Thursday, March 26, 2026
Thursday, March 26, 2026
Home Blog Page 514

Kannada Rajyotsava ಕನ್ನಡ ಪ್ರತಿಯೊಬ್ಬರ ಮನೆ-ಮನಗಳ ಉಸಿರಾಗಬೇಕು: ಹೇಮಂತ್ ಎನ್

0

Kannada Rajyotsava ನ.o1 ರಂದು ಮಾತ್ರ ಕನ್ನಡ ರಾಜ್ಯೋತ್ಸವ ಆಚರಿಸಿದರೆ ಕನ್ನಡ ಉಳಿದಂತಾಗುವುದಿಲ್ಲ. ಕನ್ನಡ ಪ್ರತಿಯೊಬ್ಬರ ಮನ-ಮನೆಗಳ ಉಸಿರಾಗಬೇಕು ಎಂದು
ಜಿಲ್ಲಾಧಿಕಾರಿ(ಪ್ರಭಾರ)ಗಳಾದ ಹೇಮಂತ್ ಎನ್ ಆಶಿಸಿದರು.
ಜಿಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಡಿಎಆರ್ ಮೈದಾನದಲ್ಲಿ ನ.೦೧ ರಂದು ಏರ್ಪಡಿಸಲಾಗಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ, ಶಿವಮೊಗ್ಗ ಜಿಲ್ಲೆಯ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಸಂದೇಶ ನೀಡಿ ಮಾತನಾಡಿದರು.
ಇಂದು ನವೆಂಬರ್ 01, ಜಾತಿ-ಧರ್ಮದ ಬೇಧ-ಭಾವವಿಲ್ಲದೇ ಕನ್ನಡಿಗರೆಲ್ಲಾ ಒಂದೆಡೆ ಸೇರಿ ಕನ್ನಡ ಭಾಷೆಯ ಮಹತ್ವವನ್ನು ಜಗತ್ತಿಗೆ ಸಾರುವ ಸಂಭ್ರಮದಿಂದ ಹಬ್ಬ ಆಚರಿಸುವ ಕನ್ನಡ ರಾಜ್ಯೋತ್ಸವದ ದಿನವಿದು. ಕನ್ನಡಕ್ಕಾಗಿ ದುಡಿದವರನ್ನು ನೆನೆಯುವ, ಕನ್ನಡಕ್ಕಾಗಿ ಮಿಡಿಯುವ ಹೃದಯಗಳ ವಿಶೇಷ ದಿನ ಇದಾಗಿದೆ.
Kannada Rajyotsava ಈಗಿನ ಕರ್ನಾಟಕವು ಮೊದಲು ಮೈಸೂರು ರಾಜ್ಯವಾಗಿತ್ತು. ಇದು 1956ರ ನವೆಂಬರ್ 1 ರಂದು ನಿರ್ಮಾಣವಾಯಿತು. ಮೈಸೂರು ಸಂಸ್ಥಾನ ಮುಂಬೈ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ ಹಾಗೂ ಮದ್ರಾಸ್ ಕರ್ನಾಟಕ ಎಂದು ನಾಲ್ಕು ಭಾಗಗಳಾಗಿದ್ದು, ಕನ್ನಡನಾಡು ಈ ದಿನ ರಾಜಕೀಯವಾಗಿ ಒಂದಾಯಿತು. ದಕ್ಷಿಣ ಭಾರತದ ಕನ್ನಡ ಭಾಷೆ ಮಾತನಾಡುವ ಎಲ್ಲಾ ಪ್ರದೇಶಗಳನ್ನು ವಿಲೀನಗೊಳಿಸಿ, ಒಂದು ರಾಜ್ಯವಾಗಿ ಘೋಷಣೆ ಮಾಡಿದ ಈ ದಿನವನ್ನು ಕನ್ನಡ ರಾಜ್ಯೋತ್ಸವವಾಗಿ ಆಚರಿಸಲಾಗುತ್ತಿದೆ.
ಈ ಹಿಂದೆ ರಾಜರ ಆಳ್ವಿಕೆಯಲ್ಲಿ ದಕ್ಷಿಣ ಭಾರತದಲ್ಲಿ ಹಲವಾರು ಸಂಸ್ಥಾನಗಳನ್ನು ಒಳಗೊಂಡಂತೆ ರಾಜ್ಯಗಳು ರೂಪುಗೊಂಡಿದ್ದವು. ಕನ್ನಡ ಮಾತನಾಡುವ ಪ್ರಾಂತ್ಯಗಳು ಸೇರಿ ಮೈಸೂರು ರಾಜ್ಯವು ಉದಯವಾಯಿತು. ಮೈಸೂರು ರಾಜ್ಯವು ಬಳಿಕ ಕರ್ನಾಟಕ ಎಂಬ ಹೆಸರು ಪಡೆಯಿತು. ಕುವೆಂಪು, ಶಿವರಾಮಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಬಿ.ಎಂ.ಶ್ರೀಕಂಠಯ್ಯ ಸೇರಿದಂತೆ ಹಲವು ಮಹನೀಯರು ಕರ್ನಾಟಕ ಏಕೀಕರಣಕ್ಕೆ ಕಾರಣರಾದರು. ಅವರೆಲ್ಲರನ್ನು ಸ್ಮರಿಸುವ ಸುದಿನ ಇದಾಗಿದೆ.
ಅನ್ಯಭಾಷೆಗಳನ್ನು ಕಲಿಯುವುದು ತಪ್ಪಲ್ಲ. ಆದರೆ, ಬೇರೆ ಭಾಷೆ ಕಲಿತು ಕನ್ನಡ ಮರೆಯಬಾರದು. ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು, ಕನ್ನಡವೇ ಸತ್ಯ ಎಂಬ ಕುವೆಂಪು ಅವರ ಸಾಲುಗಳನ್ನು ಯಾವಾಗಲೂ ನೆನಪಿಸಿಕೊಳ್ಳಲೇಬೇಕು. ಈ ಸಂದರ್ಭದಲ್ಲಿ ಇಲ್ಲಿನ ನಾಡು-ನುಡಿ, ನೆಲ-ಜಲ ಭಾಷೆ, ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ಸಂಪತ್ತನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ನಾಡಿನ ಸಮಸ್ತ ಪ್ರಜೆಗಳ ಪಾತ್ರವೂ ಪ್ರಮುಖವಾದುದ್ದಾಗಿದೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಭಾರತದಲ್ಲೇ ಪ್ರಮುಖಸ್ಥಾನವಿದೆ. ಕರ್ನಾಟಕದ ಹೆಸರು ವ್ಯಾಸ ಭಾರತದಲ್ಲೇ ಉಲ್ಲೇಖವಾಗಿದೆ. ಕನ್ನಡ ಭಾಷೆಗೆ 2000ವರ್ಷಗಳಿಗೂ ಮಿಗಿಲಾದ ಇತಿಹಾಸವಿದೆ. ಕಾವೇರಿಯಿಂದ ಗೋದಾವರಿವರೆಗೆ ಈ ನಾಡಿನ ಖ್ಯಾತಿ ವ್ಯಾಪಿಸಿತ್ತು ಎಂಬುದನ್ನು ಇತಿಹಾಸ ಹೇಳುತ್ತದೆ. ಅಲ್ಲದೇ ಕನ್ನಡ ಭಾಷೆಯಲ್ಲಿ ದೊರಕುವ ಸಾಹಿತ್ಯ ಕೃತಿಗಳು, ಐತಿಹಾಸಿಕ ದಾಖಲೆಗಳು ನಾಡಿನ ಶ್ರೀಮಂತ ಸಂಸ್ಕೃತಿಗೆ ಸಾಕ್ಷಿಯಾಗಿವೆ. ಪಂಪ. ರನ್ನ ಜನ್ನರ ಕಾವ್ಯದ ಸೊಗಸು ಕಾಲವನ್ನು ಮೆಟ್ಟಿ ತಮ್ಮ ಚಿರಂತನತೆಯನ್ನು ಮರೆಯುತ್ತಿದೆ. ಬೇಲೂರು, ಹಳೇಬೀಡು, ಬಾದಾಮಿ ಐಹೊಳೆ ಪಟ್ಟದಕಲ್ಲು ಮುಂತಾದ ಕಡೆಗಳಲ್ಲಿ ಶಿಲ್ಪಕಲೆಯು ಕಾವ್ಯವಾಗಿ ಮೈದಳೆದಿರುವುದನ್ನು ಗಮನಿಸಬಹುದಾಗಿದೆ.
ಭಾಷೆಯ ಅಭಿರುಚಿಯನ್ನು ಜನರಲ್ಲಿ ಹೆಚ್ಚಿಸಿ, ಅದನ್ನು ಉಳಿಸಿಕೊಳ್ಳಬೇಕು. ಪ್ರಮುಖವಾಗಿ ಭಾಷೆಯ ಪ್ರಭಾವಶಾಲಿ ಚಲನೆ ಇರುವುದು ವಿವಿಧ ಮಾಧ್ಯಮ ಮತ್ತು ಶಾಲೆಗಳಲ್ಲಿ ಮಾಧ್ಯಮ ಮತ್ತು ಶಾಲೆಗಳಲ್ಲಿ ಕನ್ನಡದ ಬಗ್ಗೆ ಅಭಿರುಚಿ ಮೂಡಿಸುವಂತಹ ಕಾರ್ಯಕ್ರಮಗಳನ್ನು ಸರ್ಕಾರ ರೂಪಿಸಿ ಅನುಷ್ಠಾನಗೊಳಿಸುತ್ತಿದೆ. ಜಾಗತೀಕರಣದ ಹಿನ್ನೆಲೆಯಲ್ಲಿ ಇಂಗ್ಲೀಷ್ ಭಾಷಾ ಜ್ಞಾನ ಅವಶ್ಯಕವಾಗಿದ್ದರೂ ಎಂದಿಗೂ ಎಂದಿಗೂ ಮಾತೃಭಾಷೆ ಕನ್ನಡಕ್ಕೆ ಮೊದಲ ಆದ್ಯತೆ. ನಮ್ಮ ಶಿಕ್ಷಣ ನೀತಿಯೂ ಮಾತೃಭಾಷೆಗೆ ಹೆಚ್ಚಿನ ಒತ್ತನ್ನು ನೀಡಿದ್ದರೂ ಕನ್ನಡ ಭಾಷೆಯನ್ನು ಉಳಿಸಿಕೊಳ್ಳುವಲ್ಲಿ ನಮ್ಮೆಲ್ಲರ ಜಬಾಬ್ದಾರಿ ಇದೆ. ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಸರ್ಕಾರ ಮುಂದುವರೆಸಿದ್ದು, ಕನ್ನಡ ಭಾಷೆಯ ಸೊಗಡನ್ನು ಉಳಿಸಿಕೊಂಡು ಅದನ್ನು ಇನ್ನೂ ಹೆಚ್ಚಿಸುವ ಕೆಲಸದಲ್ಲಿ ಎಲ್ಲರೂ ಕೈಜೋಡಿಸಬೇಕಾಗಿದೆ. ಇದೇ ಸಂದರ್ಭದಲ್ಲಿ ಕನ್ನಡ ಭಾಷೆಯ ಪರಂಪರೆ, ಹಿರಿಮೆ, ಹಾಗೂ ಈ ನೆಲದ ಆದರ್ಶ ವ್ಯಕ್ತಿಗಳ, ಪುರಾಣ ಪುರುಷರ ಇತಿಹಾಸವನ್ನು ಪರಿಚಯಿಸುವ ಅಗತ್ಯವಿರುವುದನ್ನು ನಾನು ಮನಗಂಡಿದ್ದೇನೆ. ಜೊತೆಗೆ ಕನ್ನಡಪರ ಸಂಘಟನೆಗಳೂ ಕೂಡ ಈ ಕಾರಣಕ್ಕೆ ಕೈಜೋಡಿಸಬೇಕಾದ ಅಗತ್ಯವಿದೆ.
ಕನ್ನಡನಾಡು ವಿವಿಧ ಧರ್ಮ ಸಂಸ್ಕೃತಿಗಳ ಸಮಾಗಮವಾಗಿದೆ. ಮೌರ್ಯರು, ಗಂಗರು, ಕದಂಬರು, ಚಾಲುಕ್ಯರು, ಹೊಯ್ಸಳರು, ವಿಜಯನಗರದ ಅರಸರು, ಮೈಸೂರಿನ ಒಡೆಯರು, ಕೊಡವರು ಮುಂತಾದ ಅನೇಕ ರಾಜಮನೆತನಗಳು ಈ ನಾಡಿಗೆ ನೀಡಿದ ಕೊಡುಗೆ ಅಪಾರ, ದಾಸಶ್ರೇಷ್ಠ ಕನಕದಾಸರು, ಪುರಂದರದಾಸರು, ಸರ್ವಜ್ಞ, ಶಿಶುನಾಳ ಷರೀಫರಂತಹ ಸಂತಕವಿಗಳು, ಸಾಮಾಜಿಕ ಕ್ರಾಂತಿಯ ಹರಿಕಾರರಾದ ಅಕ್ಕ, ಅಲ್ಮಮ, ಜಗಜ್ಯೋತಿ ಬಸವೇಶ್ವರರನ್ನೊಳಗೊಂಡ ಅಸಂಖ್ಯಾತ ವಚನಕಾರರು ಮತ್ತು ದಾರ್ಶನಿಕರು ಬಾಳಿ ಬದುಕಿದ ನೆಲ ಈ ಹೆಮ್ಮೆಯ ಕನ್ನಡನಾಡು, ಧರ್ಮ ಸಹಿಷ್ಣುತೆ, ಸಮನ್ವಯತೆ, ಸೌಹಾರ್ದತೆಯಿಂದ ಬದುಕುತ್ತಿರುವ ನಾಡು ನಮ್ಮದು. ಕನ್ನಡ ಭಾಷೆ ಅತ್ಯಂತ ಶ್ರೀಮಂತ ಸಾಹಿತ್ಯ ಹೊಂದಿದ್ದು, ಕನ್ನಡದ 08 ಜನ ಪರಿಚಾರಕರು, ಸಾಹಿತ್ಯದ ಅತ್ಯುನ್ನತ ಪ್ರಶಸ್ತಿಯಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕಾರಕ್ಕೆ ಬಾಜನರಾಗಿರುವುದು ಹರ್ಷದ ಸಂಗತಿಯಾಗಿದೆ. ಇಡೀ ದೇಶದಲ್ಲೇ 2ನೇ ಅತಿಹೆಚ್ಚು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಭಾಷೆ ಕನ್ನಡ.

