State karate championship ಇಲ್ಲಿನ ನೆಹರು ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಜೂಡೋ ಕ್ರೀಡಾಕೂಟದಲ್ಲಿ
ಶಿಕಾರಿಪುರದ ಡಾ.ಬಿ ಆರ್ ಅಂಬೇಡ್ಕರ್ ಪರಿಶಿಷ್ಟಜಾತಿ/ಪಂಗಡಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯದ ೧೦ ವಿದ್ಯಾರ್ಥಿಗಳು ಚಿನ್ನ ಮತ್ತು ಬೆಳ್ಳಿಪದಕಗಳನ್ನು ಗಳಿಸಿದ್ದಾರೆ. ಕರ್ನಾಟಕದಲ್ಲಿ ಜೂಡೋ ಮತ್ತು ಕರಾಟೆ ತರಭೇತಿ ನೀಡುತ್ತಿರುವ ಮೊಟ್ಟಮೊದಲ ವಿದ್ಯಾರ್ಥಿನಿಲಯ ಇದಾಗಿದ್ದು, ನಿಲಯದ ವಿದ್ಯಾರ್ಥಿಳ ಈ ಸಾಧನೆ ಶಿವಮೊಗ್ಗ ಜಿಲ್ಲೆಗೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಜಿಲ್ಲಾ ಮಟ್ಟದ ಜುಡೋ ಮತ್ತು ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿಲಯದ ೨೦ ವಿದ್ಯಾರ್ಥಿಗಳಲ್ಲಿ ಗೌತಮ್, ಪವನ, ಅಭಿ. ಬೀರೇಶ್, ಪವನ ಕೆ. ಇವರುಗಳು ಪ್ರಥಮ ಬಹುಮಾನ ವಾಗಿ ಚಿನ್ನದ ಪದಕ ಗಳಿಸಿದ್ದರೆ, ಗಗನ್, ಉಲ್ಲಾಸ್, ವಿಘ್ನೇಶ್, ಗಣೇಶ್ ಜಾನುಲಮಾಣಿ ಮತ್ತು ಕಾರ್ತಿಕ್ ಓ. ಅವರುಗಳು ದ್ವೀತಿಯ ಸ್ಥಾನಪಡೆದು ಬೆಳ್ಳಿ ಪದಕಗಳನ್ನು ಗಳಿಸಿದ್ದಾರೆ.
ಚಿನ್ನದ ಪದಕ ವಿಜೇತ ವಿದ್ಯಾರ್ಥಿಗಳು ಇದೇ ತಿಂಗಳ ದಿ:೧೮, ೧೯ ರಂದು ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಜೂಡೋ ಕರಾಟೆ ಕ್ರೀಡಾಕೂಟದಲ್ಲಿ ಭಾಗವಹಿಸಿವರು.
State karate championship ಏಕಲವ್ಯ ಜೂಡೋ ಮತ್ತು ಕರಾಟೆ ತರಭೇತಿ ಸಂಸ್ಥೆಯ ಮಿಥುನ್ ಡಿ.ಬಿ ಇವರ ಸಾರಥ್ಯದಲ್ಲಿ ತರಭೇತಿ ನೀಡಲಾಗಿದ್ದು, ಕೇವಲ ಎರಡು ತಿಂಗಳ ಅವಧಿಯಲ್ಲಿ ನಮ್ಮ ನಿಲಯಾರ್ಥಿಗಳು ಎರಡು ಮೂರು ವರ್ಷಗಳಿಂದ ತರಬೇತಿ ಪಡೆದ ಎದುರಾಳಿಗಳನ್ನು ಮಣಿಸಿ ಅದ್ಭುತ ವಿಜಯ ಸಾಧಿಸಿರುತ್ತಾರೆ.
ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಿರುವ ವಾರ್ಡನ್ ನೃಪತುಂಗಾನಾಯ್ಕ್ ಅವರು ಇದಕ್ಕೆ ಪ್ರೋತ್ಸಾಹಿಸಿದ ರಾಜ್ಯ ಸರ್ಕಾರಕ್ಕೆ , ಪೋಷಕರಿಗೆ ,ಮತ್ತು ವಿದ್ಯಾರ್ಥಿನಿಲಯದ ಅಡುಗೆ ಸಿಬ್ಬಂದಿಗಳಿಗೆ ವಿದ್ಯಾರ್ಥಿನಿಲಯ ದ ವಾರ್ಡನ್ ನೃಪತುಂಗಾನಾಯ್ಕ್ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
State karate championship ರಾಜ್ಯಮಟ್ಟದ ಜೂಡೋ ಕರಾಟೆ ಸ್ಪರ್ಧೆಯಲ್ಲಿ ಶಿಕಾರಿಪುರದ ಸರ್ಕಾರಿ ಹಾಸ್ಟೆಲ್ ವಿದ್ಯಾರ್ಥಿಗಳ ಹೆಮ್ಮೆಯ ಸಾಧನೆ
RM Manjunath Gowda ವಾಣಿಜ್ಯ ಬ್ಯಾಂಕುಗಳು ದಿವಾಳಿಯಾಗುವ ಹೊತ್ತಿನಲ್ಲಿ ಸಹಕಾರ ಸಂಘಗಳುದೇಶದ ಆರ್ಥಿಕ ಸ್ಥಿತಿ ಸ್ಥಿಮಿತಕ್ಕೆ ತಂದಿವೆ – ಆರ್.ಎಂ.ಮಂಜುನಾಥಗೌಡ
RM Manjunath Gowda ಆರ್ಥಿಕವಾಗಿ ಬಲವುಳ್ಳವರು, ಬಡವರಿಗೆ ಸಾಲವನ್ನು ನೀಡುವ ಮೂಲಕ ಆರ್ಥಿಕ ಸವಾರಿಯನ್ನು ಮಾಡುತ್ತಿದ್ದರು. ಇದನ್ನು ತಪ್ಪಿಸುವ ಸಲುವಾಗಿಯೇ ಶತಮಾನಗಳ ಹಿಂದೆ ಉದಯಿಸಿದ ಸಂಘವೇ ಸಹಕಾರಿ ಸಂಘ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಹೇಳಿದರು.
ನಗರದ ಕುವೆಂಪು ರಂಗ ಮಂದಿರದಲ್ಲಿ ಭಗೀರಥ ಸಹಕಾರ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ೧೧೯ವರ್ಷಗಳ ಹಿಂದೆ ಹಾಲುಮತ ಸಮಾಜದ ಮುಖಂಡರೊಬ್ಬರು ಸಹಕಾರ ಸಂಘವನ್ನು ಸ್ಥಾಪಿಸುವ ಮೂಲಕ ಬಡವರಿಗೆ ಹಾಗೂ ಮಧ್ಯಮ ವರ್ಗದವರಿಗೆ ಹಣಕಾಸಿನ ನೆರವಿನ ಹಸ್ತವನ್ನು ಚಾಚಿದರು ಎಂದು ಸಹಕಾರ ಸಂಘದ ಇತಿಹಾಸವನ್ನು ಸ್ಮರಿಸಿದರು.
