DC Shivamogga ಸಾರ್ವಜನಿಕ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಜೂ. 18 ರಿಂದ ರಾಜ್ಯ ಹೆದ್ದಾರಿ-52 ಹುಲಿಕಲ್ ಘಾಟ್ ವ್ಯಾಪ್ತಿಯ ಚಂಡಿಕಾಂಬ ದೇವಸ್ಥಾನದ ಬಳಿ ಇರುವ ಹೇರ್‌ಪೀನ್ ತಿರುವಿನಲ್ಲಿ ಅಳವಡಿಸಿರುವ ವೇಗಮಿತಿ 20ಕಿ.ಮೀ. ಸೂಚನಾ ಫಲಕದಂತೆ ಚಕ್ರತಳ 496 ಸೆ.ಮೀ. ಮೀರದ ಮತ್ತು 40+2 ಆಸನ ಸಾಮರ್ಥ್ಯವುಳ್ಳ ಹಾಗೂ ವಾಹನದ ಒಟ್ಟು ತೂಕ 9000 ಕೆ.ಜಿ. ಮೀರದ ಮಜಲು ಬಸ್ಸು ವಾಹನಗಳ ಏಕ ಮುಖ ಸಂಚಾರ ವ್ಯವಸ್ಥೆಯನ್ನು ಖಚಿತಪಡಿಸಿಕೊಂಡು ಸೂಚಿತ ಸಾಮರ್ಥ್ಯದ ಮಜಲು ಬಸ್ಸು ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ಕಲ್ಪಿಸಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶಿಸಿದ್ದಾರೆ.
ಕಳೆದ ಏಪ್ರಿಲ್ 9 ರಂದು ಹುಲಿಕಲ್ ಘಾಟ್‌ನ ಹೇರ್‌ಪಿನ್ ತಿರುವಿನಲ್ಲಿ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಸುಮಾರು 12 ಮೀಟರ್ ಎತ್ತರದ ಕಾಂಕ್ರೀಟ್ ರಸ್ತೆಯ ಕೆಳಭಾಗದಲ್ಲಿ 5 ಅಡಿಯಷ್ಟು ಭೂಕುಸಿತ ಉಂಟಾಗಿತ್ತು. ರಸ್ತೆಯ ಮೇಲ್ಭಾಗದಲ್ಲೂ ಬಿರುಕುಗಳು ಕಾಣಿಸಿಕೊಂಡಿದ್ದರಿಂದ ಸುರಕ್ಷತೆಯ ದೃಷ್ಟಿಯಿಂದ ಮಾಸ್ತಿ ಕಟ್ಟೆಯಿಂದ ಹೊಸ ಅಂಗಡಿವರೆಗೆ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿ ಬದಲಿ ಮಾರ್ಗದ ವ್ಯವಸ್ಥೆ ಮಾಡಲಾಗಿತ್ತು. ನಂತರದ ದಿನಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಚಂಡಿಕಾಂಬ ದೇವಸ್ಥಾನದ ಬಳಿ ಮೆಟ್ಟಿಲುಗಳನ್ನು ಬಳಸಿಕೊಂಡು ವಾಹನಗಳ ಅದಲು-ಬದಲು ಮೂಲಕ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು.
ಪ್ರಸ್ತುತ ಘಾಟ್ ರಸ್ತೆಯ ತಿರುವಿನಲ್ಲಿ ತಡೆಗೋಡೆ ನಿರ್ಮಿಸಿ, ರಸ್ತೆಯ ಮಟ್ಟದವರೆಗೆ ಮಣ್ಣಿನ ಏರಿಯೊಂದಿಗೆ ಲೀನ್ ಕಾಂಕ್ರೀಟ್ ಹಾಕಿ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿಗೊಳಿಸಲಾಗಿದೆ. ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್, ಪೊಲೀಸ್ ಅಧೀಕ್ಷಕರು ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ವರದಿ ಮತ್ತು ಪ್ರಸ್ತಾವನೆಯನ್ನು ಪರಿಶೀಲಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಘಾಟಿಯಲ್ಲಿ ಮತ್ತೊಮ್ಮೆ ಭೂಕುಸಿತ ಸಂಭವಿಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರ ಸುರಕ್ಷತೆಗಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ:
DC Shivamogga ಘಾಟಿ ರಸ್ತೆಯಲ್ಲಿ ತಡೆಗೋಡೆ ಹಾಗೂ ಎಚ್ಚರಿಕೆ ಫಲಕಗಳನ್ನು ಅಳವಡಿಸಲಾಗಿದೆ.
ಮಾಹಿತಿ ಮತ್ತು ಸೂಚನಾ ಫಲಕಗಳನ್ನು ಹಾಕಲಾಗಿದೆ.
ರಾತ್ರಿ ವೇಳೆ ವಾಹನ ಸವಾರರ ಅನುಕೂಲಕ್ಕಾಗಿ ‘ಕ್ಯಾಟ್ ಐ’ ಹಾಗೂ ಸೋಲಾರ್ ಸ್ಟಡ್ಸ್ ಗಳನ್ನು ಅಳವಡಿಸಿ ಸುರಕ್ಷತೆಯನ್ನು ಖಾತ್ರಿಪಡಿಸಲಾಗಿದೆ. “ಮೋಟಾರು ವಾಹನ ಕಾಯ್ದೆ 1988 ರ ಕಲಂ 115 ಹಾಗೂ 116 ರನ್ವಯ ವಾಹನಗಳ ಸಂಚಾರಕ್ಕೆ ಸಂಬಂಧಿಸಿದಂತೆ ಜೂ. 12, 2026 ರ ಅಧಿಸೂಚನೆಯೊಂದಿಗೆ ಜೂ.18 ರಿಂದ ಹೊಸದಾಗಿ ಸೇರ್ಪಡೆಗೊಳಿಸಿ ಜಾರಿಗೆ ಬರುವಂತೆ ರಾಜ್ಯ ಹೆದ್ದಾರಿ-52 ರ ಬಾಳೆಬರೆ ಘಾಟ್ (ಹುಲಿಕಲ್ ಘಾಟ್) ಮೂಲಕ ಚಕ್ರತಳ 496 ಸೆ.ಮೀ. ಮೀರದ ಮತ್ತು 40+2 ಆಸನ ಸಾಮರ್ಥ್ಯವುಳ್ಳ ಹಾಗೂ ವಾಹನದ ಒಟ್ಟು ತೂಕ 9000 ಕೆ.ಜಿ. ಮೀರದ ಮಜಲು ಬಸ್ಸು ವಾಹನಗಳ ಏಕ ಮುಖ ಸಂಚಾರ ವ್ಯವಸ್ಥೆಯನ್ನು ಖಚಿತಪಡಿಸಿಕೊಂಡು ಮಜಲು ಬಸ್ ವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸಿ ಆದೇಶಿಸಲಾಗಿದೆ” ಎಂದು ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ.
DC Shivamogga ಹುಲಿಕಲ್ ಘಾಟಿಯಲ್ಲಿ ಮಜಲು ಬಸ್ ವಾಹನಗಳ ಸಂಚಾರಕ್ಕೆ ಅವಕಾಶ- ಪ್ರಭುಲಿಂಗ ಕವಳಿಕಟ್ಟಿ
Shimoga Institute of Medical Sciences ಗರ್ಭಿಣಿಯರಿಗೆ ಹೆರಿಗೆ ಸಂದರ್ಭದಲ್ಲಿ ಬರುವ ತೊಂದರೆಗಳನ್ನ ವೈದ್ಯರು ನಿರ್ವಹಿಸಲು ಕಾರ್ಯಾಗಾರದಲ್ಲಿ ಉಪಯುಕ್ತ ಮಾಹಿತಿ : ಡಾ.ವಿರೂಪಾಕ್ಷಪ್ಪ
Shimoga Institute of Medical Sciences ಗರ್ಭಾವಸ್ಥೆ ಹಾಗೂ ಹೆರಿಗೆ ಸಮಯದಲ್ಲಿ ತಾಯಂದಿರು ಎದುರಿಸುವ ತುರ್ತು ಪರಿಸ್ಥಿತಿಗಳನ್ನು ಸಮರ್ಥವಾಗಿ ನಿಭಾಯಿಸಿ, ತಾಯಂದಿರ ಮರಣ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ರಾಜ್ಯ ಮಟ್ಟದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದ್ದು ವೈದ್ಯರು, ಶುಶ್ರೂಷಕರು ಇದರ ಸದುಪಯೋಗ ಪಡೆಯಬೇಕೆಂದು
ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರಾದ ಡಾ. ವಿರೂಪಾಕ್ಷಪ್ಪ ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆ) ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗದ ವತಿಯಿಂದ, ಶಿವಮೊಗ್ಗ ಪ್ರಸೂತಿ ಮತ್ತು ಸ್ತ್ರೀರೋಗ ಸೊಸೈಟಿ ಹಾಗೂ ಇಂಡಿಯನ್ ಕಾಲೇಜ್ ಆಫ್ ಅಬ್ಸೆಟ್ರಿಷಿಯನ್ಸ್ ಅಂಡ್ ಗೈನಕಾಲಜಿಸ್ಟ್ಸ್ ಸಹಯೋಗದೊಂದಿಗೆ ಜೂನ್ 17 ರಂದು ಸಿಮ್ಸ್ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಒಂದು ದಿನದ “ನಿರಂತರ ವೈದ್ಯಕೀಯ ಶಿಕ್ಷಣ ಮತ್ತು ಪ್ರಾಯೋಗಿಕ ತರಬೇತಿ” ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸುರಕ್ಷಿತ ಮಾತೃತ್ವ ಅಭಿಯಾನದ ಅಂಗವಾಗಿ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಾಗಾರದಲ್ಲಿ ಗರ್ಭಿಣಿಯರಿಗೆ ಹೆರಿಗೆ ಸಂದರ್ಭದಲ್ಲಿ ಎದುರಾಗಬಹುದಾದ ತೊಂದರೆಗಳನ್ನು ಸಮರ್ಥವಾಗಿ ನಿರ್ವಹಿಸಲು ವೈದ್ಯರು ಮತ್ತು ಸಿಬ್ಬಂದಿಗಳಿಗೆ ತರಬೇತಿ ನೀಡಲಾಗುವುದು ಎಂದರು.
