Tuesday, April 7, 2026
Tuesday, April 7, 2026
Home Blog Page 630

Sharadadevi Andara Vikasa School ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ಇಂಟ್ರಾಕ್ಟ್ ಕ್ಲಬ್ ನ ಪದಗ್ರಹಣ ಸಮಾರಂಭ

0

Sharadadevi Andara Vikasa School ಶಾರದಾದೇವಿ ಅಂದರ ವಿಕಾಸ ಶಾಲೆಯಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ಇಂಟ್ರಾಕ್ಟ್ ಕ್ಲಬ್ ನ ಪದಗ್ರಹಣ ಕಾರ್ಯಕ್ರಮವು ಬಹಳ ಅದ್ದೂರಿಯಾಗಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೆಂಟ್ರಲ್ ಕ್ಲಬ್ ನ ಅಧ್ಯಕ್ಷ ಕಿರಣ್ ಕುಮಾರ್.ಜಿ ಮಾತನಾಡಿ, ಇಂಟರಾಕ್ಟ್ ನಿಂದ ಮಕ್ಕಳಲ್ಲಿ ನಾಯಕತ್ವದ ಗುಣ ಬರುತ್ತದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಇಂಟ್ರಾಕ್ಟ್ ಕ್ಲಬ್ ನ ಅಧ್ಯಕ್ಷರಾಗಿ ವಿಶ್ವನಾಥ್ ಮತ್ತು ಕಾರ್ಯದರ್ಶಿಯಾಗಿ ಅನಿತಾ ಅಧಿಕಾರವನ್ನು ಸ್ವೀಕರಿಸಿದರು.

ಸಭೆಯಲ್ಲಿ ಉಪಸ್ಥಿತಿ ಇಂಟ್ರಾಕ್ಟ್ ಚೇರ್ಮನ್ ವಿನೋದ್ ಕುಮಾರ್, ಯೂತ್ ಸರ್ವಿಸ್ ನಿರಂಜನ್ ಎನ್ ಜಗದೀಶ್, ಕಾರ್ಯದರ್ಶಿ ಶಾರದಾದೇವಿ ಅಂದರ ವಿಕಾಸ ಕೇಂದ್ರದ ಅನಿತಾ ಹಾಗೂ ಆಡಳಿತ ಮಂಡಳಿಯ ಈಶ್ವರ ಭಟ್ ಶಾಲಾ ಮುಖ್ಯೋಪಾಧ್ಯಾಯ ಸುರೇಶ್ ವೇದಿಕೆ ಮೇಲೆ ಇದ್ದರು.

Sharadadevi Andara Vikasa School ಕಾರ್ಯಕ್ರಮದಲ್ಲಿ ಮಾಜಿ ಅಸಿಸ್ಟೆಂಟ್ ಗವರ್ನರ್ ರವಿ ಫಟೋಜಿ, ಮಾಜಿ ಜೋನಲ್ ಲೆಫ್ಟಿನೆಂಟ್ ಧರ್ಮೇಂದ್ರ ಸಿಂಗ್ ಹಾಗೂ ಖಜಾಂಚಿ ಬಸವರಾಜ್ ರಮೇಶ್, ಸಂತೋಷ್, ಗುರುರಾಜ್, ಎ.ಎಸ್.ಸುರೇಖಾ ಮುರಳಿಧರ್, ಸತೀಶ್ ರಾಜಶ್ರೀ, ದೀಪ, ಜಯಶೀಲ್ ಶೆಟ್ಟಿ, ಜ್ಯೋತಿ ಶ್ರೀರಾಮ್, ಮಧುರ ಧನಂಜಯ್ ಉಪಸ್ಥಿತರಿದ್ದರು. ಕೊನೆಯಲ್ಲಿ ಸೆಂಟ್ರಲ್ ಕ್ಲಬ್ ನ ಕಾರ್ಯದರ್ಶಿ ಈಶ್ವರ.ಬಿ.ವಿ ವಂದನಾರ್ಪಣೆ ಮಾಡಿದರು

