Tuesday, March 31, 2026
Tuesday, March 31, 2026
Home Blog Page 589

Pune Police ಪುಣೆಯಲ್ಲಿ ಭಾರಿ ಮಳೆಯ ನಡುವೆ ಹೆಲಿಕಾಪ್ಟರ್ ಪತನ. ನಾಲ್ವರಿಗೆ ಗಾಯ

0

Pune Police ಮಹಾರಾಷ್ಟ್ರದ ಪುಣೆಯಲ್ಲಿ ಭಾರೀ ಮಳೆಯ ನಡುವೆ ಶನಿವಾರ ಹೆಲಿಕಾಪ್ಟರ್ ಪತನವಾಗಿದ್ದು, ಪೈಲಟ್ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ.

ಈ ಹೆಲಿಕಾಪ್ಟರ್ ಮುಂಬೈನಿಂದ ಹೈದರಾಬಾದ್‌ಗೆ ಹೋಗುತ್ತಿತ್ತು.
ಪ್ರಾಥಮಿಕ ವರದಿಗಳ ಪ್ರಕಾರ, ಎಲ್ಲಾ ನಾಲ್ವರು ಪ್ರಯಾಣಿಕರು ಗಾಯಗೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಖಾಸಗಿ ಹೆಲಿಕಾಪ್ಟರ್ ಮುಂಬೈನಿಂದ ಹೈದರಾಬಾದ್‌ಗೆ ತೆರಳುತ್ತಿದ್ದಾಗ ಪುಣೆ ಜಿಲ್ಲೆಯ ಪೌಡ್ ಗ್ರಾಮದ ಬಳಿ ಅಪಘಾತಕ್ಕೀಡಾಗಿದ್ದು ಹೆಲಿಕಾಪ್ಟರ್‌ನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದರು.

Pune Police ಪುಣೆ ಗ್ರಾಮಾಂತರ ಪೊಲೀಸ್ ಎಸ್ಪಿ ಪಂಕಜ್ ದೇಶಮುಖ್ ಮಾತನಾಡಿ, ಪೈಲಟ್ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇತರ ಮೂವರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದರು.

Congress ಹೊಸ ವಿಡಿಯೊ ಬಾಂಬ್!.ಮಾಜಿ ಸೀಎಂ ಇದ್ದರೆನ್ನಲಾದ ಅಶ್ಲೀಲ ಸಿಡಿ ಬರಲಿದೆ!

0

Congress ಪ್ರತಿಭಟನೆಯ ಸಂದರ್ಭದಲ್ಲಿ ಕಾಂಗ್ರೆಸ್‌ ಮಾಜಿ ಶಾಸಕರೊಬ್ಬರು ಬಿಜೆಪಿಯ ಮಾಜಿ ಸಿಎಂರೊಬ್ಬರು ಅಶ್ಲೀಲ ಸಿಡಿ ಬಿಡುಗಡೆಯಾಗಲಿದೆ ಎಂದಿದ್ದಾರೆ.ಸದ್ಯ ಇವರ ಮಾತು ಸಂಚಲನ ಮೂಡಿಸುತ್ತಿದೆ.

Congress ರಾಜ್ಯಮಟ್ಟದ ಮಾಧ್ಯಮಗಳ ವರದಿ ಪ್ರಕಾರ, ಜಮಖಂಡಿ ಮಾಜಿ ಶಾಸಕ ಆನಂದ ನ್ಯಾಮಗೌಡರವರು ಈ ಮಾತನ್ನು ಹೇಳಿದ್ದಾರೆ
ರಾಜ್ಯಪಾಲರ ವಿರುದ್ಧ ಪ್ರತಿಭಟನೆಯ ಸಂದರ್ಭದಲ್ಲಿ ಮಾತನಾಡಿದ ಅವರು, ಬಿಜೆಪಿಯಿಂದ ರಾಜ್ಯದ ಮುಖ್ಯಮಂತ್ರಿ ಆಗಿದ್ದವರು ಒಬ್ಬರ ಸಿಡಿ ಬರುವ ಸುದ್ದಿ ಬಂದಿದೆ, ಅದನ್ನು ನೀವು ನೋಡಿದ್ದೀರೋ ಇಲ್ಲವೋ ಗೊತ್ತಿಲ್ಲ. ನಾನು ಇವತ್ತು ಆ ಸುದ್ದಿ ಕೇಳಿದ್ದೇನೆ. ಅತಿ ಶೀಘ್ರದಲ್ಲಿ ಆ ಅಶ್ಲೀಲ ಸಿಡಿ ಹೊರಬರಲಿದೆಯಂತೆ ಎಂದಿದ್ದಾರೆ

New Pension Scheme ಈಗ ಎನ್ ಪಿ ಎಸ್ ಅಲ್ಲ ಯುಪಿಎಸ್ ಪಿಂಚಣಿ ಯೋಜನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ

0

New Pension Scheme ಹೊಸ ಪಿಂಚಣಿ ಯೋಜನೆ ಅಥವಾ ರಾಷ್ಟ್ರೀಯ ಪಿಂಚಣಿ ಯೋಜನೆಗೆ ( ಎನ್ ಪಿಎಸ್ ) ಗೆ ತೀವ್ರ ವಿರೋಧ ವ್ಯಕ್ತವಾಗಿರುವ ನಡುವೆ, ಏಕೀಕೃತ ಪಿಂಚಣಿ ಯೋಜನೆಗೆ ( ಯುಪಿಎಸ್) ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಈ ಮೂಲಕ ಸರ್ಕಾರಿ ನೌಕರರಿಗೆ ನಿವೃತ್ತಿಯ ಬಳಿಕ ಮೂಲ ವೇತನದ ಕನಿಷ್ಠ 50% ಪಿಂಚಣಿಯಾಗಿ ನೀಡಲು ಸರ್ಕಾರ ನಿರ್ಧರಿಸಿದೆ.
ಸಚಿವ ಸಂಪುಟದ ನಿರ್ಧಾರಗಳನ್ನು ಪ್ರಕಟಿಸಿದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ “ಏಕಿಕೃತ ಪಿಂಚಣಿ ಯೋಜನೆ ( ಯುಪಿಎಸ್ ) ಅಡಿ ಸರ್ಕಾರಿ ನೌಕರರು ನಿವೃತ್ತಿಯ ಹಿಂದಿನ 12 ತಿಂಗಳ ಸರಾಸರಿ ಮೂಲ ವೇತನದ ಕನಿಷ್ಠ ಶೇ. 50ರಷ್ಟನ್ನು ಪಿಂಚಣಿಯಾಗಿ ಪಡೆಯಲು ಅರ್ಹರಾಗಿರುತ್ತಾರೆ ಎಂದು ತಿಳಿಸಿದ್ದಾರೆ.

New Pension Scheme ಎನ್ ಪಿಎಸ್ ಆಯ್ಕೆ ಮಾಡಿಕೊಂಡವರಿಗೆ ಈಗ ಯುಪಿಎಸ್ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಕನಿಷ್ಠ 25 ವರ್ಷ ಕೆಲಸ ಮಾಡಿದವರಿಗೆ ಮೂಲ ವೇತನದ ಶೇ.50ರಷ್ಟು ಪಿಂಚಣಿಯಾಗಿ ಸಿಗಲಿದೆ. ಅದಕ್ಕಿಂತ ಕಡಿಮೆ ವರ್ಷ ಕೆಲಸ ಮಾಡಿದವರಿಗೆ ಸಿಗುವ ಮೊತ್ತ ಕಡಿಮೆಯಾಗಲಿದೆ.

ಯುಪಿಎಸ್ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ನಿಯೋಜಿತ ಸಂಪುಟ ಕಾರ್ಯದರ್ಶಿ ಟಿ.ವಿ ಸೋಮನಾಥ್ ಅವರು ಹೊಸ ಯೋಜನೆಯು 2025ರ ಏಪ್ರಿಲ್ 1ರಿಂದ ಅನ್ವಯವಾಗಲಿದೆ ಎಂದು ಹೇಳಿದ್ದಾರೆ.

Shivamogga News ಕನ್ನಡದಲ್ಲಿ ವೈದ್ಯಕೀಯ ಸಾಹಿತ್ಯ ವಿಪುಲವಾಗಿ ಬರುತ್ತಿದೆ- ಡಾ.ಕೆ.ಎನ್.ಗುರುದತ್

0

Shivamogga News ವೈದ್ಯಕೀಯ ಸಾಹಿತ್ಯ- ಒಂದು ಕಿರು ಅವಲೋಕನ” ಮಾಡಿದವರು ಡಾ.ಕೆ.ಎನ್.ಗುರುದತ್ತ.
ಸಹೃದಯರಾದ ಡಾ.ಗುರುದತ್ತರ ಸ್ವಗೃಹದಲ್ಲಿ ಶ್ರಾವಣ ಸಂಜೆ ಕಾರ್ಯಕ್ರಮ ನಡೆಯಿತು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ವಿಶೇಷವಾಗಿ‌
ಮನೆಮನೆಯಲ್ಲಿ ಸಾಹಿತ್ಯ
ಸಹೃದಯ ಸ್ಪಂದನ ಏರ್ಪಡಿಸಿತ್ತು. ವೈದ್ಯರೇ ಬರೆದರೆ ಸಾಹಿತ್ಯವಾದೀತೆ‌ ? ಎಂಬ ಪ್ರಶ್ನೆಯಿಂದ
ತಮ್ಮ ವಿಚಾರ ಸರಣಿಯನ್ನ ಉಪನ್ಯಾಸಕಾರರಾದ
ಡಾ .ಗುರುದತ್ ಆರಂಭಿಸಿದರು.
ವೈದ್ಯರು ವೈದ್ಯಕೀಯದ ಬಗ್ಗೆ ರಚಿಸಿದರೆ ಅದು ಶಾಸ್ತ್ರ ವಾಗುತ್ತದೆ.
ಆದರೆ ರೋಗ, ಚಿಕಿತ್ಸೆ ,ಮತ್ತು‌ ರೋಗಿಗಳೊಂದಿಗಿನ ಸ್ಪಂದನ ಅಭಿವ್ಯಕ್ತಿ ಸಾಹಿತ್ಯವಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಉಲ್ಲೇಖವಿರುವ ಕನ್ನಡದ ಮೊದಲ ವೈದ್ಯಸಾಹಿತ್ಯ ಗ್ರಂಥ,
ಚಂದ್ರರಾಜನ (1079) “ಮದನತಿಲಕ,”

