Wednesday, August 5, 2026
Wednesday, August 5, 2026
Home Blog Page 57

Klive Special Article ಮೊಸಳೆ ಹಿಡಿತ ಅಂದರೆ ಮುಗೀತು…ದೈತ್ಯಜೀವಿಯ ಬಗ್ಗೆ ಮಾಹಿತಿ, ಲೇ: ಪ್ರಸಾದ್ ಶ್ರೀವತ್ಸ. ದಾವಣಗೆರೆ

0

Klive Special Article ಅಬ್ಬಬ್ಬಾ ಅದೆಂಥಾ ದೈತ್ಯ ಆಕಾರ, ಅದೇನ್ರೀ ಮನುಷ್ಯರನ್ನೇ ನುಂಗಿಬಿಡುತ್ತೆ, ಎಂಟರಿಂದ ಹತ್ತಡಿ, ಹದಿನೈದಡಿ ಉದ್ದ ನೂರಾರು ಕಿಲೋ ತೂಕ ಅದ್ಹೇಗೆ ನೀರಲ್ಲಿ ಯಾರಿಗೂ ತಿಳಿದ ಹಾಗಿರುತ್ತೆ ಅದು. ಅದಕ್ಕೇನು ಉಸಿರುಗಟ್ಟೋದಿಲ್ವೇನು ? ಇನ್ನೂ ಹತ್ತು ಹಲವಾರು ಸಂದೇಹಗಳು ಮನಸಿನಲ್ಲಿ ಹೊಯ್ದಾಡುತ್ತಿದ್ದವು. ಗಜೇಂದ್ರ ಮೋಕ್ಷದಲ್ಲಿ ಆನೆಗೂ ಮೊಸಳೆಗೂ ಹತ್ತು ಸಾವಿರ ವರ್ಷ ಯುದ್ಧ ನೆನದರೆ ಎದೆ ಝಲ್ಲೆನಿಸುವಂಥಾ ಭೀಕರ ದೃಶ್ಯಗಳು ಕಣ್ಣ ಮುಂದೆ ಬಂದು ಹೋಗುತ್ತವೆ. ಆ ದೈತ್ಯ ನರಭಕ್ಷಕನೇ ಆ ಮೊಸಳೆ. ಹೌದು ಇಂದು “ವಿಶ್ವ ಮೊಸಳೆದಿನ”. ಪ್ರತಿವರ್ಷದ ಜೂನ್‌ 17ನ್ನು ವಿಶ್ವ ಮೊಸಳೆಗಳ ದಿನವನ್ನಾಗಿ ಆಚರಿಸಲಾಗಿತ್ತದೆ.
1972 ಜಾರಿಗೆ ಬಂದ ಸ್ವಲ್ಪ ಸಮಯದ ನಂತರ, ಮೊಸಳೆ ಸಂರಕ್ಷಣಾ ಯೋಜನೆಯನ್ನು ವಿಶ್ವಸಂಸ್ಥೆ ಮತ್ತು ಭಾರತ ಸರ್ಕಾರವು ಪ್ರಾರಂಭಿಸಿತು . ನೈಸರ್ಗಿಕ ಆವಾಸಸ್ಥಾನಗಳನ್ನು ರಕ್ಷಿಸುವುದು , ಬಂಧಿತ ಸಂತಾನೋತ್ಪತ್ತಿಯ ಮೂಲಕ ಮೊಸಳೆಗಳ ಸಂಖ್ಯೆಯನ್ನು ಹೆಚ್ಚಿಸುವುದು ಮತ್ತು ಕಾಡಿನಲ್ಲಿ ಮೊಟ್ಟೆಯೊಡೆದು ಹೊರಬರುವ ಮರಿಗಳ ಕಡಿಮೆ ಬದುಕುಳಿಯುವಿಕೆಯ ಪ್ರಮಾಣವನ್ನು ಪರಿಹರಿಸುವುದು ಪ್ರಾಥಮಿಕ ಉದ್ದೇಶಗಳಾಗಿದ್ದವು . ಈ ಯೋಜನೆಯು ಭಾರತದ 34 ಸ್ಥಳಗಳಲ್ಲಿ ಸಂತಾನೋತ್ಪತ್ತಿ ಮತ್ತು ಪಾಲನೆ ಕೇಂದ್ರಗಳನ್ನು ಸ್ಥಾಪಿಸಿತು, ಇದರಲ್ಲಿ ಭಿತರ್ಕಾನಿಕಾ ಕೂಡ ಒಂದು . ದೇಶದ ಅಳಿವಿನಂಚಿನಲ್ಲಿರುವ ಮೊಸಳೆಗಳ ಜನಸಂಖ್ಯೆಯನ್ನು ರಕ್ಷಿಸಲು ಮತ್ತು ಪುನರುಜ್ಜೀವನಗೊಳಿಸಲು, ವಿಶೇಷವಾಗಿ ನದೀಮುಖ ಅಥವಾ ಉಪ್ಪುನೀರಿನ ಮೊಸಳೆಗಳನ್ನು ( ಕ್ರೊಕೊಡೈಲಸ್ ಪೊರೊಸಸ್ ) ಕೇಂದ್ರೀಕರಿಸುತ್ತದೆ.
ಮೊಸಳೆಗಳು ಕ್ರೊಕೊಡೈಲಿಯಾ ಕ್ರಮಕ್ಕೆ ಸೇರಿದ ದೊಡ್ಡ, ಮಾಂಸಾಹಾರಿ ಸರೀಸೃಪಗಳಾಗಿವೆ. ಅವು ಭೂಮಿಯ ಮೇಲಿನ ಅತ್ಯಂತ ಹಳೆಯ ಜೀವಂತ ಪ್ರಾಣಿಗಳಲ್ಲಿ ಸೇರಿವೆ ಮತ್ತು 200 ಮಿಲಿಯನ್ ವರ್ಷಗಳಿಗೂ ಹೆಚ್ಚು ಕಾಲ ಅಸ್ತಿತ್ವದಲ್ಲಿವೆ, ಇದು ಪ್ರಮುಖ ಅಳಿವಿನ ಘಟನೆಗಳಿಂದ ಬದುಕುಳಿದ ಕೆಲವೇ ಜಾತಿಗಳಲ್ಲಿ ಒಂದಾಗಿದೆ.
ಮೊಸಳೆಗಳ ಜೀವನದ ಸಣ್ಣ ಮಾಹಿತಿ :
ಲಕ್ಷಾಂತರ ವರ್ಷಗಳಿಂದ ಅವುಗಳ ದೇಹ ರಚನೆಯು ಬಹಳ ಕಡಿಮೆ ಬದಲಾಗಿರುವುದರಿಂದ ಅವುಗಳನ್ನು ಹೆಚ್ಚಾಗಿ “ಜೀವಂತ ಪಳೆಯುಳಿಕೆಗಳು” ಎಂದು ಕರೆಯಲಾಗುತ್ತದೆ.
ಮೊಸಳೆಗಳು ಏಷ್ಯಾ, ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಅಮೆರಿಕದ ಉಷ್ಣವಲಯದ ಮತ್ತು ಉಪೋಷ್ಣವಲಯದ ಪ್ರದೇಶಗಳಲ್ಲಿ ಕಂಡುಬರುತ್ತವೆ .
Klive Special Article ಅವು ಶೀತರಕ್ತ (ಎಕ್ಟೋಥರ್ಮಿಕ್) ಪ್ರಾಣಿಗಳು ಮತ್ತು ತಮ್ಮ ದೇಹದ ಉಷ್ಣತೆಯನ್ನು ನಿಯಂತ್ರಿಸಲು ಬಾಹ್ಯ ಶಾಖದ ಮೂಲಗಳನ್ನು ಅವಲಂಬಿಸಿವೆ.
ಮೊಸಳೆಗಳು ಮಾಂಸಾಹಾರಿಗಳು ಮತ್ತು ಮೀನು, ಪಕ್ಷಿಗಳು, ಸರೀಸೃಪಗಳು ಮತ್ತು ಸಸ್ತನಿಗಳನ್ನು ತಿನ್ನುತ್ತವೆ.
ಅವು ಪ್ರಾಣಿ ಸಾಮ್ರಾಜ್ಯದಲ್ಲಿ ಅತ್ಯಂತ ಪ್ರಬಲವಾದ ಕಚ್ಚುವಿಕೆಯ ಶಕ್ತಿಗಳಲ್ಲಿ ಒಂದನ್ನು ಹೊಂದಿವೆ .
ಅವುಗಳ ಕಣ್ಣುಗಳು, ಕಿವಿಗಳು ಮತ್ತು ಮೂಗಿನ ಹೊಳ್ಳೆಗಳು ತಲೆಯ ಮೇಲ್ಭಾಗದಲ್ಲಿವೆ, ಬೇಟೆಯನ್ನು ಕಾಯುವಾಗ ಅವು ಹೆಚ್ಚಾಗಿ ನೀರಿನಲ್ಲಿ ಮುಳುಗಿರಲು ಅನುವು ಮಾಡಿಕೊಡುತ್ತದೆ.
ಮೊಸಳೆಗಳು ಅತ್ಯುತ್ತಮ ಈಜುಗಾರರು ಮತ್ತು ನೀರಿನಲ್ಲಿ ಚಲನೆಗಾಗಿ ತಮ್ಮ ಶಕ್ತಿಯುತ ಬಾಲಗಳನ್ನು ಬಳಸುತ್ತವೆ.
ಅವರು ತಮ್ಮ ಹೃದಯ ಬಡಿತವನ್ನು ನಿಧಾನಗೊಳಿಸುವ ಮೂಲಕ ದೀರ್ಘಕಾಲದವರೆಗೆ ನೀರಿನ ಅಡಿಯಲ್ಲಿ ಉಳಿಯಬಹುದು.
ಹೆಣ್ಣು ಮೊಸಳೆಗಳು ಮೊಟ್ಟೆಗಳನ್ನು ಇಟ್ಟು ಮರಿಗಳು ಹೊರಬರುವವರೆಗೂ ತಮ್ಮ ಗೂಡುಗಳನ್ನು ರಕ್ಷಿಸಿಕೊಳ್ಳುತ್ತವೆ.
ಮೊಸಳೆ ತಾಯಂದಿರು ಸಾಮಾನ್ಯವಾಗಿ ತಮ್ಮ ಮರಿಗಳನ್ನು ರಕ್ಷಣೆಗಾಗಿ ಬಾಯಿಯಲ್ಲಿರುವ ನೀರಿಗೆ ಹೊತ್ತುಕೊಂಡು ಹೋಗುತ್ತಾರೆ.
ಈ ಸರೀಸೃಪಗಳು ಜಲಚರ ಪರಿಸರ ವ್ಯವಸ್ಥೆಗಳಲ್ಲಿ ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಮೂಲಕ, ಅತ್ಯುನ್ನತ ಪರಭಕ್ಷಕಗಳಾಗಿ ಪ್ರಮುಖ ಪಾತ್ರವಹಿಸುತ್ತವೆ .
ಜಾತಿಗಳನ್ನು ಅವಲಂಬಿಸಿ ಮೊಸಳೆಗಳು 50–70 ವರ್ಷಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಬದುಕಬಲ್ಲವು .
ಉಪ್ಪುನೀರಿನ ಮೊಸಳೆ (ಕ್ರೊಕೊಡೈಲಸ್ ಪೊರೊಸಸ್) ವಿಶ್ವದ ಅತಿದೊಡ್ಡ ಜೀವಂತ ಸರೀಸೃಪವಾಗಿದೆ.
ಮೊಸಳೆಗಳು ಅತ್ಯುತ್ತಮ ರಾತ್ರಿ ದೃಷ್ಟಿ ಮತ್ತು ಶ್ರವಣ ಸೇರಿದಂತೆ ಹೆಚ್ಚು ಅಭಿವೃದ್ಧಿ ಹೊಂದಿದ ಇಂದ್ರಿಯಗಳನ್ನು ಹೊಂದಿವೆ.
ಆರೋಗ್ಯಕರ ಜಲಚರ ಪರಿಸರ ವ್ಯವಸ್ಥೆಗಳನ್ನು ಕಾಪಾಡಿಕೊಳ್ಳಲು ಮೊಸಳೆಗಳು ಸಹಾಯ ಮಾಡುವುದರಿಂದ ಅವುಗಳನ್ನು ಪ್ರಮುಖ ಪ್ರಭೇದಗಳೆಂದು ಪರಿಗಣಿಸಲಾಗುತ್ತದೆ .