Chunchadri Cup ಆಗಸ್ಟ್ 12 ರಿಂದ 14 ವರೆಗೆ “ಚುಂಚಾದ್ರಿ ಕಪ್- 2024” ವಾಲಿಬಾಲ್ ಪಂದ್ಯಾವಳಿ

0

Chunchadri Cup- 2024 ಶಿವಮೊಗ್ಗ ನಗರದ ಕ್ರೀಡಾ ಪ್ರೇಮಿಗಳಿಗಾಗಿ ಹಾಗೂ 77 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್( ರಿ )ಶಿವಮೊಗ್ಗ ಹಾಗೂ ಜಿಲ್ಲಾ ವಾಲಿಬಾಲ್ ಸಂಸ್ಥೆ, ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ “ಚುಂಚಾದ್ರಿ ಕಪ್ 2024” ರ ವಾಲಿಬಾಲ್ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಶಿವಮೊಗ್ಗ ಜಿಲ್ಲೆಯ ಪ್ರೌಢಶಾಲಾ ಬಾಲಕ ಮತ್ತು ಬಾಲಕೀಯರಿಗಾಗಿ ಆಗಸ್ಟ್ 12 ರಿಂದ 14 ರವರೆಗೆ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಶಿವಮೊಗ್ಗ ನಗರದ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದು,

ಈ ಕ್ರೀಡಾ ಕೂಟದ ದಿವ್ಯ ಸಾನ್ನಿಧ್ಯವನ್ನು ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರು ಸಾನ್ನಿಧ್ಯ ವಹಿಸಲಿದ್ದು, ಹಾಗೂ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ದಿವ್ಯ ಉಪಸ್ಥಿತಿ ವಹಿಸಿಸುವರು.

ತಮ್ಮ ಪ್ರೌಢಶಾಲಾ ಬಾಲಕ ಮತ್ತು ಬಾಲಕೀಯರ ತಂಡಗಳನ್ನು ಈ ಸ್ಪರ್ಧೆಗೆ ಕಳುಹಿಸಿ, ಚುಂಚಾದ್ರಿ ಕಪ್ 2024 ನ್ನು ಯಶಸ್ವಿಗೊಳಿಸಿ ಕೊಡಬೇಕಾಗಿ ಕೋರುತ್ತೇವೆ. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರು ಕಡ್ಡಾಯವಾಗಿ ತಮ್ಮ ಶಾಲೆಯ ಕ್ರೀಡಾಪಟುಗಳ ಜೊತೆಯಲ್ಲಿ ಇರತಕ್ಕದ್ದು, ಒಂದು ವೇಳೆ ದೈಹಿಕ ಶಿಕ್ಷಣ ಶಿಕ್ಷಕರು ಮಕ್ಕಳ ಜೊತೆ ಇಲ್ಲದ ತಂಡಗಳಿಗೆ ಕ್ರೀಡಾ ಕೂಟದಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ. ಜೊತೆಗೆ ಶಾಲೆಯ ಪ್ರಾಂಶುಪಾಲರಿಂದ ದೃಢೀಕರಣ ಪತ್ರವನ್ನು ತರಬೇತಿದಾರರು ಮತ್ತು ದೈಹಿಕ ಶಿಕ್ಷಣ ಶಿಕ್ಷಕರು ತರತಕ್ಕದ್ದು.

ತಮ್ಮ ತಂಡಗಳ ನೋಂದಣಿಗಾಗಿ ನಾವು ಕಳುಹಿಸಿರುವ ನೋಂದಣಿ ಪತ್ರದಲ್ಲಿ ವಿದ್ಯಾರ್ಥಿಗಳ ಮಾಹಿತಿಯನ್ನು ಭರ್ತಿ ಮಾಡಿ ಪ್ರಾಂಶುಪಾಲರು,ಶ್ರೀ ಆದಿಚುಂಚನಗಿರಿ ಸಂಯುಕ್ತ ಆಂಗ್ಲ ಮಾಧ್ಯಮ ಪ್ರೌಢಶಾಲೆ,ಶರಾವತಿ ನಗರ, ಶಿವಮೊಗ್ಗ ಇವರಿಗೆ 05-8 – 2024 ರೊಳಗಾಗಿ ಕಳುಹಿಸಿಕೊಡಲು ಕೋರಲಾಗಿದೆ.

Chunchadri Cup- 2024 ವಿ. ಸೂ : ತಂಡಗಳು ಕಡ್ಡಾಯವಾಗಿ ಕ್ರೀಡಾ ಸಮವಸ್ತ್ರ ಧರಿಸಿ ಈ ಪಂದ್ಯಾವಳಿಯಲ್ಲಿ ಭಾಗವಹಿಸಬೇಕು.17 ವರ್ಷ ವಯೋಮಿತಿ ಮೀರಿರಬಾರದು (01-01-2008 ರ ನಂತರ ಜನಿಸಿರಬೇಕು )
ಕಡ್ಡಾಯವಾಗಿ 18 ಕಾಲಂ ಇರುವ ಗುರುತಿನ ಚೀಟಿ ತರಬೇಕು (ಇತ್ತೀಚಿನ ಭಾವಚಿತ್ರದೊಂದಿಗೆ ), ವಿದ್ಯಾರ್ಥಿಗಳ ಆಧಾರ ಗುರುತಿನ ಕಾರ್ಡ್, SATS ನಂಬರ್ ಹಾಗೂ ಶಾಲೆಯ ಡೈಸ್ ಕೋಡ್ ಕಡ್ಡಾಯವಾಗಿರುತ್ತದೆ.
9945833464, 8971452532, 8880895404 , 9964796101 ಗೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಲು ಸಂಸ್ಥೆಯ ಪ್ರಾಂಶುಪಾಲರಾದ ದಿವ್ಯ ಕರಣಮ್ ರವರು ಕೋರಿದ್ದಾರೆ.

