Wednesday, August 5, 2026
Wednesday, August 5, 2026
Home Blog Page 56

B.Y. Raghavendra ಮುಂದಿನ ಪೀಳಿಗೆಗೆ ಫಲವತ್ತಾದ ಕೃಷಿ ಭೂಮಿಯನ್ನ ಹಸ್ತಾಂತರಿಸುವುದು ಎಲ್ಲರ ಕರ್ತವ್ಯ- ಬಿ.ವೈ.ರಾಘವೇಂದ್ರ

0

B.Y. Raghavendra ಶಿವಮೊಗ್ಗದ ಐ.ಸಿ.ಎ.ಆರ್ – ಕೃಷಿ ವಿಜ್ಞಾನ ಕೇಂದ್ರ ಹಾಗೂ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ “ಕೃಷಿ ಭೂಮಿ ಉಳಿಸಿ ಅಭಿಯಾನ” ಅಂಗವಾಗಿ, ‘ಸಾವಯವ ಕೃಷಿ’ – ತರಬೇತಿ ಮತ್ತು ಮಾಹಿತಿ ಕಾರ್ಯಾಗಾರವನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು.
ರೈತ ಬಾಂಧವರೊಂದಿಗೆ ಸಂವಾದ ನಡೆಸಿದರು.

“ಆರೋಗ್ಯಕರ ಮಣ್ಣು, ಸಧೃಡ ರೈತರು, ಸಮೃದ್ಧ ಭಾರತ” ಎಂಬ ಧ್ಯೇಯದೊಂದಿಗೆ ಇಡೀ ಜೂನ್ ತಿಂಗಳಾದ್ಯಂತ ದೇಶಾದ್ಯಂತ ನಡೆಯುತ್ತಿರುವ ಈ ವಿಶೇಷ ಅಭಿಯಾನವು, ನಮ್ಮ ಮಣ್ಣಿನ ಫಲವತ್ತತೆಯನ್ನು ಕಾಪಾಡುವಲ್ಲಿ ಕ್ರಾಂತಿಕಾರಿ ಹೆಜ್ಜೆಯಾಗಿದೆ. ವಿಜ್ಞಾನಿಗಳ ನೇರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ತರಬೇತಿಗಳು ರೈತರಲ್ಲಿ ಆಧುನಿಕ ಹಾಗೂ ಸಾವಯವ ಕೃಷಿ ಪದ್ಧತಿಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸುತ್ತಿವೆ.

ಈ ಕಾರ್ಯಕ್ರಮದಲ್ಲಿ ಹಿರಿಯ ಮಾರ್ಗದರ್ಶಕರು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಸ್. ರುದ್ರೇಗೌಡರು, ಕೆ.ಎಸ್.ಎನ್.ಯು.ಎ.ಎಚ್.ಎಸ್ ಶಿವಮೊಗ್ಗದ ಮಾನ್ಯ ಕುಲಪತಿಗಳಾದ ಡಾ. ಆರ್.ಸಿ. ಜಗದೀಶ್, ವಿಸ್ತರಣಾ ನಿರ್ದೇಶಕರಾದ ಡಾ. ರಾಘವೇಂದ್ರ ಮಾರ್ಥ, ಐ.ಸಿ.ಎ.ಆರ್-ಕೆ.ವಿ.ಕೆ, ಶಿವಮೊಗ್ಗದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ. ಸಿ. ಸುನಿಲ್, ಜಿಲ್ಲಾ ಬಿಜೆಪಿ ರೈತ ಮೋರ್ಚಾದ ಪದಾಧಿಕಾರಿಗಳು ಹಾಗೂ ಶಿವಮೊಗ್ಗದ ಪ್ರಗತಿಪರ ರೈತ ಬಾಂಧವರು ಉಪಸ್ಥಿತರಿದ್ದರು.

B.Y. Raghavendra ರಾಸಾಯನಿಕ ಮುಕ್ತ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು, ಭೂಮಿಯ ಸಾರವನ್ನು ಹೆಚ್ಚಿಸುವ ಮೂಲಕ ಮುಂದಿನ ಪೀಳಿಗೆಗೆ ಫಲವತ್ತಾದ ಕೃಷಿ ಭೂಮಿಯನ್ನು ಹಸ್ತಾಂತರಿಸುವುದು ಪ್ರಸ್ತುತ ಎಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ರೈತರಿಗೆ ಅಗತ್ಯವಿರುವ ಎಲ್ಲಾ ತಾಂತ್ರಿಕ ನೆರವು ಹಾಗೂ ಪ್ರೋತ್ಸಾಹ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ.
ಎಂದು ಬಿ.ವೈರಾಘವೇಂದ್ರ ಮಾತನಾಡಿದರು.

Karnataka Sanga Shivamogga ಜೂನ್ 20.ನಗೆ ಬರಹಗಾರ ವೈ.ವಿ.ಗುಂಡೂರಾವ್ ಕರ್ನಾಟಕ ಸಂಘದಲ್ಲಿ “ತಿಂಗಳ ಅತಿಥಿ” ಯಾಗಿ ಭಾಗಿ

0

Karnataka Sanga Shivamogga ಕರ್ನಾಟಕ ಸಂಘದ ವತಿಯಿಂದ ಮಾಸಿಕ “ತಿಂಗಳ ಅತಿಥಿ” ಕಾರ್ಯಕ್ರಮವನ್ನು ಜೂನ್ 20, 2026ರ ಶನಿವಾರ ಸಂಜೆ 5.30ಕ್ಕೆ ಹಸೂಡಿ ವೆಂಕಟಶಾಸ್ತ್ರಿ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ಹೆಚ್.ಆರ್. ಶಂಕರನಾರಾಯಣ ಶಾಸ್ತ್ರಿ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಬೆಂಗಳೂರು ಮೂಲದ ಬರಹಗಾರ, ವಾಗ್ಮಿ ಹಾಗೂ ನಿರ್ದೇಶಕರಾದ ಶ್ರೀ ವೈ.ವಿ. ಗುಂಡೂರಾವ್ ಅವರು ‘ಬೀಚಿ ಸಾಹಿತ್ಯದಲ್ಲಿ ಜೀವನ ಪ್ರೀತಿ’ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.

