Tuesday, March 24, 2026
Tuesday, March 24, 2026
Home Blog Page 488

S.N.Chennabasappa ಮೆಗಾನ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಸಿಬ್ಬಂದಿಗೆ ‘ಕ್ಲಾಸ್’ ತೆಗೆದುಕೊಂಡ ಶಾಸಕ “ಚೆನ್ನಿ

0

S.N.Chennabasappa ಶಿವಮೊಗ್ಗದ ಜಿಲ್ಲಾ ಆಸ್ಪತ್ರೆಗೆ (ಮೆಗ್ಗಾನ್ ಆಸ್ಪತ್ರೆ) ಶಿವಮೊಗ್ಗ ನಗರ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

S.N.Chennabasappa ಇದೇ ವೇಳೆ

  1. ಬಿಪಿಎಲ್ ಕಾರ್ಡುದಾರರಿಗೆ ಉಚಿತ ಚಿಕಿತ್ಸೆ ನೀಡಬೇಕಾಗಿರುವುದು ಆಸ್ಪತ್ರೆ ಕರ್ತವ್ಯವಾಗಿದ್ದು, ಆದರೆ ಹಣ ಪಡೆಯುತ್ತಿರುವ ಸಂಗತಿ ಗಮನಕ್ಕೆ ಬಂದಿದ್ದು, ಈ ಕುರಿತು ಹಣ ಪಡೆಯುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
  2. ಬಿಪಿಎಲ್ ಕಾರ್ಡುದಾರರಿಗೆ ಚಿಕಿತ್ಸೆ ನೀಡುವಲ್ಲಿ ಆಗುತ್ತಿರುವ ವಿಳಂಬ ಮತ್ತು ಸಮಸ್ಯೆಗಳ ಕುರಿತು ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಎಚ್ಚರಿಸಿದರು.
  3. ಆಸ್ಪತ್ರೆಯ ಕೌಂಟರ್ನಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ನಿರ್ದೇಶನ ನೀಡಿದರು.
  4. ಆಸ್ಪತ್ರೆಯ ಸ್ಕ್ಯಾನಿಂಗ್ ವಿಭಾಗದಲ್ಲಿ ಆಗುತ್ತಿರುವ ವಿಳಂಬದ ಕುರಿತು ನನ್ನ ಗಮನಕ್ಕೆ ಬಂದಿದ್ದು, ಈ ಸಂಬಂಧ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಕಟ್ಟುನಿಟ್ಟಾಗಿ ಸರಿಪಡಿಸುವಂತೆ ಆದೇಶಿಸಿದರು.
  5. ಆಸ್ಪತ್ರೆಯ ಮೆಡಿಕಲ್ ಸ್ಟೋರ್ ನಲ್ಲಿ ಹಲವಾರು ಔಷಧಿಗಳ ಅಲಭ್ಯತೆ ಬಗ್ಗೆ ಚರ್ಚಿಸಿ ರೋಗಿಗಳ ಅಹವಾಲುಗಳನ್ನು ಸ್ವೀಕರಿಸಿ, ಆಸ್ಪತ್ರೆಯ ಔಷಧಿ ಉಗ್ರಾಣವನ್ನು ಪರಿಶೀಲನೆ ನಡೆಸಿದರು.
  6. ಆಸ್ಪತ್ರೆಯಲ್ಲಿ ಇರುವಂತಹ ಸಮಸ್ಯೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.
  7. ಆಸ್ಪತ್ರೆಯಲ್ಲಿನ ಸ್ವಚ್ಚತೆ ಕುರಿತು ಪರಿಶೀಲನೆ ನಡೆಸಿದರು.
  8. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರ ಆರೋಗ್ಯ ವಿಚಾರಿಸಿ ಸಾರ್ವಜನಿಕರೊಂದಿಗೆ ಮಾತುಕತೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದರು.

National Youth Training Centre ರಾಜ್ಯ ಮಟ್ಟದ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಶಿವಮೊಗ್ಗದ ಸೈಯದ್ ಕಲೀಮುಲ್ಲಾಗೆ ದ್ವಿತೀಯ ಸ್ಥಾನ

