Thursday, March 26, 2026
Thursday, March 26, 2026
Home Blog Page 513

Hasanamba Temple ಹಾಸನಾಂಬೆ ದರ್ಶನ ಮುಗಿಸಿ ಬರುತ್ತಿದ್ದ ತಂದೆಮಗಳು ಅಪಘಾತದಲ್ಲಿ ಮರಣ

0

Hasanamba Temple ಹಾಸನಾಂಬೆ ದರ್ಶನ ಪಡೆದು ಸಂಬಂಧಿಕರ ಮನೆಗೆ ನಡೆದುಕೊಂಡು ತೆರಳುತ್ತಿದ್ದ ಮೂವರಿಗೆ ಕಾರು ಡಿಕ್ಕಿಯಾಗಿ ತಂದೆ ಮಗಳು ಇಬ್ಬರು ಸಾವನ್ನಪ್ಪಿರುವ ಘಟನೆ ಹಾಸನದಲ್ಲಿ ನಡೆದಿದೆ.

ಹಾಸನ ನಗರದ ತಣ್ಣೀರಹಳ್ಳ ಬಳಿ ಈ ಘಟನೆ ನಡೆದಿದೆ. ತಂದೆ ಕುಮಾರ (38) ಹಾಗೂ ಪುತ್ರಿ ಕಾವ್ಯ(12) ಮೃತಪಟ್ಟವರು. ಘಟನೆಯಲ್ಲಿ ಪತ್ನಿ ಪುಟ್ಟಮ್ಮಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತರು ಆಲೂರು ತಾಲೂಕಿನ ಎನ್ ಹೆಚ್ ಪುರ ನಿವಾಸಿಗಳು ಎಂದು ತಿಳಿದು ಬಂದಿದೆ.

Hasanamba Temple ದಂಪತಿ ಮತ್ತು ಮಗಳು ನಿನ್ನೆ ರಾತ್ರಿ ಹಾಸನಾಂಬೆ ದೇವಿ ದರ್ಶನ ಪಡೆದು ವಾಪಸ್ ಹಾಸನದಲ್ಲಿದ್ದ ವಿಜಯನಗರದ ಸಂಬಂಧಿಕರ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ವೇಗವಾಗಿ ಬಂದ ಸ್ವಿಫ್ಟ್ ಕಾರು ಡಿಕ್ಕಿ ಮೂವರಿಗೆ ಡಿಕ್ಕಿ ಹೊಡೆದಿದೆ.

ಪರಿಣಾಮ ತಂದೆ-ಮಗಳು ಸ್ಥಳದಲ್ಲೇ ಒದ್ದಾಡಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Sagara Police ಆಟೋ- ಕಾರು ಡಿಕ್ಕಿ. ಇಬ್ಬರ ಸಾವು

0

Sagara Police ಕಾರು ಮತ್ತು ಆಟೋ ಡಿಕ್ಕಿಯಾಗಿ, ಇಬ್ಬರು ಮೃತಪಟ್ಟಿರುವ ಘಟನೆ ಸಾಗರ ತಾಲೂಕಿನ ಬೊಮ್ಮತ್ತಿಯಲ್ಲಿ ಶುಕ್ರವಾರ ಸಂಜೆ ನಡೆದಿದೆ.

ಆಟೋ ಮತ್ತು ಕಾರು ಮುಖಾಮುಖಿ ಡಿಕ್ಕಿಯಾಗಿದ್ದು, ಇಬ್ಬರು ಸಾವನ್ನಪಿದ್ದಾರೆ.
ಆಟೋ ಚಾಲಕ ರಾಘವೇಂದ್ರ (40) ಹಾಗೂ ಮಾಲತಿ(35) ಮೃತರಾದವರು.

ಅಪಘಾತದ ರಭಸಕ್ಕೆ ಆಟೋ ಚಾಲಕ ರಾಘವೇಂದ್ರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರ ಗಾಯಗೊಂಡಿದ್ದ ಮಾಲತಿ ಅವರನ್ನ ಶಿವಮೊಗ್ಗದ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.

Sagara Police ಅಪಘಾತದಲ್ಲಿ ಕೃತಿಕಾ, ರಾಮಪ್ಪ ಮತ್ತು ಸಾನ್ವಿಕಾ ಎಂಬುವರು ಗಾಯಗೊಂಡಿದ್ದಾರೆ.
ಗಾಯಾಳುಗಳು ಸಾಗರ ತಾಲೂಕಿನ ಕಾರೆಹೊಂಡ ಗ್ರಾಮದವರು ಎಂದು ತಿಳಿದುಬಂದಿದೆ.

ಅಫಘಾತದ ರಭಸಕ್ಕೆ ಆಟೋ ಸಂಪೂರ್ಣ ಜಖಂ ಆಗಿದ್ದು, ಕಾರಿನ ಮುಂಭಾಗಕ್ಕೆ ಹಾನಿಯಾಗಿದೆ. ಸಾಗರ ಗ್ರಾಮಾಂತರ ಪೊಲೀಸರು, ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.

ಕಾಡುಹಂದಿ ಅಕ್ರಮ ಬೇಟೆ. ಆರೋಪಿಯ ಬಂಧನ

0

ಕಾಡು ಹಂದಿಯನ್ನು ಅಕ್ರಮವಾಗಿ ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 40 ಕೆ.ಜಿ ಮಾಂಸ ಸಹಿತ ಒಬ್ಬ ಆರೋಪಿಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ತಾಲೂಕಿನ ಹರತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ.ಹುಣಸವಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಗಣೇಶ ಬಂಧಿತ ವ್ಯಕ್ತಿ. ಇತರ ಆರೋಪಿಗಳಾದ ಡಾಕಪ್ಪ, ಕಾರ್ತಿಕ್ ಪರಾರಿಯಾಗಿದ್ದಾರೆ. ಎಸಿಎಫ್ ಮೋಹನ್ ಕುಮಾರ್ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಅನಿಲ್ ಕುಮಾರ್ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿ ನವೀನ್ ಕುಮಾರ್, ಬೀಟ್
ಫಾರೆಸ್ಟರ್ ಎನ್.ರಾಜು, ಪುಟ್ಟಸ್ವಾಮಿ, ಭರತ್‌, ಪ್ರದೀಪ್, ಚಾಲಕರಾದ ಪ್ರಮೋದ್, ಎಸ್‌. ಪಾಲ್ಗೊಂಡಿದ್ದರು.

