Tuesday, March 24, 2026
Tuesday, March 24, 2026
Home Blog Page 490

MESCOM ನವೆಂಬರ್ 23. ಮಂಡ್ಲಿ ವ್ಯಾಪ್ತಿಯ ಕೆಲ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯ

0

MESCOM ಶಿವಮೊಗ್ಗ ನವೆಂಬರ್ 21 ಶಿವಮೊಗ್ಗ ನಗರ ಉಪವಿಭಾಗ-2ರ ವ್ಯಾಪ್ತಿಯ ಮಂಡ್ಲಿ ವಿ.ವಿ.ಕೇಂದ್ರದಲ್ಲಿ ತ್ರೈಮಾಸಿಕ ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ನ.23 ರಂದು ಬೆಳಗ್ಗೆ 9.00 ರಿಂದ ಮ. 2.00 ವರೆಗೆ ಸೀಗೆಹಟ್ಟಿ, ರವಿವರ್ಮ ಬೀದಿ, ಕೆಂಚರಾಯನ ಬೀದಿ, ಟಿ.ಎಸ್.ಆರ್.ರಸ್ತೆ, ಆಜಾದ್‌ನಗರ 1 ರಿಂದ 4 ನೇ ತಿರುವು, ಬಿ.ಬಿ.ರಸ್ತೆ, ಓ.ಟಿ.ರಸ್ತೆ, ಕುಂಬಾರ ಬೀದಿ, ನಾಗಭೂಷಣ ಪ್ರೆಟ್ರೋಲ್ ಬಂಕ್, ನ್ಯೂಮಂಡ್ಲಿ, ಮಂಡ್ಲಿ ಬೈಪಾಸ್, ಶಿವಶಂಕರ ರೈಸ್‌ಮಿಲ್, ಮುರಾದ್ ನಗರ, ಇಮಾಮ್ ಬಾಡ, ಜಿ.ಎಸ್.ಕೆ.ಎಂ.ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Volleyball Tournament ನವೆಂಬರ್ 26. ದಿ.ಫಿಲೋಮಿನಾ ರಾಜ್ ಸ್ಮರಣಾರ್ಥ ವಾಲಿಬಾಲ್ ಪಂದ್ಯಾವಳಿ ಆಯೋಜನೆ

0

Volleyball Tournament ಕ್ರೀಡಾ ಕ್ಷೇತ್ರದಲ್ಲಿ, ಅಪಾರ ಶಿಷ್ಯ ವರ್ಗವನ್ನು ಸಜ್ಜುಗೊಳಿಸಿ, ತರಬೇತಿಯನ್ನು ಕೊಟ್ಟು ರಾಜ್ಯ, ರಾಷ್ಟ್ರ, ಅಂತ ರಾಷ್ಟ್ರಮಟ್ಟದಲ್ಲಿ ಅಸಂಖ್ಯಾತ ಕ್ರೀಡಾಪಟುಗಳು ಸಾಧನೆ ಮಾಡಿದ್ದಾರೆ. ರಾಜ್ಯ, ರಾಷ್ಟ್ರ, ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಷ್ಯ ವರ್ಗವನ್ನು ನಾವು ಕಾಣಬಹುದು. ದಿ.ಫಿಲೋಮಿನ್ ರಾಜ್ ರವರ ಅಭಿಮಾನಿ ಬಳಗ ಶಿವಮೊಗ್ಗ.ಹಾಗೂ ತಾಲ್ಲೂಕಿನ ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಶಿವಮೊಗ್ಗ. ಇವರ ಸಹಯೋಗದಲ್ಲಿ ಮೊದಲನೇ ವರ್ಷದ ಪುಣ್ಯ ಸ್ಮರಣೆಯ ಅಂಗವಾಗಿ ಶಿವಮೊಗ್ಗ ಜಿಲ್ಲಾ ಮಟ್ಟದ “ದೈಹಿಕ ಶಿಕ್ಷಣ ಶಿಕ್ಷಕರ ವಾಲಿಬಾಲ್ ಪಂದ್ಯಾವಳಿ 2024 — 25” ಪುರುಷರ ಹೊನಲು ಬೆಳಕಿನ ವಾಲಿಬಾಲ್ ಕ್ರೀಡಾಕೂಟವನ್ನು ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದು,
ಈ ಕ್ರೀಡಾ ಕೂಟವನ್ನು ಒಂದು ದಿನದ ಮಟ್ಟಿಗೆ ದಿನಾಂಕ : 26/11/2024 ರಂದು ಶಿವಮೊಗ್ಗ ಜಿಲ್ಲೆಯ ಸರ್ಕಾರಿ,ಅನುದಾನಿತ, ಅನುದಾನ ರಹಿತ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕರಿಗೆ ಅಂದು 03 ಗಂಟೆಗೆ ಪಂದ್ಯಾವಳಿ ಪ್ರಾರಂಭವಾಗುವವು.ಪ್ರಥಮ ಬಾರಿಗೆ, ಜಿಲ್ಲೆಯ ದೈಹಿಕ ಶಿಕ್ಷಣ ಮಿತ್ರರಿಗೆ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಏರ್ಪಡಿಸಿರುವುದು ಇನ್ನೊಂದು ವಿಶೇಷವಾಗಿದೆ.
Volleyball Tournament ವಾಲಿಬಾಲ್ ನಲ್ಲಿ ವಿಜೇತ ಕ್ರೀಡಾಪಟುಗಳಿಗೆ , ಪಾರಿತೋಷಕ ದೊಂದಿಗೆ, ವೈಯಕ್ತಿಕ ಬಹುಮಾನಗಳನ್ನು ನೀಡಲಾಗುತ್ತದೆ.
ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ 14 ಮತ್ತು 17 ವರ್ಷ ವಯೋಮಿತಿಯೊಳನ ಕ್ರೀಡಾ ಪಟುಗಳಿಗೆ ಅಥ್ಲೆಟಿಕ್ಸ್ ಸ್ಪರ್ಧೆಯನ್ನು ವಿಶೇಷ ಚೇತನರಿಗೆ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಸಹ 26.11. 2024 ರಂದು ಬೆಳಿಗ್ಗೆ 9 ಗಂಟೆಗೆ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗಿದೆ.
ಪಂದ್ಯಾವಳಿಯು ದಿನಾಂಕ :26/ 11/ 2024 ರಂದು ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ನಡೆಯಲಿದ್ದು, ಆಟಗಾರರ ಅನುಕೂಲಕ್ಕಾಗಿ ಎರಡು ಅಂಕಣಗಳನ್ನು ಸಿದ್ದಪಡಿಸಲಾಗಿದೆ. ನುರಿತ ವಾಲಿಬಾಲ್ ತೀರ್ಪುಗಾರರು ಆಗಮಿಸಲಿದ್ದಾರೆ. ಜಿಲ್ಲೆಯ ವಿವಿಧ ತಾಲೂಕುಗಳಿಂದ ಬರುವ ಎಲ್ಲಾ ಕ್ರೀಡಾ ಪಟುಗಳಿಗೂ ಸಂಜೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.

