Sunday, March 29, 2026
Sunday, March 29, 2026
Home Blog Page 562

Pragathi Apple Education ಸೆ.19 ರಂದು ಡಾ.ಸಿ.ಆರ್.ಚಂದ್ರಶೇಖರ್ ಅವರ ” ಓದುವ ಖುಷಿ- ಪರೀಕ್ಷಾ ಸಂಭ್ರಮ” ಪುಸ್ತಕ ಬಿಡುಗಡೆ.

0

Pragathi Apple Education 12 ವರ್ಷಕ್ಕೂ ಹೆಚ್ಚು ಕಾಲದಿಂದ ಪಿಯು ವಿಜ್ಞಾನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿವಮೊಗ್ಗದ ಪ್ರಗತಿ ಆಪಲ್ ಎಜ್ಯುಕೇಷನ್ ವತಿಯಿಂದ ಸೆ.19 ಮತ್ತು 20 ರಂದು ಅಂಬೇಡ್ಕರ್ ಭವನದಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿರುವ ಉಪನ್ಯಾಸ ಕಾರ್ಯಕ್ರಮ ಮತ್ತು ವಿವಿಧ ನೂತನ ಸ್ಕಾಲರ್‌ಶಿಪ್ ಯೋಜನೆಗಳಿಗೆ ಚಾಲನೆ ಮತ್ತು ಪ್ರಗತಿ ಸ್ಕಾಲರ್ಶಿಪ್ ಸಹಕಾರ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಗತಿ ಆಪಲ್ ಎಜ್ಯುಕೇಷನ್ ಸಂಸ್ಥಾಪಕ ಹಾಗೂ ಅಧ್ಯಕ್ಷ ವಿಜಯಕುಮಾರ್ ಬಳಿಗಾರ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸೆ.19ರಂದು ಬೆಳಿಗ್ಗೆ 10 ಗಂಟೆಗೆ ಹೈಸ್ಕೂಲ್ & ಪಿಯು ವಿಜ್ಞಾನ ವಿದ್ಯಾರ್ಥಿಗಳಿಗಾಗಿ ಓದುವ ಖುಷಿ, ಪರೀಕ್ಷಾ ಸಂಭ್ರಮ ಎನ್ನುವ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯ್ತಿ ಸಿಇಒ ಹೇಮಂತ ಎನ್. ಉದ್ಘಾಟಿಸಲಿದ್ದಾರೆ, ಮುಖ್ಯ ಉಪನ್ಯಾಸಕರಾಗಿ ಪದ್ಮಶ್ರೀ ಪುರಸ್ಕೃತ ಡಾ. ಸಿ.ಆರ್. ಚಂದ್ರಶೇಖರ್ ಆಗಮಿಸಲಿದ್ದು, ಶಿಕ್ಷಣ ಕ್ಷೇತ್ರದ ಅನೇಕರು ಭಾಗವಹಿಸಲಿದ್ದಾರೆ ಎಂದರು.

Pragathi Apple Education ಡಾ.ಸಿ.ಆರ್.ಚಂದ್ರಶೇಖರ್ ಅವರು ಬರೆದಿರುವ ಓದುವ ಖುಷಿ,ಪರೀಕ್ಷಾ ಸಂಭ್ರಮ ಪುಸ್ತಕದ ೧೧ನೇ ಆವೃತ್ತಿಯನ್ನು ರಾಮಕೃಷ್ಣ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಶೋಭಾ ವೆಂಕಟರಾಮಣ ಬಿಡುಗಡೆ ಮಾಡುವರು. ಈ ಪುಸ್ತಕವನ್ನು ಮಕ್ಕಳಿಗೆ ಉಚಿತವಾಗಿ ವಿತರಣೆ ಮಾಡಲಾಗುವುದು. ನಂತರ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಮೊದಲಗೋಷ್ಠಿ, ಮಧ್ಯಾಹ್ನ 2:30 ರಿಂದ ಪಿಯು ವಿಜ್ಞಾನ ಕಾಲೇಜುಗಳ ವಿದ್ಯಾರ್ಥಿಗಳಿಗೆ 2ನೇ ಗೋಷ್ಠಿ ನಡೆಯಲಿದೆ. ಸಂಜೆ 5 ಗಂಟೆಗೆ ಪರೀಕ್ಷೆ ಮತ್ತು ಪೋಷಕರ ಜವಾಬ್ದಾರಿ ಕುರಿತು ಡಾ.ಸಿ.ಆರ್.ಚಂದ್ರಶೇಖರ್, ಪರೀಕ್ಷೆ ಮತ್ತು ಆಹಾರ ಕುರಿತು ಮಕ್ಕಳ ತಜ್ಞ ಡಾ.ಸಿ.ಜಿ.ರಾಘವೇಂದ್ರ ವೈಲಾಯ ಉಪನ್ಯಾಸ ನೀಡಲಿದ್ದಾರೆ ಎಂದರು.

Shiralakoppa Police ಕೊಲೆ ಪ್ರಕರಣ, ಶಿರಾಳಕೊಪ್ಪ ಠಾಣೆಯಲ್ಲಿ ಮೂವರ ವಿರುದ್ಧ ಎಫ್ ಐ ಆರ್

0

Shiralakoppa Police ನಾಪತ್ತೆ ಪ್ರಕರಣ ವ್ಯಕ್ತಿಯೊಬ್ಬನ ಕೊಲೆಯ ಕೇಸ್‌ ಆಗಿ ಬಯಲಿಗೆ ಬಂದಿದೆ. ಪ್ರಕರಣವನ್ನು ಶಿರಾಳಕೊಪ್ಪ ಪೊಲೀಸ್‌ ಠಾಣೆ ಪೊಲೀಸರ ಬೇಧಿಸಿದ್ದು, ಈ ಸಂಬಂಧ ಸುಮೊಟೋ ಕೇಸ್‌ ದಾಖಲಿಸಿದ್ದಾರೆ.

