Tuesday, March 24, 2026
Tuesday, March 24, 2026
Home Blog Page 489

Kasturba Girls Junior College ಮಕ್ಕಳ ಪ್ರತಿಭೆ ಅನಾವರಣಗೊಳಿಸುವ ಪ್ರತಿಭಾ ಕಾರಂಜಿಗೆ ಇನ್ನಷ್ಟು ಶಕ್ತಿ ತುಂಬೋಣ- ಶಾಸಕ ಚನ್ನಬಸಪ್ಪ

0

Kasturba Girls Junior College ವೈವಿಧ್ಯತೆಯನ್ನು ಹೊಂದಿರುವ ನಮ್ಮ ರಾಷ್ಟ್ರದ ಸಂಸ್ಕೃತಿಯನ್ನು ಹಾಗೂ ಮಕ್ಕಳಲ್ಲಿನ ವಿಭಿನ್ನ ಪ್ರತಿಭೆಯನ್ನು ಅನಾವರಣಗೊಳಿಸುವುದು ಪ್ರತಿಭಾ ಕಾರಂಜಿ. ಈ ಮಕ್ಕಳ ಸಾಂಸ್ಕೃತಿಕ ಹಬ್ಬ ಯಶಸ್ವಿಯಾಗಲಿ ಎಂದು ಶಾಸಕರಾದ ಎಸ್ ಎನ್ ಚನ್ನಬಸಪ್ಪ ಆಶಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಇಲಾಖೆ, ಕಸ್ತೂರಬಾ ಬಾಲಿಕಾ ಪದವಿಪೂರ್ವ ಕಾಲೇಜು(ಪ್ರೌಢಶಾಲಾ ವಿಭಾಗ) ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಕಸ್ತೂರಬಾ ಬಾಲಿಕಾ ಪದವಿಪೂರ್ವ ಕಾಲೇಜು(ಪ್ರೌಢಶಾಲಾ ವಿಭಾಗ) ಇಲ್ಲಿ ಗುರುವಾರ ಏರ್ಪಡಿಸಲಾಗಿರುವ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಒಂದು ಅತ್ಯುತ್ತಮ ಕಾರ್ಯಕ್ರಮ. ಇಲ್ಲಿ ನಡೆಯುವ ವಿವಿಧ ಸ್ಪರ್ಧೆಗಳಲ್ಲಿ ಎಲ್ಲ ಮಕ್ಕಳು ಗೆಲ್ಲಲು ಸಾಧ್ಯವಿಲ್ಲ. ಆದರೆ ಭಾಗವಹಿಸುವ ಅವಕಾಶವಿದ್ದು ಸ್ಪರ್ಧಾತ್ಮಕವಾಗಿ ಪಾಲ್ಗೊಳ್ಳಬೇಕು. ನಮ್ಮದು ಸಾಂಸ್ಕೃತಿಕ ರಾಷ್ಟ್ರ. ಅದಕ್ಕೆ ಪೂರಕವಾದ ಕಾರ್ಯಕ್ರಮಗಳು ಇಲ್ಲಿ ನಡೆಯಲಿವೆ. ವೈವಿಧ್ಯಮಯ ಸ್ಪರ್ಧೆಗಳು ಮತು ಮಕ್ಕಳ ಪ್ರತಿಭೆ ಅನಾವರಣಗೊಳಿಸುವ ಪ್ರತಿಭಾ ಕಾರಂಜಿಗೆ ಇನ್ನಷ್ಟು ಶಕ್ತಿ ತುಂಬುವ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ತಾವು ಪ್ರಯತ್ನ ಮಾಡುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು.

ವಿಧಾನ ಪರಿಷತ್ ಶಾಸಕರಾದ ಡಿ.ಎಸ್.ಅರಣ್ ಮಾತನಾಡಿ, ನಮ್ಮದು ವೈವಿಧ್ಯಮಯ, ಸಾಂಸ್ಕೃತಿಕ ದೇಶ. ನಮ್ಮ ಸಂಸ್ಕೃತಿಯನ್ನು ಉಳಿಸುವ ಕೆಲಸವನ್ನು ಯುವ ಪೀಳಿಗೆಯು ಮಾಡಬೇಕು. ನಮ್ಮ ಸಂವಿಧಾನದಲ್ಲಿ ಹಕ್ಕಿನ ಜೊತೆ ಜವಾಬ್ದಾರಿಗಳೂ ಇದ್ದು ಅದನ್ನು ಅರಿತು ಮುಂದೆ ಸಾಗಬೇಕು. ಮಕ್ಕಳಲ್ಲಿನ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆ. ಮಕ್ಕಳಲ್ಲಿ ಸಾರ್ವಜನಿಕ ಶಿಷ್ಟಾಚಾರ ಮತ್ತು ಸಂಸ್ಕಾರ ಕಲಿಸುವುದು ನಮ್ಮ ಕರ್ತವ್ಯ. ಪ್ರತಿಭಾ ಕಾರಂಜಿ ಮೂಲಕ ಈ ಕೆಲಸ ಆಗುತ್ತಿದೆ ಎನ್ನಬಹುದು. ಎಲ್ಲ ಮಕ್ಕಳು ಇಂತಹ ವೇದಿಕೆ ಸದುಪಯೋಗ ಪಡೆದು, ಜಿಲ್ಲಾ, ರಾಜ್ಯ ಮಟ್ಟದಲ್ಲಿ ಹೆಸರು ಮಾಡಬೇಕೆಂದರು.

Kasturba Girls Junior College ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಮಾತನಾಡಿ, ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲಿ ಹಿಂದೆಲ್ಲ ಪಠ್ಯೇತರ ಚಟುವಟಿಕೆಗಳು ಹೆಚ್ಚಿತ್ತು. ಈಗ ಕಡಿಮೆ ಆಗುತ್ತಿದೆ. ಓದಿನ ಬಗ್ಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಆದರೆ ಮಕ್ಕಳಿಗೆ ಕ್ರೀಡೆ ಮತ್ತು ಸಾಂಸ್ಕೃತಿಕತೆ ಹಾಗೂ ಸ್ಪರ್ಧಾತ್ಮಕತೆಯನ್ನು ಕಲಿಸಬೇಕಿದೆ ಪ್ರಸ್ತುತ ಕ್ರೀಡಾ ಕ್ಷೇತ್ರದಲ್ಲಿ ಶೇ.65 ರಿಂದ 70 ರಷ್ಟು ಸಾಧನೆ ಮಾಡಿದ್ದೇವೆ.
ಮಕ್ಕಳಿಗೆ ನಮ್ಮ ನೆಲದ ಅಂದರೆ ಮಲೆನಾಡಿನ ಸಾಂಸ್ಕೃತಿಕ ವಿಚಾರದಲ್ಲಿ ತೊಡಗಿಸಬೇಕು ಎಂದ ಅವರು ಸರ್ಕಾರ ಮಕ್ಕಳ ಸರ್ವಾಂಗೀಣ ಅಭಿವೃದ್ದಿಗಾಗಿ ಶಿಕ್ಷಣದ ಜೊತೆಗೆ ಉಚಿತ ಊಟ, ಪುಸ್ತಕ, ಮೊಟ್ಟೆ ಇತರೆ ಸೌಲಭ್ಯಗಳನ್ನು ನೀಡುತ್ತಿದೆ ಎಂದರು.

ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್, ಇಂದಿನ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಸುಮಾರು 2000 ವಿದ್ಯಾರ್ಥಿಗಳು ಪಾಲ್ಗೊಂಡಿರುವುದು ಸಂತಸದ ವಿಷಯ. ಮಕ್ಕಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲೂ ಭಾಗವಹಿಸಬೇಕು ಎಂದರು.
ಡಿಡಿಪಿಐ ಎಸ್. ಆರ್. ಮಂಜುನಾಥ್ ಮಾತನಾಡಿ, ಸರ್ಕಾರ ಮಕ್ಕಳಲ್ಲಿನ ಪ್ರತಿಭೆ ಹೊರತರಲು ಪ್ರತಿಭಾ ಕಾರಂಜಿನಂತಹ ಉತ್ತಮ ವೇದಿಕೆ ಕಲ್ಪಿಸಿದೆ. ವಿದ್ಯಾರ್ಥಿಗಳು ಅತ್ಯಂತ ಹುಮ್ಮಸ್ಸಿನಿಂದ ಭಾಗವಹಿಸಬೇಕು. ಬಹುಮಾನಕ್ಕಿಂತ ಭಾಗವಹಿಸುವುದು ಮುಖ್ಯ ಎಂದರು.

ಕ.ರಾ.ಪ್ರಾ.ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ದಿನೇಶ್ ಜಿ.ಎಂ., ಕಸ್ತೂರಬಾ ಪ್ರೌಢಶಾಲೆಯ ಪ್ರಾಂಶುಪಾಲರಾದ ವೆಂಕಟೇಶ್ ಮಾತನಾಡಿದರು.
ಪ್ರತಿಭಾ ಕಾರಂಜಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮಿಮಿಕ್ರಿ, ಕ್ಲೇಮಾಡ್ಲಿಂಗ್, ಛದ್ಮವೇಷ, ಆಶುಭಾಷಣ, ಭರತನಾಟ್ಯ, ರಂಗೋಲಿ, ಚರ್ಚಾಸ್ಪರ್ಧೆ, ಕಥೆ ಹೇಳುವುದು, ಕವನ, ಪದ್ಯವಾಚನ, ಪ್ರಬಂಧ ರಚನೆ, ಜಾನಪದ ನೃತ್ಯಮ ಗಝಲ್, ಕವಾಲಿ, ಚಿತ್ರಕಲೆ, ಭಾವಗೀತೆ ಮುಂತಾದ 14 ವಿಭಾಗಕ್ಕೆ ಸೇರಿದ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಿದ್ದರು.

ಅರಕೆರೆಯ ಪ್ರಾಥಮಿಕ ಶಾಲೆಯ 4ನೇ ತರಗತಿ ಕಾರ್ತೀಕ್ ಹುಲಿ ವೇಷಧಾರಿಯಾಗಿ, ಹೊಳಲೂರು ಆಕ್ಸ್ಫರ್ಡ್ ಶಾಲೆಯ 3ನೇ ತರಗತಿ ಚೇತನ್ ಬಿ.ಕೆ ವೆಂಕಟೇಶ್ವರ ಸ್ವಾಮಿ, ಮಹಾವೀರ ಶಾಲೆಯ 4ನೇ ತರಗತಿ ಸುವ್ರತಾ ವಟುವಾಗಿ, ಆದಿಚುಂಚನಗಿರಿ ಶಾಲೆಯ 4ನೇತರಗತಿ ಸುದೀಕ್ಷ ಆಂಜನೇಯ ಹಾಗೂ ಪ್ಲಾಸ್ಟಿಕ್ ದುಷ್ಪರಿಣಾಮ ಸೇರಿದಂತೆ ವಿವಿಧ ಛದ್ಮವೇಶಧಾರಿಗಳು ಗಮನ ಸೆಳೆದರು.

ಬಿಇಓ ರಮೇಶ್ ಸ್ವಾಗತಿಸಿದರು. ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Department of Food Civil Supplies and Consumer Affairs ಗ್ರಾಹಕರ ರಕ್ಷಣೆಯ ಹೊಸ ಕಾಯಿದೆಯಲ್ಲಿ ಅನೇಕ ಅನುಕೂಲಗಳನ್ನ ಕಲ್ಪಿಸಲಾಗಿದೆ- ಬಸವಪ್ರಭು ಹೊಸಕೆರಿ

0

Department of Food Civil Supplies and Consumer Affairs ಜನರ ಸಮಸ್ಯಗಳಿಗೆ ತ್ವರಿತ ಗತಿಯಲ್ಲಿ ನ್ಯಾಯ ಒದಗಿಸುವುದಕ್ಕೆ ಗ್ರಾಹಕರ ನ್ಯಾಯಾಲಯ ಸ್ಥಾಪನೆಯಾಗಿದ್ದು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಧಾರವಾಡ ಉಚ್ಚನ್ಯಾಯಾಲದ ಹಿರಿಯ ವಕೀಲರಾದ ಬಸವಪ್ರಭು ಹೊಸಕೆರಿ ಅವರು ತಿಳಿಸಿದರು.

ಜಿಲ್ಲಾಡಳಿತ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ವತಿಯಿಂದ ಜಿಲ್ಲಾ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ಗ್ರಾಹಕರ ಹಿತರಕ್ಷಣಾ ಕಾಯ್ದೆ-2019 ರ ಕುರಿತು ಜಿಲ್ಲಾ ಸರ್ಕಾರಿ ಅಧಿಕಾರಿಗಳಿಗೆ ಏರ್ಪಡಿಸಲಾಗಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಉಪನ್ಯಾಸನ ನೀಡಿದ ಅವರು ಗ್ರಾಹಕರ ಹಿತಕಾಯುವ ಕಾನೂನುಗಳ ಅರಿವು ಪ್ರತಿಯೊಬ್ಬರಿಗೂ ಅವಶ್ಯಕವಾಗಿದೆ. ಈ ಕುರಿತು ಅಧಿಕಾರಿಗಳು ಸಾಮಾನ್ಯಜ್ಞಾನವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಗ್ರಾಹಕರ ಹಿತರಕ್ಷಣೆಗಾಗಿ ಕೇಂದ್ರ ಸರ್ಕಾರ 2019 ರಲ್ಲಿ ಹೊಸ ಗ್ರಾಹಕರ ಹಿತರಕ್ಷಣಾ ಕಾನೂನು ಜಾರಿಗೆ ತಂದಿದೆ ಅನೇಕ ಮಾರ್ಪಾಡುಗಳನ್ನು ಮಾಡುವ ಮೂಲಕ ಜನರಿಗೆ ಸರಳವಾಗಿ ಶೀಘ್ರವಾಗಿ ನ್ಯಾಯವನ್ನು ನೀಡುವ ಉದ್ದೇಶವನ್ನು ಈ ಕಾಯ್ದೆ ಹೊಂದಿದೆ.

