Bhadra Dam ಶಿವಮೊಗ್ಗ ಜಿಲ್ಲೆಯ ಭದ್ರ ಜಲಾಶಯದಿಂದ ಮಂಗಳವಾರ ಬೆಳಗ್ಗೆ ನಾಲ್ಕು ಕ್ರಾಸ್ಟರ್ ಗೇಟ್ ಗಳ ಮೂಲಕ ನೀರು ಭದ್ರಾ ನದಿಗೆ ಬಿಡುಗಡೆ ಮಾಡಲಾಗಿದೆ.
ಭದ್ರಾ ಜಲಾಶಯದಲ್ಲಿ 30 ಸಾವಿರ ಕ್ಯೂಸೆಕ್ ನೀರು ಒಳಹರಿವಿದ್ದು ಸೋಮವಾರ ರಾತ್ರಿ 181.3 ಅಡಿ ನೀರು ಸಂಗ್ರಹವಾಗಿತ್ತು. ಇಂದು 183.3 ಕ್ಯೂಸೆಕ್ ನೀರು ಸಂಗ್ರಹವಾಗಿದ್ದರಿಂದ ಜಲಾಶಯ ಭರ್ತಿಯಾಗುವ ಹಂತಕ್ಕೆ ತಲುಪಿದೆ. 186ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಒಳಹರಿವು ಹೆಚ್ಚಾದ ಪರಿಣಾಮ ಜಲಾಶಯದಿಂದ ಭದ್ರಾ ನದಿಗೆ ನೀರು ಹರಿಸಲಾಗುತ್ತಿದೆ.
Bhadra Dam ಸುಮಾರು 2 ಸಾವಿರ ಕ್ಯೂಸೆಸ್ ನೀರು ನದಿ ಬಿಡಲಾಗಿದೆ ನದಿ ಪಾತ್ರದ ಜನರಿಗೆ ಮುನ್ನೆಚ್ಚರಿಕೆ ನೀಡಲಾಗಿದ್ದು ಸುರಕ್ಷತಾ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
Shuttle Badminton News ನಗರದ ಪ್ರತಿಷ್ಠಿತ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆಯ, ಗುರುಪುರದ ಬಿಜಿಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ೯ನೇ ತರಗತಿ ಓದುತ್ತಿರುವ ಅವಳಿ ಸಹೋದರರಾದ ಪುನೀತ್.ಎಸ್. ಮತ್ತು ಪವನ್.ಎಸ್. ಷಟಲ್ ಬ್ಯಾಡ್ಮಿಂಟನ್ ನಲ್ಲಿ , ಪ್ರಥಮ ಸ್ಥಾನ ಹಾಗೂ ಅತ್ಯಾಕರ್ಷಕ ಪಾರಿತೋಷಕ ಮತ್ತು ಬಂಗಾರದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.. Shuttle Badminton News ಬೆಂಗಳೂರಿನ ಕನಕಪುರ ರಸ್ತೆಯ ರಾಜಾನುಕುಂಟೆ ವಿಶ್ವ ವಿದ್ಯಾಪೀಠ ಒಳಾಂಗಣದಲ್ಲಿ ನಡೆದ ೧೭ ವರ್ಷ ವಯೋಮಿತಿ ಒಳಗಿನ ರಾಜ್ಯ ಮಟ್ಟದ ರ್‍ಯಾಂಕಿಂಗ್ ಡಬಲ್ಸ್ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ಇವರು ಪುರಲೆಯ ವೆಂಕಟೇಶ ನಗರದ ಸುರೇಶ್ ಮತ್ತು ಶಕುಂತಲಾ ದಂಪತಿಗಳ ಪುತ್ರರು. ಇವರು ಪ್ರಸ್ತುತ ಬೆಂಗಳೂರಿನ ಸೆಲೆನೈಟ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ, ವಿನೋದ್ ಕುಮಾರ್ ಗರಡಿಯಲ್ಲಿ ತರಬೇತಿಯನ್ನು ಪಡೆಯುತಿದ್ದಾರೆ.
