ರಕಾಶ್, ರಮೇಶ್ ಭಟ್, ನಿಯೋಜಿತ ಅಧ್ಯಕ್ಷ ಶೇಷಗಿರಿ.ಡಿ.ಕೆ., ಗಂಗಪ್ಪ.ಬಿ., ವೀಣಾ ಕಿಶೋರ್, ರೂಪಾ, ಅರುಣ್ ದೀಕ್ಷಿತ್, ಸಂಜೀವ್ ಇತರರಿದ್ದರು.

ವಿದ್ಯಾರ್ಥಿಗಳು & ಯುವಜನರಲ್ಲಿ ಸೈಕಲ್ ಬಳಕೆ ಹೆಚ್ಚಾಗಬೇಕು- ಗಿತ್ತೆ ಮಾಧವ ವಿಠಲ್

0

ವಿದ್ಯಾರ್ಥಿಗಳು ಯುವ ಜನರಲ್ಲಿ ಸೈಕಲ್ ಬಳಕೆ ಹೆಚ್ಚಾಗಬೇಕು ಎಂದು ದಾವಣಗೆರೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠಲ್ ಹೇಳಿದರು.

ಅವರಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದಾವಣಗೆರೆ ಬೈಸಿಕಲ್ ಕ್ಲಬ್, ಹಿಮಾಲಯನ್ ಅಡ್ವೆಂಚರ್ ಅಂಡ್ ನೇಚರ್ ಅಕಾಡೆಮಿ ಸಂಯುಕ್ತ ಆಶ್ರಯದಲ್ಲಿ ‘ವಿಶ್ವ ಸೈಕಲ್ ದಿನಾಚರಣೆ’ ಅಂಗವಾಗಿ ಏರ್ಪಾಡಾಗಿದ್ದ ‘ಸೈಕಲ್ ಜಾತಾ’ ಗೆ ಚಾಲನೆ ನೀಡಿ ಮಾತನಾಡುತ್ತ ತಾವು ಸಹಾ ವಿದ್ಯಾರ್ಥಿ ದೆಸೆಯಲ್ಲಿ ಸೈಕಲನ್ನೇ ಬಳಸುತ್ತಿದ್ದು ನಿತ್ಯ ಸುಮಾರು 11 ಕಿಲೋಮೀಟರ್ ನಷ್ಟು ದೂರ ಹೋಗಿ ಬರುತ್ತಿದ್ದುದಾಗಿ ಹೇಳಿದರು.