ಮನೆ ಮೇಲೆ ತೆಂಗಿನ ಮರ ಉರುಳಿ ಮನೆಗೆ ಜಖಂ. ಅಪಾರ ಹಾನಿ

0

ಸಾಗರ ತಾಲೂಕು ತುಮರಿ ಸಮೀಪದ ಕುದರೂರು ಗ್ರಾಮದ ಬೆಳಮಕ್ಕಿ ಯಲ್ಲಿ ಸುರಿದ ಗುಡುಗು ಸಹಿತ ಗಾಳಿ ಮಳೆಗೆ ರೈತರೊಬ್ಬರ ಮನೆ ಮೇಲೆ ಮರ ಬಿದ್ದು ಸಾಕಷ್ಟು ಹಾನಿಯಾಗಿದೆ.

ಚೌಡ ನಾಯ್ಕ ಅವರ ಮನೆಯ ಮೇಲೆ ಬೃಹತ್ ಗಾತ್ರದ ತೆಂಗಿನಮರ ಬಿದ್ದು ಮನೆಯ ಹೆಂಚುಗಳು ಪುಡಿಯಾಗಿವೆ. ಮರದ ನಾಟ ಮುರಿದಿವೆ.

ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಕುಟುಂಬ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗ್ರಾಮಸ್ಥರ ಸಹಾಯದಿಂದ ಮರವನ್ನು ತೆರವು ಮಾಡಲಾಗಿದೆ.
ಕುದರೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಸ್ವತಿ ಗಣಪತಿ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.

ಗಿಳಾಲುಗುಂಡಿ ಕೆರೆಗೆ ಮಹಿಳೆ ಕಾಲುಜಾರಿ ಬಿದ್ದು ದಾರುಣ ಮರಣ

0

ಆನಂದಪುರ ಸಮೀಪದ ಗಿಳಾಲಗುಂಡಿಯಲ್ಲಿರುವ ಕೆರೆಗೆ ಬಟ್ಟೆ ತೊಳೆಯಲು ಹೋಗಿದ್ದ ಮಹಿಳೆ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ.

ಕೊಣೆಹೊಸೂರಿನ ನಿವಾಸಿ ಗಾಯತ್ರಮ್ಮ (55) ಮೃತರು. ಸಂಜೆಯಾದರೂ ಅಮ್ಮ ಮನೆಗೆ ಬಾರದಿದ್ದಾಗ ಕೆರೆಯ ಬಳಿ ಹುಡುಕಾಡಿದ್ದಾರೆ. ಆಗ ಚಪ್ಪಲಿ ಹಾಗೂ ತೊಳೆಯಲು ತೆಗೆದುಕೊಂಡು ಹೋಗಿದ್ದ ಬಟ್ಟೆಗಳು ಕಂಡುಬಂದಿವೆ. ಅನುಮಾನಗೊಂಡ ಮಕ್ಕಳು ತಕ್ಷಣ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಅಗ್ನಿ ಶಾಮಕದಳವರು ಕೆರೆಯಲ್ಲಿ ಶೋಧ ನಡೆಸಿದಾಗ ಮೃತದೇಹ ಪತ್ತೆಯಾಗಿದೆ.

ಆನಂದಪುರ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.

Kannada Rajyotsava ಬೇರೆ ಭಾಷೆ ಕಲಿತರೂ ನಮ್ಮ ಕನ್ನಡದ ಆತ್ಮಾಭಿಮಾನ ಬೇಕು- ವೈ.ಜಿ.ಪುಟ್ಟಸ್ವಾಮಿ

0

Kannada Rajyotsava ಕನ್ನಡ ನಾಡು, ನುಡಿ, ಜಲದ ವಿಷಯದಲ್ಲಿ ಪ್ರತಿಯೊಬ್ಬ ಕನ್ನಡಿಗರು ಒಗ್ಗಟ್ಟಾಗಿರಬೇಕು ಎಂದು ಹಿರಿಯ ವಕೀಲ ವೈ.ಜಿ. ಪುಟ್ಟಸ್ವಾಮಿ ಹೇಳಿದರು.

ವಿದ್ಯುತ್ ನಗರದ ಡಾ. ಪುನೀತ್ ರಾಜ್‌ಕುಮಾರ್ ವೃತ್ತದಲ್ಲಿ ಪುನೀತ್ ರಾಜ್‌ಕುಮಾರ್ ಅಭಿಮಾನಿ ಬಳಗದಿಂದ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಾಡಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ರಾಜ್ಯಕ್ಕೆ ಕರ್ನಾಟಕವೆಂದು ಮರುನಾಮಕರಣಗೊಂಡು ಐವತ್ತು ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಸರ್ಕಾರ ಸುವರ್ಣ ಸಂಭ್ರಮವನ್ನು ಆಚರಿಸುತ್ತಿದೆ. ಸ್ವಾಭಿಮಾನದ ಕೆಚ್ಚೆದೆ ಇರುವ ಕನ್ನಡಿಗರ ಹೋರಾಟ ಚರಿತ್ರೆಯ ಪುಟದಲ್ಲಿ ದಾಖಲಾಗಿದೆ.

