Thursday, March 26, 2026
Thursday, March 26, 2026
Home Blog Page 512

Madhu Bangarappa ಬೆಂಗಳೂರಿನಲ್ಲಿ ನಡೆದ ಚಿತ್ರಕಲಾ ಶಿಕ್ಷಕರ ಕಲಾಪ್ರದರ್ಶನದಲ್ಲಿ ಸಚಿವ ಮಧು ಬಂಗಾರಪ್ಪ

0

Madhu Bangarappa ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ಚಿತ್ರಕಲಾ ಶಿಕ್ಷಕರ ಸಂಘದ ಶಿಕ್ಷಕರು ಆಯೋಜಿಸಿದ ಚಿತ್ರಕಲಾ ಪ್ರದರ್ಶನ ವೀಕ್ಷಿಸಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಶ್ರೀ ಎಸ್. ಮಧು ಬಂಗಾರಪ್ಪ.

Manipal ಐಟಿ ದಾಳಿ ನೆಪ ಹೇಳಿ ನಂಬಿಸಿ ಮನೆ‌ಮಾಲೀಕರಿಂದ ನಗದು & ಒಡವೆ ದೋಚಿದ ಕೆಲಸದ ಮಹಿಳೆ

0

Manipal ಐ.ಟಿ. ಅಧಿಕಾರಿಗಳು ದಾಳಿ ನಡೆಸುತ್ತಾರೆ ಎಂದು ನಂಬಿಸಿ 7.50 ಲಕ್ಷ ರೂ. ನಗದು ಹಾಗೂ 3 ಲಕ್ಷ ಬೆಲೆಬಾಳುವ ಡೈಮಂಡ್‌ ಸರ ತೆಗೆದುಕೊಂಡು ಹೋಗಿ ಮೋಸ ಮಾಡಿರುವ ಘಟನೆ ಮಣಿಪಾಲ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಶಿವಳ್ಳಿ ಗ್ರಾಮದ ನಿವಾಸಿ ಪೆರಂಪಳ್ಳಿ ರಸ್ತೆಯ ಜ್ಯೂಲಿಯಟ್‌ ಅವರು 4 ತಿಂಗಳಿನಿಂದ ಪೆರಂಪಳ್ಳಿಯ ಸುನೀತಾ ಅವರನ್ನು ಮನೆ ಕೆಲಸಕ್ಕೆ ಇಟ್ಟುಕೊಂಡಿದ್ದರು. ಕೆಲಸದಾಕೆ ಬಳಿ ಮನೆಯ ಯಜಮಾನಿ ತನ್ನ ಮತ್ತು ಗಂಡನ ನಡುವೆ ಇದ್ದ ಮನಸ್ತಾಪದ ಬಗ್ಗೆ ಹೇಳಿಕೊಂಡಿದ್ದರು. ಸುನೀತಾ ಅವರು ಜೂಲಿಯೆಟ್‌ಗೆ ಗಂಡನಿಗೆ ವಿಚ್ಛೇದನ ಕೊಡುವಂತೆ ಸಲಹೆ ನೀಡಿದ್ದರು. ಬೇಸರಗೊಂಡ ಜ್ಯೂಲಿಯೆಟ್‌ ಮನೆ ಬಿಟ್ಟು ಹೋಗಲು ನಿರ್ಧರಿಸಿದ್ದರು. ತಾಯಿಯನ್ನು ಮನೆಗೆ ಬರಲು ಹೇಳಿ ಅ. 10ರಂದು ತಾಯಿಯಲ್ಲಿ ಬಟ್ಟೆಬರೆ ಹಾಗೂ ಸ್ವಲ್ಪ ಚಿನ್ನ ಹಾಗೂ ಗಂಡನ ಮನೆಯ ಲಾಕರ್‌ನಲ್ಲಿ ಇರಿಸಿದ್ದ 10 ಲಕ್ಷ ರೂಪಾಯಿಯಲ್ಲಿ 1 ಲಕ್ಷ ರೂ. ಹಣವನ್ನು ನೀಡಿದ್ದರು.

Manipal ಅ. 29ರಂದು ಬೆಳಗ್ಗೆ 10.30ಕ್ಕೆ ಗಂಟೆಗೆ ಜ್ಯೂಲಿಯೆಟ್‌ ಮನೆಯಲ್ಲಿದ್ದಾಗಲೇ ಸುನೀತಾ ಅವರು ಸ್ಟ್ಯಾನಿ ಅವರೊಂದಿಗೆ ಮನೆಗೆ ಬಂದು ಐ.ಟಿ. ಅಧಿಕಾರಿಗಳು ಬಂದಿದ್ದಾರೆ. ನಿಮ್ಮ ಮನೆಗೆ ರೈಡ್‌ ಮಾಡುತ್ತಾರೆ. ಲಾಕರ್‌ನಲ್ಲಿ ಇದ್ದ ಹಣ ಹಾಗೂ ಒಡವೆಯನ್ನು ತೆಗೆಯಬೇಕು ಎಂದು ಹೇಳಿ ಲಾಕರ್‌ ಕೀ ತೆಗೆದುಕೊಂಡು ಲಾಕರ್‌ ಓಪನ್‌ ಮಾಡಿ ಅದರಲ್ಲಿ ಇದ್ದ ಹಣದಲ್ಲಿ 1.50 ಲಕ್ಷ ರೂ.ಗಳನ್ನು ಜ್ಯೂಲಿಯೆಟ್‌ ಅವರ ಬ್ಯಾಗ್‌ ಗೆ ಹಾಕಿ ಉಳಿದ 7 ಲಕ್ಷ 50 ಸಾವಿರ ರೂ. ಹಾಗೂ 3 ಲಕ್ಷ ಬೆಲೆಬಾಳುವ ಡೈಮಂಡ್‌ ನೆಕ್ಲೆಸ್‌ ಅವಳ ಚೀಲದಲ್ಲಿ ಹಾಕಿಕೊಂಡು ನನ್ನಲ್ಲಿ ಇರಲಿ ಆನಂತರ ಕೊಡುತ್ತೇನೆ ಎಂದು ಹೇಳಿದ್ದರು. ಐ.ಟಿ.ಅಧಿಕಾರಿಗಳು ದಾಳಿ ನಡೆಸುತ್ತಾರೆ ಎಂದು ನಂಬಿಸಿ ಸುನೀತಾ ಹಾಗೂ ಸ್ಟಾನಿ7.50 ಲಕ್ಷ ರೂ. ನಗದು ಹಾಗೂ 3 ಲಕ್ಷ ಬೆಲೆಬಾಳುವ ಡೈಮಂಡ್‌ ಸರವನ್ನು ತೆಗೆದುಕೊಂಡು ಹೋಗಿ ಮೋಸ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

