Tuesday, April 7, 2026
Tuesday, April 7, 2026
Home Blog Page 629

MESCOM ಪ.ಜಾ/ ಪ.ಪಂ ದವರಿಂದ ಕೃಷಿಪಂಪ್ ಸೆಟ್ ಗೆ ವಿದ್ಯುತ್ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

0

MESCOM ಶಿವಮೊಗ್ಗ ತಾಲೂಕು ಗ್ರಾಮೀಣ ಮೆಸ್ಕಾಂ ಉಪವಿಭಾಗ ವ್ಯಾಪ್ತಿಗೆ ಒಳಪಡುವ ಅಬ್ಬಲಗೆರೆ, ಪಿಳ್ಳಂಗಿರಿ, ಹೊಳಲೂರು, ಗಾಜನೂರು ಮತ್ತು ಸಂತೆಕಡೂರು ಶಾಖಾ ವ್ಯಾಪ್ತಿಗೆ ಒಳಪಡುವ ಪ.ಜಾ/ಪ.ಪಂ.ಕ್ಕೆ ಸೇರುವ ರೈತರು ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಡಿ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸೌಲಭ್ಯ ಪಡೆಯಲು ಈ ಹಿಂದೆ ಗಂಗಾಕಲ್ಯಾಣ ಮತ್ತು ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಡಿಲ್ಲಿ ವಿದ್ಯುತ್ ಸಂಪರ್ಕ ಪಡೆಯದ ರೈತರಿಂದ ಅರ್ಜಿ ಆಹ್ವಾನಿಸಿದೆ.
MESCOM ಆಸಕ್ತರು ಗ್ರಾಮೀಣ ಉಪವಿಭಾಗ ಮೆಸ್ಕಾಂ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಆರ್‌ಟಿಸಿ, ಆಧಾರ್ ಕಾಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಫೋಟೋ, ಬಿಪಿಎಲ್ ರೇಷನ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಜೇರಾಕ್ಸ್ ಮತ್ತು ಫೋನ್ ನಂ.ಗಳನ್ನು ಲಗತ್ತಿಸಿ ಆಗಸ್ಟ್ 11 ರೊಳಗಾಗಿ ಸಲ್ಲಿಸುವಂತೆ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

DC Shivamogga ಮಳೆಹಾನಿ ಕಾರಣ ಮಾರ್ಗಸೂಚಿ ಅನ್ಚಯ ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

0

DC Shivamogga 2024 ನೇ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯ ಪ್ರವಾಹ ಪರಿಸ್ಥಿತಿಯ ತುರ್ತು ಸಂದರ್ಭದಲ್ಲಿ ಜಿಲ್ಲಾಡಳಿತದ ವತಿಯಿಂದ ಕೈಗೊಳ್ಳಲಾದ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಗುರುದತ್ ಹೆಗಡೆ ಅವರು ಮಾಧ್ಯಮದ ಪ್ರತಿನಿಧಿಗಳಿಗೆ ವಿಸ್ತೃತ ಮಾಹಿತಿ ನೀಡಿದರು.

. ಶಿವಮೊಗ್ಗ ಜಿಲ್ಲೆಯಲ್ಲಿ ಜುಲೈ ಮಾಹೆಯಲ್ಲಿ ಭಾರಿ ಮಳೆಯಾಗಿದ್ದರಿಂದ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿರುತ್ತದೆ. ಜುಲೈ ಮಾಹೆಯಲ್ಲಿ (27-07-2022ರವರೆಗೆ) ನರಾಸರಿ 668.0 ಮೀ.ಮೀ ವಾಡಿಕೆ ಮಳೆ ಇದ್ದು 1109 ಮೀ.ಮೀ. ಮಳೆಯಾಗಿರುತ್ತದೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಪ್ರತಿಶತ 66″, ರಷ್ಟು ಹೆಚ್ಚು ಮಳೆಯಾಗಿರುತ್ತದೆ.

ಜಿಲ್ಲೆಯಲ್ಲಿ ನೆರೆಹಾವಳಿಯಿಂದಾಗಿ ಜೂನ್ ಮಾಹೆಯಿಂದ’ ಒಟ್ಟು 4 ಮಾನವ ಹಾನಿಯಾಗಿದ್ದು, ಈಗಾಗಲೆ 2 ಪ್ರಕರಣಗಳಿಗೆ ರೂ.5.00 ಲಕ್ಷದಂತೆ ಮಾರ್ಗಸೂಚಿಯಂತೆ ಪರಿಹಾರ ವಿತರಿಸಲಾಗಿದೆ ಉಳಿದ 2 ಪ್ರಕರಣಕ್ಕೆ ಶೀಘ್ರವಾಗಿ ಪರಿಹಾರ ಧನ ವಿತರಿಸಲಾಗುವುದು

  • ಜಿಲ್ಲೆಯಲ್ಲಿ ನೆರೆಹಾವಳಿಯಿಂದಾಗಿ ಒಟ್ಟು 10 ಜಾನುವಾರು ಮೃತಪಟ್ಟಿರುತ್ತವೆ 8 ಪ್ರಕರಣಗಳ ವಾರಸುದಾರರಿಗೆ ಮಾರ್ಗಸೂಚಿಯಂತೆ
    0.375 ಲಕ್ಷದಂತೆ ಪರಿಹಾರ ಧನ ವಿತರಿಸಲಾಗಿದೆ

ಅತಿ ಹೆಚ್ಚು ಮಳೆಯಿಂದ ಜೂನ್ ಮಾಹೆಯಿಂದ ಸುಮಾರು 18 ಮನೆ ಪೂರ್ಣಹಾನಿಯಾಗಿರುತ್ತದೆ. 5 ಮನೆಗಳ ವಾರಸುದಾರರಿಗೆ ಈಗಾಗಲೆ ರೂ.1.20 ಲಕ್ಷಗಳಂತೆ 6.00 ಲಕ್ಷಗಳ ಪರಿಹಾರ ವಿತರಿಸಲಾಗಿದೆ. 437 ಮನೆಗಳು ಭಾಗಷ: ಹಾನಿಯಾಗಿದ್ದು, 40 ಮನೆಗಳಿಗೆ ರೂ.1.71 ಲಕ್ಷಗಳ ಪರಿಹಾರ ವಿತರಿಸಲಾಗಿದೆ. ಉಳಿದ ಮನೆಗಳಿಗೆ ಶೀಘ್ರವಾಗಿ ಪರಿಹಾರ ವಿತರಣೆಗೆ ಕ್ರಮವಹಿಸಲಾಗುವುದು.