ಮನೆಗಳಲ್ಲಿ ಯಾವುದೇ ಭಾಷೆಯನ್ನು ಮಾತನಾಡಿದರೂ ಸಹ ವ್ಯವಹಾರಿಕವಾಗಿ ಕನ್ನಡವನ್ನು ಬಳಸಬೇಕು. ಇತರೆ ಭಾಷೆಗಳ ಬಗ್ಗೆ ಗೌರವ ನೀಡುವ ಜೊತೆಗೆ ಯಾವುದೇ ಭಾಷೆಯನ್ನು ಕಲಿತರು ಸಹ ನೆಲದ ಭಾಷೆ ಕನ್ನಡದ ಬಗ್ಗೆ ಆತ್ಮಾಭಿಮಾನ ಹೊಂದಿರಬೇಕು ಎಂದರು.

Kannada Rajyotsava ಕರುನಾಡಿನ ಜನತೆಯಿಂದ ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಡಾ. ಪುನೀತ್ ರಾಜ್‌ಕುಮಾರ್ ಅವರು ನಮ್ಮೆನ್ನೆಲ್ಲ ಅಗಲಿ ಮೂರು ವರ್ಷಗಳು ಗತಿಸಿದೆ. ಆದರೂ, ಅಭಿಮಾನಿಗಳಲ್ಲಿ ಕಿಂಚಿತ್ತು ಅಭಿಮಾನ ಕಡಿಮೆಯಾಗದಿರುವುದು ಕಾಣಬಹುದು. ಅಪ್ಪು ಹೆಸರಿನಲ್ಲಿ ಅನೇಕ ಸಾಮಾಜಿಕ ಕಾರ್ಯಗಳು ನಿರಂತರವಾಗಿ ನಡೆಯುತ್ತಿರುವುದೇ ಸಾಕ್ಷಿ. ನಾಡಿನಲ್ಲಿ ಮತ್ತೊಮ್ಮೆ ಪುನೀತ್ ರಾಜ್‌ಕುಮಾರ್ ಹುಟ್ಟಿಬರಲಿ ಎಂಬುದು ಕೋಟ್ಯಂತರ ಕನ್ನಡಿಗರ ಆಸೆಯೂ ಆಗಿದೆ ಎಂದರು.

ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಉಪಾಧ್ಯಕ್ಷ ಕೃಷ್ಣಮೂರ್ತಿ ಕೊಡಕಣಿ, ಉಪನ್ಯಾಸಕ ಎನ್.ಎಚ್. ಲಿಂಗೇಶ್, ಮಲ್ಲಿಕಾರ್ಜುನ ಟ್ರ್ಯಾಕ್ಟರ್, ಪುನೀತ್ ರಾಜ್‌ಕುಮಾರ್ ಅಭಿಮಾನಿ ಬಳಗದ ಎಸ್. ಹರೀಶ್, ಅರುಣ್, ನಟೇಶ್, ಆರ್. ಕೃಷ್ಣಮೂರ್ತಿ, ಮನೋಜ್, ಗಂಧರ್ವ, ಇಬ್ರಾಹಿಂ, ಸಂತೋಷ, ಪ್ರಭಾಕರ, ರಾಜಪ್ಪ, ರಾಜೀವ್, ಪ್ರವೀಣ್, ರಾಘವೇಂದ್ರ ಸೇರಿದಂತೆ ಇತರರಿದ್ದರು.

Kannada Rajyotsava ಅನ್ಯ ಭಾಷೆ ಪ್ರೀತಿಸಿದರೂ ಕನ್ನಡದಲ್ಲೇ ನಮ್ಮ ನಡೆ ನುಡಿ ವ್ಯವಹಾರ ನಡೆಸಬೇಕು- ಆರ್.ಪ್ರಸನ್ನ ಕುಮಾರ್

0

Kannada Rajyotsava ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕನ್ನಡ ಅತ್ಯಂತ ಸುಂದರವಾದ ಸುಲಲಿತವಾದ ಎಲ್ಲರೂ ಒಪ್ಪುವ ಮೊದಲುವಾದ ಭಾಷೆ ನಮ್ಮ ಕನ್ನಡ ಈ ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ

ಇಂದು ಪಶ್ಚಿಮಾತ್ಯ ಭಾಷೆಯಿಂದ ಕನ್ನಡ ಭಾಷೆಯನ್ನು ಮಾತನಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ ಕನ್ನಡ ಭಾಷೆಯನ್ನು ಮಾತನಾಡಿದರೆ ನಮಗೆ ಗೌರವವಾಗುತ್ತದೆ ಎಂದು ಅನ್ನುವಂತಹ ಸಾಕಷ್ಟು ಜನ ನಮ್ಮ ಮಧ್ಯೆ ಇದ್ದಾರೆ. ಅನ್ಯ ಭಾಷೆಯನ್ನ ಪ್ರೀತಿಸಿ ಕನ್ನಡದಲ್ಲಿ ನಮ್ಮ ನಡೆ-ನುಡಿ ವ್ಯವಹಾರ. ನಡೆಯಬೇಕು. ಕನ್ನಡವನ್ನು ಉಳಿಸಿ ಬೆಳೆಸಿ ಅನ್ನುವುದಕ್ಕಿಂತ. ಕನ್ನಡವನ್ನು ನಾವು ಬಳಸಬೇಕು. ಈ ಭಾಷೆಗೆ ನೂರಾರು ಜನ ಕವಿ ಸಾಧಕರು ಲೇಖಕರು ತಮ್ಮದೇ ಆದ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯರಾದ ಆರ್ ಪ್ರಸನ್ನ ಕುಮಾರ್ ನುಡಿದರು.