Madhu Bangarappa ರಾಜ್ಯದ ಸರಕಾರಿ ಪ್ರಾಥಮಿಕ ಶಾಲಾ ಪಿಎಸ್‌ಟಿ ನೂರಾರು ಶಿಕ್ಷಕರು ತಮಗಾಗುತ್ತಿರುವ ಅನ್ಯಾಯ ಸರಿಪಡಿಸುವಂತೆ ಕೋರಿ ಶಿವಮೊಗ್ಗದ ಸರ್ಕೀಟ್ ಹೌಸ್‌ನಲ್ಲಿ ಭಾನುವಾರ ಪ್ರಾಥಮಿಕ ಶಿಕ್ಷಣ ಹಾಗೂ ಜಿಲ್ಲಾ ಸಚಿವ ಮಧು ಬಂಗಾರಪ್ಪರಿಗೆ ಮನವಿ ಅರ್ಪಿಸಿದರು. ರಾಜ್ಯ ಸರಕಾರವು ೨೦೧೬-೧೭ ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಮೂಲ ವೃಂದವನ್ನು ಪಿಎಸ್‌ಟಿ ಮತ್ತು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ ಜಿಪಿಟಿ ಎಂಬ ಎರಡು ವೃಂದಗಳನ್ನು ಸೃಷ್ಟಿಸಿ ಅನ್ಯಾಯವೆಸಗಿದೆ. ಇದರಿಂದ ೨೦೧೬ ಕ್ಕೂ ಪೂರ್ವದಲ್ಲಿ ೧ ರಿಂದ ೭ ನೇ ತರಗತಿಗಳಿಗೆ ನೇಮಕವಾದ ಶಿಕ್ಷಕರಿಗೆ ಸೇವಾ ಹಿರಿತನಕ್ಕೆ ಧಕ್ಕೆಯಾಗಿದೆ. ವರ್ಗಾವಣೆಯಲ್ಲಿ ಸ್ಥಳ ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದಿಂದ ಮುಖ್ಯ ಶಿಕ್ಷಕ ವೃಂದಕ್ಕೆ ಬಡ್ತಿ ಹೊಂದಲು ಸಾಧ್ಯವಾಗುತ್ತಿಲ್ಲ. ಪ್ರಾಥಮಿಕ ಶಾಲಾ ಶಿಕ್ಷಕ ವೃಂದದಿಂದ ಪ್ರೌಢಶಾಲಾ ಸಹ ಶಿಕ್ಷಕ ವೃಂದಕ್ಕೆ ಬಡ್ತಿ ಹೊಂದಲು ಆಗುತ್ತಿಲ್ಲ. Madhu Bangarappa ಆದ್ದರಿಂದ ಪ್ರಾಥಮಿಕ ಶಾಲಾ ಶಿಕ್ಷಕರ ೨೦೧೭ ರ ವೃಂದ ಮತ್ತು ನೇಮಕಾತಿ ಸಿ ಅಂಡ್ ಆರ್ ನಿಯಮಗಳನ್ನು ೨೦೧೬ ಕ್ಕೂ ಮುನ್ನ ೧ ರಿಂದ ೭ ನೇ ತರಗತಿಗೆ ನೇಮಕವಾದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪೂರ್ವಾನ್ವಯ ಮಾಡುವಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಡಿ.ಬಿ ರುದ್ರಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ವೈ.ಎನ್.ಶ್ರೀಧರಗೌಡ ನೇತೃತ್ವದಲ್ಲಿ ನೂರಾರು ಶಿಕ್ಷಕರು ಮನವಿ ಸಲ್ಲಿಸಿದರು. ಸಚಿವರು ಸಹಾ ಮನವಿ ಆಲಿಸಿ ಸೂಕ್ತ ಭರವಸೆ ನೀಡಿದರು
Medha Patkar News ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ನರ್ಮದಾ ಬಚಾವೋ ಆಂದೋಲನದ ನಾಯಕಿ ಮೇಧಾ ಪಾಟ್ಕರ್ ಅವರಿಗೆ ವಿಧಿಸಲಾಗಿದ್ದ ಐದು ತಿಂಗಳ ಸಾದಾ ಜೈಲು ಶಿಕ್ಷೆಯನ್ನು ದೆಹಲಿಯ ಸಾಕೇತ್ ನ್ಯಾಯಾಲಯ ಅಮಾನತುಗೊಳಿಸಿದೆ. ಮೇಧಾ ಪಾಟ್ಕರ್ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ರಾಘವ್ ಶರ್ಮಾ ಶಿಕ್ಷೆಯನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ. ಅಲ್ಲದೆ, ಪ್ರಕರಣ ದಾಖಲಿಸಿದ್ದ ವಿ.ಕೆ ಸಕ್ಸೇನಾ ಅವರಿಗೆ ನೋಟಿಸ್ ನೀಡಿದ್ದಾರೆ. ರೂ. 