Monday, March 23, 2026
Monday, March 23, 2026
Home Blog Page 476

National Adoption Month ದತ್ತು & ಪೋಷಕತ್ವ ಕಾರ್ಯಕ್ರಮ ಅನುಷ್ಠಾನ. ಜಿಲ್ಲೆಗೆ ಪ್ರಥಮ ಸ್ಥಾನ-ಆರ್.ಮಂಜುನಾಥ್

0

National Adoption Month ರಾಷ್ಟ್ರೀಯ ದತ್ತು ಮಾಸಾಚರಣೆ ಅಂಗವಾಗಿ ಜಿಲ್ಲೆಯಲ್ಲಿ ದತ್ತು ಕಾರ್ಯಕ್ರಮ ಮತ್ತು ಪೋಷಕತ್ವ ಕಾರ್ಯಕ್ರಮ ಕುರಿತು ಹಮ್ಮಿಕೊಳ್ಳಲಾಗಿದ್ದ ವಿವಿಧ ವಿನೂತನ ಕಾರ್ಯಕ್ರಮಗಳನ್ನು ಹಾಗೂ ದತ್ತು ಮತ್ತು ಪೋಷಕತ್ವ ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಟಾನವನ್ನು ಪರಿಗಣಿಸಿ ಜಿಲ್ಲೆಗೆ ಪ್ರಥಮ ಸ್ಥಾನ ನೀಡಿ ಗೌರವಿಸಲಾಗಿದೆ.
ಭಾರತ ಸರ್ಕಾರ, ಕೇಂದ್ರೀಯ ದತ್ತು ಸಂಪನ್ಮೂಲ ಪ್ರಾಧಿಕಾರ, ಕರ್ನಾಟಕ ಸರ್ಕಾರ ಮತ್ತು ಮಕ್ಕಳ ರಕ್ಷಣಾ ನಿರ್ದೇಶನಾಲಯ, ಬೆಂಗಳೂರು ಇವರ ವತಿಂದ ಮಿಷನ್ ವಾತ್ಸಲ್ಯ ಯೋಜನೆ ಯ ದತ್ತು ಕಾರ್ಯಕ್ರಮ ಮತ್ತು ಪೋಷಕ್ವ ಯೋಜನೆಯ ಕುರಿತು ಸಾರ್ವಜನಿಕರಿಗೆ, ಇಲಾಖೆಯ ಅಧಿಕಾರಿಗಳಿಗೆ ಮತ್ತು ಸಂಘ ಸಂಸ್ಥೆಯ ಪದಾಧಿಕಾರಿಗಳಿಗೆ ಕಾನೂನು ಬದ್ದ ದತ್ತು ಮತ್ತು ಪೋಷಕತ್ವ ಯೋಜನೆಯ ಮೂಲಕ ದತ್ತು ಹೋಗುವಂತಹ ಮಗುವಿಗೆ ಶಾಶ್ವತ ಕುಟುಂಬದ ಅಗತ್ಯವಿರುವ ಮಕ್ಕಳಿಗೆ ಶಾಶ್ವತ, ಸ್ಥಿರ ಮತ್ತು ಕಾಳಜಿಯುಳ್ಳ ವಾತಾವರಣವನ್ನು ಅನುಕೂಲವಾಗುವಂತೆ ಪ್ರತಿ ವರ್ಷ ನವೆಂಬರ್ ಮಾಹೆಯಲ್ಲಿ ರಾಷ್ಟ್ರೀಯ ದತ್ತು ಮಾಸಾಚರನೆಯನ್ನು ಆಚರಿಸಲಾಗುತ್ತಿದೆ.
National Adoption Month ಅದರಂತೆ ನವೆಂಬರ್-2024 ನ್ನು ‘ಪೋಷಕತ್ವ ಕಾರ್ಯಕ್ರಮದಡಿ ಮಕ್ಕಳನ್ನು ದತ್ತು ತೆಗೆದುಕೊಳ್ಳುವುದನ್ನು ಉತ್ತೇಜಿಸಲು ಮೀಸಲಾದ ವಿಶೇಷ ದಿನವಾಗಿದೆ, ಸಂದರ್ಭವಾಗಿದೆ’ ಎಂಬ ಘೋಷವಾಕ್ಯದೊಂದಿಗೆ ಜಿಲ್ಲೆಯಲ್ಲಿ ರಾಷ್ಟ್ರೀಯ ದತ್ತು ಮಾಸಾಚರಣೆ ಅಂಗವಾಗಿ ದತ್ತು ಕಾರ್ಯಕ್ರಮ ಮತ್ತು ಪೋಷಕತ್ವ ಕಾರ್ಯಕ್ರಮದ ಕುರಿತು ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಜಾಥಾ ಕಾರ್ಯಕ್ರಮ, ಮೈಕ್ ಮೂಲಕ ಪ್ರಚಾರ, ಆಕಾಶವಾಣಿ ಕಾರ್ಯಕ್ರಮ, ಟಿವಿ ಸಂದರ್ಶನ, ದಿನಪತ್ರಿಕೆಗಳಲ್ಲಿ ಜಾಗೃತಿ ಲೇಖನಗಳು, ಅಧಿಕಾರಿ/ಸಿಬ್ಬಂದಿಗಳು ಹಾಗೂ ಸಾರ್ವಜನಿಕರಿಂದ ಸಂಕಲ್ಪ ಸಂದೇಶ, ಜೀವಸೆಲೆ ವಿಡಿಯೋ ವೀಕ್ಷಣೆ ಮತ್ತು ವಿವಿಧ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದನ್ನು ಪರಿಗಣಿಸಿ ಹಾಗೂ ದತ್ತು ಮತ್ತು ಪೋಷಕತ್ವ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಿರುವುದಕ್ಕಾಗಿ ರಾಜ್ಯ ಮಟ್ಟದಲ್ಲಿ ಜರುಗಿದ ರಾಷ್ಟ್ರೀಯ ದತ್ತು ಮಾಸಾಚರಣೆಯ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರ ಮತ್ತು ಮಕ್ಕಳ ರಕ್ಷಣಾ ನಿರ್ದೇಶನಾಲಯ, ಬೆಂಗಳೂರು ಇವರು ಶಿವಮೊಗ್ಗ ಜಿಲ್ಲೆಗೆ ಪ್ರಥಮ ಸ್ಥಾನ ನೀಡಿ ಗೌರವಿಸಿದೆ.
2023-24 ನೇ ಸಾಲಿನಲ್ಲಿಯೂ ಪ್ರಥಮ ಬಹುಮಾನವನ್ನು ಜಿಲ್ಲೆ ಪಡೆದಿತ್ತು ಎಂತು ಜಿಲ್ಲಾ ಮಕ್ಕಳ ರಕ್ಷಣಾದಿಕಾರಿ ಮಂಜುನಾಥ್ ಆರ್ ಇವರು ತಿಳಿಸಿದ್ದಾರೆ.