ವಿಶೇಷ ಆಹ್ವಾನಿತರಾಗಿ ಸೈಕಲ್ ಜಾತಾದಲ್ಲಿ ಭಾಗವಹಿಸಿದ್ದ ಹಿರಿಯ ಪತ್ರಕರ್ತ, ಪರಿಸರವಾದಿ ಡಾ. ಎಚ್ ಬಿ ಮಂಜುನಾಥರವರು ಸಹ ಸವಾರರೊಂದಿಗೆ ಮಾತನಾಡುತ್ತಾ ಸೈಕಲ್ ಬಳಸುವುದರಿಂದ ದೈಹಿಕ ಆರೋಗ್ಯ, ಇಂಧನ ಉಳಿತಾಯದಿಂದ ರಾಷ್ಟ್ರದ ಹಿತ ಹಾಗೂ ವಾಯು ಮತ್ತು ಶಬ್ದ ಮಾಲಿನ್ಯ ನಿಯಂತ್ರಣದಿಂದ ಪರಿಸರ ಸಂರಕ್ಷಣೆ ಸಾಧ್ಯವಿದ್ದು ನಮ್ಮ ದೇಶದಲ್ಲಿ ವಾರ್ಷಿಕ 245 ಮಿಲಿಯನ್ ಮೆಟ್ರಿಕ್ ಟನ್ನಿನಷ್ಟು ಪೆಟ್ರೋಲಿಯಂ ಬಳಕೆಯಾಗುತ್ತಿದ್ದು ಪ್ರತಿನಿತ್ಯ ದೇಶದಲ್ಲಿ 6 ಕೋಟಿ ಬ್ಯಾರಲ್ ಗಳಷ್ಟು ಪೆಟ್ರೋಲಿಯಂ ಖರ್ಚಾಗುತ್ತಿದೆ, ಇದರಲ್ಲಿ ಶೇಕಡಾ 62ರಷ್ಟು ಪೆಟ್ರೋಲ್ ಬಳಕೆಯು ದ್ವಿಚಕ್ರ ವಾಹನಗಳಿಂದ ಆಗುತ್ತಿದ್ದು ವಾರದಲ್ಲಿ ಒಂದು ದಿನವಾದರೂ ಸ್ಕೂಟರು ಬೈಕ್ ಗಳ ಬದಲು ಸೈಕಲ್ ಬಳಸುವುದರಿಂದ ವಾರ್ಷಿಕ 320 ಕೋಟಿ ಬ್ಯಾರಲ್ ಗಳಷ್ಟು ಪೆಟ್ರೋಲ್ ಉಳಿಸಬಹುದು, ಸೈಕಲ್ ಬಳಕೆಯಿಂದ ಸಮಯ ವ್ಯರ್ಥವಾಗುತ್ತದೆ ಎಂಬ ಭಾವನೆ ತಪ್ಪು, ಸಮಯದ ಸದ್ಬಳಕೆಯ ಅರಿವು ಉಂಟಾಗುತ್ತದೆ ಎಂದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ರೇಣುಕಾ, ಗ್ರಾಹಕರ ಕೋರ್ಟಿನ ನ್ಯಾಯಾಧೀಶರಾಗಿದ್ದ ಶಿವಕುಮಾರ್, ದಾವಣಗೆರೆ ಬೈಸಿಕಲ್ ಕ್ಲಬ್ ಕಾರ್ಯದರ್ಶಿ ಮಹೇಶ್,ಸದಸ್ಯ ಕಿರಣ್ ಬಾಳೆಹೊಲದ,ಪ್ರಸಾದ್,ಹಿಮಾಲಯನ್ ಅಡ್ವೆಂಚರ್ ಅಂಡ್ ನೇಚರ್ ಅಕಾಡೆಮಿ ಕಾರ್ಯದರ್ಶಿ ಎನ್ ಕೆ ಕೊಟ್ರೇಶ್, ಸದಸ್ಯರುಗಳಾದ ಚಂದ್ರಮೌಳಿ, ಮಧುಸೂದನ್, ಚನ್ನಬಸವ ಶೀಲವಂತ್ ಮುಂತಾದವರು ಭಾಗವಹಿಸಿದ್ದರು.

ಜಿಲ್ಲೆಯ ಸಾರಿಗೆ ಇಲಾಖೆಯಲ್ಲಿ ಬಾಕಿ ಇರುವ ದಂಡ ಪಾವತಿ ಪ್ರಕರಣಗಳನ್ನ ಇತ್ಯರ್ಥಪಡಿಸಿಕೊಳ್ಳಲು ಶೇ 5೦ ರಿಯಾಯಿತಿ- ಮುರುಗೇಂದ್ರ ಶಿರೋಳ್ಕರ್

0

ಸಾರಿಗೆ ಇಲಾಖೆಯಲ್ಲಿ ಬಾಕಿ ಇರುವ ವಾಹನಗಳ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ, ಶೇಕಡಾ 50 ರಷ್ಟು ದಂಡ ಪಾವತಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಸರ್ಕಾರವು ಸಾರ್ವಜನಿಕರಿಗೆ ಸುವರ್ಣಾವಕಾಶ ಕಲ್ಪಿಸಿದೆ ಎಂದು ಶಿವಮೊಗ್ಗ ಪ್ರಾದೇಶಿಕ ಸಾರಿಗೆ ಅಧಿಕಾರಿ ಮುರುಗೇಂದ್ರ ಬಿ. ಶಿರೋಳ್ಕರ್ ತಿಳಿಸಿದ್ದಾರೆ.

ಈ ರಿಯಾಯಿತಿಯು ನಿರ್ದಿಷ್ಟ ಅವಧಿಯ ಪ್ರಕರಣಗಳಿಗೆ ಮಾತ್ರ ಅನ್ವಯಿಸಲಿದೆ.
1991 ರಿಂದ 2022 ರ ಒಳಗಾಗಿ ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳು ದಾಖಲಿಸಿರುವ ಪ್ರಕರಣಗಳಿಗೆ ಮಾತ್ರ ಈ 50% ದಂಡ ಪಾವತಿ ರಿಯಾಯಿತಿ ಅನ್ವಯವಾಗುತ್ತದೆ.

