ಶಿವಮೊಗ್ಗ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗ ಮತ್ತು ಉಪವಿಭಾಗ ಶಿವಮೊಗ್ಗ ಇವರ ವತಿಯಿಂದ 2025-26 ನೇ ಸಾಲಿನ ಮಾರ್ಚ್ 15 ರ ಭಾನುವಾರದಂದು ನೀರಿನ ಕಂದಾಯ ಮತ್ತು ಬಾಕಿ ಕರ ವಸೂಲಾತಿ ಮಾಡಲು ವಿಶೇಷ ವಸೂಲಾತಿ ಕೌಂಟರ್‌ಗಳನ್ನು ಕೆಳಕಂಡ ಸ್ಥಳಗಳಲ್ಲಿ ತೆರೆಯಲಾಗಿದೆ.
ಹೊಸಮನೆ ಮುಖ್ಯರಸ್ತೆ, ಚರ್ಚ್ ಎದುರು ,ಮಂಡ್ಲಿ ವೃತ್ತ, ಎನ್ ಟಿ ರಸ್ತೆ ಮಂಡ್ಲಿ ಆಟೋ ಸ್ಟಾö್ಯಂಡ್ ಹತ್ತಿರ, ನವುಲೆ ಮುಖ್ಯ ರಸ್ತೆ ನವುಲೆ ಆರ್ಚ್ ಹತ್ತಿರ, ಅಶೋಕನಗರ ನಂದಿನಿ ಬೂತ್ ಪೋಲಿಸ್ ಕ್ವಾಟ್ರಸ್ ಹತ್ತಿರ, ವಿನೋಬ ನಗರ ಪೋಲಿಸ್ ಠಾಣೆ ಎದುರಿಗೆ ಪೋಲಿಸ್ ಚೌಕಿ ಹತ್ತಿರ ವಿಶೇಷ ಕೌಂಟರ್ ತೆರೆಯಲಾಗಿದೆ. ನೀರಿನ ಖಾತೆದಾರರು ಬಾಕಿ ಉಳಿಸಿಕೊಂಡಿರುವ ನೀರಿನ ಕಂದಾಯವನ್ನು ಪಾವತಿಸದಿದ್ದಲ್ಲಿ ಅಂತಹವರ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗುವುದು. ಸಾರ್ವಜನಿಕರುಮಂಡಳಿಯೊಂದಿಗೆ ಸಹಕರಿಸಬೇಕೆಂದು ಕನನೀಸ ಮತ್ತು ಒಚ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.
ನೀರಿನ ಕಂದಾಯ ಪಾವತಿಗೆ ವಿಶೇಷ ಕೌಂಟರ್
Department of Health and Family Welfare ಹುಟ್ಟು ಕಿವುಡು ಮಕ್ಕಳಿಗೆ ಆಶಾಕಿರಣ-ಕೋಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ
Department of Health and Family Welfare ರಾಜ್ಯ ಸರ್ಕಾರದ ಈ ಮಹತ್ವದ ಯೋಜನೆಯ ಮೂಲಕ ಗಂಭೀರ ಶ್ರವಣ ಸಮಸ್ಯೆ ಹೊಂದಿರುವ ಮಕ್ಕಳಿಗೆ ಉಚಿತ ಶಸ್ತ್ರಚಿಕಿತ್ಸೆ ಮತ್ತು ನಂತರದ ಪುನರ್ವಸತಿ ಸೇವೆಗಳನ್ನು ಒದಗಿಸಲಾಗುತ್ತಿದ್ದು, ಮೆಗ್ಗಾನ್ ಆಸ್ಪತ್ರೆಯಲ್ಲಿ 25 ಯಶಸ್ವಿ ಕೋಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದೆ ಎಂದು ಇಎನ್‌ಟಿ ವಿಭಾಗದ ಸಹ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ.ಶ್ರೀಧರ್ ತಿಳಿಸಿದರು.
ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಶ್ರವಣ ಸಂಜೀವಿನಿ ಕೋಕ್ಲಿಯರ್ ಇಂಪ್ಲಾಂಟ್ ಯೋಜನೆ ಅಡಿಯಲ್ಲಿ ಮೆಗ್ಗಾನ್ ಜಿಲ್ಲಾ ಆಸ್ಪತ್ರೆಯಲ್ಲಿ ಮಕ್ಕಳಿಗೆ ಕೋಕ್ಲಿಯರ್ ಇಂಪ್ಲಾಂಟ್ ಶಸ್ತ್ರ ಚಿಕಿತ್ಸೆ ನಡೆಸುತ್ತಿರುವ ಕುರಿತು ಮಾಹಿತಿ ನೀಡಲು ಗುರುವಾರ ಮೆಗ್ಗಾನ್ ಆಸ್ಪತ್ರೆಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿ ಅವರು ಮಾತನಾಡಿದರು.
ಹುಟ್ಟು ಕಿವುಡು ಇರುವ ಮಕ್ಕಳಿಗೆ ನಡೆಸುವ ಉನ್ನತ ಮಟ್ಟದ ಮತ್ತು ಸಂಕೀರ್ಣವಾದ ಶಸ್ತ್ರ ಚಿಕಿತ್ಸೆ ಇದಾಗಿದ್ದು ಈ ಯೋಜನೆಯಡಿ ಆಸ್ಪತ್ರೆಯಲ್ಲಿ 01-03-2023 ರಂದು ಮೊದಲ ಕೋಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಪ್ರಾರಂಭಿಸಲಾಯಿತು. ಇಂದಿಗೆ ಆಸ್ಪತ್ರೆಯಲ್ಲಿ 25ನೇ ಕೋಕ್ಲಿಯರ್Department of Health and Family Welfare ಹುಟ್ಟು ಕಿವುಡು ಮಕ್ಕಳಿಗೆ ಆಶಾಕಿರಣ-ಕೋಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಲಾಗಿದ್ದು, ಇದು ಮಕ್ಕಳ ಭವಿಷ್ಯವನ್ನು ಬೆಳಗಿಸುವ ಮಹತ್ವದ ಹೆಜ್ಜೆಯಾಗಿದೆ. ಸಾಮಾನ್ಯ ಜನರು ಈ ಯೋಜನೆಯ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ತಮ್ಮ ಮಕ್ಕಳಿಗೆ ಸಮಯಕ್ಕೆ ಸರಿಯಾದ ಚಿಕಿತ್ಸೆ ಕೊಡಿಸುವಂತೆ ಮನವಿ ಮಾಡಿದರು.
ಈ ಸೌಲಭ್ಯವು ಬಿಪಿಎಲ್ ಹಾಗೂ ಎಪಿಎಲ್ ಎಂಬ ಭೇದವಿಲ್ಲದೆ ಎಲ್ಲಾ ಅರ್ಹ ರೋಗಿಗಳಿಗೆ ಲಭ್ಯವಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಇದೇ ಶಸ್ತ್ರಚಿಕಿತ್ಸೆಯ ಒಟ್ಟು ವೆಚ್ಚವು ಸಾಮಾನ್ಯವಾಗಿ ಸುಮಾರು ರೂ. 12 ರಿಂದ 15 ಲಕ್ಷದವರೆಗೆ ಆಗುತ್ತದೆ. ಮೆಗ್ಗಾನ್ ಜಿಲ್ಲಾ ಆಸ್ಪತ್ರೆಯಲ್ಲಿ ಈ ಯೋಜನೆಯಡಿ ಈಗಾಗಲೇ 25 ಮಕ್ಕಳಿಗೆ ಯಶಸ್ವಿಯಾಗಿ ಕೋಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ಈ ಯೋಜನೆಯಡಿ ಇಂಪ್ಲಾಂಟ್ ಸಾಧನದ ವೆಚ್ಚಕ್ಕಾಗಿ ಸುಮಾರು ರೂ. 6,00,000/- ಹಾಗೂ ಶಸ್ತ್ರಚಿಕಿತ್ಸೆ ಮತ್ತು ನಂತರದ ಪುನರ್ವಸತಿ (ರಿಹ್ಯಾಬಿಲಿಟೇಶನ್)ಗಾಗಿ ಒಟ್ಟು ಸುಮಾರು ರೂ. 1,75,000/- ಅನುದಾನವನ್ನು ಸರ್ಕಾರದಿಂದ ನೀಡಲಾಗುತ್ತದೆ. ಹೀಗಾಗಿ ಒಟ್ಟು ಸುಮಾರು ರೂ. 7,75,000/-ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ.