ಸಾಹಿತ್ಯದಲ್ಲಿ ವೈದ್ಯಕೀಯದ ಹೊಳಹುಗಳು ಯಥೇಚ್ಚವಿವೆ. ಅವು ಮಾಹಿತಿ ಮತ್ತು ಜಾಗೃತಿಯನ್ನು ಮೂಡಿಸುವಂತಿವೆ.
ಸರ್ವಜ್ಞನ ವಚನಗಳಲ್ಲಿ ಈ ತರಹೆಯ ಜಾಗೃತಿ
ಸಂದೇಶವನ್ನು ಕಾಣಬಹುದು.

“ಹಸಿವಿಲ್ಲದುಣಬೇಡ
ಹಸಿದು ಮತ್ತಿರಬೇಡ
ಬಿಸಿಬೇಡ ತಂಗಳುಣಬೇಡ
ವೈದ್ಯನ ಬೆಸನವೇ ಬೇಡ ಸರ್ವಜ್ಞ”
ಹಸಿವಾದರೆ ತಿನ್ನು.
ಅನಗತ್ಯ ತಿನ್ನುಬಾಕತನ ಬೇಡ ಎಂಬುದೇ ಇಲ್ಲಿನ ಆಶಯ. ಅತೀ ಆಹಾರ ಸೇವನೆ,ಆರೋಗ್ಯಕ್ಕೆ ಹಾನಿಕರ ಎಂಬ ವಾಸ್ತವ,ಹಿರಿಯರು ಹೇಳುವ ಹಿತನುಡಿಯೂ ಇದೇ ಆಗಿದೆ.
ತಂಗಳುಣಬೇಡ. ಹಳಸಿದ ಅನ್ನ ಸೇವಿಸಿದರೆ ಆರೋಗ್ಯ ಕೆಡುತ್ತದೆ.
ಹೀಗೆ ತೀರ ಬಿಸಿಬಿಸಿಯದನ್ನೂ ಸೇವಿಸಬೇಡ.
ಹಸಿದುಕೊಂಡೇ ಇರಬೇಡ. ಈ ಎಲ್ಲ ಸಂಗತಿಗಳೂ ಪ್ರಸ್ತುತ
ಈಗಿನ ಸಮುದಾಯಕ್ಕೆ ಸೂಕ್ತವಾಗಿ ಹೇಳಿದಂತಿದೆ.

ಒಂದ್ಹೊತ್ತುಂಡವ ಯೋಗಿ ‘ ಎರಡ್ಹೊತ್ತುಂಡವಭೋಗಿ’
ಮೂರ್ಹೊತ್ತುಂಡವ ರೋಗಿ
ನಾಕ್ಹೊತ್ತುಂಡವನ ಹೊತ್ಕೊಂಡು ಹೋಗಿ” ಎಂಬ ಆಡುಮಾತೂ ಇದೆ

ಹೀಗೆ ಹಿಂದಿನಿಂದಲೂ ವೈದ್ಯಕೀಯ ಕುರಿತ ಸಲಹೆ ,ಮಾಹಿತಿ‌
ಕೊಡುವ ಮೂಲಕ ಒಂದಿಲ್ಲೊಂದು ಜಾಗೃತಿ ಮೂಡಿಸುವಲ್ಲಿ ಬರಹಗಳಲ್ಲಿ ಒಡಮೂಡಿಬಂದಿವೆ.

ವೈದ್ಯಕೀಯ ಬರಹಗಾರರಿಗೆ ಕನ್ನಡದ ಸಮಾನಪದಗಳ ಕೊರತೆಯಿದ್ದಾಗ ವೈದ್ಯಕೀಯ ನಿಘಂಟು ರಚಿಸಿ ಕೊಟ್ಟವರು ಡಾ.ಡಿ.ಎಸ್.ಶಿವಪ್ಪ.
ನಂತರ ಕನ್ನಡದಲ್ಲಿ ಅನೇಕ ವೈದ್ಯಕೀಯ ಬರಹಗಾರರು ಬಂದರು.
ಡಾ.ರಾ.ಶಿವರಾಂ,
ಡಾ.ಅನುಪಮಾ ನಿರಂಜನ, ಡಾ.ಸಿ.ಎನ್.ಚಂದ್ರಶೇಖರ್. ಡಾ.ಮೀನಂಗುಡಿ ಸುಬ್ರಮಣ್ಯ ,
ಡಾ.ಅಶೋಕ ಪೈ, ಡಾ.ಕೆ.ಆರ್.ಶ್ರೀಧರ್
ಡಾ.ಎಚ್.ಡಿ.
ಚಂದ್ರಪ್ಪ ಗೌಡರು..ಹೀಗೆ‌ಬರಹಗಾರರ ಪ್ರವಾಹವೇ ಇದೆ. ಎಂದು ಅವರೆಲ್ಲರ ಕೊಡುಗೆಗಳನ್ನ ಸ್ಮರಿಸಿದರು.