ಪ್ರಸಕ್ತ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಆಗಿದೆ. ಸಕಾಲದಲ್ಲಿ ಮಳೆಯಾಗಿರುವುದರಿಂದ ಜಿಲ್ಲೆಯ ಎಲ್ಲಾ ಕೆರೆ-ಕಟ್ಟೆ ಕಾಲುವೆ, ಜಿಲಾಶಯಗಳಲ್ಲಿ ನೀರು ತುಂಬಿದೆ. ಕೃಷಿ ಚಟುವಟಿಕೆಗಳುನಿರಂತರವಾಗಿದ್ದು, ಉತ್ತಮ ಇಳುವರಿ ಬರುವ ನಿರೀಕ್ಷೆ ಇದೆ. ಇದರಿಂದಾಗಿ ರೈತರ ಮುಖದಲ್ಲಿ ಮಂದಹಾಸ ಕಾಣಬಹುದಾಗಿದೆ.
ವಿಶೇಷವಾಗಿ ಸಂಪರ್ಕ, ಶಿಕ್ಷಣ, ಮಾರುಕಟ್ಟೆ, ಪ್ರವಾಸೋದ್ಯಮ, ಕೈಗಾರಿಕೆ ಮತ್ತಿತರ ಕ್ಷೇತ್ರಗಳನ್ನು ಒಳಗೊಂಡು ಜಿಲ್ಲೆಯನ್ನು ಎಲ್ಲಾ ಆಯಾಮಗಳಲ್ಲೂ, ಕ್ಷೇತ್ರಗಳಲ್ಲೂ ಪ್ರಾತಿನಿಧ್ಯ ದೊರೆಯುವಂತೆ ಸರ್ವಾಂಗೀಣ ವಿಕಾಸಗೊಳಿಸುವಲ್ಲಿ ಸರ್ಕಾರ ಕಾರ್ಯನಿರತವಾಗಿದೆ.
ಪ್ರಸ್ತುತ ಸಂದರ್ಭದಲ್ಲಿ ನಮ್ಮ ರಾಜ್ಯ ಅಭಿವೃದ್ಧಿಯ ಹೊಸ ಮನ್ವಂತರಕ್ಕೆ ತೆರೆದುಕೊಳ್ಳುತ್ತಿದೆ. ಸುಶಿಕ್ಷಿತ, ಸುಸಂಸ್ಕೃತ ಸಮಾಜವನ್ನು ಕಟ್ಟಿಬೆಳೆಸುವ ಜಬಾಬ್ದಾರಿ ನಮ್ಮೆಲ್ಲರ ಮೇಲಿದೆ. ನಾಡಿನ ಹಿರಿಯ ಚೇತನಗಳಾಗಿದ್ದ ನಮ್ಮ ಜಿಲ್ಲೆಯ ಹೆಮ್ಮೆಯ ರಾಷ್ಟ್ರಕವಿ ಕುವೆಂಪು ಮತ್ತು ಹೆಮ್ಮೆಯ ಕವಿ ಜಿ.ಎಸ್.ಶಿವರುದ್ರಪ್ಪನವರಿಗೆ ಕರ್ನಾಟಕ ರತ್ನ ಪುರಸ್ಕಾರ ಸಂದಿರುವುದು ನಮ್ಮೆಲ್ಲರಿಗೂ ಸಂತಸದ ಸಂಗತಿಯಾಗಿದೆ. ಅಂತೆಯೇ ಪ್ರಸಕ್ತ ಸಾಲಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ, ವಿಶೇಷವಾಗಿ ಕರಕುಶಲ ಕ್ಷೇತ್ರದಲ್ಲಿ ಹಸೆಚಿತ್ತಾರ ಖ್ಯಾತಿಯ ಸಾಗರ ತಾಲೂಕು ಸಿರಿವಂತೆಯ ಚಂದ್ರಶೇಖರ ಸಿರಿವಂತೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ವೈದ್ಯಕೀಯ ಕ್ಷೇತ್ರದಲ್ಲಿ ತೀರ್ಥಹಳ್ಳಿ ತಾಲೂಕು ಹೊಸಕೊಪ್ಪದ ಡಾ.ಎಚ್.ಎಸ್.ಕೃಷ್ಣಪ್ಪ ಹಾಗೂ ಸಾಹಸ ಕ್ರೀಡೆ ವಿಭಾಗದಲ್ಲಿ ಸಾಗರ ತಾಲೂಕಿನ ಹೊನ್ನೆಮರಡು ನೊಮಿಟೋ ಕಾಮದಾರ್ ಅವರಿಗೆ ಸುವರ್ಣ ಮಹೋತ್ಸವ(ಕರ್ನಾಟಕ ಸಂಭ್ರಮ-50)ಪ್ರಶಸ್ತಿ ಸಂದಿರುವುದು ಹರ್ಷದ ಸಂಗತಿಯಾಗಿದೆ.
ಕನ್ನಡ ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ಕುವೆಂಪುರವರ ಈ ಸಾಲುಗಳು ಅರ್ಧಪೂರ್ಣವೆನಿಸುತ್ತವೆ. ಸರ್ವ ಜನಾಂಗದ ಶಾಂತಿಯ ತೋಟ, ರಸಿಕರ ಕಂಗಳ ಸೆಳೆಯುವ ನೋಟ, ಹಿಂದೂ ಕ್ರೈಸ್ತ ಮುಸಲ್ಮಾನ, ಪಾರಸಿಕ ಜೈನರುದ್ಯಾನ.. ಈ ಉದಾತ್ತ ಭಾವವನ್ನು ಎಂದಿಗೂ ಜೀವಂತವಾಗಿರುವ ಪ್ರತಿಜ್ಞೆ ಕೈಗೊಳ್ಳಬೇಕಾಗಿದೆ. ಸರ್ವ ಜನಾಂಗದ ಶಾಂತಿಯ ತೋಟವಾಗಿ ಕಂಗೊಳಿಸಿದ ನಮ್ಮನಾಡು ಇಂದು ಮುಂದು ಎಂದೆಂದೂ ಎಲ್ಲಾ ಜಾತಿ-ಧರ್ಮಗಳ ಜನರು ಸಾಮರಸ್ಯದಿಂದ ಬದುಕುವ ಒಂದು ಸುಂದರ ತೋಟವಾಗಿಯೇ ಉಳಿಯಬೇಕು ಎಂದರು.
ಜಿಲ್ಲಾಧಿಕಾರಿ ಹೇಮಂತ್ ಎನ್, ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ಕನ್ನಡಾಂಬೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಪಥಸಂಚನ, ಭುವನೇಶ್ವರಿ , ಪ್ರವಾಸೋದ್ಯಮ ಇಲಾಖೆಯಿಂದ ಚಂದ್ರಗುತ್ತಿ ರೇಣುಕಾದೇವಿಯ ಸ್ತಬ್ದಚಿತ್ರ, ಕೆಎಸ್ ಆರ್ಟಿಸಿಯಿಙದ ಪ್ರವಾಸಿ ತಾಣಗಳ ಸ್ತಬ್ದಚಿತ್ರ, ಆರೋಗ್ಯ ಇಲಾಖೆಯಿಂದ ವಿವಿಧ ಯೋಜನೆಗಳ ಮಾಹಿತಿಯುಳ್ಳ, ಅಲ್ಪಸಂಖ್ಯಾತ ಇಲಾಖೆ ಯೋಜನೆಗಳ ಅರಿವು ಮೂಡಿಸುವ, ಕೃಷಿ ಇಲಾಖೆಯಿಂದ ವೈಜ್ಞಾನಿಕ ಮಾಹಿತಿ ನೀಡುವ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಸಖಿ ಒನ್ ಸ್ಟಾಪ್ ಸೆಂಟರ್, ಸಮಾಜ ಕಲ್ಯಾಣ ಇಲಾಖೆ, ಪಾಲಿಕೆ, ಪೊಲೀಸ್ ಇಲಾಖೆ, ತೋಟಗಾರಿಕೆ ಇಲಾಖೆಯಿಂದ ವಿಶೇಷ ಮಾಹಿತಿಯುಳ್ಳ ಸ್ತಬ್ದಚಿತ್ರಗಳನ್ನು ಪ್ರದರ್ಶಿಸಲಾಯಿತು. ಡೊಳ್ಳು ಕುಣಿತ, ವೀರಗಾಸೆ ಹಾಗೂ ೩ ಶಾಲಾ ವಿದ್ಯಾರ್ಥಿಗಳು ಕನ್ನಡ ನಾಡು-ನುಡಿ ಕುರಿತು ಸಾಂಸ್ಕೃತಿಕ ನೃತ್ಯ ಪ್ರದರ್ಶಿಸಿದರು
ಶಾಸಕರಾದ ಎಸ್. ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಶಾಸಕರಾದ ಡಿ.ಎಸ್.ಅರುಣ್, ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ಪಾಲಿಕೆ ಆಯುಕ್ತರಾದ ಡಾ.ಕವಿತಾ ಯೋಗಪ್ಪನವರ್, ಎಸಿ ಸತ್ಯನಾರಾಯಣ, ತಹಶೀಲ್ದಾರ್ ಗಿರೀಶ್, ಅಧಿಕಾರಿಗಳು, ಕನ್ನಡ ಸಂಘಟನೆಯ ಪದಾಧಿಕಾರಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.

