Tuesday, March 31, 2026
Tuesday, March 31, 2026
Home Blog Page 588

Texas Instrument Company ಯೂತ್ ಫಾರ್ ಸೇವಾ ಸಂಸ್ಥೆಯಿಂದ ಶಾಲಾಮ್ಕಳಿಗೆ ಪುಸ್ತಕ ಬ್ಯಾಗ್ ವಿತರಣೆ

0

Texas Instrument Company ಯೂತ್ ಫಾರ್ ಸೇವಾದ ಶಿವಮೊಗ್ಗ ವಿಭಾಗ ಹಾಗೂ ಟೆಕ್ಸಾಸ್ ಇನ್ಸ್ಟ್ರುಮೆಂಟ್ ಕಂಪನಿಯ ಸಹಯೋಗದೊಂದಿಗೆ ಭದ್ರಾವತಿಯ ಹೊಸಕೊಪ್ಪ, ಹಾವುಗೊಲ್ಲರ ಕ್ಯಾಂಪ್, ಗೋಣಿಬೀಡು, ಸಾಗರದ ಯಡಜಿಗಳೆಮನೆ. ಎಮ್ ಎಲ್ ಹಳ್ಳಿ, ಹೊಸನಗರದ ಗವಟೂರು, ತೀರ್ಥಹಳ್ಳಿಯ ತೂದೂರು, ಶಿಕಾರಿಪುರದ ಎಮ್ ಸಿ ಆರ್ ಪಿ ಕ್ಯಾಂಪ್ ನ ಒಟ್ಟು 8 ಶಾಲೆಗಳ ಸುಮಾರು 600 ಕ್ಕೂ ಹೆಚ್ಚು ಮಕ್ಕಳಿಗೆ ಸ್ಕೂಲ್ ಬ್ಯಾಗ್ ಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು.

District Health and Family Department ಡೆಂಗು ನಿಯಂತ್ರಣ ಮುಖ್ಯವಾಗಿದೆ- ಡಾ.ನಟರಾಜ್

0

District Health and Family Department ರೋಟರಿ ಜಿಲ್ಲೆ 3182 ರಿಂದ ಹಸಿರಿನ ಸುರಕ್ಷತೆ ಮತ್ತು ಆರೋಗ್ಯಕರ ನಾಳೆ ಗಾಗಿ ಪರಿಸರ ಸಂರಕ್ಷಣೆ, ರಸ್ತೆ ಸುರಕ್ಷತೆ ಕ್ರೀಡೆ ಮತ್ತು ಸ್ವಾಸ್ಥ್ಯ ಆರೋಗ್ಯಕ್ಕಾಗಿ ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳಲ್ಲಿ ಜಿಲ್ಲಾ ಪೊಲೀಸ್ ಇಲಾಖೆ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ, ಶಿವಮೊಗ್ಗ ಸೈಕಲ್ ಕ್ಲಬ್, ಸುಬ್ಬಯ್ಯ ಕಾಲೇಜ್ ಆಫ್ ನರ್ಸಿಂಗ್, ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಹಾಗೂ ರೋಟರಿ ಸಂಸ್ಥೆಯ ಸದಸ್ಯರು ಸೇರಿ ಸೈಕ್ಲೊತಾನ್ ಹಾಗೂ ವಾಕಥಾನ್ ಜನಜಾಗೃತಿ ಜಾತ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮಕ್ಕೆ ಅಂತರರಾಷ್ಟ್ರೀಯ ರೋಟರಿ ಸಂಸ್ಥೆಯ ಜಿಲ್ಲೆ 3182 ರ ಜಿಲ್ಲಾ ಗವರ್ನರಾದ ದೇವಾನಂದ್ ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿಗಳಾದ ಡಾ ನಟರಾಜ್ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಡಿ ಹೆಚ್ ಓ ಡಾ. District Health and Family Department ನಟರಾಜ್ ರವರು ಸಾರ್ವಜನಿಕರಿಗೆ ಉತ್ತೇಜಿಸಿ ಮಾತನಾಡುತ್ತಾ ಇತ್ತೀಚಿನ ದಿನಗಳಲ್ಲಿ ಸೊಳ್ಳೆ ಯಿಂದ ಡೆಂಗು ಜ್ವರ ಹಾಗೂ ವೈರಲ್ ಫೀವರ್ ಹೆಚ್ಚಾಗುತ್ತಿದೆ ಮನೆಯ ಸುತ್ತಮುತ್ತ ಪರಿಸರದಲ್ಲಿ ನೀರು ನಿಲ್ಲದಂತೆ ನೋಡಿಕೊಂಡು ಡೆಂಗು ನಿಯಂತ್ರಣ ಮಾಡಬೇಕು. ಹಾಗೂ ಉತ್ತಮ ಆರೋಗ್ಯಕ್ಕೆ ಊಟದ ಮುಂಚೆ ಎಲ್ಲರೂ ಕೈತುಳಿತು ಸ್ವಚ್ಛತೆಯಿಂದ ಊಟ ಮಾಡಬೇಕು ದಿನನಿತ್ಯ ಸ್ವಚ್ಛತೆಯಿಂದ ಆರೋಗ್ಯಕ್ಕಾಗಿ ಯೋಗಾಸನ ಹಾಗೂ ಪ್ರಾಣಾಯಾಮ ಮಾಡುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ರೋಟರಿ ಜಿಲ್ಲೆ ಗವರ್ನರ್ ಆದ ದೇವಾನಂದ್ ರವರು ರಸ್ತೆ ಸುರಕ್ಷತೆಗೆ ನಾವೆಲ್ಲರೂ ಜವಾಬ್ದಾರಿಯಿಂದ ವಾಹನ ಚಲಿಸುವಾಗ ಸಂಚಾರಿ ನಿಯಮವನ್ನು ಪಾಲಿಸಬೇಕು ಹಾಗೂ ಎಲ್ಲರೂ ದ್ವಿಚಕ್ರ ವಾಹನ ಓಡಿಸುವಾಗ ಹೆಲ್ಮೆಟ್, ಕಾರಿನಲ್ಲಿ ಸೀಟ್ ಬೆಲ್ಟ್ ಹಾಕಿಕೊಳ್ಳುವುದು ಕಡ್ಡಾಯ ಮಾಡಿಕೊಳ್ಳಬೇಕು ಎಂದು ತಿಳಿಸಿದರು ರೋಟರಿ ಸಂಸ್ಥೆಯು ಸಾರ್ವಜನಿಕರಿಗೆ ಅನುಕೂಲವಾಗುವಂತಹ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಇದರಿಂದ ಎಲ್ಲರಿಗೂ ಅನುಕೂಲವಾಗುತ್ತದೆ ಹಾಗೂ ಇನ್ನು ಮುಂದೆ ಸಮಾಜ ಮುಖಿ ಕೆಲಸಗಳಿಗೆ ರೋಟರಿ ಸಂಸ್ಥೆ ಸದಾ ನಿಮ್ಮೊಂದಿಗೆ ಇರುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಪಿಡಿಜಿ ಚಂದ್ರಶೇಖರ್, ಪಿಡಿಜಿ ರಾಜಾರಾಮ್ ಭಟ್,
ಡಿ ಜಿ ಎನ್. ಬಿ ಎಮ್ ಭಟ್, ಸುಬ್ರಹ್ಮಣ್ಯ ಬಸ್ರಿ, ಅಮಿತ್ ಅರವಿಂದ್, ರವಿ ಕೋಟೋಜಿ, ಕೆಂಪರಾಜು, ಅಸಿಸ್ಟೆಂಟ್ ಗವರ್ನರ್ ನಾಗರಾಜ್,
ಡಾ ಗುಡ್ಡಪ್ಪ ಕಸಬಿ, ಮಂಜುನಾಥ್ ಕದಂ, ಕಿರಣ್ ಕುಮಾರ್ ಹಾಗೂ ನಗರದ ಎಲ್ಲಾ ರೋಟರಿ ಸದಸ್ಯರು ಅಧ್ಯಕ್ಷರು ಕಾರ್ಯದರ್ಶಿಗಳು, ಜಿಲ್ಲಾ ಕುಟುಂಬ ಇಲಾಖೆ ಸಿಬ್ಬಂದಿಗಳು ಸಾರ್ವಜನಿಕರು ಭಾಗವಹಿಸಿದ್ದರು.