ಅವರು ಎಲ್‌ಎಲ್‌ಆರ್ ರಸ್ತೆಯ. ಕುಡಿಯುವ ನೀರಿನ ಘಟಕದ ಬಳಿ ಸ್ನೇಹ ಮಯಿ ಸಂಘದ ವತಿಯಿಂದ ಆಯೋಜಿಸಲಾದ 69ನೇ ಕನ್ನಡ ರಾಜ್ಯೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು

Kannada Rajyotsava ಇದೇ ಸಂದರ್ಭದಲ್ಲಿ ಮಾಜಿ ಮಹಾನಗರ ಪಾಲಿಕೆಯ ಸದಸ್ಯರಾದ ಯೋಗೀಶ್ ಅವರು ಮಾತನಾಡುತ್ತಾ ಸ್ನೇಹಮಹಿ ಸಂಘ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುವುದರ ಜೊತೆಗೆ ರಾಷ್ಟ್ರೀಯ ಹಬ್ಬಗಳು ಹಾಗೂ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಮಾಡುತ್ತಾ ಬಂದಿರುವುದಲ್ಲದೆ ವಿಶೇಷವಾಗಿ ಚಿನ್ನಪ್ಪನವರು ಯಾವುದೇ ಪಲಾಪೇಕ್ಷೆ ಇಲ್ಲದೆ ತಮ್ಮ ಸೇವಾ ಕಾರ್ಯವನ್ನು ನಿರಂತರವಾಗಿ ನಡೆಸುತ್ತಾ ಬಂದಿದ್ದಾರೆ
ಮತ್ತೋರ್ವ ಮುಖ್ಯ ಅತಿಥಿಯಾದ ಶಿವಾಜಿನ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ ವಿಜಯಕುಮಾರ್ ಅವರು ಮಾತನಾಡುತ್ತಾ ಈಗಾಗಲೇ ಸ್ನೇಹಮ ಈ ಸಂಘದ ವತಿಯಿಂದ ಕರೋನಾ ಸಂದರ್ಭದಲ್ಲಿ ಸುನಾಮಿ ಸಂದರ್ಭದಲ್ಲಿ ಅತಿ ಹೆಚ್ಚು ಮನುಕುಲದ ಸೇವಾ ಕಾರ್ಯಗಳನ್ನು ಮಾಡುತ್ತ ಬಂದಿರುವುದಲ್ಲದೆ ರಾಜ್ಯ ರಾಷ್ಟ್ರಮಟ್ಟದ ಕ್ರೀಡೆಗಳನ್ನು ಆಯೋಜಿಸುವುದರ ಮುಖಾಂತರ ಜನಮಾನಸವನ್ನು ತಲುಪಿದೆ ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎಸ್ ಚಿನ್ನಪ್ಪನವರು ವಹಿಸಿ . ಮಧ್ಯ ಪ್ರದೇಶದ ಗ್ವಾಲಿಯರ್ ನಲ್ಲಿ ಜರುಗಿದ ರಾಷ್ಟ್ರಮಟ್ಟದ ಏರೋಬಿಕ್ ಸ್ಪರ್ಧೆಯಲ್ಲಿ ಶಿವಮೊಗ್ಗ ನಗರದ ರಿಷಿಕಾ ಎಸ್ ಚಿನ್ನದ ಪದಕ ಗಳಿಸಿ ಗೌರವ ತಂದ. ಇವರಿಗೆ ಸನ್ಮಾನಿಸಿದರು.. ಕಾರ್ಯಕ್ರಮದಲ್ಲಿ ಕಾಂಗ್ರೆಸಿನ ಹಿರಿಯ ಸದಸ್ಯರಾದ.. ನಾದನ್ ಜಯಶೀಲನ್. ಕಾರ್ಯದರ್ಶಿ ರವಿ ಕುಮಾರ್. ಮೊಹಮ್ಮದ್. ಪವನ್.. ವಿಜಯಕುಮಾರ್. ಉಪಸ್ಥಿತರಿದ್ದರು

CM Siddhramaiah ಶಕ್ತಿ ಯೋಜನೆ ನಿಲ್ಲಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ- ಸಿದ್ಧರಾಮಯ್ಯ

0

CM Siddhramaiah ಶಕ್ತಿ ಯೋಜನೆ ಪರಿಷ್ಕರಣೆ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ . ಆ ರೀತಿಯ ಉದ್ದೇಶವೂ ಸರ್ಕಾರಕ್ಕೆ ಇಲ್ಲ’ ಎಂದು ಮುಖ್ಯಮಂತ್ರಿಗಳು ವಿಧಾನಸೌಧದಲ್ಲಿ ಮಾಧ್ಯಮಗಳ ಮುಂದೆ ಸ್ಪಷ್ಟಪಡಿಸಿದರು.
ವಕ್ಫ್ ಆಸ್ತಿ ನೋಟೀಸುಗಳಿಗೆ ಸಂಬಂಧಿಸಿದಂತೆ ನವೆಂಬರ್ 4ರಂದು ಬಿಜೆಪಿ ಪ್ರತಿಭಟನೆ ಮಾಡುವುದರ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಸುಮಾರು 200ಕ್ಕೂ ಹೆಚ್ಚು ನೋಟೀಸ್ ಗಳನ್ನು ನೀಡಿದ್ದಾರೆ. ಅವರದು ಇಬ್ಬದಿ ರಾಜಕೀಯ ನಡೆ. ಯಾವ ರೈತರನ್ನೂ ಒಕ್ಕಲೆಬ್ಬಿಸಿಸುವುದಿಲ್ಲ ಎಂದು ಈಗಾಗಲೇ ಹೇಳಿದ್ದೇವೆ. ಕೊಟ್ಟಿರುವ ನೋಟೀಸ್ ಗಳನ್ನು ಹಿಂಪಡೆಯಲು ಈಗಾಗಲೇ ಸೂಚಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ನವೆಂಬರ್ 4ರ ಅವರ ಪ್ರತಿಭಟನೆ ಉಪ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪ್ರೇರಿತವಾದದ್ದು, ಸಮಸ್ಯೆಗಳು ಇರದೆಡೆ ‌ಸಮಸ್ಯೆಗಳನ್ನು ಸೃಷ್ಟಿಸುತ್ತಾರೆ. ಈಗ ಮುಡಾ ಪ್ರಕರಣದಲ್ಲಿ ಮಾಡಿಲ್ಲವೇ? ಎಂದು ಪ್ರಶ್ನಿಸಿದರು.
ಶಿಗ್ಗಾಂವಿಯಲ್ಲಿ ಅಜ್ಜಂಪೀರ್ ಖಾದ್ರಿ ಅವರು ನಾಮಪತ್ರ ವಾಪಸ್ ಪಡೆದಿದ್ದು, ಉಪಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸುತ್ತಾರೆ.