Chamber Of Commerce Shivamogga ತೆರಿಗೆ ವ್ಯವಸ್ಥೆಯಲ್ಲಿ ಸುಧಾರಣೆ.ವಾಣಿಜ್ಯ & ಕೈಗಾರಿಕಾ ಕ್ಷೇತ್ರದಲ್ಲಿ ಬೆಳವಣಿಗೆ- ಬಿ.ಗೋಪಿನಾಥ್

0

Chamber Of Commerce Shivamogga ಸರಕು ಮತ್ತು ಸೇವಾ ತೆರಿಗೆ ಮಂಡಳಿಯು ಈವರೆಗೂ ಆರೇಳು ವರ್ಷಗಳಿಂದ ಪರೋಕ್ಷ ತೆರಿಗೆ ವ್ಯವಸ್ಥೆಗೆ ಸಂಬಂಧಿಸಿ ಕೈಗೊಂಡಿರುವ ವ್ಯಾಪಕ ಸುಧಾರಣೆ ಕ್ರಮಗಳಿಂದ ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರದ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದರು.

ಶಿವಮೊಗ್ಗ ಜಿಲ್ಲಾ ಟ್ಯಾಕ್ಸ್ ಬಾರ್ ಅಸೋಸಿಯೇಷನ್ ಸಂಘದ ವತಿಯಿಂದ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಸರಕು ಮತ್ತು ಸೇವೆ ಕಾಯ್ದೆಗೆ ಆದ ಇತ್ತೀಚಿನ ತಿದ್ದುಪಡಿಗಳ ಬಗ್ಗೆ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯು ಯಶಸ್ವಿವಾಗಿ ಅನುಷ್ಠಾನಗೊಂಡು ತೆರಿಗೆ ಸಂಗ್ರಹಣೆಯಲ್ಲಿ ದಾಖಲೆಯಾಗಲು ತೆರಿಗೆ ಸಲಹೆಗಾರರು, ಸನ್ನದು ಲೆಕ್ಕ ಪರಿಶೋಧಕರ ಸಹಕಾರ ಮತ್ತು ಶ್ರಮವಿದೆ. ಎಲ್ಲರ ಪ್ರಯತ್ನದಿಂದ ವ್ಯವಸ್ಥೆ ಉತ್ತಮವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸರ್ಕಾರದ ಪಾರದರ್ಶಕ ಸುಧಾರಣ ಕ್ರಮಗಳಿಂದ ತೆರಿಗೆ ಸಂಗ್ರಹಣೆ ದೇಶಾದ್ಯಂತ ಹೆಚ್ಚಾಗಿದ್ದು, ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮ ಹಾಗೂ ಮೂಲಸೌಕರ್ಯದ ಅಭಿವೃದ್ಧಿಯಾಗಿದೆ. ಇಂತಹ ಸೆಮಿನಾರ್ ಕಾರ್ಯಕ್ರಮಗಳಿಗೆ ಮುಂದೆಯೂ ಸಹ ಜಿಲ್ಲಾ ಟ್ಯಾಕ್ಸ್ ಬಾರ್ ಅಸೋಸಿಯೇಷನ್ ಜತೆಗೆ ಸಂಘ ಕೈಜೋಡಿಸುತ್ತದೆ ಎಂದು ತಿಳಿಸಿದರು.

Chamber Of Commerce Shivamogga ಕರ್ನಾಟಕ ಆದಾಯ ತೆರಿಗೆಯಲ್ಲಿ ಮಾತ್ರವಲ್ಲ, ಜಿಎಸ್‌ಟಿ ಸಂಗ್ರಹದಲ್ಲೂ ಸಹ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಇದಕ್ಕೆ ಪ್ರಾಮಾಣಿಕ ತೆರಿಗೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಕಾರಣ ಎಂದರು.

ಎಸ್‌ಟಿಡಿಬಿಎ ಅಧ್ಯಕ್ಷ ವಿ.ಮಂಜುನಾಥ್ ಮಾತನಾಡಿ, ಉಪನ್ಯಾಸದ ಸದುಪಯೋಗವನ್ನು ಸಂಘದ ಸದಸ್ಯರು ಪಡೆದುಕೊಳ್ಳಬೇಕು ಎಂದು ಹೇಳಿದರು. ಸರಕು ಮತ್ತು ಸೇವೆ ಕಾಯ್ದೆಗೆ ಆದ ಇತ್ತೀಚಿನ ತಿದ್ದುಪಡಿಗಳ ಬಗ್ಗೆ ಸಿಎ ಜತಿನ್ ಕ್ರಿಷ್ಟೋಪರ್ ವಿವರ ಉಪನ್ಯಾಸ ನೀಡಿದರು. ಉಪನ್ಯಾಸದ ಕೊನೆಯಲ್ಲಿ ತೆರಿಗೆ ಸಲಹೆಗಾರರ ಎಲ್ಲ ಪ್ರಶ್ನೆಗಳಿಗೆ ಸಮರ್ಪಕವಾಗಿ ಮಾಹಿತಿ ನೀಡಿದರು.

ಶಿವಮೊಗ್ಗ ಜಿಲ್ಲಾ ಟ್ಯಾಕ್ಸ್ ಬಾರ್ ಅಸೋಸಿಯೇಷನ್ ತೆರಿಗೆ ಸಲಹೆ ಸಮಿತಿ ಅಧ್ಯಕ್ಷ ಎಸ್.ಬಿ.ಹನುಮಂತಪ್ಪ, ಉಪಾಧ್ಯಕ್ಷ ಅತ ಉರ್ ರೆಹಮಾನ್, ಕಾರ್ಯದರ್ಶಿ ಆರ್.ಮನೋಹರ, ಖಜಾಂಚಿ ಎಸ್.ಎಚ್..ಸುರೇಶ್, ಸಹ-ಕಾರ್ಯದರ್ಶಿ, ನಿರ್ದೇಶಕರು, ಸದಸ್ಯರು, ರಾಜ್ಯ ತೆರಿಗೆ ಸಲಹೆಗಾರ ಸಂಘದ ಮಲೆನಾಡು ವಲಯದ ಉಪಾಧ್ಯಕ್ಷ ಶಿವಕುಮಾರ್, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ್ ಕುಮಾರ್, ನಿರ್ದೇಶಕರು, ಸನ್ನದು ಲೆಕ್ಕ ಪರಿಶೋಧಕರು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಂದ ಆಗಮಿಸಿದ ತೆರಿಗೆ ಸಲಹೆಗಾರರು ಭಾಗವಹಿಸಿದ್ದರು.