ನಿಬಂಧನೆಗಳು :1) ತಂಡಗಳು ಕಡ್ಡಾಯವಾಗಿ ಕ್ರೀಡಾ ಸಮವಸ್ತ್ರ ಧರಿಸಿ ಈ ಪಂದ್ಯಾವಳಿಯಲ್ಲಿ ಭಾಗವಹಿಸಬೇಕು.
2) ಒಂದು ತಂಡದಲ್ಲಿ 7 ಜನ ಕ್ರೀಡಾ ಪಟುಗಳು ದೈಹಿಕ ಶಿಕ್ಷಣ ಶಿಕ್ಷಕರಿಗೆ ಭಾಗವಹಿಸಲು ಅವಕಾಶ ವಿರತ್ತದೆ.
3) ಕಡ್ಡಾಯವಾಗಿ ಶಾಲಾ ಮತ್ತು ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕರಾಗಿರಬೇಕು. ಅಂತವರಿಗೆ ಮಾತ್ರ ಕ್ರೀಡೆಯಲ್ಲಿ ಭಾಗವಹಿಸಲು ಅವಕಾಶ, ಗುರುತಿನ ಚೀಟಿ ತರಬೇಕು.
4) 6.11.2024ರ ಒಳಗಾಗಿ ಹೆಸರು ನೊಂದಾಯಿಸಿಕೊಳ್ಳಲು ಅವಕಾಶವಿದೆ ಎಂದು ಕ್ರೀಡಾ ಕೂಟದ ಸಂಚಾಲಕರಾದ ಮೈಕಲ್ ಕಿರಣ್ ಪತ್ರಿಕಾ ಪ್ರಕಟಣೆಯಲ್ಲಿ
ಕೋರಿದ್ದಾರೆ .
ಹೆಚ್ಚಿನ ಮಾಹಿತಿ ಗಾಗಿ, ಸಂಪರ್ಕಿಸಿ. 9380866009

ಈ ವಿಷಯವನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿ ಈ ಪಂದ್ಯಾವಳಿಯು ಯಶಸ್ವಿಯಾಗಲು ಸಹಕರಿಸಬೇಕಾಗಿ ವಿನಂತಿ.

Bhadra Dam ಭದ್ರಾನಾಲೆಗಳಿಗೆ ನವೆಂಬರ್ 26 ರಿಂದ ಮುಂಗಾರು ಹಂಗಾಮಿಗೆ ನೀರಿನ ಹರಿವು ಸ್ಥಗಿತ

Bhadra Dam ಶಿವಮೊಗ್ಗ ನವೆಂಬರ್ 21 ಭದ್ರಾ ಯೋಜನೆಯ ಅಚ್ಚುಕಟ್ಟು ಪ್ರದೇಶದ 2024-25ನೇ ಸಾಲಿನ ಮುಂಗಾರು ಹಂಗಾಮಿಗೆ ನೀರಾವರಿ ಸಲಹಾ ಸಮಿತಿ ಸಭೆಯ ತೀರ್ಮಾನದಂತೆ, ಕಛೇರಿ ಅಧಿಸೂಚನೆಯ ದಿನಾಂಕ:29.07.2024 ರಿಂದ ಭದ್ರಾ ಜಲಾಶಯದಿಂದ ನೀರನ್ನು ಹರಿಬಿಡಲಾಗಿದ್ದು, ನೀರನ್ನು ಹರಿಸುವ ಗರಿಷ್ಠ ಅವಧಿ 120 ದಿನಗಳು ದಿ:26.11.2024ಕ್ಕೆ ಪೂರ್ಣಗೊಳ್ಳಲಿದೆ.
Bhadra Dam ಆದ್ದರಿಂದ ದಿ:26.11.2024ರ ರಾತ್ರಿಯಿಂದ ಬಲದಂಡೆ ಮತ್ತು ಎಡದಂಡೆ ನಾಲೆಗಳಲ್ಲಿ ನೀರು ಹರಿಸುವುದನ್ನು ನಿಲ್ಲಿಸಲಾಗುವುದು. ಭದ್ರಾ ಜಲಾಶಯದ ಅಚ್ಚುಕಟ್ಟುದಾರರು ನಿಗಮದೊಂದಿಗೆ ಸಹಕರಿಸುವಂತೆ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Rotary Club Shimoga ಕನಕದಾಸರ ಕೀರ್ತನೆ,ಬೋಧನೆಗಳನ್ನ ನಾವು ಅರಿತು ಬಾಳಬೇಕು- ಜಿ.ಕಿರಣ್ ಕುಮಾರ್