ಶಿಕಾರಿಪುರ ತಾಲ್ಲೂಕು ನಾಗೀಹಳ್ಳಿ ಗ್ರಾಮದ ನಿವಾಸಿ ಕೃಷ್ಣಪ್ಪ ಕೊಲೆಯಾದವನು. ಈತನ ಮೃತದೇಹವನ್ನು ಕೂಡ ಛಿದ್ರ ಛಿದ್ರ ಮಾಡಿ ನದಿಗೆ ಎಸೆಯಲಾಗಿದೆ.

ಪ್ರಕರಣದ ಸಂಬಂಧ ಶಿರಾಳಕೊಪ್ಪ ಪೊಲೀಸರು ಮೂವರ ವಿರುದ್ಧ ಎಫ್ ಐ ಆರ್ ಮಾಡಿದ್ದಾರೆ.
ಕೊಲೆ, ಸಾಕ್ಷ್ಯ ನಾಶ, ಕ್ರಿಮಿನಲ್‌ ಸಂಚು ಆರೋಪಗಳನ್ನು ಹೊರಿಸಲಾಗಿದೆ.

ಸೆಪ್ಟೆಂಬರ್‌ 7 ರಂದು ಈ ಘಟನೆ ನಡೆದಿದೆ. ಆದರೆ ಪ್ರಕರಣ ಬೆಳಕಿಗೆ ಬಂದಿದ್ದು, ನಾಪತ್ತೆ ಪ್ರಕರಣ ದಾಖಲಾದ ಬಳಿಕ. ನಾಗೀಹಳ್ಳಿ ನಿವಾಸಿ 33 ವರ್ಷದ ಕೃಷ್ಣಪ್ಪ ಎಂಬವರ ಪತ್ನಿ ಶಿರಾಳಕೊಪ್ಪ ಪೊಲೀಸ್‌ ಠಾಣೆಗೆ ತಮ್ಮ ಪತಿ ಕಾಣೆಯಾಗಿರುವುದಾಗಿ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ವಿಚಾರಣೆ ಆರಂಭಿಸಿದ ಶಿರಾಳಕೊಪ್ಪ ಠಾಣೆ ಪೊಲೀಸರು ಕೃಷ್ಣಪ್ಪರ ಪತ್ನಿ ನೀಡಿದ ಸಂಶಯದ ಸುಳಿವನ್ನು ಆಧರಿಸಿ ನಾಗೀಹಳ್ಳಿ ಗ್ರಾಮದ ಕಿರಣನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃಷ್ಣಪ್ಪನ ಕೊಲೆಯ ರಹಸ್ಯ ಬಯಲಾಗಿದೆ.

ಎಫ್‌ಐಆರ್‌ ಪ್ರಕಾರ, ಕೃಷ್ಣಪ್ಪನ ಪತ್ನಿ ಜೊತೆ ಕಿರಣ್‌ ಎಂಬಾತ ಅನೈತಿಕ ಸಂಬಂಧ ಹೊಂದಿದ್ದ ಎಂದು ದೂರಲಾಗಿದೆ. ಇದೇ ವಿಚಾರದಲ್ಲಿ ಕೃಷ್ಣಪ್ಪ ಕಿರಣನನ್ನು ಕರೆದು ಬೈದು ಎಚ್ಚರಿಕೆ ನೀಡಿದ್ದನಂತೆ. ಈ ಕಾರಣಕ್ಕೆ ಕೃಷ್ಣಪ್ಪನನ್ನೇ ಕೊಲೆ ಮಾಡಲು ನಿರ್ಧರಿಸಿದ ಕಿರಣ ತನ್ನಿಬ್ಬರು ಸ್ನೇಹಿತರಾದ ಪ್ರತಾಪ್‌ ಹಾಗೂ ಗಣೇಶನ ಸಹಾಯ ಪಡೆದಿದ್ದಾನೆ. ಕೊಲೆಯ ಸ್ಕೆಚ್‌ ರೂಪಿಸಿಕೊಂಡ ಕಿರಣ, ಕಂದ್ಲಿ ಹಾಗೂ ಕುಡುಗೋಲು ಮತ್ತು ಪ್ಲಾಸ್ಟಿಕ್‌ ಕೊಪ್ಪೆಗಳನ್ನು ಬೈಕ್‌ವೊಂದರ ಬ್ಯಾಗ್‌ನಲ್ಲಿ ಇರಿಸಿಕೊಂಡು ಕೊಲೆ ಮಾಡಲು ಮುಂದಾಗಿದ್ದಾನೆ.

