Tuesday, April 7, 2026
Tuesday, April 7, 2026
Home Blog Page 627

DK Shivakumar fans club  ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ ಅವರಿಗೆ ಗೌ.ಡಾಕ್ಟರೇಟ್ ನೀಡಲು ಆಗ್ರಹ

0

DK Shivakumar fans club  ಉಳುವವನೆ ಹೊಲದೊಡೆಯ, ವಾಸಿಸುವವನೆ ಮನೆಯೊಡೆಯ ಕಾಯ್ದೆ ಜಾರಿ ಸೇರಿದಂತೆ ವಿವಿಧ ಜನಪರಕಾರ್ಯಗಳ ಮೂಲಕ ಹೆಗ್ಗಳಿಕೆಗೆ ಪಾತ್ರರಾಗಿರುವ ಹಿರಿಯ ಸಮಾಜವಾದಿ, ಪ್ರಗತಿಪರ ಚಿಂತಕ, ಸಾಮಾಜಿಕ ಹೋರಾಟಗಾರರಾಗಿರುವ ಮಾಜಿ ಸಚಿವ, ವಿಧಾನಸಭೆ ಮಾಜಿ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪನವರಿಗೆ ಗೌರವ ಡಾಕ್ಟರೇಟ್ ನೀಡುವ ನಿಟ್ಟಿನಲ್ಲಿ ಕ್ರಮ ವಹಿಸಬೇಕೆಂದು ಕೆಪಿಸಿಸಿ ಸಂಯೋಜಕ ಹಾಗೂ ಅಖಿಲ ಕರ್ನಾಟಕ ಡಿ.ಕೆ. ಶಿವಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷರಾದ ಆರ್. ಮೋಹನ್ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಕಂದಾಯ ಸಚಿವರಾಗಿದ್ದಾಗ ಮಲೆನಾಡು ಭಾಗದ ಅರಣ್ಯ ಭೂಮಿಯ ಸಮಸ್ಯೆಗೆ ಸಂಬಂಧಿಸಿದಂತೆ ಕಾಗೋಡು ತಿಮ್ಮಪ್ಪನವರು ಕೈಗೊಂಡ ದಿಟ್ಟ ಕ್ರಮಗಳಿಂದಾಗಿ ಸಾವಿರಾರು ರೈತರು ಭೂಮಿ ಉಳುಮೆ ಮಾಡಿಕೊಂಡು ಜೀವನ ನಡೆಸಲು ಸಾಧ್ಯವಾಗಿದೆ ಎಂದರು.

ವಿಧಾನಸಭಾಧ್ಯಕ್ಷರಾಗಿದ್ದ ಅವಧಿಯಲ್ಲಿ ಸರ್ವಪಕ್ಷದವರಿಗೂ ಅಚ್ಚುಮೆಚ್ಚಿನವರಾಗಿದ್ದ ಕಾಗೋಡು ತಿಮ್ಮಪ್ಪನವರು ಸರ್ಕಾರ ಅಥವಾ ಮಂತ್ರಿಗಳ ನಡೆ ತಪ್ಪು ಎಂದು ಕಂಡು ಬಂದಲ್ಲಿ ಅದನ್ನು ವ್ಯಕ್ತಿಯಾಗಿದ್ದರು.

DK Shivakumar fans club  ಸದನದಲ್ಲಿಯೇ ಪ್ರಸ್ತಾಪಿಸಿ ಸರಿ ಪಡಿಸಲು ಸೂಚಿಸುತ್ತಿದ್ದಂತಹ ಮೇಧಾವಿ, ಪಕ್ಷಾತೀತ ರಾಜಕಾರಣಿಯಾಗಿದ್ದಾರೆ ಎಂದರು.

ಆದ್ದರಿಂದ ಇವರಿಗೆ ಗೌರವ ಡಾಕ್ಟರೇಟ್ ನೀಡುವ ಸಂಬಂಧ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸಭೆಯಲ್ಲಿ ನಿರ್ಣಯ ಕೈಗೊಳ್ಳಲು ನಿರ್ದೇಶನ ನೀಡಬೇಕೆಂದು ಆರ್. ಮೋಹನ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪನವರಲ್ಲಿ ಕೋರಿದ್ದಾರೆ.

Linganamakki Dam ಆಗಸ್ಟ್ ಒಂದರಂದು ಲಿಂಗನಮಕ್ಕಿ ಡ್ಯಾಂ ನಿಂದ ನೀರು ಬಿಡುಗಡೆ. ಸಾರ್ವಜನಿಕರು ಮುಂಜಾಗ್ರತೆ ವಹಿಸಲು ಇಲಾಖೆ ಮನವಿ

0

Linganamakki Dam ಲಿಂಗನಮಕ್ಕಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರುಹರಿದುಬರುತ್ತಿದ್ದು, ಆ. 1 ರಿಂದ 10 ಸಾವಿರ ಕ್ಯೂಸೆಕ್ಸ್‌ನಷ್ಟು ನೀರನ್ನು ಹೊರಬಿಡಲಾಗುವುದು ಎಂದು ಕಾರ್ಗಲ್‌ನ ಕರ್ನಾಟಕ ವಿದ್ಯುತ್ ನಿಗಮದ ಕಾರ್ಯನಿವಾಹಕ ಇಂಜಿನಿಯರ್ ಆರ್. ಶಿವಕುಮಾರ್ ತಿಳಿಸಿದ್ದಾರೆ.