ಅದೇನೆ ಇರಲಿ ಮಾರ್ರೇ ಜೀವ ಇಲ್ಲಿಂದ ಅಲ್ಲಿಯವರೆಗೆ ಒಂದೇ ಅಲ್ಲವೇ ? ಅವುಗಳಿಗೆ ನಾವು ತೊಂದರೆ ಕೊಡದಿದ್ದರೆ ಸದಾ ಅವುಗಳೂ ನೆಮ್ಮದಿಯಾಗಿರುತ್ತವೆ. ಹಾಗೂ ನಮಗೂ ನೆಮ್ಮದಿ. ಸಧ್ಯ ನನ್ನೂರಿನಲ್ಲಿ ಹಳ್ಳವಿದೆ ಮೊಸಳೆಯಿಲ್ಲ ಅಷ್ಟೇ. ಬದುಕಿ ಬದುಕಲು ಬಿಡಿ. (ಕೃಪೆ ಇಂಟರ್‌ನೆಟ್‌ )
( ಪ್ರಸಾದ ಶ್ರೀವತ್ಸ )

ರೋಟರಿ ಕ್ಲಬ್ ಶಿವಮೊಗ್ಗ ಸಹ್ಯಾದ್ರಿ 9ನೇ ಸಂಸ್ಥೆ ಆರಂಭ

0

Rotary Club Shimoga ರೋಟರಿ ಕ್ಲಬ್ ಶಿವಮೊಗ್ಗ ಉತ್ತರದಿಂದ ವಿದ್ಯಾನಗರದಲ್ಲಿ ನೂತನ ರೋಟರಿ ಕ್ಲಬ್ ಪ್ರಾರಂಭಿಸಲಾಗುತ್ತಿದೆ.

ರೋಟರಿ ಅಂತರಾಷ್ಟ್ರೀಯ ಸೇವಾ ಸಂಸ್ಥೆಯಾಗಿದ್ದು, 120 ವರ್ಷದ ಇತಿಹಾಸವಿರುವ ಸಂಸ್ಥೆ 200ಕ್ಕೂ ಹೆಚ್ಚು ದೇಶಗಳಲ್ಲಿ ಸೇವಾಕಾರ್ಯಗಳನ್ನು ನಡೆಸುತ್ತಿದೆ. ಸಮಾನ ಮನಸ್ಕ ಸ್ನೇಹಿತರು ಸೇರಿ ಸೇವೆಯನ್ನು ಮಾಡುವ ಉದ್ದೇಶದಿಂದ ಕೆಲಸ ಮಾಡುತ್ತಾರೆ. ಪ್ರಪಂಚದಾದ್ಯಂತ 140 ಲಕ್ಷಕ್ಕೂ ಹೆಚ್ಚು ಜನ ರೋಟರಿಯ ಸದಸ್ಯತ್ವ ಹೊಂದಿದ್ದಾರೆ.

