Tuesday, March 31, 2026
Tuesday, March 31, 2026
Home Blog Page 587

Department of Youth Empowerment and Sports ತರಬೇತಿ ದಾರರಿಗೆ ನೀಡಲಾಗುವ ಕ್ರೀಡಾರತ್ನ ಪ್ರಶಸ್ತಿಗೆ ಅರ್ಜಿ ಆಹ್ವಾನ

0

Department of Youth Empowerment and Sports ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 2023ನೇ ಸಾಲಿನಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಕ್ರೀಡಾಪಟುಗಳು ಅಸಾಧಾರಣ ಪ್ರತಿಭೆಯನ್ನು ತೋರುವಲ್ಲಿ ತರಬೇತುಗೊಳಿಸಿರುವ ರಾಜ್ಯದ ತರಬೇತುದಾರರುಗಳಿಗೆ ನೀಡುವ ಜೀವಮಾನ ಸಾಧನೆ ಪ್ರಶಸ್ತಿ ಹಾಗೂ ಗ್ರಾಮೀಣ ಪ್ರತಿಭೆಗಳಿಗೆ ನೀಡುವ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಗಾಗಿ ಆಸಕ್ತರಿಂದ ಆನ್‌ಲೈನ್ ಅರ್ಜಿ ಅಹ್ವಾನಿಸಿದೆ.

Department of Youth Empowerment and Sports ಆಸಕ್ತರು ಸೇವಾಸಿಂದು http://sevasindhuservices.karnataka.gov.in ಪೋರ್ಟಲ್ ಮೂಲಕ ಸೆ. 20 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಕ್ರೀಡಾಂಗಣ ಇವರನ್ನು ಸಂಪರ್ಕಿಸಬಹುದು.
ಮೊಬೈಲ್ ಸಂಖ್ಯೆ: 9480841222

Nagabhushana shivacharya swamiji ಅವಿಭಕ್ತ ಕುಟುಂಬಕ್ಕಾಗಿ ಶ್ರಮಿಸಿದ ದಾಂಪತ್ಯ ಜೀವನ ಎಲ್ಲರಿಗೂ ಮಾದರಿ- ಶ್ರೀಗುರು ನಾಗಭೂಷಣ ಶಿವಾಚಾರ್ಯಶ್ರೀ

0

Nagabhushana shivacharya swamiji ದಾಂಪತ್ಯದಲ್ಲಿ ಹೊಂದಾಣಿಕೆಯಿಂದ ಜೀವನ ನಡೆಸುವುದು ಅತ್ಯಂತ ಅವಶ್ಯಕ. ಉತ್ತಮ ಹೊಂದಾಣಿಕೆಯಿಂದ ಸುದೀರ್ಘ ದಾಂಪತ್ಯ ಜೀವನ ಸಾಧ್ಯ ಎಂದು ಮಳಲಿ ಮಠದ ಶ್ರೀ ಗುರು ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ರಿಪ್ಪನ್ಪೇಟೆ ಸಮೀಪದ ದೂನ ಗ್ರಾಮದಲ್ಲಿ ಆಯೋಜಿಸಿದ್ದ ಚನ್ನವೀರಪ್ಪ ಗೌಡ್ರು ಹಾಗೂ ವಿಶಾಲಕ್ಷಮ್ಮ ದಂಪತಿಯ 60ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸ್ವಾರ್ಥವೇ ಎಲ್ಲೆಡೆ ಕಾಣುತ್ತೇವೆ. ಅವಿಭಕ್ತ ಕುಟುಂಬಕ್ಕಾಗಿ ಶ್ರಮಿಸಿ ಹೊಂದಾಣಿಕೆಯ ದಾಂಪತ್ಯ ಜೀವನ ನಡೆಸುವುದು ಎಲ್ಲರಿಗೂ ಮಾದರಿ ಎಂದು ತಿಳಿಸಿದರು.
ಸಮಾಜದ ಪ್ರತಿಯೊಬ್ಬರು ಉತ್ತಮ ಜೀವನಶೈಲಿ ರೂಪಿಸಿಕೊಳ್ಳಲು ಗುರುಹಿರಿಯರ ಮಾರ್ಗದರ್ಶನ ಪಡೆಯಬೇಕು. ಒಳ್ಳೆಯ ಆಲೋಚನೆಗಳು ಹಾಗು ಮತ್ತೊಬ್ಬರಿಕೆ ಉಪಕಾರ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಮಕ್ಕಳಿಗೆ ಮನೆಗಳಲ್ಲಿ ಪಾಲಕರು ಸಂಸ್ಕಾರ ಮನೋಭಾವ ಬೆಳೆಸಬೇಕು ಎಂದು ಸಲಹೆ ನೀಡಿದರು.
Nagabhushana shivacharya swamiji ಪ್ರಗತಿಪರ ರೈತ ಚನ್ನವೀರಪ್ಪ ಗೌಡ್ರು, ಸಹೋದರರಾದ ಶಿವನಂದಪ್ಪ ಗೌಡ್ರು ಮತ್ತು ಗಂಗಾಧರಪ್ಪ ಗೌಡ್ರು ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿ ಕಷ್ಟಪಟ್ಟು ಬೆಳೆದಿದ್ದಾರೆ ಎಂದರು.
ವಕೀಲ ದಿನೇಶ್ ಮಣಿಕೆರೆ, ಗಂಗಾಧರಪ್ಪ ಕಳಸೆ, ಮಧುಸೂದನ್ ಡಿ.ಯು, ಸುಗಂಧರಾಜ ಇತರರು ಮಾತನಾಡಿದರು. ಅಶ್ವಿನಿ ವಿನಾಯಕ್ ಕಾರ್ಯಕ್ರಮದ ನಿರೂಪಣೆ ಮಾಡಿದರು. ಯುಕ್ತ ಸ್ವಾಗತಿಸಿದರು. ರೂಪಾ ವಂದನಾರ್ಪಣೆ ಮಾಡಿದರು. ಉಮೇಶ್, ಭಾಗ್ಯಾ, ಯಶ್ವಿನ್ ಇತರರು ಹಾಜರಿದ್ದರು.