0

National Youth Training Centre ನವೆಂಬರ್ 21ರಂದು ಬೆಂಗಳೂರಿನ ವಿದ್ಯಾನಗರದ ಜಯಪ್ರಕಾಶ್ ನಾರಾಯಣ ನ್ಯಾಷನಲ್ ಯೂತ್ ಟ್ರೈನಿಂಗ್ ಸೆಂಟರ್ ನಲ್ಲಿ ಶಾಲಾ ಶಿಕ್ಷಣ ಇಲಾಖೆ ಬೆಂಗಳೂರು ನಗರ ಇವರು ಆಯೋಜಿಸಿದ 14/17 ವಯೋಮಿತಿಯೊಳಗಿನ ಬಾಲಕ ಬಾಲಕಿಯರ ರಾಜ್ಯಮಟ್ಟದ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಶಿವಮೊಗ್ಗ ಜಿಲ್ಲೆಯಿಂದ ಭಾಗವಹಿಸಿದ ಜಿ ಕೆ ಹೈಯರ್ ಪ್ರೈಮರಿ ಶಾಲೆಯ ಸೈಯದ್ ಕಲೀಮ್ ಮುಲ್ಲಾ 14 ವರ್ಷ ವಯೋಮಿತಿ ಒಳಗಿನ -32 ಕೆ.ಜಿ ವಿಭಾಗದಲ್ಲಿ ದ್ವಿತೀಯ ಸ್ಥಾನ
ಸ್ವಾಮಿ ವಿವೇಕಾನಂದ ಇಂಟರ್ನ್ಯಾಷನಲ್ ಶಾಲೆಯ
ಅರ್ಜುನ್ ಜಿ 14 ವರ್ಷ ವಯೋಮಿತಿ ಒಳಗಿನ – 46 ಕೆಜಿ ತೂಕದ ವಿಭಾಗದಲ್ಲಿ ತೃತೀಯ ಸ್ಥಾನ
ಮತ್ತು ಗುರುಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ
ಅಭಿಲಾಶ್ 14 ವರ್ಷ ವಯೋಮಿತಿ ಒಳಗಿನ -42 ಕೆಜಿ ತೂಕದ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದು
National Youth Training Centre ಇವರೊಂದಿಗೆ ಜಿಲ್ಲೆ ಇಂದ 17 ವರ್ಷ ವಯೋಮಿತಿ ಒಳಗಿನ ವಿಭಾಗದಲ್ಲಿ
ಭಾಗವಹಿಸಿದ ಡಿವಿಎಸ್ ಶಾಲೆಯ ಶ್ರೀನಿವಾಸ್ ಮತ್ತು ಸೆಕ್ರೆಡರ್ಟ್ ಶಾಲೆಯ ಆದರ್ಶ್ ಸಹ ಉತ್ತಮ ಪ್ರದರ್ಶನ ತೋರಿ ಜಿಲ್ಲೆಯನ್ನು ಪ್ರತಿನಿಧಿಸಿದ್ದು ವಿಜೇತ ಹಾಗೂ ಭಾಗವಹಿಸಿದ ಕ್ರೀಡಾಪಟುಗಳು ಜಿಲ್ಲೆಯ
ಬಾಕ್ಸಿಂಗ್ ಕೋಚ್ ಮೀನಾಕ್ಷಿ ರವರ ಬಳಿ ತರಬೇತಿ ಪಡೆಯುತ್ತಿದ್ದು
ಇವರಿಗೆ ಶಾಲಾ ಶಿಕ್ಷಣ ಇಲಾಖೆ ಶಿವಮೊಗ್ಗ ಜಿಲ್ಲೆ ಡಿಡಿಪಿಐ ಸೇರಿದಂತೆ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಶ್ರೀ ಪ್ರಕಾಶ್ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಶ್ರೀ ನಿರಂಜನ್ ಮೂರ್ತಿ ಮತ್ತು ಶಿವಮೊಗ್ಗ ಜಿಲ್ಲಾ ಅಮೆಚೂರು ಬಾಕ್ಸಿಂಗ್ ಅಸೋಸಿಯೇಷನ್ ಅಧ್ಯಕ್ಷ ಶಿವಮೊಗ್ಗ ವಿನೋದ್ ಅಭಿನಂದನೆ ಸಲ್ಲಿಸಿದ್ದಾರೆ

Shivaganga Yoga Centre ಯೋಗಾಭ್ಯಾಸದಿಂದ ಮನುಷ್ಯರಲ್ಲಿ ಧನಾತ್ಮಕ ಬದಲಾವಣೆ ಕಾಣಬಹುದು- ಸಿ.ವಿ.ರುದ್ರಾರಾಧ್ಯ