ವಾಣಿಜ್ಯ ಬ್ಯಾಂಕ್‌ಗಳೇ ದಿವಾಳಿಯಾಗುವ ಈ ಹೊತ್ತಿನಲ್ಲಿ ದೇಶದ ಆರ್ಥಿಕ ಸ್ಥಿತಿಯನ್ನು ಸೀಮಿತದಲ್ಲಿ ಇಟ್ಟುಕೊಳ್ಳಲು ಸಹಕಾರ ಸಂಘಗಳು ಕಾರಣವಾಗಿದೆ. ಅಷ್ಟೇ ಅಲ್ಲದೇ ಬಡವರಿಗೆ ಆರ್ಥಿಕ ಸಹಾಯ ಮಾಡಿ ಅವರ ಜೀವನ ಬದ್ಧತೆಯನ್ನು ಹೆಚ್ಚಿಸುತ್ತಿವೆ ಎಂದರು.
ಕೆಲವು ವರ್ಷಗಳ ಹಿಂದೆ ವಿಶ್ವದಲ್ಲಿ ಆರ್ಥಿಕ ಹಿಂಜರಿಕೆ ಉಂಟಾದ ಸಂದರ್ಭದಲ್ಲಿ ಅನೇಕ ರಾಷ್ಟ್ರಗಳಲ್ಲಿ ಆರ್ಥಿಕ ಸಂಕಷ್ಟ ಉಂಟಾಯಿತು. ಆದರೆ ಭಾರತದಂತಹ ರಾಷ್ಟ್ರದಲ್ಲಿ ಈ ಸಮಸ್ಯೆ ಉಲ್ಬಣಿಸಲಿಲ್ಲ. ಕಾರಣ ಇಲ್ಲಿನ ಸಹಕಾರ ವ್ಯವಸ್ಥೆ ಆರ್ಥಿಕ ಸಂಕಷ್ಟಕ್ಕೆ ಆಸ್ಪದ ನೀಡಲಿಲ್ಲ ಎಂದರು.
ವಾಣಿಜ್ಯ ಬ್ಯಾಂಕ್‌ಗಳು ಬಂಡವಾಳಶಾಹಿಗಳತ್ತ ಮುಖ ಮಾಡುತ್ತಿವೆ. ಆದರೆ ಸಹಕಾರ ಸಂಘಗಳು ಬಡವರತ್ತ ಸಾಗಿವೆ. ಎನ್.ಮಂಜುನಾಥ್ ಅವರು ತಮ್ಮ ಭಗಿರಥ ಪ್ರಯತ್ನದಿಂದ ಸಹಕಾರ ಸಂಘವನ್ನು ಕಟ್ಟಿದ್ದಾರೆ. ಇದಕ್ಕಾಗಿ ಅವರು ಬಹಳ ಕಷ್ಟ ಪಟ್ಟಿದ್ದಾರೆ. ಒಂದು ಸಹಕಾರ ಸಂಘದ ಉದ್ಘಾಟನಾ ಸಮಾರಂಭಕ್ಕೆ ಇಷ್ಟೊಂದು ಜನರು ಭಾಗವಹಿಸುರುವುದು ನನ್ನ ಅನುಭವದಲ್ಲಿ ಇದೇ ಮೊದಲಾಗಿದೆ ಎಂದರು.
ಸಮಾಜದ ಋಣ ತೀರಿಸುವ ಕೆಲಸವನ್ನು ಸಹಕಾರ ಸಂಘ ಸ್ಥಾಪಿಸುವ ಮೂಲಕ ಎನ್.ಮಂಜುನಾಥ್ ಕೈಗೊಂಡಿದ್ದಾರೆ. ೭೦೦ಕ್ಕೂ ಅಧಿಕ ಸದಸ್ಯರನ್ನು ೧೫ ಲಕ್ಷ ಬಂಡವಾಳವನ್ನು ಹೊಂದುವ ಮೂಲಕ ಸಹಕಾರ ಸಂಘ ಸ್ಥಾಪಿಸುವುದು ಪ್ರಸ್ತುತ ದಿನಮಾನಗಳಲ್ಲಿ ಸುಲಭದ ಮಾತಲ್ಲ. ಸಮಾಜದಲ್ಲಿನ ಬಡವರಿಗೆ ಆರ್ಥಿಕವಾಗಿ ಸಬಲರನ್ನಾಗಿಸುವ ಉದ್ದೇಶದಿಂದ ಈ ಸಂಘ ಮುಂದಿನ ದಿನಗಳಲ್ಲಿ ಯಶಸ್ಸಿನ ಹಾದಿಯನ್ನು ತುಳಿಯಲಿ ಎಂದು ಆಶಿಸಿದರು.
ಪ್ರತಿಭಾ ಪುರಸ್ಕಾರ ನೆರವೇರಿಸಿದ ಶಾಸಕ ಡಾ|| ಧನಂಜಯ ಸರ್ಜಿ ಮಾತನಾಡಿ, ಪ್ರತಿಯೊಬ್ಬರು ಜೀವನದಲ್ಲಿ ಮುಂದೆ ಬರಬೇಕಾದರೆ ಹಾಗೂ ಯಶಸ್ಸನ್ನು ಸಾಧಿಸಬೇಕಾದರೆ ಭಗೀರಥ ಪ್ರಯತ್ನ ಮಾಡಲೇಬೇಕು ಎಂದರು.
ಒಂದು ಸಮಾಜ ಮುಂದೆ ಬರಬೇಕಾದರೆ ಅಥವಾ ಉನ್ನತಿಯನ್ನು ಕಾಣಬೇಕಾದರೆ ಆ ಸಮಾಜದಲ್ಲಿ ವಿದ್ಯಾವಂತರು ಹೆಚ್ಚಾಗಬೇಕು. ಇಂದು ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿದ್ದು ಒಳ್ಳೆಯ ಬೆಳವಣಿಗೆ. ಮುಂದಿನ ದಿನಗಳಲ್ಲಿ ಸಮಾಜದ ಮಕ್ಕಳು ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡಲಿ ಎಂದರು.
RM Manjunath Gowda ಎಲ್ಲರ ಬೆಳವಣಿಗೆಗೆ ಸಹಕಾರ ಸಂಘಗಳು ಅಗತ್ಯವಾಗಿ ಬೇಕು. ಈ ಹಿನ್ನೆಲೆಯಲ್ಲಿ ಎನ್.ಮಂಜುನಾಥ್‌ರವರು ಶ್ರಮಪಟ್ಟು, ಸಹಕಾರ ಸಂಘವನ್ನು ಸ್ಥಾಪನೆ ಮಾಡಿದ್ದಾರೆ. ಅವರ ಶ್ರಮ ಮುಂದಿನ ಪೀಳಿಗೆಗೆ ನಿರಂತರವಾಗಿ ಫಲಕೊಡುವಂತಾಗುತ್ತದೆ ಎಂದು ಹೇಳಿದರು.
ಲೋಗೋ ಬಿಡುಗಡೆ ಮಾಡಿದ ಶಿವಮೊಗ್ಗ ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಆರ್ಥಿಕ ಶಕ್ತಿ ನೀಡುವ ಸಂಸ್ಕೃತಿ ಭಾರತೀಯರ ಪ್ರತೀಕ. ಅನಾದಿಕಾಲದಿಂದಲೂ ನಮ್ಮಲ್ಲಿ ಆರ್ಥಿಕ ಸಹಕಾರವನ್ನು ನೀಡುವಂತಹ ಪದ್ದತಿ ಇದೆ. ಅದರ ಮುಂದುವರಿದ ಭಾಗವೇ ಸಹಕಾರ ಸಂಘಗಳು ಎಂದು ಹೇಳಿದರು.