0

Rotary Club Shimoga ಕನಕದಾಸರು ಕೀರ್ತನೆಗಳನ್ನು ರಚನೆ ಮಾಡಿ, ಅಂದಿನ ಕಾಲಘಟ್ಟದಲ್ಲಿ ಜಾತಿ ಪದ್ಧತಿ ವಿರುದ್ಧ ಕೀರ್ತನೆಗಳಿಂದ ಸಮಾಜಕ್ಕೆ ಅರಿವು ಮೂಡಿಸಿದರು ಎಂದು ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಜಿ.ಕಿರಣ್ ಕುಮಾರ್ ಹೇಳಿದರು.

ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್‌ನಿಂದ ಆಯೋಜಿಸಿದ್ದ 537ನೇ ಶ್ರೀ ಕನಕದಾಸ ಜಯಂತಿ ಆಚರಣೆಯಲ್ಲಿ ಮಾತನಾಡಿ, ಸಾಹಿತ್ಯ ಲೋಕಕ್ಕೆ ಇವರ ಕೊಡುಗೆ ಅಪಾರ. ಇವರ ಕೀರ್ತನೆಗಳು, ಬೋಧನೆಗಳು ಇಂದಿಗೂ ಪ್ರಸ್ತುತ ಪ್ರತಿಯೊಬ್ಬರು ಇದನ್ನು ಅರಿತು ಬಾಳಬೇಕು ಎಂದು ತಿಳಿಸಿದರು.

ಕನಕದಾಸರು ಬಾಲ್ಯದಿಂದಲೇ ವ್ಯಾಕರಣ, ತರ್ಕ, ಮೀಮಾಂಸೆ, ಸಾಹಿತ್ಯಗಳಲ್ಲಿ ಪಾರಂಗತರಾಗಿದ್ದರು. ಕನಕದಾಸ ಜಯಂತಿ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್‌ನಲ್ಲಿ ಆಚರಣೆ ಮಾಡುತ್ತಿರುವುದು ತುಂಬಾ ಸಂತೋಷ ತಂದಿದೆ ಎಂದರು.

Rotary Club Shimoga ರೋಟರಿ ಪಿಡಿಜಿ ಜಿ.ಎನ್.ಪ್ರಕಾಶ್ ಮಾತನಾಡಿ, ಕನಕದಾಸರು ಅಜರಾಮರ, ದಾಸರು ಕಾಗಿನೆಲೆ ಆದಿಕೇಶವನ ಆರಾಧಕರಾಗಿದ್ದರು ಎಂದು ತಿಳಿಸಿದರು. ಶ್ರೀ ಕನಕದಾಸರ ಕೀರ್ತನೆಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ವಿರೂಪಾಕ್ಷ ಮತ್ತು ಗುರುರಾಜ್ ಅವರು ದಾಸರ ಕೀರ್ತನೆ ಹಾಡಿದರು.

ರೋಟರಿ ರಮೇಶ್ ಮಾತನಾಡಿ, ಕನಕದಾಸರು ವ್ಯಾಸರಾಯರ ಅಚ್ಚುಮೆಚ್ಚಿನ ಶಿಷ್ಯರಾಗಿದ್ದರು ಎಂದರು. ಸಭೆಯಲ್ಲಿ ಸಂತೋಷ್, ಆನಂದ್, ಅರುಣ್ ಕುಮಾರ್, ಚಂದ್ರು ಜೆಪಿ, ಧರ್ಮೇಂದ್ರ ಸಿಂಗ್, ದೀಪ, ಜಯಶೀಲಶೆಟ್ಟಿ, ರಾಜಶ್ರೀ ಬಸವರಾಜ್, ಜ್ಯೋತಿ ಶ್ರೀರಾಮ್, ಹಾಗೂ ಗೀತಾ ಜಗದೀಶ್, ಶುಭಾ ಚಿದಾನಂದ, ಧನಂಜಯ್, ಬಲರಾಮ್, ನಟರಾಜ್, ರೋಟರಿ ಶಿವಮೊಗ್ಗ ಸೆಂಟ್ರಲ್ ಹಾಗೂ ಎಲ್ಲ ಕ್ಲಬ್ಬಿನ ಸದಸ್ಯರು ಭಾಗವಹಿಸಿದ್ದರು.