Madhya Pradesh ಹುಲಿ ಮೀಸಲು ಅರಣ್ಯದಲ್ಲಿ ಹತ್ತು ಆನೆಗಳ ನಿಗೂಢ ಸಾವು.ತನಿಖೆಗೆ ಕ್ರಮ

0

Madhya Pradesh ಮಧ್ಯ ಪ್ರದೇಶದ ಬಂಧವ್‌ಗಢ್ ಹುಲಿ ಮೀಸಲು ಅರಣ್ಯ ಪ್ರದೇಶದಲ್ಲಿ ಒಂದೇ ವಾರದಲ್ಲಿ 10 ಆನೆಗಳು ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದು, ರಾಜ್ಯ ಹಾಗು ಕೇಂದ್ರ ಸರ್ಕಾರ ತನಿಖೆಗೆ ಕ್ರಮ ಕೈಗೊಂಡಿದೆ.
ನಾಲ್ಕು ಆನೆಗಳು ಬಂಧವ್‌ಗಢ್ ಹುಲಿ ರಕ್ಷಿತಾರಣ್ಯದ ಕಿತೋಲಿ ವಲಯದ ಸಂಖನಿ ಮತ್ತು ಬಕೇಲಿ ಎಂಬಲ್ಲಿ ಅಕ್ಟೋಬರ್ 29ರಂದು ಸಾವನ್ನಪ್ಪಿದರೆ, ಇನ್ನುಳಿದ ನಾಲ್ಕು ಆನೆಗಳು ಅಕ್ಟೋಬರ್ 30ರಂದು ಹಾಗು ಉಳಿದ 2 ಆನೆಗಳು ಮರುದಿನ ಅಸುನೀಗಿವೆ.
ಆನೆಗಳಿಗೆ ವಿಷಪ್ರಾಶನ?: ಮಧ್ಯ ಪ್ರದೇಶ ಅರಣ್ಯ ಇಲಾಖೆ ಅಧಿಕಾರಿಗಳ ಪ್ರಾಥಮಿಕ ವರದಿಗಳು, ವಿಷ ಪ್ರಾಶನದಿಂದ ಆನೆಗಳು ಸಾವನ್ನಪ್ಪಿರುವ ಸಾಧ್ಯತೆಯ ಕುರಿತು ತಿಳಿಸಿವೆ.
ವನ್ಯಜೀವಿಗಳ ಮೇಲಿನ ಅಪರಾಧಗಳ ನಿಯಂತ್ರಣ ಬ್ಯೂರೋ (WCCB) ತನಿಖೆಗೆ ತಂಡ ರಚಿಸಿದೆ ಎಂದು ಕೇಂದ್ರ ಪರಿಸರ ಸಚಿವಾಲಯ ತನ್ನ ಹೇಳಿಕೆ ಬಿಡುಗಡೆ ಮಾಡಿದೆ.
Madhya Pradesh ಮಧ್ಯ ಪ್ರದೇಶ ಸರ್ಕಾರ ಕೂಡಾ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ವನ್ಯಜೀವಿ ವಿಭಾಗ) ಇವರ ನೇತೃತ್ವದಲ್ಲಿ ಐವರ ಸಮಿತಿ ರಚಿಸಿ ಘಟನೆಗೆ ಕಾರಣ ತಿಳಿಯಲು ನಿರ್ಧರಿಸಿದೆ.
ಇದರ ನಡುವೆ ರಾಜ್ಯ ಟೈಗರ್ ಸ್ಟೈಕ್ ಫೋರ್ಸ್‌ (STSF) ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಮಾಡುತ್ತಿದೆ. ಆನೆಗಳು ಸಾವನ್ನಪ್ಪಿದ ಅರಣ್ಯ ಪ್ರದೇಶ ಮತ್ತು ಸಮೀಪದ ಗ್ರಾಮಗಳಲ್ಲಿ ಎಸ್‌ಟಿಎಸ್ಎಫ್ ಮಾಹಿತಿ ಸಂಗ್ರಹಿಸುತ್ತಿದೆ ಎಂದು ಹೇಳಿಕೆಯಲ್ಲಿ ಮಾಹಿತಿ ನೀಡಿದೆ.
ರಾಜ್ಯ ವನ್ಯಜೀವಿ ಅಧಿಕಾರಿಗಳ ಪ್ರಕಾರ, ವಿಸ್ತೃತ ಮರಣೋತ್ತರ ವರದಿ, ಪೂರಕ ಸಾಕ್ಷ್ಯಾಧಾರಗಳಿಂದ ಕೂಡಿದ ಆಳವಾದ ತನಿಖೆಯ ನಂತರವಷ್ಟೇ ಆನೆಗಳ ಸಾವಿಗೆ ನಿಖರ ಕಾರಣ ತಿಳಿಯಲಿದೆ.
ಇಂಥ ಘಟನೆಗಳು ಮರುಕಳುಹಿಸುವುದನ್ನು ತಡೆಗಟ್ಟಲು ಮುನ್ನೆಚ್ಚರಿಕಾ ಕ್ರಮವಾಗಿ ಬಂಧವ್‌ಗಢ್ ಹುಲಿ ರಕ್ಷಿತಾರಣ್ಯದ ಸುತ್ತಮುತ್ತಲ ಪ್ರದೇಶಗಳಲ್ಲಿ ಆನೆಗಳ ಹಿಂಡಿನ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ತೀವ್ರ ನಿಗಾ ಇಟ್ಟಿದ್ದಾರೆ.