ಪ್ರಸ್ತುತ ಆರಂಭವಾಗಿರುವ ಭಗೀರಥ ಸಹಕಾರ ಸಂಘ ಶಾಶ್ವತವಾಗಿ ಉಳಿಯಲಿ. ಶತಮಾನೋತ್ಸವವನ್ನು ಕಾಣುವ ನಿಟ್ಟಿನಲ್ಲಿ ಸಂಘ ಯಶಸ್ಸಿನ ಹಾದಿಯಲ್ಲಿ ಸಾಗಲಿ ಎಂದು ಹಾರೈಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀಭಗೀರಥ ಸಹಕಾರ ಸಂಘದ ಅಧ್ಯಕ್ಷ ಎನ್.ಮಂಜುನಾಥ್ ಸಂಘಟನೆ ಮಾಡುವುದು ಎಷ್ಟೊಂದು ಕಷ್ಟ ಎಂದು ಅರ್ಥವಾಗುತ್ತಿದೆ. ಸಮಾಜದ ಜನರ ಬಹುದಿನದ ಕನಸಾದ ಈ ಸಂಘ ಇಂದು ನನಸಾಗಿದೆ ಎಂದರು.
ಆರಂಭದಲ್ಲಿ ೪೭೧ ಸದಸ್ಯರನ್ನ ಹೊಂದಿದ್ದ ಸಂಘ ಪ್ರಸ್ತುತ ೭೦೦ಕ್ಕೂ ಹೆಚ್ಚು ಸದಸ್ಯರನ್ನ ಹೊಂದಿ ೧೫ಲಕ್ಷ ಮೂಲ ಬಂಡವಾಳವನ್ನ ಸಂಗ್ರಹಿಸಿದೆ. ೧೨೫೦ ರೂಗಳ ಶೇರನ್ನು ಪಡೆಯುವ ಮೂಲಕ ಸಂಘದ ಸದಸ್ಯತ್ವವನ್ನು ಪಡೆದಿದ್ದಾರೆ ಮುಂದಿನ ಎರಡು ವರ್ಷಗಳಲ್ಲಿ ೫೦೦೦ಕ್ಕೂ ಹೆಚ್ಚು ಸದಸ್ಯರನ್ನ ಮಾಡುವ ಗುರಿ ಹೊಂದಲಾಗಿದೆ ಆರಂಭದ ದಿನಗಳಲ್ಲಿ ೨೫ ಸಾವಿರ ವರೆಗೆ ಜಾಮೀನು ಸಾಲ ಹಾಗೂ ವಾಹನ ಸಾಲವನ್ನು ಕೊಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು
ಶಿವಮೊಗ್ಗ ಜಿಲ್ಲೆಯಲ್ಲಿ ೪೮ ಹಳ್ಳಿಗಳಿಂದ ಷೇರುದಾರರನ್ನು ಸಹಕಾರ ಸಂಘ ಹೊಂದಿದೆ ಎಂದ ಅವರು, ಅನೇಕ ಕುಟುಂಬಗಳು ಆರ್ಥಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದಿದ್ದು ಈ ಕುಟುಂಬಗಳಿಗೆ ಆರ್ಥಿಕ ಬಲವನ್ನ ತುಂಬುವ ಸಲುವಾಗಿ ಈ ಸಂಘವನ್ನ ಸ್ಥಾಪಿಸಲಾಗಿದೆ ಎಂದರು.
ಸಮಾರಂಭದಲ್ಲಿ ೫೦ವರ್ಷಗಳ ಕಾಲ ವೈವಾಹಿಕ ಜೀವನ ನಡೆಸಿದ ದಂಪತಿಗಳಿಗೆ ಹಾಗೂ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ.೯೦ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮಾಂತರ ಶಾಸಕಿ ಶಾರದಾಪೂರ‍್ಯನಾಯ್ಕ್, ನಿವೃತ್ತ ನ್ಯಾಯಾಧೀಶ ಬಿಲ್ಲಪ್ಪ, ಜಗನ್ನಾಥ್ ಸಾಗರ್, ಸಂಘದ ಉಪಾಧ್ಯಕ್ಷ ವಸಂತ್ ಹೋಬಳಿದಾರ್, ನಿರ್ದೇಶಕರುಗಳಾದ ಸುಧಾಕರ್, ರವಿ, ಲೋಕೇಶ್, ಹನುಮಂತಪ್ಪ, ವೆಂಕಟೇಶ್, ರಮೇಶ್ , ಶ್ರೀನಿವಾಸ್, ಶಾಂತಮ್ಮ, ಅರ್ಚನ, ಇತರರು ಉಪಸ್ಥಿತರಿದ್ದರು.
International Democracy Day ಜಾತಿ ಮತ ಭಾಷೆಗಳ ಭೇಧವಿಲ್ಲದೇ ಕೈಕೈ ಹಿಡಿದು ಮಾನವ ಸರಪಳಿ ನಿರ್ಮಾಣದಲ್ಲಿ ಎಲ್ಲರೂ ಭಾಗಿ.ಇದು ಹರ್ಷದ ಸಂಗತಿ- ಮಧು ಬಂಗಾರಪ್ಪ
International Democracy Day ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ಬ್ರಹತ್ ಮಾನವ ಸರಪಳಿ ರಚನೆ ಯಶಸ್ವಿ
ಶಿವಮೊಗ್ಗ ಸೆ.15 (ಕರ್ನಾಟಕ ವಾರ್ತೆ):ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಇಂದು ಬೆಳಿಗ್ಗೆ 9ರಿಂದ 10 ಗಂಟೆಯವರೆಗೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಬಾರಂದೂರಿನಿಂದ
ಶಿವಮೊಗ್ಗ ತಾಲ್ಲೂಕಿನ ಗಡಿ ಗ್ರಾಮ ಮಡಿಕೆಚಿಲೂರುವರೆಗೆ ಮಾನವ ಸರಪಳಿ ರಚನೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಈ ಬೃಹತ್ ಮಾನವ ಸರಪಳಿ ನಿರ್ಮಾಣದಲ್ಲಿ ಜಿಲ್ಲೆಯ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸ್ಥಳೀಯ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸ್ವಸಹಾಯ ಗುಂಪುಗಳ ಮಹಿಳಾ ಸದಸ್ಯರು, ನೌಕರರು ಹಾಗೂ ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಿದರು.
ಜಿಲ್ಲಾಧಿಕಾರಿ ಗಳ ಕಚೇರಿ ಅವರಣದಲ್ಲಿ ಆಯೋಜಿಸಲಾಗಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಂವಿಧಾನ ಪೀಠಿಕೆಯನ್ನು ವಾಚಿಸಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಜ್ಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ
ಅವರು ಮಾತನಾಡಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಬೀದರ್ ನಿಂದ ಚಾಮರಾಜನಗರದವರೆಗೆ ಒಟ್ಟು 2500 ಕಿ.ಮೀ ಗಳ ಹಾಗೂ ಜಿಲ್ಲೆಯಲ್ಲಿ 60ಕಿ. ಮೀ. ಮಾನವ ಸರಪಳಿ ರಚನೆ ಮಾಡುತ್ತಿರುವುದು ಐತಿಹಾಸಿಕ ದಾಖಲೆಯಯಾಗಿದೆ.ಈ ಘಟನೆ ಇತಿಹಾಸದ ಪುಟಗಳಲ್ಲಿ ಸೇರಲಿದೆ ಎಂದರು.