ದೇಶ, ಭಾಷೆ, ಜಾತಿ, ಮತ ಎಲ್ಲವನ್ನು ಮೀರಿ ಬೆಳೆದಿರುವ ಸಂಸ್ಥೆ ಇದಾಗಿದೆ. ಪ್ರಪಂಚದಾದ್ಯಂತ ಪೊಲಿಯೋ ನಿರ್ಮೂಲನೆ ಮಾಡುವಲ್ಲಿ ರೋಟರಿ ಪಾತ್ರ ಅತ್ಯಂತ ಮಹತ್ವದ್ದು. ಇಂತಹ ರೋಟರಿ ಸಂಸ್ಥೆ ನಮ್ಮ ಶಿವಮೊಗ್ಗ ನಗರದಲ್ಲಿ ಕಾರ್ಯನಿರ್ವಹಿಸುತ್ತ ಸಮಾಜ ಸೇವೆಗೆ ಕಟಿಬದ್ಧವಾಗಿದೆ.

ಶಿವಮೊಗ್ಗ ನಗರದಲ್ಲಿ 9ನೇ ರೋಟರಿ ಕ್ಲಬ್ ವಿದ್ಯಾನಗರದಲ್ಲಿ “ರೋಟರಿ ಕ್ಲಬ್ ಶಿವಮೊಗ್ಗ ಸಹ್ಯಾದ್ರಿ” ಎಂಬ ಹೆಸರಿನಲ್ಲಿ ಉದ್ಘಾಟನೆಗೊಳ್ಳಲಿದೆ. ಜೂನ್ 19ರಂದು ಶುಕ್ರವಾರ ಶಿವಮೊಗ್ಗದ ಕಂಟ್ರಿ ಕ್ಲಬ್ ಆವರಣದಲ್ಲಿ ಬೆಳಿಗ್ಗೆ 11ಕ್ಕೆ ಕಾರ್ಯಕ್ರಮ ನಡೆಯಲಿದೆ. ರೋಟರಿ ಜಿಲ್ಲಾ ಗವರ್ನರ್ ಪಾಲಾಕ್ಷ, ನಿಯೋಜಿತ ಜಿಲ್ಲಾ ಗವರ್ನರ್ ಬಿ.ಎಂ.ಭಟ್, ವಸಂತ ಹೋಬಳಿದಾರ್, ಪಿಡಿಜಿ ಪ್ರೊ ಎ.ಎಸ್.ಚಂದ್ರಶೇಖರ್, ಅಸಿಸ್ಟೆಂಟ್ ಗವರ್ನರ್ ಕೆ.ಪಿ.ಶೆಟ್ಟಿ, ಪ್ರೆಸಿಡೆಂಟ್ ಬಸವರಾಜಪ್ಪ ಹಾಗೂ ಇನ್ನಿತರರು ಭಾಗವಹಿಸಲಿದ್ದಾರೆ.

Rotary Club Shimoga ಶಿವಮೊಗ್ಗ ರೋಟರಿ ಸಹ್ಯಾದ್ರಿ ಕ್ಲಬ್ ಚಾರ್ಟರ್ ಪ್ರೆಸಿಡೆಂಟ್ ಆಗಿ ಹುಲಿರಾಜ್ ಗುಬ್ಬಿ ಹಾಗೂ ಕಾರ್ಯದರ್ಶಿಯಾಗಿ ಡಾ. ವೇಣುಗೋಪಾಲ್ ರೆಡ್ಡಿ ಅಧಿಕಾರ ಸ್ವೀಕರಿಸುವರು. ಈ ಕ್ಲಬ್ ಪ್ರಾಯೋಜಕತ್ವ

ರೋಟರಿ ಕ್ಲಬ್ ಶಿವಮೊಗ್ಗ ಉತ್ತರ ವಹಿಸುವರು ಎಂದು ಹೊಸ ಕ್ಲಬ್ ಅಡ್ವೈಸರ್ ಸರ್ಜಾ ಜಗದೀಶ್ ತಿಳಿಸಿದ್ದಾರೆ.

Rotary Club Shivamogga ಪರಿಣಿತ ವೈದ್ಯರ ಸಲಹೆಯಂತೆ ಆರೋಗ್ಯವಂತ ಮನುಷ್ಯ 3-4 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು- ಪ್ರೊ.ಎ.ಎಸ್.ಚಂದ್ರಶೇಖರ್

0

Rotary Club Shivamogga ಪರಿಣಿತ ವೈದ್ಯರ ಸಲಹೆಯಂತೆ ಆರೋಗ್ಯವಂತ ಮನುಷ್ಯನು ಮೂರು ನಾಲ್ಕು ತಿಂಗಳಿಗೊಮ್ಮೆ ರಕ್ತವನ್ನು ನೀಡಬಹುದು ಎಂದು ಪ್ರೊ. ಎ.ಎಸ್.ಚಂದ್ರಶೇಖರ್ ಹೇಳಿದರು.

ರೋಟರಿ ಕ್ಲಬ್ ಶಿವಮೊಗ್ಗ ಉತ್ತರ ಹಾಗೂ ಅಮೆರಿಕಾದ ಮಾಡೆಸ್ಟೋ ಕ್ಲಬ್ ಸಹಯೋಗದೊಂದಿಗೆ ರೋಟರಿಯ ಗ್ಲೋಬಲ್ ಗ್ರಾಂಟ್ ಪ್ರಾಜೆಕ್ಟ್ ಅಡಿಯಲ್ಲಿ 43 ಲಕ್ಷ ರೂ. ವೆಚ್ಚದ ಸ್ವಯಂ ಚಾಲಿತ ರಕ್ತ ಶೇಖರಿಸುವ ಯಂತ್ರ ಲೋಕಾರ್ಪಣೆಗೊಳಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ವಯಂ ಚಾಲಿತ ರಕ್ತ ಶೇಖರಿಸುವ ಯಂತ್ರವನ್ನು ರೋಟರಿ ಕ್ಲಬ್ ಶಿವಮೊಗ್ಗ ಉತ್ತರವು ರೆಡ್ ಕ್ರಾಸ್ ಸಂಜೀವಿನಿ ಬ್ಲಡ್ ಸೆಂಟರ್ ನಲ್ಲಿ ಸಾರ್ವಜನಿಕರ ಸೇವೆಗಾಗಿ ಇರಿಸಲಾಗಿದೆ. ಯಂತ್ರದ ವಿಶೇಷತೆ ಎಂದರೆ ರೋಗಿಗೆ ರಕ್ತದ ಯಾವ ಘಟಕ ಅಂದರೆ ಯಾವ ಕಂಪೋನೆಂಟ್ಸ್ ಅವಶ್ಯಕತೆ ಇದೆಯೋ ಅದನ್ನು ಮಾತ್ರ ರಕ್ತದಿಂದ ಬೇರ್ಪಡಿಸಿ ಉಳಿದ ರಕ್ತವನ್ನು ದೇಹಕ್ಕೆ ವಾಪಾಸ್ ಕಳುಹಿಸುತ್ತದೆ ಎಂದರು.