Mathura Paradise ಅತಿ ಹೆಚ್ಚು ಉದ್ಯೋಗಾವಾಕಾಶ ಸೃಷ್ಟಿಸುವ ಉದ್ಯಮ ಹೋಟೆಲ್ ಕ್ಷೇತ್ರ-ಪಿ.ಸಿ.ರಾವ್

0

Mathura Paradise ಹೋಟೆಲ್ ಉದ್ಯಮ ಒಂದು ಪ್ರಯಾಸಕರ ವ್ಯವಹಾರ. ದೇಶದಲ್ಲಿ ಅತಿ ಹೆಚ್ಚು ಉದ್ಯೋಗ ಅವಕಾಶ ಸೃಷ್ಟಿಸುವ ಉದ್ಯಮ ಹೋಟೆಲ್ ಕ್ಷೇತ್ರ ಎಂದು ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಹೇಳಿದರು‌.

ಶಿವಮೊಗ್ಗ ನಗರದ ಮಥುರಾ ಪಾರಾಡೈಸ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಮಥುರಾ ಪಾರಡೈಸ್ ರಜತೋತ್ಸವ ಸಂಭ್ರಮಾಚರಣೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಶಿಕ್ಷಣ ಪಡೆದವರು, ಪಡೆಯದೇ ಇರುವವರು ಸೇರಿದಂತೆ ಎಲ್ಲ ವರ್ಗದವರಿಗೂ ವಸತಿ, ಊಟದ ಜತೆಗೆ ಸಂಬಳ ನೀಡುವ ಉದ್ಯಮ ಹೋಟೆಲ್ ಆಗಿದೆ ಎಂದು ಅಭಿಪ್ರಾಯಪಟ್ಟರು.

ವಕೀಲ ಕೆ.ಪಿ.ಶ್ರೀಪಾಲ್ ಮಾತನಾಡಿ, ಮಥುರಾ ಹೋಟೆಲ್ ವ್ಯಾಪಾರ ವಹಿವಾಟಿನ ಜತೆಯಲ್ಲಿ ಸಮಾಜಮುಖಿ ವೇದಿಕೆಗಳಿಗೆ ಹೆಚ್ಚಿನ ಅವಕಾಶ ನೀಡುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಪ್ರಸನ್ನಕುಮಾರ್ ಮಾತನಾಡಿ, 25 ವರ್ಷಗಳ ಹಿಂದೆ ಶಿವಮೊಗ್ಗದ ಸಣ್ಣ ನಗರದಲ್ಲಿ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಉತ್ತಮ ಹೋಟೆಲ್ ಮತ್ತು ವಸತಿಗೃಹ ಪ್ರಾರಂಭಿಸುವ ಧೈರ್ಯ ಮಾಡಿದ್ದರು. ಸಮಾಜಮುಖಿ ಕಾರ್ಯಕ್ರಮಗಳಿಗೆ ಸಹಕಾರಿಯಾಗುತ್ತಿದ್ದಾರೆ ಗೋಪಿನಾಥ್ ಎಂದು ಹೇಳಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ ಮಾತನಾಡಿ, ಮಥುರಾ ಗೋಪಿನಾಥ್ ಅವರು ಒಬ್ಬ ದೂರದರ್ಶಿ. ನನ್ನ ಕನಸಿನ ಶಿವಮೊಗ್ಗ ಎಂಬ ಸಂಸ್ಥೆ ರೂಪಿಸಿ ಹಲವಾರು ಉತ್ತಮ ಯೋಜನೆಗಳನ್ನು ಸಾಕಾರಗೊಳಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ ಎಂದು ತಿಳಿಸಿದರು.