0

Shivaganga Yoga Centre ಬದುಕು ಸುಂದರಗೊಳಿಸಲು ಹಾಗೂ ಸದಾ ಲವಲವಿಕೆಯಿಂದ ಆರೋಗ್ಯದಿಂದ ಇರಲು ಯೋಗ, ಪ್ರಾಣಾಯಾಮ ಮತ್ತು ಧ್ಯಾನ ಅತ್ಯಂತ ಸಹಕಾರಿಯಾಗುತ್ತದೆ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಯೋಗಾಚಾರ್ಯ ಸಿ.ವಿ.ರುದ್ರಾರಾಧ್ಯ ಅಭಿಪ್ರಾಯಪಟ್ಟರು.
ಶಿವಗಂಗಾ ಯೋಗಕೇಂದ್ರದ ರಾಘವ ಶಾಖೆಯಲ್ಲಿ ಹಮ್ಮಿಕೊಂಡಿದ್ದ ವಿಶೇಷ ಯೋಗ, ಧ್ಯಾನ, ಪ್ರಾಣಾಯಾಮ ತರಬೇತಿ ಮತ್ತು ಮಾಹಿತಿ ಶಿಬಿರದಲ್ಲಿ ಮಾತನಾಡಿ, ಮನುಷ್ಯ ತನ್ನಲ್ಲಿನ ಅಸೂಯೆ, ಹೊಟ್ಟೆಕಿಚ್ಚು, ನಕರಾತ್ಮಕ ಭಾವನೆಗಳನ್ನು ತೊರೆಯಬೇಕು. ದುರಾಸೆ ಬಿಟ್ಟು ನೆಮ್ಮದಿ ಹಾಗೂ ಸಂತೋಷದ ಜೀವನ ರೂಢಿಸಿಕೊಳ್ಳಲು ಮುಂದಾಗಬೇಕು ಎಂದು ತಿಳಿಸಿದರು.
ಪ್ರತಿಯೊಬ್ಬರೂ ಯೋಗ ಅಭ್ಯಾಸ ಮಾಡುವುದು ಒಳ್ಳೆಯದು. ಯೋಗ, ಧ್ಯಾನ, ಪ್ರಾಣಾಯಾಮವನ್ನು ಅಭ್ಯಾಸ ಮಾಡುವುದರಿಂದ ದೇಹದ ಆರೋಗ್ಯ ಸದೃಢಗೊಳ್ಳುತ್ತದೆ. ಒತ್ತಡರಹಿತ ಜೀವನ ನಡೆಸಲು ಸಾಧ್ಯವಾಗುತ್ತದೆ. ಆಯುಷ್ಯ ವೃದ್ಧಿ ಜತೆಯಲ್ಲಿ ತೃಪ್ತಿಕರ ಬದುಕು ನಮ್ಮದಾಗುತ್ತದೆ ಎಂದರು.
Shivaganga Yoga Centre ಯೋಗದ ಅಭ್ಯಾಸದಿಂದ ಮನುಷ್ಯನದಲ್ಲಿ ಧನಾತ್ಮಕ ಬದಲಾವಣೆ ಕಾಣಬಹುದಾಗಿದೆ. ಜೀವನಶೈಲಿ ಉತ್ತಮಗೊಳ್ಳುವ ಮೂಲಕ ಉನ್ನತ ಸಾಧನೆ ಮಾಡಲು ಸಹಕಾರಿಯಾಗುತ್ತದೆ. ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಅನೇಕರು ಯೋಗ ಕಲಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಮನಶಾಂತಿ ಮತ್ತು ಏಕಾಗ್ರತೆ ವೃದ್ಧಿಸುವ ಯೋಗ ಕಾರ್ಯಕ್ರಮ, ಒತ್ತಡ ಆತಂಕ ನಿರ್ವಹಣೆ ಬಗ್ಗೆ ಎಸ್.ವ್ಯಾಸ ಅವರು ಯೋಗ ವಿಶ್ವವಿದ್ಯಾಲಯ ನಿರ್ಮಿತ ತರಬೇತಿಯನ್ನು ನೀಡಿದರು.
80ಕ್ಕೂ ಹೆಚ್ಚು ಯೋಗ ಪ್ರಶಿಕ್ಷಣಾರ್ಥಿಗಳು ಯೋಗ ಶಿಬಿರದಲ್ಲಿ ಪಾಲ್ಗೊಂಡಿದ್ದರು. ರಾಘವ ಶಾಖೆ ಯೋಗ ಶಿಕ್ಷಕರಾದ ಜಿ.ಎಸ್.ಓಂಕಾರ್, ವೈ.ಎಸ್.ವಿಜಯಕೃಷ್ಣ, ಎಚ್.ಕೆ.ಹರೀಶ್, ನರಸೋಜಿ ರಾವ್, ಜಿ.ವಿಜಯಕುಮಾರ್, ಸುಜಾತಾ ಮಧುಕೇಶ್ವರ, ಗಾಯತ್ರಿ ಅಶೋಕ್, ಮಹೇಶ್, ಎಸ್.ಟಿ.ಆನಂದ್, ಶಂಕರ್, ಶಶಿಧರ್, ಶಿವಕುಮಾರ್, ದೀಪಕ್, ಸುರೇಖಾ, ಅಜಯ್, ಅರುಣ್, ಸುಮಂತ್, ಸತೀಶ್ ಉಮೇಶ್ ಉಪಸ್ಥಿತರಿದ್ದರು.