ಸಮಾಜದಲ್ಲಿ ಜೀವಿಸುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಗ್ರಾಹಕನಾಗಿರುತ್ತಾನೆ. ಇಂದಿನ ದಿನಮಾನಗಳಲ್ಲಿ ವ್ಯಾಪಾರದಲ್ಲಿ ಸಾಕಷ್ಟು ಮೋಸ, ವಂಚನೆಯಂತಹ ಪ್ರಕರಣಗಳನ್ನು ನಾವು ಕಾಣಬಹುದಾಗಿದೆ. ಎಲ್ಲಾ ಪ್ರಕರಣಗಳನ್ನು ಸಿವಿಲ್ ನ್ಯಾಯಾಲದಲ್ಲಿ ಬಗೆಹರಿಸಲು ಸಾಧ್ಯವಿಲ್ಲದ ಕಾರಣ ವಿಶ್ವಸಂಸ್ಥೆಯ ನಿರ್ದೇಶನದ ಮೆರೆಗೆ ಭಾರತ ಸರ್ಕಾರ 1986 ರಲ್ಲಿ ಮೊದಲ ಬಾರಿಗೆ ಈ ಕಾಯ್ದೆ ಜಾರಿಗೆ ಬಂತು ಗ್ರಾಹಕರ ಜಾಗೃತಿಯನ್ನು ಹೆಚ್ಚಿಸಲು ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಗ್ರಾಹಕ ರಕ್ಷಣಾ ಮಂಡಳಿಗಳನ್ನು ಸ್ಥಾಪಿಸಲಾಗಿದೆ.ನಂತರದಲ್ಲಿ ಅನೇಕ ಮಾರ್ಪಾಡು ಮಾಡಿ 2019ರಲ್ಲಿ ಹೊಸ ಕಾಯ್ದೆಯನ್ನು ಜಾರಿಗೆ ತರಲಾಗಿದೆ.

ಹೊಸ ಕಾಯ್ದೆಯೂ ಅನೇಕ ಅನುಕೂಲಗಳನ್ನು ಗ್ರಾಹಕರಿಗೆ ನೀಡಿದ್ದು ವಸ್ತು ಮತ್ತು ಸೇವೆ ರೂಪದಲ್ಲಿ ಗ್ರಾಹಕರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಕಾನೂನಾತ್ಮಕವಾಗಿ ಅತ್ಯಂತ ಸರಳವಾಗಿ ಜನರಿಗೆ ಜಿಲ್ಲಾ ಕೇಂದ್ರದಲ್ಲಿ ನ್ಯಾಯಾಲಯದಲ್ಲಿ ಸ್ಥಳೀಯವಾಗಿ ನ್ಯಾಯವನ್ನು ಒದಗಿಸು ಕೆಲಸವನ್ನು ಮಾಡುತ್ತಿದೆ.
ಬದಲಾದ ಹೊಸ ಕಾಯ್ದೆಗಳ ಕುರಿತು ಅಧಿಕಾರಿಗಳು ಮೊದಲು ಮಾಹಿತಿಯನ್ನು ಪಡೆದುಕೊಳ್ಳುವುದು ಅವಶ್ಯಕವಾಗಿದ್ದು ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಈ ಕಾರ್ಯಾಗಾರದ ಮೂಲಕ ತಮ್ಮ ಬಳಿ ಬರುವ ಸಾರ್ವಜನಿಕರ ಸಮಸ್ಯೆಗಳನ್ನು ಸರಿಯಾದ ಮಾರ್ಗದರ್ಶನ ನೀಡಲು ಸಹಕಾರಿಯಾಗಿದೆ ಎಂದರು.

Department of Food Civil Supplies and Consumer Affairs ಗ್ರಾಹಕರು ಇರುವುದರಿಂದ ವ್ಯಾಪಾರ ಉದ್ಯಮಗಳು ನಡೆಯುತ್ತಿದೆ. ಜನರಿಂದ ಜನರಿಗಾಗಿ ಕಾನೂನು ಕಾಯ್ದೆಗಳನ್ನು ರೂಪಿಸಲಾಗಿದೆ ಇದರ ಅರಿವು ಪ್ರತಿಯೊಬ್ಬ ಗ್ರಾಹಕರಿಗೆ ತಲುಪಿಸುವ ಕೆಲಸ ಅಧಿಕಾರಿಗಳಿಂದ ಆಗಬೇಕಿದೆ ಎಂದರು.

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ಅವಿನ್ ಮಾತನಾಡಿ ಗ್ರಾಹಕರ ಕಾನೂನು ಅದರ ಕಾರ್ಯಚಟುವಟಿಕೆಗಳು ಜನಸಮಾನ್ಯರಿಗೆ ರೈತರಿಗೆ ಹಾಗೂ ನಮ್ಮ ಸಮಾಜದಲ್ಲಿ ದಿನನಿತ್ಯ ನಡೆಯುತ್ತಿರುವ ಗ್ರಾಹಕರ ವಂಚನೆ ಪ್ರಕರಣಗಳ ಬಗ್ಗೆ ಮೊದಲು ಅಧಿಕಾರಿಗಳಿಗೆ ಕಾನೂನಿನ ಜ್ಞಾನ ಅವಶ್ಯಕವಾಗಿದೆ ಆದ್ದರಿಂದ ಜಿಲ್ಲಾಡಳಿತದ ಸಹಕಾರದಿಂದ ಸಂಪನ್ಮೂಲ ವ್ಯಕ್ತಿಗಳಿಂದ ಗ್ರಾಹಕರ ಹಿತರಕ್ಷಣಾ ಕಾನೂನುಗಳ ಕುರಿತು ಅರಿವು ಮೂಡಿಸುವ ಕಾರ್ಯಾಗಾರವನ್ನು ನೆಡಸಲಾಗುತ್ತಿದೆ. ಪ್ರತಿಯೊಬ್ಬ ಅಧಿಕಾರಿಗಳು ಪ್ರಯೋಜನ ಪಡೆದುಕೊಳ್ಳಿರಿ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಬಳಕೆದಾರರ ವೇದಿಕೆ ಅಧ್ಯಕ್ಷರಾದ
ಡಾ. ರವೀಂದ್ರನಾಥ್ ಶಾನುಬಾಗ್ ಅವರು ಗ್ರಾಹಕರ ರಕ್ಷಣೆಗೆ ಇರುವ ಇತರೆ ಕಾನೂನುಗಳ ಕುರಿತು ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಮತ್ತು ಗ್ರಾಹಕರ ರಕ್ಷಣಾ ಪರಿಷತ್ ಸಂಚಾಲಕರಾದ ಎಂ. ಜಯಸ್ವಾಮಿ ಮತ್ತು ಸೈಬರ್ ಪ್ರಕರಣಗಳ ಕುರಿತು ಪೊಲೀಸ್ ಉಪ ಅಧೀಕ್ಷಕ ಕೆ.ಕೃಷ್ಣಮೂರ್ತಿ ಅವರು ತರಬೇತಿ ನೀಡಿದರು.

ಈ ಕಾರ್ಯಾಗಾರದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಸಿಬ್ಬಂಧಿಗಳು ಉಪಸ್ಥಿತರಿದ್ದರು.