ಶಸ್ತçಚಿಕಿತ್ಸೆ ನಂತರ ಎಲ್ಲಾ 25 ಮಕ್ಕಳನ್ನು ಮೈಸೂರಿನ ಎಐಐಎಸ್ ಹೆಚ್ ಸಂಸ್ಥೆಗೆ ಆಡಟರಿ ವರ್ಬಲ್ ಥೆರಪಿಗಾಗಿ ರೆಫರ್ ಮಾಡಲಾಗಿದೆ. ಚಿಕಿತ್ಸೆ ನಂತರ ಹೆಚ್ಚಿನ ಮಕ್ಕಳಲ್ಲಿ ಕೇಳುವ ಸಾಮರ್ಥ್ಯ ಮತ್ತು ಮಾತಿನ ಕೌಶಲ್ಯಗಳಲ್ಲಿ ಗಮನಾರ್ಹ ಸುಧಾರಣೆ ಕಂಡುಬAದಿದೆ.
Department of Health and Family Welfare ಈ ಶಸ್ತ್ರಚಿಕಿತ್ಸೆಯನ್ನು ಇಎನ್ ಟಿ ವಿಭಾಗದ ಸಹ ಪ್ರಾಧ್ಯಾಪಕರು ಹಾಗೂ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀಧರ ಎಸ್. ಅವರು ನೆರವೇರಿಸಿದ್ದು, ಮೆಂಟರ್ ಸರ್ಜನ್ ಆಗಿ ಡಾ. ಶಂಕರ್ ಮೆಡಕೇರಿ ಅವರು ಮಾರ್ಗದರ್ಶನ ನೀಡಿದ್ದಾರೆ. ಇಎನ್ ಟಿ ವಿಭಾಗದ ವೈದ್ಯರು, ಸಿಬ್ಬಂದಿ ಹಾಗೂ ಆಸ್ಪತ್ರೆಯ ಆಡಳಿತ ವರ್ಗದ ಸಹಕಾರದೊಂದಿಗೆ, ವೈದ್ಯಕೀಯ ಅಧೀಕ್ಷಕರು, ಜಿಲ್ಲಾ ಶಸ್ತ್ರಚಿಕಿತ್ಸಕರು ಮತ್ತು ನಿರ್ದೇಶಕರ ಸಹಾಯ, ಪ್ರೋತ್ಸಾಹ ಹಾಗೂ ಮಾರ್ಗದರ್ಶನದಿಂದ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ ಎಂದರು.
ಮಕ್ಕಳಲ್ಲಿ ಗಂಭೀರದಿಂದ ಅತ್ಯಂತ ಗಂಭೀರವಾದ ಶ್ರವಣ ಸಮಸ್ಯೆಯನ್ನು ಬೇಗ ಗುರುತಿಸುವುದು, ಅರ್ಹ ಮಕ್ಕಳನ್ನು ಗುರುತಿಸಿ ಮೊದಲಿಗೆ ಹಿಯರಿಂಗ್ ಏಡ್ಸ್ ಮೂಲಕ ಟ್ರಯಲ್ ಥೆರಪಿ ನೀಡುವುದು, ಅಗತ್ಯವಿದ್ದರೆ ಕೋಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಮಾಡುವುದು ಹಾಗೂ ಶಸ್ತ್ರಚಿಕಿತ್ಸೆಯ ನಂತರ 2 ವರ್ಷಗಳ ಕಾಲ ಆಡಿಟರಿ ವರ್ಬಲ್ ಥೆರಪಿ (ಎವಿಟಿ) ಮೂಲಕ ಪುನರ್ವಸತಿ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ.
ಆರೋಗ್ಯ ಕೇಂದ್ರಗಳು, ಎನ್ ಐ ಸಿಯು, ಎಸ್ ಎನ್ ಸಿಯು, ಮಕ್ಕಳ ಆಸ್ಪತ್ರೆಗಳು ಹಾಗೂ ಸಮುದಾಯ ಮಟ್ಟದಲ್ಲಿ ಆಶಾ, ಎಎನ್‌ಎಂ, ಆರ್‌ಬಿಎಸ್ ಕೆ ಹಾಗೂ ಎನ್ ಪಿಪಿಸಿಡಿ ತಂಡಗಳು ಶ್ರವಣ ತಪಾಸಣೆ ನಡೆಸುತ್ತಿದ್ದು, ಇಲ್ಲಿ ಶ್ರವಣ ಸಮಸ್ಯೆ ಕಂಡುಬAದ ಮಕ್ಕಳನ್ನು ಜಿಲ್ಲಾ ಮಟ್ಟದ ಜಿಲ್ಲಾ ಕೋಕ್ಲಿಯರ್ ಇಂಪ್ಲಾಂಟ್ ಕಮಿಟಿಗೆ ರೆಫರ್ ಮಾಡಲಾಗುತ್ತದೆ ಎಂದರು.
ಕೋಕ್ಲಿಯರ್ ಇಂಪ್ಲಾAಟ್ ಗೆ ಅರ್ಹತೆ ; ಎರಡೂ ಕಿವಿಗಳಲ್ಲಿ ಗಂಭೀರವಾದ ಕಿವುಡು ಇರುವ ಮಕ್ಕಳುಕರ್ನಾಟಕ ರಾಜ್ಯದ ನಿವಾಸಿಗಳಾಗಿರಬೇಕು. ಸಾಮಾನ್ಯವಾಗಿ 8 ರಿಂದ 2 ವರ್ಷ ವಯಸ್ಸಿನ ಮಕ್ಕಳು ಮುಖ್ಯವಾಗಿ ಪರಿಗಣನೆಗೆ ಒಳಪಡುತ್ತಾರೆ. ಹಿಯರಿಂಗ್ ಏಡ್ಸ್ ಮೂಲಕ ಕನಿಷ್ಠ 3 ತಿಂಗಳ ಹಿಯರಿಂಗ್ ಏಡ್ ಥೆರಪಿ ಪಡೆದಿರಬೇಕು. ಎವಿ ಥೆರಪಿಯಲ್ಲಿ ಕನಿಷ್ಠ 30 ಸೆಷನ್‌ಗಳಲ್ಲಿ ಭಾಗವಹಿಸಿರುವುದಕ್ಕೆ ದಾಖಲೆ ಇರಬೇಕು, ಸಿಟಿ ಮತ್ತು ಎಂಆರ್‌ಐ ಪರೀಕ್ಷೆಗಳಲ್ಲಿ ಕೋಕ್ಲಿಯಾ ಹಾಗೂ ಶ್ರವಣ ನರಗಳು ಶಸ್ತ್ರಚಿಕಿತ್ಸೆಗೆ ಅನುಕೂಲಕರವಾಗಿರಬೇಕು. ಐಕ್ಯು 80 ಕ್ಕಿಂತ ಹೆಚ್ಚು ಇರಬೇಕು ಮತ್ತು ಮಗು ಸ್ಪೀಚ್ ಪ್ರೊಸೆಸರ್‌ನ್ನು ಸಹಿಸಿಕೊಳ್ಳುವ ಸ್ಥಿತಿಯಲ್ಲಿ ಇರಬೇಕು. ಶಸ್ತ್ರಚಿಕಿತ್ಸೆಗೆ ಮೊದಲು ಮಕ್ಕಳತಜ್ಞರು ಮತ್ತು ಅರಿವಳಿಕೆ ತಜ್ಞರಿಂದ ವೈದ್ಯಕೀಯ ಅನುಮತಿ ಪಡೆಯಬೇಕು. ಹಾಗೂ ಕೋಕ್ಲಿಯರ್ ಇಂಪ್ಲಾಂಟ್ ಮಾಡುವ ಮುನ್ನ ಕಡ್ಡಾಯವಾಗಿ ಆಡಿಯೋಲಾಜಿಕಲ್ ಪರೀಕ್ಷೆಗಳನ್ನು ಮತ್ತು ರೇಡಿಯಾಲಜಿಕಲ್ ಪರೀಕ್ಷೆಗಳನ್ನು ನಡೆಸಲಾಗುವುದು ಎಂದರು.