ಜುಲೈ 30ರ ಸಂಜೆ 6 ಗಂಟೆಯ ವೇಳೆಗೆ ಜಲಾಶಯದ ನೀರಿನ ಮಟ್ಟ 1811.50 ಅಡಿಯಷ್ಟಿದ್ದು, 92 ಸಾವಿರ ಕ್ಯೂಸೆಕ್ಸ್ ನೀರು ಹರಿದುಬರುತ್ತಿದೆ. ಮುಂದಿನ ಮೂರು ದಿನಗಳ ಕಾಲ ರೆಡ್ ಅಲರ್ಟ ಘೋಷಿಸಿರುವುದರಿಂದ 80 ರಿಂದ 90 ಸಾವಿರದಷ್ಟು ಕ್ಯೂಸೆಕ್ಸ್ ನೀರು ಪ್ರತಿದಿನ ಹರಿದುಬರುವ ಸಾಧ್ಯತೆ ಇದೆ ಎಂದಿದ್ದಾರೆ.

ಇದೇ ಪರಿಸ್ಥಿತಿ ಮುಂದುವರೆದಲ್ಲಿ ಜಲಾಶಯದ ನೀರಿನ ಮಟ್ಟ 1814 ಅಡಿಯಷ್ಟು ತಲುಪಲಿದೆ. ಈ ಹಿನ್ನೆಲೆಯಲ್ಲಿ ಆ. 1ರ ಬೆಳಗ್ಗೆ 10 ಗಂಟೆಯಿಂದ 10 ಸಾವಿರ ಕ್ಯೂಸೆಕ್ಸ್‌ನಷ್ಟು ನೀರನ್ನು ಹೊರಬಿಡಲು ನಿರ್ಧರಿಸಲಾಗಿದೆ.

Linganamakki Dam ಒಳಹರಿವನ್ನು ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳನಲ್ಲಿ ನೀರು ಹೊರಬಿಡುವಿಕೆಯ ಪ್ರಮಾಣವನ್ನು ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.
ಜಲಾಶಯದ ಕೆಳಭಾಗದಲ್ಲಿರುವ ಗ್ರಾಮದವರಿಗೆ ಈಗಾಗಲೇ ಕೆಪಿಸಿಎಲ್ ವತಿಯಿಂದ ಪ್ರವಾಹದ ಮುನ್ಸೂಚನೆ ಕೊಡಲಾಗಿದೆ ಎಂದು ಶಿವಕುಮಾರ್ ತಿಳಿಸಿದ್ದಾರೆ.

Department of Police ಅತಿವೇಗದ ವಾಹನ ಚಾಲನೆಗೆ ದಂಡ ವಿಧಿಸುವ ಸಂಚಾರಿ ಕಾನೂನು ಜಾರಿಗೆ-ಅಲೋಕ್ ಕುಮಾರ್

0

Department of Police ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು ಹೆದ್ದಾರಿಗಳಲ್ಲಿ ಅತಿವೇಗದ ಚಾಲನೆ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಇದರಿಂದಾಗಿ ಅಪಘಾತಗಳು ಸಂಭವಿಸುತ್ತಿದ್ದು ಇದನ್ನ ತಡೆಗಟ್ಟುವ ಸಲುವಾಗಿ ಪೊಲೀಸ್ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ.

ಹೌದು ಇನ್ಮುಂದೆ ಅತಿ ವೇಗದ ವಾಹನ ಸಂಚಾರಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಮುಂದಾಗಿದ್ದು, ಆಗಸ್ಟ್ 1ರಿಂದ 130 ಕಿ.ಮೀ.ಗಿಂತ ಹೆಚ್ಚಿನ ವೇಗದಲ್ಲಿ ಸಂಚರಿಸುವ ವಾಹನಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗುವುದು.

ಸ್ಪಾಟ್ ಸ್ಪೀಡ್ ಮತ್ತು ಸೆಕ್ಷನಲ್ ಸ್ಪೀಡ್ ಆಧಾರದಲ್ಲಿ ವಾಹನ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗುವುದು ಎಂದು ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ತಿಳಿಸಿದ್ದಾರೆ.

Department of Police ರಾಜ್ಯಾದ್ಯಂತ 130 ಕಿ.ಮೀ.ಗಿಂತ ಹೆಚ್ಚಿನ ವೇಗದಲ್ಲಿ ವಾಹನ ಚಾಲನೆ ಮಾಡಿದಲ್ಲಿ ಎಫ್ಐಆರ್ ದಾಖಲಿಸಲಾಗುವುದು. ಈ ರೀತಿಯ ಪ್ರಕರಣಗಳಲ್ಲಿ ಎರಡು ಸಾವಿರ ರೂಪಾಯಿವರೆಗೆ ದಂಡ ಅಥವಾ ಆರು ತಿಂಗಳು ಜೈಲು ಶಿಕ್ಷೆ ವಿಧಿಸಬಹುದಾಗಿದೆ. ವೇಗದ ಸಂಚಾರಕ್ಕೆ ಕಡಿವಾಣ ಹಾಕಲು ಈ ಕ್ರಮ ಕೈಗೊಳ್ಳಲಾಗುವುದು ಎಂದು ಅಲೋಕ್ ಕುಮಾರ್ ತಿಳಿಸಿದ್ದಾರೆ