ರೋಗಿಗೆ ಕೆಂಪು ರಕ್ತ ಕಣಗಳ ಅವಶ್ಯಕತೆ ಇದ್ದರೆ ಅದನ್ನು ಮಾತ್ರ ಬೇರ್ಪಡಿಸುತ್ತದೆ. ರೋಗಿಗೆ ಅವಶ್ಯಕತೆ ಇದ್ದ ಆ ಕೆಂಪು ರಕ್ತ ಕಣಗಳನ್ನು ಮಾತ್ರ ನೀಡಬಹುದು. ರಕ್ತದ ಪ್ರಮುಖ ಘಟಕಗಳಾದ ಕೆಂಪು ರಕ್ತ ಕಣ, ಪ್ಲೇಟ್‌ಲೇಟ್‌ಗಳು, ಪ್ಲಾಸ್ಮ ಹೀಗೆ ಪ್ರತಿಯೊಂದು ಬೇರ್ಪಡಿಸುತ್ತದೆ. ಆದ್ದರಿಂದ ಬೇಕಾದುದನ್ನು ಮಾತ್ರ ರಕ್ತದಾನಿಗಳಿಂದ ಸಂಗ್ರಹಿಸಿ ಉಳಿದ ರಕ್ತವನ್ನು ದಾನಿಗಳ ದೇಹಕ್ಕೆ ವರ್ಗಾಯಿಸುವುದರಿಂದ ದಾನಿಯು 15 ದಿನಗಳಿಗೊಮ್ಮೆ ರಕ್ತದಾನ ಮಾಡಲು ಶಕ್ತನಾಗಿರುತ್ತಾನೆ. ಇದರಿಂದ ರಕ್ತ ಪೋಲಾಗುವುದನ್ನು ತಪ್ಪಿಸಬಹುದು ಎಂದು ತಿಳಿಸಿದರು.

Rotary Club Shivamogga ರೆಡ್ ಕ್ರಾಸ್ ಸಂಜೀವಿನಿ ಬ್ಲಡ್ ಬ್ಯಾಂಕ್ ಕಾರ್ಯದರ್ಶಿ ಡಾ. ದಿನೇಶ್ ಮಾತನಾಡಿ, ಅತ್ಯಂತ ಆಧುನಿಕವಾದ ಆಟೋಮೆಟಿಕ್ ಬ್ಲಡ್ ಕಲೆಕ್ಷನ್ ಯಂತ್ರವು ಬೆಂಗಳೂರು ನಗರ ಹೊರತುಪಡಿಸಿದರೆ ಶಿವಮೊಗ್ಗದಲ್ಲಿ ಮಾತ್ರ ಇರುವುದು. ಇಂತಹ ಮಹತ್ಕಾರ್ಯಕ್ಕೆ ಕೈಜೋಡಿಸಿದ ಅಮೆರಿಕದ ರೋಟರಿ ಕ್ಲಬ್ ಮಾಡೆಸ್ಟೋ ಹಾಗೂ ರೋಟರಿ ಕ್ಲಬ್ ಶಿವಮೊಗ್ಗ ಉತ್ತರದ ಸದಸ್ಯರ ಕಾರ್ಯ ಅಭಿನಂದನೀಯ ಎಂದರು.

ಪ್ರಥಮವಾಗಿ ರೆಡ್ ಕ್ರಾಸ್ ಸಂಜೀವಿನಿ ಬ್ಲಡ್ ಬ್ಯಾಂಕ್ ಖಜಾಂಚಿ ನವೀನ್ ಅವರಿಂದ ಬಿಳಿ ರಕ್ತ ಕಣಗಳನ್ನು ಪಡೆಯಲಾಯಿತು.

ರೋಟರಿ ಕ್ಲಬ್ ಶಿವಮೊಗ್ಗ ಉತ್ತರ ಅಧ್ಯಕ್ಷ ಬಸವರಾಜಪ್ಪ, ಸರ್ಜಾ ಜಗದೀಶ್, ದತ್ತಾತ್ರಿ, ಡಾ. ಶಿವಕುಮಾರ್, ವೆಂಕಟೇಶ್, ಭಾರತೀ ಚಂದ್ರಶೇಖರ್, ವಾರಿಜಾ ಜಗದೀಶ್, ಉಷಾ ವೆಂಕಟೇಶ್ ಹಾಗೂ ರೆಡ್ ಕ್ರಾಸ್‌ನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Klive Special Article ಆರೋಗ್ಯಕರ ವೃದ್ಧಾಪ್ಯಕ್ಕೆ ಯೋಗ ಸಹಕಾರಿ ಲೇ: ಡಾ.ಎಸ್.ಎಲ್.ಪಲ್ಲವಿ

