Monday, March 23, 2026
Monday, March 23, 2026
Home Blog Page 477

Rotary Shivamogga ರೋಟರಿ ಶಿವಮೊಗ್ಗ ಭಗವದ್ಗೀತೆಯನ್ನ ಓದಿ ಅರ್ಥಮಾಡಿಕೊಂಡರೆ ನಮ್ಮ ಜೀವನ ಉತ್ತಮ-ವಿನುತಾ

0

Rotary Shivamogga ಭಗವದ್ಗೀತೆಯ ಅಧ್ಯಯನದಿಂದ ಜೀವನ ಮೌಲ್ಯಗಳ ಕಲಿಕೆಯ ಜತೆಯಲ್ಲಿ ಸಮೃದ್ಧ ಜೀವನ ನಮ್ಮದಾಗುತ್ತದೆ ಎಂದು ಶಾರದಾದೇವಿ ಸತ್ಸಂಗ ಕೇಂದ್ರದ ಸದಸ್ಯೆ ವಿನುತಾ ಹೇಳಿದರು.

ರಾಜೇಂದ್ರನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಗವದ್ಗೀತೆ ನಾವೇಕೆ ಓದಬೇಕು ವಿಷಯ ಕುರಿತು ಮಾತನಾಡಿ, ಭಗವದ್ಗೀತೆ ಓದುವ ಜತೆಯಲ್ಲಿ ಅದರಲ್ಲಿನ ಅಂಶಗಳನ್ನು ಅರ್ಥ ಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ಜೀವನ ಉತ್ತಮವಾಗಿ ರೂಪುಗೊಳ್ಳುತ್ತದೆ ಎಂದು ತಿಳಿಸಿದರು.

ಪ್ರತಿಯೊಬ್ಬರೂ ಸಂತೋಷವನ್ನೆ ಸದಾ ಬಯಸುತ್ತಾರೆ. ನೋವು ಇಲ್ಲದೆ ಸಂತೋಷ ಇಲ್ಲ. ರಾಮಾಯಣ, ಮಹಾಭಾರತ ಸೇರಿ ಅನೇಕ ಗ್ರಂಥಗಳು ಇಂದಿಗೂ ಪ್ರಸ್ತುತ. ಪ್ರಪಂಚದ ಮಹಾನ್ ವ್ಯಕ್ತಿಗಳ ಉನ್ನತ ಸಾಧನೆಗೆ ಭಗವದ್ಗೀತೆಯ ಸಂದೇಶಗಳು ಕಾರಣವಾಗಿವೆ. ಭಗವದ್ಗೀತೆಯ ಶ್ಲೋಕಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು.

Rotary Shivamogga ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಅರುಣ್ ದೀಕ್ಷಿತ್ ಮಾತನಾಡಿ, ಒತ್ತಡದ ಪ್ರಪಂಚದಲ್ಲಿ ಆಧ್ಯಾತ್ಮ ಕಾರ್ಯಕ್ರಮಗಳು ಮನುಷ್ಯನನ್ನು ಖಿನ್ನತೆಯಿಂದ ದೂರಗೊಳಿಸುತ್ತವೆ. ಆತ್ಮಸ್ಥೈರ್ಯ ವೃದ್ಧಿಸಲು ಸಹಕಾರಿಯಾಗುತ್ತವೆ ಎಂದು ತಿಳಿಸಿದರು.

ಭಗವದ್ಗೀತೆ ಕುರಿತು ರೋಟರಿ ಸದಸ್ಯರ ಪ್ರಶ್ನೆಗಳಿಗೆ ಶಾರದಾದೇವಿ ಸತ್ಸಂಗ ಕೇಂದ್ರದ ಸದಸ್ಯೆ ವಿನುತಾ ಅವರು ಉತ್ತರಿಸಿದರು. ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಶಶಿಕಾಂತ್ ನಾಡಿಗ್, ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಡಾ. ಕಡಿದಾಳ್ ಗೋಪಾಲ್, ಹೊಸತೋಟ ಸೂರ್ಯನಾರಾಯಣ, ಮಾಜಿ ಅಧ್ಯಕ್ಷ ಗಣೇಶ್, ಡಾ. ಪರಮೇಶ್ವರ್ ಶಿಗ್ಗಾವ್, ಡಾ. ಧನಂಜಯ, ಮಂಜುನಾಥ್, ಕಿಶೋರ್‌ಕುಮಾರ್, ಎ.ಒ.ಮಹೇಶ್, ಎಂ.ಪಿ.ನಾಗರಾಜ್, ನಾಗವೇಣಿ, ನಮಿತಾ ಸೂರ್ಯನಾರಾಯಣ, ಇನ್ನರ್‌ವ್ಹೀಲ್ ಮಾಜಿ ಅಧ್ಯಕ್ಷೆ ಬಿಂದು ವಿಜಯಕುಮಾರ್, ಡಾ. ಕೌಸ್ತುಭಾ ಅರುಣ್, ಡಾ. ಲಲಿತಾ ಭರತ್, ರಮೇಶ್ ಭಟ್, ಸಂಜೀವ್, ರೋಟರಿ, ಇನ್ನರ್‌ವ್ಹೀಲ್ ಕ್ಲಬ್ ಸದಸ್ಯರು ಹಾಜರಿದ್ದರು.

Health and Family Welfare Department ಕ್ಷಯರೋಗವನ್ನ ಶೀಘ್ರ ಪತ್ತೆಹಚ್ಚಿ ಚಿಕಿತ್ಸೆ ಪಡೆಯುವುದು ಅತಿಮುಖ್ಯ- ಡಾ.ನಟರಾಜ್

0

Health and Family Welfare Department ಕ್ಷಯರೋಗದ ಕುರಿತು ಉದಾಸೀನ ಮಾಡಿದಲ್ಲಿ ಕೇವಲ ರೋಗಿಗೆ ಮಾತ್ರವಲ್ಲ, ಅವರ ಕುಟುಂಬ ಮತ್ತು ಸಮಾಜಕ್ಕೆ ಹಾನಿ. ಆದ್ದರಿಂದ ಶೀಘ್ರ ಪತ್ತೆ ಮತ್ತು ಚಿಕಿತ್ಸೆ ಪಡೆದುಕೊಳ್ಳುವುದು ಅತಿ ಮುಖ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಟರಾಜ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯ ರೋಗ ನಿಯಂತ್ರಣ ಕೇಂದ್ರ ಶಿವಮೊಗ್ಗ ಇವರ ಸಹಯೋಗದೊಂದಿಗೆ ಶನಿವಾರ ತುಂಗಾ ನಗರ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ಕ್ಷಯರೋಗ ಮುಕ್ತ 100 ದಿನಗಳ ಅಭಿಯಾನದ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.
ಕ್ಷಯರೋಗವನ್ನು ಉದಾಸೀನ ಮಾಡಿದರೆ ಸಮಾಜಕ್ಕೇ ಮಾರಕವಾಗುತ್ತದೆ. ಆದ್ದರಿಂದ ಲಕ್ಷಣಗಳು ಕಂದು ಬಂದ ತಕ್ಷಣೆ ಪರೀಕ್ಷೆ ಮೂಲಕ ಪತ್ತೆ ಹಚ್ಚಿ, ಚಿಕಿತ್ಸೆಗೆ ಒಳಪಡಬೇಕು. ಎಲ್ಲರೂ ಕೂಡ ಕ್ಷಯ ರೋಗದ ಲಕ್ಷಣಗಳ ಕುರಿತು ತಿಳಿದುಕೊಂಡು ಎಚ್ಚರಿಕೆಯಿಂದ ವಹಿಸಬೇಕು. ಒಂದು ವಾರಕ್ಕೂ ಹೆಚ್ಚಿನ ಕಾಲ ಜ್ವರ, ಶೀತ, ಕೆಮ್ಮು ಇದ್ದರೆ ಉದಾಸೀನ ಮಾಡಬಾರದು ಎಂದರು.

ಇಂದಿನಿಂದ 100 ದಿನಗಳ ಕಾಲ ಕ್ಷಯರೋಗದ ಕುರಿತು ಜಾಗೃತಿ ಮೂಡಿಸುವ ಈ ಅಭಿಯಾನ ನಡೆಯಲಿದೆ. ಸಾರ್ವಜನಿಕರು, ರೋಗಿಗಳಿಗೆ, ಅವರ ಕುಟುಂಬಕ್ಕೆ ಸಹಾಯ ಮಾಡಿ ಕ್ಷಯ ನಿವಾರಣೆಗೆ ಪಣ ತೊಡೋಣ, ಸಮಾಜವನ್ನು ಟಿಬಿ ಮುಕ್ತಗೊಳಿಸೋಣ ಎಂದು ಕರೆ ನೀಡಿದರು.

