Kumsi Police ನ.23 ರಂದು ಆಯನೂರು ಬಳಿಯ ವೀರಣ್ಣನ ಬೆನವಳ್ಳಿ ಕ್ರಾಸ್ ಬಳಿ ಬೈಕ್ ಚಾಲಕನೊಬ್ಬ ನಿರ್ಲಕ್ಷ್ಯದಿಂದ ಸುಮಾರು 35 ವರ್ಷದ ಅನಾಮಧೇಯ ವ್ಯಕ್ತಿಗೆ ಡಿಕ್ಕಿ ಹೊಡೆಸಿ ಅಪಘಾತ ಮಾಡಿದ ಕಾರಣ, ವ್ಯಕ್ತಿಯನ್ನು ಸಾರ್ವಜನಿಕರ ಸಹಾಯದಿಂದ ಅಂಬುಲೆನ್ಸ್ನಲ್ಲಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಿಸದೆ ಡಿ.04 ರಂದು ಮೃತಪಟ್ಟಿರುತ್ತಾರೆ.
Kumsi Police ಮೃತ ವ್ಯಕ್ತಿಯು 5.5 ಅಡಿ ಎತ್ತರ, ಕೋಲು ಮುಖ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಬಣ್ಣ ಮತ್ತು ಕನ್ನಡ ಮಾತನಾಡುತ್ತಾರೆ. ಈ ವ್ಯಕತಿಯ ವಾರಸುದಾರರು ಯಾರಾದರು ಇದ್ದಲ್ಲಿ ಕುಂಸಿ ಪೊಲೀಸ್ ಠಾಣೆ ಮೊ.ನಂ 9480803351 ಸಂಪರ್ಕಿಸಿ ಮಾಹಿತಿ ನೀಡುವಂತೆ ಕುಂಸಿ ಪೊಲೀಸ್ ಠಾಣೆ ಪಿ.ಐ ತಿಳಿಸಿದ್ದಾರೆ.
Kumsi Police ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಬಗ್ಗೆ ಕುಂಸಿ ಪೊಲೀಸ್ ಠಾಣೆಯ ಮಾಹಿತಿ
Minority Welfare Department Shivamogga ಬಿ.ಇಡಿ/ಡಿ.ಇಡಿ ಅಧ್ಯಯನಕ್ಕೆ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸರ್ಕಾರದ ಪ್ರೋತ್ಸಾಹಧನ ಪ್ರಕಟಣೆ
Minority Welfare Department Shivamogga ಶಿವಮೊಗ್ಗ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು 2024-25ನೇ ಸಾಲಿಗೆ ಬಿ.ಇಡಿ ಹಾಗೂ ಡಿ.ಇಡಿ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಹಾಗೂ ಪಾರ್ಸಿ) ಸಮುದಾಯದ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹಧನ ಯೋಜನೆಯಡಿ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.
ಅಭ್ಯರ್ಥಿಗಳು ಕರ್ನಾಟಕ ರಾಜ್ಯದ ನಿವಾಸಿಯಾಗಿದ್ದು, ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಗರಿಷ್ಟ ವರಮಾನ ರೂ. 6.00 ಲಕ್ಷಕ್ಕೆ ಮೀರಿರಬಾರದು. ಅಭ್ಯರ್ಥಿಗಳನ್ನು ಅರ್ಹತೆ ಪರೀಕ್ಷೆ/ಹಿಂದಿನ ಸಾಲಿನ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
Minority Welfare Department Shivamogga ಆಸಕ್ತ ಅರ್ಹ ವಿದ್ಯಾರ್ಥಿಗಳು ಇಲಾಖಾ ವೆಬ್‌ಸೈಟ್ sevasindhu.karnataka.gov.in ಮೂಲಕ ದಿನಾಂಕ: 25/12/2024 ರೊಳಗಾಗಿ ಸಲ್ಲಿಸಿ, ನಂತರ ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರ ಮೊಹರು ಮತ್ತು ಸಹಿ/ದೃಢೀಕರಣ ಪಡೆದುಕೊಂಡು, ಅರ್ಜಿಯೊಂದಿಗೆ ಸೂಕ್ತ ದಾಖಲೆಗಳ ಪ್ರತಿಯೊಂದಿಗೆ ಜಿಲ್ಲಾ ಅಧಿಕಾರಿಗಳ ಕಚೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, 1ನೇ ಮಹಡಿ, ಸತ್ಯಶ್ರೀ ಆರ್ಕೆಡ್, 5ನೇ ಪ್ಯಾರಲಲ್ ರಸ್ತೆ, ದುರ್ಗಿಗುಡಿ, ಶಿವಮೊಗ್ಗ ಇಲ್ಲಿಗೆ ಸಲ್ಲಿಸುವಂತೆ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಇಲಾಖಾ ಕಚೇರಿಯನ್ನು ಖುದ್ದಾಗಿ ಅಥವಾ ದೂ.ಸಂ.: 08182-220206 ನ್ನು ಸಂಪರ್ಕಿಸುವುದು.
