Thursday, March 26, 2026
Thursday, March 26, 2026
Home Blog Page 515

Kannada Rajyotsava ರಾಜ್ಯೋತ್ಸವ ಪುರಸ್ಕೃತರ ಪಟ್ಟಿಯಲ್ಲಿ ಸಾಗರ ಸಿರಿವಂತೆ “ಹಸೆ ಕಲಾವಿದ” ಚಂದ್ರಶೇಖರ್.

0

Kannada Rajyotsava 2024 ಸಾಲಿನ ಕನ್ನಡ ರಾಜ್ಯೋತ್ಸವದ
ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ ಕರಕುಶಲ ವಿಭಾಗದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿನ ಸಾಗರ
ತಾಲೂಕಿನ” ಸಿರಿವಂತೆ ಚಂದ್ರಶೇಖರ್‌
ರವರ ಹೆಸರನ್ನು ಘೋಷಿಸಲಾಗಿದೆ.

Kannada Rajyotsava ಸಿರಿವಂತೆ ಚಂದ್ರಶೇಖರ್‌ ರವರು ಹಸೆ ಚಿತ್ತಾರ ಬಿಡಿಸುವ ಕಾರ್ಯದಲ್ಲಿ ತಮ್ಮ ವೃತ್ತಿಯ ಸಾಧನೆಯಲ್ಲಿ ಪ್ರಶಂಸನಿಯಮಹತ್ವದ ಕೆಲಸ ಮಾಡಿದ್ದಾರೆ . ಕಳೆದ
ಎರಡೂವರೆ ದಶಕದಿಂದ ಹಸೆ ಚಿತ್ತಾರಗಳನ್ನು ರಚಿಸಿ ಜನಪ್ರಿಯಗೊಳಿಸಿದ್ದಾರೆ
ಇದರಿಂದಾಗಿ ರಾಜ್ಯದಲ್ಲಿ ಹಸೆಚಿತ್ತಾರ ಕಲೆಗೆ ಮತ್ತಷ್ಟು ಗೌರವ ಹೆಚ್ಚಾಗಿದೆ.
ಸಾಗರ ತಾಲೂಕಿನ ಸಿರಿವಂತೆ ಗ್ರಾಮ ದಲ್ಲಿರುವ ಚಂದ್ರಶೇಖರ್‌ ಅವರ ಮನೆ “ಹಸೆ ಚಿತ್ತಾರಗಳ ಕಲಾ ಕೇಂದ್ರ”ಎಂದು ಬಣ್ಣಿಸಲಾಗಿದೆ. ಭೂಮಿ ಹುಣ್ಣಿಮೆಗಾಗಿ
ಬೂಮಣ್ಣಿ ಬುಟ್ಟಿಗಳನ್ನುತಯಾರಿಸುವ
ಸಿರಿವಂತೆ ಚಂದ್ರಶೇಖರ್‌ ಅವರ ಕಲಾಕೃತಿಗೆ ಕೃಷಿಕರಲ್ಲಿ ಮಹತ್ವ ಪಡೆದಿದೆ.
ರಾಜ್ಯಸರ್ಕಾರ ಕರಕುಶಲ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿದೆ.

Naraka Chaturthi ನರಕ ಚತುರ್ಥಿಯ ಹಿನ್ನೆಲೆ ಲೇ: ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ

0

Naraka Chaturthi ಇಂದು ನರಕಚತುರ್ದಶಿ ಹಬ್ಬ. ಭಾಗವತದಲ್ಲಿ ಹೇಳಿರುವಂತೆ ,ಹಿಂದೆ ಪ್ರಾಗ್ ಜ್ಯೋತಿಷಪುರ ಎಂಬಲ್ಲಿ
ಭೌಮಾಸುರ ಅಥವಾ ನರಕಾಸುರನೆಂಬ ಒಬ್ಬ ಬಲಾಢ್ಯ ರಾಕ್ಷಸನು ರಾಜ್ಯವನ್ನಾಳುತ್ತಿದ್ದನು.ಅವನು
ದೇವತೆಗಳಿಗೆ ಮತ್ತು ಮಾನವರಿಗೆ ತೊಂದರೆ ಕೊಡು
ತ್ತಿದ್ದ.ರಾಕ್ಷಸನಾದ ನರಕಾಸುರನು ಭೂಮಿತಾಯಿಯ ಮಗ .ಇವನಆಳ್ವಿಕೆಯಲ್ಲಿ ಸಾಕಷ್ಟು ದೌರ್ಜನ್ಯಯಗಳನ್ನು ಎಸಗಿದ್ದ.ಜನರಿಗೆ ಮೋಸಮಾಡಿದ್ದ ಭೂಮಿಯ ಮೇಲೆ ತನ್ನದೇ ಆಡಳಿತ ಮಾಡುತ್ತಾ ದುರಹಂಕಾರಕ್ಕೆ
ಒಳಗಾಗಿದ್ದ ನಂತರ ತಾನು ಸ್ವರ್ಗವನ್ನು ಆಳಬೇಕು
ಎಂದು ಬಯಸಿದ .ಈ ಬಯಕೆಯ ಪ್ರಯುಕ್ತ ಯುದ್ಧ
ಕ್ಕಾಗಿ ಇಂದ್ರದೇವನನ್ನು ಯುದ್ಧಕ್ಕಾಗಿ ಆಹ್ವಾನಿಸಿದನು.ಈ ದುಷ್ಟ ದೈತ್ಯನು ಸ್ತ್ರೀಯರನ್ನು ಕಾಡಿಪೀಡಿಸತೊಡಗಿದನು.
ಅವನು ತಾನು ಜಯಿಸಿ ತಂದಿದ್ದ 16100 ವಿವಾಹ
ಯೋಗ್ಯ ರಾಜ ಕನ್ಯೆಯರನ್ನು ಸೆರೆವಾಸದಲ್ಲಿಟ್ಟು ಅವರರೊಂದಿಗೆ ವಿವಾಹವಾಗುವ ಹುನ್ನಾರ ನಡೆಸಿದ್ದ.ಈ ವಿಷಯವು ಶ್ರೀಕೃಷ್ಣ ಪರಮಾತ್ಮನಿಗೆ ತಿಳಿಯುತ್ತಲೇ ಅವನು ಸತ್ಯಭಾಮೆಯೊಂದಿಗೆ ಬಂದು ನರಕಾಸುರನನ್ನು ಸಂಹಾರ ಮಾಡಿ ಸೆರೆಯಲ್ಲಿದ್ದ ರಾಜ ಕನ್ಯೆಯರನ್ನು ಸೆರೆಯಿಂದ ಮುಕ್ತಗೊಳಿಸಿದನು.
Naraka Chaturthi ಕೃಷ್ಣನು ಆಶ್ವಯುಜ ಮಾಸದ ಕೃಷ್ಣ ಪಕ್ಷದ ಚತುರ್ದಶಿ
ಯಂದು ನರಕಾಸುರನನ್ನು ಸಂಹರಿಸಿದ. 16000 ರಾಜಪುತ್ರಿಯರನ್ನು ಬಂಧನದಿಂದ ಬಿಡಿಸಿ ಬೆಳಗಿನ ಝಾವ ಮನೆಗೆ ಬಂದುಅಭ್ಯಂಜ ನಸ್ನಾನ ಮಾಡಿದ. ಅಂದಿನಿಂದ ಕೃಷ್ಣಪಕ್ಷದ ಚತುರ್ದಶಿಯನ್ನು ನರಕ ಚತುರ್ದಶಿ ಎಂದು ಆಚರಿಸಲಾಗುತ್ತಿದೆ. ರಾಜಪುತ್ರಿಯರು ಕೃಷ್ಣನ ಕಡೆಗೆ ಬಂದು ಕೃತಜ್ಞತೆ ಸಲ್ಲಿಸಿ ಸಂಭ್ರಮದಿಂದ ಶ್ರೀಕೃಷ್ಣ ಪರ ಮಾತ್ಮನಿಗೆ ಆರತಿ ಬೆಳಗಿ ಪೂಜಿಸಿದರು.ತಾಯಿ
ಭೂದೇವಿ ಮಗ ನರಕಾಸುರನನ್ನು ಕಳೆದುಕೊಂಡು ದು:ಖಿಸಿದಳು. ಈ ದಿನವನ್ನು ನನ್ನ ಮಗನ ಹೆಸರಿನಿಂದಲೇ ಆಚರಿಸಲ್ಡಲಿ. ಈ ದಿನ ಎಲ್ಲರೂ ನಿನ್ನಂತೆಯೇ ಅಭ್ಯಂಜನ ಸ್ನಾನ ಮಾಡಲಿ ಎಂದು ಶ್ರೀಕೃಷ್ಣನಲ್ಲಿ ಪ್ರಾರ್ಥಿಸಿದಳು..
ಶ್ರೀಕೃಷ್ಣ ಪರಮಾತ್ಮ ಭೂದೇವಿಯ ಬೇಡಿಕೆಗೆ ತಥಾಸ್ತು
ಎಂದ .ನರಕ ಎಂದರೆ ಅಜ್ಞಾನ.ಚತುರ್ದಶಿ ಎಂದರೆ ಬೆಳಕು. ಅಜ್ಞಾನಕಳೆದುಸುಜ್ಞಾನದಬೆಳಕುದೊರೆಯ
ಲೆಂದೇ ನರಕ ಚತುರ್ದಶಿಯ ಆಚರಣೆಮಾಡಲಾಗುತ್ತಿದೆ.
ಹೀಗೆ ಆಶ್ವಯುಜ ಮಾಸದ ಕೃಷ್ಣ ಪಕ್ಷದ ಚತುರ್ದಶಿಯನ್ನು ನರಕ ಚತುರ್ದಶಿ ಯ ದಿನವನ್ನಾಗಿ ಆಚರಿಸಲಾಗುತ್ತಿದೆ.


ನಮ್ಮೊಳಗಿರುವ ನರಕಾಸುರನೆಂಬೊ ಅಜ್ಞಾನವನ್ನು
ಸುಜ್ಞಾನವೆಂಬ ಜ್ಞಾನದ ಸೂರ್ಯನ ಕಿರಣಗಳಿಂದ
ಓಡಿಸೋಣ.

Klive Special Article ಉಕ್ಕಿನ ಮನುಷ್ಯ. ಸರ್ದಾರ್ ವಲ್ಲಭ ಭಾಯಿ ಪಟೇಲ್.. ನೆನಪು

0

ಲೇ: ಮನೋಜ್.
ಪ್ರಶಿಕ್ಷಣಾರ್ಥಿ
ವಾರ್ತಾ ಇಲಾಖೆ.

