Wednesday, March 25, 2026
Wednesday, March 25, 2026
Home Blog Page 510

CM Siddharamaiah ಗೋಲ್ ಗಪ್ಪಾ ರುಚಿ ಹೆಚ್ಚಿಸಲು ಹಾರ್ಪಿಕ್,ಯೂರಿಯಾ ಬಳಕೆ ಸರ್ಕಾರದ ಗಮನಕ್ಕೆ ಬಂದು ಕ್ರಮ‌ಕೈ ಗೊಳ್ಳಲಾಗಿದೆ

0

CM Siddharamaiah ಹೊರ ರಾಜ್ಯಗಳಲ್ಲಿ ಗೋಲ್‌ಗಪ್ಪಾ ರುಚಿ ಹೆಚ್ಚಿಸಲು ಅದಕ್ಕೆ ಶೌಚಾಲಯ ಶುಚಿಗೊಳಿಸುವ ಹಾರ್ಪಿಕ್‌ ಮತ್ತು ಯೂರಿಯಾ ಗೊಬ್ಬರ ಬಳಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಈ ಬಗ್ಗೆ ಪೊಲೀಸರು ತನಿಖೆ ನಡೆಸಿ, ವಿಚಾರಣೆ ನಡೆಸಿದಾಗ ಆರೋಪಿಗಳು ತಪ್ಪನ್ನು ಒಪ್ಪಿಕೊಂಡಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಇದನ್ನು ಗಮನಿಸಿದ ಮುಖ್ಯಮಂತ್ರಿಗಳ ಕಚೇರಿಯ ಕುಂದುಕೊರತೆ ವಿಭಾಗದ ವಿಶೇಷ ಕರ್ತವ್ಯಾಧಿಕಾರಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಗಮನಕ್ಕೆ ತಂದಿದ್ದರು. ನಮ್ಮ ರಾಜ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ನಿಯಮಾನುಸಾರ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.

CM Siddharamaiah ಅದರಂತೆ ಅಕ್ಟೋಬರ್‌ 26 ಮತ್ತು 27ರಂದು 230 ಗೋಲ್‌ಗಪ್ಪಾದ ತಯಾರಿಕಾ ಘಟಕಗಳು / ಮಾರಾಟ ಮಳಿಗೆಗಳಿಗೆ ಪರಿಶೀಲನೆ ನಡೆಸಲು ಭೇಟಿ ನೀಡಿದ ವೇಳೆ 165 ಮಾದರಿಗಳನ್ನು ಸಂಗ್ರಹಿಸಿ ಆಹಾರ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು. ಸದರಿ ಘಟಕಗಳ ಪೈಕಿ 12 ಘಟಕಗಳಲ್ಲಿ ನೈರ್ಮಲ್ಯತೆಯ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ 13,000 ರೂ. ದಂಡ ವಿಧಿಸಲಾಗಿರುತ್ತದೆ ಹಾಗೂ 80 ಘಟಕಗಳಿಗೆ ನೋಟಿಸ್‌ ನೀಡಲಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆಯುಕ್ತರು ತಿಳಿಸಿದ್ದಾರೆ.

ನೀವು ಸ್ಥಳೀಯವಾಗಿ ಎದುರಿಸುತ್ತಿರುವ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತರಲು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿಗಳ @osd_cmkarnataka ‘ಎಕ್ಸ್‌ʼ ಖಾತೆಗೆ ಟ್ಯಾಗ್‌ ಮಾಡಿ ಪೋಸ್ಟ್ ಮಾಡಲು ಮನವಿ ಮಾಡಲಾಗಿದೆ

Narendra Modi ಕಾಂಗ್ರೆಸ್ & ಮಿತ್ರ ಪಕ್ಷಗಳು ಸುಳ್ಳುಹೇಳಿ ಅಧಿಕಾರಕ್ಕೆ ಬಂದು ರಾಜ್ಯಗಳನ್ನು ಹಾಳುಮಾಡಿವೆ- ಪ್ರಧಾನಿ ಮೋದಿ

