Monday, March 23, 2026
Monday, March 23, 2026
Home Blog Page 479

Bejjuvalli Mescom ಬೆಜ್ಜುವಳ್ಳಿ ಮೆಸ್ಕಾಂ ಕಛೇರಿಯಲ್ಲಿ ಡಿ.10 ರಂದು ಗ್ರಾಹಕ ಸಂಪರ್ಕ ಸಭೆ

0

Bejjuvalli Mescom ಬೆಜ್ಜುವಳ್ಳಿ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ದಿನಾಂಕ 10.12.2024 ರಂದು ಸಮಯ ಬೆಳಿಗ್ಗೆ 11.00 ರಿಂದ 01.00 ಗಂಟೆಯವರೆಗೆ ನಡೆಯಲ್ಲಿದ್ದು, ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದಾರೆ, ಈ ಸಭೆಯಲ್ಲಿ ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಗ್ರಾಹಕರು ಈ ಅವಕಾಶದ ಸದುಪಯೋಗ ಪಡೆದುಕೊಳ್ಳುವಂತೆ ಮೆಸ್ಕಾಂ ತಿಳಿಸಿದೆ.

Bejjuvalli Mescom ಹೆಚ್ಚಿನ ಮಾಹಿತಿಗಾಗಿ ದೂ. ಸಂ.;8277882835 ಸಂಪರ್ಕಿಸುವುದು.

Klive Special Article ಇತಿಹಾಸ ನಿರ್ಮಿಸಿದ ಅಯೋಧ್ಯಾ ಪ್ರವಾಸ ನಾಯಕ ಈಶ್ವರಪ್ಪನವರ ಸಾರ್ಥಕ ಪ್ರಯತ್ನ

0

Klive Special Article ಲೇ: ಡಾ.ಮೈತ್ರೇಯಿ ಆದಿತ್ಯ ಪ್ರಸಾದ್.
ಶಿವಮೊಗ್ಗ.

Klive Special Article ಅಯೋಧ್ಯಾ ಮಥುರಾ ಮಾಯಾ ಕಾಶೀ ಕಾಂಚೀ ಅವಂತಿಕಾ l
ಪುರೀ ದ್ವಾರಾವತೀ ಚೈವ ಸಪ್ತೈತೇ ಮೋಕ್ಷದಾಯಿಕಾಃ ll
ಅಖಂಡ ಭಾರತದ ವಿವಿಧ ಪ್ರದೇಶಗಳಲ್ಲಿ ನೆಲೆಸಿರುವ ಪ್ರಮುಖವಾದ ಪುಣ್ಯಕ್ಷೇತ್ರಗಳೇ ಸಪ್ತ ಮೋಕ್ಷದಾಯಕ ಕ್ಷೇತ್ರಗಳೆಂದು ಕರೆಯಲ್ಪಡುತ್ತದೆ. ಮನುಷ್ಯನು ತನ್ನ ಜೀವನದಲ್ಲಿ ಒಮ್ಮೆಯಾದರೂ ಈ ಏಳು ಪುಣ್ಯ ಸ್ಥಳಗಳ ದರ್ಶನ ಮಾಡಿದರೆ ಅವನ ಪಾಪ ಕರ್ಮಗಳೆಲ್ಲವೂ ನಾಶವಾಗಿ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆ ಭಾರತಿಯರಲ್ಲಿ ಬಲವಾಗಿ ಬೇರೂರಿದೆ.

ಹಿಂದೆ ಮಹಾಭಾರತದ ಕಾಲದಲ್ಲಿ ಪಾಂಡವರು ಸಹ ಕುರುಕ್ಷೇತ್ರ ಯುದ್ಧದ ತರುವಾಯ ರಣಭೂಮಿಯಲ್ಲಿ ತಮ್ಮಿಂದಾದ ಹತ್ಯೆಯ ಪಾಪಗಳನ್ನು ನಿವಾರಿಸಿಕೊಳ್ಳಲು ಈ ಪವಿತ್ರವಾದ ಏಳು ಕ್ಷೇತ್ರಗಳಿಗೆ ತೆರಳಿ ಅಲ್ಲಿರುವ ಪ್ರಮುಖ ದೇವರುಗಳ ದರ್ಶನ ಪಡೆದು ತಮ್ಮೆಲ್ಲ ಪಾಪ ಕರ್ಮಗಳಿಂದ ಮುಕ್ತರಾಗಿ ಸ್ವರ್ಗಕ್ಕೆ ಪ್ರಯಾಣಿಸಿದರು ಎಂಬ ಪ್ರತೀತಿ ಇದೆ.