Youth Hostels Association ಅಗಲಿದ ಕಲಾವಿದರಿಗೆ ಭಾವಪೂರ್ಣ ಶ್ರದ್ಧಾಂಜಲಿ

0

Youth Hostels Association ಆಕಾಶವಾಣಿ ಹಿರಿಯ ಕಲಾವಿದೆ, ಪ್ರತಿಭಾರಂಗ, ವಿಕಾಸರಂಗ, ಯೂತ್ ಹಾಸ್ಟೆಲ್ಸ್ ತರುಣೋದಯ ಘಟಕ, ಸುಗಮ ಸಂಗೀತ ಪರಿಷತ್, ಸಾಹಿತ್ಯ ಪರಿಷತ್ ಸದಸ್ಯರಾಗಿದ್ದ ಶ್ರೀಮತಿ .ಜಿ.ಎಸ್.ಉಮಾದೇವಿ. ಹಾಗು 45 ವರ್ಷ ಗಳ ಕಲಾ ಸೇವೆ ಯಲ್ಲಿದ್ದ ಶಿವಮೊಗ್ಗದ ಸುಪ್ರಸಿದ್ದ ಹಿರಿಯ ಕಲಾವಿದ ಜಯಶೀಲನ್ ರವರ ಮಗ ಬಹುಮುಖ ಪ್ರತಿಭಾನ್ವಿತ. ಡ್ರಂ, ಪ್ಯಾಡ್ ನುಡಿಸುತ್ತಿದ್ದ ಹಾಗೂ ಗಾಯಕರು ಆಗಿದ್ದ ಮೋನಿಕ.ಜೆ ರವರು ಇತ್ತೀಚೆಗೆ ದೈವದೀನರಾದ ಪ್ರಯುಕ್ತ ಇಬ್ಬರಿಗೂ ಚಿರ ಶಾಂತಿ ಕೋರಿ ಆಯೋಜಿಸಿದ್ದ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಯೂತ್ ಹಾಸ್ಟೆಲ್ಸ್ ಅಧ್ಯಕ್ಷ. ಸುಗಮ ಸಂಗೀತಾ ಪರಿಷತ್ ಜಿಲ್ಲಾ ಗೌರವಾ ದ್ಯಕ್ಸ Youth Hostels Association ಎನ್.ಗೋಪಿನಾಥ್, ಸುಗಮ ಸಂಗೀತ ಪರಿಷತ್ ಕಾರ್ಯಾಧ್ಯಕ್ಷೆ ಶಾಂತಾಶೆಟ್ಟಿ, ಖಚಾಂಜಿ ಜಿ.ವಿಜಯಕುಮಾರ್, ದಿನೇಶ್,ಜಿಕೆ ಧನಪಾಲ್ ಸಿಂಗ್ ರಜಪುತ್ ಮಂಜುನಾಥ್ ಬಿ ಎಸ್ ಸಂಚಾಲಕರಾದ ಶೋಭಾ ಸತೀಶ್.ಮುಂತಾದವರು ಭಾಗವಹಿಸಿದರು.

Rising Goju Karate School ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಶಿವಮೊಗ್ಗದ ತೇಜಸ್ ಕಟಾ ಗೆ ದ್ವಿತೀಯ ಸ್ಥಾನ

0

Rising Goju Karate School ನವಂಬರ್ 16ರಂದು ತಮಿಳುನಾಡಿನ ಊಟಿಯಲ್ಲಿನ ಅನ್ನ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ
ರೈಸಿಂಗ್ ಗೋಜು ಕರಾಟೆ ಶಾಲೆ ಆಯೋಜಿಸಿದ ಎರಡನೇ ಅಂತರಾಷ್ಟ್ರೀಯ ಮುಕ್ತ ಕರಾಟೆ ಪಂದ್ಯಾವಳಿಯಲ್ಲಿ ಕರ್ನಾಟಕ
ರಾಜ್ಯವನ್ನು ಪ್ರತಿನಿಧಿಸಿದ ಶಿವಮೊಗ್ಗ ದ ಪ್ರಸಿದ್ಧ ಶಾಲೆಯಾದ ಪಿಇಎಸ್ ನ ಐದನೇ ತರಗತಿ ವಿದ್ಯಾರ್ಥಿ ತೇಜಸ್ ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಕೀರ್ತಿ ತಂದಿದ್ದು ವಿಜೇತ ಕ್ರೀಡಾಪಟುವಿಗೆ ತರಬೇತಿದಾರರಾಗಿ ಶಿವಮೊಗ್ಗ ಜಿಲ್ಲಾ ಕರಾಟೆ ಅಸೋಸಿಯೇಷನ್ ಉಪಾಧ್ಯಕ್ಷ ಶಿಹಾನ್ ಬಾಲ್ರಾಜ್ ತೆರಳಿದ್ದು ವಿಜೇತ ಕ್ರೀಡಾಪಟುವಿಗೆ ಶಿವಮೊಗ್ಗ ಜಿಲ್ಲಾ ಕರಾಟೆ ಅಸೋಸಿಯೇಷನ್ ಗೌರವಾಧ್ಯಕ್ಷ
ಶಿವಮೊಗ್ಗ ವಿನೋದ್ ಶುಭಕೋರಿದ್ದಾರೆ.

DC Shivamogga ಸಫಾಯಿ ಕರ್ಮಚಾರಿಗಳಿಗೆ ಕಾನೂನು ಬದ್ಧ ಸೌಲಭ್ಯಗಳನ್ನ ನೀಡಿ ಸಮಾಜದ ಮುಖ್ಯವಾಹಿನಿಗೆ ತರಬೇಕಿದೆ- ಗುರುದತ್ತ ಹೆಗಡೆ

0

DC Shivamogga ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಯೋಜನೆಗಳನ್ನು ಬಳಸಿಕೊಂಡು ಜಿಲ್ಲೆಯಲ್ಲಿ ಸಫಾಯಿ ಕರ್ಮಚಾರಿಗಳಿಗೆ ಕಾನೂನುಬದ್ಧವಾದ ಎಲ್ಲಾ ಸೌಲಭ್ಯಗಳನ್ನು ದೊರಕಿಸಿಕೊಡುವಂತೆ ಹಾಗೂ ಅವರಿಗೆ ಉದ್ಯೋಗ ಭದ್ರತೆ, ಆರೋಗ್ಯ, ಶಿಕ್ಷಣ ನೆರವು ನೀಡಿ ಸಮಾಜದ ಮುಖ್ಯವಾಹಿನಿಗೆ ಕರೆತರುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಹೇಳಿದರು.

ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ವೃತ್ತಿ ನಿಷೇಧ ಮತ್ತು ಜಾಗೃತಿ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಈ ಹಿಂದಿನ ವರ್ಷಗಳಲ್ಲಿ ಜಿಲ್ಲೆಯ ಹೋಟೆಲ್, ಕೈಗಾರಿಕೆಗಳಲ್ಲಿ ಸರ್ಕಾರದ ಕಾನೂನನ್ನು ಉಲ್ಲಂಘಿಸಿ, ಸಫಾಯಿ ಕರ್ಮಚಾರಿಗಳನ್ನು ಬಳಸಿಕೊಂಡಿರುವ ಬಗ್ಗೆ ಮಾಹಿತಿ ಇದೆ. ಇದು ಪುನಃ ಮರುಕಳಿಸದಂತೆ ಸಂಬಂಧಿಸಿದ ಇಲಾಖಾಧಿಕಾರಿಗಳು ಸೂಕ್ಷ್ಮವಾಗಿ ಗಮನಹರಿಸಬೇಕು. ಈ ಪ್ರಕ್ರಿಯೆ ನಿರಂತರವಾಗಿದ್ದು, ತಿಂಗಳಿಗೊಮ್ಮೆ ಜನರಿಗೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅರಿವು ಮೂಡಿಸಬೇಕು ಅಲ್ಲದೇ ಸಾರ್ವಜನಿಕರೂ ಕೂಡ ಇಂತಹ ಪ್ರಕರಣಗಳು ಕಂಡುಬಂದಲ್ಲಿ ಸಕಾಲಿಕ ಕ್ರಮ ಕೈಗೊಳ್ಳಲು ಅನುಕೂಲವಾಗುವಂತೆ ಸಂಬಂಧಿಸಿದ ಇಲಾಖಾಧಿಕಾರಿಗಳ ಗಮನಕ್ಕೆ ತರುವಂತೆ ಅವರು ಸೂಚಿಸಿದರು. ಭದ್ರಾವತಿ ತಾಲೂಕಿನ ಗುಡ್ಡದ ನೇರಳೆಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಶಕಗಳ ಹಿಂದೆ ಮಕ್ಕಳಿಂದ ಶೌಚಾಲಯ ಸ್ವಚ್ಚಗೊಳಿಸಿದ ಪ್ರಕರಣದ ಕುರಿತು ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖಾಧಿಕಾರಿಗಳು ಪರಿಶೀಲಿಸಿ, ಕೈಗೊಂಡ ಕ್ರಮದ ಕುರಿತು ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಶಿವಮೊಗ್ಗ ಮತ್ತು ಭದ್ರಾವತಿ ಅವಳಿ ನಗರಗಳ ಕೆಲವು ಹೋಟೆಲ್‌ಗಳಲ್ಲಿ ಹಾಗೂ ಭದ್ರಾವತಿಯ ರಂಗಪ್ಪ ಸರ್ಕಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೆರೆದ ಚರಂಡಿಗಳಿಗೆ ಮಲ-ಮೂತ್ರ ವಿಸರ್ಜನೆ ಬಿಡುತ್ತಿರುವ ಬಗ್ಗೆ ಸಾರ್ವಜನಿಕ ವಲಯದಿಂದ ದೂರುಗಳು ಕೇಳಿ ಬರುತ್ತಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಮಹಾನಗರಪಾಲಿಕೆ ಆಯುಕ್ತರು ಹಾಗೂ ಭದ್ರಾವತಿಯ ಪೌರಾಯುಕ್ತರು ಕೂಡಲೇ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಿ, ತಪ್ಪಿತಸ್ಥ ವ್ಯಕ್ತಿ ಅಥವಾ ಸಂಸ್ಥೆಗಳಿಗೆ ದಂಡ ವಿಧಿಸಬೇಕಲ್ಲದೇ ಅನೇಕ ಸೂಚನೆಗಳ ನಂತರವೂ ತಮ್ಮ ವ್ಯವಸ್ಥೆಯನ್ನು ಸರಿಪರಿಸಿಕೊಳ್ಳದೇ ದೊಡ್ಡ ಪ್ರಮಾಣದಲ್ಲಿ ಮುಂದುವರೆಸುತ್ತಿದ್ದಲ್ಲಿ ಅಂತಹವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದರು.

