Tuesday, March 24, 2026
Tuesday, March 24, 2026
Home Blog Page 493

JCI Shivamogga ಸನಾತನ ಆಯುರ್ವೇದ ಪದ್ಧತಿಯು ಕೊರೋನ ಅವಧಿಯಲ್ಲಿ ಲಕ್ಷಾಂತರ ಜನರ ಜೀವ ಕಾಪಾಡಿದೆ-ಡಾ.ಜ್ಯೋತಿ ಲಕ್ಷ್ಮಿ ಪಾಟೀಲ್

0

JCI Shivamogga ಉತ್ತಮ ಜೀವನಶೈಲಿ, ಆಹಾರ ಪದ್ಧತಿ, ಯೋಗ, ಪ್ರಾಣಾಯಾಮದ ಅಭ್ಯಾಸದಿಂದ ಸದೃಢ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಆಯುರ್ವೇದ ತಜ್ಞೆ ಡಾ. ಜ್ಯೋತಿ ಲಕ್ಷ್ಮೀಪಾಟೀಲ್ ಹೇಳಿದರು.

ಅಶ್ವತ್ಥ್ ನಗರದ 8ನೇ ತಿರುವಿನಲ್ಲಿರುವ ಶಿವಶಕ್ತಿ ಯೋಗ ಮಂದಿರದಲ್ಲಿ ಜೆಸಿಐ ಶಿವಮೊಗ್ಗ ವಿವೇಕ್ ವತಿಯಿಂದ ಆಯೋಜಿಸಿದ್ದ ಉಚಿತ ಯೋಗ, ಪ್ರಾಣಾಯಾಮ, ಧ್ಯಾನ ಶಿಬಿರ, ಆಯುರ್ವೇದದಲ್ಲಿ ಮನೆಮದ್ದು ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸನಾತನ ಆಯುರ್ವೇದ ಪದ್ಧತಿಯು ಕರೋನಾ ಸಂದರ್ಭದಲ್ಲಿ ಲಕ್ಷಾಂತರ ಜನರ ಜೀವ ಕಾಪಾಡಿದೆ. ಇಂದಿಗೂ ಯಾವುದೇ ತರಹದ ಅಡ್ಡ ಪರಿಣಾಮಗಳಿಲ್ಲದೇ ಆಯುರ್ವೇದದಲ್ಲಿ ಒಳ್ಳೆಯ ಔಷಧ ಪದ್ಧತಿಗಳಿವೆ. ಇತ್ತೀಚಿನ ದಿನಗಳಲ್ಲಿ ತಕ್ಷಣ ಕಾಯಿಲೆ ವಾಸಿಯಾಗಲು ಕೂಡಲೇ ಪರಿಣಾಮ ಬೀರುವ ಔಷಧಗಳ ಮೊರೆ ಹೋಗುತ್ತಾರೆ. ಇದರಿಂದ ಹೊಸ ಹೊಸ ಕಾಯಿಲೆಗಳು ಕಾಣಿಸುತ್ತವೆ. ಇಂತಹ ಶಿಬಿರದ ಸದುಪಯೋಗ ಪಡೆದುಕೊಂಡು ಜನರು ಉತ್ತಮ ಜೀವನಶೈಲಿ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.

JCI Shivamogga ಯೋಗಶಿಕ್ಷಕ ಕಾಟನ್ ಜಗದೀಶ್ ಮಾತನಾಡಿ, ಶಿಬಿರದಲ್ಲಿ ಸಕ್ಕರೆ ಕಾಯಿಲೆ, ರಕ್ತದ ಒತ್ತಡ, ಥೈರಾಯ್ಡ್, ಮಂಡಿ ನೋವು, ಸೊಂಟ ನೋವು, ಮೈಗ್ರೇನ್, ತಲೆನೋವು, ಮಾನಸಿಕ ಒತ್ತಡ ಹೀಗೆ ಅನೇಕ ಕಾಯಿಲೆಗಳಿಗೆ ಯೋಗ, ಪ್ರಾಣಾಯಾಮ, ಧ್ಯಾನದ ಮೂಲಕ ಪರಿಹಾರ ಕಂಡುಕೊಳ್ಳುವ ಮಾರ್ಗ ತಿಳಿಸಲಾಗುತ್ತಿದೆ ಎಂದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಡಾ. ಪರಿಸರ ನಾಗರಾಜ್, ಪ್ರತಿಭಾ ಅಶೋಕ್, ಮಂಜುಳಾ ಪ್ರೇಮ್‌ಕುಮಾರ್, ರಾಮಚಂದ್ರಪ್ಪ, ಮತ್ತು 60ಕ್ಕೂ ಹೆಚ್ಚು ಯೋಗಾಸಕ್ತರು ಶಿಬಿರದಲ್ಲಿ ಪಾಲ್ಗೊಂಡಿದ್ದರು.

Department of Kannada and Culture ಕನಕದಾಸರು ನಾವೆಲ್ಲ ಸಮಾನರು ಎಂಬ ತತ್ವ ಸಾರಿದವರು- ಶಾಸಕಿ ಬಲ್ಕೀಷ್ ಬಾನು

0

Department of Kannada and Culture ಧರ್ಮ ಎಂದರೆ ಆತ್ಮದ ಶುದ್ದೀಕರಣ. ಹೃದಯ ಶುದ್ದವಾಗಿದ್ದರೆ ಮಾತ್ರ ಧನಾತ್ಮಕ ಚಿಂತನೆ ಸಾಧ್ಯ. ಎಲ್ಲ‌ ಮನುಜರೂ ಸಮಾನರು ಎಂದು ಸಾರಿದವರು ಕನಕದಾಸರು.

ನಾವೆಲ್ಲ ಅವರ ತತ್ವಗಳನ್ನು ಅಳವಡಿಸಿಕೊಳ್ಳಬೇಕೆಂದು ವಿಧಾನ ಪರಿಷತ್ ಶಾಸಕಿ‌ ಬಲ್ಕೀಶ್ ಬಾನು‌ ಹಳಿದರು.
ಜಿಲ್ಲಾಡಳಿತ, ಜಿ.ಪಂ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಕುರುಬರ ಸಂಘ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ‌ ಸೋಮವಾರ ಕುವೆಂಪು ರಂಗ ಮಂದಿರದಲ್ಲಿ ಏರ್ಪಡಿಸಲಾಗಿದ್ದ ಶ್ರೀ ಕನಕದಾಸರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿಜಯನಗರ ಸಾಮ್ರಾಜ್ಯದಲ್ಲಿ ಯೋಧನಾಗಿ ಬಹಳ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಿದ್ದ ಕನಕದಾಸರು ಜನರ ಸಂಕಷ್ಟಗಳನ್ನು‌ ನೋಡಿ, ಸಮಾಜದ ಸಮಸ್ಯೆಗಳನ್ನು ಎತ್ತಿ ಹಿಡಿದು‌ ತಮ್ಮ ಗೀತೆಗಳು, ಕೀರ್ತನೆಗಳ ಮೂಲಕ ಪರಿಹಾರ ತೋರಿದವರು.

ಬಸವ ತತ್ವ ಗಳನ್ನು ಅಳವಡಿಕೊಂಡ ಅವರು ನುಡಿದಂತೆ ನಡೆದು, ಶೋಷಿತರ ಧ್ವನಿಯಾಗಿದ್ದರು. ನಾವೆಲ್ಲ ಸಮಾನರು ಎಂಬ ತತ್ವದೊಂದಿಗೆ ಬಡವರ ಸಂಕಷ್ಟಕ್ಕೆ ಮಿಡಿದವರು. ಅವರ ಜಯಂತಿ
ಕೇವಲ ಸರ್ಕಾರದ ಜಯಂತಿ ಆಗಬಾರದು. ಅವರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲ‌‌ ಸಾಗಬೇಕು ಎಂದರು.

ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ರವಿಕುಮಾರ್‌ ಮಾತನಾಡಿ, ಸಮಾಜ ಸುಧಾರಣೆಯಲ್ಲಿ‌ ಕನಕದಾಸರ ಕೊಡುಗೆ ಅಪಾರ. ಅವರು ಕೇವಲ ಒಂದು ಸಮುದಾಯಕ್ಕೆ ಸೇರಿದವರಲ್ಲ, ಬದಲಾಗಿ‌ಎಲ್ಲ ಸಮುದಾಯಕ್ಕೆ ಸೇರಿದವರು. ಆದ್ದರಿಂದ ಜಯಂತಿಯಲ್ಲಿ‌ ಎಲ್ಲರೂ ಪಾಲ್ಗೊಂಡು ಹಬ್ಬದ ರೀತಿಯಲ್ಲಿ ಜಯಂತಿ ಆಚರಣೆ ಮಾಡಬೇಕು. ಈಗಿನ ಮಕ್ಕಳಿಗೆ ಕನಕದಾಸರನ್ನು ಪರಿಚಯಿಸಬೇಕು ಎಂದರು.

ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್‌ಮಾತನಾಡಿ, ೧೫ ನೇ ಶತಮಾನದಲ್ಲಿ ೧೭ ಗ್ರಾಮಗಳಿಗೆ ಪಾದಯಾತ್ರೆ ಮೂಲಕ ಜನರ ಮನೆ ಮನೆಗೆ ಹೋಗಿ ಸಮಸ್ಯೆ ತಿಳಿದು ಪರಿಹರಿಸುವ ಕೆಲಸ ಮಾಡಿದ ಕನಕರ‌ ಆದರ್ಶ , ಚಿಂತನೆ ಇಂದಿಗೂ ಪ್ರಸ್ತುತ. ಭಕ್ತಿಗೆ ಭಗವಂತ ಒಲಿಯುತ್ತಾನೆಂಬುದಕ್ಕೆ ಶ್ರೀ ಕೃಷ್ಣನನ್ನು ಒಲಿಸಿಕೊಂಡ ಕನಕದಾಸರೇ ಸಾಕ್ಷಿ ಎಂದರು.

ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ(ಪ್ರಭಾರ) ಡಾ.ಚಿದಾನಂದ ಎನ್.ಕೆ.ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಮಹಾನ್ ಮಾನವತಾವಾದಿ, ದಾರ್ಶನಿಕರಾದ ಕನಕದಾಸರು ಪಂಚಮವೇದದಲ್ಲಿ
ಪ್ರಮಯಖ ನಾಯಕರಾಗಿ ನೆಲೆಗೊಂಡಿದ್ದಾರೆ.

Department of Kannada and Culture ರಾಜಕಾರಣ, ದಾರ್ಶನಿಕತೆ ಮತ್ತು ಅಕ್ಷರಗಳನ್ನು ಶ್ರೇಷ್ಠ ವಾಗಿ ಅಪ್ಪಿಕೊಂಡು ಸಾಗಿದವರು ಕನಕರು. ಬಾಡಾ ನಗರ ವ್ಯಾಪಾರಿ ತಾಣವಾಗಿದ್ದು, ತಂದೆ ಬೀರಪ್ಪ ನಾಯಕ‌ರು ಅಲ್ಲಿನ ಮುಖ್ಯಸ್ಥರಾಗಿದ್ದರು. ತಂದೆಯಿಂದ ಸಕಲ ವಿದ್ಯೆಗಳನ್ನು ಕನಕರು ಪಡೆದಿದ್ದರು. ಏಕತಾರಿ, ಕಂಬಳಿ ಮತ್ತು ಕೀರ್ತನೆ ಮೂಲಕ ದಾರ್ಶನಿಕರಾಗಿ ಊರಿನಿಂದ ಊರಿಗೆ ಗೀತೆ-ಕೀರ್ತನೆಗಳ ಮೂಲಕ ಸಮಾನತೆಯ ತತ್ವಗಳನ್ನು ಸಾರುತ್ತಾ ಹೋದರು. ನಡೆದಂತೆ ನುಡಿದವರು. ಪ್ರಸ್ತುತ ಶಿಕ್ಷಣ ವ್ಯವಸ್ಥೆ ಕನಕರು ಪ್ರತಿಪಾದಿಸಿದಂತೆ ನೆಲ ಸಂಸ್ಕೃತಿ, ಕಲೆ ಮತ್ತು ಜ್ಞಾನದ ಆಧಾರದಲ್ಲಿ ನೆಲೆಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಶ್ರವಣ ಸಂಸ್ಕೃತಿಯ ದೊಡ್ಡ ದ್ಯೋತಕ ಕನಕ. ಇಂದಿನ ಮಕ್ಕಳು ದಾರ್ಶನಿಕರು ಹೇಳಿದ ಮಾತುಗಳನನ್ನು ಕೇಳಬೇಕಿದೆ ಎಂದು ಹೇಳಿದರು.
ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಪ್ರಸನ್ನ ಕುಮಾರ್ ಮಾತನಾಡಿ, ಕನಕರ ಭಕ್ತಿಗೆ ಭಗವಾನ್ ಶ್ರೀ ಕೃಷ್ಣನೂ ದರ್ಶನ ನೀಡಿದ್ದರು.ಭಕ್ತಿ, ಶ್ರಮದಿಂದ ಬದುಕುವ ಸಮಾಜ ನಮ್ಮದು. ಯಾರೂ ಮೇಲು ಕೀಳಲ್ಲ. ನಾವೆಲ್ಲ ಒಂದೇ ಎಂದು ಕನಕರು ಶೋಷಿತ ವರ್ಗದ ಧ್ವನಿಯಾಗಿ ಸಾಹಿತ್ಯ ರಚಿಸಿದ್ದಾರೆ. ಅವರು‌ ಕುರುಬ ಸಮಾಜಕ್ಕೆ ಮಾತ್ರ ಸೀಮಿತರಲ್ಲ. ಎಲ್ಲ ವರ್ಗಕ್ಕೆ ಸೇರಿದವರು.‌ ಸಹಬಾಳ್ವೆ , ಪ್ರೀತಿಯಿಂದ ಒಟ್ಟಾಗಿ ಹೋಗೋಣ ಎಂದರು.‌

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿ.ಪಂ.ಸಿಇಓ ಎನ್.ಹೇಮಂತ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್ , ಸಮಾಜದ ಮುಖಂಡರು ಪಾಲ್ಗೊಂಡಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ‌ ನಿರ್ದೇಶಕ‌ ಉಮೇಶ್ ಹೆಚ್‌ ಸ್ವಾಗತಿಸಿದರು. ರೇಖಾ ರಂಗನಾಥ ವಂದಿಸಿದರು.

Rotary Club Shimoga ವ್ಯಕ್ತಿಗತ ಸಾಧಿಸಲಾಗದ್ದನ್ನ ಸಂಘದ ಮೂಲಕ ಸಾಧಿಸಬಹುದು- ಜಿ.ಕಿರಣ್ ಕುಮಾರ್

0

Rotary Club Shimoga ಆಧುನಿಕ ಯುಗದಲ್ಲಿ ಸಂಘಗಳ ಪರಿಕಲ್ಪನೆ ಪ್ರಾಮುಖ್ಯತೆ ಪಡೆದಿದೆ ಎಂದು ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಜಿ.ಕಿರಣ್ ಕುಮಾರ್ ಹೇಳಿದರು.

ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಮತ್ತು ಎಫ್‌ಪಿಎಐ ಆಶಯದಲ್ಲಿ ಸಂಘ ಸಂಸ್ಥೆಗಳ ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿ, ವ್ಯಕ್ತಿಗತವಾಗಿ ಸಾಧಿಸಲಾಗದ ಬೇಡಿಕೆಗಳನ್ನು ಸಂಘದ ಮೂಲಕ ಸಾಧಿಸುವುದು ಸಾಧ್ಯ. ಎಲ್ಲ ಸಂಘ-ಸಂಸ್ಥೆಗಳ ಉದ್ದೇಶ ಒಂದೇ ಆದರೆ ದಾರಿ ಬೇರೆ ಬೇರೆ ಇರುತ್ತದೆ. ರೋಟರಿ ಸಂಸ್ಥೆಯಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

ರೋಟರಿ ಸಂಸ್ಥೆಯು ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚು ಸೇವಾ ಕಾರ್ಯಗಳನ್ನು ನಡೆಸುತ್ತಿದೆ. ಎಲ್ಲರ ಸಹಾಕರದಿಂದ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಫ್‌ಪಿಎಐ ಉಪಾಧ್ಯಕ್ಷ ಭಾರತಿ ಚಂದ್ರಶೇಖರ್ ಮಾತನಾಡಿ, ಈ ರೀತಿ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು. ಸಂಘ ಸಂಸ್ಥೆಗಳು ಒಗ್ಗೂಡುವುದರಿಂದ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಅನುಕೂಲವಾಗುವುದು ಎಂದು ತಿಳಿಸಿದರು.

Rotary Club Shimoga ಸಂಪನ್ಮೂಲ ವ್ಯಕ್ತಿಯಾಗಿ ವಿಶಾಲಾಕ್ಷಿ ಅವರು ಲಿಂಗಧಾರಿತ ದೌರ್ಜನ್ಯದ ಬಗ್ಗೆ ಸಭೆಗೆ ಸವಿಸ್ತಾರವಾಗಿ ವಿವರಣೆ ನೀಡಿದರು. ಸಂಪನ್ಮೂಲ ವ್ಯಕ್ತಿ ಸಂತು ಬಾಯಿ ಅವರು ಆರೋಗ್ಯದ ಆರಿವು ಮೂಡಿಸಿದರು. ಸಂಪನ್ಮೂಲ ವ್ಯಕ್ತಿ ವಿಲಿಯಮ್ಸ್ ಅವರು ವ್ಯಕ್ತಿತ್ವ ವಿಕಸನದ ಬಗ್ಗೆ ಮಾಹಿತಿ ನೀಡಿದರು.
ಈಶ್ವರ್, ಜಯಶೀಲ ಶೆಟ್ಟಿ, ಗೀತಾ ಜಗದೀಶ್ ಉಪಸ್ಥಿತರಿದ್ದರು.

ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್‌ನ ರವಿ ಕೋಟೊಜಿ, ಜಿ.ಪಿ.ಚಂದ್ರು, ನಟರಾಜ್, ಬಸವರಾಜ್, ಶುಭಾ, ಚಿದಾನಂದ್, ಎಫ್‌ಪಿಎಐನ ಸತೀಶ್, ತೇಜಸ್ವಿನಿ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾರ್ಯಗಾರದಲ್ಲಿ ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು ಭಾಗವಹಿಸಿದ್ದರು.

Tiger and Lion Safari Tyavarekoppa ತ್ಯಾವರೆಕೊಪ್ಪ ಮೃಗಾಲಯಕ್ಕೆ ಮತ್ತಷ್ಟು ಆಕರ್ಷಣೆ ಹೊಸ ಅತಿಥಿಗಳ ಸೇರ್ಪಡೆ

0

Tiger and Lion Safari, Tyavarekoppa ಕೇಂದ್ರಿಯ ಮೃಗಾಲಯ ಪ್ರಾಧಿಕಾರ ನವದೆಹಲಿರವರಿಂದ ಶಿವಮೊಗ್ಗ ತ್ಯಾವರೆಕೊಪ್ಪದ ಹುಲಿ-ಸಿಂಹಧಾಮದಿಂದ ಕೇರಳದ ತಿರುವನಂತಪುರಂನ ಝೋಲಾಜಿಕಲ್ ಪಾರ್ಕ್ ಮೃಗಾಲಯಗಳ ನಡುವೆ ಹೆಚ್ಚುವರಿಯಾಗಿರುವ ಪ್ರಾಣಿಗಳನ್ನು ನ.11 ರಿಂದ ನ.16ರ ವರೆಗೆ ವಿನಿಮಯ ಕಾರ್ಯಕ್ರಮ ನಡೆಸಲಾಗಿದೆ.

ತ್ಯಾವರೆಕೊಪ್ಪ ಹುಲಿ-ಸಿಂಹಧಾಮದಿಂದ ಮಾರ್ಶ್ ಕ್ರೋಕಡೈಲ್, ಸ್ಟ್ರೀಪಿಡ್ ಹೈನಾ, ಇಂಡಿಯನ್ ಗೋಲ್ಡನ್ ಜಾಕಲ್, ಏ಼ಷೀಯನ್ ಪ್ಲಾಮ್ ಸಿವೀಟ್ ಪ್ರಾಣಿಗಳು ಕೇರಳದ ತಿರುವನಂತಪುರಂನ ಝೋಲಾಜಿಕಲ್ ಪಾರ್ಕ್ಗೆ ಕಳುಹಿಸಲಾಗಿದೆ.

ಕೇರಳದ ತಿರುವನಂತಪುರಂನ ಝೋಲಾಜಿಕಲ್ ಪಾರ್ಕ್ನಿಂದ ಘಾರಿಯಾಲ, ಲೇಸ್ಸರ್ ರೀಹಾ, ಸ್ಟ್ರೀಪಿಡ್ ಹೈನಾ, ಇಂಡಿಯನ್ ಕ್ರೈಸ್ಟೇಡ್ ಪೋರ್‌ಕಪೈನ್, ಸನ್ ಕೌನ್ಸರ್ ಪ್ರಾಣಿಗಳನ್ನು ತ್ಯಾವರೆಕೊಪ್ಪ ಹುಲಿ-ಸಿಂಹಧಾಮಕ್ಕೆ ತರಲಾಗಿದೆ.

ಹುಲಿ-ಸಿಂಹಧಾಮ ತ್ಯಾವರೆಕೊಪ್ಪ ಮೃಗಾಲಯಕ್ಕೆ ಘಾರಿಯಾಲ ಸೇರ್ಪಡೆಗೊಂಡಿದ್ದು ಹಾಗೂ ಪ್ರಥಮ ಬಾರಿ ಮೃಗಾಲಯಕ್ಕೆ ತೀವ್ರವಾಗಿ ಅಳಿವಿನಂಚಿನಲ್ಲಿರುವ ಜಾತಿ ಸಂರಕ್ಷಣೆಯ ಬಗ್ಗೆ ಪ್ರಕೃತಿ ಶಿಕ್ಷಣ ನೀಡಲು ಈ ಪ್ರಭೇದದಿಂದ ಸಹಾಯಕವಾಗಲಿದೆ.

Tiger and Lion Safari, Tyavarekoppa ಪ್ರಥಮ ಬಾರಿ ಮೃಗಾಲಯಕ್ಕೆ ಸೌತ್ ಆಫ್ರೀಕನ್‌ಕ್ಕೆ ಸಂಬಂಧಿಸಿದ ಪಕ್ಷಿಗಳ ಪ್ರಭೇದವಾದ ಲೇಸ್ಸರ್ ರೀಹಾ ಮತ್ತು ಸನ್ ಕೌನ್ಸರ್ ಸೇರ್ಪಡೆಯಾಗಿರುತ್ತವೆ. ಭಾರತೀಯ ಕ್ರೆಸ್ಟೆಡ್ ಮುಳ್ಳುಹಂದಿ ಬಹುದಿನಗಳ ನಂತರ ಹುಲಿ-ಸಿಂಹಧಾಮ ತ್ಯಾವರೆಕೊಪ್ಪ ಮೃಗಾಲಯಕ್ಕೆ ಸಂಬಂಧಿಸಿದ ಅನಿಮಲ್ ಕಲೆಕ್ಷನ್ ಪ್ಲಾನ್‌ಗೆ ಮತ್ತೊಂದು ಸೇರ್ಪಡೆಯಾಗಿದೆ.