Klive Special Article ಭಾರತದ ಸ್ವಾತಂತ್ರ್ಯ ಹೋರಾಟಗಾರ, ಉಕ್ಕಿನ ಮನುಷ್ಯರೆಂದೇ ಪ್ರಸಿದ್ದರಾದ, ದೇಶೀಯ ಸಂಸ್ಥಾನಗಳನ್ನು ಒಟ್ಟುಗೂಡಿಸುವಲ್ಲಿ ಮುಂಚೂಣಿಯಲ್ಲಿದ್ದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮದಿನದ ನೆನಪಿಗಾಗಿ ದೇಶಾದ್ಯಂತ ಅಕ್ಟೋಬರ್ 31 ರಂದು ರಾಷ್ಟ್ರೀಯ ಏಕತಾ ದಿನಾಚರಣೆ ಆಚರಿಸಲಾಗುತ್ತದೆ.
ರಾಷ್ಟ್ರೀಯ ಏಕತಾ ದಿನದ ಆಚರಣೆಯು ರಾಷ್ಟ್ರದ ಏಕತೆ, ಸಮಗ್ರತೆ ಮತ್ತು ನೆರೆಹೊರೆಯನ್ನು ಎತ್ತಿಹಿಡಿಯುವ ಮೂಲಕ ರಾಷ್ಟ್ರದ ಶಕ್ತಿ ಮತ್ತು ಸ್ಥಿತಿಸ್ಥಾಪಕತ್ವವನ್ನು ಚಿತ್ರಿಸುತ್ತದೆ.
ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಿಂದ ಸ್ವಾತಂತ್ರ‍್ಯ ಪಡೆದ ನಂತರ ವಿವಿಧ ಪ್ರಾಂತ್ಯಗಳನ್ನು ಭಾರತ ಒಕ್ಕೂಟಕ್ಕೆ ಸೇರಿಸಲು ಪಟೇಲ್ ಅವರು ಎಲ್ಲಾ 565 ಸ್ವ-ಆಡಳಿತದ ರಾಜಪ್ರಭುತ್ವದ ರಾಜ್ಯಗಳನ್ನು ಯಶಸ್ವಿಯಾಗಿ ಮನವೊಲಿಸಿ ರಾಷ್ಟ್ರ ನಿರ್ಮಾಣ ಮಾಡಿದರು.
ಭಾರತವು ಆಂಗ್ಲರಿಂದ ಸ್ವಾತಂತ್ರ್ಯವನ್ನು ಪಡೆದುಕೂಳ್ಳುವುದಕ್ಕೆ ಎಷ್ಟು ಅಡಚಣೆಗಳು ಎದುರಾದವೋ, ಅದೇ ರೀತಿ ಸ್ವತಂತ್ರ ಭಾರತವನ್ನು ಎಲ್ಲಾ ದೇಶಿಯಾ ಸಂಸ್ಥಾನಗಳನ್ನು ಒಟ್ಟುಗೂಡಿಸಿ ಬಲಿಷ್ಠ ಭಾರತವನ್ನು ನಿರ್ಮಾಣ ಮಾಡಿದವರಲ್ಲಿ ಪ್ರಮುಖರು ಸರ್ದಾರ್ ವಲ್ಲಭಭಾಯ್ ಪಟೇ¯ರು. 1947 ರಿಂದ 1950 ರವರೆಗೆ ಭಾರತದ ಪ್ರಧಾನ ಮಂತ್ರಿ ಮತ್ತು ಗೃಹ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. ಇವರನ್ನು ಹಿಂದಿ , ಉರ್ದು , ಬೆಂಗಾಲಿ ಮತ್ತು ಪರ್ಷಿಯನ್ ಭಾಷೆಗಳಲ್ಲಿ “ಮುಖ್ಯಸ್ಥ” ಎಂಬ ಅರ್ಥವನ್ನು ಹೊಂದಿರುವ ಸರ್ದಾರ್ ಎಂದು ಕರೆಯಲಾಗುತ್ತಿತ್ತು. ಪಟೇಲರು ಭಾರತದ ರಾಜಕೀಯ ಏಕೀಕರಣ ಮತ್ತು 1947 ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಗೃಹ ಸಚಿವರಾಗಿ ಕಾರ್ಯನಿರ್ವಹಿಸಿದರು.
ವಲ್ಲಭಭಾಯಿ ಪಟೇಲ್ ಖೇಡಾ ಜಿಲ್ಲೆಯಲ್ಲಿ ಗ್ರಾಮ-ಗ್ರಾಮ ಪ್ರವಾಸವನ್ನು ಪ್ರಾರಂಭಿಸಿದರು, ಅಲ್ಲಿನ ಕುಂದುಕೊರತೆಗಳನ್ನು ದಾಖಲಿಸಿ ಮತ್ತು ತೆರಿಗೆ ಪಾವತಿಸುವುದನ್ನು ನಿರಾಕರಿಸುವ ಮೂಲಕ ರಾಜ್ಯಾದ್ಯಂತ ದಂಗೆಗೆ ಗ್ರಾಮಸ್ಥರನ್ನು ಬೆಂಬಲಿಸುವAತೆ ಕೇಳಿದರು. ಈ ಮೂಲಕ ಗುಜರಾತಿನ ಸತ್ಯಾಗ್ರಹದಲ್ಲಿ ಪ್ರಮುಖರಾಗಿದ್ದರು.
ಸರ್ದಾರ್ ಪಟೇಲ್ ಅವರ ಅಧ್ಯಕ್ಷತೆಯಲ್ಲಿ ಮೂಲಭೂತ ಹಕ್ಕುಗಳು ಮತ್ತು ಆರ್ಥಿಕ ನೀತಿ ನಿರ್ಣಯವನ್ನು ಕಾಂಗ್ರೆಸ್ 1931 ರಲ್ಲಿ ಅಂಗೀಕರಿಸಿತು. ಸುಭಾಷ್ ಚಂದ್ರ ಬೋಸ್ ಅವರೊಂದಿಗೆ ಕಾನೂನು ಹೋರಾಟದಲ್ಲಿ ಪಾಲ್ಗೊಂಡಿದ್ದÀರು. ಆಗಸ್ಟ್ 9 ರಂದು ಪಟೇಲ್ ಅವರನ್ನು ಬಂಧಿಸಲಾಯಿತು ಮತ್ತು 1942 ರಿಂದ 1945 ರವರೆಗೆ ಇಡೀ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯೊಂದಿಗೆ ಅಹಮದ್‌ನಗರದ ಕೋಟೆಯಲ್ಲಿ ಜೈಲಿನಲ್ಲಿರಿಸಲಾಯಿತು. 1945 ರ ಜೂನ್ 15 ರಂದು ಬಂಧಿಖಾನೆಯಿAದ ಬಿಡುಗಡೆಗೊಳಿಸಲಾಯಿತು.