Health and Family Welfare Department ಡಬ್ಲ್ಯೂಹೆಚ್‌ಒ ಪ್ರತಿನಿಧಿ ಡಾ.ರಾಜೀವ್ ಮಾತನಾಡಿ, ಹೈರಿಸ್ಕ್ ಗುಂಪುಗಳನ್ನು ಭೇಟಿ ಮಾಡಿ, ಸಂಶಯ ಇರುವ ವ್ಯಕ್ತಿಗಳಿಗೆ ಸಿಬಿ ನ್ಯಾಟ್, ಕಫ ಪರೀಕ್ಷೆ ಮಾಡಿ, ಕ್ಷಯ ರೋಗ ಪತ್ತೆಯಾದಲ್ಲಿ ಚಿಕಿತ್ಸೆ ಕೊಡಿಸುವುದು. ಮತ್ತು ಸಿವೈಟಿಬಿ ಪರೀಕ್ಷೆ ಮುಖಾಂತರ ಸೋಂಕು ಇದೆಯಾ ಎಂದು ಪತ್ತೆ ಮಾಡಿ ನಿಯಂತ್ರಣ ಮಾಡುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಪತ್ತೆ ಮತ್ತು ಚಿಕಿತ್ಸೆ ಅತಿ ಮುಖ್ಯವಾಗಿದ್ದು ಎಲ್ಲರೂ ಸಹಕರಿಸಬೇಕು ಎಂದರು.

ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ನಾಗೇಶ್.ಬಿ.ಪಿ. ಪ್ರಾಸ್ತಾವಿಕವಾಗಿ ಮಾತನಾಡಿ, ಕೇಂದ್ರ ಸರ್ಕಾರವು ಕ್ಷಯರೋಗ ಮುಕ್ತ ಭಾರತವನ್ನಾಗಿ ಮಾಡಲು ಗುರಿ ಹೊಂದಿದ್ದು ಇದರ ಅಂಗವಾಗಿ ಡಿ.7 ರಿಂದ 2024 ರ ಮಾರ್ಚ್ 24 ರವರೆಗೆ 100 ದಿನಗಳ ಕಾಲ ಕ್ಷಯರೋಗ ಕುರಿತು ಅರಿವು ಮೂಡಿಸುವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ರೋಗಿಗಳ ಶೀಘ್ರ ಪತ್ತೆ ಹಚ್ಚುವುದು, ಗುಣಪಡಿಸುವುದು ಹಾಗೂ ಸಾರ್ವಜನಿಕರಲ್ಲಿ ರೋಗ ಲಕ್ಷಣಗಳ ಬಗ್ಗೆ ಜಾಗೃತಿ ಮೂಡಿಸುವುದು, ಶೇ.80 ರಷ್ಟು ಖಾಯಿಲೆ ಹರಡುವುದನ್ನು ತಡೆಗಟ್ಟುವುದು, ಮರಣ ಪ್ರಮಾಣವನ್ನು ಶೇ.90 ರಷ್ಟು ಕಡಿಮೆ ಮಾಡುವುದು, ರೋಗಿಗಳ ಟಿ.ಬಿ.ಪರೀಕ್ಷೆ ಮತ್ತು ಚಿಕಿತ್ಸೆಗೆ ತಗಲುವ ವೆಚ್ಚವನ್ನು ಶೂನ್ಯ ಮಾಡುವುದು ಅಭಿಯಾನದ ಉದ್ದೇಶವಾಗಿದೆ.
ಜಾಥಾ ನಡೆಸುವುದು ಹಾಗೂ ನಿಕ್ಷಯ್ ಮಿತ್ರರನ್ನು ಹುಡುಕಿ ರೋಗಿಗಳಿಗೆ ಪೌಷ್ಟಿಕ ಆಹಾರ ಒದಗಿಸುವುದು. ಮತ್ತು ಧಾರ್ಮಿಕ ನಾಯಕರಿಂದ ಸಮಾಜದಲ್ಲಿ ಖಾಯಿಲೆ ಬಗ್ಗೆ ಅರಿವು ಮೂಡಿಸುವುದು. ಪ್ರತಿಜ್ಞೆ ಪಡೆಯುವುದು ಹಾಗೂ ಬಿತ್ತಿ ಪತ್ರಗಳ ಮುಖಾಂತರ ಪ್ರಚಾರ ಮಾಡುವುದು. ಹಬ್ಬದ ದಿನಗಳಲ್ಲಿ ಹೆಚ್ಚಿನ ಪ್ರಚಾರ ನಡೆಸುವುದು ಮತ್ತು ಮಾಧ್ಯಮಗಳ ಮೂಲಕ ಖಾಯಿಲೆ ಬಗ್ಗೆ ಹೆಚ್ಚಿನ ಪ್ರಚಾರ ನಡೆಸಲಾಗುವುದು.
ಕ್ಷಯರೋಗವು ಮೈಕೋಬ್ಯಾಕ್ಟೀರಿಯಂ ಟ್ಯುಬರ್‌ಕ್ಯುಲೋಸಿಸ್ ಎಂಬ ಸೂಕ್ಷö್ಮ ರೋಗಾಣುವಿನಿಂದ ಬರುತ್ತದೆ. ರೋಗಿಯು ಕೆಮ್ಮಿದಾಗ ಅಥವಾ ಸೀನಿದಾಗ ಹೊರಬರುವ ತುಂತುರು ರೋಗಾಣುಗಳು ಗಾಳಿಯ ಮೂಲಕ ಆರೋಗ್ಯವಂತ ವ್ಯಕ್ತಿಯ ಶ್ವಾಸಕೋಶ ಸೇರಿ ಸೋಂಕು ಉಂಟು ಮಾಡುತ್ತದೆ.

ಜಿಲ್ಲೆಯ ಪ್ರಗತಿಯು ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದ್ದು ಜಿಲ್ಲೆಯಲ್ಲಿ 140 ಪ್ರಕರಣಗಳಿದ್ದು, ಶೆ.92 ರೋಗಿಗಳನ್ನು ತಪಾಸಣೆಗೆ ಒಳಪಡಿಸಿ, ರೋಗಿಗಳ ಪತ್ತೆ ಹಚ್ಚುವಿಕೆ ಶೇ.102 ಇದ್ದು ಗುಣ ಹೊಂದುವವರ ಸಂಖ್ಯೆ ಶೇ.89 ರಷ್ಟಿದೆ. ಮರಣ ಹೊಂದಿರುವ ಸಂಖ್ಯೆ ಶೇ.6 ರಷ್ಟು ಇರುತ್ತದೆ.
ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲಾ ಕ್ಷಯರೋಗಿಗಳಿಗೆ ಸರ್ಕಾರದಿಂದ ಪ್ರತಿ ಮಾಹೆ ರೂ.500 ಪೌಷ್ಟಿಕ ಆಹಾರಕ್ಕಾಗಿ ಡಿಬಿಟಿ ಮುಖಾಂತರ ನೀಡಲಾಗುತ್ತಿದೆ. ಅಲ್ಲದೇ ನಿಕ್ಷಯ್ ಮಿತ್ರರಿಂದ ಪೌಷ್ಟಿಕ ಆಹಾರ ನೀಡಲಾಗುತ್ತಿದೆ.

2023 ರಲ್ಲಿ ಜಿಲ್ಲೆಗೆ Pಕೇಂದ್ರ ಸರ್ಕಾರದಿಂದ ನೀಡುವ ಕಂಚಿನ ಪದಕ ದೊರೆತಿದೆ. ಈಲ್ಲೆಯಲ್ಲಿ 71 ಗ್ರಾ.ಪಂ ಗಳನ್ನು ಕ್ಷಯ ಮುಕ್ತ ಗ್ರಾಮ ಪಂಚಾಯಿತಿಗಾಗಿ ಆಯ್ಕೆ ಮಾಡಿದ್ದು ಚಟುವಟಿಕೆಗಳು ಚಾಲ್ತಿಯಲ್ಲಿ ಇದೆ ಎಂದ ಅವರು ರೋಗ ಪತ್ತೆ, ಚಿಕಿತ್ಸೆ ಮತ್ತು ನಿಯಂತ್ರಣದ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಟಿಬಿ ಮುಕ್ತ ಭಾರತ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಹಾಗೂ ರುದ್ರಪ್ಪ ಜೋಗಿ ತಂಡದಿಂದ ಕ್ಷಯ ರೋಗ ಕುರಿತು ಜಾಗೃತಿ ಮೂಡಿಸುವ ಜಾನಪದ ಗೀತೆಗಳನ್ನು ಪ್ರಸ್ತುತಪಡಿಸಲಾಯಿತು.

ಕ್ಷಯ ರೋಗಿಗಳಿಗೆ ಉಚಿತ ಪೌಷ್ಟಿಕ ಆಹಾರ ನೀಡಿ ಸಹಕರಿಸಿದ ನಿಕ್ಷಯ್ ಮಿತ್ರರಾದ ರಾಘವೇಂದ್ರ ಭಟ್, ಕಿರಣ್, ರಮೇಶ್ ಇವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
ಟಿಬಿ ರೋಗದಿಂದ ಮುಕ್ತರಾಗಿ ಇತರೆ ರೋಗಿಗಳು ಮುಕ್ತರಾಗಲು ಉತ್ತೇಜಿಸುತ್ತಿರುವ ಪ್ರಶಾಂತ್ ರವರಿಗೆ ಟಿಬಿ ಚಾಂಪಿಯನ್ ಎಂದು ಸನ್ಮಾನಿಸಲಾಯಿತು.