CM Siddaramaiah ಕರ್ನಾಟಕಕ್ಕೆ ಕೇಂದ್ರದಿಂದ ನ್ಯಾಯಯುತ ತೆರಿಗೆ ಪಾಲು ದೊರೆತಿಲ್ಲ- ಸಿದ್ದರಾಮಯ್ಯ

0

CM Siddaramaiah ತೆರಿಗೆ ಪಾಲು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಸಮಸ್ಯೆ ಸರಿಪಡಿಸಿ ಎಂದರೂ ನ್ಯಾಯ ದೊರೆತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಶಾಲಾ ಶಿಕ್ಷಣ ಇಲಾಖೆ ಬೆಂಗಳೂರಿನ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನಡೆಸಿ ಅವರು ಮಾತನಾಡಿದರು.
15ನೇ ಹಣಕಾಸು ಆಯೋಗ ರಾಜ್ಯಕ್ಕೆ ಅನ್ಯಾಯ ಮಾಡಿದೆ. ಅದನ್ನು ಸರಿಪಡಿಸಿ ಎಂದು ಹಲವು ಬಾರಿ ಕೇಳಿಕೊಂಡರೂ ನ್ಯಾಯ ದೊರೆತಿಲ್ಲ. ನ್ಯಾಯಯುತವಾದ ಪಾಲನ್ನು ಕೊಡಿ ಎಂದು ಕೇಳುವ ಶಕ್ತಿ ಬೆಳೆಸಿಕೊಂಡಾಗ ಮಾತ್ರ, ಇದೆಲ್ಲಾ ಪರಿಹಾರವಾಗುತ್ತದೆ. ರಾಜ್ಯದಿಂದ ಸಂಸತ್‌ಗೆ ಆಯ್ಕೆಯಾದವರು ಈ ಅನ್ಯಾಯದ ವಿರುದ್ದ ಧ್ವನಿ ಎತ್ತಬೇಕು ಎಂದರು.
CM Siddaramaiah ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ಅದನ್ನುಒಪ್ಪಿಕೊಂಡಿದ್ದೇವೆ. ಸಂವಿಧಾನವನ್ನೂ ಒಪ್ಪಿಕೊಂಡಿದ್ದೇವೆ. ಹಾಗೆಂದು ನಮಗೆ ಅನ್ಯಾಯವಾದಾಗ ಅದನ್ನು ಎದರಿಸದೆ ಇರಲಾಗದು. ನಮ್ಮ ಹಕ್ಕುಗಳ ರಕ್ಷಣೆಗಾಗಿ ಹೋರಾಟ ಮಾಡಲೇಬೇಕು. ಕರ್ನಾಟಕಕ್ಕೆ ದೊರೆಯಬೇಕಾದ ತೆರಿಗೆ ಪಾಲನ್ನು ಕೇಳಿದರೆ, ಅದಕ್ಕೆ ರಾಜಕೀಯ ಬೆರೆಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ನಾವು 4 ಲಕ್ಷ ಕೋಟಿಗೂ ಹೆಚ್ಚು ತೆರಿಗೆ ಕೊಟ್ಟರೂ ಪಡೆಯುತ್ತಿರುವುದು ಕೇವಲ 50-60 ಸಾವಿರ ಕೋಟಿ ಮಾತ್ರ. ಅಂದರೆ, 1ರೂ.ಗೆ 14-15 ಪೈಸೆ ಮಾತ್ರ ನಮಗೆ ವಾಪಸ್ ಬರುತ್ತಿದೆ. ನಾವು ಮುಂದುವರೆದ ರಾಜ್ಯ ಎಂದು ತೆರಿಗೆ ಪಾಲಿನಲ್ಲಿ ಅನ್ಯಾಯ ಮಾಡುತ್ತಿದ್ದಾರೆ ಎಂದರು.

Kannada Rajyotsava 2024 ರಾಜ್ಯೋತ್ಸವ ಶಾಲಾಕಾಲೇಜುಗಳಿಗೆ ಸೀಮಿತವಾಗದೇ ಒಟ್ಟು ಕನ್ನಡಿಗರ ಹಬ್ಬವಾಗಲಿ- ಡಾ.ಹಾ.ಮ.ನಾಗಾರ್ಜುನ