Shiralakoppa Police ತನ್ನ ಸ್ನೇಹಿತರಾದ ಗಣೇಶ ಹಾಗೂ ಪ್ರತಾಪನ ಮೂಲಕ ಕೃಷ್ಣಪ್ಪನಿಗೆ ಬೇರೆ ಊರಿನಲ್ಲಿ ಚೆನ್ನಾಗಿ ಕುಡಿಸಿ ತಡರಾತ್ರಿ ಗ್ರಾಮಕ್ಕೆ ವಾಪಸ್‌ ಕರೆ ತರುವಂತೆ ಹೇಳಿದ್ದೇನೆ. ಆತನ ಸ್ನೇಹಿತರು ಸಹ ಕಿರಣನ ಪ್ಲಾನಿನಂತೆ ಕೃಷ್ಣಪ್ಪನಿಗೆ ಚೆನ್ನಾಗಿ ಕುಡಿಸಿ ನಾಗಿಹಳ್ಳಿ ಕ್ರಾಸ್‌ ಬಳಿಗೆ ಕರೆತಂದಿದ್ದಾರೆ. ಅಲ್ಲಿಗೆ ಬಂದ ಕಿರಣ ಕೃಷ್ಣಪ್ಪನಿಗೆ ಹೊಡೆದು, ಬೈದು ನಂತರ ಕುಡುಗೋಲಿನಿಂದ ಕುತ್ತಿಗೆಗೆ ಏಟು ಕೊಟ್ಟಿದ್ದಾನೆ. ಆ ಬಳಿಕ ಅಲ್ಲಿಯೇ ಇದ್ದ ಗುಂಡಿಯೊಂದಕ್ಕೆ ಕೃಷ್ಣಪ್ಪನನ್ನು ಶಿಫ್ಟ್‌ ಮಾಡಿ ಆತನ ಅಂಗಾಂಗಗಳನ್ನು ಕತ್ತರಿಸಿ ಎರಡು ಪ್ಲಾಸ್ಟಿಕ್‌ ಚೀಲಗಳಿಗೆ ತುಂಬಿಕೊಂಡಿದ್ದಾರೆ. ಬಳಿಕ ಗಣೇಶ ಹಾಗೂ ಕಿರಣ ಒಂದು, ಪ್ರತಾಪ ಇನ್ನೊಂದು ಶವದ ಚೀಲವನ್ನು ಹಿಡಿದು ಕೊರಟೆಗೆರೆ , ಚಿಕ್ಕೇರೂರು, ಬಾರಂಗಿ ಮೂಲಕ ಗೋಂದಿ ಬ್ರಿಡ್ಜ್‌ ಬಳಿಗೆ ತೆರಳಿದ್ದಾರೆ. ಅಲ್ಲಿ ನದಿಗೆ ಎರಡು ಚೀಲದಲ್ಲಿದ್ದ ಕೃ‍ಷ್ಣಪ್ಪನ ಅಂಗಾಂಗಗಳನ್ನು ಸುರಿದು ಪರಾರಿ ಆಗಿದ್ದಾರೆ.

Shivamogga Hindu Mahasabha Ganapati ಶಿವಮೊಗ್ಗದಲ್ಲಿ ಅಹಿತಕರ ಘಟನೆ ನಡೆಯದಂತೆ ಮಾರುವೇಷದಲ್ಲಿ ಪೊಲೀಸ್ ಸಿಬ್ಬಂದಿ ನಿಯುಕ್ತ

0

Shivamogga Hindu Mahasabha Ganapati ಇತಿಹಾಸ ಪ್ರಸಿದ್ದ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ನಾಳೆ ನಡೆಯಲಿದ್ದು ಶಿವಮೊಗ್ಗ ನಗರ ವಿವಿದ ದೇವರ ಮೂರ್ತಿ.ಕೇಸರಿ ಕಮಾನು.ಭಗವಾಧ್ವಜಗಳಿಂದ ಕಂಗೊಳಿಸುತ್ತಾ ಜನಮನ ಸೂರೆಗೊಳ್ಳುತ್ತಿದೆ.

ಗಾಂಧಿಬಜಾರ್.ಬಿ
ಹೆಚ್.ರಸ್ತೆ.ಶಿವಪ್ಪ ನಾಯಕ‌ ವೃತ್ತ.ಗೋಪಿ ಸರ್ಕಲ್ ಅಲಂಕಾರ ನಡೆಯುತ್ತಿದೆ..ಇತ್ತ ಪೋಲಿಸ್ ಇಲಾಖೆಯ ಬಂದೋಬಸ್ತ್ ವ್ಯಾಪಕವಾಗಿದೆ.
Shivamogga Hindu Mahasabha Ganapati ಶಿವಮೊಗ್ಗ ಕ್ಕೆ ಬರುವ ಎಲ್ಲಾ ರಸ್ತೆ. ತಿರುವು.ಅಯಕಟ್ಡಿನ ಸ್ಥಳಗಳಲ್ಲಿ ಬಿಗಿ ಪಹರೆ ಕೈಗೊಳ್ಳಲಾಗಿದೆ.ಜೊತೆಗೆ ಸಿ.ಸಿ.ಟಿವಿ ದಿನದ 24 ಗಂಟೆಯೂ ಚಾಲನೆಯಲ್ಲಿದ್ದು‌ ಕಿಡಿಗೇಡಿಗಳ ಚಲನವಲನವನ್ನು ಇಡೀ ಶಿವಮೊಗ್ಗ ನಗರದಾದ್ಯಂತ ಮಾಡಲಾಗುತ್ತಿದೆ.
ಕೆ.ಎಸ್.ಆರ್.ಪಿ, .ಆರ್.ಎ.ಎಫ್ ತುಕಡಿಗಳು, ಪೋಲಿಸರ ಜೊತೆ ಗೃಹರಕ್ಷಕದಳದವರು ಕಾರ್ಯ ನಿರ್ವಹಣೆ ಮಾಡಲಿದ್ದು ಅದರಲ್ಲೂ ಗಸ್ತು ಪೋಲಿಸ್ ವಾಹನ, ಗುಪ್ತಚಾರರ ಪಡೆ,ಮಾರು ವೇಷದಲ್ಲಿರುವ ಪೋಲಿಸ್ ಪಡೆ ನಿಯೋಜಿಸಸಲಾಗಿದೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ವ್ಯಾಪಕ ಬಂದೋಬಸ್ತ್ ಕೈಗೊಳ್ಳಲಾಗಿದೆ.

Hindu Mahasabha Shivamogga ಹಿಂದೂ ಮಹಾಸಭಾ ಗಣೇಶ ಮೆರವಣಿಗೆ. ವಿಧ್ವಂಸಕರು ಮಿಸುಕಾಡದಂತೆ ಪೊಲೀಸ್ ಬಂದೋಬಸ್ತ್