ರಾಜ ತಾಂತ್ರಿಕ ನೀತಿಯಿಂದ 565 ದೇಶೀಯ ಸಂಸ್ಥಾನಗಳನ್ನು ಸೇರಿಸಲು ಸಂಪೂರ್ಣ ರಾಷ್ಟç ನಿರ್ಮಾಣದ ಕೆಲಸದ ಮುಖ್ಯಸ್ಥರಾಗಿದ್ದರು. ಸ್ಥಳೀಯ ಸಂಸ್ಥಾನಗಳಲ್ಲಿ ದೇಶಪ್ರೇಮದಿಂದ ವರ್ತಿಸುವಂತೆ ಆಡಳಿತಗಾರರನ್ನು ಪ್ರೋತ್ಸಾಹಿಸಿದರು. ಪಟೇ¯ರು, ರಾಜರುಗಳು ಭಾರತಕ್ಕೆ ಸದ್ಭಾವನೆಯಿಂದ ಸಮ್ಮತಿಸಬೇಕೆಂದು ಒತ್ತಿಹೇಳಿದರು. ಪಟೇಲರು ರಾಜರುಗಳಿಗೆ 1947 ರ ಆಗಸ್ಟ್ 15 ರೊಳಗೆ ಪ್ರವೇಶ ಪತ್ರಕ್ಕೆ ಸಹಿ ಹಾಕಲು ಗಡುವನ್ನು ನಿಗದಿಪಡಿಸಿದರು. ಮೂರು ಸಂಸ್ಥಾನಗಳು ಹೊರತುಪಡಿಸಿ ಎಲ್ಲಾ ಸಂಸ್ಥಾನಗಳು ಸ್ವಇಚ್ಛೆಯಿಂದ ಭಾರತೀಯ ಒಕ್ಕೂಟದಲ್ಲಿ ವಿಲೀನಗೊಂಡವು. ಜಮ್ಮು ಮತ್ತು ಕಾಶ್ಮೀರ , ಜುನಾಗಢ ಮತ್ತು ಹೈದರಾಬಾದ್ ಮಾತ್ರ ಒಪ್ಪಿಗೆ ನೀಡಿರಲಿಲ್ಲ, ಕಾಲಾಂತರದಲ್ಲಿ ಅವುಗಳು ಭಾರತದ ಒಕ್ಕೂಟಕ್ಕೆ ಸಹಿ ಹಾಕಿದವು.
Klive Special Article ಸರ್ದಾರ್ ವಲ್ಲಭಭಾಯ್ ಪಟೇ¯ರು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಾತ್ರ ಅಲ್ಲದೆ ಸ್ವತಂತ್ರ ಪಡೆದ ನಂತರ ಭಾರತ ದೇಶ ರಚನೆ ಮಾಡುವ ಮೂಲಕ ದೇಶಕ್ಕಾಗಿ ತಮ್ಮ ಜೀವನ ಮುಡಿಪಾಗಿಸಿದರು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಅಪಾರ ಕೊಡುಗೆಗಳನ್ನು ಗೌರವಿಸುವ ಸಲುವಾಗಿ, ಭಾರತ ಸರ್ಕಾರವು ಗುಜರಾತ್‌ನ ನರ್ಮದಾ ನದಿಯ ಬಳಿ ವಿಶ್ವದ ಅತಿ ಎತ್ತರದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಯನ್ನು ಸ್ಥಾಪಿಸಿದೆ. ಇದನ್ನು ” ಏಕತೆಯ ಪ್ರತಿಮೆ ” ಎಂದು ಕರೆಯಲಾಗುತ್ತದೆ ಮತ್ತು ಇದನ್ನು ವಿಶ್ವದ 8 ನೇ ಅದ್ಭುತ ಎಂದೂ ಕರೆಯಲಾಗುತ್ತದೆ. ಭಾರತೀಯ ಶಿಲ್ಪಿ ರಾಮ್ ವಿ ಸುತಾರ್ ಈ ಪ್ರತಿಮೆಯನ್ನು ವಿನ್ಯಾಸಗೊಳಿಸಿದ್ದಾರೆ.
ಏಕತೆಯ ಪ್ರತಿಮೆಯು ವಿಶ್ವದ ಅತಿ ಎತ್ತರದ ಪ್ರತಿಮೆಯಾಗಿದೆ , ಇದು 182 ಮೀಟರ್ (597 ಅಡಿ) ಎತ್ತರವನ್ನು ಹೊಂದಿದೆ, ಈ ಪ್ರತಿಮೆಯು ಭಾರತದ ಗುಜರಾತ್‌ನ ನರ್ಮದಾ ನದಿಯ ಕೆವಾಡಿಯಾ ಕಾಲೋನಿಯಲ್ಲಿದೆ. ವಡೋದರಾ ನಗರದ ಆಗ್ನೇಯಕ್ಕೆ 100 ಕಿಲೋಮೀಟರ್ ಸರ್ದಾರ್ ಸರೋವರ್ ಅಣೆಕಟ್ಟಿಗೆ ಎದುರಾಗಿದೆ .ಇದರ ಒಟ್ಟು ನಿರ್ಮಾಣ ವೆಚ್ಚ ₹ 27 ಬಿಲಿಯನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 2018 ರ ಅಕ್ಟೋಬರ್ 31 ರಂದು ಪಟೇಲ್ ಅವರ ಜನ್ಮದಿನದ 143 ನೇ ವಾರ್ಷಿಕೋತ್ಸವದಂದು ಇದನ್ನು ಉದ್ಘಾಟಿಸಿದರು. ಈ ದಿನವನ್ನು ಆಚರಿಸಲು, ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಗೆ ವ್ಯಕ್ತಿಗಳ ಅಮೂಲ್ಯ ಕೊಡುಗೆಗಳನ್ನು ಗೌರವಿಸಲು ಮತ್ತು ಗುರುತಿಸಲು ಸರ್ಕಾರವು ಸರ್ದಾರ್ ಪಟೇಲ್ ರಾಷ್ಟ್ರೀಯ ಏಕತಾ ಪ್ರಶಸ್ತಿಯನ್ನು ಸಹ ನೀಡುತ್ತಿದೆ.
ಭಾರತೀಯ ರಾಜನೀತಿತಜ್ಞ ಮತ್ತು ಸ್ವಾತಂತ್ರ‍್ಯ ಹೋರಾಟಗಾರ ವಲ್ಲಭಭಾಯಿ ಪಟೇಲ್ ಅವರು 1950 ರ ಡಿಸೆಂಬರ್ 15 ರಂದು ಅವರು ಹೃದಯಾಘಾತ ಮತ್ತು ಅನಾರೋಗ್ಯದಿಂದ ಕೊನೆಯುಸಿರೆಳೆದರು.
ಸ್ವತಂತ್ರ ಭಾರತದ ಮೊದಲ ಉಪ ಪ್ರಧಾನ ಮಂತ್ರಿ ಮತ್ತು ಗೃಹ ಮಂತ್ರಿ ಮತ್ತು ಭಾರತದ ರಾಜಕೀಯ ಏಕೀಕರಣದಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಪಟೇಲ್ ಅವರು ಭಾರತೀಯರಲ್ಲಿ ಏಕತೆಯ ಭಾವನೆ ಬಿತ್ತುವ ಮೂಲಕ ರಾಷ್ಟç ನಿರ್ಮಾಣ ಮಾಡಿದರು. ಅವರ ತತ್ವಗಳು, ಆದರ್ಶಗಳು, ಏಕತೆಯ ಭಾವನೆಯನ್ನು ಭಾರತೀಯರು ಅನುಸರಿಸಬೇಕಾಗಿದೆ. ಇದರ ಮೂಲಕ ವಿಭಿನ್ನ ಭಾಷೆ, ಪ್ರಾಂತ್ಯ, ಸಂಸ್ಕೃತಿ ಹೊಂದಿದ ನಮ್ಮ ದೇಶ ಏಕತೆಯಿಂದ ಅಭಿವೃದ್ದಿ ಹೊಂದಬೇಕು ಎಂಬುದು ಅವರ ಆಶಯವಾಗಿದೆ.