25 ಸಾವಿರ ಶ್ಯೂರಿಟಿ ಬಾಂಡ್ ಇಡಲು ಸೂಚಿಸಿ, ಮೇಧಾ ಅವರಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಪ್ರಕರಣ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 4ಕ್ಕೆ ನಿಗದಿಪಡಿಸಲಾಗಿದ್ದು, ಅದಕ್ಕೂ ಮುನ್ನ ಉತ್ತರ ನೀಡುವಂತೆ ವಿ.ಕೆ ಸಕ್ಸೇನಾ ಅವರಿಗೆ ಸೂಚಿಸಲಾಗಿದೆ ಎಂದು ಸಕ್ಸೇನಾ ಪರ ವಕೀಲ ಗಜಿಂದರ್ ಕುಮಾರ್ ಹೇಳಿದ್ದಾರೆ. ಪ್ರಸ್ತುತ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಆಗಿರುವ ವಿ.ಕೆ ಸಕ್ಸೇನಾ 2001ರಲ್ಲಿ ದಾಖಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ನರ್ಮದಾ ಬಚಾವೋ ಆಂದೋಲನದ ನಾಯಕಿ ಮತ್ತು ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರಿಗೆ ಐದು ತಿಂಗಳ ಜೈಲು ಶಿಕ್ಷೆ ವಿಧಿಸಿ ದೆಹಲಿಯ ನ್ಯಾಯಾಲಯ ಜುಲೈ 1, 2024ರಂದು ಆದೇಶಿಸಿತ್ತು. 2001ರಲ್ಲಿ ಪಾಟ್ಕರ್ ವಿರುದ್ಧ ಸಕ್ಸೇನಾ ಪ್ರಕರಣ ದಾಖಲಿಸಿದ್ದರು. ಆಗ ಅವರು ಅಹಮದಾಬಾದ್ ಮೂಲದ ಎನ್‌ಜಿಒ ನ್ಯಾಷನಲ್ ಕೌನ್ಸಿಲ್ ಫಾರ್ ಸಿವಿಲ್ ಲಿಬರ್ಟೀಸ್‌ನ ಮುಖ್ಯಸ್ಥರಾಗಿದ್ದರು. Medha Patkar News ನವೆಂಬರ್ 25, 2000ದಲ್ಲಿ “ದೇಶಭಕ್ತನ ನಿಜವಾದ ಮುಖ”ಎಂಬ ಶೀರ್ಷಿಕೆಯಡಿಯಲ್ಲಿ ಪಾಟ್ಕರ್ ಅವರು ನೀಡಿದ್ದ ಪತ್ರಿಕಾ ಪ್ರಕಟನೆಯ ವಿರುದ್ಧ ಮಾನಹಾನಿ ಆರೋಪ ಮಾಡಿ ಸಕ್ಸೇನಾ ಪ್ರಕರಣ ದಾಖಲಿಸಿದ್ದರು. “ಹವಾಲಾ ವಹಿವಾಟಿನಲ್ಲಿ ಮುಳುಗಿರುವ ವಿಕೆ ಸಕ್ಸೇನಾ, ಸ್ವತಃ ಮಾಲೆಗಾಂವ್‌ಗೆ ಬಂದು ಎನ್‌ಬಿಎಯನ್ನು ಹೊಗಳಿ ರೂ. 40,000ರ ಚೆಕ್ ಅನ್ನು ನೀಡಿದ್ದಾರೆ. ಲೋಕ ಸಮಿತಿಯು ತ್ವರಿತವಾಗಿ ರಸೀದಿ ಮತ್ತು ಪತ್ರವನ್ನು ಕಳುಹಿಸಿದೆ. ಅದು ಪ್ರಾಮಾಣಿಕತೆ ಮತ್ತು ಉತ್ತಮ ದಾಖಲೆ ಇಟ್ಟುಕೊಳ್ಳುವುದನ್ನು ತೋರಿಸುತ್ತದೆ. ಆದರೆ, ಚೆಕ್ ನಗದೀಕರಿಸಿಲ್ಲ, ಬೌನ್ಸ್ ಆಗಿದೆ. ವಿಚಾರಣೆಯಲ್ಲಿ, ಖಾತೆಯು ಅಸ್ತಿತ್ವದಲ್ಲಿಲ್ಲ ಎಂದು ಬ್ಯಾಂಕ್ ವರದಿ ಮಾಡಿದೆ” ಎಂದು ಪಾಟ್ಕರ್ ತಮ್ಮ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದರು. ಪಾಟ್ಕರ್ ಅವರ ಪ್ರಕಟಣೆ ದುರುದ್ದೇಶಪೂರಿತವಾಗಿದ್ದು, ಸಕ್ಸೇನಾ ಅವರ ಒಳ್ಳೆಯ ಹೆಸರನ್ನು ಹಾಳುಮಾಡುವ ಗುರಿಯನ್ನು ಹೊಂದಿತ್ತು. ಇದರಿಂದ ಅವರ ಸ್ಥಾನಮಾನ ಮತ್ತು ಕ್ರೆಡಿಟ್‌ಗೆ ಗಣನೀಯ ಹಾನಿಯುಂಟಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದರು. “ಆರೋಪಿಯ ಹೇಳಿಕೆಗಳು ದೂರುದಾರರನ್ನು ಹೇಡಿ, ದೇಶಪ್ರೇಮಿ ಅಲ್ಲ ಮತ್ತು ಹವಾಲಾ ವಹಿವಾಟುಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದಿದೆ. ಇದು ಮಾನಹಾನಿಕರ ಮಾತ್ರವಲ್ಲದೆ, ದೂರದಾರರ ಬಗ್ಗೆ ನಕಾರಾತ್ಮಕ ಭಾವನೆ ಹುಟ್ಟಿಸುತ್ತದೆ”ಎಂದಿದ್ದರು.
