Tuesday, April 22, 2025
Tuesday, April 22, 2025

DC Shivamogga ಮಳೆಹಾನಿ ಕಾರಣ ಮಾರ್ಗಸೂಚಿ ಅನ್ಚಯ ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

Date:

DC Shivamogga 2024 ನೇ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯ ಪ್ರವಾಹ ಪರಿಸ್ಥಿತಿಯ ತುರ್ತು ಸಂದರ್ಭದಲ್ಲಿ ಜಿಲ್ಲಾಡಳಿತದ ವತಿಯಿಂದ ಕೈಗೊಳ್ಳಲಾದ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಗುರುದತ್ ಹೆಗಡೆ ಅವರು ಮಾಧ್ಯಮದ ಪ್ರತಿನಿಧಿಗಳಿಗೆ ವಿಸ್ತೃತ ಮಾಹಿತಿ ನೀಡಿದರು.

. ಶಿವಮೊಗ್ಗ ಜಿಲ್ಲೆಯಲ್ಲಿ ಜುಲೈ ಮಾಹೆಯಲ್ಲಿ ಭಾರಿ ಮಳೆಯಾಗಿದ್ದರಿಂದ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿರುತ್ತದೆ. ಜುಲೈ ಮಾಹೆಯಲ್ಲಿ (27-07-2022ರವರೆಗೆ) ನರಾಸರಿ 668.0 ಮೀ.ಮೀ ವಾಡಿಕೆ ಮಳೆ ಇದ್ದು 1109 ಮೀ.ಮೀ. ಮಳೆಯಾಗಿರುತ್ತದೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಪ್ರತಿಶತ 66″, ರಷ್ಟು ಹೆಚ್ಚು ಮಳೆಯಾಗಿರುತ್ತದೆ.

ಜಿಲ್ಲೆಯಲ್ಲಿ ನೆರೆಹಾವಳಿಯಿಂದಾಗಿ ಜೂನ್ ಮಾಹೆಯಿಂದ’ ಒಟ್ಟು 4 ಮಾನವ ಹಾನಿಯಾಗಿದ್ದು, ಈಗಾಗಲೆ 2 ಪ್ರಕರಣಗಳಿಗೆ ರೂ.5.00 ಲಕ್ಷದಂತೆ ಮಾರ್ಗಸೂಚಿಯಂತೆ ಪರಿಹಾರ ವಿತರಿಸಲಾಗಿದೆ ಉಳಿದ 2 ಪ್ರಕರಣಕ್ಕೆ ಶೀಘ್ರವಾಗಿ ಪರಿಹಾರ ಧನ ವಿತರಿಸಲಾಗುವುದು

  • ಜಿಲ್ಲೆಯಲ್ಲಿ ನೆರೆಹಾವಳಿಯಿಂದಾಗಿ ಒಟ್ಟು 10 ಜಾನುವಾರು ಮೃತಪಟ್ಟಿರುತ್ತವೆ 8 ಪ್ರಕರಣಗಳ ವಾರಸುದಾರರಿಗೆ ಮಾರ್ಗಸೂಚಿಯಂತೆ
    0.375 ಲಕ್ಷದಂತೆ ಪರಿಹಾರ ಧನ ವಿತರಿಸಲಾಗಿದೆ

ಅತಿ ಹೆಚ್ಚು ಮಳೆಯಿಂದ ಜೂನ್ ಮಾಹೆಯಿಂದ ಸುಮಾರು 18 ಮನೆ ಪೂರ್ಣಹಾನಿಯಾಗಿರುತ್ತದೆ. 5 ಮನೆಗಳ ವಾರಸುದಾರರಿಗೆ ಈಗಾಗಲೆ ರೂ.1.20 ಲಕ್ಷಗಳಂತೆ 6.00 ಲಕ್ಷಗಳ ಪರಿಹಾರ ವಿತರಿಸಲಾಗಿದೆ. 437 ಮನೆಗಳು ಭಾಗಷ: ಹಾನಿಯಾಗಿದ್ದು, 40 ಮನೆಗಳಿಗೆ ರೂ.1.71 ಲಕ್ಷಗಳ ಪರಿಹಾರ ವಿತರಿಸಲಾಗಿದೆ. ಉಳಿದ ಮನೆಗಳಿಗೆ ಶೀಘ್ರವಾಗಿ ಪರಿಹಾರ ವಿತರಣೆಗೆ ಕ್ರಮವಹಿಸಲಾಗುವುದು.