ಸಾಹಿತ್ಯ ರಚನೆ ಅನ್ನುವುದಕ್ಕಿಂತ ವೈದ್ಯಕೀಯ ಬರಹಗಾರರು ಸಾಮಾಜಿಕ ಎಚ್ಚ ಮೂಡಿಸುವಲ್ಲಿ , ಆರೋಗ್ಯದ ಬಗ್ಗೆ ಕಾಳಜಿಯನ್ನ ಸ್ವಯಂಪ್ರೇರಣೆಯಿಂದ ಹೊಂದುವಂತೆ
ಮಾಡುವಲ್ಲಿ‌ ಯಶಸ್ಸು ಸಾಧಿಸಿದ್ದಾರೆ.
ಪಾಶ್ಚಿಮಾತ್ಯ ದೇಶಗಳ ವೈದ್ಯರ ಕುರಿತು ಸೋದಾಹರಣ ಭಾಷಣ ಮಾಡಿದರು.

ಬಿ.ಸಿ.ರಾಯ್ ಪ್ರಶಸ್ತಿ ಪುರಸ್ಕೃತ
ಡಾ.ಕೃಷ್ಣ ಎಸ್. ಭಟ್ ಅವರು
ಸಂವಾದದಲ್ಲಿ ಪ್ರಮುಖವಾಗಿ ಭಾಗವಹಿಸಿದ್ದರು.
ಶಿವಮೊಗ್ಗ ಜಿಲ್ಲಾ ಶಾಖೆ ಅಧ್ಯಕ್ಷ
ಡಾ.ಸುಧೀಂದ್ರ ಅವರು‌ ಮಾತನಾಡಿದರು.
ಕವಿ,ಕಾದಂಬರಿಕಾರರ ಮನಸ್ಥಿತಿಯೇ ಬೇರೆ ,ವೈದ್ಯಕೀಯ ಬರಹಗಾರರ ನಿರೂಪಣೆಯೇ ಭಿನ್ನ.ಏಕೆಂದರೆ ಕವಿ‌ ಕಲ್ಪಿಸಿ ಕೃತಿ ರಚುಸುತ್ತಾನೆ.ಆದರೆ ವೈದ್ಯಕೀಯ ಸಾಹಿತಿಗಳು ವಾಸ್ತವ ಮತ್ತು ಸ್ವಾಸ್ಥ್ಯದ ಚೌಕಟ್ಟಿನೊಳಗೇ ಅಭಿವ್ಯಕ್ತಿ ಸಾಧಿಸುವ ಅಪೂರ್ವತೆ ಹೊಂದಿರುತ್ತಾರೆ ಎಂದರು

ಸದಸ್ಯೆ ಶ್ರೀಮತಿ‌ ಜಯಶ್ರೀ ಅವರು‌‌ ಪ್ರಾರ್ಥಿಸಿದರು.
ಕೋಶಾಧಿಕಾರಿ ಕೆ.ಜಿ.ಮಂಜುನಾಥ ಶರ್ಮ ಸ್ವಾಗತ ಬಯಸಿದರು.
ಸಂಪರ್ಕ ಪ್ರಮುಖ ಎಚ್.ಎನ್ ಸತ್ಯನಾರಾಯಣ ವಂದನೆ ಅರ್ಪಿಸಿದರು.
ಉನ್ಯಾಸ ನೀಡಿದ ಡಾ.ಗುರುದತ್ ಅವರ ಶ್ರೀಮತಿ ಡಾ.ವಸುಧಾ
ಅವರು ಆತಿಥ್ಯ ನೀಡಿದರು.