Karnataka Sanga Shivamogga ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳುವಂತೆ ಕರ್ನಾಟಕ ಸಂಘದ ಕಾರ್ಯದರ್ಶಿ ವಿನಯ್ ಶಿವಮೊಗ್ಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Department of Horticulture ತೋಟಗಾರಿಕಾ ಇಲಾಖೆಯಿಂದ ವಿವಿಧ ಯೋಜನೆಯಡಿ ಸಹಾಯಧನ ಪಡೆಯಲು ಆಸಕ್ತರಿಂದ ಅರ್ಜಿ ಆಹ್ವಾನ

0

Department of Horticulture ತೋಟಗಾರಿಕೆ ಇಲಾಖೆಯು 2026-27ನೇ ಸಾಲಿಗೆ ಜಿಲ್ಲೆಯಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಿಷನ್, ಹನಿ ನೀರಾವರಿ, ಕೃಷಿ ಯಾಂತ್ರೀಕರಣ ಉಪಯೋಜನೆ, VBGRAMG, RKVY, ಜೇನು ಸಾಕಾಣಿಕೆ, ಸಮಗ್ರ ತೋಟಗಾರಿಕೆ ಅಭಿವೃದ್ಧಿ ಮುಂತಾದ ಯೋಜನೆಗಳಡಿ ವಿವಿಧ ಕಾರ್ಯಕ್ರಮಗಳಿಗೆ ಸಹಾಯಧನ ಒದಗಿಸಲಾಗುತ್ತಿದ್ದು, ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಿದೆ.
ರೈತರು ನಿಗದಿತ ನಮೂನೆ ಅರ್ಜಿಯನ್ನು ಆಯಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ, ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ನಿಗದಿತ ಸಮಯದಲ್ಲಿ ಸಲ್ಲಿಸುವಂತೆ ತೋಟಗಾರಿಕೆ ಜಂಟಿ ನಿರ್ದೇಶಕರು ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ -08182-279415/ 9980009438, ಭದ್ರಾವತಿ-08282-295029/9108252536, ಶಿಕಾರಿಪುರ-08187-223544/ 8310662972, ಸೊರಬ – 08184-295112 /9663634388, ಸಾಗರ-08183-295124/ 9900903393, ಹೊಸನಗರ – 08185-295364/ 9591695327, ತೀರ್ಥಹಳ್ಳಿ-08181-228151/ 9108280642 ಗಳನ್ನು ಸಂಪರ್ಕಿಸುವುದು.

ಐಡಿಎಫ್ ಸಿ ಬ್ಯಾಂಕ್ ನಿಂದ ಜೂನ್ 20 ರಂದು ಉದ್ಯೋಗ ಭರ್ತಿಗೆ ನೇರ ಸಂದರ್ಶನ

0

ಶಿವಮೊಗ್ಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಶಿವಮೊಗ್ಗ ಇವರ ವತಿಯಿಂದ ಜೂ. 20 ರಂದು ಬೆಳಿಗ್ಗೆ 10 ಗಂಟೆಗೆ ಉದ್ಯೋಗಾಕಾಂಕ್ಷಿಗಳಿಗಾಗಿ ನೇರ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿದೆ.
ಈ ಸಂದರ್ಶನದಲ್ಲಿ ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಭಾಗವಹಿಸಲಿದ್ದು, ಖಾಲಿ ಇರುವ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಿದ್ದು, ಯಾವುದೇ ಡಿಗ್ರಿ ಮತ್ತು ಮಾಸ್ಟರ್ ಡಿಗ್ರಿ ಪೂರೈಸಿದ, 18 ರಿಂದ 30 ವರ್ಷದೊಳಗಿನ ಪುರುಷ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ಸಂದರ್ಶನಕ್ಕೆ ಬರುವವರು ತಮ್ಮ ಬಯೋಡೇಟಾ ಮತ್ತು ಆಧಾರ್ ಕಾರ್ಡ್ ಪ್ರತಿಗಳೊಂದಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಗುತ್ಯಪ್ಪ ಕಾಲೋನಿ, ಪಂಪಾ ನಗರ 2ನೇ ಕ್ರಾಸ್, ಸಾಗರ ರಸ್ತೆ, ಶಿವಮೊಗ್ಗ ಇಲ್ಲಿ ಹಾಜರಾಗುವಂತೆ ಉದ್ಯೋಗಾಧಿಕಾರಿಗಳು ತಿಳಿಸಿದ್ದಾರೆ. ನೇರ ಸಂದರ್ಶನಕ್ಕೆ ಪ್ರವೇಶ ಉಚಿತವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9380663606/ 9108235132 ಗಳನ್ನು ಸಂಪರ್ಕಿಸುವುದು.

ಮಹಿಳಾ ಪಾಲಿಟೆಕ್ನಿಕ್ : ಡಿಪ್ಲೊಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ

0

ಸರ್ಕಾರಿ ಮಹಿಳಾ ವಸತಿ ಪಾಲಿಟೆಕ್ನಿಕ್ ಶಿವಮೊಗ್ಗ ಸಂಸ್ಥೆಯಲ್ಲಿ 2026-27 ನೇ ಶೈಕ್ಷಣಿಕ ಸಾಲಿನ 2 ವರ್ಷಗಳ ಐ.ಟಿ.ಐ/ದ್ವಿತೀಯ ಪಿಯುಸಿ (ವಿಜ್ಞಾನ/ತಾಂತ್ರಿಕ ವಿಷಯಗಳಲ್ಲಿ) ಯಲ್ಲಿ ಉತ್ತೀರ್ಣರಾಗಿರುವ ಅರ್ಹ ಅಭ್ಯರ್ಥಿಗಳಿಗೆ ಲ್ಯಾಟರಲ್ ಎಂಟ್ರಿ ಮೂಲಕ 2ನೇ ವರ್ಷ/3ನೇ ಸೆಮಿಸ್ಟರ್ ಡಿಪ್ಲೋಮಾ ಕೋರ್ಸ್ಗಳಿಗೆ ಪ್ರವೇಶ ಪರೀಕ್ಷೆಯು ಮೆರಿಟ್ ಹಾಗೂ ರೋಸ್ಟರ್‌ಗನುಗುಣವಾಗಿ ಪ್ರವೇಶಾತಿ ಪ್ರಕ್ರಿಯೆ ಆರಂಭವಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ವಿತರಣೆ ದಿ: 17/06/2026, ಅರ್ಹ ಅಭ್ಯರ್ಥಿಗಳ ಮೆರಿಟ್ ಪಟ್ಟಿಯನ್ನು ಪ್ರಕಟಿಸುವ ದಿನಾಂಕ: 18/06/2026, ಆಪ್‌ಲೈನ್ ಕೌನ್ಸಲಿಂಗ್ ಮೂಲಕ ಸೀಟು ಹಂಚಿಕೆ ಮಾಡಿ, ಸೀಟು ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳು ತಮ್ಮ ಮೂಲ ದಾಖಲಾತಿಗಳು ಮತ್ತು ಪ್ರವೇಶ ಶುಲ್ಕದೊಂದಿಗೆ ಪ್ರವೇಶಾತಿ ಪಡೆಯಲು ಅಂತಿಮ ದಿನಾಂಕ: 19/06/2026 ಆಗಿರುತ್ತದೆ.
ಸಂಸ್ಥೆಯಲ್ಲಿ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಆಂಡ್ ಇಂಜಿನಿಯರಿಂಗ್, ಕಮರ್ಷಿಯಲ್ ಪ್ರಾಕ್ಟಿಸ್(ಕನ್ನಡ), ಕಮರ್ಷಿಯಲ್ ಪ್ರಾಕ್ಟಿಸ್(ಇಂಗ್ಲಿಷ್), ಅಪೆರಲ್ ಡಿಸೈನಿಂಗ್ ಫ್ಯಾಬ್ರಿಕೇಷನ್ ಟೆಕ್ನಾಲಜಿ ಕೋರ್ಸುಗಳು ಲಭ್ಯವಿರುತ್ತದೆ. ಅಭ್ಯರ್ಥಿಗಳು ಪ್ರವೇಶ ಪಡೆಯಲು ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ವರ್ಗಾವಣೆ ಪ್ರಮಾಣ ಪತ್ರ/ಎನ್‌ಓಸಿ, 05 ವರ್ಷದ ವ್ಯಾಸಂಗ ಪ್ರಮಾಣ ಪತ್ರ(ಕ್ಷೇತ್ರ ಶಿಕ್ಷಣಾಧಿಕಾರಿಗಳು ದೃಢೀಕರಿಸಿದ ಸಹಿಯೊಂದಿಗೆ), ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಭಾವಚಿತ್ರ 06 ನ್ನು ಹಾಗೂ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಬೇಕು. ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ರವಿನಾಯಕ್ ಡಿ, ಪ್ರಾಂಶುಪಾಲರು, ಮೊ.ಸಂ: 9886610245 ನ್ನು ಸಂಪರ್ಕಿಸಬಹುದೆಂದು ಸರ್ಕಾರಿ ಮಹಿಳಾ ವಸತಿ ಪಾಲಿಟೆಕ್ನಿಕ್‌ನ ಪ್ರಾಂಶುಪಾಲರು ತಿಳಿಸಿದ್ದಾರೆ

“ಕರ್ತವ್ಯ ಆ್ಯಪ್ ” ನಲ್ಲಿ ಶೇ. 70.6 ಕ್ಕೂ ಹೆಚ್ಚು ನೌಕರರ ನೋಂದಾವಣೆ. ಸರ್ಕಾರದ ಸ್ಪಷ್ಠಿಕರಣ

0

“ಕರ್ತವ್ಯ ಆಪ್‌ನಲ್ಲಿ 2.13 ಲಕ್ಷ ಉದ್ಯೋಗಿಗಳು ನೋಂದಣಿಯಾಗಿಲ್ಲ” ಎಂಬ ಕೆಲವು ಮಾಧ್ಯಮಗಳ ವರದಿಗಳಿಗೆ ಸರ್ಕಾರವು ಅಧಿಕೃತ ಸ್ಪಷ್ಟೀಕರಣವನ್ನು ನೀಡಿದೆ.

ಪ್ರಸ್ತುತ ‘ಕರ್ತವ್ಯ’ (KAAMS) ಯೋಜನೆಯಡಿ ಉದ್ಯೋಗಿಗಳ ನೋಂದಣಿ ಪ್ರಕ್ರಿಯೆಯು ಅತ್ಯಂತ ವೇಗವಾಗಿ ನಡೆಯುತ್ತಿದ್ದು, ಈಗಾಗಲೇ ಶೇಕಡಾ 70.6 ಕ್ಕಿಂತ ಹೆಚ್ಚು ನೌಕರರು ಯಶಸ್ವಿಯಾಗಿ ನೋಂದಾಯಿಸಿಕೊಂಡಿದ್ದಾರೆ ಎಂದು ಸರ್ಕಾರ ತಿಳಿಸಿದೆ.

ವೇಗದ ಪ್ರಗತಿ : ಮಾಧ್ಯಮಗಳಲ್ಲಿ ಪ್ರಕಟವಾಗಿದ್ದ 2,13,925 ನೌಕರರ ಅಪೂರ್ಣ ನೋಂದಣಿಯ ಅಂಕಿ-ಅಂಶಗಳು ಜೂನ್ 12, 2026 ರವರೆಗಿನ ಮಾಹಿತಿಯಾಗಿದ್ದವು. ಆದರೆ ಕಳೆದ 4-5 ದಿನಗಳಲ್ಲಿ ನಡೆಸಲಾದ ವಿಶೇಷ ಆಂದೋಲನದಿಂದಾಗಿ ಈ ಸಂಖ್ಯೆ 2026 ನೇ ಜೂನ್ 18 ರ ವೇಳೆಗೆ 1,40,433 ಕ್ಕೆ ಕುಸಿದಿದೆ. ಅಂದರೆ ಕೇವಲ ಒಂದು ವಾರದಲ್ಲಿ ನೋಂದಣಿಯಾಗದ ನೌಕರರ ಸಂಖ್ಯೆಯಲ್ಲಿ ಶೇ. 34.4 ರಷ್ಟು ಭಾರಿ ಇಳಿಕೆಯಾಗಿದೆ.

ನೋಂದಣಿ ಸ್ಥಿತಿಗತಿ :
ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (HRMS) ದತ್ತಾಂಶದ ಪ್ರಕಾರ, ಒಟ್ಟು 43 ಪ್ರಮುಖ ಇಲಾಖೆಗಳು ಹಾಗೂ 137 ಸರಣಿ ಇಲಾಖೆಗಳು/ಸಂಸ್ಥೆಗಳ ವ್ಯಾಪ್ತಿಯಲ್ಲಿರುವ 4,78,181 ನೌಕರರ ಪೈಕಿ 3,37,748 (ಶೇ. 70.6) ನೌಕರರು ಈಗಾಗಲೇ ಆಪ್‌ನಲ್ಲಿ ಯಶಸ್ವಿಯಾಗಿ ನೋಂದಾಯಿಸಿಕೊಂಡಿದ್ದಾರೆ.