ಈ ವೇಳೆ ಅವರು ತಾವು ಟಿಬಿ ಮುಕ್ತರಾದ ಬಗ್ಗೆ ಅನುಭವ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಆರ್‌ಸಿಹೆಚ್‌ಒ ಡಾ.ಮಲ್ಲಪ್ಪ, ಡಿಎಸ್‌ಓ ಡಾ.ನಾಗರಾಜ್ ನಾಯ್ಕ್, ಎನ್‌ವಿಬಿಡಿಸಿ ಅಧಿಕಾರಿ ಡಾ.ಗುಡುದಪ್ಪ ಕುಸಬಿ, ಡಿಎಲ್‌ಓ ಡಾ.ಕಿರಣ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಲಿಂಗರಾಜ್,
ಟಿಹೆಚ್‌ಓ ಡಾ.ಚಂದ್ರಶೇಖರ್, ತುಂಗಾ ನಗರ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಭೀಮಪ್ಪ, ಡಾ.ಮೋಹನ್, ಡಾ.ಹರ್ಷವರ್ಧನ್ ಪಾಲ್ಗೊಂಡಿದ್ದರು.

ಆರೋಗ್ಯ ಇಲಾಖೆಯ ರೇಷ್ಮಾ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಅಖ್ತರ್ ವಂದಿಸಿದರು

MESCOM ಡಿಸೆಂಬರ್ 10. ಎಂ.ಆರ್ಎಸ್. ಸುತ್ತಮುತ್ತ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

0

MESCOM ಶಿವಮೊಗ್ಗ ತಾಲ್ಲೂಕು, ಎಂ.ಆರ್.ಎಸ್. 220/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿರುವ ಮಾರ್ಗದಲ್ಲಿ ತ್ರೈಮಾಸಿಕ ನಿರ್ವಹಣ ಕಾಮಗಾರಿ ಇರುವುದರಿಂದ ಡಿ.10 ಬೆಳಗ್ಗೆ 09.30 ರಿಂದ ಸಂಜೆ 3.00 ಗಂಟೆ ವರಗೆ ಹೊಸಳ್ಳಿ, ರಾಮೇನಕೊಪ್ಪ, ಕಲ್ಲೂರು, ಅಗಸವಳ್ಳಿ, ಹೊಸೂರು, ಮತ್ತೂರು, ಲಕ್ಷ್ಮೀಪುರ, ಹೊನ್ನಾಪುರ, ಈಚಲವಾಡಿ, ಹಾಯ್‌ಹೊಳೆ, ಪುರದಾಳು, ಬೆಳ್ಳುರು, ಬಸವಾಪುರ, ಭಾರತಿನಗರ, ಅನುಪಿನಕಟ್ಟೆ, ಗೋವಿಂದಾಪುರ, ಹನುಮಂತಾಪುರ, ಗಾಂಧಿನಗರ, ಖಾನೆಹಳ್ಳಿ, ಭೋವಿಕಾಲೋನಿ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಕೋರಿದೆ.

World Human Rights Day ಜಿಲ್ಲಾಡಳಿತದಿಂದ ಡಿಸೆಂಬರ್ 10 ರಂದು ವಿಶ್ವ ಮಾನವ ಹಕ್ಕುಗಳ ದಿನಾಚರಣೆಗೆ ಪೂರ್ವ ಸಿದ್ಧತೆ

0

World Human Rights Day ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸ್ಥಳೀಯ ಸರ್ಕಾರೇತರ ಸಂಸ್ಥೆಗಳಾದ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಸಮಿತಿ ಹಾಗೂ ಇತರೆ ಸಂಸ್ಥೆಗಳ ಸಹಯೋಗದಲ್ಲಿ ಡಿ.10 ರ ಬೆಳಿಗ್ಗೆ 9.45 ಕ್ಕೆ ಜಿ.ಪಂ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆಯನ್ನು ಏರ್ಪಡಿಸಲಾಗಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮಂಜುನಾಥ ನಾಯಕ್ ನೆರವೇರಿಸುವರು. ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ವಹಿಸುವರು. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಜಿ.ಪಂ ಸಿಇಓ ಹೇಮಂತ್ ಎನ್, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೊಷ್ ಎಂ ಎಸ್, ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ಜಿಲ್ಲಾ World Human Rights Day ನ್ಯಾಯವಾದಿಗಳ ಸಂಘದ ಅಧ್ಯಕ್ಷ ಜಿ.ಆರ್.ರಾಘವೇಂದ್ರ ಸ್ವಾಮಿ, ಕರ್ನಾಟಕ ಮಾನ ಹಕ್ಕುಗಳ ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷರು ಹಾಗೂ ದಕ್ಷಿಣ ಏಷ್ಯಾ ಖಂಡ ಮಾನವ ಹಕ್ಕುಗಳ ಒಕ್ಕೂಟದ ರಾಷ್ಟಾçಧ್ಯಕ್ಷ ಶ್ರೀನಿವಾಸಗೌಡರು, ಕರ್ನಾಕ ಮಾನವ ಹಕ್ಕುಗಳ ಸಮಿತಿಯ ರಾಜ್ಯ ಉಪಾಧ್ಯಕ್ಷ ಪ್ರದೀಪ್ ಮೀತಲ್, ಕರ್ನಾಟಕ ಮಾನವ ಹಕ್ಕುಗಳ ಸಮಿತಿ ಜಿಲ್ಲಾಧ್ಯಕ್ಷ ಎನ್.ವಿ.ಕೃಷ್ಣ, ಕರ್ನಾಟಕ ಮಾನವ ಹಕ್ಕುಗಳ ಸಮಿತಿ ರಾಜ್ಯ ಸಹ ಕಾರ್ಯದರ್ಶಿ ಎಂ.ಎಂ.ಗೋಪಿ, ಕರ್ನಾಟಕ ಮಾನವ ಹಕ್ಕುಗಳ ಸಮಿತಿ ರಾಜ್ಯ ಸಹ ಕಾರ್ಯದರ್ಶಿ ಮಹೇಶ್ ಎನ್ ಅತಿಥಿಗಳಾಗಿ ಪಾಲ್ಗೊಳ್ಳುವರು

Karnataka Forest Department ಕರ್ತವ್ಯಲೋಪದ ಹಿನ್ನೆಲೆ. ತಾಳಗುಪ್ಪ ಉಪ ಅರಣ್ಯ ವಲಯಾಧಿಕಾರಿ ಅಮಾನತು

0

Karnataka Forest Department ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ತಾಳಗುಪ್ಪ ಉಪ ಅರಣ್ಯ ವಲಯ ಅಧಿಕಾರಿ ಎನ್ ಸಂತೋಷ್ ಕುಮಾರ್ ಅವರನ್ನು ಕರ್ತವ್ಯ ನಿರ್ಲಕ್ಷ್ಯ ಆರೂಪದ ಹಿನ್ನೆಲೆಯಲ್ಲಿ ಅಮಾನತ್ತು ಮಾಡಲಾಗಿದೆ.

Karnataka Forest Department ಶಿವಮೊಗ್ಗ ಅರಣ್ಯ ಸಂಚಾರಿ ದಳದ ಡಿಸಿಎಫ್ ಹಾಗೂ ಸಾಗರ ವಿಭಾಗದ ಡಿ ಸಿ ಎಫ್ ಶಿಫಾರಸ್ಸಿನ ಅನ್ವಯ ಇಲಾಖೆ ವಿಚಾರಣೆ ಬಾಕಿ ಉಳಿಸಿ ಅಮಾನತ್ತು ಮಾಡಲಾಗಿದೆ.
ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ನಷ್ಟ ಉಂಟಾಗಿದ್ದು, ಅಕೇಶಿಯಾ ನಾಟ ಕಡಿತಲೆ ಪತ್ತೆ ಹಚ್ಚುವುದು, ತಡೆಯುವುದು ಕಡಿತಲೆ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸದೆ ಇರುವುದು ಹಾಗೂ ಮತ್ತಿತರ ಅಪರೂಪದ ಹಿನ್ನೆಲೆಯಲ್ಲಿ ಅಮಾನತ್ತು ಮಾಡಲಾಗಿದೆ ಎಂದು ತಿಳಿದು ಬಂದಿದೆ .