MESCOM ಡಿಸೆಂಬರ್ 8 & 9 ಹೊಳಲೂರು ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ
MESCOM ಶಿವಮೊಗ್ಗ ತಾಲ್ಲೂಕು, ಹೊಳಲೂರು 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿರುವ 66/11 ಕೆವಿ ವಿವಿ ಮಾರ್ಗದಲ್ಲಿ ಲಿಂಕ್ ಲೈನ್ ಮಾರ್ಗ ರಚಿಸುವ ಕಾಮಗಾರಿ ಇರುವುದರಿಂದ ಡಿ.08 ಮತ್ತು ಡಿ. 09 ರಂದು ಬೆಳಗ್ಗೆ 10.00 ರಿಂದ ಸಂಜೆ 6.00 ರವರೆಗೆ MESCOM ಹೊಳಲೂರು, ಹಾಡೋನಹಳ್ಳಿ, ಹಳೆ/ಹೊಸ ಮಡಿಕೆಚೀಲೂರು, ಬಿ.ಕೆ. ತಾವರೆ ಗ್ರಾಮಗಳ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಕೋರಿದೆ.
Kuvempu University ಸಂವಿಧಾನ ಹೊರತುಪಡಿಸಿ ನಮ್ಮನ್ನು ರಕ್ಷಿಸುವ ಯಾವ ಶಕ್ತಿಯೂ ದೇಶದಲ್ಲಿಲ್ಲ- ಡಾ.ಸಣ್ಣರಾಮ
Kuvempu University ದಲಿತ ಸಮುದಾಯದ ಮಕ್ಕಳ ಎಳೆ ಮನಸ್ಸಿನಲ್ಲಿ ಸನಾತನ ಧರ್ಮದ ವಿಷ ಬೀಜ ಬಿತ್ತುವ ಮುನ್ನ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಚಿಂತನೆಗಳನ್ನು ಬಿತ್ತಿ ಎಂದು ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರೊಫೆಸರ್ ಡಾ. ಸಣ್ಣ ರಾಮ ರವರು ಹೇಳಿದರು.
ಶಿವಮೊಗ್ಗ ನಗರದ ಬಿ. ಎಚ್ .ರಸ್ತೆಯಲ್ಲಿರುವ ಪ್ರೊ ಬಿ ಕೃಷ್ಣಪ್ಪನವರು ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೇಂದ್ರ ಕಾರ್ಯಾಲಯದಲ್ಲಿ ನಡೆದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ೬೮ನೇ ಮಹಾ ಪರಿನಿರ್ವಹಣಾ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದಲಿತರು ರಾಷ್ಟ್ರಪತಿ ಕುರ್ಚಿಯಲ್ಲಿ ಕೂರಬಹುದು ಅದಕ್ಕೆ ಕಾರಣ ಸಂವಿಧಾನ.ಅದೇ ದಲಿತರು ದೇವಸ್ಥಾನದ ಒಳಗೆ ಹೋಗುವುದಕ್ಕೆ ಆಗುವುದಿಲ್ಲ ಅದೇ ಹಿಂದುತ್ವ ಎಂದು ಹೇಳಿದರಲ್ಲದೆ ದಲಿತರು ಬದಲಾಗದಿದ್ದರೆ ಸಂವಿಧಾನ ಬದಲಾಗುತ್ತದೆ ಸಂವಿಧಾನ ಹೊರತುಪಡಿಸಿ ನಮ್ಮನ್ನು ರಕ್ಷಿಸುವ ಯಾವ ಶಕ್ತಿಯು ದೇಶದಲ್ಲಿ ಇಲ್ಲ ಎಂದು ಡಾ ಸಣ್ಣರಾಮ ರವರು ಹೇಳಿದರು.