Shivamogga Rain News ಶಿವಮೊಗ್ಗ ನಗರದ ಬಾಲ್‌ರಾಜ್ ಅರಸ್ ರಸ್ತೆಯಲ್ಲಿ ಗಾಂಧಿಪಾರ್ಕ್ ಆವರಣದಲ್ಲಿದ್ದ ದೊಡ್ಡ ಮರವೊಂದು ಸೋಮವಾರ ಸಂಜೆ ವೇಳೆ ಬುಡಮೇಲಾಗಿದೆ. ಇಲ್ಲಿನ ಕಾಂಗ್ರೆಸ್ ಕಚೇರಿಗೆ ಹೋಗುವ ತಿರುವಿನ ಎದುರಲ್ಲಿ ಈ ಘಟನೆ ಸಂಭವಿಸಿದೆ. Shivamogga Rain News ಸಾರ್ವಜನಿಕ ಶೌಚಾಲಯದ ಹಿಂದಿರುವ ಮರ ರಸ್ತೆಗೆ ಉರುಳಿದೆ. ಪರಿಣಾಮ ಹಲವು ವಾಹನಗಳಿಗೆ ಹಾನಿಯಾಗಿದೆ. ಈ ವೇಳೆ ಅಲ್ಲಿಯೇ ಇದ್ದ ಮೂವರು ಬೈಕ್ ಸವಾರರಿಗೆ ಗಾಯವಾಗಿದೆ. ಅವರನ್ನು ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ಒದಗಿಸಲಾಗಿದೆ. ಮರಬಿದ್ದಿದ್ದರಿಂದ ಸಂಚಾರ ಬಂದ್ ಆಗಿದೆ.
Shivamogga News ಗರ್ಭಿಣಿಯರಿಗೆ ಮುಖ್ಯವಾಗಿ ಪೌಷ್ಟಿಕ ಆಹಾರ ಅತ್ಯಂತ ಅಗತ್ಯವಿರುತ್ತದೆ. ಮಗುವಿನ ಪ್ರತಿ ಬೆಳವಣಿಗೆಗೂ ಪೌಷ್ಟಿಕಾಂಶತೆ ಅತಿ ಮುಖ್ಯವಾಗಿ ಸಹಕರಿಯಾಗುವಂತಹದ್ದು ಎಂದು ರೋಟರಿ ಶಿವಮೊಗ್ಗ ಸೆಂಟ್ರಲ್ ಕ್ಲಬ್ ನ ಅಧ್ಯಕ್ಷ ಕಿರಣ್ ಕುಮಾರ್ ಹೇಳಿದರು.
Shivamogga News ಇಂದು ಹೊಸಮನೆ ಬಡಾವಣೆ ಸರ್ಕಾರಿ ಶಾಲೆಯ ಪಕ್ಕ ಅಂಗನವಾಡಿಯಲ್ಲಿ ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಧಾನ್ಯದ ಕಿಟ್ ಗಳನ್ನು ರೋಟರಿ ಶಿವಮೊಗ್ಗ ಸೆಂಟ್ರಲ್ ಕಬ್ ವತಿಯಿಂದ ವಿತರಿಸಿ ಮಾತನಾಡಿದ ಅವರು, ಪೌಷ್ಟಿಕಾಂಶತೆಗಳುಳ್ಳ ಆಹಾರವನ್ನು ತೆಗೆದುಕೊಳ್ಳುವುದು ಅತಿ ಮುಖ್ಯವಾಗಿರುತ್ತದೆ. ಇದರ ಜೊತೆಯಲ್ಲಿ ಸ್ವಚ್ಛತೆ ಹಾಗೂ ವ್ಯಾಯಾಮ ಅತ್ಯಂತ ಅಗತ್ಯವಾಗಿರುತ್ತದೆ. ಗರ್ಭಿಣಿಯರು ಪೌಷ್ಟಿಕಾಂಶ ಆಹಾರ ತೆಗೆದುಕೊಳ್ಳುವುದರಿಂದ ಹುಟ್ಟುವ ಮಗುವಿಗೆ ಎದೆ ಹಾಲಿನ ಕೊರತೆ ಇರುವುದಿಲ್ಲ. ಆ ನಿಟ್ಟಿನಲ್ಲಿ ರೋಟರಿ ಶಿವಮೊಗ್ಗ ಸೆಂಟ್ರಲ್ ಕ್ಲಬ್ ನ ವತಿಯಿಂದ ಅಂಗನವಾಡಿ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ಪೌಷ್ಟಿಕಾಂಶವುಳ್ಳ ಆಹಾರ ಕಿಟ್ ಗಳನ್ನು ನೀಡುತ್ತಿದ್ದೇವೆ ಎಂದು ತಿಳಿಸಿದರು.