ಜಿಲ್ಲೆಯಲ್ಲಿ 1540 ಹೆ. ಪ್ರದೇಶದಲ್ಲಿ ಭತ್ತ ಮತ್ತು 2300 ಹೆ. ಪ್ರದೇಶದಲ್ಲಿ ಮುನುಕಿನ ಜೋಳ ಕೃಷಿಬೆಳೆಗಳು
ಜಲಾವೃತವಾಗಿರುವ ಕುರಿತು ಪ್ರಾಥಮಿಕ ವರದಿ ಬಂದಿರುತ್ತದೆ (ನೆರೆ ಇಳಿಮುಖವಾದ ನಂತರ ಜಂಟಿ ಸಮೀಕ್ಷೆ ನಂತರ ಹಾನಿ ಪ್ರಮಾಣವನ್ನು ಅಂದಾಜಿಸಲಾಗುವುದು).

DC Shivamogga ಜಿಲ್ಲೆಯಲ್ಲಿ ನೆರೆಹಾವಳಿಯಿಂದಾಗಿ ಮೆಸ್ಕಾಂ ಇಲಾಖೆಗೆ ಸಂಬಂಧಿಸಿದ 767 ವಿದ್ಯುತ್ ಕಂಬಗಳು ಹಾನಿಯಾಗಿದೆ ಹಾಗೂ 16 ಟ್ರಾನ್ಸ್ ಪಾರ್ಮರ್ ಗಳು ಹಾನಿಯಾಗಿರುತ್ತವೆ.

ಜಿಲ್ಲೆಯಲ್ಲಿ ಪ್ರವಾಹದಿಂ ದಾಗಿ 41.63 ಕಿ.ಮೀ. ರಾಜ್ಯ ಹೆದ್ದಾರಿ,
65.96 ಕಿ.ಮೀ.ಜಿಲ್ಲೆಯ ಮುಖ್ಯ ರಸ್ತೆ,
610.43 ಕಿ.ಮೀ. ಗ್ರಾಮೀಣ ರಸ್ತೆ, ಹಾನಿಯಾಗಿರುತ್ತದೆ ಜಿಲ್ಲೆಯಲ್ಲಿ ಪ್ರವಾಹದಿಂದಾಗಿ 111 ಸೇತುವೆಗಳು ಹಾನಿಯಾಗಿರುತ್ತದೆ.

ಜಿಲ್ಲೆಯಲ್ಲಿ ಪ್ರವಾಹದಿಂದಾಗಿ 381 ಶಾಲಾ ಕಟ್ಟಡಗಳು, 260 ಅಂಗನವಾಡಿ ಕಟ್ಟಡಗಳು ಹಾಗೂ 09 ಆರೋಗ್ಯ ಕೇಂದ್ರಗಳು ಹಾನಿಗೊಳಗಾಗಿರುತ್ತವೆ.

ಜಿಲ್ಲೆಯಲ್ಲಿ ಪ್ರವಾಹದಿಂದಾಗಿ 97 ಕರೆಗಳು ಹಾನಿಗೊಳಗಾಗಿರುತ್ತವೆ.

  • ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮೇಲಿನಕುರುವಳ್ಳಿ ಗ್ರಾಮ ಪಂಚಾಯತಿ ವಿಠಲನಗರ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಗುಡ್ಡ ಕುಸಿದು ತಡೆಗೋಡೆ ಹಾನಿಯಾಗಿರುತ್ತದೆ

ರಾಷ್ಟ್ರೀಯ ಹೆದ್ದಾರಿ 169ಎ ತೀರ್ಥಹಳ್ಳಿ -ಮಲ್ಪೆ ರಸ್ತೆಯ ಆಗುಂಬೆ ಘಾಟಿಯಲ್ಲಿ ಭಾರಿ ಮಳೆಯಿಂದಾಗಿ ಮತ್ತು ಭಾರಿ ವಾಹನಗಳ ಒಡಾಟದಿಂದಾಗಿ ಅಲ್ಲಲ್ಲಿ ರಸ್ತೆ ಬದಿಯಲ್ಲಿ ಭೂಕುಸಿತವಾಗುವ ಸಂಭವವಿರುವುದರಿಂದ ಭಾರಿವಾಹನಗಳ ಸಂಚಾರ ನಿಷೇಧಿಸಿ ಬದಲಿ ಮಾರ್ಗ ವಾಹನ ಸಂಚಾರಕ್ಕೆ ಅನುವು ಕೊಡಲಾಗಿದೆ

ಶಿವಮೊಗ್ಗ ಜಿಲ್ಲೆಯ ಗಾಜನೂರು ಜಲಾಶಯದಿಂದ ದಿನಾಂಕ 28.07 2024 ರಂದು 74105 ಕ್ಯೂಸೆಕ್ಸ್ ನೀರು ಹೊರಬಿಡಲಾಗುತ್ತಿದ್ದು ಮಳೆ ಹೆಚ್ಚಾದಲ್ಲಿ ಜಲಾಶಯದ ಹೊರ ಹರಿವು ಹೆಚ್ಚಾದಲ್ಲಿ ಶಿವಮೊಗ್ಗ ನಗರ ವ್ಯಾಪ್ತಿಯ ವೆಂಕಟೇಶ್ವರ ನಗರ ಮತ್ತು ನ್ಯೂ ಮಂಡ್ಲಿ, ಗಾಂಧಿನಗರ, ಇಮಾಮ್ ಬಾಡ, ವಿದ್ಯಾನಗರದ ಕೆಲವು ಪ್ರದೇಶಗಳಲ್ಲಿ ನೀರು ನುಗ್ಗುವ ಸಾಧ್ಯತೆ ಇರುತ್ತದೆ. ತುರ್ತು ಸಂದರ್ಭದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಸದರಿ ಪ್ರದೇಶಗಳ ನಿರ್ವಹಣೆ ಮಾಡಲು ತಂಡಗಳನ್ನು ರಚಿಸಿ ಕ್ರಮವಹಿಸಲು ಸೂಚಿಸಲಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಹದಿಂದ ಮುಳುಗಡೆಯಾಗುವ ಸಂಭಾವ್ಯ ಪ್ರದೇಶಗಳ ಗುರುತಿಸಿಟ್ಟುಕೊಳ್ಳಲಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಹ ಸಂದರ್ಭದಲ್ಲಿ ಉಪಯೋಗಿಸಲು ಒಟ್ಟು 103 ಕಾಳಜಿ ಕೇಂದ್ರಗಳನ್ನು ಗುರಿತಿಸಿಟ್ಟುಕೊಳ್ಳಲಾಗಿದೆ. ಈಗಾಗಲೆ ಶಿವಮೊಗ್ಗ ನಗರ ಮತ್ತು ಸಾಗರ ತಾಲ್ಲೂಕು ತಾಳಗುಪ್ಪ ಹೋಬಳಿ ಮಂಡಗಳಲೆ ಗ್ರಾಮದಲ್ಲಿ ಮನೆಗೋಡೆಗಳು ಶಿಥಿಲಗೊಂಡಿರುವುದರಿಂದ 2 ಕಾಳಜಿ ಕೆಂದ್ರಗಳನ್ನು ತೆರೆಯಲಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಗ್ರಾಮೀಣ ವ್ಯಾಪ್ತಿಯಲ್ಲಿ ಗ್ರಾಮ ವಿಪತ್ತು ನಿರ್ವಹಣಾ ತಂಡಗಳನ್ನು ರಚಿಸಲಾಗಿದ್ದು ತುರ್ತು
ಸಂಧರ್ಭದಲ್ಲಿ ಕ್ರಮವಹಿಸಲು ಸೂಚಿಸಲಾಗಿದೆ. ನಗರ ವ್ಯಾಪ್ತಿಯಲ್ಲಿ ವಿಪತ್ತು ನಿರ್ವಹಣಾ ತಂಡಗಳನ್ನು ರಚಿಸಲಾಗಿದೆ.