  • ಮನೋಜ್.ಎಂ
    ಅಪ್ರೆಂಟಿಸ್, ವಾರ್ತಾ ಇಲಾಖೆ

CM Siddharamaih ಮುಖ್ಯಮಂತ್ರಿಗಳು & ಅಧಿಕಾರಿಗಳಿಂದ ಚಿನಾವಣಾ ನೀತಿ ಸಂಹಿತೆ ಉಲ್ಲಂಘನೆ.ಕಾನೂನು ಕ್ರಮಕ್ಕೆ ಜೆಡಿಎಸ್ ದೂರು ಸಲ್ಲಿಕೆ

0

CM Siddharamaih ಸಿಎಂ ಸಿದ್ದರಾಮಯ್ಯ ಹಾಗೂ ಅಧಿಕಾರಿಗಳಿಂದ ಉಪಚುನಾ ವಣೆ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಆರೋಪಿಸಿರುವ ಜೆಡಿಎಸ್‌‍ ಅವರ ವಿರುದ್ಧ ಕ್ರಮ ಜರುಗಿಸಬೇಕೆಂದು ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

CM Siddharamaih ಅ.27 ರಂದು ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಣದಲ್ಲಿ ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆ ಬಗ್ಗೆ ಮುಖ್ಯಮಂತ್ರಿಗಳು ಸಭೆ ಮಾಡುವ ಮೂಲಕ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ರಾಜ್ಯ ಕಾನೂನು ವಿಭಾಗದ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ ಕುಮಾರ್‌ ಅವರು ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.

Shivamogga Basavakendra ನವೆಂಬರ್ 5 ರಿಂದ ಡಿಸೆಂಬರ್ 2 ವರೆಗೆ’ ಚಿಂತನ ಕಾರ್ತೀಕ’ ಆಯೋಜನೆ

0

Shivamogga Basavakendra ಕಾರ್ತಿಕ ಮಾಸದ ಪ್ರಯುಕ್ತ ಶಿವಮೊಗ್ಗ ಬಸವಕೇಂದ್ರದಿಂದ `ಚಿಂತನ ಕಾರ್ತಿಕ’ ಆಯೋಜಿಸಲಾಗಿದ್ದು ನವೆಂಬರ್ 05ರಿಂದ ಡಿಸೆಂಬರ್ 02ರವರೆಗೆ ವಿವಿಧೆಡೆ ವಿಶೇಷ ಉಪನ್ಯಾಸಗಳು ನಡೆಯಲಿವೆ.
ಸುದ್ದಿಗೋಷ್ಠಿಯಲ್ಲಿಬೀ ಬಗ್ಗೆ ಮಾಹಿತಿ ನೀಡಿದ ಬಸವಕೇಂದ್ರದ ಅಧ್ಯಕ್ಷ ಜಿ. ಬೆನಕಪ್ಪ, ಶರಣ ಚಳವಳಿಯ ಸಾರವಾಗಿರುವ ವಚನಗಳ ಹಲವು ನುಡಿಗಟ್ಟುಗಳು ಚಿಂತನೆಗೆ ಹಚ್ಚುವ ಗುಣ ಹೊಂದಿವೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಚಿಂತನ ಕಾರ್ತಿಕಕ್ಕೆ ವಚನಗಳ ನುಡಿಗಟ್ಟುಗಳನ್ನು
ಆಯ್ದುಕೊಳ್ಳಲಾಗಿದೆ.

ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ದುಖಃ, ನಾಳೆ ಬಪ್ಪುದು ನಮಗಿಂದೇ ಬರಲಿ, ಲೋಕದ ಡೊಂಕ ನೀವೇಕೆ ತಿದ್ದುವಿರಿ, ಮನದ ಮುಂದಣ ಆಸೆಯೇ ಮಾಯೆ, ಆನು ಒಲಿದಂತೆ ಆಡುವೆ ಎಂಬಿತ್ಯಾದಿ ನುಡಿಗಟ್ಟುಗಳ ಬಗ್ಗೆ ವಿಶೇಷ ಉಪನ್ಯಾಸಗಳು ಪ್ರತೀ ದಿನ ವಿವಿಧೆಡೆ ನಡೆಯಲಿವೆ ಎಂದರು.

ಈ ಎಲ್ಲಾ ಕಾರ್ಯಕ್ರಮಗಳಿಗೆ ಶಿವಮೊಗ್ಗ ಬಸವಕೇಂದ್ರ ಹಾಗೂ ಚಿಕ್ಕಮಗಳೂರು ಬಸವತತ್ವ ಪೀಠದ ಬಸವ ಮರುಳಸಿದ್ದ ಸ್ವಾಮೀಜಿ ಸಾನ್ನಿಧ್ಯವಹಿಸಿ, ಆಶೀರ್ವಚನ ನೀಡಲಿದ್ದಾರೆ. ಉದ್ಘಾಟನಾ ಸಮಾರಂಭ ನವೆಂಬರ್ 5ರಂದು ಬಸವಕೇಂದ್ರದಲ್ಲಿ ನಡೆಯಲಿದ್ದು, ಬೆಂಗಳೂರು ಬಸವ ಸಮಿತಿಯ ಶರಣ ಅರವಿಂದ ಜತ್ತಿ ಉದ್ಘಾಟನೆ ಮಾಡಲಿದ್ದಾರೆ. ಬಸವಕೇಂದ್ರದ ಅಧ್ಯಕ್ಷ ಶರಣ ಜಿ. ಬೆನಕಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

Shivamogga Basavakendra ಶಿವಮೊಗ್ಗ ರಂಗಾಯಣದ ನೂತನ ನಿರ್ದೇಶಕ ಪ್ರಸನ್ನ ಡಿ. ಸಾಗರ, ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಜಿ.ವಿ. ಹರಿಪ್ರಸಾದ್, ಮೊಹರೆ ಹಣಮಂತರಾಯ ಪ್ರಶಸ್ತಿ ಪುರಸ್ಕೃತಹಿರಿಯ ಪತ್ರಕರ್ತ ಎನ್. ಮಂಜುನಾಥ್, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಚಂದ್ರಹಾಸ ಹಿರೇಮಳಲಿ ಅವರನ್ನು ಸಮಾರಂಭದಲ್ಲಿ ಅಭಿನಂದಿಸಲಾಗುವುದು. ವಿದ್ಯುತ್ ಇಲಾಖೆ ವೀರಶೈವ- ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಶರಣ ಎಸ್.ಜಿ. ಶಶಿಧರ್ ಉಪಸ್ಥಿತರಿರುವರೆಂದು ವಿವರಿಸಿದರು.