International Democracy Day ಸಮಬಾಳು, ಸಮಾನತೆ,
ಭ್ರಾತೃತ್ವದ ಸಂಕೇತವಾಗಿರುವ ಈ ಕಾರ್ಯಕ್ರಮ
ಭಾರತದ ಪ್ರಜೆಯಾಗಿರುವ ಎಲ್ಲರಿಗೂ ಹೆಮ್ಮೆ ಎನಿಸಲಿದೆ. ಮತ ಜಾತಿ, ಭಾಷೆಗಳ ಭೇದವಿಲ್ಲದೆ, ಜಾತ್ಯತೀತವಾಗಿ ಎಲ್ಲರೂ ಕೈ ಕೈ ಹಿಡಿದು ಮಾನವ ಸರಪಳಿ ರಚನೆ ಮಾಡುವ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಅತ್ಯಂತ ಹರ್ಷದ ಸಂಗತಿ ಎಂದರು.
ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಸಂವಿಧಾನ ಹೊಂದಿರುವ ದೇಶ ನಮ್ಮದು ಸಂವಿಧಾನದ ಮೌಲ್ಯ ಗಳನ್ನು ಎತ್ತಿಹಿಡಿದು ಸಾಕಾರಗೊಳಿಸಬೇಕಾದುದು ಹಾಗೂ ಸಂವಿಧಾನ ದತ್ತವಾಗಿರುವ ಹಕ್ಕುಗಳನ್ನು ಬಳಸಿಕೊಳ್ಳುವಂತೆ ಯೇ ಕರ್ತವ್ಯಗಳನ್ನು ಮರೆಯಬಾರದು ಎಂದರು.
ರಸಋಷಿ ಕುವೆಂಪು ಅವರು ನಾಡಿಗೆ ನೀಡಿದ ಸಂದೇಶದಂತೆ ಈ ದೇಶದಲ್ಲೂ ವಾಸಿಸುವ ಎಲ್ಲರಿಗೂ ಈ ದೇಶ ಸರ್ವ ಜನಾಂಗದ ಶಾಂತಿಯ ತೋಟವಾಗಿರಲಿ ಎಂದು ಆಶಿಸುತ್ತೇನೆ ಎಂದ ಅವರು ಭಾಗವಹಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದ ಅಂಗವಾಗಿ ಮಾರ್ಗ ಮಧ್ಯದ ಸುಮಾರು 20ಕ್ಕೂ ಹೆಚ್ಚಿನ ಸ್ಥಳಗಳಲ್ಲಿ ಸಭಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಹಲವಾರು ಕಲಾತಂಡಗಳು ಹಾಗೂ ವಿವಿಧತೆಯಲ್ಲಿ ಏಕತೆಯನ್ನು ಸಾರುವ ವೇಷ ಭೂಷಣಗಳೊಂದಿಗೆ ಸಾರ್ವಜನಿಕರು ಭಾಗವಹಿಸಿದ್ದರು. ನೆರೆದಿದ್ದವರು ಘೋಷಣೆ ಕೂಗಿ ಸಂಭ್ರಮಿಸಿದರು. ನಂತರ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗಿಯಾದರು.
ಜಿಲ್ಲಾಧಿಕಾರಿಗಳ ಕಚೇರಿ ಆಭರಣದಲ್ಲಿ ನಡೆದಾದ ಈ ಕಾರ್ಯಕ್ರಮದಲ್ಲಿ ಶಾಸಕ ಎಸ್ ಎನ್ ಚನ್ನಬಸಪ್ಪ ವಿಧಾನಪರಿಷತ್ ಸದಸ್ಯ ಶ್ರೀಮತಿ ಬಲ್ಕಿಶ್ ಬಾನು, ಜಿಲ್ಲಾಧಿಕಾರಿ ಗುರುದತ್ ಹೆಗಡೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿಕೆ ಮಿಥುನ್ ಕುಮಾರ್ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್ ಹೇಮಂತ್ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಸರ್ಕಾರಿ ಹಾಗೂ ಖಾಸಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸ್ಥಳೀಯ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
International Democracy Day ಡಾ.ಅಂಬೇಡ್ಕರ್ ದೊಡ್ಡ ತತ್ವಜ್ಞಾನಿ.ಅವರಿಲ್ಲದಿದ್ದರೆ ಈ ದೇಶ ಉಳಿಯುತ್ತಿರಲಿಲ್ಲ- ಪ್ರೊ.ಶರತ್ ಅನಂತಮೂರ್ತಿ
International Democracy Day ಪ್ರಜಾಪ್ರಭುತ್ವ’ ಆದರ್ಶವಾದ ಸಾರ್ವತ್ರಿಕ ಮೌಲ್ಯ – ಪ್ರೊ. ಶರತ್ ಅನಂತಮೂರ್ತಿ
ಮಾನವೀಯ ಮೌಲ್ಯಗಳ ನಿಧಿಯಾದ ಪ್ರಜಾಪ್ರಭುತ್ವ ವ್ಯವಸ್ಥೆ ಮಾನವರೆಲ್ಲರೂ ಒಂದೇ ಎಂಬುದನ್ನು ಸಾರುತ್ತದೆ. ಸರ್ವರೂ ಸಮಾನರು ಎಂಬ ಅರಿವೇ ಪ್ರಜಾಪ್ರಭುತ್ವದ ತಳಹದಿ. ಪ್ರಜಾಪ್ರಭುತ್ವವನ್ನು ವಿಶ್ವಸಂಸ್ಥೆ ಅತ್ಯಂತ ಶ್ರೇಷ್ಠ ಮೌಲ್ಯವೆಂದು ಪರಿಗಣಿಸಿದೆ. ಪ್ರಜಾಪ್ರಭುತ್ವ ಆದರ್ಶವಾದ ಸಾರ್ವತ್ರಿಕ ಮೌಲ್ಯವೆಂದು ಕುಲಪತಿಗಳಾದ ಪ್ರೊ. ಶರತ್ ಅನಂತಮೂರ್ತಿ ಅವರು ಅಭಿಪ್ರಾಯಪಟ್ಟರು. ಅವರು ಕುವೆಂಪು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದಲ್ಲಿ ಏರ್ಪಡಿಸಿದ್ದ ‘ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಂಬೇಡ್ಕರ್ ಬಹುದೊಡ್ಡ ತತ್ವಜ್ಞಾನಿ. ಅವರು ಇಲ್ಲದಿದ್ದರೆ ಈ ದೇಶ ಉಳಿಯುತ್ತಿರಲಿಲ್ಲ. ಅವರಿಂದ ರಚನೆಯಾದ ಸಂವಿಧಾನವೇ ಒಂದು ಕ್ರಾಂತಿಕಾರಕ ದಾಖಲೆ. ಆಧುನಿಕತೆಯನ್ನು ತಂದುಕೊಟ್ಟ ಮಹಾವ್ಯಕ್ತಿ. ಅಂಬೇಡ್ಕರ್ ಅವರ ‘ಜಾತಿವಿನಾಶ’ ಕೃತಿಯನ್ನು ಎಲ್ಲರೂ ಕಡ್ಡಾಯವಾಗಿ ಓದಬೇಕೆಂದು ತಿಳಿಸಿದರು. ತದನಂತರ ಭಾರತ ಸಂವಿಧಾನ ಪ್ರಸ್ತಾವನೆಯನ್ನು ಬೋಧಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದವರಿಗೆಲ್ಲ ನೆನಪಿನ ಕಾಣಿಕೆಯಾಗಿ ‘ಪೆನ್ನು’ಗಳನ್ನು ವಿತರಿಸಿದರು.