Bhadra Dam ಭದ್ರಾ ಡ್ಯಾಮಿನ ಕಟ್ಟಡ ನಿರ್ಮಾಣಕ್ಕೆ ಆಕ್ಷೇಪ

0

Bhadra Dam ಭದ್ರ ಜಲಾಶಯಕ್ಕೆ ಅಪಾಯವಾಗುವಂತೆ ಜಲಜೀವನ್ ಮಿಷನ್ ಕಟ್ಟಡ ಕಟ್ಟುತ್ತಿರುವುದಕ್ಕೆ ರೈತ ಸಂಘದ ಮುಖ್ಯಸ್ಥ ಕೆ.ಟಿ.ಗಂಗಾಧರ್ ಆತಂಕ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಲಾಶಯದಿಂದ 7½ ಟಿಎಂಸಿ ನೀರನ್ನ ಬಯಲು ಸೀಮೆಯ ಭಾಗವಾದ ತರೀಕೆರೆ ಮತ್ತು ಹೊಸದುರ್ಗಕ್ಕೆ ಜಲಜೀವನ್ ಮಿಷನ್ ಮೂಲಕ ಒದಗಿಸಲಾಗುತ್ತದೆ ಎಂದರು.
ತರೀಕೆರೆ ಗ್ರಾಮಾಂತರ ಭಾಗ ಹೊಸದುರ್ಗಕ್ಕೆ ಭದ್ರಜಲಾಶಯದ ಬಫರ್ ಜೋನ್ ಒಳಗೆ ಯಾವುದೇ ಕಟ್ಟಡ ಮತ್ತು ನಿವಾಸಗಳನ್ನ ನಿಷೇಧಿಸಲಾಗಿದೆ. ಭದ್ರತಾ ವ್ಯವಸ್ಥೆಗೆ ಧಕ್ಕೆ ಉಂಟಾಗುವಂತೆ ಡ್ಯಾಂ
ನ ಪಕ್ಕದಲ್ಲಿ ಜಲಜೀವನ್ ಮಿಷನ್ ಕಟ್ಟಡಕ್ಕೆ ನೀಡಲಾಗಿದೆ ಎಂದರು‌.
ಈ ಕಟ್ಟಡ ನಿರ್ಮಾಣಕ್ಕೆ ಸಿಡಬ್ಲುಸಿ ಅನುಮತಿ ಪಡೆದಿಲ್ಲ. ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳಿಗೆ ಕಟ್ಟಡ ನಿರ್ಮಾಣದ ಮಾಹಿತಿ ಇಲ್ಲ. ಡ್ಯಾಂ ಪಕ್ಷದಲ್ಲಿ16 ಎಕರೆಯಲ್ಲಿ ಕಟ್ಟಡ ನಿರ್ಮಿಸಲಾಗುತ್ತದೆ. ಜಲಾಶಯ 71 ಟಿಎಂಸಿ ಲೋಡನ್ನ‌ ಬೆಟ್ಟಗಳು ತಡೆದಿರುತ್ತದೆ. ಬೆಟ್ಟದ ಕೆಳಗೆ ಕಟ್ಟಡ ನಿರ್ಮಿಸುತ್ತಿರುವುದು ಅಪರಾಧವಾಗಿದೆ. ಜಲಾಶಯಕ್ಕೆ ಅಪಾಯವೂ ಆಗಲಿದೆ ಎಂದರು.
ತಕ್ಷಣವೇ ಜಲಜೀವನ್ ಶುದ್ಧೀಕರಣ ಘಟಕದ ಕಟ್ಟಡ ನಿರ್ಮಾಣ ಸ್ಥಗಿತಗೊಳಿಸಬೇಕು. ಇಲ್ಲಿ ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ಅಪ್ಪರ್ ಭದ್ರ ಜಲಾಶಯದ ನೀರು ಒದಗಿಸುತ್ತಿರುವುದು ಈ ಜಲಾಶಯದಿಂದಲೇ ಆಗಿದೆ. ಇದನ್ನ ಸ್ಥಗಿತಗೊಳಿಸದಿದ್ದರೆ ರೈತ ಸಂಘ ಪ್ರತಿಭಟಿಸಲಾಗುವುದು ಎಂದರು.
Bhadra Dam ಸೂಪರಿಂಟೆಂಡೆಂಟ್ ಇಂಜಿನಿಯರ್ ಮತ್ತು ಅಸಿಸ್ಟೆಂಟ್ ಇಂಜಿನಿಯರ್ ಗೆ ಮಾತನಾಡಿದರೆ ಮೀನುಗಾರಿಕೆ ಇಲಾಖೆಗೆ ಗುತ್ತಿಗೆ ಆದಾರದ ಮೇಲೆಗೆ ಜಾಗ ಕೊಡಲಾಗಿದೆ ಎನ್ನುತ್ತಾರೆ. ಬಾಡಿಗೆ ನೀಡಿದರೆ ಮಾಲಿಕತ್ವ ಕೊಟ್ಟಿರೊಲ್ಲ. ಆದರೆ ಭದ್ರಜಲಾಶಯದ ಭದ್ರತೆ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ. ಜಲಾಶಯದ ಬುಡದಲ್ಲಿ ಸ್ಟೀಲ್ ಪ್ಲಾಂಟ್ ಕಟ್ಟಲಾಗಿದೆ. ಸೌಂದರ್ಯ ಮತ್ತು ಅಪಾಯವನ್ನ‌ಒಡ್ಡುವ ಯೋಜನಿಯ ನಿರ್ಮಾಣಕ್ಕೆ ಸರ್ಕಾರವೇ ಮುಂದಾಗಿದೆ. ಡಿಕೆಶಿ ಅವರು ಗಂಭೀರವಾಗಿ ತೆಗೆದುಕೊಂಡು ಸ್ಥಗಿತಗೊಳಿಸದಿದ್ದರೆ 9 ಜಿಲ್ಲೆಯ ರೈತರ ವಿರೋಧ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. .
ತರೀಕೆರೆ ಮತ್ತು ಹೊಸದುರ್ಗದ ಭಾಗಕ್ಕೆ ಜಲಜೀವನ್ ಶುದ್ಧಕುಡಿಯುವ ನೀರಿನ ಘಟಕದ ಯೋಜನೆಯಾಗಿದೆ. 500 ಕೋಟಿ ರೂ ಯೋಜನೆ ಇದಾಗಿದೆ. ಕೇಂದ್ರ ಸರ್ಕಾರದ ಪಾತ್ರವಿಲ್ಲ. ಬಫರ್ ಜೋನ್ ಎಂದಿದ್ದರೆ ಮುಗಿದುಹೋಗಿತ್ತು. ಡಿಪಿಆರ್ ಕೊಟ್ಟರೆ ಭ್ರಷ್ಟತೆ ಆಗಿದೆ. ಡಿಪಿಆರ್ ಕೊಡಬೇಕು ಎಂದು ಒತ್ತಾಯಿಸಿದರು.