Shivamogga Police ಮನೆಯಲ್ಲಿ ಯಾರೂ ಇಲ್ಲದಾಗ ಹಿಂಬದಿಯ ಹೆಂಚು ಇಳಿಸಿ, ಹಿಂದಿನ ಬಾಗಿಲು ತೆಗೆದು ಚಿನ್ನಾಭರಣ, ನಗದು ಕಳ್ಳತನ ಮಾಡಿರುವ ಘಟನೆ ಸೋಗಾನೆಯ ರೆಡ್ಡಿ ಕ್ಯಾಂಪ್‌ನಲ್ಲಿ ಸಂಭವಿಸಿದೆ.
ಚಂದ್ರಮ್ಮ ಎಂಬುವವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಚಂದ್ರಮ್ಮ ಮೈಸೂರಿನಲ್ಲಿರುವ ಮಗಳ ಮನೆಗೆ ಹೋಗಿದ್ದರು. ಈ ವೇಳೆ ಕಳ್ಳತನವಾಗಿದೆ. 4.80 ಲಕ್ಷ ರೂ. ನಗದು ಮತ್ತು ಚಿನ್ನಾಭರಣ ಸೇರಿ 12.04 ಲಕ್ಷ ರೂ. ಮೌಲ್ಯದ ವಸ್ತುಗಳು ಕಳುವಾಗಿದೆ ಎಂದು ಆರೋಪಿಸಲಾಗಿದೆ.
Phone Pay ಬಾಪೂಜಿ ನಗರದ ಗಂಗಮ್ಮ ದೇವಸ್ಥಾನದ ಬಳಿ ಅಂಗಡಿಯೊಂದರಲ್ಲಿ ಫೋನ್ ಪೇ ಮೂಲಕ ಹಣ ಪಾವತಿ ವಿಚಾರವಾಗಿ ಯುವಕರ ಗುಂಪೊಂದು ಇಬ್ಬರ ಮೇಲೆ ಹಲ್ಲೆ ನಡೆಸಿದೆ.
ಕಿರಣ ಮತ್ತು ರಾಘವೇಂದ್ರ ಗಾಯಗೊಂಡಿದ್ದಾರೆ. ರಾಘವೇಂದ್ರ ಅವರು ಅಂಗಡಿಯಲ್ಲಿ ಗುಟ್ಕಾ ಖರೀದಿಸಿ ಫೋನ್ ಪೇ ಮೂಲಕ ಹಣ ಪಾವತಿಸಲು ಮುಂದಾದರು.
Phone Pay ಪಕ್ಕದಲ್ಲಿದ್ದ ಐದಾರು ಯುವಕರು ಫೋನ್ ಪೇ ಮಾಡದಂತೆ ಸೂಚಿಸಿದ್ದಾರೆ. ಇದೇ ವಿಚಾರವಾಗಿ ರಾಘವೇಂದ್ರ ಮತ್ತು ಕಿರಣ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
KLive News Special Article ಡಾ.ಎನ್.ಸುಧೀಂದ್ರ. ಪ್ರಧಾನ ಸಂಪಾದಕ. ಕೆ ಲೈವ್.ನ್ಯೂಸ್
ಈಗ ಹಸಿವು ತಾಂಡವ ನಾಟ್ಯಗೈಯುತ್ತಿದೆ. ಸಾಮಾಜಿಕ ಸಂದರ್ಭಗಳಲ್ಲಿ ಅನೇಕ ಘಟನಾ ವೈಪರೀತ್ಯಗಳು ಈ ಹೊಟ್ಟೆಯ ಹಸಿವಿನಿಂದಾಗಿಯೇ ಸಂಭವಿಸುತ್ತಿವೆ.