Mathura Paradise ರಜತೋತ್ಸವ ಸಮಿತಿ ಅಧ್ಯಕ್ಷ ವಸಂತ ಹೋಬಳಿದಾರ್ ಮಾತನಾಡಿ, ಪ್ರತಿಯೊಬ್ಬ ಉದ್ಯಮಿ ತನ್ನ ಉದ್ಯಮದ ಜತೆಗೆ ಸಮಾಜಮುಖಿ ಕಾರ್ಯಗಳನ್ನು ಮಾಡುವುದರ ಮೂಲಕ ಸಮಾಜದ ಶ್ರೇಯೋಭಿವೃದ್ಧಿಗೆ ಕೆಲಸ ಮಾಡಿದಲ್ಲಿ ಎಲ್ಲ ಸಮುದಾಯಗಳು, ನಗರಗಳು ಉತ್ತಮ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು.
ಉತ್ಸವದ ಕಾರ್ಯವನ್ನು 50 ವಿವಿಧ ಸಂಘ ಸಂಸ್ಥೆಗಳು ನೇತೃತ್ವ ವಹಿಸಿರುವುದು ಮಥುರಾ ಗೋಪಿನಾಥ್ ಅವರ ಬಗ್ಗೆ ಇರುವ ಅಭಿಮಾನವಾಗಿದೆ. ಕಾರ್ಯಕ್ರಮ ಸಮಾಜದಲ್ಲಿ ಸೇವೆಯ ಕಾರ್ಯಕ್ಕೆ ನಾಂದಿ ಹಾಡಿ ಹಲವರ ಮನ ಪರಿವರ್ತನೆ ಮಾಡಲಿದೆ ಎಂದು ತಿಳಿಸಿದರು.

ರಜತ ಮಹೋತ್ಸವ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ಶಿವಮೊಗ್ಗ ಜಿಲ್ಲೆಯ 80 ಪ್ರವಾಸಿ ತಾಣಗಳನ್ನು ಸರ್ಕಾರ ಹಾಗೂ ಸಾರ್ವಜನಿಕ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಲು ಸರ್ಕಾರಕ್ಕೆ ವರದಿ ಸಲ್ಲಿಸಿ ಅನುಷ್ಠಾನ ಮಾಡಲು ಪ್ರಯತ್ನಿಸಲಾಗುವುದು ಎಂದು‌ ವಿವರಿಸಿದರು.

ಮಥುರಾ ಪಾರಡೈಸ್ ಮಾಲೀಕ ಎನ್.ಗೋಪಿನಾಥ್ ಹಾಗೂ ಡಾ. ಲಕ್ಷ್ಮೀದೇವಿ ಗೋಪಿನಾಥ್ ಅವರಿಗೆ ರಜತೋತ್ಸವ ಸಮಿತಿಯಿಂದ ಸನ್ಮಾನಿಸಲಾಯಿತು. ಜಿ.ವಿಜಯಕುಮಾರ್, ವಿಜೇಂದ್ರ, ನಾಗಭೂಷಣ್, ಕೃಷ್ಣಾನಂದ, ಎನ್.ರಾಜೇಂದ್ರ, ಮೋಹನ್, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.

Shimoga Diana Book Gallery ಫೋನ್ ಮಾಡಿ ನಿಮ್ಮ ಮೆಚ್ಚಿನ ಪುಸ್ತಕ ಅಂಚೆ ಮೂಲಕ ಪಡೆಯಿರಿ”. ಡಯಾನ ಬುಕ್ ಗ್ಯಾಲರಿ ನೂತನ ಯೋಜನೆ

0

Shimoga Diana Book Gallery ಶಿವಮೊಗ್ಗ ಡಯಾನ ಬುಕ್ ಗ್ಯಾಲರಿಯು, ಪುಸ್ತಕ ಓದುವ ಸಂಸ್ಕೃತಿಯನ್ನು ಉತ್ತೇಜಸುವ ಹಾಗೂ, ಓದುಗರು ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ, ನಿಮ್ಮ ಮನೆ ಬಾಗಿಲಿಗೆ ನಿಮ್ಮ ಆಯ್ಕೆಯ ಪುಸ್ತಕಗಳನ್ನು ನೇರವಾಗಿ ಅಂಚೆಯ ಮೂಲಕ ಕಳಿಸಿ ಕೊಡುವ ವ್ಯವಸ್ಥೆ ಮಾಡಿದೆ.