Indira Canteens ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 8 ವಲಯಗಳಲ್ಲಿ ಇಂದಿರಾ‌ ಕ್ಯಾಂಟೀನ್ ಗಳು ಕಾರ್ಯಾರಂಭ ಮಾಡಲಿವೆ

0

Indira Canteens ಬಡವರು, ಕೂಲಿ ಕಾರ್ಮಿಕರಿಗೆ ರಿಯಾಯಿತಿ ದರದಲ್ಲಿ ಮೂರು ಹೊತ್ತು ಊಟ, ತಿಂಡಿ ನೀಡುವ ಇಂದಿರಾ ಕ್ಯಾಂಟೀನ್‌ಗಳು ಶೀಘ್ರದಲ್ಲೇ ಹೊಸ ಮೆನುವಿನೊಂದಿಗೆ ಆರಂಭಗೊಳ್ಳಲಿವೆ. ಮರುಜೀವ ಪಡೆಯುತ್ತಿರುವ ಕ್ಯಾಂಟೀನ್‌ಗಳಲ್ಲಿ ತರಹೇವಾರಿ ತಿಂಡಿಗಳು ಸಿಗಲಿವೆ.ಬಿಬಿಎಂಪಿ ವ್ಯಾಪ್ತಿಯ 8 ವಲಯಗಳಲ್ಲಿಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಸಲು 4 ಪ್ಯಾಕೇಜ್‌ಗಳನ್ನಾಗಿ ವಿಂಗಡಿಸಿ ಟೆಂಡರ್‌ ಕರೆದು ಅಂತಿಮಗೊಳಿಸಲಾಗಿತ್ತು. ಇದಕ್ಕೆ ಸರ್ಕಾರ ಅನುಮೋದನೆ ನೀಡಿದ್ದು, ಸದ್ಯ ಮೂರು ಪ್ಯಾಕೇಜ್‌ಗಳ ಗುತ್ತಿಗೆ ಪಡೆದಿರುವ ಸಂಸ್ಥೆಗೆ ಕಾರ್ಯಾದೇಶ ನೀಡಲಾಗುತ್ತಿದೆ. ಒಂದು ಪ್ಯಾಕೇಜ್‌ಗೆ ಸಂಬಂಧಿಸಿದಂತೆ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ.ಈವರೆಗೆ ಚೆಫ್‌ಟಾಕ್‌, ರಿವಾರ್ಡ್ಸ್ ಮತ್ತು ಅದಮ್ಯ ಚೇತನ ಸಂಸ್ಥೆಯು ನಗರದಲ್ಲಿನ ಇಂದಿರಾ ಕ್ಯಾಂಟೀನ್‌ಗಳ ನಿರ್ವಹಣೆ ಜತೆಗೆ ಆಹಾರ ಸರಬರಾಜು ಮಾಡುತ್ತಿದ್ದವು. ಈ ಸಂಸ್ಥೆಗಳ ಗುತ್ತಿಗೆ ಅವಧಿ ಮುಗಿದ ಹಿನ್ನೆಲೆಯಲ್ಲಿ ಕೆಲ ತಿಂಗಳ ಹಿಂದೆಯೇ ಟೆಂಡರ್‌ ಆಹ್ವಾನಿಸಿ ಅಂತಿಮಗೊಳಿಸಲಾಗಿತ್ತು.

Indira Canteens ಆದರೆ, ಈ ಟೆಂಡರ್‌ ಪ್ರಕ್ರಿಯೆಗೆ ಸರ್ಕಾರ ದಿಂದ ತಡವಾಗಿ ಅನುಮೋದನೆ ದೊರೆತಿದೆ. 175 ಸ್ಥಿರ, 24 ಮೊಬೈಲ್‌ ಕ್ಯಾಂಟೀನ್‌ರಾಜಧಾನಿಯಲ್ಲಿ 175 ಸ್ಥಿರ ಮತ್ತು 24 ಮೊಬೈಲ್‌ ಕ್ಯಾಂಟೀನ್‌ಗಳ ಮೂಲಕ ಬಡವರು, ಕೂಲಿ ಕಾರ್ಮಿಕರು, ಆಟೊ, ಟ್ಯಾಕ್ಸಿ ಚಾಲಕರು, ಬೀದಿಬದಿ ವ್ಯಾಪಾರಿಗಳಿಗೆ 2017 ರಿಂದ ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ವೇಳೆ ರಿಯಾಯಿತಿ ದರದಲ್ಲಿ ಆಹಾರ ನೀಡಲಾಗುತ್ತಿದೆ. ಸರ್ಕಾರ , ಬಿಬಿಎಂಪಿಯ ನಿರ್ಲಕ್ಷ್ಯ ಧೋರಣೆ ಹಾಗೂ ನಿರ್ವಹಣೆ ಕೊರತೆಯಿಂದ ಹಲವು ಕ್ಯಾಂಟೀನ್‌ಗಳು ಮುಚ್ಚಲ್ಪಟ್ಟಿವೆ.ಪಾಲಿಕೆಯ ಅಂಕಿ-ಅಂಶಗಳ ಪ್ರಕಾರ, ಸದ್ಯ 147 ಸ್ಥಿರ ಮತ್ತು 3 ಮೊಬೈಲ್‌ ಕ್ಯಾಂಟೀನ್‌ಗಳಲ್ಲಷ್ಟೇ ಗ್ರಾಹಕರಿಗೆ ಊಟ, ತಿಂಡಿ ಕೊಡಲಾಗುತ್ತಿದೆ. 28 ಸ್ಥಿರ ಮತ್ತು 21 ಮೊಬೈಲ್‌ ಕ್ಯಾಂಟೀನ್‌ಗಳು ಸ್ಥಗಿತಗೊಂಡಿವೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕ್ಯಾಂಟೀನ್‌ಗಳಲ್ಲೂಶುಚಿ-ರುಚಿಯಾದ ಆಹಾರ ದೊರಕುತ್ತಿಲ್ಲವೆಂಬ ದೂರುಗಳು ಕೇಳಿಬಂದಿವೆ. ಮೂರು ಪ್ಯಾಕೇಜ್‌ಗಳಿಗೆ ಅಸ್ತುಇಂದಿರಾ ಕ್ಯಾಂಟೀನ್‌ಗಳಿಗೆ ಕಾಯಕಲ್ಪ ನೀಡುವ ಜತೆಗೆ ಗ್ರಾಹಕರಿಗೆ ಬಗೆಬಗೆಯ ಊಟ-ತಿಂಡಿ ನೀಡುವ ಸಲುವಾಗಿ ಕರೆದಿದ್ದ ಟೆಂಡರ್‌ ಪ್ರಕ್ರಿಯೆಯಲ್ಲಿಈ ಹಿಂದೆ ಆಹಾರ ಪೂರೈಸುತ್ತಿದ್ದ ಸಂಸ್ಥೆಗಳೇ ಬಿಡ್‌ ಸಲ್ಲಿಸಿದ್ದವು.