Shimoga Institute of Medical Sciences ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಗೀತಾ ಎಂ ಮಾತನಾಡಿ, ಹೆರಿಗೆ ಸಮಯದಲ್ಲಿ ತಾಯಂದಿರಿಗೆ ಎದುರಾಗುವ ತೀವ್ರ ರಕ್ತದೊತ್ತಹಾಗೂ ಪ್ರಸವೋತ್ತರ ರಕ್ತಸ್ರಾವದ ದಂತಹ ತುರ್ತು ಸಂದರ್ಭಗಳನ್ನು ಅತ್ಯಂತ ವೇಗವಾಗಿ ಮತ್ತು ವ್ಯವಸ್ಥಿತವಾಗಿ ನಿರ್ವಹಿಸಲು ವೈದ್ಯರು ಹಾಗೂ ಶುಶ್ರೂಷಕರಿಗೆ ಈ ಕಾರ್ಯಾಗಾರದಲ್ಲಿ ಪ್ರಾಯೋಗಿಕ ಕೌಶಲ್ಯಗಳ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಮುಖ್ಯವಾಗಿ ಡಾ. ಶೀಲಾ ಮಾನೆ ಮತ್ತು ಡಾ. ಶೋಭಾ ಗುಡಿ ಅವರು ವಿಶೇಷ ಉಪನ್ಯಾಸ ನೀಡಿದರು. ಹೆರಿಗೆಯ ಸಮಯದಲ್ಲಿ ಉಂಟಾಗುವ ರಕ್ತಸ್ರಾವ ಮತ್ತು ರಕ್ತದೊತ್ತಡವನ್ನು ಹೇಗೆ ಪರಿಣಾಮಕಾರಿಯಾಗಿ ತಡೆಯಬಹುದು ಎಂಬುದರ ಕುರಿತು ಪ್ರಾಯೋಗಿಕ ಪ್ರಾತ್ಯಕ್ಷಿಕೆಯ ಮೂಲಕ ಸುದೀರ್ಘವಾಗಿ ಮಾಹಿತಿ ನೀಡಿದರು.
ಸಿಮ್ಸ್ನ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥರಾದ ಡಾ. ಪ್ರಶಾಂತ್ ಹಾಗೂ ವಿಭಾಗದ ಎಲ್ಲಾ ಪ್ರಾಧ್ಯಾಪಕರುಗಳು ಹಾಜರಿದ್ದು, ಈ ಮಹತ್ವದ ಕಾರ್ಯಾಗಾರವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ಮುಖ್ಯ ಅತಿಥಿಗಳಾಗಿ ಡಿಹೆಚ್‌ಓ ಡಾ. ನಟರಾಜ್ ಕೆ. ಎಸ್, ಮೆಗ್ಗಾನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರಾದ ಡಾ. ತಿಮ್ಮಪ್ಪ ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿಗಳಾದ ಡಾ. ಮಲ್ಲಪ್ಪ ಓ. ಇತರೆ ವೈದ್ಯರು ಹಾಗೂ ಜಿಲ್ಲೆಯ ಆರೋಗ್ಯಾಧಿಕಾರಿಗಳು, ಶುಶ್ರೂಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶಿವಮೊಗ್ಗ ಜಿಲ್ಲಾ ಸುಗಮ ಸಂಗೀತ ಪರಿಷತ್ ಅಧ್ಯಕ್ಷರಾಗಿ ಹಿರಿಯ ಗಾಯಕಿ ಶಾಂತಾಶೆಟ್ಟಿ ಆಯ್ಕೆ
ಕರ್ನಾಟಕ ಸುಗಮ ಸಂಗೀತ ಪರಿಷತ್ ಶಿವಮೊಗ್ಗ ಜಿಲ್ಲಾ ಘಟಕದ ಹೊಸ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ಶ್ರೀಮತಿ ಶಾಂತಾ ಎಸ್. ಶೆಟ್ಟಿ ಅವರನ್ನು ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಉಡುಪ ಅವರು ನೇಮಕ ಮಾಡಿದ್ದು, ಎಸ್. ರಾಮಯ್ಯ ಸರ್ವೋದಯ ಬಾಲಿಕಾ ಪ್ರೌಢ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ನಂದಿನಿ ಹಾಗೂ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.
International Yoga Day ಯಶಸ್ವಿಯಾಗಿ ನಡೆದ ಯೋಗ ದಿನಾಚರಣೆಯ ಜಾಗೃತಿ ಜಾಥಾ
International Yoga Day 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆಯುಷ್ ಇಲಾಖೆ ಶಿವಮೊಗ್ಗ ಮತ್ತು ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ವತಿಯಿಂದ ನಗರದಲ್ಲಿ ಬೃಹತ್ ಯೋಗಜಾಥಾ ನಡಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಜಾಗೃತಿ ಜಾಥಾದಲ್ಲಿ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಶಿವಮೊಗ್ಗ, ಬಾಪೂಜಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸವಳಂಗ ರಸ್ತೆ ಶಿವಮೊಗ್ಗ ಹಾಗೂ ಟಿಎಂಎಇಎಸ್ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ನಿದಿಗೆ(ಪೋ) ಶಿವಮೊಗ್ಗ — ಇಲ್ಲಿನ ಸುಮಾರು 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು.
ದಿನಾಂಕ 19-06-2026ರಂದು ಬೆಳಿಗ್ಗೆ 10:00 ಗಂಟೆಗೆ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಬೋಧನಾ ಆಸ್ಪತ್ರೆ ಶಿವಮೊಗ್ಗದಿಂದ ಪ್ರಾರಂಭವಾದ ಈ ನಡಿಗೆಯು, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮೂಲಕ ಸರ್ಕಿಟ್ ಹೌಸ್‌ವರೆಗೆ ಸಾಗಿತು. International Yoga Day ಜಾಥಾದುದ್ದಕ್ಕೂ ಯೋಗದ ಮಹತ್ವದ ಬಗ್ಗೆ ಘೋಷವಾಕ್ಯಗಳನ್ನು ಕೂಗುವ ಮೂಲಕ ಸಾರ್ವಜನಿಕರಲ್ಲಿ ಯೋಗ ಮತ್ತು ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಈ ವರ್ಷದ ಯೋಗ ದಿನಾಚರಣೆಯು”ಯೋಗ ಫಾರ್ ಹೆಲ್ತಿ ಏಜಿಂಗ್” (ಆರೋಗ್ಯಕರ ವಯಸ್ಸಾಗುವಿಕೆಗಾಗಿ ಯೋಗ) ಎಂಬ ಘೋಷವಾಕ್ಯವನ್ನು ಒಳಗೊಂಡಿದೆ.
ಈ ಯೋಗ ನಡಿಗೆಯಲ್ಲಿ ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ. ಲಿಂಗರಾಜು ಎಸ್ ಹಿಂಡಸಗಟ್ಟಿ, ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ವೀಣಾ ಎಂ ಎಸ್, ವಿವಿಧ ಆಯುರ್ವೇದ ಕಾಲೇಜುಗಳ ಪ್ರಾಂಶುಪಾಲರುಗಳು, ವಿದ್ಯಾರ್ಥಿಗಳು, ಆಯುಷ್ ಇಲಾಖೆಯ ವೈದ್ಯಾಧಿಕಾರಿಗಳು ಹಾಗೂ ಅಧಿಕಾರಿ/ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಶಿವಮೊಗ್ಗ ಕೋಟೆ ಶ್ರೀಆಂಜನೇಯಸ್ವಾಮಿದೇಗುಲದ ವ್ಯವಸ್ಥಾಪನಾ ಸಮಿತಿಗೆ ಸದಸ್ಯರಾಗಿ ಎ.ಎಚ್.ಸುನೀಲ್ ಮತ್ತು ರೇಖಾರಂಗನಾಥ್ ನಾಮಕರಣ
ಶಿವಮೊಗ್ಗ ನಗರದ ಪುರಾಣ ಪ್ರಸಿದ್ಧ ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ನೂತನ ಸದಸ್ಯರ ನೇಮಕಾತಿ ನಡೆದಿದೆ. ಮಾಜಿ ಪಾಲಿಕೆ ಸದಸ್ಯೆ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಶ್ರೀಮತಿ ರೇಖಾ ರಂಗನಾಥ್ ಅವರನ್ನು ರಾಜ್ಯ ಸರ್ಕಾರ ಮೂರು ವರ್ಷಗಳ ಅವಧಿಗೆ ಸಮಿತಿಯ ಸದಸ್ಯರಾಗಿ ನೇಮಕ ಮಾಡಿದೆ.
ಕರ್ನಾಟಕ ಸರ್ಕಾರದ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಜಿಲ್ಲಾ ಧಾರ್ಮಿಕ ಪರಿಷತ್ ವ್ಯಾಪ್ತಿಯಲ್ಲಿರುವ ಶಿವಮೊಗ್ಗ ನಗರದ ಪುರಾಣ ಪ್ರಸಿದ್ಧ ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಶ್ರೀಮತಿ ರೇಖಾ ರಂಗನಾಥ್ ಅವರನ್ನು ನೂತನ ಸದಸ್ಯರಾಗಿ ನೇಮಕಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಹೊಸಮನೆ ಬಡಾವಣೆಯ ಮಾಜಿ ಪಾಲಿಕೆ ಸದಸ್ಯೆಯಾಗಿರುವ ರೇಖಾ ರಂಗನಾಥ್ ಅವರು ಹಲವು ಸಾಮಾಜಿಕ, ಧಾರ್ಮಿಕ ಹಾಗೂ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಸೇವೆಯನ್ನು ಪರಿಗಣಿಸಿ ಮೂರು ವರ್ಷಗಳ ಅವಧಿಗೆ ಈ ಮಹತ್ವದ ಜವಾಬ್ದಾರಿಯನ್ನು ವಹಿಸಲಾಗಿದೆ.