Deepawali Festival ದೀಪಾವಳಿ ಪಟಾಕಿಗಳಿಂದ ಬರುವ ಹೊಗೆಯಿಂದ ರಕ್ಷಣೆ ಪಡೆಯಬೇಕೆ..? ಹಾಗಾದ್ರೆ ಹೀಗೆ ಮಾಡಿ

0

Deepawali Festival ಬೆಳಕಿನ ಹಬ್ಬ ದೀಪಾವಳಿಯಲ್ಲಿ ಪಟಾಕಿ ಹಚ್ಚಿ ಸಂಭ್ರಮ ಪಡುವುದು ಸಂಪ್ರದಾಯ. ನಾಡಿನ ಎಲ್ಲಾ ಕಡೆಗಳಲ್ಲೂ ಪಟಾಕಿಗಳನ್ನ ಸಿಡಿಸಿ ಸಂಭ್ರಮದಿಂದ ದೀಪಾವಳಿ ಆಚರಿಸುತ್ತಾರೆ. ಆದರೆ ಪಟಾಕಿ ಸಿಡಿಸಿದಾಗ ಬರುವ ಹೊಗೆಯು, ಅಸ್ತಮಾ ಮತ್ತು ಇತರ ಉಸಿರಾಟದ ಕಾಯಿಲೆಗಳಿರುವ ರೋಗಿಗಳಿಗೆ ದೊಡ್ಡ ಸಮಸ್ಯೆಯಾಗುತ್ತದೆ. ಮಾಲಿನ್ಯದಿಂದಾಗಿ, ಗಾಳಿಯಲ್ಲಿರುವ ಹಾನಿಕಾರಕ ಕಣಗಳು ಮತ್ತು ಅನಿಲಗಳು ಉಸಿರಾಟದ ನಾಳವನ್ನು ಹಾನಿಗೊಳಿಸುತ್ತವೆ. ಅವು ಉಸಿರಾಟಕ್ಕೆ ತೊಂದರೆಯನ್ನು ಉಂಟುಮಾಡುತ್ತವೆ. ಹೀಗಾಗಿ ಪಟಾಕಿ ಹೊಗೆಯಿಂದ ರಕ್ಷಣೆ ಪಡೆಯುವುದು ಅತ್ಯಗತ್ಯ.
ದೀಪಾವಳಿ ಪಟಾಕಿ ಹೊಗೆಯಿಂದ ರೋಗಿಗಳು ಮಾಲಿನ್ಯದಿಂದ ರಕ್ಷಣೆ ಪಡೆದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಹಬ್ಬಗಳಲ್ಲಿ ಪಟಾಕಿ ಹಚ್ಚುವುದು ಗಾಳಿಯಲ್ಲಿ ಮಾಲಿನ್ಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಅಸ್ತಮಾ ಅಥವಾ ಇತರ ಯಾವುದೇ ಉಸಿರಾಟದ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳು ಹೆಚ್ಚು ಜಾಗರೂಕರಾಗಿರಬೇಕು ಎಂದು ತಜ್ಞರು ಹೇಳುತ್ತಾರೆ.
ಅಸ್ತಮಾ ಅಥವಾ ಇತರ ಯಾವುದೇ ಉಸಿರಾಟದ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳು ಹೆಚ್ಚು ಜಾಗರೂಕರಾಗಿರಬೇಕು ಎಂದು ತಜ್ಞರು ಹೇಳುತ್ತಾರೆ. ಹಾಗಾದರೆ ಯಾವ ರೀತಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳಬೇಕು? ಇಲ್ಲಿದೆ ಮಾಹಿತಿ.
ಮಾಸ್ಕ್ ಧರಿಸಬೇಕು.
Deepawali Festival ಪಟಾಕಿಗಳೊಂದಿಗೆ ಬರುವ ಹೊಗೆ ಅಪಾಯಕಾರಿ ಎಂದು ವೈದ್ಯರು ಹೇಳುತ್ತಾರೆ. ಏಕೆಂದರೆ ಈ ಹೊಗೆಯಲ್ಲಿ ಸಲ್ಫರ್ ಮತ್ತು ನೈಟ್ರೈಡ್ ಅಧಿಕವಾಗಿರುತ್ತದೆ. ಈ ರಾಸಾಯನಿಕಗಳು ಶ್ವಾಸಕೋಶಕ್ಕೆ ತುಂಬಾ ಅಪಾಯಕಾರಿ ಎಂದು ತಜ್ಞರು ಹೇಳುತ್ತಾರೆ. ವಿಶೇಷವಾಗಿ ಶ್ವಾಸಕೋಶದ ಸೋಂಕು ಇರುವವರು ಪಟಾಕಿಗಳನ್ನು ಸಿಡಿಸುವಾಗ ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಸೂಚಿಸಲಾಗುತ್ತದೆ. ಈಗಿರುವ ಹವಾಮಾನ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು, ಪಟಾಕಿ ಸಿಡಿಸುವ ಸಮಯದಲ್ಲಿ ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಸೂಕ್ತ.
ವೈದ್ಯರ ಪ್ರಕಾರ, ದುರ್ಬಲ ಶ್ವಾಸಕೋಶವಿರುವವರು ಮಾಲಿನ್ಯಕ್ಕೆ ದೀರ್ಘಕಾಲ ಒಡ್ಡಿಕೊಳ್ಳುವುದು ಶ್ವಾಸಕೋಶವನ್ನು ಹಾನಿಗೊಳಿಸುತ್ತದೆ, ಸೋಂಕಿನ ಅಪಾಯ ಹೆಚ್ಚಾಗುತ್ತದೆ. ಮಾಲಿನ್ಯವು ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಇದು ರೋಗಗಳು ಹರಡುವ ಅಪಾಯವನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.
ಹಾಗೆಯೇ ಸಾಕಷ್ಟು ನೀರು ಕುಡಿಯಿರಿ. ಇದು ಶ್ವಾಸನಾಳವನ್ನು ತೇವಾಂಶದಿಂದ ಇರಿಸುತ್ತದೆ. ಇದರಿಂದ ಲೋಳೆಯ ಪೊರೆ ತುಂಬಾ ದಪ್ಪವಾಗುವುದಿಲ್ಲ. ಅಲ್ಲದೆ ಇದು ಧೂಳು ಮತ್ತು ಹೊಗೆಯಿಂದಾಗಿ ಹೆಚ್ಚು ತೊಂದರೆ ಆಗದಂತೆ ನೋಡಿಕೊಳ್ಳುತ್ತದೆ. ಮಾಲಿನ್ಯದಿಂದಾಗಿ ಶ್ವಾಸಕೋಶದ ಮೇಲೆ ಒತ್ತಡ ಹೆಚ್ಚಾದರೆ ಇದು ನಿಮ್ಮ ಆರೋಗ್ಯಕ್ಕೆ ಹಾನಿಯನ್ನು ಉಂಟುಮಾಡಬಹುದು. ಆದ್ದರಿಂದ ಪಟಾಕಿ ಸಿಡಿಸುವಾಗ ಹೊರಗೆ ಹೋಗುವುದನ್ನು ತಪ್ಪಿಸಿ. ಮನೆಯ ಒಳಗೆ ಲಘು ವ್ಯಾಯಾಮ ಮಾಡಿ. ಸಾಧ್ಯವಾದಷ್ಟು ಮನೆಯೊಳಗೆ ಏರ್ ಪ್ಯೂರಿಫೈಯರ್ ಬಳಸಿ. ಸಂಜೆ ಮತ್ತು ಬೆಳಿಗ್ಗೆ ಕಿಟಕಿ ಮತ್ತು ಬಾಗಿಲುಗಳನ್ನು ಮುಚ್ಚಿಡಿ. ಮನೆಯೊಳಗೆ ಒಳಾಂಗಣ ಸಸಿಗಳಿದ್ದರೆ ತುಂಬಾ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.