Kim Star Udupi ಸಮಾಜ ಸೇವಕ ಶಿವಮೊಗ್ಗದ ಜಿ ವಿಜಯಕುಮಾರ್ ಗೆ ರಾಜರತ್ನ ಪ್ರಶಸ್ತಿ ಪ್ರದಾನ

0

Kim Star Udupi ಕಿಮ್‌ಸ್ಟಾರ್ ಉಡುಪಿ ವತಿಯಿಂದ ಬೆಂಗಳೂರು ವಿಶ್ವವಿದ್ಯಾಲಯದ ಪ್ರೊ. ಕೆ.ವೆಂಕಟಗಿರಿಗೌಡ ಸ್ಮಾರಕ ಸಭಾಂಗಣದಲ್ಲಿ ಬೆಂಗಳೂರು ಚಿತ್ರೋತ್ಸವ ಕಾರ್ಯಕ್ರಮದಲ್ಲಿ ಶಿವಮೊಗ್ಗದ ರೋಟರಿ ಜಿ.ವಿಜಯಕುಮಾರ್ ಅವರಿಗೆ “ಡಾ. ಪುನೀತ್ ರಾಜ್‌ಕುಮಾರ್ ರಾಜರತ್ನ ಸೇವಾ ಪ್ರಶಸ್ತಿ” ಪ್ರದಾನ ಮಾಡಲಾಯಿತು.
ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಅವರು ದಶಕಗಳಿಂದ ಸಮಾಜಮುಖಿ ಹಾಗೂ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಬಡವರಿಗೆ ಆರ್ಥಿಕ ಸಹಾಯ, ಕುಡಿಯುವ ನೀರಿನ ವ್ಯವಸ್ಥೆ, ಶಿಕ್ಷಣ, ಆರೋಗ್ಯ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
Kim Star Udupi ಸೈಕ್ಲಿಂಗ್‌ನಲ್ಲಿ ಗಿನ್ನೆಸ್ ಲಿಮ್ಕಾ ದಾಖಲೆ ಮಾಡಿದ್ದಾರೆ. 47 ಬಾರಿ ರಕ್ತದಾನ ಮಾಡಿದ್ದಾರೆ. ರೋಟರಿ ವಿಜಯ್‌ಕುಮಾರ್ ಅವರ ದಶಕಗಳ ಸಾಮಾಜಿಕ ಸೇವೆಯನ್ನು ಗುರುತಿಸಿ ಡಾ. ಪುನೀತ್‌ರಾಜ್ ಕುಮಾರ್ ರಾಜರತ್ನ ಸೇವಾ ಪ್ರಶಸ್ತಿ ನೀಡಲಾಯಿತು. ಪುನೀತ್‌ರಾಜ್ ಪುತ್ಥಳಿ, ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಲಾಯಿತು.
ಖ್ಯಾತ ಜನಪದ ಗಾಯಕ ಗುರುರಾಜ್ ಹೊಸಕೋಟಿ, ಚಲನಚಿತ್ರ ನಿರ್ದೇಶಕ ಲೋಹಿತ್ ರಾಣ, ಚಿತ್ರನಟಿ ರಕ್ಷಾ, ಕಿಮ್‌ಸ್ಟಾರ್ ಉಡುಪಿ ಸಂಸ್ಥೆ ಅಧ್ಯಕ್ಷ ಕೆ.ಜಯಶೀಲನ್, ಉಡುಪಿ ಕುಕ್ಕೇಹಳ್ಳಿಯ ಆದಿಶಕ್ತಿ ಮೂಕಾಂಬಿಕಾ ಶ್ರೀ ಕಾಗಜ್ಜ ದೇವಸ್ಥಾನದ ಧರ್ಮದರ್ಶಿ ಡಾ. ಕೃಷ್ಣ ಕುಲಾಲ್, ವಿದುಷಿ ಉಮಾ ದಿಲೀಪ್, ವಿದ್ಯಾ ಮಂಜುನಾಥ್, ಬಿಂದು ವಿಜಯಕುಮಾರ್ ಇತರರು ಉಪಸ್ಥಿತರಿದ್ದರು.
ವಿಜಯಕುಮಾರ್ ಅವರಿಗೆ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಪದಾಧಿಕಾರಿಗಳು, ಶಿವಗಂಗಾ ಯೋಗಕೇಂದ್ರ ಯೋಗಾಚಾರ್ಯ ಸಿ.ವಿ.ರುದ್ರಾರಾಧ್ಯ, ಎಸ್.ಎಸ್.ಜ್ಯೋತಿಪ್ರಕಾಶ್, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.