Kuvempu University ವೇದಿಕೆಯಲ್ಲಿ ಶಿವಬಸಪ್ಪ ನಿವೃತ್ತ ಪ್ರಾಂಶುಪಾಲರು ಭದ್ರಾವತಿ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ಎಂ ಏಳು ಕೋಟಿ, ಜಿಲ್ಲಾ ಸಂಘಟನಾ ಸಂಚಾಲಕರಾದ ಬೊಮ್ಮನಕಟ್ಟೆ ಕೃಷ್ಣ, ಮಾಜಿ ಜಿಲ್ಲಾ ಸಂಚಾಲಕರಾದ ಎ ಅರ್ಜುನ್, ನಗರ ಸಂಚಾಲಕರಾದ ಹರಿಗೆ ರವಿ, ಭದ್ರಾವತಿ ರಾಜಶೇಖರ್, ನಲ್ಲೂರು ಶಿವು ಮೊದಲಾದವರು ಉಪಸ್ಥಿತರಿದ್ದರು ಸಭೆಯ ಅಧ್ಯಕ್ಷತೆಯನ್ನು ಪ್ರೊ. ಬಿ ಕೃಷ್ಣಪ್ಪನವರು ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ಎಂ ಗುರುಮೂರ್ತಿ ಶಿವಮೊಗ್ಗ ರವರು ವಹಿಸಿದ್ದರು.
International Day of Persons with Disabilities ಶಾಸ್ತ್ರೀಯ ಸಂಗೀತವು ಸುಗಮ ಸಂಗೀತದ ತಾಯಿಬೇರು- ಮಾನಸಾ ಶಿವರಾಮಕೃಷ್ಣ
International Day of Persons with Disabilities ಪರಿಶ್ರಮ, ತಾಳ್ಮೆ, ಏಕಾಗ್ರತೆಯಿಂದ ಅಭ್ಯಾಸ ಮಾಡಿದರೆ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು ಎಂದು ವಿದುಷಿ ಮಾನಸ ಶಿವರಾಮಕೃಷ್ಣ ಹೇಳಿದರು.
ಅಶೋಕ ನಗರದಲ್ಲಿರುವ ಯೋಗ ಮಂದಿರದಲ್ಲಿ ಭಾವಗಾನ ಸಂಸ್ಥೆಯಿಂದ ಆಯೋಜಿಸಿದ್ದ ಕರ್ನಾಟಕ ಶಾಸ್ತ್ರೀಯ ಸಂಗೀತ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿ, ಶಾಸ್ತ್ರೀಯ ಸಂಗೀತಕ್ಕೆ ನೂರಾರು ವರ್ಷಗಳ ಇತಿಹಾಸ ಇದ್ದು, ಶಾಸ್ತ್ರೀಯ ಸಂಗೀತವು ಸುಗಮ ಸಂಗೀತದ ತಾಯಿಬೇರು ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಪ್ರಸ್ತುತ ಶಾಸ್ತ್ರೀಯ ಸಂಗೀತ ಕಲಿಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ವೇದಿಕೆ ಅವಕಾಶ ಬೇಕು, ವೇಗವಾಗಿ ಗಾಯಕರಾಗುವ ಹಂಬಲ ಹೊಂದಿದ್ದಾರೆ. ಸಂಗೀತ ಅಭ್ಯಾಸ ಸರಿ ಮಾಡುವುದಿಲ್ಲ ಎಂದರು.
International Day of Persons with Disabilities ಶಾಸ್ತ್ರೀಯ ಸಂಗೀತ ಕ್ರಮಬದ್ಧವಾಗಿ ಅಭ್ಯಾಸ ಮಾಡಿದರೆ ಸಂಗೀತ ತಾನಾಗಿಯೇ ಒಲಿಯುತ್ತದೆ. ಭದ್ರಾವತಿ ವಾಸು ಅವರ ನೇತೃತ್ವದಲ್ಲಿ ಅನೇಕ ಕಾರ್ಯಕ್ರಮ ಆಯೋಜಿಸಿ ಹೊಸ ಪ್ರತಿಭೆಗಳಿಗೆ ಅವಕಾಶ ಸಿಗುತ್ತಿದೆ. ಅನೇಕರು ಕಲಾವಿದರಾಗಿ ಪ್ರತಿಭೆ ಅನಾರವಣಗೊಳಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು.
ಗುರು ಅನಿತಾ ಗೋಪಾಲಕೃಷ್ಣ ಮಾತನಾಡಿ, ರಾಗ, ತಾಳ, ಧ್ವನಿ ಸಂಸ್ಕರಣೆ ಮತ್ತು ಕಲಿಕೆಯಲ್ಲಿ ಆಸಕ್ತಿ ಇರಬೇಕು. ಸರಿಯಾದ ಅಭ್ಯಾಸ ಮಾಡಿದಲ್ಲಿ ಮಾತ್ರ ಸಂಗೀತದಲ್ಲಿ ಉತ್ತಮ ಸಾಧನೆ ಮಾಡಬಹುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭದ್ರಾವತಿ ವಾಸು ಮಾತನಾಡಿ, ಈಗಾಗಲೇ 200ಕ್ಕೂ ಹೆಚ್ಚು ಜನ ಸದಸ್ಯರು ಕಲಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. 46 ವರ್ಷದ ಸಂಗೀತ ಸೇವೆಯಿಂದ ಸಾರ್ಥಕತೆ ಸಿಕ್ಕಿದೆ ಎಂದು ತಿಳಿಸಿದರು.