ಅದಮ್ಯ ಚೇತನ ಸಂಸ್ಥೆ ಮಾತ್ರ ಟೆಂಡರ್‌ ಸಲ್ಲಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ 4 ಪ್ಯಾಕೇಜ್‌ಗಳ ಪೈಕಿ 3 ಪ್ಯಾಕೇಜ್‌ಗಳ ಟೆಂಡರ್‌ ಅನ್ನು ಹೊಸದಿಲ್ಲಿ ಮೂಲದ ರಿವಾರ್ಡ್ಸ್ ಸಂಸ್ಥೆಯೇ ಪಡೆಯುವಲ್ಲಿ ಯಶಸ್ವಿಯಾಗಿದೆ.ರಿವಾರ್ಡ್ಸ್ ಸಂಸ್ಥೆಯು ಪೂರ್ವ-ಯಲಹಂಕ, ದಕ್ಷಿಣ, ಬೊಮ್ಮನಹಳ್ಳಿ-ರಾಜರಾಜೇಶ್ವರಿನಗರ-ಮಹದೇವಪುರ ವಲಯ ಪ್ಯಾಕೇಜ್‌ನ ಟೆಂಡರ್‌ ಪಡೆದುಕೊಂಡಿದೆ. ಒಟ್ಟು 144 ವಾರ್ಡ್‌ಗಳಲ್ಲಿನ ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಸಲಿದೆ. ಈ ಗುತ್ತಿಗೆ ಸಂಸ್ಥೆಗೆ ಕಾರ್ಯಾದೇಶ ನೀಡಲು ವಲಯ ಆಯುಕ್ತರಿಗೆ ಸೂಚಿಸಲಾಗಿದೆ. ಮುಂದಿನ 15 ದಿನಗಳೊಳಗೆ ಹೊಸ ಮೆನುವಿನೊಂದಿಗೆ ಇಂದಿರಾ ಕ್ಯಾಂಟೀನ್‌ಗಳು ಆರಂಭವಾಗಲಿವೆ.ಉಳಿದ ಒಂದು ಪ್ಯಾಕೇಜ್‌ಗೆ ಚೆಫ್‌ಟಾಕ್‌ ಮತ್ತು ಶಶಿ ಕೇಟರರ್ಸ್ ಸಂಸ್ಥೆಗಳು ಟೆಂಡರ್‌ ಹಾಕಿದ್ದವು. ತಾಂತ್ರಿಕ ಬಿಡ್‌ನಲ್ಲಿ ಸಮರ್ಪಕ ದಾಖಲೆ ಸಲ್ಲಿಸಿದ ಕಾರಣಕ್ಕೆ ಚೆಫ್‌ಟಾಕ್‌ ಸಂಸ್ಥೆಯನ್ನು ತಿರಸ್ಕರಿಸಲಾಗಿದೆ. ಈ ಹಿನ್ನೆಲೆಯಲ್ಲಿಸಂಸ್ಥೆಯು ನ್ಯಾಯಾಲಯದ ಮೆಟ್ಟಿಲೇರಿದ್ದು, ತಡೆಯಾಜ್ಞೆ ತಂದಿದೆ.”ಸಮರ್ಪಕ ದಾಖಲೆಗಳನ್ನು ಸಲ್ಲಿಸಿದ್ದರೂ ತಾಂತ್ರಿಕ ಬಿಡ್‌ನಲ್ಲಿತಿರಸ್ಕರಿಸಲಾಗಿದೆ. ಅಲ್ಲದೇ ಪಾಲಿಕೆಯಿಂದ ಕೋಟ್ಯಂತರ ರೂ. ಬಾಕಿ ಬರಬೇಕಿದೆ. ಹೀಗಾಗಿ, ದಾಸರಹಳ್ಳಿ-ಪಶ್ಚಿಮ ವಲಯ ಪ್ಯಾಕೇಜ್‌ಗೆ ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದುಕೊಳ್ಳಲಾಗಿದೆ’ ಎಂದು ಚೆಫ್‌ಟಾಕ್‌ನ ವ್ಯವಸ್ಥಾಪಕ ನಿರ್ದೇಶಕ ಗೋವಿಂದ ಪೂಜಾರಿ ತಿಳಿಸಿದರು. ಸಬ್ಸಿಡಿ ಮೊತ್ತದಲ್ಲಿ ಹೆಚ್ಚಳಸಾರ್ವಜನಿಕರಿಂದ ಸದ್ಯ ಇಂದಿರಾ ಕ್ಯಾಂಟೀನ್‌ಗಳಲ್ಲಿಸಂಗ್ರಹಿಸುತ್ತಿರುವ ದರವನ್ನೇ (ಬೆಳಗ್ಗಿನ ಉಪಹಾರ 5 ರೂ., ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ತಲಾ 10 ರೂ.) ಮುಂದುವರಿಸಲು ತೀರ್ಮಾನಿಸಲಾಗಿದೆ.

ಆದರೆ, ಬಿಬಿಎಂಪಿಯಿಂದ ಗುತ್ತಿಗೆ ಸಂಸ್ಥೆಗಳಿಗೆ ನೀಡುವ ಸಬ್ಸಿಡಿ ಮೊತ್ತವನ್ನು ಹೆಚ್ಚಿಸಲಾಗಿದೆ. ಆಹಾರ ಸರಬರಾಜು ಸಂಸ್ಥೆಗೆ ದಿನಕ್ಕೆ ಒಬ್ಬರಿಗೆ ಬೆಳಗ್ಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ ಸೇರಿ ಒಟ್ಟು 42 ರೂ. ಸಬ್ಸಿಡಿ ನಿಗದಿಪಡಿಸಲಾಗಿದೆ. ಅದರಂತೆ ಗುತ್ತಿಗೆ ಸಂಸ್ಥೆಗಳಿಗೆ ಮೂರು ಹೊತ್ತಿನ ಆಹಾರ ವಿತರಣೆಗೆ 67 ರೂ. ಸಿಗಲಿದೆ.ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಸುತ್ತಿರುವ ಕೆಲ ಸಂಸ್ಥೆಗಳು ಕಡಿಮೆ ಸಂಖ್ಯೆಯ ಗ್ರಾಹಕರಿಗೆ ಆಹಾರ ವಿತರಿಸಿ, ಹೆಚ್ಚಿನ ಲೆಕ್ಕ ತೋರಿಸಿ ಬಿಲ್‌ ಪಡೆಯುತ್ತಿರುವ ಆರೋಪಗಳಿವೆ. ಈ ಹಿನ್ನೆಲೆಯಲ್ಲಿ ಪ್ರತಿ ಕ್ಯಾಂಟೀನ್‌ನಲ್ಲಿ ಕಿಯೋಸ್ಕ್‌ಗಳನ್ನು ಅಳವಡಿಸಿ, ಊಟ-ತಿಂಡಿಯ ಟೋಕನ್‌ ಪಡೆಯುವ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಅಲ್ಲದೆ, ಅಡುಗೆ ಮನೆ ಮತ್ತು ಕ್ಯಾಂಟೀನ್‌ಗಳಲ್ಲಿ ನಿಯೋಜಿಸಲ್ಪಡುವ ಮಾರ್ಷಲ್‌ಗಳೂ ಊಟ, ತಿಂಡಿ ತಯಾರಿಕೆ ಪ್ರಮಾಣ ಹಾಗೂ ವಿತರಣೆಯ ಲೆಕ್ಕ ಪಡೆಯಲಿದ್ದಾರೆ.

52 ಕ್ಯಾಂಟೀನ್‌ಗೆ 4ಜಿ ವಿನಾಯಿತಿಬಿಬಿಎಂಪಿ ವ್ಯಾಪ್ತಿಯಲ್ಲಿಹೆಚ್ಚುವರಿ ಇಂದಿರಾ ಕ್ಯಾಂಟೀನ್‌ಗಳನ್ನು ಅಡುಗೆ ಕೋಣೆ ಸಹಿತ ನಿರ್ಮಿಸುವ ಗುತ್ತಿಗೆಯನ್ನು ಎಕ್ಸೆಲ್‌ ಪ್ರೀಕಾಸ್ಟ್‌ ಸೊಲ್ಯೂಷನ್‌ ಪ್ರೈವೆಟ್‌ ಲಿಮಿಟೆಡ್‌ಗೆ ವಹಿಸಲು 4ಜಿ ವಿನಾಯಿತಿ ನೀಡಿ ಸಚಿವ ಸಂಪುಟ ನಿರ್ಣಯಿಸಿದೆ. ಇಂದಿರಾ ಕ್ಯಾಂಟೀನ್‌ಗಳನ್ನು ಸ್ಥಾಪಿಸಲು ಮತ್ತು ಇದಕ್ಕೆ ತಗಲುವ 20 ಕೋಟಿ ರೂ. ಅನುದಾನವನ್ನು ಪಾಲಿಕೆಗೆ ಬಿಡುಗಡೆ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಟೀ, ಕಾಫಿ; ಬ್ರೆಡ್‌-ಜಾಮ್‌ಇಂದಿರಾ ಕ್ಯಾಂಟೀನ್‌ಗಳ ಆಹಾರದ ಮೆನುವಿನಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ರಾಗಿ ಮುದ್ದೆ, ಸೊಪ್ಪಿನ ಸಾರು, ಇಡ್ಲಿ, ಪುಲಾವ್‌, ಖಾರಾಬಾತ್‌, ಪೊಂಗಲ್‌, ಬ್ರೆಡ್‌-ಜಾಮ್‌, ಮಂಗಳೂರು ಬನ್ಸ್‌, ಬಿಸಿಬೇಳೆಬಾತ್‌, ಟೀ, ಕಾಫಿ ನೀಡಲಾಗುತ್ತದೆ. ಮಧ್ಯಾಹ್ನ ಹಾಗೂ ರಾತ್ರಿ ಊಟದಲ್ಲಿರಾಗಿ ಮುದ್ದೆ, ಚಪಾತಿ, ಅನ್ನ, ಸಾಂಬಾರು ಇರಲಿದೆ.