S.N. Chennabasappa ಶಾಸಕ ಚೆನ್ನಿ ಅವರಿಂದ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ

0

S.N. Chennabasappa ಶಿವಮೊಗ್ಗ, ನಂ 1 ರ ಅಶ್ರಯ ಬಡಾವಣೆ ಹಾಗೂ ಜೆ.ಹೆಚ್ ಪಟೇಲ್ ಬಡವಣೆ ರವಿಶಂಕರ ಗುರುಜಿ ಶಾಲೆ ಹತ್ತಿರ ನೂತನ ರಸ್ತೆ ಕಾಮಾಗಾರಿಗೆ ಶಾಸಕ ಚೆನ್ನಬಸಪ್ಪರಿಂದ ( ಚೆನ್ನಿ) ಗುದ್ದಲಿ ಪೂಜೆ ಕಾರ್ಯಕ್ರಮವನ್ನು ನೆರವೇರಿಸಿದರು .
ಈ ಸಂಧರ್ಭದಲ್ಲಿ ಪಾಲಿಕೆ ಮಾಜಿ ಸದಸ್ಯ ಆಶಾ ಚಂದ್ರಪ್ಪ.ಮಾಜಿ ಸೂಡ ಅಧ್ಯಕ್ಷ ನಾಗರಾಜ್. ಮಾಜಿ ನಗರ ಸಭಾ ಅದ್ಯಕ್ಷರು ಜಗದೀಶ್ . ರೆಡ್ಡಿ ಸೇರಿದಂತೆ ಇತರರಿದ್ದರು.

CM Siddharamaiah ಬಳ್ಳಾರಿ ಆಸ್ಪತ್ರೆ ಪ್ರಕರಣ ಮೃತ ಬಾಣಂತಿಯರ ಕುಟುಂಬಗಳಿಗೆ ₹5 ಲಕ್ಷ ಪರಿಹಾರ- ಸಿದ್ಧರಾಮಯ್ಯ

0

CM Siddharamaiah ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿರುವ ಐವರು ಬಾಣಂತಿಯರ ಕುಟುಂಬಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ನವೆಂಬರ್ 7ರಿಂದ 11ರ ಅವಧಿಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಗರ್ಭಿಣಿಯರ ಪೈಕಿ ಲಲಿತಮ್ಮ, ನಂದಿನಿ, ರೋಜಾ, ಮುಸ್ಕಾನ್ ಹಾಗೂ ಸುಮಯ್ಯ ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ರಚಿಸಿದ್ದ ತನಿಖಾ ತಂಡ, ‘ಸರಣಿ ಸಾವಿಗೆ ಸರಕಾರದಿಂದ ಸರಬರಾಜು ಮಾಡಿದ ಐವಿ ಫೂಯಿಡ್ ಕಾರಣ’ ಎಂದು ತನ್ನ ವರದಿಯಲ್ಲಿ ಉಲ್ಲೇಖಿಸಿತ್ತು. ಇದರಿಂದ ಎಚ್ಚೆತ್ತ ರಾಜ್ಯ ಸರಕಾರ ಪಶ್ಚಿಮ ಬಂಗಾ ಫಾರ್ಮಸ್ಯುಟಿಕಲ್ ಕಂಪನಿಯಿಂದ ಸರಬರಾಜು ಆಗಿದ್ದ ಐವಿ ಫೂಯಿಡ್ ಬಳಕೆ ಮಾಡದಂತೆ ನ.16 ರಂದು ಆದೇಶ ಹೊರಡಿಸಿತ್ತು.

CM Siddharamaiah ಜಿಲ್ಲೆಯ ಸಂಡೂರು ಪಟ್ಟಣದಲ್ಲಿ ಕಾಂಗ್ರೆಸ್‌ ನಿಂದ ಭಾನುವಾರ ಹಮ್ಮಿಕೊಂಡಿದ್ದ ಮತದಾರರ ಕೃತಜ್ಞತಾ ಸಮಾವೇಶದಲ್ಲಿ ಅವರು ಈ ಘೋಷಣೆ ಮಾಡಿದರು.

ಅಲ್ಲದೆ, ಮೃತ ಕುಟುಂಬಗಳಿಗೆ ತಲಾ 2ಲಕ್ಷ ರೂ. ಪರಿಹಾರ ಘೋಷಿಸಿತ್ತು.

Araga Jnanendra ಬಾಣಂತಿಯರ ದಾರುಣ ಸಾವು. ರಾಜ್ಯ ಸರ್ಕಾರದ ವೈಫಲ್ಯ- ಆರಗ ಜ್ಞಾನೇಂದ್ರ

0

Araga Jnanendra ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಬಳ್ಳಾರಿಯಲ್ಲಿ ಐದು ತಾಯಂದಿರ ದಾರುಣ ಸಾವು ಮತ್ತು ಬೆಳಗಾವಿಯಲ್ಲಿ ಕೇವಲ ಆರು ತಿಂಗಳಲ್ಲಿ 29 ತಾಯಂದಿರ ಮತ್ತು 322 ಶಿಶುಗಳ ಭೀಕರ ಮರಣಗಳು, ಸಮರ್ಪಕ ಆರೋಗ್ಯ ಸೇವೆಗಳನ್ನು ಒದಗಿಸಲು ಕಾಂಗ್ರೆಸ್ ಸರ್ಕಾರದ ಸ್ಪಷ್ಟ ವೈಫಲ್ಯವನ್ನು ತೋರಿಸುತ್ತದೆ ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ Araga Jnanendra ಪ್ರಸ್ತುತ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Karnataka State Consumer Disputes Redressal Commission ವಿಮಾ ಕಂಪನಿ ಸೇವಾ ನ್ಯೂನತೆ ಹಿನ್ನೆಲೆ ಗ್ರಾಹಕರಿಗೆ ಪೂರ್ಣ ವೆಚ್ಚ ಭರಿಸಲು ಕಂಪನಿಗೆ ಆದೇಶ