0

Narendra Modi ಕರ್ನಾಟಕದಲ್ಲಿ ಗ್ಯಾರಂಟಿಗಳು ರಾಜ್ಯವನ್ನೇ ನಾಶ ಮಾಡುತ್ತಿದೆ ಎಂದು ಸ್ವತಃ ಮಲ್ಲಿಕಾರ್ಜುನ್‌ ಖರ್ಗೆ ಅವರೇ ಹೇಳಿದ್ದಾರೆ. ಕಾಂಗ್ರೆಸ್‌ ಹೇಳಿದ್ದೆಲ್ಲವೂ ಸುಳ್ಳು ಗ್ಯಾರಂಟಿಗಳು ಎನ್ನುವುದನ್ನು ಅವರೇ ಸ್ವತಃ ಒಪ್ಪಿಕೊಂಡಿದ್ದಾರೆ.

Narendra Modi ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ರಾಜ್ಯಗಳನ್ನು ಹಾಳು ಮಾಡಿದ್ದಾರೆ. ಆದ್ದರಿಂದ ನೀವು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ಘೋಷಣೆಗಳನ್ನು ಎಂದಿಗೂ ನಂಬಬಾರದು. ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

D.K. Shivakumar ಒಂದೇ ಒಂದು ಯೋಜನೆಯನ್ನೂ ಕುಮಾರಸ್ವಾಮಿ‌ ನೀಡಿಲ್ಲ- ಡಿ.ಕೆ.ಶಿವಕುಮಾರ್

0

D.K. Shivakumar ಕಳೆದ ವಿಧಾನಸಭಾ ಚುನಾವಣೆಗೂ ಮೊದಲು ಕೊಟ್ಟ ಮಾತಿನಂತೆ ನಮ್ಮ ಸರ್ಕಾರ ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಅನ್ನ ಭಾಗ್ಯ, ಶಕ್ತಿ ಹಾಗೂ ಯುವ ನಿಧಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ.

ಆ ಮೂಲಕ ಬೆಲೆ ಏರಿಕೆ ಸಮಸ್ಯೆಗೆ ಮುಕ್ತಿ ನೀಡಿ ನಿಮ್ಮ ಬದುಕಿನಲ್ಲಿ ಬದಲಾವಣೆ ತರುವ ಪ್ರಯತ್ನ ಮಾಡಿದ್ದೇವೆ.

D.K. Shivakumar ಇಂತಹ ಒಂದೇ ಒಂದು ಯೋಜನೆಯನ್ನೂ ಜನರಿಗೆ ನೀಡದ ಕುಮಾರಸ್ವಾಮಿ ಅವರು ಚನ್ನಪಟ್ಟಣ ಕ್ಷೇತ್ರಕ್ಕೆ ಬಂದು ಮತ ಕೇಳುತ್ತಿದ್ದಾರೆ‌ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಚುನಾವಣಾ ಪ್ರಮುಖ ಚಾರದ ವೈಖರಿ ಬಗ್ಗೆ ಟೀಕಿಸಿದರು.

waqf board karnataka ಸೊರಬದಲ್ಲಿ ವಕ್ಫ್ ಮಂಡಳಿಗೆ ನೀಡಿರುವ ಅಧಿಕಾರವನ್ನ ರದ್ದು‌ಮಾಡಲು ಆಗ್ರಹ

0

waqf board karnataka ರಾಜ್ಯದಲ್ಲಿನ ಮಠ, ಮಂದಿರಗಳು ಮತ್ತು ರೈತರ ಆಸ್ತಿಗಳನ್ನು ವಕ್ಫ್ ಆಸ್ತಿ ಎಂದು ನಮೂದಿಸಲಾಗುತ್ತಿದ್ದು, 1974ರಲ್ಲಿನ ವಕ್ಫ್ ಆಸ್ತಿ ಕುರಿತ ಗೆಜೆಟ್ ಅಧಿಸೂಚನೆ ಹಿಂಪಡೆಯಬೇಕು ಮತ್ತು ವಕ್ಫ್ ಮಂಡಳಿಗೆ ನೀಡಿರುವ ಅಪರಿಮಿತ ಅಧಿಕಾರವನ್ನು ರದ್ದು ಮಾಡಬೇಕು ಎಂದು ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಎಂ.ಕೆ. ಯೋಗೇಶ್ ಆಗ್ರಹಿಸಿದರು.