Paris Olympics ಪ್ಯಾರೀಸ್ ಒಲಂಪಿಕ್ಸ್ ನಲ್ಲಿ ಬಾಕರ್ & ಸರ್ಬಜಿತ್ ಸಿಂಗ್ ಜೋಡಿಗೆ ಶೂಟಿಂಗ್ ನಲ್ಲಿ ಭಾರತಕ್ಕೆ ಮತ್ತೊಂದು ಕಂಚು ಪದಕ

0

Paris Olympics ಪ್ಯಾರಿಸ್ ಒಲಿಂಪಿಕ್ಸ್‌ 2024ರ ನಾಲ್ಕನೇ ದಿನದಲ್ಲಿ ಭಾರತಕ್ಕೆ ಎರಡನೇ ಪದಕ ಲಭಿಸಿದೆ. ಮನು ಭಾಕರ್ ಹಾಗೂ ಸರಬ್ಜೋತ್ ಸಿಂಗ್ ಜೋಡಿ 10 ಮೀ ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಇಬ್ಬರ ಜೋಡಿ ದಕ್ಷಿಣ ಕೊರಿಯಾ ತಂಡವನ್ನು ಮಣಿಸಿ ಜಯವನ್ನು ತಮ್ಮದಾಗಿಸಿಕೊಂಡಿದೆ.

ಭಾನುವಾರ ಮಹಿಳೆಯರ 10 ಮೀ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚು ಜಯಿಸಿದ್ದ ಮನು ಭಾಕರ್ ಶೂಟಿಂಗ್ ರೇಂಜ್‌ನಲ್ಲಿ ಮತ್ತೊಂದು ಪದಕ ಗಳಿಸಿದ್ದಾರೆ.
ಭಾರತದ ಜೋಡಿಯು ದಕ್ಷಿಣ ಕೊರಿಯಾದ ಯೆ ಜಿನ್ ಒಹ್ ಮತ್ತು ವೊನೊಹೊ ಲೀ ಅವರನ್ನು ಸೋಲಿಸಿದೆ. ಮನು ಭಾಕರ್ ಅವರು ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಜಯಿಸಿದ ಭಾರತದ ಮೊದಲ ಕ್ರೀಡಾಪಟುವಾಗಿದ್ದಾರೆ.

Paris Olympics ಹರಿಯಾಣದ ಜಜ್ಜಾರ್‌ನವರಾದ ಮನು ಭಾಕರ್ ಈ ಮೊದಲು ವಿಶ್ವಕಪ್‌ನಲ್ಲಿ 9 ಚಿನ್ನ, 2 ಬೆಳ್ಳಿ, ಯುವ ಒಲಿಂಪಿಕ್ಸ್‌ನಲ್ಲಿ ಒಂದು ಚಿನ್ನ ಹಾಗೂ ಒಂದು ಬೆಳ್ಳಿ ಹಾಗೂ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಒಂದು ಚಿನ್ನವನ್ನು ಮುಡಿಗೇರಿಸಿಕೊಂಡಿದ್ದಾರೆ.

Department of Women and Child Development ಜಿಲ್ಲೆಯಲ್ಲಿ ಅಂಗನವಾಡಿಗೆ ನೇಮಕಾತಿ ಪ್ರಕ್ರಿಯೆಗೆ ಆನ್ ಲೈನ್ ಅರ್ಜಿ ಆಹ್ವಾನ

0

Department of Women and Child Development ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಜಿಲ್ಲೆಯ 7 ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ ಎಲ್ಲಾ ತಾಲೂಕುಗಳ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿ ಹುದ್ದೆಗಳನ್ನು ಗೌರವಧನ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಮಹಿಳಾ ಮತ್ತು ಮಹಿಳಾ ಲಿಂಗತ್ವ ಅಲ್ಪಸಂಖ್ಯಾತ ಸ್ಥಳೀಯ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.

Department of Women and Child Development ಶಿವಮೊಗ್ಗ- ಕಾರ್ಯಕರ್ತೆಯರು-34, ಸಹಾಯಕಿಯರು-118, ಭದ್ರಾವತಿ -ಕಾರ್ಯಕರ್ತೆಯರು-10, ಸಹಾಯಕಿಯರು-72, ಹೊಸನಗರ -ಕಾರ್ಯಕರ್ತೆಯರು-07, ಸಹಾಯಕಿಯರು-35, ಸಾಗರ- ಕಾರ್ಯಕರ್ತೆಯರು-21, ಸಹಾಯಕಿಯರು-62, ಶಿಕಾರಿಪುರ- ಕಾರ್ಯಕರ್ತೆಯರು-08, ಸಹಾಯಕಿಯರು-55, ಸೊರಬ- ಕಾರ್ಯಕರ್ತೆಯರು-38, ಸಹಾಯಕಿಯರು-65, ತೀರ್ಥಹಳ್ಳಿ- ಕಾರ್ಯಕರ್ತೆಯರು-09, ಸಹಾಯಕಿಯರು-41.
ಆಸಕ್ತರು ಇಲಾಖೆಯ ವೆಬ್‌ಸೈಟ್ https://karnemakaone.kar.nic.in/abcd/ ಮೂಲಕ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಆಗಸ್ಟ್ 29 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಯನ್ನು ಇಲಾಖಾ ವೆಬ್‌ಸೈಟ್ ಹಾಗೂ ಸಂಬಂಧಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಂದ ಪಡೆಯಬಹುದಾಗಿದೆ.