Delhi World School Shivamogga ಡೆಲ್ಲಿ ವರ್ಲ್ಡ್ ಸ್ಕೂಲ್‌ ಆಗಸ್ಟ್ 30 & 31ಡೆಲ್ಲಿ ವರ್ಡ್ ಸ್ಕೂಲ್ ನಲ್ಲಿ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ

0

Delhi World School Shivamogga ಆಗಸ್ಟ್ 30 ಹಾಗೂ 31 ರಂದು ನಗರದ ಸಾಗರ ರಸ್ತೆಯ ಮಲ್ಲಿಗೇನಹಳ್ಳಿಯಲ್ಲಿರುವ ಡೆಲ್ಲಿ ವರ್ಲ್ಡ್ ಸ್ಕೂಲ್‌ನಲ್ಲಿ ಅಂತರಾಷ್ಟ್ರೀಯ ಮಕ್ಕಳ ಚಲನ ಚಿತ್ರೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.
ಪ್ರೆಸ್ ಟ್ರಸ್ಟ್ ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರ ನೀಡಿದ ಶಾಲೆ ಪ್ರಾಚಾರ್ಯೆ ದಿವ್ಯಾ ಶೆಟ್ಟಿ,
ಮಕ್ಕಳ‌ಮೇಲೆ ಸಿನಿಮಾಗಳು ಬಹಳ ಪ್ರಭಾವ ಬೀರುತ್ತವೆ. ಅವುಗಳಲ್ಲಿನ‌ ಒಳ್ಳೆಯ ಸಂದೇಶದಿಂದ ಮಕ್ಕಳು ಚಿಂತನೆ ಬೆಳೆಸಿಕೊಳ್ಳುವಂತಾಗಬೇಕು, ಸಾಮಾಜಿಕ ಕಳಕಳಿ ಬೆಳೆಸಿಕೊಳ್ಳಬೇಕು, ಸತ್ಪ್ರಜೆಗಳಾಗಬೇಕೆಂಬ ಉದ್ದೇಶ ಇದರದ್ದಾಗಿದೆ ಎಂದರು.
ಸ್ಕೂಲ್ ಸಿನಿಮಾದ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾದ ಈ ಚಲನ ಚಿತ್ರೋತ್ಸವ 70ಕ್ಕೂ ಹೆಚ್ಚು ಸಣ್ಣ ಚಲನ ಚಿತ್ರವನ್ನು ಒಳಗೊಂಡಿದೆ. 15ಕ್ಕೂ ಅಧಿಕ ಭಾಷೆಯ ಚಿತ್ರವನ್ನೊಳಗೊಂಡು 20ಕ್ಕೂ ಹೆಚ್ಚು ರಾಷ್ಟ್ರಗಳ ಆಯ್ದ ಅತ್ಯುತ್ತಮ ಚಲನ ಚಿತ್ರವನ್ನು ನಗರದ ಎಲ್ಲ ಶಾಲೆಯ ವಿದ್ಯಾರ್ಥಿಗಳು ವೀಕ್ಷಿಸ ಬಹುದಾಗಿದೆ ಎಂದರು.
Delhi World School Shivamogga ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಮಕ್ಕಳ ಚಲನ ಚಿತ್ರವನ್ನು ವೀಕ್ಷಿಸುವ ಅವಕಾಶ ಬಹಳ ಕಡಿಮೆಯಿದ್ದು ಈ ನಿಟ್ಟಿನಲ್ಲಿ ಇಂತಹ ಮಕ್ಕಳ ಚಲನ ಚಿತ್ರೋತ್ಸವಗಳು ಮಕ್ಕಳಿಗೆ ಉತ್ತಮ ಸಂದೇಶವನ್ನು ನೀಡಲು ಸಹಕಾರಿಯಾಗಿದೆ ಎಂದರು.
ಮಕ್ಕಳಲ್ಲಿ ಸೃಜನ ಶೀಲತೆ, ವಿವಿಧತೆಯ ಮಹತ್ವ, ಸಾಮಾಜಿಕ ಸಮಸ್ಯೆ ಹಾಗೂ ಅದರ ಮೂಲ, ಅದನ್ನು ನಿರ್ಮೂಲನೆ ಮಾಡುವ ಬಗೆ, ಸಾಮಾಜಿಕ ಕಳಕಳಿಯನ್ನು ಹೆಚ್ಚಿಸುವ, ವಿವಿಧ ಭಾಷೆ, ಧರ್ಮ ಸಂಸ್ಕೃತಿಯನ್ನು ಗೌರವಿಸುವ, ಮನೋಭಾವನೆಯನ್ನು ಬೆಳೆಸುವ ನಿಟ್ಟಿನಲ್ಲಿ ಇಂತಹ ಚಲನ ಚಿತ್ರೋತ್ಸವ ವಿದ್ಯಾರ್ಥಿಗಳ ವಿಕಸನಕ್ಕೆ ಸಹಕಾರಿಯಾಗಲಿದೆ ಎಂದರು.
ಚಿತ್ರೋತ್ಸವದಲ್ಲಿ ಕನ್ನಡ ಭಾಷೆಯ ಚಿತ್ರ ಸಹ ಪ್ರದರ್ಶಿತವಾಗಲಿದೆ. ಪ್ರತಿ ಸಿನಿಮಾ ಒಂದು ಗಂಟೆಯ ಅವಧಿಯದ್ದಾಗಿದೆ. ಬೆಳಗ್ಗೆ 10 ಗಂಟೆಗೆ ಚಿತ್ರ ಪ್ರದರ್ಶನ ಆರಂಭವಾಗುವುದು ಎಂದರು.