Department of Youth Empowerment and Sports ಆಗಸ್ಟ್ 29, ರಾಷ್ಟ್ರೀಯ ಕ್ರೀಡಾದಿನ. ಶಿವಮೊಗ್ಗದಲ್ಲಿ ವಿವಿಧ ಕ್ರೀಡಾಸ್ಪರ್ಧೆಗಳ ಆಯೋಜನೆ

0

Department of Youth Empowerment and Sports ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಮೇಜರ್ ಧ್ಯಾನ್‌ಚಂದ್ ಚಂದ್‌ರವರ ಜನ್ಮ ದಿನಾಚರಣೆಯ ಅಂಗವಾಗಿ ಆ.29 ರಂದು ರಾಷ್ಟ್ರೀಯ ಕ್ರೀಡಾ ದಿನ ಆಯೋಜಿಸಿದ್ದು, ಈ ಕಾರ್ಯಕ್ರಮದ ಪ್ರಯುಕ್ತ ನಗರದ ವಿವಿಧ ಕ್ರೀಡಾಂಗಣದಲ್ಲಿ ಕ್ರೀಡಾಕೂಟಗಳನ್ನು ಏರ್ಪಡಿಸಲಾಗಿದೆ.
ಅಂದು ಬೆಳಗ್ಗೆ 6.30 ರಿಂದ ನೆಹರೂ ಕ್ರೀಡಾಂಗಣದಲ್ಲಿ 14 ವರ್ಷ ಮೇಲ್ಪಟ್ಟ ಪುರುಷರು ಮತ್ತು ಮಹಿಳಿಯರಿಗೆ 5 ಕಿ.ಮೀ. ಮ್ಯಾರಾಥಾನ್ , ಬೆಳಗ್ಗೆ 9.00 ರಿಂದ ವಾಜಪೇಯಿ ಕ್ರೀಡಾಂಗಣದಲ್ಲಿ 16 ವರ್ಷ ಒಳಪಟ್ಟು ಪುರುಷರು ಮತ್ತು ಮಹಿಳಿಯರಿಗೆ (ಪೆನಾಲ್ಟಿ ಶೂಟೌಟ್) ಹಾಕಿ, ಬೆಳಗ್ಗೆ 11.00 ರಿಂದ ಗೋಪಾಳ ಕ್ರೀಡಾ ಸಂಕೀರ್ಣದಲ್ಲಿ 14 ವರ್ಷ ಮೇಲ್ಪಟ್ಟ ಪುರುಷರಿಗೆ ಟೇಬಲ್ ಟೆನ್ನಿಸ್ ಹಾಗೂ ಸಂಜೆ 4.00 ರಿಂದ ನೆಹರೂ ಕ್ರೀಡಾಂಗಣದಲ್ಲಿ ಮಹಿಳೆಯರಿಗೆ ಹಗ್ಗ ಜಗ್ಗಾಟ ಕ್ರೀಡೆಗಳನ್ನು ಆಯೋಜಿಸಲಾಗಿದೆ.
Department of Youth Empowerment and Sports ಮ್ಯಾರಾಥಾನ್ ವಿಜೇತರಿಗೆ ಪ್ರಥಮ ಬಹುಮಾನ ರೂ. 4,000-, ದ್ವಿತಿಯ ರೂ. 3,000- ತೃತೀಯ ರೂ. 2,000 ಹಾಗೂ ಎರಡು ಸಮಾಧಾನಕರ ತಲಾ ರೂ.1000- ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು. ಇತರೆ ಕ್ರೀಡಾ ಸ್ಪರ್ಧೆ ವಿಜೇತರಿಗೆ ಪ್ರಶಸ್ತಿ ಪತ್ರ ಮತ್ತು ಪಾರಿತೋಷಕ ನೀಡಲಾಗುವುದು ಎಂದು ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಕ್ರೀಡಾಂಗಣ ಇವರನ್ನು ಸಂಪರ್ಕಿಸಬಹುದು.

Cosmo Club Shivamogga ರೋಟರಿ ಸೇವಾಕಾರ್ಯಗಳನ್ನ ಜನರಿಗೆ ಮುಟ್ಟಿಸುವುದು ನಮ್ಮ ಮೊದಲಕಾರ್ಯ- ರಾಜು ಸುಬ್ರಹ್ಮಣ್ಯ

0

Cosmo Club Shivamogga ಸಮಾಜಮುಖಿ ಕಾರ್ಯಕ್ರಮಗಳಿಂದ ರೋಟರಿ ಸಂಸ್ಥೆಯು ವಿಶ್ವಾದ್ಯಂತ ಜನಮಾನಸದಲ್ಲಿ ಸದಾ ಉಳಿದಿದೆ ಎಂದು ಅಂತರಾಷ್ಟ್ರೀಯ ರೋಟರಿ ಸಂಸ್ಥೆ ನಿರ್ದೆಶಕ ರಾಜು ಸುಬ್ರಮಣ್ಯ ಹೇಳಿದರು.
ಶಿವಮೊಗ್ಗ ನಗರದ ಕಾಸ್ಮೋ ಕ್ಲಬ್‌ನಲ್ಲಿ ರೋಟರಿ ಕ್ಲಬ್ ಉತ್ತರ ಸಂಸ್ಥೆ ಸಾರಥ್ಯದಲ್ಲಿ ಆಯೋಜಿಸಿದ್ದ ಜಿಲ್ಲಾ ಪ್ರಶಸ್ತಿ ಪ್ರದಾನ ಸಮಾರಂಭ, ಪಬ್ಲಿಕ್ ಇಮೇಜ್, ಸದಸ್ವತ್ವ ಅಭಿವೃದ್ಧಿ ಸಮಾವೇಶ ಕುರಿತ ಎರಡು ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಹೆಚ್ಚು ಸದಸ್ಯರು ರೋಟರಿ ಸೇರುವುದರಿಂದ ಹೆಚ್ಚೆಚ್ಚು ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ನಾವೆಲ್ಲರೂ ಮಾಡಲು ಸಾಧ್ಯ ಎಂದು ತಿಳಿಸಿದರು.
Cosmo Club Shivamogga ರೋಟರಿ ಸೇವಾ ಕಾರ್ಯಗಳನ್ನು ಜನರಿಗೆ ತಲುಪಿಸುವುದು ನಮ್ಮ ಮೊದಲ ಕಾರ್ಯವಾಗಬೇಕು. ಇದರಿಂದ ರೋಟರಿ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಲು ಸಾಧ್ಯ. ರೋಟರಿ ಸಂಸ್ಥೆಯ ಪ್ರಮುಖ ಸೇವೆಗಳಾದ ಪೋಲಿಯೋ ನಿರ್ಮೂಲನೆ, ಸಾಕ್ಷರತೆ, ನಿರಂತರ ಸಮಾಜಮುಖಿ ಸೇವಾ ಯೋಜನೆಗಳನ್ನು ಜನರಿಗೆ ತಲುಪಿಸಬೇಕು ಎಂದರು.
ಸೆಮಿನಾರ್ ಚೇರ್ಮನ್ ಶ್ರೀನಾಥ್ ಗಿರಿಮಾಜಿ ಸ್ವಾಗತಿಸಿ ಮಾಹಿತಿ ನೀಡಿದರು. ಜಿಲ್ಲಾ ಮಾಜಿ ಗವರ್ನರ್ ರಾಜಾರಾಮ್ ಭಟ್ ಸಮಾರಂಭದ ಉದ್ದೇಶದ ಕುರಿತು ಮಾತನಾಡಿದರು. ಜಿಲ್ಲಾ ಮಾಜಿ ಗವರ್ನರ್ ದೀಪಕ್ ಪುರೋಹಿತ್ ರೋಟರಿಯಲ್ಲಿ ಸದಸ್ಯರ ಪಾತ್ರ ಕುರಿತು ಮಾತನಾಡಿದರು. ಜಿಲ್ಲಾ ಮಾಜಿ ಗವರ್ನರ್ ಅಭಿನಂದನ್ ಶೆಟ್ಟಿ ಅವರಿಗೆ ಅಭಿನಂದಿಸಲಾಯಿತು.
ಜಿಲ್ಲಾ ಗವರ್ನರ್ ಸಿ.ಎ.ದೇವಾನಂದ್, ಜಿಲ್ಲಾ ಮಾಜಿ ಗವರ್ನರ್ ಡಾ. ಗೌರಿ, ನಿಕಟಪೂರ್ವ ಜಿಲ್ಲಾ ಗವರ್ನರ್ ಬಿ.ಸಿ.ಗೀತಾ, ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಜ್ಞಾನ ವಸಂತ, ರವೀಂದ್ರನಾಥ ಐತಾಳ್, ಸಹಾಯಕ ಗವರ್ನರ್ ಎಸ್.ಆರ್.ನಾಗರಾಜ್, ರೋಟರಿ ಉತ್ತರ ಅಧ್ಯಕ್ಷ ಸುಂದರ್, ಜಿಲ್ಲಾ ಕಾರ್ಯದರ್ಶಿ ರಾಮದೇವ ಕಾರಂತ್ ಇತರರಿದ್ದರು.