ನಿಮ್ಮ ಒಂದು ಫೋನ್ ಕಾಲ್ ಸಾಕು, ನಿಮ್ಮ ಆಯ್ಕೆಯ ಪುಸ್ತಕಗಳು ನಿಮ್ಮ ಮನೆ ಬಾಗಿಲಿಗೆ ಬರುತ್ತವೆ.
, ಈ ನಂಬರ್ ಗೆ (9886185310) ವಾಟ್ಸಪ್ಪ್ ಮೂಲಕ ಸಂಪರ್ಕಿಸಿ, phonepay ಮೂಲಕ ಹಣ ಪಾವತಿಸಿ, ನೀವಿದ್ದಲ್ಲಿಗೆ ಪುಸ್ತಕ ತರಿಸಿಕೊಳ್ಳಿ.

Shimoga Diana Book Gallery ಶಿವಮೊಗ್ಗ ಜಿಲ್ಲೆಯ ಮತ್ತು ಸುತ್ತ ಮುತ್ತಲಿನ ಗ್ರಾಮಸ್ಥರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಡಯಾನ ಬುಕ್ ಗ್ಯಾಲರಿಯ
ಕೆ. ಎಲ್. ಈಶ್ವರ ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ
9886185310 ಅನ್ನು ಸಂಪರ್ಕಿಸಬಹುದು

Department of Information and Public Relations ಶಿಥಿಲವಾಗಿರುವ ನಾಲ್ಕು ಹೆದ್ದಾರಿ ಫಲಕ ವಿಲೇವಾರಿಗೆ ಬಿಡ್ ದಾರರಿಂದ ದರಪಟ್ಟಿಗೆ ಆಹ್ವಾನ

0

Department of Information and Public Relations ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಜಿಲ್ಲೆಯಲ್ಲಿ ಅಳವಡಿಸಲಾದ ಹೆದ್ದಾರಿ ಫಲಕಗಳ ಪೈಕಿ ಶಿಥಿಲಗೊಂಡ ನಾಲ್ಕು ಹೆದ್ದಾರಿ ಫಲಕಗಳ ವಿಲೇವಾರಿಗೆ ಅರ್ಹ ಬಿಡ್‌ದಾರರಿಂದ ದರಪಟ್ಟಿ ಆಹ್ವಾನಿಸಲಾಗಿದೆ.

ಶಿವಮೊಗ್ಗ ತಾಲೂಕಿನ ಹೊಳಲೂರು, ಆಯನೂರು ಮತ್ತು ಶಿವಮೊಗ್ಗ ನಗರದ ವಾರ್ತಾ ಇಲಾಖೆ ಆವರಣ ಹಾಗೂ ಸಾಗರ ತಾಲೂಕಿನ ತಾಳಗುಪ್ಪ ಗ್ರಾಮದಲ್ಲಿ ಅಳವಡಿಸಲಾದ 10x 20 ಅಳತೆಯ ಹೆದ್ದಾರಿ ಫಲಕಗಳನ್ನು ಇರುವ ಸ್ಥಳಗಳಲ್ಲೇ ಹರಾಜು ಮಾಡಲಾಗುವುದು.

Department of Information and Public Relations ಆಸಕ್ತ ಬಿಡ್‌ದಾರರು ಮುಚ್ಚಿದ ಲಕೋಟೆಯಲ್ಲಿ ದರಪಟ್ಟಿಯನ್ನು ದಿ:03/08/2024 ರೊಳಗಾಗಿ ಹಿರಿಯ ಸಹಾಯಕ ನಿರ್ದೇಶಕರ ಕಚೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸರ್. ಎಂ.ವಿ. ರಸ್ತೆ, ಶಿವಮೊಗ್ಗ ಈ ವಿಳಾಸಕ್ಕೆ ಸಲ್ಲಿಸುವಂತೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಮೊ.ಸಂ.: 8496872447 ನ್ನು ಸಂಪರ್ಕಿಸುವುದು.

BJP Karnataka ವಿರೋಧ ಪಕ್ಷವಾಗಿ ಬಿಜೆಪಿ ವಿಫಲ ಸ್ವಪಕ್ಷದ ಬಗ್ಗೆ ನಾಯಕ‌ ಲಿಂಬಾವಳಿ ಟೀಕೆ

0

BJP Karnataka ವಿಧಾನಸಭೆಯಲ್ಲಿ ವಿರೋಧ ಪಕ್ಷವಾಗಿ ಬಿಜೆಪಿ ಆಡಳಿತ ಪಕ್ಷವನ್ನು ಎದುರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಸಚಿವ, ಬಿಜೆಪಿಯ ಹಿರಿಯ ನಾಯಕ ಅರವಿಂದ ಲಿಂಬಾವಳಿ ಕಿಡಿಕಾರಿದ್ದಾರೆ.