0

Karnataka State Consumer Disputes Redressal Commission ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಶಿವರಾಮ್ ಎಂ.ಎಸ್. ಎಂಬುವವರು ಇಫ್ಕೋ ಟೋಕಿಯೋ ಜನರಲ್ ಇನ್ಷೂರೆನ್ಸ್ ಕಂಪನಿ ಲಿ., ನವದೆಹಲಿ ಮತ್ತು ಮಂಗಳೂರು ಇವರ ವಿರುದ್ದ ಸೇವಾನ್ಯೂನ್ಯತೆ ಕುರಿತು ದಾಖಲಿಸಿದ್ದ ಪ್ರಕರಣದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಪರಿಹಾರ ನೀಡಲು ಆದೇಶಿಸಿದೆ.
ಶಿವರಾಮ್ ಎಂ.ಎಸ್. ಎಂಬುವವರು ಭದ್ರಾವತಿಯ ಸುಪ್ರಿಂ ಆಟೋ ಡಿಲರ್ಸ್ ಪ್ರೈ. ಲಿ. ಮೂಲಕ ತಮ್ಮ ಉದ್ದಯೋಗಿಗಳಿಗೆ ಹಾಗೂ ಅವರ ಕುಟುಂಬದವರಿಗೆ ಎದುರುದಾರ ಕಂಪನಿಯ ಗ್ರೂಪ್ ಮೆಡಿಶೀಲ್ಡ್ ಇನ್ಷೂರೆನ್ಸ್ ಪಾಲಿಸಿ ಪಡೆದಿದ್ದು, ಈ ಪಾಲಿಸಿದಾರರಾದ ದೂರದಾರರ ಮಗನಿಗೆ ನಗರದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಒಳರೋಗಿಯಾಗಿ ದಾಖಲಾಗಿ ಕ್ಯಾಶ್‌ಲೆಸ್ ಚಿಕಿತ್ಸೆಯನ್ನು ಪಡೆದಿರುತ್ತಾರೆ. ಈ ಸಂಬAಧ ಎಲ್ಲಾ ದಾಖಲೆಗಳನ್ನು ನೀಡಿ ರೂ. 1,23,949/- ಗಳ ವೈದ್ಯಕೀಯ ವೆಚ್ಚದ ಬಿಲ್‌ನ್ನು ಮರುಪಾವತಿಗಾಗಿ ಕಂಪನಿಗೆ ನೀಡಿರುತ್ತಾರೆ. ಆದರೆ ಕಂಪನಿಯವರು ರೂ. 50000/- ಗಳವರೆಗೆ ನಗದುರಹಿತ ಚಿಕಿತ್ಸೆಗೆ ಅನುಮತಿ ನೀಡಿ, ನಂತರದಲ್ಲಿ ಉಳಿದ ವಿಮಾ ಹಣ ಮರುಪಾವತಿಸಲು ನಿರಾಕರಿಸಿರುತ್ತಾರೆ ಎಂದು ಆಯೋಗಕ್ಕೆ ದೂರು ನೀಡಿರುತ್ತಾರೆ.
ಈ ಪ್ರಕರಣವನ್ನು ಆಯೋಗವು ನೊಂದಣಿ ಮಾಡಿಕೊಂಡು ವಿಮಾ ಕಂಪನಿಗೆ ನೋಟಿಸ್ ಕಳುಹಿಸಿ ದೂರಿನ ಬಗ್ಗೆ ತಕರಾರು ಇದ್ದಲ್ಲಿ ಖುದ್ದು ಅಥವಾ ವಕೀಲರ ಮೂಲಕ ಸಲ್ಲಿಸುವಂತೆ ಸೂಚಿಸಲಾಗಿತ್ತು. ವಿಮಾ ಕಂಪನಿಯು ದೂರುದಾರ ನೀಡಿರುವ ಚಿಕಿತ್ಸೆಗೆ ಸಂಬಂಧಿಸಿದ ದಾಖಲೆಗಳು ಸಮರ್ಪಕವಾಗಿಲ್ಲ ಎಂದು ಕ್ಲೇಮ್‌ನ್ನು ತಿರಸ್ಕರಿಸಿದ್ದು, ಸೇವಾ ನ್ಯೂನತೆಯಾಗಿರುವುದಿಲ್ಲ. ಕಾರಣ ದೂರನ್ನು ವಜಾ ಮಾಡಲು ಕೋರಿರುತ್ತಾರೆ.
Karnataka State Consumer Disputes Redressal Commission ಆದರೆ ಆಯೋಗವು ಪ್ರಮಾಣ ಪತ್ರ ಮತ್ತು ದಾಖಲೆಗಳನ್ನು ಪರಿಶೀಲಿಸಿ, ಮತ್ತು ವಕೀಲರ ವಾದಗಳನ್ನು ಆಲಿಸಿ, ಪ್ರಮುಖವಾಗಿ ಆಟೋ ಅಪ್ರುವಲ್ ಲೆಟರ್, ಆಟೋ ಡಿನೈಯಲ್ ಲೆಟರ್, ಸ.ನಾ.ಸೂ.ಸ್ಪೆಷಾಲಿಟಿ ಆಸ್ಪತ್ರೆಯವರ ಡಿಸ್‌ಚಾರ್ಚ್ ಸಮ್ಮರಿ ಮತ್ತು ಮೆಡಿಕಲ್ ಬಿಲ್ ಹಾಗೂ ಪಾಲಿಸಿ ಷರತ್ತುಗಳು ಸರಿಯಾಗಿದ್ದು, ಆಸ್ಪತ್ರೆಯ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯಲಾಗಿದೆ. ಎದುರುದಾರ ಕಂಪನಿಯು ಅಪಾದಿಸಿರುವ ಕಾರಣಕ್ಕೆ ಯಾವುದೇ ಪೂರಕವಾದ ದಾಖಲೆಗಳನ್ನು ಹಾಜರುಪಡಿಸಿರುವುದಿಲ್ಲವೆಂದು, ಕಂಪನಿಯು ಇಲ್ಲಸಲ್ಲದ ಕಾರಣಗಳನ್ನು ಹೇಳಿ ಮುಂದೂಡುತ್ತಾ ಬಂದಿರುವುದು ಸೇವಾ ನ್ಯೂನ್ಯತೆಯಾಗಿರುತ್ತದೆಂದು ಫರ‍್ಯಾದನ್ನು ಭಾಗಶಃ ಪುರಸ್ಕರಿಸಿ ಇನ್ಸೂರೆನ್ಸ್ ಕಂಪನಿಯು ಸೇವಾ ನ್ಯೂನ್ಯತೆ ಎಸಗಿರುತ್ತಾರೆ ಎಂದು ತೀರ್ಮಾನಿಸಿದೆ.
ಆದ್ದರಿಂದ ಅರ್ಜಿದಾರರಿಗೆ ವೈದ್ಯಕೀಯ ವೆಚ್ಚದ ಮೊತ್ತ ರೂ. 1,23,949/-ಗಳನ್ನು (ವೈದ್ಯಕೀಯ ಬಿಲ್‌ಗಳ ಪ್ರಕಾರ) ವಿಮಾ ಕಂಪನಿಯು ಅರ್ಜಿಯನ್ನು ತಿರಸ್ಕರಿಸಿದ ದಿನಾಂಕದಿಂದ ವಾರ್ಷಿಕ ಶೇ.9% ರ ಬಡ್ಡಿಯೊಂದಿಗೆ ಈ ಆದೇಶವಾದ 45 ದಿನಗಳೊಳಗೆ ಪಾವತಿಸುವಂತೆ, ತಪ್ಪಿದ್ದಲ್ಲಿ ಈ ಆದೇಶದ ದಿನಾಂಕದಿಂದ ವಾರ್ಷಿಕ ಶೇ 12% ರ ಬಡ್ಡಿಯನ್ನು ಪೂರಾ ಹಣ ನೀಡುವವರೆಗೂ ಪಾವತಿಸಲು ಹಾಗೂ ಎದುರುದಾರರ ಸೇವಾ ನ್ಯೂನ್ಯತೆಯಿಂದ ಫರ‍್ಯಾದಿದಾರರಿಗೆ ಉಂಟಾದ ಮಾನಸಿಕ ವ್ಯಥೆಗೆ ರೂ. 20,000/-ಗಳನ್ನು ಹಾಗೂ ರೂ. 10,000/- ಗಳನ್ನು ವ್ಯಾಜ್ಯದ ಖರ್ಚು-ವೆಚ್ಚಗಳ ಬಾಬ್ತು ಎಂದು ನೀಡಬೇಕೆಂದು ನಿರ್ದೇಶಿಸಿ, ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಶ್ರೀ ಟಿ.ಶಿವಣ್ಣ, ಮಹಿಳಾ ಸದಸ್ಯರಾದ ಶ್ರೀಮತಿ ಸವಿತಾ ಬಿ. ಪಟ್ಟಣಶೆಟ್ಟಿ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಇವರ ಪೀಠವು ಡಿ.03 ರಂದು ಆದೇಶಿಸಿದೆ.