International Democracy Day ಶಿಕ್ಷಣ ನಿಕಾಯದ ಡೀನರು, ಶಿಕ್ಷಣ ವಿಭಾಗದ ಮುಖ್ಯಸ್ಥರು ಅದ ಪ್ರೊ. ಜಗನ್ನಾಥ್ ಕೆ. ಡಾಂಗೆ, ಅವರು ಉಪಸ್ಥಿತರಿದ್ದರು. ಡಾ. ಬಿ.ಅರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ ‘ಪ್ರಜಾಪ್ರಭುತ್ವ’ ವ್ಯವಸ್ಥೆ ಬೆಳೆದು ಬಂದ ಬಗೆಯನ್ನು ಪರಿಚಯಿಸಿ, ವಂದಿಸಿದರು. ಪಾಂಡುರವರು ಪ್ರಾರ್ಥಿಸಿದರು. ಸಂದೀಪ್ ಸ್ವಾಗತಿಸಿದರು. ಸಂಪತ್‌ಕುಮಾರ್ ಎಂ. ನಿರೂಪಿಸಿದರು. ಡಾ. ಗೋವಿಂದರಾಜ್, ಡಾ. ಎಂ. ರವಿಕುಮಾರ್, ಡಾ. ಎನ್.ಬಿ. ತಿಪ್ಪೇಸ್ವಾಮಿ, ಡಾ. ಅಶೋಕ್ ಲಮಾಣಿ, ಮೊದಲಾದ ಅಧ್ಯಾಪಕರು, ಅಧ್ಯಾಪಕೇತರ ನೌಕರರು, ಸಂಶೋಧಕರು, ವಿದ್ಯಾರ್ಥಿಗಳು ಭಾಗವಹಿಸಿದರು.
After PUC What Next ಸಾಗರದಲ್ಲಿ ಪಿಯುಸಿ ನಂತರ ಮುಂದೇನು? ಮಾಹಿತಿ ಕಾರ್ಯಾಗಾರ
After PUC What Next ಇರುವಕ್ಕಿ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯದ ಕುಲಸಚಿವ ಡಾ.ಕೆ.ಸಿ.ಶಶಿಧರ ಅವರು ಎಂಡಿಎಫ್ ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಪಿಯುಸಿ ನಂತರ ಮುಂದೇನು ಮಾಹಿತಿ ನೀಡಿದರು . ಎಂಡಿಎಫ್ ಅಧ್ಯಕ್ಷ ಶ್ರೀ ಎಂ ಹರನಾಥ ರಾವ್ ಜಂಟಿ ಕಾರ್ಯದರ್ಶಿ ಶ್ರೀ ಎಂ ಆರ್ ಸತ್ಯನಾರಾಯಣ ಪ್ರಾಚಾರ್ಯ ಡಾ ಜಗದೀಶ್ ಎಂ ಭಂಡಾರಿ ಹಿರಿಯ ನಿವೃತ್ತ ಉಪನ್ಯಾಸಕ ಶ್ರೀ ಶ್ರೀಧರ ರಾವ್ ಶ್ರೀ ಪ್ರದೀಪ್ ಪ್ರಭು ಕಾಲೇಜಿನ ಉಪನ್ಯಾಸಕ ವರ್ಗದವರು ವಿದ್ಯಾರ್ಥಿಗಳು ಹಾಜರಿದ್ದರು
Sagara Ganapati Festival 2024 ದೇಹದಲ್ಲಿ ಶಕ್ತಿಯಿರುವತನಕ ” ಬೆಂಕಿಯಾಟ ಕಲೆ” ತರಬೇತಿ ಮುಂದುವರೆಸುವೆ- ಎಂ.ಜಿ.ಚಂದ್ರಕಾಂತ್
Sagara Ganapati Festival 2024 ಸಾಗರ ನಗರದ 8ನೇ ವಾರ್ಡ್ ಶ್ರೀನಗರದಲ್ಲಿ 48ನೇ ವರ್ಷದ ಗಣೇಶ ವಿಸರ್ಜನೆ ಭಾನುವಾರ ಅದ್ದೂರಿಯಾಗಿ ನಡೆಯಿತು …
ಗಮನ ಸೆಳೆದ ಬೆಂಕಿಯಾಟ ಪ್ರದರ್ಶನ
ಹಲವು ವರ್ಷಗಳಿಂದ ಸಾಗರದ ಶ್ರೀನಗರ ಯುವಜನ ಸಂಘ ನಡೆಸಿಕೊಂಡು ಬರುತ್ತಿದ್ದ ಬೆಂಕಿಯಾಟ
ಪ್ರದರ್ಶನವನ್ನು ಶ್ರೀನಗರದಲ್ಲಿ, ಸಾಗರ ನಗರ ಪೊಲೀಸ್ ಸ್ಟೇಷನ್ ವೃತ್ತ, ನಗರದ ಹೃದಯ ಭಾಗ ಸಾಗರ್ ಹೋಟೆಲ್ ಸರ್ಕಲ್ ನಲ್ಲಿ ಸಾರ್ವಜನಿಕರು ಕಣ್ತುಂಬಿ ಕೊಂಡರು ಸಾಗರದ ಇತಿಹಾಸದಲ್ಲಿ ಬೆಂಕಿಯಟ್ಟ ಪ್ರಾರಂಭವಾಗಿದ್ದು ಹೂವಿನ ಗೋಪಾಲಣ್ಣ ಅವರ ಕಾಲದಲ್ಲಿ ಇದು ಮೂಲತಃ ಮಂಗಳೂರಿನಲ್ಲಿ ಪ್ರಾರಂಭವಾಗಿರುವಂತದ್ದು ಪ್ರಥಮವಾಗಿ ಸಾಗರದ ಹಿಂದೂ ಮಹಾಸಭಾ ಗಣಪತಿಯಲ್ಲಿ ಪ್ರದರ್ಶನಗೊಂಡಿತು ನಂತರ ಶ್ರೀನಗರ ಯುವಜನ ಸಂಘಕ್ಕೆ ಹಸ್ತಾಂತರವಾಯಿತು
ಆಧುನಿಕ ಫಿಟ್ನೆಸ್ ಸೆಂಟರ್‍ಗಳ ಭರಾಟೆಯ ನಡುವೆಯೂ, ಪ್ರಾಚೀನ, ಸಾಂಪ್ರದಾಯಿಕ ವ್ಯಾಯಾಮ ಶಾಲೆಗಳು ಇಂದಿಗೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿದೆ. ವ್ಯಾಯಾಮಗಳಿಗೆ, ದೇಹದಾಢ್ರ್ಯ ಪ್ರದರ್ಶನದ ಜೊತೆಗೆ ವ್ಯಾಯಾಮ ಶಾಲೆಗಳು ಆಕರ್ಷಕ ಹಾಗು ಸಾಹಸಮಯ ಪ್ರದರ್ಶನಕ್ಕೂ ಹೆಸರುವಾಸಿಯಾಗಿವೆ ಯಾವುದೇ ಫಲಾಪೇಕ್ಷೆ ಇಲ್ಲದೆ ಈ ಸಾಹಸಮಯ ಪ್ರದರ್ಶನಗಳನ್ನು ತಾಲೀಮು ಪ್ರದರ್ಶನಕಾರರು ನೀಡುತ್ತಾರೆ. ಆದರೂ ತಾಲೀಮು ಪ್ರದರ್ಶನವನ್ನು ದೇಹದಲ್ಲಿ ಶಕ್ತಿ ಇರುವ ತನಕ ಮುಂದುವರಿಸಿಕೊಂಡು ಹೋಗಬೇಕೆಂಬ ಇಚ್ಛೆ ಇದೆ ಎನ್ನುತ್ತಾರೆ ಸಾಗರದ ಎಂ ಜಿ ಚಂದ್ರಕಾಂತ್ ಈಗಲೂ ತರಬೇತಿಯನ್ನು ನೀಡುತ್ತಿದ್ದಾರೆ