ದೈನಂದಿನ ಸಕ್ರಿಯ ಬಳಕೆ :

2026 ನೇ ಜೂನ್ 18 ರ ಬೆಳಿಗ್ಗೆ 11:00 ಗಂಟೆಯ ಒಳಗೆ ಒಟ್ಟು ನೋಂದಾಯಿತ ಬಳಕೆದಾರರಲ್ಲಿ ಸುಮಾರು ಶೇ. 57 ರಷ್ಟು (1,92,605 ನೌಕರರು) ಉದ್ಯೋಗಿಗಳು ಆಪ್ ಮೂಲಕ ತಮ್ಮ ಹಾಜರಾತಿಯನ್ನು ದಾಖಲಿಸಿದ್ದಾರೆ. ಬಾಕಿ ಉಳಿದಿರುವ ಶೇ. 29.4 ರಷ್ಟು ನೌಕರರ ನೋಂದಣಿಗಾಗಿ ಇ-ಆಡಳಿತ ಕೇಂದ್ರವು (CeG) ವಿಶೇಷ ತರಬೇತಿ ಮತ್ತು ನೋಂದಣಿ ಶಿಬಿರಗಳನ್ನು ಆಯೋಜಿಸಿದೆ. ತಾಂತ್ರಿಕ ಸಮಸ್ಯೆಗಳ ಪರಿಹಾರಕ್ಕಾಗಿ ನೋಡಲ್ ಅಧಿಕಾರಿಗಳು, ಸಹಾಯವಾಣಿ ಮತ್ತು ಎಐ (AI) ಆಧಾರಿತ ವಾಯ್ಸ್ ಬಾಟ್ ಸೌಲಭ್ಯವನ್ನು ಕಲ್ಪಿಸಲಾಗಿದೆ.

​ಎಲ್ಲಾ ಅಧಿಕಾರಿಗಳು ಮತ್ತು ನೌಕರರು ನಿಗದಿತ ಸಮಯದೊಳಗೆ ಶೇ. 100 ರಷ್ಟು ನೋಂದಣಿ ಪೂರ್ಣಗೊಳಿಸುವಂತೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಎಲ್ಲಾ ಇಲಾಖಾ ಮುಖ್ಯಸ್ಥರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.

‘ಕರ್ತವ್ಯ’ ತಂತ್ರಾಂಶವು ಸರ್ಕಾರಿ ನೌಕರರ ಹಾಜರಾತಿಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ತರಲು ರೂಪಿಸಲಾದ ಕ್ರಾಂತಿಕಾರಿ ಹೆಜ್ಜೆಯಾಗಿದೆ ಎಂದು ಸರ್ಕಾರ ಪುನರುಚ್ಚರಿಸಿದೆ.

ಶಿಕಾರಿಪುರ, ಹರಗುವಳ್ಳಿಯಿಂದ ತಾಯಿ, ತನ್ನ ಈರ್ವರು ಮಕ್ಕಳೊಂದಿಗೆ ನಾಪತ್ತೆ, ಶಿಕಾರಿಪುರ ಪೊಲೀಸ್ ಠಾಣೆ ಪ್ರಕಟಣೆ

0

ಶಿಕಾರಿಪುರ ತಾಲ್ಲೂಕ್, ಹರಗುವಳ್ಳಿ ಗ್ರಾಮ ವಾಸಿ ನವೀನ್ ಕುಮಾರ್ ಎಂಬುವವರ ಅಕ್ಕ ನಾಗವೇಣಿ ಎಂಬ 31 ವರ್ಷ ಮಹಿಳೆ ತನ್ನ 14 ವರ್ಷದ ಅಶ್ವತ್ ಹಾಗೂ 12 ವರ್ಷದ ಅಶ್ವಿನ್ ಎಂಬ ಮಕ್ಕಳನ್ನು ಕರೆದುಕೊಂಡು ಜೂ. 17 ರಂದು ಮನೆಯಿಂದ ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ. ಈಕೆ ವಿಚ್ಛೇದಿತೆಯಾಗಿದ್ದು, 1 ವರ್ಷದಿಂದ ತಮ್ಮ ನವೀನ್ ಕುಮಾರ್ ಎಂಬುವವರ ಮನೆಯಲ್ಲಿ ವಾಸವಿದ್ದರು.
ನಾಗವೇಣಿಯ ಚಹರೆ: 5 ಅಡಿ ಎತ್ತರ, ಸಾಧಾರಣ ಮೈ ಕಟ್ಟು, ಬಿಳಿ ಮೈ ಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಗುಲಾಬಿ ಬಣ್ಣದ ಟಾಪ್ ಮತ್ತು ಬಿಳಿ ಬಣ್ಣದ ಪ್ಯಾಂಟ್ ಮತ್ತು ವೇಲ್ ಧರಿಸಿರುತ್ತಾರೆ.
ಅಶ್ವತ್‌ನ ಚಹರೆ : 4 ಅಡಿ ಎತ್ತರ, ಸಾಧಾರಣ ಮೈ ಕಟ್ಟು, ಎಣ್ಣೆಗಪ್ಪು ಮೈ ಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಬಿಳಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿರುತ್ತಾನೆ.
ಅಶ್ವಿನ್‌ನ ಚಹರೆ: 3 ಅಡಿ ಎತ್ತರ, ಸಾಧಾರಣ ಮೈ ಕಟ್ಟು, ಎಣ್ಣೆಗಪ್ಪು ಮೈ ಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಕಪ್ಪುಬಣ್ಣದ ಶರ್ಟ್ ಮತ್ತು ನೀಲಿ ಪ್ಯಾಂಟ್ ಧರಿಸಿರುತ್ತಾನೆ.
ಈ ತಾಯಿ ಮಕ್ಕಳ ಬಗ್ಗೆ ಸುಳಿವು ಇದ್ದಲ್ಲಿ ದೂರವಾಣಿ ಸಂಖ್ಯೆ: ಜಿಲ್ಲಾ ಪೊಲೀಸ್ ಕಚೇರಿ, ಶಿವಮೊಗ್ಗ ನಂ:-08182- 261413,ಡಿ.ಎಸ್.ಪಿ ಶಿಕಾರಿಪುರ ಉಪ ವಿಭಾಗ ಶಿಕಾರಿಪುರ:-08187-222443/ 9480803323, ಪಿ..ಐ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆ. 08187-222443/ 9480803366 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ತಿಳಿಸಿದೆ.