DC Shivamogga ಈಗಾಗಲೇ ಜಿಲ್ಲೆಯಲ್ಲಿ ಮ್ಯಾನ್ಯುಯಲ್ ಸ್ಕಾವೆಂರ‍್ಸ್ಗಳ ಸಮೀಕ್ಷೆ ನಡೆಸಿದ್ದು, ಸರ್ಕಾರಕ್ಕೆ ವರದಿ ನೀಡಲಾಗಿದೆ ಎಂದ ಅವರು, ದಶಕಗಳ ಹಿಂದೆ ಭದ್ರಾವತಿಯ ವಿ.ಐ.ಎಸ್.ಎಲ್. ಕಾರ್ಖಾನೆಯ ಮ್ಯಾನ್ಯುಯಲ್ ಸ್ಕಾವೆಂಜಿಂಗ್ ಮಾಡುವಾಗ ಮೃತಪಟ್ಟ ಕುಟುಂಬಕ್ಕೆ ಪರಿಹಾರ ದೊರಕದಿರುವುದು ಸಮಿತಿ ಸದಸ್ಯರು ಗಮನಕ್ಕೆ ತಂದಿದ್ದು, ಪರಿಹಾರಧನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು.

ವಿಶ್ವದಲ್ಲೇ ಶಿಕ್ಷಣದಲ್ಲಿ ಅತಿಹೆಚ್ಚು ಪದವಿಗಳಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರು ಶಾಲೆಗೆ ದಾಖಲಾದ ದಿನವಾದ ನವೆಂಬರ್ ೦೭ರಂದು ಪೌರಸೇವಾಕಾರ್ಮಿಕರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲು ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.

೨೦೨೧-೨೨ನೇ ಸಾಲಿನಲ್ಲಿ ಗುರುತಿಸಲಾದ ಮ್ಯಾನ್ಯುಯಲ್ ಸ್ಕಾವೆಂರ‍್ಸ್ಗಳಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದಿಂದ ಸಹಾಯಧನ ಮಂಜೂರಾತಿಗೆ ಸಂಬಂಧಿಸಿದಂತೆ ಪ್ರಸ್ತಾವನೆಗಳು ಬಂದಲ್ಲಿ ಕ್ರಮಕ್ಕೆ ಸೂಚಿಸಲಾಗುವುದು. ಅರ್ಹ ಅರ್ಜಿದಾರರಿಗೆ ಸೌಲಭ್ಯ ಕೊಡುವಲ್ಲಿ ಬ್ಯಾಂಕುಗಳ ವ್ಯವಸ್ಥಾಪಕರಿಂದ ಅನಗತ್ಯ ವಿಳಂಬ ಆಗುತ್ತಿರುವ ಬಗ್ಗೆ ದೂರುಗಳಿದ್ದು, ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ವ್ಯವಸ್ಥಾಪಕರಿಗೆ ಸೂಚಿಸಿದರು. ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಪೌರಕಾರ್ಮಿಕರ ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯಲು ಶುಲ್ಕ ಭರಿಸಲು ನಗರ ಸ್ಥಳೀಯ ಸಂಸ್ಥೆಗಳ ವಂತಿಕೆ ಇಂದ ಭರಿಸಲು ಈಗಾಗಲೇ ಕ್ರಮ ವಹಿಸಲಾಗಿದೆ. ಅಂತಹ ವಿದ್ಯಾರ್ಥಿಗಳಿದ್ದಲ್ಲಿ ಮಾಹಿತಿ ನೀಡಿದಲ್ಲಿ ಶುಲ್ಕ ಭರಿಸುವ ಕುರಿತು ಸಂಬಂಧಿಸಿದ ಇಲಾಖಾ ಅಧಿಕಾರಿಗಳ ಗಮನ ಸೆಳೆಯಲಾಗುವುದು ಎಂದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್‌ಕುಮಾರ್ ಭೂಮರೆಡ್ಡಿ, ಮಹಾನಗರಪಾಲಿಕೆ ಆಯುಕ್ತ ಶ್ರೀಮತಿ ಕವಿತಾಯೋಗಪ್ಪನವರ್, ಸಮಿತಿ ಸದಸ್ಯರಾದ ಚಿನ್ನಯ್ಯ, ಭಾನುಪ್ರಸಾದ್, ಕಾಗಿನಲ್ಲಿ ನಾಗರಾಜ್, ಶ್ರೀಮತಿ ರಷ್ಮಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Karnataka Amateur Boxing Association ರಾಜ್ಯಮಟ್ಟದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಶಿವಮೊಗ್ಗದ ಮೀನಾಕ್ಷಿಗೆ ದ್ವಿತೀಯ ಸ್ಥಾನ

0

Karnataka Amateur Boxing Association ನವೆಂಬರ್ 18ರಂದು ಬೆಂಗಳೂರಿನ ವಿದ್ಯಾರಣ್ಯಪುರದ ಮಹಾನಗರ ಪಾಲಿಕೆಯ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಆಯೋಜಿಸಿದ ಎಲೈಟ್ ಮಹಿಳೆಯರ ರಾಜ್ಯಮಟ್ಟದ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಶಿವಮೊಗ್ಗ ಜಿಲ್ಲೆಯಿಂದ ಪ್ರತಿನಿಧಿಸಿದ ಮೀನಾಕ್ಷಿ 60-63 ಕೆಜಿ ತೂಕದ ವಿಭಾಗದಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿದ್ದು
ಮೀನಾಕ್ಷಿ ಈ ಹಿಂದೆ ಸಹ ದಸರಾ ಕ್ರೀಡಾಕೂಟ ರಾಜ್ಯಮಟ್ಟದ ಬಾಕ್ಸಿಂಗ್ ನಲ್ಲಿ ಪದಕ ತಂದು
ಜಿಲ್ಲೆಗೆ ಕೀರ್ತಿ ತಂದಿದ್ದರು .