Karnataka Sanga Shivamogga ನವೆಂಬರ್ 22 & 23 .ಶಿವಮೊಗ್ಗ ಕರ್ನಾಟಕ ಸಂಘದಲ್ಲಿ ವಿಶೇಷ ಕಾರ್ಯಕ್ರಮಗಳು

0

Karnataka Sanga Shivamogga ನವೆಂಬರ್ 22 ಶುಕ್ರವಾರ ಸಂಜೆ 5 :30ಕ್ಕೆ ಕರ್ನಾಟಕ ಸಂಘದ ಭವನದಲ್ಲಿ ರಾಜ್ಯೋತ್ಸವದ ಸಂಭ್ರಮಾಚರಣೆಯನ್ನು ಏರ್ಪಡಿಸಲಾಗಿದೆ.

ಜಿಲ್ಲಾಧಿಕಾರಿಗಳಾದ ಶ್ರೀ ಗುರುದತ್ ಹೆಗಡೆಯವರು ಶಿವಮೊಗ್ಗ ಟೈಮ್ಸ್ ಸಂಪಾದಕರಾದ ಶ್ರೀ ಎಸ್. ಚಂದ್ರಕಾಂತ್ ಇವರ ಹಳೆಯ ಅಂಚೆ ಚೀಟಿ ಮತ್ತು ನಾಣ್ಯಗಳು ಮತ್ತು ಡಾ. ಶ್ರೀಕಾಂತ್ ಎನ್. ಹೆಗಡೆ ಇವರ ವನ್ಯಜೀವಿ ಛಾಯಾಚಿತ್ರ ಪ್ರದರ್ಶನದ ಉದ್ಘಾಟನೆ ಹಾಗೂ ನಾಡದೇವಿ ಭುವನೇಶ್ವರಿ ಚಿತ್ರ ಅನಾವರಣ ಮಾಡಲಿದ್ದಾರೆ.

ಸಾಹಿತಿಗಳಾದ ಡಾ. ಬಿ. ಜನಾರ್ಧನ ಭಟ್, ಬೆಳ್ಮಣ್ಣು, ಉಡುಪಿ ಇವರು ಅತಿಥಿಗಳಾಗಿ ಆಗಮಿಸಲಿದ್ದು, ‘ಆಧುನಿಕ ಕನ್ನಡ ಗದ್ಯ ಬರವಣಿಗೆಯ ಹೆಜ್ಜೆಗಳು’ ವಿಷಯದ ಕುರಿತು ಉಪನ್ಯಾಸ ನೀಡುವರು.

ದಿನಾಂಕ 23 ನವೆಂಬರ್ 2021, ಶನಿವಾರ ಸಂಜೆ 5:30ಕ್ಕೆ ಕರ್ನಾಟಕ ಸಂಘದ ಭವನದಲ್ಲಿ 94ನೆಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕರ್ನಾಟಕ ಸಂಘದ ಹಿರಿಯ ಸದಸ್ಯರಿಗೆ ಸನ್ಮಾನ ಹಾಗೂ ರಾಜ್ಯೋತ್ಸವದ ಅಂಗವಾಗಿ ದಿ: 16-11-24ರಂದು ಪದವಿ ವಿದ್ಯಾರ್ಥಿಗಳಿಗೆ ಅಯೋಜಿಸಿದ್ದ ಸಮೂಹ ಗಾಯನ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭ ಇರುತ್ತದೆ.

Karnataka Sanga Shivamogga ಮುಖ್ಯ ಅತಿಥಿಗಳಾಗಿ ಡಾ. ಟಿ.ಎಸ್. ನಾಗಾಭರಣ, ಖ್ಯಾತ ಚಲನಚಿತ್ರ ನಿರ್ದೇಶಕರು, ಬೆಂಗಳೂರು ಇವರು ಭಾಗವಹಿಸಲಿದ್ದಾರೆ.

ಸಂಘದ ಅಧ್ಯಕ್ಷರಾದ ಪ್ರೊ. ಹೆಚ್.ಆರ್. ಶಂಕರನಾರಾಯಣ ಶಾಸ್ತಿç ಅಧ್ಯಕ್ಷತೆಯನ್ನು ವಹಿಸಲಿದ್ದಾರೆ,

ದಿನಾಂಕ 22 ಮತ್ತು 23 ರಂದು ಶಿವಮೊಗ್ಗ ಟೈಮ್ಸ್ ಪತ್ರಿಕೆಯ ಶ್ರೀ ಎಸ್. ಚಂದ್ರಕಾಂತ್ ಹಾಗೂ ಡಾ. ಶ್ರೀಕಾಂತ್ ಎನ್. ಹೆಗಡೆ ಇವರಿಂದ ಹಳೆಯ ಅಂಚೆ ಚೀಟಿ ಮತ್ತು ನಾಣ್ಯಗಳು ಹಾಗೂ ವನ್ಯಜೀವಿ ಛಾಯಾಚಿತ್ರ ಪ್ರದರ್ಶನವಿರುತ್ತದೆ.

ಆಸಕ್ತರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕರ್ನಾಟಕ ಸಂಘದ ಸದಸ್ಯರು ವಿನಂತಿಸಿದ್ದಾರೆ.

Zilla Panchayat ಎಲ್ಲಾ ಗ್ರಾಮ ಪಂಚಾಯತಿಗಳನ್ನೂ ಸದೃಢಮಾಡಿ ದೇಶದ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ- ಎನ್.ಹೇಮಂತ್

0


Zilla Panchayat ಶಿವಮೊಗ್ಗ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳು ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಸದೃಢರಾಗುವ ಮೂಲಕ ದೇಶದ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೇಮಂತ್ ಎನ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಿವಿಧ ಯೋಜನೆಗಳ ಯಶಸ್ವಿ ಅನುಷ್ಠಾನದ ಕುರಿತು ಹಮ್ಮಿಕೊಳ್ಳಲಾದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿವಿಧ ಯೋಜನೆಗಳ ಸಮರ್ಪಕ ಅನುಷ್ಠಾನದ ಮೂಲಕ ಗ್ರಾಮದ ಎಲ್ಲಾ ಅಗತ್ಯತೆಗಳನ್ನು ಪೂರೈಸಬಹುದಾಗಿದೆ ಎಂದು ಹೇಳಿದರು.
ಈ ಒಂದು ದಿನದ ಕಾರ್ಯಾಗಾರದಲ್ಲಿ ನರೇಗಾ ಯೋಜನೆ, ಸ್ವಚ್ಛ ಭಾರತ್ ಮಿಷನ್ ಯೋಜನೆ, ಸಂಜೀವಿನಿ ಯೋಜನೆ, ಗ್ರಂಥಾಲಯ ಹಾಗೂ ಮಾನಸಿಕ ಒತ್ತಡ ನಿವಾರಣೆ ಕುರಿತು ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ, ಪಂಚಾಯಿತ್ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ Zilla Panchayat ಗ್ರಂಥಪಾಲಕರಿಗೆ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಐಎಎಸ್ ಪ್ರೋಬೆಷನರಿ ಅಧಿಕಾರಿ ದೃಷ್ಟಿ ಜೈಸ್ವಾಲ್, ಜಿಲ್ಲಾ ಪಂಚಾಯತ್ ಅಧಿಕಾರಿಗಳು, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ಸಂಪನ್ಮೂಲ ವ್ಯಕ್ತಿಗಳು, ಜಿಲ್ಲಾ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