Daivajna Mahila Mandali ಮಹಿಳೆಯರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು- ಸೀಮಾ ಸದಾನಂದ್

0

Daivajna Mahila Mandali ನಮ್ಮ ಸಂಸ್ಕೃತಿ, ಸಂಪ್ರದಾಯವನ್ನು ಉಳಿಸಿ ಬೆಳೆಸಿಕೊಂಡು ಮುಂದಿನ ಪೀಳಿಗೆಯವರಿಗೆ ತಿಳಿಸುವುದು ಅಗತ್ಯ ಎಂದು ದೈವಜ್ಞ ಮಹಿಳಾ ಮಂಡಳಿ ಅಧ್ಯಕ್ಷೆ ಸೀಮಾ ಸದಾನಂದ್ ಹೇಳಿದರು.

ಶಿವಮೊಗ್ಗ ನಗರದಲ್ಲಿ ದೈವಜ್ಞ ಮಹಿಳಾ ಮಂಡಳಿಯಿಂದ ಏರ್ಪಡಿಸಿದ್ದ ಅರಿಸಿಣ -ಕುಂಕುಮ ಕಾರ್ಯಕ್ರಮ ನೆರವೇರಿಸಿ ಮಾತನಾಡಿ, ಮಹಿಳೆಯರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ಮಹಿಳಾ ಮಂಡಳಿಯಿಂದ ಹಮ್ಮಿಕೊಳ್ಳುತ್ತೇವೆ ಎಂದು ತಿಳಿಸಿದರು.

ಶ್ರಾವಣ ಮಾಸದಲ್ಲಿ ದೈವಜ್ಞ ಮಹಿಳಾ ಮಂಡಳಿಯಿಂದ 28 ವರ್ಷದಿಂದಲೂ ಅರಿಶಿಣ-ಕುಂಕುಮ ಕಾರ್ಯಕ್ರಮ ನಡೆಸಲಾಗುತ್ತಿದೆ. ಶ್ರಾವಣ ಮಾಸದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸುವ ಜತೆಯಲ್ಲಿ ಸೇವಾ ಚಟುವಟಿಕೆಗಳನ್ನು ಸಹ ನಡೆಸಲಾಗುತ್ತದೆ ಎಂದರು.

ಶ್ರಾವಣ ಮಾಸದ ಶುಕ್ರವಾರ ಸಮಾಜದ ಮಹಿಳೆಯರೆಲ್ಲರೂ ಸೇರಿ ಲಲಿತಾ ಸಹಸ್ರನಾಮ, ಭಜನೆ ಮಾಡಿ ಲಕ್ಷ್ಮೀ ಪೂಜೆಯನ್ನು ಮಾಡಿದರು. ಅರಿಶಿಣ-ಕುಂಕುಮ ಕೊಟ್ಟು ಪ್ರಸಾದ ವಿನಿಯೋಗ ನಡೆಸಲಾಯಿತು. ಆರ್ಥಿಕವಾಗಿ ಹಿಂದುಳಿದ ಮಹಿಳೆಗೆ ಸ್ವಾವಲಂಬಿಯಾಗಿ ಜೀವನ ನಡೆಸಲು ಅಗತ್ಯವಾದ ಜಿಗ್-ಜಾಗ್ ಮಿಷನ್ ಕೊಡಲಾಯಿತು.

Daivajna Mahila Mandali ಇದೇ ಸಂದರ್ಭದಲ್ಲಿ ಶಂಕರ್ ಕಣ್ಣಿನ ಆಸ್ಪತ್ರೆಯ ಮುಖ್ಯ ಅಧಿಕಾರಿ ಡಾ. ಕಮಲಾ ಅವರು ಕಣ್ಣು ಹಾಗೂ ಗ್ಲೂಕೋಮಿಯ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ಕಣ್ಣು ತುಂಬಾ ಸೂಕ್ಷ್ಮ ಆಗಿದ್ದು, ಗ್ಲೂಕೋಮಿಯ ಎಂಬ ಕಣ್ಣಿನ ಕಾಯಿಲೆ ಹೇಗೆ ಬರುತ್ತದೆ ಎಂದು ತಿಳಿಯುವುದಿಲ್ಲ. ಆದ್ದರಿಂದ ಜಾಗೃತರಾಗಿ ಸಕಾಲದಲ್ಲಿ ಕಣ್ಣುಗಳನ್ನು ಪರೀಕ್ಷಿಸಿಕೊಳ್ಳಬೇಕು ಎಂದು ತಿಳಿಸಿದರು.

ಶ್ರಾವಣ ಮಾಸ ಬಂತೆAದರೆ ಹೆಣ್ಣು ಮಕ್ಕಳಿಗೆ ಸಂಭ್ರಮದ ತಿಂಗಳು. ರಾಖಿ ಕಟ್ಟುವ ಮೂಲಕ ಸಂಭ್ರಮಿಸುವ ಹಬ್ಬ. ನಮಗೆ ರಕ್ಷಣೆ ನೀಡುವ ಆರಕ್ಷರನ್ನು ರಾಖಿ ಕಟ್ಟಿ ರಾಖಿಹಬ್ಬವನ್ನು ಆಚರಿಸಬೇಕೆಂಬ ಅಧ್ಯಕ್ಷರ ಆಶಯದಂತೆ ಅಡಿಷನಲ್ ಸೂಪರಿಡೆಂಟ್ ಆಫ್ ಪೋಲಿಸ್ ಅನಿಲ್ ಕುಮಾರ್ ಬೊಮ್ಮಾರೆಡ್ಡಿ ಅವರು ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ರಾಖಿ ಕಟ್ಟಲಾಯಿತು. ಅಗತ್ಯ ಮಾಹಿತಿಯನ್ನು ಹಂಚಿಕೊಂಡರು.

ಎಲ್ಲ ಮಹಿಳೆಯರು ರಾಖಿಯನ್ನು ಕಟ್ಟಿ, ಸಿಹಿ ತಿನ್ನಿಸಿ ಆರತಿ ತೆಗೆದರು. ಇದೊಂದು ವಿಶೇಷ ಕಾರ್ಯಕ್ರಮ ಆಗಿತ್ತು. ಎಲ್ಲ ಮಹಿಳೆಯರು ಶ್ರಾವಣ ಮಾಸದ ಹಬ್ಬವನ್ನು ಸಂತೋಷದಿಂದ ಸಂಭ್ರಮಿಸಿದರು.