Kateel Ashok Pai College ಕನ್ನಡ ಕೇವಲ ಭಾಷೆಯಲ್ಲ.ಅದು ಈ ನೆಲದ ಸಂಸ್ಕೃತಿ- ಡಾ.ಸೊನಲೆ ಶ್ರೀನಿವಾಸ್

0

Kateel Ashok Pai College 2024ರ ನವೆಂಬರ್ 21ರಂದು ಶಿವಮೊಗ್ಗದ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಹೊಸನಗರದ ಕುವೆಂಪು ವಿದ್ಯಾಲಯದ ಸಂಸ್ಥಾಪಕರೂ,ನಗರದ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಆದ ಡಾಕ್ಟರ್ ಸೊನಲೆ ಶ್ರೀನಿವಾಸ್ ರವರು ಕನ್ನಡ ಭಾಷೆಯು ಅತ್ಯಂತ ಸಮೃದ್ಧ ಹಾಗೂ ಹಿರಿಯ ಲಿಪಿಯನ್ನು ಹೊಂದಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಅವರು ಕನ್ನಡ ಭಾಷೆ ಕೇವಲ ಭಾಷೆಯಲ್ಲ ಅದು ಈ ನೆಲದ ಸಂಸ್ಕೃತಿ ಎಂದು ತಿಳಿಸಿದರು .ಜ್ಞಾನಕ್ಕಾಗಿ ಬೇರೆಬೇರೆ ಭಾಷೆಗಳನ್ನು ಕಲಿಯುವುದು ಇಂದು ಅಗತ್ಯ ಮತ್ತು ಅನಿವಾರ್ಯ, ಆದರೆ ಕನ್ನಡವನ್ನು ಪ್ರೀತಿಸುವುದು ನಮ್ಮ ಹೃದಯ ಶ್ರೀಮಂತಿಕೆಯನ್ನು ಉಳಿಸಿಕೊಳ್ಳಲು ಅತಿ ಅಗತ್ಯ ಎಂದು ತಿಳಿಸಿದರು.

ನಮ್ಮ ಮಾತೃಭಾಷೆಯಲ್ಲಿ ನಾವು ಮಾತನಾಡಿದಾಗ ಕೇವಲ ವಿಷಯವನ್ನು ತಿಳಿಸುವುದಿಲ್ಲ .ಅದರೊಂದಿಗೆ ನಿಜವಾದ ಭಾವವನ್ನು ತಿಳಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಕನ್ನಡ ಬಹಳಷ್ಟು ಜ್ಞಾನಿಗಳು ಶ್ರೀಮಂತ ಗೊಳಿಸಿದ ಭಾಷೆ. ಕನ್ನಡಕ್ಕಾಗಿ ಪಂಪನಾದಿಯಾಗಿ ಕುವೆಂಪುರವರವರೆಗೂ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಪರಿಯನ್ನು, ಜವಾಬ್ದಾರಿಯನ್ನು ಸೊಗಸಾಗಿ ತಿಳಿಸಿರುವುದನ್ನು ಕಾಣಬಹುದಾಗಿದೆ. ಇಂದು ಯುವಜನರಾಗಿ ವಿದ್ಯಾರ್ಥಿಗಳು ಕನ್ನಡದಲ್ಲಿ ಓದುವುದನ್ನು, ಬರೆಯುವುದನ್ನು ,ಮಾತನಾಡುವುದನ್ನು ಪಾಲಿಸುವ ಅಗತ್ಯವನ್ನು ಅವರು ಹಲವಾರು ಉದಾಹರಣೆಗಳೊಂದಿಗೆ ವಿವರಿಸಿದರು.

Kateel Ashok Pai College ಈ ಕಾರ್ಯಕ್ರಮದಲ್ಲಿ ಡಾಕ್ಟರ್ ರಾಜೇಂದ್ರ ಚೆನ್ನಿ ಇವರನ್ನು ಇತ್ತೀಚೆಗೆ ಕನ್ನಡ ಭಾಷಾ ಭಾರತಿಯ ಗೌರವ ಶ್ರೀ ಪ್ರಶಸ್ತಿ ಪ್ರಕಟವಾಗಿರುವುದಕ್ಕಾಗಿ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಈ ಕಾರ್ಯಕ್ರಮವು ಬೆಳಗ್ಗೆ ಕನ್ನಡ ಧ್ವಜಾರೋಹಣದೊಂದಿಗೆ ಪ್ರಾರಂಭವಾಯಿತು. ವಿದ್ಯಾರ್ಥಿಗಳು ಕನ್ನಡ ನಾಡಗೀತೆ ಹಾಗೂ ರೈತ ಗೀತೆಯನ್ನು ಹಾಡಿ ಕಾರ್ಯಕ್ರಮವನ್ನು ಪ್ರಾರಂಭಿಸಿದರು.