Rotary Shivamogga ಮಕ್ಕಳಿಗೆ ವೃತ್ತಿಜೀವನಕ್ಕೆ‌‌ ಅವಶ್ಯವಿರುವ ಕೌಶಲ್ಯಗಳನ್ನ ಹಂತಹಂತವಾಗಿ ಕಲಿಸಿ-ಎಚ್.ಮಾಣೇಶ್ವರ್ ಶೇಠ್

0

Rotary Shivamogga ಮಕ್ಕಳಿಗೆ ವಿದ್ಯಾಭ್ಯಾಸದ ಜತೆ ಸಂಸ್ಕಾರ ಹಾಗೂ ಉತ್ತಮ ಜೀವನ ರೂಪಿಸಿಕೊಳ್ಳಲು ಅವಶ್ಯವಿರುವ ಮೌಲ್ಯಗಳನ್ನು ಕಲಿಸಬೇಕು ಎಂದು ಗಾಯತ್ರಿ ವಿದ್ಯಾಲಯದ ಅಧ್ಯಕ್ಷ ಎಚ್.ಮಾಣೇಶ್ವರ್ ಶೇಠ್ ಹೇಳಿದರು.

ಶಿವಮೊಗ್ಗ ನಗರದ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯಿಂದ ಹಮ್ಮಿಕೊಳ್ಳಲಾದ ಪ್ರತಿಭಾ ಪುರಸ್ಕಾರ ಹಾಗೂ ಇಂಟರ‍್ಯಾಕ್ಟ್ ಕ್ಲಬ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಿಗೆ ವೃತ್ತಿ ಜೀವನಕ್ಕೆ ಅವಶ್ಯವಿರುವ ಕೌಶಲ್ಯಗಳನ್ನು ಹಂತ ಹಂತವಾಗಿ ಕಲಿಸಬೇಕು. ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳಲ್ಲೂ ಮಕ್ಕಳು ಹೆಚ್ಚು ತೊಡಗಿಸಿಕೊಳ್ಳಬೇಕು. ಆಗ ಪರಿಪೂರ್ಣ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ರೋಟರಿ ಮಾಜಿ ಸಹಾಯಕ ಗವರ್ನರ್ ಚಂದ್ರಹಾಸ ಪಿ.ರಾಯ್ಕರ್ ಅವರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಅಭಿನಂದಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಅರುಣ್ ದೀಕ್ಷಿತ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸಿಕೊಳ್ಳುವ ದೃಷ್ಟಿಯಿಂದ ಇಂಟರ‍್ಯಾಕ್ಟ್ ಕ್ಲಬ್ ಸಹಕಾರಿಯಾಗುತ್ತದೆ. ಮನೆ ಹಾಗೂ ಶಾಲೆಯಲ್ಲಿ ಮಕ್ಕಳಿಗೆ ಅಗತ್ಯ ಮಾರ್ಗದರ್ಶನ ನೀಡುವ ಕೆಲಸ ಆಗಬೇಕು ಎಂದು ಹೇಳಿದರು.

ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಮಾತನಾಡಿ, ಇಂಟರ‍್ಯಾಕ್ಟ್ ಕ್ಲಬ್ ಮೂಲಕ ಮಕ್ಕಳಿಗೆ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸುವುದು ವಿಷಯ ಕುರಿತು ತರಬೇತಿ ಶಿಬಿರ ನಡೆಸಲಾಗುವುದು. ಉಚಿತ ಆರೋಗ್ಯ ತಪಾಸಣೆ ಹಾಗೂ ಪ್ರಬಂಧ ಸ್ಪರ್ಧೆ ವೈವಿಧ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

Rotary Shivamogga ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಶಶಿಕಾಂತ್ ನಾಡಿಗ್ ಮಾತನಾಡಿ, ವಿದ್ಯಾರ್ಥಿಗಳು ಭವಿಷ್ಯದ ಸದೃಢ ಪ್ರಜೆಗಳಾಗಬೇಕು. ಶಿಕ್ಷಣದ ಜತೆ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸೇವಾ ಕಾರ್ಯಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇಂಟರ‍್ಯಾಕ್ಟ್ ಕ್ಲಬ್ ಚೇರ್ಮನ್ ಶೇಷಗಿರಿ ಮಾತನಾಡಿ, ಇಂಟರ‍್ಯಾಕ್ಟ್ ನಲ್ಲಿ ಮಕ್ಕಳು ತೊಡಗಿಸಿಕೊಳ್ಳುವಿಕೆ ಕುರಿತು ವಿವರಿಸಿದರು. ನೂತನ ಇಂಟರ‍್ಯಾಕ್ಟ್ ಕ್ಲಬ್ ಅಧ್ಯಕ್ಷರಾಗಿ ಮನೀಶಾ, ಕಾರ್ಯದರ್ಶಿ ಧನುಷ್ ತಂಡದವರು ಅಧಿಕಾರ ವಹಿಸಿಕೊಂಡರು. ಗಾಯತ್ರಿ ವಿದ್ಯಾಲಯದ ಉಪಾಧ್ಯಕ್ಷ ಗೋಪಾಲ್ ಎನ್.ಶೇಠ್, ಕಾರ್ಯದರ್ಶಿ ಗಣಪತಿ ಶೇಠ್ ಉಪಸ್ಥಿತರಿದ್ದರು.

