University of Agricultural ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ, ವಿಸ್ತರಣಾ ನಿರ್ದೇಶನಾಲಯದ, ರೈತರ ತರಬೇತಿ ಸಂಸ್ಥೆ, ಇರುವಕ್ಕಿ ಶಿವಮೊಗ್ಗದಡಿಯಲ್ಲಿ ದಿನಾಂಕ 16.06.2026 ಮಂಗಳವಾರ ದಂದು ” ಹಲಸಿನ ಹಣ್ಣಿನ ಮೌಲ್ಯವರ್ಧನೆ” ಕುರಿತ ತರಬೇತಿ ಕಾರ್ಯಕ್ರಮವನ್ನು ರೈತರ ತರಬೇತಿ ಸಂಸ್ಥೆ, ಇರುವಕ್ಕಿ ಯಲ್ಲಿ ಆಯೋಜಿಸಲಾಗಿತ್ತು.
ಈ ತರಬೇತಿಯಲ್ಲಿ ಡಾ. ರಾಮಕೃಷ್ಣ ಹೆಗಡೆ, ಹಿರಿಯ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು, ರೈತರ ತರಬೇತಿ ಸಂಸ್ಥೆ, ಇರುವಕ್ಕಿ ಇವರು ರೈತರನ್ನು ಸ್ವಾಗತಿಸಿದರು. ಡಾ. ರಾಘವೇಂದ್ರ ಕೆ. ಮೆಸ್ತಾ, ವಿಸ್ತರಣಾ ನಿರ್ದೇಶಕರು, ಕೆ.ಶಿ.ನಾ.ಕೃ.ತೋ.ವಿ.ವಿ., ಇರುವಕ್ಕಿ, ಶಿವಮೊಗ್ಗರವರು ಈ ತರಬೇತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ರೈತರನುದ್ದೇಶಿಸಿ ಮಾತನಾಡುತ್ತಾ ಮಲೆನಾಡಿನಲ್ಲಿ ಅತಿ ಹೆಚ್ಚಾಗಿ ಹಲಸಿನ ಹಣ್ಣು ದೊರೆಯುತ್ತಿದ್ದು, ಹಣ್ಣನ್ನು ನೇರವಾಗಿ ಮಾರಾಟ ಮಾಡುವ ಬದಲು, ಅದನ್ನು ವಿವಿಧ ಸಂಸ್ಕರಿತ ಉತ್ಪನ್ನಗಳನ್ನಾಗಿ ಪರಿವರ್ತಿಸಿ ಹೆಚ್ಚಿನ ಲಾಭಗಳಿಸಬಹುದು ಎಂದು ತಿಳಿಸಿದರು. ಹಲಸಿನ ಹಣ್ಣು ಬೇಗನೆ ಕೊಳೆಯುವುದು ಮತ್ತು ಶೇಕಡಾ 60 ರಿಂದ 70 ರಷ್ಟು ಹಣ್ಣುಗಳು ವ್ಯರ್ಥವಾಗುವುದರಿಂದ ಮೌಲ್ಯವರ್ಧನೆ ಅತ್ಯಗತ್ಯವಾಗಿದೆ ಎಂದು ಸೂಚಿಸಿದರು.
University of Agricultural ಈ ತರಬೇತಿ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಸಾಗರ ತಾಲ್ಲೂಕಿನ ಅತ್ತಿಸರ ಗ್ರಾಮದ ಶ್ರೀ ರವೀಂದ್ರ ಕಾಶಿ ರವರು ಹಲಸಿನ ಹಣ್ಣಿನಿಂದ ವಿವಿಧ ಬಗೆಯ ತಿನಿಸುಗಳಾದ ಪಾಯಸ, ಕೋಸಂಬರಿ, ಬೋಂಡಾ, ಚಿಪ್ಸ್ ಹಾಗೂ ವೈನ್ ತಯಾರಿಕೆಯ ವಿಧಾನವನ್ನು ಹಾಗೂ ಇತರೆ ತಿನಿಸುಗಳ ಮಾಹಿತಿಯನ್ನು ಸುವಿವರವಾಗಿ ರೈತರೊಂದಿಗೆ ಹಂಚಿಕೊಂಡರು. ಕೃಷಿ ವಿಜ್ಞಾನಗಳ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಶ್ರುತಿ ನಾಯಕ್ ರವರು ಹಲಸಿನ ಹಣ್ಣಿನಿಂದ ಬನ್ಸ್ ಮತ್ತು ಜಾಮ್ ತಯಾರಿಸುವ ವಿಧಾನವನ್ನು ರೈತರಿಗೆ ತಿಳಿಯಪಡಿಸಿದರು. ಈ ತರಬೇತಿ ಕಾರ್ಯಕ್ರಮದಲ್ಲಿ ರೈತ ತರಬೇತಿ ಸಂಸ್ಥೆಯ ಡಾ.ಕೃಷ್ಣ ರೆಡ್ಡಿ, ಪಿ. ರವರು ಭಾಗವಹಿಸಿ ರೈತರೊಂದಿಗೆ ಇತರೆ ವಿಷಯಗಳ ಕುರಿತು ಉಪಯುಕ್ತ ಮಾಹಿತಿಯನ್ನು ನೀಡಿದರು.