ಜಿಲ್ಲೆಯಲ್ಲಿ 1540 ಹೆ. ಪ್ರದೇಶದಲ್ಲಿ ಭತ್ತ ಮತ್ತು 2300 ಹೆ. ಪ್ರದೇಶದಲ್ಲಿ ಮುನುಕಿನ ಜೋಳ ಕೃಷಿಬೆಳೆಗಳು
ಜಲಾವೃತವಾಗಿರುವ ಕುರಿತು ಪ್ರಾಥಮಿಕ ವರದಿ ಬಂದಿರುತ್ತದೆ (ನೆರೆ ಇಳಿಮುಖವಾದ ನಂತರ ಜಂಟಿ ಸಮೀಕ್ಷೆ ನಂತರ ಹಾನಿ ಪ್ರಮಾಣವನ್ನು ಅಂದಾಜಿಸಲಾಗುವುದು).

DC Shivamogga ಜಿಲ್ಲೆಯಲ್ಲಿ ನೆರೆಹಾವಳಿಯಿಂದಾಗಿ ಮೆಸ್ಕಾಂ ಇಲಾಖೆಗೆ ಸಂಬಂಧಿಸಿದ 767 ವಿದ್ಯುತ್ ಕಂಬಗಳು ಹಾನಿಯಾಗಿದೆ ಹಾಗೂ 16 ಟ್ರಾನ್ಸ್ ಪಾರ್ಮರ್ ಗಳು ಹಾನಿಯಾಗಿರುತ್ತವೆ.

ಜಿಲ್ಲೆಯಲ್ಲಿ ಪ್ರವಾಹದಿಂ ದಾಗಿ 41.63 ಕಿ.ಮೀ. ರಾಜ್ಯ ಹೆದ್ದಾರಿ,
65.96 ಕಿ.ಮೀ.ಜಿಲ್ಲೆಯ ಮುಖ್ಯ ರಸ್ತೆ,
610.43 ಕಿ.ಮೀ. ಗ್ರಾಮೀಣ ರಸ್ತೆ, ಹಾನಿಯಾಗಿರುತ್ತದೆ ಜಿಲ್ಲೆಯಲ್ಲಿ ಪ್ರವಾಹದಿಂದಾಗಿ 111 ಸೇತುವೆಗಳು ಹಾನಿಯಾಗಿರುತ್ತದೆ.

ಜಿಲ್ಲೆಯಲ್ಲಿ ಪ್ರವಾಹದಿಂದಾಗಿ 381 ಶಾಲಾ ಕಟ್ಟಡಗಳು, 260 ಅಂಗನವಾಡಿ ಕಟ್ಟಡಗಳು ಹಾಗೂ 09 ಆರೋಗ್ಯ ಕೇಂದ್ರಗಳು ಹಾನಿಗೊಳಗಾಗಿರುತ್ತವೆ.

ಜಿಲ್ಲೆಯಲ್ಲಿ ಪ್ರವಾಹದಿಂದಾಗಿ 97 ಕರೆಗಳು ಹಾನಿಗೊಳಗಾಗಿರುತ್ತವೆ.

  • ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮೇಲಿನಕುರುವಳ್ಳಿ ಗ್ರಾಮ ಪಂಚಾಯತಿ ವಿಠಲನಗರ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಗುಡ್ಡ ಕುಸಿದು ತಡೆಗೋಡೆ ಹಾನಿಯಾಗಿರುತ್ತದೆ

ರಾಷ್ಟ್ರೀಯ ಹೆದ್ದಾರಿ 169ಎ ತೀರ್ಥಹಳ್ಳಿ -ಮಲ್ಪೆ ರಸ್ತೆಯ ಆಗುಂಬೆ ಘಾಟಿಯಲ್ಲಿ ಭಾರಿ ಮಳೆಯಿಂದಾಗಿ ಮತ್ತು ಭಾರಿ ವಾಹನಗಳ ಒಡಾಟದಿಂದಾಗಿ ಅಲ್ಲಲ್ಲಿ ರಸ್ತೆ ಬದಿಯಲ್ಲಿ ಭೂಕುಸಿತವಾಗುವ ಸಂಭವವಿರುವುದರಿಂದ ಭಾರಿವಾಹನಗಳ ಸಂಚಾರ ನಿಷೇಧಿಸಿ ಬದಲಿ ಮಾರ್ಗ ವಾಹನ ಸಂಚಾರಕ್ಕೆ ಅನುವು ಕೊಡಲಾಗಿದೆ

ಶಿವಮೊಗ್ಗ ಜಿಲ್ಲೆಯ ಗಾಜನೂರು ಜಲಾಶಯದಿಂದ ದಿನಾಂಕ 28.07 2024 ರಂದು 74105 ಕ್ಯೂಸೆಕ್ಸ್ ನೀರು ಹೊರಬಿಡಲಾಗುತ್ತಿದ್ದು ಮಳೆ ಹೆಚ್ಚಾದಲ್ಲಿ ಜಲಾಶಯದ ಹೊರ ಹರಿವು ಹೆಚ್ಚಾದಲ್ಲಿ ಶಿವಮೊಗ್ಗ ನಗರ ವ್ಯಾಪ್ತಿಯ ವೆಂಕಟೇಶ್ವರ ನಗರ ಮತ್ತು ನ್ಯೂ ಮಂಡ್ಲಿ, ಗಾಂಧಿನಗರ, ಇಮಾಮ್ ಬಾಡ, ವಿದ್ಯಾನಗರದ ಕೆಲವು ಪ್ರದೇಶಗಳಲ್ಲಿ ನೀರು ನುಗ್ಗುವ ಸಾಧ್ಯತೆ ಇರುತ್ತದೆ. ತುರ್ತು ಸಂದರ್ಭದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಸದರಿ ಪ್ರದೇಶಗಳ ನಿರ್ವಹಣೆ ಮಾಡಲು ತಂಡಗಳನ್ನು ರಚಿಸಿ ಕ್ರಮವಹಿಸಲು ಸೂಚಿಸಲಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಹದಿಂದ ಮುಳುಗಡೆಯಾಗುವ ಸಂಭಾವ್ಯ ಪ್ರದೇಶಗಳ ಗುರುತಿಸಿಟ್ಟುಕೊಳ್ಳಲಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಹ ಸಂದರ್ಭದಲ್ಲಿ ಉಪಯೋಗಿಸಲು ಒಟ್ಟು 103 ಕಾಳಜಿ ಕೇಂದ್ರಗಳನ್ನು ಗುರಿತಿಸಿಟ್ಟುಕೊಳ್ಳಲಾಗಿದೆ. ಈಗಾಗಲೆ ಶಿವಮೊಗ್ಗ ನಗರ ಮತ್ತು ಸಾಗರ ತಾಲ್ಲೂಕು ತಾಳಗುಪ್ಪ ಹೋಬಳಿ ಮಂಡಗಳಲೆ ಗ್ರಾಮದಲ್ಲಿ ಮನೆಗೋಡೆಗಳು ಶಿಥಿಲಗೊಂಡಿರುವುದರಿಂದ 2 ಕಾಳಜಿ ಕೆಂದ್ರಗಳನ್ನು ತೆರೆಯಲಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಗ್ರಾಮೀಣ ವ್ಯಾಪ್ತಿಯಲ್ಲಿ ಗ್ರಾಮ ವಿಪತ್ತು ನಿರ್ವಹಣಾ ತಂಡಗಳನ್ನು ರಚಿಸಲಾಗಿದ್ದು ತುರ್ತು
ಸಂಧರ್ಭದಲ್ಲಿ ಕ್ರಮವಹಿಸಲು ಸೂಚಿಸಲಾಗಿದೆ. ನಗರ ವ್ಯಾಪ್ತಿಯಲ್ಲಿ ವಿಪತ್ತು ನಿರ್ವಹಣಾ ತಂಡಗಳನ್ನು ರಚಿಸಲಾಗಿದೆ.