ಗಂಡು ಕತ್ತೆ ಕಿರುಬ ಪ್ರಾಣಿಯನ್ನು ಬ್ಲಡ್‌ಲೈನ್ ಎಕ್ಸಚೆಂಗ್‌ಗಾಗಿ ವಿನಿಮಯ ಮಾಡಿಕೊಳ್ಳಲಾಗಿದೆ.
ಹುಲಿ-ಸಿಂಹಧಾಮ, ತ್ಯಾವರೆಕೊಪ್ಪ ವೈದ್ಯಾಧಿಕಾರಿಗಳು ಪ್ರಾಣಿಗಳು ಆರೋಗ್ಯದಿಂದಿರುವುದಾಗಿ ತಿಳಿಸಿರುತ್ತಾರೆ. ಈ ಪ್ರಾಣಿಗಳ ಆಗಮನದಿಂದ ತ್ಯಾವರೆಕೊಪ್ಪ ಹುಲಿ-ಸಿಂಹಧಾಮ ಮೃಗಾಲಯದಲ್ಲಿ ಪ್ರಾಣಿ-ಪಕ್ಷಿ ಪ್ರಭೇದಗಳ ಸಂಖ್ಯೆ ಒಟ್ಟು 30 ರಿಂದ 34ಕ್ಕೆ ಹೆಚ್ಚಳವಾಗಿದೆ ಎಂದು ಹುಲಿ-ಸಿಂಹಧಾಮ, ತ್ಯಾವರೆಕೊಪ್ಪದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

Karnataka Rakshana Vedike ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ನಗರಾಧ್ಯಕ್ಷ ಪ್ರಫುಲ್ಲಚಂದ್ರರಿಗೆ ಸನ್ಮಾನ

0

Karnataka Rakshana Vedike ಶಿವಮೊಗ್ಗ ಕ್ರೀಡಾ ಮತ್ತು ಸಂಸ್ಕೃತಿ ಕ್ಲಬ್ ಬಾಂಡ್ ಇಲೆವೆನ್ ಕ್ರಿಕೆಟ್ ಕ್ಲಬ್ ಶಿವಮೊಗ್ಗ ವತಿಯಿಂದ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ನಗರಾಧ್ಯಕ್ಷರಾದ ಪ್ರಫುಲ್ಲಚಂದ್ರ ಹೆಚ್, ರವರನ್ನು ಗೌರವಿಸಿ ಸನ್ಮಾನಿಸಲಾಯಿತು ಪೂರ್ಣ ಪ್ರಮಾಣದ ಆಯೋಜಕರು ತರುಣ್ ಶೆಟ್ಟಿ ಹಾಗೂ ನಿಶ್ಚಲ್ ಶೆಟ್ಟಿ, ಹಾಗೂ ಪ್ರಮುಖರಾದ ಶಿವಮೊಗ್ಗದ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಆದ ಶ್ರೀ ಶಿವಕುಮಾರ್ ಹಾಗೂ, ಶ್ರೀ ವಿನ್ಸೆಂಟ್ ರೋಡ್ರಿಗಸ್ ಜಿಲ್ಲಾ ಬಿಜೆಪಿ ಕಾರ್ಯದರ್ಶಿ, ಶ್ರೀ ಯೋಗೇಶ್ ಗೌಡ ಕಾಂಗ್ರೆಸ್ ಮುಖಂಡರು,ಶ್ರೀ ಸೈಫು ಕಾಂಗ್ರೆಸ್ ಮುಖಂಡರು,ಶ್ರೀ ಲೋಹಿತ ಜೆಡಿಎಸ್ ಯುವ ಮುಖಂಡರು,ಶ್ರೀ ಚಿರಂಜೀವಿ ಬಾಬು ಯುವ ಮುಖಂಡರು, ಶ್ರೀ ಗೀತೇಂದ್ರ ಗೌಡ ಕಾಂಗ್ರೆಸ್ ಮುಖಂಡರು,ಶ್ರೀ ಗೋಪಿ ಜೆಡಿಎಸ್ ಮುಖಂಡರು, ಶ್ರೀ ರವೀಂದ್ರ ಗೌಡ ಸಮಾಜಸೇವಕರು ಇವರ ಭಾಗವಹಿಸಿದ್ದರು

Kanaka Dasa Jayanti 2024 ಭಕ್ತಿ ಮಾರ್ಗದ ಭುವನ ರತ್ನ, ಶ್ರೀ ಕನಕದಾಸರು ಲೇ: ಎನ್.ಜಯಭೀಮ ಜೊಯ್ಸ್.ಶಿವಮೊಗ್ಗ.

