Tuesday, April 29, 2025
Tuesday, April 29, 2025

Max Super Speciality Hospital ಆತ್ಮಹತ್ಯೆ , ಮಾನಸಿಕ ಪಿಡುಗು. ಸೂಕ್ತರೀತಿಯಲ್ಲಿ ಸ್ಪಂದಿಸಿದರೆ ತಡೆಯುವುದು ಖಂಡಿತ ಸಾಧ್ಯ- ಡಾ.ಅಫ್ತಾಬ್ ಅಹ್ಮದ್ ಮಾಲ್ದರ್

Date:

Max Super Speciality Hospital ಆತ್ಮಹತ್ಯಾ ಪ್ರವೃತ್ತಿಯುಳ್ಳವರ ಜೊತೆ ಆತ್ಮೀಯತೆಯಿಂದ ಮಾತನಾಡಿದರೆ ಅವರಿಗೆ ಸಾಕಷ್ಟು ಸಮಾಧಾನ ಸಿಗುತ್ತದೆ. ಸೂಕ್ತವಾಗಿ ಸ್ಪಂದಿಸಿದಾಗ ಅವರ ಬದುಕಿನಲ್ಲಿ ಮಹತ್ತರವಾದ ಬದಲಾವಣೆಯನ್ನೇ ತರಬಹುದು. ನೀವು ವೃತ್ತಿಪರ ಸಲಹೆಗಾರರು ಅಥವಾ ಮನೋವೈದ್ಯರಲ್ಲದೇ ಇದ್ದರೂ ಸಹ ನಿಮ್ಮ ಮಾತಿನಲ್ಲಿ ನಿಜವಾದ ಕಾಳಜಿ, ಸಹಾನುಭೂತಿ ಹಾಗೂ ಆತ್ಮವಿಶ್ವಾಸ ಇದ್ದರೆ ಆತ್ಮಹತ್ಯೆಗಳನ್ನು ತಡೆಯುವುದು ಖಂಡಿತ ಸಾಧ್ಯವಿದೆ ಎಂದು ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮನೋವೈದ್ಯರಾದ ಡಾ. ಆಫ್ತಾಬ್ ಅಹಮದ್ ಮಾಲ್ದರ್ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಆತ್ಮಹತ್ಯಾ ತಡೆ ಸಪ್ತಾಹದ ಅಂಗವಾಗಿ ನಗರದ ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ಸಭಾಂಗಣದಲ್ಲಿ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಡಾ.ಆಫ್ತಾಬ್, ಆತ್ಮಹತ್ಯೆ ಎಂಬುದು ಮಾನಸಿಕ ಪಿಡುಗಿನಿಂದ ಸಂಭವಿಸುವ ಕ್ರಿಯೆ, ಇದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದಾಗ ಅದನ್ನು ತಡೆಯುವುದು ಖಂಡಿತ ಸಾಧ್ಯವಿದೆ ಎಂದು ಹೇಳಿದರು.

ತಮ್ಮ ಉಪನ್ಯಾಸದಲ್ಲಿ ಆತ್ಮಹತ್ಯೆಗೆ ಪ್ರಚೋದಿಸಬಹುದಾದ ಹಲವಾರು ವಿಷಯಗಳ ಬಗ್ಗೆ ಪ್ರಸ್ತಾಪಿಸಿ ಅದನ್ನು ತಡೆಯಲು ಸಾಮಾನ್ಯ ಜನರು ಅನುಸರಿಬೇಕಾದ ಸರಳ ನಿಯಮಗಳ ಬಗ್ಗೆ ತಿಳಿಸಿದರು.

ಅಂತಹ ಮಾನಸಿಕ ಸಮಸ್ಯೆಯಲ್ಲಿ ಸಿಲುಕಿರುವವರೊಡನೆ ಮಾತನಾಢುವಾಗ ನಮ್ಮ ಮಾತುಗಳು ಕೊಂಚವಾದರೂ ಅವರಿಗೆ ಭರವಸೆಯ ಬೆಳಕನ್ನು ಮೂಡಿಸಿದರೆ ಅವರಿಗೆ ಹೊಸ ಬದುಕನ್ನು ಕಟ್ಟಿಕೊಡಬಹುದು. ಅಂತಹ ಭರವಸೆ ಮೂಡಿತೆಂದರೆ ಸಾಕು ಮುಂದಿನ ಪರಿಹಾರಗಳಿಗೆ ನುರಿತ ಮನೋವೈದ್ಯರು ಅಥವಾ ತರಬೇತಿ ಹೊಂದಿದ ಆಪ್ತಸಲಹೆಗಾರರ ಸಹಾಯ ಪಡೆದು ಅವರ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸಬಹುದು ಎಂದು ಅವರು ಹೇಳಿದರು.