ವಿಧಾನ ಮಂಡಲದ ಮುಂಗಾರು ಅಧಿವೇಶನ ಮುಕ್ತಾಯಗೊಂಡ ಬೆನ್ನಲ್ಲೇ ಎಕ್ಸ್‌ನಲ್ಲಿ ಸುದೀರ್ಘ ಬರಹ ಬರೆದು ಅಸಮಾಧ ಹೊರಹಾಕಿರುವ ಲಿಂಬಾವಳಿ ಆಡಳಿತ ಪಕ್ಷದ ಜೊತೆ ಬಿಜೆಪಿ ನಾಯಕರು ಕೈ ಜೋಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.

BJP Karnataka “ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನ ಮುಕ್ತಾಯವಾಗಿದೆ. ರಾಜ್ಯ ಸರ್ಕಾರದ ವೈಫಲ್ಯಗಳನ್ನು ಎತ್ತಿ ಹಿಡಿದು ಜನರ ಧ್ವನಿಯಾಗಬೇಕಿದ್ದ ಬಿಜೆಪಿ ವಿರೋಧ ಪಕ್ಷವಾಗಿ ಅದನ್ನು ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಸದನದಲ್ಲಿ ಸರ್ಕಾರದ ಅವ್ಯವಹಾರ, ದುರಾಡಳಿತ, ವೈಫಲ್ಯಗಳನ್ನು ಎತ್ತಿ ಹಿಡಿಯಲು ಅವಕಾಶವಿದ್ದರೂ ನಮ್ಮ ನಾಯಕರು ಈ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ” ಎಂದು ಲಿಂಬಾವಳಿ ಹೇಳಿದ್ದಾರೆ.

Udupi Police 34 ವರ್ಷದಷ್ಟು ಹಳೇಯ ಕೇಸಿನ ಸಂಬಂಧ ಈಗ ಹೊಳೆಹೊನ್ನೂರು ಸನಿಹ ಸೆರೆಸಿಕ್ಕ ಆರೋಪಿ

0

Udupi Police ಉಡುಪಿ ಪೊಲೀಸರು 34 ವರ್ಷದ ಹಿಂದಿನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಇದೀಗ ಶಿವಮೊಗ್ಗದ ಹೊಳೆಹೊನ್ನೂರು ಮೂಲದ ಆರೋಪಿಯೊಬ್ಬನನ್ನ ಬಂಧಿಸಿದ್ದಾರೆ.

ಉಡುಪಿ ಪೊಲೀಸ್‌ ಉಡುಪಿ ನಗರ ಪೊಲೀಸರ ಕಾರ್ಯಾಚರಣೆ ಇದೀಗ ಕುತೂಹಲ ಮೂಡಿಸುತ್ತಿದೆ. ಮೊನ್ನೆ ಹೊಳೆಹೊನ್ನೂರು ಮೂಲದ ಚಿನ್ನುವಾಡು ಎಂಬ 55 ವರ್ಷದ ವ್ಯಕ್ತಿಯನ್ನ ಉಡುಪಿ ನಗರ ಪೊಲೀಸರು ಬಂಧಿಸಿದ್ದರು. ಶ್ರೀಗಂಧ ಕಳ್ಳತನ ಪ್ರಕರಣ
Udupi Police ಬಂಧಿತ ಆರೋಪಿ 1990 ರಲ್ಲಿ ಉಡುಪಿ ನಗರ ಪೊಲೀಸ್‌ ಠಾಣೆ ಲಿಮಿಟ್ಸ್‌ನಲ್ಲಿ ಶ್ರೀಗಂಧ ಕಳ್ಳತನ ನಡೆಸಿದ್ದ ಎಂದು ಆರೋಪಿಸಲಾಗಿದೆ. ಈ ಸಂಬಂಧ ಕೇಸ್ ದಾಖಲಾಗಿ ಇದೀಗ 34 ವರ್ಷಗಳೇ ಕಳೆದಿದೆ. ಇದೀಗ ಪ್ರಕರಣದ ಆರೋಪಿಯನ್ನ ಹೊಳೆಹೊನ್ನೂರು ಸಮೀಪದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಸದ್ಯ ಆರೋಪಿಯನ್ನ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Tunga River ಅಪಾಯದ ಮಟ್ಟದಲ್ಲಿ ಹರಿತುತ್ತಿರುವ ತುಂಗಾನದಿ. ತಗ್ಗು ಪ್ರದೇಶಗಳಿಗೆ ಜಲಾವೃತದ ಭೀತಿ

0

Tunga River ಶನಿವಾರ ಬೆಳಿಗ್ಗೆಯ ಮಾಹಿತಿಯಂತೆ, ತುಂಗಾ ಜಲಾಶಯದ ಒಳಹರಿವು 75,177 ಕ್ಯೂಸೆಕ್ ಇದೆ. ಈಗಾಗಲೇ ಡ್ಯಾಂ ಗರಿಷ್ಠ ಮಟ್ಟ ತಲುಪಿರುವುದರಿಂದ 70,444 ಕ್ಯೂಸೆಕ್ ನೀರನ್ನು ಹೊಸಪೇಟೆ ತುಂಗಭದ್ರಾ ಜಲಾಶಯಕ್ಕೆ ಹೊರ ಬಿಡಲಾಗುತ್ತಿದೆ.