0

Kanaka Dasa Jayanti 2024 ಹರಿದಾಸರ ಪಂಕ್ತಿಯಲ್ಲಿ ಶ್ರೇಷ್ಠ ಹರಿದಾಸರ ಸಾಲಿಗೆ
ಸೇರಿದವರು ಕನಕದಾಸರು.ಇವರು ಕನ್ನಡ
ಭಾಷೆಯ ಪ್ರಸಿದ್ಧ ಕೀರ್ತನಕಾರರು ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆಕಾಣಿಕೆಯನ್ನಿತ್ತವರು.
ಇವರುಶ್ರೀವ್ಯಾಸರಾಯರಪರಮಾಪ್ತಶಿಷ್ಯರು.ಶ್ರೀವ್ಯಾಸರಾಯ ಗುರುಗಳಿಂದ ಅಂಕಿತ ಪಡೆದ ಹರಿದಾಸರು ಕನಕದಾಸರು.
ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆ
ಗಳೆಂದು ಬಣ್ಣಿಸಲಾಗಿದೆ.ಪ್ರಹ್ಲಾದರಾಜರು ಹೇಗೆ ತನ್ನ ತಂದೆಯಾದ ಹಿರಣ್ಯಕಶಿಪುವಿಗೆ ದೇವರು ಎಲ್ಲ ಕಡೆಯೂಇದ್ದಾನೆಎಂಬುದನ್ನುತೋರಿಸಿಕೊಟ್ಟರೋ ಹಾಗೆಯೇ ಕನಕದಾಸರೂ ಕೂಡ ಲೋಕಕ್ಕೆ ದೇವರಿಲ್ಲದ ಜಾಗವೇ ಇಲ್ಲಎಂದು ಮನವರಿಕೆ ಮಾಡಿಕೊಟ್ಟ ಮಹಾನುಭಾವರು.
ಅವರು ಕಡಲ ತಡಿಯಲ್ಲಿರುವ ಉಡುಪಿ ಕ್ಷೇತ್ರಕ್ಕೆ
ಬಂದಾಗ ಕೃಷ್ಣದೇವರು ಅವರ ಭಕ್ತಿಗೆ ಓಗೊಟ್ಟು ಕಿಂಡಿಯಲ್ಲಿ ದರ್ಶನ ಕೊಡುತ್ತಾನರೆ.ಕನಕದಾಸರಿಗೆ
ಶ್ರೀಕೃಷ್ಣ ದರ್ಶನ ಕೊಟ್ಟ ಕಿಂಡಿಯು “ಕನಕನ ಕಿಂಡಿ”ಎಂದೇ ಹೆಸರು ಪಡೆದಿದೆ. ಭಕ್ತನಿಗೆ ದೇವರ ಮೇಲೆ ಇರುವ ಪ್ರೇಮಕ್ಕಿಂತದೇವರಿಗೆಭಕ್ತನ ಮೇಲಿರುವ ಪ್ರೇಮ ಅತಿ ಹೆಚ್ಚಾಗಿರುತ್ತದೆ ಎಂಬುದು ಉಡುಪಿಯ ಕೃಷ್ಣನು ಕನಕದಾಸರಿಗೆ ದರ್ಶನ ಕೊಟ್ಟರೀತಿಯಲ್ಲೇ ತಿಳಿಯುತ್ತದೆ.ಶ್ರೀಕೃಷ್ಣನ ದರ್ಶನಕ್ಕಾಗಿ ಕಾಯುತ್ತಿದ್ದ ಕನಕದಾಸರಿಗೆ ಶ್ರೀಕೃಷ್ಣನ ವಿಗ್ರಹವೇ ಅವರ ಕಡೆ ಳ
ಮುಖಮಾಡಿ ತಿರುಗಿದ್ದುದನ್ನು ನೋಡಿದರೆ ಭಗವಂತನಿಗೆ ಭಕ್ತರ ಮೇಲಿರುವ ಪ್ರೇಮದ ಪರಾಕಾಷ್ಠತೆಯನ್ನುತೋರಿಸುತ್ತದೆ.ಇವರುಅನೇಕಕೀರ್ತನೆಗಳನ್ನು,ಉಗಾಭೋಗಗಳನ್ನು,ಮುಂಡಿಗೆಗಳನ್ನು ರಚಿಸಿದ್ದಾರೆ.
ಇವರುರಚಿಸಿರುವಐದುಮುಖ್ಯಕಾವ್ಯಕೃತಿಗಳೆಂದರೆಮೋಹನತರಂಗಿಣಿ,ನಳಚರಿತ್ರೆ,ರಾಮಧಾನ್ಯ ಚರಿತೆ,ಹರಿಭಕ್ತಿಸಾರ,ಮೋಹನ ತರಂಗಿಣಿ
ಮತ್ತು ನರಸಿಂಹಸ್ತವ.ಕೇಶವನಾಮದ “ಈಶ ನಿನ್ನ ಚರಣ ಭಜನೆ “ಎಂಬ ಕೀರ್ತನೆಯೂ ಇವರ ರಚನೆ
ಯಾಗಿದೆ.
ಕನಕದಾಸರು ಸಂಗೀತ ಕ್ಷೇತ್ರಕ್ಕೆಕೊಟ್ಟಿರುವಕೊಡುಗೆ
ಅನನ್ಯವಾದುದು.ಶ್ರೀವ್ಯಾಸರಾಯರು,ಶ್ರೀವಾದಿರಾಜರು,ಶ್ರೀಕೃಷ್ಣದೇವರಾಯ,ಶ್ರೀಪುರಂದರದಾಸರು,ಶ್ರೀವೈಕುಂಠದಾಸರಸಮಕಾಲೀನರುಶ್ರೀಕನಕದಾಸರು.ಇವರ ಜನ್ಮನಾಮತಿಮ್ಮಪ್ಪನಾಯಕನೆಂದು.ತನ್ನ ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು ತಾಯಿಯಿಂದಲೇಪೋಷಿಸಲ್ಪಟ್ಟುಕತ್ತಿವರಸೆ,ಬೇಟೆ,ಕಲಿತು ಪಾಳೇಗಾರರಾಗಿದ್ದರು.ವಿಜಯನಗರ ರಾಜರಸಂಸ್ಥಾನದಲ್ಲಿಕಾರ್ಯನಿರ್ವಹಿಸುತ್ತಿದ್ದರು.
ಒಮ್ಮೆಇವರನೇತೃತ್ವದಲ್ಲಿಭೂಮಿಯನ್ನುಅಗೆಯುತ್ತಿದ್ದಾಗಅಲ್ಲಿ ಭಾರೀಬಂಗಾರದನಿಧಿಸಿಕ್ಕಿತು.ಆದ್ದರಿಂದ ತಿಮ್ಮಪ್ಪ ಕನಕಪ್ಪನಾಗುತ್ತಾನೆ.ಕಾಗಿನೆಲೆಯಲ್ಲಿ ಶ್ರೀಆದಿಕೇಶವ ಸ್ವಾಮಿಯದೇವಸ್ಥಾನಕಟ್ಟಿಸುತ್ತಾರೆ.
ಶ್ರೀಆದಿಕೇಶವನು ಅವರ ಕನಸಿನಲ್ಲಿ ಹಲವಾರು ಸಾರಿ ಬಂದು ನನ್ನ ದಾಸನಾಗು ಎಂದರೂ ಇವರ ಮನಸ್ಸುಒಪ್ಪಿರಲಿಲ್ಲ.ಅವರ ಹೆಂಡತಿ ಮತ್ತು ತಾಯಿ ತೀರಿಕೊಂಡಾಗಲೂ ಅವರಿಗೆವೈರಾಗ್ಯಬಂದಿರಲಿಲ್ಲ.
ಒಮ್ಮೆ ತಿಮ್ಮಪ್ಪನಾಯಕರು ವಿಜಯನಗರ ಸಾಮ್ರಾಜ್ಯದ ಪರವಾಗಿ ಯುದ್ಧ ಮಾಡುತ್ತಿದ್ದಾಗ ,ಶತೃಪಡೆಯಿಂದಇವರಿಗೆಭಾರೀಆಘಾತವಾಯಿತು.ಕೈಯಲ್ಲಿ ಹಿಡಿದ ಕತ್ತಿಯೂ ಕೆಳಗೆಬಿತ್ತು.ಬಹಳವಾಗಿ ಏಟು ಬಿದ್ದದ್ದರಿಂದ ರಕ್ತಸ್ರಾವವಾಗುತ್ತಿತ್ತು.ಶತೃ ಪಡೆಯವರುಇವರುಮೂರ್ಛೆಹೋಗಿದ್ದನ್ನುನೋಡಿ ಸತ್ತೇ ಹೋಗಿರಬಹುದೆಂದು ಊಹಿಸಿ ಹೊರಟು ಹೋಗುತ್ತಾರೆ.ಆಗ ಆದಿಕೇಶವ ಸ್ವಾಮಿಯು ಒಬ್ಬ ಸಾಮಾನ್ಯ ಮನುಷ್ಯನ ವೇಷದಲ್ಲಿ ಬಂದು ಇವನ ಆರೈಕೆ ಮಾಡಿ ಹೋಗುತ್ತಾನೆ.ಆಗ ಕನಕಪ್ಪನಿಗೆ ತಾನುಉಳಿದದ್ದು ಆದಿಕೇಶವನ ಅನುಗ್ರಹದಿಂದ ಎಂದುತಿಳಿದುಪೂರ್ಣವೈರಾಗ್ಯತಾಳುತ್ತಾನೆ.ಆದಿಕೇಶವನುಇವನ ಕನಸಿನಲ್ಲಿ ಶ್ರೀವ್ಯಾಸರಾಯರ ಬಳಿ Kanaka Dasa Jayanti 2024 ಹೋಗಿಹರಿದಾಸದೀಕ್ಷೆಪಡೆಯುವಂತೆಸೂಚಿಸುತ್ತಾನೆ.ಸ್ವಪ್ನಸೂಚನೆಯಂತೆಕನಕಪ್ಪನುಶ್ರೀವ್ಯಾಸರಾಯರನ್ನುಭೇಟಿಯಾಗಿಅವರಿಂದದಾಸದೀಕ್ಷೆಯನ್ನುಪಡೆದು,ಕನಕದಾಸರೆಂದಾಗುತ್ತಾರೆ.ಇವರ ಅಂಕಿತ ಆದಿಕೇಶವ.ಕನಕದಾಸರು ಚಿನ್ನದ ಬದುಕಿಗೆ ದಾಸರಾಗದೆ ಎಲ್ಲ ಮೋಹವನ್ನೂ ತ್ಯಾಗಮಾಡಿ ಶ್ರೀಕೃಷ್ಣ ಪರಮಾತ್ಮನನ್ನೇಒಲಿಸಿಕೊಂಡ ಅಪ್ಪಟ ಚಿನ್ನವಾದವರು.ನುಡಿದಂತೆ ನಡೆ ಇದೇ ಜನ್ಮ ಕಡೆ ,ಬಾಗಿನಡೆದರೆಬಾಳುಬಂಗಾರನಾನುನೀನುಎನ್ನದಿರುಹೀನಮಾನವ.”ನಾನು”ಹೋದರೆಹೋದೇನು.ಎಂದರೆನಾನುನನ್ನದುಎಂಬಅಹಂಕಾರಹೋಗಬೇಕು ಎಂಬುದು ದಾಸರಅಭಿಪ್ರಾಯ.ತಮ್ಮಜೀವನದ ಅನುಭವ ಮತ್ತು ಅನುಭಾವಗಳ ಮೂಲಕ ನಡೆ-ನುಡಿಗಳೊಂದಿಗೆಸಾಮಾಜಿಕ,ವೈಚಾರಿಕ,
ಆಧ್ಯಾತ್ಮಿಕ,ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಸಮಾಜ ತಿದ್ದುವಕೈಂಕರ್ಯವನ್ನುತಿದ್ದುವಕೆಲಸಮಾಡಿದವರು ಶ್ರೀಕನಕದಾಸರು.ಕನಕದಾಸರು ಪುರಂದರದಾಸರ ಸಮಕಾಲೀನರು.ಈ ಇಬ್ಬರು ದಾಸರು ಭಕ್ತಿಮಾರ್ಗ
ದಲ್ಲಿ ಸಾಗಿದವರು.ದಾಸ ಸಾಹಿತ್ಯದ ಕಾಲದ ಶ್ರೇಷ್ಠ ಸಂತರೆನಿಸಿದ್ದಾರೆ.ಜನತೆಯನ್ನು ಭಕ್ತಿಮಾರ್ಗದಲ್ಲಿ ಮುನ್ನಡೆಸಿದ ಶ್ರೇಷ್ಠ ಸಂತರು ಎನಿಸಿಕೊಂಡಿದ್ದಾರೆ.
ಶ್ರೀಕನಕದಾಸರಜಯಂತಿಯಂದು,ಶ್ರೀದಾಸರಸ್ಮರಣೆ ಮಾಡಿ ,ಭಕ್ತಿಯ ನಮನಗಳನ್ನು ಸಲ್ಲಿಸೋಣ.