CM Siddhramaiah ಶಿಗ್ಗಾಂವಿ, ಸಂಡೂರು ಹಾಗೂ ಚನ್ನಪಟ್ಟಣ ಮೂರೂ ಕ್ಷೇತ್ರಗಳಲ್ಲಿಯೂ ಗೆಲುವು ನಮ್ಮದೇ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನಾಡಿನ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೀಪಾವಳಿ ಶುಭಾಶಯಗಳನ್ನು ತಿಳಿಸಿದರು.

Sarji Hospital Shivamogga ಸರ್ಜಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ನರ ವೈಜ್ಞಾನಿಕ ಚಿಕಿತ್ಸಾ ಸೌಲಭ್ಯ- ಡಾ.ಧನಂಜಯ ಸರ್ಜಿ

0

Sarji Hospital Shivamogga ಶಿವಮೊಗ್ಗ ನಗರದ ಪ್ರತಿಷ್ಠಿತ ಸರ್ಜಿ ಆಸ್ಪತ್ರೆಗಳ ಸಮೂಹವು ಮತ್ತೊಂದು ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ಶಿವಮೊಗ್ಗ ಹಾಗೂ ಮಲೆನಾಡು ಭಾಗದಲ್ಲಿ ಮೊಟ್ಟ ಮೊದಲ ಬಾರಿಗೆ ಸರ್ಜೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಸೌಲಭ್ಯ ಗಳೊಂದಿಗೆ ನರವೈಜ್ಞಾನಿಕ ಇಂಟರ್ವೆನ್ಸನ್ಸ್ ಚಿಕಿತ್ಸಾ ಸೇವೆಗಳನ್ನು ಸಾರ್ವಜನಿಕರಿಗೆ ನೀಡಲು ಮುಂದಾಗಿದೆ.
ಪತ್ರಿಕಾಗೋಷ್ಟಿಯಲ್ಲಿ ಸರ್ಜಿ ಅಸ್ಪತ್ರೆಗಳ ಸಮೂಹದ ಛೇರ್ಮನ್ ಡಾ!! ಧನಂಜಯ ಸರ್ಜಿ ಅವರು ಮಾಹಿತಿ ನೀಡಿ, ಭಾರತದಲ್ಲಿ ಪ್ರತಿ ವರ್ಷ 100 ಜನರ ಪೈಕಿ ಒಬ್ಬರಿಗೆ ಸ್ಟೋಕ್ ಆಗುತ್ತಿದೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಕರ್ನಾಟಕದ ಐದಾರು ಜಿಲ್ಲೆಗಳಲ್ಲಿ ಈ ಚಿಕಿತ್ಸಾ ಸೌಲಭ್ಯವಿದ್ದು, ಇದೀಗ ಶಿವಮೊಗ್ಗದ ಸರ್ಜಿ ಆಸ್ಪತ್ರೆಯಲ್ಲಿ ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.
Sarji Hospital Shivamogga ಮೆದುಳು ಮತ್ತು ಬೆನ್ನುಹುರಿಯಹಲವಾರು ರೋಗಗಳಿಗೆ ಯಾವುದೇ ತೆರೆದ ಶಸ್ತ್ರಚಿಕಿತ್ಸೆ ಇಲ್ಲದೆಯೇ, ರಕ್ತ ನಾಳದ ಮೂಲಕ ಆಂಜಿಯೋಗ್ರಾಮ್ ಮಾದರಿಯಲ್ಲಿ ಆಧುನಿಕ ಚಿಕಿತ್ಸೆ ನೀಡಲಾಗುತ್ತದೆ. ಹೃದಯಾಘಾತ ಅಥವಾ ಹೃದಯದ ರಕ್ತ ನಾಳದ ತೊಂದರೆ ಆದಾಗ ಹೇಗೆ ಓಪನ್ ಹಾರ್ಟ್‌ ಸರ್ಜರಿ ಇಲ್ಲದೇ ಆಂಜಿಯೋಪ್ಲಾಸ್ಟಿ / ಸ್ಟಂಟಿಂಗ್ ಮಾಡಲಾಗುವುದೋ ಅದೇ ರೀತಿಯಲ್ಲಿ ಮೆದುಳಿನಲ್ಲೂ ಮೆದುಳಿನ ರಕ್ತನಾಳಗಳ ಚಿಕಿತ್ಸೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಮೆದುಳಿನಲ್ಲಿ ರಕ್ತ ಸ್ರಾವ ಅಥವಾ ರಕ್ತ ಸಂಚಾರ ಕಡಿತವಾಗಿ ಸ್ಟೋಕ್ /ಪಾರ್ಶ್ವವಾಯು ಉಂಟಾದಾಗ ಎಂ.ಆರ್. ಐ / ಸೀ.ಟೀ ನಿಂಗ್ ಅಥವಾ ಆಂಜಿಯೋಗ್ರಾಮ್ ಮಾಡಿ ರಕ್ತನಾಳಗಳಲ್ಲಿನ ದೋಷವನ್ನು ಪತ್ತೆ ಮಾಡಲಾಗುತ್ತದೆ. ರಕ್ತನಾಳದಲ್ಲಿ ದೋಷ ಕಂಡು ಬಂದಲ್ಲಿ ಸಾಮಾನ್ಯವಾಗಿ ಮೆದುಳಿನ ಸರ್ಜರಿ ಮಾಡಬೇಕಾಗಬಹುದು, ಇಂತಹ ತೊಂದರೆಗಳನ್ನು ಸರ್ಜರಿ ಇಲ್ಲದೇ ಅಂಜಿಯೋಪ್ಲಾಸ್ಟಿ ಅಥವಾ ಕಾಯ್ಲಿನ್ ಮಾಡಿ ಗುಣಪಡಿಸಬಹುದಾಗಿದೆ. ಈ ಚಿಕಿತ್ಸಾ ವಿಧಾನವು ಸರ್ಜರಿಗೆ ಹೋಲಿಸಿದರೆ ಬಹಳ ಸುರಕ್ಷಿತವಾದುದು ಹಾಗೂ ಇದರಿಂದ ರೋಗಿಯು ಬೇಗ ಗುಣಮುಖರಾಗುತ್ತಾರೆ ಎಂದರು.
ಮೆದುಳು ಅಥವಾ ಬೆನ್ನುಹುರಿಯಲ್ಲಿನ ಸಣ್ಣ ಸಮಸ್ಯೆಗಳು ಮತ್ತು ಕಷ್ಟಕರ ಸ್ಥಳಗಳನ್ನು ಸಹ ಈ ವಿಧಾನದಿಂದ ಸುಲಭವಾಗಿ ತಲುಪಬಹುದು ಮತ್ತು ಚಿಕಿತ್ಸೆ ನೀಡಬಹುದು. ಅದಲ್ಲದೇ ಮಕ್ಕಳು, ವಯೋವೃದ್ಧರು, ಬೇರೆ ಖಾಯಿಲೆಗಳಿಂದ ಬಳಲುತ್ತಿರುವವರು, ಅರಿವಳಿಕೆ/ಅನೆಸ್ಥೆಷ್ಯಾಗೆ ಹಾಗೂ ಸರ್ಜರಿಗೆ ಯೋಗ್ಯವಲ್ಲದವರಲ್ಲೂ ಈ ಚಿಕಿತ್ಸೆ ಮಾಡಬಹುದಾಗಿದೆ ಎಂದು ತಿಳಿಸಿದರು.