ಈ ನೇಮಕಾತಿಗೆ ಸಂಬಂಧಿಸಿದಂತೆ ಶ್ರೀಮತಿ ರೇಖಾ ರಂಗನಾಥ್ ಅವರು ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ತಮ್ಮನ್ನು ವ್ಯವಸ್ಥಾಪನ ಸಮಿತಿಗೆ ನೇಮಕಗೊಳಿಸಿದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವ ಸಂಪುಟದ ಸದಸ್ಯರು, ರಾಜ್ಯದ ನಾಯಕರು ಹಾಗೂ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರು ಮತ್ತು ಕಾರ್ಯಕರ್ತರಿಗೆ ಅವರು ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ.
ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ ನಗರದ ಇತಿಹಾಸ ಪ್ರಸಿದ್ಧ ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿಗೆ ಸದಸ್ಯರನ್ನಾಗಿ ಗಾಂಧಿಬಜಾರ್ ನಿವಾಸಿ ಎ.ಎಚ್.ಸುನಿಲ್ ಅವರನ್ನು ನೇಮಕಗೊಳಿಸಿ ಜಿಲ್ಲಾ ಧಾರ್ಮಿಕ ಪರಿಷತ್ ಅಧ್ಯಕ್ಷ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶಿಸಿದ್ದಾರೆ.
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಅಧಿನಿಯಮ ಅನ್ವಯ ಸದಸ್ಯರನ್ನು ಒಳಗೊಂಡ ವ್ಯವಸ್ಥಾಪನಾ ಸಮಿತಿ ರಚಿಸಲಾಗಿದೆ. ಒಟ್ಟು 9 ಸದಸ್ಯರನ್ನು ಸಮಿತಿಗೆ ನೇಮಿಸಲಾಗಿದೆ. ಮೂರು ವರ್ಷದ ಅವಧಿಗೆ ಎ.ಎಚ್.ಸುನಿಲ್ ಅವರು ಸಮಿತಿ ಸದಸ್ಯರಾಗಿರುತ್ತಾರೆ.
ಎ.ಎಚ್.ಸುನಿಲ್ ಅವರು ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದ್ದು, ಕೋಟೆ ಶ್ರೀ ಮಾರಿಕಾಂಬಾ ದೇವಸ್ಥಾನ ಸಮಿತಿ ಕಾರ್ಯದರ್ಶಿ ಹಾಗೂ ರಾಮಣ್ಣ ಶ್ರೇಷ್ಠಿ ಪಾರ್ಕ್ನ ಶ್ರೀ ಸರ್ವಸಿದ್ಧಿ ವಿನಾಯಕ ಸೇವಾ ಸಮಿತಿಯ ಸಾಂಸ್ಕೃತಿಕ ಸಮಿತಿ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
B.Y. Raghavendra ಅಡಿಕೆ ಕೃಷಿಕರ ಹಿತರಕ್ಷಣೆಗೆ ಸದಾ ಸಿದ್ಧ- ಸಂಸದ ಬಿ.ವೈ.ರಾಘವೇಂದ್ರ
B.Y. Raghavendra ಶಿವಮೊಗ್ಗ ಜಿಲ್ಲೆ ಹಾಗೂ ಶಿರಸಿ ಮತ್ತು ಸಿದ್ಧಾಪುರಗಳಲ್ಲಿ ಬೆಳೆದ ಅಡಿಕೆಯನ್ನು ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯ ಪ್ರದೇಶ ಮತ್ತು ನವದೆಹಲಿಯ ಮಾರುಕಟ್ಟೆಗಳಿಗೆ ಅಡಿಕೆ ಸಾಗಿಸುತ್ತಿದ್ದ ಲಾರಿಗಳನ್ನು, ಮಹಾರಾಷ್ಟ್ರ ರಾಜ್ಯದ ಆಹಾರ ಮತ್ತು ಔಷಧ ಆಡಳಿತ (FDA) ಇಲಾಖೆಯು ಸಾಗಾಣಿಕೆ ಮಾರ್ಗದಲ್ಲಿ ವಶಪಡಿಸಿಕೊಂಡಿದೆ. ಬೀಡ್, ನಾಂದೇಡ್, ಔರಂಗಾಬಾದ್, ನಾಗಪುರ, ಧುಳೆ ಮತ್ತು ಹಿಂಗೋಲಿ ಜಿಲ್ಲೆಗಳಲ್ಲಿ ಒಟ್ಟು ಸುಮಾರು 50 ಲಾರಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಶಿವಮೊಗ್ಗ ಜಿಲ್ಲೆ ಹಾಗೂ ಶಿರಸಿ ಮತ್ತು ಸಿದ್ಧಾಪುರ ತಾಲ್ಲೂಕಿನ ಅಡಿಕೆ ಬೆಳೆಗಾರರ ಪ್ರತಿನಿಧಿ ನಿಯೋಗ ಇಂದು ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಭೇಟಿ ಮಾಡಿ, ಸಾವಿರಾರು ರೈತ ಕುಟುಂಬಗಳ ಜೀವನೋಪಾಯಕ್ಕೆ ಸಂಚಕಾರ ತಂದಿರುವ ಗಂಭೀರ ಸಮಸ್ಯೆಯನ್ನು ಗಮನಕ್ಕೆ ತಂದರು.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಸಂಬಂಧಿತ ಅಡಿಕೆಯನ್ನು ಮಹಾರಾಷ್ಟ್ರದಲ್ಲಿ ಎಲ್ಲಿಯೂ ಮಾರಾಟ ಮಾಡಿಲ್ಲ ಅಥವಾ ವಿತರಿಸಿಲ್ಲ. ಈ ಸರಕು ಕೇವಲ ಸಾಗಾಣಿಕೆಯಲ್ಲಿ ಮಾತ್ರ ಇತ್ತು. ಅಷ್ಟೇ ಅಲ್ಲ, ಗುಟ್ಕಾ, ಪಾನ್ ಮಸಾಲಾ ಮತ್ತು ಜರ್ದಾದಂತಹ ನಿಷೇಧಿತ ಪದಾರ್ಥಗಳ ವರ್ಗಕ್ಕೆ ಅಡಿಕೆ ಸೇರುವುದಿಲ್ಲ, ಮಹಾರಾಷ್ಟ್ರದಲ್ಲಿ ಅಡಿಕೆಯ ಮೇಲೆ ಯಾವುದೇ ನಿಷೇಧ ಇಲ್ಲ. ಆದ್ದರಿಂದ, ಈ ವಾಹನಗಳ ವಶಪಡಿಸಿಕೊಳ್ಳುವಿಕೆಗೆ ಕಾನೂನಿನ ಯಾವುದೇ ಆಧಾರ ಇರುವುದಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ನಿಯೋಗ ಸಂಸದರಿಗೆ ಮನವಿ ಸಲ್ಲಿಸಿತು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ: ಸಾವಿರಾರು ಅಡಿಕೆ ಬೆಳೆಗಾರರ ಪ್ರತಿನಿಧಿಗಳು ಮಾಮ್ಕೋಸ್ ಸಂಘಟನೆಯ ನೇತೃತ್ವದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಕೂಡ ಮನವಿ ಸಲ್ಲಿಸಿದರು. ಪರಿಸ್ಥಿತಿಯ ತೀವ್ರತೆಯನ್ನು ಮನಗಂಡ ಯಡಿಯೂರಪ್ಪನವರು ಕೇಂದ್ರ ಸಚಿವ ಶ್ರೀ ಪ್ರಹ್ಲಾದ ಜೋಶಿ ಅವರಿಗೆ ತಕ್ಷಣ ದೂರವಾಣಿ ಕರೆ ಮಾಡಿ, ಅಡಿಕೆ ಬೆಳೆಗಾರರ ಸಂಕಷ್ಟವನ್ನು ವಿವರಿಸಿ ಸ್ಥಳದಲ್ಲಿಯೇ ಸೂಕ್ತ ನೆರವು ನೀಡುವಂತೆ ಒತ್ತಾಯಿಸಿದ್ದಾರೆ.
ಅಡಿಕೆ ಬೆಳೆಗಾರರ ಪರ ನಿಂತ ಸಂಸದ ಬಿ.ವೈ.ರಾಘವೇಂದ್ರ: ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಅವರು ಅಡಿಕೆ ಬೆಳೆಗಾರರ ಈ ಸಂಕಟಕ್ಕೆ ತಕ್ಷಣ ಸ್ಪಂದಿಸಿ, ಅಡಿಕೆ ಬೆಳೆಯು ಈ ಭಾಗದ ರೈತ ಸಮುದಾಯದ ಬೆನ್ನೆಲುಬಾಗಿದ್ದು, ಶಿವಮೊಗ್ಗ, ಶಿರಸಿ ಮತ್ತು ಸಿದ್ಧಾಪುರದ ಸಾವಿರಾರು ರೈತ ಕುಟುಂಬಗಳ ಜೀವನ ಈ ವ್ಯಾಪಾರದ ಮೇಲೆ ಸಂಪೂರ್ಣ ಅವಲಂಬಿತವಾಗಿದೆ. ವಾಹನಗಳ ವಶಪಡಿಸಿಕೊಳ್ಳುವಿಕೆಯಿಂದ ಅವರಿಗೆ ತೀವ್ರ ಆರ್ಥಿಕ ನಷ್ಟ ಉಂಟಾಗುತ್ತಿದೆ ಎಂದು ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡಿಕೆ ಸಾಗಾಣಿಕೆಗೆ ಯಾವುದೇ ಅಡಚಣೆ ಆಗಬಾರದೆಂದು ಈಗಾಗಲೇ ನಿರ್ದೇಶನ ನೀಡಿದ್ದರೂ, ವಾಹನಗಳ ವಶಪಡಿಸಿಕೊಳ್ಳುವಿಕೆ ನಿಂತಿಲ್ಲ ಎಂಬ ಅಂಶವನ್ನು ಸಂಸದ ರಾಘವೇಂದ್ರ ಅವರು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ.