Girish Kasaravalli ಸಿನಿಮಾ ಪರಂಪರೆಯ ಭಾಗವಾಗಿ ಉಳಿದುಕೊಂಡಿಲ್ಲ-ಗಿರೀಶ್ ಕಾಸರವಳ್ಳಿ

0

Girish Kasaravalli ಶಿವಮೊಗ್ಗ ಇಂದು ಸಿನಿಮಾ ಸಂಪೂರ್ಣ ವಾಣಿಜ್ಯೋದ್ಯಮ ಆಗಿದೆ.ಅದು ಜನರನ್ನು ಕೆರಳಿಸುತ್ತದೆ ಹೊರತು ಅರಳಿಸುವುದಿಲ್ಲ ಯಾರೂ ಬೇಕಾದರೂ ಇಂದು ಸಿನಿಮಾ ಮಾಡಬಹುದು.ಆದರೆ ಅದು ಪರಂಪರೆಯ ಭಾಗವಾಗಿ ಉಳಿದುಕೊಂಡಿಲ್ಲ.ಅದು ಕೆಲವು ತಂತ್ರಗಳನ್ನು ಅವಲಂಬಿಸಿದೆ.ಎಂದು 4ಸಲ ಸ್ವರ್ಣ ಕಮಲ ಪ್ರಶಸ್ತಿ ಪಡೆದ ನಿರ್ದೇಶಕರಾದ ಪದ್ಮಶ್ರೀ ಗಿರೀಶ್ ಕಾಸರವಳ್ಳಿ ಹೇಳಿದರು.ಅವರು ಎ.ಟಿ.ಎನ್.ಸಿ.ಸಿ.ಕಾಲೇಜಿನ ಫ್ರೆಂಡ್ಸ್ ಸೆಂಟರ್ ಹಾಲ್ ನಲ್ಲಿ ನಡೆದ ಬಹುಮುಖಿ ಶಿವಮೊಗ್ಗದ ಕಾರ್ಯಕ್ರಮ ದಲ್ಲಿ ಮಾತನಾಡುತ್ತಿದ್ದರು.
ಸಿನಿಮಾ ಮಾನವ ಇತಿಹಾಸದಲ್ಲಿ ಪ್ರಮುಖ ಭಾಗವಾಗಿ ಬಂದಿದೆ.ಇಂದು ಮೊಬೈಲ್ ಇದ್ದವರೆಲ್ಲ ಸಿನಿಮಾ ಮಾಡಬಹುದು.ಅದು ಹಣವಿದ್ದವರ ಸ್ವತ್ತಾಗಿದೆ.ಆದರೆ ಅದು ಸಾಮಾಜಿಕ ಸಂವಾದ ಹುಟ್ಟು ಹಾಕುವುದಿಲ್ಲ ಸಿನಿಮಾ ಸಾಮಾಜಿಕ ಕೃತಿಗಳಂತೆ ಸಂವಾದ ಹುಟ್ಟು ಹಾಕಬೇಕು.ಸಿನಿಮಾ ಕಲೆಯಾಗಿಯೇ ಉಳಿಯಬೇಕಾದರೆ ಅದು ಹೊಸ ಚರ್ಚೆಯನ್ನು ಹುಟ್ಟು ಹಾಕಬೇಕು.
ಸಿನಿಮಾ ಡಿಸೆಂಬರ್ 24ರಂದು 1893ರಲ್ಲಿ ಪ್ರಾರಂಭವಾಯಿತು ಆರಂಭದಲ್ಲಿ ಅದು ದೃಶ್ಯ ಕಲೆ ಆಗಿತ್ತು ನಂತರ ದೃಶ್ಯ ಶ್ರವ್ಯ ಎರಡು ಕಲೆ ಆಗಿತ್ತು.ನಂತರ 50ರ ದಶಕದಲ್ಲಿ ಜೋಡಿಸುವುದು ಅನಂತರ 70ರ ದಶಕದಲ್ಲಿ ಕಾಣಿಸುವುದು ಇತ್ತೀಚೆಗೆ ನೋಡುಗನನ್ನು ಉದ್ರೇಕಿಸುವದು ಎಂದಾಗಿದೆ.ಈಗ ಸಿನಿಮಾ ಅನುಭವಿಸುವುದಾಗಿದೆ.ಆದರೆ
Girish Kasaravalli ಸಿನಿಮಾ ನಮಗೆ ಅರಿವು ಮೂಡಿಸಬೇಕು.ಸಿನಿಮಾ ಸುಳ್ಳುಹೇಳುವ ಜಾಹೀರಾತು ಸಿನಿಮಾ ಆಗಬಾರದು. ಹೊಸದಾಗಿ ಚಿತ್ರ ನೀಡುವವರು ಸಾಮಾಜಿಕ ಚಳುವಳಿ ಕಲೆ ಅರ್ಥ ಮಾಡಿಕೊಳ್ಳಬೇಕು ಇತರ ಕಲೆಗಳು ಜನರಿಗೆ ಏನನ್ನು ಕೊಡುತ್ತದೆ ಅದಕ್ಕಿಂತ ಭಿನ್ನವಾಗಿ ಚಿತ್ರ ಗಳು ಜನರಿಗೆ ಏನನ್ನು ಕೊಡುತ್ತದೆ ಎನ್ನುವುದು ಮುಖ್ಯ ವಾಗುತ್ತದೆ.ಎಂದರು.
ಇಂದು ಪ್ರಶಸ್ತಿ ಗಳು ಕೂಡ ಜನಪ್ರಿಯ ಚಿತ್ರಗಳಿಗೆ ಬೇಗ ಅರ್ಥವಾಗುವ ಚಿತ್ರಗಳಿಗೆ ಸಿಗುತ್ತಿದೆ.ಅದು ಕೆರಳಿಸುವ ಚಿತ್ರ ಆಗಿರಬಹುದು ಎಂದರು.
ಅನಂತಮೂರ್ತಿಯವರ ಘಟಶ್ರಾದ್ಧ ಚಿತ್ರದಿಂದಲೇ ನ್ನ ಸಿನಿಮಾ ಪ್ರಯಾಣ ಆರಂಭಿಸಿದೆ.ಈಗ ಅನಂತಮೂರ್ತಿ ಯವರ ಆಕಾಶ ಮತ್ತು ಬೆಕ್ಕು ಕತೆಯನ್ನು ಸಿನಿಮಾ ಮಾಡುವ ಯೋಚನೆ ಮಾಡುತ್ತಿದ್ದೇನೆ.ಎಂದು ತಿಳಿಸಿದರು.
ಬಹುಮುಖಿ ಶಿವಮೊಗ್ಗದ ಡಾ .ಹೆಚ್.ಎಸ್.ನಾಗಭೂಷಣ ರವರು ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿ ನಿರೂಪಣೆ ಮಾಡಿದರು.