Karnataka Rajyotsava 2024 ವಿಶೇಷ ಚೇತನ ಮಕ್ಕಳನ್ನ ದೇವರೆಂದು ಭಾವಿಸಬೇಕು-ರೇಣುಕಾ

0

Karnataka Rajyotsava 2024 ಶಿವಮೊಗ್ಗ ಮಾನಸ ಸಮೂಹ ಸಂಸ್ಥೆಯ ಮನಸ್ಫೂರ್ತಿ ಕಲಿಕಾ ತರಬೇತಿ ಕೇಂದ್ರದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆಯ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಶಿವಮೊಗ್ಗದ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಶ್ರೀಮತಿ ರೇಣುಕಾರವರು ಉದ್ಘಾಟಿಸಿ ತಮ್ಮ ಉದ್ಘಾಟನಾ ಭಾಷಣದಲ್ಲಿ “ವಿಶೇಷ ಚೇತನ ಮಕ್ಕಳನ್ನು ದೇವರ ಮಕ್ಕಳೆಂದು ನಾವು ಭಾವಿಸಬೇಕು. ಆ ಮಕ್ಕಳ ಪ್ರತಿಭೆಗೆ ತಕ್ಕಂತೆ ಅವಕಾಶಗಳನ್ನು ನೀಡಲು ಪೋಷಕರು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು” ಎಂದು ತಿಳಿಸಿದರು.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀಮತಿ ಶೃತಿಯವರು “ಮಕ್ಕಳಲ್ಲಿ ಮಾತೃ ಭಾಷೆ ಬೆಳೆಸುವ, ಉಳಿಸುವ ಕನ್ನಡ ಶಾಲೆಗಳಿಗೆ ಮಕ್ಕಳನ್ನು ಸೇರಿಸಬೇಕು” ಎಂದರು. ಈ ಸಂದರ್ಭದಲ್ಲಿ ಮಾನಸ ಸಮೂಹ ಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕರಾದ ಡಾ. ಪ್ರೀತಿ. ವಿ. ಶಾನ್ ಭಾಗ್ ರವರು ಜಿಲ್ಲಾ ಮಟ್ಟದ ಸ್ಪೆಷಲ್ ಒಲಂಪಿಕ್ಸ್ ನಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು. ಮಾನಸ ಸಂಸ್ಥೆಯ ಮತ್ತೋರ್ವ ವೈದ್ಯರಾದ ಡಾ. ಸುಧಾ ರವರು ಮನಸ್ಪೂರ್ತಿಯಲ್ಲಿ ನಡೆಸಿದ ವಿವಿಧ ಕ್ರೀಡೆಗಳಲ್ಲಿ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿಶೇಷ ಚೇತನ ಮಕ್ಕಳಿಗೆ ಬಹುಮಾನವನ್ನು ವಿತರಿಸಿ ಮಕ್ಕಳಲ್ಲಿರುವ ಸ್ಪೂರ್ತಿಯೇ ಯಶಸ್ಸಿಗೆ ಕಾರಣ ಎಂದರು.

Karnataka Rajyotsava 2024 ಮಾನಸ ಸಮೂಹ ಸಂಸ್ಥೆಯ ವೈದ್ಯರಾದ ಡಾ. ವಿತಿಕಾ, ಚೀಫ್ ಆಪರೇಟಿಂಗ್ ಆಫೀಸರ್ ಆದಂತಹ ಶ್ರೀ ಮತಿ ವೀಣಾ ಸ್ವಾಮಿಯವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನಸ ಸಮೂಹ ಸಂಸ್ಥೆಗಳ ನಿರ್ದೇಶಕರಾದ ಡಾ. ರಜನಿ ಪೈ ರವರು ವಹಿಸಿದ್ದರು. ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆಯ ಮಹತ್ವದ ಬಗ್ಗೆ ಮನಸ್ಪೂರ್ತಿ ಕಲಿಕಾ ತರಬೇತಿ ಕೇಂದ್ರದ ಸಂಯೋಜಕರಾದ ಶ್ರೀಮತಿ ರಂಗನಾಯಕಿಯವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮನಸ್ಪೂರ್ತಿಯ ವಿಶೇಷ ಚೇತನ ಮಕ್ಕಳು ಪ್ರಾರ್ಥನೆ ಮಾಡಿದರು. ಶ್ರೀಮತಿ ಜ್ಯೋತಿ ಅರುಣ್ ಕುಮಾರ್ ರವರು ಸ್ವಾಗತಿಸಿ, ಶ್ರೀಮತಿ ಸವಿತಾ ರಾಣಿಯವರು ವಂದಿಸಿದರು. ಮನಸ್ಪೂರ್ತಿ ಕಲಿಕಾ ತರಬೇತಿ ಕೇಂದ್ರದ ಎಲ್ಲಾ ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Kanaka Dasa Jayanti 2024 ಕನಕದಾಸರ ಕೀರ್ತನೆಗಳು ಇಂದಿಗೂ ಸಮಾಜದ ಓರೆಕೋರೆಗಳನ್ನು ತಿದ್ದುವಲ್ಲಿ ಪ್ರಮುಖವಾಗಿವೆ- ಎಸ್.ಸಿ.ರಾಮಚಂದ್ರ

0

Kanaka Dasa Jayanti 2024 “ಕನಕದಾಸರ ತತ್ವ ಆದರ್ಶ ಗುಣಗಳು ಹಾಗೂ ಕೀರ್ತನೆಗಳು ಸಮಾಜದ ಓರೆ ಕೋರೆಗಳನ್ನು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ… ಎಸ್ ಸಿ ರಾಮಚಂದ್ರ. ಕಾರ್ಯದರ್ಶಿಗಳು ರೋಟರಿ ಎಜುಕೇಶನಲ್ ಚಾರ್ರಿಟೇಬಲ್ ಟ್ರಸ್ಟ್..”