Karnataka Amateur Boxing Association ಈ ಬಾರಿಯೂ ಇವರ ಸಾಧನೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗುವ ನಿಟ್ಟಿನಲ್ಲಿ ಇತ್ತು ಆದರೆ ಕೊನೆ ಕ್ಷಣದಲ್ಲಿ ಕೆಲವು ಅಂಕಗಳ ವ್ಯತ್ಯಾಸದಿಂದ ಆಯ್ಕೆಯಾಗದೆ ಇದ್ದು ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಗುರಿಯನ್ನು ಹೊಂದಿರುವವಿಜೇತ ಕ್ರೀಡಾಪಟುವಿಗೆ ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಸಹ ಕಾರ್ಯದರ್ಶಿ ಹಾಗೂ ಶಿವಮೊಗ್ಗ ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಅಧ್ಯಕ್ಷ ಶಿವಮೊಗ್ಗ ವಿನೋದ ಅಭಿನಂದನೆ ಕೋರಿದ್ದಾರೆ.

Department of School Education and Literacy ಉಚಿತ NEET/JEE/CET ಆನ್ ಲೈನ್ ಕೋಚಿಂಗ್ ತರಗತಿಗಳಿಗೆ ಸಚಿವ ಮಧು ಬಂಗಾರಪ್ಪ ಅವರಿಂದ ಚಾಲನೆ

0

Department of School Education and Literacy ವಿಧಾನಸೌಧದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಆಯೋಜಿಸಿದ್ದ ಸರಕಾರಿ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ “ಉಚಿತ NEET/JEE/CET ಆನ್ ಲೈನ್ ಕೋಚಿಂಗ್ ತರಗತಿಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಚಾಲನೆ ನೀಡಿದರು.

ಬಳಿಕ ವಿಡಿಯೋ ಕಾನ್ಫರೆನ್ಸ್ ಮೂಲಕ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರೊಂದಿಗೆ ಸಂವಾದ ನಡೆಸಿದರು. ಈ ಯೋಜನೆಯಿಂದಾಗಿ ಹೆಚ್ಚಿನ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದರು.

ಮೊದಲ ಹಂತದಲ್ಲಿ 25,000 ವಿದ್ಯಾರ್ಥಿಗಳಿಗೆ ಈ ಅವಕಾಶವನ್ನು ಕಲ್ಪಿಸಲಾಗಿದ್ದು, ಪರಿಣಿತ ಉಪನ್ಯಾಸಕರಿಂದ ಪ್ರತಿದಿನ ಈ ತರಬೇತಿ ಕಾರ್ಯಕ್ರಮ ನಡೆಸಲಾಗುತ್ತದೆ. ಪದವಿ ಪೂರ್ವ ಕಾಲೇಜಿನ 20 ಸಾವಿರ ವಿದ್ಯಾರ್ಥಿಗಳು ಹಾಗೂ ಆದರ್ಶ ಕಾಲೇಜಿನ 5 ಸಾವಿರ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ.

Department of School Education and Literacy ಈ ವೇಳೆ ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ರಿತೇಶ್ ಕುಮಾರ್ ಸಿಂಗ್, ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ ನಿರ್ದೇಶಕರಾದ ಶ್ರೀಮತಿ ಸಿಂಧೂ ಬಿ ರೂಪೇಶ್, ಪೇಸ್ ಸಂಸ್ಥೆಯ ನಿರ್ದೇಶಕರಾದ ಶ್ರೀ ಪ್ರವೀಣ್ ತ್ಯಾಗಿ, ಪದವಿ ಪೂರ್ವ ಜಂಟಿ ನಿರ್ದೇಶಕರಾದ ಶ್ರೀಮತಿ ಡಾ.ರೂಪಶ್ರೀ ಸೇರಿದಂತೆ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ಉಪಸ್ಥಿತರಿದ್ದರು.

World Toilet Day ನಮ್ಮ ಶೌಚಾಲಯ ನಮ್ಮ ಗೌರವ ಕಾರ್ಯಕ್ರಮಕ್ಕೆ ಚಾಲನೆ

0

World Toilet Day ವಿಶ್ವ ಶೌಚಾಲಯ ದಿನದ ಅಂಗವಾಗಿ ನ.19 ರಿಂದ ಡಿ.10 ರವರೆಗೆ ಜಿಲ್ಲೆಯಾದ್ಯಂತ ‘ನಮ್ಮ ಶೌಚಾಲಯ ನಮ್ಮ ಗೌರವ’ ಎಂಬ ವಿಶೇಷ ಆಂದೋಲನವನ್ನು ಏರ್ಪಡಿಸಲಾಗಿದ್ದು ಎಲ್ಲರೂ ಈ ಆಂದೋಲನದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೇಮಂತ್ ಎನ್ ಕೋರಿದರು.