ಡಾ.ಶAಕರ್ ಮೆಡಿಕೇರಿ ಮಾತನಾಡಿ, ಮೊದಲಿಗೆ 1 ರಿಂದ 6 ವರ್ಷದ ಒಳಗಿನ ಮಕ್ಕಳಿಗೆ ಈ ಶಸ್ತçಚಿಕಿತ್ಸೆ ನಡೆಸಲಾಗುತ್ತಿತ್ತು. ಈಗ 2 ವರ್ಷದೊಳಗೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಮಕ್ಕಳ ಭವಿಷ್ಯಕ್ಕೆ ಈ ಶಸ್ತçಚಿಕಿತ್ಸೆ ಅತ್ಯುತ್ತಮವಾಗಿದೆ ಎಂದ ಅವರು ಹೇಗೆ ಕೋಕ್ಲಿಯರ್ ಇಂಪ್ಲಾAಟ್ ಅಳವಡಿಸಲಾಗುವುದು ಎಂದು ವಿವರಿಸಿದ ಅವರು ಈ ಶಸ್ತ್ರಚಿಕಿತ್ಸೆ ಪಡೆದ ಮಕ್ಕಳು ಉತ್ತಮ ಶಿಕ್ಷಣ ಪಡೆದು ಯಶಸ್ವಿ ಜೀವನ ಮಾಡುತ್ತಿರುವ ಕುರಿತು ತಿಳಿಸಿದರು.
1020 ಕೋಕ್ಲಿಯರ್ ಇಂಪ್ಲಾಂಟ್ ಶಸ್ತ್ರ ಚಿಕಿತ್ಸೆ ನಡೆಸಿರುವ ಡಾ.ಶಂಕರ್ ಮೆಡಿಕೇರಿ ಇವರನ್ನು ಸನ್ಮಾನಿಸಲಾಯಿತು.
ಕೋಕ್ಲಿಯರ್ ಇಂಪ್ಲಾಂಟ್ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಐಶಾನಿ ಎಸ್ ಭಟ್ ರವರ ತಾಯಿ ತಮ್ಮ ಮಗಳ ಕಿವುಡು, ಪತ್ತೆ ಹಚ್ಚಿದ ಬಗೆ ಹಾಗೂ ಕೋಕ್ಲಿಯರ್ ಇಂಪ್ಲಾಂಟ್, ನಂತರದ ಅನುಭವಗಳನ್ನು ಹಂಚಿಕೊAಡರು.
ಪತ್ರಿಕಾಗೋಷ್ಟಿಯಲ್ಲಿ ಮೆಗ್ಗಾನ್ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ಗೀತಾ ಸುಶೀಲ್ ಕುಮಾರ್, ಇಎನ್‌ಟಿ ವಿಭಾಗದ ಡಾ.ಚಂಪಾ, ಶುಶ್ರೂಷಕಾಧೀಕ್ಷಕರಾದ ಶೇಷಮ್ಮ ಹಾಜರಿದ್ದರು.
Department of Kannada and Culture ವಚನ ಕಲ್ಯಾಣ 9 ಗಂಟೆಗಳ ನಾಟಕ ಅಹೋರಾತ್ರಿ ರಂಗ ಪ್ರಯೋಗಕ್ಕೆ ಕಲಾವಿದರ ಆಯ್ಕೆಗೆ ಅರ್ಜಿ ಆಹ್ವಾನ
Department of Kannada and Culture ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ‘ ವಚನ ಕಲ್ಯಾಣ ‘ಎಂಬ ಅಹೋರಾತ್ರಿ (ಒಂಬತ್ತು ಗಂಟೆ) ನಾಟಕವನ್ನು ಸಿದ್ಧಪಡಿಸಿ, ನಾಡಿನಾದ್ಯಂತ ಪ್ರದರ್ಶನ ಮಾಡಲು ಇಲಾಖೆ ಉದ್ದೇಶಿಸಿದೆ. ಆ ಸಂಬಂಧ ನುರಿತ ಹಾಗೂ ಆಸಕ್ತ ಯುವಕ ಯುವತಿಯರು ಹಾಗೂ ಅನುಭವಿ ರಂಗಕಲಾವಿದರು/ಗಾಯಕರುಗಳಿಂದ ಅರ್ಜಿಗಳನ್ನು ಅಹ್ವಾನಿಸಿದೆ (ಅರ್ಜಿ ಲಗತ್ತಿಸಿದೆ), ವಯೋಮಿತಿ 18 ರಿಂದ 40 ವರ್ಷಗಳು ರಂಗಶಿಕ್ಷಣದಲ್ಲಿ ತರಬೇತಿ ಪಡೆದ ಹಾಗೂ ನಾಟಕಗಳಲ್ಲಿ ಅಭಿನಯಿಸಿದ ಕಲಾವಿದರಿಗೆ ಅದ್ಯತೆಯನ್ನು ನೀಡಲಾಗುವುದು. ತುಂಬಿದ ಅರ್ಜಿಗಳನ್ನು ದಿನಾಂಕ 20ಮಾರ್ಚ್2026ರ ಒಳಗೆ ಸದಸ್ಯ ಕಾರ್ಯದರ್ಶಿ ಸಂತ ಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಂಗಳೂರು-560056. ಇಲ್ಲಿಗೆ ಮುದ್ದಾಂ ಅಥವಾ ಅಂಚೆಯ ಮೂಲಕ ತಲುಪುವಂತೆ ಅಥವಾ ಮೇಲ್ ವಿಳಾಸ: kanakaresearchcentre@gmail.com ದ ಮೂಲಕ ಸಲ್ಲಿಸಲು ಕೋರಿದೆ.
Department of Kannada and Culture ಆಯ್ಕೆಯಾದ ಅಭ್ಯರ್ಥಿಗಳು ಮೂರು ತಿಂಗಳ ಕಾಲದ ಅವಧಿಯಲ್ಲಿ ಪೂರ್ಣಕಾಲಿಕವಾಗಿ ತರಬೇತಿ-ಪ್ರದರ್ಶನಗಳಲ್ಲಿ ಪಾಲ್ಗೊಳ್ಳುವುದು ಕಡ್ಡಾಯ. ಮಾಸಿಕ ಗೌರವಧನ ಮತ್ತು ಊಟ -ವಸತಿ ವ್ಯವಸ್ಥೆಯನ್ನು ಮಾಡಲಾಗುವುದು. ಅರ್ಜಿಯ ನಮೂನೆಯನ್ನು ಕನ್ನಡ ಸಂಸ್ಕೃತಿ ಇಲಾಖೆಯ ವೆಬ್ ಸೈಟ್ kannadasiri.karnataka.gov.inನಲ್ಲಿ ಪಡೆಯಬಹುದು. ಹೆಚ್ಚಿನ ಮಾಹಿತಿ ವಿವರಗಳಿಗಾಗಿ ಶ್ರೀ ಸಿ. ಬಸವಲಿಂಗಯ್ಯ(ವಚನ ಕಲ್ಯಾಣ ನಾಟಕದ ನಿರ್ದೇಶಕರು) ಇವರಲ್ಲಿ ಮಾಹಿತಿ ಪಡೆಯಬಹುದು ಮೊಬೈಲ್ ಸಂಪರ್ಕ ಸಂಖ್ಯೆ- 94485 38620. ಸಂದರ್ಶನಕ್ಕೆ ಹಾಜರಾಗುವ ಕಲಾವಿದರಿಗೆ ಇಲಾಖೆಯು’ ಯಾವುದೇ ಭತ್ಯೆ ನೀಡಲಾಗುವುದಿಲ್ಲ.