ಬೆಳೆಗಾರರಿಗೆ ಸಂಸದರ ಭರವಸೆ:
B.Y. Raghavendra ವಶಪಡಿಸಿಕೊಂಡ ಎಲ್ಲ ವಾಹನಗಳ ತಕ್ಷಣ ಮತ್ತು ಬೇಷರತ್ತು ಬಿಡುಗಡೆಗಾಗಿ ಕೇಂದ್ರ ಸರ್ಕಾರ ಮಟ್ಟದಲ್ಲಿ ಪ್ರಬಲ ಪ್ರಯತ್ನ.
• ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರೊಂದಿಗೆ ನೇರ ಸಂಪರ್ಕ ಸಾಧಿಸಿ, ಅಡಿಕೆ ಸಾಗಾಣಿಕೆಗೆ ಮುಕ್ತ ಅನುಮತಿಯನ್ನು ಔಪಚಾರಿಕವಾಗಿ ಖಾತ್ರಿಗೊಳಿಸಿ ಜಾರಿಗೆ ತರುವುದು.
ಅಡಿಕೆ ಬೆಳೆಗಾರರ ಹಕ್ಕು ಮತ್ತು ಜೀವನೋಪಾಯ ರಕ್ಷಣೆಗೆ ತಾವು ಸದಾ ಬದ್ಧರಾಗಿದ್ದು, ಸ್ಥಾಯಿ ಪರಿಹಾರ ದೊರೆಯುವವರೆಗೆ ಈ ವಿಷಯವನ್ನು ಅತ್ಯಂತ ತ್ವರಿತ ಗತಿಯಲ್ಲಿ ಮುಂದುವರೆಸುವುದಾಗಿ ಸಂಸದ ರಾಘವೇಂದ್ರ ಅವರು ಅಡಿಕೆ ಬೆಳೆಗಾರರ ನಿಯೋಗಕ್ಕೆ ಭರವಸೆ ನೀಡಿದ್ದಾರೆ.
ಅಡಿಕೆ ಬೆಳೆಗಾರರ ಸಂಘದ ಉಪಾಧ್ಯಕ್ಷರಾದ ಶ್ರೀ ಮಹೇಶ್ ಹುಲ್ಕುಳಿ, ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ ಸರ್ಜಿ, ಮ್ಯಾಮ್ಕೋಸ್ ವ್ಯವಸ್ಥಾಪಕ ನಿರ್ದೇಶಕರು ಮತ್ತು ಜಿಲ್ಲೆಯ ಪ್ರಮುಖ ಅಡಿಕೆ ಬೆಳೆಗಾರರು ಹಾಜರಿದ್ದರು.
DC Shivamogga ಜೂನ್ 21 ನೀಟ್ ಪರೀಕ್ಷೆ ಸುಗಮ ನಡೆಯಲು ಬಿಗಿಕ್ರಮ, ಸಕಲಸಿದ್ಧತೆ : ಪ್ರಭುಲಿಂಗ ಕವಳಿಕಟ್ಟಿ
DC Shivamogga ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ವತಿಯಿಂದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ(ನೀಟ್-ಯುಜಿ 2026) ಯು ನಗರದಲ್ಲಿ ಜೂನ್ 21 ರಂದು ಮಧ್ಯಾಹ್ನ 02 ರಿಂದ ಸಂಜೆ 05.15 ರವರೆಗೆ ನಡೆಯಲಿದ್ದು ಪರೀಕ್ಷೆ ಯಶಸ್ವಿಯಾಗಿ ನಡೆಯಲು ಅಗತ್ಯವಾದ ಸಕಲ ಸಿದ್ದತೆ ಹಾಗೂ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದರು.
ಜಿಲ್ಲಾಡಳಿತ ಕಚೇರಿಯಲ್ಲಿ ನೀಟ್(ಯುಜಿ)-2026 ಪರೀಕ್ಷೆ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ,
ಶಿವಮೊಗ್ಗ ನಗರದ ಒಟ್ಟು 14 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಆಯೋಜಿಸಲಾಗಿದೆ. ಒಟ್ಟು 4832 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು ಪರೀಕ್ಷೆಯನ್ನು ಪಾರದರ್ಶಕವಾಗಿ ಮತ್ತು ಸುಸೂತ್ರವಾಗಿ ನಡೆಸಲು ಜಿಲ್ಲಾಡಳಿತವು ಎಲ್ಲಾ ರೀತಿಯ ಪೂರ್ವಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದರು.
ನಿಷೇಧಾಜ್ಞೆ ಜಾರಿ: ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದAತೆ ಪರೀಕ್ಷಾ ಕೇಂದ್ರಗಳಿಗೆ ಅಗತ್ಯ ಭದ್ರತೆ ಕೈಗೊಳ್ಳುವ ಹಿನ್ನೆಲೆಯಲ್ಲಿ ಮಧ್ಯಾಹ್ನ 1 ರಿಂದ ಸಂಜೆ 6 ಗಂಟೆವರೆಗೆ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023 ರ ಕಲಂ 163 ರನ್ವಯ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗಿದೆ.
ಬಿಗಿ ಭದ್ರತೆ: ಪ್ರತಿ ಕೇಂದ್ರಕ್ಕೆ ಒಬ್ಬರಂತೆ ಡ್ಯೂಟಿ ಮ್ಯಾಜಿಸ್ಟೆçÃಟ್ ರನ್ನು ನೇಮಕ ಮಾಡಲಾಗಿದೆ. ಪರೀಕ್ಷಾ ಅಕ್ರಮ ತಡೆಯಲು ಪೊಲೀಸ್ ಅಧೀಕ್ಷಕರಿಗೆ ಪತ್ರ ಬರೆಯಲಾಗಿದ್ದು, ಸೂಕ್ತ ಭದ್ರತೆ ಒದಗಿಸಲಾಗುವುದು.
ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡು ತರಬೇತಿ ನೀಡಿದ್ದಾರೆ. ಪರೀಕ್ಷಾ ಕಾರ್ಯಕ್ಕೆ ನೇಮಿಸಲ್ಪಟ್ಟಿರುವ ಅಧಿಕಾರಿ ಮತ್ತು ಸಿಬ್ಬಂದಿಗಳು ಪರೀಕ್ಷಾ ಮಾರ್ಗಸೂಚಿಯಂತೆ ಕರ್ತವ್ಯ ನಿರ್ವಹಿಸಲು ಮತ್ತು ಪರೀಕ್ಷಾ ದಿನದಂದು ಸಂಬಂಧಪಟ್ಟ ಪರೀಕ್ಷಾ ಕೇಂದ್ರಗಳಲ್ಲಿ ಬೆಳಿಗ್ಗೆ 9.30 ಕ್ಕೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ತಿಳಿಸಲಾಗಿದೆ ಎಂದರು.
ಪರೀಕ್ಷೆಯ ಅವಧಿಯಲ್ಲಿ ಯಾವುದೇ ಅಡಚಣೆಯಿಲ್ಲದೆ ನಿರಂತರ ವಿದ್ಯುತ್ ಪೂರೈಸಲು ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
DC Shivamogga ಪರೀಕ್ಷಾರ್ಥಿಗಳಿಗೆ ಪರೀಕ್ಷಾ ಕೇಂದ್ರದಲ್ಲಿ ಅಗತ್ಯ ಆಸನ ಮತ್ತು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಸೂಚಿಸಿದ ಅವರು, ಕೇಂದ್ರದೊಳಗೆ ಮೊಬೈಲ್, ಪುಸ್ತಕ, ಬ್ಯಾಗ್, ಪರ್ಸ್, ಎಲೆಕ್ಟ್ರಾನಿಕ್ಸ್ ಉಪಕರಣಗಳು ಹಾಗೂ ಸ್ಮಾರ್ಟ್ ವಾಚ್‌ಗಳು, ಪೆನ್, ಪೆನ್ಸಿಲ್ ಸೇರಿದಂತೆ ಮಾರ್ಗಸೂಚಿಯನ್ವಯ ವಸ್ತುಗಳನ್ನು ತರುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಹಾಗೂ ಪರೀಕ್ಷಾ ಕೇಂದ್ರಕ್ಕೆ ಅನಧಿಕೃತ ವ್ಯಕ್ತಿಗಳ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದ್ದು, ನಿಯೋಜಿತ ಸಿಬ್ಬಂದಿ ಮಾತ್ರ ಹಾಜರಿರಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.
ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರು ಹಾಗೂ ಎನ್‌ಟಿಎ ಸಿಟ್ಟಿಂಗ್ ನೋಡಲ್ ಅಧಿಕಾರಿ ರೇಖಾ ಜೋಷಿ ಮಾತನಾಡಿ ಪರೀಕ್ಷಾ ಕಾರ್ಯ ನಿಯೋಜಿಸಲ್ಪಟ್ಟ ಪರಿವೀಕ್ಷಕರು ಸಮರ್ಪಕವಾಗಿ ಮಾರ್ಗಸೂಚಿಯಂತೆ ತರಬೇತಿ ಹೊಂದಬೇಕು. ಅಭ್ಯರ್ಥಿಗಳು ಯಾವುದೇ ಗೊಂದಲ, ಆತಂಕಕ್ಕೆ ಎಡೆ ಮಾಡದೇ ಸಮಾಧಾನದಿಂದ ಪರೀಕ್ಷೆ ಬರೆಯಲು ಅನುವು ಮಾಡಿಕೊಡಬೇಕು. ವಿಕಲಚೇತನ ಅಭ್ಯರ್ಥಿಗಳಿಗೆ ಒಂದು ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದ್ದು ಒಂದು ಗಂಟೆ ಹೆಚ್ಚಿನ ಸಮಯಾವಕಾಶ ನೀಡಲಾಗಿದೆ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಮಾತನಾಡಿ, ಅಭ್ಯರ್ಥಿಗಳು, ಪರೀಕ್ಷೆ ನಿಯೋಜಿತ ಅಧಿಕಾರಿ, ನೌಕರರು ಪರೀಕ್ಷೆಗೆ ಹಾಜರಾಗಬೇಕಾದ ಸಮಯ, ಅನುಸರಿಸಬೇಕಾದ ಮಾರ್ಗಸೂಚಿಗಳ ಬಗ್ಗೆ ವಿವರಿಸಿದರು.