0

Kannada Rajyotsava 2024 ನುಡಿ ಮನೆ ಕನ್ನಡ ಸಂಘ, ಶಿ. ವೈ.ವಿ.ಸಂ. ಶಿವಮೊಗ್ಗ.೬೯ನೇ ಕನ್ನಡ ರಾಜ್ಯೋತ್ಸವ” ಶಿವಮೊಗ್ಗದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕನ್ನಡ ನುಡಿ ಮನೆ ಯಲ್ಲಿ ,”ಕನ್ನಡ ನಾಡು ನುಡಿಯ ಅನನ್ಯತೆ” ಕುರಿತು ಕನ್ನಡ ಕೇವಲ ಭಾಷಾವಾಚಿಕವಾಗದೆ ಇದೊಂದು ಅಖಂಡವಾದ ಕನ್ನಡದ ಅಸ್ಮಿತೆಯ ಸಂಭ್ರಮವಾಗಿದ್ದು ಶಾಲಾ ಕಾಲೇಜುಗಳಿಗೆ ಅಷ್ಟೇ ಸೀಮಿತವಾಗದೆ ಇದು ಒಟ್ಟು ಕನ್ನಡಿಗರ ಮನ ಮನೆಯ ಹಬ್ಬವಾಗಬೇಕಿದೆ ಈ ದೃಷ್ಠಿಯಿಂದ ಸಿಮ್ಸ್ ಶಿವಮೊಗ್ಗ ಹಮ್ಮಿಕೊಂಡಿರುವ ಕನ್ನಡದ ಈ ಸಂಭ್ರಮ ಅನ್ಯಭಾಷಿಗರ, ಅನ್ಯನಾಡಿನವರಲ್ಲಿ ಕನ್ನಡದ ಕಂಪನ್ನು, ಕನ್ನಡಿಗರ ಸಹಿಷ್ಣುತೆಯನ್ನು, ವಿಶ್ವ ಭಾತೃತ್ವವನ್ನು ಹಾಗೂ ಒಟ್ಟು ಕನ್ನಡದ ಆಶಯಗಳನ್ನು ಸರಳವಾಗಿ ಜಾನಪದ ಸಾಹಿತ್ಯದಿಂದ Kannada Rajyotsava 2024 ವಡ್ಡಾರಾಧನೆ,ಕವಿರಾಜಮಾರ್ಗ,ಪಂಪ,ರನ್ನ,ಪೊನ್ನ,ಜನ್ನಾದಿ ಕವಿಗಳ ಕಾವ್ಯಗಳು ಮತ್ತು ಹನ್ನೆರಡನೆ ಶತಮಾನದ ವಚನಸಾಹಿತ್ಯ ನಂತರದ ದಾಸ ಸಾಹಿತ್ಯ,ಹೊಸಗನ್ನಡ ಸಾಹಿತ್ಯದಲ್ಲಿ ಮೂಡಿಬಂದಿರುವ ನಾಡು-ನುಡಿಯನ್ನು ಕಟ್ಟುವಲ್ಲಿ, ನೆಲಮೂಲದ ಆಶಯಗಳನ್ನು ಉಲ್ಲೇಖಿಸುವಲ್ಲಿ ಅವರ ಆದರ್ಶಗಳು ಆ ಮುಲಕ ಅವರ ದಾರ್ಶನಿಕತೆ ಕುರಿತು ಸುದೀರ್ಘವಾಗಿ ಕರಿಯನ್ನು ಕನ್ನಡಿಯಲ್ಲಿ ತೋರಿದಂತೆ ಡಾ ಹಾ ಮ ನಾಗಾರ್ಜನ ಪ್ರಾಧ್ಯಾಪಕರು ಸವಿಕಾಶಿ, ತಮ್ಮ ಉಪನ್ಯಾಸವನ್ನು ಮಾಡಿದರು. ಕಾಲೇಜಿನ ನಿರ್ದೇಶಕರು ಹಾಗೂ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಡಾ ವಿರುಪಾಕ್ಷಪ್ಪ ವಿ ಅವರು ಪ್ರಸ್ತುತ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ವಿಶೇಷ ಜ್ಞಾನವನ್ನು ಬೆಳೆಸುತ್ತದೆ ಎಂದರು, ಅತಿಥಿಗಳ ಪರಿಚಯದೊಂದಿಗೆ ಕರ್ನಾಟಕ ದ ಏಕೀಕರಣ ಕುರಿತು ಜಿಲ್ಲಾ ಮುಖ್ಯ ಶಸ್ತ್ರಚಿಕಿತ್ಸಕರಾದ ಡಾ ಸಿದ್ಧನಾಡಗೌಡ ಪಿ ಮಾತನಾಡಿದರು. ಕಾರ್ಯಕ್ರಮವನ್ನು ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ ರಮೇಶ್ ನಾಯಕ್ ಸಂಘಟಿಸಿದ್ದು, ಸಿಮ್ಸ್ನ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ನಾಡು ನುಡಿ ಗೀತಾ ಗಾಯನ ಮಾಡಿ, ನಿರೂಪಿಸಿದರು.ಸಿಮ್ಸ್ನ ಎಲ್ಲ ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Puneeth Rajkumar ಕರ್ನಾಟಕ‌ ರತ್ನ ಪುನೀತ್ ಮೂರನೇ ಪುಣ್ಯ ಸ್ಮರಣೆ, ಜ್ಯೋತಿ ನಮನ

0

Puneeth rajkumar ಪುನೀತ್ ರಾಜಕುಮಾರ್ ಅವರ 3ನೇ ವರ್ಷದ ಪುಣ್ಯ ಸ್ಮರಣೆ ಪ್ರಯುಕ್ತ ಶಿವಮೊಗ್ಗದ ಗೋಪಿ ವೃತ್ತದಲ್ಲಿ ಸ್ಟೈಲ್ ಡಾನ್ಸ್ ಕ್ರಿವ್ ಶಿವಮೊಗ್ಗ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಜ್ಯೋತಿನಮನ, ಮೌನಾಚರಣೆ ಕಾರ್ಯಕ್ರಮಕ್ಕೆ ಜನಸಾಗರವೇ ಪಾಲ್ಗೊಂಡಿತ್ತು.‌

Puneeth rajkumar ಇದೇ ಸಂದರ್ಭದಲ್ಲಿ ಸ್ಟೈಲ್ ನೃತ್ಯ ಸಂಸ್ಥೆ ವಿದ್ಯಾರ್ಥಿಗಳಿಂದ ನೃತ್ಯನಮನ ಎಲ್ಲರ ಗಮನ ಸೆಳೆಯಿತು. ಈ ಕಾರ್ಯಕ್ರಮಕ್ಕೆ ಶಿವಮೊಗ್ಗ ಸಿನಿಮಾಸ್ ಅಡ್ಡ ,ಅಶ್ವಿನಿ ಮೇಕೋವರ್ ಸ್ಟುಡಿಯೋ ಶಿವಮೊಗ್ಗ, ಕುಟ್ಟಿ ಸಿನಿಮಾ, ಮಹೇಶ್ ಆಟ್ಸ್,ರಘು ಫಿಟಿಂಗ್ಸ್, ಎಸ್ ಬಿ ಎಸ್ ಸೌಂಡ್ಸ್, ತುಂಗಾತರಂಗ ಮತ್ತು ಸತ್ಯಸಂಗತಿ ದಿನಪತ್ರಿಕೆ ಸಾಥ್ ನೀಡಿತ್ತು.