Sharanya Shetty ಸತ್ಯಪ್ರಿಯ ಗೋಶಾಲೆಯ ಕರುವಿಗೆ “ನಾಮಕರಣ” ಭಾಗ್ಯ

0

Sharanya Shetty ಜೆಸಿಐ ಶಿವಮೊಗ್ಗ ಸ್ಟಾರ್ಸ್ ಅವರು ನಿರ್ವಹಣೆ ಮಾಡುತ್ತಿರುವ ಸತ್ಯಪ್ರೀಯ ಗೋಶಾಲೆಗೆ, ಬೇಟಿ ನೀಡಿದ ಕೃಷಣಂ ಪ್ರಣಯ ಸಖಿ ಚಿತ್ರ ನಟಿ ಶರಣ್ಯ ಶೆಟ್ಟಿ. ಒಂದು ತಿಂಗಳ ಕರುವಿಗೆ “ಬಸವ ಪ್ರಸಾದ್” ಹೆಸರು ನಾಮಕರಣ. ಪ್ರಸಾದ್ ನಮ್ಮ ಶಿವಮೊಗ್ಗ ನಗರದ ಪ್ರಾಣಿ ಪಕ್ಷಿ ಪ್ರೇಮಿ ಅಪಘಾತದಲ್ಲಿ ಮೃತಪಟ್ಟ ಸರಾಕ್ ಅಧ್ಯಕ್ಷರ ಹೆಸರು ನಾಮಕರಣ ಮಾಡಿ ಗೊ ಪೂಜೆ ಸಲ್ಲಿಸಿದರು. ಈ Sharanya Shetty ಸಂದರ್ಭದಲ್ಲಿ ಜೆಸಿಐ ಶಿವಮೊಗ್ಗ ಸ್ಟಾರ್ಸ್ ನ ಸಂಸ್ಥಾಪಕ ಅಧ್ಯಕ್ಷೆ ಜೆಸಿ ಅಶ್ವಿನಿ ಚಂದ್ರಶೇಖರ್, ಅಧ್ಯಕ್ಷ ನವೀನ್ ತಲಾರಿ ಮತ್ತು ಪದಾಧಿಕಾರಿಗಳು ಉಪಸ್ಥಿತಿ ಇದ್ದರು.

Online Scam ಆನ್ ಲೈನ್ ಹಣ ದ್ವಿಗುಣ ಆಮಿಷಕ್ಕೆ ಸೋತ ಯುವಕನ ಆತ್ಮಹತ್ಯೆ

0

Online Scam ಆನ್ಲೈನ್ ಆಯಪ್ ನಂಬಿ ಹಣ ಕಳೆದುಕೊಂಡ ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಭದ್ರಾವತಿ ನಗರದ ಪೇಪರ್ ಟೌನ್ ಬಡಾವಣೆಯ ಆರನೇ ವಾರ್ಡ್ನಲ್ಲಿ ನಡೆದಿದೆ. ಪ್ರದೀಪ್ (27) ಆತ್ಮಹತ್ಯೆ ಮಾಡಿಕೊಂಡ ಯುವಕ. ಆನ್ ಲೈನ್ನಲ್ಲಿ ಒನ್ ಟು ಡಬಲ್ ಹಣ ಆಗುತ್ತದೆ ಎಂದು ನಂಬಿ 91 ಸಾವಿರ ರೂಪಾಯಿ ಸಾಲ ಮಾಡಿ ಹಣ ತೊಡಗಿಸಿ ಮೋಸ ಹೋಗಿದ್ದ. ಹಣ ಪಾವಸ್ ಬಾರದ ಹಿನ್ನಲೆಯಲ್ಲಿ ಮನನೊಂದು ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾನೆ. ಇನ್ನು ಇತ ಭದ್ರಾವತಿ ತಾಲೂಕಿನ ಮಾಚೇನಹಳ್ಳಿಯ ಶಾಹಿ ಎಕ್ಸ್ಪೋರ್ಟ್ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡಿಕೊಂಡಿದ್ದ. ಆನ್ ಲೈನ್ ಆಯಪ್ಗಳನ್ನು ನಂಬಿ ಮೋಸ ಹೋಗಿ ಕೊನೆಯುಸಿರೆಳೆದಿದ್ದಾನೆ. ಈ ಕುರಿತು ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿನ್ನೆಯಷ್ಟೇ ಭದ್ರಾವತಿಯ ಪೇಪರ್ ಟೌನ್ ಬಡಾವಣೆಯ ಸ್ಟಿವನ್ (24) ಎಂಬಾತ ಮೀಟರ್ ಬಡ್ಡಿ ಟಾರ್ಚರ್ ತಾಳಲಾರದೇ Online Scam ಆತ್ಮಹತ್ಯೆ ಮಾಡಿಕೊಂಡಿದ್ದ. ಮೃತನ ತಂದೆ ಮಾಡಿದ್ದ ಸಾಲಕ್ಕೆ ಹಣ ಪಡೆದು, ಬಳಿಕ ಮೀಟರ್ ಬಡ್ಡಿ ಕಟ್ಟಲು ಆಗದೇ ಪರದಾಡುತ್ತಿದ್ದರು. ಇದೇ ಮೀಟರ್ ಬಡ್ಡಿ ಟಾರ್ಚರ್ಗೆ ಸ್ಟಿವನ್ ನೇಣಿಗೆ ಶರಣಾಗಿದ್ದ. ಈ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಬ್ಬ ಯುವಕ ಆನ್ಲೈನ್ ಆಯಪ್ ನಂಬಿ ಹಣ ಕಳೆದುಕೊಂಡು ಸಾವನ್ನಪ್ಪಿದ್ದಾನೆ.