University of Agricultural and Horticultural Sciences ಕ್ರೀಡೆಗಳಿಂದ ದೈಹಿಕ ಸಾಮರ್ಥ್ಯ ವೃದ್ಧಿ- ಡಾ.ತಿಪ್ಪೇಶ್

0

University of Agricultural and Horticultural Sciences ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಸಾಮಾರ್ಥ್ಯ ವೃದ್ಧಿಸುವ ಜತೆಯಲ್ಲಿ ಬುದ್ಧಿಶಕ್ತಿ ಚುರುಕಾಗುತ್ತದೆ ಎಂದು ಕೆಳದಿ ಶಿವಪ್ಪನಾಯಕ ಕೃಷಿ ಕಾಲೇಜಿನ ಡೀನ್ ಡಾ. ತಿಪ್ಪೇಶ್ ಅಭಿಪ್ರಾಯಪಟ್ಟರು.

ಕೃಷಿ ಕಾಲೇಜಿನ ಆವರಣದಲ್ಲಿ ವಲಯ 11ರ ರೋಟರಿ ಕ್ರೀಡೋತ್ಸವ 2024 ಉದ್ಘಾಟಿಸಿ ಮಾತನಾಡಿ, ನಾವು ಒತ್ತಡದ ಜೀವನಶೈಲಿಯಲ್ಲಿ ಸಾಗುತ್ತಿದ್ದು, ಒತ್ತಡಮುಕ್ತ ಜೀವನಶೈಲಿಯಾಗಿ ರೂಪುಗೊಳ್ಳಲು ಕ್ರೀಡೆ, ಸಾಂಸ್ಕೃತಿಕ, ಮನೋರಂಜನೆಯು ಜೀವನದ ಅವಿಭಾಜ್ಯ ಅಂಗಗಳಾಗಬೇಕು ಎಂದು ತಿಳಿಸಿದರು.

ರೋಟರಿ ಸಂಸ್ಥೆ ಸಮಾಜಮುಖಿ ಕಾರ್ಯಗಳ ಜತೆ ಕ್ರೀಡೆಗೆ ಹೆಚ್ಚು ಒತ್ತು ನೀಡುತ್ತಿರುವುದು, ಸದಸ್ಯರ ಪ್ರತಿಭೆಗಳನ್ನು ಅನಾವರಣಗೊಳಿಸಲು ಅವಕಾಶ ಕಲ್ಪಿಸಿರುವುದು ಮುಖ್ಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ರೋಟರಿ ವಲಯ 11ರ ಸಹಾಯಕ ಗವರ್ನರ್ ಎಚ್.ಎಂ.ಸುರೇಶ್ ಮಾತನಾಡಿ, ರೋಟರಿ ಸದಸ್ಯರಲ್ಲಿ ಅಗಾಧವಾದ ಪ್ರತಿಭೆ ಇದ್ದು, ರಾಜ್ಯ, ರಾಷ್ಟ್ರಮಟ್ಟದಲ್ಲಿ ಪಾಲ್ಗೊಂಡ ಕ್ರೀಡಾಪಟುಗಳು ಇದ್ದಾರೆ. ಕ್ರೀಡೆ ಅಭ್ಯಾಸ ನಮ್ಮಲ್ಲಿ ಖಿನ್ನತೆ ಕಡಿಮೆ ಮಾಡುವುದರ ಜತೆಗೆ ದೈಹಿಕವಾಗಿ, ಮಾನಸಿಕವಾಗಿ ಸದೃಢಗೊಳಿಸುತ್ತದೆ. ಇದರಿಂದ ಪರಸ್ಪರರಲ್ಲಿ ಓಡನಾಟ, ಪ್ರೀತಿ ವಿಶ್ವಾಸ ವೃದ್ಧಿಸುತ್ತದೆ. ವಲಯ ಮಟ್ಟದ ಕ್ರೀಡೆಯಲ್ಲಿ ವಿಜೇತರಾದವರು ಜಿಲ್ಲಾಮಟ್ಟದ ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಅವಕಾಶವಿರುತ್ತದೆ ಎಂದು ಹೇಳಿದರು.

