Linde Foundation ಪ್ರತಿಷ್ಠಿತ ಕಂಪನಿ ಲಿಂಡೆ, ದೇಶಾಧ್ಯಂತ ಅನೇಕ ಕೈಗಾರಿಕಾ, ಆರೋಗ್ಯ ಚಟುವಟಿಕೆ ಗಳನ್ನು ನಡೆಸಿಕೊಂಡು ಬರುತ್ತಿದೆ. ಸ್ವಾತಂತ್ರದ ನಂತರದಲ್ಲಿ ಕಂಪನಿ ತನ್ನ ವಿಸ್ತಾರಗೊಳಿಸಿ ಕೊಳ್ಳುತ್ತಾ ದೊಡ್ಡಮಟ್ಟದಲ್ಲಿ ಬೆಳೆದಿದೆ. ಸಾವಿರಾರು ಜನರಿಗೆ ಉದ್ಯೋಗ ಅವಕಾಶ ನೀಡಿದೆ. ಕಂಪನಿಗೆ ಬರುವ ಲಾಭದಲ್ಲಿ, ಸಮಾಜದ ಅವಶ್ಯಕತೆ ಇರುವ ಅನೇಕ ಜನೋಪಯೋಗಿ ಕಾರ್ಯಗಳಿಗೆ ಸಿ.ಎಸ್.ಆರ್ ಧನಸಹಾಯ ನೀಡಿ ದೇಶದ ಅಭಿವೃದ್ಧಿಗೆ ಕೈಜೋಡಿಸುತ್ತಿದೆ. ನಮ್ಮ ಸಂಸ್ಥೆ ಈ ಸಾಲಿನಲ್ಲಿ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನಕ್ಕೆ ಹಾಗೂ ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸಕ್ಕಾಗಿ 45ಲಕ್ಷ ರೂಪಾಯಿಗಳ ನೆರವು ನೀಡಿದೆ. ಇದರಲ್ಲಿ ಇಂದಿನ ಅಗತ್ಯಗಳಾದ ಒಂದು ಶಾಲೆಬಸ್, 28 ಗಣಕಯಂತ್ರಗಳು, 9 ಯುಪಿಎಸ್, 2 ಲ್ಯಾಪ್ಟಾಪ್, 2 ಎಲ್ಸಿಡಿ ಪ್ರೊಜೆಕ್ಟರ್ಗಳು, ಹಾಗೂ ಕ್ರೀಡಾ ಅಭಿವೃದ್ಧಿಗೆ ಕಬಡ್ಡಿ ಮ್ಯಾಟ್ನ್ನು ಒದಗಿಸಿದೆ. ಗ್ರಾಮೀಣ ಮಕ್ಕಳು ಇವುಗಳ ಪೂರ್ಣ ಉಪಯೋಗ ಪಡೆದು ದೇಶದ ಅಭಿವೃದ್ಧಿ ಪಥದಲ್ಲಿ ಹೆಜ್ಜೆಹಾಕುವಂತಾಗಲಿ. ಆಧುನಿಕ ಜಗತ್ತಿನ ಪೈಪೋಟಿಯಲ್ಲಿ ಗೆಲುವು ಸಾಧಿಸಿ ದೇಶದ ಆಸ್ತಿಯಾಗಿ ಬೆಳೆಯಲಿ ಎಂಬ ಸದಾಶಯ ನಮ್ಮ Linde Foundation ಲಿಂಡೆ ಪ್ರತಿಷ್ಠಾನದ ಆಶಯವಾಗಿದೆ ಎಂದು ದಕ್ಷಣ ಭಾರತ ಲಿಂಡೆ ಪ್ರತಿಷ್ಠಾನದ ಮುಖ್ಯಸ್ಥ ಅಂಕುರ್ ದೇಸಾಯಿ ತಿಳಿಸಿದರು.
ಮಲೆನಾಡಿನ ಪ್ರತಿಷ್ಠಿತ ಸಂಸ್ಥೆ ಮಲೆನಾಡು ಪ್ರತಿಷ್ಠಾನಕ್ಕೆ ಲಿಂಡೆ ಪ್ರತಿಷ್ಠಾನದಿಂದ ಕೊಡಮಾಡಿದ ಶಾಲಾ ವಾಹನ, ಕಂಪ್ಯೂಟರ್, ಪ್ರೊಜೆಕ್ಟರ್, ಲ್ಯಾಪ್ಟಾಪ್ ಹಾಗೂ ಕಬ್ಬಡ್ಡಿ ಮ್ಯಾಟ್ ಮುಂತಾದ ಪರಿಕರಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಸಂಸ್ಥೆಯು ಮಲೆನಾಡು ಪ್ರದೇಶದಲ್ಲಿ ವಿದ್ಯಾಭ್ಯಾಸಕ್ಕಾಗಿ ಕೈಗೊಂಡ ಯೋಜನೆಗಳನ್ನು ವೀಕ್ಷಿಸಿದರು.
ಲಿಂಡೆ ಪ್ರತಿಷ್ಠಾನದ ಆರ್ಥಿಕ ವಿಭಾಗದ ಜನರಲ್ ಮ್ಯಾನೇಜರ್ ಗಣಪತಿ ಎಸ್. ಗಾಂವ್ಕರ್ ಅವರು ತಮ್ಮ 24 ಸಹೋದ್ಯೋಗಿಗಳೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾಲೇಜಿನ ಒಳಾಂಗಣ ಕ್ರೀಡಾಂಗಣ ಆವರಣದಲ್ಲಿ ಗಿಡ ನೆಟ್ಟು ಸಾಕ್ಷಿಯಾದರು.
ಕಾರ್ಯಕ್ರಮಕ್ಕೆ ಮೊದಲು ಎಂ.ಡಿ.ಎಫ್. ನಡೆದುಬಂದ ದಾರಿ ಕುರಿತ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು. ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ|| ಶಿವಕುಮಾರ್, ಎಲ್ಲರನ್ನೂ ಸ್ವಾಗತಿಸಿದರು. ಉಪಾಧ್ಯಕ್ಷರುಗಳಾದ ಬಿ.ಆರ್. ಜಯಂತ್, ರವಿಕುಮಾರ್ ಹುಣಾಲುಮಡಿಕೆ, ಕೋಶಾಧಿಕಾರಿ ಕೆ. ವೆಂಕಟೇಶ್, ಸಹಕಾರ್ಯದರ್ಶಿ ಎಂ.ಆರ್. ಸತ್ಯನಾರಾಯಣ ಮೊದಲಾದವರು ಹಾಜರಿದ್ದರು. ಡಾ|| ಲಕ್ಷ್ಮೀಶ, ಪ್ರಾಂಶುಪಾಲರು ಎಲ್ಲರನ್ನೂ ವಂದಿಸಿದರು, ಕಾರ್ಯಕ್ರಮ ನಿರ್ವಹಣೆಯನ್ನು ಪ್ರೊ ಸುಮನ್ ಕೆ.ಕೆ. ನಿರ್ವಹಿಸಿದರು್
Linde Foundation ಲಿಂಡೆ ಪ್ರತಿಷ್ಠಾನದಿಂದ ಸಾಗರ ಎಲ್ ಬಿ.ಕಾಲೇಜಿಗೆ ₹45 ಲಕ್ಷ ದೇಣಿಗೆ
K.S. Eshwarappa ರಾಷ್ಟ್ರಭಕ್ತರ ಬಳಗದಿಂದ ಶ್ರೀಮತಿ ಕವಿತಾ ಚಂದ್ರಶೇಖರ್ ಗೆ ₹5 ಲಕ್ಷ ಸಹಾಯ ಧನ ನೀಡಿಕೆ