S.N.Channabasappa ಧರ್ಮಸ್ಥಳ ಕ್ಷೇತ್ರಕ್ಕೆ ಕಳಂಕ ತರಲು ಯತ್ನಿಸಿದ ಪ್ರಕಾಶ್ ರಾಜ್ ಬಂಧನಕ್ಕೆ ಶಾಸಕ ಎಸ್.ಎನ್‌.ಚನ್ನಬಸಪ್ಪಆಗ್ರಹಿಸಿ ಪತ್ರ

0

S.N.Channabasappaಧರ್ಮಸ್ಥಳ ಕ್ಷೇತ್ರದ ವಿರುದ್ಧ ನಡೆಯುತ್ತಿದೆ ಎನ್ನಲಾದ ಷಡ್ಯಂತ್ರದಲ್ಲಿ ನಟ ಪ್ರಕಾಶ್ ರಾಜ್ ಅವರ ಪಾತ್ರವನ್ನು ತನಿಖೆಗೊಳಪಡಿಸಬೇಕು ಎಂದು ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಎಸ್.ಎನ್. ಚನ್ನಬಸಪ್ಪ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಧರ್ಮಸ್ಥಳದ ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಲಾದ “ಬುರುಡೆ ಗ್ಯಾಂಗ್” ಜೊತೆಗೆ ಪ್ರಕಾಶ್ ರಾಜ್ ಕೈಜೋಡಿಸಿರುವ ಶಂಕೆಗಳು ವ್ಯಕ್ತವಾಗುತ್ತಿವೆ ಎಂದು ಹೇಳಿದ್ದಾರೆ.

ಪ್ರಕಾಶ್ ರಾಜ್ ಅವರಿಗೆ ಯಾವುದೇ ಪೂರ್ವ ಪರಿಚಯವಿಲ್ಲದ ವ್ಯಕ್ತಿಗಳು ನೇರವಾಗಿ ಸಂಪರ್ಕ ಸಾಧಿಸಿದ್ದೇಕೆ, ಧರ್ಮಸ್ಥಳಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಅವರು ಸಲಹೆ ನೀಡಿದ್ದಾರೆಯೇ ಎಂಬ ಪ್ರಶ್ನೆಗಳನ್ನು ಚನ್ನಬಸಪ್ಪ ಎತ್ತಿದ್ದಾರೆ.

ಇದೇ ವೇಳೆ, ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (ಎಸ್‌ಐಟಿ) ಪ್ರಕಾಶ್ ರಾಜ್ ಅವರನ್ನು ಇದುವರೆಗೆ ವಿಚಾರಣೆಗೆ ಕರೆಯದಿರುವುದರ ಬಗ್ಗೆಯೂ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಧರ್ಮಸ್ಥಳ ಪ್ರಕರಣದೊಂದಿಗೆ ತಮ್ಮ ಸಂಬಂಧವಿಲ್ಲ ಎಂದು ಹೇಳಿಕೊಳ್ಳುವ ಪ್ರಕಾಶ್ ರಾಜ್, ಆರಂಭಿಕ ಹಂತದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಂಬಂಧಿತ ವ್ಯಕ್ತಿಗಳ ಪರವಾಗಿ ಪೋಸ್ಟ್‌ಗಳನ್ನು ಪ್ರಕಟಿಸಿದ್ದೇಕೆ ಎಂಬ ಪ್ರಶ್ನೆಯನ್ನೂ ಶಾಸಕರು ಮುಂದಿಟ್ಟಿದ್ದಾರೆ.

S.N.Channabasappa ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ ಪ್ರಕರಣದಲ್ಲಿ ಪ್ರಕಾಶ್ ರಾಜ್ ಅವರ ಪಾತ್ರದ ಕುರಿತು ಸಮಗ್ರ ತನಿಖೆ ನಡೆಸುವ ಅಗತ್ಯವಿದೆ ಎಂದು ಚನ್ನಬಸಪ್ಪ ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯ ಸರ್ಕಾರವು ಯಾವುದೇ ಒತ್ತಡಗಳಿಗೆ ಮಣಿಯದೆ, ನಟ ಪ್ರಕಾಶ್ ರಾಜ್ ಅವರನ್ನು ವಿಚಾರಣೆಗೆ ಒಳಪಡಿಸಿ, ಅಗತ್ಯವಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಆಯುಷ್ಮಾನ್ ಕಾರ್ಡ್ ಬೇಕೆ? ಇಲ್ಲಿದೆ ಮಾಹಿತಿ