Klive Special Article ದಾನಕ್ಕೆ ಹೆಸರಾದ ದಾನವರಾಜ ಬಲಿ ಚಕ್ರವರ್ತಿ

0

Klive Special Article “ದೀಪಾವಳಿ-ಬಲಿಪಾಡ್ಯಮಿ”

ಶರದೃತುವಿನ ಕಾರ್ತಿಕ ಮಾಸದ ಶುಕ್ಲಪಕ್ಷದ ಪಾಡ್ಯವನ್ನು ದೀಪಾವಳಿ ಹಬ್ಬದ ಬಲಿಪಾಡ್ಯಮಿ
ಎಂದು ಆಚರಿಸಲಾಗುತ್ತದೆ.
ಈ ದಿನವನ್ನು ದಾನಕ್ಕೆ ಹೆಸರಾದ ದಾನವರಾಜ
ಬಲಿ ಚಕ್ರವರ್ತಿಯ ನೆನಪಿಗಾಗಿ ಆಚರಿಸುವುದು
ರೂಢಿಯಲ್ಲಿದೆ.

ಬಲಿ ಚಕ್ರವರ್ತಿ ವಿಷ್ಣುವಿನ ಪರಮ ಭಕ್ತನಾದ
ಪ್ರಹ್ಲಾದನ ಮೊಮ್ಮಗ.ಬಲಿಚಕ್ರವರ್ತಿ ಬಹಳಷ್ಟು
ಪ್ರಬಲ ಮತ್ತು ಪರಾಕ್ರಮಶಾಲಿ ಅಸುರ ರಾಜ
ನಾಗಿದ್ದನು. ಇವನು ದೈತ್ಯ ಕುಲದಲ್ಲಿ ಹುಟ್ಟಿದರೂ ತನ್ನ ಆಡಳಿತದಲ್ಲಿ ಧರ್ಮನಿಷ್ಠೆ ಮತ್ತುದಾನ
ಮಾಡುವುದರಲ್ಲಿ ಎಂದೂ ಹಿಂಜರಿದವನಲ್ಲ.
ಬಲಿಯು ವಿರೋಚನ ರಾಜನ ಮಗ. ವಿರೋಚನನೂ ತಂದೆ ಪ್ರಹ್ಲಾದನ ಹಾಗೆ ವಿಷ್ಣು ಭಕ್ತನಾಗಿದ್ದನು.

ಮಹಾಬಲಶಾಲಿಯಾಗಿದ್ದವನು.
ಯುದ್ಧದಲ್ಲಿ ಮಹಾಚತುರನಾಗಿದ್ದನು. ಸ್ವರ್ಗಲೋಕಕ್ಕೆ ಲಗ್ಗೆ ಹಾಕಿ ದೇವೇಂದ್ರನ ಮೇಲೆ ಯುದ್ಧಕ್ಕೆ ಹೋಗಿ ಇಂದ್ರ ನವ ಜ್ರಾಯುಧದಿಂದ ಹತನಾಗುತ್ತಾನೆ. ದಾನವ ಗುರುಗಳಾದ ಶುಕ್ರಾಚಾರ್ಯರಿಂದ ಸಂಜೀವಿನೀ ಮಂತ್ರದಿಂದ ಪುನಃ:ಜೀವ ಪಡೆಯುತ್ತಾನೆ.