K.S. Eshwarappa ಶ್ರೀ ಕೆ.ಎಸ್. ಈಶ್ವರಪ್ಪನವರು ಇಂದು ವಿನೋಬನಗರ ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ನಡೆದ ಹಣಕಾಸಿನ ಅವ್ಯವಹಾರದಲ್ಲಿ ಆತ್ಮಹತ್ಯೆ ಮಾಡಿಕೊಂಡ ಶ್ರೀ ಚಂದ್ರಶೇಖರ್ ಅವರ ಮನೆಗೆ ತೆರಳಿ 5 ಲಕ್ಷ ರೂಪಾಯಿಗಳ ಧನಸಹಾಯ ಮಾಡಿದರು. ಈ ಸಂದರ್ಭದಲ್ಲಿ ರಾಷ್ಟ್ರಭಕ್ತ ಬಳಗದವರಾದ ಕಾಂತೇಶ್ ವಿಶ್ವಾಸ್ ಶ್ರೀಕಾಂತ್ ಬಾಲು ಕುಬೇರಪ್ಪ ಪ್ರಕಾಶ್ ಜೋಡಿಯಾಕ್ ಶಿವಾಜಿ ಬಕೆಟ್ ಮಂಜ ಭೂಪಾಲ್ ವಾಣಿ ಭುವನೇಶ್ವರಿ ಸುವರ್ಣ ಶಂಕರ್ ಇನ್ನು ಹಲವಾರು ಕಾರ್ಯಕರ್ತರು ಇದ್ದರು
Dr. Srinivasa Kakkillaya ಕನ್ನಡದಲ್ಲೇ ವೈದ್ಯರ ಸಲಹಾ ಚೀಟಿ ಬರೆಯುವ ಪ್ರಸ್ತಾವನೆ. “ಅಸಂಬದ್ಧ,ಅನಗತ್ಯ”- ಡಾ.ಶ್ರೀನಿವಾಸ ಕಕ್ಕಿಲ್ಲಾಯ
Dr. Srinivasa Kakkillaya ರಾಜ್ಯದ ವೈದ್ಯರು ರೋಗಿಗಳಿಗೆ ನೀಡುವ ಔಷಧ ಚೀಟಿಗಳನ್ನು ಕನ್ನಡದಲ್ಲಿ ಬರೆಯಬೇಕು ಎನ್ನುವ ಕನ್ನಡ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋಷೋತ್ತಮ ಬಿಳಿಮಲೆ ಅವರ ಪ್ರಸ್ತಾಪಕ್ಕೆ ಖ್ಯಾತ ವೈದ್ಯರಾದ ಶ್ರೀನಿವಾಸ ಕಕ್ಕಿಲ್ಲಾಯ ಅವರು ಅಸಮಾಧಾನ ವ್ಯಕ್ತಪಡಿಸಿದ್ದು, ಇದು ‘ಅಸಂಬದ್ಧ’ ಮತ್ತು ‘ಅನಗತ್ಯ’ ಪ್ರಸ್ತಾಪ ಎಂದು ಹೇಳಿದ್ದಾರೆ. ”ವೈದ್ಯರುಗಳಿಗೆ ರೋಗಿಗಳ ಶುಶ್ರೂಷೆ ಮಾಡುವುದು ಆದ್ಯ ಕರ್ತವ್ಯವಾಗಿದೆ, ಕನ್ನಡ ಬೆಳೆಸುವುದಲ್ಲ. ಒಂದು ವೇಳೆ ಕನ್ನಡ ಬೆಳೆಸುವುದು ವೈದ್ಯರುಗಳ ಕೆಲಸ ಎಂದು ಪ್ರಾಧಿಕಾರ ಹೇಳುವುದಾದರೆ, ಪ್ರಾಧಿಕಾರದಲ್ಲಿ ಕನ್ನಡ ಬೆಳೆಸುವ ಮತ್ತು ಉಳಿಸುವ ಯಾವುದೆ ಹೊಸ ಚಿಂತನೆ ಇಲ್ಲ ಎಂದರ್ಥ” ಎಂದು ಅವರು ಹೇಳಿದ್ದಾರೆ.
, ಕನ್ನಡ ಬೆಳೆಸುವುದು ವೈದ್ಯರ ಕೆಲಸವಲ್ಲ ಎಂದು ಹೇಳಿದರು. “ನನಗೆ ಪ್ರೊಫೆಸರ್ ಬಿಳಿಮಲೆ ಮೇಲೆ ತುಂಬಾ ಗೌರವಿದೆ, ಅವರು ಮಾಡಿರುವ ಕೆಲಸಗಳ ಬಗ್ಗೆ ಹೆಮ್ಮೆಯಿದೆ. ಆದರೆ ಅವರ ಇಂತಹ ಸಲಹೆಗಳನ್ನು ನಾನು ಒಪ್ಪಬೇಕೆಂದಿಲ್ಲ. ಒಂದು ವೇಳೆ ಔಷಧಿ ಚೀಟಿಗಳನ್ನು ಕನ್ನಡದಲ್ಲಿ ಬರೆದರೆ ಅದು ಭಾರಿ ಗೊಂದಲಕ್ಕೆ ದಾರಿ ಮಾಡಿಕೊಡುತ್ತದೆ. ರೋಗಿಗಳಿಗೆ ಏನಾದರೂ ಹೆಚ್ಚು ಕಮ್ಮಿಯಾದರೆ, ಅದಕ್ಕೆ ಹೊಣೆ ಯಾರು” ಎಂದು ಕೇಳಿದರು.
“ಮೊದಲನೆಯದಾಗಿ ಈಗಾಗಲೆ ಲಕ್ಷಾಂತರ ಔಷಧಿ ಬ್ರಾಂಡ್‌ಗಳು ಮಾರುಕಟ್ಟೆಯಲ್ಲಿ ಇವೆ. ಔಷಧಗಳ ಹೆಸರಿನಲ್ಲಿ ಒಂದು ಅಕ್ಷರ ಬದಲಾದರೂ ಅದು ಬೇರೆಯೆ ಆಗಿಬಿಡುತ್ತದೆ. ಅಲ್ಲದೆ, ಕನ್ನಡದಲ್ಲಿ ಔಷದ ಬರೆದರೆ ಔಷಧ ಅಂಗಡಿಗಳಲ್ಲಿ ಔಷಧ ಕೊಡುವವರು ಕನ್ನಡಿಗರೆ ಆಗಿರುವುದಿಲ್ಲ.
ಅದನ್ನು ಓದಲು ತಿಳಿಯದೆ ಮತ್ತೆ ನಮಗೆ ಕರೆ ಮಾಡಿ ಅದರ ಬಗ್ಗೆ ಕೇಳುತ್ತಾರೆ. ನಾವು ರೋಗಿಗಳನ್ನು ಬಿಟ್ಟು ಅವರಿಗೆ ಉತ್ತರಿಸುವುದೆ ಕೆಲಸ ಮಾಡಿಕೊಂಡಿರಲು ಸಾಧ್ಯವಿಲ್ಲ. ಕನ್ನಡ ಕಟ್ಟುವ ಕೆಲಸ ಎಂದರೆ ಇದಲ್ಲ” ಎಂದು ಅವರು ತಿಳಿಸಿದರು.
“ಜಗತ್ತುಈಗ ಕಿರಿದಾಗುತ್ತಿದೆ. ನಾವು ಆಧುನಿಕ ವೈದ್ಯರು ಜಗತ್ತಿನಾದ್ಯಂತ ವೈದ್ಯರು ಬರೆಯುವ ಹಾಗೆ ಔಷಧಿ ಚೀಟಿಯನ್ನು ಬರೆಯುತ್ತೇವೆ. ಮಂಗಳೂರಿನಲ್ಲಿ ಒಬ್ಬ ವೈದ್ಯ ಬರೆದ ಔಷಧ ಚೀಟಿ ಜಗತ್ತಿನ ಮತ್ತು ದೇಶದ ಬೇರೆ ವೈದ್ಯರಿಗೂ ಓದುವಂತೆ ಇದ್ದು ರೋಗಿಯ ಶುಶ್ರೂಷೆ ಮಾಡುವಂತೆ ಇರಬೇಕು. ಒಂದು ವೇಳೆ ನಾನು ಕನ್ನಡದಲ್ಲಿ ಔಷಧ ಚೀಟಿ ಬರೆದು ಕೊಟ್ಟ ರೋಗಿಯು ಕೇರಳದಲ್ಲಿ ಅನಾರೋಗ್ಯ ಪೀಡಿತನಾದರೆ, ಆತನಿಗೆ ಕನ್ನಡ ಬಾರದ ಮಲಯಾಳಂ ವೈದ್ಯರು ರೋಗ ನಿರ್ಣಯ ಮಾಡಿ ಹೇಗೆ ಚಿಕಿತ್ಸೆ ನೀಡುತ್ತಾರೆ?. ಔಷಧ ಚೀಟಿ ಎಂದರೆ ಕೇವಲ ಭಾಷೆಯ ಭಾವನಾತ್ಮಕ ವಿಚಾರ ಅಲ್ಲ, ಅದು ರೋಗಿಗಳ ರೋಗ ನಿರ್ಣಯದ ದಾಖಲೆ ಕೂಡಾ ಆಗಿದೆ” ಎಂದು ಅವರು ಹೇಳಿದರು.
“ಅಷ್ಟೆ ಅಲ್ಲದೆ, ವೈದ್ಯರು ಹೇಗೆ ಔಷಧ ಚೀಟಿ ಬರೆಯಬೇಕು ಎಂದು ನಮಗೆ ವೈದ್ಯ ಪರಿಷತ್ತು ಆದೇಶಿಸುತ್ತದೆ. ಅದನ್ನು ವೈದ್ಯರು ಪಾಲಿಸಬೇಕಿದೆ. ಅದು ಬಿಟ್ಟು ಕನ್ನಡ ಪ್ರಾಧಿಕಾರ ಇದನ್ನು ಹೇಳುವ ಹಾಗೆಯೆ ಇಲ್ಲ. ಇತ್ತಿಚೆಗೆ ಆರೋಗ್ಯ ಸಚಿವರು ಕೂಡಾ ಇದನ್ನೇ ಹೇಳಿದ್ದಾರೆ. ಭಾಷೆ ತಳಮಟ್ಟದಿಂದ ಬೆಳೆಯುವುದಕ್ಕೆ ವೈದ್ಯರು ಆಯಾ ಭಾಷೆಗಳಲ್ಲಿ ಚೀಟಿ ಬರೆಯುವುದೇ ಮುಖ್ಯ ಕಾರಣ ಎಂದಾದರೆ ಅಭಿವೃದ್ಧಿ ಪ್ರಾಧಿಕಾರವು ಕೂಡ ಬೇಕಾಗಿಲ್ಲ ಅಲ್ಲವೆ. ಭಾಷೆ ಬೆಳೆಸುವ ಜವಾಬ್ದಾರಿಯನ್ನೂ ವೈದ್ಯರುಗಳಿಗೆ ಚೀಟಿ ಬರೆಯಲು ವಹಿಸಿಕೊಟ್ಟರಾಯಿತು” ಎಂದು ಅವರು ಹೇಳಿದರು.
Dr. Srinivasa Kakkillaya “ಕನ್ನಡ ಬೆಳೆಯಬೇಕು, ಬೆಳೆಸಬೇಕು ಎಂಬ ಬಿಳಿಮಲೆ ಅವರ ಚಿಂತನೆಯ ಬಗ್ಗೆ ನನಗೆ ಸಮ್ಮತಿಯಿದೆ. ನಾನು ಅದರ ವಿರೋಧಿಯು ಅಲ್ಲ. ಆದರೆ ಅದನ್ನು ವೈದ್ಯರ ಮೇಲೆ ಹಾಕುವುದು ಸರಿಯಲ್ಲ. ಅದಕ್ಕಾಗಿ ಬೇರೆ ದಾರಿಯನ್ನು ಕನ್ನಡ ಪ್ರಾಧಿಕಾರ ಹುಡುಕಬೇಕು. ಈ ರಾಜ್ಯಕ್ಕೆ ಬಂದು ವೈದ್ಯಕೀಯ ಶಾಸ್ತ್ರ ಕಲಿಯುವ ಬೇರೆ ರಾಜ್ಯದ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸುವ ಬಗ್ಗೆ ಪ್ರಾಧಿಕಾರ ಚಿಂತಿಸಲಿ. ಪ್ರೊಫೆಸರ್ ಬಿಳಿಮಲೆ ಅವರಲ್ಲಿ ಕನ್ನಡ ಕಲಿಸುವ ಇಂತಹ ಹಲವು ಮಾದರಿಗಳು ಇವೆ. ಇದರಲ್ಲಿ ಅವರು ತಜ್ಞರು ಕೂಡಾ ಆಗಿದ್ದಾರೆ” ಎಂದು ತಿಳಿಸಿದರು.
“ಬೇರೆ ರಾಜ್ಯದ ವಿದ್ಯಾರ್ಥಿಗಳು ಕನ್ನಡ ಕಲಿತು ರೋಗಿಗಳೊಂದಿಗೆ ಸಂವಹನ ನಡೆಸಿದರೆ ಅದು ಕನ್ನಡ ಕಟ್ಟುವ ಕೆಲಸ ಆಗಲಿದೆ.
ಜೊತೆಗೆ ಕನ್ನಡದ ರೋಗಿಗಳಿಗೆ ಇದರಿಂದ ಲಾಭವೂ ಆಗಲಿದೆ. ಅಷ್ಟೆ ಅಲ್ಲದೆ, ವೈದ್ಯಕೀಯ ಸಾಹಿತ್ಯ ಬರೆಯುವರಿಗೆ ಪ್ರಾಧಿಕಾರ ಪ್ರೋತ್ಸಾಹ ನೀಡಿ ಅವರನ್ನು ಬೆಳೆಸಬೇಕಿದೆ. ಜೊತೆಗೆ ವೈದ್ಯಕೀಯ ಭಾಷೆಯಲ್ಲಿ ಇರುವ ಹಲವು ಪದಗಳನ್ನು ಕನ್ನಡೀಕರಣ ಮಾಡುವಲ್ಲಿ ಮತ್ತು ಅದನ್ನು ಕನ್ನಡಿಗರಿಗೆ ತಲುಪಿಸುವಲ್ಲಿ ಕೆಲಸವನ್ನು ಮಾಡಬೇಕಿದೆ. ಅದು ಬಿಟ್ಟು ವೈದ್ಯರ ಮೇಲೆ ಕನ್ನಡ ಉಳಿಸುವ ಭಾರ ಹಾಕುವುದು ಸರಿಯಲ್ಲ” ಎಂದು ಡಾಕ್ಟರ್ ಶ್ರೀನಿವಾಸ ಕಕ್ಕಿಲ್ಲಾಯ ಹೇಳಿದರು.
Holehonnur ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ. ಕೃತ್ಯ ಸಾಬೀತಾಗಿ ಆರೋಪಿಗೆ 14 ವರ್ಷ ಕಠಿಣ ಶಿಕ್ಷೆ & ದಂಡ ವಿಧಿಸಿದ ಕೋರ್ಟ್
Holehonnur ಶಿವಮೊಗ್ಗ ತಾಲ್ಲೂಕಿನ 31 ವರ್ಷದ ವ್ಯಕ್ತಿಯು, 32 ವರ್ಷದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿ ಶಿವಮೊಗ್ಗ ಆರೋಪಿಗೆ 14 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು ರೂ 2,26,೦೦೦ ದಂಡ, ದಂಡ ಕಟ್ಟಲು ವಿಫಲನಾದಲ್ಲಿ 01 ವರ್ಷ ಸಾದಾ ಕಾರಾವಾಸ ಶಿಕ್ಷೆ ವಿಧಿಸಿದ್ದು, ಪರಿಹಾರ ರೂಪವಾಗಿ ದಂಡದ ಮೊತ್ತದಲ್ಲಿ 2 ಲಕ್ಷ ರೂಗಳನ್ನು ನೊಂದ ಮಹಿಳೆಗೆ ನೀಡಲು ನ್ಯಾಯಾಲು ಆದೇಶಿಸಿದೆ.
ಪ್ರಕರಣದ ತನಿಖಾಧಿಕಾರಿ ಹೊಳೆಹೊನ್ನೂರು ಸಿಪಿಐ ಲಕ್ಷ್ಮಿಪತಿ ಆರ್. ಎಲ್, ತನಿಖೆ ಪೂರೈಸಿ, ನ್ಯಾಯಾಲಯಕ್ಕೆ ಆರೋಪಿಯ ವಿರುದ್ಧ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
Holehonnur ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಶ್ರೀಧರ್ ಹೆಚ್. ಆರ್, ವಾದ ಮಂಡಿಸಿದ್ದರು. ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪಿಯ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ, ನ್ಯಾಯಾಧೀಶ ಮೋಹನ್ ಜೆ. ಎಸ್ ತೀರ್ಪು ಪ್ರಕಟಿಸಿದ್ದಾರೆ.
Tunganagar Police Station ಮುಂದುವರೆದ ಹಳೆಜಗಳ. ಮೂವರು ಪರಸ್ಪರ ಬಡಿದಾಡಿ ಆಸ್ಪತ್ರೆಗೆ ದಾಖಲು
Tunganagar Police Station ಶಿವಮೊಗ್ಗ ತಾಲೂಕಿನ ಸಂತೆಕಡೂರಿನಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ನಡೆದಿದ್ದ ಜಗಳ ಶನಿವಾರ ಬೆಳಗ್ಗೆ ಮತ್ತೆ ಮುಂದುವರೆದು, ಮೂವರು ಹೊಡೆದಾಡಿಕೊಂಡು ಆಸ್ಪತ್ರೆ ಸೇರಿದ ಘಟನೆ ಸಂsವಿಸಿದೆ.
ಪ್ರಮೋದ್ ಮತ್ತು ಯೋಗೀಶ್ ಯಾನೆ ಸ್ವಾಮಿ ನಡುವೆ ಸಣ್ಣ ಕಿರಿಕ್ ನಡೆದಿತ್ತು.
ಕುಡಿದ ಮತ್ತಿನಲ್ಲಿ ಈ ಕಿರಿಕ್ ಆಗಿದೆ ಎನ್ನಲಾಗಿದೆ. ಸ್ವಾಮಿಯ ಸ್ನೇಹಿತರಾದ ಪ್ರವೀಣ ಮತ್ತು ವಿವೇಕ ಜಗಳ ಬಿಡಿಸಿ ಇರನ್ನೂ ಸಂತೈಸಿದ್ದರು. ಆದರೆ ಇಂದು ಸಹ ಪ್ರಮೋದ್ ಜಿದ್ದು ಸಾಧಿಸಿ ತನ್ನ ಕಡೆಯ ಹುಡುಗರನ್ನು ಕರೆದುಕೊಂಡು ಸ್ವಾಮಿಯ ಬಳಿ ಬಂದು ಬ್ಯಾನರ್ ಕಟ್ಟುವ ಅಡಿಕೆ ದಬ್ಬೆಯನ್ನು ಕಿತ್ತುಕೊಂಡು ಸ್ವಾಮಿ ಮತ್ತು ಪ್ರವೀಣ್ ಮೇಲೆ ಹಲ್ಲೆ ಮಾಡಿದ್ದಾನೆ.
Tunganagar Police Station ಪ್ರಕರಣಕ್ಕೆ ಸಂಬಂಧಿಸಿದಂತೆ ತುಂಗಾನಗರ ಪೊಲೀಸ್ ಠಾಣೆಯ ಪಿಐ ಗುರುರಾಜ್ ಕೆ.ಟಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
High Court of Karnataka ಪರಶುರಾಮ ಕಂಚಿನ ಪ್ರತಿಮೆ. ಬೇರೆ ಲೋಹ ಬಳಸಿ ಕಳಪೆ ನಿರ್ಮಾಣ, ಅಸಮಾಧಾನ ವ್ಯಕ್ತಪಡಿಸಿದ ಕೋರ್ಟ್
High Court of Karnataka ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಕಂಚಿನ ಪರಶುರಾಮ ಪ್ರತಿಮೆಗೆ ಬದಲಾಗಿ ಹಿತ್ತಾಳೆ, ತಾಮ್ರ ಮತ್ತು ಸತು ಬಳಸಿ ಕಳಪೆ ಕಾಮಗಾರಿ ನಡೆಸಲಾಗಿದೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್, ಜನರ ಹಣವನ್ನು ಲೂಟಿ ಮಾಡಲಾಗಿದೆ ಎಂದು ಕಿಡಿಕಾರಿದೆ.
ಬೆಂಗಳೂರಿನ ಸರ್. ಎಂ ವಿಶ್ವೇಶ್ವರಯ್ಯ ಬಡಾವಣೆ ನಿವಾಸಿಯಾಗಿರುವ ಕಲಾವಿದ ಕೃಷ್ಣ ನಾಯಕ್ ಅವರು ತಮ್ಮ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಆದೇಶ ಕಾಯ್ದಿರಿಸಿದೆ.
ಕಳಪೆ ಕಾಮಗಾರಿ ನಡೆಸಲಾಗಿದೆ ಎಂದು ಖಚಿತಪಡಿಸಿರು ಪೀಠ, “ನಿಮಗೆ ಕೊಟ್ಟಿರುವುದು ನಿರ್ಮಿತಿ ಕೇಂದ್ರ ಅಥವಾ ದೂರುದಾರರಿಗೆ ಸೇರಿದ ದುಡ್ಡಲ್ಲ, ಅದು ಜನರ ದುಡ್ಡು. ನೀವು ಜನರ ಹಣದಲ್ಲಿ ಆಟವಾಡಲಾಗದು” ಎಂದು ಖಾರವಾಗಿ ನುಡಿದಿರುವುದಾಗಿ ಬಾರ್ & ಬೆಂಚ್ ವರದಿ ಮಾಡಿದೆ.
“ಪ್ರತಿಮೆಗೆ ಕಂಚು ಬಳಸುವ ಬದಲು ಹಿತ್ತಾಳೆ ಮತ್ತು ಸತುವನ್ನೇಕೆ ಬಳಸಲಾಗಿದೆ? ಪ್ರತಿಮೆ ಹೆಸರಿನಲ್ಲಿ ಕಳಪೆ ಕಾಮಗಾರಿ ನಡೆಸಿ ಸಾರ್ವಜನಿಕರ ಹಣವನ್ನು ಲೂಟಿ ಮಾಡಲಾಗಿದೆ. 1.83 ಕೋಟಿ ರೂಪಾಯಿ ಪೈಕಿ ಈಗಾಗಲೇ ನಿಮಗೆ 1.20 ಕೋಟಿ ರೂಪಾಯಿ ಪಾವತಿಯಾಗಿದೆ. ಇದು ಸಾರ್ವಜನಿಕರ ಹಣ. ಎಲ್ಲವೂ ದಾಖಲೆಯಲ್ಲಿರುವುದರಿಂದ ಯಾವುದೇ ಸೂಚನೆ ಪಡೆಯುವ ಅಗತ್ಯವೇ ಇಲ್ಲ. ಜನರ ಹಣದ ಜೊತೆ ಆಟ ಆಡುವವರನ್ನು ಬಿಡಲಾಗದು. ಪುಣ್ಯಕ್ಕೆ ಪ್ರತಿಮೆ ಮಾರನೇಯ ದಿನ ಕುಸಿದಿಲ್ಲ. ಅದು ಬೀಳುವ ಮುಂಚೆಯೇ ತೆರವು ಮಾಡಲಾಗಿದೆ” ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಅವರು ಅರ್ಜಿದಾರರ ವಿರುದ್ಧ ಮೌಖಿಕವಾಗಿ ಕಿಡಿಕಾರಿದ್ದಾರೆ
“35 ಅಡಿ ಎತ್ತರದ ಪ್ರತಿಮೆಯ ಭಾರವನ್ನು ಹಿತ್ತಾಳೆ ಮತ್ತು ಸತು ತಾಳುತ್ತದೆಯೇ? ಪ್ರತಿಮೆಗೆ ಕಂಚನ್ನೇ ಬಳಸಬೇಕು ಎಂದು ಹೇಳಿರುವುದಕ್ಕೆ ನಿಖರ ಕಾರಣವಿದೆ. ಹಿತ್ತಾಳೆ ಮತ್ತು ಸತು ಬಳಸಿ ಪ್ರತಿಮೆ ನಿರ್ಮಿಸಲು 1.20 ಕೋಟಿ ರೂಪಾಯಿ ಏಕೆ ಪಡೆದಿರಿ? ಕಂಚು ಬಳಕೆ ಮಾಡದಿರುವುದು ಕ್ರಿಮಿನಲ್ ಅಪರಾಧ. ನಿರ್ಮಿತಿ ಕೇಂದ್ರದ ಬಗ್ಗೆ ಚೆನ್ನಾಗಿ ತಿಳಿದಿದೆ. ಅದರ ಬಗ್ಗೆ ಕಡಿಮೆ ಮಾತನಾಡಿದಷ್ಟು ಒಳ್ಳೆಯದು” ಎಂದು ಹೈಕೋರ್ಟ್ ಚಾಟಿ ಬೀಸಿದೆ.
High Court of Karnataka ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಎಂ ಅರುಣ್ ಶ್ಯಾಮ್ “ಪರಶುರಾಮ ಪ್ರತಿಮೆ ತಲೆಯ ಭಾಗ ಭಾರ ತಾಳಲಾರದ್ದರಿಂದ ಅದರ ಜೋಡಣೆ ಬದಲಿಸಲಾಗಿದೆ. ಕಂಚಿನಲ್ಲಿ ಪ್ರತಿಮೆ ನಿರ್ಮಿಸಬೇಕು ಎಂದು ಹೇಳಿದ್ದು, ನಾವು ತಾಮ್ರ, ಸತು ಮತ್ತು ಹಿತ್ತಾಳೆಯನ್ನು ಬಳಕೆ ಮಾಡಿದ್ದೇವೆ. ಸತು ಮತ್ತು ಹಿತ್ತಾಳೆಯು ಕಂಚಿಗೆ ಸಮನಾಗುತ್ತದೆ” ಎಂದು ಸಮಜಾಯಿಷಿ ನೀಡಿದ್ದಾರೆ.
“ಕೆಲಸದ ಭಾಗವಾಗಿ 1.20 ಕೋಟಿ ರೂಪಾಯಿ ಸ್ವೀಕರಿಸಿದ್ದೇವೆ. ನಮ್ಮ ಕೆಲಸವನ್ನು ಪೂರ್ಣಗೊಳಿಸುತ್ತೇವೆ. ಆಮೇಲೆ ಅದನ್ನು ಪರಿಶೀಲಿಸಬಹುದು. ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಪರಶುರಾಮ ಪ್ರತಿಮೆ ನಿರ್ಮಾಣವೂ ಒಂದಾಗಿತ್ತು. ಉದ್ಘಾಟನೆಯ ಹಿನ್ನೆಲೆಯಲ್ಲಿ ಬೇಗ ಮಾಡಿ ಮುಗಿಸಲಾಗಿತ್ತು. ಆನಂತರ ಜಿಲ್ಲಾಧಿಕಾರಿಯು ಅದನ್ನು ಪುನರ್ ನಿರ್ಮಾಣ ಮಾಡುವಂತೆ ಸೂಚಿಸಿದ್ದಾರೆ. ಈಗ ಸರ್ಕಾರ ಇಡೀ ಪ್ರಕರಣವನ್ನು ತನಿಖೆಗೆ ಒಪ್ಪಿಸಿದ್ದರಿಂದ ಅಲ್ಲಿಗೆ ತೆರಳಿ ಕೆಲಸ ಮಾಡಲಾಗುತ್ತಿಲ್ಲ. ಅವಕಾಶ ನೀಡಿದರೆ ಕಂಚಿನಲ್ಲೇ ಕಾಲಮಿತಿಯಲ್ಲಿ ಕೆಲಸ ಪೂರ್ಣಗೊಳಿಸಲಾಗುವುದು” ಎಂದಿದ್ದಾರೆ.
“ದೂರುದಾರರು ರಾಜಕೀಯ ಪಕ್ಷದ ಪ್ರತಿನಿಧಿ. ಅವರು, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸದೇ ಹೈಕೋರ್ಟ್‌ನ ವಿಭಾಗೀಯ ಪೀಠವು ವಜಾ ಮಾಡಿದೆ. ಹಿಂದಿನ ಸರ್ಕಾರ ಮತ್ತು ಮಾಜಿ ಸಚಿವರ ವರ್ಚಸ್ಸು ಹಾಳು ಮಾಡುವ ಉದ್ದೇಶದಿಂದ ಈ ಕೆಲಸ ಮಾಡಲಾಗುತ್ತಿದೆ. ದೂರುದಾರರು ಕಾರ್ಕಳ ಶಾಸಕ ಸುನಿಲ್ ಕುಮಾರ್ ವಿರುದ್ಧ ಚುನಾವಣೆಯಲ್ಲಿ ಸೋಲನುಭವಿಸಿದ್ದಾರೆ. ಹಾಗಾಗಿ, ಈ ರೀತಿ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ, ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು “ಸುರತ್ಕಲ್‌ನಲ್ಲಿರುವ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್‌ಐಟಿ) ನೀಡಿರುವ ವರದಿಯ ಪ್ರಕಾರ ಅರ್ಜಿದಾರರು ಪರಶುರಾಮ ಪ್ರತಿಮೆಗೆ ಕಂಚು ಬಳಸಿಲ್ಲ. ಶೇ. 80ರಷ್ಟು ಹಿತ್ತಾಳೆ ಮತ್ತು ಶೇ.20ರಷ್ಟು ಸತು ಬಳಕೆ ಮಾಡಿದ್ದಾರೆ ಎಂದು ವರದಿ ನೀಡಿದೆ. ಆದರೆ, ನಿರ್ಮಿತಿ ಕೇಂದ್ರ ಮತ್ತು ಅರ್ಜಿದಾರರು ಕಂಚು ಬಳಕೆ ಮಾಡಿದೆ ಎಂದು ಹೇಳಿದೆ. ನಿರ್ಮಿತಿ ಕೇಂದ್ರ ಹೇಳುತ್ತಿರುವುದನ್ನು ನೋಡಿದರೆ ಇನ್ನಷ್ಟು ತನಿಖೆಯಾಗಬೇಕಿದೆ. ಜಿಲ್ಲಾಧಿಕಾರಿ ಪ್ರತಿಮೆ ತೆರವು ಮಾಡಿ ಎಂದು ಆದೇಶ ಮಾಡಿದ್ದಾರೆ. ಈ ಆದೇಶವನ್ನು ನಿರ್ಮಿತಿ ಕೇಂದ್ರವು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ. ತನಿಖೆ ಪ್ರಗತಿಯಲ್ಲಿರುವುದರಿಂದ ತೆರವು ಮಾಡುವಂತೆ ಆದೇಶಿಸಿದ್ದನ್ನು ತಡೆಯಿರಿ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ತನಿಖೆ ನಡೆಯಲಿ, ಅರ್ಜಿದಾರರಿಗೂ ಹಣ ತಲುಪಿದೆಯೋ ಗೊತ್ತಿಲ್ಲ. ಅವರ ಪಾತ್ರವೂ ಬಹಿರಂಗವಾಗಬೇಕಿದೆ. ಇದರಲ್ಲಿ ನಿಜವಾದ ಅಪರಾಧಿ ಯಾರು ಎಂಬುವುದು ತಿಳಿಯಬೇಕಿದೆ” ಎಂದಿದ್ದಾರೆ.
Department of School Education ಪ್ರೌಢಶಾಲೆಗಳ ‘ಬಿ’ ವಲಯ ಕ್ರೀಡಾಕೂಟದಲ್ಲಿ ತಮ್ಮಡಿಹಳ್ಳಿ ಶಾಲಾಮಕ್ಕಳ ಸಾಧನೆ
Department of School Education ನೆಹರು ಕ್ರೀಡಾಂಗಣದಲ್ಲಿ ನಡೆಸಲಾದ,ಶಾಲಾ ಶಿಕ್ಷಣ ಇಲಾಖೆಯ ಸಹ ಯೋಗದಲ್ಲಿ ಆಯೋಜಿಸಲಾಗಿದ್ದ ಬಾಲಕ ಮತ್ತು ಬಾಲಕಿಯರ ಸರ್ಕಾರಿ ಪ್ರೌಢಶಾಲೆಗಳ ‘ಬಿ’ ವಲಯ ಮಟ್ಟದ ಕ್ರೀಡಾಕೂಟದಲ್ಲಿ ತಮ್ಮಡಿಹಳ್ಳಿ ಸರ್ಕಾರಿ ಪ್ರೌಢಶಾಲೆಯ ಬಾಲಕ ಮತ್ತು ಬಾಲಕಿಯರು ಭಾಗವಹಿಸಿ ಉತ್ತಮ ಆಟದ ಪ್ರದರ್ಶನ ನೀಡಿ, ಕಬಡ್ಡಿ, ಖೋ ಖೋ ದಲ್ಲಿ ಬಾಲಕ ಬಾಲಕಿಯರು ಉತ್ತಮ ಸಾಧನೆ ಮಾಡಿ ತಾಲೂಕು ಹಂತದ ಕ್ರೀಡೆಗೆ ಆಯ್ಕೆಯಾಗಿದ್ದಾರೆ.
ಅದೇ ರೀತಿ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ನಡಿಗೆ ಸ್ಪರ್ಧೆ, 4×100 ಮೀ ರಿಲೇ , 4×400 ಮೀ ರಿಲೇ,100ಮೀ, 200ಮೀ, 800ಮೀ, ತಟ್ಟೆ ಎಸೆತ,ಜಾವೆಲಿನ್ ಎಸೆತ , ಎತ್ತರ ಜಿಗಿತ, ಗುಂಡು ಎಸೆತ, ಪೋಲೊ ವ್ಯಾಟ್, ಇನ್ನೂ ಮುಂತಾದ ವಯುಕ್ತಿಕ ಸ್ಪರ್ಧೆಗಳಲ್ಲಿ, ಹಾಗೂ ಹಲವು ಗುಂಪು ಆಟಗಳಲ್ಲಿ ಉತ್ತಮ ಸಾಧನೆಯೊಂದಿಗೆ,ಸಮಗ್ರ ಪ್ರಶಸ್ತಿ ಹಾಗೂ ಟ್ರೋಪಿಯನ್ನು ಸಂಸ್ಥೆಯ ಮಡಿಲಿಗೆ ಹಾಗೂ ತಮ್ಮಡಿ ಹಳ್ಳಿ ಗ್ರಾಮಕ್ಕೆ ಕೀರ್ತಿಯನ್ನು ತಂದು ಕೊಟ್ಟಿರುತ್ತಾರೆ.
, Department of School Education ಈ ಕ್ರೀಡಾ ಪ್ರತಿಭೆಗಳ ಮುಂದಿನ ಕ್ರೀಡಾ ಜೀವನ ಯಶಸ್ವಿ ಯಾಗಲೆಂದು ಮುಖ್ಯ ಶಿಕ್ಷಕರು, ಶಿಕ್ಷಕ ವೃಂದದವರು, ಸಿಬ್ಬಂದಿ ವರ್ಗದವರು ಮತ್ತು ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕ ಎಸ್. ಕಾಳನಾಯ್ಕ ಹಾಗೂ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಅಕ್ಕ ಪಕ್ಕದ ಊರಿನ ಪೋಷಕ ವರ್ಗದವರು ಕ್ರೀಡಾಪಟುಗಳಿಗೆ ಶುಭ ಹಾರೈಸಿದ್ದಾರೆ.
Klive Special Article ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಜಗತ್ತಿಗೆ ಮಾದರಿ
Klive Special Article ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ 15 ರಂದು ಆಚರಿಸಲಾಗುತ್ತದೆ. ಜಗತ್ತಿನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭಾರತದ ಕೊಡುಗೆ ಅನನ್ಯವಾಗಿದ್ದು, ಜಗತ್ತಿಗೆ ಮಾದರಿಯಾಗಿದೆ. ವಿಶ್ವಸಂಸ್ಥೆಯ (UN) ಪ್ರಕಾರ, ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವು ಪ್ರಪಂಚದ ಪ್ರಜಾಪ್ರಭುತ್ವದ ಸ್ಥಿತಿಯನ್ನು ಪರಿಶೀಲಿಸಲು ಅವಕಾಶವನ್ನು ಒದಗಿಸುತ್ತದೆ. ವಿಶ್ವ ಪ್ರಜಾಪ್ರಭುತ್ವ ದಿನ ಎಂದೂ ಕರೆಯಲ್ಪಡುವ ಈ ದಿನವು ಪ್ರಜಾಪ್ರಭುತ್ವದ ಸರಿಯಾದ ಕಾರ್ಯನಿರ್ವಹಣೆಗಾಗಿ ಎಲ್ಲಾ ಸದಸ್ಯ ರಾಷ್ಟ್ರಗಳ ಭಾಗವಹಿಸುವಿಕೆಯ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ.
● 2007 ರಲ್ಲಿ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು ಪ್ರಜಾಪ್ರಭುತ್ವದ ತತ್ವಗಳನ್ನು ಉತ್ತೇಜಿಸುವ ಮತ್ತು ಎತ್ತಿಹಿಡಿಯುವ ಉದ್ದೇಶದಿಂದ ಸೆಪ್ಟೆಂಬರ್ 15 ಅನ್ನು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸಲು ನಿರ್ಧರಿಸಿತು ಮತ್ತು ಎಲ್ಲಾ ಸದಸ್ಯ ರಾಷ್ಟ್ರಗಳು ಮತ್ತು ಸಂಸ್ಥೆಗಳನ್ನು ಈ ದಿನವನ್ನು ಸರಿಯಾದ ರೀತಿಯಲ್ಲಿ ಸ್ಮರಿಸಲು ಆಹ್ವಾನಿಸಿತು.
● ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಹಿನ್ನೆಲೆ:- ಪ್ರಜಾಪ್ರಭುತ್ವದ ಸಾರ್ವತ್ರಿಕ ಘೋಷಣೆಯನ್ನು ಸೆಪ್ಟೆಂಬರ್ 15, 1997 ರಂದು ಇಂಟರ್-ಪಾರ್ಲಿಮೆಂಟರಿ ಯೂನಿಯನ್ (IPU) ಅಂಗೀಕರಿಸಿತು. ಐಪಿಯು ರಾಷ್ಟ್ರೀಯ ಸಂಸತ್ತುಗಳ ಅಂತಾರಾಷ್ಟ್ರೀಯ ಸಂಸ್ಥೆಯಾಗಿದೆ. ನಂತರ ಕತಾರ್ ಸ್ಥಾಪಿಸಿದ ಸಲಹಾ ಮಂಡಳಿಯು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಉತ್ತೇಜಿಸಲು ನಿರ್ಧರಿಸಿತು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯದ ಪಠ್ಯವನ್ನು ರಚಿಸುವಲ್ಲಿ ಕತಾರ್ ಮುಂದಾಳತ್ವ ವಹಿಸಿತು ಮತ್ತು UN ಸದಸ್ಯ ರಾಷ್ಟ್ರಗಳೊಂದಿಗೆ ಸಮಾಲೋಚನೆಗಳನ್ನು ನಡೆಸಿತು. IPU ನ ಸಲಹೆಯ ಮೇರೆಗೆ, ಸೆಪ್ಟೆಂಬರ್ 15 ರಂದು (ಪ್ರಜಾಪ್ರಭುತ್ವದ ಸಾರ್ವತ್ರಿಕ ಘೋಷಣೆಯ ದಿನಾಂಕ) ಅಂತರರಾಷ್ಟ್ರೀಯ ಸಮುದಾಯವು ಪ್ರತಿ ವರ್ಷ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವದ ದಿನವನ್ನು ಆಚರಿಸುವ ದಿನವಾಗಿ ಆಯ್ಕೆಮಾಡಲಾಯಿತು. “ಹೊಸ ಅಥವಾ ಮರುಸ್ಥಾಪಿತ ಪ್ರಜಾಪ್ರಭುತ್ವಗಳನ್ನು ಉತ್ತೇಜಿಸಲು ಮತ್ತು ಕ್ರೋಢೀಕರಿಸಲು ಸರ್ಕಾರಗಳ ಪ್ರಯತ್ನಗಳ ವಿಶ್ವಸಂಸ್ಥೆಯ ವ್ಯವಸ್ಥೆಯಿಂದ ಬೆಂಬಲ” ಎಂಬ ಶೀರ್ಷಿಕೆಯ ನಿರ್ಣಯವನ್ನು 8 ನವೆಂಬರ್ 2007 ರಂದು ಒಮ್ಮತದಿಂದ ಅಂಗೀಕರಿಸಲಾಯಿತು. ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ನಡುವಿನ ಸಂಬಂಧವನ್ನು ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯ ಆರ್ಟಿಕಲ್ 21 (3) ನಲ್ಲಿ ಸೆರೆಹಿಡಿಯಲಾಗಿದೆ.
● ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಇತಿಹಾಸ:-
1) 2008:- ಪ್ರಜಾಪ್ರಭುತ್ವದ ಮೊದಲ ಅಂತರರಾಷ್ಟ್ರೀಯ ದಿನವನ್ನು ಆಚರಿಸಲಾಯಿತು.
2) 2020 ರ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಥೀಮ್ “COVID-19: ಪ್ರಜಾಪ್ರಭುತ್ವದ ಮೇಲೆ ಸ್ಪಾಟ್‌ಲೈಟ್” ಆಗಿತ್ತು.
3) 2021 ರ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಂದು “ಭವಿಷ್ಯದ ಬಿಕ್ಕಟ್ಟುಗಳ ಮುಖಾಂತರ ಪ್ರಜಾಪ್ರಭುತ್ವದ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುವುದು” ಎಂಬ ವಿಷಯದ ಮೇಲೆ ಚರ್ಚೆಯಾಯಿತು.
4) 2022 ರಲ್ಲಿ “ಪ್ರಜಾಪ್ರಭುತ್ವಕ್ಕಾಗಿ ಪತ್ರಿಕಾ ಸ್ವಾತಂತ್ರ್ಯವನ್ನು ರಕ್ಷಿಸುವುದು” ಎಂಬ ವಿಷಯ ಆಯ್ಕೆ ಮಾಡಿಕೊಳ್ಳಲಾಗಿತ್ತು.
5) 2023 ರ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಥೀಮ್ “ಮುಂದಿನ ಪೀಳಿಗೆಯನ್ನು ಸಬಲೀಕರಣಗೊಳಿಸುವುದು” ಎಂಬ ವಿಷಯವಾಗಿತ್ತು.
6) 2024 ರಲ್ಲಿ “ಆಡಳಿತ ಮತ್ತು ನಾಗರಿಕರ ತೊಡಗಿಸಿಕೊಳ್ಳುವಿಕೆಗಾಗಿ AI ಅನ್ನು ನ್ಯಾವಿಗೇಟ್ ಮಾಡುವುದು” ಎಂಬ ವಿಷಯದ ಆಧಾರದ ಮೇಲೆ ಈ ದಿನ ಆಚರಣೆ ಮಾಡಲಾಗುತ್ತಿದೆ.
Klive Special Article ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಮಹತ್ವ:-
1) ಮಾನವ ಹಕ್ಕುಗಳ ರಕ್ಷಣೆ ಮತ್ತು ಪರಿಣಾಮಕಾರಿ ಸಾಕ್ಷಾತ್ಕಾರಕ್ಕೆ ಪ್ರಜಾಪ್ರಭುತ್ವ ಅತಿಮುಖ್ಯವಾಗಿದೆ. ಆದ್ದರಿಂದ ಪ್ರಜಾಪ್ರಭುತ್ವದ ತತ್ವಗಳನ್ನು ಬಲಪಡಿಸಲು ಮತ್ತು ಸಂಯೋಜಿಸಲು ಎಲ್ಲಾ ರಾಷ್ಟ್ರಗಳ ಸರ್ಕಾರಗಳನ್ನು ಪ್ರೋತ್ಸಾಹಿಸುವುದರಿಂದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನವು ಮುಖ್ಯವಾಗಿದೆ.
2) ಸಂಸತ್ತುಗಳ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯಲು ಮತ್ತು ನ್ಯಾಯ, ಶಾಂತಿ, ಅಭಿವೃದ್ಧಿ ಹಾಗೂ ಮಾನವ ಹಕ್ಕುಗಳನ್ನು ತಲುಪಿಸಲು, ಅವರ ಸಾಮರ್ಥ್ಯ ಮತ್ತು ಆದೇಶವನ್ನು ಆಚರಿಸಲು ಈ ದಿನವು ಅತ್ಯಗತ್ಯ ಪಾತ್ರವನ್ನು ವಹಿಸುತ್ತದೆ.
3) ಯಾವುದೇ ಪ್ರಜಾಪ್ರಭುತ್ವದ ಪ್ರಮುಖ ಅಂಶಗಳೆಂದರೆ ಸ್ವಾತಂತ್ರ್ಯ, ಮಾನವ ಹಕ್ಕುಗಳಿಗೆ ಗೌರವ ಮತ್ತು ಸಾರ್ವತ್ರಿಕ ಮತದಾನದ ಮೂಲಕ ಆವರ್ತಕ ಮತ್ತು ನಿಜವಾದ ಚುನಾವಣೆಗಳನ್ನು ನಡೆಸುವ ತತ್ವಗಳು. ಈ ಅಂಶಗಳು ಮಾನವ ಹಕ್ಕುಗಳ ಸಾಕ್ಷಾತ್ಕಾರವನ್ನು ಸಹ ಒದಗಿಸುತ್ತವೆ.
4) ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ ಮತ್ತು ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಅಂತರರಾಷ್ಟ್ರೀಯ ಒಪ್ಪಂದವು ಈ ಎಲ್ಲಾ ರಾಜಕೀಯ ಹಕ್ಕುಗಳು ಮತ್ತು ಅರ್ಥಪೂರ್ಣ ಪ್ರಜಾಪ್ರಭುತ್ವಗಳಿಗೆ ಆಧಾರವಾಗಿರುವ ನಾಗರಿಕ ಸ್ವಾತಂತ್ರ್ಯಗಳನ್ನು ಒಳಗೊಂಡಿದೆ.
● ಭಾರತೀಯ ಪ್ರಜಾಪ್ರಭುತ್ವದ ವೈಶಿಷ್ಟ್ಯಗಳು:-
1) ಭಾರತವು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ವಿಶ್ವದಲ್ಲೇ ಅತಿ ಹೆಚ್ಚು ಮತದಾನ ಮಾಡುವ ಜನಸಂಖ್ಯೆಯನ್ನು ಹೊಂದಿದೆ.
2) ಭಾರತೀಯ ಪ್ರಜಾಪ್ರಭುತ್ವದಲ್ಲಿ ಸಾರ್ವತ್ರಿಕ ಮತದಾನದ ಹಕ್ಕು ಹೊಂದಿರುವ ಬಹು-ಪಕ್ಷದ ಚುನಾವಣೆಗಳು ಇದ್ದು, ವಯಸ್ಸಿನ ನಿರ್ಬಂಧಕ್ಕೆ ಒಳಪಟ್ಟಿರುತ್ತದೆ.
3) ಚುನಾವಣೆ ನಂತರ ಸರ್ಕಾರದಲ್ಲಿ ಸುಗಮ ಬದಲಾವಣೆ
ಸ್ವತಂತ್ರ ಪತ್ರಿಕಾ ಮತ್ತು ನ್ಯಾಯಾಂಗದ ಅಸ್ತಿತ್ವ, ಮತ್ತು ಕಾನೂನು ನ್ಯಾಯಾಲಯಗಳಲ್ಲಿ ನ್ಯಾಯಸಮ್ಮತವಾದ ನಾಗರಿಕ ಸ್ವಾತಂತ್ರ್ಯಗಳ ಖಾತರಿ ಭಾರತೀಯ ಪ್ರಜಾಪ್ರಭುತ್ವದಲ್ಲಿ ಇದೆ.
4) ಭಾರತದಲ್ಲಿ ಸಂಸತ್ತು ಅಥವಾ ನ್ಯಾಯಾಂಗವಲ್ಲದ ಸಂವಿಧಾನವೇ ಸರ್ವೋಚ್ಚವಾಗಿದೆ. ಭಾರತವು ಲಿಖಿತ ಸಂವಿಧಾನವನ್ನು ಹೊಂದಿದೆ.
5) ಭಾರತೀಯ ಪ್ರಜಾಪ್ರಭುತ್ವದಲ್ಲಿ ನಾಗರಿಕರ ಹಕ್ಕುಗಳು, ಸ್ವಾತಂತ್ರ್ಯಗಳು ಮತ್ತು ಕರ್ತವ್ಯಗಳನ್ನು ಇತರ ದೇಶಗಳಿಗಿಂತ ಭಿನ್ನವಾಗಿ ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿದ್ದು, ಸರ್ಕಾರದ ಏಕೀಕೃತ ವ್ಯವಸ್ಥೆಗೆ ಸ್ವಲ್ಪ ಹೆಚ್ಚು ಒಲವು ಹೊಂದಿರುವ ಒಕ್ಕೂಟ ವ್ಯವಸ್ಥೆಯಾಗಿದೆ.
● ಕೊನೆಯ ಮಾತು:- ವಿಶ್ವಸಂಸ್ಥೆಯು ಉತ್ತಮ ಆಡಳಿತವನ್ನು ಉತ್ತೇಜಿಸುತ್ತದೆ, ಚುನಾವಣೆಗಳನ್ನು ಮೇಲ್ವಿಚಾರಣೆ ಮಾಡುತ್ತದೆ, ಪ್ರಜಾಸತ್ತಾತ್ಮಕ ಸಂಸ್ಥೆಗಳು ಮತ್ತು ಹೊಣೆಗಾರಿಕೆಯನ್ನು ಬಲಪಡಿಸಲು ನಾಗರಿಕ ಸಮಾಜವನ್ನು ಬೆಂಬಲಿಸುತ್ತದೆ, ವಸಾಹತುಶಾಹಿ ರಾಷ್ಟ್ರಗಳಲ್ಲಿ ಸ್ವಯಂ ನಿರ್ಣಯವನ್ನು ಖಾತ್ರಿಗೊಳಿಸುತ್ತದೆ ಮತ್ತು ಸಂಘರ್ಷದ ನಂತರದ ರಾಷ್ಟ್ರಗಳಲ್ಲಿ ಹೊಸ ಸಂವಿಧಾನಗಳನ್ನು ರಚಿಸುವಲ್ಲಿ ಸಹಾಯ ಮಾಡುತ್ತದೆ. ಪ್ರಜಾಪ್ರಭುತ್ವದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ವಿಶ್ವಸಂಸ್ಥೆಯು ಈ ದಿನದಂದು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಪ್ರಜಾಪ್ರಭುತ್ವವನ್ನು ಆಚರಿಸಲು ಅಂತರರಾಷ್ಟ್ರೀಯ ದಿನದಂದು ವಿವಿಧ ಪ್ರದರ್ಶನಗಳು, ಚರ್ಚೆಗಳು ಮತ್ತು ವಿಶೇಷ ಮಾತುಕತೆಗಳನ್ನು ನಡೆಸಲಾಗುತ್ತದೆ. ಈ ದಿನವನ್ನು ಸ್ಮರಿಸಲು, ಯುವಕರು ವಿವಿಧ ವಿನಿಮಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಲಾಗುತ್ತದೆ. ಇಂತಹ ಮಹತ್ವವಿರುವ ಈ ದಿನದಂದು ಭಾರತವು ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಹೇಸರುವಾಸಿಯಾಗಿದೆ, ನಾವು ನೀವೆಲ್ಲ ಈ ದಿನ ಆಚರಿಸೋಣ ಹಾಗೂ ಗೌರವಿಸೋಣ.