ಶಿವಮೊಗ್ಗ ಯಕ್ಷಗಾನ ರಸಿಕರ ಪ್ರೋತ್ಸಾಹಕ್ಕೆ ಸಾಟಿಯಿಲ್ಲ- ಕೆಳಮನೆ ರಾಮರಾಯರು

0

ಸಾಗರದ ಹೆಗ್ಗೋಡಿನ ಸಾಕೇತ ಕಲಾವಿದರಿಂದ
ಭೀಷ್ಮಪರ್ವ ಯಕ್ಷಗಾನ ಪ್ರಸಂಗ ಪ್ರದರ್ಶನ ನಡೆಯಿತು. ಸುಮಾರು ನಲವತ್ತಕ್ಕೂ ಹೆಚ್ಚು ವರ್ಷಗಳಿಂದ ಹವ್ಯಾಸಿಗಳೇ ತಂಡದ ಸದಸ್ಯರಾಗಿ, ಸಮರ್ಥವಾಗಿ ಯಕ್ಷರಂಗದ ಸೇವೆಯನ್ನ ಮಾಡಿಕೊಂಡು ಬರುತ್ತಿರುವ ಸಾಕೇತ ಕಲಾವಿದರು ವೈವಿಧ್ಯ ಪೂರ್ಣ ಪ್ರಸಂಗಗಳ ಪ್ರದರ್ಶನಕ್ಕೆ ಹೆಸರುವಾಸಿಯಾಗಿದ್ದಾರೆ.

ಶಿವಮೊಗ್ಗದಲ್ಲಿ ಡಿಸೆಂಬರ್ ಏಳರಂದು “ಭೀಷ್ಮ ಪರ್ವ” ಯಕ್ಷಗಾನ ಪ್ರದರ್ಶನ ನಡೆಯಿತು.
ಸ್ಥಳೀಯ ಸಾಕೇತದ ಮಿತ್ರರ ಬಳಗ ಈ ಪ್ರದರ್ಶನವನ್ನ ಶಿವಮೊಗ್ಗದ ಸುವರ್ಣ ಸಂಸ್ಕೃತಿ ಭವನದಲ್ಲಿ ಆಯೋಜಿಸಿತ್ತು.
ಮಿತ್ರರ ಪರವಾಗಿ
ಹಿರಿಯ ಲೇಖಕ ಲಕ್ಷ್ಮೀನಾರಾಯಣ ಕಾಶಿ “ಪ್ರಸ್ತುತ ಕಾಲಮಾನದಲ್ಲಿ ಯಕ್ಷಗಾನ ತಂಡಗಳ ನಿರ್ವಹಣೆಯೇ ಸವಾಲಾಗಿದೆ. ಅದರಲ್ಲೂ ಹವ್ಯಾಸಿಗಳೇ ಒಂದಾಗಿ ತಂಡ ರಚಿಸಿ ಹೆಗ್ಗೋಡು ಪ್ರಾಂತ್ಯದಲ್ಲಿ ಸಂಘಟಿಸಿರುವುದು ಅಪರೂಪದ ಸಾಹಸ ಎಂದರು.
ಸಾಕೇತ ಕಲಾವಿದರು ಅಭಿನಯಿಸಿದ
“ಭೀಷ್ಮಪರ್ವ” ಯಕ್ಷಗಾನ ರಸಿಕರ ಮನಗೆದ್ದಿತು.
ಪಾತ್ರಧಾರಿಗಳ ಕುಶಲ ನುಡಿಗಾರಿಕೆ,
ವೃತ್ತಿ ಕಲೆಯ ಸಮೃದ್ಧ
ಕಲಾವಂತಿಕೆ, ಆಭೂಷಣ, ಅಭಿನಯ ಪ್ರೇಕ್ಷಕರನ್ನ ಮಹಾಭಾರತ ಲೋಕಕ್ಕೆ ಕರೆದೊಯ್ದವು.
ಹಿರಿಯ ಯಕ್ಷಗಾನ ಭಾಗವತ ಕೆಳಮನೆ ರಾಮರಾಯರ ಭಾಗವಂತಿಕೆಗೆ ಎಲ್ಲರೂ ತಲೆದೂಗಿದರು.
ರಾಮರಾಯರ ಯಕ್ಷರಂಗದ ಸೇವೆಯನ್ನ ಸ್ಮರಿಸಿ
ಸಾಕೇತದ ಸ್ನೇಹಿತರು
ಅವರಿಗೆ ಆತ್ಮೀಯ ಸನ್ಮಾನ ಏರ್ಪಡಿಸಿದ್ದರು.
ಡಾ.ರತ್ನಾಕರ ಅವರು ರಾಮರಾಯರ ಪರಿಚಯ ಮಾಡಿದರು.
ಇದೇ ಸಂದರ್ಭದಲ್ಲಿ‌ ಶ್ರೀಮತಿ ರಾಮರಾಯರನ್ನೂ ವೇದಿಕೆಗೆ ಆಹ್ವಾನಿಸಲಾಗಿತ್ತು.
ಪುಷ್ಪಮಾಲಿಕೆಯನ್ನ
ರಾಮರಾಯರ ಶ್ರೀಮತಿಯವರೇ ಪತಿಯ ಕೊರಳಿಗೆ ಹಾಕಿ ಸನ್ಮಾನ ಪ್ರಕ್ರಿಯೆಯನ್ನ ಪ್ರೇಕ್ಷಕರ ಮನದಲ್ಲಿ
ಅಚ್ಚೊತ್ತುವಂತೆ ಮಾಡಿದರು.
ಸನ್ಮಾನಕ್ಕೆ ಉತ್ತರಿಸಿದ ರಾಮರಾಯರು
” ಶಿವಮೊಗ್ಗದ ಮಿತ್ರರು
ತಮ್ಮ ಯಕ್ಷರಂಗದ ಸೇವೆಗೆ ಯಾವಾಗಲೂ ಪ್ರೋತ್ಸಾಹ ನೀಡುತ್ತಿದ್ದಾರೆ. ಪ್ರತಿಕ್ಷಣದಲ್ಲೂ ತಮ್ಮ ಪ್ರಯೋಗಗಳ ಬಗ್ಗೆ ವಿಚಾರಿಸುತ್ತಿರುತ್ತಾರೆ.
ಕಲಿಯಲು‌ ಬಂದವರಿಗೆ ನಿರ್ವಂಚನೆಯಿಂದ ಕಲಿಸಿದ್ದೇನೆ.
ಸಾಂಪ್ರದಾಯಿಕವಾಗಿ ಹಿರಿಯರು ಕಲಿಸಿದ ಹಾದಿಯಲ್ಲೇ ಯಕ್ಷಗಾನ ಕಲೆಯ ಪರಂಪರೆ ಮುಂದುವರೆಸಿಕೊಂಡು ಬಂದಿದ್ದೇನೆ.” ಎಂದು ಹೇಳುವಾಗ ಕಣ್ಣಲ್ಲಿ ಆನಂದ ಭಾಷ್ಪವಿತ್ತು.
ಹೆಚ್ವು ಮಾತನಾಡಲಾಗದೇ
ಅರ್ಧಕ್ಕೇ ಮಾತು ಮುಗಿಸಿ ಕೈ ಮುಗಿದರು.

ಭೀಷ್ಮ ಪಾತ್ರಧಾರಿ ಮಂಜುನಾಥ್ ಅವರು ಸಾಕೇತ ಕಲಾವಿದರ ಪರಿಚಯ ಮಾಡಿಕೊಟ್ಟರು.
ವಂದನಾರ್ಪಣೆಯೊಂದಿಗೆ
ಕಾರ್ಯಕ್ರಮ ಮುಕ್ತಾಯವಾಯಿತು.

Government of Bangladesh ಬಾಂಗ್ಲಾದೇಶ್ ಹಿಂದೂಗಳಿಗೆ ಭದ್ರತೆ ಎಂದು ನಿಶ್ಚಿತ?

0

Government of Bangladesh ಬಾಂಗ್ಲಾದೇಶದಲ್ಲಿ ಹಿಂದು ಸಮುದಾಯಕ್ಕೆ ನೀಡುತ್ತಿರುವ ಕಿರುಕುಳ ಇನ್ನೂ ನಿಂತಿಲ್ಲ. ಭಾರತ ಸರ್ಕಾರವೂ ಸರಿಯಾಗಿ ಬಾಂಗ್ಲಾ ದೇಶದ ಸರ್ಕಾರಕ್ಕೆ ಬಿಸಿಮುಟ್ಟಿಸಿದರೂ ಏನೂ ಅಗಿಲ್ಲ.
ಈಗ ಬಾಂಗ್ಲಾದೇಶ ಸರ್ಕಾರವು ರಾಷ್ಟ್ರಪಿತ ಮುಜಿಬುರ್ ರೆಹಮಾನ್ ಅವರ ಚಿತ್ರವನ್ನು ಕರೆನ್ಸಿ ನೋಟುಗಳಿಂದ ತೆಗೆದುಹಾಕಲೂ ಮುಂದಾಗಿದೆಯಂತೆ.
ಪೂರ್ವ ಪಾಕಿಸ್ತಾನವಾಗಿ ನರಳುತ್ತಿದ್ದ ಈ ಪ್ರದೇಶದ ಸ್ವಾತಂತ್ರ್ಯಕ್ಕೆ ಭಾರತ ನೀಡಿದ ನೆರವು ಕಡಿಮೆಯೇನಲ್ಲ. ಆದರೂ ಈಗ ಭಾರತೀಯ ಹಿಂದೂ ಸಮುದಾಯಕ್ಕೆ ಅಲ್ಲಿ ಶಾಂತಿ ನೆಮ್ಮದಿ ಸಿಗದಂತಾಗಿದೆ.