ಜಿಲ್ಲೆಯಲ್ಲಿ ರಕ್ಷಣಾ ಕಾರ್ಯಕ್ಕಾಗಿ ಲಭ್ಯವಿರುವ ಸುರಕ್ಷತಾ ಉಪಕರಣಗಳನ್ನು ಸಿದ್ಧಪಡಿಸಿಟ್ಟುಕೊಳ್ಳಲು ಜಿಲ್ಲಾ ಅಗ್ನಿಶಾಮಕದಳ ಇವರಿಗೆ ಸೂಚಿಸಲಾಗಿದೆ. ಹಾಗೂ 15 ಜನಗಳ SDRF ತಂಡವನ್ನು ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗ ಜಿಲ್ಲಾ ಕೇಂದ್ರದಲ್ಲಿ ಇರಿಸಿಕೊಳ್ಳಲಾಗಿದೆ.

ದಿನಾಂಕ:-25.07.2024ರಂದು ಭದ್ರಾ ಜಲಾಶಯದಿಂದ ಹೊರ ಬಿಡುವ ನೀರಿನಿಂದ ಉಂಟಾಗುವ ಪ್ರವಾಹದ ಕುರಿತು ದಾವಣಗೆರೆ ಹಾಗೂ ಚಿಕ್ಕಮಗಳೂರುಗಳ ಜಿಲ್ಲಾಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವ ಕುರಿತು ವಿಡಿಯೋ ಸಂವಾದದ ಮೂಲಕ ಚರ್ಚಿಸಲಾಗಿದೆ ಎಂದರು.

Rajya Bal Bhavan ಬಾಲ ಭವನದ ಮುಖಾಂತರ ನಿರಂತರ ಕಾರ್ಯಕ್ರಮ ನಡೆಸಲು ಅಧ್ಯಕ್ಷರ ಸೂಚನೆ

0

Rajya Bal Bhavan ರಾಜ್ಯ ಬಾಲಾಭವನ ಅಧ್ಯಕ್ಷ ಬಿ ಆರ್ ನಾಯ್ಡು ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಿ ಕಾಂಗ್ರೆಸ್ ಮುಖಂಡ ಯೋಗೀಶ್ ರವರೊಂದಿಗೆ ರಾಜ್ಯ ಬಾಲ ಭವನ ಸೊಸೈಟಿಯ ಅನುದಾನದಲ್ಲಿ ಮಹಾತ್ಮಾ ಗಾಂಧಿ ಪಾರ್ಕ್ ನಲ್ಲಿ ನಡೆಯುತ್ತಿರುವ ಮಕ್ಕಳ ಪುಟಾಣಿ ರೈಲು, ಈಜು ಕೊಳ ನಿರ್ವಹಣೆ ಪರಿಶೀಲಿಸಿದರು.

ಇವುಗಳ ಉತ್ತಮ ನಿರ್ವಹಣೆ ಹಾಗೂ ಉನ್ನತಿಕರಣ ಬಗ್ಗೆ ಮಹಾ ನಗರ ಪಾಲಿಕೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಮಕ್ಕಳ ಉಪಯೋಗಕ್ಕೆ ಯೋಗ್ಯವಾಗುವಂತೆ ಪಾಲಿಕೆ, CSR ಅನುದಾನ ಬಳಸಿಕೊಳ್ಳಲು ಸೂಚಿಸಿದರು. ತದನಂತರ ಮಹಿಳಾ ಮತ್ತು ಮಕ್ಕಳ ಉಪ ನಿರ್ದೇಶಕರ ಕಚೇರಿಯಲ್ಲಿ ಬಾಲ ಭವನ ಚಟುವಟಿಕೆಗಳ ಪ್ರಗತಿ ಪರಿಶೀಲನೆ ನಡೆಸಿ ಜಿಲ್ಲಾ ಮತ್ತು ತಾಲ್ಲೂಕು ಬಾಲ ಭವನ ನಿರ್ಮಾಣ ಮಾಡಲು ಕನಿಷ್ಠ ಅರ್ಧ ಎಕರೆ ನಿವೇಶನ ರಾಜ್ಯ ಬಾಲ ಭವನ ಸೊಸೈಟಿ ಹೆಸರಿಗೆ ಜಿಲ್ಲಾಧಿಕಾರಿಯವರಿಂದ ಮಂಜೂರಾತಿ ಪಡೆಯಲು ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.

Rajya Bal Bhavan ಜಿಲ್ಲಾ ಬಾಲ ಭವನ ಕಾರ್ಯಕ್ರಮ ಸಂಯೋಜಕರ ಮೂಲಕ ನಿರಂತರವಾಗಿ ಕಾರ್ಯಕ್ರಮಗಳನ್ನು ಆಯೋಜಿಸಲು ತಿಳಿಸಿದರು. ಈ ಸಂದರ್ಭದಲ್ಲಿ ಉಪ ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಿ ಹೆಚ್ ಕೃಷ್ಣಪ್ಪ, ಇಲಾಖಾ ಅಧಿಕಾರಿಗಳು, ಮಹಾ ನಗರ ಪಾಲಿಕೆ, ಶಿಕ್ಷಣ, ಯುವ ಜನ ಕ್ರೀಡಾ ಇಲಾಖೆ, ಅಧಿಕಾರಿಗಳು ಹಾಜರಿದ್ದರು.