ತಾಲೂಕು ಬಿಜೆಪಿ ವತಿಯಿಂದ ಪಟ್ಟಣದ ತಾಲೂಕು ಕಚೇರಿಗೆ ತೆರಳಿ, ತಹಶೀಲ್ದಾರ್ ಮಂಜುಳಾ ಹೆಗಡಾಳ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಅವರು ಮಾತನಾಡಿದರು. ಕೇಂದ್ರ ಸರ್ಕಾರ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ವಕ್ಫ್ ಮಂಡಳಿ ಮೂಲಕ ರೈತರ ಭೂಮಿ ವಶಪಡಿಸಿಕೊಳ್ಳಲು ಷಡ್ಯಂತ್ರ ರೂಪಿಸಿದೆ. ಇದು ಲ್ಯಾಂಡ್ ಜಿಹಾದ್ ಆಗಿದೆ. ನೂರಾರು ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿರುವ ರೈತರ ಭೂಮಿಯ ಆರ್‌ಟಿಸಿಯಲ್ಲಿ ವಕ್ಫ್ ಹೆಸರು ನಮೂದಾಗಿದೆ. ಇದರಿಂದ ರೈತರು ದಿಕ್ಕು ತೋಚದಂತಾಗಿದ್ದಾರೆ. ರಾಜ್ಯ ಮತ್ತು ದೇಶದಲ್ಲಿ ಕಾಂಗ್ರೆಸ್ ಜನತೆಯ ನೆಮ್ಮದಿಯನ್ನು ಹದಗೆಡವಲು ಹವಣಿಸುತ್ತಿದೆ ಎಂದು ಆರೋಪಿಸಿದರು.
ರೈತರಿಗೆ ನೀಡಿರುವ ನೋಟಿಸ್ ಹಿಂಪಡೆದರೆ ಸಾಲದು, ಆರ್‌ಟಿಸಿಯಲ್ಲಿ ವಕ್ಫ್ ಎಂದು ನಮೂದು ಮಾಡಿರುವುದು ತಗೆದು ಹಾಕಬೇಕು. ರೈತರಿಗೆ ಆಗುತ್ತಿರುವ ಅನ್ಯಾಯವನ್ನು ರಾಜ್ಯ ಸರ್ಕಾರ ತಡೆಯಬೇಕು. ತುಷ್ಟೀಕರಣ ರಾಜಕಾರಣವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಕೈ ಬಿಡಬೇಕು. ಈಗಾಗಲೇ ರಾಜ್ಯ ಸರ್ಕಾರದ ನೀತಿಯನ್ನು ಖಂಡಿಸಿ ಬಿಜೆಪಿಯಿಂದ ರಾಜ್ಯದಾದ್ಯಂತ ಆಂದೋಲನ ನಡೆಸಿ, ಜನರಿಗೆ ಅರಿವು ಮೂಡಿಸುವ ಜೊತೆಗೆ ರೈತರ ಪರವಾಗಿ ಧ್ವನಿ ಎತ್ತಲಾಗಿದೆ ಎಂದರು.