University of Agricultural and Horticultural Sciences ಕ್ರೀಡೋತ್ಸವ ಅಧ್ಯಕ್ಷತೆಯನ್ನು ಶಿವಮೊಗ್ಗ ಸೆಂಟ್ರಲ್ ಕ್ಲಬ್ ಅಧ್ಯಕ್ಷ ಜಿ.ಕಿರಣ್ ಮಾತನಾಡಿ, ಇಂದು ಕ್ರೀಡಾಕೂಟದಲ್ಲಿ ರೋಟರಿ ಸೆಂಟ್ರಲ್, ಶಿವಮೊಗ್ಗ ಪೂರ್ವ, ತೀರ್ಥಹಳ್ಳಿ, ಕೋಣಂದೂರು, ರಿಪ್ಪನ್‌ಪೇಟೆ, ಸಾಗರ, ಸೊರಬ ಸದಸ್ಯರು ಭಾಗವಹಿಸಿ ಕ್ರೀಡಾ ಪ್ರದರ್ಶನ ನೀಡುತ್ತಿರುವುದು ಸಂತೋಷದ ಸಂಗತಿ ಎಂದು ತಿಳಿಸಿದರು.
ಕ್ರೀಡಾವಲಯ ಸಂಯೋಜಕ ಸಂತೋಷ್.ಬಿ.ಎ., ವಲಯ ಸೇನಾನಿ ಮಂಜುನಾಥ ಕದಂ, ಟಿ.ಆರ್.ಸಂತೋಷ್, ನಿರಂಜನ್ ಹೆಗಡೆ, ಅನಿಲ್‌ಕುಮಾರ್, ಗಿರೀಶ್, ಈಶ್ವರ್, ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಜಿಲ್ಲಾ ಮಾಜಿ ಗವರ್ನರ್ ಜಿ.ಎನ್.ಪ್ರಕಾಶ್, ಡಾ. ಗುಡದಪ್ಪ ಕಸಬಿ, ರವಿ ಕೋಟೋಜಿ ಮತ್ತಿತರರು ಉಪಸ್ಥಿತರಿದ್ದರು.

Karnataka Rakshana Vedike ಕನ್ನಡಿಗರೇ “ವಿಸಿಟಿಂಗ್ ಕಾರ್ಡ್” ಆಗಿ ಕನ್ನಡದ ಕೆಲಸ ಮಾಡಬೇಕು-ಎಚ್.ಎಸ್.ಕಿರಣ್ ಕುಮಾರ್

0

Karnataka Rakshana Vedike ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ಶಿಕಾರಿಪುರ ತಾಲೂಕು ಘಟಕ ಉದ್ಘಾಟನೆಯನ್ನು
ನಗರದ ಸುದ್ದಿ ಮನೆ ಪತ್ರಿಕಾ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಲ್ಲಿ ನಡೆಸಲಾಯಿತು.

ಸ್ವಾಭಿಮಾನಿ ಬಣ ಉದ್ಘಾಟನೆ ಮತ್ತು ಪದಗ್ರಹಣ ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷರಾದ ಕಿರಣ್ ಕುಮಾರ್ ಎಚ್ಎಸ್ ರವರು ಕಾರ್ಯಕರ್ತರು ಮತ್ತು ಪದಾಧಿಕಾರಿಗಳನ್ನು ಉದ್ದೇಶಿಸಿ
ನಾವು ವಿಸಿಟಿಂಗ್ ಕಾರ್ಡ್ ಕೊಟ್ಟು ಗೊತ್ತಾಗುವ ರೀತಿ ಇರಬಾರದು ನಾವೇ ವಿಸಿಟಿಂಗ್ ಕಾರ್ಡ್ ಅನ್ನುವ ರೀತಿ ಕನ್ನಡ
ನಾಡು-ನುಡಿ ನೆಲ ಜಲ ಸಂಸ್ಕೃತಿ ಕಾರ್ಮಿಕ ರೈತ ಮಹಿಳೆಯರ ಪರ ವಿದ್ಯಾರ್ಥಿಪರ ಶೋಷಿತರ ಕನ್ನಡ ಪರ ಸಂಘಟನೆ ಹೋರಾಟ ಮಾಡಿರಿ ಎಂದು ಜಿಲ್ಲಾಧ್ಯಕ್ಷರು ಕಿರಣ್ ಕುಮಾರ್ ಹೆಚ್.ಎಸ್. ತಿಳಿಸಿದರು.

ಅಖಿಲ ಭಾರತ ವೀರಶೈವ ಮಹಾಸಭಾ ಕಾರ್ಯಕಾರಿಣಿ ರಾಜ್ಯ ಸದಸ್ಯ . ಎನ್. ವಿ. ಈರೇಶ್. ಮಾತನಾಡಿ ಹಿಂದೆ ಒಟ್ಟು ಕುಟುಂಬ ಇರುತ್ತಿದ್ದವು ಈಗ ಸಂಘಟನೆಗಳೇ ಕುಟುಂಬಗಳಾಗಿವೆ ಎಂದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಸ್ನೇಹಕ್ಕನವರು ಮಾತನಾಡಿ. ಆತ್ಮ ಪರಮಾತ್ಮ ನಮ್ಮ ಒಗ್ಗಟ್ಟು ಜೀವನದ ಮೌಲ್ಯ ಎಲ್ಲವನ್ನು ಅರಿತು ಕರ್ನಾಟಕ ರಕ್ಷಣೆ ಮಾಡುವ ಸಂಘಟನೆಯಾಗಿದ್ದು ಶಿಕಾರಿಪುರ ರಾಜ್ಯಮಟ್ಟಕ್ಕೆ ಹೆಸರು ತರುವ ಕೀರ್ತಿ ಮಾಡಿರಿ ಎಂದು ಹಿತವಚನ ನೀಡಿದರು.

Karnataka Rakshana Vedike ಹಾಗೂ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷರಾದ ಎನ್, ಮಾಲತೇಶ್ .ಮಾಧ್ಯಮ ಸಲಹೆಗಾರರು ಅನಿಲ್ ಕುಮಾರ್ ಜಿಲ್ಲಾ ಪದಾಧಿಕಾರಿಗಳು ವಿಜಯಕುಮಾರ್ ರಾಮು ನೂರುಲ್ಲಾ ಖಾನ್ ಮಹಮ್ಮದ್ ಶಫಿ ಗಣೇಶ್ ಪರಮೇಶ್ ಇವರ ಸಮ್ಮುಖದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ .ಶಿವಯ್ಯ ಎನ್ ಶಾಸ್ತ್ರಿ ಮುಖ್ಯ ಸಲಹೆಗಾರರು ಗೌರವಾಧ್ಯಕ್ಷರು. ತಾಲೂಕು ಅಧ್ಯಕ್ಷರು ಆನಂದ ಹೆಚ್. ತಾಲೂಕು ಮಹಿಳಾ ಅಧ್ಯಕ್ಷ ನೇತ್ರಾವತಿ ನಾಗರಾಜ್ ಉಪಾಧ್ಯಕ್ಷರಾದ ಗುತ್ತಿ ಕನ್ನಪ್ಪ ಕಾರ್ಯದರ್ಶಿ ಮಾಲತೇಶ್ ಕಾರ್ಯ ಅಧ್ಯಕ್ಷ ಸುನಿಲ್ ಬನ್ನೂರ್ ಶಿವರಾಜ ಪಾಟೀಲ್ ಪರಶುರಾಮ್ ಸಂತೋಷ್ ನಗರ ಗೌರವಾಧ್ಯಕ್ಷ ಮುಕ್ತರ್ ಅಹಮದ್ ನಗರ ಅಧ್ಯಕ್ಷ ರವೀಂದ್ರ ಕುಮಾರ್ ಆರಿಫುಲ್ಲ ವೀರೇಶ್ ಸುಮಂತ್ ಗ್ರಾಮಾಂತರ ಅಧ್ಯಕ್ಷ ಶಂಭುಲಿಂಗಪ್ಪ ರಾಜು ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಯಿತು.