Government of Bangladesh ಬಾಂಗ್ಲಾದೇಶ ಮತ್ತೆ ಪೂರ್ವ ಪಾಕಿಸ್ತಾನವಾಗುವ ಹಾದಿಯಲ್ಲಿದೆ ಎಂದು ರಾಜಕೀಯ ಪರಿಣಿತರ ಅಂಬೋಣ. ಒಟ್ಟಿನಲ್ಲಿ ಈಗ ಬಾಂಗ್ಲಾದೇಶ ಹಿಂದೂಗಳಿಗೆ ಅಸುರಕ್ಷಿತ ರಾಷ್ಟ್ರವಾಗುತ್ತಿದೆ.

ನೊಬೆಲ್ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಯೂನಸ್ ಕೂಡ ಬಾಂಗ್ಲಾದೇಶದ ಆರ್ಥಿಕತೆಯನ್ನು ಹಿಂದೆಂದಿಗಿಂತಲೂ ನಾಶಪಡಿಸುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ಸುದ್ದಿಯಾಗಿದೆ.
ಪುಟ್ಟ ದೇಶದಲ್ಲಿ ಹಿಂದೂಗಳ ಭದ್ರತೆ ಬಗ್ಗೆ ಬಿಜೆಪಿ, ಕಾಂಗ್ರೆಸ್ ಹಾಗೂ ಇತರ ರಾಜಕೀಯ ಪಕ್ಷಗಳು ಗಂಭೀರ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ. ಸರ್ಕಾರದ ಗಮನ ಸೆಳೆಯಲು ನಡೆಯುತ್ತಿರುವ ಆಂದೋಳನಗಳು
ಮಂದವಾಗಿವೆ.

ಲೋಕಸಭೆಯಲ್ಲಿ ಕೇಂದ್ರದ ವಿದೇಶಾಂಗ ಮಂತ್ರಿ ಜೈಶಂಕರ್ ಅವರು ಸಂಸದರೊಭ್ಬರು ಕೇಳಿದ ಪ್ರಶ್ನೆಗೆ ನೀಡಿದ ಉತ್ತರದ ಆಯ್ದಭಾಗ ಇಲ್ಲಿ ಪ್ರಸ್ತುತವಾಗಿದೆ.

ಆಯ್ದಭಾಗ:
ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ದುರ್ಗಾಪೂಜಾ ಉತ್ಸವದ ಸಂದರ್ಭದಲ್ಲಿ ದೇವಾಲಯಗಳು ಮತ್ತು ಪೂಜಾ ಮಂಟಪಗಳ ಮೇಲೆ ದಾಳಿಯ ವರದಿಗಳು ಸಹ ಬೆಳಕಿಗೆ ಬಂದಿವೆ. ಢಾಕಾದ ತಂತಿಬಜಾರ್‌ನಲ್ಲಿನ ಪೂಜಾ ಮಂಟಪದ ಮೇಲಿನ ದಾಳಿ ಮತ್ತು 2024 ರ ದುರ್ಗಾ ಪೂಜೆಯ ಸಮಯದಲ್ಲಿ ಸತ್ಖಿರಾದ ಜೆಶೋರೇಶ್ವರಿ ಕಾಳಿ ದೇವಸ್ಥಾನದಲ್ಲಿ ಕಳ್ಳತನದ ಬಗ್ಗೆ ಸರ್ಕಾರ ತನ್ನ ಗಂಭೀರ ಕಳವಳವನ್ನು ವ್ಯಕ್ತಪಡಿಸಿದೆ. ಈ ದಾಳಿಯ ನಂತರ, ಬಾಂಗ್ಲಾದೇಶ ಸರ್ಕಾರವು ಸೇನೆಯ ನಿಯೋಜನೆ ಸೇರಿದಂತೆ ವಿಶೇಷ ಭದ್ರತೆಯನ್ನು ಒದಗಿಸಲು ಸೂಚನೆಗಳನ್ನು ನೀಡಿತ್ತು ಮತ್ತು ದುರ್ಗಾ ಪೂಜೆಯ ಶಾಂತಿಯುತ ಆಚರಣೆಗಳನ್ನು ಖಚಿತಪಡಿಸಿಕೊಳ್ಳಲು

ಢಾಕಾದಲ್ಲಿರುವ ಭಾರತದ ಹೈಕಮಿಷನ್ ಬಾಂಗ್ಲಾದೇಶದ ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರೆಸಿದೆ. ಅಲ್ಪಸಂಖ್ಯಾತರು ಸೇರಿದಂತೆ ಬಾಂಗ್ಲಾದೇಶದ ಎಲ್ಲಾ ನಾಗರಿಕರ ಜೀವನ ಮತ್ತು ಸ್ವಾತಂತ್ರ್ಯದ ರಕ್ಷಣೆಯ ಪ್ರಾಥಮಿಕ ಜವಾಬ್ದಾರಿಯು ಬಾಂಗ್ಲಾದೇಶದ ಸರ್ಕಾರದ ಮೇಲಿದೆ.
ಇಷ್ಟೆಲ್ಲ ಆದರೂ ಬಾಂಗ್ಲಾ ದೇಶ್ ಅಧ್ಯಕ್ಷ‌‌ರು ಮಾಧ್ಯಮಗಳಲ್ಲಿ ಭರವಸೆಯ ಮಾತಾಡಿದ್ದಾರೆ ಅಷ್ಟೆ. ಹಿಂದೂಗಳ ರಕ್ಷಣೆಯ ಬಗ್ಗೆ ಗಂಭೀರ ಕ್ರಮ ಕೈಗೊಂಡಿರುವ ಬಗ್ಗೆ
ಸುದ್ದಿಯೇ ಇಲ್ಲ.

World Day of Persons with Disabilities ಅಂಗವಿಕಲರಿಗೆ ಕ್ರೀಡಾಸ್ಪರ್ಧೆ ವಿವಿಧ ಕ್ರೀಡೆಗಳಲ್ಲಿ ಆಶಾಕಿರಣ ಶಾಲೆಯ ಮಕ್ಕಳಿಗೆ 5 ಚಿನ್ನದ ಪದಕ

0

World Day of Persons with Disabilities ಶಿವಮೊಗ್ಗ ನಗರದ ಬಿ. ಹೆಚ್. ರಸ್ತೆಯ ಪ್ರಧಾನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿಕಲಚೇತನ ಮಕ್ಕಳಿಗೆ ಸಮಗ್ರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಮಗ್ರ ಶಿಕ್ಷಣ ಅಭಿಯಾನ ಯೋಜನೆ ಅಡಿಯಲ್ಲಿ ಡಿ. 5 ರಂದು ವಿಶ್ವ ವಿಕಲ ಚೇತನ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಬಿ.ಇ.ಓ ರಮೇಶ್ ಸಸಿ ನೆಡುವುದರ ಮೂಲಕ ಉದ್ಘಾಟಿಸಿದರು.ಸುಮಾರು 200 ಮಕ್ಕಳು 150 ಪೋಷಕರು ಭಾಗವಹಿಸಿದರು. ಭಾಗವಹಿಸಿದ ಮಕ್ಕಳಿಗೆ ಆಟೋಟ ಸಾಂಸ್ಕೃತಿಕ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಮನ್ವಯಾಧಿಕಾರಿಗಳಾದ World Day of Persons with Disabilities ಶಿವಪ್ಪ ಸಂಗಣ್ಣ, ಎಪಿಸಿ ಶ್ರೀಮತಿ ಟಿ.ಪಿ,ಓ ನಿರಂಜನ್ ಮೂರ್ತಿ ಧನಂಜಯ್ ಸುಮತಿ, ಬಸವರಾಜ್ ಹಿರೇಮಠ್, ಬಿ.ಐ.ಇ.ಆರ್.ಟಿ ಮಂಜಯ್ಯ, ಗಂಗಮ್ಮ ರೇಖಾ ಜಯಲಕ್ಷ್ಮೀ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಸಿದ್ದಾರೂಢ ಸಿದ್ದಾಶ್ರಮ ಖಂಡೇರಾಯನಹಳ್ಳಿ ಇವರ ಭಕ್ತರು ವ್ಯವಸ್ಥೆ ಮಾಡಿದ್ದರು.