Elephant Attack ಪುರದಾಳು ಪಂಚಾಯ್ತಿ ವ್ಯಾಪ್ತಿಯಲ್ಲಿ ಕಾಡಾನೆ ದಾಳಿ.ಕೃಷಿ ಕಾರ್ಮಿಕನ ಸಾವು

0

Elephant Attack ಕಾಡಾನೆ ದಾಳಿಯಿಂದ ಕೃಷಿ ಕೂಲಿಕಾರ್ಮಿಕರೋರ್ವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ, ಆ. 24 ರ ಶನಿವಾರ ರಾತ್ರಿ ಶಿವಮೊಗ್ಗ ತಾಲೂಕಿನ ಪುರದಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಆಲದೇವರ ಹೊಸೂರು ಗ್ರಾಮದಲ್ಲಿ ನಡೆದಿದೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ಮೂಲದ ನಿವಾಸಿ ಹನುಮಂತಪ್ಪ (45) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಹನುಮಂತಪ್ಪ ಅವರು ಕೆಲಸ ಮಾಡುತ್ತಿದ್ದ ತೋಟದ ಬಳಿ ಬರುತ್ತಿದ್ದ ವೇಳೆ, ಏಕಾಏಕಿ ಕಾಡಾನೆ ದಾಳಿ ನಡೆಸಿದೆ.
ಗಂಭೀರವಾಗಿ ಗಾಯಗೊಂಡ ಹನುಮಂತಪ್ಪ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿ – ಸಿಬ್ಬಂದಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.
ಹನುಮಂತಪ್ಪ ಅವರು ಕಳೆದ ಹಲವು ವರ್ಷಗಳಿಂದ ಶ್ರೀಧರ್ ಎಂಬುವರ ತೋಟದಲ್ಲಿ ಕೂಲಿಕಾರ್ಮಿಕರಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದರು. ತೋಟದಲ್ಲಿನ ಮನೆಯಲ್ಲಿಯೇ ಪತ್ನಿ, ಮೂರು ಮಕ್ಕಳೊಂದಿಗೆ ನೆಲೆಸಿದ್ದರು ಎಂದು ಸ್ಥಳೀಯ ರೈತರು ಮಾಹಿತಿ ನೀಡಿದ್ದಾರೆ.
Elephant Attack ಹನುಮಂತಪ್ಪ ಅವರು ಅತ್ಯಂತ ಕಡುಬಡವರಾಗಿದ್ದಾರೆ. ಅವರ ಸಾವಿನಿಂದ ಇಡೀ ಕುಟುಂಬ ಬೀದಿ ಪಾಲಾಗುವಂತಾಗಿದೆ. ಮೃತನ ಕುಟುಂಬಕ್ಕೆ ರಾಜ್ಯ ಸರ್ಕಾರ ಸೂಕ್ತ ಪರಿಹಾರ ಘೋಷಣೆ ಮಾಡಬೇಕು ಎಂದು ನಾಗರೀಕರು ಆಗ್ರಹಿಸಿದ್ದಾರೆ.