ಇಂತಹ ಸನ್ನಿವೇಶದಲ್ಲಿ ನಮ್ಮ ಸಮಾಜದ ಸೇವಾಮನೋಭಾವದ ವ್ಯಕ್ತಿಗಳು,ಸಂಘಸಂಸ್ಥೆಗಳು ಊಟದ ಹೊತ್ತಿಗೆ ಅನ್ನ ನೀಡುವ ಕೈಂಕರ್ಯಮಾಡುತ್ತಿವೆ
ಶಿವಮೊಗ್ಗದಲ್ಲಿ ಎಲೆಮರೆಯ ಕಾಯಂತೆ ಬಹಳ ವ್ಯಕ್ತಿ/ ಸಂಘ ಸಂಸ್ಥೆಗಳಿವೆ. ಏಕೆಂದರೆ ನಗರದಲ್ಲಿ ಹೃದಯ ಧಾರಾಳಿಗಳಿಗೆ ಕೊರತೆಯಿಲ್ಲ.
ನನ್ನನ್ನು ಸೆಳೆದ ಒಂದು ಪುಟ್ಟ ಸಂಘಟನೆಯೆಂದರೆ ಅದು ಶಿವಮೊಗ್ಗದ “ ಸ್ನೇಹ ಬಳಗ”. ನಾನು ಸಾಮಾಜಿಕ ಜಾಲತಾಣದಲ್ಲಿ ಬಳಗದ “ಪ್ರಸಾದ” ಶೀರ್ಷಿಕೆಯ ಚಟುವಟಿಕೆ ಗಮನಿಸುತ್ತಿದ್ದೆ.
“ಸ್ನೇಹ ಬಳಗ” ಮುಂಚೂಣಿಯಲ್ಲಿ ಕಂಡವರು ಸಾಮಾಜಿಕ ಕಾಳಜಿಯುಳ್ಳ ನಗರಗದ್ದೆ ಶ್ರೀನಾಥ್. ಅವರಿಗೆ ಫೋನ್ ಮಾಡಿ ಮಾಹಿತಿ ಪಡೆದೆ. “ನಾವೇನೂ ಹೇಳುವುದಿಲ್ಲ.ನೀವೇ ಬಂದು ನೋಡಿ. ಇಲ್ಲಿ ಊಟ ನೀಡುತ್ತೇವೆ ಎಂಬ ಹೆಗ್ಗಳಿಕೆಯೂ ನಮಗಿಲ್ಲ. ಊಟ ನೀಡುವ ವ್ಯವಸ್ಥೆಯಲ್ಲಿ ತೊಡಗಿಸಿಕೊಳ್ಳುವುದೇ ನಮ್ಮ ಭಾಗ್ಯ ಅಷ್ಟೆ. ಕೊಡುವವನು ಅವನು( ದೇವರು) ಸ್ವೀಕರಿಸಲು ಬರುವವರೂ ಅವನೆ ( ದೇವರು) ” ಎಂದರು ಶ್ರೀನಾಥ್.
ಪ್ರತೀ ಭಾನುವಾರ ಮಧ್ಯಾಹ್ನ 12-30 ಕ್ಕೆ ಹಸಿದವರಿಗೆ ಅನ್ನದ ತಟ್ಟೆ ನೀಡಲು “ಪ್ರಸಾದ” ಸಿದ್ಧವಾಗಿರುತ್ತದೆ. ಸ್ಥಳ, ಮೆಗ್ಗಾನ್ ಆಸ್ಪತ್ರೆಯ ಹಳೇಯ ಗೇಟಿನಲ್ಲಿರುವ ಚೌಡೇಶ್ವರಿ ದೇವಾಲಯದ ಸನಿಹ ಮಿತ್ರರೆಲ್ಲರೂ ಗುಂಪಾಗಿರುತ್ತಾರೆ.
“ಸ್ನೇಹ ಬಳಗ”ದ ಸಮಯ ಅಂದರೆ ಮಿಲಿಟರಿ ಟೈಮಿಂಗ್ಸ್. ಆಸ್ಪತ್ರೆಯ ಆವರಣದಲ್ಲಿನ ಸಹೃದಯಿ ಮುರಳೀಧರ ಅರಸ್ ಅವರ ಮಾಲೀಕತ್ವದ ಶ್ರೀಕೃಷ್ಣ ವೆಜ್ ಪ್ರಮುಖ ಸಿಬ್ಬಂದಿ ದೇವರಾಜ್ ಆಟೋದಲ್ಲಿ ಬಿಸಿಬಿಸಿ ಅನ್ನ, ಸಾಂಬಾರು, ಉಪ್ಪಿನವರದಾನ. ಶುಂಠಿ, ಕೊತ್ತಂಬರಿ ಮಿಶ್ರಿತ ಮಜ್ಜಿಗೆ ಡಬರಿಗಳಲ್ಲಿ ಶಿಸ್ತಾಗಿ ಸಾಗಿಸಿ ತರುತ್ತಾರೆ.ಸಂಗಡ ತಂದ ಮಡಚಿದ ಟೇಬಲ್ ಬಿಡಿಸಿಡುತ್ತಾರೆ. ಅದರ ಮೇಲೆ ಸಾಲಾಗಿ ಅನ್ನ, ಸಾಂಬಾರು, ಮಜ್ಜಿಗೆ ಡಬರಿಗಳು ಕೂರುತ್ತವೆ. ಜೊತೆಗೆ ಪೇಪರ್ ಲೋಟ, ತಟ್ಟೆಗಳು ರೆಡಿಯಾಗಿರುತ್ತವೆ.