B. Y. Raghavendra ಸರ್ಕಾರಿ ಶಾಲೆಗಳಲ್ಲಿರುವ ಗುಣಮಟ್ಟದ ಶಿಕ್ಷಕರು,ಬೋಧನೆಗಳನ್ನ ವಿದ್ಯಾರ್ಥಿಗಳು ಸಮರ್ಥವಾಗಿ ಬಳಸಿಕೊಳ್ಳಬೇಕು- ಬಿ.ವೈ.ರಾಘವೇಂದ್ರ

0

B. Y. Raghavendra ಮಕ್ಕಳ ಭವಿಷ್ಯ ಬೆಳಗಿಸುವ ನಿಟ್ಟಿನಲ್ಲಿ ಸರ್ಕಾರ ಶಿಕ್ಷಣ ನೀಡುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಕರು, ಶಿಕ್ಷಣ ಮತ್ತು ಇತರೆ ಸೌಲಭ್ಯಗಳಿದ್ದು ವಿದ್ಯಾರ್ಥಿಗಳು ಇದರ ಸದ್ಬಳಕೆ ಮಾಡಿಕೊಂಡು ಮುಂದೆ ಬರಬೇಕೆಂದು ಸಂಸದರಾದ ಬಿ.ವೈ.ರಾಘವೇಂದ್ರ ನುಡಿದರು.
ರಾಷ್ಟ್ರೀಯ ಗ್ರಾಮೀಣ ಸಾಕ್ಷರತಾ ಮಿಷನ್ ಅಡಿಯಲ್ಲಿ ಸಂಸದರ ನಿಧಿಯಿಂದ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳಿಗೆ ಉಚಿತ ಬ್ಯಾಗ್ ವಿತರಣೆ ಕಾರ್ಯಕ್ರಮವನ್ನು ಶುಕ್ರವಾರ ದುರ್ಗಿಗುಡಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ಗಳನ್ನು ವಿತರಣೆ ಮಾಡಿ ಅವರು ಮಾತನಾಡಿದರು.
ರಾಷ್ಟಿçÃಯ ಗ್ರಾಮೀಣ ಸಾಕ್ಷರತಾ ಮಿಷನ್ ಅಡಿ ಸಂಸದರ ನಿಧಿಯಲ್ಲಿ ಲೋಕಸಭಾ ಕ್ಷೇತ್ರದ 1 ಲಕ್ಷ ಸರ್ಕಾರಿ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ವಿತರಣೆ ಮಾಡಬಹುದೆಂದು ತಿಳಿದ ತಕ್ಷಣ ಕಾರ್ಯೋನ್ಮುಖನಾಗಿದ್ದೇನೆ. ತಮ್ಮ ಕ್ಷೇತ್ರದಲ್ಲಿ ಒಟ್ಟು 2013 ಶಾಲೆಗಳಿಗೆ 1 ರಿಂದ 7 ನೇ ತರಗತಿವರೆಗಿನ 94056 ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ನೀಡಲಾಗುತ್ತಿದೆ ಎಂದು ತಿಳಿಸಿದರು.
ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಕರು ಇದ್ದು, ಕಂಪ್ಯೂಟರ್ ಶಿಕ್ಷಣ ಸಹ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಮೊಬೈಲ್ ಬಳಕೆಗೆ ಕಡಿವಾಣ ಹಾಕಬೇಕು. ಕಂಪ್ಯೂಟರ್ , ಡಿಜಿಟಲ್ ಸಾಕ್ಷರರಾಗಬೇಕು. ಯುನೈಟೆಡ್ ಕಿಂಗ್‌ಡಮ್ 18 ವರ್ಷ ತುಂಬದ ಮಕ್ಕಳು ಮೊಬೈಲ್ ಬಳಸಬಾರದೆಂದು ನಿರ್ಧಾರ ಕೈಗೊಂಡಿದೆ. ನಮ್ಮಲ್ಲಿಯೂ ಮಕ್ಕಳು ಶಾಲೆಗೆ ಮೊಬೈಲ್ ತರುವಂತಿಲ್ಲ. ಓದಿನ ಕಡೆ, ಕಂಪ್ಯೂಟರ್ ಸಾಕ್ಷರತೆ ಕಡೆ ಹೆಚ್ಚಿನ ಗಮನ ಹರಿಸಬೇಕು. ಇದು ವಿದ್ಯಾರ್ಥಿಗಳ ಮುಂದಿನ ಔದ್ಯೋಗಿಕ ಜೀವನಕ್ಕೆ ಸಹಕಾರಿಯಾಗಲಿದೆ ಎಂದರು.
B. Y. Raghavendra ಜಿಲ್ಲೆಯಲ್ಲಿ ಕಳೆದ 12 ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ತರ ಬೆಳವಣಿಗೆ ಆಗಿದೆ. ಕೃಷಿ ಮತ್ತು ತೋಟಗಾರಿಕೆ ಕಾಲೇಜು, ಸರ್ಕಾರಿ ಮೆಡಿಕಲ್ ಕಾಲೇಜು, ರಾಷ್ಟಿçÃಯ ರಕ್ಷಾ ವಿಶ್ವವಿದ್ಯಾಲಯ, ಇದೀಗ ಆಯುರ್ವೇದ ಕಾಲೇಜು ಹೀಗೆ ಸಾಕಷ್ಟು ಉನ್ನತ ಶಿಕ್ಷಣ ಸಂಸ್ಥೆಗಳು ಉತ್ತಮ ಶಿಕ್ಷಣ ನೀಡುತ್ತಿವೆ. ದಕ್ಷಿಣ ಭಾರತದಲ್ಲೇ ಮೊದಲನೆಯದಾದ ರಾಷ್ಟಿçÃಯ ರಕ್ಷಾ ವಿಶ್ವವಿದ್ಯಾಲಯಕ್ಕೆ ಈಗ ತಮ್ಮಡಿಹಳ್ಳಿಯಲ್ಲಿ 25 ಎಕರೆ ಜಾಗ ಮಂಜೂರಾಗಿದ್ದು ಶಾಶ್ವತ ಕಟ್ಟಡ ನಿರ್ಮಾಣಕ್ಕೆ ರೂ.25 ಕೋಟಿ ಮಂಜೂರಾಗಿದೆ. ಇಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಪ್ಲೊಮಾ ಮತ್ತು ಪದವಿ ನಂತರ ಉತ್ತಮ ಕೋರ್ಸ್ಗಳಿದ್ದು, ಈ ಕೋರ್ಸ್ ಮುಗಿದ ನಂತರ ಉತ್ತಮ ಉದ್ಯೋಗಾವಕಾಶಗಳು ಸಿಗಲಿದೆ. ಆದ್ದರಿಂದ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕೆಂದರು.
ಶಾಸಕರಾದ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಸಂಸದರು ತಮ್ಮ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಕೆಲಸಗಳನ್ನು ಅತ್ಯಂತ ಶ್ರದ್ಧೆಯಿಂದ ಮಾಡುತ್ತಿದ್ದಾರೆ. ಮೊದಲನೆಯದಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ 1 ಲಕ್ಷ ಮಕ್ಕಳಿಗೆ ಉಚಿತ ಬ್ಯಾಗ್ ವಿತರಣೆ ಮಾಡುತ್ತಿದ್ದಾರೆ ಎಂದ ಅವರು ದುರ್ಗಿಗುಡಿ ಶಾಲಾ ಅಭಿವೃದ್ದಿಗೆ ತಾವು ಸಹಕರಿಸುವುದಾಗಿ ಭರವಸೆ ನೀಡಿದರು.
ಶಾಲೆಯ 867 ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕರಾದ ಡಿ.ಎಸ್. ಅರುಣ್, ಮಾಜಿ ಸೂಡಾ ಅಧ್ಯಕ್ಷರುಗಳಾದ ನಾಗರಾಜ್, ಜ್ಞಾನೇಶ್ವರ್, ಎಸ್‌ಡಿಎಂಸಿ ಅಧ್ಯಕ್ಷರಾದ ಚಂದ್ರಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಮೋಹನೇಶ್, ದುರ್ಗಿಗುಡಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಭಾರತಿ, ದೈಹಿಕ ಶಿಕ್ಷಣ ನಿರ್ದೇಶಕ ನಿರಂಜನ, ಇತರೆ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು. , ಕ್ಷೇತ್ರ ಸಮನ್ವಯಾಧಿಕಾರಿ ಶಿವಪ್ಪ ಸಂಗಣ್ಣನವರ್ ಸ್ವಾಗತಿಸಿದರು. ಕಲ್ಲೇಶ್ ವಂದಿಸಿದರು.

Klive Special Article ಗ್ರಾಮೀಣ ಕರಕುಶಲಿಗರಿಗೆ ವರವಾಗಿರುವ ” ಸಂಜೀವಿನಿ”.

0

ಲೇ: ಆರ್ .ರಘು.
ವಾರ್ತಾ ಇಲಾಖೆ.