Karnataka Pradesh Congress Committee ಕೋಮು ಗಲಭೆ ಪ್ರಚೋದನರ ಭಾಷಣ. ಯತ್ನಾಳ್, ಸಿ.ಟಿ.ರವಿ & ‌ಸೂಲಿಬೆಲೆ ವಿರುದ್ಧ ಕ್ರಮ ಕೈಗೊಳ್ಳಲು ದೂರು

0

Karnataka Pradesh Congress Committee ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯಾಧ್ಯಕ್ಷರು ಹಾಗೂ ವಿಧಾನಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ್ ರವರ ನಿರ್ದೇಶನದಂತೆ ಶಿವಮೊಗ್ಗ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಮುಜಮ್ಮಿಲ್ ಪಾಷ ಮತ್ತು ಸಮಿತಿಯ ವತಿಯಿಂದ ಇತ್ತೀಚೆಗೆ ಬಿಜಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರುಗಳಾದ ಸಿ ಟಿ ರವಿ, ಬಸವನಗೌಡ ಪಾಟೀಲ್ ಯತ್ನಾಳ್ ಮತ್ತು ಚಕ್ರವರ್ತಿ ಸೂಲಿಬೆಲೆ ಇವರು ಭಾಷಣ ಮಾಡುವಾಗ ಮುಸ್ಲಿಂ ಸಮುದಾಯವನ್ನು ಗುರಿಯಾಗಿಟ್ಟು ಸಮುದಾಯವನ್ನು ಅವಮಾನಿಸುವ ರೀತಿಯಲ್ಲಿ ಮತ್ತು ಕೋಮು ಗಲಭೆ ಪ್ರಚೋದನೆ ನೀಡುವ ಸಂವಿಧಾನ ವಿರೋಧಿ ಭಾಷಣವನ್ನು ಮಾಡಿ ರಾಜ್ಯದಲ್ಲಿ ಅಶಾಂತಿಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿರುವುದನ್ನು ಖಂಡಿಸಿ ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ ಇವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ದೂರನ್ನು ನೀಡಲಾಯಿತು.

Karnataka Pradesh Congress Committee ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಮುಖಂಡರಾದ ಸುಹೈಲ್ ಅಹಮದ್, ನೂರ್ ಹುಸೇನ್, ರಹಮತ್, ಇಜ್ಜು, ಅದ್ದು, ಶಬ್ಬೀರ್ ಉಪಸ್ಥಿತರಿದ್ದರು.

Rotary Shivamogga ಅತಿ ಹೆಚ್ಚು ಜ್ಞಾನಪೀಠ ಪುರಸ್ಕೃತ ಸಮೃದ್ಧ ಕನ್ನಡ ಭಾಷೆ- ರೊ.ಚಂದ್ರಶೇಖರಯ್ಯ

0

Rotary Shivamogga ರೋಟರಿ ಶಿವಮೊಗ್ಗ ಪೂರ್ವ ಆಂಗ್ಲ ಪ್ರೌಢ ಶಾಲೆಯಲ್ಲಿ ಧ್ವಜವನ್ನು ಅರಳಿಸುವುದರ ಜೊತೆಗೆ ತಾಯಿ ಭುವನೇಶ್ವರಿಗೆ ದೀಪ ಹಚ್ಚಿ ಪೂಜೆ ಮಾಡಿದ ನಂತರ ಕನ್ನಡ ರಾಜ್ಯೋತ್ಸವದ ಸಭಾ ಕಾರ್ಯಕ್ರಮವನ್ನು ನಿರ್ವಹಣೆ ಮಾಡಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಶಿವಮೊಗ್ಗ ಪೂರ್ವ ಎಜುಕೇಷನಲ್ ಮತ್ತು ಛಾರಿಟಬಲ್ ಟ್ರಸ್ಟ್ (ರಿ.,)ನ ಮ್ಯಾನೇಜಿಂಗ್ ಟ್ರಸ್ಟಿ ರೊ. ಚಂದ್ರಶೇಖರಯ್ಯ ಎಂ., ಇವರು ವಹಿಸಿದ್ದು, ಹಿಂದಿ ಭಾಷೆಯನ್ನು ಹೊರತುಪಡಿಸಿದರೆ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು (೮) ಪಡೆದ ಭಾಷೆಯೆಂದರೆ ಕನ್ನಡ ಎನ್ನುತ್ತ, ಕವಿಪುಂಗವ, ರಸಋಷಿ ಕುವೆಂಪುರವರಿಂದ ಪ್ರಾರಂಭವಾದ ಈ ಪ್ರಶಸ್ತಿ ಪ್ರಸಿದ್ಧ ನಾಟಕಕಾರ ಡಾ. ಚಂದ್ರಶೇಖರ ಕಂಬಾರ ವರೆಗೆ ತಲುಪಿರುವುದು ಅತ್ಯಂತ ಸ್ತುತ್ಯಾರ್ಹ ಸಂಗತಿ ಎಂದರು.

ಜರ್ಮನ್ ಭಾಷೆಯು ಇಂದು ಪರಿಪುಷ್ಟವಾಗಿ ಬೆಳೆದು ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ವಿಜ್ಞಾನಗಳನ್ನು ತಮ್ಮ ಭಾಷೆಯಲ್ಲಿ ಬೋಧಿಸುವಷ್ಟು ಸಮರ್ಥವಾಗಿರುವಾಗ ಕನ್ನಡ ಭಾಷೆಯು ಇನ್ನು ಪರಿಪುಷ್ಟವಾಗಿ ಹಾಗೂ ಶ್ರೀಮಂತವಾಗಿ ಬೆಳೆಸಿದಲ್ಲಿ, ವೈಜ್ಞಾನಿಕ ವಿಷಯಗಳನ್ನೂ ಪರಿಣಾಮಕಾರಿಯಾಗಿ ಬೋಧಿಸಲು ಸಮರ್ಥವಾಗುತ್ತದೆ.