ಮಾಜಿ ಅಧ್ಯಕ್ಷೆ, ಉಪಾಧ್ಯಕ್ಷರಾದ ಪ್ರೇಮ ರಮೇಶ್, ಅರ್ಚನಾ ಅಣ್ಣಪ್ಪ, ಕಾರ್ಯದರ್ಶಿ ವಾಣಿ ಪ್ರವೀಣ್, ಸಹ ಕಾರ್ಯದರ್ಶಿ ಚೇತನಾ ವಾದಿರಾಜ್, ಸು

CM Siddharamaih ವಿದ್ಯಾವಂತರೇ ಜಾತೀವಾದಿಗಳಾಗುತ್ತಿರುವುದು ದುರಂತ- ಸೀಎಂ ಸಿದ್ಧರಾಮಯ್ಯ

0

CM Siddharamaih ಧರ್ಮ-ಜಾತಿ ಹೆಸರಲ್ಲಿ ಸಮಾಜವನ್ನು ಒಡೆಯುತ್ತಾ ಹೋದಂತೆ ಅಸಮಾನತೆ ಹೆಚ್ಚುತ್ತದೆ ಎಂದು ಸಿ.ಎಂ.ಸಿದ್ದರಾಮಯ್ಯ ನುಡಿದರು.

ಗಾಂಧಿ ಸ್ಮಾರಕ ನಿಧಿಯ 75 ನೇ ವರ್ಷದ ಸಂಸ್ಮರಣೆಗಾಗಿ ಗಾಂಧಿ ಭವನದಲ್ಲಿ ಇಂದು ಆಯೋಜಿಸಲಾಗಿದ್ದ “21ನೇ ಶತಮಾನಕ್ಕೆ ಮಹಾತ್ಮಗಾಂಧೀಜಿ” ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ಜಾತಿ ವ್ಯವಸ್ಥೆ ಕಾರಣದಿಂದ ಬಹು ಜನರು ಶಿಕ್ಷಣದಿಂದ ವಂಚಿತರಾದರು. ಈ ಕಾರಣಕ್ಕೆ ಅಸಮಾನತೆ ಹೆಚ್ಚಾಯ್ತು. ವಿದ್ಯಾವಂತರೇ ಹೆಚ್ಚೆಚ್ಚು ಜಾತಿವಾದಿಗಳಾಗುತ್ತಿರುವುದು ದುರಂತ. ಜಾತಿ ಅಸಮಾನತೆಯ ಪೋಷಕರೇ ಮಹಾತ್ಮಗಾಂಧಿಯವರನ್ನು ಕೊಂದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗಾಂಧೀಜಿ ವಿಚಾರಗಳು, ಸಮಾಜಕ್ಕೆ ನೀಡಿದ ಮಾರ್ಗದರ್ಶನಗಳು 20ನೇ ಶತಮನಕ್ಕೆ ಮಾತ್ರ ಸೀಮಿತವಾಗಿಲ್ಲ. ಈಗಿನ ಕಾಲಕ್ಕೂ ಪ್ರಸ್ತುತವಾಗಿವೆ.‌ ಗಾಂಧೀಜಿಯವರು ಶಾಂತಿ, ಸತ್ಯ, ನ್ಯಾಯ ಮತ್ತು ಬ್ರಾತೃತ್ವವನ್ನು ಬದುಕಿನುದ್ದಕ್ಕೂ ಆಚರಿಸಿಕೊಂಡು ಬಂದಿದ್ದಾರೆ. ಇಡೀ ವಿಶ್ವವೇ ಪರಸ್ಪರ ಪ್ರೀತಿಸುವ ಗುಣವನ್ನು ರೂಢಿಸಿಕೊಂಡರೆ ಇಡೀ ಸಮಾಜ ನೆಮ್ಮದಿಯಿಂದ ಇರಬಹುದು ಎಂದರು.
ಮನುಷ್ಯ ತನ್ನ ನೆಮ್ಮದಿಗಾಗಿ ಬೇರೆ ಗ್ರಹಗಳನ್ನು ಹುಡುಕಿಕೊಂಡು ಹೋಗುವಂತಾಗಬಾರದು ಎನ್ನುವ ಸ್ಟೀಫನ್ ಹಾಕಿಂಗ್ ಅವರ ಮಾತನ್ನು ಪ್ರಸ್ತಾಪಿಸಿ, ಮನುಷ್ಯ ಮನುಷ್ಯರ ನಡುವೆ ಸಹಿಷ್ಣುತೆ ರೂಢಿಸಿಕೊಳ್ಳದಿದ್ದರೆ ಸರ್ವನಾಶವಾಗುತ್ತದೆ. ಕೋಮು ಭಾವನೆ ಹೀಗೇ ಬೆಳೆದರೆ ಕವೆಂಪು ಅವರ ವಿಶ್ವ ಮಾನವ ಆಶಯ ಈಡೇರುವುದು ಕಷ್ಟವಾಗುತ್ತದೆ ಎಂದರು.

CM Siddharamaih ಪ್ರಕೃತಿ ನಮ್ಮ ಅಗತ್ಯಗಳನ್ನು ಈಡೇರಿಸುತ್ತದೆಯೇ ಹೊರತು, ದುರಾಸೆಗಳನ್ನು ಅದು ಪೂರೈಸುವುದಿಲ್ಲ ಎನ್ನುವುದು ಗಾಂಧಿಯವರ ನಂಬಿಕೆಯಾಗಿತ್ತು. ಕೇರಳದ ವಯನಾಡ್ ಮತ್ತು ರಾಜ್ಯದ ನಾನಾ ಕಡೆ ನಡೆಯುತ್ತಿರುವ ಪರಿಸರ ಅವಘಡಗಳಿಗೆ ಮನುಷ್ಯನ ದುರಾಸೆಗಳೇ ಕಾರಣವಾಗಿದೆ ಎಂದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದರೆ ಅವರ ಕಾಲಗುಣದಿಂದ ರಾಜ್ಯಕ್ಕೆ ಬರಗಾಲ ಬರುತ್ತದೆ ಎಂದು ಸಾರ್ವಜನಿಕ ವ್ಯಕ್ತಿಗಳೇ ಮೌಡ್ಯ ಬಿತ್ತುವ ಕುಟಿಲ ಪ್ರಯತ್ನ ಮಾಡಿದ್ದರು.

ಆದರೆ ಈಗ ಸಿಕ್ಕಾಪಟ್ಟೆ ಮಳೆ ಬರುತ್ತಿದೆ. ಬಹಳ ಮಂದಿ ಶಿಕ್ಷಿತರೇ ಕಂದಾಚಾರ, ಕರ್ಮ ಸಿದ್ಧಾಂತ, ಮೌಡ್ಯವನ್ನು ಆಚರಿಸುತ್ತಾರೆ. ಇದಕ್ಕೆ ಸರಿಯಾದ ವೈಜ್ಞಾನಿಕ ಶಿಕ್ಷಣದ ಕೊರತೆಯೇ ಕಾರಣ. 850 ವರ್ಷಗಳ ಹಿಂದೆಯೇ ಬಸವಾದಿ ಶರಣರು ಕರ್ಮ ಸಿದ್ಧಾಂತವನ್ನು ಸಾರಾಸಗಟಾಗಿ ತಿರಸ್ಕರಿಸಿದ್ದರು. ಆದರೆ ಈಗಿನ ಕೆಲವು ಶಿಕ್ಷಿತರೇ ಕರ್ಮ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

Joga Falls ಪ್ರಕೃತಿದತ್ತ ಜೋಗ ಜಲಪಾತ ವೀಕ್ಷಣೆಗೆ ದುಬಾರಿ ಶುಲ್ಕ ಏಕೆ? ಪ್ರವಾಸಿಗರ ಕೋಪ & ಅಸಮಾಧಾನ