Press Day ಕಷ್ಟದ ಸಮಯದಲ್ಲೂ ಪತ್ರಿಕಾ ಧರ್ಮ ಬಿಡಬಾರದು-ಕೃಷ್ಣಮೂರ್ತಿ ಹೆಬ್ಬಾರ್

0

Press Day ಭದ್ರಾವತಿಯ ಭೂಮಿಕ ವತಿಯಿಂದ ತರೀಕೆರೆ ರಸ್ತೆಯ ನಯನ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆಯನ್ನು ಆಚರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಹೊನ್ನಾವರದ ನಾಗರಿಕ ಪತ್ರಿಕೆಯ ಪ್ರಕಾಶಕ ಸಂಪಾದಕರಾದ ಶ್ರೀ ಕೃಷ್ಣಮೂರ್ತಿ ಹೆಬ್ಬಾರ್ ಅವರು ಆಗಮಿಸಿದ್ದರು. ಅವರು “ಕವಲು ದಾರಿಯಲ್ಲಿ ಪತ್ರಿಕೋದ್ಯಮ ” ಎಂಬ ವಿಷಯವಾಗಿ ಮಾತನಾಡುತ್ತಾ ಎಂತಹ ಕಷ್ಟ ಸಮಯದಲ್ಲಿ ಕೂಡ ಪತ್ರಿಕಾ ಧರ್ಮವನ್ನು ಬಿಡಬಾರದೆಂದು ಪತ್ರಕರ್ತರಿಗೆ ತಿಳಿಸಿದರು.
Press Day ವಿಶೇಷ ಆಹ್ವಾನಿತರಾಗಿ ಭದ್ರಾವತಿಯ ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಕಣ್ಣಪ್ಪನವರು ಆಗಮಿಸಿದ್ದರು . ಶ್ರೀಯುತ ಕಣ್ಣಪ್ಪನವರು ಮಾತನಾಡುತ್ತಾ ಪತ್ರಕರ್ತರು ಈಗಿನ ಸಮಯದಲ್ಲಿ ಎದುರಿಸಬೇಕಾದ ಕಷ್ಟಗಳು ಹಾಗೂ ಪತ್ರಿಕೆಗಳನ್ನು ನಡೆಸಲು ಆಗುತ್ತಿರುವ ತೊಂದರೆಗಳನ್ನು ವಿವರಿಸಿದರು. ಭೂಮಿಕಾ ಅಧ್ಯಕ್ಷರಾದ ಡಾಕ್ಟರ್ ಕೃಷ್ಣ ಎಸ್ ಭಟ್ ರವರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಭೂಮಿಕಾ ವತಿಯಿಂದ ಶ್ರೀ ಕೃಷ್ಣಮೂರ್ತಿ ಹೆಬ್ಬಾರ್ ಹಾಗೂ ಶ್ರೀ ಕಣ್ಣಪ್ಪ ರವರಿಗೆ ಸನ್ಮಾನಿಸಲಾಯಿತು. ಪ್ರಾರಂಭದಲ್ಲಿ ವೇದ ಶೇಷಾದ್ರಿ ಹಾಗೂ ಶ್ರೀಮತಿ ಲೀಲಾವರಿಂದ ಪ್ರಾರ್ಥನೆ ಡಾಕ್ಟರ್ ವೀಣಾ ಭಟ್ಟ ರವರಿಂದ ಸ್ವಾಗತ ಶ್ರೀ ಕೆ ಆನಂದ್ ಹಾಗೂ ಅಪರಂಜಿ ಶಿವರಾಜ್ ರವರು ಅತಿಥಿಗಳ ಪರಿಚಯ ಮಾಡಿಕೊಟ್ಟರು. ಮುನಿರಾಜುರವರು ವಂದನಾರ್ಪಣೆ ಮಾಡಿದರು. ಶ್ರೀಮತಿ ಶಾರದಾ ಶ್ರೀನಿವಾಸ್ ರವರು ಕಾರ್ಯಕ್ರಮ ನಿರೂಪಿಸಿದರು

Sagara Police ಮದುವೆಗೆ ಸಂಬಂಧಿಸಿದ ನೆಪದಿಂದ ಮನೆಯ ಪರಿಸರದಲ್ಲಿ ಗಾಂಜಾ ಎಸೆದ ಆರೋಪಿಯ ದಸ್ತಗಿರಿ

0

Sagara Police ಮನೆಯ ಕಾಂಪೌಂಡ್ ಒಳಗೆ ಗಾಂಜಾ ಎಸೆದು KPTCL ಇಂಜಿನಿಯರ್ ಪೊಲೀಸರ ಅತಿಥಿಯಾಗಿರುವ ಘಟನೆ ಸಾಗರದಲ್ಲಿ ನಡೆದಿದೆ.

