Thursday, March 26, 2026
Thursday, March 26, 2026
Home Blog Page 511

Basavaraj Bommai On Waqf Land ವಿಡಿಯೋದಲ್ಲಿನ ನನ್ನ ಹೇಳಿಕೆ ತಿರುಚಲಾಗಿದೆ- ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

Basavaraj Bommai On Waqf Land ಮಾನ್ಯ ವಕ್ಪ್ ಸಚಿವರಾದ‌ ಜಮೀರ್ ಅವರು ನಾನು ವಕ್ಪ್ ಬೋರ್ಡ್ ಸಮಾರಂಭದಲ್ಲಿ ಮಾತನಾಡಿರುವ ಹಳೆಯ ವಿಡಿಯೊ ಹರಿಬಿಟ್ಟು ಅಪಪ್ರಚಾರ ಮಾಡುತ್ತಿದ್ದಾರೆ.

ನಾನು ಯಾವುದೇ ವಕ್ಪ್ ಬೋರ್ಡ್ ಸಭೆ ಮಾಡಿಲ್ಲ. ವಕ್ಪ್ ಬೋರ್ಡ್ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಅನ್ವರ್ ಮಾನಿಪ್ಪಾಡಿ ವರದಿಯಲ್ಲಿರುವಂತೆ ವಕ್ಪ್ ಆಸ್ತಿ ಕಬಳಿಸಿರುವ ಕರ್ನಾಟಕದ ಕಾಂಗ್ರೆಸ್ ನಾಯಕರಿಂದ ವಕ್ಪ್ ಆಸ್ತಿ ವಶಪಡಿಸಿಕೊಳ್ಳಬೇಕೆಂದು ಹೇಳಿರುವುದನ್ನು ತಿರುಚಿದ್ದಾರೆ. ಆ ಸಂದರ್ಭದಲ್ಲಿ ರೈತರ ಜಮೀನಿಗೆ ನೊಟೀಸ್ ಕೊಡುವುದಾಗಲಿ, ಪಹಣಿ ತಿದ್ದುಪಡಿ ಮಾಡುವುದಾಗಲಿ ಯಾವೂದೂ ವಿಷಯ ನಮ್ಮ ಮುಂದೆ ಪ್ರಸ್ತಾಪವಾಗಿರಲಿಲ್ಲ.

ನಾನು ಅಂದು ಹೇಳಿರುವುದು ಅನ್ವರ್ ಮಾನಿಪ್ಪಾಡಿ ಅವರ ಸಮಿತಿ ವರದಿ ನೀಡಿರುವಂತೆ ಕಾಂಗ್ರೆಸ್ ನ್ ಕೆಲವು ದೊಡ್ಡ ನಾಯಕರು ಮೋಸದಿಂದ ಎಷ್ಡೆಷ್ಟು ವಕ್ಪ್ ಆಸ್ತಿ ನುಂಗಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು.

Basavaraj Bommai On Waqf Land ನಾವು ರೈತರಿಗೆ ಯಾವುದೇ ನೊಟಿಸ್ ಕೊಟ್ಟಿಲ್ಲ ರೈತರ ಜಮೀನು ವಶ ಪಡೆದುಕೊಂಡಿಲ್ಲ. ಸಚಿವ ಜಮೀರ್ ಅವರು ರೈತರಿಗೆ ನೋಟಿಸ್ ಕೊಡುವ ಮೊದಲು ಕಾಂಗ್ರೆಸ್ ನಾಯಕರು ಎಲ್ಲೆಲ್ಲಿ ವಕ್ಪ್ ಆಸ್ತಿ ಹಡಪ್ ಮಾಡಿದ್ದಾರೆ‌ ಅದನ್ನು ಕೂಡಲೇ ರಿಕವರಿ ಮಾಡಲಿ.

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ರೈತರಿಗೆ ಕೊಟ್ಟಿರುವ ನೋಟಿಸ್ ವಾಪಸ್ ಪಡೆಯುವಂತೆ ಹೇಳಿರುವುದು ಕಣ್ಣೊರೆಸುವ ತಂತ್ರ. ನೋಟಿಸ್ ವಾಪಸ್ ಪಡೆದು ಚುನಾವಣೆ ಮುಗಿದ ನಂತರ ಮತ್ತೆ ನೋಟೀಸ್ ಕೊಡುವುದಿಲ್ಲ ಅನ್ನುವುದು ಏನು ಗ್ಯಾರೆಂಟಿ. ಮುಖ್ಯಮಂತ್ರಿಗಳಿಗೆ ರೈತರ ಬಗ್ಗೆ ನಿಜವಾಗಲೂ ಕಾಳಜಿ, ಗೌರವ ಇದ್ದರೆ, ರೈತರ ಆಸ್ತಿ ಉಳಿಸಬೇಕೆಂಬ ಮನಸ್ಸಿದ್ದರೆ ಕೂಡಲೆ ವಕ್ಪ್ ಗೆಜೆಟ್ ನೊಟಿಫಿಕೇಶ್ ರದ್ದು ಮಾಡಬೇಕು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಕ್ಸ್ ಖಾತೆಯ ಮೂಲಕ ನಿಜಾಂಶ ತಿಳಿಸಿ ಸ್ಪಷ್ಟೀಕರಣ ನೀಡಿದ್ದಾರೆ.