Congress ಬಗರ್ ಹುಕುಂ ಸಾಗುವಳಿ ಸಮಿತಿಗೆ ಮಮತಾ ಶಾಸ್ತ್ರಿ ನೇಮಕ

0

Congress ಬಗರ್ ಹುಕುo ಸಾಗುವಳಿದಾರರ ಸಮಿತಿ ಸದಸ್ಯರಾಗಿ ಶ್ರೀಮತಿ ಮಮತಾ ಎನ್. ಶಾಸ್ತ್ರಿ ರವರನ್ನು ನೇಮಕ ಮಾಡಲಾಗಿದೆ.
ಸರ್ಕಾರದಿಂದ ನಾಮನಿರ್ದೇಶನ ಬಗರ್ ಹುಕುಂ ಸಮಿತಿಗೆ ಹಸೋಡಿ ಫಾರಂ ಗ್ರಾಮದ ಕಾಂಗ್ರೆಸ್ ಮುಖಂಡರಾದಂತಹ ನಟರಾಜ ಶಾಸ್ತ್ರಿ ರವರ ಪತ್ನಿ ಕಾಂಗ್ರೆಸ್ ಮುಖಂಡರಾದಂತ ಶ್ರೀಮತಿ ಮಮತಾ ಎನ್ ಶಾಸ್ತ್ರಿ ರವರನ್ನು ನೇಮಿಸಲಾಗಿದೆ. ನೇಮಕಾತಿಗೆ ಸಹಕರಿಸಿದಂತಹ ಶಿಕ್ಷಣ ಸಚಿವರಾದಂತಹ ಶ್ರೀಯುತ ಮಧು ಬಂಗಾರಪ್ಪ ನವರಿಗೆ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ Congress ನಿಕಟ್ಟ ಪೂರ್ವ ಅಭ್ಯರ್ಥಿಯಾದ ಡಾಕ್ಟರ್ ಶ್ರೀನಿವಾಸ್ ಕರಿಯಣ್ಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದಂತಹ ಆರ್ ಪ್ರಸನ್ನ ಕುಮಾರ್, ಎಲ್ ಡಿ ಬ್ಯಾಂಕ್ ಅಧ್ಯಕ್ಷರಾದಂತಹ ಶ್ರೀಯುತ ವಿಜಯಕುಮಾರ್ ರವರಿಗೆ ಅಭಿನಂದನೆಗಳು ಎಂದು ಪ್ರಕಟಣೆಯಲ್ಲಿ ಶ್ರೀಯುತ ನಟರಾಜ ರವರು ತಿಳಿಸಿದ್ದಾರೆ.

Crime Investigation and Digital Forensics ಸಮಕಾಲೀನ ಅಪರಾಧ ತನಿಖೆಗಳಲ್ಲಿ ತಂತ್ರಜ್ಞಾನದ ಪಾತ್ರ ಬಹಳ ಮುಖ್ಯ- ಡಾ.ವಯಾ

0

Crime Investigation and Digital Forensics ತಂತ್ರಜ್ಞಾನದ ಪಾತ್ರದ ಕುರಿತು ತರಬೇತಿ ಕಾರ್ಯಕ್ರಮ (ಅಪರಾಧ ತನಿಖೆ ಮತ್ತು ಡಿಜಿಟಲ್ ಫೋರೆನ್ಸಿಕ್)
RRU ಶಿವಮೊಗ್ಗ ಕ್ಯಾಂಪಸ್ ಡಿಸೆಂಬರ್ 2 ರಿಂದ 6, 2024 ರವರೆಗೆ “ಕ್ರೈಮ್ ಇನ್ವೆಸ್ಟಿಗೇಶನ್ ಮತ್ತು ಡಿಜಿಟಲ್ ಫೊರೆನ್ಸಿಕ್‌ನಲ್ಲಿ ತಂತ್ರಜ್ಞಾನದ ಪಾತ್ರ” ಕುರಿತು ಒಂದು ವಾರದ ಆನ್‌ಲೈನ್ ತರಬೇತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದೆ.

ಈ ಕಾರ್ಯಕ್ರಮವು ವಿಕಸನದ ಭೂದೃಶ್ಯವನ್ನು ನ್ಯಾವಿಗೇಟ್ ಮಾಡಲು ಅಗತ್ಯವಿರುವ ಇತ್ತೀಚಿನ ಒಳನೋಟಗಳು ಮತ್ತು ಕೌಶಲ್ಯಗಳೊಂದಿಗೆ ಭಾಗವಹಿಸುವವರನ್ನು ಸಜ್ಜುಗೊಳಿಸುವ ಗುರಿಯನ್ನು ಹೊಂದಿದೆ. ಕ್ರಿಮಿನಲ್ ತನಿಖೆಗಳು, ತಾಂತ್ರಿಕ ಪ್ರಗತಿಗೆ ಒತ್ತು ನೀಡುವುದು.

ಮುಖ್ಯ ಅತಿಥಿಗಳಾಗಿ ಪ್ರೊ. (ಡಾ.) ಎಸ್.ಎಲ್. ವಯಾ, ಜೀವಮಾನದ ಪ್ರಾಧ್ಯಾಪಕರು ಮತ್ತು ಮುಖ್ಯ ಮಾರ್ಗದರ್ಶಕರು, ಸ್ಕೂಲ್ ಆಫ್ ಬಿಹೇವಿಯರಲ್ ಸೈನ್ಸಸ್ ಮತ್ತು ಫೋರೆನ್ಸಿಕ್ ಇನ್ವೆಸ್ಟಿಗೇಷನ್ಸ್ ಅವರ ಉದ್ಘಾಟನಾ ಭಾಷಣದೊಂದಿಗೆ ತರಬೇತಿ ಕಾರ್ಯಕ್ರಮವು ಪ್ರಾರಂಭವಾಯಿತು. ಫೋರೆನ್ಸಿಕ್ಸ್ ಮತ್ತು ವರ್ತನೆಯ ವಿಜ್ಞಾನಗಳ ಕ್ಷೇತ್ರಗಳಲ್ಲಿ ಪ್ರವರ್ತಕರಾದ ಡಾ. ವಯಾ ಅವರು ಆಧುನಿಕ ತನಿಖಾ ತಂತ್ರಗಳಲ್ಲಿ ತಂತ್ರಜ್ಞಾನದ ಏಕೀಕರಣದ ಬಗ್ಗೆ ತಮ್ಮ ಅಮೂಲ್ಯ ಒಳನೋಟಗಳನ್ನು ಹಂಚಿಕೊಂಡರು.