ಶಿವಮೊಗ್ಗ ಜಿಲ್ಲೆಯ ಬಾಕಿ ಪ್ರಕರಣಗಳು: ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಸದ್ಯ ಈ ಅವಧಿಗೆ ಸಂಬಂಧಿಸಿದ ಒಟ್ಟು 790 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ.
ದಂಡ ಪಾವತಿಯ ಅವಧಿ: ಅರ್ಹ ವಾಹನ ಮಾಲೀಕರು ದಿನಾಂಕ: 21-06-2026 ರಿಂದ 10-07-2026 ರೊಳಗೆ ಈ ರಿಯಾಯಿತಿಯನ್ನು ಬಳಸಿಕೊಂಡು ದಂಡ ಪಾವತಿಸಿ, ತಮ್ಮ ಪ್ರಕರಣಗಳನ್ನು ಮುಕ್ತಾಯಗೊಳಿಸಿಕೊಳ್ಳಬಹುದಾಗಿದೆ.

ವಾಹನ ಮಾಲೀಕರು ಈ ನಿಗದಿತ ಅವಧಿಯೊಳಗೆ ರಿಯಾಯಿತಿಯ ಲಾಭವನ್ನು ಪಡೆದುಕೊಂಡು ಸಹಕರಿಸಬೇಕಾಗಿ ಅವರು ಕೋರಿದ್ದಾರೆ.

Friends Center ಕುಟುಂಬದ ಸದಸ್ಯರು ಆಗಾಗ್ಗೆ ಒಂದೆಡೆ ಸೇರುವುದರಿಂದ ಉತ್ತಮ ಬಾಂಧವ್ಯ- ಬಿ.ಜಿ.ಧನರಾಜ್

0

ಸಂಘ ಸಂಸ್ಥೆಗಳು ಆಯೋಜಿಸುವ ಕುಟುಂಬ ಮಿಲನದಂತಹ ಕಾರ್ಯಕ್ರಮ ಸದಸ್ಯರಲ್ಲಿ ಸ್ನೇಹಭಾವ ವೃದ್ಧಿಸುತ್ತದೆ ಎಂದು ಫ್ರೆಂಡ್ಸ್ ಸೆಂಟರ್ ಅಧ್ಯಕ್ಷ ಬಿ.ಜಿ.ಧನರಾಜ್ ಹೇಳಿದರು.

ಫ್ರೆಂಡ್ಸ್ ಸೆಂಟರ್ ವತಿಯಿಂದ ನಿದಿಗೆ ಬೋಟ್‌ನಲ್ಲಿ ಆಯೋಜಿಸಿದ್ದ ವಸುದೈವ ಕುಟುಂಬಕಂ ಕುಟುಂಬ ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿ, 59 ವರ್ಷದಿಂದ ಸಂಸ್ಥೆಯು ಪ್ರತಿ ವರ್ಷ ವಿವಿಧ ಸ್ಥಳಗಳಲ್ಲಿ ಕುಟುಂಬ ಮಿಲನ ಕಾರ್ಯಕ್ರಮ ಮಾಡುತ್ತಿದ್ದು, ಸದಸ್ಯರಿಗೆ ಗಾಯನ, ಆಟೋಟ, ಪ್ರಶ್ನಾವಳಿ ಮತ್ತಿತರ ಕಾರ್ಯಕ್ರಮಗಳನ್ನು ನಡೆಸುತ್ತೇವೆ. ವಸುದೈವ ಕುಟುಂಬಕಂ ಎನ್ನುವ ಹಾಗೆ ಕುಟುಂಬದ ಸದಸ್ಯರು ಆಗಾಗ ಒಂದೆಡೆ ಸೇರುವುದರಿಂದ ಉತ್ತಮ ಬಾಂಧವ್ಯ ವೃಧ್ದಿಯಾಗುತ್ತದೆ ಎಂದರು.

Friends Center ರಾಜ್ಯಮಟ್ಟದ ಚರ್ಚಾಸ್ಪರ್ಧೆ ಹಾಗೂ ಮಾನವೀಯ ಸೇವೆಗಳ ಮಾಡುವುದರಲ್ಲಿ ನಮ್ಮ ಫ್ರೆಂಡ್ಸ್ ಸೆಂಟರ್ ಶಿವಮೊಗ್ಗದಲ್ಲಿ ಪ್ರಚಲಿತವಾಗಿದೆ ಎಂದು ತಿಳಿಸಿದರು.