ನಂತರ ಬಾಲಕಿಯರ ಬಾಲ ಮಂದಿರಕ್ಕೆ ಭೇಟಿ ಪರಿಶೀಲಿಸಿ ಇಲಾಖಾ ಸಂಕಿರ್ಣದಲ್ಲಿ ಬಾಲ ಭವನ ಆಡಿಟೋರಿಯಂ, ಮಕ್ಕಳ ಉದ್ಯಾನವನ ನಿರ್ಮಾಣ ಮಾಡುವ ಸಾಧ್ಯತೆ ಬಗ್ಗೆ ನಿವೇಶನಗಳ ಸ್ಥಳ ಪರಿಶೀಲನೆ ನಡೆಸಿದರು.

Madras High Court ವೈಶ್ಯಾವಾಟಿಕೆ ನಡೆಸಿದ ಆರೋಪಿ ವಕೀಲರಿಗೆ ಛೀಮಾರಿ ಹಾಕಿದ ಮದ್ರಾಸ್ ಹೈ ಕೋರ್ಟ್

0

Madras High Court ವಕೀಲ ವೃತ್ತಿ ಎಂದರೆ ಎಲ್ಲರಿಗೂ ಎಲ್ಲಿಲ್ಲದ ಗೌರವ. ಕಾನೂನು ಕಾಪಾಡುವ, ಅನ್ಯಾಯಕ್ಕೊಳಗಾದವರಿಗೆ, ನೊಂದವರಿಗೆ ಸೂಕ್ತ ನ್ಯಾಯ ಕೊಡಿಸುವ ಮಹತ್ತರ ಜವಾಬ್ದಾರಿ ವಕೀಲಿಕೆ ವೃತ್ತಿಯದ್ದಾಗಿರುತ್ತದೆ. ಆದರೆ ಇನ್ನೊಬ್ಬ ವಕೀಲರು ಇಂತಹ ಪವಿತ್ರ ವೃತ್ತಿಗೆ ಕಳಂಕವೆಂಬಂತೆ ವೇಶ್ಯಾವಾಟಿಕೆ ನಡೆಸುತ್ತಿದ್ದು ಈ ಘಟನೆಗೆ ಮದ್ರಾಸ್ ಹೈಕೋರ್ಟ್ ಆಘಾತ ವ್ಯಕ್ತಪಡಿಸಿದೆ.

ಹೌದು, ವಕೀಲ ರಾಜಾ ಮುರುಗನ್ ಎಂಬುವವರು ವೇಶ್ಯಾವಾಟಿಕೆ ಅಡ್ಡೆಯನ್ನು ನಡೆಸುತ್ತಿದ್ದು, ಅದಕ್ಕೆ ಪೊಲೀಸರಿ೦ದ ರಕ್ಷಣೆ ಕೋರಿ ಅರ್ಜಿ ಸಲ್ಲಿಸಿರುವ ಘಟನೆ ಮದ್ರಾಸ್ ಹೈಕೋರ್ಟ್ನಲ್ಲಿ ನಡೆದಿದೆ. ಈ ಫಟನೆ ಬಗ್ಗೆ ಸ್ವತಃ ಮದ್ರಾಸ್ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ.

ಅಲ್ಲದೆ ವೇಶ್ಯಾಗೃಹ ಕಾನೂನುಬದ್ಧವಲ್ಲ ಎಂದು ಹೇಳಿರುವ ಮದ್ರಾಸ್ ಹೈಕೋರ್ಟ್, ಸ್ವತಃ ವೇಶ್ಯಾವಾಟಿಕೆ ನಡೆಸುತ್ತಿದ್ದ ವಕೀಲನಿಗೆ ದ೦ಡದ ಸಹಿತ ಛೀಮಾರಿ ಹಾಕಿ ಈತ ವಕೀಲ ಸಮುದಾಯಕ್ಕೆ ಕಳಂಕ ಎಂದು ಕಿಡಿಕಾರಿದೆ.

ಮಾತ್ರವಲ್ಲ, ಅರ್ಜಿ ಸಲ್ಲಿಸಿದ ವಕೀಲ ನಿಜವಾಗಿಯೂ ನೋಂದಾಯಿತ ವಕೀಲನೇ ಎನ್ನುವ ಬಗ್ಗೆ ಆತನ ನೋಂದಣಿ ಪತ್ರದ ನೈಜತೆ ಪರಿಶೀಲಿಸುವಂತೆ ತಮಿಳುನಾಡು ಮತ್ತು ಪುಚುಚೇರಿ ವಕೀಲರ ಪರಿಷತ್ತಿಗೆ ನಿರ್ದೇಶನ ನೀಡಿದೆ.

Madras High Court ವಕೀಲ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್ನ ನ್ಯಾ. ಬಿ. ಪುಗುಳೇಂದಿ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರ ವಕೀಲರಿಗೆ ರೂ. 10,900/- ದಂಡ ವಿಧಿಸಿದೆ. ಈತ ವಕೀಲ ಸಮುದಾಯದ ಖ್ಯಾತಿಗೆ ಮಸಿ ಬಳೆಯುತ್ತಿದ್ದಾನೆ. ಈತನ ಬಗ್ಗೆ ಗಮನಹರಿಸಲು ವಕೀಲರ ಪರಿಷತ್ತಿಗೆ ಇದು ಸಕಾಲ ಎ೦ದು ಹೇಳಿರುವ ನ್ಯಾಯಪೀಠ, ಅಧಿಕೃತ ಕಾಲೇಜುಗಳಿಂದ ಶಿಕ್ಷಣ ಮುಗಿಸಿದ ಪದವೀಧರರನ್ನು ಮಾತ್ರ ನೋಂದಣಿ ಮಾಡಿಕೊಳ್ಳಬೇಕು ಎಂದು ನ್ಯಾಯಪೀಠ ಸಲಹೆ ನೀಡಿದೆ.

ತಾನು ಫ್ರೆಂಡ್ಸ್ ಫಾರ್ ಎವರ್ ಎ೦ಬ ಟ್ರಸ್ಟ್ ಸ್ಥಾಪಿಸಿದ್ದೇನೆ. ಈ ಟ್ರಸ್ಟ್ ನ ಮುಖ್ಯ ಉದ್ದೇಶ ತನ್ನ ಸದಸ್ಯರು ಮತ್ತು ಗ್ರಾಹಕರಿಗೆ ತೈಲ ಅಭ್ಯ೦ಜನ ಮತ್ತು ಇತರ ಲೈಂಗಿಕ ಸೇವೆಯ೦ತ ವಯಸ್ಕರ ಮನರ೦ಜನೆ ಚಟುವಟಿಕೆಗಳನ್ನು ನಡೆಸುವುದಾಗಿದೆ ಎಂದು ಅರ್ಜಿದಾರ ವಕೀಲ ರಾಜಾ ಮುರುಗನ್ ಹೇಳಿಕೊಂಡಿದ್ದ.