ಸಮಕಾಲೀನ ಅಪರಾಧ ತನಿಖೆಗಳಲ್ಲಿ ತಂತ್ರಜ್ಞಾನವು ವಹಿಸುವ ಪಾತ್ರದ ಬಗ್ಗೆ ಭಾಗವಹಿಸಿದ್ದವರ ತಿಳುವಳಿಕೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ವ್ಯಾಪಕ ಶ್ರೇಣಿಯ ವಿಷಯಗಳ ಮೇಲೆ ಪರಿಣಿತ ಅವಧಿಗಳ ಸರಣಿಯು ಕೇಂದ್ರೀಕರಿಸಿದೆ. ಡಿಜಿಟಲ್ ಫೋರೆನ್ಸಿಕ್ಸ್, ಸೈಬರ್ ಅಪರಾಧ ತನಿಖಾ ತಂತ್ರಗಳು, ಜಿಯೋಸ್ಪೇಷಿಯಲ್ ಇಂಟೆಲಿಜೆನ್ಸ್ ಮತ್ತು ಕಣ್ಗಾವಲು ತಂತ್ರಜ್ಞಾನಗಳ ಆಳವಾದ ಅನ್ವೇಷಣೆಯನ್ನು ಒದಗಿಸಿದ ಡಾ.ಜಿ.ಬಿ.ಅರವಿಂದ್, ಡಾ.ಶ್ವೇತಾ ಕುಮಾರಿ ಮತ್ತು ಡಾ.ಶಿವಲಿಂಗಪ್ಪ ಎಸ್.ಅಂಗಡಿ ಅವರು ವಿಶೇಷ ಭಾಷಣಕಾರರಲ್ಲಿ ಸೇರಿದ್ದಾರೆ.
ಡಿಜಿಟಲ್ ಸಾಕ್ಷ್ಯದ ಪ್ರಕಾರಗಳು ಮತ್ತು ಸಂಗ್ರಹ ವಿಧಾನಗಳು, ಫೈಲ್ ಸಿಸ್ಟಮ್‌ಗಳು ಮತ್ತು ಡೇಟಾ ಮರುಪಡೆಯುವಿಕೆ, ಸಾಮಾಜಿಕ ಮಾಧ್ಯಮ ವಿಶ್ಲೇಷಣೆ, ಇಮೇಲ್ ಫೋರೆನ್ಸಿಕ್ಸ್ ಮತ್ತು ತನಿಖೆಗಳಲ್ಲಿ ಬ್ಲಾಕ್‌ಚೈನ್ ಮತ್ತು ಕ್ರಿಪ್ಟೋಕರೆನ್ಸಿಗಳ ಉದಯೋನ್ಮುಖ ಪಾತ್ರ ಸೇರಿದಂತೆ ವಿಧಿವಿಜ್ಞಾನ ತಜ್ಞರು ಬಳಸುವ ಉಪಕರಣಗಳು ಮತ್ತು ತಂತ್ರಜ್ಞಾನಗಳನ್ನು ಅನ್ವೇಷಿಸುವ ಮೂಲಕ ತರಬೇತಿ ಕಾರ್ಯಕ್ರಮವು ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಒಳನೋಟಗಳನ್ನು ಒದಗಿಸಿತು. .

Crime Investigation and Digital Forensics ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾನಿಲಯದ ಪ್ರೊ ವೈಸ್ ಚಾನ್ಸಲರ್ ಪ್ರೊ. (ಡಾ.) ಕಲ್ಪೇಶ್ ಹೆಚ್. ತಮ್ಮ ಭಾಷಣದಲ್ಲಿ, ಪ್ರೊ. ವಂಡ್ರಾ ತಂತ್ರಜ್ಞಾನ ಮತ್ತು ಡಿಜಿಟಲ್ ಫೋರೆನ್ಸಿಕ್ಸ್ ಅಪರಾಧದ ತನಿಖೆಯನ್ನು ಹೇಗೆ ಕ್ರಾಂತಿಗೊಳಿಸಿವೆ, ನಿರ್ಣಾಯಕ ಪುರಾವೆಗಳನ್ನು ಬಹಿರಂಗಪಡಿಸಲು ಮತ್ತು ಹೆಚ್ಚಿನ ದಕ್ಷತೆಯೊಂದಿಗೆ ಪ್ರಕರಣಗಳನ್ನು ಪರಿಹರಿಸಲು ಕಾನೂನು ಜಾರಿಯನ್ನು ಸಕ್ರಿಯಗೊಳಿಸುತ್ತದೆ ಎಂದು ಒತ್ತಿ ಹೇಳಿದರು.

ನ್ಯಾಯಾಂಗ ಪ್ರಕ್ರಿಯೆಯ ಸಮಗ್ರತೆಯನ್ನು ಬಲಪಡಿಸಲು ಮತ್ತು ಸಮಾಜವನ್ನು ರಕ್ಷಿಸಲು ಅಪರಾಧ ತನಿಖೆಯಲ್ಲಿ ಮುಂಬರುವ ಪ್ರವೃತ್ತಿಗಳಿಗೆ ಹೊಂದಿಕೊಳ್ಳುವ ಪ್ರಾಮುಖ್ಯತೆಯನ್ನು ಅವರು ಒತ್ತಿ ಹೇಳಿದರು.

ತರಬೇತಿ ಕಾರ್ಯಕ್ರಮವು ಕಾನೂನು ಜಾರಿ ಸಿಬ್ಬಂದಿ, ವೃತ್ತಿಪರರು, ಶೈಕ್ಷಣಿಕ ತಜ್ಞರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ದೇಶದ ವಿವಿಧ ಭಾಗಗಳಿಂದ 100 ಕ್ಕೂ ಹೆಚ್ಚು ಉತ್ಸಾಹಿಗಳನ್ನು ವಿವಿಧ ಕ್ಷೇತ್ರಗಳಿಂದ ಆಕರ್ಷಿಸಿತು. ಮಾಹಿತಿ ಹಂಚಿಕೆ ಮತ್ತು ಪ್ರಾಯೋಗಿಕ ಕಲಿಕೆಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುವ ಮೂಲಕ ಭಾರತದಲ್ಲಿ ಅಪರಾಧ ತನಿಖೆ ಮತ್ತು ಡಿಜಿಟಲ್ ಫೊರೆನ್ಸಿಕ್ಸ್‌ನ ಮುಂದುವರಿದ ಅಭಿವೃದ್ಧಿಯ ಅಧ್ಯಯನಕ್ಕೆಈ ಕಾರ್ಯಕ್ರಮವು ಕೊಡುಗೆ ನೀಡಿತು.