KLive News Special Article ಅದು ಎಂತಹ ಸಮಯವೆಂದರೆ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದವರಿಗೆ ಹೊಟ್ಟೆ ಹಸಿಯುವ ಹೊತ್ತು. ಏನಾದರೂ ತಿನ್ನಲು ಆಸ್ಪತ್ರೆಯ ಕಾಂಪೌಂಡಿನಲ್ಲಿರುವ ಕ್ಯಾಂಟೀನುಗಳಿಗೇ ಬರಬೇಕು. ಕಾಸಿದ್ದವರೇನೋ ಸರಿ. ಹಣಕಡಿಮೆ ಇದ್ದೂ ಉಪವಾಸ ಇರುವವರು ಅನೇಕ.ಅಂಥವರಿಗೆ “ಪ್ರಸಾದ” ಒಂದು ವರದಾನ ಒಂದು ಭಾನುವಾರ ನಾನು ಆಸಕ್ತಿಯಿಂದಲೇ ಮಿತ್ರ ಮಂಜುನಾಥಶರ್ಮಾಜಿ ಅವರನ್ನ “ಪ್ರಸಾದ”ದ ಬಳಿ ಕರೆದೊಯ್ದಿದ್ದೆ.
“ ಎರಡೆರಡು ಬಾರಿ ಕೇಳಿ ಅನ್ನ ಬಡಿಸಿ ಸರ್.” ಎಂದು ನನಗೆ ಶ್ರೀನಾಥ್, ಸುಮತೀಂದ್ರ ಅವರದ್ದು ನಿರ್ದೇಶನ. “ಶರ್ಮಾಜಿ ಸಾಂಬಾರು ಜಾಸ್ತೀನೇ ಹಾಕಿ.”ಅಂತ ಮೊದಲ ಸಲಕ್ಕೆ ಬಂದ ನಮಗೆ ಅಲ್ಲಿ ಬಡಿಸುವ ಪದ್ಧತಿ ಬಗ್ಗೆ ಪರಿಚಯಿಸಿದರು. ಸುಮಾರು ನೂರರಿಂದ ನೂರೈವತ್ತು ಮಂದಿಗೆ ಊಟ ವಿತರಿಸುವ ಸಾಮರ್ಥ್ಯ ಸದ್ಯಕ್ಕೆ ಆಗುತ್ತಿದೆ.
ಈಗ ಇಂತಹ ಚಟುವಟಿಕೆಗಳು ಸಮಾಜದಲ್ಲಿ ನಡೆಯುತ್ತಿವೆ. ಇಲ್ಲಿನ ಅಪರೂಪತೆಯೆಂದರೆ ಯಾರು ಬಂದರೂ ಅವರು ಸ್ನೇಹ ಬಳಗದವರಾಗಿ ಬಿಡುತ್ತಾರೆ.
ಒಂದು ಉದ್ದೇಶಕ್ಕಾಗಿ ಮುಂಚೆ ಬಳಸಿದ ಹಣದ ಸಂಗ್ರಹದಲ್ಲಿ ಒಂದುಲಕ್ಷ ಹತ್ತು ಸಾವಿರ ರೂಪಾಯಿ ಉಳಿಯಿತಂತೆ. ಆ ಹಣದಿಂದ ಈ ಘನೋದ್ದೇಶ ಈಡೇರಿಸಲು ಸ್ನೇಹಬಳಗ ನಿರ್ಧಾರಮಾಡಿತಂತೆ.
ಈಗ “ಪ್ರಸಾದ”ಆರಂಭವಾಗಿ ಅವಿರತ ಐವತ್ತೊಂದು ಭಾನುವಾರ ಕಳಿದಿವೆ. ವಿಶೇಷ ಎಂದರೆ ಆಗಸ್ಟ್ ತಿಂಗಳ 4 ರಂದು ಭಾನುವಾರ “ಪ್ರಸಾದ” ವಿತರಣೆಗೆ ಒಂದು ವರ್ಷದ ಹರ್ಷ. ಶಾಸಕ ಚನ್ನಬಸಪ್ಪ, ಡಿ.ಎಸ್ .ಅರುಣ್ ಮುಂತಾದವರು ಈ ಹರ್ಷ ಹಂಚಿಕೊಳ್ಳಲು ಬರುತ್ತಿದ್ದಾರೆ. ಮಿತ್ರರಾದ ಕೃಷ್ಣಾನಂದ, ಸೂಳಿಕೆರಿ ವಿಜಯೀಂದ್ರ, ಶಂಕರ್, ಡಾ.ಯೋಗೀಂದ್ರ, ಹಿಂದು ಪತ್ರಿಕೆಯ ವರದಿಗಾರ ಮಾಧವ ಮುಂತಾದವರು ಸ್ವಯಂಸೇವಕರಾಗಿರುವ ಅಟೆಂಡೆನ್ಸ್ ಇರುತ್ತದೆ.