ಭಾವಗಾನ ಸದಸ್ಯರು, ಪ್ರಶಾಂತ್, ವಸುಮತಿ ಬಾಪಟ್, ರವಿ, ಬುಜಂಗಪ್ಪ ಮತ್ತಿತರರು ಇದ್ದರು.
Sulthan Diamonds and Gold ವಿಶ್ವ ವಜ್ರ ಪ್ರದರ್ಶನ, ಒಂದು ಅದ್ಭುತವಾದ ಆಭರಣಗಳ ಪ್ರದರ್ಶನ- ಶಿಲ್ಪಾ ಗೋಪಿನಾಥ್
Sulthan Diamonds and Gold ದಕ್ಷಿಣ ಭಾರತದ ಅತಿ ದೊಡ್ಡ ವಜ್ರಾಭರಣಗಳ ಪ್ರದರ್ಶನ ಮತ್ತು ಮಾರಾಟ “ವಿಶ್ವ ವಜ್ರ ಪ್ರದರ್ಶನ”ವನ್ನು ಶಿವಮೊಗ್ಗ ನಗರದ ಗೋಪಿ ವೃತ್ತದ ಬಳಿ ಇರುವ ಸುಲ್ತಾನ್ ಡೈಮಂಡ್ಸ್ ಮತ್ತು ಗೋಲ್ಡ್‌ನಲ್ಲಿ ಉದ್ಘಾಟಿಸಲಾಯಿತು.
ಡಿಸೆಂಬರ್ 5 ರಿಂದ 15 ರವರೆಗೆ 10 ದಿನಗಳ ಕಾಲ ನಡೆಯುವ ಈ ಪ್ರದರ್ಶದನಲ್ಲಿ ಪಾಶ್ಚಿಮಾತ್ಯ ದೇಶಗಳ ಪ್ರಸಿದ್ಧ ಆಭರಣ ಮತ್ತು ವಜ್ರವನ್ನು ಪ್ರದರ್ಶನ ಮತ್ತು ಮಾರಾಟಕ್ಕಿಡಲಾಗಿದೆ. ಇದನ್ನು ಖರೀಸಿದವರಿಗೆ ಫ್ಲಾಟ್ 8 ಸಾವಿರ ರೂ. ರಿಯಾಯತಿಯನ್ನೂ ಸಹ ಘೋಷಿಸಲಾಗಿದೆ.
ವಿವಿಧ ದೇಶಗಳ ಆಭರಣವನ್ನು ಮಹಿಳಾ ಉದ್ಯಮಿಗಳಾದ ಜಯಲಕ್ಷ್ಮೀ ಸ್ಟೀಲ್ ಕಾರ್ಪೊರೇಶನ್‌ನ ಜೆ ಕೆ ಶಶಿಕಲಾ, ಹೊಸನಗರ ಸರಕಾರಿ ಆಸ್ಪತೆಯ ಕಣ್ಣು ತಜ್ಞೆ ಡಾ|| ಶಂಶಾದ್ ಬೇಗಂ, ಎಸ್ ಎ ಫ್ಲವರ್ ಮತ್ತು ಡೆಕೋರೇಶನ್‌ನ ಮಾಲಕಿ ಶೆರ್ಲಿ ಕ್ಲೆಮೆಂಟ್, ಶಕ್ತಿ ಇನೋವೇಶನ್‌ನ ಸಿಇಓ ಶಿಲ್ಪಾ ಗೋಪಿನಾಥ, ಉದ್ಯಮಿ ಎಸ್ ಎಚ್ ಗಾಯತ್ರಿ, ರೂಪದರ್ಶಿ ಕೀರ್ತಿ ಶಿವಮೂರ್ತಿ ಮತ್ತು ಮೇಕಪ್ ಆರ್ಟಿಸ್ಟ್ ದೀನಾಜ್ ಅಯೂಮ್ ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಿಲ್ಪಾ ಗೋಪಿನಾಥ್, ಇದೊಂದು ಅದ್ಭುತವಾದ ಆಭರಣಗಳ ಪ್ರದರ್ಶನವಾಗಿದ್ದು., ಹಿಂದೆಂದೂ ನೋಡಿರದ ಅಪೂರ್ವ ಸಂಗ್ರಹ ಇಲ್ಲಿದೆ. ಮಹಿಳೆಯರು ಇಷ್ಟಪಡುವ ಮತ್ತು ಮನ ಆಕರ್ಷಿಸುವ ಆಭರಣಗಳು ಇವಾಗಿದ್ದು, ಗ್ರಾಹಕರು ನಿಶ್ಚಿತವಾಗಿಯೂ ಇಷ್ಟಪಡುತ್ತಾರೆ ಎಂದರು.