Klive Special Article ಮಾರ್ಚ್ 12 ವಿಶ್ವ ಕಿಡ್ನಿ ದಿನ
Klive Special Article ಇವತ್ತು ಮಾರ್ಚ್ ಹನ್ನೆರಡು,ವಿಶ್ವ ಮೂತ್ರಪಿಂಡಗಳ ದಿನ, ಹುಟ್ಟು ಹಬ್ಬ ಅಲ್ಲ, ಸಡಗರದ ಆಚರಣೆಯೂ ಅಲ್ಲ. ಸೃಷ್ಟಿ ಕರ್ತನ ಅದ್ಭುತ ಕೊಡುಗೆಯಾದ ಜೋಡಿ ಮೂತ್ರ ಪಿಂಡಗಳ ಆರೋಗ್ಯ,ಕ್ಷೇಮ,ಕಾಳಜಿಯ ಮಹತ್ವದ ಅರಿವನ್ನು ನೆನಪಿಸುವ ದಿನ. ಜಾಗತಿಕ ತಾಪಮಾನದ ಏರುವಿಕೆ, ಪರಿಸರ ಮಾಲಿನ್ಯ, ಕುಡಿಯುವ ನೀರಿನಲ್ಲಿ ಸೇರಿ ಮೂತ್ರ ಪಿಂಡಗಳ ಹಾನಿಗೆ ಕಾರಣವಾಗುವ ಕೈಗಾರಿಕಾ ತ್ಯಾಜ್ಯ ವಿಷಗಳೂ ಮೂತ್ರಪಿಂಡಗಳ ವೈಫಲ್ಯಕ್ಕೆ ಸೇರ್ಪಡೆ ಆಗಿರುವ ಹೊಸ ಮಾಹಿತಿಗಳು ಮತ್ತು ನಮ್ಮ ಆಧುನಿಕ ಐಷಾರಾಮಿ ಬದುಕಿನಲ್ಲಿ ಇರುವ “ಜಾಣ ಕುರುಡಿ”ನ ಒಂದು ಮುಖ ಅಷ್ಟೇ.
ನಮ್ಮ ಮೂತ್ರಪಿಂಡಗಳು:ಕೇವಲ ಮೂತ್ರ ಉತ್ಪತ್ತಿ ಮಾಡಲಿಕ್ಕೆ ಇರುವುದಲ್ಲ.ರಕ್ತದಿಂದ ತ್ಯಾಜ್ಯ ಮತ್ತು ಹೆಚ್ಚುವರಿ ನೀರಿನ ಪ್ರಮಾಣವನ್ನು ತೆಗೆದುಹಾಕಿ ರಾಸಾಯನಿಕ ಅಥವಾ ಲವಣಾಂಶ ಮತ್ತು ದ್ರವಗಳ ಸಮತೋಲನವನ್ನು ನಿಯಂತ್ರಿಸುವುದು ಅದ್ಭುತ.
ರಕ್ತದೊತ್ತಡದ ನಿಯಂತ್ರಣಕ್ಕೆ ಕಿಡ್ನಿ ಕಾರ್ಯಕ್ಷಮತೆ ಅನಿವಾರ್ಯ. ಮೂಳೆಗಳ ಆರೋಗ್ಯ, ವಿಟಮಿನ್ ಡಿ, ಕ್ಯಾಲ್ಸಿಯಮ್ ಮಟ್ಟದ ಸಮತೋಲನಕ್ಕೆ ಕಿಡ್ನಿ ಬೇಕೇ ಬೇಕು.ಕೆಂಪು ರಕ್ತ ಕಣಗಳನ್ನು ತಯಾರಿಸಲು ಬೇಕಾದ “ಎರಿಥ್ರೋ ಪೋಯೆಟಿನ್” ಅನ್ನುವ ಹಾರ್ಮೋನ್ ಉತ್ಪಾದನೆ ಮೂತ್ರ ಪಿಂಡಗಳಿಂದಲೇ ಆಗಬೇಕು…!
CKD, (Chronic kidney disease)ಅಂದರೆ ದೀರ್ಘ ಕಾಲದ ಮೂತ್ರಪಿಂಡಗಳ ಕಾಯಿಲೆ ಒಂದು ಮೌನ ಹಂತಕ, ಸೈಲೆಂಟ್ ಕಿಲ್ಲರ್. ಅಂದರೆ ಯಾವುದೇ ನಿರ್ದಿಷ್ಟ ಲಕ್ಷಣಗಳು ಇರಬೇಕಂತಿಲ್ಲ.ಮೂತ್ರಪಿಂಡಗಳಲ್ಲಿ “ನೆಫ್ರಾನ್”ಗಳು ಎಂದು ಕರೆಯಲ್ಪಡುವ ಒಂದು ಮಿಲಿಯನ್ ಸಣ್ಣ ಸಣ್ಣ ಘಟಕಗಳಿವೆ.ನೆಫ್ರಾನ್‌ಗಳು ಹಾನಿಗೊಳಗಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದಾಗ ಮೂತ್ರಪಿಂಡದ ಕಾರ್ಯವನ್ನು ಕಾಪಾಡಿಕೊಳ್ಳಲು ಉಳಿದ ಆರೋಗ್ಯಕರ ನೆಫ್ರಾನ್‌ಗಳ ಮೇಲೆ ಹೆಚ್ಚುವರಿ ಒತ್ತಡವನ್ನುಂಟುಮಾಡುತ್ತವೆ. ಇನ್ನೂ ಹಾನಿ ಮುಂದುವರಿದರೆ, ಉಳಿದ ಆರೋಗ್ಯಕರ ನೆಫ್ರಾನ್‌ಗಳು ಮೂತ್ರಪಿಂಡದ ಕಾರ್ಯವನ್ನು ನಿರ್ವಹಿಸುವಲ್ಲಿ ಸೋಲುತ್ತವೆ. ವಯಸ್ಕರರಲ್ಲಿ ಹತ್ತು ಮಂದಿಯಲ್ಲಿ ಒಬ್ಬರಿಗೆ ಇಂತಹ ದೀರ್ಘ ಕಾಲದ ಮೂತ್ರಪಿಂಡ ಕಾಯಿಲೆ ಇರುವುದು ಆತಂಕಕಾರಿ ಅಂಕಿ ಅಂಶ.
ರೋಗದ ಕೊನೆಯ ಹಂತದವರೆಗೆ ಯಾವುದೇ ಲಕ್ಷಣಗಳು ಅಥವಾ ಲಕ್ಷಣಗಳು ಕಂಡುಬಾರದೇ ಇರುವುದು ದುರಾದೃಷ್ಟ.ಕಾಯಿಲೆಯನ್ನು ನಿಲ್ಲಿಸಲು ಅಥವಾ ನಿಧಾನಗೊಳಿಸಲು ಪ್ರಾಥಮಿಕ ಚಿಕಿತ್ಸೆ ಖಚಿತವಾಗಿ ಇಲ್ಲದೇ ಹೋದರೆ CKD ಮುಂದುವರೆದು ಸಂಪೂರ್ಣ ಮೂತ್ರ ಪಿಂಡಗಳ ವೈಫಲ್ಯ ಅನಿವಾರ್ಯ ಪರಿಸ್ಥಿತಿ. ಸಾಂಕ್ರಾಮಿಕವಲ್ಲದ ಕಾಯಿಲೆಗಳಿಂದ ಆಗುವ ಸಾವಿನ ಹತ್ತು ಪ್ರಮುಖ ಕಾರಣಗಳಲ್ಲಿ ಜಾಗತಿಕ ಮಟ್ಟದಲ್ಲೂ ಸಿಕೆಡಿ 7 ನೇ ಸ್ಥಾನದಲ್ಲಿದೆ….! ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ಕಾಯಿಲೆ ಇರುವವರು ತುಂಬಾ ಹೆಚ್ಚಾಗಿರುವುದರಿಂದ ಪ್ರಪಂಚಾದಾದ್ಯಂತ CKD ಹೆಚ್ಚಾಗಿ ಕಂಡುಬರುತ್ತಲಿದೆ.
ದೀರ್ಘಕಾಲದ ಮೂತ್ರಪಿಂಡ ಕಾಯಿಲೆಗಳಿಗೆ ಸಾಮಾನ್ಯ ಕಾರಣಗಳು:
ಟೈಪ್ 1 ಅಥವಾ ಟೈಪ್ 2 ಮಧುಮೇಹ.
ತೀವ್ರ ರಕ್ತದೊತ್ತಡ.
ಸ್ವಯಂ ನಿರೋಧಕ ಕಾಯಿಲೆಗಳು.( auto immune )
ಪಾಲಿಸಿಸ್ಟಿಕ್ ಮೂತ್ರಪಿಂಡ ಕಾಯಿಲೆ ಮತ್ತಿತರಆನುವಂಶಿಕ ಮೂತ್ರಪಿಂಡ ಕಾಯಿಲೆಗಳು.