Vagdevi Charitable Trust ಆಸರೆಯ ಬದುಕು ನೀಡುವ ಧ್ಯೇಯದ ವಾಗ್ದೇವಿ ಚಾರಿಟಬಲ್ ಟ್ರಸ್ಸ್

0

Vagdevi Charitable Trust ಆರ್ಥಿಕವಾಗಿ ಹಿಂದುಳಿದ ವಿಕಲಚೇತನರು, ಅನಾಥರು, ವೃದ್ಧರು ಮತ್ತು ಅನಾರೋಗ್ಯ ಪೀಡಿತರಿಗೆ ಸಹಾಯ ಮಾಡುವ ಮೂಲ ಉದ್ದೇಶದೊಂದಿಗೆ 2015 ರಲ್ಲಿ ವಾಗ್ದೇವಿ ಚಾರಿಟಬಲ್ ಟ್ರಸ್ಟ್ ತೀರ್ಥಹಳ್ಳಿಯಲ್ಲಿ ಆರಂಭವಾಯಿತು. ಅಗತ್ಯವಿರುವವರಿಗೆ ವಸತಿ, ಶಿಕ್ಷಣ, ಆರೋಗ್ಯ, ಆಹಾರ… ಹೀಗೆ ಅವಶ್ಯಕತೆಗೆ ತಕ್ಕಂತೆ ಸಹಾಯ ಕಲ್ಪಿಸಲಾಗುತ್ತಿದೆ.
ಟ್ರಸ್ಟಿನ ಇದುವರೆಗಿನ ಸೇವಾ ಕಾರ್ಯಗಳು
ವಾಗ್ದೇವಿ ವಿದ್ಯಾಧಾರ ಯೋಜನೆ: 15 ವಿಕಲಚೇತನ ವಿದ್ಯಾರ್ಥಿಗಳಿಗೆ ವಾರ್ಷಿಕ ರೂ. 1500 ಸಹಾಯಧನ ನೀಡಲಾಗುತ್ತಿದೆ. 15 ವಿಕಲಚೇತನ ಬಡ ವಿದ್ಯಾರ್ಥಿನಿಯರಿಗೆ ಸುಕನ್ಯಾ ಸಮೃದ್ಧಿ ಯೋಜನೆಗೆ ರೂ.1000 ನೀಡಲಾಗಿದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಇ ಪದವಿ ಅಭ್ಯಾಸ ಮಾಡುತ್ತಿರುವ ಅನಾಥ ವಿದ್ಯಾರ್ಥಿಯೊಬ್ಬನಿಗೆ ಲ್ಯಾಪ್‌ಟಾಪ್‌ ನೀಡಲಾಗಿದೆ. ಜೊತೆಗೆ ಪ್ರತಿ ವರ್ಷ ರೂ.5000 ಸಹಾಯ ಧನ ನೀಡಲಾಗುತ್ತಿದೆ. ಇನ್ನೋರ್ವ ಇಂಜಿನಿಯರಿಂಗ್ ವಿದ್ಯಾರ್ಥಿಗೆ ರೂ. 10000 ನೀಡಲಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದ ಇಬ್ಬರು ವಿದ್ಯಾರ್ಥಿನಿಯರ ವಿದ್ಯಾಭ್ಯಾಸದ ಶುಲ್ಕವನ್ನು ಭರಿಸಲಾಗುತ್ತಿದೆ. ಕೆಲವು ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಿಲಾಗಿದೆ. ಅಂಧರ ಕ್ರೀಡಾಕೂಟಕ್ಕೆ ಪ್ರತಿ ವರ್ಷ ರೂ. 5000 ದೇಣಿಗೆ ನೀಡಲಾಗುತ್ತಿದೆ. ಬಡ ವಿದ್ಯಾರ್ಥಿಯೊಬ್ಬನಿಗೆ ಶಾಲಾ ವಾಹನದ ಶುಲ್ಕ ಭರಿಸಲಾಗುತ್ತಿದೆ. ಬಾಲಕನೊಬ್ಬನಿಗೆ ಶಾಲೆಗೆ ಹೋಗಲು ಪ್ರೇರೇಪಣೆ ನೀಡಿ ಸಮವಸ್ತ್ರ ಮತ್ತು ರೈನ್‌ ಕೋಟ್‌ ನೀಡಿದೆ.
ವಾಗ್ದೇವಿ ಆರೋಗ್ಯಧಾರ ಯೋಜನೆ: ಕ್ಯಾನ್ಸರ್ ಪೀಡಿತರು ಹಾಗೂ ಅಪಘಾತದಿಂದ ತೀವ್ರವಾಗಿ ಗಾಯಗೊಂಡವರಿಗೆ ಆರ್ಥಿಕ ನೆರವು ನೀಡಿದೆ. ಈ ಯೋಜನೆಯಡಿ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಆರು ಕಡು ಬಡ ವ್ಯಕ್ತಿಗಳಿಗೆ ಪ್ರತಿ ತಿಂಗಳು ರೂ 1000-3000ವರೆಗೆ ಔಷಧಿ ಖರ್ಚಿಗೆಂದು ನೆರವು ನೀಡಲಾಗುತ್ತಿದೆ. ಅನಾಥ ವೃದ್ಧೆಯೊಬ್ಬರ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ರೂ.20000 ನೀಡಲಾಗಿದೆ. ಆರ್ಥಿಕವಾಗಿ ಹಿಂದುಳಿದ, ಅನಾರೋಗ್ಯಪೀಡಿತ, ಅನಾಥ ವೃದ್ಧರೊಬ್ಬರಿಗೆ ಆಶ್ರಮದ ಖರ್ಚಿನ ಬಾಬ್ತು ರೂ. 5000 ಪ್ರತಿ ತಿಂಗಳು ಭರಿಸಲಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದ ವ್ಯಕ್ತಿಯೊಬ್ಬರಿಗೆ ಡಯಾಲಿಸಿಸ್ಗಾಗಿ ಹೋಗಿ ಬರಲು ವಾಹನದ ಖರ್ಚನ್ನು ಭರಿಸಲಾಗಿದೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯೊಬ್ಬರಿಗೆ ರೂ. 12000 ಮೌಲ್ಯದ ಸರ್ಜಿಕಲ್ ಮಂಚವೊಂದನ್ನು ನೀಡಿದೆ.
ವಾಗ್ದೇವಿ ಆಶ್ರಯಧಾರ ಯೋಜನೆ: ಆರ್ಥಿಕವಾಗಿ ಹಿಂದುಳಿದ ವಿಕಲಚೇತನ ವ್ಯಕ್ತಿಯೊಬ್ಬರಿಗೆ ವಾಸದ ಮನೆಯೊಂದನ್ನು ಕಟ್ಟಿಸಿ ಕೊಡಲಾಗಿದೆ. ಆರ್ಥಿಕವಾಗಿ ಹಿಂದುಳಿದ ವಿಕಲಚೇತನರ ಎರಡು ಕುಟುಂಬಗಳಿಗೆ ಸ್ನಾನ ಗೃಹ ಮತ್ತು ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸೋಲಾರ್ ದೀಪಗಳನ್ನು ಕೊಡುಗೆಯಾಗಿ ಕೊಟ್ಟಿದೆ. ಈ ಯೋಜನೆಯಡಿ ಬಡ ವೃದ್ಧರಿಬ್ಬರಿಗೆ ವಾಸದ ಮನೆಯ ಮೇಲ್ಛಾವಣಿಯ ರಿಪೇರಿಯ ಜೊತೆಗೆ ನೆಲಕ್ಕೆ ಟೈಲ್ಸ್ ಹಾಕಿ ವಾಸಿಸಲು ಯೋಗ್ಯವನ್ನಾಗಿಸಿ ಕೊಡಲಾಗಿದೆ. ಅಂಗವಿಕಲ ಮಹಿಳೆಯೋರ್ವರ ಶಿಥಿಲಗೊಂಡಿದ್ದ ಮನೆಯನ್ನು ನವೀಕರಣ ಮಾಡಲಾಗಿದೆ. ಹಾಗೆಯೇ ಇನ್ನೊಂದು ಬಡ ಕುಟುಂಬಕ್ಕೆ ಮನೆಯ ಗೋಡೆಯ ಮೇಲೆ ಬೀಳುತ್ತಿದ್ದ ಮಳೆ ನೀರನ್ನು ತಡೆಯುವ ಉದ್ದೇಶದಿಂದ ಟಾರ್ಪಲಿನ್ ವ್ಯವಸ್ಥೆ ಮಾಡಲಾಗಿದೆ. ಆಕಸ್ಮಿಕ ಅಗ್ನಿ ಅವಘಡದಿಂದ ಮನೆ ಕಳೆದುಕೊಂಡ ಕುಟುಂಬವೊಂದಕ್ಕೆ ರೂ 10000 ಸಹಾಯ ಧನ ನೀಡಲಾಗಿದೆ.
ವಾಗ್ದೇವಿ ವರ್ಷಾಧಾರ ಯೋಜನೆ: ಈ ಯೋಜನೆಯಡಿಯಲ್ಲಿ ಆರ್ಥಿಕವಾಗಿ ಹಿಂದುಳಿದ 15 ಜನರಿಗೆ ವಾರ್ಷಿಕ ರೂ.6000 ಹಾಗೂ ಮಹಿಳಾ ಅಬಲಾಶ್ರಮವೊಂದಕ್ಕೆ ವಾರ್ಷಿಕ ರೂ.10000 ಸಹಾಯಧನ ನೀಡಲಾಗುತ್ತಿದೆ
Vagdevi Charitable Trust ವಾಗ್ದೇವಿ ಅನ್ನಾಧಾರ ಯೋಜನೆ: ಈ ಯೋಜನೆಯಡಿಯಲ್ಲಿ ಐದು ಕುಟುಂಬಗಳಿಗೆ ಪ್ರತಿ ತಿಂಗಳು ದಿನಸಿ ಸಾಮಗ್ರಿಗಳನ್ನು ನೀಡಲಾಗುತ್ತಿದೆ. ವಿಕಲಚೇತನ ವ್ಯಕ್ತಿಯೊಬ್ಬರಿಗೆ ವ್ಯಾಪಾರದ ಉದ್ದೇಶಕ್ಕೆ ಮೇಜು, ಕುರ್ಚಿ ಮತ್ತು ಮೂಲ ಬಂಡವಾಳ ಕೊಟ್ಟು ಕಾಲುಗಳಿಲ್ಲದ ಆತ ಆತ್ಮವಿಶ್ವಾಸದಿಂದ ಸ್ವಾವಲಂಭಿಯಾಗಿ ಬದುಕು ಕಟ್ಟಿಕೊಳ್ಳಲು ನೆರವು ನೀಡಲಾಗಿದೆ.
ಹೀಗೆ ಅವಶ್ಯಕತೆಯುಳ್ಳ ಆರ್ಥಿಕವಾಗಿ ಹಿಂದುಳಿದ ವಿಕಲಚೇತನರು, ವೃದ್ಧರು ಮತ್ತು ಅನಾಥರಿಗೆ ಅನೇಕ ರೀತಿಯಲ್ಲಿ ನೆರವು ನೀಡುತ್ತಾ, ಅವರಲ್ಲಿ ಆತ್ಮವಿಶ್ವಾಸ ತುಂಬುತ್ತಾ, ಸ್ವತಂತ್ರ ಜೀವನಕ್ಕೆ ಪೂರಕ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಟ್ರಸ್ಟ್ ಕಾರ್ಯೋನ್ಮುಖವಾಗಿದೆ. ಟ್ರಸ್ಟ್ ಸಂಪೂರ್ಣವಾಗಿ ದಾನಿಗಳ ನೆರವಿನಿಂದಲೇ ಕಾರ್ಯನಿರ್ವಹಿಸುತ್ತಿದ್ದು ಟ್ರಸ್ಟ್ಗೆ ನೀಡುವ ದೇಣಿಗೆಗೆ ಆದಾಯ ತೆರಿಗೆ ಸೆಕ್ಷನ್ 80 ಜಿ ಅಡಿಯಲ್ಲಿ ತೆರಿಗೆ ವಿನಾಯಿತಿ ಇದೆ. ವಾಗ್ದೇವಿ ಚಾರಿಟಬಲ್‌ ಟ್ರಸ್ಟ್‌(ರಿ) ತೀರ್ಥಹಳ್ಳಿ ಸಂಪರ್ಕ ಸಂಖ್ಯೆ: 9448745665