waqf board karnataka ರಾಜ್ಯದಲ್ಲಿ ವಕ್ಫ್ ಆಸ್ತಿ ಎಂದು ರೈತರ ಆಸ್ತಿ, ದೇವಸ್ಥಾನಗಳ ಆಸ್ತಿಯನ್ನು ನಮೂದು ಮಾಡಿರುವುದು ಸಾರ್ವಜನಿಕರಲ್ಲಿ ಚರ್ಚೆ ನಡೆಯುತ್ತಿದೆ. ತಾಲೂಕಿನಲ್ಲಿ ಯಾವುದೇ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ನಮೂದು ಮಾಡಬಾರದು. ನಮೂದು ಮಾಡಿದ್ದಲ್ಲಿ ಅಂತಹವುಗಳನ್ನು ರದ್ದು ಮಾಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಪರಿಷತ್ ಮಾಜಿ ಸದಸ್ಯ ಪಾಣಿ ರಾಜಪ್ಪ, ಟೌನ್ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿಗಳಾದ ಮೋಹನ್ ಹಿರೇಶಕುನ, ವೈ.ಜಿ. ಗುರುಮೂರ್ತಿ, ಗ್ರಾಪಂ ಮಾಜಿ ಅಧ್ಯಕ್ಷ ದಾನಶೇಖರ ಗೌಡ, ಪ್ರಮುಖರಾದ ಶಿವಕುಮಾರ ಗುಂಜನೂರು, ಬಸವರಾಜ ಪಾಟೀಲ್, ರಾಮಚಂದ್ರ ಉಳವಿ ಸೇರಿದಂತೆ ಇತರರಿದ್ದರು.

Diana Book Gallery Shivamogga ನವೆಂಬರ್ 15 ವರೆಗೆ ಡಯಾನ ಬುಕ್ ಗ್ಯಾಲರಿಯಲ್ಲಿ ವಿಶೇಷ ರಿಯಾಯಿತಿ ಪುಸ್ತಕ ಮಾರಾಟ

0

Diana Book Gallery Shivamogga ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ ಪುಸ್ತಕ ಮಳಿಗೆಯಾದ ಡಯಾನ ಬುಕ್ ಗ್ಯಾಲರಿಯಲ್ಲಿ (ತಿಲಕ್‌ನಗರ ಮುಖ್ಯರಸ್ತೆ) ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಪುಸ್ತಕಗಳ ಮೇಲೆ ವಿಶೇಷ ರಿಯಾಯಿತಿಯನ್ನು ನೀಡಲಾಗುತ್ತಿದೆ.

ಕನ್ನಡ ಸಾರಸ್ವತ ಲೋಕದ ಹಿರಿಯ-ಕಿರಿಯ ಸಾಹಿತಿಗಳ ಕಾದಂಬರಿಗಳು, ಮಕ್ಕಳ ಸಾಹಿತ್ಯದ ಪುಸ್ತಕಗಳು, ಕಥೆ-ಕವನ ಸಂಕಲನಗಳು, ಹೊಸ ಕೃತಿಗಳು ಲಭ್ಯವಿದೆ.

ನವೆಂಬರ್ 05 ರಿಂದ ಡಿಸೆಂಬರ್ 05 ರವರೆಗೆ ಪ್ರತಿ ಕನ್ನಡ ಪುಸ್ತಕ ಖರೀದಿಗೆ ವಿಶೇಷ ರಿಯಾಯಿತಿಯನ್ನು ಕನ್ನಡ ರಾಜ್ಯೋತ್ಸವದ ಕೊಡುಗೆಯಾಗಿ ನೀಡಲಾಗುತ್ತಿದೆ. ಪುಸ್ತಕ ಪ್ರೇಮಿಗಳು ಇದರ ಪ್ರಯೋಜನ ಪಡೆದು, ಅತಿ ಹೆಚ್ಚು ಕನ್ನಡ ಪುಸ್ತಕಗಳನ್ನು ಖರೀದಿಸುವಂತೆ ಮಾಲೀಕರಾದ ಕೆ.ಎಲ್. ಈಶ್ವರ್‌ರವರು ಕೋರಿದ್ದಾರೆ.