ಶಾಂತಕುಮಾರಸ್ವಾಮಿ ಬಂಧಿತ ಇಂಜಿನಿಯರ್. ಸಾಗರದ ಹುಲ್ಲತ್ತಿಯ ಸಿವಿಲ್ ಇಂಜಿನಿಯರ್ ಜಿತೇಂದ್ರ ಎಂಬುವರ ಮನೆಯ ಕಾಂಪೌಂಡ್ ಒಳಗೆ ಜುಲೈ 13 ರಂದು ವ್ಯಕ್ತಿಯೊಬ್ಬ ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರ್ನಲ್ಲಿ ಏನೋ ಎಸೆದು ಹೋಗಿದ್ದರು. ಇದನ್ನು ಗಮನಿಸಿದ ಜಿತೇಂದ್ರ ಕವರ್ನಲ್ಲಿ ಗಾಂಜಾ ಪ್ಯಾಕೆಟ್ ಇರುವುದನ್ನು ನೋಡಿ ಆಘಾತಕ್ಕೊಳಗಾಗಿದ್ದರು.

ಬಳಿಕ ಮನೆಯ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಓರ್ವ ಕಾಂಪೌಂಡ್ ಬಳಿ ಬಂದು ಕವರ್ ಎಸೆದು ಹೋಗಿರುವುದು ಕಂಡುಬಂದಿತ್ತು. ಈ ಕುರಿತು ಜಿತೇಂದ್ರ ಸಾಗರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ.

ನಂತರ ಪೊಲೀಸರು ತನಿಖೆ ನಡೆಸಿದಾಗ ಕಪ್ಪು ಕವರ್ ಎಸೆದ ಆರೋಪಿಯ ಪತ್ತೆ ಆಗುತ್ತದೆ. ಈತನನ್ನು ವಿಚಾರಣೆ ನಡೆಸಿದಾಗ ಶಾಂತಕುಮಾರ್ ಎಂಬುವರು ನನಗೆ ಗಾಂಜಾ ಪ್ಯಾಕೆಟ್ ಇರುವ ಕವರ್ ಕೊಟ್ಟು ಜಿತೇಂದ್ರ ಅವರ ಮನೆ ಬಳಿ ಎಸೆದು ಬಾ ಎಂದು ತಿಳಿಸಿದ್ದರು ಎಂದು ಬಾಯ್ಬಿಟ್ಟಿದ್ದಾರೆ.

ಬಳಿಕ ಶಾಂತಕುಮಾರ್ನನ್ನು ವಿಚಾರಣೆ ನಡೆಸಿದಾಗ ಈ ಹಿಂದೆ ಜಿತೇಂದ್ರ ಅವರ ಮಾವನ ಮಗಳು ಮತ್ತು ತನ್ನ(ಶಾಂತಕುಮಾರ್) ಮದುವೆ ವಿಚಾರದಲ್ಲಿ ಹೊಂದಾಣಿಕೆ ಆಗದೇ ಮದುವೆ ಮುರಿದುಬಿದ್ದಿತ್ತು.

Sagara Police ಇದಕ್ಕೆ ಜಿತೇಂದ್ರ ಕಾರಣ ಎಂದು ತಿಳಿದು ಆತನ ಮೇಲೆ ದ್ವೇಷದಿಂದ ಗಾಂಜಾ ಕೇಸನ್ನು ಹಾಕುವ ಉದ್ದೇಶದಿಂದ ಸಾನಾವುಲ್ಲಾ ಎಂಬ ವ್ಯಕ್ತಿಯನ್ನು ಜಿತೇಂದ್ರ ಮನೆ ಕಾಂಪೌಂಡ್ ಒಳಗೆ ಗಾಂಜಾ ಪ್ಯಾಕೆಟ್ಗಳನ್ನು ಎಸೆಯಲು ಹೇಳಿದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಹೀಗಾಗಿ ಸಾಗರ ಗ್ರಾಮಾಂತರ ಪೊಲೀಸರು KPTCL ಇಂಜಿನಿಯರ್ ಶಾಂತಕುಮಾರಸ್ವಾಮಿ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಫಿಕ್ ಸಬ್ ಸೆಕ್ಷನ್ 1985ರ (U/s-20(b) (ii) A, 8(c) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶಾಂತಕುಮಾರಸ್ವಾಮಿ ಅವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

ತನಿಖೆಯಲ್ಲಿ ಎ1 ಆರೋಪಿ ಸಾನಾವುಲ್ಲಾ ಹಾಗೂ ಎ2 ಆರೋಪಿ ಶಾಂತಕುಮಾರಸ್ವಾಮಿಯನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Wayanad landslides ವಯನಾಡು ಜಿಲ್ಲೆಯಲ್ಲಿ ಭೂಕುಸಿತ. ನೂರಕ್ಕೂ ಅಧಿಕ ಸಾವು. ಕೇರಳದಲ್ಲಿ ಶೋಕಾಚರಣೆ