ಹಾಗೆ ಮಾಡಲು ಕನ್ನಡದವರು ತಮ್ಮ ಮಡಿವಂತಿಕೆಯನ್ನು ಬಿಟ್ಟು ಕನ್ನಡದ ಜಾಯಮಾನಕ್ಕೆ ಒಗ್ಗುವ ಪದಗಳನ್ನು ಆಂಗ್ಲ ಹಾಗೂ ಇತರ ಭಾಷೆಗಳಿಂದ ಆಮದು ಮಾಡಿಕೊಂಡು ಅವುಗಳನ್ನು ತನ್ನದಾಗಿಸಕೊಳ್ಳಬೇಕು ಎಂದರು.ಧ್ವಜ ಅರಳಿಸಿ ತಾಯಿ ಭುವನೇಶ್ವರಿಯ ಪೂಜೆ ನೆರವೇರಿಸಿದ ರೋಟರಿ ಶಿವಮೊಗ್ಗ ಪೂರ್ವದ ಅಧ್ಯಕ್ಷರಾದ ರೊ. ಅರುಣ್ ದೀಕ್ಷಿತ್ ಅವರು ನಮ್ಮ ಭಾವನೆಗಳನ್ನು ಪರಿಣಾಮಕಾರಿಯಾಗಿ ಇತರರಿಗೆ ಅಭಿವ್ಯಕ್ತಿ ಗೊಳಿಸಲು ಮಾತೃಭಾಷೆ ಅತ್ಯಂತ ಸೂಕ್ತವಾದ ಮಾಧ್ಯಮ ಎಂದು ಅಭಿಪ್ರಾಯ ಪಟ್ಟರು.

Rotary Shivamogga ಟ್ರಸ್ಟ್ನ ಕಾರ್ಯದರ್ಶಿ ರೊ. ರಾಮಚಂದ್ರ ಎಸ್.ಸಿ. ಅವರು ಮಾತನಾಡುತ್ತಾ, ಹರಿದು ಹಂಚಿಹೋಗಿದ್ದ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಗ್ಗೂಡಿಸಿ, ವಿಶಾಲ ಮೈಸೂರನ್ನಾಗಿ ಪರಿವರ್ತಿಸುವಲ್ಲಿ ಆಲೂರು ವೆಂಕಟರಾಯರು, ಹುಯಿಲಗೊಳ ನಾರಾಯಣರಾಯರು ಮತ್ತೀತ್ತರ ಕನ್ನಡದ ಕಟ್ಟಾಳುಗಳು ಪಟ್ಟ ಪರಿಶ್ರಮವನ್ನು ನೆನಪಿಸುತ್ತಾ ನಾವು ಎಲ್ಲೆ ಇರಲಿ, ಹೇಗೆ ಇರಲಿ ಕನ್ನಡ ನಮ್ಮ ಉಸಿರಾಗಿರಬೇಕು ಎಂದು ಕರೆ ಕೊಟ್ಟರು.

ಸಹ ಶಿಕ್ಷಕಿ ಶ್ರೀಮತಿ ಕಾವ್ಯ ಇವರ ಪ್ರಾಸ್ತಾವಿಕ ನುಡಿಯಿಂದ ಪ್ರಾರಂಭವಾದ ಕಾರ್ಯಕ್ರಮದಲ್ಲಿ ರೋಟರಿ ಶಿವಮೊಗ್ಗ ಪೂರ್ವದ ಕಾರ್ಯದರ್ಶಿ ರೊ. ಶಶಿಕಾಂತ್ ನಾಡಿಗ್, ಟ್ರಸ್ಟ್ನ ಉಪಾಧ್ಯಕ್ಷರಾದ ರೊ. ಡಾ|| ಪರಮೇಶ್ವರ್ ಡಿ. ಶಿಗ್ಗಾಂವ್, ಇವರು ಸಭೆಯನ್ನು ಉದ್ದೇಶಿಸಿ ಈ ಹಬ್ಬದ ಮಹತ್ವವನ್ನು ಕುರಿತು ಮಾತನಾಡಿದರು. ವೇದಿಕೆಯಲ್ಲಿ ಟ್ರಸ್ಟ್ನ ಖಜಾಂಚಿ ರೊ. ವಿಜಯ್ ಕುಮಾರ್, ಟ್ರಸ್ಟ್ನ ಜಂಟಿ ಕಾರ್ಯದರ್ಶಿ ರೊ. ನಾಗವೇಣಿ ಎಸ್.ಆರ್., , ವಿಶೇಷ ಆಹ್ವಾನಿತರಾದ ರೊ. ಮಂಜುನಾಥ್ ಎನ್.ಬಿ., ಪ್ರಾಂಶುಪಾಲರಾದ ಶ್ರೀಯುತ ಸೂರ್ಯನಾರಾಯಣನ್ ಆರ್., ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು. ಸಹ ಶಿಕ್ಷಕಿ ಶ್ರೀಮತಿ ಪ್ರತಿಮಾ ಇವರ ಸ್ವಾಗತದೊಂದಿಗೆ ಪ್ರಾರಂಭವಾದ ಕಾರ್ಯಕ್ರಮವು ಶ್ರೀಮತಿ ಹರ್ಷಿತಾ ಇವರ ವಂದನಾರ್ಪಣೆಯೊಂದಿಗೆ ಮುಕ್ತಾಯವಾಯಿತು.

ಸಹ ಶಿಕ್ಷಕಿ ಸುಪ್ರಿತಾ ಮೋಹನ್ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಸಭೆಯ ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಲಾಯಿತು.