Diana Book Gallery Shivamogga ರಿಯಾಯಿತಿಯನ್ನು ಈ ರೀತಿಯಲ್ಲಿ ಕೊಡಲಾಗುವುದು. ಪ್ರತೀ ರೂ. 100/- ಗಳ ಮೇಲ್ಟಪ್ಪ ಖರೀದಿಗೆ ಶೇ. 10 ರಷ್ಟು ಪ್ರತೀ ರೂ. 500/- ಗಳ ಮೇಲ್ಪಟ್ಟ ಖರೀದಿಗೆ ಶೇ. 15 ರಷ್ಟು ಮತ್ತು ಪ್ರತೀ ರೂ. 1000/- ಗಳ ಮೇಲ್ಪಟ್ಟ ಖರೀದಿಗೆ ಶೇ. 25 ರಷ್ಟು ರಿಯಾಯಿತಿಯನ್ನು ಕೊಡಲಾಗುವುದು.

ವಿ.ಸೂ. : ಎಸ್.ಎಲ್ ಭೈರಪ್ಪ ಮತ್ತು ಕುವೆಂಪುರವರ ಪುಸ್ತಕಗಳಿಗೆ ಶೇ. 2 0ರಷ್ಟು ರಿಯಾಯಿತಿ ಮಾತ್ರ ಇರುತ್ತದೆ.

( ಪಠ್ಯ ಪುಸ್ತಕ ಮತ್ತು ಸ್ಪರ್ಧಾತ್ಮಕ ಪುಸ್ತಕಗಳಿಗೆ ಅನ್ವಯಿಸುವುದಿಲ್ಲ.)

District Child Protection Units ಅನಾಥ, ಪರಿತ್ಯಕ್ತ ಇತ್ಯಾದಿ ಮಕ್ಕಳ ಮಾಹಿತಿಯನ್ನ ಇಲಾಖೆ ಗಮನಕ್ಕೆ ತರಲು ಪ್ರಕಟಣೆ

0

District Child Protection Units ಮಕ್ಕಳನ್ನು ಮಾರುವವರಿಗೂ ಹಾಗೂ ಕೊಳ್ಳುವವರಿಗೂ ಬಾಲನ್ಯಾಯ ಕಾಯ್ದೆ-2015 ಸೆಕ್ಷನ್ 80 ಮತ್ತು 81ರ ಅನ್ವಯ 5 ವರ್ಷಗಳವರೆಗೂ ಸೆರೆಮನೆ ವಾಸದೊಂದಿಗೆ ರೂ.1.00 ಲಕ್ಷಗಳವರೆಗೆ ದಂಡ ವಿಧಿಸಬಹುದು. ಈ ಅಪರಾಧದಲ್ಲಿ ಆಸ್ಪತ್ರೆಯವರು ಶಾಮೀಲಾದರೆ ಶಿಕ್ಷೆಯ ಅವಧಿ 3 ವರ್ಷಗಳಿಗೆ ಕಡಿಮೆ ಇಲ್ಲದಂತೆ 7 ವರ್ಷಗಳವರೆಗೆ ವಿಸ್ತರಣೆ ಮಾಡಲಾಗುವುದು. ಅನಾಥ, ಪರಿತ್ಯಕ್ತ ಮತ್ತು ಒಪ್ಪಿಸಲ್ಪಟ್ಟ ಮಕ್ಕಳ ಮಾಹಿತಿಯು ಕಂಡು ಬಂದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, District Child Protection Units ಆಲ್ಕೋಳ, ಶಿವಮೊಗ್ಗ ದೂರವಾಣಿ ಸಂಖ್ಯೆ : 08182-295709ನ್ನು ಸಂಪರ್ಕಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಶಿವಮೊಗ್ಗ ಇವರು ತಿಳಿಸಿದ್ದಾರೆ.

MESCOM Shivamogga ನವೆಂಬರ್ 7 ಗಾಂಧಿ ಬಜಾರ್ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