Sulthan Diamonds and Gold ರೂಪದರ್ಶಿ ಕೀರ್ತಿ ಶಿವಮೂರ್ತಿ ಮಾತನಾಡಿ, ಹಿಂದೆಂದೂ ನೋಡಿರದ ವಜ್ರಾಭರಣಗಳ ಸಂಗ್ರಹ ಶಿವಮೊಗ್ಗದಂತಹ ನಗರದಲ್ಲಿ ನಡೆಯುತ್ತಿರುವುದು ನಗರದ ಗ್ರ್ರಾಹಕರ ಪಾಲಿಗೆ ವಿಶಿಷ್ಟವಾಗಿದೆ. ಮಹಿಳೆಯರು ವಿಶೇಷವಾಗಿ ಆಭರಣಪ್ರಿಯರು ಇದರ ಲಾಭ ಪಡೆಯಬೇಕು. ವಿದೇಶಿ ಆಭರಣಗಳ ಸಂಗ್ರಹವನ್ನು ಒಂದೇ ಸೂರಿನಡಿ ನೋಡು, ಖರೀದಿಸು ವ್ಯವಸ್ಥೆ ಮಾಡಿರುವುದು ಮೆಚ್ಚತಕ್ಕದ್ದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸ್ಟೋರ್ ಮ್ಯಾನೇಜರ್ ಅಜಿತ್ ಮತ್ತು ಶೋಯೆಬ್, ಅನೇಕ ಗ್ರಾಹಕರು ಹಾಜರಿದ್ದರು.
Shivamogga District Police ಪೊಲೀಸ್ ಕ್ರೀಡಾಕೂಟ ವಿಶೇಷ ಕ್ರಿಕೆಟ್ ಪಂದ್ಯ. ಪೊಲೀಸ್ ತಂಡಕ್ಕೆ ಶರಣಾದ ಪತ್ರಕರ್ತರ ತಂಡ
Shivamogga District Police ಶಿವಮೊಗ್ಗ ಜಿಲ್ಲಾ ಪೋಲೀಸ್ ಕ್ರೀಡಾಕೂಟದ ಭಾಗವಾಗಿ ಇಂದು ಮಧ್ಯಾಹ್ನ ಪೋಲೀಸ್ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಪೋಲೀಸ್ ಹಾಗೂ ಪತ್ರಕರ್ತರ ನಡುವಿನ ಪಂದ್ಯಾವಳಿ, ಕ್ರೀಡಾ ಸ್ಪೂರ್ತಿಗೆ ಸಾಕ್ಷಿಯಾಗಿದ್ದು, ಪೋಲೀಸ್ ಹಾಗೂ ಪತ್ರಕರ್ತರು ಅತ್ಯಂತ ಉತ್ಸಾಹದಿಂದ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು. ತಲಾ ಹತ್ತು ಓವರ್‌ಗಳ ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಟಾಸ್ ಗೆದ್ದು, ಬ್ಯಾಟಿಂಗ್ ಆಯ್ದುಕೊಂಡ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ನಾಯಕತ್ವದ ಜಿಲ್ಲಾ ಪೋಲೀಸ್ ತಂಡ ನಾಲ್ಕು ವಿಕೆಟ್ ನಷ್ಟಕ್ಕೆ ೧೩೪ ರನ್ ಕಲೆ ಹಾಕಿತು.
ಈ ೧೩೪ ರನ್‌ನ್ನು ಬೆನ್ನು ಹತ್ತಿದ ಪತ್ರಕರ್ತರ ತಂಡ ಐದು ವಿಕೆಟ್‌ಗಳನ್ನು ಕಳೆದುಕೊಂಡು ೬೭ರನ್‌ಗಳನ್ನು ಕಲೆಹಾಕುವಲ್ಲಿ ಯಶಸ್ವಿಯಾಯಿತು.
ಜಿಲ್ಲಾ ಪೋಲೀಸ್ ತಂಡದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ೧೭ ರನ್ ಗಳಿಸಿದರೆ, ಉಪಾಧೀಕ್ಷಕ ಗಜಾನನ ಸುತಾರ ೧೨, ಇನ್ಸ್ಪೆಕ್ಟರ್ ಅಣ್ಣಯ್ಯ ೩೬, ನಾರಾಯಣ ಸ್ವಾಮಿ ೧೯ ಹಾಗೂ ಪ್ರಶಾಂತ್ ೩೨ರನ್ ಗಳಿಸಿದರು.