Sri Shivaganga Yoga Centre ನಾವೆಲ್ಲ ಕನ್ನಡ ಬಳಸಬೇಕು. ಬೆಳೆಸಬೇಕು- ಡಾ.ನಾಗರಾಜ ಪರಿಸರ

0

Sri Shivaganga Yoga Centre ಶ್ರೀ ಶಿವಗಂಗಾ ಯೋಗ ಕೇಂದ್ರದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಬಹಳ ಅದ್ದೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಡಾ. ಗಾಯತ್ರಿ ದೇವಿ ಸಜ್ಜನ್, ಡಾ. ಪದ್ಮನಾಭ ಅಡಿಗ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಶ್ರೀ ಪದ್ಮನಾಭ ಅಡಿಗ ಅವರು ಮಾತನಾಡುತ್ತ ಶರಣರ, ದಾಸರ, ವಚನಕಾರರ ಕೊಡುಗೆ ಕನ್ನಡ ಉಳಿಯುವಲ್ಲಿ, ಬೆಳೆಯುವಲ್ಲಿ ಅಪಾರವಾಗಿದೆ ಎಂದು ತಿಳಿಸಿದರು. ಶ್ರೀ ಲವಕುಮಾರ್ ಕನ್ನಡದ ಹಿರಿಮೆ, ಗರಿಮೆ ಹಾಗೂ ಬೆಳೆದು ಬಂದ ಹಾದಿ ಕುರಿತು ವಿಸ್ತಾರವಾಗಿ ತಿಳಿಸಿದರು. ಶ್ರೀಮತಿ ಭಾಗ್ಯ ಕನ್ನಡಿಗರ ಸಾಧನೆ ಕುರಿತು ಮಾತನಾಡಿದರು. ಡಾ. ನಾಗರಾಜ ಪರಿಸರ ಮಾತನಾಡಿ ನಾವೆಲ್ಲ ನಮ್ಮ ಮನೆಯಲ್ಲಿ, ಕಚೇರಿ ಸ್ಥಳಗಳಲ್ಲಿ ಕನ್ನಡದಲ್ಲಿ ಮಾತಾನ್ನಾಡುತ್ತ ಕನ್ನಡವನ್ನು ಪ್ರೀತಿಸಬೇಕು , ಕನ್ನಡ ಬಳಸಬೇಕು, ಬೆಳೆಸಬೇಕು, ಉಳಿಸಬೇಕು ಎಂದರು.

Sri Shivaganga Yoga Centre ಮಕ್ಕಳಿಗೆ ಈಗ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ಸಿಕ್ಕಿರುವುದು ಬಹಳ ಸಂತೋಷದ ವಿಚಾರ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯೋಗಾಚಾರ್ಯ ರುದ್ರಾರಾಧ್ಯ ವಹಿಸಿ ಮಾತನಾಡುತ್ತಾ ನಮ್ಮಲ್ಲಿನ ಯೋಗಾಸಕ್ತರೆಲ್ಲ ಕೂಡಿ ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪ ನಮನ ಮಾಡಿ ಕನ್ನಡ ಗೀತೆಗಳನ್ನು ಸುಮಧುರವಾಗಿ ಹಾಡಿದ್ದು ಬಹಳ ಸಂತೋಷ ಕೊಟ್ಟಿತು. ಮುಂದಿನ ದಿನಗಳಲ್ಲಿಯೂ ಸಹ ಇನ್ನೂ ದೊಡ್ಡಮಟ್ಟದಲ್ಲಿ ರಾಜ್ಯೋತ್ಸವ ಆಚರಣೆಯನ್ನು ಮಾಡೋಣ ಎಂದು ಸಂತಸ ವ್ಯಕ್ತಪಡಿಸಿದರು . ಆಸ್ಟ್ರೇಲಿಯಾದಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ಕುಮಾರ ಅಭಯ್ ಅದ್ಭುತವಾಗಿ ಕನ್ನಡ ಗೀತೆಯನ್ನು ಹಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕುಮಾರಿ ಧನ್ಯತಾ ಕನ್ನಡ ಗೀತೆಯನ್ನು ಸೊಗಸಾಗಿ ಹಾಡಿದಳು. ಇನ್ನುಳಿದಂತೆ ತಂಡೋಪ ತಂಡವಾಗಿ ಪುರುಷರು ಮಹಿಳೆಯರು ಎಲ್ಲರೂ ಒಟ್ಟಾಗಿ ಕನ್ನಡ ಗೀತೆಗಳನ್ನು ಹಾಡುವ ಮೂಲಕ ಸಂಭ್ರಮಿಸಿದರು. ಶ್ರೀಮತಿ ವಿನಂತಿ ಪ್ರಾರ್ಥಿಸಿದರು. ಶ್ರೀಮತಿ ಶೀಲಾ ಸುರೇಶ್ ಪ್ರಸ್ತಾವಿಕ ನುಡಿಯನ್ನು ಆಡಿದರು. ಶ್ರೀಮತಿ ವೀಣಾ. ಎಸ್. ಕುಮಾರ್ ಸುಂದರವಾಗಿ ಕಾರ್ಯಕ್ರಮವನ್ನು ನಿರೂಪಿಸಿದರು.

Rahim Khan ಪೌರಾಡಳಿತ & ಹಜ್ ಸಚಿವರಾದ ರಹೀಂಖಾನ್ ಅವರ ಜಿಲ್ಲಾ ಪ್ರವಾಸ ಮಾಹಿತಿ

0

Rahim Khan ರಾಜ್ಯ ಸರ್ಕಾರದ ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಂ ಖಾನ್‌ರವರು ನ.22 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಅವರು ಅಂದು ಮಧ್ಯಾಹ್ನ 1.55ಕ್ಕೆ ವಿಮಾನದ ಮೂಲಕ ಆಗಮಿಸಿ ಶಿವಮೊಗ್ಗ ಜಿಲ್ಲಾ ಪ್ರವಾಸಿ ಮಂದಿರದಲ್ಲಿ ತಂಗಲಿದ್ದಾರೆ. ಮ 3.00ಕ್ಕೆ ಶಿವಮೊಗ್ಗ ಜಿಲ್ಲಾ ಇಂದಿರಾ ಕ್ಯಾಂಟೀನ್/ಘನತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭೇಟಿ ನೀಡುವರು. ಮ. 3.30ಕ್ಕೆ ಜಿಲ್ಲಾ ಆಡಳಿತ ಭವನದಲ್ಲಿ ನಡೆಯುವ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ 5.00ಕ್ಕೆ ಜಿಲ್ಲಾ ಕಾಂಗ್ರೇಸ್ ಕಚೇರಿಗೆ ಭೇಟಿ ನೀಡಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿ ಡಾ.ಕೆ. ಮುರಳಿಧರರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