0

MESCOM Shivamogga ಶಿವಮೊಗ್ಗ ನಗರದ ಗಾಂಧಿಬಜಾರ್, ಬರಮಪ್ಪನಗರ, ಎಂ.ಕೆ.ಕೆ. ರಸ್ತೆಗಳಲ್ಲಿ ಕಂಬಗಳನ್ನು ಬದಲಿಸುವ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಗಾಂಧೀಬಜಾರ್, ಸೊಪ್ಪಿನ ಮಾರ್ಕೇಟ್, ಕೆ.ಆರ್.ಪುರಂ., ಭರಮಪ್ಪನಗರ, ಎಂ.ಕೆ.ಕೆ.ರಸ್ತೆ, ಬಿ.ಹೆಚ್.ರಸ್ತೆ, ನಾಗಪ್ಪಕೇರಿ, ತಿರುಪಳಯ್ಯನಕೇರಿ, ಸಾವರ್ಕರ್ ನಗರ, ಅಶೋಕ ರಸ್ತೆ, ಕೋಟೆರಸ್ತೆ, ಎಸ್.ಪಿ.ಎಂ.ರಸ್ತೆ, MESCOM Shivamogga ರಾಮಣ್ಣಶ್ರೇಷ್ಠಿ ಪಾರ್ಕ್, ಮಹಾರಾಜ ರಸ್ತೆ, ಲಷ್ಕರ್ ಮೊಹಲ್ಲಾ, ಓ.ಬಿ.ಎಲ್.ರಸ್ತೆ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ದಿ:07.11.2024 ರಂದು 09.00 ಘಂಟೆಯಿಂದ ಸಂಜೆ 6.00 ಘಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

Kote Police Shivamogga ಅಪರಿಚಿತ ಅಸ್ವಸ್ಥ ವ್ಯಕ್ತಿ ಸಾವು. ಕೋಟೆ ಪೊಲೀಸ್ ಪ್ರಕಟಣೆ

0

Kote Police Shivamogga ನಗರದ ಸಾವರ್ಕರ್ ರಸ್ತೆ ಬಳಿ ಅಸ್ವಸ್ಥರಾಗಿ ಬಿದ್ದಿದ್ದ ಸುಮಾರು 55 ರಿಂದ 60 ವರ್ಷದ ಅಪರಿಚಿತ ವ್ಯಕ್ತಿಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಪರೀಕ್ಷಿಸಿ ವ್ಯಕ್ತಿ ಮೃತಪಟ್ಟಿರುತ್ತಾನೆಂದು ತಿಳಿಸಿರುತ್ತಾರೆ.
ಮೃತನು ಸುಮಾರು 5 ಅಡಿ 5 ಇಂಚು ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದು, 2 ಇಂಚು ಉದ್ದದ ಕಪ್ಪು-ಬಿಳಿ ಬಣ್ಣದ ಕೂದಲು, 3 ಇಂಚು ಉದ್ದದ ಕಪ್ಪು ಬಿಳಿ ಬಣ್ಣದ ಕುರುಚಲು ಗಡ್ಡ ಇರುತ್ತದೆ. ಮೈಮೇಲೆ ಬೂದು ಬಣ್ಣದ ಟೀ-ಶರ್ಟ್ ಮತ್ತು ಸಿಮೆಂಟ್ ಬಣ್ಣದ ಫಾರ್ಮಲ್ ಪ್ಯಾಂಟ್ ಇರುತ್ತದೆ.
Kote Police Shivamogga ಮೃತರ ವಾರಸುದಾರರು ಯಾರಾದರೂ ಇದ್ದಲ್ಲಿ ಕೋಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದೆAದು ಪ್ರಕಟಣೆ ತಿಳಿಸಿದೆ.

SP Mithun Kumar ಸಂಕಷ್ಟದಲ್ಲಿ ಮಹಿಳೆಗೆ “ಸಖಿ-ಒನ್ ಸ್ಟಾಪ್ ಕೇಂದ್ರಕ್ಕೆ ವಾಹನ ಸೌಲಭ್ಯ ವ್ಯವಸ್ಥೆ