ಸಮಾರೋಪ
ಚಿಂತನ ಕಾರ್ತಿಕದ ಸಮಾರೋಪ ಸಮಾರಂಭ ಡಿಸೆಂಬರ್ 2ರಂದು ಮಧ್ಯಾಹ್ನ 3 ಗಂಟೆಗೆ ಶಿವಮೊಗ್ಗ ಬಸವಕೇಂದ್ರದಲ್ಲಿ ನಡೆಯಲಿದೆ. ಬಸವಕೇಂದ್ರದ ಶರಣ ಜಿ, ಬೆನಕಪ್ಪ ಅಧ್ಯಕ್ಷತೆ ವಹಿಸಲಿದ್ದು, ಅಖಿಲ ಭಾರತ ವೀರಶೈವಲಿಂಗಾಯತ ಮಹಾಸಭಾದ ಮಾಜಿ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಅತಿಥಿಗಳಾಗಿ ಪಾಲ್ಗೊಳ್ಳುವರು.

ಶ್ರೀರಂಜನಿ ದತ್ತಾತ್ರಿ ನಿತ್ಯ ತೃಪ್ತಂಗೆ ನೈವೇದ್ಯದ ಹಂಗೇಕೆ? ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡುವರು. ಅಕ್ಕನ ಬಳಗದ ಜಯಮ್ಮ ಕುಬ್ಸದ್ ಉಪಸ್ಥಿತರಿರುತ್ತಾರೆ ಎಂದರು.

Ajjampir Qadri ಶಿಗ್ಗಾವಿ ಕ್ಷೇತ್ರ ಉಪಚುನಾವಣೆ. ಬಂಡಾಯ ಕಾಂಗ್ರೆಸ್ ಅಭ್ಯರ್ಥಿ ಅಜ್ಜಂಪೀರ್ ನಾಮಪತ್ರ ವಾಪಸ್

0

Ajjampir Qadri ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಸೈಯದ್ ಅಜ್ಜಂಪೀರ್ ಖಾದ್ರಿ ಅವರು ಇಂದು (ಅ.30) ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ.

ನಿನ್ನೆ (ಅ.29) ರಾತ್ರಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ತೆರಳಿದ್ದ ಅಜ್ಜಂಪೀರ್‌ ಖಾದ್ರಿ, ಸಚಿವ ಝಮೀರ್ ಅಹ್ಮದ್ ಹಾಗೂ ಶಿವಾನಂದ ಪಾಟೀಲ್ ಜೊತೆ ಇಂದು ಬೆಳಿಗ್ಗೆ ಚುನಾವಣಾಧಿಕಾರಿ ಕಚೇರಿಗೆ ತೆರಳಿ, ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿಯೇ ನಾಮಪತ್ರ ವಾಪಸ್‌ ಪಡೆದಿದ್ದಾರೆ.

Ajjampir Qadri ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು “ಪಕ್ಷದ ಮುಂದೆ ನಾನು ಯಾವುದೇ ಬೇಡಿಕೆ ಇಟ್ಟಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಯೋಜನೆಗಳು ಜನಪರವಾಗಿವೆ. ನಾನು ಸಿದ್ದರಾಮಯ್ಯ ಅವರ ಶಿಷ್ಯ. ಅವರ ಮಾರ್ಗದರ್ಶನದಲ್ಲಿ ಮುಂದುವರಿಯುವೆ” ಎಂದಿದ್ದಾರೆ.

Kannada Rajyotsava ನವೆಂಬರ್ 01 ರಂದು ಸರ್ಕಾರಿ ನೌಕರರಿಗೆ ಕನ್ನಡ ರಾಜ್ಯೋತ್ಸವ ಸಾಂಕೇತಿಕ ಗುರುತಿನ ಚೀಟಿ ಧರಿಸಲು ಸರ್ಕಾರದ ಆದೇಶ

0

Kannada Rajyotsava ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ಆಚರಣೆಗೆ ಸಜ್ಜಾಗಿದ್ದು, ಈ ಮಧ್ಯೆ ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಅಭಿಯಾನದಡಿ ಎಲ್ಲಾ ಸರ್ಕಾರಿ ನೌಕರರು ಕೆಂಪು-ಹಳದಿ ಬಣ್ಣದ ಗುರುತಿನ ಚೀಟಿಯ ಕೊರಳುದಾರವನ್ನು ಕಡ್ಡಾಯವಾಗಿ ಧರಿಸಬೇಕು ಎಂದು ರಾಜ್ಯ ಸರ್ಕಾರ ಆದೇಶಿಸಿದೆ.

ಕರ್ನಾಟಕ ರಾಜ್ಯ ಉದಯವಾಗಿ 50 ವರ್ಷ ಹಿನ್ನೆಲೆಯಲ್ಲಿ ಈ ಬಾರಿಯ ಕನ್ನಡ ರಾಜ್ಯೋತ್ಸವನ್ನು ಬಹಳಷ್ಟು ವಿಜೃಂಭಣೆಯಿಂದ ಆಚರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಅಂಗವಾಗಿ ಅಧಿಕಾರಿಗಳು ಕಡ್ಡಾಯವಾಗಿ ಪಾಲಿಸಬೇಕಾದ ನಿಯಮವನ್ನು ಸರ್ಕಾರ ಜಾರಿಗೆ ತಂದಿದೆ. ಸರ್ಕಾರಿ ಅಧಿಕಾರಿಗಳು ಧರಿಸುವ ಗುರುತಿನ ಚೀಟಿ ಟ್ಯಾಗ್ ನಾಡಧ್ವಜ ಬಣ್ಣದಲ್ಲೇ ಇರಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

Kannada Rajyotsava ಸರ್ಕಾರಿ ಅಧಿಕಾರಿಗಳು ಕನ್ನಡ ರಾಜ್ಯೋತ್ಸವದೊಳಗೆ ಕಡ್ಡಾಯವಾಗಿ ಗುರುತಿನ ಚೀಟಿಗೆ ಕೆಂಪು-ಹಳದಿ ಬಣ್ಣದ ಟ್ಯಾಗ್ ಅನ್ನೇ ಧರಿಸಬೇಕು ಎಂದು ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಡಿಪಿಎಆರ್ ಸೂಚನೆ ನೀಡಿದೆ.