ಜಿ.ಪಂ ಸಭಾಂಗಣದಲ್ಲಿ ‘ನಮ್ಮ ಶೌಚಾಲಯ ನಮ್ಮ ಗೌರª’ ಆಂದೋಲನ ಕುರಿತಾದ ಪೋಸ್ಟರ್‌ನ್ನು ಅವರು ಇತರೆ ಅಧಿಕಾರಿಗಳು ಮತ್ತು ಫಲಾನುಭವಿಗಳೊಂದಿಗೆ ಅನಾವರಣಗೊಳಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಇದೇ ವೇಳೆ ವೈಯಕ್ತಿಕ ಶೌಚಾಲಯ ಫಲಾನುಭವಿಗಳಿಗೆ ಕಾರ್ಯಾದೇಶ ನೀಡುವ ಮೂಲಕ ಶಿಘ್ರವಾಗಿ ಶೌಚಾಲಯ ನಿರ್ಮಾಣ ಮಾಡಿಕೊಳ್ಳಲು ತಿಳಿಸಿದರು.
ಗ್ರಾಮೀಣ ಸಮುದಾಯದಲ್ಲಿ ಸುರಕ್ಷಿತ ನೈರ್ಮಲ್ಯ, ಶುಚಿತ್ವ ಕುರಿತು ಜಾಗೃತಿ ಮೂಡಿಸಿ ಶೌಚಾಲಯಗಳನ್ನು ನಿರಂತರ ಬಳಸುವಂತೆ ಪ್ರೇರೇಪಿಸುವ ಉದ್ದೇಶದೊಂದಿಗೆ ಪ್ರತಿ ವರ್ಷ ನ.19 ರಂದು ವಿಶ್ವ ಶೌಚಾಲಯ ದಿನವನ್ನಾಗಿ ಆಚರಿಸಲಾಗುತ್ತಿದೆ.

ಈ ದಿನಾಚರಣೆಯು ಬಯಲು ಬಹಿರ್ದೆಸೆ ಮುಕ್ತ ಸ್ಥಿತಿಯ ಸ್ಥಾನಮಾನ ಉಳಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
ವಿಶ್ವ ಶೌಚಾಲಯ ಮತ್ತು ವಿಶ್ವಮಾನವ ಹಕ್ಕುಗಳ ದಿನಾಚರಣೆ ಪ್ರಯುಕ್ತ ಪ್ರಸ್ತುತ ವರ್ಷ ‘ನಮ್ಮ ಶೌಚಾಲಯ-ನಮ್ಮ ಗೌರವ’ ಎಂಬ ಶೀರ್ಷಿಕೆ ಹಾಗೂ ‘ಅಂದದ ಶೌಚಾಲಯ-ಆನಂದದ ಜೀವನ’ ಎಂಬ ಘೋಷ ವಾಕ್ಯದೊಂದಿಗೆ ವಿಶೇಷ ಆಂದೋಲನ ಆಯೋಜಿಸಲಾಗುತ್ತಿದೆ.

World Toilet Day ವಿಶೇಷ ಆಂದೋಲನದಲ್ಲಿ ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಚಟುವಟಿಕೆಗಳನ್ನು ಕಡ್ಡಾಯವಾಗಿ ಹಮ್ಮಿಕೊಳ್ಳಲಾಗುವುದು ಎಂದರು.
ವೈಯಕ್ತಿಯ ಶೌಚಾಲಯ ಸೌಂದರ್ಯೀಕರಣ ಸ್ಪರ್ಧೆ: ಶೌಚಾಲಯ ಬಳಕೆ ಕುರಿತು ಸಮೀಕ್ಷೆ ನಡೆಸಲಾಗುವುದು ಹಾಗೂ ಗೃಹ ಶೌಚಾಲಯಗಳನ್ನು ನಿರಂತರವಾಗಿ ಬಳಸುವ ಫಲಾನುಭವಿಗಳನ್ನು ಗುರುತಿಸಿ ಬಹುಮಾನ ನೀಡಿ ಗೌರವಿಸಲಾಗುವುದು. ಸ್ಪರ್ಧೆ ಆಯೋಜಿಸಿ ಅತ್ಯುತ್ತಮ ವೈಯಕ್ತಿಕ ಗೃಹಶೌಚಾಲಯಗಳನ್ನು ಗುರುತಿಸಿ ತಾಲೂಕು ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ವಿಜೇತರಿಗೆ ಪ್ರಶಸ್ತಿ ನೀಡಲಾಗುವುದು.

ಸಮುದಾಯ ಶೌಚಾಲಯಗಳನ್ನು ಶುಚಿತ್ವಗೊಳಿಸಿ ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಲು ಹಾಗೂ ಅವುಗಳ ಸೌಂದರ್ಯೀಕರಣಕ್ಕೆ ಸ್ವರ್ಧೆ ಆಯೋಜಿಸಲಾಗಿದೆ.
ಜಿಲ್ಲಾ ಮಟ್ಟದಲ್ಲಿ ವಿಜೇತರಿಗೆ ಪ್ರಥಮ ರೂ.8000, ದ್ವಿತೀಯ 6000, ತೃತೀಯ 5000, ನಾಲ್ಕನೇ 3000 ಮತ್ತು ಐದನೇ ಬಹುಮಾನ 2000 ನಗದು ಬಹುಮಾನ ನೀಡಲಾಗುವುದು.
ತಾಲ್ಲೂಕು ಮಟ್ಟದಲ್ಲಿ ವಿಜೇತರಿಗೆ ಪ್ರಥಮ ರೂ.5000, ದ್ವಿತೀಯ 3000, ತೃತೀಯ 2000 ನಗದು ಬಹುಮಾನ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಈ ವೇಳೆ ಜಿ.ಪಂ ಉಪ ಕಾರ್ಯದರ್ಶಿ ಸುಜಾತ ಕೆ.ಆರ್, ಸಹಾಯಕ ಕಾರ್ಯದರ್ಶಿ, ಶಿವಮೊಗ್ಗ ಇಓ ಅವಿನಾಶ್ ಇತರೆ ಅಧಿಕಾರಿಗಳು, ಫಲಾನುಭವಿಗಳು ಪಾಲ್ಗೊಂಡಿದ್ದರು.