ಪರೀಕ್ಷೆಗೆ ಹಾಜರಾಗುವ ಎಲ್ಲಾ ಅಭ್ಯರ್ಥಿಗಳು ಈ ಕೆಳಗಿನ ಸೂಚನೆಗಳನ್ನು ಗಮನಿಸಲು ಸೂಚಿಸಲಾಗಿದೆ:
ಪಾರದರ್ಶಕ ನೀರಿನ ಬಾಟಲಿಗಳು: ಎಲ್ಲಾ ಅಭ್ಯರ್ಥಿಗಳು ಪಾರದರ್ಶಕವಾದ ನೀರಿನ ಬಾಟಲಿಗಳನ್ನು ತೆಗೆದುಕೊಂಡು ಹೋಗಬಹುದು.
ಧಾರ್ಮಿಕ ವಸ್ತುಗಳು: ಅಭ್ಯರ್ಥಿಗಳು ತಮ್ಮ ಧಾರ್ಮಿಕ ನಂಬಿಕೆಯ ವಸ್ತುಗಳನ್ನು ಅಥವಾ ಆಭರಣಗಳನ್ನು ಧರಿಸಲು ಅನುಮತಿಯಿದೆ. ಆದರೆ, ತಪಾಸಣೆಗೆ ಅನುಕೂಲವಾಗುವಂತೆ ಪರೀಕ್ಷಾ ಕೇಂದ್ರಕ್ಕೆ ಸಾಕಷ್ಟು ಮುಂಚಿತವಾಗಿಯೇ ವರದಿ ಮಾಡಿಕೊಳ್ಳಬೇಕು.
ಉಡುಪುಗಳು : ಹಗುರವಾದ ಬಟ್ಟೆಗಳನ್ನು ಧರಿಸಲು ಆದ್ಯತೆ ನೀಡಲಾಗುತ್ತದೆ. ಆದಾಗ್ಯೂ, ಅಭ್ಯರ್ಥಿಗಳಿಗೆ ಅಗತ್ಯವೆನಿಸಿದರೆ ಪೂರ್ಣ ತೋಳಿನ ಬಟ್ಟೆಗಳನ್ನು (ಫುಲ್ ಸ್ಲೀವ್ಸ್) ಅಥವಾ ಉಣ್ಣೆಯ ಬಟ್ಟೆಗಳನ್ನು ಧರಿಸಲು ಅನುಮತಿಯಿದೆ. ಆದರೆ, ತಪಾಸಣೆಗೆ ಸಹಕರಿಸಲು ಕೇಂದ್ರಕ್ಕೆ ಸಾಕಷ್ಟು ಮುಂಚಿತವಾಗಿ ತಲುಪಬೇಕು.
ಪಾದರಕ್ಷೆಗಳು: ಚಪ್ಪಲಿಗಳು ಮತ್ತು ಕಡಿಮೆ ಹೀಲ್ಸ್ ಇರುವ ಪಾದರಕ್ಷೆಗಳನ್ನು( ಲೋ ಹೀಲ್ಸ್) ಧರಿಸಲು ಆದ್ಯತೆ ನೀಡಲಾಗುತ್ತದೆ.
ಸಹಾಯವಾಣಿ ಮತ್ತು ಸಂಪರ್ಕ ಮಾಹಿತಿ: NEET (UG)-2026 ಗೆ ಸಂಬAಧಿಸಿದ ಹೆಚ್ಚಿನ ಸ್ಪಷ್ಟೀಕರಣಕ್ಕಾಗಿ, ಅಭ್ಯರ್ಥಿಗಳು ದೂರವಾಣಿ ಸಂಖ್ಯೆ: 011-40759000 / 011-69227700 ಅಥವಾ ಇಮೇಲ್ neetug2026@nta.ac.in ಮೂಲಕ ಸಂಪರ್ಕಿಸಬಹುದು.
ಪರೀಕ್ಷೆಯ ಸುಗಮ ನಿರ್ವಹಣೆಗಾಗಿ ಅಭ್ಯರ್ಥಿಗಳು ಮೇಲಿನ ಸಲಹೆಗಳನ್ನು ಪಾಲಿಸಲು ಮತ್ತು ಪರೀಕ್ಷಾ ಸಿಬ್ಬಂದಿಯೊAದಿಗೆ ಸಹಕರಿಸಬೇಕೆಂದು ವಿನಂತಿಸಿದರು.
ಸಭೆಯಲ್ಲಿ ಡಿಡಿಪಿಯು, ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಐಎಸ್‌ಎಫ್ ಅಧಿಕಾರಿ, ಪರೀಕ್ಷೆಗೆ ನಿಯೋಜಿಸಲಾದ ಅಧಿಕಾರಿಗಳು ಹಾಜರಿದ್ದರು.
B.Y. Raghavendra ಜೂನ್ 19. ಸಂಜೆ 4 ಗಂಟೆಗೆ ವಿಕಸಿತ್ ಭಾರತ್ ರೋಜ್ ಗಾರ್ ಪ್ರೋತ್ಸಾಹ ಧನ ಬಿಡುಗಡೆ ಕಾರ್ಯಕ್ರಮದ ನೇರಪ್ರಸಾರ
B.Y. Raghavendra ಕಾರ್ಮಿಕ ಭವಿಷ್ಯನಿಧಿ ಸಂಘಟನೆ, ಶಿವಮೊಗ್ಗ ಪ್ರಾದೇಶಿಕ ಕಚೇರಿ ಮತ್ತು ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಜೂ.19 ರಂದು ಸಂಜೆ 4.00ಕ್ಕೆ ನಗರದ ಪಾರ್ಕ್ ಬಡಾವಣೆಯಲ್ಲಿರುವ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಪ್ರಧಾನ ಮಂತ್ರಿ ವಿಕಸಿತ್ ಭಾರತ್ ರೋಜ್‌ಗಾರ್ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ಪ್ರೋತ್ಸಾಹಧನ ಬಿಡುಗಡೆ ಕಾರ್ಯಕ್ರಮದ ನೇರ ಪ್ರಸಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
B.Y. Raghavendra ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಸದ ಬಿ.ವೈ. ರಾಘವೇಂದ್ರರವರು ಭಾಗವಹಿಸಲಿದ್ದಾರೆ. ಶಾಸಕ ಎಸ್.ಎನ್. ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರುಗಳಾದ ಅರುಣ್ ಡಿ.ಎಸ್., ಡಾ. ಧನಂಜಯ ಸರ್ಜಿ, ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಉದ್ಯಮಿಗಳಾದ ಎಸ್. ರುದ್ರೆಗೌಡ, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಮಂಡಳಿ ಅಧ್ಯಕ್ಷ ಬಿ.ಗೋಪಿನಾಥ ಹಾಗೂ ಜಿಲ್ಲಾ ಕಾರ್ಮಿಕ ಅಧಿಕಾರಿ ವೇಣುಗೋಪಾಲ ಇವರುಗಳು ಗೌರವ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.
Klive Special Article ಮುನ್ನೂರು ಹಲಸಿನ ತಳಿಗಳ ಸಂರಕ್ಷಣೆ: ಕೃಷಿಕ ನರೇಂದ್ರರ ದೇಶಮಟ್ಟದಲ್ಲಿ ಗಮನ ಸೆಳೆದ ಸಾಧನೆ ಲೇ: ಡಾ.ಮೋಹನ್ ತಲಕಾಲುಕೊಪ್ಪ
- ಡಾ. ಮೋಹನ್ ತಲಕಾಲುಕೊಪ್ಪ
Klive Special Article ಯಾವ ಅನುದಾನದ ಸಹಾಯವಿಲ್ಲದೆ ತನ್ನ ನಾಲ್ಕೂವರೆ ಎಕರೆ ಜಾಗದಲ್ಲಿ ಮುನ್ನೂರು ಹಲಸಿನ ತಳಿಗಳನ್ನು ಬೆಳೆಸಿ ಸಂರಕ್ಷಿಸುತ್ತಿರುವ ಕೃಷಿಕರು ನಿಮಗೆ ಗೊತ್ತೇ? ಶಿವಮೊಗ್ಗ ಜಿಲ್ಲೆಯ ಸಾಗರ ಸಮೀಪದ ಬೇಳೂರಿಗೆ ಬನ್ನಿ. ಇಲ್ಲಿನ ಕೃಷಿಕ ಬಿ. ಟಿ. ನರೇಂದ್ರರ ಸಾಧನೆ ದೇಶಮಟ್ಟದಲ್ಲಿ ಗುರುತಿಸಲೇಬೇಕಾದ ಶ್ಲಾಘನೀಯ ಕೆಲಸ! ಇಷ್ಟು ತಳಿಗಳನ್ನು ಸ್ವಂತ ಆಸಕ್ತಿಯಿಂದ ಬೆಳೆಸಿದ ಇನ್ನೊಬ್ಬ ಕೃಷಿಕರು ದೇಶದಲ್ಲಿ ಇದ್ದಾರೋ ಇಲ್ಲವೋ ಗೊತ್ತಿಲ್ಲ. ಸೀದಾ ಸಾದಾ ಉಡುಪಿನ, ಸರಳ ಕೃಷಿಕ. ಸಾಧಕನ ಹಮ್ಮುಬಿಮ್ಮು ಯಾವುದೂ ಇಲ್ಲದ ಹಸನ್ಮುಖಿ.