ಕಾರ್ಯಕ್ರಮದಲ್ಲಿ ಡಾ. ರಾಜೇಂದ್ರ ಚೆನ್ನಿ ,ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಮೋಹನ್ ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಉಪನ್ಯಾಸಕರಾದ ಶ್ರೀಮತಿ ಕವಿತಾ ಸುಧೀಂದ್ರ ,ಡಾ. ಮಧು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ. ಸಂಧ್ಯಾ ಕಾವೇರಿ ವಹಿಸಿದ್ದರು. ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ವಿವಿಧ ಕನ್ನಡ ಗೀತೆಗಳು ಹಾಗೂ ನೃತ್ಯಗಳನ್ನು ಪ್ರದರ್ಶಿಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿನಿ ಸಂಧ್ಯಾ ನಡೆಸಿಕೊಟ್ಟರು. ಪ್ರಜ್ಞಾ ದೀಪ್ತಿ ಮತ್ತು ತಂಡದವರು ಪ್ರಾರ್ಥಿಸಿದರು.

ಕುಮಾರಿ ಸುಖಿತ ಸ್ವಾಗತಿಸಿ, ಶ್ರೀ ಅಜಯ್ ವಂದನೆಯನ್ನು ಸಲ್ಲಿಸಿದರು .ಮುಖ್ಯ ಅತಿಥಿಗಳ ಪರಿಚಯವನ್ನು ವಿದ್ಯಾರ್ಥಿನಿ ಸ್ಪೂರ್ತಿ ನಡೆಸಿಕೊಟ್ಟರು

CM Siddhramaiah ನಬಾರ್ಡ್ ಸಾಲ ಮಿತಿ ಹೆಚ್ಚಿಸಲು ಕೇಂದ್ರ ಅರ್ಥಸಚಿವರನ್ನ ಭೇಟಿ ಮಾಡಿದ ಸೀಎಂ ಸಿದ್ಧರಾಮಯ್ಯ

0

CM Siddhramaiah ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ‌ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ನಬಾರ್ಡ್‌ನ ಕೃಷಿ ಸಾಲವನ್ನು ಶೇ.58 ಕಡಿತ ಮಾಡಿರುವುದರಿಂದ ರಾಜ್ಯದ ರೈತರಿಗೆ ಬಹುದೊಡ್ಡ ಸಂಕಷ್ಟ ಎದುರಾಗಿದೆ, ಹಾಗಾಗಿ ಈ ಸಾಲದ ಮಿತಿಯನ್ನು ಹೆಚ್ಚಿಸಿ ರೈತರ ಹಿತಕಾಯುವಂತೆ ಮನವಿ ಮಾಡಿದರು.

ಸಚಿವರಾದ ಬೈರತಿ ಸುರೇಶ್, ಚಲುವರಾಯಸ್ವಾಮಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

B.Y.Vijayendra ಆಹಾರ ಭದ್ರತಾ ಕಾಯ್ದೆಯಡಿ ರಾಜ್ಯಕ್ಕೆಕೇಂದ್ರದಿಂದ ಶೇ.92.50 ರಷ್ಟು ಸಹಾಯ- ಬಿ.ವೈ.ವಿಜಯೇಂದ್ರ

0

B.Y.Vijayendra ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಶೇ. 92.50 ರಷ್ಟು ಸಹಾಯ ನೀಡುತ್ತಿದೆ. ಶೇ. 7.5 ರಷ್ಟು ಮಾತ್ರ ರಾಜ್ಯ ಸರ್ಕಾರವು ಸಹಾಯ ನೀಡುತ್ತಿದೆ.

B.Y.Vijayendra ಪ್ರಸ್ತುತ ಯಾವ ಮಾನದಂಡದ ಮೇಲೆ ರಾಜ್ಯ ಸರ್ಕಾರವು ಬಡವರ ಬಿಪಿಎಲ್ ಕಾರ್ಡ್‌ಗಳನ್ನು ಕಿತ್ತು ಹಾಕುವ ಕೆಲಸ ಮಾಡುತ್ತಿದೆ? ಬಡವರ ಕಾರ್ಡ್‌ಗಳನ್ನು ರದ್ದು ಮಾಡಿದ ಆಧಾರ ಹಾಗೂ ಮಾನದಂಡಗಳೇನು? 11.5 ಲಕ್ಷ ಪಡಿತರದಾರರನ್ನು ಬಿಪಿಎಲ್ ಕಾರ್ಡ್‌ನಿಂದ ಕಡಿತ ಮಾಡುವ ಕೆಲಸ ಖಂಡಿತ ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ.

Kannada Sahitya Sammelana ೮೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಜನಪದ ಚೇತನ “ಗೊರುಚ” ಆಯ್ಕೆ

0

Kannada Sahitya Sammelana ಮಂಡ್ಯದಲ್ಲಿ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ, ಜಾನಪದ ವಿದ್ವಾಂಸ, ಗೊ.ರು.ಚೆನ್ನಬಸಪ್ಪ ಆಯ್ಕೆಯಾಗಿದ್ದಾರೆ.

ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಭವನದಲ್ಲಿ ರಾಜ್ಯಾಧ್ಯಕ್ಷ ಡಾ. ಮಹೇಶ್‌ ಜೋಶಿ ಅಧ್ಯಕ್ಷತೆಯಲ್ಲಿ ನವೆಂಬರ್‌ 20ರಂದು ಬುಧವಾರ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗೊ ರು ಚನ್ನಬಸಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.