ಸಂತ ಸಮಾಜವಾದಿ ಶ್ರೇಷ್ಠ ಚಿಂತಕ.ದಾರ್ಶಣಿಕ ರಾದ ಕನಕದಾಸರ ಕೀರ್ತನೆಗಳು ತತ್ವ ಆದರ್ಶ ಗುಣಗಳು ಇಂದಿಗೂ ಸಹ ಸಮಾಜದ ಓರೆ ಕೋರೆಗಳನ್ನು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಎಂದು ರೋಟರಿ ಶಿವಮೊಗ್ಗ ಪೂರ್ವ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ನ ಕಾರ್ಯದರ್ಶಿ.ಎಸ್ಎಸ್ಸಿ ರಾಮಚಂದ್ರ.ಅಭಿಮತ ವ್ಯಕ್ತಪಡಿಸಿದರು. ಅವರು ಇಂದು ರಾಜೇಂದ್ರ ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಹಾಗೂ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಏರ್ಪಡಿಸಲಾಗಿದ್ದ 515 ನೇ ಕನಕದಾಸ ಜಯಂತಿಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಇದೇ ಸಂದರ್ಭದಲ್ಲಿ ಟ್ರಸ್ಟಿನ ಉಪಾಧ್ಯಕ್ಷರಾದ ಡಾ. ಪರಮೇಶ್ವರ್ ಶಿಗ್ಗಾoವ್ ಅವರು ಮಾತನಾಡುತ್ತ ಈ ನಾಡು ಕಂಡ ಅತ್ಯಂತ ಶ್ರೇಷ್ಠ ಸಂತ ಕನಕದಾಸರು ಎಲ್ಲರಿಗೂ ಸಮಾನತೆಯ ಬಗ್ಗೆ ಹಾಗೂ ಅಸ್ಪೃಶ್ಯತೆಯನ್ನು ಹೋಗಲಾಡಿಸುವ ಬಗ್ಗೆ ಸಂದೇಶವನ್ನು ನೀಡಿದ ಕನಕದಾಸರು ಎಲ್ಲಾ ವರ್ಗದ ಜನರಿಗೆ ಮೆಚ್ಚುಗೆಗೆ ಪಾತ್ರನಾಗಿದ್ದರು ಎಂದು ನುಡಿದರು ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷರಾದ ಜಿ Kanaka Dasa Jayanti 2024 ವಿಜಯಕುಮಾರ್ ಅವರು ಮಾತನಾಡುತ್ತಾ ಕನಕದಾಸರು ಶತಮಾನಗಳ ಹಿಂದೆಯೇ ಸಮಾಜದಲ್ಲಿ ಬೇರೂರಿದ ಅಸ್ಪೃಶ್ಯತೆ ಹಾಗೂ ಜಾತಿ ವಾದವನ್ನು ನಿರ್ಮೂಲನೆ ಮಾಡಲು ಯಾವುದೇ ಪಲಾಪೇಕ್ಷೆ ಇಲ್ಲದೆ ಸಂದೇಶವನ್ನು ಸಾರಿದ ಮಹಾನ್ ಶ್ರೇಷ್ಠ ದಾರ್ಶನಿಕರಾಗಿದ್ದರು. ಈ ನಿಟ್ಟಿನಲ್ಲಿ ನಮ್ಮ ಯುವ ಪೀಳಿಗೆಗೆ ಕನಕದಾಸರ ಸಾಧನೆ ಚಿಂತನೆ ತಿಳಿಸುವ ಅಗತ್ಯತೆ ತುಂಬಾ ಇದೆ ಅವರ ಕುಲ ಕುಲ ಕುಲ ವೆಂದು ಹೊಡೆದಾಡದಿರಿ ಎಂಬ ಗೀತೆ ಎಂದಿಗೂ ಸಹ ಅಜರಾಮರವಾಗಿ ಉಳಿದಿದೆ. ಇದೇ ಸಂದರ್ಭದಲ್ಲಿ ಸಹ ಶಿಕ್ಷಕಿ ಕಾವ್ಯ ಅವರು ಮಾತನಾಡಿ ಕನಕದಾಸರ ಕೀರ್ತನೆಗಳು ಇಂದಿಗೂ ಪ್ರಸ್ತುತವಾಗಿದ್ದು ನಮ್ಮೊಳಗಿನ ನಾನು ಎಂಬ ಅಹಂ ಹೋದರೆ ಎಂಥಹ ಸಾಧನೆಯು ಸಾಧ್ಯ ಎಂದರು.ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಆರ್ ಸೂರ್ಯನಾರಾಯಣ್. ಶಿಕ್ಷಕರಾದ ಸುಷ್ಮಾ ಶ್ವೇತಾ ಹರ್ಷಿತಾ. ರೂಪ ರಾವ್.ಸುಜಾತಾ. ಸುಪ್ರೀತಾ ಮೋಹನ್. ವಿದ್ಯಾ. ರುಕ್ಕಯ್ಯ. ಪ್ರತಿಮಾ. ರೇಖಾˌ ಪ್ರದೀಪ್ˌ ಅನೀಶ್ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.

Shimoga News ವ್ಯಾವಹಾರಿಕ ಕೌಶಲ್ಯ,ವ್ಯಸನಮುಕ್ತಬೆಳವಣಿಗೆಯಿಂದ ಸಮುದಾಯದ ಅಭಿವೃದ್ದಿ -ಪ್ರೊ.ಸತ್ಯನಾರಾಯಣ