ಇವನ ಮಗ ಬಲಿರಾಜ ಇದೇ ಸೇಡಿಟ್ಟುಕೊಂಡು ಅಮರಾವತಿಗೆ ಹೋಗಿ ಸ್ವರ್ಗಲೋಕದಲ್ಲಿ ದೇವೇಂದ್ರನ ಸಿಂಹಾಸನವನ್ನು ಆಕ್ರಮಿಸಿಕೊಂಡುಅವನನ್ನು ಇಂದ್ರಪದವಿಯಿಂದ ಇಳಿಸಿಬಿಡುತ್ತಾನೆ.
ಮೊದಲೇ ಇವನು ರಾಕ್ಷಸ ಸ್ವಭಾವದವನು, ಎಲ್ಲಾ ಸಜ್ಜನರಿಗೆ ಮತ್ತು ಋಷಿಮುನಿಗಳಿಗೆ ಉಪಟಳ ಶುರುವಾಗಿಬಿಡುತ್ತೆ.

ಎಲ್ಲಾದೇವತೆಗಳು ಋಷಿಮುನಿಗಳು ಶ್ರೀಹರಿಯಲ್ಲಿ
ಬಂದು ತಮ್ಮನ್ನು ಬಲಿಯ ಉಪಟಳದಿಂದ ರಕ್ಷಿಸಬೇಕೆಂದು ಪ್ರಾರ್ಥಿಸುತ್ತಾರೆ. ಶ್ರೀಹರಿಯು ಅವರಿಗೆ ತಾನು ದಾನವ ರಾಜನ ತೊಂದರೆಯನ್ನು
ಪರಿಹರಿಸುವುದಾಗಿ ಅಭಯವನ್ನು ಕೊಟ್ಟು ಕಳಿಸುತ್ತಾನೆ.
ಬಲಿಯು ದಾನವನಾಗಿದ್ದರೂ ಶ್ರೀಹರಿ
ಯು ಭಕ್ತನಾಗಿದ್ದನು. ಇವನಿಗೆ ಬುದ್ಧಿ ಕಲಿಸುವುದಕ್ಕಾಗಿ ಶ್ರೀಹರಿಯು ಕಶ್ಯಪ ಅದಿತಿ
ದಂಪತಿಗಳಲ್ಲಿ ಮಗನಾಗಿ “ವಾಮನ”ನಾಗಿ ಅವತರಿಸುತ್ತಾನೆ.

Klive Special Article ಬಲಿಯು ತಾನು ಶಾಶ್ವತವಾಗಿ
ಇಂದ್ರ ಪದವಿಯನ್ನು ಹೊಂದಲು ಗುರುಗಳಾದ ಶುಕ್ರಾಚಾರ್ಯರ ಉಪದೇಶದಂತೆ ಯಜ್ಞವನ್ನು
ಮಾಡುತ್ತಾನೆ. ಯಜ್ಞದ ಫಲ ದೊರಕಲು ನಿಯಮದಂತೆ ಯಜ್ಞ ಮಾಡುವಾಗ ಯಾರು ಏನನ್ನುಯಾಚಿಸಿದರೂ
ಇಲ್ಲವೆನ್ನದೆ ದಾನಕೊಡಬೇಕು. ಇಲ್ಲದೇ ಹೋದರೆ ಯಜ್ಞದ ಫಲ ಸಿದ್ಧಿಸುವುದಿಲ್ಲ.
ಇದೇ ಸರಿಯಾದ ಸಮಯವೆಂದು ವಾಮನ ರೂಪಿ ಭಗವಂತನು ವಟುವಿನ ವೇಷದಿಂದ ಬಲಿಯು ಯಜ್ಞ ಮಾಡುತ್ತಿದ್ದ ಸ್ಥಳಕ್ಕೆ ಬರುತ್ತಾನೆ.

ಬಲಿಯು ವಾಮನ ರೂಪಿ ಭಗವಂತನನ್ನು ಆದರದಿಂದ ಸ್ವಾಗತಿಸಿ,ಬಂದಉದ್ದೇಶವೇನೆಂದು ವಿಚಾರಿಸುತ್ತಾನೆ ಸಂಕೋಚಪಡದೇ ತನ್ನಿಂದ ಏನುಕೆಲಸವಾಗ
ಬೇಕೆಂಬುದನ್ನು ಸಂಕೋಚವಿಲ್ಲದೇ ತಿಳಿಸಿದರೆ ಅದನ್ನು ಈಡೇರಿಸಲು ಸಿದ್ಧನಿದ್ದೇನೆ ಎಂದು ತಿಳಿಸು
ತ್ತಾನೆ.