Kannada Rajyotsava 69 ಸಾಧಕರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ

0

Kannada Rajyotsava 69 ಮಂದಿ ಸಾಧಕರಿಗೆ 2024 ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.

ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಸುದ್ದಿಗೋಷ್ಠಿ ನಡೆಸಿ ಪ್ರಶಸ್ತಿ ಪ್ರಕಟಿಸಿದ್ದು ಟಿಬಿ ಡ್ಯಾಂ ದುರಸ್ತಿ ಮಾಡಿಸಿದ್ದ ಕನ್ನಯ್ಯ ನಾಯ್ಡು ಅವರಿಗೆ, ನಟಿ ಹೇಮಾ ಚೌಧರಿಗೆ ಅರುಣ್ ಯೋಗಿರಾಜ್ ಗೆ ಸೇರಿ 69 ಮಂದಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಗೆ ಭಾಜನರಾದವರ ಪಟ್ಟಿ ಈ ಕೆಳಕಂಡಂತಿದೆ.

ಜಾನಪದ :

ಇಮಾಮಸಾಬ ಎಮ್ ವಲ್ಲೆಪನವರ
ಅಶ್ವ ರಾಮಣ್ಣ
ಕುಮಾರಯ್ಯ
ವೀರಭದ್ರಯ್ಯ
ನರಸಿಂಹಲು (ಅಂಧ ಕಲಾವಿದ)
ಬಸವರಾಜ ಸಂಗಪ್ಪ ಹಾರಿವಾಳ
ಎಸ್ ಜಿ ಲಕ್ಷ್ಮೀದೇವಮ್ಮ
ಪಿಚ್ಚಳ್ಳಿ ಶ್ರೀನಿವಾಸ
ಲೋಕಯ್ಯ ಶೇರ (ಭೂತಾರಾಧನೆ)

ಚಲನಚಿತ್ರ /ಕಿರುತೆರೆ

ಹೇಮಾ ಚೌದರಿ.ಎಂ. ಎಸ್. ನರಸಿಂಹಮೂರ್ತಿ

Kannada Rajyotsava ಸಂಗೀತ

ಶ್ರೀ ಪಿ ರಾಜಗೋಪಾಲ
ಶ್ರೀ ಎ.ಎನ್ ಸದಾಶಿವಪ್ಪ

ನೃತ್ಯ

ಶ್ರೀಮತಿ ವಿದುಷಿ ಲಲಿತಾ ರಾವ್

ಆಡಳಿತ

ಎಸ್.‌ ವಿ. ರಂಗನಾಥ್‌ ಭಾ.ಆ.ಸೇ (ನಿ)

ವೈದ್ಯಕೀಯ

ಡಾ. ಜಿ.ಬಿ. ಬಿಡಿನಹಾಳ
ಡಾ. ಮೈಸೂರು ಸತ್ಯನಾರಾಯಣ
ಡಾ ಲಕ್ಷ್ಮಣ್ ಹನುಮಪ್ಪ ಬಿದರಿ

ಸಮಾಜಸೇವೆ

ವೀರಸಂಗಯ್ಯ
ಹೀರಾಚಂದ್‍ ವಾಗ್ಮಾರೆ
ಮಲ್ಲಮ್ಮ ಸೂಲಗಿತ್ತಿ
ದಿಲೀಪ್ ಕುಮಾರ್

ಸಂಕೀರ್ಣ

ಹುಲಿಕಲ್ ನಟರಾಜ
ಡಾ|| ಹೆಚ್.ಆರ್.‌ ಸ್ವಾಮಿ
ಆ.ನ ಪ್ರಹ್ಲಾದ ರಾವ್
ಕೆ. ಅಜೀತ್ ಕುಮಾರ್ ರೈ
ಇರ್ಫಾನ್ ರಜಾಕ್ (ವಾಸ್ತುಶಿಲ್ಪ)
ವಿರೂಪಾಕ್ಷ ರಾಮಚಂದ್ರಪ್ಪ ಹಾವನೂರ

ಹೊರದೇಶ–ಹೊರನಾಡು

ಶ್ರೀ ಕನ್ಹಯ್ಯ ನಾಯ್ಡು
ಡಾ. ತುಂಬೆ ಮೊಹಿಯುದ್ದೀನ್‌
ಚಂದ್ರಶೇಖರ ನಾಯಕ್

ಪರಿಸರ

ಆಲ್ಮಿತಾ ಪಟೇಲ್

ಸಾಹಿತ್ಯ

ಬಿ.ಟಿ.ಲಲಿತಾ ನಾಯಕ್
ಅಲ್ಲಮಪ್ರಭು ಬೆಟ್ಟದೂರು
ಡಾ.ಎಮ್.ವೀರಪ್ಪ ಮೊಯ್ಲಿ
ಹನುಮಂತರಾವ್ ದೊಡ್ಡಮನಿ
ಡಾ.ಬಾಳಾಸಾಹೇಬ್ ಲೋಕಾಪುರ
ಬೈರಮಂಗಲರಾಮೇಗೌಡ
ಡಾ. ಪ್ರಶಾಂತ್ ಮಾಡ್ತಾ

Edurite College Shivamogga ವಿದ್ಯಾರ್ಥಿಗಳಿಂದ ಶಿವಮೊಗ್ಗ ಎಪಿಎಂಸಿ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ

0

Edurite College Shivamogga ಶಿವಮೊಗ್ಗ ಎಜುರೈಟ್ ಕಾಲೇಜ್ ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಂದ ’ದಿವಾಲಿ ವಿತ್ ಮೈ ಭಾರತ್” ಯೋಜನೆಯಡಿಯಲ್ಲಿ ಮಂಗಳವಾರ ಇಲ್ಲಿನ ಸಾಗರ ರಸ್ತೆ ಎಪಿಎಂಸಿ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

Edurite College Shivamogga ನೆಹರೂ ಯುವ ಕೇಂದ್ರದ ಸಹಭಾಗಿತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರಾಸೇಯೋ ಸ್ವಯಂಸೇವಕರು ಕೃಷಿ ಮಾರುಕಟ್ಟೆ ಉತ್ಪನ್ನ ಸಮಿತಿಯ ಆವರಣ ಹಾಗೂ ಸಾಗರ ರಸ್ತೆಯ ಇಕ್ಕೆಲದ ಪರಿಸರವನ್ನು ಶುಚಿಗೊಳಿಸುವ ಮೂಲಕ ಕಾರ್ಯಕ್ರಮವನ್ನು ಸಂಪನ್ನಗೊಳಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಪ್ರಸನ್ನಾ ದತ್, ನೆಹರೂ ಯುವ ಕೇಂದ್ರದ ಪದಾಧಿಕಾರಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು.