0

Klive Special Article ಪ್ರತಿ ವರ್ಷ ಜೂನ್ 21ರಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ ಯೋಗ ದಿನವನ್ನು ಅತ್ಯಂತ ಸಂಭ್ರಮ ಮತ್ತು ಜಾಗೃತಿಯೊಂದಿಗೆ ಆಚರಿಸಲಾಗುತ್ತದೆ. ಯೋಗವು ಭಾರತದ ಪುರಾತನ ಸಂಸ್ಕೃತಿ ಮತ್ತು ಪರಂಪರೆಯ ಅಮೂಲ್ಯ ಕೊಡುಗೆ. ಇದು ಕೇವಲ ದೈಹಿಕ ವ್ಯಾಯಾಮವಲ್ಲ ದೇಹ, ಮನಸ್ಸು ಮತ್ತು ಆತ್ಮದ ನಡುವೆ ಸಮತೋಲನವನ್ನು ಸಾಧಿಸುವ ಸಮಗ್ರ ಜೀವನ ವಿಧಾನವಾಗಿದೆ. 2026ರ ಅಂತರಾಷ್ಟ್ರೀಯ ಯೋಗ ದಿನದ ಧ್ಯೇಯ “Yoga for Healthy Aging” ಅಂದರೆ “ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ” ಎಂಬುದು ಇಂದಿನ ಸಮಾಜದ ಅಗತ್ಯತೆಗೆ ತಕ್ಕಂತೆ ಅತ್ಯಂತ ಮಹತ್ವಪೂರ್ಣ ವಿಷಯವಾಗಿದೆ.
ಇಂದಿನ ವೇಗದ ಜೀವನಶೈಲಿಯಲ್ಲಿ ಆರೋಗ್ಯಕರ ವೃದ್ಧಾಪ್ಯವನ್ನು ಕಾಪಾಡಿಕೊಳ್ಳುವುದು ಒಂದು ದೊಡ್ಡ ಸವಾಲಾಗಿದೆ. ವೃದ್ಧಾಪ್ಯ ಎಂದರೇನು?-ವೃದ್ಧಾಪ್ಯವು ಮಾನವನ ಜೀವನದ ಸಹಜ ಹಂತವಾಗಿದೆ. ವಯಸ್ಸು ಹೆಚ್ಚಾಗುತ್ತಾ ಹೋದಂತೆ ದೇಹದಲ್ಲಿ ಕೆಲವು ಬದಲಾವಣೆಗಳು ಕಂಡುಬರುತ್ತವೆ. ದೇಹದ ಲವಚಿಕತೆ ಕಡಿಮೆಯಾಗುವುದು, ದೈಹಿಕ ಶಕ್ತಿ ಕಡಿಮೆಯಾಗುವುದು, ಸಂಧಿ ನೋವು, ನಿದ್ರಾಹೀನತೆ, ಒತ್ತಡ ಮತ್ತು ವಿವಿಧ ಜೀವನಶೈಲಿ ಸಂಬಂಧಿತ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ವೃದ್ಧಾಪ್ಯವೆಂದರೆ ಕೇವಲ ಹೆಚ್ಚು ವರ್ಷ ಬದುಕುವುದಲ್ಲ ಆರೋಗ್ಯಕರವಾಗಿ, ಸ್ವಾವಲಂಬಿಯಾಗಿ ಮತ್ತು ಸಂತೋಷದಿಂದ ಬದುಕುವುದಾಗಿದೆ. ಈ ನಿಟ್ಟಿನಲ್ಲಿ ಯೋಗವು ಆರೋಗ್ಯಕರ ವೃದ್ಧಾಪ್ಯವನ್ನು ಸಾಧಿಸಲು ಅತ್ಯಂತ ಪರಿಣಾಮಕಾರಿ ಸಾಧನವಾಗಿದೆ.
ಯೋಗವು ಭಾರತೀಯ ಸಂಸ್ಕೃತಿಯ ಮಹತ್ವದ ಪರಂಪರೆಯಾಗಿದ್ದು ಆರೋಗ್ಯಕರ ಜೀವನಕ್ಕೆ ದಾರಿ ದೀಪವಾಗಿದೆ. ಯೋಗಾಭ್ಯಾಸದಲ್ಲಿ ಆಸನಗಳು, ಪ್ರಾಣಾಯಾಮ, ಧ್ಯಾನ ಮತ್ತು ವಿಶ್ರಾಂತಿ ತಂತ್ರಗಳು ಸೇರಿವೆ. ನಿಯಮಿತ ಯೋಗಾಭ್ಯಾಸವು ದೇಹದ ಸಮತೋಲನ, ಸ್ನಾಯು ಬಲ ಮತ್ತು ಲವಚಿಕತೆಯನ್ನು ಹೆಚ್ಚಿಸಲು ಸಹಕಾರಿ. ತಾಡಾಸನ, ವೃಕ್ಷಾಸನ, ಭುಜಂಗಾಸನ ಮತ್ತು ವಜ್ರಾಸನದಂತಹ ಸರಳ ಆಸನಗಳು ದೇಹದ ಚುರುಕುತನವನ್ನು ಕಾಪಾಡಲು ಸಹಾಯ ಮಾಡುತ್ತವೆ. ಜೊತೆಗೆ ರಕ್ತಸಂಚಾರ ಸುಧಾರಿಸಿ ಹೃದಯದ ಆರೋಗ್ಯವನ್ನು ಕಾಪಾಡಲು ಸಹಕಾರಿ ಹಾಗೂ ದೈಹಿಕ ಆರೋಗ್ಯವನ್ನು ಮಾತ್ರವಲ್ಲದೆ ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯವನ್ನೂ ಉತ್ತಮಗೊಳಿಸುತ್ತವೆ.
Klive Special Article ಆರೋಗ್ಯಕರ ವೃದ್ಧಾಪ್ಯದಲ್ಲಿ ಯೋಗದ ಮಹತ್ವ-ದೈಹಿಕ ಆರೋಗ್ಯ ಸುಧಾರಣೆ-ಯೋಗವು ದೇಹದ ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ಲವಚಿಕತೆ(Flexiblity)ಯನ್ನು ಹೆಚ್ಚಿಸುತ್ತದೆ. ಹಿರಿಯ ನಾಗರಿಕರಲ್ಲಿ ಸಾಮಾನ್ಯವಾಗಿ ಕಂಡುಬರುವ ಬೆನ್ನುನೋವು, ಕುತ್ತಿಗೆ ನೋವು, ಸಂಧಿವಾತ ಮುಂತಾದ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಉದಾಹರಣೆಗೆ -ತಾಡಾಸನ (ದೇಹದ ಸಮತೋಲನ ಹೆಚ್ಚಿಸುತ್ತದೆ), ವೃಕ್ಷಾಸನ (ಏಕಾಗ್ರತೆ ಮತ್ತು ಕಾಲುಗಳ ಬಲ ಹೆಚ್ಚಿಸುತ್ತದೆ), ಭುಜಂಗಾಸನ(ಬೆನ್ನುಹುರಿಯನ್ನು ಬಲಪಡಿಸುತ್ತದೆ) ವಜ್ರಾಸನ(ಜೀರ್ಣಕ್ರಿಯೆ ಸುಧಾರಿಸುತ್ತದೆ)
ಮಾನಸಿಕ ಆರೋಗ್ಯವು ವೃದ್ಧಾಪ್ಯದಲ್ಲಿ ಅತ್ಯಂತ ಮುಖ್ಯವಾದ ಅಂಶವಾಗಿದೆ. ಅನೇಕ ಹಿರಿಯರು ಏಕಾಂತ, ಆತಂಕ ಮತ್ತು ಖಿನ್ನತೆ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಯೋಗ ಮತ್ತು ಧ್ಯಾನ ಮನಸ್ಸಿಗೆ ಶಾಂತಿಯನ್ನು ನೀಡುತ್ತವೆ ಹಾಗೂ ಒತ್ತಡವನ್ನು ಕಡಿಮೆ ಮಾಡುತ್ತವೆ. ಅನುಲೋಮ ವಿಲೋಮ ಮತ್ತು ಭ್ರಮರಿ ಪ್ರಾಣಾಯಾಮಗಳು ಉಸಿರಾಟ ವ್ಯವಸ್ಥೆಯನ್ನು ಬಲಪಡಿಸಿ ಮನಸ್ಸಿಗೆ ನೆಮ್ಮದಿಯನ್ನು ಒದಗಿಸುತ್ತವೆ. ಧ್ಯಾನದಿಂದ ಏಕಾಗ್ರತೆ ಮತ್ತು ಸ್ಮರಣಶಕ್ತಿ ಹೆಚ್ಚುತ್ತದೆ. ಇದಲ್ಲದೆ, ಯೋಗವು ಉತ್ತಮ ನಿದ್ರೆ, ರೋಗನಿರೋಧಕ ಶಕ್ತಿಯನ್ನು ಬಲಪಡಿಸಿ ಸೋಂಕುಗಳ ವಿರುದ್ಧ ರಕ್ಷಣೆ ನೀಡಲು ಮತ್ತು ದೈಹಿಕ ಚೈತನ್ಯವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಶವಾಸನದಂತಹ ವಿಶ್ರಾಂತಿ ಆಸನಗಳು ದೇಹದ ಆಯಾಸವನ್ನು ನಿವಾರಿಸಿ ಉತ್ತಮ ನಿದ್ರೆಗೆ ನೆರವಾಗುತ್ತವೆ.
ನಿಯಮಿತ ಯೋಗಾಭ್ಯಾಸವು ಮಧುಮೇಹ ನಿಯಂತ್ರಣಕ್ಕೆ, ರಕ್ತದೊತ್ತಡ ಕಡಿಮೆ ಮಾಡಲು, ಹೃದಯ ಆರೋಗ್ಯ ಸುಧಾರಿಸಲು, ಸ್ಥೂಲಕಾಯ ಮುಂತಾದ ದೀರ್ಘಕಾಲೀನ ಕಾಯಿಲೆಗಳ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ ಹಾಗೆಯೇ ವಯಸ್ಸಾದಂತೆ ಬೀಳುವ ಅಪಾಯ ಹೆಚ್ಚಾಗುತ್ತದೆ. ಯೋಗದ ಕೆಲವು ಆಸನಗಳು ದೇಹದ ಸಮತೋಲನವನ್ನು ಹೆಚ್ಚಿಸಿ ಚಲನೆ ಸುಲಭಗೊಳಿಸುತ್ತವೆ.
ಆಯುರ್ವೇದ ಮತ್ತು ಯೋಗ – ಆರೋಗ್ಯಕರ ವೃದ್ಧಾಪ್ಯದ ಜೋಡಿ
ಆಯುರ್ವೇದದ ಪ್ರಕಾರ ವೃದ್ಧಾಪ್ಯದಲ್ಲಿ ವಾತದೋಷ ಹೆಚ್ಚಾಗುತ್ತದೆ. ಇದರಿಂದ ದೇಹದಲ್ಲಿ ಒಣತನ, ನೋವು, ನಿದ್ರಾಹೀನತೆ, ದೌರ್ಬಲ್ಯ ಕಾಣಿಸಬಹುದು. ಯೋಗ ಮತ್ತು ಪ್ರಾಣಾಯಾಮವು ವಾತದೋಷವನ್ನು ಸಮತೋಲನಗೊಳಿಸಿ ದೇಹ ಮತ್ತು ಮನಸ್ಸಿಗೆ ಚೈತನ್ಯ ನೀಡುತ್ತದೆ.
ಆರೋಗ್ಯಕರ ವೃದ್ಧಾಪ್ಯವೆಂದರೆ ವಯಸ್ಸನ್ನು ತಡೆಯುವುದು ಅಲ್ಲ, ಬದಲಾಗಿ ಅದನ್ನು ಆರೋಗ್ಯಕರವಾಗಿ ಮತ್ತು ಸಂತೋಷದಿಂದ ಸ್ವೀಕರಿಸುವುದಾಗಿದೆ. ಯೋಗವು ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಆರೋಗ್ಯವನ್ನು ಕಾಪಾಡುವ ಸರಳ ಮತ್ತು ಪರಿಣಾಮಕಾರಿ ಮಾರ್ಗವಾಗಿದೆ. ಪ್ರತಿದಿನ ಸ್ವಲ್ಪ ಸಮಯ ಯೋಗಾಭ್ಯಾಸಕ್ಕೆ ಮೀಸಲಿಟ್ಟರೆ ವೃದ್ಧಾಪ್ಯದಲ್ಲಿಯೂ ಆರೋಗ್ಯಕರ, ಚುರುಕು ಮತ್ತು ಸ್ವತಂತ್ರ ಜೀವನ ನಡೆಸಬಹುದು.
ಯೋಗದೊಂದಿಗೆ ಆರೋಗ್ಯಕರ ಜೀವನಶೈಲಿಯನ್ನು ಪಾಲಿಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ ಅವುಗಳೆಂದರೆ ಸಾತ್ವಿಕ ಮತ್ತು ಪೌಷ್ಟಿಕ ಆಹಾರ, ಸಮಯಕ್ಕೆ ಸರಿಯಾಗಿ ನಿದ್ರೆ, ದಿನನಿತ್ಯ ನಡೆಯುವ ಅಭ್ಯಾಸ, ಧನಾತ್ಮಕ ಚಿಂತನೆ, ಮೊಬೈಲ್ ಮತ್ತು ಒತ್ತಡದ ಬಳಕೆ ಕಡಿಮೆ ಮಾಡುವುದು
ಸಮಾಜದಲ್ಲಿ ಯೋಗದ ಅಗತ್ಯತೆ-ಇಂದಿನ ದಿನಗಳಲ್ಲಿ ಹಿರಿಯ ನಾಗರಿಕರ ಸಂಖ್ಯೆ ಹೆಚ್ಚುತ್ತಿದೆ. ಆದ್ದರಿಂದ ಅವರಿಗೆ ಆರೋಗ್ಯಕರ ಮತ್ತು ಸಂತೋಷಕರ ಜೀವನ ನೀಡಲು ಯೋಗವನ್ನು ಉತ್ತೇಜಿಸುವುದು ಅಗತ್ಯವಾಗಿದೆ. ಶಾಲೆಗಳು, ಕಾಲೇಜುಗಳು, ಆಸ್ಪತ್ರೆಗಳು ಮತ್ತು ಸಮುದಾಯ ಕೇಂದ್ರಗಳಲ್ಲಿ ಯೋಗ ತರಬೇತಿ ಕಾರ್ಯಕ್ರಮಗಳನ್ನು ಹೆಚ್ಚಿಸಬೇಕು.
2026ರ ಅಂತರಾಷ್ಟ್ರೀಯ ಯೋಗ ದಿನದ ಥೀಮ್ “Yoga for Healthy Aging” ನಮಗೆ ಒಂದು ಮಹತ್ವದ ಸಂದೇಶವನ್ನು ನೀಡುತ್ತದೆ – “ವೃದ್ಧಾಪ್ಯವೆಂದು ಭಯಪಡಬೇಡಿ ಆರೋಗ್ಯಕರವಾಗಿ ಸ್ವಾಗತಿಸಿ.” ಯೋಗವು ಕೇವಲ ವ್ಯಾಯಾಮವಲ್ಲ; ಅದು ಆರೋಗ್ಯ, ಶಾಂತಿ ಮತ್ತು ಸಂತೋಷದ ಜೀವನದ ಗುಟ್ಟು. ಪ್ರತಿದಿನ ಸ್ವಲ್ಪ ಸಮಯ ಯೋಗಕ್ಕೆ ಮೀಸಲಿಟ್ಟರೆ, ವಯಸ್ಸು ಹೆಚ್ಚಾದರೂ ದೇಹ ಮತ್ತು ಮನಸ್ಸು ಚೈತನ್ಯದಿಂದ ತುಂಬಿರುತ್ತದೆ.
ಯೋಗವನ್ನು ಜೀವನದ ಭಾಗವನ್ನಾಗಿ ಮಾಡಿ – ಆರೋಗ್ಯಕರ ವೃದ್ಧಾಪ್ಯವನ್ನು ಅನುಭವಿಸಿ.

