Thursday, August 6, 2026
Thursday, August 6, 2026

ಜೂನ್ 20 “ತಿತ್ತಿತೈ” ತಂಡದಿಂದ ಬೆಂಗಳೂರಿನಲ್ಲಿ ಭವ್ಯ ಯಕ್ಷಗಾನ ಪ್ರದರ್ಶನ

Date:

ಬೆಂಗಳೂರಿನ ಯಕ್ಷಗಾನ ಕಲಾಭಿಮಾನಿಗಳಿಗೆ ಇಲ್ಲಿದೆ ಒಂದು ಅದ್ಭುತ ಸುದ್ಧಿ! ಪ್ರತಿವರ್ಷದಂತೆ ಈ ಬಾರಿಯೂ ‘ತಿತ್ತಿತೈ’ ತಂಡವು ಯಕ್ಷಗಾನದ ಮೇರು ಕಲಾವಿದರನ್ನೊಳಗೊಂಡ ಭವ್ಯ ಯಕ್ಷಗಾನ ಪ್ರದರ್ಶನವನ್ನು ಹಮ್ಮಿಕೊಂಡಿದೆ. 2026ರ ಜೂನ್ 20ರ ಶನಿವಾರ ರಾತ್ರಿ 9:30ರಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ತಿತ್ತಿತೈ ಯಕ್ಷ ಪರ್ವ 2026’ ಜರುಗಲಿದೆ. ಈ ಬಾರಿ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಲು ‘ಚೂಡಾಮಣಿ’, ‘ವಾಲಿ ವಧೆ’ ಮತ್ತು ‘ಜಾಂಬವತಿ ಕಲ್ಯಾಣ’ ಎಂಬ ಮೂರು ಪ್ರಸಿದ್ಧ ಪ್ರಸಂಗಗಳ ಪ್ರದರ್ಶನ ಆಯೋಜನೆಗೊಂಡಿದೆ. ಹಿಮ್ಮೇಳದಲ್ಲಿ ಜನ್ಸಾಲೆ ರಾಘವೇಂದ್ರ ಆಚಾರ್, ಹೆಬ್ರಿ ಗಣೇಶ್, ರಾಮಕೃಷ್ಣ ಹಿಲ್ಲೂರು, ಚಿನ್ಮಯ್ ಭಟ್ ಕಲ್ಲಡ್ಕ, ಸುಜನ್ ಹಾಲಾಡಿ, ಅಕ್ಷಯ್ ಭಟ್ ಬಿದ್ಕಲ್ಕಟ್ಟೆ, ಪ್ರಜ್ವಲ್ ಮುಂಡಾಡಿ, ಅಕ್ಷಯ್ ವಿಟ್ಲ ಮುಂತಾದ ಪ್ರಖ್ಯಾತ ಕಲಾವಿದರು ಸಾಥ್ ನೀಡಲಿದ್ದಾರೆ.
ಮುಮ್ಮೇಳದಲ್ಲಿ ನೀಲ್ಕೋಡು ಶಂಕರ ಹೆಗಡೆ, ವಿದ್ಯಾಧರ ಜಲವಳ್ಳಿ, ಶಶಿಕಾಂತ್ ಶೆಟ್ಟಿ ಕಾರ್ಕಳ, ರಮೇಶ್ ಭಂಡಾರಿ ಮುರೂರು, ಅಶೋಕ್ ಭಟ್ ಸಿದ್ದಾಪುರ, ಶೈಲೇಶ್ ತೀರ್ಥಹಳ್ಳಿ, ಸುಣ್ಣಂಬಳ ವಿಶ್ವೇಶ್ವರ ಭಟ್, ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ಹೆನ್ನಾಬೈಲ್ ವಿಶ್ವನಾಥ್ ಪೂಜಾರಿ, ಪಂಜು ಬಗ್ವಾಡಿ, ಕಾರ್ತಿಕ್ ಚಿಟ್ಟಾಣಿ, ಚಂದ್ರಶೇಖರ ಧರ್ಮಸ್ಥಳ, ಭರತ್ ರಾಜ್ ಪರ್ಕಳ, ಕಿಶನ್ ಅಗ್ಗಿತ್ತಾಯ ಸೇರಿದಂತೆ ದೈತ್ಯ ಕಲಾವಿದರು ರಂಗದ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕ : 6362673283

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Jog Falls ಪ್ರತೀ ಶನಿವಾರ & ಭಾನುವಾರ ರಸ್ತೆ ಸಾರಿಗೆ ನಿಗಮದಿಂದಸಿಗಂದೂರು- ಜೋಗ ಪ್ರವಾಸಿ ಪ್ಯಾಕೇಜ್ ಘೋಷಣೆ.

Jog Falls ಪ್ರಸ್ತುತ ಮಳೆಗಾಲದಲ್ಲಿ ಪ್ರವಾಸಿಗರ ನೆಚ್ಚಿನ ತಾಣವಾಗಿರುವ ವಿಶ್ವವಿಖ್ಯಾತ ಜೋಗ್‌ಫಾಲ್ಸ್...

Shivamogga News ಥಣ್ಣಗಾಗುತ್ತಿರುವ ಸಚಿವಾಕಾಂಕ್ಷಿತನ..…ಶಿವಕೌಶಲ

Shivamogga News ರಾಜಕೀಯದಲ್ಲಿ ಸ್ಥಿರತೆ ಯಾವತ್ತಿಗೂ ನಿರೀಕ್ಷಿಸಲಾಗದು ಎಂಬ ಮುತ್ಸದ್ದಿಗಳ ಮಾತಿದೆ....