Shimoga Youth Empowerment and Sports Department ಏಕಲವ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ

0


Shimoga Youth Empowerment and Sports Department ಶಿವಮೊಗ್ಗ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಕ್ರೀಡಾ ಪಟುಗಳಿಗೆ ಏಕಲವ್ಯ ಪ್ರಶಸ್ತಿ ಮತ್ತು ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿ ನೀಡಲು ಅರ್ಹ ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನಿಸಿದೆ.
Shimoga Youth Empowerment and Sports Department ಆಸಕ್ತ ಕ್ರೀಡಾಪಟುಗಳು ನಿಗಧಿತ ನಮೂನೆ ಅರ್ಜಿಯನ್ನು ನಗರದ ನೆಹರೂ ಕ್ರೀಡಾಂಗಣದಲ್ಲಿರುವ ಇಲಾಖಾ ಕಚೇರಿಯಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ಸೆ. 15 ರೊಳಗಾಗಿ ಸಲ್ಲಿಸುವಂತೆ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08182-223328ನ್ನು ಸಂಪರ್ಕಿಸಬಹುದಾಗಿದೆ.

Klive Special Article “ಕಾಡುವ ಹುಡುಗನ ಹಾಡು”ಪ್ರೇಮಿಯ ಪ್ರಾಮಾಣಿಕ ಕನವರಿಕೆಗಳು- ಸಂತೋಷ್ ಕುಮಾರ್”

0

Klive Special Article ಪುಸ್ತಕ ಪರಿಚಯ: ಕಾಡುವ ಹುಡುಗನ ಹಾಡು

“ಇದು ನಿಚ್ಚಂ ಪೊಸತು ಅರ್ಣವಂಬೋಲ್ ಅತಿಗಂಭೀರಂ ಕವಿತ್ವಂ” ಎಂಬುದು ಮಹಾಕವಿ ಪಂಪನ ಕಾವ್ಯೋಕ್ತಿ. ಪಂಪನು ಕಾವ್ಯವನ್ನು ಕುರಿತು ಈ ಮಾತು ಹೇಳಿದ್ದಾದರೂ,ವಿಶೇಷವಾಗಿ “ಪ್ರೇಮಕಾವ್ಯ”ಕ್ಕೇ ಈ ಮಾತನ್ನು ಅನ್ವಯಿಸಿದಾಗ ಆ ಮಾತಿನ ಸಾರ್ಥಕತೆ ಹೆಚ್ಚು ಎಂದು ನನಗನ್ನಿಸುತ್ತದೆ. ಏಕೆಂದರೆ ಪ್ರೇಮವೂ ಕೂಡ ಸಮುದ್ರದಂತೆ ಅತೀ ಗಂಭೀರವೂ,ನಿತ್ಯ ಹೊಸತನದಿಂದ ಕೂಡಿರುವುದು ಆಗಿದೆ.ಪ್ರೇಮಸಾಗರ, ಪ್ರೇಮಸಮುದ್ರ ಎಂದು ಮುಂತಾಗಿ ನಾವು ಆಗಾಗ ಬಳಸುತ್ತಲೇ ಇರುತ್ತೇವೆ.ಇಂತಹ ಸಮುದ್ರದಂತಹ ಪ್ರೇಮವನ್ನು, ಅವ್ಯಕ್ತವಾಗಿಯೂ, ಅಮೂರ್ತವಾಗಿಯೂ ಇರುವಂತಹ ಪ್ರೇಮವನ್ನು,ಇದನ್ನು ಹೀಗೆ ವ್ಯಕ್ತಪಡಿಸಬೇಕು ಎಂದು ಯಾರೂ ತಿಳಿಸಲಾರದಂತಹ, ಹೇಳಿಕೊಡಲಾಗದಂತಹ ಪ್ರೇಮವನ್ನು,ಅಕ್ಷರಗಳಲ್ಲಿ ಪದಪುಂಜಗಳಲ್ಲಿ ಕಟ್ಟಿಕೊಡುವುದು ಅತೀ ಕಷ್ಟದ ಕೆಲಸವೇ ಸರಿ. ಜೊತೆಗೆ ಪ್ರೇಮವನ್ನು ಕುರಿತೇ ಅಸಂಖ್ಯ ಕತೆ, ಕಾದಂಬರಿ,ಭಾವಗೀತೆಗಳು, ನಾಟಕಗಳು ಈಗಾಗಲೇ ನಮ್ಮ ಮುಂದಿರುವಾಗ ಅದೇ ವಿಷಯವನ್ನು ಕುರಿತು ಹೊಸದನ್ನು ಹೇಳುವುದು ಹೇಗೆ ಎಂಬುದು ಮತ್ತೊಂದು ಸವಾಲಿನ ಕೆಲಸ. ಏಕೆಂದರೆ ನಾನು ಮೊದಲೇ ಹೇಳಿದಂತೆ ಸಮುದ್ರದಂತೆ ನಿತ್ಯವೂ ಹೊಸತನದಿಂದ ಕೂಡಿರುವ ಪ್ರೇಮವನ್ನು ಹೊಸತಾಗಿ ಕಂಡರಿಸುವ ಈ ಸೃಜನಶೀಲ ಪ್ರಕ್ರಿಯೆಯೇ ಕ್ಲಿಷ್ಟಕರವಾದ್ದು. ಈ ಹಿನ್ನೆಲೆ ಇಟ್ಟುಕೊಂಡು ಕು.ಅಂಜುಮ್ ಅವರ ಹನಿಗವನಗಳನ್ನು ಅವಲೋಕಿಸಿದಾಗ ನನಗನ್ನಿಸಿದ ಮೊದಲ ಸಂಗತಿ,ಅವರು ತಾವೇನೋ ಹೊಸದನ್ನು ಹೇಳುವ ಭ್ರಮೆಗೆ ಬೀಳದೆ ಅಥವಾ ಇದುವರೆಗೂ ಯಾರೂ ಕಂಡರಿಸದ ಪ್ರೇಮದ ಭಿನ್ನ ಮುಖಗಳನ್ನು ಪರಿಚಯಿಸುತ್ತಿದ್ದೇನೆಂಬ ಹಠಕ್ಕೆ ಬೀಳದೆ, ತಮಗೆ ಅನ್ನಿಸಿದ ಮನೋಸಹಜ ಭಾವನೆಗಳನ್ನು ತಮ್ಮ ಓದಿನ ಅಥವಾ ಅನುಭವದ ವ್ಯಾಪ್ತಿಯಲ್ಲಿ ಎರಕಹೊಯ್ದು ನಮ್ಮ ಮುಂದೆ ಇಟ್ಟಿದ್ದಾರೆ.ಇಲ್ಲಿರುವ ಪದ್ಯಗಳು ಒಮ್ಮೊಮ್ಮೆ ಭಾವಗೀತೆಗಳಂತೆ,ಒಮ್ಮೊಮ್ಮೆ ಗಜಲ್ ಗಳಂತೆ,ಮತ್ತೊಮ್ಮೆ ಹನಿಗವಿತೆಯಂತೆ ಮನಸ್ಸಿಗೆ ಭಾಸವಾಗಿ ಕಡೆಗೆ ಕಾವ್ಯದ ಯಾವ ಬಂಧವೋ ಅನ್ನುವ ವಿಷಯವನ್ನೇ ಮರೆಸುವಷ್ಟು ಅವುಗಳಲ್ಲಿನ “ಪ್ರೇಮ ಭಾವ” ನಮ್ಮನ್ನು ಆವರಿಸುತ್ತದೆ.