0

Hindu Mahasabha Shivamogga ಶಿವಮೊಗ್ಗ ನಗರದಲ್ಲಿ ನಡೆಯುವ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ಬಂದೋಬಸ್ತ್ ಕರ್ತವ್ಯಕ್ಕೆ 03 ಹೆಚ್ಚುವರಿ ಪೊಲೀಸ್ ಅಧೀಕ್ಷಕರು, 25 ಪೊಲೀಸ್ ಉಪಾಧೀಕ್ಷಕರು, 60 ಪೋಲಿಸ್ ನಿರೀಕ್ಷಕರು, 110 ಪೊಲೀಸ್ ಉಪನಿರೀಕ್ಷಕರು, 200 ಸಹಾಯಕ ಪೊಲೀಸ್ ನಿರೀಕ್ಷಕರು, 3,500 ಪೊಲೀಸ್ ಹೆಡ್ ಕಾನ್ಸ್ ಟೆಬಲ್, ಪೊಲೀಸ್ ಕಾನ್ಸ್ ಟೆಬಲ್ ಮತ್ತು ಗೃಹರಕ್ಷಕ ದಳ ಸಿಬ್ಬಂದಿಗಳು, 01-RAF ತುಕಡಿ 08 ಡಿಎಆರ್ ತುಕಡಿ, 01 QRT ತುಕಡಿ, 01 DSWAT ತುಕಡಿ, 10 ಕೆಎಸ್ಆರ್.ಪಿ ತುಕಡಿಗಳು, 05 ದ್ರೋಣ್ ಕ್ಯಾಮರಾಗಳು, 100 ವಿಡಿಯಾ ಗ್ರಾಫರ್ಸ್ ಗಳನ್ನು ನಿಯೋಜಿಸಲಾಗಿದೆ.

Hindu Mahasabha Shivamogga ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜನೆ ಮಾಡಲಾದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ, ಈ ದಿನ ದಿನಾಂಕ: 16-09-2024 ರಂದು ಮಧ್ಯಾಹ್ನ ಶಿವಮೊಗ್ಗ ನಗರದ ಡಿಎಆರ್ ಕವಾಯತು ಮೈಧಾನದಲ್ಲಿ ಶ್ರೀ ಮಿಥುನ್ ಕುಮಾರ್ ಐಪಿಎಸ್ ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆರವರು ಪೊಲೀಸ್ ಕವಾಯಿತು ಮೈದಾನ ಶಿವಮೊಗ್ಗದಲ್ಲಿ ಬ್ರೀಫಿಂಗ್ ನಡೆಸಿ ಬಂದೋಬಸ್ತ್ ಸಂದರ್ಭದಲ್ಲಿ ನಿರ್ವಹಿಸಬೇಕಾದ ಕರ್ತವ್ಯಗಳ ಕುರಿತು ಸಲಹೆ ಮತ್ತು ಸೂಚನೆಗಳನ್ನು ನೀಡಿದರು.

Krishnarajendra Water Purification Plant ಗಮನಿಸಿ ಸೆ. 18 & 19 ರಂದು ಇಡೀ ಶಿವಮೊಗ್ಗ ನಗರದಲ್ಲಿ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯ

0

Krishnarajendra Water Purification Plant ಶಿವಮೊಗ್ಗ ನಗರದ ಕೃಷ್ಣರಾಜೇಂದ್ರ ಜಲಶುದ್ದೀಕರಣ ಘಟಕಕ್ಕೆ ವಿದ್ಯುತ್ ವ್ಯತ್ಯಯ, ಭೂಕೇಬಲ್ ಚಾಲನೆಗೊಳ್ಳುತ್ತಿರುವುದರಿಂದ ಎರಡು ದಿನ ನಗರದಲ್ಲಿ ನೀರಿನ ವ್ಯತ್ಯಯ ಉಂಟಾಗಲಿದೆ.

Krishnarajendra Water Purification Plant ಮಹಾನಗರ ಪಾಲಿಕೆ ವತಿಯಿಂದ ಹೊಸದಾಗಿ ಭೂಗತ ಕೇಬಲ್ ಅಳವಡಿಸಿದ್ದು, ಕೇಬಲ್ ಚಾಲನೆಗೊಳಿಸಬೇಕಾಗಿರುವುದರಿಂದ 18-9-2024 ರಂದು ಜಲಶುದ್ದೀಕರಣಕ್ಕೆ ವಿದ್ಯುತ್ ವ್ಯತ್ಯಯವಾಗುವುದರಿಂದ ದಿನಾಂಕ:18-9-2024 ಮತ್ತು ದಿನಾಂಕ:19-9-2024 ರಂದು ಶಿವಮೊಗ್ಗ ನಗರದಲ್ಲಿ ದೈನಂದಿನ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗುವುದರಿಂದ ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸಲು ಕೋರಲಾಗಿದೆ.

Belur Police Station ಕ್ಲಬ್ಬಿನ ಮಬ್ಬಿನಲ್ಲಿ ಅನುಚಿತ ವರ್ತನೆ. ಆರೋಪದ ಮೇರೆ ಪೊಲೀಸ್ ಸಿಬ್ಬಂದಿಯ ಅಮಾನತು

0

Belur Police Station ಕ್ಲಬ್ನಲ್ಲಿ ಪಾರ್ಟಿ ಮಾಡಿ ಅನುಚಿತ ವರ್ತನೆ ತೋರಿದ ಆರೋಪದಲ್ಲಿ ಹಾಸನ ಜಿಲ್ಲೆಯ ಬೇಲೂರು ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಸುಬ್ರಹ್ಮಣ್ಯ, ತಾಲ್ಲೂಕಿನ ಹಳೆಬೀಡು ವೃತ್ತದ ಸರ್ಕಲ್ ಇನ್ಸಪೆಕ್ಟರ್ ಜಯರಾಂ ಹಾಗೂ ಬೇಲೂರು ಠಾಣೆಯ ಪಿಎಸ್ಐ ಪ್ರವೀಣ್ ಸೇರಿ ಮೂವರನ್ನ ಅಮಾನತು ಮಾಡಿ ಹಾಸನ ಎಸ್ಪಿ ಮೊಹಮದ್ ಸುಜೀತಾ ಆದೇಶ ಹೊರಡಿಸಿದ್ದಾರೆ.

ಕ್ಲಬ್‌ನಲ್ಲಿ ಬಿಲ್‌ ವಿಚಾರಕ್ಕೆ ಇವರು ಕಿರಿಕ್‌ ಮಾಡಿದ್ದರು.