0

SP Mithun Kumar ಜಿಲ್ಲೆಯಲ್ಲಿ ಸಂಕಷ್ಟಕ್ಕೊಳಪಟ್ಟ ಮಹಿಳೆಯರ ರಕ್ಷಣೆಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಉಚಿತ ವಾಹನ ಸೌಲಭ್ಯವನ್ನು ಒದಗಿಸಲಾಗುತ್ತಿದ್ದು ನ.01 ರಂದು ಸದರಿ ವಾಹನಕ್ಕೆ ಶಾಸಕರಾದ ಎಸ್.ಎನ್.ಚನ್ನಬಸಪ್ಪ ಚಾಲನೆ ನೀಡಿದರು.
ಶಾಸಕರು, ಸಖಿ ಒನ್ ಸ್ಟಾಪ್ ಸೆಂಟರ್, ಮಹಿಳಾ ತ್ತ ಮಕ್ಕಳ ಅಭಿವೃದ್ದಿ ಇಲಾಖೆಗಳ ಸಂಕೀರ್ಣ ಆವರಣ, 100 ಅಡಿ ರಸ್ತೆ, ಆಲ್ಕೊಳ, ಶಿವಮೊಗ್ಗ ಇಲ್ಲಿ ನ.01 ರಂದು ವಾಹನಕ್ಕೆ ಚಾಲನೆ ನೀಡಿದರು.
ಈ ವೇಳೆ ವಿಧಾನ ಪರಿಷತ್ ಶಾಸಕರಾದ ಡಾ.ಧನಂಜಯ ಸರ್ಜಿ, ಜಿ.ಪಂ ಸಿಇಓ ಹೇಮಂತ್ ಎನ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಕೃಷ್ಣಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ ಶಶಿರೇಖಾ, ಇತರೆ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.
ಕುಟುಂಬ, ಸಮುದಾಯ ಕೆಲಸದ ಸ್ಥಳಗಳು ಖಾಸಗಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ದೌರ್ಜನ್ಯಕ್ಕೆ ಒಳಗಾಗಿ ಹಿಂಸೆಯನ್ನು ಅನುಭವಿಸುತ್ತಿರುವ ಮಹಿಳೆಯರಿಗೆ ಸಕಾಲಿಕ ನೆರವನ್ನು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರದ ನಿರ್ಭಯ ಯೋಜನೆಯಡಿ ದೇಶಾದ್ಯಂತ 24/7 ರಂತೆ ಸಖಿ ಒನ್ ಸ್ಟಾಪ್ ಸೆಂಟರ್‌ಗಳನ್ನು ದೇಶದ ಪ್ರತಿ ಜಿಲ್ಲೆಗಳಲ್ಲಿ ಪ್ರಾರಂಭಿಸಲಾಗಿದೆ.
ಸಖಿ-ಒನ್ ಸ್ಟಾಪ್ ಸೆಂಟರ್ ಕೇಂದ್ರವನ್ನು ಜಿಲ್ಲೆಯಲ್ಲಿ ಶಿವಮೊಗ್ಗ ಮತ್ತು ಸಾಗರ ತಾಲ್ಲೂಕಿನಲ್ಲಿ ಪ್ರಾರಂಭಿಸಲಾಗಿದೆ. ಶಿವಮೊಗ್ಗದಲ್ಲಿ ದಿ: 06-11-2020 ರಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಗಳ ಸಂಕೀರ್ಣ ಆವರಣ, 100 ಅಡಿ ರಸ್ತೆ, ಆಲ್ಕೊಳ, ಶಿವಮೊಗ್ಗ ಇಲ್ಲಿ ಸ್ವಂತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸಾಗರ ತಾಲ್ಲೂಕಿನಲ್ಲಿ ದಿ: 28-05-2024 ರಿಂದ ಕಾರ್ಯಾರಂಭಗೊAಡು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಅವರಣ, ಲೋಕೋಪಯೋಗಿ ಕಟ್ಟಡ, ಬಿ.ಹೆಚ್.ರಸ್ತೆ, ಸಾಗರ ಇಲ್ಲಿ ಕೆಲಸ ನಿರ್ವಹಿಸುತ್ತಿದೆ.
SP Mithun Kumar ಸಖಿ ಕೇಂದ್ರದಲ್ಲಿ ಸಂಕಷ್ಟದಲ್ಲಿರುವ ಮಹಿಳೆಯರಿಗೆ 5 ಉಚಿತ ಸೇವೆಗಳಾದ ಆಪ್ತ ಸಮಾಲೋಚನೆ, ಪೊಲೀಸ್ ನೆರವು, ಕಾನೂನು ನೆರವು, ವೈದ್ಯಕೀಯ ನೆರವು ಮತ್ತು ತಾತ್ಕಾಲಿಕ ಆಶ್ರಯವನ್ನು 24/7 ಒದಗಿಸಲಾಗುತ್ತಿದೆ.
ಶಿವಮೊಗ್ಗ ಸಖಿ ಕೇಂದ್ರದಲ್ಲಿ ಒಟ್ಟು 2095 ಪ್ರಕರಣಗಳು ದಾಖಲಾಗಿದ್ದು, 1846 ಪ್ರಕರಣಗಳಿಗೆ ಕೇಂದ್ರದ ಸೇವೆಗಳನ್ನು ಒದಗಿಸಿ ಮುಕ್ತಾಯಗೊಳಿಸಲಾಗಿರುತ್ತದೆ.
ಜಿಲ್ಲೆಯಲ್ಲಿ ಸಂಕಷ್ಟಕ್ಕೊಳಪಟ್ಟ ಮಹಿಳೆಯರ ರಕ್ಷಣೆಗಾಗಿ ಉಚಿತ ವಾಹನ ಸೌಲಭ್ಯ ಒದಗಿಸಲಾಗಿದ್ದು ನೊಂದ ಮಹಿಳೆಯರು ಸಖಿ ಕೇಂದ್ರಕ್ಕಾಗಲಿ ಅಥವಾ ಮಹಿಳಾ ಸಹಾಯವಾಣಿ ಸಂ: 181 ಕ್ಕೆ ಕರೆ ಮಾಡಿ ಪ್ರಯೋಜನ ಪಡೆಯಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.