ಗೊರುಚ ಅವರ ಪತ್ನಿ ಮಲ್ಲಮ್ಮ ಗಿರಿಯಾಪುರದವರು.

Kannada Sahitya Sammelana ಗೊರುಚ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದದ್ದು ಕಡೂರು ತಾಲ್ಲೂಕಿನ ಹಡಗಲು ಮತ್ತು ಬೀರೂರಿನಲ್ಲಿ. ಪತ್ನಿ ಮಲ್ಲಮ್ಮ ಅವರ ಊರು ಗಿರಿಯಾಪುರ ಗೊರುಚ ಪಾಲಿಗೆ ತವರೂರಿನಂತೆಯೇ ಆಯಿತು. ಗಿರಿಯಾಪುರದ ಶಿವಾದ್ವೈತ ಪ್ರಸಾರ ಕೇಂದ್ರ ಪ್ರತಿವರ್ಷ ನಡೆಸುವ ಶಿವಾನುಭವ ಗೋಷ್ಠಿಯ ಮುಖ್ಯ ಪ್ರವರ್ತಕರು ಗೊರುಚ. 96ವರ್ಷ ವಯಸ್ಸಿನ ಇವರು, ಕಳೆದ ಏಳು ದಶಕಗಳಿಂದ ಕೇಂದ್ರದಲ್ಲಿ ಸಕ್ರಿಯರಾಗಿದ್ದಾರೆ.

CM Siddhramaiah ನವದೆಹಲಿ ಮಾರುಕಟ್ಟೆ ಪ್ರವೇಶಿಸಿದ ರಾಜ್ಯದ ನಂದಿನಿ ಬ್ರಾಂಡ್. ಗ್ರಾಹಕರಿಂದ ಉತ್ತಮ ಸ್ಪಂದನೆ- ಸಿದ್ಧರಾಮಯ್ಯ

0

CM Siddhramaiah ದೇಶದ ಹಾಲು ಉತ್ಪಾದನೆಯಲ್ಲಿ ಗುಜರಾತ್ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ.

ದೆಹಲಿ ನಗರದಲ್ಲಿ ಕೆ.ಎಂ.ಎಫ್ ಮತ್ತು ಮಂಡ್ಯ ಹಾಲು ಒಕ್ಕೂಟಗಳು ಸೇರಿಕೊಂಡು ವಿವಿಧ ಶ್ರೇಣಿಯ ಹಾಲನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿವೆ. ದೆಹಲಿಯ ನಿವಾಸಿಗಳಿಂದ ನಂದಿನಿ ಉತ್ಪನ್ನಗಳಿಗೆ ಅತ್ಯುತ್ತಮ ಸ್ಪಂದನೆ ದೊರೆಯಲಿದೆ ಎಂಬ ವಿಶ್ವಾಸ ನನಗಿದೆ.

ಇಡೀ ದೇಶದಲ್ಲಿ ರೈತರ ಉಪಕಸುಬು ಪಶುಸಂಗೋಪನೆ. ಗುಜರಾತ್ ನಲ್ಲಿ ಕುರಿಯನ್ ಅವರು ಹಾಲು ಉತ್ಪಾದಕರ ಸಂಘವನ್ನು ಪ್ರಾರಂಭ ಮಾಡಿದರು. ಹಿಂದೆ ನಾನೂ ಕೂಡ ಪಶುಸಂಗೋಪನಾ ಸಚಿವನಾಗಿದ್ದೆ, ಒಂದು ವರ್ಷ ಕಾಲ ಕರ್ನಾಟಕ ಹಾಲು ಮಹಾಮಂಡಲದ ಅಧ್ಯಕ್ಷನೂ ಆಗಿದ್ದೆ. ಪಶುಸಂಗೋಪನಾ ಸಚಿವನಾಗಿದ್ದಾಗಲೇ ಹಾಲು ಉತ್ಪಾದಕರಿಗೆ ಶೋಷಣೆಯಾಗುತ್ತಿದ್ದುದ್ದನ್ನು ಮನಗಂಡು ಶಾಶ್ವತ ಮಾರುಕಟ್ಟೆ ಕಲ್ಪಿಸಲು ಹಾಲು ಉತ್ಪಾದಕರ ಸಂಘಗಳನ್ನು ರಚಿಸಿದ್ದೆ.