ಸಂಜೆ ನಾಲ್ಕೂವರೆ. ಅವರ ಮನೆಗೆ ಹೋದಾಗ ಅಂಗಳದ ಬದಿಯಲ್ಲಿ ಹಲಸಿನ ಗಿಡಗಳಿಗೆ ಕಸಿ ಕಟ್ಟುತ್ತಿದ್ದ ನರೇಂದ್ರರು (73) ಕಣ್ಣಿಗೆ ಬಿದ್ದರು. ” ಬನ್ನಿ, ಬನ್ನಿ, ಒಂದೆರಡು ಹಲಸಿನ ಗಿಡಗಳಿಗೆ ಕಸಿ ಕಟ್ಟಿ ಬರುತ್ತೇನೆ” ಎಂದರು. ಈ ವಯಸ್ಸಿನಲ್ಲೂ ಅದೆಂಥಾ ಉತ್ಸಾಹ! ನಾನವರನ್ನು ನೋಡಿದ್ದು ಇದೇ ಮೊದಲ ಬಾರಿ. ಮನೆಯಿಂದ ಅನತಿದೂರದಲ್ಲಿರುವ ಅವರ ತೋಟಕ್ಕೆ ಕರೆದುಕೊಂಡು ಹೋದಾಗ ಅಲ್ಲಿ ಹಲವಾರು ಹಲಸಿನ ಮರಗಳು ಕಂಡವು. ಕೆಲವುದರಲ್ಲಿ ಹಣ್ಣುಗಳಿದ್ದವು. ಹಾಗೇ ತೋರಿಸುತ್ತಾ ತನ್ನ ಹಲಸಿನಗಾಥೆಯನ್ನು ಬಿಚ್ಚಿಟ್ಟರು.

ಹಲಸಿನ ತಳಿಗಳ ತೋಪು:
“ಸೊಪ್ಪಿನ ಬೆಟ್ಟದಲ್ಲಿ ಸಿಗುವ ಕಾಡುಮರಗಳ ಸೊಪ್ಪು ಅಡಿಕೆ ತೋಟಕ್ಕೆ ಸಾಕಾಗುತ್ತಿರಲಿಲ್ಲ. ಸೊಪ್ಪಿಗಾಗಿ ಸೂಕ್ತ ಮರದ ಹುಡುಕಾಟದಲ್ಲಿದ್ದೆ. ನನ್ನ ಪತ್ನಿಯ ಸಲಹೆ ” ಹಲಸು ಉತ್ತಮ ಆಯ್ಕೆ”. ಮೊದಲಿಗೆ ಉತ್ತಮ ತಳಿಯ ಬೀಜಗಳನ್ನು ಸಂಗ್ರಹಿಸಿ ಗಿಡ ಎಬ್ಬಿಸಿದೆ. ದುರದೃಷ್ಟವಶಾತ್ ಎದ್ದ ನೂರಕ್ಕೆ ತೊಂಭತ್ತೈದು ಗಿಡಗಳನ್ನು ಮೊಲಗಳು ತಿಂದು ಹಾಳುಮಾಡಿದವು . ನಂತರ ಕಸಿ ಗಿಡಗಳನ್ನು ನೆಡುವ ಬಗ್ಗೆ ಯೋಚಿಸಿದೆ. ಈ ಯೋಚನೆಯೊಟ್ಟಿಗೆ ಅತ್ಯುತ್ತಮ ತಳಿಗಳನ್ನು ನೆಡಬೇಕೆಂಬ ತುಡಿತವುಂಟಾಯಿತು. ನಂತರ ಸ್ಥಳೀಯ ತಳಿಗಳ ಜೊತೆಗೆ ಕರ್ನಾಟಕ ಹಾಗೂ ದೇಶ-ವಿದೇಶಗಳ ಅತ್ಯುತ್ತಮ ತಳಿಗಳನ್ನು ಸಂಗ್ರಹಿಸಿ ನೆಡುತ್ತಾ, ರಕ್ಷಿಸುತ್ತಾ ಬಂದೆ. ಉಡುಪಿಯ ಕಸಿತಜ್ಞ ಗುರುರಾಜ ಬಾಳ್ತಿಲ್ಲಾಯ ಹಲವು ತಳಿಗಳನ್ನು ಕೊಟ್ಟಿದ್ದಾರೆ. ನನ್ನ ಸಂಗ್ರಹದಲ್ಲಿ ಮಲೇಷಿಯಾ, ಥಾಯ್ಲೆಂಡ್ ಮೂಲದ ತಳಿಗಳೂ ಸೇರಿದಂತೆ ಐದಾರು ದೇಶಗಳ ತಳಿಗಳಿವೆ” .
ನರೇಂದ್ರರ ತೋಟದಲ್ಲಿ ಪ್ರಸ್ತುತ 300 ಹಲಸು ತಳಿಗಳ 680 ಗಿಡಗಳಿವೆ. ಹದಿನೈದು ಅಡಿಗೊಂದರಂತೆ ತ್ರಿಕೋನ ವಿನ್ಯಾಸದಲ್ಲಿ ಹಲಸಿನ ಗಿಡಗಳನ್ನು ಬೆಳೆಸಿದ್ದಾರೆ. “ಕಸಿ ಗಿಡವಾದ್ದರಿಂದ ಈ ಅಂತರ ಸಾಕಾಗಬಹುದು ಎಂದು ನನ್ನ ಆಲೋಚನೆ. ಬೀಜದಿಂದ ತಯಾರಿಸಿದ ಗಿಡಗಳಿಗೆ ಮೂವತ್ತು ಅಡಿ ಬೇಕೇ ಬೇಕು”. ಮರಗಳಿಗೆ ಸಾವಯವ ಗೊಬ್ಬರದ ಪೂರೈಕೆ. ಕಾಲಕಾಲಕ್ಕೆ ಪ್ರೂನಿಂಗ್ ಮಾಡುತ್ತಾರೆ. ಈ ಎಲ್ಲಾ ತಳಿಗಳು ಇರುವ ಸ್ಥಳದ ಮ್ಯಾಪ್ ಹಾಗೂ ಪ್ರಾಥಮಿಕ ದಾಖಲಾತಿಯನ್ನು ಮಾಡಿಟ್ಟಿದ್ದಾರೆ. ಅಡಿಕೆ ಪ್ರಮುಖ ಬೆಳೆಯಾಗಿರುವ ಈ ಪ್ರಾಂತ್ಯದಲ್ಲಿ, ಅದೂ ಸ್ವಂತ ಜಾಗದಲ್ಲಿ ಅಡಿಕೆ ಬದಲಾಗಿ ಹಲಸು ಬೆಳಸಿರುವುದು ನರೇಂದ್ರರ ಹಲಸು ಪ್ರೀತಿಯ ದ್ಯೋತಕ!!
ಕಳೆದ ಹತ್ತು ವರ್ಷಗಳಿಂದ ಹಲಸಿನ ತಳಿಗಳ ಸಂಗ್ರಹ ಹಾಗೂ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡ ನರೇಂದ್ರರು ಈವರೆಗೆ ಸಿಕ್ಕ ಹಣ್ಣುಗಳನ್ನು ಹಂಚುವುದರಲ್ಲೇ ಸಂತೋಷ ಹೊಂದಿದ್ದಾರೆ. ಕಸಿ ಕುಡಿಗಳನ್ನೂ ಕೊಟ್ಟಿದ್ದಾರೆ. “ಮುಂದಿನ ದಿನಗಳಲ್ಲಿ ಹಣ್ಣಿನ ಮಾರಾಟ ಮತ್ತು ಮೌಲ್ಯವರ್ಧನೆ ಮಾಡುವ ಯೋಚನೆ ಇದೆ”. ನಿಮ್ಮ ಈವರೆಗಿನ ಅನುಭವದ ಪ್ರಕಾರ ಮಲೆನಾಡಿಗೆ ಸೂಕ್ತವಾಗುವ ಟಾಪ್ ಹಲಸಿನ ತಳಿಗಳು? “ಮಂಕಾಳೆ ರೆಡ್, ರುದ್ರಾಕ್ಷಿ ರೆಡ್, ಬೆಳವಾಯಿ ತಳಿಗಳು ಬಹಳ ಚೆನ್ನಾಗಿವೆ. ಬಯಲು ಸೀಮೆಯ ತಳಿಗಳಾದ ಸಿದ್ದು, ಶಂಕರ, ತೂಬುಗೆರೆ ತಳಿಗಳು ಇಲ್ಲಿ ಆ ರುಚಿ ಉಳಿಸಿಕೊಳ್ಳುವುದಿಲ್ಲ”. ಇವರಲ್ಲಿರುವ ಎಲ್ಲಾ ತಳಿಗಳು ಗಟ್ಟಿ ತೊಳೆಯ “ಬಕ್ಕೆ” ವಿಧದವು. ಕೆಲವು ಹಲಸಿನ ತಳಿಗಳು ಇನ್ನೂ ಫಲ ಕೊಡಲು ಶುರು ಮಾಡಿಲ್ಲ.