Sagara Ganapati Festival 2024 ತಾಲೀಮಿನಲ್ಲಿ ಸುಮಾರು 42 ಪ್ರಕಾರದ ತಾಲೀಮು ಪ್ರದರ್ಶನಗಳಿದ್ದು, ಸಿಂಗಲ್ ಬಾಣ, ಡಬಲ್ ಬಾಣ, ಬಣ್ಣೋಟ್ಟಿಗಳನ್ನು ವಿವಿಧ ದಿಕ್ಕುಗಳಲ್ಲಿ ತಿರುಗಿಸೋದು. ಈ ಬಣ್ಣೋಟ್ಟಿಗಳ ತುದಿಗೆ ಸೀಮೆ ಎಣ್ಣೆಯಿಂದ ಅದ್ದಿದ ಬಟ್ಟೆಯನ್ನು ಕಟ್ಟಿ ಅದಕ್ಕೆ ಬೆಂಕಿ ಹಚ್ಚಿ ಎಲ್ಲಾ ದಿಕ್ಕುಗಳಿಗೆ ಎಂಟು ಬಾರಿ ತಿರುಗಿ, ಮೈ ಕೈಗಳಿಗೆ ಕೊಂಚವೂ ಕೂಡಾ ಬೆಂಕಿಯ ಕೆನ್ನಾಲಿಗೆ ತಾಕದಂತೆ ಬೀಸುವ ಸಾಹಸ ತಾಲೀಮಿನಲ್ಲಿ ಎಲ್ಲರ ಮನಸೆಳೆಯುವ ಒಂದು ಪ್ರಕಾರದ ಪ್ರದರ್ಶನವಾಗಿದೆ.
ಸಾಂಪ್ರದಾಯಿಕ ವ್ಯಾಯಾಮ ಶಾಲೆಗಳ ಸಂಖ್ಯೆ ಕ್ಷೀಣಿಸುತ್ತಿರುವ ನಡುವೆ ತಾಲೀಮು ತಂಡಗಳೂ ಇಂದು ಬೆರಳೆಣಿಕೆಯ ಸಂಖ್ಯೆಗೆ ಬಂದಿದೆ. ಅದನ್ನು ಮುಂದುವರಿಸಿಕೊಂಡು ಹೋಗಬೇಕಾದ ಅಗತ್ಯತೆ ಇಂದಿನ ಯುವ ಜನಾಂಗ ಮಾಡಬೇಕಿದೆ ಎಂದು ಶ್ರೀನಗರ ಯುವಜನ ಸಂಘದ ಉಪಾಧ್ಯಕ್ಷರಾದ ದಯಾನಂದ್ ನಾಯಕ್ ಹೇಳುತ್ತಾರೆ….
ಸೂರಜ್ ನಾಯರ್
Girish Kasaravalli Book ಪ್ರಸ್ತುತ ಸಿನಿಮಾವು ಮಾರುಕಟ್ಟೆ ಸಂಸ್ಕೃತಿಯಲ್ಲಿ ಕಳೆದುಹೋಗಿದೆ- ಗಿರೀಶ್ ಕಾಸರವಳ್ಳಿ
Girish Kasaravalli Book ವಿದ್ಯಾರ್ಥಿಗಳ ಯೋಚನಾ ಲಹರಿ ತಿಳಿದುಕೊಂಡು ಮಾನವೀಯ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.
ಸಿನಿಮೊಗೆ-ಶಿವಮೊಗ್ಗ ಚಿತ್ರ ಸಮಾಜ, ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಶಾಖೆ, ರಾಷ್ಟ್ರೀಯ ಶಿಕ್ಷಣ ಸಮಿತಿ, ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದಿಂದ ಆಯೋಜಿಸಿದ್ದ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಚಿತ್ರಗಳ ಪ್ರದರ್ಶನ, ಸಂವಾದ ಹಾಗೂ ಬಿಂಬ ಬಿಂಬನ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಮುಂದಿನ ಪೀಳಿಗೆ ಉತ್ತಮ ಚಿಂತನೆಗಳನ್ನು ನೀಡುವ ಅವಶ್ಯಕತೆ ಇದೆ. ಇಲ್ಲವಾದರೆ ಯುವಪೀಳಿಗೆ ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.
ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಮಾತನಾಡಿ, ಸಾಹಿತ್ಯ ಕೃತಿಗಳನ್ನು ಸಿನಿಮಾ ಮಾಡುವ ವೇಳೆಯಲ್ಲಿ ಅನೇಕ ಸವಾಲುಗಳು ಎದುರಾಗುತ್ತವೆ. ಧ್ವನಿ, ಬೆಳಕು, ಶಬ್ಧ ಎಲ್ಲವೂ ಪೂರಕವಾಗಿರಬೇಕು. ಪ್ರೇಕ್ಷಕನಿಗೆ ಅನುಭವವಾದರೆ ಸಿನಿಮಾ ಸಫಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಪ್ರಸ್ತುತ ಸಿನಿಮಾ ಮಾಧ್ಯಮವು ಮಾರುಕಟ್ಟೆ ಸಂಸ್ಕೃತಿಯಲ್ಲಿ ಕಳೆದುಹೋಗಿದೆ. ಮಾರುಕಟ್ಟೆ ಸಂಸ್ಕೃತಿಯಲ್ಲಿ ವ್ಯಾಪಾರದ ದೃಷ್ಟಿಕೋನದಲ್ಲಿ ವಿವಿಧ ಸಂಗತಿಗಳನ್ನು ಬಂಡವಾಳ ಮಾಡಿಕೊಳ್ಳಲಾಗುತ್ತಿದೆ ಎಂದರು.