B.Y. Raghavendra ಸಂಗೀತ, ನಾಟಕ, ಸಾಹಿತ್ಯ ಆಸ್ವಾದನೆಯಿಂದ ಮಾನಸಿಕ ಒತ್ತಡ ನಿರ್ವಹಣೆ ಸಾಧ್ಯ- ಸಂಸದ ರಾಘವೇಂದ್ರ

0

B.Y. Raghavendra ಆಧುನಿಕ ಜಗತ್ತಿನಲ್ಲಿ ಬಹುತೇಕರು ಒತ್ತಡಕ್ಕೆ ಸಿಲುಕಿದ್ದಾರೆ, ಕಲೆ, ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಒತ್ತಡ ದೂರವಾಗುತ್ತದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಪಟ್ಟಣದಲ್ಲಿ ರೋಟರಿ ಕದಂಬ ಆಯೋಜಿಸಿದ್ದ ವಲಯ10ರ ಕುಮದ್ವತಿ ಕಲಾ ಸಂಭ್ರಮ ಕರ‍್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಬಿಡುವು ಎನ್ನುವುದು ಯಾರಿಗೂ ಸಿಗುತ್ತಿಲ್ಲ ಎಲ್ಲರೂ ಒತ್ತಡದಲ್ಲೆ ಜೀವನ ಸಾಗಿಸುತ್ತಿದ್ದಾರೆ ನಗರ ಪ್ರದೇಶದಕ್ಕೆ ಸೀಮಿತವಾಗಿದ್ದ ಅದು ಇದೀಗ ಎಲ್ಲೆಡೆ ಪಸರಿಸಿದೆ. ಜನರು ಈ ಹಿಂದೆ ಒತ್ತಡ ರಹಿತ ಜೀವನ ನಡೆಸುತ್ತಿದ್ದರು ಅವರೆಲ್ಲರೂ ಜನಪದ ಸಂಗೀತ, ನಾಟಕ, ಸಾಹಿತ್ಯ, ಗ್ರಾಮೀಣ ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಒತ್ತಡ ನಿರ್ವಹಣೆ ಮಾಡುವುದಕ್ಕಾಗಿ ಎಲ್ಲರೂ ಸಂಗೀತ ಕೇಳುವುದು, ಸಾಹಿತ್ಯದ ಓದು, ನಾಟಕ, ಚಲನಚಿತ್ರ ವೀಕ್ಷಣೆ ಹೀಗೆ ಹಲವು ಬಗೆಯ ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
B.Y. Raghavendra ರಂಗಭೂಮಿ ಕಿರುತೆರೆ ನಟ ಕೆ.ರವಿ ಮಾತನಾಡಿ, ರಂಗಭೂಮಿ ಚಟುವಟಿಕೆಯಲ್ಲಿ ಯುವಕರು ಹೆಚ್ಚು ತೊಡಗಿಸಿಕೊಳ್ಳುತ್ತಿಲ್ಲ ಅದು ಆಕರ್ಷಣೆ ಕಳೆದುಕೊಂಡಿದ್ದು ಎಲ್ಲರಿಗೂ ಹೊಡಿಬಡಿ ಚಿತ್ರಗಳತ್ತ ಆಕರ್ಷಿತರಾಗಿದ್ದಾರೆ. ಶಾಲಾ ದಿನಗಳಲ್ಲಿ ಸಾಹಿತ್ಯ, ರಂಗಭೂಮಿ ಚಟುವಟಿಕೆಗೆ ಆದ್ಯತೆ ಪ್ರೋತ್ಸಾಹ ನೀಡಬೇಕು. ಪ್ರತಿಭಾ ಕಾರಂಜಿ ಮೂಲಕ ಪ್ರಾಥಮಿಕ ಶಾಲಾ ಹಂತದಲ್ಲೆ ಸರಕಾರ ಅದಕ್ಕೆ ಅವಕಾಶ ಕಲ್ಪಿಸಿದ್ದು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ರೋಟರಿ ವಲಯ10 ಸದಸ್ಯರಿಗೆ ಹಾಡು, ನೃತ್ಯ, ಏಕಪಾತ್ರಾಭಿನಯ, ಸೇರಿದಂತೆ ವಿವಿಧ ಸ್ಪರ್ಧೆ ನಡೆಯಿತು, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ರೋಟರಿ ಕದಂಬ ಅಧ್ಯಕ್ಷ ಎ.ಎಸ್.ಶಿವಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಸಹಾಯಕ ಗೋವರ್ನರ್ ಎಸ್ ಆರ್ ನಾಗರಾಜ್ ಮಾತನಾಡುತ್ತಾ ಸಾಂಸ್ಕೃತಿಕ ಸ್ಪರ್ಧೆಗಳು ರೋಟರಿ ಕುಟುಂಬದವರ ಸಂಬಂಧವನ್ನು ಗಟ್ಟಿ ಮಾಡುವುದರ ಜೊತೆಗೆ ಮಾನಸಿಕ ಹಾಗು ದೈಹಿಕ ಆರೋಗ್ಯವನ್ನು ಸೃಷ್ಟಿ ಮಾಡುತ್ತವೆ ಪರಸ್ಪರರಲ್ಲಿ ಒಡನಾಟ ಪ್ರೀತಿ ಹೆಚ್ಚುತ್ತದೆ ಇಲ್ಲಿ ವಿಜೇತರಾದ ತಂಡದವರು ನವಂಬರ್ 10 ರಂದು ಕುಂದಾಪುರದಲ್ಲಿ ನಡೆಯುವ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ ಇದರಿಂದ ರೋಟರಿ ಸದಸ್ಯರ ಪ್ರತಿಭೆ ಅನಾವರಣಗೊಳ್ಳುತ್ತದೆ ಎಂದು ನುಡಿದರು ಎಂ.ಬಿ.ಶಿವಕುಮಾರ್, ರವೀಂದ್ರನಾಥ ಐತಾಳ್, ಎಂ.ಅರ್.ರಘು, ಹರೀಶ್ ಮೊದಲಿಯಾರ್, ಕೋಟೋಜಿರಾವ್, ಮಧುಕೇಶ್ವರ್,, ವಿರೇಂದ್ರ ವಾಲಿ ಇತರರಿದ್ದರು.