0

Shimoga News ಸಮುದಾಯ ಅಭಿವೃದ್ದಿಗೆ, ಸಮಗ್ರ ಪ್ರಜೆಗಳ ಆರ್ಥಿಕ, ಸಾಮಾಜಿಕ, ವ್ಯವಹಾರಿಕ, ಕೌಶಲ್ಯ, ವ್ಯಸನ ಮುಕ್ತ ಬೆಳವಣಿಗೆ ಯಿಂದ ಮಾತ್ರ ಸಾದ್ಯ ಎಂದು ರೋಟರಿ ಜ್ಯೂಬಿಲಿಯ ವಾರದ ಸಭೆಯ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರೋ.ಸತ್ಯನಾರಾಯಣ್ ಮಾತನಾಡುತ್ತಿದ್ದರು.
ಜನರ ಗುಂಪು ಸಮುದಾಯ ಎನಿಸಿ ಕೊಳ್ಳುತ್ತದೆ. ತೆಗೆದು ಕೊಳ್ಳು ತೀರ್ಮಾನ, ಮುಂದಾಲೋಚನೆಗಳು ಜೀವನ ಉತ್ತಮ ಪಡಿಸಿ ಕೊಳ್ಳಲು ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತದೆ.
ಆರ್ಥಿಕವಾಗಿ ಅಭಿವೃದ್ದಿ ಹೋಂದಿದರೆ ಸಾಲದು. ಮಾನವನ ಜೀನಕ್ಕೆ ಅಗತ್ಯನಾದ ಸಕಲ ಸೌಲತ್ತು ಆ ದೇಶದಲ್ಲಿ ದೊರಕಿದಾಗ ಮಾತ್ರ ಅಭಿವೃದ್ದಿ ಹೊಂದಿದ ದೇಶ ಎನಿಸಿಕೊಳ್ಳುತ್ತದೆ.
ವಿಶ್ವದಲ್ಲೆ ಅತೀ ಹೆಚ್ಚು ಜನ ಸಂಖ್ಯೆ ಹೋಂದಿರುವ ನಮ್ಮ ದೇಶದ ಪ್ರಜೆಗಳ ನೆಮ್ಮದಿಯಲ್ಲಿ ವಿಶ್ವದಲ್ಲೆ 144ನೇ ಸ್ಥಾನದಲ್ಲಿ ಇದ್ದೇವೆ. ಚೈನಾ 98, ಸಣ್ಣ ದೇಶಗಳು ಹೆಚ್ಚಿನ ಸ್ಥಾನ ಪಡೆದಿವೆ.
78213ಕೋಟಿ ಹಣ ನಮ್ಮ ದೇಶದ ಬ್ಯಾಂಕ್ ಗಳಲ್ಲಿ ಹನ್ನೆರಡು ವರ್ಷದಿಂದ ಉಪಯೋಗಿಸದೆ ಹಾಗೆ ನಿಖರ ಠೇವಣಿ ಇದೆಯಂತೆ. ಹೀಗೆ ನಿರಪಯುಕ್ತ ಆಸ್ತಿಗಳು ದೇಶದ ಪ್ರಗತಿಗೆ ತೊಡಕಾಗುತ್ತವೆ. ಇತರರನ್ನು ಕಂಡು ಅವರಂತೆ ಆಗಬೇಕೆಂದು, ಸಾಲ ಮಾಡಿ ಪ್ರತಿಷ್ಟೆ ಹೆಚ್ಚಿಸಿಕೊಳ್ಳುವ ಬದಲು, ಹಾಸಿಗೆ ಇದ್ದಷ್ಟು ಕಾಲು ಚಾಚುವುದು ದೇಶದ ಪ್ರಗತಿಗೆ ಪೂರಕ.
ಸ್ವ-ಹಿತದಿಂದಲೂ ದೇಶದ ಪ್ರಗತಿ ಸಾದ್ಯ ಎಂದು ಆರ್ಥಿಕ ತಜ್ಞ ಆಡಮ್ ಸ್ಮಿತ್ ಹೇಳಿದ್ದಾರೆ. ಜೀವನದಲ್ಲಿ ಆಸೆ ಇರಬೇಕು. ದುರಾಸೆ ಇರಬಾರದು ಎಂದು ಮಹಾತ್ಮಗಾಂಧಿ ಹೆಳಿದ್ದಾರೆ.
Shimoga News ಸ್ವಹಿತ ಮೀರಿದ ಸೇವೆಯಿಂದ ರೋಟರಿ ಸಂಸ್ಥೆ ಇಂದು ವಿಶ್ವದಲ್ಲಿಯೆ ಪ್ರಥಮ ಸ್ಥಾನದಲ್ಲಿ ಇದ್ದು ಸಮುದಾಯ ಸೇವೆಯಲ್ಲಿ ಮುಂಚೋಣಿಯಲ್ಲಿದೆ ಎಂದರು.
ಅಧ್ಯಕ್ಷೆ ರೊ.ರೂಪ ಪುಣ್ಯಕೋಟಿ ಸ್ವಾಗತಿಸಿದರು
ಎಸ್.ಎಸ್.ವಾಗೇಶ್ ಪ್ರಾಸ್ಥಾವಿಕವಾಗಿ ಮಾತನಾಡಿದರು, ರೇಣುಕಾರಾದ್ಯ ನಿರೂಪಿಸಿದರು, ಸತ್ಯನಾರಾಯಣ್ ವಂದಿಸಿದರು

Rotary Club Shimoga ಆತ್ಮಶ್ರದ್ಧೆ ಇಲ್ಲದವರು ಭಗವಂತನಲ್ಲಿ‌ ಶ್ರದ್ಧೆ ಇರಿಸಲು ಅಸಾಧ್ಯ ಎಂದ ಗುರುನಾನಕರು- ಕಿರಣ್ ಕುಮಾರ್

0

Rotary Club Shimoga ಶಿವಮೊಗ್ಗ ನಗರದ ಓಟಿ ರಸ್ತೆಯಲ್ಲಿರುವ ಗುರುದ್ವಾರ ಗುರುನಾನಕ್ ದರಬಾರ್‌ನಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಸದಸ್ಯರು ಹಾಗೂ ಸಿಖ್ ಸಮುದಾಯದ ಜನರು 555ನೇ ಗುರುನಾನಕ್ ಜಯಂತಿ ಆಚರಿಸಿದರು.

ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಕಿರಣ್ ಕುಮಾರ್ ಮಾತನಾಡಿ, ಸಿಖ್ ಸಮುದಾಯದ ಸಂಸ್ಥಾಪಕ ಮೊದಲ ಗುರು ಗುರುನಾನಕ್ ಸಾಹೇಬ ಅವರ 555ನೇ ಜಯಂತಿ ಹಾರ್ದಿಕ ಶುಭಾಶಯಗಳು. ಗುರುನಾನಕ್ ಅವರು ಆತ್ಮಶ್ರದ್ಧೆ ಇಲ್ಲದವರು ಭಗವಂತನಲ್ಲಿ ಶ್ರದ್ಧೆ ಹೊಂದಿರುವುದು ಸಾಧ್ಯವಿಲ್ಲ ಎಂದು ತಿಳಿಸಿದರು.

ಪ್ರೀತಿ, ಶಾಂತಿ, ಸತ್ಯದ ಸಂದೇಶಗಳನ್ನು ವಿಶ್ವಕ್ಕೆ ಸಾರಿದ ಮಹಾನ್ ದಾರ್ಶನಿಕ. ಅವರ ತತ್ವ ಸಿದ್ಧಾಂತಗಳು ಇಂದಿಗೂ ಆದರ್ಶವಾಗಿವೆ. ಜೀವನದಲ್ಲಿ ನಾವೆಲ್ಲರೂ ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

Rotary Club Shimoga ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಮಾಜಿ ಅಧ್ಯಕ್ಷ ಧರ್ಮೇಂದ್ರ ಸಿಂಗ್ ಅವರು ಕಾರ್ಯಕ್ರಮ ಸಂಯೋಜಿಸಿದ್ದರು. ಕಾರ್ಯಕ್ರಮದಲ್ಲಿ ಸಿಖ್ ಸಮುದಾಯದ ಪ್ರಮುಖರಾದ ಪ್ರೊಬ್ಜೋತ್ ಸಿಂಗ್, ಜಗದೀಶ್ ಕೌರ್, ಗುರುಮೇಲ್ ಸಿಂಗ್, ಜಿತೆಂದ್ರ ಸಿಂಗ್, ಮಾಜಿ ಸಹಾಯಕ ಗವರ್ನರ್ ರವಿ ಕೋಟೋಜಿ, ಚಂದ್ರು ಜೆಪಿ, ಇಂದ್ರೇಶ್, ರಾಜೇಶ್, ಈಶ್ವರ್ ಬಿವಿ, ಗೀತಾ ಜಗದೀಶ್, ಶುಭಾ ಚಿದಾನಂದ್, ರಂಜಿತ್ ಕೌರ್ ಹಾಗೂ ಸೆಂಟ್ರಲ್ ಕ್ಲಬ್ಬಿನ ಎಲ್ಲಾ ಸದಸ್ಯರು, ಸಮಾಜದ ಎಲ್ಲ ಗಣ್ಯರು ಉಪಸ್ಥಿತರಿದ್ದರು.