0

Wayanad landslides ವಯನಾಡ್ ಜಿಲ್ಲೆಯಲ್ಲಿ ವಿವಿಧ ಭಾಗಗಳಲ್ಲಿ ಭೂಕುಸಿತ ಉಂಟಾಗಿ ಸುಮಾರು 100 ರಷ್ಟು ಜನರು ಸಾವನ್ನಪ್ಪಿರುವ ಹಿನ್ನೆಲೆ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಎರಡು ದಿನಗಳ ಕಾಲ ರಾಜ್ಯಾದ್ಯಂತ ಶೋಕಾಚರಣೆಯನ್ನು ಘೋಷಿಸಿದ್ದಾರೆ

ಜುಲೈ 30 ಮಂಗಳವಾರ ಮತ್ತು ಜುಲೈ 31 ಬುಧವಾರದಂದು ಕೇರಳ ಸರ್ಕಾರ ಅಧಿಕೃತ ಶೋಕಾಚರಣೆಯನ್ನು ಘೋಷಿಸಿದೆ. ಈ ಸಂದರ್ಭ ರಾಜ್ಯದ ಎಲ್ಲಾ ಕಡೆಗಳಲ್ಲಿ ರಾಷ್ಟ್ರಧ್ವಜ ಅರ್ಧದಲ್ಲಿ ಹಾರಾಡಲಿದೆ. ಈ ಎರಡೂ ದಿನಗಳಂದು ನಡೆಯಬೇಕಿದ್ದ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳು ಮತ್ತು ಇತರ ಆಚರಣೆಗಳನ್ನು ಮುಂದೂಡಲಾಗಿದೆ.

ಸಂಜೆ 6 ಗಂಟೆ ವೇಳೆಗೆ ವಯನಾಡ್ ದುರಂತದಲ್ಲಿ ಮೃತರ ಸಂಖ್ಯೆ 93ಕ್ಕೆ ತಲುಪಿತ್ತು.128 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಮತ್ತು 98 ಮಂದಿ ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿತ್ತು.

Wayanad landslides ವರದಿಗಳ ಪ್ರಕಾರ ಸದ್ಯ ದುರಂತ ನಡೆದ ಸ್ಥಳಗಳಲ್ಲಿ ಒಂದಾದ ಮುಂಡಕ್ಕೈನಲ್ಲಿ ಎನ್‌ಡಿಆರ್‌ಎಫ್‌ನ 20 ಸದಸ್ಯರ ತಂಡ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಭೂಕುಸಿತ ಸಂತ್ರಸ್ತರಿಗೆ ಆಹಾರ ಮತ್ತು ಇತರ ಸಾಮಗ್ರಿಗಳ ಪೂರೈಕೆಗೆ ರಾಜ್ಯದ ನಾಗರಿಕ ಸರಬರಾಜು ಇಲಾಖೆ ಕ್ರಮಕೈಗೊಂಡಿದೆ.

State Farmers Association ರೈತರ ಆಧಾರ್ ಸಂಖ್ಯೆ ಐಪಿ ಸೆಟ್ ಗೆ ಜೋಡಿಸುವ ಕ್ರಮ ಕಿರುಕುಳದ ಕ್ರಮ- ಎಚ್.ಆರ್.ಬಸವರಾಜಪ್ಪ

0

State Farmers Association ಐಪಿ ಸೆಟ್‌ಗೆ ಆಧಾರ್ ಕಾರ್ಡ್ ಜೋಡಣೆ ಮಾಡುವ ಕ್ರಮ ರೈತರಿಗೆ ತೊಂದರೆ ಕೊಡುವ ಉದ್ದೇಶವಾಗಿದೆ. ಆದ್ದರಿಂದ ಆಧಾರ್ ಕಾರ್ಡ್ ಜೋಡಣೆ ಮಾಡುವ ಕ್ರಮವನ್ನು ತಾವುಗಳು ಕೂಡಲೇ ನಿಲ್ಲಿಸಬೇಕೆಂದು ಒತ್ತಾಯಿಸಿರುವ ರಾಜ್ಯ ರೈತ ಸಂಘ, ರೈತರು ಸಹ ಯಾವುದೇ ಕಾರಣಕ್ಕೂ ಆಧಾರ್ ಕಾರ್ಡ್‌ನ್ನು ವಿದ್ಯುತ್ ಚ್ಛಕ್ತಿ ಇಲಾಖೆಗೆ ಕೊಡಬಾರದೆಂದು ಮನವಿ ಮಾಡಿದೆ.

ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ ಸಂಘದ ರಾಜ್ಯಾಧ್ಯಕ್ಷ ಎಚ್. ಆರ್. ಬಸವರಾಜಪ್ಪ ಮತ್ತು ಮುಖಂಡರು,
ಚುನಾವಣೆ ಪೂರ್ವದಲ್ಲಿ ವಿದ್ಯುತ್‌ಚ್ಚಕ್ತಿ ಖಾಸಗೀಕರಣ ಮಾಡುವುದಿಲ್ಲವೆಂದು ಸರಕಾರ ಭರವಸೆ ಕೊಟ್ಟಿತ್ತು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಸರ್ಕಾರಕ್ಕೂ ಕೂಡ ವಿಧಾನಸಭೆಯಲ್ಲಿ ನಿರ್ಣಯವನ್ನು ಮಾಡಿ ಕೇಂದ್ರಕ್ಕೆ ಕಳುಹಿಸಿಬೇಕೆಂದು ಒತ್ತಾಯಿಸಿತ್ತು. ಪಕ್ಕದ ರಾಜ್ಯಗಳಾದ ಆಂಧ್ರ ತಮಿಳುನಾಡು, ತೆಲಂಗಾಣ, ಪಶ್ಚಿಮ ಬಂಗಾಳ ಸರ್ಕಾರಗಳು ವಿಧಾನಸಭೆಯಲ್ಲಿ ವಿದ್ಯುತ್ ಚ್ಚಕ್ತಿ ಖಾಸಗೀಕರಣ ಮಾಡುವುದಿಲ್ಲವೆಂದು ತೀರ್ಮಾನಿಸಿ ಕೇಂದ್ರಕ್ಕೆ ನಿರ್ಣಯವನ್ನು ಕಳುಹಿಸಿವೆ ಎಂದರು.

State Farmers Association ಸ್ವಾತಂತ್ರ್ಯದ ನಂತರ ಇಲ್ಲಿಯವರೆಗೆ ಐ.ಪಿ ಸೆಟ್‌ಗಳು ರೈತರು ಉಪಯೋಗಿಸುತ್ತಿದ್ದಾರೆ. ೧೦ ಹೆಚ್.ಪಿ ಐ.ಪಿ ಸೆಟ್‌ಗಳಿಗೆ ಆಧಾರ್ ವರೆಗಿನ ಐ.ಪಿ ಸೆಟ್‌ಗಳಿಗೆ ವಿದ್ಯುತ್ ಚ್ಚಕ್ತಿ ದರ ಇಲ್ಲ. ಆದರೂ ಕಾರ್ಡ್ ಜೋಡಿಸಲು ಆದೇಶ ಮಾಡಿರುವುದರ ಉದ್ದೇಶವೇನು ಎಂದು ಪ್ರಶ್ನಿಸಿರುವ ಸಂಘ, ಆಧಾರ್ ಕಾರ್ಡ್ ಜೋಡಣೆ ಮಾಡುವುದರ ಹಿಂದೆ ವಿದ್ಯುಚ್ಚಕ್ತಿ ಖಾಸಗೀಕರಣ ಮಾಡುವ ಹುನ್ನಾರ ಅಡಗಿದೆ.. ಕೇಂದ್ರ ಸರ್ಕಾರ ಹಿಂದಿನ ಲೋಕಸಭೆಯಲ್ಲಿ ಖಾಸಗೀಕರಣ ಮಾಡುವ ಮಸೂದೆಯನ್ನು ಮಂಡಿಸಿ ಸದನ ಸಮಿತಿಗೆ ಕಳುಹಿಸಿದೆ ಎಂದು ಹೇಳಿದರು.

ಕೆಲವು ರೈತರದ್ದು ಪಹಣಿ ಖಾತೆ ಇಲ್ಲದ ಕಾರಣ ಆರ್.ಆರ್. ನಂಬರ್ ಸಿಕ್ಕಿರುವುದಿಲ್ಲ, ಇಂತಹ ರೈತರಿಗೆ ಆಧಾರ್ ಕಾರ್ಡ್ ನೊಂದಣಿ ಸಹ ಆಗುವುದಿಲ್ಲ. ಕರ್ನಾಟಕದಲ್ಲಿ 25 ಲಕ್ಷಕ್ಕೂ ಹೆಚ್ಚಿಗೆ ಐ.ಪಿ ಸೆಟ್‌ಗಳಿವೆ. ಹಿಂದೆ ಅಕ್ರಮ-ಸಕ್ರಮ ಯೋಜನೆಯಡಿ ಹಣ ಕಟ್ಟಿಸಿಕೊಂಡು ಕೊಡುತ್ತಿದ್ದರು. ಈಗ ಅದನ್ನು ನಿಲ್ಲಿಸಿ ಸ್ವಯಂ ವೆಚ್ಚ ಯೋಜನೆಯನ್ನು ಜಾರಿಗೆ ತಂದು ಒಬ್ಬ ಸಣ್ಣ ರೈತ ಐ.ಪಿ ಸೆಟ್‌ಗಾಗಿ 3 ರಿಂದ 4 ಲಕ್ಷ ಬಂಡವಾಳ ಹೂಡಲು ಸಾಧ್ಯವಿಲ್ಲ ಎಂದಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಪ್ರ. ಕಾರ್ಯದರ್ಶಿ ಇ ಬಿ ಜಗದೀಶ, ಜಿಲ್ಲಾಧ್ಯಕ್ಷ ಕೆ. ರಾಘವೇಂದ್ರ, ರಾಜ್ಯ ಉಪಾಧ್ಯಕ್ಷ ಹಿಟ್ಟೂರು ರಾಜು, ಹಸಿರು ಸೇನೆಯ ಜಿಲ್ಲಾ ಸಂಚಾಲಕ ಎಂ ಡಿ ನಾಗರಾಜ, ಗುರುಶಾಂತ್, ಕಸೆಟ್ಟಿ ರುದ್ರೇಶ್ ಮೊದಲಾದವರಿದ್ದರು.