0

ಪ್ರಧಾನಮಂತ್ರಿ ಆರೋಗ್ಯ ಯೋಜನೆ ಯಾ ಆಯುಷ್ಮಾನ್ ಭಾರತ್ ಆಯುಷ್ಮಾನ್ ಕಾರ್ಡ್ ಮಾಡಿಕೊಡಲಾಗುವುದು. ಇದೇ ಬೆಳಗ್ಗೆ 8.30 ರಿಂದ ಸಂಜೆ 6.00 ತನಕ 19.06.2026 ಶುಕ್ರವಾರ ಮತ್ತು ಶನಿವಾರ 20/06/2026 ಜೆಸಿಐ ಶಿವಮೊಗ್ಗ ವಿವೇಕ್
ಸಹಕಾರ ದೊಂದಿಗೆ ಸ್ವಾಮಿ ವಿವೇಕಾನಂದ ಪಾರ್ಕ್
ಶಿವಶಕ್ತಿ ಯೋಗ ಮಂದಿರ ಅಶ್ವಥ್ ನಗರ ಎಂಟನೇ ತಿರುವು ಶಿವಮೊಗ್ಗ.ದಲ್ಲಿ ಏರ್ಪಡಿಸಲಾಗಿದೆ. 1 ರಿಂದ 69 ವರ್ಷದವರೆಗಿನ ಅವರಿಗೆ ಬಿಪಿಎಲ್ ಕಾರ್ಡ್ ಹೊಂದಿದವರಿಗೆ 5 ಲಕ್ಷ ಹಾಗೂ ಎಪಿಎಲ್ ಕಾರ್ಡ್ ಹೊಂದಿದವರಿಗೆ 1.5 ಉಚಿತ ಚಿಕಿತ್ಸೆ ಸಿಗುತ್ತದೆ. 70 ವರ್ಷ ಮೇಲ್ಪಟ್ಟವರಿಗೆ ಆಯುಷ್ಮಾನ್ ಕಾರ್ಡ್ ಮಾಡಿ ಕೊಡಲಾಗುವುದು ಇವರಿಗೆ ಯಾವುದೇ ಎಪಿಎಲ್ ಕಾರ್ಡ್ ಬಿಪಿಎಲ್ ಕಾರ್ಡ್ ಅವಶ್ಯಕತೆ ಇರುವುದಿಲ್ಲ. ಕಾರ್ಡ್ ಪಿವಿಸಿ ಸ್ಮಾರ್ಟ್ ಕಾರ್ಡ್ ಅಲ್ಲಿ ಬರುತ್ತದೆ. ಬೇಕಾದ ದಾಖಲೆಗಳು ಆಧಾರ್ ಕಾರ್ಡ್ ಮತ್ತು ನಿಮ್ಮ ಫೋಟೋ ಹಾಗೂ ಆಧಾರ್ ಲಿಂಕ್ ಆಗಿರುವ ಮೊಬೈಲ್ ನಂಬರ್ ತರಬೇಕು. ಮೊದಲು ಆಯುಷ್ಮಾನ್ ಕಾರ್ಡ್ ಮಾಡಿಸಿದವರು ಕೂಡ ರಿನಿವಲ್ ಮಾಡಿಸಿ ಲೈಕ್ ಟೈಮ್ ಮಾಡ್ಕೋ ಗೆ ಕನ್ವರ್ಟ್ ಮಾಡಿಸಬೇಕಾಗುತ್ತದೆ. ವಿತರಣೆ ಸೋಮವಾರ ಸಂಜೆ 6ಗಂಟೆ ಗೆ ವಿತರಣ್ಣೆ ಮಾಡಲಾಗುದು.
ಇದರ ಜೊತೆಯಲ್ಲಿ .1. ಆಧಾರ್ ಕಾರ್ಡ್ ಅಡ್ರೆಸ್ ಚೇಂಜ್ 2. ಆಧಾರ್ ಕಾರ್ಡ್ ಡಿಜಿಟಲ್ ಸ್ಮಾರ್ಟ್ ಕಾರ್ಡ್ 3. ಎಲೆಕ್ಷನ್ ವೋಟರ್ ಐಡಿ ಕರೆಕ್ಷನ್ ಅಂಡ್ ನ್ಯೂ ಕಾರ್ಡ್ 4. 60 ವರ್ಷ ಮೇಲ್ಪಟ್ಟವರ ಸೀನಿಯರ್ ಸಿಟಿಜನ್ ಕಾರ್ಡ್ ಕೂಡ ಮಾಡಿ ಕೊಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 8431555394. ಸ್ಥಳ. ಸ್ವಾಮಿ ವಿವೇಕಾನಂದ ಪಾರ್ಕ್
ಶಿವಶಕ್ತಿ ಯೋಗ ಮಂದಿರ ಅಶ್ವಥ್ ನಗರ ಎಂಟನೇ ತಿರುವು ಶಿವಮೊಗ್ಗ.

Kirloskar Ferrous Industries Limited ಕೊಪ್ಪಳ ಕಿರ್ಲೋಸ್ಕರ್ ಫೆರಸ್ ಕಾರ್ಖಾನೆ ಆಶ್ರಯದಲ್ಲಿ ವಲಯ ಸುರಕ್ಷತಾ ದಿನಾಚರಣೆ

0

Kirloskar Ferrous Industries Limited ದಿನಾಂಕ 17-06-2026 ರಂದು ಹೊಸಪೇಟೆಯ ಸ್ಟೇಷನ್ ರಸ್ತೆಯಲ್ಲಿರುವ ಹೋಟೆಲ್ ಪ್ರಿಯದರ್ಶಿನಿ ತೋರಣಂ ಸಭಾಂಗಣದಲ್ಲಿ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ (KFIL) ಹಾಗೂ ಬಿಕೆರೈಸ್ (BKRISE) ಸಹಯೋಗದಲ್ಲಿ ಬಳ್ಳಾರಿ–ಕೊಪ್ಪಳ ವಲಯ ಸುರಕ್ಷತಾ ದಿನಾಚರಣೆ–2026ರ ಅಂಗವಾಗಿ 55ನೇ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

ಕಾರ್ಯಕ್ರಮವು ಬೆಳಿಗ್ಗೆ 9.30 ಗಂಟೆಗೆ ಆರಂಭಗೊಂಡಿತು. ಮೊದಲಿಗೆ ವಿವಿಧ ಸುರಕ್ಷತಾ ಸಾಧನಗಳ ವಿತರಕರು ಭಾಗವಹಿಸಿದ್ದ 16 ಸುರಕ್ಷತಾ ಪ್ರದರ್ಶನ ಸ್ಟಾಲ್‌ಗಳನ್ನು ಕರ್ನಾಟಕ ಸರ್ಕಾರದ ಕಾರ್ಖಾನೆಗಳು, ಬಾಯ್ಲರ್‌ಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯ ನಿರ್ದೇಶಕರಾದ ಶ್ರೀ ಕೆ.ಜಿ. ನಂಜಪ್ಪ ಹಾಗೂ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಆರ್.ವಿ. ಗುಮಾಸ್ತೆ ಅವರು ಉದ್ಘಾಟಿಸಿದರು.

ಸುರಕ್ಷತಾ ವಿಷಯದ ತಾಂತ್ರಿಕ ಸೆಮಿನಾರ್‌ಗೆ ಚಾಲನೆ ನೀಡಲಾಯಿತು. ಓಪನ್ ಸೇಫ್ಟಿ ಬ್ರಿಫಿಂಗ್ ಹಾಗೂ ಬಿಕೆರೈಸ್ ಪರಿಚಯದ ಬಳಿಕ ಸುರಕ್ಷತಾ ವಿಭಾಗದ ಅಧಿಕಾರಿ ಶ್ರೀ ಮುರುಳೀಧರ ನಾಡಿಗೇರ್ ಅವರು ಗಣ್ಯ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು.

ಪ್ರಾರ್ಥನೆ, ವಂದೇ ಮಾತರಂ ಹಾಗೂ ನಾಡಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ದೊರೆಯಿತು.

ಶ್ರೀ ವರುಣ್, ಹಿರಿಯ ಸಹಾಯಕ ನಿರ್ದೇಶಕರು (ಬಳ್ಳಾರಿ ವಿಭಾಗ) ಅವರು ಸ್ವಾಗತ ಭಾಷಣ ಮಾಡಿ ಸಭಿಕರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ನಂತರ ಗಣ್ಯರಿಂದ ಜ್ಯೋತಿ ಬೆಳಗಿಸುವ ಕಾರ್ಯಕ್ರಮ ನೆರವೇರಿತು. ಇದೇ ಸಂದರ್ಭದಲ್ಲಿ ಶ್ರೀ ಕೆ.ಜೆ ನಂಜಪ್ಪ ಹಾಗೂ ಶ್ರೀ ಆರ್.ವಿ. ಗುಮಾಸ್ತೆ ಅವರನ್ನು ಬಿಕೆರೈಸ್ ವತಿಯಿಂದ ಸನ್ಮಾನಿಸಲಾಯಿತು.