ನೇತ್ರ ಮತ್ತು ರಕ್ತ ಭಂಡಾರದ ಅಧ್ಯಕ್ಷ ವಿ.ನಾಗರಾಜ್ ಮಾತನಾಡಿ, ನಮ್ಮ ಸಂಸ್ಥೆಯ ಸದಸ್ಯರು ದೇಶದ ನಾನಾ ಭಾಗಗಳಲ್ಲಿ ಕೈಗಾರಿಕೋದ್ಯಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಮನೆ ಮಾತಾಗಿದೆ ಎಂದು ಹೇಳಿದರು.

ಎಂ.ವಿಜಯಕುಮಾರ್ ಮತ್ತು ಡಿ.ಪಿ.ಮೋಹನ್ ಮಾತನಾಡಿ, ಕುಟುಂಬ ಮಿಲನ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದರಿಂದ ಆರೋಗ್ಯ ಸಹ ವೃದ್ಧಿಯಾಗುತ್ತದೆ ಎಂದು ತಿಳಿಸಿದರು. ಮಾಜಿ ಅಧ್ಯಕ್ಷ ಜಿ.ವಿಜಯಕುಮಾರ್, ಉಮಾ ವೆಂಕಟೇಶ್ ಮತ್ತು ಮಹಿಳಾ ಅಧ್ಯಕ್ಷೆ ಸಪ್ನ ಬದ್ರಿನಾಥ್, ಸದಸ್ಯರು ಇದ್ದರು.

ಕರ್ನಾಟಕ ವಿಧಾನಪರಿಷತ್ ಚುನಾವಣೆ: ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಪಕ್ಷದ ಬಿ.ಕೆ.ಹರಿಪ್ರಸಾದ್‌ ಮತ್ತು ಇತರರು

0

ಕರ್ನಾಟಕ ವಿಧಾನಸಭೆಯಿಂದ ವಿಧಾನ ಪರಿಷತ್ ಗೆ ನಡೆಯುವ ಚುನಾವಣೆಗೆ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ, ಬಿ.ಕೆ. ಹರಿಪ್ರಸಾದ್, ಪಿ.ವಿ.ಮೋಹನ್,
ತಿಪ್ಪಣಪ್ಪ ಕಾಮಕನೂರ್ ಹಾಗೂ ಬಿ. ಎಸ್. ಶ್ರೀನಿವಾಸ್ ಅವರುಗಳು ವಿಧಾನಸೌಧದಲ್ಲಿ ವಿಧಾನ ಸಭೆಯ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿ ಎಂ.ಕೆ.ವಿಶಾಲಾಕ್ಷಿ ಅವರಿಗೆ ನಾಮಪತ್ರ ಸಲ್ಲಿಸಿದರು.

ಧರ್ಮ,ಸಂಸ್ಕೃತಿ , ಸಂಪ್ರದಾಯ ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು- ಸೀಮಾ ಸದಾನಂದ