Waqf land: Karnataka CM Siddaramaiah orders ವಕ್ಫ್ ವಿವಾದ: ರೈತರಿಗೆ ನೀಡಿರುವ ನೋಟೀಸ್ ಗಳನ್ನು ತಕ್ಷಣ ವಾಪಸ್ ಪಡೆಯಿರಿ- ಸಿದ್ಧರಾಮಯ್ಯ

Waqf land: Karnataka CM Siddaramaiah orders ವಕ್ಫ್‌ ವಿಚಾರದಲ್ಲಿ ರೈತರಿಗೆ ನೀಡಲಾಗಿರುವ ನೋಟಿಸ್‌ಗಳನ್ನು ತಕ್ಷಣದಿಂದಲೇ ವಾಪಸ್‌ ಪಡೆಯಬೇಕು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.

ನೋಟೀಸ್‌ ನೀಡದೆ ಪಹಣಿಯಲ್ಲಿ ಯಾವುದೇ ರೀತಿಯ ತಿದ್ದುಪಡಿಗಳನ್ನು ಮಾಡಿದ್ದರೆ ತಕ್ಷಣ ರದ್ದು ಮಾಡಬೇಕು.
ಇನ್ನು ಮುಂದೆ ರೈತರಿಗೆ ಯಾವುದೇ ರೀತಿಯ ಸಣ್ಣ ತೊಂದರೆಯನ್ನೂ ನೀಡಬಾರದು.

ವಕ್ಫ್‌ ಜಮೀನು ವಿಚಾರದಲ್ಲಿ ಇತ್ತೀಚೆಗೆ ನಡೆದಿರುವ ಬೆಳವಣಿಗೆಗಳಿಂದ ರೈತರಿಗೂ ಬೇಸರವಾಗಿದೆ. ಈ ವಿಚಾರವನ್ನು ಜೆಡಿಎಸ್‌ ಮತ್ತು ಬಿಜೆಪಿ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ. ಈ ಮೂಲಕ ರಾಜ್ಯದಲ್ಲಿ ಶಾಂತಿ ಕದಡುವ ದುಷ್ಟ ಪ್ರಯತ್ನವನ್ನು ಆ ಪಕ್ಷಗಳು ಜಂಟಿಯಾಗಿ ಮಾಡುತ್ತಿವೆ.

Waqf land: Karnataka CM Siddaramaiah orders ಇಂತಹ ಹೀನ ಪ್ರಯತ್ನಗಳಿಗೆ ರಾಜ್ಯದ ಜನರು ಸೊಪ್ಪು ಹಾಕದಂತೆ ಸಾರ್ವಜನಿಕರಲ್ಲೂ ವಿನಂತಿಸುತ್ತೇನೆ. ಜೊತೆಗೆ ಜನರು ಅಪಪ್ರಚಾರಗಳಿಗೆ ಕಿವಿಗೊಡಬಾರದು.
ಅಧಿಕಾರಿಗಳೂ ಈ ಕುರಿತು ಎಚ್ಚರ ವಹಿಸಬೇಕು. ರೈತರಿಗೆ ತೊಂದರೆ ಆಗುವ ಯಾವುದೇ ತೀರ್ಮಾನವನ್ನು ಕೈಗೊಳ್ಳಬಾರದು.

ಸಭೆಯ ಪ್ರಮುಖ ಅಂಶಗಳು:

  • ರೈತರ ಪಹಣಿ ಬದಲಾವಣೆ ಸಂಬಂಧ ಈಗಾಗಲೇ ನೀಡಿರುವ ನೋಟೀಸ್‌ಗಳನ್ನು ತಕ್ಷಣ ವಾಪಸ್‌ ಪಡೆಯಬೇಕು.
  • ರೈತರ ಸ್ವಾಧೀನದಲ್ಲಿರುವ ಜಮೀನುಗಳಿಗೆ ಯಾವುದೇ ರೀತಿಯ ತೊಂದರೆ ನೀಡಬಾರದು.‌
  • ಕಾನೂನು ಬಾಹಿರವಾಗಿ ಹಾಗೂ ನೋಟೀಸ್‌ ನೀಡದೆ ಪಹಣಿಯಲ್ಲಿ ಯಾವುದೇ ರೀತಿಯ ತಿದ್ದುಪಡಿಗಳನ್ನು ಮಾಡಿದ್ದರೆ ತಕ್ಷಣ ರದ್ದು ಮಾಡಬೇಕು.
  • ದಿನಾಂಕ 4-12-24 ರಂದು ಸರ್ಕಾರದ ಸಚಿವರು ಮತ್ತು ಕಂದಾಯ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ವಕ್ಫ್‌ ಮಂಡಳಿಯ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತುರ್ತು ಸೂಚನೆಗಳನ್ನ ಅಧಿಕಾರಿಗಳಿಗೆ ನೀಡಿದ್ದಾರೆ.