ಸಾರ್ವಜನಿಕರಲ್ಲಿ ಆತ್ಮಹತ್ಯೆ ತಡೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಸೆಪ್ಟೆಂಬರ್ 08 ರಿಂದ 14 ರವರೆಗೆ ರಾಷ್ಟ್ರೀಯ ಆತ್ಮಹತ್ಯೆ ತಡೆ ಸಪ್ತಾಹ ಎಂದು ಆಚರಿಸಲಾಗುತ್ತದೆ. ?ಚೇಂಜಿಂಗ್ ದ ನೆರೇಟಿವ್ ಆನ್ ಸುಸೈಡ್? ಎಂಬುದು ಈ ಮಾಸಾಚರಣೆಯ ತ್ರೈವಾರ್ಷಿಕ ಧ್ಯೇಯವಾಗಿದೆ. ಆತ್ಮಹತ್ಯೆ ಎಂಬ ಕಳಂಕವನ್ನು ಕಡಿಮೆಗೊಳಿಸುವುದು ಹಾಗೂ ಅದನ್ನು ತಡೆಯಲು ಮುಕ್ತ ಸಂಭಾಷಣೆಯನ್ನು ಪ್ರೋತ್ಸಾಹಿಸುವುದರ ಕುರಿತು ಜಾಗೃತಿ ಮೂಡಿಸುವುದೇ ಈ ಧ್ಯೇಯದ ಗುರಿಯಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕ್ಲಬ್ ಅಧ್ಯಕ್ಷರಾದ ರೊ.ಮುಸ್ತಾಕ್ ಮಾತನಾಡಿ ಇತ್ತೀಚೆಗೆ ಯುವಜನರಲ್ಲಿ ಸಮಸ್ಯೆಗಳನ್ನು ಎದುರಿಸುವ ಮನೋಸ್ಥೈರ್ಯ ಇಲ್ಲದಂತಾಗಿದೆ, ಸಣ್ಣಪುಟ್ಟ ವಿಚಾರಗಳಿಗೆಲ್ಲ ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

Max Super Speciality Hospital ಮನೆಯಲ್ಲಿ ಪೋಷಕರೊಡನೆ, ಹೊರಗೆ ಸ್ನೇಹಿತರೊಡನೆ, ಕೆಲಸದಲ್ಲಿ ಸಹೋದ್ಯೋಗಿಗಳೊಡನೆ ಮುಕ್ತವಾಗಿ ಮಾತನಾಡುವುದರಿಂದ ಹಲವಾರು ಮಾನಸಿಕ ಸಮಸ್ಯೆಗಳನ್ನು ತಡೆಯಬಹುದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕ್ಲಬ್ ಉಪಾಧ್ಯಕ್ಷೆಯಾದ ರೊ.ಅಲೇಖ ಎಸ್.ಆರ್, ಮಾಜಿ ಅಧ್ಯಕ್ಷ ರೊ.ಸಿ.ರಾಜು, ವಲಯ ಸೇನಾಧಿಕಾರಿ ರೊ.ಮಂಜುಳಾ ರಾಜು, ಮಾಜಿ ಗವರ್ನರ್ ರೊ.ಹೆಚ್.ಎಲ್. ರವಿ ಹಾಗೂ ಕ್ಲಬ್ ಸದಸ್ಯರು, ಸಾರ್ವಜನಿಕರು ಪಾಲ್ಗೊಂಡಿದ್ದರು.

ಡಾ. ಆಫ್ತಾಬ್ ಅಹಮದ್ ಮಾಲ್ದರ್ ನಗರದ ಎನ್.ಟಿ.ರಸ್ತೆಯಲ್ಲಿರುವ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಲಭ್ಯರಿರುತ್ತಾರೆ. ಯಾವುದೇ ರೀತಿಯ ಮಾನಸಿಕ ಸಮಸ್ಯೆಗಳಿಗೆ ಸೂಕ್ತ ರೀತಿಯ ಚಿಕಿತ್ಸೆಯನ್ನು ಪಡೆಯಲು ಅವರನ್ನು ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Yadav School of Chess Institute ಯಾದವ ಸಂಸ್ಥೆಯಿಂದ ಚೆಸ್ ತರಬೇತಿ ಶಿಬಿರ

Yadav School of Chess Institute ರವೀದ್ರನಗರದ ಯಾದವ ಸ್ಕೂಲ್ ಆಫ್...

Shivaganga Yoga Center ನಗರದ ಅತಿದೊಡ್ಡ ಬಾಡಾವಣೆಗಳಿಗೆ ₹140 ಕೋಟಿ ಅನುದಾನದಿಂದ ಅಭಿವೃದ್ಧಿ- ವಿಶ್ವಾಸ್

Shivaganga Yoga Center ಶಿವಗಂಗಾ ಯೋಗ ಕೇಂದ್ರದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ...

Sarva Samriddhi Sadhana Center ರಿಪ್ಪನ್ ಪೇಟೆ ಮೂಗುಡ್ತಿ ಸರ್ವಸಮೃದ್ಧಿ ಸಾಧನಾ ಕೇಂದ್ರದಲ್ಲಿ ಮಕ್ಕಳಿಗಾಗಿ ಸಂಸ್ಕಾರ ಶಿಬಿರ

Sarva Samriddhi Sadhana Center ಹೊಸನಗರದ ರಿಪ್ಪನ್‌ಪೇಟೆ ಮೂಗುಡ್ತಿ ಸರ್ವಸಮೃದ್ಧಿ ಸಾಧನಾ...