ಈ ಏಳು ಕ್ಷೇತ್ರಗಳು ಮೂಲತಃ ವಿಷ್ಣುವಿನ ವಿವಿಧ ಅವತಾರಗಳು ಜನ್ಮವೆತ್ತಿದ ಹಾಗೂ ಉಚ್ಚಮಟ್ಟದ ದೈವಿ ಪ್ರಭಾವವನ್ನು ಪ್ರತಿನಿಧಿಸುವ ಪರಮ ಪಾವನ ಕ್ಷೇತ್ರಗಳಾಗಿವೆ. ಈ ಪುಣ್ಯಕ್ಷೇತ್ರಗಳು ಪ್ರಾಚೀನ ಕಾಲದಿಂದಲೂ ನಮ್ಮ ರಾಷ್ಟ್ರ ಭಾವದೊಂದಿಗೆ ಸ್ಪಂದಿಸುತ್ತಾ ಬಂದಿದೆ. ಅವು ಸಮನ್ವಯದ ಸಾಧನಗಳಾಗಿಯೂ, ಭಾರತದ ಏಕತೆಯ ಜೀವಂತ ಸಾಕ್ಷಿಗಳಂತೆಯು ಕೆಲಸ ಮಾಡಿವೆ. ನಮ್ಮ ಶ್ರೇಷ್ಠವಾದ ಸಂಸ್ಕೃತಿ, ನಡವಳಿಕೆಗಳ ವಿಕಾಸ ಮತ್ತು ಪ್ರಸಾರಗಳಲ್ಲಿ ಈ ಕ್ಷೇತ್ರಗಳ ಕೊಡುಗೆ ಅಪೂರ್ವವಾದದ್ದಾಗಿದೆ. ಈ ಕ್ಷೇತ್ರಗಳಿಂದ ನಮ್ಮ ಸಮಾಜಕ್ಕೆ ಅಧ್ಯಾತ್ಮಿಕ ಚಿಂತನದ ಜೊತೆಯಲ್ಲಿ ಭೌತಿಕ ಅಭ್ಯುದಯದ ಮಾರ್ಗದರ್ಶನವೂ ಸಿಕ್ಕಿದೆ. ಇವು ನಮ್ಮ ನಾಡಿನ ಮೌಲ್ಯಗಳ ರಕ್ಷಣಾ ಕೇಂದ್ರಗಳು. ಇಂತಹ ಪರಮ ಪವಿತ್ರ ತೀರ್ಥಕ್ಷೇತ್ರಗಳಲ್ಲಿ ಪ್ರಮುಖವಾದ ಅಯೋಧ್ಯೆ ಹಾಗೂ ಕಾಶಿ ಕ್ಷೇತ್ರಗಳಿಗೆ ಶ್ರೀಯುತ ಸನ್ಮಾನ್ಯ ಈಶ್ವರಪ್ಪನವರು ಹಾಗೂ ಶ್ರೀಕಾಂತೇಶ್ ರವರು ಶಿವಮೊಗ್ಗದ ಜನತೆಗಂದೇ ವಿಶೇಷ ರೈಲಿನಲ್ಲಿ ಯಾತ್ರೆ ಏರ್ಪಡಿಸಿ, ಅದು ಸಾರ್ಥಕತೆಯ ಭಾವದೊಂದಿಗೆ ಸಂಪನ್ನಗೊಂಡಿದೆ. ಯಾತ್ರೆಯ ಅನುಭವಗಳೇ ಅಲ್ಲದೆ ಅಲ್ಲಿ ನಾಕಂಡ ಅನೇಕ ವೈಶಿಷ್ಟ್ಯತೆಗಳನ್ನು ಹಂಚಿಕೊಳ್ಳುವ ಸಲುವಾಗಿಯ ಬರೆದ ಲೇಖನ ಇದು.
ಮೊದಲನೆಯದಾಗಿ ಅಯೋಧ್ಯೆ ಮತ್ತು ಕಾಶಿಯ ಕುರಿತಾಗಿ ಸ್ವಲ್ಪ ತಿಳಿದುಕೊಳ್ಳೋಣ-