CM Siddhramaiah ರಾಜ್ಯದಲ್ಲಿ ಪ್ರತಿದಿನ 92 ರಿಂದ 93 ಲಕ್ಷ ಲೀ. ಹಾಲು ಉತ್ಪಾದನೆಯಾಗುತ್ತಿದೆ. ರೈತರಿಂದ ಲೀ. ಗೆ 32 ರೂ.ಗಳಿಗೆ ಹಾಲು ಖರೀದಿಸಲಾಗುತ್ತಿದ್ದು, ರಾಜ್ಯ ಸರ್ಕಾರ ಕ್ಷೀರಧಾರೆ ಯೋಜನೆಯಡಿ ಹಾಲು ಉತ್ಪಾದಕರಿಗೆ ಪ್ರತಿ ಲೀಟರಿಗೆ 5 ರೂ.ಗಳ ಪ್ರೋತ್ಸಾಹಧನವನ್ನು ನೀಡುತ್ತಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾಲದಲ್ಲಿ 2 ರೂ. ಇದ್ದ ಪ್ರೋತ್ಸಾಹಧನ, ನಂತರ 3 ರೂ. ಆಯಿತು. ನಾನು ಮುಖ್ಯಮಂತ್ರಿಯಾದ ನಂತರ ಇದನ್ನು 5 ರೂ.ಗಳಿಗೆ ಹೆಚ್ಚಿಸಿದ್ದೆ. ಪ್ರೋತ್ಸಾಹಧನಕ್ಕಾಗಿ ಪ್ರತಿ ದಿನ 5 ಕೋಟಿ ರೂ.ಗಳನ್ನು ಸರ್ಕಾರ ವೆಚ್ಚ ಮಾಡುತ್ತಿದೆ.

ರಾಜ್ಯದಲ್ಲಿ ಒಟ್ಟು 16 ಮಿಲ್ಕ್ ಯೂನಿಯನ್‌ಗಳಿವೆ. ರಾಜ್ಯದಲ್ಲಿ ಅಂದಾಜು 1 ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಆಂಧ್ರಪ್ರದೇಶ, ಮಹಾರಾಷ್ಟ್ರಕ್ಕೆ ನಿತ್ಯ ತಲಾ 2.5 ಲಕ್ಷ ಲೀ.ಟರ್ ಹಾಲು ಪೂರೈಕೆಯಾಗುತ್ತಿದೆ. ಇದೀಗ ಆರಂಭಿಕ ಹಂತದಲ್ಲಿ 2.5 ಲಕ್ಷ ಲೀಟರ್ ಹಾಲು ನವದೆಹಲಿಗೆ ಪೂರೈಸುವ ಯೋಜನೆ ರೂಪಿಸಲಾಗಿದೆ. ಇನ್ನು ಆರು ತಿಂಗಳೊಳಗೆ 5 ಲಕ್ಷ ಲೀಟರ್ ಗೆ ಏರಿಸುವ ಗುರಿ ನಮ್ಮದಾಗಿದೆ.

-ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಂದು ಆಯೋಜಿಸಿದ್ದ ನಂದಿನಿ ವಿವಿಧ ಶ್ರೇಣಿಯ ಹಾಲಿನ ಪ್ಯಾಕೆಟ್‌ಗಳ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾತನಾಡಿದರು.

Department of Cooperation ಹಿರಿಯ ಸಹಕಾರಿ ಧುರೀಣ ಕೊಪ್ಪದ ಎಸ್.ಎನ್.ವಿಶ್ವನಾಥ್ ಗೆ ‘ ಸಹಕಾರಿ ರತ್ನ’ ಪ್ರಶಸ್ತಿ.

0

Department of Cooperation ಕರ್ನಾಟಕ ಸರ್ಕಾರದ ಕರ್ನಾಟಕ ಸಹಕಾರ ಮಹಾಮಂಡಲ ದ 2024 ರ ಸಾಲಿನ ರಾಜ್ಯ ಮಟ್ಟದ ಪ್ರತಿಷ್ಠಿತ “ಸಹಕಾರ ರತ್ನ ” ಪ್ರಶಸ್ತಿ ಗೆ ಕೊಪ್ಪ, ಶೃಂಗೇರಿ ಯ ಹಿರಿಯ ಸಹಕಾರಿ ಎಸ್ ಎನ್ ವಿಶ್ವನಾಥ್ ಮೊದಲಮನೆ ಇವರು ಆಯ್ಕೆಯಾಗಿದ್ದಾರೆ.

ಇತ್ತೀಚಿಗೆ ಬಾಗಲಕೋಟೆ ಯಲ್ಲಿ ಆಯೋಜಿತವಾಗಿದ್ದ ಕಾರ್ಯಕ್ರಮ ದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಇವರಿಂದ ವಿಶ್ವನಾಥ್ ಈ ಪ್ರಶಸ್ತಿ ಸ್ವೀಕರಿಸಿದರು.