ಕಲಾತ್ಮಕ ಸಿನಿಮಾಗಳ ಕುರಿತು ಮಾತನಾಡಿ, ಸಿನಿಮಾ ನಿರ್ಮಿಸುವಲ್ಲಿ ಸಮಸ್ಯೆ ಇರುವುದಿಲ್ಲ. ಆದರೆ ಅದನ್ನು ಜನರಿಗೆ ತಲುಪಿಸುವ ವ್ಯವಸ್ಥೆಯಲ್ಲಿ ಸಮಸ್ಯೆ ಇರುತ್ತದೆ. ಮೌಲ್ಯಾಧರಿತ ಶಿಕ್ಷಣ ಎಲ್ಲರಿಗೂ ದೊರೆತಾಗ ಕಲಾತ್ಮಕ ಚಿತ್ರಗಳ ಬಗ್ಗೆಯೂ ಆಲೋಚನೆ ಬೆಳೆಯುತ್ತದೆ ಎಂದು ತಿಳಿಸಿದರು.
Girish Kasaravalli Book ರಂಗಕರ್ಮಿ ಕೆ.ಜೆ.ಕೃಷ್ಣಮೂರ್ತಿ ಮಾತನಾಡಿ, ಗಿರೀಶ್ ಕಾಸರವಳ್ಳಿ ಅವರು ಶ್ರೇಷ್ಠ ನಿರ್ದೇಶಕರಾಗಿದ್ದು, ಮುಖಾಮುಖಿ ಸಂವಾದ ನಡೆಸುವುದು ವಿಶೇಷ ಸಂಗತಿ. ವಿನಯಪೂರ್ವ ವ್ಯಕ್ತಿತ್ವ ಹೊಂದಿದ್ದಾರೆ. ಎಲ್ಲರ ಅಭಿಪ್ರಾಯಗಳಿಗೂ ವಿಶೇಷ ಮನ್ನಣೆ ನೀಡುತ್ತಾರೆ ಎಂದು ಹೇಳಿದರು.
ಪ್ರಮುಖರಾದ ಎಚ್.ಯು.ವೈದ್ಯನಾಥ್, ಗೋಪಾಲಕೃಷ್ಣ ಪೈ, ಕೆ.ಚಿದಾನಂದ್, ಜಿ.ವಿಜಯಕುಮಾರ್, ಹರೀಶ್ ಕಾರ್ಣಿಕ್, ಹುಚ್ಚರಾಯಪ್ಪ ಇತರರು ಉಪಸ್ಥಿತರಿದ್ದರು.
Ganesha Festival 2024 ಭಾರತದಲ್ಲಿ ಹಬ್ಬ ಆಚರಣೆಯ ಪರಂಪರೆಯೇ ಹರಿದು ಬಂದಿದೆ- ಶ್ರೀರಂಜಿನಿ ದತ್ತಾತ್ರಿ
Ganesha Festival 2024 ಭಾರತದಲ್ಲಿನ ಹಬ್ಬಗಳ ವೈಶಿಷ್ಟ್ಯ ಅಮೋಘವಾದದ್ದು ಪಾರಂಪರಿಕವಾದದ್ದು ಅನನ್ಯವಾದದ್ದು. ಜೀವನೋತ್ಸಾಹ ತುಂಬಿ ಹಳೆಯ ಕಹಿಗಳನ್ನು ಮರೆಸಿ ಬಾಂಧವ್ಯದ ಕೊಂಡಿಯನ್ನು ಬೆಸೆದು ಸಮುದಾಯದಲ್ಲಿ ಮನರಂಜನೆ ದೈವ ಭಕ್ತಿಯನ್ನು ಉಂಟು ಮಾಡಿ ಜೀವನದಲ್ಲಿ ನವ ಉಲ್ಲಾಸವನ್ನು ತಂದುಕೊಡುತ್ತದೆ ಎಂದು ಶ್ರೀಮತಿ ಶ್ರೀರಂಜಿನಿ ದತ್ತಾತ್ರಿ, ಅಧ್ಯಕ್ಷರು, ಕಾಸ್ಮೋ ಕ್ಲಮ್ ಮಿತ್ರೆ ಮಹಿಳಾ ಘಟಕ ಇವರು ಮಾತನಾಡಿದರು.
ದಿನಾಂಕ: 14.9.2024 ರ ಶನಿವಾರ ಕಾಸ್ಮೋ ಕ್ಲಬ್ ನ ಶುಭಾಂಗಣದಲ್ಲಿ “ಹಬ್ಬ ಸಂಭ್ರಮ” ವಿಶೇಷ ಕಾರ್ಯಕ್ರಮವನ್ನು ವಿಶ್ವವರಾ ತಂಡ ಹಾಗೂ ಮಿತ್ರೆ ಬಳಗದವರು ಏರ್ಪಡಿಸಿದ್ದರು.
ಭಾರತದಲ್ಲಿ ಹಬ್ಬಗಳ ಪಾರಂಪರಿಕತೆಯೇ ಹರಿದು ಬಂದಿದೆ. ಪೂರ್ವ ಭಾರತದಲ್ಲಿ ಅದರಲ್ಲೂ ಸ್ವತಂತ್ರ ಪೂರ್ವದಲ್ಲಿ ಹಬ್ಬಗಳ ಆಚರಣೆ ವೈವಿಧ್ಯಮಯವಾಗಿದ್ದು ವಿಶೇಷವಾದ ಗೌರಿ ಗಣೇಶ ಹಬ್ಬ ಶ್ರಾವಣ ಮಾಸದ ಭಾದ್ರಪದ ಶುಕ್ಲ ಚೌತಿಯಲ್ಲಿ ಬರುವಂತಹ ಗಣೇಶ ಹಬ್ಬವನ್ನು ಸ್ವಾತಂತ್ರ್ಯದ ಏಕತೆಗೆ ಗಣಪತಿಯ ಮೂರ್ತಿಗಳನ್ನು ದೇಶದ ಬೀದಿ ಬೀದಿಗಳಲ್ಲಿ ಮನೆ ಮನಗಳಲ್ಲಿ ಪ್ರತಿಷ್ಠಾಪಿಸಿ ಅ ಮೂಲಕ ಸ್ವಾತಂತ್ರ್ಯ ಸಂಗ್ರಾಮದ ಕಹಳೆಯನ್ನು ಊದಿದವರು ಶ್ರೀ ಬಾಲಗಂಗಾಧರ್ ತಿಲಕ್ ರವರು. ಸ್ವಾತಂತ್ರದ ನಂತರ ಭಾರತದಲ್ಲಿ ಹಬ್ಬಗಳನ್ನು ಮೂರು ವಿಧಗಳಾಗಿ ಆಚರಿಸುತ್ತೇವೆ ರಾಷ್ಟ್ರೀಯ ಹಬ್ಬಗಳು ಧಾರ್ಮಿಕ ಹಬ್ಬಗಳು, ಕಾಲೋಚಿತ ಹಬ್ಬಗಳು. ರಾಷ್ಟ್ರೀಯ ಹಬ್ಬಗಳಲ್ಲಿ ವರ್ಣ ಧರ್ಮ ಜಾತಿ ನೀತಿ ಎಲ್ಲವನ್ನ ಮರೆತು ರಾಷ್ಟ್ರದ ಏಕತೆಯನ್ನು ಎತ್ತಿ ಹಿಡಿಯುವ ಸಂಕೇತವಾಗಿ ಆಚರಿಸುತ್ತೇವೆ.
ಎರಡನೆಯರು ಧಾರ್ಮಿಕ ಹಬ್ಬಗಳು ಆಯಾ ಧರ್ಮದ ಅನುಷ್ಠಾನವಾಗಿ ನಡೆಸುವಂತಹ ಹಬ್ಬಗಳಾಗಿರುತ್ತವೆ. ಮೂರನೆಯದು ಕಾಲೋಚಿತ ಹಬ್ಬಗಳು ಅಂದರೆ ಋತುಮಾನ ಆಧಾರಿತವಾಗಿ ಪಂಚಮಿ, ಕ್ರಾಂತಿ, ಬಿಹು, ಓಣಂ ಇತ್ಯಾದಿಗಳಾಗಿರುತ್ತವೆ. ಒಟ್ಟಾರೆ ಹಬ್ಬಗಳು ನಮ್ಮ ಸಂಸ್ಕೃತಿ ಸಂಸ್ಕಾರ ವೈವಿಧ್ಯತೆಗಳ ಉಳಿವು ಬೆಳವಣಿಗೆಯ ಜೊತೆಗೆ ಪರಸ್ಪರ ಸ್ನೇಹ ಸಹಬಾಳ್ವೆ ಸಹಕಾರ ತತ್ವವನ್ನು ಸಾರುತ್ತದೆ. ಹಬ್ಬಗಳ ಮೂಲಕ ಕೊಡುವ, ಪರಸ್ಪರ ಪ್ರೀತಿ ಸ್ನೇಹ ಚುವ, ನಮ್ರತೆ, ಶಿಸ್ತು, ಕಾಳಜಿ ಶ್ರದ್ಧೆ ಭಕ್ತಿ ಭಾವ ವ್ಯಕ್ತವಾಗುವ ಭಾವವಾಗಿರುತ್ತದೆ..
Ganesha Festival 2024 ಗೌರಿ ಗಣಪತಿಯಂದು ನಾವು ಕಟ್ಟುವ ಕಂಕಣ, ಬಾಗಿಲಿನ ತೋರಣ, ಮನೆ ಮುಂದಿನ ರಂಗೋಲಿ, ತೊಡುವ ಉಡುಪು ವಸ್ತ್ರ ಗಳಲ್ಲಿ ವೈವಿಧ್ಯತೆ ಇದ್ದು ಸಂಭ್ರಮ ತುಂಬಿ ತುಳುಕಾಡುತ್ತದೆ. ಮನಸ್ಸಿನ ಸದೃಢತೆಯನ್ನು ಗಟ್ಟಿ ಮಾಡುವುದರ ಜೊತೆಗೆ ಮನೆಮನೆಗಳ ಸಾಂಘಿಕ ಶಕ್ತಿಗಳ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಕಾಸ್ಮೋ ಕ್ಲಬ್ ಮಿತ್ರೆ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀರಂಜಿನಿ ದತ್ತಾತ್ರಿಯವರು ನುಡಿದರು.
ಕಾರ್ಯಕ್ರಮದ ಸರ್ವಸಿದ್ಧತೆಯನ್ನು ಮಿತ್ರೆ ಬಳಗದ ವಿಶ್ವವರಾ ತಂಡದ ನಾಯಕಿ ಪ್ರೇಮಾ ಶ್ರೀನಿವಾಸ್ ಮತ್ತವರ ತಂಡದ ಸದಸ್ಯರು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿದ್ದು . ತಂಡದ ನಾಯಕಿ ಪ್ರೇಮಕ್ಕ ಹಬ್ಬಗಳಲ್ಲಿ ವೈವಿಧ್ಯತೆ ಇದೆ ಸಡಗರವಿದೆ ಸಂಭ್ರಮವಿದೆ ನಮ್ಮ ನೋವುಗಳನ್ನು ಮರೆತು ಹೊಸತನವನ್ನು ಕಟ್ಟಿಕೊಡುವ ಬಾಂಧವ್ಯವಿದೆ ಎಂದು ಹೇಳಿ, ಹಬ್ಬ ಆಚರಣೆಗಳು ನಮ್ಮ ದೇಶದ ಹಿರಿಮೆ ಎಂದು ಹೇಳಿದರು .
ವಿಶ್ವವರಾ ತಂಡದ ನಾಯಕಿ ಪ್ರೇಮಕ್ಕ, ಸದಸ್ಯರಾದ ಮನು ಪ್ರೀತಮ್, ನಿವೇದಿತಾ, ಪದ್ಮಾವತಿ, ಮೀರಾ ನಾಡಿಗ್, ವಿನುತಾ, ವಿನೋದಾ ದಳವೆ, ನಿಖಿಲಾ ಯವರು ಹಬ್ಬ ಸಂಭ್ರಮವನ್ನು ಅಚ್ಚುಕಟ್ಟಾಗಿ ಜೋಡಿಸಿ, ನಡೆಸಿಕೊಟ್ಟರು
ಕಾರ್ಯ ಸಮಿತಿಯ ಕಾಸ್ಮೋ ಮಹಿಳಾ ವಿಭಾಗದ ಅಧ್ಯಕ್ಷರಾದ
ಶ್ರೀರಂಜಿನಿ ದತ್ತಾತ್ರಿ, ಕಾರ್ಯದರ್ಶಿ ದೀಪಾ ಶ್ರೀನಿವಾಸ್,
ಖಜಾಂಚಿ ವೀಣಾಹರ್ಷ, ಸಹಕಾರ್ಯದರ್ಶಿ ಹೇಮಲತಾ ಉಪಸ್ಥಿತರಿದ್ದರು
ಕಾರ್ಯಕ್ರಮದ ನಿರೂಪಣೆ ಪದ್ಮಾವತಿ ನೆರವೇರಿಸಿದರು. ಪ್ರಾರ್ಥನೆ ವಿನ್ನುತಾರವರು, ಸ್ವಾಗತ ಪ್ರೇಮಾ ಶ್ರೀನಿವಾಸ್, ವಿಶ್ವವರಾ ಮಹಾ ಪಂಡಿತೆ ಕುರಿತು ಮೀರಾ ನಾಡಿಗ್ ಪರಿಚಯಿಸಿದರು. ಹಬ್ಬ ಸಂಭ್ರಮದ ಬಗ್ಗೆ ಶ್ರೀರಂಜಿನಿ ದತ್ತಾತ್ರಿ ಮಾತನಾಡಿದರು. ಒಟ್ಟು ಕಾರ್ಯಕ್ರಮಗಳ ವರದಿಯನ್ನು ದೀಪ ಶ್ರೀನಿವಾಸ್ ಮಂಡಿಸಿದರು. ಪ್ರತಿಯೊಬ್ಬರಿಗೂ ಬಾಗಿನ ಕೊಡುವ ಮೂಲಕ ಹಬ್ಬ ಸಂಭ್ರಮ ಅತ್ಯಂತ ಯಶಸ್ವಿಯಾಗಿ ನೆರವೇರಿತು