Chudanatha Iyer ದಿಟ್ಟ ಬರವಣಿಗೆಯ ಪತ್ರಕರ್ತ ಚಿಕ್ಕಮಗಳೂರು ಚೂಡಾನಾಥ ಐಯ್ಯರ್ ನಿಧನ

0

Chudanatha Iyer ಸುಮಾರು ನಾಲ್ಕು ದಶಕಗಳ ಕಾಲ ಜಿಲ್ಲೆಯಲ್ಲಿ ಚಿರಪರಿಚಿತರಾಗಿದ್ದ ಹಿರಿಯ ಪತ್ರಕರ್ತ ಜಿ.ವಿ. ಚೂಡಾನಾಥ್ ಅಯ್ಯರ್ ನಿಧನ ಹೊಂದಿದರು.ಅವರಿಗೆ 78 ವರ್ಷ ವಯಸ್ಸಾಗಿತ್ತು .

ಹೊಸದಿಗಂತ ದಿನ ಪತ್ರಿಕೆಯ ಸಂಸ್ಥಾಪಕ ಸಂಪಾದಕರಾಗಿದ್ದ ಅವರು, 35 ವರ್ಷಕ್ಕೂ ಹೆಚ್ಚು ಕಾಲದಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಿದ್ದ ಚೂಡಾನಾಥ್ ಅಯ್ಯರ್ ಅವರು ನಾಲ್ಕು ವರ್ಷಗಳ ಹಿಂದೆ ಪತ್ರಿಕೋದ್ಯಮದಿಂದ ನಿವೃತ್ತಿಗೊಂಡು ವಿಶ್ರಾಂತಿ ಜೀವನ ನಡೆಸುತ್ತಿದ್ದರು.

ಇತ್ತೀಚಿನ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರನ್ನು ಬೆಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ವಯೋ ಸಹಜ ಕಾಯಿಲೆಯಿಂದ ತೀವ್ರ ಅಸ್ವಸ್ಥರಾಗಿ ನಿನ್ನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ದಿವಂಗತರು ಇಬ್ಬರು ಪುತ್ರರು, ಓರ್ವ ಪುತ್ರಿ, ಪತ್ನಿ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದು ಅವರ ನಿಧನದಿಂದ ಜಿಲ್ಲೆಯು ಹಿರಿಯ ಪತ್ರಕರ್ತರೊಬ್ಬರನ್ನು ಕಳೆದುಕೊಂಡಂತಾಗಿದೆ.

ಮೃತರು ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಸಕ್ರಿಯರಾಗಿದ್ದರು.ರಾಜ್ಯ ಸಣ್ಣ ಪತ್ರಿಕೆಗಳ ಸಂಪಾದಕರ ಸಂಘದ ಪ್ರಧಾನ ಕಾರ್‍ಯದರ್ಶಿಯಾಗಿ, ಅಧ್ಯಕ್ಷರಾಗಿ ಮತ್ತು ವಿವಿಧ ಸಂಘ ಸಂಸ್ಥೆಗಳ ಒಡನಾಡಿಯಾಗಿ ಸೇವೆ ಸಲ್ಲಿಸಿದರು.
ಕರ್ನಾಟಕ ರಾಜ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಇವರಿಗೆ ಸಂದಿವೆ.

Chudanatha Iyer ಅಯ್ಯರ್ ನಿಧನದ ಸುದ್ದಿ ತಿಳಿದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್, ಶಾಸಕ ತಮ್ಮಯ್ಯ , ವಿಧಾನ ಪರಿಷತ್ ಸದಸ್ಯರಾದ ಸಿ.ಟಿ. ರವಿ, ಎಸ್.ಎಲ್. ಬೋಜೇಗೌಡ,ಮಾಜಿ ಸಚಿವರಾದ ಸಗೀರ್ ಅಹಮ್ಮದ್,ಬಿ.ಬಿ.ನಿಂಗಯ್ಯ ,ಕೆ.ಪಿ. ಸಿ.ಸಿ. ವಕ್ತಾರ ಎಚ್.ಎಚ್. ದೇವ ರಾಜ್,ಸಿ.ಪಿ.ಐ.ಬಿ.ಅಮ್ಜದ್ ಸೇರಿದಂತೆ ವಿವಿಧ ಪಕ್ಷಗಳ ಪ್ರಮುಖರು ಸಂಘ ಸಂಸ್ಥೆಗಳ ಮುಖಂಡರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿದರು.
ಕ್ರಾಂತಿದೀಪ ಸಂತಾಪ:ಚೂಡಾನಾಥ್ ಅಯ್ಯರ್ ಅವರ ನಿಧನಕ್ಕೆ ಕ್ರಾಂತಿದೀಪ ಬಳಗ ಸಂತಾಪ ಸೂಚಿಸಿದ್ದು ಕುಟುಂಬ ವರ್ಗಕ್ಕೆ ಅಗಲಿಕೆಯ ನೋವು ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದೆ.