Maharshi Valmiki Scheduled Tribes Development Corporation ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮವು 2024-25ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ಸ್ವಯಂ ಉದ್ಯೋಗ ಯೋಜನೆ, ಉದ್ಯಮಶೀಲತಾ ಅಭಿವೃದ್ಧಿ ಯೋಜನೆ, ಮೈಕ್ರೋ ಕ್ರೆಡಿಟ್ ಯೋಜನೆ, ಸ್ವಾವಲಂಭಿ ಸಾರಥಿ ಯೋಜನೆ ಮತ್ತು ಗಂಗಾ ಕಲ್ಯಾಣ ಯೋಜನೆಗಳಡಿ ಸೌಲಭ್ಯ ಪಡೆಯಲು ಪರಿಶಿಷ್ಟ ಪಂಗಡಗಳ ಅರ್ಹ ಫಲಾಪೇಕ್ಷಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ಸೇವಾಸಿಂಧು https://sevasindhu.karnataka.gov.in ಮುಖಾಂತರ ನ.23 ರೊಳಗಾಗಿ ಅರ್ಜಿ ಸಲ್ಲಿಸುವಂತೆ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಚೇರಿ ದೂ.ಸಂ.: 08182-276776 ನ್ನು ಸಂಪರ್ಕಿಸುವುದು
Maharshi Valmiki Scheduled Tribes Development Corporation ಮಹರ್ಷಿ ವಾಲ್ಮೀಕಿ ನಿಗಮದ ವಿವಿಧ ಯೋಜನೆಗಳ ಲಾಭ ಪಡೆಯಲು ಅರ್ಹರಿಂದ ಅರ್ಜಿ ಆಹ್ವಾನ
Shimoga National Festivals Celebration Committee ಅದ್ಧೂರಿ ರಾಜ್ಯೋತ್ಸವಕ್ಕೆ ಜಿಲ್ಲಾಡಳಿತ ಸಜ್ಜು. ಸಾರ್ವಜನಿಕರಿಗೆ ಪ್ರಕಟಣೆ
Shimoga National Festivals Celebration Committee ಶಿವಮೊಗ್ಗ ಜಿಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನವೆಂಬರ್ 1 ರಂದು ಬೆಳಿಗ್ಗೆ 9.00 ಗಂಟೆಗೆ ನಗರದ ಡಿ.ಎ.ಆರ್. ಪೊಲೀಸ್ ಪೆರೇಡ್ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಧ್ವಜಾರೋಹಣವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಮಧು ಬಂಗಾರಪ್ಪ ಇವರು ನೆರವೇರಿಸುವರು. ವಿಶೇಷ ಆಹ್ವಾನಿತರಾಗಿ ಭದ್ರಾವತಿ ಕ್ಷೇತ್ರ ಶಾಸಕರು ಹಾಗೂ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಕೆ. ಸಂಗಮೇಶ್ವರ ಹಾಗೂ ಸಾಗರ ಕ್ಷೇತ್ರದ ಶಾಸಕರು ಹಾಗೂ ಕನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಇವರುಗಳು ಉಪಸ್ಥಿತರಿರುವರು.
ಮುಖ್ಯ ಅತಿಥಿಗಳಾಗಿ ಸಂಸದರು, ವಿಧಾನಸಭಾ ಮತ್ತು ವಿಧಾನ ಪರಿಷತ್ ಶಾಸಕರು, ವಿವಿಧ ನಿಗಮ/ ಮಂಡಳಿ/ ಪ್ರಾಧಿಕಾರಗಳ ಅಧ್ಯಕ್ಷರು, ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು, ಜಿ.ಪಂ ಸಿಇಓ, ಪಾಲಿಕೆ ಆಯುಕ್ತರು, ವಿವಿಧ ಇಲಾಖೆಗಳ ಅಧಿಕಾರಿಗಳು, ಪಾಲ್ಗೊಳ್ಳುವರು.
Shimoga National Festivals Celebration Committee ಅಂದು ಬೆಳಿಗ್ಗೆ 8 ಗಂಟೆಗೆ ನಗರದ ಸೈನ್ಸ್ ಕಾಲೇಜು ಮೈದಾನದಿಂದ ಡಿ.ಎ.ಆರ್ ಪೊಲೀಸ್ ಪೆರೇಡ್ ಮೈದಾನದವರೆಗೆ ಶ್ರೀ ಭುವನೇಶ್ವರಿ ದೇವಿ ಮೆರವಣಿಗೆ ಬರಲಿದೆ. ಸಂಜೆ 5 ಗಂಟೆಗೆ ಕುವೆಂಪು ರಂಗಮAದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಶಿವಮೊಗ್ಗ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಸರ್ಕಾರಿ ಅಧಿಕಾರಿಗಳು/ನೌಕರರ, ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ಮತ್ತು ಕನ್ನಡ ಸಂಘಟನೆಗಳು ಹಾಗೂ ಸಾರ್ವಜನಿಕರು ಕನ್ನಡ ರಾಜ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸುವಂತೆ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ವತಿಯಿಂದ ವಿನಂತಿಸಲಾಗಿದೆ.
Rotary Club Shivamogga ತುಂಗಾ ಕಲೋತ್ಸವ. ಶಿವಮೊಗ್ಗ ಪೂರ್ವ ರೋಟರಿ ಕ್ಲಬ್ ಸದಸ್ಯರಿಗೆ 8 ಪುರಸ್ಕಾರ
Rotary Club Shivamogga ತೀರ್ಥಹಳ್ಳಿಯ ಗೋಪಾಲಗೌಡ ರಂಗಮಂದಿರದಲ್ಲಿ ಆಯೋಜಿಸಿದ್ದ ವಲಯಮಟ್ಟದ ರೋಟರಿ ಸಾಂಸ್ಕೃತಿಕ ತುಂಗಾ ಕಲೋತ್ಸವ ಸ್ಪರ್ಧೆಯಲ್ಲಿ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯ ಸದಸ್ಯರು ಬಹುಮಾನ ವಿಜೇತರಾಗಿದ್ದಾರೆ.
ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಸದಸ್ಯರು ಎಲ್ಲ 8 ಸ್ಪರ್ಧೆಗಳಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿ ಅಪಾರ ಮೆಚ್ಚುಗೆ ಗಳಿಸಿ ಬಹುಮಾನ ಪಡೆದಿದ್ದಾರೆ. ಸೋಲೊ ಚಿತ್ರಗೀತೆಯಲ್ಲಿ ಸಂಸ್ಥೆಯ ಆಕಾಶ್ ಪ್ರಥಮ ಸ್ಥಾನ, ಪ್ರಶಸ್ತಿ ಪತ್ರ ಹಾಗೂ ಪಾರಿತೋಷಕ ಪಡೆದರು.
ಮಕ್ಕಳ ವಿಭಾಗದಲ್ಲಿ ಸೋಲೊ ನೃತ್ಯ ವಿಭಾಗದಲ್ಲಿ ಕೀರ್ತನಾ, ರೋಟರಿ ಶಿವಮೊಗ್ಗ ಪೂರ್ವ ಸದಸ್ಯರು ಸಮೂಹ ಗಾಯನ ವಿಭಾಗದಲ್ಲಿ ದ್ವಿತೀಯ, ಸಮೂಹ ನೃತ್ಯದಲ್ಲಿ ದ್ವಿತೀಯ ಸ್ಥಾನ ಪಡೆದರು. ಸ್ಕಿಟ್ ವಿಭಾಗದಲ್ಲಿ ಶ್ರೀ ಕೃಷ್ಣ ಸಂಧಾನ ನಾಟಕ ಪ್ರದರ್ಶನ ಮಾಡಿದರು.
Rotary Club Shivamogga ಡಾ. ಅರುಣ್, ರಾಜ್ಯಪ್ರಶಸ್ತಿ ಪುರಸ್ಕೃತ ರಂಗಭೂಮಿ ಕಲಾವಿದ ರೇಣುಕಪ್ಪ ನಿರ್ದೇಶನದಲ್ಲಿ ರೋಟರಿ ಸದಸ್ಯರು ನಾಟಕ ಪ್ರದರ್ಶಿಸಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿ ರಂಜಿಸಿದರು. ಒಟ್ಟು ನಾಲ್ಕು ಬಹುಮಾನ ಪಡೆದು ಜಿಲ್ಲಾ ಮಟ್ಟದ ಸೋಲೊ ನೃತ್ಯ, ಸೋಲೊ ಚಿತ್ರಗೀತೆ ವಿಭಾಗದಲ್ಲಿ ಆಯ್ಕೆಯಾಗಿದ್ದಾರೆ.
ರೋಟರಿ ಸಹಾಯಕ ಗವರ್ನರ್ ಪ್ರೊ. ಎಚ್.ಎಂ.ಸುರೇಶ್‌ಕುಮಾರ್, ಜಿಲ್ಲಾ ಸಾಂಸ್ಕೃತಿಕ ಉಪಾಧ್ಯಕ್ಷ ಧಮೇಂದರ್ ಸಿಂಗ್ ಬಂಟಿ, ಜೆ.ರಾಧಾಕೃಷ್ಣ, ಶ್ರೀಕಾಂತ್, ಕೆ.ಪಿ.ಸ್ವಾಮಿ, ಭರತಕುಮಾರ್, ಶಿವಪ್ರಸಾದ್, ಮಾಜಿ ಸಹಾಯಕ ಗವರ್ನರ್ ವಸಂತ್ ಹೋಬಳಿದಾರ್, ಜಿ.ವಿಜಯಕುಮಾರ್, ಡಾ. ಗುಡದಪ್ಪ ಕಸಬಿ, ಮಂಜುನಾಥ ರಾವ್ ಕದಂ, ಕಿಶರ‍್ಕುಮಾರ್, ಸುಮತಿ ಕುಮಾರಸ್ವಾಮಿ, ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಅರುಣ್ ದೀಕ್ಷಿತ್, ಸಂತೋಷ್, ಕಾರ್ಯದರ್ಶಿ ಶಶಿಕಾಂತ್ ನಾಡಿಗ್, ಡಾ. ಕೌಸ್ತುಭಾ ಅರುಣ್, ಡಾ. ಧನಂಜಯ, ಬಿಂದು ವಿಜಯಕುಮಾರ್, ನಾಗವೇಣಿ, ಪ್ರತಾಪ್ ಲಕ್ಷö್ಮಣ್, ಅನುಷ್‌ಗೌಡ, ರೋಟರಿ ಶಿವಮೊಗ್ಗ ಪೂರ್ವ ಸದಸ್ಯರು ಉಪಸ್ಥಿತರಿದ್ದರು.
Actor Darshan ದರ್ಶನ್ ಗೆ ಷರತ್ತು ಬದ್ಧ ಜಾಮೀನು ನೀಡಿದ ಕೋರ್ಟ್
Actor Darshan ಬಹುದಿನಗಳಿಂದ ಕುತೂಹಲ ಕೆರಳಿಸಿದ್ದ ನಟ ದರ್ಶನ್ ಅವರ ಪ್ರಕರಣ ಒಂದು ಹಂತಕ್ಕೆ ಮುಟ್ಟಿದೆ.
ಪರಪ್ಪನ ಅಗ್ರಹಾರದಿಂದ ಹಿಡಿದು ಬಳ್ಳಾರಿ ಜೈಲ್ ವರೆಗೂ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ
ಸುದ್ದಿಯೆಂದರೆ..
“ದರ್ಶನ್ ಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಸಿಗುವುದೆ? ಇಲ್ಲವೆ?.”
ನಟ ದರ್ಶನ್ ಗೆ ಬಳ್ಳಾರಿ ಜೈಲು ಸೇರಿದ ನಂತರ ಅವರಿಗೆ ತೀವ್ರ ಬೆನ್ನು ನೋವು ಕಾಣಿಸಿಕೊಂಡಿತ್ತು.
Actor Darshan ಇದರ ಆಧಾರದ ಮೇಲೆ ದರ್ಶನ್ ಪರ ವಕೀಲರು ವಾದ ಮಂಡಿಸುತ್ತಲೇ ಬಂದಿದ್ದರು.
ಈಗ ದರ್ಶನ್ ಅವರಿಗೆ ತುರ್ತು ಚಿಕಿತ್ಸೆಯ ಅಗತ್ಯವನ್ನ ಕೋರ್ಟ್ ಮನಗಂಡು ಆರುವಾರಗಳ ಷರತ್ತು ಬದ್ಧ ಜಾಮೀನು ಕರುಣಿಸಿದೆ.
ವೈದ್ಯಕೀಯ ಕಾರಣಕ್ಕಾಗಿ ಮಧ್ಯಂತರ ಜಾಮೀನು ಕೋರಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.
ಈ ಸುದ್ದಿ ತಿಳಿಯುತ್ತಲೇ ದರ್ಶನ್ ಅವರ ಅಪಾರ ಅಭಿಮಾನಿಗಳು
ಸಂತೋಷಪಟ್ಟಿದ್ದಾರೆ.
Kateel Ashok Pai Memorial Institute ಸ್ಥಳೀಯ ಸಂಪನ್ಮೂಲಗಳನ್ನೇ ಬಳಸಿ ಯುವಜನ ತಮ್ಮ ಜೀವನ ಸಮೃದ್ಧಗೊಳಿಸಬಹುದು – ಶಾಸಕ ಡಿ.ಎಸ್.ಅರುಣ್
Kateel Ashok Pai Memorial Institute ಶಿವಮೊಗ್ಗದ ಮಾನಸ ಟ್ರಸ್ಟ್ ನ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಬಿಸಿಎ ವಿಭಾಗದ ಕಂಪ್ಯೂಟರ್ ಪ್ರಯೋಗಾಲಯದ ಉದ್ಘಾಟನೆ ಹಾಗೂ ರೋಟರಿ ಶಿವಮೊಗ್ಗ ಮಿಡ್‌ಟೌನ್ ವತಿಯಿಂದ ದಿನಾಂಕ ಅಕ್ಟೋಬರ್ 30 ರಂದು ವಿದ್ಯಾರ್ಥಿಗಳಿಗೆ ನಡೆಸಿದ ಕೌಶಲ್ಯ ತರಬೇತಿ ಕಾರ್ಯಾಗಾರದ ಉದ್ಘಾಟನೆಯನ್ನು ಕಾಲೇಜಿನ ಬಹುಮುಖಿ ಸಭಾಂಗಣದಲ್ಲಿ ವಿಧಾನಪರಿಷತ್ ಸದಸ್ಯರು, ಕುವೆಂಪು ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ತಿನ ಸದಸ್ಯರೂ ಆಗಿರುವ ಶ್ರೀಯುತ ಡಿ ಎಸ್ ಅರುಣ್ ರವರು ನೆರವೇರಿಸಿದರು.
ಶಿಕ್ಷಣವು ಅನುಕರಣೆಗಿಂತ ಸ್ವಂತಿಕೆಯನ್ನು ಹಾಗೂ ಸೃಜನಾತ್ಮಕತೆಯನ್ನು ಉದ್ದೀಪನೆಗೊಳಿಸುವಂತಿರಬೇಕು ಎಂದು ಅವರು ಅಭಿಪ್ರಾಯ ಪಟ್ಟರು ಇಂದಿನ ಯುವಕ ಯುವತಿಯರಲ್ಲಿ ತನ್ನ ಬಗ್ಗೆ, ತನ್ನ ಸಮುದಾಯದ ಬಗ್ಗೆ, ತನ್ನ ದೇಶದ ಬಗ್ಗೆ ಕೀಳರಿಮೆ ಬೇಡ, ಬದಲಾಗಿ ಸ್ವಾಭಿಮಾನ ಇರಬೇಕು ಹಾಗೂ ಇಲ್ಲಿಯದೇ ಸಂಪನ್ಮೂಲಗಳನ್ನು ಬಳಸಿಕೊಂಡು ಯುವಜನರು ತಮ್ಮ ಜೀವನವನ್ನು ಸಮೃದ್ಧಿಗೊಳಿಸಬಹುದು ಎಂದು ತಿಳಿಸಿದರು. ತಮ್ಮ ಆಸಕ್ತಿಯ ವಿಷಯಗಳನ್ನು ಓದುವ ಮುಕ್ತ ಅವಕಾಶ ಹೊಸ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ದೊರಕುತ್ತಿದೆ. ಅದನ್ನು ಇಂದಿನ ವಿದ್ಯಾರ್ಥಿಗಳು ಧನಾತ್ಮಕವಾಗಿ ಬಳಸಿಕೊಳ್ಳಬೇಕು… ಇಂದಿನ ಉದ್ಯೋಗಗಳಿಗೆ ಬೇಕಾಗುವುದು ಪದವಿ ಪತ್ರಗಳು ಒಂದೇ ಅಲ್ಲ. ಕೌಶಲ್ಯಗಳು ಕೂಡ ಮುಖ್ಯ ಎಂಬುದನ್ನು ಮರೆಯಬೇಡಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ವಿದ್ಯಾರ್ಥಿಗಳು ಮೂರು ಮುಖ್ಯ ವಿಷಯಗಳನ್ನು ರೂಡಿ ಮಾಡಿಕೊಳ್ಳಿ ..ಅವುಗಳಂದರೆ. ಮೊದಲನೆಯದಾಗಿ ಭಾವನಾತ್ಮಕ ಬುದ್ಧಿವಂತಿಕೆ ಅಥವಾ ಎಮೋಷನಲ್ ಕೋಶಂಟ್, ಎರಡನೆಯದಾಗಿ ಒಳ್ಳೆಯ ಕೆಲಸಗಳನ್ನು ದಿನನಿತ್ಯ ಮಾಡುವ ಅಭ್ಯಾಸ .ಮೂರನೆಯದಾಗಿ ಸಾಮಾಜಿಕ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸುವುದು ಎಂದು ಅವರು ತಿಳಿಸಿದರು.
Kateel Ashok Pai Memorial Institute ಸಂಸ್ಥೆಯ ನಿರ್ದೇಶಕರಾದ ಡಾಕ್ಟರ್ ರಜನಿ ಪೈ ರವರು ಶಿಕ್ಷಣ ಸಂಸ್ಥೆಯನ್ನು ಕಟ್ಟಿ, ಸಮಾಜಕ್ಕೆ ಕೊಡುಗೆಯನ್ನು ನೀಡುತ್ತಿರುವುದು ಶ್ಲಾಘನೀಯ ಎಂದು ಶ್ರೀ ಅರುಣ್ ರವರು ತಿಳಿಸಿದರು .ಮತ್ತೋರ್ವ ಮುಖ್ಯ ಅತಿಥಿಗಳಾದ ರೋಟರಿ ಶಿವಮೊಗ್ಗ ಮಿಡ್‌ಟೌನ್ ಅಧ್ಯಕ್ಷರಾದ ಶ್ರೀ ಸುರೇಶ್ ಕುಮಾರ್ ರವರು ಮಾತಾಡುತ್ತಾ ನಮ್ಮೆಲ್ಲರ ಮೆದುಳು ಅಂದಾಜು ೩೨ ಲಕ್ಷಕ್ಕಿಂತಲೂ ಹೆಚ್ಚು ಜಿಬಿಯ ಸಾಮರ್ಥ್ಯವನ್ನು ಹೊಂದಿದೆ .
ಆದುದರಿಂದ ಅಂತಹ ಮೆದುಳಿನ ಸಾಮರ್ಥ್ಯವನ್ನು ಬಳಕೆ ಮಾಡುವ ಕೌಶಲ್ಯವನ್ನು ಕಲಿಯಿರಿ ಎಂದು ತಿಳಿಸಿದರು.
ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ ಶ್ರೀ ರೋ ಸಂತೋಷ್ ರವರು ವಿದ್ಯಾರ್ಥಿಗಳಿಗೆ ಹಲವಾರು ಚಟುವಟಿಕೆಗಳ ಮೂಲಕ ಗ್ರಹಣ ಶಕ್ತಿಯ ಕೌಶಲ್ಯಗಳನ್ನು ,ಆರೋಗ್ಯ ಪೂರ್ಣ ಜೀವನ ಶೈಲಿಯ ರೀತಿಯನ್ನು ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಮಾನಸ ಸಂಸ್ಥೆಯ ನಿರ್ದೇಶಕರಾದ ಡಾಕ್ಟರ್ ರಜನಿ ಎ ಪೈ, ಆಡಳಿತ ಅಧಿಕಾರಿಗಳಾದ ಪ್ರೊಫೆಸರ್ ರಾಮಚಂದ್ರ ಬಾಳಿಗ ,ರೋಟರಿ ಶಿವಮೊಗ್ಗ ಮಿಡ್‌ಟೌನ್‌ನ ಕಾರ್ಯದರ್ಶಿ ಶ್ರೀ ಪಾಹಿಂ ,ಉಪನ್ಯಾಸಕರಾದ ಶ್ರೀ ಮಂಜುನಾಥ ಸ್ವಾಮಿ ಶ್ರೀ ಮಂಗೇಶ ಎಸ್ ಪೈ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಡಾಕ್ಟರ್ ಸಂಧ್ಯಾ ಕಾವೇರಿ ಮಾತನಾಡುತ್ತಾ ಶ್ರೀ ಡಿಎಸ್ ಅರುಣ್ ರವರು ಯುವಜನರ ಹಾಗೂ ವಿದ್ಯಾರ್ಥಿಗಳ ಆಸಕ್ತಿ ಹಾಗೂ ಅವಶ್ಯಕತೆಗಳೆರಡನ್ನು ಅರ್ಥೈಸಿಕೊಂಡು ತನ್ನ ಸಮಾಜಸೇವೆಯ ಮುಖ್ಯ ವಿಷಯಗಳಾಗಿ ಕೈಗೆತ್ತಿಕೊಳ್ಳುತ್ತಾರೆ ಅವರು ಯುವಜನರೆಲ್ಲ ಮೆಚ್ಚಿದ ಅಪರೂಪದ ನಾಯಕ ಎಂದು ಹೇಳಿ ಸಂಸ್ಥೆಯ ಪರವಾಗಿ ಅಭಿನಂದಿಸಿದರು .
ರೋಟರಿ ಸಂಸ್ಥೆಯು ಆಯಾ ಕಾಲದ ಸಮಾಜಕ್ಕೆ ಅಗತ್ಯವಿರುವ ಸೇವೆಯನ್ನೇ ಒದಗಿಸುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಇಂದಿನ ಕಾಲಕ್ಕೆ ಅತಿ ಅವಶ್ಯಕವಾಗಿ ಬೇಕಾಗಿರುವ ಕೌಶಲ್ಯಗಳ ತರಬೇತಿಯ ಕಾರ್ಯಗಾರ ಅರ್ಥಪೂರ್ಣ ಕಾರ್ಯಕ್ರಮ ಎಂದು ಬಣ್ಣಿಸಿದರು.
ವಿದ್ಯಾರ್ಥಿಗಳಾದ ಸಂಧ್ಯಾ ಕೆಕೆ ನಿರೂಪಿಸಿ ,ಮಮತಾ ಸ್ವಾಗತಿಸಿ ,ಗೌಸ್ ಪೀರ್ ಹಾಗೂ ಹರ್ಷವರ್ಧನ ಅತಿಥಿಗಳನ್ನು ಪರಿಚಯಿಸಿದರು. ತನ್ಮಯಿ ಹಾಗೂ ತಂಡದವರು ಪ್ರಾರ್ಥನೆಯನ್ನು ಹಾಡಿದರು .ಹಾಗೂ ಕಾವ್ಯ ವಂದಿಸಿದರು.
District Sports and Empowerment ಜಿಲ್ಲೆಯ ಕ್ರೀಡಾಪಟುಗಳಿಗೆ ಪ್ರೋತ್ಸಾಹದ ಚಿಲುಮೆಯಾಗಿದ್ದ “ಫಿಲೋಮಿನಾ ರಾಜ್ ‘ಸ್ಮರಣಾರ್ಥ ಜಿಲ್ಲಾಮಟ್ಟದ ವಾಲಿ ಬಾಲ್ ಪಂದ್ಯಾವಳಿ
District Sports and Empowerment ಕ್ರೀಡಾ ಕ್ಷೇತ್ರದಲ್ಲಿ, ಅಪಾರ ಶಿಷ್ಯ ವರ್ಗವನ್ನು ಸಜ್ಜುಗೊಳಿಸಿ, ತರಬೇತಿಯನ್ನು ಕೊಟ್ಟು ರಾಜ್ಯ, ರಾಷ್ಟ್ರ, ಅಂತ ರಾಷ್ಟ್ರಮಟ್ಟದಲ್ಲಿ ಅಸಂಖ್ಯಾತ ಕ್ರೀಡಾಪಟುಗಳು ಸಾಧನೆ ಮಾಡಿದ್ದಾರೆ. ರಾಜ್ಯ, ರಾಷ್ಟ್ರ, ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಷ್ಯ ವರ್ಗವನ್ನು ನಾವು ಕಾಣಬಹುದು. ದಿ.ಫಿಲೋಮಿನ್ ರಾಜ್ ರವರ ಅಭಿಮಾನಿ ಬಳಗ ಶಿವಮೊಗ್ಗ.ಹಾಗೂ ಶಿಷ್ಯ ವೃಂದದವರ ಸಹಯೋಗದಲ್ಲಿ ಮೊದಲನೇ ವರ್ಷದ ಪುಣ್ಯ ಸ್ಮರಣೆಯ ಅಂಗವಾಗಿ ಶಿವಮೊಗ್ಗ ಜಿಲ್ಲಾ ಮಟ್ಟದ “ದೈಹಿಕ ಶಿಕ್ಷಣ ಶಿಕ್ಷಕರ ವಾಲಿಬಾಲ್ ಪಂದ್ಯಾವಳಿ 2024 — 25” ಪುರುಷರ ಹೊನಲು ಬೆಳಕಿನ ವಾಲಿಬಾಲ್ ಕ್ರೀಡಾಕೂಟವನ್ನು ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದು, ಈ ಕ್ರೀಡಾ ಕೂಟವನ್ನು ಒಂದು ದಿನದ ಮಟ್ಟಿಗೆ ದಿನಾಂಕ : 26/11/2024 ರಂದು ಶಿವಮೊಗ್ಗ ಜಿಲ್ಲೆಯ ಸರ್ಕಾರಿ,ಅನುದಾನಿತ, ಅನುದಾನ ರಹಿತ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕರಿಗೆ ಅಂದು 03 ಗಂಟೆಗೆ ಪಂದ್ಯಾವಳಿ ಪ್ರಾರಂಭವಾಗುವವು.ಪ್ರಥಮ ಬಾರಿಗೆ, ಜಿಲ್ಲೆಯ ದೈಹಿಕ ಶಿಕ್ಷಣ ಮಿತ್ರರಿಗೆ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಏರ್ಪಡಿಸಿರುವುದು ಇನ್ನೊಂದು ವಿಶೇಷವಾಗಿದೆ.
ವಾಲಿಬಾಲ್ ನಲ್ಲಿ ವಿಜೇತ ಕ್ರೀಡಾಪಟುಗಳಿಗೆ , ಪಾರಿತೋಷಕ ದೊಂದಿಗೆ, ವೈಯಕ್ತಿಕ ಬಹುಮಾನಗಳನ್ನು ನೀಡಲಾಗುತ್ತದೆ.
ಶಿವಮೊಗ್ಗದ ಬಿ.ಹೆಚ್. ರಸ್ತೆಯ ಸೇಕ್ರೆಡ್ ಹಾರ್ಟ್ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ವಿಕಲಚೇತನರಿಗೆ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಸಹ 26.11. 2024 ರಂದು ಬೆಳಿಗ್ಗೆ 9 ಗಂಟೆಗೆ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗಿದೆ.
ಪಂದ್ಯಾವಳಿಯು ದಿನಾಂಕ :26/ 11/ 2024 ರಂದು ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ನಡೆಯಲಿದ್ದು, ಆಟಗಾರರ ಅನುಕೂಲಕ್ಕಾಗಿ ಎರಡು ಅಂಕಣಗಳನ್ನು ಸಿದ್ದಪಡಿಸಲಾಗಿದೆ. ನುರಿತ ವಾಲಿಬಾಲ್ ತೀರ್ಪುಗಾರರು ಆಗಮಿಸಲಿದ್ದಾರೆ. ಜಿಲ್ಲೆಯ ವಿವಿಧ ತಾಲೂಕುಗಳಿಂದ ಬರುವ ಎಲ್ಲಾ ಕ್ರೀಡಾ ಪಟುಗಳಿಗೂ ಸಂಜೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.
ನಿಬಂಧನೆಗಳು :1) ತಂಡಗಳು ಕಡ್ಡಾಯವಾಗಿ ಕ್ರೀಡಾ ಸಮವಸ್ತ್ರ ಧರಿಸಿ ಈ ಪಂದ್ಯಾವಳಿಯಲ್ಲಿ ಭಾಗವಹಿಸಬೇಕು.
2) ಒಂದು ತಂಡದಲ್ಲಿ 7 ಜನ ಕ್ರೀಡಾ ಪಟುಗಳು ದೈಹಿಕ ಶಿಕ್ಷಣ ಶಿಕ್ಷಕರಿಗೆ ಭಾಗವಹಿಸಲು ಅವಕಾಶ ವಿರತ್ತದೆ.
3) ಕಡ್ಡಾಯವಾಗಿ ಶಾಲಾ ಮತ್ತು ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕರಾಗಿರಬೇಕು. ಅಂತವರಿಗೆ ಮಾತ್ರ ಕ್ರೀಡೆಯಲ್ಲಿ ಭಾಗವಹಿಸಲು ಅವಕಾಶ, ಗುರುತಿನ ಚೀಟಿ ತರಬೇಕು.
4) 20.11.2024ರ ಒಳಗಾಗಿ ಹೆಸರು ನೊಂದಾಯಿಸಿಕೊಳ್ಳಲು ಅವಕಾಶವಿದೆ ಎಂದು ಕ್ರೀಡಾ ಕೂಟದ ಸಂಚಾಲಕರಾದ ಮೈಕಲ್ ಕಿರಣ್ ಪತ್ರಿಕಾ ಪ್ರಕಟಣೆಯಲ್ಲಿ
ಕೋರಿದ್ದಾರೆ .
Roller Skating Association ರಾಜ್ಯಮಟ್ಟದ ಸ್ಕೇಟಿಂಗ್ ಪಂದ್ಯಾವಳಿಗೆ ಜಿಲ್ಲೆಯಿಂದ 22 ಮಂದಿ ಆಯ್ಕೆ
Roller Skating Association ಶಿವಮೊಗ್ಗ ನಗರದ ಪ್ರತಿಷ್ಠಿತ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿ ಯೇಷನ್ ನಿಂದ ವಿನೋಬನಗರ ಎಪಿಎಂಸಿ ಸಂಕೀರ್ಣದ ಆವರಣದಲಿ ಎರಡು ದಿನಗಳ ಕಾಲ 19ನೇ ರಾಜ್ಯ ಮಟ್ಟದ ಮಕ್ಕಳ ಸ್ಕೇಟಿಂಗ್ ಆಯ್ಕೆ ಹಾಗೂ ಚಾಂಪಿಯನ್ಸ್ಶಿಪ್ ಪ್ರಕ್ರಿಯೆ ನಡೆಸಲಾಯಿತು. ಪ್ರಕ್ರಿಯೆಯಲ್ಲಿ ಸುಮಾರು 32 ಸ್ಕೇಟಿಂಗ್ ವಿದ್ಯಾರ್ಥಿಗಳು ಭಾಗವಹಿ ಸಿದ್ದರು. ಅದರಲ್ಲಿ ಸಂಸ್ಥೆಯ 22 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ ಯಾಗಿದ್ದು, ಸಂಸ್ಥೆ ಹಾಗೂ ಪೋಷಕರು ಅಭಿನಂದಿಸಿದ್ದಾರೆ.
Actress Shilpa Shetty ಭುವನೇಶ್ವರದ ಲಿಂಗರಾಜ ದೇಗುಲದಲ್ಲಿ ಮೊಬೈಲ್ ಒಯ್ಯದಂತೆ ಸೆಲೆಬ್ರಿಟಿಗಳಿಗೂ ನಿಷೇಧ ಹೇರಿದ ಆಡಳಿತ ಮಂಡಳಿ
Actress Shilpa Shetty ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಫೋಟೋ ವೈರಲ್ ಆದ ನಂತರ ವಿವಾದ ಹುಟ್ಟಿಕೊಂಡಿದೆ. ಒಡಿಶಾದ ಭುವನೇಶ್ವರದಲ್ಲಿರುವ ಲಿಂಗರಾಜ್ ದೇವಾಲಯದ ಆಡಳಿತವು ಶಿಲ್ಪಾ ದೇವಾಲಯಕ್ಕೆ ಭೇಟಿ ನೀಡಿದ ಚಿತ್ರಗಳು ಮತ್ತು ವೀಡಿಯೊಗಳು ವೈರಲ್ ಆದ ನಂತರ ಸೇವಾದಾರ ಮತ್ತು ಅಧಿಕಾರಿಗೆ ಶೋಕಾಸ್ ನೋಟಿಸ್ ನೀಡಿದೆ.
ವಾಸ್ತವವಾಗಿ, ದೇವಾಲಯದ ಒಳಗೆ ಛಾಯಾಚಿತ್ರ ತೆಗೆಯಲು ನಿರ್ಬಂಧಗಳಿವೆ ಆದರೆ ನಟಿ ದೇವಸ್ಥಾನಕ್ಕೆ ಹೋಗಿದ್ದಾಗ ಫೋಟೋಗಳನ್ನು ತೆಗೆದುಕೊಳ್ಳಲಾಗಿತ್ತು.
ಈ ಚಿತ್ರಗಳು ಹೊರಬಿದ್ದ ನಂತರ ಭಕ್ತರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬಳಿಕ ದೇವಾಲಯದ ಆಡಳಿತ ಮಂಡಳಿ ಈ ಕ್ರಮ ಕೈಗೊಂಡಿದೆ. ದೇವಸ್ಥಾನದ ಆವರಣದಲ್ಲಿ ಛಾಯಾಚಿತ್ರ ಮತ್ತು ವಿಡಿಯೋಗಳಿಗೆ ಅವಕಾಶ ಇಲ್ಲದಿರುವಾಗ ನಟಿ ಶಿಲ್ಪಾ ಶೆಟ್ಟಿ ಅವರಿಗೆ ಛಾಯಾಚಿತ್ರ ತೆಗೆಯಲು ಮತ್ತು ವಿಡಿಯೋ ಮಾಡಲು ಅವಕಾಶ ನೀಡಿದ್ದು ಹೇಗೆ ಎಂದು ಆಡಳಿತ ಮಂಡಳಿ ಪ್ರಶ್ನಿಸಿದೆ.
ಕಳೆದ ಸೋಮವಾರ ಶಿಲ್ಪಾ ಶೆಟ್ಟಿ ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು ಎಂದು ಹೇಳಲಾಗುತ್ತಿದೆ. ಈ ವೇಳೆ ಸಂಜೆ ಲಿಂಗರಾಜ ದೇಗುಲ ದರ್ಶನಕ್ಕೆ ತೆರಳಿದ್ದರು. ಅವರ ಚಿತ್ರಗಳು ಎಲ್ಲಿಂದ ಬಹಿರಂಗಗೊಂಡವು, ನಂತರ ಕೋಲಾಹಲ ಉಂಟಾಯಿತು.
ಈ ಬಗ್ಗೆ ಮಾಹಿತಿ ನೀಡಿದ ಭುವನೇಶ್ವರದ ಹೆಚ್ಚುವರಿ ಜಿಲ್ಲಾಧಿಕಾರಿ (ಎಡಿಎಂ) ಮತ್ತು ದೇವಾಲಯದ ಆಡಳಿತದ ಉಸ್ತುವಾರಿ ರುದ್ರ ನಾರಾಯಣ ಮೊಹಂತಿ, ‘ಶಿಲ್ಪಾ ಶೆಟ್ಟಿ ಅವರ ಚಿತ್ರಗಳು ವೈರಲ್ ಆಗಿರುವುದು ನಮ್ಮ ಗಮನಕ್ಕೆ ಬಂದಿದೆ.
Actress Shilpa Shetty ಈ ಸಂಬಂಧ ಸೇವಾಧಿಕಾರಿ ಹಾಗೂ ಮೇಲ್ವಿಚಾರಕರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಏಳು ದಿನಗಳೊಳಗೆ ವಿವರಣೆ ನೀಡುವಂತೆ ಸೂಚಿಸಿದ್ದೇವೆ. ನಟಿಯೊಂದಿಗಿನ ಛಾಯಾಚಿತ್ರಗಳಲ್ಲಿ ಸೇವಾಕರ್ತ ಮತ್ತು ಮೇಲ್ವಿಚಾರಕ ಇಬ್ಬರೂ ಕಾಣಿಸಿಕೊಂಡಿದ್ದಾರೆ ಎಂದು ಮೊಹಾಂತಿ ಹೇಳಿದರು.
ಈ ಬಗ್ಗೆ ಸ್ಥಳೀಯ ಶಾಸಕ ಬಾಬು ಸಿಂಗ್ ಅವರು ಕಳವಳ ವ್ಯಕ್ತಪಡಿಸಿದ್ದು, ದೇವಸ್ಥಾನದಲ್ಲಿ ಛಾಯಾಚಿತ್ರ ತೆಗೆಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಆದ್ದರಿಂದ ನಿಷೇಧದ ಹೊರತಾಗಿಯೂ ದೇವಾಲಯದ ಆವರಣದೊಳಗೆ ಕ್ಯಾಮೆರಾ ಅಥವಾ ಮೊಬೈಲ್ ಫೋನ್‌ಗಳನ್ನು ಹೇಗೆ ಅನುಮತಿಸಲಾಗಿದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ದೇವಸ್ಥಾನಕ್ಕೆ ಪ್ರಧಾನಿ, ರಾಷ್ಟ್ರಪತಿಗಳು ಬಂದರೂ ಒಳಗೆ ಕ್ಯಾಮೆರಾಕ್ಕೆ ಅವಕಾಶವಿಲ್ಲ ಎಂದರು. ದೇವಸ್ಥಾನಕ್ಕೆ ಭೇಟಿ ನೀಡುವ ಸೆಲೆಬ್ರಿಟಿಗಳು ಕೂಡ ಆವರಣದೊಳಗೆ ಮೊಬೈಲ್ ಫೋನ್ ಕೊಂಡೊಯ್ಯದಂತೆ ಸೂಚನೆ ನೀಡಲಾಗಿದೆ.
ಆದರೆ ಇನ್ನೂ ಈ ತಪ್ಪುಗಳನ್ನು ಮಾಡಲಾಗುತ್ತಿದೆ. ಇಂತಹ ಘಟನೆಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಹೇಳಿದರು.
Yoga Federation of India ರಾಷ್ಡ್ರೀಯ ಸಬ್ ಜ್ಯೂ. ಯೋಗಾಸನ ಸ್ಪರ್ಧೆಯಲ್ಲಿ ಎಸ್. ನಮನಾಗೆ ಚಿನ್ನ & ಬೆಳ್ಳಿ ಪದಕ
Yoga Federation of India ಯೋಗ ಫೆಡರೇಷನ್ ಆಫ್ ಇಂಡಿಯಾ ಹಿಮಾಚಲ ಪ್ರದೇಶದ ಉನಾದಲ್ಲಿ ಏರ್ಪಡಿಸಿದ್ದ 49 ನೇ ರಾಷ್ಟ್ರೀಯ ಜ್ಯೂನಿಯರ್ ಮತ್ತು ಸಬ್ ಜ್ಯೂನಿಯರ್ ಯೋಗಾಸನ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದ ಯೋಗಪಟು ನಮನಾ ಎಸ್. ಒಂದು ಚಿನ್ನ ಮತ್ತು ಒಂದು ರಜತ ಪದಕ ಗೆದ್ದು ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.
Yoga Federation of India ರಾಜ್ಯಕ್ಕೆ ಲಭಿಸಿದ ಏಕೈಕ ಸ್ವರ್ಣ ಪದಕ ಗೆದ್ದಿರುವ ನಮನಾ ಸಮೀಪದ ಬಳಸಗೋಡಿನ ಸಂತೋಷ್ ಮತ್ತು ಸುಮಾ ದಂಪತಿ ಪುತ್ರಿ. ಸಾಗರದ ಸೆಂಟ್ ಜೋಸೆಫ್ ಬೆಥನಿ ಶಾಲೆಯಲ್ಲಿ ಓದುತ್ತಿದ್ದಾಳೆ. ಕಾನುಗೋಡಿನ ಗುರುಕುಲಮ್ ಯೋಗ ಕೇಂದ್ರದ ಯೋಗಗುರು ಶ್ರೀಧರಮೂರ್ತಿ ಮತ್ತು ಸಂಧ್ಯಾ ಬಳಿ ನಮನಾ ಯೋಗ ಕಲಿಯುತ್ತಿದ್ದಾಳೆ.
ರಾಜ್ಯ ತಂಡವನ್ನು ದೊಡ್ಡಬಳ್ಳಾಪುರ ಯೋಗಗುರು ನಟರಾಜ ಮತ್ತು ಕೆಎಸ್‌ಎವೈಎಸ್‌ಎ ಅಧ್ಯಕ್ಷರಾದ ಜಿ.ಎನ್.ಕೃಷ್ಣಮೂರ್ತಿ ಹಾಗೂ ಕಾರ್ಯದರ್ಶಿ ಕೆ.ಪ್ರಭು ಮುನ್ನಡೆಸಿದ್ದರು.
ಇದೇ ಸ್ಪರ್ಧೆಯಲ್ಲಿ ಗರ್ತಿಕೆರೆಯ ಕಾವ್ಯ 6ನೇ ಸ್ಥಾನ ಗಳಿಸಿದ್ದಾಳೆ.
Shivamogga Police ಕಾರ್ಗಲ್ ಸಮೀಪ ದೆವ್ವ ಕಂಡ ಘಟನೆ. ಶುದ್ಧ ಸುಳ್ಳು ಸುದ್ದಿ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವವರಿಗೂ ಎಚ್ಚರಿಕೆ ನೀಡಿದ ಪೊಲೀಸ್ ಇಲಾಖೆ
Shivamogga Police ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾರ್ಗಲ್ ಸಮೀಪ ಇತ್ತೀಚೆಗೆ ದೆವ್ವವೊಂದು ಬೈಕ್ ಸವಾರರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ ಎಂಬ ಕಿಡಿಗೇಡಿಗಳು ಸೃಷ್ಟಿಸಿದ ಸುಳ್ಳು ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈ ನಡುವೆ ಸದರಿ ಸುದ್ದಿಯ ಕುರಿತಂತೆ ಅ. 29 ರಂದು ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಿದೆ. ‘ಇದು ಸಂಪೂರ್ಣ ಸುಳ್ಳು ಸುದ್ದಿಯಾಗಿದೆ. ಸಾರ್ವಜನಿಕರು ಭಯಪಡುವ ಅವಶ್ಯಕತೆಯಿರುವುದಿಲ್ಲ. ಈ ರೀತಿಯ ಯಾವುದೇ ಪ್ರಕರಣಗಳು ಬೆಳಕಿಗೆ ಬಂದಿರುವುದಿಲ್ಲ’ ಎಂದು ತಿಳಿಸಿದೆ.
ಕಾರ್ಗಲ್ ಸಮೀಪ ಕಂಚಿಕೈ ರಸ್ತೆಯಲ್ಲಿ ಎರಡು ಜನ ಬೈಕ್ ಸವಾರರಿಗೆ ದೆವ್ವ ಎದುರಾಗಿದೆ. ಓರ್ವರು ಮಣಿಪಾಲ್ ಆಸ್ಪತ್ರೆಯಲ್ಲಿ ಹಾಗೂ ಮತ್ತೋರ್ವರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆಂದು ಪೋಟೋ, ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು ಇದು ಸಂಪೂರ್ಣ ಸುಳ್ಳು ಸುದ್ದಿಯಾಗಿರುತ್ತದೆ.
Shivamogga Police ಸಾರ್ವಜನಿಕರು ಭಯಪಡುವ ಅವಶ್ಯಕತೆಯಿರುವುದಿಲ್ಲ. ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದು, ಫಾರ್ವರ್ಡ್, ಶೇರ್ ಮಾಡುವುದು ಕಾನೂನು ರೀತ್ಯ ಅಪರಾಧವಾಗಿರುತ್ತದೆ. ಇಂತಹವರ ವಿರುದ್ದ ಕಾನೂನು ರೀತ್ಯ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.