ಪ್ರಾಸ್ಟೇಟ್ ಗ್ರಂಥಿ, ಮೂತ್ರಪಿಂಡದ ಕಲ್ಲುಗಳು,ಗೆಡ್ಡೆಗಳಂತಹ ಪರಿಸ್ಥಿತಿಗಳಿಂದ ಮೂತ್ರ ಹರಿವಿಕೆಗೆ ದೀರ್ಘಕಾಲದ ಅಡಚಣೆಗಳು.
ನೋವು ನಿವಾರಕ ಔಷಧಿಗಳ ದುರ್ಬಳಕೆ, ವೈಜ್ಞಾನಿಕ ಪುರಾವೆಗಳಿಲ್ಲದೆ ಉಪಯೋಗಿಸುವ ಆಹಾರ ಮತ್ತು ಔಷಧಿಗಳು ಅನ್ನುವ ರಾಸಾಯನಿಕಗಳು.
ಹೊಟ್ಟೆಯಲ್ಲಿ ಏನೇ ತೊಂದರೆ ಕಂಡರೂ, ಗ್ಯಾಸ್ಟ್ರಿಕ್ ಅಂತ ತಾವೇ ನಿರ್ಧರಿಸಿ ಔಷಧಿ ತೆಗೆದುಕೊಂಡು, ಅದನ್ನು ದಿನಾ ತಿಂದರೆ ಮಾತ್ರಾ ಗ್ಯಾಸ್ಟ್ರಿಕ್ ಕಮ್ಮಿ ಆಗುತ್ತದೆ ಅಂತ ಪ್ರತಿ ದಿನ ತಿನ್ನುವುದು. ಈ ವಿಷಯ ಎಷ್ಟೋ ಮಂದಿ ಜನಸಾಮಾನ್ಯರಿಗೆ ತಿಳಿದಿಲ್ಲ. ಎಲ್ಲಾ ಮೆಡಿಕಲ್ ಶಾಪ್ ಗಳಲ್ಲಿ ಪ್ರತಿ ದಿನ ದೊಡ್ಡ ವ್ಯಾಪಾರ ಈ ಗ್ಯಾಸ್ಟ್ರಿಕ್ ಮಾತ್ರೆ ಮತ್ತು ನೋವು ನಿವಾರಕ ಮಾತ್ರೆಗಳು…!
Klive Special Article ನಿನ್ನೆ ಒಬ್ಬರು ರೋಗಿ ಮಧುಮೇಹ ಮತ್ತು ರಕ್ತದೊತ್ತಡ ಚಿಕಿತ್ಸೆಗಾಗಿ ಬಂದಾಗ ಕಂಡುಬಂದ ಅನುಭವ ಬರೆಯಬೇಕು ಅಂದಾಗಲೇ ನನಗೆ ಅರಿವಾಗಿದ್ದು ಇವತ್ತು “WORLD KIDNEY DAY “.
ಆ ಪುಣ್ಯಾತ್ಮರು ಕಳೆದ ಒಂದು ವರ್ಷದಿಂದ ತಪಾಸಣೆಗೆ ಬರುತ್ತಿದ್ದರು. ಬಿಪಿ, ಶುಗರ್ ಜೊತೆ ಧೂಮಪಾನ, ದೈಹಿಕ ಬೊಜ್ಜು, ಕಡಿವಾಣ ಇಲ್ಲದ ಆಹಾರ ಪದ್ಧತಿ. ಕರೆದುಕೊಂಡು ಬಂದ ಮಗಳದ್ದು ಒಂದೇ ವರಾತ, ಸರ್ ಎಲ್ಲಾ ಸರಿ ಮಾಡಿ ಕೊಡಿ ಅಂತ. ಸಕ್ಕರೆ ಕಾಯಿಲೆಗೆ ಇನ್ಸುಲಿನ್ ಮತ್ತೆ ಉಳಿದ ಸಮಸ್ಯೆಗಳಿಗೆ ಮಾತ್ರೆಗಳನ್ನು ಹಾಕಿ ಮೂರು ತಿಂಗಳಲ್ಲಿ ಸಾಧಾರಣ ಹತೋಟಿ ಬಂದಾಗ ಇನ್ಸುಲಿನ್ ನಿಲ್ಲಿಸಿ ಮಾತ್ರೆಗಳನ್ನು ಬಳಸಲು ಸಲಹೆ ಕೊಟ್ಟೆ. ಮೂರು ತಿಂಗಳಿಗೆ ಒಮ್ಮೆ ಬರಲು ಸೂಚಿಸಿ ಪತ್ಯಕ್ರಮ, ವ್ಯಾಯಾಮ, ಕ್ರಮವತ್ತಾದ ಚಿಕಿತ್ಸೆಯ ಅಗತ್ಯತೆ ಜೊತೆ ಧೂಮಪಾನ ಬಿಡಿಸಿದೆ.
ನಿನ್ನೆ ಬಂದಾಗ ಒಂದು ಆತಂಕಕಾರೀ ಪ್ರಯೋಗ ಶಾಲೆ ಫಲಿತಾಂಶ ಕಂಡಿತು. “ಕ್ರಿಯಾಟಿನಿನ್”ಅನ್ನುವ ಮೂತ್ರಪಿಂಡಗಳ ಕಾರ್ಯಕ್ಷಮತೆಯ ಸೂಚ್ಯ0ಕ ಏರಿತ್ತು, ಮೂತ್ರದಲ್ಲಿ ಪ್ರೊಟೀನ್ ಲೀಕ್ ಆಗುವುದು ಸಹಾ ಇತ್ತು. ಹಳೆಯ ರೆಕಾರ್ಡ್ ನೋಡಿದರೆ, ಎಲ್ಲವೂ ಸಹಜವಾಗಿತ್ತು. ಮೂತ್ರಪಿಂಡಗಳ ಸ್ಪೆಷಲಿಸ್ಟ್ ಅವರನ್ನು ಕಂಡು ಮತ್ತೆ ನನ್ನ ಔಷಧಿ ನಿರ್ಧಾರ ಅಂತ ಹೇಳಿ ಕಳುಹಿದೆ. ಎಲ್ಲಾ ಪರೀಕ್ಷೆ ಮುಗಿದು ಮೂತ್ರಪಿಂಡ ಸ್ಪೆಷಲಿಸ್ಟ್ ಅವರ ಸಲಹೆ ಪಡೆದು ಬಂದರು. ಮತ್ತೆ ಇನ್ಸುಲಿನ್ ಶುರುಮಾಡುವ ಯೋಚನೆ ಇಂದ ಒಂದು ಪ್ರಶ್ನೆ ಕೇಳಿದೆ…”ಇನ್ಯಾವುದಾದರೂ ಔಷಧಿ, ನೋವು ನಿವಾರಕ ಮಾತ್ರೆ ಬಳಕೆ ಮಾಡುತ್ತಿದ್ದೀರಾ” ಅಂತ…!