Klive Special Article ತನ್ಮೂಲಕ ಅಂಜುಮ್ ಅವರ ಈ ಮನದ ಮಾತುಗಳು ನಮ್ಮ ಮನ ಸೆಳೆಯುವಲ್ಲಿ ಸಾರ್ಥಕವಾಗಿವೆ ಎನ್ನಬಹುದು.
ಉದಾಹರಣೆಗೆ ಗಮನಿಸುವುದಾದರೆ,”ಕೆಲವೊಮ್ಮೆ ಅರ್ಥವಾಗದೆ ಹೋದರೂ ಮನಸ್ಸಿಗೆ ಇಷ್ಟವಾಗುವ ಸಂಗೀತದಂತೆ ನೀನು” ಎಂಬಂತಹ ಸಾಲು..ಇಲ್ಲಿ ಪ್ರೇಮದ ಅಮೂರ್ತತೆಯನ್ನು ಸರಳವಾಗಿ ಹೇಳುವ ಪ್ರಯತ್ನ ಕಾಣಬಹುದು..”ನೀ ಜೊತೆಗಿದ್ದರೆ ಮಳೆ ಇನ್ನೇನೋ,ನೀ ಇಲ್ಲದಿದ್ದರೆ ಮಳೆ ಕೇವಲ ನೀರಷ್ಟೆ”…”ನೀ ಜೊತೆಗಿದ್ದರೆ ಆಟೋನೂ ಮರ್ಸಿಡಿಸ್ ಅನಿಸುವಷ್ಟು” ಎಂಬಂತಹ ಮಾತುಗಳಲ್ಲಿ ಹೊಸತನವನ್ನು ಕಾಣಬಹುದು..
ಒಟ್ಟಾರೆಯಾಗಿ ಅಂಜುಮ್ ಅವರ “ಕಾಡುವ ಹುಡುಗನ ಹಾಡು” ನಮ್ಮನ್ನು ಕಾಡುವಂತಹ,ಹೆಣ್ಣೊಬ್ಬಳು ತನ್ನ ಪ್ರಿಯತಮನ ನೆನಹಿನಲ್ಲಿ, ಹೃತ್ಪೂರ್ವಕವಾಗಿ,ಪ್ರಾಮಾಣಿಕವಾಗಿ ಕನವರಿಸಿದಂತಹ ಭಾವನೆಗಳ ಹೂಗೊಂಚಲು ಎನ್ನಬಹುದು..ನಿಮ್ಮಿಂದ ಇನ್ನೂ ಹೆಚ್ಚಿನದನ್ನು ನಿರೀಕ್ಷಿಸುತ್ತಾ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಶುಭವಾಗಲಿ ಎಂದು ಹಾರೈಸುತ್ತೇನೆ.

ಈ ಪುಸ್ತಕವು ಶಿವಮೊಗ್ಗದ ಪ್ರಜ್ಞಾ ಬುಕ್ ಗ್ಯಾಲರಿಯಲ್ಲಿ ಲಭ್ಯವಿದ್ದು, ಪುಸ್ತಕ ಪ್ರಿಯರು ಕೊಂಡು ಓದಿ.