ಅಯೋಧ್ಯೆ
ಮೋಕ್ಷ ನೀಡುವ ಏಳು ನಗರಗಳಲ್ಲಿ ಮೊದಲನೆಯ ಅಯೋಧ್ಯೆ. ಯುದ್ಧದ ಕಲ್ಪನೆಯನ್ನು ಮಾಡದಿರುವಂತಹ ಶಾಂತಿ ಪ್ರಿಯರ ನಗರವಾಗಬೇಕೆಂಬ ಭಾವನೆಯಿಂದ ಇದನ್ನು ಅಯೋಧ್ಯ ಎಂದು ಕರೆದದ್ದು. ಮನು ಚಕ್ರವರ್ತಿಯು ಈ ನಗರ ನಿರ್ಮಾತೃ ಎಂದು ರಾಮಾಯಣದಲ್ಲಿದೆ. ಭಗವಾನ್ ವಿಷ್ಣುವಿನ ಶೀರ್ಷ ಸ್ಥಾನದಂತಿರುವ ಅಯೋಧ್ಯೆಯು ಮತ್ಸ್ಯಾಕಾರದಲ್ಲಿದೆ ಎಂದು ಸ್ಕಾಂದ ಪುರಾಣದಲ್ಲಿದೆ. ಶ್ರೀರಾಮನ ಕಾಲದಲ್ಲಿ ಅಯೋಧ್ಯೆಯು 12 ಯೋಜನ ಉದ್ದ ಮತ್ತು 3 ಯೋಜ ಅಗಲದ ಒಂದು ಮಹಾನಗರವಾಗಿತ್ತು. ವ್ಯವಸ್ಥಿತವಾದ ಮಾರುಕಟ್ಟೆ,ಗಗನಚುಂಬಿ ಕಟ್ಟಡಗಳು,ವಿಶಾಲವಾದ ರಾಜಬೀದಿಗಳು, ಬಲಿಷ್ಟವಾದ ಶಸ್ತ್ರ ಸಜ್ಜಿತ ಸೇನೆ, ಕೊರತೆ ಇಲ್ಲದ ಅರ್ಥ ವ್ಯವಸ್ಥೆ, ದುಃಖ ದೈನ್ಯಗಳಿಂದ ಮುಕ್ತವಾದ ದೇಶ ಭಕ್ತ ಪ್ರಜಾ ಕೋಟಿ ಒಟ್ಟಿನಲ್ಲಿ ದೇವದುರ್ಲಭವಾದ ನಗರ. ಸಂತ ತುಳಸಿದಾಸರು ಅಯೋಧ್ಯೆಯ ಕುರಿತು ಹೇಳುವಾಗ ” ವೇದ – ಪುರಾಣಗಳು ವೈಕುಂಠ ನಗರದ ವರ್ಣನೆ ಮಾಡಿದ್ದರೂ, ಅಯ್ಯೋದ್ಯೆಗಿಂತ ಹೆಚ್ಚಿನ ಆನಂದ ಇನ್ನೆಲ್ಲೂ ಸಿಗದು” ಎಂದಿದ್ದಾರೆ. ಈ ಪವಿತ್ರ ನಗರ ಸರಯೂ ತೀರದಲ್ಲಿದೆ. ಆಳವಾಗಿ, ಅಗಲವಾಗಿ ಹರಿಯುವ ಸರಯೂ ಧನ್ಯೆ. ರಾಮನ ಸೇವೆ ಮಾಡಿದ ಆಕೆ ಕೊನೆಗೊಮ್ಮೆ ಅವನನ್ನು ತನ್ನ ಬಸಿರಲ್ಲೇ ಅಡಗಿಸಿಕೊಂಡ ಪಾವನೆ.
ರಾಮನಾಮೋಚ್ಛಾರದಿಂದ ದರೋಡೆಕೋರನಾಗಿದ್ದ ರತ್ನಾಕರ ವಾಲ್ಮೀಕಿಯಾದ. ರಾಮ ಕಥೆಯಿಂದ ತುಳಸಿದಾಸರೇ ಮೊದಲಾಗಿ ಆಧುನಿಕ ಕಾಲದಲ್ಲಿ ಕುವೆಂಪು, ಡಿ.ವಿ.ಜಿ ಹೀಗೆ ಅನೇಕ ಶ್ರೇಷ್ಠ ಕವಿಪುಂಗವರನ್ನು ಭಾರತಕ್ಕೆ ನೀಡಿದೆ. ಶ್ರೀರಾಮ ರಾಷ್ಟ್ರಪುರುಷ. ಅವನ ಗಾಂಭೀರ್ಯವನ್ನು ದಕ್ಷಿಣದ ಸಾಗರದೊಂದಿಗೆ ಮತ್ತು ಧೈರ್ಯವನ್ನು ಉತ್ತರದ ಹಿಮಾಲಯದೊಂದಿಗೆ ಹೋಲಿಸುತ್ತಾರೆ ದೈವೀ ಪುರುಷನ ಹೆಮ್ಮೆಯ ನಗರ ಮನುಕುಲದ ಮೊದಲ ರಾಜಧಾನಿ ಅಯೋಧ್ಯೆ.