Rain in Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ಮಳೆ ಸುರಿಯಲಿದೆ

0

Rain in Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಮಳೆ ಮತ್ತೆ ಚುರುಕುಗೊಂಡಿದೆ. ಹಲವೆಡೆ ಭಾರೀ ಮಳೆಯಾಗಗತೊಡಗಿದೆ. ಶನಿವಾರ ಶಿವಮೊಗ್ಗ ತಾಲೂಕು ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿದೆ . ಈ ನಡುವೆ ಮುಂದಿನ 24 ಗಂಟೆಗಳ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ಮಳೆ ಮುಂದುವರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
12 ರಿಂದ 20 ಸೆಂಟಿ ಮೀಟರ್ ವರೆಗೆ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ, ಶಿವಮೊಗ್ಗ ಜಿಲ್ಲೆಗೆ ಆರೆಂಜ್ ಅಲರ್ಟ್ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಸಂಕಷ್ಟ :
Rain in Shivamogga ಪ್ರಸ್ತುತ ವರ್ಷ ಭಾರೀ ಮಳೆಯಿಂದ ಮೆಕ್ಕೆಜೋಳ ಬೆಳೆಗಾರರು ಸಂಕಷ್ಟ ಸಿಲುಕುವಂತಾಗಿದೆ. ಹಲವೆಡೆ ಮೆಕ್ಕೆಜೋಳ ಬೆಳೆ ಹಾಳಾಗಿದೆ. ಮತ್ತೊಂದೆಡೆ, ಮಳೆ ಮುಂದುವರಿದಿರುವುದರಿಂದ ಅಳಿದುಳಿದ ಬೆಳೆಯು ಕೂಡ ಮಳೆ ಸಿಲುಕಿ ಹಾಳಾಗುತ್ತಿದೆ ಎಂದು ಬೆಳೆಗಾರರು ಅಳಲು ತೋಡಿಕೊಳ್ಳುತ್ತಾರೆ.

Priests oppose ‘Langoti Man’ movie ಲಂಗೋಟಿ ಮ್ಯಾನ್ ಸಿನಿಮಾ. ಸಮುದಾಯದ ಅವಹೇಳನ- ರಾಘವೇಂದ್ರ ಭಟ್

0

Priests oppose ‘Langoti Man’ movie ಸಂಜೋತಾ ಭಂಡಾರಿ ನಿರ್ದೇಶನದ ‘ಲಂಗೋಟಿ ಮ್ಯಾನ್’ ಚಿತ್ರಕ್ಕೆ ಅಖಿಲ ಕರ್ನಾಟಕ ಅರ್ಚಕರ ಹಾಗೂ ಪುರೋಹಿತರ ಪರಿಷತ್ ತೀವ್ರ ಖಂಡಿಸಿದೆ. ಸಮುದಾಯದ ಕುರಿತು ಅಪಹಾಸ್ಯ ಮಾಡುವುದು ತಪ್ಪು ಎಂದು ಚಿತ್ರತಂಡವನ್ನು ಪುರೋಹಿತರ ಪರಿಷತ್ ಕಾರ್ಯಾಧ್ಯಕ್ಷ ರಾಘವೇಂದ್ರ ಭಟ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಚಿತ್ರದ ಟೈಟಲ್ ಕುರಿತು ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ ಕಾರ್ಯಾಧ್ಯಕ್ಷ ರಾಘವೇಂದ್ರ ಭಟ್ ಮಾತನಾಡಿ, ಈ ರೀತಿ ಒಂದು ಸಮುದಾಯದ ಕುರಿತು ಅಪಹಾಸ್ಯ ಮಾಡುವುದು ತಪ್ಪು ಎಂದಿದ್ದಾರೆ.
ಈ ಚಿತ್ರವನ್ನು ಬ್ಯಾನ್ ಮಾಡದಿದ್ದರೆ ಎಲ್ಲ ಚಿತ್ರಮಂದಿರಗಳಲ್ಲಿ ಪ್ರತಿಭಟನೆ ನಡೆಸುತ್ತೇವೆ. ಲಂಗೋಟಿ, ಜನಿವಾರ ಇವು ಸನಾತನ Priests oppose ‘Langoti Man’ movie ಸಂಸ್ಕೃತಿಯ ಪ್ರತೀಕ. ಇದು ಅಪಹಾಸ್ಯ ಮಾಡುವ ವಿಚಾರವಲ್ಲ. ಇತ್ತೀಚೆಗೆ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಎಲ್ಲರ ಶ್ರೇಯೋಭಿವೃದ್ದಿಗೆ ಪೂಜೆ ಮಾಡಿದ್ದಾರೆ. ಇಂದು ನಮ್ಮನ್ನೇ ಅಪಹಾಸ್ಯ ಮಾಡುತ್ತಿದ್ದಾರೆ. ಇದನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದರು.
ಚಿತ್ರ ತಂಡದವರಿಗೆ ಈ ಮೂಲಕ ಎಚ್ಚರಿಕೆ ಕೊಡುತ್ತಿದ್ದೇವೆ. ಒಂದೊಮ್ಮೆ ಇದನ್ನು ಬಿಡುಗಡೆ ಮಾಡಿದರೆ ರಾಜ್ಯಾದ್ಯಂತ ಪ್ರತಿಭಟನೆಗೆ ಅರ್ಚಕರ ಪರಿಷತ್ ನಿರ್ಧರಿಸಿದೆ ಎಂದು ಎಚ್ಚರಿಕೆ ನೀಡಿದರು.