Klive Special Article ಮಹಿಳೆಯರ ಆರ್ಥಿಕ ಸ್ವಾವಲಂಬನೆ ಬದುಕಿಗೆ ‘ಸಂಜೀವಿನಿ’ ಯೋಜನೆಯ ಬೆಳಕು
ಮಲೆನಾಡ ಹೆಬ್ಬಾಗಿಲಾದ ಶಿವಮೊಗ್ಗದ ಸಂಸ್ಕೃತಿ, ಸಾಂಪ್ರದಾಯಗಳು ವಿಶೇಷವಾಗಿದ್ದು ಮಲೆನಾಡಿನ ಸಾಂಪ್ರದಾಯಿಕ ಕರಕುಶಲತೆಯಾದ ಮಣ್ಣಿನ ಅಲಂಕಾರಿಕ ವಸ್ತು ತಯಾರಿಕೆಗೆ ಜೀವ ನೀಡುವ ಮೂಲಕ ಮಹಿಳೆಯರ ಸ್ವಾವಲಂಬಿ ಬದಕನ್ನು ಕಟ್ಟಿಕೊಳ್ಳಲು ಸರ್ಕಾರದ ‘ಸಂಜೀವಿನಿ’ ಯೋಜನೆ ಗ್ರಾಮೀಣ ಮಹಿಳೆಯರ ಬದುಕಲ್ಲಿ ಹೊಸ ಬೆಳಕು ಮೂಡಿಸಿದೆ.
ಶಿವಮೊಗ್ಗ ತಾಲೂಕಿನ ಹಾರನಹಳ್ಳಿ ಗ್ರಾಮದಲ್ಲಿ 13 ಜನ ಮಹಿಳೆಯರು ಗುಂಪು ‘ಪ್ರಗತಿ’ ಸ್ವಸಹಾಯ ಸಂಘ ಮತ್ತು ಹೊಂಬೆಳಕು ಸಂಜೀವಿನಿ ಒಕ್ಕೂಟ ಸೇರಿ ಅಳಿವಿನಂಚಿನಲ್ಲಿರುವ ಗುಡಿ ಕೈಗಾರಿಕೆ ಮೂಲಕ ಮಣ್ಣಿನ ಮಣ್ಣಿನ ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ತೊಡಗಿಕೊಂಡು ಸ್ವಾವಲಂಬಿ ಬದುಕು ನಡೆಸುತ್ತಿರುವುದು ನಿಜಕ್ಕೂ ಸ್ಪೂರ್ತಿದಾಯಕವಾಗಿದೆ.
ಮಹಿಳೆಯರು ತಮ್ಮ ಕ್ರಿಯಾಶೀಲತೆಯಿಂದ ಸಿದ್ಧಪಡಿಸಿದ “ಸಾಂಪ್ರದಾಯಿಕ ದೀಪಗಳು, ಹಸೆ-ಚಿತ್ತಾರಗಳು, ಟೆರಕೋಟ ಆಭರಣಗಳು, ಸಾಗರದ ಕುಕೀಸ್‌ಗಳು ಹಾಗೂ ಮಲೆನಾಡಿನ ಸಿಹಿತಿಂಡಿ ತೊಡೆದೇವು” ಸೇರಿದಂತೆ ಇನ್ನೂ ಅನೇಕ ವಿವಿಧ ಮನಮೋಹಕ ಮಲೆನಾಡಿನ ಗೃಹೋತ್ಪನ್ನ ಸಾಮಗ್ರಿಗಳ ಮಾರಾಟವನ್ನು ರಾಜ್ಯದಾದ್ಯಂತ ವಿಸ್ತರಿಸಿದ್ದಾರೆ.
ಈ ಗುಡಿ ಕೈಗಾರಿಕೆಯ ಮುಖ್ಯ ಆಧಾರಸ್ತಂಭ ಶ್ರೀಮತಿ ಜ್ಯೋತಿ ಶಿವರಾಜ್ ಎಂಬ ಮಹಿಳೆ. ಕೆನರಾ ಬ್ಯಾಂಕ್ ಸಹಯೋಗದೊಂದಿಗೆ ಸರ್ಕಾರ ನೀಡುವ 6 ತಿಂಗಳ ಉಚಿತ ಕರಕುಶಲ ಗುಡಿ ಕೈಗಾರಿಕೆ ತರಬೇತಿಯನ್ನು ಪಡೆದುಕೊಂಡು ತಮ್ಮ ಗ್ರಾಮವಾದ ಹಾರನಹಳ್ಳಿಯಲ್ಲಿ ಸಣ್ಣ ಪ್ರಮಾಣದಲ್ಲಿ ಮಣ್ಣಿನ ವಸ್ತುಗಳನ್ನು ತಯಾರಿಸಲು ಆರಂಭಿಸಿದರು. ಈಗ ವರ್ಷಕ್ಕೆ 6 ಲಕ್ಷಕ್ಕೂ ಅಧಿಕ ಆದಾಯವನ್ನು ಗಳಿಸುತ್ತಿದ್ದಾರೆ. ಇವರಿಗೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ವತಿಯಿಂದ 2023ರ ಮಹಿಳಾ ಸಾಧಕಿ ಪ್ರಶಸ್ತಿ ಹಾಗೂ ಗುಡಿ ಕೈಗಾರಿಕೆಯಲ್ಲಿ ರಾಜ್ಯಮಟ್ಟದ ಅತ್ಯುತ್ತಮ ಪ್ರಶಸ್ತಿ ಲಭಿಸಿದೆ.
ಕೈಯಲ್ಲಿ ತಯಾರಾಗುವ ಮಣ್ಣಿನ ಅಲಂಕಾರಿಕ ವಸ್ತುಗಳು:
ಮಹಿಳೆಯರು ಸ್ವತಃ ಕೈಯಲ್ಲಿ ಮಣ್ಣಿನಿಂದ ಮನೆಯಲ್ಲಿ ಸಿದ್ದಪಡಿಸಿದ ಮಣ್ಣಿನ ದೀಪ, ಮ್ಯಾಜಿಕ್ ದೀಪ,ಲಿಂಗು, ಗಣೇಶ ದೀಪ, ತುಳಸಿದೀಪ, ಬೋಟಿಂಗ್ ಗಣೇಶ ದೀಪ, ಹೂವಿನ್ಯಾಸದ ದೀಪ, ಅಷ್ಟಲಕ್ಷಿö್ಮಯರ ದೀಪ, ಪಂಚದೀಪ, ಆರಾಮ್ ಗಣೇಶ ದೀಪ, ಹಂಸದೀಪ,ವಾಸ್ತು ದೀಪ, ಗೃಹ ಅಲಂಕಾರಿಕ ದೀಪ, ಹಾಗೂ ಗೊಂಬೆಗಳು, ಮನೆ ಆಲಂಕಾರಿಕ ವಸ್ತುಗಗಳು, ಮಣ್ಣಿನ ಗಂಟೆ, ಈ ರೀತಿ ಅನೇಕ ವಸ್ತುಗಳನ್ನು ತಯಾರಿಸುತ್ತಾರೆ.
ಗುಡಿ ಕೈಗಾರಿಕೆಗೆ ಸಹಕಾರಿಯಾದ ಸಂಜೀವಿನಿ ಯೋಜನೆ:
ನಂತರ ಮಹಿಳೆಯರು ಸ್ವಸಹಾಯ ಸಂಘಗಳನ್ನು ಸ್ಥಾಪಿಸಿ ಗ್ರಾಮದ ಇತರೆ ಮಹಿಳೆಯರನ್ನು ಜೊತೆಗೂಡಿಸಿಕೊಂಡು ಗುಡಿ ಕೈಗಾರಿಯನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ವಿಸ್ತರಿಸಲು ಪ್ರಯತ್ನಿಸಿದರು. ಗ್ರಾಮ ಪಂಚಾಯತ್ ವತಿಯಿಂದ ಎನ್‌ಆರ್‌ಎಲ್‌ಎಂ ಸಂಜೀವಿನಿ ಯೋಜನೆಯಡಿಯಲ್ಲಿ ಪ್ರಾಥಮಿಕವಾಗಿ ರೂ.50 ಸಾವಿರಗಳ ಸಾಲವನ್ನು ಪಡೆದುಕೊಂಡು ಕರಕುಶಲ ಕಲೆಗೆ ಬೇಕಾದ ಮಣ್ಣನ್ನು ಹದಗೊಳಿಸುವ ಯಂತ್ರವನ್ನು ಪಡೆದುಕೊಂಡು ಈ ಮೂಲಕ ತಯಾರಿಕೆ ಪ್ರಮಾಣವನ್ನು ಹೆಚ್ಚಿಸಿಕೊಂಡರು. ನಂತರ ಇದೇ ಯೋಜನೆಯಡಿ ರೂ. 1.50 ಲಕ್ಷ ಸಾಲವನ್ನು ಪಡೆಕೊಂಡು ಗೊಂಬೆಗಳನ್ನು ಹಾಗೂ ಮಣ್ಣಿನ ವಿವಿಧ ಕರಕುಶಲ ವಸ್ತುಗಳನ್ನು ಸಿದ್ದಪಡಿಸಲು ಸಹಕಾರಿಯಾಗುವ ಅಧುನಿಕ ಯಂತ್ರವನ್ನು ಖರೀದಿಸಿದರು.