MESCOM ನವೆಂಬರ್ 22 . ಎಂ.ಆರ್.ಎಸ್‌.ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

0

MESCOM ಶಿವಮೊಗ್ಗ ಎಂ.ಆರ್.ಎಸ್. ವಿದ್ಯುತ್ ಕೇಂದ್ರದಲ್ಲಿ ನ.22 ರಂದು ಬೆಳಗ್ಗೆ 9.00 ರಿಂದ ಸಂಜೆ 5.00ರವರೆಗೆ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಇರುವುದರಿಂದ ಈ ಮಾರ್ಗಗಳಿಂದ ವಿದ್ಯುತ್ ಸರಬರಾಜಾಗುವ ನಗರ ಪ್ರದೇಶಗಳಾದ ಚಿಕ್ಕಲ್ಲು, ಗುರುಪುರ, ಪುರಲೆ, ಸಿದ್ದೇಶ್ವರನಗರ, ಶಾಂತಮ್ಮ ಲೇಔಟ್, ವೆಂಕಟೇಶನಗರ, ವಿದ್ಯಾನಗರ, ಗಣಪತಿ ಲೇಔಟ್, ಕಂಟ್ರಿಕ್ಲಬ್‌ರಸ್ತೆ, ಎಂ.ಆರ್.ಎಸ್. ವಾಟರ್ ಸಪ್ಲೈ, ಎಂಆರ್‌ಎಸ್. ಕಾಲೋನಿ, ಹರಿಗೆ, ಮಲವಗೊಪ್ಪ, ವಡ್ಡಿನಕೊಪ್ಪ, ನಂಜಪ್ಪ ಲೇಔಟ್, ಪ್ರಿಯಾಂಕ ಲೇಔಟ್, ಬಿ.ಹೆಚ್.ರಸ್ತೆ (ಗಾಯತ್ರಿ ಕಲ್ಯಾಣ ಮಂದಿರದಿಂದ ಅಮೀರ್ ಅಹ್ಮದ್ ವೃತ್ತ), ನೆಹರು ರಸ್ತೆ, ದುರ್ಗಿಗುಡಿ ಮುಖ್ಯರಸ್ತೆ, ಪಾರ್ಕ್ ಬಡಾವಣೆ, ಸರ್.ಎಂ.ವಿ.ರಸ್ತೆ (ಮಹಾವೀರ್ ವೃತ್ತದಿಂದ ಗೋಪಿ ವೃತ್ತದವರೆಗೆ), ಗಾಂಧಿ ಪಾರ್ಕ್, ಲೂರ್ದೂನಗರ, ಕಾನ್ವೆಂಟ್ ರಸ್ತೆ, ಬಾಪೂಜಿನಗರ, ಚರ್ಚ್ ಕಾಂಪೌಂಡ್, ಟಿ.ಜಿ.ಎನ್.ಬಡಾವಣೆ, ಜೋಸೆಫ್ ನಗರ, ಟ್ಯಾಂಕ್‌ಬೌಂಡ್ ರಸ್ತೆ, ಕುವೆಂಪು ರಂಗಮಂದಿರ ಮತ್ತು ಮಹಾನಗರ ಪಾಲಿಕೆ ಸುತ್ತಮುತ್ತ, ಮೀನಾಕ್ಷಿಭವನ, ಶಂಕರಮಠರಸ್ತೆ,ಹಳೆ ಹೊನ್ನಾಳಿ ರಸ್ತೆ, ಬಾಲ್‌ರಾಜ್ ಅರಸ್‌ರಸ್ತೆ, ಮೆಹದಿನಗರ, ಬಾಪೂಜಿನಗರ, ಬಸವನಗುಡಿ ವಿನಾಯಕ ಪಾರ್ಕ್, ವಿನಾಯಕನಗರ, ಅಮೀರ್ ಅಹ್ಮದ್ ಕಾಲೋನಿ, ಸೋಮಯ್ಯ ಬಡಾವಣೆ, ಟ್ಯಾಂಕ್ ಬಂಡ್‌ರಸ್ತೆ, ಟ್ಯಾಂಕ್‌ಮೊಹಲ್ಲಾ, ಕೋರ್ಟ್ ಕಚೇರಿ, ಆರ್.ಟಿ.ಓ. ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕ ಸಹಕರಿಸುವಂತೆ ಮೆಸ್ಕಾಂ ಇಲಾಖೆ ತಿಳಿಸಿದೆ.

Department of Agriculture ಡಿಸೆಂಬರ್ 6. ಸಿರಿಧಾನ್ಯ& ಸಾವಯವ ಮೇಳ-_ 24 ಅಂಗವಾಗಿ ಸಿರಿಧಾನ್ಯ ಬಳಸಿ ತಿನಿಸು ತಯಾರಿ ಸ್ಪರ್ಧೆ

0

Department of Agriculture ಅಂತರಾಷ್ಟ್ರೀಯ ಮಟ್ಟದ ಸಿರಿಧಾನ್ಯ ಮತ್ತು ಸಾವಯವ ಮೇಳ-2025 ರ ಅಂಗವಾಗಿ ಕೃಷಿ ಇಲಾಖೆಯಿಂದ ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಸ್ಪರ್ಧೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಪ್ರತಿ ಸ್ಪರ್ಧಿಗೆ ಒಂದೇ ತಿನಿಸು ಸಿಹಿ ಅಥವಾ ಖಾರ (ಸಸ್ಯಹಾರ ತಿನಿಸುಗಳು ಮಾತ್ರ) ತಯಾರಿಸುವ ಅವಕಾಶವಿರುತ್ತದೆ.

ತಮ್ಮ ಅರ್ಜಿಯಲ್ಲಿ ನಮೂದಿಸಿದ ತಿನಿಸುಗಳನ್ನು ಮನೆಯಲ್ಲಿಯೇ ತಯಾರಿಸಿ, ಡಿ.6 ರಂದು ಶಿವಮೊಗ್ಗ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಬೆಳಗ್ಗೆ 9.30ಕ್ಕೆ ಪ್ರದರ್ಶಿಸುವುದು. ತಯಾರಿಸಿದ ತಿನಿಸುಗಳ ಪ್ರದರ್ಶನ, ಬಳಸಿದ ಸಾಮಗ್ರಿಗಳು, ತೋರಿಕೆ, ರುಚಿ, ಸುವಾಸನೆ, ಪೌಷ್ಠಿಕತೆಗಳ ಮೇಲೆ ಅಂತಿಮ ತೀರ್ಪು ಕೈಗೊಳ್ಳಲಾಗುವುದು. 2023-24ನೇ ಸಾಲಿನಲ್ಲಿ ಜಿಲ್ಲಾ ಮಟ್ಟದ ಸ್ಪರ್ದೆಯಲ್ಲಿ ವಿಜೇತರಾದವರು ಈ ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ.