ಸ್ಕೂಟಿ ಸಹಿತ ಮಣ್ಣಿನಡಿ ಸಿಲುಕಿದ ಮಹಿಳೆಯ ಜೀವ ರಕ್ಷಿಸಿದ ರಿಕ್ಷಾ ಚಾಲಕ

0

ಮಣ್ಣು ತುಂಬಿದ ಲಾರಿ ಮಗುಚಿ ಬಿದ್ದಾಗ ಮಣ್ಣಿನಡಿಗೆ ಬಿದ್ದು ಮೇಲೇಳಲಾಗದೆ ಒದ್ದಾಡುತ್ತಿದ್ದ ಮಹಿಳೆಯನ್ನು ಸಮಾಜ ಸೇವಕ, ರಿಕ್ಷಾ ಚಾಲಕರೊಬ್ಬರು ಸಕಾಲದಲ್ಲಿ ರಕ್ಷಿಸಿದ್ದಾರೆ.
ಬೈಂದೂರು ತಾಲೂಕಿನ ನಾಗೂರು ಉಪ್ರಳ್ಳಿ ಒಳ ರಸ್ತೆಯ ತಿರುವಿನಲ್ಲಿ ಮಣ್ಣು ತುಂಬಿದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಒಂದು ಬದಿಗೆ ವಾಲಿ ಮಗುಚಿ ಬಿದ್ದಿತ್ತು. ಅದೇ ಸಂದರ್ಭದಲ್ಲಿ ಲಾರಿಯ ಪಕ್ಕದಲ್ಲೇ ಮಹಿಳೆ ಚಲಾಯಿಸುತ್ತಿದ್ದ ಸ್ಕೂಟಿಯೊಂದು ಸಾಗುತ್ತಿತ್ತು. ಈ ಸ್ಕೂಟಿಯ ಮೇಲೆ ಲಾರಿ ಮಗುಚಿ ಬಿದ್ದು, ಲಾರಿಯಲ್ಲಿದ್ದ ಮಣ್ಣಿನ ಅಡಿಯಲ್ಲಿ ಸ್ಕೂಟಿ ಸಮೇತ ಸವಾರೆ, ಸ್ಥಳೀಯ ನಿವಾಸಿ ಆರತಿ ಶೆಟ್ಟಿ ಸಿಲುಕಿಕೊಂಡರು. ಲಾರಿ ಚಾಲಕನಿಗೆ ಹೊರಬರಲು ಸಾಧ್ಯವಾಗದೆ ಕ್ಯಾಬಿನ್‌ ಒಳಗಡೆಯೇ ಸಿಲುಕಿಕೊಂಡಿದ್ದರು.
ಅದೇ ದಾರಿಯಾಗಿ ರಿಕ್ಷಾ ಚಲಾಯಿಸಿಕೊಂಡು ಹೋಗುತ್ತಿದ್ದ ಸಮಾಜ ಸೇವಕ ಕೋಡಿ ಅಶೋಕ್‌ ಪೂಜಾರಿ ಅವರ ಕಣ್ಣೆದುರೇ ಘಟನೆ ನಡೆದಿದ್ದು, ಏನು ಮಾಡಬೇಕೆಂದು ತೋಚದೇ ಸಹಾಯಕ್ಕಾಗಿ ಕೂಗಿಕೊಂಡರು. ಯಾರ ಸುಳಿವೂ ಕಾಣದಾಗ ಮಣ್ಣಿನಲ್ಲಿ ಮುಖ ಸಂಪೂರ್ಣ ಮುಚ್ಚಿ ಹೋಗಿದ್ದ ಮಹಿಳೆಯನ್ನು ಕೈಗಳಿಂದಲೇ ಮಣ್ಣನ್ನು ಅಗೆದು ತೆಗೆದು ಯುವತಿಯ ತಲೆಯನ್ನು ಮಣ್ಣಿನಿಂದ ಮೊದಲು ಮೇಲಕ್ಕೆತ್ತಿದರು.ಅನಂತರ ಬಂದ ಸ್ಥಳೀಯರ ಸಹಕಾರದಿಂದ ಲಾರಿಯ ಮಣ್ಣಿನಡಿಯಿಂದ ಮಹಿಳೆಯನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಕಳುಹಿಸಲಾಯಿತು. ಬಳಿಕ ಸ್ಕೂಟಿಯನ್ನು ತೆರವುಗೊಳಿಸಲಾಯಿತು.

CM Siddharamaiah ಶಕ್ತಿ ಯೋಜನೆ ಪರಿಷ್ಕರಣೆ ಪ್ರಸ್ತಾವನೆಯಿಲ್ಲ: ಸಿಎಂ ಸಿದ್ದರಾಮಯ್ಯ

0

CM Siddharamaiah ಶಕ್ತಿ ಯೋಜನೆ ಪರಿಷ್ಕರಣೆ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ . ಆ ರೀತಿಯ ಉದ್ದೇಶವೂ ಸರ್ಕಾರಕ್ಕೆ ಇಲ್ಲ’ ಎಂದು ಮುಖ್ಯಮಂತ್ರಿಗಳು ವಿಧಾನಸೌಧದಲ್ಲಿ ಮಾಧ್ಯಮಗಳ ಮುಂದೆ ಸ್ಪಷ್ಟಪಡಿಸಿದರು.
ವಕ್ಫ್ ಆಸ್ತಿ ನೋಟೀಸುಗಳಿಗೆ ಸಂಬಂಧಿಸಿದಂತೆ ನವೆಂಬರ್ 4ರಂದು ಬಿಜೆಪಿ ಪ್ರತಿಭಟನೆ ಮಾಡುವುದರ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಸುಮಾರು 200ಕ್ಕೂ ಹೆಚ್ಚು ನೋಟೀಸ್ ಗಳನ್ನು ನೀಡಿದ್ದಾರೆ. ಅವರದು ಇಬ್ಬದಿ ರಾಜಕೀಯ ನಡೆ. ಯಾವ ರೈತರನ್ನೂ ಒಕ್ಕಲೆಬ್ಬಿಸಿಸುವುದಿಲ್ಲ ಎಂದು ಈಗಾಗಲೇ ಹೇಳಿದ್ದೇವೆ. ಕೊಟ್ಟಿರುವ ನೋಟೀಸ್ ಗಳನ್ನು ಹಿಂಪಡೆಯಲು ಈಗಾಗಲೇ ಸೂಚಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ನವೆಂಬರ್ 4ರ ಅವರ ಪ್ರತಿಭಟನೆ ಉಪ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪ್ರೇರಿತವಾದದ್ದು, ಸಮಸ್ಯೆಗಳು ಇರದೆಡೆ ‌ಸಮಸ್ಯೆಗಳನ್ನು ಸೃಷ್ಟಿಸುತ್ತಾರೆ. ಈಗ ಮುಡಾ ಪ್ರಕರಣದಲ್ಲಿ ಮಾಡಿಲ್ಲವೇ? ಎಂದು ಪ್ರಶ್ನಿಸಿದರು.
ಶಿಗ್ಗಾಂವಿಯಲ್ಲಿ ಅಜ್ಜಂಪೀರ್ ಖಾದ್ರಿ ಅವರು ನಾಮಪತ್ರ ವಾಪಸ್ ಪಡೆದಿದ್ದು, ಉಪಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸುತ್ತಾರೆ.