ಎನ್.ಎನ್.ಕಬ್ಬೂರ
ಶಿಕ್ಷಕರು, ತಾ-ಸವದತ್ತಿ ಜಿ-ಬೆಳಗಾವಿ
ಮೊಬೈಲ್-9740043452
mutturaj.kabbur@gmail.com
○○○○○○○○○○○○○
Karnataka Public Service Commission ಕೆಪಿಎಸ್ ಸಿ ಸ್ಪರ್ಧಾತ್ಮಕ ಹಾಗೂ ಕನ್ನಡ ಭಾಷೆ ಪರೀಕ್ಷೆಗಳ ಮುಂದೂಡಿಕೆ
Karnataka Public Service Commission ಕರ್ನಾಟಕ ಲೋಕಸೇವಾ ಆಯೋಗದ ಅಧಿಸೂಚನೆ ಸಂಖ್ಯೆ : ಪಿಎಸ್ ಸಿ 1 ಆರ್ ಟಿ ಬಿ 1/2023, ದಿ:13-03-2024ರನ್ವಯ ಅಧಿಸೂಚಿಸಿರುವ ಉಳಿಕೆ ಮೂಲ ವೃಂದದಲ್ಲಿನ ವಿವಿಧ ಗ್ರೂಪ್ ಬಿ ಹುದ್ದೆಗಳಿಗೆ ದಿನಾಂಕ:14-09-2024 ಮತ್ತು 15-09-2024ರಂದು ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಿ ಅಭ್ಯರ್ಥಿಗಳನ್ನು ಪರೀಕ್ಷಾ ಉಪ ಕೇಂದ್ರಗಳಿಗೆ ಹಂಚಿಕೆ ಮಾಡಲಾಗಿತ್ತು.
ಈ ಮಧ್ಯೆ ದಿನಾಂಕ: 10-09-2024ರ ಕರ್ನಾಟಕ ಸರ್ಕಾರದ ನಡವಳಿಗಳಲ್ಲಿ ರಾಜ್ಯ ಸಿವಿಲ್ ಸೇವೆಗಳಲ್ಲಿನ ವಿವಿಧ ಇಲಾಖೆಗಳ ಗ್ರೂಪ್ ಬಿ ಮತ್ತು ಸಿ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಈಗಾಗಲೇ ಹೊರಡಿಸಲಾಗಿರುವ ಅಧಿಸೂಚನೆಗಳಿಗೆ ಹಾಗೂ ಮುಂದಿನ ಒಂದು ವರ್ಷದಲ್ಲಿ ಹೊರಡಿಸಲಿರುವ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಒಂದು ಬಾರಿಗೆ ಅನ್ವಯವಾಗುವಂತೆ ಗರಿಷ್ಟ ವಯೋಮಿತಿಯಲ್ಲಿ 3 ವರ್ಷಗಳ ಸಡಿಲಿಕೆಯನ್ನು ನೀಡಿ ಆದೇಶಿಸಿದೆ ” ಎಂದು ತಿಳಿಸಲಾಗಿರುತ್ತದೆ.
ಮೇಲ್ಕಂಡ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ದಿ:13-03-2024ರನ್ವಯ ಅಧಿಸೂಚಿಸಿರುವ ಎಲ್ಲಾ ಹುದ್ದೆಗಳಿಗೂ ವಯೋಮಿತಿ ಸಡಿಲಿಕೆ ಅನ್ವಯಿಸಿ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕಾಗಿರುತ್ತದೆ.
ಆದ್ದರಿಂದ ದಿನಾಂಕ:14-09-2024 ರ ಕನ್ನಡ ಭಾಷಾ ಪರೀಕ್ಷೆ ಮತ್ತು ದಿನಾಂಕ: 15-09-2024ರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮುಂದೂಡಲಾಗಿದೆ.
Karnataka Public Service Commission ಸದರಿ ಅಧಿಸೂಚನೆಯಲ್ಲಿನ ಹುದ್ದೆಗಳಿಗೆ ಇತರೆ ದಿನಾಂಕಗಳಲ್ಲಿ ನಿಗದಿಪಡಿಲಾಗಿದ್ದ ನಿರ್ದಿಷ್ಟ ಪತ್ರಿಕೆಗಳ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಹ ಮುಂದೂಡಲಾಗಿದೆ.
ಸರ್ಕಾರದ ಆದೇಶದಂತೆ ವಯೋಮಿತಿ ಸಡಿಲಿಕೆ ನೀಡಿ, ಅಭ್ಯರ್ಥಿಗಳಿಗೆ ಹೊಸದಾಗಿ ಅರ್ಜಿ ಸಲ್ಲಿಸಲು ಕಾಲಾವಾಕಾಶ ಮುಕ್ತಾಯವಾದ ನಂತರ ಪರಿಷ್ಕೃತ ಪರೀಕ್ಷಾ ದಿನಾಂಕಗಳನ್ನು ತಿಳಿಸಲಾಗುವುದು ಎಂದು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿಗಳು ತಿಳಿಸಿದ್ದಾರೆ.
Department of Women and Child Development ಅಂಗನವಾಡಿಗೆ ನೇಮಕಾತಿ ಸಂಬಂಧ ಮಧ್ಯವರ್ತಿಗಳಿಂದ ಮೋಸ ಹೋಗಬೇಡಿ-ಇಲಾಖೆ ಪ್ರಕಟಣೆ
Department of Women and Child Development ಶಿವಮೊಗ್ಗ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವ್ಯಾಪ್ತಿಗೆ ಬರುವ 07 ತಾಲೂಕುಗಳಲ್ಲಿ ಖಾಲಿಯಿರುವ 126 ಅಂಗನವಾಡಿ ಕಾರ್ಯಕರ್ತೆ ಮತ್ತು 448 ಸಹಾಯಕಿಯರ ಹುದ್ದೆಗಳಿಗೆ ಸ್ಥಳೀಯ ಕಂದಾಯ ಗ್ರಾಮ/ವಾರ್ಡ್ಗಳ ಕಾರ್ಯಕರ್ತೆಯರ ಹುದ್ದೆಗೆ ಪಿಯುಸಿ ಪಾಸಾದ ಹಾಗೂ ಸಹಾಯಕಿ ಹುದ್ದೆಗೆ ಎಸ್.ಎಸ್.ಎಲ್.ಸಿ. ಪಾಸಾದ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.
Department of Women and Child Development ಈ ಆಯ್ಕೆಯನ್ನು ಪಾರದರ್ಶಕವಾಗಿ ಮಾಡುವ ಸಲುವಾಗಿ ತಾಲೂಕು ಮಟ್ಟದಲ್ಲಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯನ್ನು ರಚಿಸಲಾಗಿದ್ದು, ಈ ಆಯ್ಕೆಯನ್ನು ಅರ್ಹ ಅಭ್ಯರ್ಥಿಗಳು ಗಳಿಸಿರುವ ಅಂಕಗಳ ಆಧಾರದ ಮೇಲೆ ಪಾರದರ್ಶಕವಾಗಿ ಆಯ್ಕೆ ಮಾಡಲಾಗುವುದು.
ಕೆಲವು ಮಧ್ಯವರ್ತಿಗಳು ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆಯುತ್ತಿರುವ ಬಗ್ಗೆ ದೂರುಗಳು ಸ್ವೀಕೃತವಾಗಿದ್ದು, ಯಾರೂ ಸಹ ಹಣ ನೀಡಿ ಮೋಸ ಹೋಗಬಾರದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಕೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