Shimoga BJP Protest Waqf Land Row ವಕ್ಫ್ ಆಸ್ತಿ” ಲ್ಯಾಂಡ್ ಜಿಹಾದ್” ವಿರುದ್ಧ ಶಾಸಕ ಚೆನ್ನಿ ನೇತೃತ್ವದಲ್ಲಿ ಪ್ರತಿಭಟನೆ

Shimoga BJP Protest Waqf Land Row ಲ್ಯಾಂಡ್ ಜಿಹಾದ್ ಮೂಲಕ ಮತ ಬ್ಯಾಂಕ್ ಓಲೈಕೆಯಲ್ಲಿ ತೊಡಗಿ ರೈತರ ಜಮೀನನ್ನು ಕಬಳಿಸುತ್ತಿರುವ ಸಚಿವ ಜಮೀರ್ ಅಹಮದ್ ಮತ್ತು ಮುಸಲ್ಮಾನರ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ವಿರುದ್ಧ ನಮ್ಮ ಧಿಕ್ಕಾರ!!

Shimoga BJP Protest Waqf Land Row ಬಡ ರೈತರ, ಹಿಂದೂ ದೇವಾಲಯಗಳನ್ನು ಹಾಗೂ ಐತಿಹಾಸಿಕ ಮಠಗಳ ಆಸ್ತಿಯನ್ನು ವಕ್ಫ್‌ ಹೆಸರಿನಲ್ಲಿ ಕಬಳಿಸಿ ‘ಲ್ಯಾಂಡ್ ಜಿಹಾದ್’ಗೆ ಮುಂದಾಗಿರುವ ‘ವಕ್ಫ್‌ ಮಂಡಳಿಯ ಅಕ್ರಮ’ ವಿರುದ್ಧ ಬಿಜೆಪಿ ಶಿವಮೊಗ್ಗನಗರ ಹಾಗೂ ಗ್ರಾಮಾಂತರ ಮಂಡಲದ ವತಿಯಿಂದ ಜರುಗಿದ ಬೃಹತ್ ಪ್ರತಿಭಟನೆಯಲ್ಲಿ ಶಿವಮೊಗ್ಗ ನಗರ ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅವರು ಭಾಗವಹಿಸಿದ್ದರು.