Hasanamba Temple ಹಾಸನಾಂಬೆ ದರ್ಶನಕ್ಕೆ ಸು.20 ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು

Hasanamba Temple ಹಾಸನದ ಶ್ರೀಹಾಸನಾಂಬೆಯ ದರ್ಶನ ನವೆಂಬರ್ 3 ಕ್ಕೆ ಮುಗಿದಿದೆ. ಹಾಸನಾಂಬ ದೇಗುಲಕ್ಕೆ 9 ಕೋಟಿ ರೂಪಾಯಿಗೂ ಅಧಿಕವಾಗಿ ಕಾಣಿಕೆ ಬಂದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಸುಮಾರಿ ಇಪ್ಪತ್ತು ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಮಾತೆಯ ದರ್ಶನ ಮಾಡಿ ಪುನೀತರಾಗಿದ್ದಾರೆ. ಅಕ್ಟೋಬರ್ 25 ರಿಂದ ನವೆಂಬರ್ 3 ನೇ ತಾರೀಖಿನ‌ವರೆಗೆ ಹಾಸನಾಂಬ ದೇಗುಲ ತೆರೆದಿತ್ತು.

Kendriya Sainik Board Secretariat ಮಾಜಿ ಸೈನಿಕರ ಮಕ್ಕಳ ಶಿಕ್ಷಣ ಶಿಷ್ಯವೇತನ & ಆರ್ಥಿಕ ಅನುದಾನಕ್ಕೆ ಅರ್ಜಿ ಆಹ್ವಾನ

0

Kendriya Sainik Board Secretariat ನವೆಂಬರ್ 04; (ಕರ್ನಾಟಕ ವಾರ್ತೆ): ಕೇಂದ್ರೀಯ ಸೈನಿಕ ಮಂಡಳಿಯು ಭಾರತೀಯ ಸೇನೆಯ ಜೆ.ಸಿ.ಓ ರ‍್ಯಾಂಕ್‌ವರೆಗಿನ ಅಥವಾ ವಾಯು ಸೇನೆ, ನೌಕಾ ಸೇನೆಯ ತತ್ಸಮಾನ ರ‍್ಯಾಂಕ್‌ವರೆಗಿನ ಮಾಜಿ ಸೈನಿಕರ ಮಕ್ಕಳು, ದ್ವಿತೀಯ ಪಿ.ಯು.ಸಿ ಯಲ್ಲಿ ಶೇ.60 ಕ್ಕಿಂತ ಅಧಿಕ ಅಂಕಗಳನ್ನು ಪಡೆದು, ಇಂಜಿನಿಯರಿAಗ್, ಮೆಡಿಕಲ್ ಮತ್ತು ಇತರೆ ವೃತ್ತಿಪರ ಶಿಕ್ಷಣದಲ್ಲಿ ಪದವಿ ವ್ಯಾಸಂಗಕ್ಕಾಗಿ 2024-25ನೇ ಸಾಲಿನಲ್ಲಿ ಪ್ರವೇಶಾತಿ (ಅಡ್ಮಿಷನ್) ಪಡೆದು ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಪ್ರಧಾನ ಮಂತ್ರಿ ಶಿಷ್ಯವೇತನ ಯೋಜನೆ (ಪ್ರಧಾನ ಮಂತ್ರಿ ಸ್ಕಾಲರ್ಷಿಪ್ ಸ್ಕೀಂ) ಎಂಬ ಶೀರ್ಷಿಕೆಯಡಿ ಶಿಷ್ಯವೇತನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
Kendriya Sainik Board Secretariat ಆಸಕ್ತರು ಜಾಲತಾಣ HTTPS://ONLINE.KSB.GOV.IN ರಲ್ಲಿ ನ. 30 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕ ಡಾ. ಸಿ.ಎ. ಹಿರೇಮಠರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಕೇಂದ್ರೀಯ ಸೈನಿಕ ಮಂಡಳಿಯ ಜಾಲತಾಣ HTTPS://ONLINE.KSB.GOV.IN ವನ್ನು ಅಥವಾ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಇವರ ದೂ. ಸಂ.: 08182-220925 ನ್ನು ಸಂಪರ್ಕಿಸುವುದು.

Navodaya Vidyalaya Samiti ಗಾಜನೂರು ವಿದ್ಯಾಲಯ 9 &11ನೇ ತರಗತಿಗೆ ಪ್ರವೇಶ ಪರೀಕ್ಷೆ ಅರ್ಜಿ ಸಲ್ಲಿಕೆಗೆ ಅಂತಿಮ ದಿನಾಂಕ ಮುಂದೂಡಿಕೆ

0

Navodaya Vidyalaya Samiti ನವೆಂಬರ್ 04; (ಕರ್ನಾಟಕ ವಾರ್ತೆ): ಶಿವಮೊಗ್ಗ ಜಿಲ್ಲೆಯ ಗಾಜನೂರು ಜವಾಹರ ನವೋದಯ ವಿದ್ಯಾಲಯದ 2025-26ನೇ ಶೈಕ್ಷಣಿಕ ಸಾಲಿನ 9 ಮತ್ತು 11 ನೇ ತರಗತಿಗೆ ಪ್ರವೇಶ ಪರೀಕ್ಷೆಗೆ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ನ.09 ರವರೆಗೆ ವಿಸ್ತರಿಸಲಾಗಿದೆ.
ಆಸಕ್ತ ವಿದ್ಯಾರ್ಥಿಗಳು ವೆಬ್‌ಸೈಟ್ 9 ನೇ ತರಗತಿಗೆ https://cbseitms.nic.in/2024/nvsix ಮತ್ತು 11 ನೇ ತರಗತಿಗೆ https://cbseitms.nic.in/2024/nvsxi_11ರ ಮೂಲಕ ನವೆಂಬರ್ 09 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Bus Accident ರಸ್ತೆ ದಾಟುತ್ತಿದ್ದ ದ್ವಿಚಕ್ರ ವಾಹನಕ್ಕೆ ಬಸ್ ಡಿಕ್ಕಿ. ಬೈಕ್ ಸವಾರನಿಗೆ ಗಂಭೀರ ಗಾಯ

0

Bus Accident ರಸ್ತೆ ದಾಟುತ್ತಿದ್ದ ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿ ಹೊಡೆದ ಘಟನೆ ಸಾಗರ ತಾಲೂಕಿನ ತಾಳಗುಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುಡ್ಡೆಮನೆ ಬಳಿ ಕಳೆದ ಎರಡು ದಿನದ ಹಿಂದೆ ನಡೆದಿದೆ. ಬೈಕ್ ಸವಾರನಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಘಟನೆಯ ಭೀಕರ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಚೂರಿಕಟ್ಟೆಯ ನಿವಾಸಿ ಗೋಪಾಲ ಎಂಬವರು ಅಕ್ಟೋಬರ್ 31ರಂದು ಬೈಕ್‌ನಲ್ಲಿ ರಸ್ತೆ ದಾಟುತ್ತಿದ್ದರು. ಈ ವೇಳೆ ಬಸ್ ಡಿಕ್ಕಿ ಹೊಡೆದಿದೆ. ರಸ್ತೆ ಪಕ್ಕದ ಅಂಗಡಿಯಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾದಲ್ಲಿ ದೃಶ್ಯ ದಾಖಲಾಗಿದೆ.