ಸಸ್ಯಹಾರಿಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದು, ತೀರ್ಪುಗಾರರ ನಿರ್ಧಾರವೇ ಅಂತಿಮವಾಗಿರುತ್ತದೆ. ಜಿಲ್ಲಾ ಮಟ್ಟಕ್ಕೆ ಪ್ರಥಮ, ದ್ವಿತೀಯ, ಮತ್ತು ತೃತೀಯ ಬಹುಮಾನವಾಗಿ ಖಾರ ಅಥವಾ ಸಿಹಿ ತಿನಿಸಿಗೆ ತಲಾ ರೂ.5000/-, 3000/- ಹಾಗೂ 2000/- ಬಹುಮಾನವಿರುತ್ತದೆ.
ಈ ಸ್ಪರ್ಧೆಯಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು/ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳನ್ನು ಹೊರತುಪಡಿಸಿ, ಜಿಲ್ಲೆಯ ಎಲ್ಲಾ ಸಾರ್ವಜನಿಕರಿಗೆ ಭಾಗವಹಿಸಲು ಅವಕಾಶವಿರುತ್ತದೆ.

Department of Agriculture ಅಭ್ಯರ್ಥಿಗಳು ತಮ್ಮ ತಮ್ಮ ಭಾವ ಚಿತ್ರದೊಂದಿಗೆ ಹೆಸರು, ವಿಳಾಸ ಮತ್ತು ತಯಾರಿಸುವ ಖಾದ್ಯ, ಬೇಕಾಗುವ ಸಾಮಗ್ರಿಗಳು, ತಯಾರಿಸಲು ಬೇಕಾಗುವ ಸಮಯ ಹಾಗೂ ತಯಾರಿಸುವ ವಿಧಾನದ ಸಂಕ್ಷಿಪ್ತ ಮಾಹಿತಿಯೊಂದಿಗೆ ಅರ್ಜಿಯನ್ನು ಡಿ.4 ರೊಳಗೆ ಇ-ಮೇಲ್ ವಿಳಾಸ dagrshi@rediffmail.com ಅಥವಾ ಖುದ್ದಾಗಿ/ಪೋಸ್ಟ್ ಮುಖಾಂತರ ಶಿವಮೊಗ್ಗ ಜಂಟಿ ನಿರ್ದೇಶಕರ ಕಚೇರಿ, ಹಳೇ ತೀರ್ಥಹಳ್ಳಿ ರಸ್ತೆ, ಶಿವಮೊಗ್ಗ ವಿಳಾಸಕ್ಕೆ ಕಳುಹಿಸುವಂತೆ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಜಿಲ್ಲಾ ಮಟ್ಟದಲ್ಲಿ ಪ್ರಥಮ ಬಹುಮಾನ ಪಡೆದವರು ಬೆಂಗಳೂರಿನಲ್ಲಿ ಏರ್ಪಡಿಸುವ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. ಖಾದ್ಯವನ್ನು ತಯಾರಿಸಲು ಬೇಕಾಗುವ ಸಾಮಗ್ರಿಗಳನ್ನು ತಾವೇ ತೆಗೆದುಕೊಂಡು, ನಿಗದಿತ ಸ್ಥಳ ಹಾಗೂ ಸಮಯದಲ್ಲಿ ಖುದ್ದಾಗಿ ಖಾದ್ಯವನ್ನು ಅಲ್ಲಿಯೇ ತಯಾರಿಸಲು ಸಿದ್ಧರಾಗಿರಬೇಕು.
ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ಜಂಟಿ ಕೃಷಿ ನಿರ್ದೇಶಕರ ಕಚೇರಿ, ದೂ.ಸಂ.: 08182-222635 ನ್ನು ಸಂಪರ್ಕಿಸಬಹುದು.

CM Siddharamaiah ಸರ್ಕಾರಿ ನೌಕರರು & ಆದಾಯ ತೆರಿಗೆ ಪಾವತಿಸುವವರಿಗೆ ಮಾತ್ರ ಬಿಪಿಎಲ್ ಕಾರ್ಡ್ ರದ್ದತಿ ಅನ್ವಯ- ಸಿಎಂ ಸಿದ್ದರಾಮಯ್ಯ

0

CM Siddharamaiah ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿಸುವವರನ್ನು ಹೊರತುಪಡಿಸಿ ಉಳಿದಂತೆ ಯಾರೊಬ್ಬರ ಪಡಿತರ ಚೀಟಿ ರದ್ದು ಮಾಡಬಾರದು ಎಂದು ಆಹಾರ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸದ್ಯ ಬಿಪಿಎಲ್ ಕಾರ್ಡ್ ರದ್ದತಿ ಬಗ್ಗೆ ಎದ್ದಿರುವ ವಿವಾದದ ಬಗ್ಗೆ ಮುಖ್ಯಮಂತ್ರಿಗಳು ಸ್ಪಷ್ಟೀಕರಣ ನೀಡಿದ್ದಾರೆ.

ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿದಾರರನ್ನು ಹೊರತುಪಡಿಸಿದಂತೆ ಉಳಿದ ಯಾವುದೇ ಕುಟುಂಬದವರ ಪಡಿತರ ಚೀಟಿ ರದ್ದಾಗಿದ್ದರೆ ತಕ್ಷಣ ವಾಪಸ್ ನೀಡಬೇಕು.

CM Siddharamaiah ಬಡ ಕುಟುಂಬದವರ ಪಡಿತರ ಚೀಟಿಗಳನ್ನು ವಿನಾಕಾರಣ ರದ್ದು ಮಾಡಿದರೆ ಆಹಾರ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದುಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.

School Education ಶಾಲಾ ಶಿಕ್ಷಣ ಸಚಿವರು ವಿದ್ಯಾರ್ಥಿಯ ಮಾತಿಗೆ ಕೆಂಡಾಮಂಡಲ!

School Education ನಮ್ಮ ರಾಜ್ಯದ ಶಾಲಾ ಶಿಕ್ಷಣ ಮಂತ್ರಿಗಳಿಗೇ ವಿದ್ಯಾರ್ಥಿಯೊಬ್ಬ “ವಿದ್ಯಾಮಂತ್ರಿಗೆ ಕನ್ನಡ ಬರಲ್ಲ” ಎಂದು
ಆಕ್ಷೇಪಿಸಿದ ಘಟನೆ ನಡೆದಿದೆ.