ಶ್ರೀ ವೆಂಕಟೇಶ್ ರಾಥೋಡ್, ಜಂಟಿ ನಿರ್ದೇಶಕರು, ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆ, ಹುಬ್ಬಳ್ಳಿ ವಿಭಾಗ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಂಧರ್ಭದಲ್ಲಿ ಬಿ ಎಂ ಎಂ ಇಸ್ಪಾತ್ ಲಿಮಿಟೆಡ್ ಮುಖ್ಯಸ್ಥರಾದ ಶ್ರೀ ಮಂಜುನಾಥ್ ಪ್ರಭುರವರು ವೇದಿಕೆಯ ಮೇಲೆ ಇದ್ದು ಅವರು ಸಹ ಸುರಕ್ಷತೆಯ ಬಗ್ಗೆ ತಮ್ಮ ಭಾಷಣದಲ್ಲಿ ಅರಿವು ಮೂಡಿಸಿದರು. ಮುಖ್ಯ ಅತಿಥಿಗಳಾಗಿ ಪ್ರಥಮವಾಗಿ ನಿರ್ದೇಶಕರಾದ ನಂತರ ಬಳ್ಳಾರಿ- ಕೊಪ್ಪಳ ಭಾಗಕ್ಕೆ ಆಗಮಿಸಿದ ಶ್ರೀ ಕೆ.ಜೆ. ನಂಜಪ್ಪ ಅವರು ಹೊಸದಾಗಿ ಅನುಮೋದನೆಯಾಗಿರುವ ನೂತನ ಕಾರ್ಮಿಕ ಸಂಹಿತೆ (New Labour Code) ಕುರಿತು ಮಾಹಿತಿ ಸಮೃದ್ಧ ಉಪನ್ಯಾಸ ನೀಡಿದರು.

ಅಧ್ಯಕ್ಷೀಯ ಭಾಷಣದಲ್ಲಿ ಶ್ರೀ ಆರ್.ವಿ. ಗುಮಾಸ್ತೆ ಅವರು “Safety Excellence Journey” ವಿಷಯದ ಕುರಿತು ಪ್ರೇರಣಾದಾಯಕ ವಿಚಾರಗಳನ್ನು ಹಂಚಿಕೊಂಡರು.

ಮುಕುಂದ ಸುಮಿ ಪ್ರೈವೇಟ್ ಲಿಮಿಟೆಡ್‌ನ ಸಿಒಒ ಶ್ರೀ ಓ.ಪಿ. ಸಿಂಗ್ ಅವರು ತಮ್ಮ ಸಂಸ್ಥೆಯಲ್ಲಿ ಅನುಸರಿಸುತ್ತಿರುವ ಅತ್ಯುತ್ತಮ ಸುರಕ್ಷತಾ ಪದ್ಧತಿಗಳ (Best Safety Practices) ಕುರಿತು ವಿವರಿಸಿದರು.

ಮಧ್ಯಾಹ್ನದ ಭೋಜನದ ಬಳಿಕ ಜಿಂದಾಲ್ ಸ್ಟೀಲ್ ಸಂಸ್ಥೆಯ ಶ್ರೀ ಧರ್ಮಪಾಲ್ ಅವರು ಉಕ್ಕು ಉದ್ಯಮದಲ್ಲಿನ ಸುರಕ್ಷತಾ ಕ್ರಮಗಳ ಕುರಿತು ಉಪನ್ಯಾಸ ನೀಡಿದರು. ನಂತರ ಮಿನರಲ್ಸ್ ಪವರ್ ಅಂಡ್ ಸ್ಟೀಲ್ಸ್ ಸಂಸ್ಥೆಯ ಡಿಜಿಎಂ ಶ್ರೀ ಅಜಿಜ್ ಅವರು “Environment Excellence” ವಿಷಯದ ಕುರಿತು ಉಪನ್ಯಾಸ ನೀಡಿದರು.

ಸುರಕ್ಷತಾ ಸಾಧನ ಸಾಮಗ್ರಿಗಳ ವಿತರಕರಿಂದ ವಯಕ್ತಕ ಸುರಕ್ಷರಾ ಸಾಧನ ಸಾಮಾಗ್ರಿಗಳ ಬಗ್ಗೆ ತಿಳಿಸಿದರು.

ಕೊಪ್ಪಳದ ಕಾರ್ಖಾನೆಗಳ ಸಹಾಯಕ ನಿರ್ದೇಶಕರಾದ ಶ್ರೀ ವಿಜಯಕುಮಾರ್ ಅವರು ವಿವಿಧ ಕೈಗಾರಿಕೆಗಳಲ್ಲಿ ಸಂಭವಿಸಿದ ಅಪಘಾತಗಳ ವಿಶ್ಲೇಷಣೆ, ಅಪಘಾತ ತಡೆಗಟ್ಟುವ ಕ್ರಮಗಳು ಹಾಗೂ ಸುರಕ್ಷತಾ ನಿರ್ವಹಣೆಯ ಕುರಿತು ಮಾಹಿತಿ ನೀಡಿದರು.

ಸಮಾರೂಪ ಸಮಾರಂಭ

Kirloskar Ferrous Industries Limited ಸಂಜೆಯ ವೇಳೆಗೆ ಕಾರ್ಯಕ್ರಮದ ಸಾಂಸ್ಕೃತಿಕ ಭಾಗವಾಗಿ ಜಿಂದಾಲ್ ಉದ್ಯೋಗಿಗಳಿಂದ ಸುರಕ್ಷತಾ ನಾಟಕ ಮತ್ತು ಹೊಸಪೇಟೆಯ ಅಂಜಲಿ ಭರತನಾಟ್ಯ ಅಕಾಡೆಮಿಯ ಕಲಾವಿದರು ಮನಮೋಹಕ ಭರತನಾಟ್ಯ ಪ್ರದರ್ಶನ ನೀಡಿದರು. ಈ ಪ್ರದರ್ಶನ ಸಭಿಕರ ಮೆಚ್ಚುಗೆಗೆ ಪಾತ್ರವಾಯಿತು.