ಪತ್ರಕರ್ತರ ತಂಡದ ಪರವಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆಯ ಅಧ್ಯಕ್ಷ ಕೆ. ವಿ. ಶಿವಕುಮಾರ್‌ರವರು ಜಿಲ್ಲಾ ರಕ್ಷಣಾಧಿಕಾರಿಗಳ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರಲ್ಲದೇ ೨೦ ರನ್ ಗಳಿಸಿ, ಗಮನ ಸೆಳೆದರು. ಪವರ್ ಟೀವಿಯ ಗೋ. ವ. ಮೋಹನ ಕೃಷ್ಣ ೧೪ರನ್ ಗಳಿಸಿದರು. ಈ ಇಬ್ಬರೂ ಆಟಗಾರರು ಅಜೇಯರಾಗಿ ಉಳಿದರು.
ಜಗದೀಶ್ ೦೩, ಸತೀಶ್ ೦, ರಾಜೇಶ್ ೩, ವೆಂಕಟೇಶ್ ೦, ನಾಗರಾಜ್ ೧, ಮಹೇಶ್ ೨, ಗಣೇಶ್ ೦ ರನ್ ಗಳಿಸಿದರು.
ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್‌ರವರು ಕ್ರೀಡಾ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಎಲ್ಲ ಕ್ರೀಡಾಪಟುಗಳಿಗೆ ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸಿದರು.
Shivamogga District Police ವಿಜಯಿಯಾದ ಜಿಲ್ಲಾ ಪೋಲೀಸ್ ತಂಡಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ನಿರ್ದೇಶಕ ಎನ್. ರವಿಕುಮಾರ್ ಬಹುಮಾನ ಸ್ಮರಣಿಕೆ ನೀಡಿದರು.
ಪತ್ರಕರ್ತರಾದ ಹುಲಿಮನೆ ತಿಮ್ಮಪ್ಪ, ಗೋಪಾಲ್ ಯಡಗೆರೆ, ವೈದ್ಯನಾಥ್, ಜೇಸುದಾಸ್, ಕಿರಣ್ ಕಂಕಾರಿ, ನಾಗರಾಜ ನೇರಿಗೆ, ವಿ. ಟಿ. ಅರುಣ್, ಜಗದೀಶ್ ಅಮೋಘ ಮೊದಲಾದವರು ಉಪಸ್ಥಿತರಿದ್ದರು.-
Karnataka Public Service Commission ಡಿ. 7ಪಿಡಿಓ ಸ್ಪರ್ಧಾತ್ಮಕ ಪರೀಕ್ಷೆ ಪರೀಕ್ಷಾ ಕೇಂದ್ರದ ಫಾಸಲೆಯಲ್ಲಿ ನಿಷೇಧಾಜ್ಞೆ ಜಾರಿ
Karnataka Public Service Commission ಕರ್ನಾಟಕ ಲೋಕಸೇವಾ ಆಯೋಗ ನಡೆಸುತ್ತಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿನ ಉಳಿದ ಮೂಲ ವೃಂದದ -150 ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳ ನೇಮಕಾತಿ ಸಲುವಾಗಿ ಡಿ.07 ರಂದು ಮಧ್ಯಾಹ್ನ 2.00 ರಿಂದ 04ರವರೆಗೆ ಕನ್ನಡ ಭಾಷಾ ಪರೀಕ್ಷೆಯನ್ನು ಶೀವಮೊಗ್ಗ ನಗರದ 34 ಪರೀಕ್ಷಾ ಕೇಂದ್ರಗಳಲ್ಲಿ ಮತ್ತು ಡಿ.08 ರಂದು ಬೆಳಗ್ಗೆ 10.00 ರಿಂದ 11.30ರವರೆಗೆ ಹಾಗೂ ಮಧ್ಯಾಹ್ನ 2.00 ರಿಂದ 4.00ರವರೆಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಶಿವಮೊಗ್ಗ ನಗರದ 11 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಿದ್ದು, ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀ ಫಾಸಲೆಯವರೆಗಿನ ಪ್ರದೇಶದಲ್ಲಿ ಡಿ. 07ರ ಮಧ್ಯಾಹ್ನ 1.00 ರಿಂದ ಸಂಜೆ 5.00 ರವರೆಗೆ ಹಾಗೂ ಡಿ. 08 ರಂದು ಬೆಳಗ್ಗೆ 9.00 ರಿಂದ ಸಂಜೆ 5.00 ರವರೆಗೆ ಭಾ.ನಾ.ಸು.ಸಂ.: -2023ರ ಕಲಂ 163ರನ್ವಯ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಹೇಮಂತ್ ಎನ್.ರವರು ಅದೇಶ ನೀಡಿದ್ದಾರೆ.