ಕಳೆದ ತಿಂಗಳೇ ತುಂಗಾ ಜಲಾಶಯ ಗರಿಷ್ಠ ಮಟ್ಟವಾದ 588. 24 ಅಡಿ ತಲುಪಿದೆ. ಕಳೆದ ಕೆಲ ದಿನಗಳ ಹಿಂದೆ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದ, ಒಳಹರಿವಿನ ಪ್ರಮಾಣದಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡುಬಂದಿತ್ತು.

ಇದೀಗ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಡ್ಯಾಂಗೆ ಹರಿದುಬರುತ್ತಿರುವ ನೀರಿನ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ.

Tunga River ಡ್ಯಾಂನಿಂದ ಹೊರ ಬಿಡುತ್ತಿರುವ ನೀರಿನ ಪ್ರಮಾಣದಲ್ಲಿ ಹೆಚ್ಚಳವಾಗಿರುವುದರಿಂದ, ಶಿವಮೊಗ್ಗ ನಗರದ ಮೂಲಕ ಹಾದು ಹೋಗಿರುವ ತುಂಗಾ ನದಿಯು ಮತ್ತೆ ಅಪಾಯದ ಮಟ್ಟದಲ್ಲಿ ಹರಿಯಲಾರಂಭಿಸಿದೆ.

ಪ್ರವಾಹದ ಮಟ್ಟ ತೋರ್ಪಡಿಸುವ ನಗರದ ಕೋರ್ಪಳಯ್ಯನ ಛತ್ರದ ಬಳಿಯ ತುಂಗಾ ನದಿಯಲ್ಲಿರುವ ಮಂಟಪದ ಮೇಲೆ ನೀರು ಹರಿಯಲಾರಂಭಿಸಿದೆ. ಡ್ಯಾಂನಿಂದ ಹೊರಬಿಡುವ ನೀರಿನ ಪ್ರಮಾಣ 80 ಸಾವಿರ ಕ್ಯೂಸೆಕ್ ದಾಟಿದರೆ, ಶಿವಮೊಗ್ಗ ನಗರದ ನದಿಪಾತ್ರದ ತಗ್ಗು ಪ್ರದೇಶಗಳು ಜಲಾವೃತವಾಗುವ ಭೀತಿ ಎದುರಾಗಿದೆ.

Tunga River ತೀರ್ಥಹಳ್ಳಿಯಲ್ಲಿ ರಸ್ತೆ ಮೇಲೆ ಹರಿದ ತುಂಗಾನದಿ!

0

Tunga River ಶಿವಮೊಗ್ಗದಲ್ಲಿ ಮಳೆಯ ಆರ್ಭಟ ಕಡಿಮೆಯಾಗಿದೆ. ಆದರೆ ತುಂಗ ನದಿಗೆ 85 ಸಾವಿರ ಕ್ಯೂ ಸೆಕ್ ನೀರು ಹರಿದು ಬರುತ್ತಿದ್ದು ನ್ಯೂ ಮಂಡಳಿಯ ಬಳಿ ತೀರ್ಥಹಳ್ಳಿ ರಸ್ತೆಯ ಮೇಲೆ ನದಿ ನೀರು ಹರಿದಿದೆ.
ಶಿವಮೊಗ್ಗದಲ್ಲಿ ಪುಷ್ಯ ಮಳೆ ಆಗಾಗ ಸುರಿಯುತ್ತಿದೆ.