Manasadhara Trust ಶಾಲಾ ಶಿಕ್ಷಣದ ಜೊತೆ ಇತರೆ ಕೌಶಲ್ಯಗಳನ್ನೂ ಕಲಿಯಬೇಕು- ಎಸ್.ವೈ.ಅರುಣಾದೇವಿ

0

Manasadhara Trust ಮಾನಸಾಧಾರ ಟ್ರಸ್ಟ್, ಜನ ಶಿಕ್ಷಣ ಸಂಸ್ಥೆ, ಶಿವಮೊಗ್ಗ ಹಾಗೂ ಅಕ್ಷರ ಫೌಂಡೇಶನ್, ಬೆಂಗಳೂರು ಇವರ ಸಹಯೋಗದಲ್ಲಿ ಗಣಿತ ವಿಷಯದ ಒಂದು ದಿನದ ಕಾರ್ಯಾಗಾರ ಮತ್ತು ಸೌಂದರ್ಯ ವರ್ಧಕ ಕೋರ್ಸ್ ತರಬೇತಿಯ ಉದ್ಘಾಟನಾ ಸಮಾರಂಭವನ್ನು ಮನಸ್ಫೂರ್ತಿ ಕಲಿಕಾ ಕೇಂದ್ರದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಶಿವಮೊಗ್ಗದ ಜನ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಎಸ್.ವೈ.ಅರುಣಾದೇವಿಯವರು ಮಾತನಾಡಿ “ಇಂದಿನ ಯುಗದಲ್ಲಿ ಕೇವಲ ಶಾಲಾ ಶಿಕ್ಷಣವೇ ಅಲ್ಲದೇ ಇತರೆ ಕೌಶಲ್ಯಗಳನ್ನು ಕಲಿಯಬೇಕಿದೆ. ಕಂಪ್ಯೂಟರ್ ಕೋರ್ಸ್, ಸೌಂದರ್ಯ ವರ್ಧಕ ಕೋರ್ಸ್, ಹೊಲಿಗೆ ತರಬೇತಿ ಕೋರ್ಸ್ ಇವುಗಳೆಲ್ಲವೂ ಸ್ವಾವಲಂಬಿಗಳಾಗಿ ಬದುಕಲು ಸಹಾಯ ಮಾಡುತ್ತವೆ. ಆದ್ದರಿಂದ ಇಂತಹ ಕೌಶಲ್ಯಗಳನ್ನು ಕಲಿಯಲು ಇಂದಿನ ಯುವ ಜನತೆ ಮನಸ್ಸು ಮಾಡಬೇಕಿದೆ” ಎಂದು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಬೆಂಗಳೂರಿನ ಅಕ್ಷರ ಫೌಂಡೇಶನ್ ನ ಕಾರ್ಯಕ್ರಮಾಧಿಕಾರಿಗಳಾದ ಶ್ರೀಯುತ ಹನುಮಂತರಾವ್ ಕಣ್ಣಿಯವರು ಮಾತನಾಡಿ “ಗಣಿತ ಕಬ್ಬಿಣದ ಕಡಲೆಯಲ್ಲ, ಸೂಕ್ತ ಬೋಧನೋಪಕರಣಗಳು, ಸರಳ ಚಟುವಟಿಕೆಗಳ ಮೂಲಕ ಕಲಿಸಿದಲ್ಲಿ ಗಣಿತ ಅತ್ಯಂತ ಸರಳ ಹಾಗೂ ಆಸಕ್ತಿದಾಯಕ ವಿಷಯವಾಗುತ್ತದೆ” ಎಂದು ತಿಳಿಸಿದರು. ಕಾರ್ಯಕ್ರಮದ ಮತ್ತೋರ್ವ ಅತಿಥಿಗಳಾದ ಶಿವಮೊಗ್ಗದ ಹ್ಯಾಪಿ ಹೋಂ ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ಐರಿನ್ ಕಾರ್ಕಡ್ ಶಿಬಿರಾರ್ಥಿಗಳಿಗೆ ಶುಭ ಕೋರಿದರು.

ಕಾರ್ಯಕ್ರಮದ ಅಧ್ಯಕ್ಷೀಯ ನುಡಿಗಳನ್ನಾಡಿದ ಮಾನಸ ಸಂಸ್ಥೆಯ ನಿರ್ದೇಶಕರಾದ ಡಾ.ರಜನಿ.ಎ.ಪೈರವರು “ಶಿಕ್ಷಣದೊಂದಿಗೆ ಜೀವನಾವಶ್ಯಕ ಕೌಶಲ್ಯಗಳನ್ನು ಕಲಿಯಬೇಕು. ಶ್ರದ್ಧೆ, ಆಸಕ್ತಿ, ಅನುಕೂಲಕರವಾದ ವಾತಾವರಣ ಇದ್ದಲ್ಲಿ ಕಲಿಕೆ ಸುಲಭವಾಗುತ್ತದೆ. ಇದರಿಂದ ಸ್ವಾವಲಂಬಿಗಳಾಗಿ ಬದುಕಬಹುದು” ಎಂದು ಅಭಿಪ್ರಾಯಪಟ್ಟರು.

Manasadhara Trust ಕಾರ್ಯಕ್ರಮದಲ್ಲಿ ಕು.ಗೌತಮಿ ಪ್ರಾರ್ಥನೆಯನ್ನು ನೆರವೇರಿಸಿದರೆ ಮನಸ್ಫೂರ್ತಿ ಕಲಿಕಾ ಕೇಂದ್ರದ ಸಂಯೋಜಕರಾದ ಶ್ರೀಮತಿ ರಂಗನಾಯಕಿಯವರು ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಕು.ಶಿಲ್ಪಾರವರು ಕಾರ್ಯಕ್ರಮವನ್ನು ನಿರೂಪಿಸಿದರೆ, ಎ ಎಸ್ ಡಿ ವಿಭಾಗದ ಸಂಯೋಜಕರಾದ ಸವಿತಾ ರಾಣಿ.ಸಿ.ಜಿರವರು ವಂದಿಸಿದರು. ಖ್ಯಾತ ಮನೋವೈದ್ಯೆ ಡಾ.ಪ್ರೀತಿ.ವಿ.ಶಾನ್ ಭಾಗ್, ಡಾ.ವಿದ್ಯಾ ರಘುದತ್ತ್, ಮನಸ್ಫೂರ್ತಿ ಕಲಿಕಾ ಕೇಂದ್ರದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ನೆರೆದಿದ್ದ ಶಿಕ್ಷಕ ವರ್ಗದವರ ಸಹಯೋಗದೊಂದಿಗೆ ಕಾರ್ಯಕ್ರಮವು ಯಶಸ್ವಿಗೊಂಡಿತು.

Madhu Bangarappa ಸಚಿವ ಮಧು ಬಂಗಾರಪ್ಪ ಅವರಿಂದ ಗಾಜನೂರಿನಲ್ಲಿ ತುಂಗೆಗೆ ಬಾಗಿನ ಅರ್ಪಣೆ

0

Madhu Bangarappa ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಇಂದು ಗಾಜನೂರಿನ ತುಂಗಾ ಜಲಾಶಯಕ್ಕೆ ತೆರಳಿ ತುಂಬಿದ ತುಂಗಾನದಿಗೆ ಬಾಗಿನ ಸಮರ್ಪಿಸಿದರು.

ಗಾಜನೂರಿನ ತುಂಗಾ ಜಲಾಶಯ ವೀಕ್ಷಣೆ ಮಾಡಿ ಅಧಿಕಾರಿಗಳೊಂದಿಗೆ ಆಣೆಕಟ್ಟಿನ ಸಾಮರ್ಥ್ಯ ಹಾಗು ನೀರಿನ ಒಳ ಮತ್ತು ಹೊರ ಹರಿವಿನ ಬಗ್ಗೆ ಮಾಹಿತಿ ಪಡೆದರು.

Madhu Bangarappa ರಾಜ್ಯದ ಎಲ್ಲೆಡೆ ಮಳೆ ಪ್ರಮಾಣ ಹೆಚ್ಚಾಗಿದ್ದು ಎಲ್ಲಾ ಆಣೆಕಟ್ಟುಗಳು ತುಂಬಿದೆ ತುಂಗಾ ನದಿ ಪ್ರದೇಶದಲ್ಲಿ ಮಲೆನಾಡ ಭಾಗದಲ್ಲಿ ಮಳೆ ಅಧಿಕವಾಗಿದ್ದು ತುಂಗಾ ಜಲಾಶಯ ಭರ್ತಿಯಾಗಿರುವುದಕ್ಕೆ ಸಚಿವರು ಸಂತೋಷ ವ್ಯಕ್ತಪಡಿಸಿದ್ದಾರೆ.

Kannada Sahitya Parishath ಹೊಸನಗರ ತಾಲ್ಲೂಕಿನ ಗೌಡನಕೊಪ್ಪ ಶಾಲೆಯ ಶಿಕ್ಷಕಿ,ಕವಯತ್ರಿ ‘ಅಂಸ’ ಅವರಿಗೆ ಕುವೆಂಪು ಪ್ರಶಸ್ತಿ

0

Kannada Sahitya Parishath ಹೊಸನಗರ ತಾಲ್ಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಗೌಡಕೊಪ್ಪದ ಶಿಕ್ಷಕಿ, ಕವಯಿತ್ರಿ ಅಂಬಿಕಾ ಸಂತೋಷ(ಅಂಸ)ರಿಗೆ ರಾಷ್ಟ್ರಕವಿ ಕುವೆಂಪು ಪ್ರಶಸ್ತಿ ಲಭಿಸಿದೆ. ಶಿಕ್ಷಕಿ, ಕವಯಿತ್ರಿ ಅಂಸ ರಿಗೆ ಸಾಧಕಿಯರ ಸಾಲಲ್ಲಿ ರಾಷ್ಟ್ರ ಕವಿ ಕುವೆಂಪು ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು ಭವನದ ಅಕ್ಕಮಹಾದೇವಿ ಸಭಾಂಗಣದಲ್ಲಿ ಅಕ್ಷರನಾದ ಪ್ರತಿಷ್ಠಾನ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಸವಿ ನೆನಪಿನಲ್ಲಿ ನಡೆದ ಕವಿನುಡಿ ಸಂಭ್ರಮೋತ್ಸವ ಹಾಗೂ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

Kannada Sahitya Parishath ಅಕ್ಷರನಾದ ಕಲೆ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಸಂಸ್ಥಾಪಕರಾದ ಡಾ. ಶ್ರುತಿ ಮಧುಸೂದನ್ (ರುದ್ರಾಗ್ನಿ) ಹಾಗೂ ಪದಾಧಿಕಾರಿಗಳು ಸಾಹಿತಿ ಅಂಬಿಕಾ ಸಂತೋಷ್ (ಅಂಸ) ಅವರಿಗೆ ಕುವೆಂಪು ಪ್ರಶಸ್ತಿ ನೀಡಿ ಗೌರವಿಸಿದರು.

Manu Bhaker ಪ್ಯಾರೀಸ್ ಒಲಿಂಪಿಕ್ಸ್ ಕೂಟದಲ್ಲಿ ಭಾರತದ ಪದಕಗಳ ಖಾತೆ ತೆರೆದ ಮನು ಭಾಕರ್

0

Manu Bhaker ಪ್ಯಾರಿಸ್‌ನಲ್ಲಿ ಒಲಿಂಪಿಕ್ಸ್‌ನ ಶೂಟಿಂಗ್ ವಿಭಾಗದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಮನು ಭಾಕರ್ ಇತಿಹಾಸವನ್ನು ಬರೆದಿದ್ದಾರೆ. ಹರಿಯಾಣದ 22 ವರ್ಷ ವಯಸ್ಸಿನ ಅವರು 10 ಮೀಟರ್ ಏರ್‌ನಲ್ಲಿ ಮೂರನೇ ಸ್ಥಾನವನ್ನು ಗಳಿಸಿದ ನಂತರ ಕ್ರೀಡಾಕೂಟದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಶೂಟರ್ ಆಗಿದ್ದಾರೆ.

ಫ್ರೆಂಚ್ ರಾಜಧಾನಿಯ ಚಟೌರೊಕ್ಸ್ ಶೂಟಿಂಗ್ ಸೆಂಟರ್‌ನಲ್ಲಿ ಪಿಸ್ತೂಲ್ ಫೈನಲ್ ಪಂದ್ಯ ನಡೆಯಿತು. ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರತಿಭಾವಂತ ಶೂಟರ್‌ಗಳಲ್ಲಿ ಒಬ್ಬರಾಗಿರುವ ಮನು, ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳುವ ಮೂಲಕ ರಾಷ್ಟ್ರಕ್ಕೆ ಕೀರ್ತಿ ತಂದಿದ್ದಾರೆ.
ಮನು ಭಾಕರ್ ಅವರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಪರ ಪದಕದ ಖಾತೆ ತೆರೆದಿದ್ದು, ಪಲಂಪಿಕ್ಸ್‌ ಶೂಟಿಂಗ್ ಗೇಮ್ಸ್‌ನಲ್ಲಿ ಪದಕಕ್ಕಾಗಿ ದೇಶವು 12 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿತು.

ಅಭಿನವ್ ಬಿಂದ್ರಾ, ರಾಜ್ಯವರ್ಧನ್ ಸಿಂಗ್ ರಾಥೋಡ್, ವಿಜಯ್ ಕುಮಾರ್ ಮತ್ತು ಗಗನ್ ನಾರಂಗ್ ನಂತರ ಶೂಟಿಂಗ್‌ನಲ್ಲಿ ಒಲಿಂಪಿಕ್ ಪದಕ ಗೆದ್ದ ಐದನೇ ಶೂಟರ್ ಮನು.
ಇಂದು ನಡೆದ ಫೈನಲ್ ಪಂದ್ಯವನ್ನು ಮನು ಭಾಕರ್ ಆತ್ಮವಿಶ್ವಾಸದಿಂದ ಆರಂಭಿಸಿದರು.

ಶೂಟಿಂಗ್ ರೇಂಜ್‌ನಲ್ಲಿ ಆಕೆಯ ಹೆಸರನ್ನು ಕರೆದಾಗ, ಮನು ಟಿವಿ ಕ್ಯಾಮೆರಾಗಳ ಮುಂದೆ ಮಂದಹಾಸ ಬೀರಿದರು.
ಎಂಟು ಮಹಿಳೆಯರ ಫೈನಲ್‌ನಲ್ಲಿ ಮನು ಭಾಕರ್ ತಮ್ಮ ಸ್ಥಿರತೆಯಿಂದ ಹೊರಗುಳಿಯಲಿಲ್ಲ. ಕೊರಿಯಾದ ಓಹ್ ಯೆ ಜಿನ್ ಒಟ್ಟು 243.2 ಅಂಕಗಳೊಂದಿಗೆ ಚಿನ್ನ ಗೆದ್ದು ಹೊಸ ಒಲಿಂಪಿಕ್ ದಾಖಲೆ ಮಾಡಿದ್ದಾರೆ.

Manu Bhaker ಕಿಮ್ ಯೆಜಿ ಒಟ್ಟು 241.3 ಸ್ಕೋರ್‌ನೊಂದಿಗೆ ಬೆಳ್ಳಿ ಗೆದ್ದಿದ್ದರಿಂದ ಕೊರಿಯಾಕ್ಕೆ ಇದು 1-2 ಆಗಿತ್ತು.
ಮನು ಭಾಕರ್ ಮತ್ತು ಕಿಮ್ ಯೆಜಿ ಅಂತಿಮ ಎಲಿಮಿನೇಷನ್ ಸುತ್ತಿನಲ್ಲಿ ಎರಡನೇ ಸ್ಥಾನಕ್ಕಾಗಿ ಕಸರತ್ತು ನಡೆಸುತ್ತಿದ್ದರು. ಮನು ತನ್ನ ಕೊನೆಯ ಎರಡು ಶಾಟ್‌ಗಳಲ್ಲಿ 10.1 ಮತ್ತು 10.3 ಅನ್ನು ಹೊಡೆದಿದ್ದರಿಂದ ಅದ್ಭುತ ಗ್ರಿಟ್ ಅನ್ನು ಪ್ರದರ್ಶಿಸಿದರು. ಕಿಮ್ ಕೇವಲ 9.7 ಮತ್ತು 9.8 ಚಿತ್ರೀಕರಣದ ಹೊರತಾಗಿಯೂ, ಅವರು ಮನುಗಿಂತ ಮುಂದೆ ಮುಗಿಸುವಲ್ಲಿ ಯಶಸ್ವಿಯಾದರು.

ಮನು ಭಾಕರ್ ಅವರು ಭಾನುವಾರ ಭಾರತೀಯ ಕ್ರೀಡಾ ಇತಿಹಾಸದ ಸುವರ್ಣ ಪುಟಗಳಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ, ಅವರು ಒಲಿಂಪಿಕ್ಸ್ ಪದಕ ಗೆದ್ದ ಭಾರತೀಯ ಮಹಿಳಾ ಶೂಟರ್ ಆಗಿದ್ದಾರೆ. ಭಾನುವಾರ ಪ್ಯಾರಿಸ್‌ನಲ್ಲಿ ನಡೆದ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಪಡೆಯುವ ಮೂಲಕ ಚೇತರಿಸಿಕೊಳ್ಳುವ ಮನು ಭಾಕರ್ ಅವರು ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಇದು ಪ್ಯಾರಿಸ್ ಗೇಮ್ಸ್‌ನಲ್ಲಿ ದೇಶದ ಖಾತೆಯನ್ನು ತೆರೆದು, 12 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿತು.
2012 ರ ಲಂಡನ್ ಆವೃತ್ತಿಯಲ್ಲಿ ಭಾರತವು ಒಲಿಂಪಿಕ್ಸ್‌ನಲ್ಲಿ ಕೊನೆಯ ಬಾರಿಗೆ ಶೂಟಿಂಗ್ ಪದಕಗಳನ್ನು ಗೆದ್ದುಕೊಂಡಿತ್ತು, ಅಲ್ಲಿ ರ್ಯಾಪಿಡ್-ಫೈರ್ ಪಿಸ್ತೂಲ್ ಶೂಟರ್ ವಿಜಯ್ ಕುಮಾರ್ ಮತ್ತು 10 ಮೀಟರ್ ಏರ್ ರೈಫಲ್ ಗುರಿಕಾರ ಗಗನ್ ನಾರಂಗ್ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕವನ್ನು ಪಡೆದರು.