ಜಿಲ್ಲೆಯಲ್ಲಿ ರಕ್ಷಣಾ ಕಾರ್ಯಕ್ಕಾಗಿ ಲಭ್ಯವಿರುವ ಸುರಕ್ಷತಾ ಉಪಕರಣಗಳನ್ನು ಸಿದ್ಧಪಡಿಸಿಟ್ಟುಕೊಳ್ಳಲು ಜಿಲ್ಲಾ ಅಗ್ನಿಶಾಮಕದಳ ಇವರಿಗೆ ಸೂಚಿಸಲಾಗಿದೆ. ಹಾಗೂ 15 ಜನಗಳ SDRF ತಂಡವನ್ನು ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗ ಜಿಲ್ಲಾ ಕೇಂದ್ರದಲ್ಲಿ ಇರಿಸಿಕೊಳ್ಳಲಾಗಿದೆ.

ದಿನಾಂಕ:-25.07.2024ರಂದು ಭದ್ರಾ ಜಲಾಶಯದಿಂದ ಹೊರ ಬಿಡುವ ನೀರಿನಿಂದ ಉಂಟಾಗುವ ಪ್ರವಾಹದ ಕುರಿತು ದಾವಣಗೆರೆ ಹಾಗೂ ಚಿಕ್ಕಮಗಳೂರುಗಳ ಜಿಲ್ಲಾಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವ ಕುರಿತು ವಿಡಿಯೋ ಸಂವಾದದ ಮೂಲಕ ಚರ್ಚಿಸಲಾಗಿದೆ ಎಂದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Ravi Telex ಪತ್ರಕರ್ತ‌ “ಟೆಲೆಕ್ಸ್ ರವಿ ” ಗೆ ಅಬ್ದುಲ್ಲ ಮಾದುಮೂಲೆ ದತ್ತಿ ಪ್ರಶಸ್ತಿ

Ravi Telex ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘದ...

Inner Wheel East Shimoga ಆಶ್ರಮವಾಸಿಗಳ ಸೇವೆ ,ದೇವರ ಸೇವೆಗೆ ಸಮ- ವಾಗ್ದೇವಿ ಬಸವರಾಜ್

Inner Wheel East Shimoga ಆಶ್ರಮವಾಸಿಗಳ ಸೇವೆ ದೇವರ ಸೇವೆಗೆ ಸಮಾನ....

Dr. Raj Kumar ಡಾ.ರಾಜ್ ಅಭಿನಯದ ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮ

Dr. Raj Kumar ವರನಟ ಡಾ ರಾಜ್ ಕುಮಾರ್ ರವರ ಜನ್ಮದಿನಾಚರಣೆ...

S.N.Chennabasappa ಜನಿವಾರ ತೆಗೆಸಿದ ಪ್ರಕರಣ, ಘಟನೆ‌ಮುಂದೆ ತಪ್ಪಿಸಲು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ವಿಪ್ರ ಸಂಘಟನೆಯ ಮನವಿ

S.N.Chennabasappa ಶಿವಮೊಗ್ಗದ ದುರ್ಗಿಗುಡಿಯ ಶ್ರೀ ರಾಘವೇಂದ್ರ ಸ್ವಾಮಿ ಮಠದಿಂದ ಜಿಲ್ಲಾಧಿಕಾರಿ...