Chikkamagalur Police ಚಿಕ್ಕಮಗಳೂರಿನಲ್ಲಿ ದ್ವಿಚಕ್ರವಾಹನದಲ್ಲಿ ಪ್ಯಾಲಸ್ತೈನ್ ಧ್ವಜ ಹಿಡಿದು ಓಡಾಡಿದ ಘಟನೆ

0

Chikkamagalur Police ಚಿಕ್ಕಮಗಳೂರು ನಗರದ ಪ್ರಮುಖ ರಸ್ತೆಗಳಲ್ಲಿ ಮುಸ್ಲಿಂ ಯುವಕರು ಪ್ಯಾಲಿಸ್ತೀನ್‌ ಧ್ವಜ ಹಿಡಿದು ದ್ವಿಚಕ್ರ ವಾಹನದ ಮೇಲೆ ಓಡಾಡಿರುವ ವಿಡಿಯೋ ವೈರಲ್ ಆಗಿದೆ.

Chikkamagalur Police ಪ್ಯಾಲಿಸ್ತೀನ್‌ ಧ್ವಜ ಹಿಡಿದು ಓಡಾಡಿದ ಮುಸ್ಲಿಂ ಯುವಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಿಂದೂ ಸಂಘಟನೆಗಳು ಆಗ್ರಹಿಸಿವೆ. ಚಿಕ್ಕಮಗಳೂರು ನಗರ ಠಾಣೆ ಮುಂಭಾಗ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

Max Super Speciality Hospital ಆತ್ಮಹತ್ಯೆ , ಮಾನಸಿಕ ಪಿಡುಗು. ಸೂಕ್ತರೀತಿಯಲ್ಲಿ ಸ್ಪಂದಿಸಿದರೆ ತಡೆಯುವುದು ಖಂಡಿತ ಸಾಧ್ಯ- ಡಾ.ಅಫ್ತಾಬ್ ಅಹ್ಮದ್ ಮಾಲ್ದರ್

0

Max Super Speciality Hospital ಆತ್ಮಹತ್ಯಾ ಪ್ರವೃತ್ತಿಯುಳ್ಳವರ ಜೊತೆ ಆತ್ಮೀಯತೆಯಿಂದ ಮಾತನಾಡಿದರೆ ಅವರಿಗೆ ಸಾಕಷ್ಟು ಸಮಾಧಾನ ಸಿಗುತ್ತದೆ. ಸೂಕ್ತವಾಗಿ ಸ್ಪಂದಿಸಿದಾಗ ಅವರ ಬದುಕಿನಲ್ಲಿ ಮಹತ್ತರವಾದ ಬದಲಾವಣೆಯನ್ನೇ ತರಬಹುದು. ನೀವು ವೃತ್ತಿಪರ ಸಲಹೆಗಾರರು ಅಥವಾ ಮನೋವೈದ್ಯರಲ್ಲದೇ ಇದ್ದರೂ ಸಹ ನಿಮ್ಮ ಮಾತಿನಲ್ಲಿ ನಿಜವಾದ ಕಾಳಜಿ, ಸಹಾನುಭೂತಿ ಹಾಗೂ ಆತ್ಮವಿಶ್ವಾಸ ಇದ್ದರೆ ಆತ್ಮಹತ್ಯೆಗಳನ್ನು ತಡೆಯುವುದು ಖಂಡಿತ ಸಾಧ್ಯವಿದೆ ಎಂದು ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮನೋವೈದ್ಯರಾದ ಡಾ. ಆಫ್ತಾಬ್ ಅಹಮದ್ ಮಾಲ್ದರ್ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಆತ್ಮಹತ್ಯಾ ತಡೆ ಸಪ್ತಾಹದ ಅಂಗವಾಗಿ ನಗರದ ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ಸಭಾಂಗಣದಲ್ಲಿ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಡಾ.ಆಫ್ತಾಬ್, ಆತ್ಮಹತ್ಯೆ ಎಂಬುದು ಮಾನಸಿಕ ಪಿಡುಗಿನಿಂದ ಸಂಭವಿಸುವ ಕ್ರಿಯೆ, ಇದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದಾಗ ಅದನ್ನು ತಡೆಯುವುದು ಖಂಡಿತ ಸಾಧ್ಯವಿದೆ ಎಂದು ಹೇಳಿದರು.

ತಮ್ಮ ಉಪನ್ಯಾಸದಲ್ಲಿ ಆತ್ಮಹತ್ಯೆಗೆ ಪ್ರಚೋದಿಸಬಹುದಾದ ಹಲವಾರು ವಿಷಯಗಳ ಬಗ್ಗೆ ಪ್ರಸ್ತಾಪಿಸಿ ಅದನ್ನು ತಡೆಯಲು ಸಾಮಾನ್ಯ ಜನರು ಅನುಸರಿಬೇಕಾದ ಸರಳ ನಿಯಮಗಳ ಬಗ್ಗೆ ತಿಳಿಸಿದರು.

ಅಂತಹ ಮಾನಸಿಕ ಸಮಸ್ಯೆಯಲ್ಲಿ ಸಿಲುಕಿರುವವರೊಡನೆ ಮಾತನಾಢುವಾಗ ನಮ್ಮ ಮಾತುಗಳು ಕೊಂಚವಾದರೂ ಅವರಿಗೆ ಭರವಸೆಯ ಬೆಳಕನ್ನು ಮೂಡಿಸಿದರೆ ಅವರಿಗೆ ಹೊಸ ಬದುಕನ್ನು ಕಟ್ಟಿಕೊಡಬಹುದು. ಅಂತಹ ಭರವಸೆ ಮೂಡಿತೆಂದರೆ ಸಾಕು ಮುಂದಿನ ಪರಿಹಾರಗಳಿಗೆ ನುರಿತ ಮನೋವೈದ್ಯರು ಅಥವಾ ತರಬೇತಿ ಹೊಂದಿದ ಆಪ್ತಸಲಹೆಗಾರರ ಸಹಾಯ ಪಡೆದು ಅವರ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸಬಹುದು ಎಂದು ಅವರು ಹೇಳಿದರು.