ಪುಸ್ತಕ: ಕಾಡುವ ಹುಡುಗನ ಹಾಡು
ಲೇಖಕರು: ಅಂಜುಮ್.ಬಿ.ಎಸ್.
ಮುಖಬೆಲೆ:110 ರೂ.
ಪುಟ: 106

ಬರಹ:

ಸಂತೋಷ್ ಕುಮಾರ್ ಎಸ್.ಜಿ.
ಮುಖ್ಯಸ್ಥರು,ಕನ್ನಡ ವಿಭಾಗ
ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು.ಶಿವಮೊಗ್ಗ.

Shirur landslide ಶಿರೂರು ಭೂಕುಸಿತ.ಎರಡು ಅನಾಥ ಶ್ವಾನಗಳನ್ನದತ್ತು ಸ್ವೀಕರಿಸಿದ ಖಾಕಿ ಸಿಬ್ಬಂದಿ

0

Shirur landslide ಜುಲೈನಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರೂರಿನಲ್ಲಿ ಸಂಭವಿಸಿದ್ದ ಭೂಕುಸಿತದಲ್ಲಿ ಪಾಲಕರನ್ನು ಕಳೆದುಕೊಂಡು ಅನಾಥವಾಗಿದ್ದ ನಾಯಿಗಳನ್ನು ಇದೀಗ ಉತ್ತರ ಕನ್ನಡ ಜಿಲ್ಲಾ ಪೊಲೀಸರು ದತ್ತು ತೆಗೆದುಕೊಂಡಿದ್ದಾರೆ.

ಗುಡ್ಡ ಕುಸಿತದಲ್ಲಿ ಹೋಟೆಲ್ ಮಾಲೀಕರಾದ ಲಕ್ಷ್ಮಣ್ ನಾಯ್ಕ್, ಅವರ ಪತ್ನಿ ಶಾಂತಿ, ಪುತ್ರಿ ಆವಂತಿಕಾ ಮತ್ತು ಪುತ್ರ ಸೌರಭ್ ಸಜೀವ ಸಮಾಧಿಯಾಗಿದ್ದರು.

ದುರಂತದಿಂದ ಪವಾಡ ರೀತಿಯಲ್ಲಿ ಬದುಕುಳಿದ ಎರಡು ನಾಯಿಗಳು ಭಾರೀ ಮಳೆ ನಡುವೆ ಅವಶೇಷಗಳ ಮೇಲೆ ನಿಂತು ತನ್ನ ಪಾಲಕರಿಗಾಗಿ ಹುಡುಕಾಡುವ ದಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಎಸ್ಪಿ ನಾರಾಯಣ್ ಅವರು ಅವುಗಳನ್ನು ದತ್ತು ಪಡೆಯುವ ಮೂಲಕ ಆಸರೆಯಾಗಿದ್ದಾರೆ.

Shirur landslide ಕುರಿತು ಮಾಹಿತಿ ಹಂಚಿಕೊಂಡಿರುವ ಎಸ್ಪಿ ನಾರಾಯಣ್, “ಜುಲೈ 16 ರಂದು ಭೂಕುಸಿತ ಸಂಭವಿಸಿದಾಗ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ಮತ್ತಿತರ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಳಿದಾಗ ನಾಯಿಗಳ ಪಾಲಕರು ಸಾವನ್ನಪ್ಪಿರುವುದು ತಿಳಿಯಿತು. ನಾಯಿಗಳನ್ನು ಲಕ್ಷ್ಮಣ್ ನಾಯ್ಕ್ ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು.

ನಾಯಿಗಳು ಹೋಟೆಲ್ ಬಿಟ್ಟು ಎಲ್ಲಿಯೂ ಬೇರೆ ಕಡೆಗೆ ಹೋಗದಿರುವ ಬಗ್ಗೆ ಅವರ ಸಂಬಂಧಿ ಪುರುಷೋತ್ತಮ್ ನಾಯ್ಕ್ ತಿಳಿಸಿದರು. ಮನೆಯವರ ಅಂತ್ಯ ಸಂಸ್ಕಾರ ಮಾಡಿದ ನಂತರವೂ ನಾಯಿಗಳು ಅಲ್ಲಿಂದ ಬೇರೆ ಕಡೆಗೆ ತೆರಳಿರಲಿಲ್ಲ. ಮತ್ತೆ ಕಾರ್ಯಾಚರಣೆಗೆ ಬಂದಾಗಲೂ ಅವುಗಳನ್ನು ಹೋಟೆಲ್ ಬಳಿ ಮಲಗಿದ್ದವು. ಅವುಗಳ ನಿಯತ್ತು ನನ್ನ ಮನಸ್ಸಿಗೆ ತಾಟಿತ್ತು. ಹೀಗಾಗಿ ದತ್ತು ಪಡೆಯಲು ನಿರ್ಧರಿಸಿದ್ದಾಗಿ ತಿಳಿಸಿದರು.

Accident In Soraba ಸೊರಬದ ಬಳಿ ಲಾರಿ ಪಲ್ಟಿ. ಯಾರಿಗೂ ಅಪಾಯವಾಗಿಲ್ಲ

0

Accident In Soraba ಹಳೇಸೊರಬದ ಶಾಂತಿಕೆರೆ ಸಮೀಪ ಹಾನಗಲ್‌ ಕಡೆಯಿಂದ ಸೊರಬ ಪಟ್ಟಣಕ್ಕೆ ಬರುತ್ತಿದ್ದ ಲಾರಿಯೊಂದು ಪಲ್ಟಿಯಾಗಿದೆ.