0

Joga Falls ಪ್ರಸಿದ್ಧ ಜೋಗ ಜಲಪಾತ ಪ್ರವಾಸಿಗರಿಗೆ ವೀಕ್ಷಣೆಗೆ ಬಲು ದುಬಾರಿಯಾಗಿದೆ. ಜೋಗ ನಿರ್ವಹಣಾ ಪ್ರಾಧಿಕಾರ ಜಲಪಾತ ವೀಕ್ಷಣೆಗೆ ಹೆಚ್ಚಿನ ಶುಲ್ಕ ವಿಧಿಸಿದೆ. ಪ್ರವಾಸಿಗರ ವೀಕ್ಷಣೆಗೆ ಹೆಚ್ಚಿಸಿರುವ ದರಕ್ಕೆ ಪ್ರವಾಸಿಗರು ಹಾಗೂ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಜೋಗವನ್ನು ಅಭಿವೃದ್ಧಿ ಪಡಿಸುವ ವೇಳೆ ಜಲಪಾತದ ವೀಕ್ಷಣೆಯ ದರ ಏರಿಕೆ ಯಾವ ಕಾರಣಕ್ಕೆ ಮಾಡಿದರು ಎಂಬ ಪ್ರಶ್ನೆಯನ್ನು ಸ್ಥಳೀಯರು ಮಾಡುತ್ತಿದ್ದಾರೆ. ಜೋಗ ಜಲಪಾತದ ಪ್ರವೇಶ ದರ, ಪಾರ್ಕಿಂಗ್ ದರವನ್ನು ಏರಿಕೆ ಮಾಡಲಾಗಿದೆ. ಅಲ್ಲದೇ ಜಲಪಾತದ ವೀಕ್ಷಣೆಯನ್ನು ಪ್ರವಾಸಿಗರಿಗೆ ಕೇವಲ ಎರಡು ಗಂಟೆಗೆ ಸೀಮಿತ ಮಾಡಲಾಗಿದೆ.

ಜೋಗ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ನಿಗದಿಪಡಿಸಿರುವ ಹಿಂದಿನ ದರ ಹಾಗೂ ಈಗಿನ ದರ ವ್ಯತ್ಯಾಸ ಇಂತಿದೆ
ಜೋಗ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ನಿಗದಿಪಡಿಸಿರುವ ಹಿಂದಿನ ದರ ಹಾಗೂ ಈಗಿನ ದರ ವ್ಯತ್ಯಾಸ ಇಂತಿದೆ.

ಜೋಗದಲ್ಲಿ ಹಿಂದೆ ಇದ್ದ ದರಕ್ಕಿಂತ ಶೇ 30 ರಿಂದ ಶೇ 50 ರಷ್ಟು ಏರಿಕೆ ಮಾಡಲಾಗಿದೆ. ಹಿಂದೆ ಬಸ್ಗೆ 150 ರೂ. ಇತ್ತು. ಈಗ ಅದನ್ನು 200ಕ್ಕೆ ಏರಿಕೆ ಮಾಡಲಾಗಿದೆ. ಅದೇ ರೀತಿ ಕಾರಿಗೆ 50 ರೂ. ಇದ್ದು ಅದನ್ನು 80 ರೂ. ಏರಿಕೆ ಮಾಡಲಾಗಿದೆ. ಒಬ್ಬ ಪ್ರವಾಸಿಗನಿಗೆ 10 ರೂ. ಇದ್ದ ಶುಲ್ಕ 20 ರೂ. ಗೆ ಏರಿಕೆ ಮಾಡಲಾಗಿದೆ. ಶುಲ್ಕ ಏರಿಕೆ ಮಾಡಿ ಜೋಗ ನಿರ್ವಹಣಾ ಪ್ರಾಧಿಕಾರ ಈಗಾಗಲೇ ಫಲಕವನ್ನು ಅಳವಡಿಸಿದೆ. ಪ್ರಕೃತಿ ದತ್ತವಾಗಿರುವ ಜಲಪಾತ ವೀಕ್ಷಣೆಗೆ ಏಕೆ ದುಬಾರಿ ಶುಲ್ಕ ಎಂಬುದು ಎಲ್ಲರ ಕೆಂಗಣ್ಣಿಗೆ ಕಾರಣವಾಗಿದೆ.

ಜೋಗ ವೀಕ್ಷಣೆ 2 ಗಂಟೆಗೆ ಸೀಮಿತ :
ಪ್ರವಾಸಿಗರು ಶರಾವತಿ ನದಿ ಮೇಲಿಂದ ಬೀಳುವ ರಮಣೀಯ ದೃಶ್ಯವನ್ನು ಕಣ್ತುಂಬಿ‌ಕೊಳ್ಳಲು ಗಂಟೆ ಗಟ್ಟಲೆ ನಿಂತು ಎಲ್ಲ ಆಯಾಮಗಳಿಂದಲೂ ನೋಡಿ, ಫೋಟೊ, ವಿಡಿಯೋ ತೆಗೆದುಕೊಂಡು ಖುಷಿ ಪಡುತ್ತಿದ್ದರು. ಆದರೆ, ಇನ್ಮುಂದೆ ನೀವು ಜೋಗಕ್ಕೆ ಟಿಕೆಟ್ ನೀಡಿ ಬಂದಿದ್ದೀರಿ ಅಂದರೆ ಜೋಗವನ್ನು ಕೇವಲ ಎರಡು ಗಂಟೆಗಳ ಕಾಲ ಮಾತ್ರ ವೀಕ್ಷಿಸಲು ಸಾಧ್ಯ. ಜೋಗ ಜಲಪಾತವನ್ನು ಮಳೆಗಾಲದಲ್ಲಿ ನೋಡುವುದೇ ಒಂದು ಅದ್ಭುತ. ಆದರೆ, ಮಳೆಗಾಲದಲ್ಲಿ ಮೇಲಿಂದ ಕೆಳಕ್ಕೆ ಬೀಳುವ ನೀರಿನಿಂದ ಮಂಜು ಎದ್ದೇಳುತ್ತದೆ. ಇದರಿಂದ ಜಲಪಾತವನ್ನು ಸರಿಯಾಗಿ ನೋಡಲು ಆಗುವುದಿಲ್ಲ. ಜೋರಾಗಿ ಗಾಳಿ ಬಂದಾಗ ಮಾತ್ರ ಜೋಗದ ಸೌಂದರ್ಯವನ್ನು ಸವಿಯಲು ಸಾಧ್ಯವಾಗುತ್ತದೆ. ಆದರೆ, ಇವುಗಳಿಗೆ ಕೂಡ ಬ್ರೇಕ್ ಬೀಳುವ ಸಾಧ್ಯತೆಗಳಿವೆ.

Joga Falls ಜೋಗ ನಿವಾಸಿ ಹೇಳಿಕೆ: “ಜೋಗ ಜಲಪಾತವನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಲಾಗಿಲ್ಲ. ಅದಾಗಲೇ ಶುಲ್ಕ ಏರಿಕೆ ಮಾಡಿ ಫಲಕವನ್ನು ಅಳವಡಿಸಿದ್ದಾರೆ. ಜೋಗ ಅಭಿವೃದ್ಧಿ ಮಾಡಿದ್ದೇವೆ, ಇದರಿಂದ ದರ ಏರಿಕೆ ಮಾಡಿದ್ದೇವೆ ಎಂದು ಹೇಳಿದಿದ್ದರೆ ನ್ಯಾಯ ಅನ್ನಬಹುದಾಗಿತ್ತು. ಆದರೆ ಯಾವ ಅಭಿವೃದ್ಧಿ ಮಾಡದೇ ಏಕಾಏಕಿ ದರ ಏರಿಕೆ ಸರಿಯಲ್ಲ. ಮಾನ್ಯ ಜಿಲ್ಲಾಧಿಕಾರಿಗಳಿಗೂ, ಮಾನ್ಯ ಸಂಸದ ಬಿ.ಎಸ್. ರಾಘವೇಂದ್ರ ಅವರು ತಾವು ದಯಮಾಡಿ ಇದರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು”.
ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರಲ್ಲಿ ಕೇಳಿಕೊಳ್ಳುವುದು ಇಷ್ಟೇ ‘ದಯಮಾಡಿ ಸಾರ್ವಜನಿಕರ ಪರವಾಗಿ, ಬಡ ಕೂಲಿ ಕಾರ್ಮಿಕರ, ಮಧ್ಯಮವರ್ಗದವರ ಪರವಾಗಿ ತಾವು ಧ್ವನಿ ಎತ್ತಿ ಈಗಿರುವ ಆದೇಶವನ್ನು ರದ್ದುಗೊಳಿಸಿ. ಹಿಂದಿನ ದರವನ್ನು ಮುಂದುವರೆಸಲು ತಾವು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಇದನ್ನು ರದ್ದು ಪಡಿಸಬೇಕು’. ಈ ಕಾಮಗಾರಿಗಳೆಲ್ಲ ಅಭಿವೃದ್ಧಿಯಾದ ಮೇಲೆ ಅದಕ್ಕೆ ತಕ್ಕಂತೆ ದರ ನಿಗದಿ ಪಡಿಸಲಿ ನಮ್ಮ ವಿರೋಧವಿಲ್ಲ. ಆದರೆ ಇದು ಇನ್ನೂ ಮುಂದೆ ಹೋದರೆ ಕಾನೂನು ಹೋರಾಟ ಮಾಡಲು ಸಿದ್ಧನಿದ್ದೇನೆ” ಎಂದು ಜೋಗ ನಿವಾಸಿ ರಾಜಕುಮಾರ್ ಎಚ್ಚರಿಕೆ ನೀಡಿದ್ದಾರೆ.