ವಾಮನ ನನಗೆ ನಿನ್ನ ಧನ,ಕನಕ ಮತ್ತಾವುದೇ ವಸ್ತುಗಳು ಬೇಡ,ನೀನುಕೊಡುವು
ದಾದರೆ ನನ್ನ ಮೂರು ಪಾದದಷ್ಟು ಭೂಮಿಯನ್ನು
ಕೊಡು,ಇಲ್ಲವಾದರೆ ಬೇಡ ಎಂದು ಹೇಳುತ್ತಾನೆ. ಬಲಿಚಕ್ರವರ್ತಿಗೆ ಬಹಳ ಆಶ್ಚರ್ಯವಾಗುತ್ತದೆ. ವಾಮನ ನೋಡಲು ಸಣ್ಣ ವಟು ರೂಪದಲ್ಲಿರುವ ಬಾಲಕ
ನಾಗಿ ಕಾಣುತ್ತಾನೆ.
ಆಯ್ತು ನೀವೇನು ಕೇಳಿದ್ದರೋ ಅದನ್ನು ಕೊಡಲು ಸಿದ್ಧನಿದ್ದೇನೆ ಎಂದು ಗುರುಗಳಾದ ಶುಕ್ರಾಚಾರ್ಯ
ರನ್ನು ಕರೆದು ಸಂಕಲ್ಪಮಾಡುತ್ತಾನೆ.
ಶುಕ್ರಾಚಾರ್ಯರು ಬಲಿಗೆ ಎಚ್ಚರಿಕೆ ಕೊಡುತ್ತಾರೆ,
ಬಂದಿರುವವನು ಸಾಮಾನ್ಯವಟುವಲ್ಲ, ವಾಮನ ರೂಪಿ ಭಗವಂತ ನೆಂದು.

ಆದರೂ ತಾನು ಕೊಟ್ಟ ಮಾತಿಗೆ ತಪ್ಪದೇ ವಾಮನ ರೂಪಿ ವಟುವಿಗೆ ದಾನ ಕೊಡುತ್ತಾನೆ.
ವಾಮನ ರೂಪಿ ಭಗವಂತನು ಒಂದು ಪಾದದಿಂದ ಭೂಮಂಡಲವನ್ನು, ಎರಡನೆಯ ಪಾದದಿಂದ ದೇವಲೋಕವನ್ನೆಲ್ಲ ಅಳೆದು ಮುಗಿಸಿದ. ಇನ್ನು
ಮೂರನೆಯ ಪಾದಕ್ಕೆ ಜಾಗವನ್ನು ತೋರಿಸು ಎಂದಾಗ ಬಲಿಯು ಮನಸ್ಸಿನಲ್ಲಿ ತನಗೂ ವಿಷ್ಣು
ಪರಮಾತ್ಮನು ಅನುಗ್ರಹದ ಭಾಗ್ಯ ಸಿಕ್ಕುವುದೆಂದು
ಹಿಗ್ಗಿನಿಂದ ವಟುವಾಮನನ ಮುಂದೆ ಕೈಜೋಡಿಸಿ
ಮೂರನೆಯ ಪಾದವನ್ನು ತನ್ನ ತಲೆಯಮೇಲೆ ಇಟ್ಟು ತಿನ್ನು ಕೃತಾರ್ಥನನ್ನಾಗಿ ಮಾಡುವಂತೆ ಪ್ರಾರ್ಥಿಸುತ್ತಾನೆ. ಭಗವಂತನು ಅವನ ತಲೆಯ ಮೇಲೆ ಪಾದವನ್ನಿಟ್ಟು ಪಾತಾಳಕ್ಕೆ ಅದುಮುತ್ತಾನೆ.
ಬಲಿ ಚಕ್ರವರ್ತಿಯ ಉದಾರ ದಾನ ಬುದ್ಧಿಗೆ ಮೆಚ್ಚಿ
ಅವನಿಗೆ ಸುತ ಲೋಕದಲ್ಲಿ ಸುಖವಾಗಿ ರಾಜ್ಯಭಾರ ಮಾಡಿಕೊಂಡಿರುವಂತೆ ಅನುಗ್ರಹಿಸಿಅಂತರ್ಧಾನ
ನಾಗುತ್ತಾನೆ.
ವಿಷ್ಣುವಿನ ಅನುಗ್ರಹದಿಂದ ದೇವೇಂದ್ರನಿಗೆ ತನ್ನ ಸ್ವರ್ಗಲೋಕದ ಅಧಿಪತ್ಯ ಮತ್ತೆ ದೊರೆಯುತ್ತದೆ.
ಬಲಿಯ ಸಮರ್ಪಣೆಯಿಂದ ಸಂತೋಷಗೊಂಡ ವಿಷ್ಣು ಪರಮಾತ್ಮನು,ಬಲಿಗೆ ವರ್ಷದಲ್ಲಿ ಒಂದು ದಿನ ಭೂಮಿಗೆಬಂದುಜನರಿಂದಪೂಜೆಗೊಳ್ಳುವಂತೆ ಮತ್ತು ಮುಂದೆ ಭವಿಷ್ಯದಲ್ಲಿ ಇಂದ್ರ ಪದವಿಯನ್ನು ಹೊಂದುವಂತೆ ವರ ನೀಡುತ್ತಾನೆ. ಬಲಿಯು ಪಾತಾಳದಿಂದ ವರ್ಷಕ್ಕೊಂದು ಸಾರಿ ಬರುವ ಈ ದಿನವನ್ನೇ ಬಲಿಪಾಡ್ಯಮಿಯನ್ನಾಗಿ ಆಚರಿಸಲಾಗುತ್ತದೆ. ಈ ರೀತಿಯಾಗಿ ಬಲಿಗೆ ವಿಷ್ಣುವು ಕೊಟ್ಟ ವರದಂತೆ
ದೀಪಾವಳಿ ಹಬ್ಬದಂದು ಬಲಿಯ ಪೂಜೆ ಮಾಡು
ವುದು ನಡೆದು ಬಂದಿದೆಯಲ್ಲದೆ ಮತ್ತು ಮಹತ್ವ ಪಡೆದಿದೆ. ನಾಡಿನ ಸಮಸ್ತ ಜನರಿಗೆ ಬಲಿಪಾಡ್ಯಮಿ ಹಾಗೂ ದೀಪಾವಳಿ ಹಬ್ಬದ ಶುಭಾಶಯಗಳು.

ಲೇ: ಎನ್.ಜಯಭೀಮ ಜೊಯ್ಸ್.,ಶಿವಮೊಗ್ಗ.