ಎದುರಿಗೆ ಬಂದ ವಾಹನ ಮುಂದಕ್ಕೆ ಸಾಗಲು ಅನುವು ಮಾಡಿಕೊಡುವ ಸಂದರ್ಭದಲ್ಲಿ ಲಾರಿ ಪಲ್ಟಿಯಾಗಿದೆ. ಲಾರಿ ಚಾಲಕನಿಗೆ ಯಾವುದೇ ಅಪಾಯವಾಗಿಲ್ಲ
ಕಂಬಕ್ಕೆ ಲಾರಿ ಡಿಕ್ಕಿ:
ತೀರ್ಥಹಳ್ಳಿ ತಾಲ್ಲೂಕು ಮಾಸ್ತಿಕಟ್ಟೆ ಸಮೀಪ ಯಡೂರಿನಲ್ಲಿ ಸಿಲಿಂಡರ್‌ ಲಾರಿಯೊಂದರ ಚಕ್ರ ಕುಸಿದು, ಲಾರಿ ಲೈಟ್‌ ಕಂಬಕ್ಕೆ ಡಿಕ್ಕಿಯಾಗಿದೆ.

Accident In Soraba ಜಲಜೀವನ್‌ ಮಿಷನ್‌ ಕಾಮಗಾರಿಯಿಂದಾಗಿ ಮೇನ್‌ ರಸ್ತೆಗಳ ಪಕ್ಕದಲ್ಲಿ ಮಣ್ಣು ಕುಸಿಯುತ್ತಿದೆ. ಇದರಿಂದ ರಸ್ತೆ ಬಿಟ್ಟು ಸೈಡಿಗಿಳಿದ ಲಾರಿಗಳು ಬಸ್‌ಗಳ ಚಕ್ರಗಳು ನೆಲಕ್ಕೆ ಹುಗಿಯುತ್ತಿವೆ.
ಇಲ್ಲಿಯೂ ಅದೇ ರೀತಿಯಾಗಿದ್ದು, ಲಾರಿ ಚಕ್ರ ಹುಗಿದು ನಿಯಂತ್ರಣ ತಪ್ಪಿ ಲಾರಿಯು ಕರೆಂಟ್‌ ಕಂಬಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಲಾರಿ ಜಖಂಗೊಂಡಿದೆ.

ಅದೃಷ್ಟಕ್ಕೆ ಯಾರಿಗೂ ಅಪಾಯವಾಗಿಲ್ಲ.

Sharavati Dam ಮತ್ತೆ ಮಳೆ ಹುಯ್ಯುತಿದೆ. ಶರಾವತಿ ಡ್ಯಾಂ ತುಂಬುತಿದೆ. ಜೋಗ ಜಲಧಾರೆಗೆ ಜೀವಕಳೆ

0

Sharavati Dam ಕಳೆದ ಕೆಲ ದಿನಗಳಿಂದ, ಮಲೆನಾಡಿನಲ್ಲಿ ಮತ್ತೆ ಮುಂಗಾರು ಮಳೆ ಚುರುಕುಗೊಂಡಿದೆ. ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶ ಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಈ ನಡುವೆ ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರವಾದ, ಲಿಂಗನಮಕ್ಕಿ ಜಲಾಶಯ ಒಳಹರಿವಿನಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ., ಲಿಂಗನಮಕ್ಕಿ ಡ್ಯಾಂ ನಿಂದ ಹೊರ ಬಿಡುತ್ತಿರುವ ನೀರಿನ ಪ್ರಮಾಣವೂ ಏರಿಕೆಯಾಗಿದೆ.

Sharavati Dam ಈ ಕಾರಣದಿಂದ ವಿಶ್ವ ವಿಖ್ಯಾತ ಜೋಗ ಜಲಪಾತ ಮತ್ತೆ ಮೈದುಂಬಿ ಹರಿಯಲಾರಂಭಿಸಿದೆ. ಜಲಧಾರೆಯ ವೈಭೋಗಕ್ಕೆ ಸಾಕ್ಷಿಯಾಗಿದೆ.
ಮಂಗಳವಾರ ಬೆಳಿಗ್ಗೆಯ ಮಾಹಿತಿಯಂತೆ, ಲಿಂಗನಮಕ್ಕಿ ಡ್ಯಾಂನ ಒಳಹರಿವು 36,564 ಕ್ಯೂಸೆಕ್ ಗೆ ಏರಿಕೆಯಾಗಿದೆ. 25,202 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ . ಡ್ಯಾಂನ ನೀರಿನ ಮಟ್ಟ 1817. 55 (ಗರಿಷ್ಠ ಮಟ್ಟ : 1819) ಅಡಿಯಿದೆ.

ಮೂರ್ನಾಲ್ಕು ದಿನಗಳಿಂದ ಹೊಸನಗರ ತಾಲೂಕಿನ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ವ್ಯಾಪಕ ಮಳೆಯಾಗಲಾರಂಭಿಸಿದೆ . ಈ ಕಾರಣದಿಂದ ಲಿಂಗನಮಕ್ಕಿ ಡ್ಯಾಂ ಒಳಹರಿವಿನಲ್ಲಿ ನಿರಂತರವಾಗಿ ಏರಿಕೆ ಕಂಡುಬರಲಾರಂಭಿಸಿದೆ.