CM Siddharamaiah ಶಿಗ್ಗಾಂವಿ, ಸಂಡೂರು ಹಾಗೂ ಚನ್ನಪಟ್ಟಣ ಮೂರೂ ಕ್ಷೇತ್ರಗಳಲ್ಲಿಯೂ ಗೆಲುವು ನಮ್ಮದೇ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನಾಡಿನ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೀಪಾವಳಿ ಶುಭಾಶಯಗಳನ್ನು ತಿಳಿಸಿದರು.

Department of Women and Child Welfare ಭಿಕ್ಷೆ ಬೇಡುತ್ತಿದ್ದ ಅಪ್ರಾಪ್ತೆ ರಕ್ಷಣೆ

0

Department of Women and Child Welfare ಶಿವಮೊಗ್ಗ ನಗರದ ಫ್ರೀಡಂ ಪಾರ್ಕ್‌ನಲ್ಲಿ ಅಪ್ರಾಪ್ತ ಬಾಲಕಿಯನ್ನು ರಕ್ಷಣೆ ಮಾಡಲಾಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಈ ಸಂಬಂಧ ಕಾರ್ಯಾಚರಣೆ ನಡೆಸಿ ಅಪ್ರಾಪ್ತೆಯನ್ನು ರಕ್ಷಣೆ ಮಾಡಿದರು.
Department of Women and Child Welfare ಫ್ರೀಡಂಪಾರ್ಕ್‌ ಬಳಿಯಲ್ಲಿ ಅಪ್ರಾಪ್ತೆಯೊಬ್ಬರು ಭಿಕ್ಷೆ ಬೇಡುತ್ತಿರುವುದಾಗಿ ಸಾರ್ವಜನಿಕರೊಬ್ಬರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಅಧಿಕಾರಿಗಳು ಬಾಲಕಿಯನ್ನ ಪೊಲೀಸರ ಸಹಾಯದೊಂದಿಗೆ ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದಾರೆ.
ಆ ಬಳಿಕ ಅಪ್ರಾಪ್ತೆಯನ್ನು ಸುರಕ್ಷಾ ಕೇಂದ್ರಕ್ಕೆ ರವಾನೆ ಮಾಡಿ ಆಕೆಯ ಗುರುತು ವಿವರಿ ಇತ್ಯಾದಿಗಳನ್ನ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.

ಮಾರುತಿಪುರದಲ್ಲಿ ಹಾಡಹಗಲೇ ಮನೆಯಲ್ಲಿ ಕಳ್ಳತನ

0

ಹೊಸನಗರ ತಾಲ್ಲೂಕು ಮಾರುತಿಪುರದಲ್ಲಿ ಹಾಡಹಗಲು ಹೊತ್ತಿನಲ್ಲೆ ಮನೆಯೊಂದರಲ್ಲಿ ಕಳ್ಳತನ ನಡೆದಿದೆ.
ಮಧ್ಯಾಹ್ನ 12 ಗಂಟೆ ಸುಮಾರಿಗೆ ಇಲ್ಲಿನ ನಿವಾಸಿ ಸುಧೀಂದ್ರ ಹೊಳ್ಳ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಮಾರುತೀಪುರದಲ್ಲಿ ಹೋಟೆಲ್‌ ಇಟ್ಟುಕೊಂಡಿರುವ ಇವರು ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಕಳುವಾದ ಸಮಯದಲ್ಲಿ ಸುಧೀಂದ್ರರವರ ಪತ್ನಿ ಮಗನ ಶಾಲೆಯಲ್ಲಿ ಆಯೋಜಿಸಿದ್ದೆ ಪೇರೆಂಟ್ಸ್‌ ಮೀಟಿಂಗ್‌ಗೆ ತೆರಳಿದ್ದರು. ಅವರು ವಾಪಸ್‌ ಆದಾಗ ಮನೆಯಲ್ಲಿ ಕಳ್ಳತನವಾಗಿರುವುದು ಗೊತ್ತಾಗಿದೆ.
ಕಳ್ಳರು ಮನೆಗೆ ನುಗ್ಗಿ ಮನೆಯ ಬೀರುವಿನಲ್ಲಿದ್ದ 60 ಗ್ರಾಂ ತೂಕದ ಎರಡು ನೆಕ್‌ಲೇಸ್, 10 ಗ್ರಾಂ ತೂಕದ ಮುತ್ತಿನ ಸರ, 36 ಗ್ರಾಂ ತೂಕದ ಬಳೆ, 20 ಗ್ರಾಂ ತೂಕದ ಸರ, 12 ಗ್ರಾಂ ತೂಕದ ಮೂರು ಉಂಗುರ ಸೇರಿದಂತೆ ಒಟ್ಟು 150 ಗ್ರಾಂ ತೂಕದ ಆಭರಣಗಳನ್ನ ಕದ್ದೊಯ್ದಿದ್ದಾರೆ.
ಹೈವೇ ಪಕ್ಕದಲ್ಲಿಯೇ ಇರುವ ಮನೆಯಲ್ಲಿ ಕಳ್ಳತನವಾಗಿರುವುದು ಸ್ಥಳೀಯರಲ್ಲಿಯು ಆತಂಕ ಮೂಡಿಸಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Byndur festival ಬೈಂದೂರು ಉತ್ಸವ 2024″ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಡಾ.ಶುಭಾ ಮರವಂತೆ ಆಯ್ಕೆ

0

Byndur festival ನವೆಂಬರ್ 1, 2, 3 ರಂದು ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ನಡೆಯುವ ‘ಬೈಂದೂರು ಉತ್ಸವ 2024’ರ ಅಂಗವಾಗಿ ನಡೆಯುವ ಸಾಹಿತ್ಯ ಸಂಚಯ -ಸಮ್ಮೇಳನದ ಸರ್ವಾಧ್ಯಕ್ಷರಾಗಿ ಶಿವಮೊಗ್ಗದ ಖ್ಯಾತ ವಾಗ್ಮಿ, ಲೇಖಕಿ, ಕುವೆಂಪು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ, ಪ್ರಾಧ್ಯಾಪಕಿ ಡಾ. ಶುಭಾ ಮರವಂತೆ ಇವರನ್ನು ಆಯ್ಕೆ ಮಾಡಲಾಗಿದೆ.