0

ದೈವಜ್ಞ ಮಹಿಳಾ ಮಂಡಳಿಯು ನಿರಂತರ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ವಿಶೇಷ ಕೆಲಸ ಮಾಡುತ್ತಿದೆ ಎಂದು ದೈವಜ್ಞ ಮಹಿಳಾ ಮಂಡಳಿ ಅಧ್ಯಕ್ಷೆ ಸೀಮಾ ಸದಾನಂದ ಹೇಳಿದರು.
ದೈವಜ್ಞ ಕಲ್ಯಾಣ ಮಂದಿರದಲ್ಲಿ ಆಯೋಜಿಸಿದ್ದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಮಾತನಾಡಿ, 30 ವರ್ಷಗಳಿಂದ ಸೃಜನಾತ್ಮಕ, ಕ್ರಿಯಾಶೀಲತೆಯ ಕೆಲಸಗಳನ್ನು ಮಾಡುತ್ತಿದೆ ಎಂದರು.
ಶ್ರೀನಿವಾಸ ಕಲ್ಯಾಣ ಮಾಡುವುದರಿಂದ ದಂಪತಿಗಳ ಜೀವನದಲ್ಲಿ ಸುಖ ಸಂತೋಷ ಪ್ರಾಪ್ತಿಯಾಗಿ ಸಂತೋಷ ಉಲ್ಲಾಸದಿಂದ ಇರುತ್ತಾರೆ. ನಮ್ಮ ಧಾರ್ಮಿಕ ನಂಬಿಕೆಗಳನ್ನು ಪಾಲಿಸುವುದರಿಂದ ಮನಸ್ಸು ಉಲ್ಲಸಿತವಾಗಿ ನೆಮ್ಮದಿಯಿಂದ ಜೀವನ ನಡೆಸಬಹುದು. ಧರ್ಮ ಸಂಸ್ಕೃತಿ ಸಂಪ್ರದಾಯ ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದು ತಿಳಿಸಿದರು.
ಕಾರ್ಯದರ್ಶಿ ವಾಣಿ ಪ್ರವೀಣ್ ಮಾತನಾಡಿ, ಶ್ರೀನಿವಾಸ ಕಲ್ಯಾಣದಿಂದ ಮನಸ್ಸಿಗೆ ಶಾಂತಿ, ಆತ್ಮ ತೃಪ್ತಿ ದೈವ ಭಕ್ತಿಯ ಜೊತೆಗೆ ಕುಟುಂಬದ ಎಲ್ಲರಿಗೂ ಒಳಿತಾಗುತ್ತದೆ. ಪ್ರತಿ ವರ್ಷ ಈ ರೀತಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಪ್ರೇಮ ರಮೇಶ್, ಅರ್ಚನಾ ಅಣ್ಣಪ್ಪ, ಸಹ ಕಾರ್ಯದರ್ಶಿ ಸುಧಾ ಸುರೇಶ್, ಚೇತನಾ ವಾದಿರಾಜ್, ಖಜಾಂಚಿ ರೂಪ ರವಿಪ್ರಕಾಶ್ ಮತ್ತು ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ, ಇತರೆ ಎಲ್ಲಾ ದೈವಜ್ಞ ಸಮಾಜದ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯವರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಬಂಧುಗಳು ಉಪಸ್ಥಿತರಿದ್ದರು. ದೇವತಾ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ಆಡಳಿತ ಮಂಡಳಿ, ನಿರ್ದೇಶಕರು, ಮಾಜಿ ಅಧ್ಯಕ್ಷರು, ಸದಸ್ಯರೆಲ್ಲರ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಯಾಯಿತು.

ಜೂನ್ 12. ಶಿವಮೊಗ್ಗದಲ್ಲಿ ಉದ್ಯೋಗ ಭರ್ತಿಗಾಗಿ ನೇರ ಸಂದರ್ಶನ

0

ಶಿವಮೊಗ್ಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಶಿವಮೊಗ್ಗ ಇವರ ವತಿಯಿಂದ ಜೂ. 12 ರಂದು ಬೆಳಿಗ್ಗೆ 10 ಗಂಟೆಗೆ ಉದ್ಯೋಗಾಕಾಂಕ್ಷಿಗಳಿಗಾಗಿ ನೇರ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿದೆ.
ಈ ಸಂದರ್ಶನದಲ್ಲಿ ಕ್ರೆಡಿಟ್ ಆಕ್ಸೆಸ್ ಗ್ರಾಮೀಣ್ ಲಿ., ಮತ್ತು ಕೆ.ವಿ. ಟ್ಯಾಕ್ಸ್ ಕನ್ಸಲ್ಟೆನ್ಸಿ ಕಂಪನಿಗಳು ಭಾಗವಹಿಸಲಿದ್ದು, ಖಾಲಿ ಇರುವ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಿದ್ದು, ಪಿಯುಸಿ, ಐಟಿಐ ಮತ್ತು ಯಾವುದೇ ಪದವಿ ಪೂರೈಸಿದ, 18 ರಿಂದ 24 ವರ್ಷದೊಳಗಿನ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ಸಂದರ್ಶನಕ್ಕೆ ಬರುವವರು ತಮ್ಮ ಬಯೋಡೇಟಾ ಮತ್ತು ಆಧಾರ್ ಕಾರ್ಡ್ ಪ್ರತಿಗಳೊಂದಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಗುತ್ಯಪ್ಪ ಕಾಲೋನಿ, ಪಂಪಾ ನಗರ 2ನೇ ಕ್ರಾಸ್, ಸಾಗರ ರಸ್ತೆ, ಶಿವಮೊಗ್ಗ ಇಲ್ಲಿ ಹಾಜರಾಗುವಂತೆ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ನೇರ ಸಂದರ್ಶನಕ್ಕೆ ಪ್ರವೇಶ ಉಚಿತವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9380663606/ 9108235132 ಗಳನ್ನು ಸಂಪರ್ಕಿಸುವುದು.