ಸುರಕ್ಷತಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗೈದ ಕೈಗಾರಿಕೆಗಳು ಹಾಗೂ ಸಿಬ್ಬಂದಿಗೆ ವಿವಿಧ ಪ್ರಶಸ್ತಿಗಳನ್ನು ವಿತರಿಸಲಾಯಿತು. ಸುರಕ್ಷತಾ ಜಾಗೃತಿ ಮೂಡಿಸುವಲ್ಲಿ, ಅಪಘಾತ ತಡೆಗಟ್ಟುವಲ್ಲಿ ಹಾಗೂ ಸುರಕ್ಷಿತ ಕಾರ್ಯಸ್ಥಳ ನಿರ್ಮಾಣದಲ್ಲಿ ಸಲ್ಲಿಸಿದ ವಿಶೇಷ ಕೊಡುಗೆಗಳನ್ನು ಈ ಸಂದರ್ಭದಲ್ಲಿ ಗುರುತಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಹಾಗೂ ಮೆಷಿನ್ ಶಾಪ್ ವಿಭಾಗವು ಸಣ್ಣ ಪ್ರಮಾಣದ ಕೈಗಾರಿಕೆ ವಿಭಾಗದಲ್ಲಿ ಮತ್ತು ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಮೇಗಾ ಇಂಡಸ್ಡೀಸ್ ವಿಭಾಗದಲ್ಲಿ “ಉತ್ತಮ ಕಾರ್ಖಾನೆ” ಪ್ರಶಸ್ತಿಯನ್ನು ಪಡೆದುಕೊಂಡಿತು.

ಶ್ರೀ ಆನಂದ್ ಶಿರಿಶಾಡ್ ಅವರು “ಉತ್ತಮ ಸುರಕ್ಷತಾ ಅಧಿಕಾರಿ”, ಡಾ. ಪ್ರವೀಣ್ ಕುಮಾರ್ ಅವರು “ಉತ್ತಮ ವೈದ್ಯಾಧಿಕಾರಿ” ಪ್ರಶಸ್ತಿಗಳನ್ನು ಪಡೆದರು. ಕಿರ್ಲೋಸ್ಕರ್ ತಂಡವು ಸುರಕ್ಷತಾ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದರೆ, ಫೌಂಡ್ರಿ ವಿಭಾಗದ ಕಾರ್ಮಿಕರಾದ ಶ್ರೀ ರುದ್ರೇಶ್ ಅವರು ಸುರಕ್ಷತಾ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಪ್ರಶಸ್ತಿಯನ್ನು ಸ್ವೀಕರಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀ ಕೆ.ಜಿ. ನಂಜಪ್ಪ, ಶ್ರೀ ವೆಂಕಟೇಶ್ ರಾಥೋಡ್, ಶ್ರೀ ಶ್ರೀವತ್ಸನ್, ಶ್ರೀ ಸಿ. ರಮೇಶ್, ಡಾ. ರಶೀದ್, ಶ್ರೀ ಓ.ಪಿ. ಸಿಂಗ್, ಶ್ರೀ ರಾಜಕುಮಾರ್ ದಂಪೆ, ಶ್ರೀ ವರುಣ್ ಹಾಗೂ ಶ್ರೀ ವಿಜಯಕುಮಾರ್ ಉಪಸ್ಥಿತರಿದ್ದು ಪ್ರಶಸ್ತಿ ಪ್ರದಾನ ನೆರವೇರಿಸಿದರು.

“Engage, Educate and Empower People to Enhance Safety” ಎಂಬ ಈ ವರ್ಷದ ರಾಷ್ಟ್ರೀಯ ಸುರಕ್ಷತಾ ದಿನಾಚರಣೆಯ ಧ್ಯೇಯವಾಕ್ಯವನ್ನು ಸಾಕಾರಗೊಳಿಸಲು ಪ್ರತಿಯೊಬ್ಬ ಉದ್ಯೋಗಿಯೂ ಸುರಕ್ಷತೆಯ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಬೇಕು ಎಂದು ಗಣ್ಯರು ಕರೆ ನೀಡಿದರು.

ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಮುರುಳಿಧರ್ ನಾಡಿಗೇರ್ (ಸುರಕ್ಷತಾ ವಿಭಾಗ), ಶ್ರೀಮತಿ ಅಂಬಿಕಾ ಕಟ್ಟಿ (ಆಡಳಿತ ವಿಭಾಗ) ಶ್ರೀ ಕಿರಣ್ (ಪರಿಸರ ವಿಭಾಗ) ಹಾಗೂ ಶ್ರೀ ನಯನ್ (ಮಾರ್ಕೆಟಿಂಗ್ ವಿಭಾಗ) ಅವರು ಅಚ್ಚುಕಟ್ಟಾಗಿ ನಿರ್ವಹಿಸಿದರು.

ಅಂತಿಮವಾಗಿ ಶ್ರೀ ಶಿವಯ್ಯ ಸ್ವಾಮಿ ಅವರು ವಂದನಾರ್ಪಣೆ ಸಲ್ಲಿಸಿದರು.
ಬಿಕೆರೈಸ್ ಹಾಗೂ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ತಂಡಗಳ ಸಮರ್ಪಕ ಯೋಜನೆ ಮತ್ತು ವ್ಯವಸ್ಥಾಪನೆಯಿಂದ ಕಾರ್ಯಕ್ರಮವು ನಿಗದಿತ ಸಮಯಕ್ಕೆ ಆರಂಭವಾಗಿ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಸುರಕ್ಷತಾ ಜಾಗೃತಿ, ಕೈಗಾರಿಕಾ ಸಹಭಾಗಿತ್ವ ಹಾಗೂ ಸುರಕ್ಷಿತ ಕಾರ್ಯಸಂಸ್ಕೃತಿಯ ವೃದ್ಧಿಗೆ ಈ ಕಾರ್ಯಕ್ರಮ ಮಹತ್ವದ ವೇದಿಕೆಯಾಗಿದ್ದು, ಭಾಗವಹಿಸಿದ ಎಲ್ಲರ ಸಹಕಾರದಿಂದ ಅರ್ಥಪೂರ್ಣ ಹಾಗೂ ಯಶಸ್ವಿ ಕಾರ್ಯಕ್ರಮವಾಗಿ ಮೂಡಿಬಂದಿತು.

ವರದಿ:
ಮುರುಳೀಧರ ನಾಡಿಗೇರ್
ಸುರಕ್ಷತಾ ವಿಭಾಗ
ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್