Bus Accident ಗೋಪಾಲ ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಸಾಗರದ ಉಪವಿಭಾಗೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ನಂತರ ಮಂಗಳೂರಿನ ಕೆ.ಎಸ್.ಹೆಗಡೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Rotary Club Shivamogga ಸಾಧಕರನ್ನು ಸನ್ಮಾನಿಸುವುದರಿಂದ ಇತರರಿಗೂ ಸ್ಫೂರ್ತಿ ದೊರೆಯುತ್ತದೆ- ಮುಸ್ತಾಕ್ ಆಲಿ

0

Rotary Club Shivamogga ಸಾಧಕರನ್ನು ಗೌರವಿಸುವುದು ಸಂಘಸಂಸ್ಥೆಗಳ ಕರ್ತವ್ಯ. ಸಾಧಕರನ್ನು ಸನ್ಮಾನಿಸುವುದರಿಂದ ಇತರರಿಗೂ ಸ್ಪೂರ್ತಿ ದೊರೆಯುತ್ತದೆ ಎಂದು ರೋಟರಿ ಶಿವಮೊಗ್ಗ ಮಲೆನಾಡು ಕ್ಲಬ್ ಅಧ್ಯಕ್ಷ ಮುಸ್ತಾಕ್ ಅಲಿ ಹೇಳಿದರು.
ಶಿವಮೊಗ್ಗದಲ್ಲಿ ನಗರದಲ್ಲಿ ರೋಟರಿ ಶಿವಮೊಗ್ಗ ಮಲೆನಾಡು ಕ್ಲಬ್ ಹಾಗೂ ಭಾವಸಾರ್ ವಿಷನ್ ಇಂಡಿಯಾ ಪ್ರೇರಣ ಸಂಸ್ಥೆ ವತಿಯಿಂದ ಕೇರಂ ವಿಭಾಗದಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುವ ಕೆ.ಕೆ.ಶಶಿರೇಖಾ ಅವರನ್ನು ಸನ್ಮಾನಿಸಿ ಮಾತನಾಡಿದರು.
ರೋಟರಿ ಸಂಸ್ಥೆಯು ಸಮಾಜಮುಖಿ ಸೇವೆಗಳ ಜತೆಯಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡುತ್ತಿದೆ. ಇದರಿಂದ ಯುವಜನತೆಗೆ ಸಾಧನೆ ಮಾಡಲು ಪ್ರೇರೆಪಣೆ ದೊರೆಯುತ್ತದೆ. ಸಾಧಕರ ಬಗ್ಗೆ ಯುವಜನತೆ ಅರಿತುಕೊಳ್ಳಬೇಕು ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ನಡೆದ ರಾಜ್ಯ ಸರ್ಕಾರ ನೌಕರರ ಕ್ರೀಡಾಕೂಟದಲ್ಲಿ ಕೇರಂ ಡಬಲ್ ಹಾಗೂ ಸಿಂಗಲ್ಸ್ ವಿಭಾಗದಲ್ಲಿ ಕೆ.ಕೆ.ಶಶಿರೇಖಾ ಅವರು ಪ್ರಥಮ ಸ್ಥಾನವನ್ನು ಪಡೆದು ರಾಷ್ಟ್ರಮಟ್ಟಕ್ಕೆ ಅರ್ಹತೆ ಪಡೆದಿದ್ದಾರೆ. ರಾಷ್ಟ್ರಮಟ್ಟದಲ್ಲಿ ಕರ್ನಾಟಕ ಮಹಿಳಾ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
Rotary Club Shivamogga 19 ವರ್ಷಗಳ ಗಣಿತ ಶಿಕ್ಷಕಿಯಾಗಿ ಸೇವೆ ಸಲ್ಲಿಸಿರುವ ಶಶಿರೇಖಾ ಅವರು ಕಳೆದ ವರ್ಷ ತೀರ್ಥಹಳ್ಳಿಯ ಇನ್ನರ್‌ವ್ಹೀಲ್ ಕ್ಲಬ್ ನಿಂದ ನೇಷನ್ ಬಿಲ್ಡರ್ ಅವಾರ್ಡ್ ಪಡೆದಿರುತ್ತಾರೆ. ಪ್ರಸ್ತುತ ಶಿವಮೊಗ್ಗದ ಕ್ಷೇತ್ರ ಅಧಿಕಾರಿಗಳ ಕಚೇರಿಯಲ್ಲಿ ಶಿಕ್ಷಣ ಸಂಯೋಜಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಭಾವಸಾರ ವಿಷನ್ ಇಂಡಿಯಾ ಪ್ರೇರಣಾ ಸಂಸ್ಥೆ ಅಧ್ಯಕ್ಷೆ ಉಮಾ ವೆಂಕಟೇಶ್, ರೋಟರಿ ಶಿವಮೊಗ್ಗ ಪೂರ್ವ ಮಾಜಿ ಅಧ್ಯಕ್ಷ ಎಂ.ಎನ್.ವೆಂಕಟೇಶ, ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ಮಾಜಿ ಅಧ್ಯಕ್ಷೆ ಬಿಂದು ವಿಜಯಕುಮಾರ್, ಶಶಿರೇಖಾ ಅವರ ಪತಿ ಸುರೇಶ್ ಉಪಸ್ಥಿತರಿದ್ದರು.

Reshme Batte Book ಇಂದಿನ ಪುಸ್ತಕ…” ರೇಷ್ಮೆ ಬಟ್ಟೆ” ಕಾದಂಬರಿ.ಲೇ’: ವಸುಧೇಂದ್ರ.ಪುಸ್ತಕ ಪರಿಚಯ:ಎಂ.ಎಂ.ಪ್ರಭಾಕರ ಕಾರಂತ