ಸಾರ್ವಜನಿಕರಲ್ಲಿ ಆತ್ಮಹತ್ಯೆ ತಡೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಸೆಪ್ಟೆಂಬರ್ 08 ರಿಂದ 14 ರವರೆಗೆ ರಾಷ್ಟ್ರೀಯ ಆತ್ಮಹತ್ಯೆ ತಡೆ ಸಪ್ತಾಹ ಎಂದು ಆಚರಿಸಲಾಗುತ್ತದೆ. ?ಚೇಂಜಿಂಗ್ ದ ನೆರೇಟಿವ್ ಆನ್ ಸುಸೈಡ್? ಎಂಬುದು ಈ ಮಾಸಾಚರಣೆಯ ತ್ರೈವಾರ್ಷಿಕ ಧ್ಯೇಯವಾಗಿದೆ. ಆತ್ಮಹತ್ಯೆ ಎಂಬ ಕಳಂಕವನ್ನು ಕಡಿಮೆಗೊಳಿಸುವುದು ಹಾಗೂ ಅದನ್ನು ತಡೆಯಲು ಮುಕ್ತ ಸಂಭಾಷಣೆಯನ್ನು ಪ್ರೋತ್ಸಾಹಿಸುವುದರ ಕುರಿತು ಜಾಗೃತಿ ಮೂಡಿಸುವುದೇ ಈ ಧ್ಯೇಯದ ಗುರಿಯಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕ್ಲಬ್ ಅಧ್ಯಕ್ಷರಾದ ರೊ.ಮುಸ್ತಾಕ್ ಮಾತನಾಡಿ ಇತ್ತೀಚೆಗೆ ಯುವಜನರಲ್ಲಿ ಸಮಸ್ಯೆಗಳನ್ನು ಎದುರಿಸುವ ಮನೋಸ್ಥೈರ್ಯ ಇಲ್ಲದಂತಾಗಿದೆ, ಸಣ್ಣಪುಟ್ಟ ವಿಚಾರಗಳಿಗೆಲ್ಲ ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

Max Super Speciality Hospital ಮನೆಯಲ್ಲಿ ಪೋಷಕರೊಡನೆ, ಹೊರಗೆ ಸ್ನೇಹಿತರೊಡನೆ, ಕೆಲಸದಲ್ಲಿ ಸಹೋದ್ಯೋಗಿಗಳೊಡನೆ ಮುಕ್ತವಾಗಿ ಮಾತನಾಡುವುದರಿಂದ ಹಲವಾರು ಮಾನಸಿಕ ಸಮಸ್ಯೆಗಳನ್ನು ತಡೆಯಬಹುದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕ್ಲಬ್ ಉಪಾಧ್ಯಕ್ಷೆಯಾದ ರೊ.ಅಲೇಖ ಎಸ್.ಆರ್, ಮಾಜಿ ಅಧ್ಯಕ್ಷ ರೊ.ಸಿ.ರಾಜು, ವಲಯ ಸೇನಾಧಿಕಾರಿ ರೊ.ಮಂಜುಳಾ ರಾಜು, ಮಾಜಿ ಗವರ್ನರ್ ರೊ.ಹೆಚ್.ಎಲ್. ರವಿ ಹಾಗೂ ಕ್ಲಬ್ ಸದಸ್ಯರು, ಸಾರ್ವಜನಿಕರು ಪಾಲ್ಗೊಂಡಿದ್ದರು.

ಡಾ. ಆಫ್ತಾಬ್ ಅಹಮದ್ ಮಾಲ್ದರ್ ನಗರದ ಎನ್.ಟಿ.ರಸ್ತೆಯಲ್ಲಿರುವ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಲಭ್ಯರಿರುತ್ತಾರೆ. ಯಾವುದೇ ರೀತಿಯ ಮಾನಸಿಕ ಸಮಸ್ಯೆಗಳಿಗೆ ಸೂಕ್ತ ರೀತಿಯ ಚಿಕಿತ್ಸೆಯನ್ನು ಪಡೆಯಲು ಅವರನ್ನು ಸಂಪರ್ಕಿಸಬಹುದು.

Sanchari East Police Station ಮಲವಗೊಪ್ಪ ಬಳಿ‌ ಹಾಲಿನ ವಾಹನಕ್ಕೆ ಸಿಲುಕಿ ಮಹಿಳೆ ಸಾವು

0

Sanchari East Police Station ಶಿವಮೊಗ್ಗ ನಗರದ ಹೊರವಲಯ ಮಲವಗೊಪ್ಪದಲ್ಲಿ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಮಹಿಳಾ ಪಾದಚಾರಿಯೊಬ್ಬರು ಸಾವನ್ನಪ್ಪಿದ್ದಾರೆ. ಅವರನ್ನ ಮೆಗ್ಗಾನ್ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ದಾಖಲಿಸಲಾಗಿದೆ.

ಶಿವಮೊಗ್ಗದಿಂದ ಮಾಚೇನಹಳ್ಳಿಯ ಶಿಮೂಲ್‌ಗೆ ಹೊರಟಿದ್ದ ಟಾಟಾ ಏಸ್‌ನ ಹಾಲಿನ ವಾಹನ ಮಲಗೊಪ್ಪದ ಬಳಿ ಮಹಿಳೆಯರಿಬ್ಬರಿಗೆ ಡಿಕ್ಕಿ ಹೊಡೆದಿದೆ. ಇದರಲ್ಲಿ ನಿರ್ಮಲಾ ಬಾಯಿ ಎಂಬ (50) ವರ್ಷದ ಮಹಿಳೆ ಸಾವು ಕಂಡಿದ್ದಾರೆ.
ಇನ್ನೊಬ್ಬರ ಮಹಿಳೆ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಮಲವಗೊಪ್ಪದಲ್ಲಿಯೇ ಮನೆಯಿರುವುದರಿಂದ ರಸ್ತೆ ಬದಿ ನಡೆದುಕೊಂಡು ಹೋಗುವಾಗ ಈ ಘಟನೆ ನಡೆದಿದೆ.