ಪುಣ್ಯಾತ್ಮರು “ಕಹಿ ಔಷಧಿ”ಅನ್ನುವ ನೆಪಕ್ಕೆ ಉತ್ತರ ಕನ್ನಡ ಜಿಲ್ಲೆಯ ಯಾವುದೊ ಮೂಲೆಯಿಂದ ಕುಲ,ಗೋತ್ರ,ಹೆಸರು,ಲೇಬಲ್ ಏನೂ ಇಲ್ಲದೇ ಇರುವ “ಹಸಿರು ಉಂಡೆ ” ಅಂತ ಪಾರ್ಸೆಲ್ ತರಿಸಿ ಕಳೆದ ಮೂರು ತಿಂಗಳುಗಳಿಂದ ತಿನ್ನುತ್ತಿದ್ದಾರೆ…!ಇದು ಆಯುರ್ವೇದವೂ ಅಲ್ಲ, ಅಲ್ಲೊಪತಿ, ಹೊಮಿಯೋಪತಿಯೂ ಅಲ್ಲ…! ಇದು ಸಾಂಪ್ರದಾಯಿಕ ನಾಟಿ ಔಷಧಿ ಇರಬಹುದು… ಅದರಲ್ಲಿ ಇರುವ ರಾಸಾಯನಿಕಗಳು, ಔಷಧಿ ಪ್ರಮಾಣ ಮತ್ತು ವಿವರ ದೇವರಿಗೆ ಗೊತ್ತು. ಆ ಪುಣ್ಯಾತ್ಮರಿಗೆ ವಿಷಯ, ಮಾಹಿತಿ ತಿಳಿಸಿ, ಹಸಿರು ಉಂಡೆ ಔಷಧಿ ನಿಲ್ಲಿಸಲು ಹೇಳಿ ಮತ್ತೆ ಎರಡು ತಿಂಗಳ ನಂತರ ಬರಲು ಹೇಳಿದ್ದೇನೆ…!ಹಾಗೆಯೇ ಹಸಿರು ಉಂಡೆ ಔಷಧಿ ವಿವರಕ್ಕೆ ತರಲು ಹೇಳಿದಾಗ ಅವರು ಹೇಳಿದ್ದು ಅದಕ್ಕೇನು ಪ್ಯಾಕಿಂಗ್, ಲೇಬಲ್ ಇಲ್ಲ, ಹಾಗೇ ಕಟ್ಟಿ ಕೊಡುತ್ತಾರೆ ಅಂತ…!ಅದನ್ನು ರಾಸಾಯನಿಕ ಪರೀಕ್ಷೆಗೆ ಕಳುಹಿಸಿ ಅದರಲ್ಲಿ ಏನಿದೆ ಅಂತ ಕಂಡು ಹಿಡಿಯಬಹುದು. ನನಗೆ ಅದರಲ್ಲಿ ಆಸಕ್ತಿ ಇದ್ದರು, ಅದನ್ನೆಲ್ಲ ಮಾಡಿ ಮತ್ತೆ ತೊಂದರೆ ಅನುಭವಿಸಲು ಸಿದ್ದನಿಲ್ಲ. ಹಿಂದೆ ಒಮ್ಮೆ ನನ್ನ ವೈದ್ಯ ಸ್ನೇಹಿತರೊಬ್ಬರು ರೋಗಿ ತೋರಿಸಿದ ಔಷಧಿಯೇ ಕಿಡ್ನಿ, ಲಿವರ್ ತೊಂದರೆಗೆ ಕಾರಣ ಅಂದ ಮಾರನೇ ದಿನ ಗೂಂಡಾಗಳು ಅವರ ಕೊಠಡಿಗೆ ಬಂದು ನಮ್ಮ ಔಷಧಿಯ ಮೇಲೆ ಇಂತಹ ಅಪಪ್ರಚಾರ ಸಲ್ಲದು,ಆ ಔಷಧಿಯ ಮೇಲೆ ನಿಮ್ಮ ಮಾತನ್ನು ಹಿಂದೆ ತೆಗೆದುಕೊಳ್ಳಿ ಅಂತ…!
ಕೊನೆಯಲ್ಲಿ “ವಿಶ್ವ ಕಿಡ್ನಿ ದಿನ”ದಂದು ಮೂತ್ರ ಪಿಂಡಗಳ ರಕ್ಷಣೆಗೆ ನಾನು ಕೊಡಬಲ್ಲ ಸಲಹೆಗಳು ಸುಲಭ.ಯಾವುದೇ ಕಾಯಿಲೆ ಇರಲಿ ಔಷಧ ಬಳಕೆ ಕ್ರಮವತ್ತಾಗಿರಲಿ. ಸ್ವಯಂ ವೈದ್ಯಕೀಯ ತಪ್ಪಿಸಿ. ಲೇಬಲ್, ಔಷಧಿ ಪ್ರಮಾಣ, ವಿವರಗಳಿಲ್ಲದೆ ಹೋದರೆ ಅದು ಧನ್ವ0ತರಿ ಪ್ರಸಾದ ಆದರೂ ಹೊಟ್ಟೆಗೆ ಹಾಕಬೇಡಿ. ಅಲ್ಲೊಪತಿ, ಆಯುರ್ವೇದ, ಹೊಮಿಯೋಪತಿ, ಉನಾನಿ, ಸಿದ್ಧ ಪದ್ಧತಿ ಯಾವುದೇ ಇರಲಿ “ನಕಲಿ ವೈದ್ಯ “ನಕಲಿ ವೈದ್ಯ ಪದ್ಧತಿ ಬಗ್ಗೆ ಎಚ್ಚರ ಇರಲಿ. ನೀವು ಏನೇ ಔಷಧಿ ಬಳಕೆ ಮಾಡಿದರೂ ಒಂದು ಡೈರಿಯಲ್ಲಿ ನಮೂದಿಸಿ. ವೈದ್ಯರ ಔಷಧಿಯ ಜೊತೆ ಜೊತೆಗೆ ಏನೇ ಪರ್ಯಾಯ ಪದ್ಧತಿ ಬಳಸಿದರೂ ಪ್ರಾಮಾಣಿಕವಾಗಿ ತಿಳಿಸಿ. ವೈದ್ಯರು ಬೈಯುತ್ತಾರೆ ಅಂತ ವಿಷಯ ಮುಚ್ಚಿಡುವುದು ತುಂಬಾ ಸಾಮಾನ್ಯ. ವಿವರಗಳನ್ನು ಮುಚ್ಚಿಡುವುದು ಆತ್ಮ ವಂಚನೆಗೆ ಸಮಾನ ಮತ್ತು ತುಂಬಾ ಅಪಾಯಕಾರಿ ಅಂತ ನನ್ನ ಅನಿಸಿಕೆ.
ಸಾರ್ವಜನಿಕರ ಒಂದು ತಪ್ಪು ಕಲ್ಪನೆ ಅಂದರೆ ಸಕ್ಕರೆ ಕಾಯಿಲೆ ಮತ್ತು ಬಿಪಿ ಕಾಯಿಲೆಗೆ ಉಪಯೋಗಿಸುವ ಅಲ್ಲೊಪತಿ ಔಷಧಿ ಇಂದ ಕಿಡ್ನಿ ಡ್ಯಾಮೇಜ್ ಆಗುತ್ತೆ ಅಂತ. ಸಕ್ಕರೆ ಕಾಯಿಲೆ ಮತ್ತು ಬಿಪಿ ಕಾಯಿಲೆ ಹತೋಟಿಯಲ್ಲಿ ಇಲ್ಲದೇ ಇದ್ದರೆ ಕಿಡ್ನಿ, ಹೃದಯ, ಕಣ್ಣು, ನರಗಳು ಡ್ಯಾಮೇಜ್ ಆಗುತ್ತೆ ಅನ್ನುವುದು ಗೊತ್ತಿದ್ದರೂ ಅನುಮಾನ ಪಡುವುದು ನಾವು ಸಲಹೆ ಕೊಟ್ಟ ಔಷಧಿಗಳಿಂದ ಅನ್ನುವುದು…!ಹೀಗೆ ಬರೆಯುತ್ತ ಹೋದರೆ ಮುಂದಿನ ವರ್ಷದ “ವಿಶ್ವ ಮೂತ್ರ ಪಿಂಡಗಳ ದಿನಾಚರಣೆ”ಯೂ ಬಂದೆ ಬಿಡುತ್ತದೆ…! ನಿಮ್ಮಕಿಡ್ನಿ ಆರೋಗ್ಯ ವೈದ್ಯರ ಕೈಯಲ್ಲಿ ಇಲ್ಲ, ಆರೋಗ್ಯದ ಬಗ್ಗೆ ನಿಮ್ಮ ಸರಿಯಾದ ಮಾಹಿತಿಗಳಲ್ಲಿಯೂ ಇದೆ….!
ಡಾ. ರತ್ನಾಕರ್
ಸಲಹಾ ವೈದ್ಯರು.