ಡಾ|| ಪಲ್ಲವಿ. ಎಸ್ ಎಲ್‌
ಸಹಾಯಕ ಪ್ರಾಧ್ಯಾಪಕಿ
ಸ್ವಸ್ಥವೃತ್ತ ಮತ್ತು ಯೋಗ ವಿಭಾಗ
ಟಿ.ಎಂ.ಎ.ಇ.ಎಸ್‌ ಅಯುರ್ವೇದ ಮೆಡಿಕಲ್‌ ಕಾಲೇಜ್‌
ನಿದಿಗೆ, ಶಿವಮೊಗ್ಗ

ಮಹಿಷಿಯಲ್ಲಿನ ಉತ್ತರಾದಿಮಠದಲ್ಲಿನ ಚಿನ್ನದ ಹಲಗಾರತಿಗಳ ಕಳವು ಪ್ರಕರಣ

0

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವ ಹೊಂದಿರುವ ಮಹಿಷಿ ಉತ್ತರಾಧಿ ಮಠದಲ್ಲಿ ಮತ್ತೊಮ್ಮೆ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನದ ಹಲಗಾರತಿಗಳು ನಾಪತ್ತೆಯಾಗಿರುವುದು ಭಕ್ತರಲ್ಲಿ ಆತಂಕ ಮೂಡಿಸಿದೆ.

ತುಂಗಾ ನದಿಯ ದಡದಲ್ಲಿರುವ ಮಹಿಷಿ ಉತ್ತರಾಧಿ ಮಠವು ಮಧ್ವ ಪರಂಪರೆಯ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ. ಪ್ರತಿದಿನ ನೂರಾರು ಭಕ್ತರು ಭೇಟಿ ನೀಡುವ ಈ ಮಠದಲ್ಲಿ ಇದೀಗ ಚಿನ್ನಾಭರಣ ಕಳವು ಪ್ರಕರಣ ಬೆಳಕಿಗೆ ಬಂದಿದೆ.

ಮಠದ ಮೂಲಗಳ ಪ್ರಕಾರ, ಸುಮಾರು 750 ಗ್ರಾಂ ತೂಕದ ಚಿನ್ನದ ಹಲಗಾರತಿಗಳು ನಾಪತ್ತೆಯಾಗಿವೆ. ಒಂದೊಂದು ಹಲಗಾರತಿ ಸುಮಾರು 50 ಗ್ರಾಂ ಚಿನ್ನದಿಂದ ನಿರ್ಮಿತವಾಗಿದ್ದು, ಒಟ್ಟು 15 ಹಲಗಾರತಿಗಳು ಕಾಣೆಯಾಗಿರುವುದಾಗಿ ತಿಳಿದುಬಂದಿದೆ.