Klive Special Article ಜಿಲ್ಲಾ ಪಂಚಾಯತ್ ಸಹಕಾರದಿಂದ ಉತ್ತಮ ಮಾರುಕಟ್ಟೆ:
ಗುಡಿ ಮತ್ತು ಸಣ್ಣ ಕೈಗಾರಿಕೆಗಳು ತಯಾರಿಸುವ ವಸ್ತುಗಳಿಗೆ ಮಾರುಕಟ್ಟೆಯ ಸೌಲಭ್ಯಗಳು ಇಲದೇ ಅನೇಕ ಸಣ್ಣ ಮತ್ತು ಗುಡಿ ಕೈಗಾರಿಕೆಗಳು ಮುಚ್ಚಲಾಗಿದೆ. ಅದರೆ ಜಿಲ್ಲಾ ಪಂಚಾಯತ್
ಶಿವಮೊಗ್ಗವು ಈ ಗುಡಿ ಕೈಗಾರಿಕೆಯನ್ನು ಗುರುತಿಸಿ ರಾಷ್ಟçಮಟ್ಟದಲ್ಲಿ ಕರಕುಶಲ ಕಲೆಗೆ ಮಾನ್ಯತೆ ದೊರೆಯುವಂತೆ ಮಾಡಿದೆ. ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನಾ ಸಮಾರಂಭದಲ್ಲಿ ಗುಡಿ ಕೈಗಾರಿಕೆ ವಸ್ತುಗಳ ಮಾರಾಟ ಮಳಿಗೆ ತೆರೆದು ಪ್ರಧಾನಿ ಮೋದಿ ಅವರೊಂದಿಗೆ 2 ನಿಮಿಷಗಳ ಕಾಲ ಕರಕುಶಲ ಗುಡಿ ಕೈಗಾರಿಕೆ ಕುರಿತು ಚರ್ಚಿಸಲು ಅವಕಾಶವನ್ನು ಜಿಲ್ಲಾ ಪಂಚಾಯತ್ ವತಿಯಿಂದ ಕಲ್ಪಿಸಲಾಗಿತ್ತು.
ರಾಷ್ಟçಮಟ್ಟಣ ವಸ್ತು ಪ್ರದರ್ಶನಕ್ಕೆ ಆಯ್ಕೆ:
ಎನ್.ಆರ್.ಎಲ್.ಎಂ ಯೋಜನೆಯ ಸಂಜೀವಿನಿ ಕಾರ್ಯಕ್ರಮದಡಿ ರಾಜ್ಯಾದ್ಯಂತ ವಿವಿಧ ಸಭೆ ಸಮಾರಂಭ, ಸರ್ಕಾರಿ ಕಾರ್ಯಕ್ರಮಗಳಲ್ಲಿ ಪ್ರದರ್ಶನ ಮತ್ತು ಮಾರಾಟವನ್ನು ಮಾಡಲು ಸಹಕರಿಸಿದೆ. ಕೇಂದ್ರ ಸರ್ಕಾರದ ಪಿಎಂ-ವಿಶ್ವಕರ್ಮ ಯೋಜನೆ, ಲಕ್‌ಪತಿ ದೀದಿ ಯೋಜನೆಗಳಿಗೆ ಈ ಮಹಿಳಾ ಸಂಘ ಆಯ್ಕೆಯಾಗಿದ್ದು 2023 ನೇ ಸಾಲಿನಲ್ಲಿ ನಡೆದ ರಾಷ್ಟçಮಟ್ಟದ ವಸ್ತುಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ.
ಪ್ರಧಾನ ಮಂತ್ರಿಯವರ ಮನ್ ಕೀ ಬಾತ್‌ನಲ್ಲಿ ಕರಕುಶಲತೆ ಕುರಿತು ಪ್ರಸ್ತಾಪ
ದೇಶದ ಪ್ರಧಾನ ಮಂತ್ರಿಯವರಾದ ನರೇಂದ್ರ ಮೋದಿ ಅವರು ನಡೆಸಿಕೊಡುವ ಆಕಾಶವಾಣಿಯ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆಯ ಹಾರನಹಳ್ಳಿಯ ಜ್ಯೋತಿಯವರು ತಯಾರಿಸುವ ಮ್ಯಾಜಿಕ್ ದೀಪದ ಹಾಗೂ ಮಣ್ಣಿನ ಕರಕುಶಲ ವಸ್ತುಗಳ ಕುರಿತು ಮೋದಿ ಅವರು ಉಲ್ಲೇಖಿಸಿದ್ದು ಮಹಿಳೆಯರ ಸ್ವಾವಲಂಬನೆ ಜೀವನದ ಕುರಿತು ಮಾತನಾಡಿದರು.
ದೀಪಾವತಿ ಹಬ್ಬದ ವೇಳೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪನವರು ಮಲೆನಾಡಿನ ಕರೆಕುಶಲ ವಸ್ತುಗಳ ತಯಾರಿಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವರು, ಜನಪ್ರತಿನಿಧಿಗಳಿಗೆ ಪ್ರಗತಿ ಸ್ವಸಹಾಯ ಸಂಘದ ಮಹಿಳೆಯರು ತಯಾರಿಸಿದ ವಿಶೇಷ ದೀಪಗಳು ಹಾಗೂ ಗೃಹ ಉತ್ಪನ್ನಗಳನ್ನು ಜಿ.ಪಂ ವತಿಯಿಂದ ಉಡುಗೊರೆಯಾಗಿ ನೀಡಿ, ಮಹಿಳೆಯರ ಗುಡಿ ಕೈಗಾರಿಕೆ ಕೌಶಲ್ಯವನ್ನು ಉತ್ತೇಜಿಸುವಂತೆ ಎಲ್ಲರಲ್ಲಿ ಮನವಿ ಮಾಡಿದ್ದಾರೆ.
ಕೋಟ್ -1
ಮಹಿಳೆಯರು ಕೌಟುಂಬಿಕ ಜವಾಬ್ದಾರಿಯೊಂದಿಗೆ ಗುಡಿ ಕೈಗಾರಿಕೆಯಲ್ಲಿಯೂ ತೊಡಗಿಕೊಂಡು ಆದಾಯ ಪಡೆಯುತ್ತಿದ್ದಾರೆ. ಪ್ರತಿಯೊಂದು ಉತ್ಪನ್ನವು ಆ ನೆಲದ ಸೊಬಗನ್ನು ವರ್ಣಿಸುತ್ತದೆ. ಸ್ವ-ಉದ್ಯೋಗದ ಕನಸನ್ನು ನನಸಾಗಿಸುವಲ್ಲಿ ಸರ್ಕಾರದ ಸಂಜೀವಿನಿ ಸೇರಿದಂತೆ ವಿವಿಧ ಯೋಜನೆಗಳು ಮಹಿಳೆಯರ ಸ್ವಾವಲಂಬಿ ಬದುಕಿಗೆ ಸಹಕಾರಿಯಾಗಿದೆ.
-ಹೇಮಂತ್ ಎನ್, ಜಿಲ್ಲಾ ಪಂಚಾಯತ್ ಸಿಇಒ
ಕೋಟ್ -2
ಮಹಿಳೆಯರು ತಮ್ಮ ಮನೆ ಕೆಲಸ ಮುಗಿದ ನಂತರ, ಆರ್ಥಿಕವಾಗಿ ಸ್ವತಂತ್ರರಾಗಲು ಗುಡಿ ಕೈಗಾರಿಕೆಯಂತಹ ಕೌಶಲ್ಯ ರೂಢಿಸಿಕೊಂಡಿದ್ದೇವೆ. ಜಿಲ್ಲಾ ಪಂಚಾಯತ್ ವತಿಯಿಂದ ನೀಡುವ ಯೋಜನೆಗಳ ಸಹಕಾರದಿಂದ ಮಣ್ಣಿನ ಕರಕುಶಲ ತಯಾರಿಕೆಯಲ್ಲಿ ಉತ್ತಮ ಆದಾಯವನ್ನು ಗಳಿಸುತ್ತಿದ್ದೇವೆ. ರಾಷ್ಟç ಮಟ್ಟದಲ್ಲಿ ನಾವು ತಯಾರಿಸುವ ವಸ್ತುಗಳಿಗೆ ಉತ್ತಮ ಬೇಡಿಕೆ ಇದ್ದು, ಸರ್ಕಾರಿ ಯೋಜನೆಗಳು ಅತ್ಯಂತ ಸಹಕಾರಿಯಾಗಿವೆ.
-ಜ್ಯೋತಿ ಶಿವರಾಜ್ -ಮಹಿಳಾ ಕರಕುಶಲ ತಯಾರಿಕಿ

  • ರಘು ಆರ್
    ಅಪ್ರೆಂಟಿಸ್, ವಾರ್ತಾ ಇಲಾಖೆ