ಈ ಸಾಮಾಜಿಕ ಸೇವೆಗೆ ಆಸಕ್ತಿಯಿರುವವರು ಪ್ರಸಾದ ನೀಡ ಬಯಸುವವರು ಸ್ನೇಹ ಬಳಗ ವನ್ನ ಸಂಪರ್ಕಿಸಬಹುದು ಅದು ಹೇಗೆಂದರೆ ಇಷ್ಟ ಇರುವವರು ಭಾನುವಾರವೇ ಮಧ್ಯಾಹ್ನ 12-30 ಕ್ಕೆ ಶಿವಮೊಗ್ಹ ಮೆಗಾನ್ ಆಸ್ಪತ್ರೆ ಆವರಣದಲ್ಲಿ ಮಿತ್ರರನ್ನ ಭೇಟಿಯಾಗಬೇಕು. ಕೂಡಿಟ್ಟ ಹಣ ಸಾಕಷ್ಟು ಖಾಲಿಯಾಗದೇ ದಾನಿಗಳಿಂದಲೇ “ಪ್ರಸಾದ’ ಅವ್ಯಾಹತ ಮುಂದುವರೆದಿದೆ. ಮಳೆಗಾಳಿಗೆ ರಕ್ಷಣೆ,ಊಟದ ಪಾತ್ರೆಗಳಿಗೆ ಧೂಳು ಬೀಳದಂತೆ ರಕ್ಷಿಸಬೇಕಿದೆ. ಈಗಿರುವ ಸ್ಥಳದಲ್ಲೆ ಒಂದು ಶಾಶ್ವತ ಪ್ರಸಾದ ವಿತರಣಾ ಪುಟ್ಟ ಬಿಂದುವನ್ನ ಸ್ಥಾಪಿಸುವ ಚಿಂತನೆ ನಡೆದಿದೆ
ಇಂತಹ ಒಂದು ಪುಣ್ಯಕಾರ್ಯದಲ್ಲಿ ಆಸಕ್ತಿ ಇರುವವರಿಗೆ ಅವಕಾಶಮಾಡಿಕೊಡುತ್ತಿರುವ ಸ್ನೇಹ ಬಳಗಕ್ಕೆ ಒಂದು ಹಿಡಿ ಅನ್ನದ ಸಲಾಮ್.
Country Club Shivamogga ಶಿವಮೊಗ್ಗ ನಗರದ ರಾಜೀವ್ ಗಾಂಧಿ ಬಡಾವಣೆಯಲ್ಲಿರುವ ಕಂಟ್ರಿ ಕ್ಲಬ್ ಮುಂಭಾಗ ಉದ್ಯಮಿಯೊಬ್ಬರ ಮೇಲೆ ಅಪರಿಚಿತರು ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.
ವ್ಯವಹಾರ ಕರಿತು ಸ್ನೇಹಿತರ ಜೊತೆಗೆ ಚರ್ಚೆಗೆ ತೆರಳಿದ್ದ ಪ್ರದೀಪ್ ಎಂಬುವವರ ಮೇಲೆ ಹಲ್ಲೆಯಾಗಿದೆ. ಜು.18ರ ರಾತ್ರಿ ಚರ್ಚೆ ಮುಗಿಸಿ ಪ್ರದೀಪ್ ಕಂಟ್ರಿ ಕ್ಲಬ್‌ನಿಂದ ಕಾರಿನಲ್ಲಿ ಹೊರಗೆ ತೆರಳುತ್ತಿದ್ದರು.
Country Club Shivamogga ಈ ವೇಳೆ ಯುವಕರ ಗುಂಪೊಂದು ಸೆಕ್ಯೂರಿಟಿ ಗಾರ್ಡ್ ಜೊತೆಗೆ ವಾಗ್ವಾದ ನಡೆಸುತ್ತಿತ್ತು. ಪ್ರದೀಪ್ ಇದನ್ನು ಪ್ರಶ್ನಿಸಿದ್ದಕ್ಕೆ ಅವರ ಮೇಲೆ ಹಲ್ಲೆಯಾಗಿದೆ ಎಂದು ಆರೋಪಿಸಲಾಗಿದೆ.