0

Reshme Batte Book .ರೇಷ್ಮೆ ಬಟ್ಟೆ ವಸುಧೇಂದ್ರ ರವರ ಈ ವರ್ಷ ಪ್ರಕಟವಾದ ಮಹತ್ವದ ಕಾದಂಬರಿ.472 ಪುಟಗಳ ಸುದೀರ್ಘ ಹಾದಿ ಕ್ರಮಿಸಿದ್ದೇ ಗೊತ್ತಾಗುವುದಿಲ್ಲ. ಅವರದ್ದೇ ಛಂದ ಪುಸ್ತಕ ಈ ಕೃತಿ ಪ್ರಕಟಿಸಿದ್ದು ಬೆಲೆ 450 ರೂಗಳು.
ಈಚೆಗೆ ವಸುಧೇಂದ್ರ ರವರ ತೇಜೋ ತುಂಗಭದ್ರ ಕಾದಂಬರಿಯ ಕುರಿತು ಮತ್ತು ಲೇಖಕರ ಕುರಿತೂ ಸಾಮಾಜಿಕ ಜಾಲತಾಣದಲ್ಲಿ ಓರ್ವರು ತುಂಬಾ ಕೆಟ್ಟದಾಗಿ ಬರೆದಿದ್ದರು. ವಸುಧೇಂದ್ರ ಜಾತಿ ಹಿಡಿದೂ ಕೀಳು ಟೀಕೆ ಮಾಡಲಾಗಿತ್ತು.ಇಂತಹದಕ್ಕೆ ಮತ್ತೊಂದು ಯಶಸ್ವೀ ಪುಸ್ತಕ ಬರೆದೇ ಉತ್ತರಿಸಿದ್ದಾರೆ ಲೇಖಕರು. ಪ್ರಕಟವಾದ ಗ್ರಂಥಗಳು ಅನೇಕವು ಲೇಖಕರ ಬೆಂಬಲಿಗರ ಪಡೆಯಿಂದ ಹೊಗಳಿಸಿಕೊಂಡು, ಪತ್ರಿಕಾ ವಿಮರ್ಶೆ ಪ್ರಕಟಿಸಿಕೊಂಡು ಸರ್ಕಸ್ ಮಾಡಿದರೂ ಅವು ಓದುಗರನ್ನು ತಲ್ಪಿರುವುದಿಲ್ಲ. ಅಂತಹ ಊರುಗೋಲು ಆಶ್ರಯಿಸದೇ ಜನರಿಗೆ ತಲ್ಪುವ ಲೇಖಕರನ್ನು ಕಂಡರೆ ಅಸೂಯೆ ಪಡುವವರು ಇಂತಹ ಬರಹ ಬರೆದು ಉತ್ಸಾಹ ಕುಗ್ಗಿಸಲು ನೋಡುತ್ತಾರೆ. ಮತ್ತೊಂದು ಗ್ರಂಥ ಪ್ರಕಟಿಸಿದ್ದು ಯಶಸ್ವಿ ಆದಾಗ ಮತ್ತಷ್ಟು ಟೀಕೆ ಸಹಜ.
ಕನ್ನಡ ಕಾದಂಬರಿಯ ಓದುಗರಿಗೆ ಈ ಹೊಸ ಕಾದಂಬರಿ ಖುಷಿ ಕೊಡುವಲ್ಲಿ ಅನುಮಾನವೇ ಇಲ್ಲ.
ಕಾದಂಬರಿಯು ಎರಡನೇ ಶತಮಾನದಲ್ಲಿ ಏಷ್ಯಾಖಂಡದಲ್ಲಿ ನಡೆದ ಸ್ಥಿತ್ಯಂತರವನ್ನು ಕಟ್ಟಿಕೊಡುತ್ತದೆ. ವಸುಧೇಂದ್ರ ಭೌಗೋಳಿಕ ಅಧ್ಯಯನದ ಜೊತೆಗೆ ಆಗಿನ ಚಾರಿತ್ರಿಕ ಸಂಗತಿ ಅಧ್ಯಯನ ಮಾಡಿ ಹೊಸದಕ್ಕೆ ಆ ಕಾಲ ತೆರೆದುಕೊಳ್ಳುವಾಗ ಆಗಿರಬಹುದಾದ ಸನ್ನಿವೇಶವನ್ನು ಕಲ್ಪಿಸಿ ಕಥೆ ಕಟ್ಟಿದ್ದಾರೆ. ಸಹಸ್ರಾರು ವರ್ಷದ ಹಿಂದಿನ ಕಥನ ಕಟ್ಟುವುದು ಸುಲಭವಲ್ಲ. ಓದುಗನನ್ನು ಗತಕ್ಕೆ ಕರೆದೊಯ್ಯಬೇಕು. ಈಗ ಓದುವಾಗ ಆ ಕಾಲದಲ್ಲೇ ಇರುವ ಅನುಭವ ಕೊಡಬೇಕು. ಬೇರೆ ಬೇರೆ ದೇಶಗಳ ಜನ,ಬೇರೆ ಬೇರೆ ಭಾಷೆ,ಧರ್ಮ, ವೃತ್ತಿ ಇತ್ಯಾದಿ ಕಲ್ಪಿಸೆಯೇ ಬರೆಯಬೇಕು. ಜನರ ಆಚಾರ ವಿಚಾರ ದೇಶ ಬದಲಾದಂತೆ ಬೇರೆ ಬೇರೆಯಾಗಿಯೇ ಚಿತ್ರಿತ ವಾಗಬೇಕು. ವಸುಧೇಂದ್ರ ಈ ಕ್ರಿಯೆಯಲ್ಲಿ ಯಶಸ್ವಿ ಆಗಿದ್ದಾರೆ.
Reshme Batte Book ಕಾದಂಬರಿಯು ಎರಡನೇ ಶತಮಾನದಲ್ಲಿ ಜಾಗತೀಕರಣ ಸೃಷ್ಟಿಸುವ ತಲ್ಲಣಗಳನ್ನು ತೆರೆದಿಟ್ಟಿದೆ.ಇದೊಂದು ಗಡಿರೇಖೆ ದಾಟಿ ಹೊಸ ಜಗತ್ತಿಗೆ ಹೊಸ ವೃತ್ತಿಗೆ ಹೊಸ ಬದುಕಿಗೆ ಸಾಗುವ ತಲೆಮಾರಿನ ಕಥೆ. ಇದ್ದ ಬದುಕನ್ನು ಬದಲಾಯಿಸಿಕೊಳ್ಳುವ ಈ ಸಾಹಸ ಆರಂಭವಾಗುವುದು ಹೆಣ್ಣಿನ ಮನಸಿನಲ್ಲಿ!. ವನಜೀವನವನ್ನೇ ತಲೆತಲಾಂತರದಿಂದ ಬಾಳಿದ್ದ ಹವಿನೇಮನಿಗೆ ಅದರಾಚೆಯ ಪ್ರಪಂಚಕ್ಕೆ ಕರೆತರುವುದು ಅವನ ಪತ್ನಿ ಸಗನೇಮಿ. ತನ್ನ ಮಗು ಋತನೇಮ ಈ ಕಾಡ ಬದುಕಲ್ಲೇ ಕಳೆದುಹೋಗದೇ ನವ ಬದುಕು ಬಾಳಬೇಕು ಎಂಬ ತಾಯಿಯ ಪ್ರಭಲ ಇಚ್ಛೆ ಆ ಕುಟುಂಬವನ್ನು ಲಕ್ಷ್ಮಣ ರೇಖೆ ದಾಟಿಸುತ್ತದೆ. ಕಾಡಿನಿಂದ ಆ ಕುಟುಂಬ ಊರಿಗೆ ಬರುತ್ತದೆ. ಇದೇ ಸಗನೇಮಿ ಮುಂದೆ ಬೌದ್ಧ ಭಿಕ್ಷು ಬುದ್ದಮಿತ್ರನನ್ನೂ ಗಡಿ ದಾಟಿಸುತ್ತಾಳೆ. ಮಹಿಳೆ ಅಂದರೆ ಸಮುದ್ರವಿದ್ದಂತೆ. ನದಿ ಸಮುದ್ರ ಸೇರಲೇ ಬೇಕು. ಬದಲಾಗಿ ಮದ್ಯವೇ ಸೊರಗಿಹೋದರೆ ಅದು ಅಪೂರ್ಣ. ಹೆಣ್ಣಿನ ಜೊತೆ ಸಮಾಗಮವೇ ಆಗದ ಸನ್ಯಾಸವೆಂದರೆ ನದಿ ತನ್ನ ಹಾದಿಯಲ್ಲೇ ಇಂಗಿ ಹೋದಂತೆ.ಇದು ಸಗನೇಮಿಯ ಸ್ಪಸ್ಟ ಅಭಿಪ್ರಾಯ. ಬುದ್ದಮಿತ್ರನಂತಹ ಮುಖ್ಯ ಭಿಕ್ಕುವಿಗೇ ಈ ಕಾಡ ಮಹಿಳೆ ಹೇಳುವ ಮಾತು ಪ್ರಭಾವಿಸಿ ಆತ ಗಡಿ ದಾಟುವಂತೆ ಮಾಡಿಸುತ್ತದೆ. ಪಾರಸೀಕ ಮಿತ್ರವಂದಕ ಕೃಷಿ ಬಿಟ್ಟು ವ್ಯಾಪಾರಕ್ಕೆ ಬರಲೂ ಆತನ ಪ್ರೇಯಸಿ ಮಧುಮಾಯಾ ಕಾರಣ ಆಗುತ್ತಾಳೆ. ತನ್ನ ಪ್ರಿಯಕರನಿಗೆ ವ್ಯಾಪಾರ ಬಂಡವಾಳ ಒದಗಿಸಲು ಆಕೆ ತನ್ನನ್ನು ತಾನೇ ಮಾರಿಕೊಳ್ಳುತ್ತಾಳೆ. ಚೈನಾದ ಯುವತಿ ಲೀಹ್ಯಾ ಸಹ ತನ್ನ ಮೇಲಿನ ದೌರ್ಜನ್ಯಕ್ಕೆ ಸೇಡುತೀರಿಸಿಕೊಂಡಿದ್ದು ಮಾತ್ರ ವಿಭಿನ್ನವಾಗಿ. ರೇಷ್ಮೆಯ ಗುಟ್ಟನ್ನು ಗಡಿ ದಾಟಿಸಲು ಅವಳೇ ಕಾರಣ.
ಮನುಷ್ಯ ಅಕ್ಷರ ಬರೆಯಲು ಕಾಗದ ಬಳಕೆ ಮಾಡಿದಾಗಲೂ ಒಂದು ಗೆರೆ ದಾಟಿ ಹೊಸ ಅಧ್ಯಾಯ ತೆರೆಯುತ್ತದೆ. ವಸ್ತುಗಳ ವಿನಿಮಯದ ಕಾಲದಿಂದ ನಾಣ್ಯದ ಕಾಲಕ್ಕೆ ಹೋಗುವಾಗಲೂ ಮತ್ತೊಂದು ಸೀಮೋಲ್ಲಂಘನವೇ. ಹೀಗೆ ಹಲವು ಸೀಮೋಲ್ಲಂಘನ ಆದಾಗ ಉಂಟಾಗುವ ಸಂಘರ್ಷ, ಸವಾಲುಗಳು,ಸಂಕಟಗಳನ್ನು ಕಾದಂಬರಿಯು ಅನಾವರಣಗೊಳಿಸಿದೆ.
ಪಾರ್ಥಿಯನ್ನರು,ಯುವನರು, ಹೂಣರು, ತುಷಾರರು, ಬೌದ್ದರು, ಚೀನೀಯರು, ಹೀಗೆ ಹಲವು ಧರ್ಮ, ಹಲವು ಆಚರಣೆ,ಹಲವು ಭಾಷೆ ಒಂದೇ ಕಾದಂಬರಿಯ ಹರಿವಿನಲ್ಲಿ ತೋರಿಸುವಾಗ ಅವರ ಭಿನ್ನತೆಯನ್ನು ಓದುವವರಿಗೆ ಕಟ್ಟಿಕೊಡುವ ಕ್ಲಿಷ್ಟ ಬರವಣಿಗೆ ಸ್ವಾರಸ್ಯ ಕಳೆದುಕೊಳ್ಳದಂತೆ ಎಚ್ಚರಿಕೆ ವಹಿಸಿದ್ದು ವಸುಧೇಂದ್ರರ ಸಾಮರ್ಥ್ಯ.
ಮುಂದೇನಾದೀತು ಎಂಬ ಕುತೂಹಲ ಕಾಯ್ದುಕೊಳ್ಳುವ ತಂತ್ರ ಅನುಸರಿಸುವುದು ಸವೆದ ಹಾದಿ.ಆದರೆ ಮುಂದೇನಾಗುತ್ತದೆ ಎಂದು ಹೇಳಿಯೇ ಸ್ವಾರಸ್ಯ ಉಳಿಸುವ ಹೊಸದಾರಿ ವಸುಧೇಂದ್ರರದ್ದು.
ತನ್ನ ಪ್ರಿಯಕರ ಮಿತ್ರವೃಂದಕನಿಗೆ ಆರ್ಥಿಕ ಸಹಾಯಮಾಡಲು ತನ್ನನ್ನೇ ಮಾರಿಕೊಳ್ಳುವ ಮಧುಮಾಯಾ ಚೈನಾದಲ್ಲಿ ಜೀತದಾಳಾಗಿ ಹೀ ಆಗಿ ಮಾರ್ಪಾಡಾಗಿರುತ್ತಾಳೆ. ಇತ್ತ ಅವಳ ಪ್ರಿಯಕರ ವಿವಿಧ ವ್ಯವಹಾರ ಮಾಡಿ ಮುತ್ತಿನ ವ್ಯಾಪಾರಿಯಾಗಿ ಚೈನಾದತ್ತ ಹೊರಟವ. ಅವನ ಕೋರಿಕೆ ತನ್ನ ಪ್ರಿಯತಮೆ ತನಗೆ ದೊರಕಬೇಕು ಎಂದು. ಅದನ್ನಾತ ಸುಗನೇಮಿಯ ಹತ್ತಿರ ಹೇಳಿದಾಗ ಅವಳೂ ತನ್ನ ದೇವರಿಗೆ ಮೊರೆ ಇಟ್ಟು ಅವರೀರ್ವರನ್ನು ಮತ್ತೆ ಜೊತೆಯಾಗಿಸು ಎಂದು ಪ್ರಾರ್ಥಿಸುತ್ತಾಳೆ. ಬಹುಬೇಗ ಮಧುಮಾಯಾ ಅವನಿದ್ದಲ್ಲಿಗೇ ಹುಡುಕಿಕೊಂಡು ಬಂದು ಸೇರುತ್ತಾಳೆ ಎಂದು ಅವನಿಗೆ ತಿಳಿದಿರುವುದಿಲ್ಲ ಎಂದು ಲೇಖಕರು ಹೇಳುತ್ತಾರೆ. ಓದುಗರಿಗೂ ಅವರೀರ್ವರ ಪುನರ್ ಮಿಲನದ ಸನ್ನಿವೇಶ ಸವಿಯುವ ಕಾತುರವೇನೋ ಇರುತ್ತದೆ. ಆದರೆ ಕಾದಂಬರಿಯಲ್ಲಿ ಅದರ ಚಿತ್ರಣವೇ ಇಲ್ಲ.
ಅರಸೊತ್ತಿಗೆಯಲ್ಲಿ ಸಾಮಾನ್ಯ ಜನರ ಸಂಕಟವನ್ನು ಅರಮನೆಗೆ ಭಲತ್ಕಾರವಾಗಿ ಒಯ್ಯಲ್ಪಟ್ಟ ಲೀಹ್ಯಾ ಪ್ರಕರಣ ಸಮರ್ಥವಾಗಿ ಚಿತ್ರಿಸಿದೆ. ಆಕೆ ಸೇಡು ತೀರಿಸುವ ಶಪಥ ತೊಟ್ಟೇ ಚೈನಾ ಹೊರಜಗತ್ತಿಗೆ ತೋರಿಸದೇ ಇದ್ದ ರೇಷ್ಮೆ ಉತ್ಪಾದನೆಯ ಗುಟ್ಟನ್ನು ಹೀ ಮೂಲಕ ರಟ್ಟು ಮಾಡಿಸುತ್ತಾಳೆ. ಚೈನಾದ ರಾಜ ಹೂಣರಿಗೆ ಯುದ್ದ ಮಾಡದಿರಲು ಕನ್ಯೆಯರನ್ನ ಒದಗಿಸುವ ಕರಾರಿರುತ್ತದೆ. ಹೆಣ್ಣು ಕೇವಲ ಒಂದು ಉಪಯೋಗಿಸುವ ವಸ್ತು ಪ್ರಭುತ್ವದ ದೃಷ್ಟಿಯಿಂದ. ಇದು ಶತಶತಮಾನದಿಂದಲೂ ಸ್ತ್ರೀಕುಲದ ಮೇಲೆ ನಡೆದ ದೌರ್ಜನ್ಯದ ಚಿತ್ರಣವೂ ಹೌದು.