“ಇದು ಭಾರತಕ್ಕೆ ದೀರ್ಘ ಕಾಲದ ಪದಕವಾಗಿತ್ತು. ನಾನು ಈ ಸಾಧನೆಗೆ ಕೇವಲ ಒಂದು ಮೋಡ್ ಆಗಿತ್ತು. ಭಾರತವು ಇನ್ನೂ ಹೆಚ್ಚಿನ ಪದಕಗಳಿಗೆ ಅರ್ಹವಾಗಿದೆ. ನಾವು ಈ ಬಾರಿ ಸಾಧ್ಯವಾದಷ್ಟು ಪದಕಗಳನ್ನು (ಗೆಲ್ಲಲು) ಎದುರು ನೋಡುತ್ತಿದ್ದೇವೆ. ವೈಯಕ್ತಿಕವಾಗಿ ನನಗೆ ಈ ಭಾವನೆ ಅತಿವಾಸ್ತವಿಕವಾಗಿದೆ. ನಾನು ಕೊನೆಯ ಹೊಡೆತದವರೆಗೂ ಸಾಕಷ್ಟು ಪ್ರಯತ್ನ ಮಾಡಿದ್ದೇನೆ” ಎಂದರು.

Shiruru Hill Collapse ಶಿರೂರು ಗುಡ್ಡ ಕುಸಿತ. ಕಾರ್ಯಾಚರಣೆಯಲ್ಲಿ ಮುಳುಗು ತಜ್ಞ ದೀಪು ಅವರಿಗೆ ಗಾಯ

0

Shiruru Hill Collapse ಶಿರೂರು ಗುಡ್ಡ ಕುಸಿತ ತೆರವು ಕಾರ್ಯಾಚರಣೆ ವೇಳೆ ದೀಪು ಎನ್ನು ವ್ಯಕ್ತಿಗೆ ಗಾಯಗಳಾಗಿವೆ.

ಐದಕ್ಕೂ ಹೆಚ್ಚು ದೋಣಿಗಳ ಮೂಲಕ ಕಾರ್ಯಚರಣೆ ನಡೆಯುತ್ತಿದ್ದು,
ಕಾರವಾರ ಆಂಕೋಲ ಶಾಸಕ ಸತೀಶ್,ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದರು.

Shiruru Hill Collapse ಕಾರ್ಯಚರಣೆ ಭಾಗಿಯಾಗಿದವರಿಗೂ ಹಾಗೂ ದಡದ ಮೇಲೆ ಇದ್ದವರಿಗೂ ಸಂಪರ್ಕ ಕಡಿತಗೊಂಡಿತ್ತು.
ಅವರು ದಡಕ್ಕೆ ಬರುವವರೆಗೂ ಮುಂದಿನ ಕಾರ್ಯಚರಣೆ ಬಗ್ಗೆ ತಿಳಿಸುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Indira Gandhi Morarji School Gopal ವ್ಯಾಯಾಮ ಯೋಗ ನಮ್ಮ ಉತ್ತಮ ಆರೋಗ್ಯಕ್ಕೆ ಸಹಕಾರಿ – ಎಂ.ಆರ್.ಬಸವರಾಜ್

0

Indira Gandhi Morarji School Gopal ಯಾವುದೇ ಕಾಯಿಲೆ ಇರಲಿ, ಆ ಕಾಯಿಲೆಯ ಬಗ್ಗೆ ನಾವು ಜಾಗೃತರಾಗಿರಬೇಕು. ಭಯ ಪಟ್ಟಾಗ ಆ ಕಾಯಿಲೆ ನಮ್ಮನ್ನು ಆವರಿಸಿಕೊಳ್ಳುತ್ತದೆ. ಉತ್ತಮವಾದ ಆರೋಗ್ಯ ಉತ್ತಮ ಜೀವನಶೈಲಿ ಆಹಾರ ಅಭ್ಯಾಸಗಳು ನಮ್ಮನ್ನು ರಕ್ಷಣೆ ಮಾಡುತ್ತವೆ ಎಂದು ಎಂ.ಆರ್.ಬಸವರಾಜ್ ಅಭಿಮತ ವ್ಯಕ್ತಪಡಿಸಿದರು.

ಇಂದಿರಾ ಗಾಂಧಿ ಮೊರಾರ್ಜಿ ಶಾಲೆ ಗೋಪಾಳ ಹಾಗೂ ಶರಾವತಿ ನಗರ ವೀಣಾ ಶಾರದಾ ಶಾಲೆಯಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ರಿವರ್ಸ್ ಸೈಡ್ ವತಿಯಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ,
ಡೆಂಗ್ಯೂ ಹಾಗೂ ಮಲೇರಿಯಾ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ನಾವು ಸದಾ ಸಕಾರಾತ್ಮಕವಾಗಿರಬೇಕು. ದೈಹಿಕ ವ್ಯಾಯಾಮ ಯೋಗ ಪ್ರಾಣಾಯಾಮಗಳು ನಮ್ಮ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ. ಮಕ್ಕಳು ಸದಾ ಚಟುವಟಿಕೆಯಿಂದ ಕೂಡಿರಬೇಕು. ವಿದ್ಯಾಭ್ಯಾಸ ಜೊತೆಗೆ ಆರೋಗ್ಯದ ಕಡೆಗೂ ಸಹ ಗಮನ ಹರಿಸಬೇಕು. ಸದೃಢ ವಿದ್ಯಾರ್ಥಿಗಳು ಸಮಾಜದ ಆಸ್ತಿ. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ನಡೆಸುವ ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸದುಪಯೋಗ ಪಡೆದುಕೊಳ್ಳಬೇಕು ಎಂದು ನುಡಿದರು.

Indira Gandhi Morarji School Gopal ಕಾರ್ಯಕ್ರಮದಲ್ಲಿ, ಕಾರ್ಯದರ್ಶಿ ಸಿ ಬಿ ವಿನಯ್, ಆರೋಗ್ಯ ಅಧಿಕಾರಿ ನಾರಾಯಣ್, ಝೆಡ್.ಎಲ್.ಸೋಮಶೇಖರ್, ಫಾಸ್ಟ್ ಎಜಿ ಜಗನ್ನಾಥ್.ಎಂ, ಫಾಸ್ಟ್ ಪ್ರೆಸಿಡೆಂಟ್ ದೇವೇಂದ್ರಪ್ಪ, ಇನ್ನರ್ವಿಲ್ ಅಧ್ಯಕ್ಷ ವಸಂತ ಬಸವರಾಜ್, ಫಾಸ್ಟ್ ಪ್ರೆಸಿಡೆಂಟ್ ಪ್ರತಿಮಾ ಡಾಕಪ್ಪಗೌಡ, ಶಾಲೆಯ ಮುಖ್ಯೋಪಾಧ್ಯಾಯರು, ಸಿಬ್ಬಂದಿ ವರ್ಗ ಹಾಗೂ ಮಕ್ಕಳು ಭಾಗವಹಿಸಿದ್ದರು.