Shiralkoppa Police ಉಡುಗಣಿಯಲ್ಲಿ ನೀರಿನಕೊಳಕ್ಕೆ ಕಾಲುಜಾರಿ ಬಿದ್ದು ಯುವಕ ಸಾವು

0

Shiralkoppa Police ಶಿರಾಳಕೊಪ್ಪ ಪಟ್ಟಣದ ಹತ್ತಿರವಿರುವ ಉಡುಗಣಿ ಅಕ್ಕಮಹಾದೇವಿ ದೇವಸ್ಥಾನ ಹತ್ತಿರವಿರುವ ನೀರಿನ ಕೊಳಕ್ಕೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಶಿರಾಳಕೊಪ್ಪ ಪಟ್ಟಣದ ಗಡಂಗಡಕೇರಿ ನಿವಾಸಿ ತಾಹಿರ್(21) ಎಂಬ ಯುವಕ ಮೃತಪಟ್ಟಿರುವ ಘಟನೆ ನಡೆದಿದೆ.

Shiralkoppa Police ಪಟ್ಟಣದಿಂದ ಕೇವಲ 3 ಕಿಲೋ ಮೀಟರ್ ದೊರದಲ್ಲಿರುವ ಉಡುಗಣಿ ಅಕ್ಕಮಹಾದೇವಿ ದೇವಸ್ಥಾನದ ಒಳ ಭಾಗದಲ್ಲಿ ಇತ್ತೀಚಿಗೆ ನಿರ್ಮಾಣ ಗೊಂಡಿರುವ ನೀರಿನ ಕಲ್ಯಾಣಿಯಲ್ಲಿ ಭಾನುವಾರ ರಜೆ ಇದ್ದ ಕಾರಣ ತನ್ನ ಸ್ನೇಹಿತನೊಂದಿಗೆ ಆ ಜಾಗಕ್ಕೆ ಹೋಗಿ ಫೋಟೋ ಕ್ಲಿಕ್ಕಿಸಿಕೊಳ್ಳುವ ಸಂಧರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತ ಪಟ್ಟಿರುತ್ತಾನೆ. ಸ್ಥಳೀಯರು ಕೊಡಲೇ ರಕ್ಷಿಸಲು ಪತ್ರಯತ್ನ ಪಟ್ಟರೊ ಪ್ರಯೋಜನವಾಗಿಲ್ಲ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಪಿ ಎಸ್ ಐ ಪ್ರಶಾಂತ ಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದು ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Karkala Police ಕಾರ್ಕಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವತಿ ಯೋರ್ವಳ ಮೇಲೆ ಅತ್ಯಾಚಾರ ಪ್ರಕರಣ

0

Karkala Police ಮದ್ಯದಲ್ಲಿ ಅಮಲು ಬರಿಸುವ ಪದಾರ್ಥ ಸೇರಿಸಿ ನೀಡಿ, ಯುವತಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿದ ಘಟನೆ ಕಾರ್ಕಳದಲ್ಲಿ ನಡೆದಿದೆ.

ಘಟನೆ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.ಅತ್ಯಾಚಾರ ಎಸಗಿದ ಬಗ್ಗೆ 24 ವರ್ಷದ ಯುವತಿಯ ಪೋಷಕರು ಶುಕ್ರವಾರ ಸಂಜೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು.

ದೂರಿನ ಪ್ರಕಾರ, ಅಲ್ತಾಫ್‌ ಎಂಬಾತ ಸುಮಾರು ಮೂರು ತಿಂಗಳ ಹಿಂದೆ ಯುವತಿಗೆ ಇನ್‌ಸ್ಟ್ರಾಗ್ರಾಮ್‌ ಮೂಲಕ ಪರಿಚಯವಾಗಿದ್ದ.
ಈತನೂ ಕಾರ್ಕಳದವನೇ ಆಗಿದ್ದಾನೆ.”ಈತ ಶುಕ್ರವಾರ ಮಧ್ಯಾಹ್ನ ಯುವತಿ ಕೆಲಸ ಮಾಡುವ ಸ್ಥಳಕ್ಕೆ ಹೋಗಿದ್ದ. ನಂತರ ಆಕೆಯನ್ನು ಒತ್ತಾಯಪೂರ್ವಕವಾಗಿ ಕಾರಿನ ಒಳಕ್ಕೆ ಕರೆದು, ಕಿಡ್ನಾಪ್ ಮಾಡಿ ಕರೆದೊಯ್ದಿದ್ದ,” ಎಂದು ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಕೆ. ಅರುಣ್‌ ವಿವರ ನೀಡಿದ್ದಾರೆ.

Karkala Police ಸ್ಥಳವೊಂದರಲ್ಲಿ ಗಾಡಿ ನಿಲ್ಲಿಸಿದಾಗ ಅಲ್ಲಿಗೆ ಆತನ ಸ್ನೇಹಿತರು ಬಂದು ಜತೆಯಾಗಿದ್ದರು. ಇವರು ತಮ್ಮೊಂದಿಗೆ ಬಿಯರ್ ಬಾಟಲಿ ತಂದಿದ್ದರು. ಈ ಬಿಯರ್‌ಗೆ ಅಲ್ತಾಫ್‌ ಬೇರೆ ಏನೋ ಅಮಲು ಪದಾರ್ಥವನ್ನು ಮಿಶ್ರಣ ಮಾಡಿ ನೀಡಿ, ನನಗೆ ನೀಡಿದ್ದ. ನಂತರ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ದೂರಿದ್ದಾಳೆ.ಕಾರ್ಕಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಈ ಘಟನೆ ಬಗ್ಗೆ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅತ್ಯಾಚಾರ ಎಸಗಿದ ಅಲ್ತಾಫ್‌ನನ್ನು ಈಗಾಗಲೇ ಬಂಧಿಸಿದ್ದಾರೆ. ಯುವತಿಯನ್ನು ಕರೆದುಕೊಂಡು ಹೋದ ಗಾಡಿಯನ್ನು ಕೂಡ ವಶಕ್ಕೆ ಪಡೆದಿದ್ದಾರೆ.ಅಲ್ತಾಫ್‌ಗೆ ಬಿಯರ್‌ ಬಾಟಲಿಯನ್ನು ತಂದು ನೀಡಿದ ಕ್ಸೇವಿಯರ್‌ ರಿಚರ್ಡ್‌ ಕ್ವಾದ್ರಾಸ್‌ನ್ನು ಕೂಡ ಬಂಧಿಸಲಾಗಿದ್ದು, ಆತನ ಗಾಡಿಯನ್ನೂ ವಶಕ್ಕೆ ಪಡೆಯಲಾಗಿದೆ. ತನ್ನ ಕೃತ್ಯ ಎಸಗಿದ ನಂತರ ಅಲ್ತಾಫ್ ಯುವತಿಯನ್ನು ಅವರ ಮನೆಯಲ್ಲಿ ಬಿಟ್ಟು ಹೋಗಿದ್ದ ಎಂದು ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಪ್ರಸ್ತುತ ಯುವತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕಸ್ತೂರ್ಬಾ (ಕೆಎಂಸಿ) ಆಸ್ಪತ್ರೆ ಗೆ ದಾಖಲಿಸಲಾಗಿದೆ.