“ಉತ್ತಮ ಫಲಿತಾಂಶ ಕೊಡದ ತಳಿಗಳನ್ನು ಕತ್ತರಿಸಿ ಒಳ್ಳೆಯ ತಳಿಗಳನ್ನು ಅವಕ್ಕೆ ಕಸಿ ಮಾಡುವ ಆಲೋಚನೆ ಇದೆ. ಜೊತೆಗೆ ಸತ್ತು ಹೋದ ಗಿಡಗಳ ಜಾಗ ಮತ್ತು ಇನ್ನಿರುವ ಖಾಲಿ ಜಾಗದಲ್ಲಿ ಇನ್ನಷ್ಟು ಹಲಸಿನ ತಳಿಗಳನ್ನು ನೆಡಬೇಕು.” ಮುಂದಿನ ಯೋಜನೆಗಳನ್ನು ಖುಷಿಯಿಂದ ವಿವರಿಸುತ್ತಾರೆ ನರೇಂದ್ರ. ಕೌಟುಂಬಿಕ ಕಾರಣಗಳಿಂದ ಅವರಿಗೆ ಕಳೆದ ನಾಲ್ಕು ವರ್ಷಗಳಲ್ಲಿ ಹೆಚ್ಚಿನ ಗಮನ ಹರಿಸಲು ಆಗಿರಲಿಲ್ಲ. ಹೊಸ ಹುರುಪಿನೊಂದಿಗೆ ಮತ್ತೆ ಶುರು ಮಾಡಿದ್ದಾರೆ. “ತೋಟದ ಸುತ್ತ ಹನ್ನೆರಡು ಅಡಿ ಎತ್ತರದ ಬೇಲಿ ಇದೆ. ಆದರೆ ಅದನ್ನೂ ಹಾರಿಕೊಂಡು ಬಂದು ಜಿಂಕೆಗಳು ಹಲಸಿನ ಮಿಡಿ, ಎಲೆಗಳನ್ನು ತಿಂದು ಕಾಟ ಕೊಡುತ್ತವೆ. ಹಾಗಾಗಿ ಇನ್ನಷ್ಟು ಸುರಕ್ಷಿತ ಬೇಲಿ ಅತ್ಯಗತ್ಯ”.
ತಳಿಗಳ ಅನನ್ಯ ದಾಖಲಾತಿ:
Klive Special Article ” ಹಲಸಿನ ತಳಿಗಳ ಬಗ್ಗೆ ಆಸಕ್ತಿ ಮೂಡುತ್ತಾ ಹೋದಂತೆ ತೋಟಕ್ಕೆ ಬೇಕಾದ ಸೊಪ್ಪಿನ ವಿಚಾರ ಹಿನ್ನೆಲೆಗೆ ಸರಿಯಿತು !” ನಕ್ಕು ಮಾತಾಡುತ್ತಲೇ ನರೇಂದ್ರರು ಅಲ್ಲೇ ಇದ್ದ “ಲಾಲ್ ಬಾಗ್ ಮಧುರ” ತಳಿಯ ಹಲಸು ಹಣ್ಣನ್ನು ಕೊಯ್ದರು. ಕೊಯ್ಯಲು ಬಳಸಿದ ಸಣ್ಣ ಕತ್ತಿ ಹಾಗೂ ಕಾಯಿಯನ್ನು ಸುಲಭವಾಗಿ ಕೊಂಡೊಯ್ಯಲು ಮಾಡಿದ ರಚನೆ ನನ್ನ ಗಮನ ಸೆಳೆಯಿತು. (ಚಿತ್ರ ನೋಡಿ). ನಂತರ ಮನೆಗೆ ಬಂದು ತಮ್ಮ ದಾಖಲಾತಿಯನ್ನು ಉತ್ಸಾಹದಿಂದ ತೋರಿಸಿದರು.
ಕಾಯಿಯಿಂದ ಹಣ್ಣಾಗುವವರೆಗೆ ಸಿಪ್ಪೆ ಹೊರತುಪಡಿಸಿ ಎಲ್ಲಾ ಭಾಗಗಳನ್ನು ಬಳಸಲು ಸಾಧ್ಯವಿರುವ “ತರಕಾರಿ ಹಲಸು”, ಡೆಂಗ್ ಸೂರ್ಯ, ವಿಯಟ್ನಾಮ್ ಅರ್ಲಿ, ಗಂಲೆಸ್, ಶ್ರೀವಿಜಯ, ಸದಾನಂದ, ಸರ್ವಋತು, ಶೃಂಗೇರಿ ರೆಡ್, ಸಿಂಗಾಪುರ್ ರೆಡ್, ಉದುರು ಬಕ್ಕೆ, ಎಲೆ ಬಕ್ಕೆ, ಎಳ್ಳಾರೆ ಬಕ್ಕೆ, ತುಷಾರ, ಏಲಕ್ಕಿ ಹಲಸು, ನೀಲಿ ಮಂಗಳ, ಸೀಡ್ ಲೆಸ್ ಹಲಸು, ಶ್ರಾವಣ ಬಕ್ಕೆ, ಸಂಪಿಗೆ ಬಕ್ಕೆ, ಮಾರ್ನವಮಿ ಬಕ್ಕೆ, ನೀಚಡಿ ರೆಡ್, ಭೀಮನೇರಿ ರೆಡ್, ಕೊಟ್ಟಿಗೆ ಬಕ್ಕೆ ಜೇನು ಬಕ್ಕೆ, ಓಹ್…… ಇವರಲ್ಲಿರುವ 300 ತಳಿಗಳಲ್ಲಿ ಕೆಲವು. ವರ್ಗೀಕರಣ ಮಾಡಿದರೆ ಗುಜ್ಜೆ(ಎಳೆ ಹಲಸು), ಬೇಳೆ ಚೆಕ್ಕೆ,(ಎಳೆ ಹಲಸಿನ ಮುಂದಿನ ಹಂತ), ಕಾಯಿ ಹಲಸು, ಹಣ್ಣು, ಚಿಪ್ಸಿಗೆ ಸೂಕ್ತವಾಗುವ ತಳಿಗಳು, ಬೀಜ ತೆಗೆದು ಇಡೀ ತೊಳೆಯನ್ನು ಚಿಪ್ಸ್ ಮಾಡುವ ತಳಿ ಇತ್ಯಾದಿ ಇಲ್ಲಿವೆ.
ಹಲಸಿನ ತೊಳೆಯ ಮಾಲೆ!
” ನನಗೆ ಅರ್ಧ- ಮುಕ್ಕಾಲು ಘಂಟೆ ಸಮಯ ಕೊಟ್ಟರೆ ಒಂದೂ ತೊಳೆ ಹಾಳಾಗದಂತೆ ಹಲಸನ್ನು ಕತ್ತರಿಸಿ ಮಾಲೆ ಮಾಡಿ ತೋರಿಸುವೆ ” ಎಂದ ನರೇಂದ್ರರು ನಾನು ಗೆಳೆಯ ಬೇಳೂರು ವಿನಾಯಕ್ ರಾವ್ ಅವರ ಮನೆಗೆ ಹೋಗಿ ಬರುವುದರ ಒಳಗೆ ತೋಟದಿಂದ ತಂದ ಲಾಲ್ ಬಾಗ್ ಮಧುರ ತಳಿಯ ಹಲಸಿನ ಮಾಲೆಯನ್ನು ಮಾಡಿಟ್ಟಿದ್ದರು. ಸುಮಾರು ಇಪ್ಪತ್ತೈದು ಅಡಿ ಉದ್ದಕ್ಕಿದ್ದ ಮಾಲೆಯಲ್ಲಿ ಒಂದು ತೊಳೆಯೂ ಹಾಳಾಗಿರಲಿಲ್ಲ. ನಾನು ಈವರೆಗೆ ಈ ರೀತಿ ಹಲಸು ಕತ್ತರಿಸುವುದನ್ನು ನೋಡಿರಲಿಲ್ಲ. (ಚಿತ್ರ ಮತ್ತು ವೀಡಿಯೋ ನೋಡಿ). ಇದು ವಿಶೇಷವಾದ ಕೌಶಲ್ಯ ಹಾಗೂ ಹಲಸು ಮೇಳಗಳಲ್ಲಿ ಜನರನ್ನು (ವಿಶೇಷವಾಗಿ ಮಕ್ಕಳನ್ನು) ಸೆಳೆಯಲು ಅಲಂಕಾರವಾಗಿ ಒದಗುತ್ತದೆ. ಅವರು ಮಾತಾಡುತ್ತಾ ಹೇಳಿದ್ದು “ಹಲಸನ್ನು ಕತ್ತರಿಸದೆ ಮೇಲಿನ ಮುಳ್ಳುಗಳ ರಚನೆಯನ್ನು ಗಮನಿಸಿ ಒಳಗಿರುವ ತೊಳೆಗಳ ಸಂಖ್ಯೆಯನ್ನು ನಿರ್ಧರಿಸಲು ಸಾಧ್ಯ”.