ಈ ನಗರ ಸಿಖ್ಖರು, ಬೌದ್ಧರು ಹೀಗೆ ಎಲ್ಲರಿಗೂ ಶ್ರದ್ಧಾ ಕೇಂದ್ರವಾಗಿದ್ದರೂ ಅದು ಮುಸಲ್ಮಾನರ ಧಾಳಿಗೆ ಒಳಗಾಗಿ ತನ್ನ ಭವ್ಯತೆಯನ್ನೇ ಕಳೆದುಕೊಂಡಿತ್ತು. ನಂತರ ಅಸಂಖ್ಯಾತ ಹಿಂದುಗಳ ಬಹು ವರ್ಷದ ಹೋರಾಟದ ಫಲವಾಗಿ, ತ್ಯಾಗ ಬಲಿದಾನಕ್ಕೆ ನ್ಯಾಯ ದೊರಕಿ ಪ್ರಭು ಶ್ರೀರಾಮಚಂದ್ರನು ರಾಮಲಲ್ಲಾ ಆಗಿ ಅಯೋಧ್ಯೆಯಲ್ಲಿ ಪುನರ್ ಪ್ರತಿಷ್ಠಾಪನೆಯಾಗಿ ಭವ್ಯವಾದ ರಾಮ ಮಂದಿರ ತಲೆಯೆತ್ತಿ ನಿಂತಿದೆ. ಅದನ್ನು ನೋಡಿ ಕಣ್ತುಂಬಿಸಿಕೊಳ್ಳುವುದೇ ಒಂದು ಪುಣ್ಯದ ಕ್ಷಣ.