Sanchari East Police Station ಪ್ರಕರಣ ಸಂಚಾರಿ ಪೂರ್ವ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಇದೇ ವೇಳೆ ಮಲವಗೊಪ್ಪದ ಮುಖ್ಯರಸ್ತೆಯಲ್ಲಿರುವ ವಿದ್ಯುತ್ ಕಂಬವೂ ಸಹ ಅಪಘಾತದಿಂದ ಹಾನಿಗೊಳಗಾಗಿರುವುದು ತಿಳಿದು ಬಂದಿದೆ. ‌

Girish Kasaravalli ಸಿನಿಮಾದ ಉದ್ದೇಶ ಸಾಹಿತ್ಯ ಕೃತಿಯ ಮಾಧ್ಯಮಾಂತರ.‌ಇಲ್ಲಿ ನಿರ್ದೇಶಕನಿಗೆ ಸ್ವಾತಂತ್ರ್ಯ ಅಗತ್ಯ- ಗಿರೀಶ್ ಕಾಸರವಳ್ಳಿ

0

Girish Kasaravalli ಏಳೆಂಟು ವರ್ಷಗಳ ಬಳಿಕ ಮತ್ತೊಂದು ಸಿನೆಮಾ ನಿರ್ದೇಶನ ಮಾಡಲು ಮುಂದಾಗಿದ್ದೇನೆ. ಬಹುತೇಕ ಸೆಪ್ಟೆಂಬರ್ ೨೩ ರಿಂದ ಚಿತ್ರೀಕರಣ ಆರಂಭ ಆಗಲಿದೆ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ತಿಳಿಸಿದರು.
ಗಿರೀಶ್ ಕಾಸರವಳ್ಳಿಯವರ ಚಲನಚಿತ್ರಗಳ ಕುರಿತು ಪತ್ರಿಕಾ ಭವನದಲ್ಲಿ ಶನಿವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸದ್ಯ ಒಂದು ಸಿನೆಮಾ ಮಾಡುತ್ತಿದ್ದೇನೆ. ಅನಂತಮೂರ್ತಿ ಅವರ “ಆಕಾಶ ಮತ್ತು ಬೆಕ್ಕು” ಕೃತಿ ಆಧರಿತ. ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಂವಾದದಲ್ಲಿ ಅವರ ಕೂರ್ಮಾವತಾರದಲ್ಲಿ ಹಲವು ಸಂಕೇತಗಳ ಒಳ ತಿರುಳು ಏನು? ಎಂಬುದಕ್ಕೆ ಕಾಸರವಳ್ಳಿ ಉತ್ತರಿಸಿ, ಸಿನೆಮಾದಲ್ಲಿ ಸಂಕೇತ ಎಂಬುದು ಮುಜುಗರ ಸಂಗತಿ. ೧೯೭೦ ರಲ್ಲಿ ಹೊಸ ಸಿನಿಮಾ ಬಂದಾಗ ಹೊಸ ಅಲೆ ಅಂತ ಕರೆದರು. ಸಿನಿಮಾ ಮೊದಲು ಅನುಭವಿಸೋಣ. ಯಾವ ದೃಶ್ಯ ಸಾಂದ್ರತೆ ಹೆಚ್ಚು ಮಾಡುತ್ತೆ ಅನ್ನುವುದು ಮುಖ್ಯ. ದಿನನಿತ್ಯದ ವ್ಯವಹಾರದಲ್ಲಿ ನೋಡಿರದ ಸಂಗತಿ ಸಿನೆಮಾಗಳಲ್ಲಿ ಕಾಣಬಹುದು. ದೃಶ್ಯ ವಿವರಗಳನ್ನು ಬಿಂಬ ಎಂದು ಕರೆಯುತ್ತೇವೆ ಎಂದರು.
ಮಾರುಕಟ್ಟೆ ಸಂಸ್ಕೃತಿಯನ್ನು ಒಪ್ಪಲ್ಲ…
ನಿಮ್ಮ ದೃಷ್ಟಿಯಿಂದ ಸಿನೆಮಾ ಸಂದೇಶವೇ, ವ್ಯಾಪಾರವೇ? ಎಂಬುದಕ್ಕೆ ಪ್ರತಿಕ್ರಿಯಿಸಿ, ನಾನು ನಿರ್ದೇಶಕ. ನಾನು ಉಪದೇಶ ಮಾಡುವವ ಅಲ್ಲ. ಮೇಷ್ಟ್ರು ಮಕ್ಕಳಿಗೆ ಪಾಠ ಮಾಡುತ್ತಾರೆ. ಕಲೆಯಲ್ಲಿ ಯಾವತ್ತೂ ಸಮಾನಾಂತರ ಇರಬೇಕು. ಪ್ರೇಕ್ಷಕರು ಯಾವತ್ತೂ ದಡ್ಡರಲ್ಲ. ಹಾಗಾಗಿ ನಿರ್ದೇಶಕ ಜಾಣ ಎಂಬ ಅರ್ಥದಲ್ಲಿ ಚಿತ್ರ ತೆಗೆಯಬಾರದು ಎಂದರು.