ಸಾಗಬೇಕಾದ ದಾರಿ:
ಕೃಷಿ ವಿಶ್ವವಿದ್ಯಾಲಯಗಳು, ಸಂಶೋಧನಾ ಕೇಂದ್ರಗಳು ಮಾಡಬೇಕಾದ ಸಂಗ್ರಹ ಮತ್ತು ಸಂರಕ್ಷಣೆಯ ಕೆಲಸವನ್ನು ಇಷ್ಟು ಆಸಕ್ತಿಯಿಂದ ಮಾಡುತ್ತಿರುವ ನರೇಂದ್ರರನ್ನು ಕನಿಷ್ಠ ಗುರುತಿಸುವ ಕೆಲಸವಾದರೂ ಆಗಬೇಕಾಗಿತ್ತು. ಸಸ್ಯ ತಳಿ ಸಂರಕ್ಷಣೆ ಮತ್ತು ರೈತ ಹಕ್ಕುಗಳ ಪ್ರಾಧಿಕಾರ, ನವದೆಹಲಿಯ ” ಪ್ಲಾಂಟ್ ಜಿನೋಮ್ ಸೇವಿಯರ್” (ಸಸ್ಯ ತಳಿ ಸಂರಕ್ಷಕ) ಪುರಸ್ಕಾರಕ್ಕೆ ಖಂಡಿತಾ ಇವರಿಗೆ ಅರ್ಹತೆ ಇದೆ. ಆದರೆ ಪ್ರಚಾರದ ಹಿಂದೆ ಬೀಳದ ಅವರಿಗೆ ಗೌರವ/ಪುರಸ್ಕಾರ ಸಿಗದ ಕುರಿತು ಯಾವುದೇ ವಿಷಾದವಿದ್ದ ಹಾಗೆ ಕಾಣಲಿಲ್ಲ!! ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ಇವರ ಸಂಗ್ರಹವನ್ನು ತಳಿ ವಿಜ್ಞಾನಿಗಳು ” ಹಲಸು ತಳಿ ವೈವಿಧ್ಯದ ಸಂಗ್ರಹಣಾ ತಾಕು” ಎಂದು ಗುರುತಿಸಿ ಅದರ ನಿರ್ವಹಣೆಗೆ ಸೂಕ್ತ ಅನುದಾನ ಕೊಡುವ ಅಗತ್ಯವಿದೆ. ಜೊತೆಗೆ ಎಲ್ಲ ತಳಿಗಳಿಗೆ ಸಮರ್ಪಕವಾದ QR ಕೋಡ್ ಲೇಬಲ್ ಗಳನ್ನು ಹಾಕಬೇಕು. ಜೊತೆಗೆ ಡಿಜಿಟಲ್ ರೂಪಕ್ಕೆ ಇವರ ದಾಖಲಾತಿಯನ್ನು ವ್ಯವಸ್ಥಿತವಾಗಿ ತರುವ ತುರ್ತಿದೆ. ಆಸಕ್ತರು, ಕೃಷಿಕರು, ವಿದ್ಯಾರ್ಥಿಗಳು, ಸಂಶೋಧಕರು ಈ ಅಮೂಲ್ಯ ಪ್ರಯತ್ನವನ್ನು ನೋಡಿ ತಿಳಿಯಬಹುದು. ಈ ತಳಿವೈವಿಧ್ಯದ “ಮೂಲದ್ರವ್ಯ”ವನ್ನು ಬಳಸಿಕೊಂಡು ಹೊಸ ತಳಿಗಳ ಅಭಿವೃದ್ಧಿಯನ್ನು ವಿಜ್ಞಾನಿಗಳು ಕೈಗೊಳ್ಳಬಹುದು. ಹಲಸಿನ ಸಂಸ್ಕರಣೆ, ಹೊಸ ಉತ್ಪನ್ನ ತಯಾರಿ, ಡಿಎನ್ ಎ ಅಧ್ಯಯನ ಇತ್ಯಾದಿಗಳನ್ನು ಮಾಡಬಹುದು. ಬಹಳ ಹಿಂದೆ ಬಿದ್ದಿರುವ ನಮ್ಮಲ್ಲಿನ ಹಲಸಿನ ಕುರಿತಾದ ಸಂಶೋಧನೆಗೆ ಈ ರೀತಿಯ ತಾಕುಗಳು ಬಹಳ ಉಪಯುಕ್ತ. ಎಲ್ಲಕ್ಕಿಂತ ಹೆಚ್ಚಾಗಿ ನರೇಂದ್ರರ ಮಸ್ತಕದಲ್ಲಿರುವ ಹಲಸು ಕುರಿತ ಅತ್ಯಪೂರ್ವ ಅನುಭವಗಳನ್ನು ದಾಖಲಾತಿ ಮಾಡಿ ಸರಿಯಾಗಿ ಉಪಯೋಗಿಸಿದರೆ ಸಮುದಾಯದ ಅಭಿವೃದ್ಧಿಗೆ ಗಣನೀಯ ಕೊಡುಗೆಯಾಗುತ್ತದೆ.
ಗ್ರಾಮೀಣ ಭಾರತ ತನ್ನ ಒಡಲೊಳಗೆ ಅದೆಷ್ಟು ಅಚ್ಚರಿಗಳನ್ನು ಇಟ್ಟುಕೊಂಡಿದೆಯೋ? ಸರಿಯಾಗಿ ಹುಡುಕಿದರೆ ನಮ್ಮ ನಡುವೆಯೇ ಇಂಥಾ ಅನನ್ಯ ಸಾಧಕರು, ಅನರ್ಘ್ಯ ರತ್ನಗಳು ಸಿಗುವುದು ಖಾತ್ರಿ.
( ತಮ್ಮ ತೋಟದ ಒಂದೊಂದು ಅಡಿಕೆ ಮರದ ಇಳುವರಿ ಹಾಗೂ ಅಡಿಕೆಯ ಗುಣಮಟ್ಟದ ದಾಖಲಾತಿಯಲ್ಲೂ ನರೇಂದ್ರರದು ಅದ್ವೀತಿಯ ಸಾಧನೆ. ಅದನ್ನು ಈ ಲೇಖನದಲ್ಲಿ ಸೇರಿಸಿಲ್ಲ; ಬಹುತೇಕರಿಗೆ ಅಪ್ಪೆಮಿಡಿಯ ಅನನ್ಯ ತಳಿಗಳ ಸಂರಕ್ಷಕ ದಿ. ಬೇಳೂರು ಸುಬ್ಬಣ್ಣ ಪರಿಚಿತರು. ಅವರದೇ ಊರಿನವರು ನರೇಂದ್ರ)
ಫೋಟೋ ಮತ್ತು ವೀಡಿಯೊ: ಡಾ. ಮೋಹನ್ ತಲಕಾಲುಕೊಪ್ಪ
D.K. Shivakumar ರಾಜ್ಯದ ಹಿತಕ್ಕೆ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪಕ್ಷಾತೀತ ಬೆಂಬಲ- ಸೀಎಂ ಡಿ.ಕೆ.ಶಿವಕುಮಾರ್
D.K. Shivakumar ವಿಧಾನಸಭೆಯಿಂದ ವಿಧಾನ ಪರಿಷತ್ ಗೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಮ್ಮ ಕಾಂಗ್ರೆಸ್ ಅಭ್ಯರ್ಥಿಗಳಾದ ಶ್ರೀ ಬಿ.ಕೆ. ಹರಿಪ್ರಸಾದ್, ಶ್ರೀ ಮಳವಳ್ಳಿ ಶಿವಣ್ಣ, ಶ್ರೀ ಪಿ.ವಿ. ಮೋಹನ್, ಶ್ರೀ ವಿನಯ್ ಕಾರ್ತಿಕ್ ಹಾಗೂ ಶ್ರೀ ತಿಪ್ಪಣ್ಣಪ್ಪ ಕಮಕನೂರ ಅವರನ್ನು ವಿಧಾನಸೌಧದಲ್ಲಿ ಅಭಿನಂದಿಸಿ, ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಉಪಸ್ಥಿತರಿದ್ದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಸರ್ಕಾರಕ್ಕೆ ಶಾಸಕರ ಬೆಂಬಲ ನೋಡಿ ನನಗೆ ಆಶ್ಚರ್ಯವಾಗಿದೆ. ಇದು ನಮ್ಮ ಸರ್ಕಾರಕ್ಕೆ ಮಾತ್ರ ನೀಡಿರುವ ಬೆಂಬಲವಲ್ಲ. ರಾಜ್ಯದ ಜನತೆಯ ಹಿತಕ್ಕಾಗಿ ನಿಮ್ಮ ಜೊತೆ ಇದ್ದೇವೆ ಎಂದು ನೀಡಿರುವ ಬೆಂಬಲ ಇದಾಗಿದೆ.
ನಾವು ಯಾವ ಹೆಜ್ಜೆಯನ್ನಿಟ್ಟು ಮುಂದುವರಿಯುತ್ತಿದ್ದೇವೆಯೋ ಅದಕ್ಕೆ ನಾವೂ ಜೊತೆಗಿದ್ದೇವೆ ಎಂದು ಪಕ್ಷಾತೀತವಾಗಿ ಬೆಂಬಲ ನೀಡಿದ್ದಾರೆ. ಎಂದು ಪಕ್ಷದ ಗೆಲುವಿನ ಬಗ್ಗೆ ಹೇಳಿದರು.
ನಮ್ಮ ಪಕ್ಷದ ಶಾಸಕರೂ ಒಗ್ಗಟ್ಟಾಗಿ ಬೆಂಬಲಿಸಿದ್ದಾರೆ. ನಮಗೆ ಹೆಚ್ಚಿನ ಮತ ನೀಡಿದ ಬೇರೆ ಬೇರೆ ಪಕ್ಷದ ವಿಶ್ವಾಸವನ್ನು ನಾವು ಉಳಿಸಿಕೊಳ್ಳುತ್ತೇವೆ. ನೀವು ನಮಗೆ ನೀಡಿದ ವಿಶ್ವಾಸ ಜನರಿಗೆ ನೀಡಿದ ಶಕ್ತಿ.
ನಮ್ಮ ಪಕ್ಷದ ಶಾಸಕರ ಒಂದು ಮತವೂ ತಿರಸ್ಕೃತವಾಗಬಾರದು ಎಂದು ತರಬೇತಿ ನೀಡಲಾಗಿತ್ತು. ಇದಕ್ಕೆ ಸಹಕರಿಸಿದ ಎಲ್ಲಾ ಪದಾಧಿಕಾರಿಗಳಿಗೆ ನಾನು ವಿಶೇಷವಾಗಿ ಧನ್ಯವಾದ ಹೇಳುತ್ತೇನೆ. ಇದಕ್ಕೆ ದುಡಿದಂತಹ ಪಕ್ಷದ ಎಲ್ಲಾ ಶಾಸಕರು, ನಾಯಕರು, ಎಐಸಿಸಿ ಪ್ರಧಾನ ಕಾರ್ಯದರ್ಶಿಯವರಾದ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಹಾಗೂ ಇತರೇ ಕಾರ್ಯದರ್ಶಿಗಳನ್ನು ನಾನು ಅಭಿನಂದಿಸುತ್ತೇನೆ.
D.K. Shivakumar ನಮ್ಮ ಪಕ್ಷದಿಂದ ಐದು ಅಭ್ಯರ್ಥಿಗಳು ನಿಂತಿದ್ದರು. ನಮ್ಮ ಶಾಸಕರ ಸಂಖ್ಯಾಬಲ ಎಷ್ಟಿತ್ತು ಎಂಬುದು ಮಾಧ್ಯಮಗಳಿಗೆ ತಿಳಿದಿತ್ತು. ಐದು ಜನ ಗೆಲ್ಲುತ್ತಾರೆ ಎನ್ನುವ ವಿಶ್ವಾಸವಿತ್ತು – ಅವರು ಗೆದ್ದಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ .ಶಿವಕುಮಾರ್ ಜಾಲತಾಣದಲ್ಲಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ.