ಪ್ರಾಥಮಿಕ ಅಂದಾಜಿನ ಪ್ರಕಾರ, ಕಳುವಾಗಿರುವ ಚಿನ್ನಾಭರಣದ ಮೌಲ್ಯ ಒಂದು ಕೋಟಿಗೂ ಅಧಿಕ ಎಂದು ಹೇಳಲಾಗುತ್ತಿದೆ. ಈ ಘಟನೆ ಮಠದ ಆಡಳಿತ ಮಂಡಳಿ ಹಾಗೂ ಭಕ್ತರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಮಹಿಷಿ ಉತ್ತರಾಧಿ ಮಠದಲ್ಲಿ ಚಿನ್ನದ ಹಲಗಾರತಿಗಳ ನಾಪತ್ತೆ ಪ್ರಕರಣ ಇದೀಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಭದ್ರತಾ ವ್ಯವಸ್ಥೆಯ ನಡುವೆಯೂ ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹೇಗೆ ನಾಪತ್ತೆಯಾಯಿತು ಎಂಬುದರ ಕುರಿತು ತನಿಖೆ ನಡೆಯಬೇಕಿದೆ. ಈ ಪ್ರಕರಣದ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಪೊಲೀಸರು ಪತ್ತೆಹಚ್ಚಬೇಕಿದೆ.

ಗಮನಾರ್ಹ ಸಂಗತಿಯೆಂದರೆ, ಇದೇ ಮಠದಲ್ಲಿ ಕಳೆದ ವರ್ಷ ಏಪ್ರಿಲ್ 5ರಂದು ದರೋಡೆ ಯತ್ನ ನಡೆದಿತ್ತು. ಮಠದಲ್ಲಿ ಸುಮಾರು 300 ಕೋಟಿ ರೂಪಾಯಿ ಹಣ ಸಂಗ್ರಹಿಸಲಾಗಿದೆ ಎಂಬ ತಪ್ಪು ಮಾಹಿತಿಯ ಆಧಾರದ ಮೇಲೆ 12 ರಿಂದ 15 ಮಂದಿಯ ತಂಡ ದರೋಡೆಗೆ ಯತ್ನಿಸಿತ್ತು.

ಆ ಸಂದರ್ಭದಲ್ಲಿ ನಗದು, ಲ್ಯಾಪ್‌ಟಾಪ್ ಹಾಗೂ ಮೊಬೈಲ್ ಸೇರಿದಂತೆ ಸುಮಾರು 1.16 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ದರೋಡೆಕೋರರು ಕೊಂಡೊಯ್ದಿದ್ದರು. ಬಳಿಕ ಪ್ರಕರಣದ ತನಿಖೆ ವೇಳೆ ಪ್ರಮುಖ ಆರೋಪಿಯನ್ನು ಪೊಲೀಸರು ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದರು.

ಜಿಲ್ಲೆಯ 14 ಗ್ರಾಮ ಪಂಚಾಯತಿ ಅರಿವು ಕೇಂದ್ರಗಳ ಮೇಲ್ವಿಚಾರಕ ಹುದ್ದೆಗಳಿಗೆ ಅರ್ಜಿ ಆಹ್ವಾನ

0

ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 258 ಗ್ರಾಮ ಪಂಚಾಯತಿ ಅರಿವು ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಪ್ರಸ್ತುತ ಖಾಲಿ ಇರುವ 14 ಗ್ರಾಮ ಪಂಚಾಯತಿ ಅರಿವು ಕೇಂದ್ರಗಳಿಗೆ ತಲಾ ಒಂದರಂತೆ ಒಟ್ಟು 14 ಮೇಲ್ವಿಚಾರಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಬಾಂಡ್ಯ ಕುಕ್ಕೆ, ಹೊಸಹಳ್ಳಿ. ಸಾಗರ ತಾಲ್ಲೂಕಿನ
ಕುದರೂರು, ಕಲ್ಮನೆ, ಹೆಗ್ಗೋಡು. ಭದ್ರಾವತಿ ತಾಲ್ಲೂಕಿನ ವೀರಾಪುರ, ಕೂಡ್ಲಿಗೆರೆ. ಹೊಸನಗರ ತಾಲ್ಲೂಕಿನ ಸುಳುಗೋಡು, ತ್ರಿಣಿವೆ. ಸೊರಬ ತಾಲ್ಲೂಕಿನ ಭಾರಂಗಿ, ಹರೀಶಿ. ಶಿಕಾರಿಪುರ ತಾಲ್ಲೂಕಿನ‌ ಮುದ್ದನಹಳ್ಳಿ, ಅಂಬಾರಗೊಪ್ಪ ಹಾಗೂ ಶಿವಮೊಗ್ಗ ತಾಲ್ಲೂಕಿನ ಚೋರಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅರಿವು ಕೇಂದ್ರಗಳಲ್ಲಿ ಈ ಹುದ್ದೆಗಳು ಖಾಲಿ ಇದ್ದು, ನಿಯಮಾನುಸಾರ ರೋಸ್ಟರ್ ಬಿಂದುಗಳ ಆಧಾರದ ಮೇಲೆ ನೇಮಕಾತಿ ನಡೆಯಲಿದೆ.
ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ, ಧೃಢೀಕರಿಸಿದ ಅಗತ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳಿಗೆ ಖುದ್ದಾಗಿ ಅಥವಾ ನೊಂದಾಯಿತ ಅಂಚೆ ಮೂಲಕ ಸಲ್ಲಿಸಬೇಕಾಗಿದೆ. ಅರ್ಜಿಗಳನ್ನು ಸಲ್ಲಿಸಲು ಜುಲೈ 8 ಕಡೆಯ ದಿನವಾಗಿದೆ.
ಅರ್ಜಿ ನಮೂನೆಗಳು ಆಯಾ 14 ಗ್ರಾಮ ಪಂಚಾಯತಿಗಳಲ್ಲಿ ಲಭ್ಯವಿದ್ದು, ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://shivamogga.nic.in ಮೂಲಕವೂ ಡೌನ್‌ಲೋಡ್ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳನ್ನು ಸಂಪರ್ಕಿಸಲು ಶಿವಮೊಗ್ಗ ಜಿಲ್ಲಾ ಪಂಚಾಯತ್‌ನ ಉಪ ಕಾರ್ಯದರ್ಶಿ (ಆಡಳಿತ) ಹಾಗೂ ಗ್ರಾಮ ಪಂಚಾಯತಿ ಗ್ರಂಥಾಲಯ ಮೇಲ್ವಿಚಾರಕರ ನೇಮಕಾತಿ ಸಮಿತಿ ಸದಸ್ಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದಿಂದ ಅರಿವು ಸಾಲಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

0

ಶಿವಮೊಗ್ಗ ಜಿಲ್ಲಾ ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮವು 2026-27ನೇ ಸಾಲಿಗೆ ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ಕ್ರಿಶ್ಚಿಯನ್ ಸಮುದಾಯದವರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆಯ್ಕೆಯಾಗುವ ಹೊಸ/ಸಿಇಟಿ/ಎನ್‌ಇಇಟಿ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್ಗಳಿಗೆ ಪ್ರವೇಶ ಪಡೆಯಬಯಸುವವರಿಂದ ಅರಿವು ಸಾಲ ಸೌಲಭ್ಯ ಪಡೆಯಲು ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.
ಆಸಕ್ತ ವಿದ್ಯಾರ್ಥಿಗಳು www.kccdconline.karnataka.gov.in ಮೂಲಕ ಅರ್ಜಿ ಭರ್ತಿ ಮಾಡಿ, ಪ್ರಿಂಟೌಟ್ ಜೊತೆಗೆ ಎಸ್‌ಎಸ್‌ಎಲ್‌ಸಿ/ಪಿಯುಸಿ ಅಂಕಪಟ್ಟಿ, ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಭಾವಚಿತ್ರ, ಸಿಇಟಿ/ಎನ್‌ಇಇಟಿ ಪ್ರವೇಶ ಪತ್ರ ಹಾಗೂ ಇನ್ನಿತರ ದಾಖಲೆಗಳನ್ನು ಲಗತ್ತಿಸಿ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಅಚ್ಯುತ್‌ರಾವ್ ಲೇಔಟ್, 4ನೇ ತಿರುವು, ನಂಜಪ್ಪ ಆಸ್ಪತ್ರೆ ಮುಂಭಾಗ, ಶಿವಮೊಗ್ಗ ಇಲ್ಲಿಗೆ ಸಲ್ಲಿಸುವಂತೆ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹಿರಿಯ ಉದ್ಯಮಿ, ಸಮಾಜ ಸೇವಕ ಟಿ‌ಆರ್ .ಅಶ್ವತ್ಥ ನಾರಾಯಣ ಶೆಟ್ಟಿ ಅವರಿಗೆ ಸನ್ಮಾನ