Kannada Rajyotsava ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ರಾಜಧಾನಿಯಲ್ಲಿ ರಾಜ್ಯೋತ್ಸವ- ಭುವನೇಶ್ವರಿಗೆ ಪುಷ್ಪಾರ್ಚನೆ

0

Kannada Rajyotsava ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಶ್ರೀ ಎಸ್. ಮಧು ಬಂಗಾರಪ್ಪ ಅವರು 69ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ, ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರೊಂದಿಗೆ ಶ್ರೀ ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಸಲ್ಲಿಸಿದರು. ನಂತರ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ, ರಾಜ್ಯೋತ್ಸವ ಸಂದೇಶ ನೀಡಿದರು.

ಯತ್ನಾಳ್ ಬಂಡಾಯದ ಬಾವುಟ. ವಿಜೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ! ಹೇಳಿಕೆ

0

ರಾಜ್ಯದಲ್ಲಿ ಬಿಜೆಪಿ ಉಳಿಸಬೇಕೆಂದರೆ ಕೇಂದ್ರದವರು ಬಿ. ವೈ. ವಿಜಯೇಂದ್ರನನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆಯಬೇಕು. ಅಲ್ಲದೇ, ಬಿ. ಎಸ್. ಯಡಿಯೂರಪ್ಪ ಅವರನ್ನು ಯಾವುದೇ ವೇದಿಕೆಯಲ್ಲಿ ಕೂಡಿಸಬಾರದು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ವಪಕ್ಷದವರ ವಿರುದ್ಧವೇ ತಿರುಗಿ ಬಿದ್ದಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ವಿಜಯೇಂದ್ರನನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆದು ಯಡಿಯೂರಪ್ಪ ಅವರನ್ನು ಯಾವುದೇ ವೇದಿಕೆಯಲ್ಲಿ ಕೂಡಿಸದಿದ್ದಾಗ ಮಾತ್ರ ರಾಜ್ಯದಲ್ಲಿ ಬಿಜೆಪಿ ಉಳಿಯುತ್ತದೆ ಎಂದು ಹೇಳಿದರು.

ಸ್ಟಾರ್ ಪ್ರಚಾಕರ ಪಟ್ಟಿ ವಿಚಾರರಾಜ್ಯದ ಮೂರು ವಿಧಾನಸಭೆ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಯತ್ನಾಳ್ ಮತ್ತು ಶಾಸಕ ರಮೇಶ ಜಾರಕಿಹೊಳಿ ಹೆಸರು ಕೈಬಿಟ್ಟಿರುವ ಕುರಿತು ಖಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ವಿಜಯೇಂದ್ರ ನಮ್ಮನ್ನು ಸ್ಟಾರ್ ಮಾಡುತ್ತಾನಾ? ಎಂದು ಪ್ರಶ್ನಿಸಿದರು.

ನಮ್ಮನ್ನು ಜನರು ಸ್ಟಾರ್ ಮಾಡುತ್ತಾರೆ. ವಿಜಯೇಂದ್ರನ ಭಾಷಣಕ್ಕೆ ಯಾರೂ ಕೂಡುತ್ತಿಲ್ಲ. ಅಪ್ಪ ಮತ್ತು ಮಗ ಇಬ್ಬರೇ ಕುಳಿತು ಭಾಷಣ ಹೊಡೆಯಬೇಕಾಗಿದೆ. ಅವರದ್ದು ಮುಗಿದಿದೆ.

ವಿಜಯೇಂದ್ರನ ಕೇಳಿ ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ ಸ್ಟಾರ್ ಪ್ರಚಾರ ಆಗಬೇಕೆಂಬುವಅವಶ್ಯಕತೆ ಇಲ್ಲ ಎಂದರು.
ರಾಜ್ಯದ ಜನ ನಮ್ಮನ್ನು ಒಪ್ಪಿಕೊಂಡಿದ್ದಾರೆ. ಜನರೇ ನಮ್ಮನ್ನು ಸ್ಟಾರ್ ಮಾಡಿದ್ದಾರೆ. ಈಗಾಗಲೇ ವಿಜಯೇಂದ್ರ ಜೀರೋ ಆಗಿದ್ದಾನೆ. ಸುಮ್ಮನೆ ಬಡೆದಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಬಿಜೆಪಿ ಕರ್ನಾಟಕ ಎಕ್ಸ್ಖ್ ಖಾತೆ ಹೆಸರು ಬದಲಾಯಿಸಲಿ ವಿಜಯೇಂದ್ರ ಮತ್ತು ಅವರ ಅಪ್ಪ ಅಧಿಕಾರದಲ್ಲಿದ್ದಾಗ ಸಾವಿರಾರು ಕೋಟಿ ರೂಪಾಯಿ ಹಣ ತಿಂದಿದ್ದಾರೆ. ಹಣ ಖರ್ಚು ಮಾಡಿ ಮಾಡಿ ಹೀರೋ ಆಗಬೇಕೆನ್ನುತ್ತಿದ್ದಾರೆ. ಬಿಜೆಪಿ ಕರ್ನಾಟಕ ಎಕ್ಸ್ ಇದೆಯಲ್ಲ ಅದನ್ನ ಬಿವೈವಿ ಕರ್ನಾಟಕ ಮಾಡುವುದು ಒಳ್ಳೆಯದು. ಅದರಲ್ಲಿ ವಿಜಯೇಂದ್ರನ ಗುಣಗಾನ ಮಾಡುವುದನ್ನು ಬಿಟ್ಟರೆ ಏನೂ ಇರಲ್ಲ. ಮೂರೂ ಕ್ಷೇತ್ರಗಳ ಉಪಚುನಾವಣೆಯಲ್ಲಿ ಅಭ್ಯರ್ಥಿಗಳಿಗೆ ಹಿಂದುಗಳ ಮತ ಬೇಕಾದರೆ ನಮ್ಮನ್ನು ಕರೆಯಲಿ.
ನಮಗೆ ಸಾಬರು ಮತ ಹಾಕುತ್ತಾರೆ ಎಂದು ತಿಳಿದುಕೊಂಡಿದ್ದರೆ ಕರೆಯಬೇಡಿ ಎಂದು ಅವರು ಹೇಳಿದರು. ವಿಜಯೇಂದ್ರ, ಯತ್ನಾಳ್ ನಡುವೆ ಸಮರ ವಿಚಾರಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಮತ್ತು ತಮ್ಮ ನಡುವೆ ನಡೆಯುತ್ತಿರುವ ಸಮರದ ಕುರಿತು ಹೈಕಮಾಂಡ್ ಯಾಕೆ ಗಮನ ನೀಡುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಹೈಕಮಾಂಡ್ ನನ್ನ ಬಗ್ಗೆ ಮತ್ತು ಬಿ. ವೈ. ವಿಜಯೇಂದ್ರನ ಬಗ್ಗೆ ಮೌನ ವಹಿಸಿದೆ.