ಬೆಂಗಳೂರಿನ ವಿಧಾನಸೌಧದಲ್ಲಿ ಇಲಾಖೆ ಏರ್ಪಡಿಸಿದ್ದ
” ವರ್ಚುಯಲ್ ಸಂವಾದ” ದಲ್ಲಿ ಶಾಲಾಶಿಕ್ಷಣ ಸಚಿವ ಮಧು ಬಂಗಾರಪ್ಪ ಪಾಲ್ಗೊಂಡು ಮಾತನಾಡುತ್ತಿದ್ದಾಗ ಈ ಪ್ರಸಂಗ ನಡೆದಿದೆ.
ಸರ್ಕಾರಿ ಪಿಯು ಕಾಲೇಜುಗಳ ವಿದ್ಯಾರ್ಥಿಗಳಿಗೆ ನೀಟ್,ಜೆಇಇ,ಸಿಇಟಿ ಪರೀಕ್ಷೆಗಳಿಗೆ ಆನ್ ಲೈನ್ ಮೂಲಕ ಕೋಚಿಂಗ್ ನೀಡುವ
ತರಗತಿಗಳಿಗೆ ಸಚಿವರು ಚಾಲನೆ ನೀಡುವ ವೇಳೆ ಹೀಗೆ
ಸರಕ್ಕನೆ ವಿದ್ಯಾರ್ಥಿಯೊಬ್ಬ ಹೇಳಿದ್ದಾನೆ. ಇದು ವಿಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹರಿದು ಹಳೆಯದಾಗಿದೆ.
ಆದರೂ ಸಚಿವರು ಕನ್ನಡ ಓದಲು ಸಾಕಷ್ಟು ಕಸರತ್ತು ಮಾಡುವ ಬಗ್ಗೆಯೂ ವಿಡಿಯೋಗಳು ಈಗಾಗಲೇ ಹರಿದಾಡಿವೆ. ಸಿದ್ದಪಡಿಸಿದ ಭಾಷಣ ಓದುವಾಗಲೂ ಸಚಿವರು ಪ್ರಯಾಸದಿಂದ ತಪ್ಪು ಉಚ್ಚಾರಣೆ ಮಾಡುವುದನ್ನ ಬಹಳಷ್ಟು ಮಂದಿ ಪರಿಣಿತರೂ ಗಮನಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಂದ ಟೀಕೆ ಬಂದಾಗ ಸಚಿವರು ತೆರೆದ ಮನಸ್ಸಿನಿಂದ ತಮ್ಮ ತಪ್ಪನ್ನ ಒಪ್ಪಿಕೊಂಡಿದ್ದಾರೆ.
ಆದರೆ ಅವರು ಮುಂಬರುವ ದಿನಗಳಲ್ಲಿ ಸುಧಾರಿಸಿಕೊಳ್ಳುವ ಬಗ್ಗೆ ಜನತೆಗೆ ಅರಿವಾದರೆ ಈ ರೀತಿಯ ಮುಜುಗರ ಸನ್ನಿವೇಶಗಳನ್ನ ತಪ್ಪಿಸಬಹುದು.
ಸಂವಾದದಲ್ಲಿ ಮೊದಲಿಗೆ ಲಘುಧಾಟಿಯಲ್ಲಿ ವಿದ್ಯಾರ್ಥಿಯ ಪ್ರತಿಕ್ರಿಯೆ ಸ್ವೀಕರಿಸಿ ಸಚಿವರು ಹಾಗೇ ಸುಮ್ಮನಿರಬೇಕಿತ್ತು.

ಆದರೆ ” ಸ್ಟುಪಿಡ್” ಎಂದು ಉದ್ಗರಿಸಿದ್ದಾರೆ. ಯಾರಿಗೆ ಹೇಳಿದರು ಗೊತ್ತಿಲ್ಲ. ” ಮೀಡಿಯಾದವರು ಇದನ್ನೇ ಇಟ್ಟುಕೊಂಡು ಹೊಡೀತಾರೆ” ಎಂದೂ ಪ್ರತಿಕ್ರಿಯಿಸಿದರು.
” ಇಂತಹ ನಡವಳಿಕೆ ಸರಿಯಲ್ಲ.ಇದು ಮೂರ್ಖತನ. ನಾಚಿಕೆಯಾಗಬೇಕು.
ಇಂಥದ್ದನ್ನ ಸಹಿಸಿಕೊಳ್ಳಲಾಗಲ್ಲ.
ಯಾರು ಈ ರೀತಿ ಹೇಳಿದ್ದು,ರೆಕಾರ್ಡ್ ತೆಗೆದು ಪತ್ತೆಹಚ್ಚಿ ಗಂಭೀರವಾಗಿ ಪರಿಗಣಿಸಿ.ಸಂಬಂಧಪಟ್ಟ ಬಿಇಓ, ಶಾಲಾಮುಖ್ಯಶಿಕ್ಷಕರು ಯಾರೆಂದು ಪತ್ತೆಮಾಡಿ ಹೇಳಲು ಸೂಚನೆ ನೀಡಿ ಕೈಗೊಳ್ಳಿ” ಎಂದು ಇಲಾಖೆ ಚೀಫ್ ಸೆಕ್ರೆಟರಿ ರಿತೇಶ್ ಕುಮಾರ್ ಸಿಂಗ್ ಮತ್ತು ಪಿಯು ಮಂಡಳಿ ನಿರ್ದೇಶಕಿ ಸಿಂಧು ರೂಪೇಶ್ ಅವರಿಗೆ ಫಟ್ಟನೆ ತಿಳಿಸಿದ್ದಾರೆ.

School Education ಇಲ್ಲಿ ವಿದ್ಯಾರ್ಥಿಯ ಬಗ್ಗೆ ಆತ ಹೇಳಿದ್ದು ಔಚಿತ್ಯಪೂರ್ಣವಿರಲಿಲ್ಲ. ಕಾರ್ಯಕ್ರಮದ ಧ್ಯೇಯವೇ ಬೇರೆ, ವಿದ್ಯಾರ್ಥಿ ಮಾತಾಡಿದ್ದೇ ಬೇರೆ.
ಈ ದೃಷ್ಟಿಯಿಂದ ಅದು ವಿದ್ಯಾರ್ಥಿಯ ಅನುಚಿತ ವರ್ತನೆ ಒಪ್ಪೋಣ. ಆದರೆ ವಾಸ್ತವಾಂಶದಲ್ಲಿ ಸಚಿವರ ‌ಕನ್ನಡ ವಾಚನ ಪ್ರಕ್ರಿಯೆ ಮಾತ್ರ ಸಮಾಧಾನಕರವಿಲ್ಲ ಎಂಬ ನಿಷ್ಠುರ ಸತ್ಯವನ್ನ ಮತ್ತೆ ಅವರು ಒಪ್ಪಿಕೊಳ್ಳಬೇಕು.
ಕನ್ನಡ ಓದುವುದನ್ನ ಆಭ್ಯಾಸಮಾಡಿದ್ದೇನೆ,ಮಾಡುತ್ತಿದ್ದೇನೆ ಎಂಬ ಅವರ ಸದ್ಯದ ಬೆಳವಣಿಗೆಯ ಬಗ್ಗೆಯಾದರೂ ತಿಳಿಸಬಹುದಿತ್ತು.
ವಿದ್ಯಾರ್ಥಿಯ ಬಗ್ಗೆ ಕ್ರಮ ಜರುಗಿಸುವಲ್ಲಿ
ಅವರ ಸೂಚನೆ ಪಾಲನೆಯಾಗುತ್ತದೆ.
ಆದರೆ ಮತ್ತೆ ಅವರ ಸಿದ್ಧಪಡಿಸಿದ ಭಾಷಣ ಕೇಳುವ “ನಮ್ಮ ಸಮಯ” ಬಂದಾಗ ಮತ್ತೆ ಸಚಿವರ ಕನ್ನಡ ಭಾಷಾ ಜ್ಞಾನವನ್ನ ಜನತಾ ಪಂಡಿತ ವಲಯವು ಒರೆಗಲ್ಲಿಗೆ ಹಚ್ಚಲಾಗುತ್ತದೆ ಎಂಬುದನ್ನ ಮರೆಯುವಂತಿಲ್ಲ.