ಪ್ರಸ್ತುತ ಹಿಮಗಿರಿ ಸೌಹಾರ್ದ ಸಹಕಾರ ಸಂಫದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ವಿಶ್ವನಾಥ್ 30 ವರ್ಷಗಳಿಂದ ಸಹಕಾರಿ ರಂಗದಲ್ಲಿ ಇದ್ದಾರೆ. ಕರಿಮನೆ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷರಾಗಿ, ಗಾಯಿತ್ರಿ ಸೌಹಾರ್ದ ದ ಸ್ಥಾಪಕ ಅಧ್ಯಕ್ಷರಾಗಿ , ರಾಜ್ಯ ಭೂ ಬ್ಯಾಂಕ್ ನ ಕಾಮನ್ ಕೆಡರ್ ಸಮಿತಿ ಸದಸ್ಯರಾಗಿ, 10 ವರ್ಷ ರಾಜ್ಯ ಸೌಹಾರ್ದ ಸಹಕಾರಿ ನಿಯಮಿತ ದ ಸದಸ್ಯರಾಗಿ ಈ ಕ್ಷೇತ್ರ ಕ್ಕೆ ಅನನ್ಯ ಸೇವೆ ಸಲ್ಲಿಸಿದ್ದಾರೆ.

Department of Cooperation ಸಂಸ್ಥೆ ಗಳನ್ನು ಬೆಳೆಸುವಲ್ಲಿ ವಿಶ್ವನಾಥ್ ಸದಾ ಹಿರಿದಾದ ಪಾತ್ರ ನಿರ್ವಹಿಸುತ್ತಾರೆ.

ಸಾಹಿತ್ಯ ಪರಿಷತ್ ನ ಕಾರ್ಯದರ್ಶಿ, ಶ್ರೀ ಭಾರತೀ ತೀರ್ಥ ಕಲ್ಚರಲ್ ಟ್ರಸ್ಟ್ ನ ವಿಶ್ವಸ್ತ ರಾಗಿಯೂ ಸೇವೆ ಸಲ್ಲಿಸಿರುವ ವಿಶ್ವನಾಥ್ ರಂಗಭೂಮಿ, ಕಿರುತೆರೆ ಮತ್ತು ಚಲನಚಿತ್ರ ನಟರಾಗಿಯೂ ವಿವಿಧ ಕ್ಷೇತ್ರ ದಲ್ಲಿ ತೊಡಗಿದ ಕ್ರಿಯಾಶೀಲರಾಗಿದ್ದಾರೆ.
ಜಲಪಾತ ಸಿನಿಮಾ ದಲ್ಲಿ ರೈತ ರಾಮಣ್ಣ ನ ಪಾತ್ರದಲ್ಲಿ ಮನೋಜ್ಞ ಅಭಿನಯ ನೀಡಿದ್ದಾರೆ.

ಸರಳ ಸಜ್ಜನಿಕೆಯ ವ್ಯಕ್ತಿತ್ವ ದ ವಿಶ್ವನಾಥ್ ಅವರಿಗೆ ಈ ಸಂದರ್ಭದಲ್ಲಿ ಹಲವು ಸಂಫ ಸಂಸ್ಥೆ ಗಳೂ ಅಭಿನಂದನೆ ತಿಳಿಸಿವೆ.

NDRF Team ಭೂಕುಸಿತ ಕುರಿತ ಅಣಕು ಪ್ರದರ್ಶನ ಯಶಸ್ವಿ

0

NDRF Team ಎನ್‌ಡಿಆರ್‌ಎಫ್ ತಂಡವು ಕಳೆದ ಒಂದು ವಾರದಿಂದ ಶಿವಮೊಗ್ಗ ಜಿಲ್ಲೆಯಲ್ಲಿ ವಿಪತ್ತು ನಿರ್ವಹಣೆ ಕುರಿತು ಅರಿವು ಮೂಡಿಸುತ್ತಿದ್ದು ನ.19 ರಂದು ಹೊಸನಗರ ತಾಲ್ಲೂಕಿನಲ್ಲಿ ಭೂಕುಸಿತದ ಕುರಿತು ಅಣಕು ಪ್ರದರ್ಶನದ ಮೂಲಕ ಅರಿವು ಮೂಡಿಸಿತು.

ಈ ಕಾರ್ಯಕ್ರಮದಲ್ಲಿ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿಪತ್ತು ನಿರ್ವಹಣೆ ಅರಿವು ಕಾರ್ಯಕ್ರಮದ ಉಸ್ತವಾರಿಯನ್ನು ಶಾಂತಿಲಾಲ್ ಜಾಟಿಯಾ ಮತ್ತು ತಂಡ ನಿರ್ವಹಿಸುತ್ತಿದೆ.

NDRF Team ಶಾಂತಿಲಾಲ್ ಜಾಟಿಯಾ ಮತ್ತು ತಂಡ, ಹೊಸನಗರ ತಹಶೀಲ್ದಾರ್ ರಶ್ಮಿ, ವಿಪತ್ತು ನಿರ್ವಹಣಾ ತಜ್ಞ ಗೋಪಿನಾಥ ಹಾಗೂ ಶಾಲಾಡಳಿತ ಮಂಡಳಿಯವರು ಹಾಜರಿದ್ದರು.