ಶುಕ್ರವಾರದ ಮಳೆಗೆ ಶನಿವಾರ ವಿಶ್ರಾಂತಿ ಪಡೆದಿದೆ. ಆದರೆ ತುಂಗ ನದಿಗೆ ಜಲಾನಯನ ಪ್ರದೇಶಗಳಲ್ಲಿ ಕಳೆದ 24 ಗಂಟೆಗಳಲ್ಲಿ ಉತ್ತಮ ಮಳೆಯಾಗಿದೆ.
ಜಲಾನಯನ ಪ್ರದೇಶಗಳಾದ ಶೃಂಗೇರಿಯಲ್ಲಿ 164 ಮಿಮಿ, ಕಿಗ್ಗದಲ್ಲಿ 220 ಮಿಮಿ, ಹರಿಹರಪುರ 118 ಮಿಮಿ, ತೀರ್ಥಹಳ್ಳಿಯಲ್ಲಿ‌ 120 ಮಿಮಿ, ಕೊಪ್ಪ 97 ಮಿಮಿ ಮಳೆಯಾಗಿದೆ. ಇದರ ಪತಿಣಾಮವಾಗಿ ಶಿವಮೊಗ್ಗದಲ್ಲಿ ತುಂಗೆಗೆ 85 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ.

Tunga River ಇದರಿಂದ ಸಂದಿಗಳಲ್ಲಿ ನದಿಯ ನೀರು ನುಗ್ಗುತ್ತಿದೆ. ಹಳೇ ಮಂಡ್ಲಿಯಲ್ಲಿ ನೀರು ತೀರ್ಥಹಳ್ಳಿ ರಸ್ತೆ ಮೇಲೆ ಹರಿದಿದೆ. ಲಕ್ಷ್ಮೀ ಪುರದಲ್ಲಿ ಅಡಿಕೆ ತೋಟಗಳಿಗೆ ನೀರು ನುಗ್ಗಿದೆ.

Akhilesh Yadav ಎಸ್ ಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಅಗ್ನಿವೀರ್ ಯೋಜನೆ ರದ್ದು -ಎಸ್ ಪಿ. ಅಧ್ಯಕ್ಷ ಅಖಿಲೇಶ್ ಯಾದವ್

0

Akhilesh Yadav “ನಾವು ಅಧಿಕಾರಕ್ಕೆ ಬಂದ ತಕ್ಷಣ ಅಗ್ನಿವೀರ್ ಯೋಜನೆಯನ್ನು ರದ್ದುಗೊಳಿಸುತ್ತೇವೆ” ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಶನಿವಾರ ಹೇಳಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿವೃತ್ತ ಅಗ್ನಿವೀರರಿಗೆ ಮೀಸಲಾತಿ ಘೋಷಿಸಿದ ಒಂದು ದಿನದ ನಂತರ ಅಖಿಲೇಶ್ ಯಾದವ್ ಹೇಳಿಕೆ ನೀಡಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅಖಿಲೇಶ್ ಯಾದವ್, “ನಾವು ಅಧಿಕಾರಕ್ಕೆ ಬಂದ ತಕ್ಷಣ, ದೇಶದ ಭದ್ರತೆಗೆ ರಾಜಿ ಮಾಡಿಕೊಳ್ಳುವ ಮತ್ತು ಸೈನಿಕರ ಭವಿಷ್ಯದ ಜೊತೆ ಆಟವಾಡುವ ಅಲ್ಪಾವಧಿಯ ‘ಅಗ್ನಿವೀರ್’ ಸೇನಾ ನೇಮಕಾತಿಯನ್ನು 24 ಗಂಟೆಗಳಲ್ಲಿ ರದ್ದುಗೊಳಿಸಲಾಗುವುದು” ಎಂದು ತಿಳಿಸಿದ್ದಾರೆ.
“ಅಗ್ನಿವೀರ್‌ನಲ್ಲಿ ಇದು ನಮ್ಮ ಬೇಡಿಕೆಯಾಗಿದೆ.

Akhilesh Yadav ಹಳೆಯ ನೇಮಕಾತಿ (ಮಾದರಿ) ಅನ್ನು ಮರುಸ್ಥಾಪಿಸಬೇಕು” ಎಂದು ಹಿಂದಿಯಲ್ಲಿ ಬರೆದುಕೊಂಡಿದ್ದಾರೆ.
ಪೊಲೀಸ್ ಮತ್ತು ಪ್ರಾಂತೀಯ ಸಶಸ್ತ್ರ ಕಾನ್‌ಸ್ಟಾಬ್ಯುಲರಿ (ಪಿಎಸಿ) ನೇಮಕಾತಿಯಲ್ಲಿ ಸೇವೆಯಿಂದ ಹಿಂದಿರುಗಿದ ಅಗ್ನಿವೀರರಿಗೆ ಉತ್ತರ ಪ್ರದೇಶ ಸರ್ಕಾರವು ನೇಮಕಾತಿ ನೀಡಲಿದೆ ಎಂದು ಸಿಎಂ ಆದಿತ್ಯನಾಥ್ ಹೇಳಿದ್ದಾರೆ.