ಈಗ ಎಲ್ಲರೂ ಮಾರುಕಟ್ಟೆ ಸಂಸ್ಕೃತಿಯ ಕೂಸುಗಳು. ನನ್ನ ಸಿನೆಮಾವೂ ಕಮಷಿರ್ಯಲ್ ಆದರೆ ಅದು ಓಡಲ್ಲ ನಾನೇನು ಮಾಡಲಿ. ಎಲ್ಲರೂ ಹಾಕಿದ ಬಂಡವಾಳ ಬರಲಿ ಎಂದೇ ನಿರೀಕ್ಷೆ ಮಾಡುತ್ತಾರೆ. ಕೊಲೆ, ಹಿಂಸೆ, ಅತ್ಯಾಚಾರ ಬಂಡವಾಳ ಮಾಡಿಕೊಳ್ಳುವ ಮಾರುಕಟ್ಟೆ ಸಂಸ್ಕೃತಿಯನ್ನು ನಾನು ಒಪ್ಪಲ್ಲ ಎಂದರು.
ಇಲ್ಲಿ ಶಿಕ್ಷಣ ಇಲ್ಲ…
Girish Kasaravalli ಕಲಾತ್ಮಕ ಚಿತ್ರ ಸಾಮಾನ್ಯ ಜನರನ್ನು ಮುಟ್ಟುವಲ್ಲಿ ವಿಫಲ ಆಗಿರುವುದು ಯಾಕೆ? ಎಂಬ ಪ್ರಶ್ನೆಗೆ, ಸಾಮಾನ್ಯ ಜನರು ಯಾರು? ದೋಷ ನನ್ನಲ್ಲಿ ಇಲ್ಲ. ಕೇರಳದಲ್ಲಿ ಈ ತರಹ ಸಿನಿಮಾ ಓಡುತ್ತೆ. ಅವರಿಗೆ ಅದರ ಮಹತ್ವ ಗೊತ್ತಿದೆ. ಆದರೆ ಬೆಂಗಳೂರಿನಲ್ಲಿ ಓಡುವುದಿಲ್ಲ. ಒಳ್ಳೆಯ ಕಲೆ ಅನುಭವಿಸುವ ಶಿಕ್ಷಣ ಅವರಿಗೆ ಕೊಟ್ಟಿಲ್ಲ ಅಷ್ಟೇ. ಸಿನಿಮಾದಲ್ಲಿ ಸಮಸ್ಯೆ ಇಲ್ಲ ಎಂದರು.
ಪುಸ್ತಕದ ಕಥೆಯನ್ನು ಚಿತ್ರಕಥೆ ಮಾಡುವಾಗ ಯಾವ ರೀತಿ ಸವಾಲು ಬರುತ್ತವೆ ಎಂಬುದಕ್ಕೆ ಪ್ರತಿಕ್ರಿಯಿಸಿ, ಸಿನೆಮಾ ಉದ್ದೇಶ ಸಾಹಿತ್ಯ ಕೃತಿಯ ಮಾಧ್ಯಮಾಂತರ. ಕೃತಿಕಾರ ಹೇಳುವ ವಿಷಯದ ಜೊತೆಗೆ ಇನ್ನೊಂದು ವಿಷಯ ಹೇಳುತ್ತೇವೆ. ನಮ್ಮ ತಿಕ್ಕಾಟ ಇರುತ್ತೆ. ನಿರ್ದೇಶಕನಿಗೆ ಇಲ್ಲಿ ಸ್ವಾತಂತ್ರ‍್ಯ ಅಗತ್ಯ ಎಂದರು.
ನಾನು ಚಿತ್ರಕಥೆ ಬರೆಯುವುದಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತೇನೆ. ದ್ವೀಪ ಚಿತ್ರದ ಕಥೆ ಬರೆಯಲು ಹನ್ನೆರಡು ವರ್ಷ ತೆಗೆದುಕೊಂಡಿದ್ದೆ. ಅದು ಆನಂದದಾಯಕ ಮತ್ತು ಶ್ರಮದ ಕೆಲಸ. ನನ್ನ ಚಿತ್ರಕ್ಕೆ ನಟ, ನಟಿ ಅಷ್ಟು ಮುಖ್ಯ ಅಲ್ಲ. ಚಿತ್ರಕಥೆ ಬರೆಯುವಾಗಲೇ ಪಾತ್ರದ ಚಹರೆ ಸ್ಪಷ್ಟ ಆಗಿರುತ್ತೆ ಎಂದರು.
ಹಿರಿಯ ರಂಗಕರ್ಮಿ ಕೆ. ಜಿ. ಕೃಷ್ಣಮೂರ್ತಿ ಸಂವಾದಕ್ಕೆ ಚಾಲನೆ ನೀಡಿ ಮಾತನಾಡಿ, ಅಂತರಾಷ್ಟ್ರೀಯ ಸಿನೆಮಾ ಪ್ರಶಸ್ತಿಗೆ ಆಯ್ಕೆಯಾದ ೨೦ ಸಿನೆಮಾಗಳಲ್ಲಿ ಘಟಶ್ರಾದ್ಧ ಕೂಡ ಒಂದು. ಇದು ಸಣ್ಣ ವಿಷಯ ಅಲ್ಲ. ಕಾಸರವಳ್ಳಿ ಸಿನೆಮಾದಲ್ಲಿ ಪ್ರತಿ ಒಂದಕ್ಕೂ ನಟನೆ, `ಭಾಷೆ, ಉಡುಪು ಎಲ್ಲವೂ ನಿಖರತೆ ಇದೆ. ಸಿನೆಮಾ ನೋಡುವುದು ಮತ್ತು ಅರ್ಥ ಮಾಡಿಕೊಳ್ಳಲು ಕಾಸರವಳ್ಳಿ ಜೊತೆಗೆ ಸಂವಾದ ಉತ್ತಮ ಎಂದರು.
ಲೇಖಕರು ಹಾಗೂ ಗಿರೀಶ್ ಕಾಸರವಳ್ಳಿಯವರ ಒಡನಾಡಿ ಗೋಪಾಲಕೃಷ್ಣ ಪೈ, ಹರೀಶ್ ಕಾರ್ಣಿಕ್, ಜಿ.ವಿಜಯಕುಮಾರ್ ಇದ್ದರು. ಸಂವಾದವನ್ನು ಪ್ರಾಚಾರ್ಯ ಡಾ.ಕೆ.ಚಿದಾನಂದ ನಡೆಸಿಕೊಟ್ಟರು.