Karnataka Public Service Commission ಪರೀಕ್ಷಾ ಅವಧಿಯಲ್ಲಿ ಪರೀಕ್ಷಾ ಕೇಂದ್ರದ ಸುತ್ತಳತೆಯಲ್ಲಿ ಐದು ಮತ್ತು ಐದಕ್ಕಿಂತ ಹೆಚ್ಚು ಜನರು ಸೇರುವುದನ್ನು ನಿಷೇಧಿಸಿದೆ. ಟೈಪಿಂಗ್, ಜೇರಾಕ್ಸ್ ಮತ್ತು ಫ್ಯಾಕ್ಸ್ ಅಂಗಡಿಗಳು ಪರೀಕ್ಷಾ ಅವಧಿಯಲ್ಲಿ ಪ್ರತಿಬಂಧಿಸಿದೆ. ಮೊಬೈಲ್ ಬಳಕೆಯನ್ನು ನಿಷೇಧಿಸಿದೆ. ಪರೀಕ್ಷೆಗೆ ಸಂಬಂಧಪಟ್ಟ ಸಿಬ್ಬಂದಿ/ಅಧಿಕಾರಿಗಳನ್ನು ಹೊರತುಪಡಿಸಿ ಇತರೆ ಪರೀಕ್ಷಾ ಕೇಂದ್ರಗಳ ಫಾಸಲೆ ಪ್ರವೇಶಿಸುವುದನ್ನು ನಿಷೇಧಿಸಿದೆ.
Shivamogga City Corporation ನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೊಸತಾಗಿ ನೀರಿನ ನಲ್ಲಿ ಸಂಪರ್ಕ ಪ್ರಕ್ರಿಯೆಗೆ ಪ್ಲಂಬರ್/ಮಧ್ಯವರ್ತಿಗಳಿಂದ ಅರ್ಜಿ ಆಹ್ವಾನ
Shivamogga City Corporation ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೊಸದಾಗಿ ನೀರಿನ ನಳ ಸಂಪರ್ಕ ಪಡೆಯಲು ಪ್ಲಂಬರ್/ಮಧ್ಯವರ್ತಿಗಳ ಮೂಲಕ ಮಂಡಳಿಗೆ ಅರ್ಜಿ ಸಲ್ಲಿಸಿದೇ ನೇರವಾಗಿ ಕಚೇರಿಯನ್ನು ಸಂಪರ್ಕಿಸಿ ನಿಗದಿತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವಂತೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.
Shivamogga City Corporation ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08182-273096 ನ್ನು ಸಂಪರ್ಕಿಸುವುದು
Kuvempu University ಯುವಜನೋತ್ಸವದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳು ಜ್ಞಾನಮಟ್ಟ ಹೆಚ್ಚಿಸಿಕೊಳ್ಳಬೇಕು-ಪ್ರೊ.ಎಸ್.ಗೋಪಿನಾಥ್
Kuvempu University ವಿಜ್ಞಾನ ಯುವ ಜನತೆಗೆ ದಾರಿದೀಪ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಸಾಂಸ್ಕೃತಿಕ ಮತ್ತು ವಿಜ್ಞಾನದ ವಸ್ತು ಪ್ರದರ್ಶನದಂತಹ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಬೇಕೆಂದು ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರಾದ(ಮೌಲ್ಯಮಾಪನ) ಪ್ರೊ. ಗೋಪಿನಾಥ್ ಎಸ್. ನುಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ ಶಿವಮೊಗ್ಗ, ಹಾಗೂ ಕುವೆಂಪು ವಿಶ್ವವಿದ್ಯಾಲಯ, ಸಹ್ಯಾದ್ರಿ ವಿಜ್ಞಾನ ಕಾಲೇಜು,ಶಿವಮೊಗ್ಗ ರಾಷ್ಟ್ರಿಯ ಸೇವಾ ಯೋಜನೆ ಇವರುಗಳ ಸಹಯೋಗದಲ್ಲಿ “ಜಿಲ್ಲಾ ಮಟ್ಟದ ಯುವಜನೋತ್ಸವ”ದ ಅಂಗವಾಗಿ ಹಮ್ಮಿಕೊಂಡ ವಿಜ್ಞಾನ ಮೇಳ ಮತ್ತು ಯುವ ಕೃತಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿಜ್ಞಾನ ಅಧ್ಯಯನ ಮಾಡುವ ವಿಜ್ಞಾನದ ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕೆಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಪ್ರೊ. ಶುಭಾ ಮರವಂತೆ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಬರುವ “ಮೈಭಾರತ್ ಪೊರ್ಟಲ್ ಮತ್ತು “ಯುವ ಸ್ಪಂದನ” “ಯುವ ಕಣಜ” ಇಂತಹ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳ ನೋಂದಣಿ ಮಾಡಿಕೊಳ್ಳುವ ಮೂಲಕ ತನ್ನ ಅನನ್ಯತೆಯನ್ನು ರಾಜ್ಯ,ರಾಷ್ಟ್ರ ಅಷ್ಟೇ ಅಲ್ಲದೆ ಅಂತರ್ ರಾಷ್ಟ್ರೀಯ ಮಟ್ಟದ ಖ್ಯಾತಿಯನ್ನು ಪಡೆದಿದೆ ಎಂದರು.