ನಂಜಪ್ಪ ಲೈಫ್ ಕೇರ್ ಆಸ್ಪತ್ರೆ
ಶಿವಮೊಗ್ಗ
Law University ಸೌತ್ – ವೆಸ್ಟ್ ಇಂಟರ್ ಯೂನಿವರ್ಸಿಟಿ ಮಹಿಳಾ ಕರಾಟೆ ಪಂದ್ಯಾವಳಿಗೆ ಆಯ್ಕೆಯಾದ ದೀಕ್ಷಾ
Law University ಮಾರ್ಚ್ 10 ರಂದು ಧಾರವಾಡ ಕಾನೂನು ವಿಶ್ವವಿದ್ಯಾನಿಲಯದಲ್ಲಿ ಇಂಟರ್ ಯೂನಿವರ್ಸಿಟಿ ಕರಾಟೆ ಪಂದ್ಯಾವಳಿ ಯಲ್ಲಿ ಶಿವಮೊಗ್ಗದ ಉಮೇಶ್ ಹಾಗೂ ಶೀಲಾವತಿ ಇವರ ಮಗಳಾದ ದೀಕ್ಷಾ . ಯು .ಅವರು
CBR ರಾಷ್ಟ್ರೀಯ ಕಾನೂನು ಕಾಲೇಜಿನಲ್ಲಿ 3ನೇ ವರ್ಷದ ಪದವಿ ಓದುತ್ತಿದ್ದು ಮತ್ತು ಸಹ್ಯಾದ್ರಿ ಶಿವಮೊಗ್ಗ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ನ ವಿದ್ಯಾರ್ಥಿಯದ ಇವರು -67 ಕೆಜಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಮಾರ್ಚ್ 16,17 and 18 ರಂದು ಮಧ್ಯ ಪ್ರದೇಶ ನ ಭೂಪಾಲ್ ನಲ್ಲಿ ನಡೆಯಲಿರುವ ಸೌತ್ – ವೆಸ್ಟ್ ಇಂಟರ್ ಯೂನಿವರ್ಸಿಟಿ ಮಹಿಳಾ ಕರಾಟೆ ಪಂದ್ಯಾವಳಿಗೆ ಆಯ್ಕೆಯಾಗಿರುತ್ತಾರೆ.
Law University ಆಯ್ಕೆಯಾದಂತಹ ಕ್ರೀಡಾಪಟುವಿಗೆ ಸಹ್ಯಾದ್ರಿ ಶಿವಮೊಗ್ಗ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ನ ಜಿಲ್ಲಾ ಪ್ರಧಾನ ಕಾರ್ಯದರ್ಶಿಯದಂತಹ ಸನ್ ಸೈ ನವೀನ್, ಜಿಲ್ಲಾ ಉಪಾಧ್ಯಕ್ಷರಾದಂತಹ ಸನ್ ಸೈ ಸಾಧಿಕ್, ತರಬೇತಿದಾರರಾದ ಸನ್ ಸೈ ಮಂಜುನಾಥ, ಮತ್ತು ಅಪೂರ್ವ ಮತ್ತು ಸಂಸ್ಥೆಯ ಸದಸ್ಯರು ಅವರಿಗೆ ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.
ಪಶುಸಂಗೋಪನೆ ಕ್ಷೇತ್ರದ ಸಮಸ್ಯೆಗಳ ಕುರಿತು ಸದನದಲ್ಲಿ ಡಿ.ಎಸ್. ಅರುಣ್ ಕಿಡಿ
ವಿಧಾನಪರಿಷತ್ ಅಧಿವೇಶನದಲ್ಲಿ ಪಶುಸಂಗೋಪನೆ ಇಲಾಖೆಯ ಸ್ಥಿತಿಗತಿ ಕುರಿತು ಮಾತನಾಡಿದ ಶಾಸಕರಾದ ಡಿ.ಎಸ್. ಅರುಣ್ ಅವರು, ರಾಜ್ಯದಲ್ಲಿ ಪಶುವೈದ್ಯರ ತೀವ್ರ ಕೊರತೆಯಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಸರ್ಕಾರವನ್ನು ತೀವ್ರವಾಗಿ ಟೀಕಿಸಿದರು. ಸರ್ಕಾರವು ಬಹುಕಾಲದಿಂದ 400 ಪಶುವೈದ್ಯರನ್ನು ನೇಮಕ ಮಾಡಲಾಗುತ್ತದೆ ಎಂದು ಘೋಷಿಸಿದ್ದರೂ ಇನ್ನೂ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಇತ್ತೀಚೆಗೆ ಕಲ್ಯಾಣ ಕರ್ನಾಟಕ ಭಾಗದ ನೇಮಕಾತಿಯಲ್ಲಿಯೂ ರೋಸ್ಟರ್ ಸಮಸ್ಯೆ ಉಂಟಾಗಿ ಪ್ರಕ್ರಿಯೆ ವಿಳಂಬವಾಗುತ್ತಿರುವುದು ಸರ್ಕಾರದ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಅವರು ಆರೋಪಿಸಿದರು.
ರಾಜ್ಯದಲ್ಲಿ ಪಶುಸಂಗೋಪನೆ ರೈತರ ಪ್ರಮುಖ ಆದಾಯ ಮೂಲವಾಗಿದ್ದರೂ, ಹಲವಾರು ಪಶುವೈದ್ಯ ಆಸ್ಪತ್ರೆಗಳಲ್ಲಿ ಪಶುವೈದ್ಯರ ಕೊರತೆ, ಅಗತ್ಯ ಔಷಧಿ ಮತ್ತು ವೈದ್ಯಕೀಯ ಸಾಧನಗಳ ಅಭಾವ ಇರುವ ಬಗ್ಗೆ ರೈತರಿಂದ ನಿರಂತರ ದೂರುಗಳು ಬರುತ್ತಿವೆ ಎಂದು ಅವರು ಹೇಳಿದರು. ಆಸ್ಪತ್ರೆಗಳು ಬೆಳಗ್ಗಿನಿಂದಲೇ ಕಾರ್ಯನಿರ್ವಹಿಸುವುದರಿಂದ ರೈತರಿಗೆ ತುರ್ತು ಸೇವೆ ಸಿಗುವಂತೆ ಮೊಬೈಲ್ ವೆಟರ್ನರಿ ಘಟಕಗಳು ಸಂಜೆ 4 ಗಂಟೆಯ ನಂತರ ಕಾರ್ಯನಿರ್ವಹಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದಲ್ಲದೆ, ಏಪ್ರಿಲ್ 1 ಕಳೆದ ವರ್ಷದಿಂದ ಪಶುಗಳ ಅನುಗ್ರಹ ಯೋಜನೆಯಡಿ ರೈತರಿಗೆ ನೀಡಬೇಕಾದ ಪಾವತಿಗಳು ಇನ್ನೂ ನೀಡಲಾಗಿಲ್ಲ ಎಂಬುದನ್ನು ಉಲ್ಲೇಖಿಸಿ, ರೈತರ ಸಮಸ್ಯೆಗಳ ಬಗ್ಗೆ ಪಶುಸಂಗೋಪನೆ ಇಲಾಖೆ ಗಂಭೀರವಾಗಿ ಗಮನ ಹರಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ನಾಪತ್ತೆಯಾಗಿದ್ದ ಯುವಕನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ
ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಯುವಕನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ.
ಮೃತರನ್ನು ಹುಂಚ ಸಮೀಪದ ಮಾರ್ನಮಿಬೈಲು ನಿವಾಸಿ ಧನುಷ್ ಎನ್.ಎಸ್. (25) ಎಂದು ಗುರುತಿಸಲಾಗಿದೆ.
ಧನುಷ್ ಕಳೆದ 19-01-2026 ರಂದು ಮನೆಯಿಂದ ಹೊರಟು ಹೋದ ಅವರು ನಂತರ ಮರಳಿ ಮನೆಗೆ ಬಂದಿರಲಿಲ್ಲ. ಈ ಬಗ್ಗೆ ಕುಟುಂಬದವರು ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಇದೀಗ ಯುವಕನ ಮೃತದೇಹ 5MS ಪ್ರದೇಶದ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸಾಗಿಸಲಾಗಿದೆ. ಯುವಕನ ಸಾವಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಕುರಿತು ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
Chamber of Commerce Shivamogga ವಿಜಯರತ್ನ ಪುರಸ್ಕೃತ ಪ್ರದೀಪ್ ವಿ.ಎಲಿಗೆ ಸನ್ಮಾನ
Chamber of Commerce Shivamogga ಕನ್ನಡ ದಿನಪತ್ರಿಕೆ ವಿಜಯವಾಣಿ ನೀಡುವ ವಿಜಯರತ್ನ ಇಂಟರ್ ನ್ಯಾಷನಲ್ 2026 ಪ್ರಶಸ್ತಿ ಪುರಸ್ಕೃತ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನಿರ್ದೇಶಕ ಪ್ರದೀಪ್ ವಿ.ಎಲಿ ಅವರಿಗೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಮಾತನಾಡಿ, ಉದ್ಯಮದಲ್ಲಿ ಶ್ರಮ ಹಾಗೂ ಪ್ರಾಮಾಣಿಕತೆ ಇದ್ದರೆ ಅಂತರಾಷ್ಟ್ರೀಯ ಮಟ್ಟದಲ್ಲೂ ಸಾಧನೆ ಸಾಧ್ಯ ಎಂದು ತಿಳಿಸಿದರು.