1991 ಏಪ್ರಿಲ್ ನಿಂದ 2022 ಮಾರ್ಚ್ 31 ವರೆಗೆ ವಿಧಿಸಲಾಗಿದ್ದ ತೆರಿಗೆ ಬಾಕಿ ಪಾವತಿಗೆ ವಿಶೇಷ ರಿಯಾಯಿತಿ ಸೌಲಭ್ಯ. ಸಾರಿಗೆ ಇಲಾಖೆ ಪ್ರಕಟಣೆ

0

1991ರಿಂದ 2022ರ ಅವಧಿಯಲ್ಲಿ ದಾಖಲಾಗಿರುವ ಕೆಲವು ಹಳೆಯ ವಾಹನಗಳಿಗೆ ವಿಧಿಸಲಾಗಿದ್ದ ತೆರಿಗೆ ಬಾಕಿಯ ಮೊತ್ತದ ಮೇಲೆ 50% ರಿಯಾಯಿತಿ ನೀಡಲಾಗಿದೆ.

01-04-1991 ರಿಂದ 31-03-2022 ರವರೆಗೆ ದಾಖಲಾಗಿರುವ ವಾಹನಗಳಿಗೆ ಮಾತ್ರ ಈ ಸೌಲಭ್ಯ ಅನ್ವಯಿಸುತ್ತದೆ.

21-06-2026 ರಿಂದ 10-07-2026 ರವರೆಗೆ ಮಾತ್ರ ಈ ವಿಶೇಷ ರಿಯಾಯಿತಿ ಲಭ್ಯ.

ವಾಹನ ಮಾಲೀಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಬಾಕಿ ತೆರಿಗೆಯನ್ನು ಪಾವತಿಸಿ, ಕಾನೂನುಬದ್ಧವಾಗಿ ತಮ್ಮ ವಾಹನಗಳ ದಾಖಲೆಗಳನ್ನು ನವೀಕರಿಸಿಕೊಳ್ಳಿ.