Kuvempu University ಕಾರ್ಯಕ್ರಮದ ಸಂಚಾಲಕರಾದ ಕಾಲೇಜಿನ ರಾ.ಸೇ.ಯೋ ಘಟಕ 1ರ ಅಧಿಕಾರಿಗಳಾದ ಡಾ. ಹಾ. ಮ ನಾಗಾರ್ಜುನ ಎಲ್ಲರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ವಿಜ್ಞಾನದ ಸಂಶೋಧನಾತ್ಮಕ ವಸ್ತು ಪ್ರದರ್ಶನ ಮತ್ತು ಮೇಳಗಳು ವಿದ್ಯಾರ್ಥಿಗಳಲ್ಲಿ ಜೀವನೋತ್ಸಾಹವನ್ನು ಹೆಚ್ಚಿಸುತ್ತವೆ ಮತ್ತು ಸ್ಪರ್ಧಾಮನೋಬಾವವನ್ನು ಇಮ್ಮಡಿಗೊಳಿಸುತ್ತವೆ. ಇಂತಹ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ಸ್ಪರ್ಧಿಸಲು ಅಧ್ಯಾಪಕರು ಮಾರ್ಗದರ್ಶಕರಾಗಿ ಬೆಂಬಲಿಸಿದಾಗ ಕಾರ್ಯಕ್ರಮಗಳು ಇನ್ನಷ್ಟು ಯಶಸ್ವಿಯಾಗಲು ಸಾದ್ಯವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಪ್ರೊ ರಾಜೇಶ್ವರಿ ಎನ್ ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನೆಹರು ಯುವ ಕೇಂದ್ರದ ಯುವ ಅಧಿಕಾರಿಗಳಾದ ಉಲ್ಲಾಸ ಕೆ. ಟಿ. ಕೆ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ರೇಖ್ಯಾನಾಯ್ಕ್, ರಾ.ಸೇ.ಯೋ ಅಧಿಕಾರಿಗಳಾದ ಅರುಣಕುಮಾರ ಉಪಸ್ಥಿತರಿದ್ದರು, ಕಾರ್ಯಕ್ರಮದಲ್ಲಿ ಪಾಲ್ಗೊಂಡವರನ್ನು ರೇಖ್ಯಾನಾಯ್ಕ್ ಅವರು ವಂದಿಸಿದರು. ಕುಮಾರಿ ರಶ್ಮಿ ಮೇಘಶ್ರೀ ಪ್ರಾರ್ಥಿಸಿದರು, ಕುಮಾರ ಮೋಹನ್ ಗೌಡ,ಮಂಜುನಾಥ,ಪ್ರಕೃತಿ ನಿರೂಪಿಸಿದರು. ಸಮಾರೋಪ ಕಾರ್ಯಕ್ರಮದಲ್ಲಿ ಪ್ರೊ. ನಾಗರಾಜ ಪರಿಸರರವರು ಉಪಸ್ಥಿತರಿದ್ದರು. ವಿಜ್ಞಾನ ಮೇಳದ ತೀರ್ಪುಗಾರರಾಗಿ ಡಾ. ಎಂ.ಎಚ್ ಮೊಹಿನುದ್ದಿನ್ ಖಾನ್, ಡಾ. ಅಮಿತ್ ಕುಮಾರ್, ಪ್ರೊ. ವಿದ್ಯಾಶಂಕರರವರು ಆಗಮಿಸಿದ್ದರು. ವಿಜ್ಞಾನ ಮೇಳದಲ್ಲಿ ತಂಡ ಮತ್ತು ವೈಯಕ್ತಿಕವಾಗಿ ಭಾಗವಹಿಸಿದ್ದಅಭ್ಯರ್ಥಿಗಳಿಗೆ ನಗದು ಬಹುಮಾನ, ಪಾರಿತೋಷಕ ಮತ್ತು ಪ್ರಶಸ್ತಿಪತ್ರವನ್ನು ನೀಡಲಾಯಿತು.