ಉದ್ಯಮ ಕ್ಷೇತ್ರದಲ್ಲಿ ಸತತ ಪರಿಶ್ರಮ, ನಿಷ್ಠೆ ಮತ್ತು ಸಮಾಜಪರ ಬದ್ಧತೆ ಮೂಲಕ ಗಮನಾರ್ಹ ಸಾಧನೆ ಮಾಡಿರುವ ಹಿನ್ನೆಲೆಯಲ್ಲಿ ಪ್ರದೀಪ್ ವಿ.ಎಲಿ ಅವರನ್ನು “ವಿಜಯರತ್ನ” ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ವ್ಯವಹಾರದಲ್ಲಿ ಗುಣಮಟ್ಟ, ನಂಬಿಕೆ ಮತ್ತು ಸೇವಾ ಮನೋಭಾವವನ್ನು ಅಳವಡಿಸಿಕೊಂಡು ಯಶಸ್ವಿಯಾಗಿ ಮುನ್ನಡೆಯುತ್ತಿದ್ದಾರೆ ಎಂದರು.
ಶಿವಮೊಗ್ಗ ಜಿಲ್ಲೆಯಲ್ಲಿ ಯುವ ಉದ್ಯಮಿಗಳ ಸಂಖ್ಯೆ ಹೆಚ್ಚಾಗಬೇಕು. ಸರ್ಕಾರದ ವತಿಯಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು. ಶಿವಮೊಗ್ಗ ಜಿಲ್ಲಾ ಮತ್ತು ವಾಣಿಜ್ಯ ಕೈಗಾರಿಕೆ ಸಂಘವು ಯುವ ಉದ್ಯಮಿಗಳಿಗೆ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡಲಿದೆ ಎಂದು ತಿಳಿಸಿದರು.
Chamber of Commerce Shivamogga ಸನ್ಮಾನಿತ ಪ್ರದೀಪ್ ವಿ.ಎಲಿ ಮಾತನಾಡಿ, ಈ ಗೌರವ ನನ್ನ ಕುಟುಂಬ, ಸಹೋದ್ಯೋಗಿಗಳ ಆಶೀರ್ವಾದದ ಫಲ. ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹಕಾರ ಕೂಡ ಇದೆ. ಮುಂದೆಯೂ ಸಮಾಜಮುಖಿ ಕಾರ್ಯಗಳಲ್ಲಿ ಇನ್ನಷ್ಟು ತೊಡಗಿಸಿಕೊಳ್ಳುತ್ತೇನೆ ಎಂದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್.ಮನೋಹರ್, ನಿರ್ದೇಶಕರಾದ ಬಿ.ಸುರೇಶ್ ಕುಮಾರ್, ಗಣೇಶ್ ಎಂ.ಅಂಗಡಿ , ಜಿ.ವಿ.ಕಿರಣ್ ಕುಮಾರ್ , ರವಿಪ್ರಕಾಶ್ ಜೆನ್ನಿ, ಸಿ ಎ ಶರತ್, ಎಸ್ ಎಸ್ ಉದಯ್ ಕುಮಾರ್, ವಿನೋದ್ ಕುಮಾರ್ ಜೈನ್, ಎಸ್ ಪಿ ಶಂಕರ್, ಮಂಜೇಗೌಡ, ಹಾಲಸ್ವಾಮಿ, ಡಾ. ಲಕ್ಷ್ಮೀದೇವಿ ಗೋಪಿನಾಥ್, ಸಹನಾ ಸುಭಾಷ್ ಹಾಗೂ ಮಾಜಿ ಅಧ್ಯಕ್ಷ ಡಿ ಎಂ ಶಂಕರಪ್ಪ ಇತರರಿದ್ದರು.
ಮಾರ್ಚ್ 15ರಂದು ರೋಟರಿ ಸೆಂಟ್ರಲ್‌ಗೆ ಜಿಲ್ಲಾ ಗವರ್ನರ್ ಭೇಟಿ
ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಸಂಸ್ಥೆಗೆ ಮಾರ್ಚ್ 15ರಂದು ಜಿಲ್ಲಾ ಗವರ್ನರ್ ಕೆ.ಪಾಲಾಕ್ಷ ಅವರ ಅಧಿಕೃತ ಭೇಟಿ ಹಿನ್ನೆಲೆಯಲ್ಲಿ ವಿವಿಧ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಗೋಪಾಳದ ರೋಟರಿ ಭವನದಲ್ಲಿ ಮಾರ್ಚ್ 15ರಂದು ಸಂಜೆ 6.30ಕ್ಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಗವರ್ನರ್ ಕೆ.ಪಾಲಾಕ್ಷ, ವಲಯ 11ರ ಸಹಾಯಕ ಗವರ್ನರ್ ಎಂ.ಬಿ.ಲಕ್ಷ್ಮಣ್ ಗೌಡ, ವಲಯ ಸೇನಾನಿ ಜಿ.ಕಿರಣಕುಮಾರ್, ರೇಖಾ ಪಾಲಾಕ್ಷ, ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಬಿ.ಬಸವರಾಜ, ಕಾರ್ಯದರ್ಶಿ ಜಯಶೀಲ ಶೆಟ್ಟಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಸರ್ಕಾರಿ ಶಾಲೆಗಳಿಗೆ ಕುಡಿಯುವ ನೀರಿನ ಯಂತ್ರ ವಿತರಿಸಲಾಗುವುದು. ಶಾಲಾ ಮಕ್ಕಳಿಗೆ ನೋಟ್‌ಬುಕ್ ವಿತರಣೆ, ಪುಸ್ತಕ, ತಟ್ಟೆ. ಲೋಟ ಹಾಗೂ ಸ್ಟ್ಯಾಂಡ್‌ಗಳನ್ನು ನೀಡಲಾಗುವುದು ಎಂದು ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಬಿ.ಬಸವರಾಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
CM Siddaramaiah ಶಾಸಕ ಎಸ್.ಎನ್. ಚನ್ನಬಸಪ್ಪನವರಿಂದ ಸಿಎಂ ಭೇಟಿ, ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ಮನವಿ
CM Siddaramaiah ಶಿವಮೊಗ್ಗದ ಶಾಸಕರಾದ ಎಸ್.ಎನ್. ಚೆನ್ನಬಸಪ್ಪನವರ ಕಚೇರಿಗೆ ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ಅನೇಕ ನಿವಾಸಿಗಳು ಶಸ್ತ್ರಚಿಕಿತ್ಸೆ ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ನೆರವು ಕೋರಿ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ, ಬೆಂಗಳೂರಿನ ವಿಧಾನಸೌಧದಲ್ಲಿ ಶಾಸಕರಾದ ಎಸ್.ಎನ್. ಚನ್ನಬಸಪ್ಪನವರು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು.
CM Siddaramaiah ಈ ಸಂದರ್ಭದಲ್ಲಿ ಅವರ ಶಸ್ತ್ರಚಿಕಿತ್ಸೆಯ ವೆಚ್ಚವನ್ನು ಭರಿಸಲು ‘ಮುಖ್ಯಮಂತ್ರಿ ಪರಿಹಾರ ನಿಧಿ’ಯ (CMRF) ಅಡಿಯಲ್ಲಿ ತುರ್ತಾಗಿ ಆರ್ಥಿಕ ನೆರವು ಮಂಜೂರು ಮಾಡುವಂತೆ ಕೋರಿ ಅವರಿಗೆ ಅಧಿಕೃತ ಮನವಿಯನ್ನು ಸಲ್ಲಿಸಲಾಯಿತು.