ರೇಷ್ಮೆ ಹುಳುವಿನ ಜೀವನ ನೋಡಿದ ಲೀ ಜನಸಾಮಾನ್ಯರೂ ಈ ರೇಷ್ಮೆ ಹುಳುಗಳಂತೆ ಎಂದು ಯೋಚಿಸುವಾಗ ನಿಸಾರರ ಕುರಿಗಳು ಸಾರ್ ಕುರಿಗಳು ಕವನ ನೆನಪಾಗುತ್ತದೆ.
ಚೈನಾದ ಸಿಲ್ಕ್ ರೂಟ್ ಈ ಶತಮಾನದ ಮಹತ್ವದ ಯೋಜನೆ ಆದರೂ ಅವರು ಎರಡು ಸಾವಿರ ವರ್ಷದ ಹಿಂದೇ ಅಂತದೊಂದು ಸಿಲ್ಕ್ ರೂಟ್ ಮಾಡಿದ್ದರು ಎಂದು ಕಾದಂಬರಿ ಹೇಳುತ್ತಿದೆ. ಈ ಪ್ರಪಂಚಕ್ಕೆ ತೆರೆದುಕೊಳ್ಳುವ ಪ್ರಕ್ರಿಯೆಯ ವಿವರ ಅತ್ಯಂತ ವಾಸ್ತವವಾಗಿ ಬರೆಯಲ್ಪಟ್ಟಿದೆ. ಸಾರ್ಥ ಎಂಬ ಭೈರಪ್ಪರವರ ಕಾದಂಬರಿಯನ್ನು ನೆನಪು ಮಾಡುವ ವ್ಯಾಪಾರ ದಾರಿಯ ಕ್ರಮಿಸುವಿಕೆ ಕುತೂಹಲಭರಿತವಾಗಿದೆ. ಏಷ್ಯಾಖಂಡದ ಚರಿತ್ರೆ ಆಗೂ ಕಾದಂಬರಿ ಯಶಸ್ವಿ ಆಗಿದೆ. ಕನ್ನಡದ ಕಾದಂಬರಿಯ ಲೋಕದ ಹೊಳಪಿಗೆ ರೇಷ್ಮೆಭಟ್ಟೆ ಮೆರಗು ನೀಡಿದೆ.