ಅವರಿಗೆ ಏನು ಗೊತ್ತಾಗುತ್ತಿಲ್ಲ. ಯತ್ನಾಳನನ್ನು ಹಿಡಿಯಬೇಕು ಅಥವಾ ವಿಜಯೇಂದ್ರನ ಹಿಡಿಯಬೇಕು ಎಂಬ ಗೊಂದಲದಲ್ಲಿದ್ದಾರೆ. ಮಾಧ್ಯಮಗಳು ಯತ್ನಾಳನನ್ನು ಉಚ್ಚಾಟನೆ ಮಾಡಲಾಗುತ್ತದೆ ಎಂದು ಸುದ್ದಿ ಮಾಡುತ್ತವೆ.
ಆರು ವರ್ಷದಿಂದ ಯತ್ನಾಳ ಬಿಜೆಪಿಯಿಂದ ಉಚ್ಚಾಟನೆ ಎಂದು ಸುದ್ದಿ ಮಾಡುತ್ತೀರಿ. ಒಮ್ಮೆಯಾದರೂ ಹೊರಗೆ ಹಾಕಿ ಎಂದು ಅವರು ಕುಟುಕಿದರು.

ವಿಜಯೇಂದ್ರ ಕೆಲವೊಂದು ಸುದ್ದಿ ಮಾಡಿ ಎಂದು ಹೇಳುತ್ತಾನೆ. ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಬೆಳೆಯುತ್ತದೆ ಎಂದು ಸುಳ್ಳು ಸುದ್ದಿ ಮಾಡುತ್ತಾರೆ. ನನ್ನ ವಿರುದ್ಧ ಕ್ರಮಕ್ಕಾಗಿ ವಿಜಯೇಂದ್ರ ಮತ್ತು ಅವರ ಅಪ್ಪ ದಿನಾಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಬಳಿ ವಿಜಯೇಂದ್ರನನ್ನು ಮುಖ್ಯಮಂತ್ರಿ ಅಭ್ಯರ್ಥಿಯೆಂದು ಘೋಷಣೆ ಮಾಡಿ ಎಂದು ಕೂಡುತ್ತಾರೆ ಎಂದು ಅವರು ಹೇಳಿದರು.

ಯತ್ನಾಳ್‌ಗೆ ಸೂಕ್ತ ಸ್ಥಾನಮಾನ ವಿಚಾರಯತ್ನಾಳ್‌ಗೆ ಸೂಕ್ತ ಸ್ಥಾನಮಾನ ಮಾಡಿಕೊಡಲಾಗುತ್ತದೆ ಎಂದು ವಿಜಯೇಂದ್ರ ಹೇಳಿಕೆ ವಿಚಾರ ಕುರಿತು ಖಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಾನು ವಿಜಯೇಂದ್ರ ಬಳಿ ಸ್ಥಾನಮಾನ ತಗೋ ಮಗ ಅಲ್ಲ.
ಯಡಿಯೂರಪ್ಪ ಸಿಎಂ ಇದ್ದಾಗಲೇ ಆತನ ಬಳಿ ಮಂತ್ರಿ ಆಗಲ್ಲ ಎಂದು ಹೇಳಿದ್ದೇನೆ. ನಾನು ವಾಜಪೇಯಿ ಅವರ ಸರಕಾರದಲ್ಲಿ ಮಂತ್ರಿ ಆಗಿದ್ದೇನೆ. ನಿನ್ನಂತ ಭ್ರಷ್ಟ ಸಿಎಂ ಬಳಿ ನಾನು ಸಚಿವನಾಗಲ್ಲ ಎಂದು ಯಡಿಯೂರಪ್ಪಗೆ ಹೇಳಿದ್ದೆ. ವಿಜಯಪುರ ಜಿಲ್ಲೆಗೆ ವಿಜಯೇಂದ್ರ ಮತ್ತು ಯಡಿಯೂರಪ್ಪ ಬಹಳ ಅನ್ಯಾಯ ಮಾಡಿದ್ದಾರೆ. ಈ ಹಿಂದೆ ರೂ. 125 ಕೋಟಿ ಅನುದಾನ ಬಂದಿದ್ದನ್ನು ಕಡಿತ ಮಾಡಿದ್ದರು. ನಮ್ಮ ಜಿಲ್ಲೆಗೆ ಸಚಿವ ಸ್ಥಾನ ಕೊಡಲಿಲ್ಲ. ಅಪ್ಪ ಮಕ್ಕಳು ಇನ್ನೂ ಏನೇನೋ ಮಾಡಬೇಕೆನ್ನುತ್ತಾರೆ. ನಮ್ಮ ಜಿಲ್ಲೆಗೆ ಅವಮಾನ ಮಾಡಿದರು ಎಂದು ಯತ್ನಾಳ ವಾಗ್ದಾಳಿ ನಡೆಸಿದರು.