Byndur festival ಸಮೃದ್ಧ ಬೈಂದೂರು ಪರಿಕಲ್ಪನೆಯಡಿಯಲ್ಲಿ ರೂಪಿಸಲಾದ ಬೈಂದೂರು ಉತ್ಸವದಲ್ಲಿ ಕಲೆ ಸಾಹಿತ್ಯ ಸಂಸ್ಕೃತಿಗೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕುಣಿತ, ಮೆರವಣಿಗೆ, ಟ್ಯಾಬ್ಲೋ, ವಸ್ತು ಪ್ರದರ್ಶನ, ಯಕ್ಷಗಾನ, ವಿಚಾರಗೋಷ್ಠಿ, ಕವಿಗೋಷ್ಠಿ, ಆಹಾರ ಮೇಳ, ಕೃಷಿ ಮೇಳ ಮುಂತಾದ ಹಲವು ಕಾರ್ಯಕ್ರಮಗಳಿವೆ ಎಂದು ಆಯೋಜಕರು ತಿಳಿಸಿದ್ದಾರೆ.

Syed Ajjampir Qadri ಶಿಗ್ಗಾಂವಿ ಕ್ಷೇತ್ರ ಉಪಚುನಾವಣೆ. ಬಂಡಾಯ ಕಾಂಗ್ರೆಸ್ ಅಭ್ಯರ್ಥಿ ಅಜ್ಜಂಪೀರ್ ನಾಮಪತ್ರ ವಾಪಸ್

0

Syed Ajjampir Qadri ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಸೈಯದ್ ಅಜ್ಜಂಪೀರ್ ಖಾದ್ರಿ ಅವರು ಇಂದು (ಅ.30) ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ.

ನಿನ್ನೆ (ಅ.29) ರಾತ್ರಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ತೆರಳಿದ್ದ ಅಜ್ಜಂಪೀರ್‌ ಖಾದ್ರಿ, ಸಚಿವ ಝಮೀರ್ ಅಹ್ಮದ್ ಹಾಗೂ ಶಿವಾನಂದ ಪಾಟೀಲ್ ಜೊತೆ ಇಂದು ಬೆಳಿಗ್ಗೆ ಚುನಾವಣಾಧಿಕಾರಿ ಕಚೇರಿಗೆ ತೆರಳಿ, ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿಯೇ ನಾಮಪತ್ರ ವಾಪಸ್‌ ಪಡೆದಿದ್ದಾರೆ.

Syed Ajjampir Qadri ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು “ಪಕ್ಷದ ಮುಂದೆ ನಾನು ಯಾವುದೇ ಬೇಡಿಕೆ ಇಟ್ಟಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಯೋಜನೆಗಳು ಜನಪರವಾಗಿವೆ. ನಾನು ಸಿದ್ದರಾಮಯ್ಯ ಅವರ ಶಿಷ್ಯ. ಅವರ ಮಾರ್ಗದರ್ಶನದಲ್ಲಿ ಮುಂದುವರಿಯುವೆ” ಎಂದಿದ್ದಾರೆ.

India Test Cricket Team ನ್ಯೂಜಿಲೆಂಡ್ ಕ್ರಿಕೆಟ್ ಸರಣಿ ಸೋಲಿನ ಪರಿಣಾಮ ಕೋಚ್ ಗಂಭೀರ್ “ಔಟ್”. ಲಕ್ಷ್ಮಣ್ ‘ಇನ್’

0

India Test Cricket Team ಇತ್ತೀಚೆಗೆ ಭಾರತ ತಂಡ ಟೆಸ್ಟ್‌ ಕ್ರಿಕೆಟ್‌ಲ್ಲಿ ಸೋಲುಂಡಿದೆ, ಗೌತಮ್‌ ಗಂಭೀರ್‌ ಅವರ ನಿರ್ಧರಗಳೇ ಈ ಸೋಲಿಗೆ ಕಾರಣ ಎಂದು ಹಲವರು ದೂಷಿಸುತ್ತಿದ್ದು, ಇದರ ಮಧ್ಯೆ ಬಿಸಿಸಿಐ ಈ ಕುರಿತು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.

ಕೋಚ್‌ ಸ್ಥಾನದಿಂದ ಗೌತಮ್‌ ಗಂಭೀರ್‌ ಅವರನ್ನು ಕೆಳಗಿಳಿಸಿ ಈ ಜವಾಬ್ದಾರಿಯನ್ನು ಲಕ್ಷ್ಮಣ್ ಅವರಿಗೆ ನೀಡಲಾಗಿದೆ.
ಇನ್ನು ಹತ್ತು ದಿನಗಳಲ್ಲಿ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡದ ಕೋಚ್ ಜವಾಬ್ದಾರಿಯನ್ನು ವಿವಿಎಸ್ ಲಕ್ಷ್ಮಣ್ ವಹಿಸಿಕೊಳ್ಳಲಿದ್ದಾರೆ.

ಎನ್‌ಸಿಎ ನಿರ್ದೇಶಕರಾಗಿರುವ ಲಕ್ಷ್ಮಣ್ ಅವರು ಈ ಹಿಂದೆ ಟೀಮ್ ಇಂಡಿಯಾದ ಹಂಗಾಮಿ ಕೋಚ್ ಆಗಿಯೂ ಸೇವೆ ಸಲ್ಲಿಸಿದ್ದರು. ಜಿಂಬಾಬ್ವೆ ಪ್ರವಾಸದ ವೇಳೆ ಗಿಲ್ ನೇತೃತ್ವದ ಯುವ ತಂಡಕ್ಕೆ ಶುಭಮನ್ ತರಬೇತಿ ನೀಡಿದ್ದರು.

India Test Cricket Team ನವೆಂಬರ್ 22 ರಿಂದ ನವೆಂಬರ್ 10 ರಂದು ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಸರಣಿಗೆ ರೋಹಿತ್ ಸೇನೆ ಹೊರಡುವ ಸಾಧ್ಯತೆಯಿದೆ. ಮತ್ತೊಂದೆಡೆ, ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ನವೆಂಬರ್ 8 ರಿಂದ 13 ರವರೆಗೆ ದಕ್ಷಿಣ ಆಫ್ರಿಕಾದಲ್ಲಿ ನಾಲ್ಕು ಟಿ20 ಪಂದ್ಯಗಳನ್ನು ಆಡಲಿದೆ.
ಇದರಿಂದಾಗಿ ದಕ್ಷಿಣ ಆಫ್ರಿಕಾ ಸರಣಿಗೆ ಗಂಭೀರ್ ಕೋಚ್ ಆಗಲು ಸಾಧ್ಯವಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ಬಿಸಿಸಿಐ ಲಕ್ಷ್ಮಣ್ ಅವರಿಗೆ ತಾತ್ಕಾಲಿಕ ಕೋಚ್ ಆಗಿ ಜವಾಬ್ದಾರಿಯನ್ನು ಹಸ್ತಾಂತರಿಸಲಿದೆ.

ಸಾಯಿರಾಜ್ ಬಹುತುಲೆ, ಹೃಷಿಕೇಶ್ ಕಾಂತಿಕರ್ ಮತ್ತು ಸುಭದೀಪ್ ಘೋಷ್ ಎನ್‌ಸಿಎಯಲ್ಲಿ ಸಹಾಯಕ ಕೋಚಿಂಗ್ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಸಾಯಿರಾಜ್ ಬಹುತುಲೆ ಅವರು ಉದಯೋನ್ಮುಖ ಏಷ್ಯಾ ಟಿ20 ಕಪ್‌ಗಾಗಿ ಭಾರತ-ಎ ತಂಡದ ಮುಖ್ಯ ಕೋಚ್ ಆಗಿದ್ದರು.