Director Guruprasad Death ಪ್ರತಿಭಾವಂತ ನಿರ್ದೇಶಕ ಗುರುಪ್ರಸಾದ್ ನೇಣಿಗೆ ಶರಣು

Director Guruprasad Death ಗುರುಪ್ರಸಾದ್ ಅವರು ಕನ್ನಡ ಚಲನಚಿತ್ರ‌‌ಜಗತ್ತಿನಲ್ಲಿ ಅಪೂರ್ವ ನಿರ್ದೇಶಕರಾಗಿದ್ದರು

ಚಿತ್ರ ನಿರ್ದೇಶಕರಾಗಿ ಅವರ ಚೊಚ್ಚಲ ಚಿತ್ರವು 2006 ರ ‘ಮಾತಾ’ ಚಿತ್ರವು ಹಿಟ್ ಆಗಿತ್ತು. ನಿರ್ದೇಶಕರಾಗಿ ಅವರ ಎರಡನೇ ಚಿತ್ರ ಎದ್ದೇಳು ಮಂಜುನಾಥ . ಎರಡೂ ಸಿನಿಮಾಗಳು ಸಕಾರಾತ್ಮಕ ವಿಮರ್ಶೆಗಳೊಂದಿಗೆ ಸ್ವೀಕರಿಸಲ್ಪಟ್ಟವು.

ಹಾಗೂ ಗುರುಪ್ರಸಾದ್ ಅವರ ಚಿತ್ರಗಳು ಅನೇಕ ಪ್ರಶಸ್ತಿ ವಿಭಾಗಗಳಿಗೆ ಪರಿಗಣಿಸಲ್ಪಟ್ಟಿದ್ದವು.
ವಿಡಂಬನೆಯನ್ನು ನೈಜವಾಗಿ ತೆರೆಯ ಮೇಲೆ ಚಿತ್ರಿಸುವುದರಲ್ಲಿ ಹೆಸರುವಾಸಿಯಾಗಿದ್ದರು. ಅದಕ್ಕೆ ಅವರ “ಮಠ‌‌ “ಮತ್ತು ” ಎದ್ದೇಳು‌ ಮಂಜುನಾಥ” ಚಿತ್ರಗಳು‌‌ ಉದಾಹರಣೆಗಳಾಗಿವೆ.
“ಮಠ “ಸಿನಿಮಾ ನಿರುದ್ಯೋಗ ಭೂತವು ಸನ್ಯಾಸಿ ,ಮಠ ‌ಗಳನ್ನೂ ಬಿಟ್ಟಿಲ್ಲ ಎಂಬ ಕಚಗುಳಿ, ವಿಡಂಬನೆಯನ್ನ ಎತ್ತಿ ತೋರಿಸುವಂತಿದೆ.
“ಮಠ “ಚಿತ್ರದ ಅಭಿನಯಕ್ಕೆ ಜಗ್ಗೇಶ್ ಅವರಿಗೆ ಪೋಷಕ‌ನಟ ಪ್ರಶಸ್ತಿಯೂ‌ ಸಂದಿತ್ತು.
ವಿಡಂಬನೆ ,ಗುರುಪ್ರಸಾದ್ ಅವರ ಅಸ್ರ್ತ.ಅದನ್ನೇ ನವಿರಾಗಿ‌ಹೆರಳುವ ಕಲೆ ಅವರಿಗೆ ಕೈವಶವಾಗಿತ್ತು.

Director Guruprasad Death ಅರಳು ಹುರಿದಂತೆ ಮಾತಾಡುತ್ತಿದ್ದರು.
ಅನೇಕರಿಗೆ ನಿರಾಶೆಯಲ್ಲಿದ್ದಾಗ ಬೆನ್ನುತಟ್ಟಿ ಎಚ್ವರಿಸುವ ಸ್ವಭಾವ.
ಆದರೆ ಏಕಾಏಕಿ ನೇಣಿಗೆ ಶರಣಾಗಿರುವದು ಅತ್ಯಂತ ಖೇದಕರ ಸಂಗತಿ.