0

ಆರ್ಯವೈಶ್ಯ ಶ್ರೀರಾಮ ಸಹಕಾರ ಸಂಘದ ಮಾಜಿ ಅಧ್ಯಕ್ಷರು ಮತ್ತು ಸೇವಾ ಪುರಸ್ಕೃತರಾದ ಅಶ್ವತ್ಥ ನಾರಾಯಣ ಶೆಟ್ಟಿ ಟಿ.ಆರ್ ಅವರಿಗೆ ಶ್ರೀ ಆರ್ಯವೈಶ್ಯ ಸಹಕಾರ ಸಂಘದಿಂದ ಆತ್ಮೀಯವಾಗಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಸಹಕಾರ ಸಂಘದ ಅಧ್ಯಕ್ಷ ಡಾ. ಭರತ್, ಉಪಾಧ್ಯಕ್ಷ ಈಶ್ವರ್ ಬಿ.ಎಂ. ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಚಿನ್ ಟಿ.ಎಲ್., ಅವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಂಘದ ಆಡಳಿತ ಮಂಡಳಿಯ ನಿರ್ದೇಶಕರುಗಳು ಮತ್ತು ಸಿಬ್ಬಂದಿ ವರ್ಗದವರಿದ್ದರು.

“ಅಗ್ನಿವೀರ್” ಆಗಿ ಆಯ್ಕೆಯಾದ ಶಿವಮೊಗ್ಗದ ಡಿ.ದರ್ಶಿತ್ ಗೆ ಆತ್ಮೀಯ ಸನ್ಮಾನ

0

ಶಿವಮೊಗ್ಗ ಗೋಪಾಳದ ಶ್ರೀ ರಾಮಕೃಷ್ಣ ವಿದ್ಯಾನಿಕೇತನದ ಹಿಂದಿನ ವಿದ್ಯಾರ್ಥಿ ಅನುಪಿನಕಟ್ಟೆ ಹಳೇ ಊರಿನ ದೀಪಿಕಾ ಅವರ ಪುತ್ರ ದರ್ಶಿತ್ ಡಿ. ಅವರು ಭಾರತೀಯ ಸೇನೆಯ ಅಗ್ನಿವೀರ್ ಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ರಾಮಕೃಷ್ಣ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಕಾರ್ಯದರ್ಶಿ ಶೋಭಾ ವೆಂಕಟರಮಣ ಅವರ ನೇತೃತ್ವದಲ್ಲಿ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಇಂದು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಿತು.

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

0

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ ವೈದ್ಯಕೀಯ ಚಿಕಿತ್ಸೆ ನೀಡುವ ಸಲುವಾಗಿ, ಶಿವಮೊಗ್ಗ ವೃತ್ತ ವ್ಯಾಪ್ತಿಯಲ್ಲಿ ವನ್ಯಪ್ರಾಣಿಗಳು ಮೃತಪಟ್ಟಾಗ ಮರಣೋತ್ತರ ಪರೀಕ್ಷೆ, ವನ್ಯಪ್ರಾಣಿ ಮತ್ತು ಮಾನವ ಸಂಘರ್ಷದ ಸಂದರ್ಭದಲ್ಲಿ ಮತ್ತು ಇನ್ನಿತರೆ ತುರ್ತು ಸಂದರ್ಭದಲ್ಲಿ ವನ್ಯಪ್ರಾಣಿಗಳ ರಕ್ಷಣಿ ಮತ್ತು ಸ್ಥಳಾಂತರ ಕಾರ್ಯಗಳನ್ನು ತ್ವರಿತವಾಗಿ ಪರಿಸ್ಥಿತಿಗಳನ್ನು ನಿಭಾಯಿಸಲು 01 ಪಶುವೈದ್ಯರ ಅವಶ್ಯಕತೆ ಇದ್ದು, ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸಲು ಆಸಕ್ತಿ ಹೊಂದಿರುವ ಅರ್ಹರಿಂದ ಅರ್ಜಿ ಆಹ್ವಾನಿಸಿದೆ.

ಪಶುವೈದ್ಯರ ಹುದ್ದೆಗೆ Bachelor of veterinary science & Animal husbandry ಶಿಕ್ಷಣವನ್ನು ಹೊಂದಿರುವ ಜೊತೆಗೆ ಚಿಕ್ಕಮಗಳೂರು, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳ ವನ್ಯಜೀವಿ ಕ್ಷೇತ್ರ / ಮೃಗಾಲಯ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸಿದ ಅನುಭವ ಪಡೆದಿರುವ, ವನ್ಯಜೀವಿ ವಿಷಯದಲ್ಲಿ ಸ್ನಾತಕೋತ್ತರ ಪಶುವೈದ್ಯಕೀಯ ಪದವಿ ಪಡೆದಿರುವ ಪಶುವೈದ್ಯರು ದಿ:06.07.2026 ರಂದು ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸುವುದು.

ಜು.02 ರೊಳಗೆ ಸ್ವಯಂ ವಿವರಗಳೊಂದಿಗೆ ಅವಶ್ಯಕವಾದ ಪೂರಕ ದಾಖಲಾತಿಗಳನ್ನು ಅಂಚೆ ಮೂಲಕ ಅಥವಾ ಮುದ್ದಾಂ ಈ ಕಚೇರಿಗೆ ಸಲ್ಲಿಸುವಂತೆ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

ಅರ್ಜಿ ನಮೂನೆಗಾಗಿ ಅಥವಾ ಉಪ ಅರಣ್ಯ ಸಂರಕ್ಷಣಾಧಿಕಾರಿ. ವನ್ಯಜೀವಿ ವಿಭಾಗ ಕಛೇರಿ. ಶಿವಮೊಗ್ಗ ಅಥವಾ ವೆಬ್‌ಸೈಟ್ https://sakrebailuelephantcamp.org/ ಮೂಲಕ ಪಡೆಯುವುದು.
ಹೆಚ್ಚಿನ ಮಾಹಿತಿಗೆ ದೂ. ಸಂ.: 08182-222983, ವಿಜಯ್‌ಕುಮಾರ್ ಕಾಳಪ್ಪನವರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವನ್ಯಜೀವಿ ಉಪ ವಿಭಾಗ, ಶಿವಮೊಗ್ಗ- ಮೊಬೈಲ್ ಸಂಖ್ಯೆ:- 9481461553. ವಿನಯ್ ಜೆ ಆರ್. ವಲಯ ಅರಣ್ಯಾಧಿಕಾರಿ, ಸಕ್ರೆಬೈಲು ವನ್ಯಜೀವಿ ವಲಯ, ಗಾಜನೂರು, 9663121406 ಇವರುಗಳನ್ನು ಸಂಪರ್ಕಿಸುವುದು.
05