ಸೇವಾ ನ್ಯೂನತೆ ಎಸಗಿದ ಡೆವಲಪರ್ಸ್ ಗೆ ಹಣವನ್ನ ಗ್ರಾಹಕರಿಗೆ ಮರುಪಾವತಿಸಲು ಆಯೋಗದ ಆದೇಶ

0

ಶಿವಮೊಗ್ಗ ವಿನೋಬನಗರ ನಿವಾಸಿ ಶ್ರೀಮತಿ ವೆಂಕಟಲಕ್ಷ್ಮೀ ಎಂಬುವವರು ಬೆಂಗಳೂರಿನ ಶ್ರೀ ಧತ್ರಿ ಡೆವಲಪರ್ಸ್ ಮತ್ತು ಪ್ರಮೋಟರ್ಸ್ ಪಾಲುದಾರರಾದ ಸೌಮಿ ಮಂಜುನಾಥ ಹಾಗೂ ಮಂಜುನಾಥ ಬಿ. ಎಂಬುವವರ ಮೇಲೆ ನಿವೇಶನ ಖರೀದಿಸಲು ಹಣ ಪಾವತಿಸಿದ್ದು, ಕ್ರಯಪತ್ರ ಮಾಡಿಕೊಡದೇ ಸೇವಾನ್ಯೂನತೆ ಎಸಗಿದ್ದಾರೆಂದು ವಕೀಲರ ಮೂಲಕ ಸಲ್ಲಿಸಿದ ದೂರನ್ನು ಪರಿಶೀಲಿಸಿ, ಹಣವನ್ನು ಮರುಪಾವತಿ ಮಾಡುವಂತೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಆದೇಶ ನೀಡಿದೆ.
ದೂರುದಾರರು ಶ್ರೀ ಧತ್ರಿ ಡೆವಲಪರ್ಸ್ ಮತ್ತು ಪ್ರಮೋಟರ್ಸ್ ಮೂಲಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕು ಯಲಚಗೆರೆಯಲ್ಲಿ ರೂ. 5.00 ಲಕ್ಷಗಳಿಗೆ 40/20 ಅಳತೆಯ ನಿವೇಶನವನ್ನು ಖರೀದಿಸಿ ಕಂತಿನಲ್ಲಿ ಒಟ್ಟು ರೂ. 4.99 ಲಕ್ಷಗಳನ್ನು ಅ. 2024ರವರೆಗೆ ಪಾವತಿಸಿರುತ್ತಾರೆ. 6 ತಿಂಗಳೊಳಗೆ ಕ್ರಯಪತ್ರ ಮಾಡಿಕೊಡುತ್ತೇವೆಂದು ಹೇಳಿದ ಎದುರುದಾರರು ಹಲವಾರು ಬಾರಿ ಕೇಳಿದ್ದು, 2025ರಲ್ಲಿ ಲೀಗಲ್ ನೋಟಿಸ್ ನೀಡಿದರೂ ಯಾವುದೇ ಪ್ರತ್ಯುತ್ತರ ನೀಡದೇ ಸೇವಾ ನ್ಯೂನತೆ ಎಸಗಿದ್ದಾರೆಂದು ಆಯೋಗಕ್ಕೆ ದೂರು ಸಲ್ಲಿಸಿರುತ್ತಾರೆ.
ದೂರನ್ನು ದಾಖಲಿಸಿಕೊಂಡು ಆಯೋಗವು ಎದುರುದಾರರಿಗೆ ನೋಟಿಸ್ ನೀಡಿದ್ದು, ಎದುರುದಾರರ ಹಾಜರಾಗದೇ ಇರುವುದರಿಂದ ಏಕಪಕ್ಷೀಯವಾಗಿ ದೂರುದಾರರ ಸಲ್ಲಿಸಿರುವ ಪ್ರಮಾಣಪತ್ರ ಮತ್ತು ದಾಖಲೆಗಳನ್ನು ಪರಿಶೀಲಿಸಿ ವಾದವನ್ನು ಆಲಿಸಿ, ಎದುರುದಾರರು ದೂರುದಾರರಿಂದ ಹಣ ಪಡೆದು ಕ್ರಯಪತ್ರ ಮಾಡಿಕೊಡದೆ ಸೇವಾನ್ಯೂನತೆ ಎಸಗಿದ್ದಾರೆಂದು ತೀರ್ಮಾನಿಸಿ ದೂರನ್ನು ಭಾಗಶಃ ಪರಿಸ್ಕರಿಸಿದೆ. ಎದುರುದಾರರು ದೂರುದಾರರಿಂದ ಪಡೆದು ಮೊತ್ತ ರೂ. 4.99 ಲಕ್ಷವನ್ನು ವಾರ್ಷಿಕ ಶೇ. 9 ರಂತೆ ದಿ: 02/04/2025 ರಿಂದ ಬಡ್ಡಿಯನ್ನು ಸೇರಿಸಿ ಈ ಆದೇಶವಾದ 45 ದಿನಗಳೊಳಗಾಗಿ ಪೂರ್ತಿ ಹಣ ಪಾವತಿಸುವುದು. ತಪ್ಪಿದ್ದಲ್ಲಿ, ವಾರ್ಷಿಕ ಶೇ. 12ರ ಬಡ್ಡಿಯನ್ನು ಸೇರಿಸಿ ಪೂರ್ತಿ ಹಣ ಪಾವತಿಸುವವರೆಗೆ ನೀಡುವುದು. ಹಾಗೂ ರೂ. 50000/- ಗಳನ್ನು ಮಾನಸಿಕ ಹಿಂಸೆ ಮತ್ತು ಅನಾನುಕೂಲತೆಗೆ ಪರಿಹಾರವಾಗಿ ಮತ್ತು ರೂ. 10000/- ಗಳನ್ನು ದೂರಿನ ಖರ್ಚುವೆಚ್ಚಕ್ಕಾಗಿ ಈ ಆದೇಶವಾದ 45 ದಿನಗಳೊಳಗಾಗಿ ಪಾವತಿಸುವುದು. ತಪ್ಪಿದ್ದಲ್ಲಿ ವಾರ್ಷಿಕ ಶೇ. 10 ರ ಬಡ್ಡಿಯನ್ನು ಸೇರಿಸಿ ಪೂರ್ತಿ ಹಣ ಪಾವತಿಸುವವರೆಗೆ ನೀಡಬೇಕೆಂದು ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯರವರನ್ನು ಒಳಗೊಂಡ ಪೀಠವು ಮೇ 30 ರಂದು ಆದೇಶಿಸಿದೆ.