ಕಾಶಿ

ಇದು ಅತ್ಯಂತ ಪುರಾತನ ತೀರ್ಥಕ್ಷೇತ್ರಗಳಲ್ಲಿ ಒಂದು. ಇದನ್ನು ಆದಿ ಕ್ಷೇತ್ರ ಎಂದು ಕರೆಯುತ್ತಾರೆ. “ಕಾಶ್ಯಾಂ ಮರಣಾನ್ಮುಕ್ತಿಃ”. ಅಂದರೆ ಕಾಶಿಯಲ್ಲಿ ಶರೀರ ಬಿಟ್ಟವರಿಗೆ ಮುಕ್ತಿ ದೊರೆಯುತ್ತದೆ ಎಂದು ಹಿಂದುಗಳ ಅಚಲ ವಿಶ್ವಾಸ. ಗಂಗೆಯ ದಡದಲ್ಲಿರುವ ದಿವ್ಯ ಕ್ಷೇತ್ರವು ಎಲ್ಲ ಭಾರತೀಯರ ಮತ್ತು ವಿಶೇಷವಾಗಿ ಶಿವಭಕ್ತರ ಪರಮ ಶ್ರದ್ಧಾ ಕೇಂದ್ರವಾಗಿದೆ. ಔರಂಗಜೇಬನ ಕಾಲದಲ್ಲಿ ಇದು ದಾಸ್ಯಕ್ಕೆ ಒಳಗಾಗಿತ್ತು ಈ ದಿವ್ಯ ಕ್ಷೇತ್ರವನ್ನು ದಾಸ್ಯದಿಂದ ಮುಕ್ತಗೊಳಿಸಬೇಕೆಂದು ಶಿವಾಜಿ ಮಹಾರಾಜನು ಬಯಸಿದ್ದರು. ಔರಂಗಜೇಬನು ದೇವಾಲಯ ಒಡೆದು ಮಸೀದಿ ಮಾಡಿದ್ದು ದೇವಸ್ಥಾನಕ್ಕೆ ಎಸಗಿದ ಅತ್ಯಾಚಾರವೇ ಆಗಿದೆ. ಈ ಅತ್ಯಾಚಾರದ ಬಳಿಕ ಪುನಃ ಒಂದು ಶತಮಾನ ಶಿವ ಮಂದಿರವಿಲ್ಲದೆ ಕಾಶಿ, ಕಳೆಗುಂದಿತ್ತು. ಇಂದು ಕಾಶಿಯಲ್ಲಿರುವ ವಿಶ್ವನಾಥ ಮಂದಿರವು ಇಂದೋರಿನ ಮಹಾರಾಣಿ ಅಹಲ್ಯಾಬಾಯಿ ಹೋಳ್ಕರಳಿಂದ 1766 ರಲ್ಲಿ ಕಟ್ಟಿಸಲ್ಪಟ್ಟಿದ್ದು. ಆಕೆಗೆ ವಿಶ್ವೇಶ್ವರನು ಕನಸಿನಲ್ಲಿ ಕಂಡು ಮಂದಿರವನ್ನು ನಿರ್ಮಿಸುವಂತೆ ಹೇಳಿದುದರಿಂದ ಆಕೆ ಇದನ್ನು ಕಟ್ಟಿಸಿದಳು. ಇದರಿಂದ ಹಿಂದೂ ಸಮಾಜದ ಕೊರಗೊಂದು ದೂರವಾಯಿತು. ಕಾಶಿ ಬೌದ್ಧರೇ ಮೊದಲಾಗಿ ಎಲ್ಲರ ತೀರ್ಥಕ್ಷೇತ್ರವು ಹೌದು. ಇಲ್ಲಿ ಅನ್ನಪೂರ್ಣೇಶ್ವರಿ ಮಂದಿರ ಕಾಶಿ ಅರಮನೆ, ಗಂಗೆಯ ದಡದ ಘಟ್ಟಗಳ ಸೊಬಗು ಇತ್ಯಾದಿ ಅಸಂಖ್ಯಾತ ಸ್ಥಾನಗಳಿವೆ. ಕಾಶಿ, ಮಾನವ ಇತಿಹಾಸದಲ್ಲಿನ ಅತ್ಯಂತ ಪ್ರಾಚೀನ ವಿಶ್ವವಿದ್ಯಾನಿಲಯ. ಸಾಂಪ್ರದಾಯಿಕ ಅಧ್ಯಯನದ ಅಂತಿಮ ಘಟ್ಟ ಪ್ರಾಪ್ತವಾಗುವುದು ಕಾಶಿಯಲ್ಲಿ. ಇದು ಅನೇಕ ಬ್ರಹ್ಮರ್ಷಿಗಳ ಪಾದಸ್ಪರ್ಶದಿಂದ ಪುನೀತವಾಗಿರುವ ಮತ್ತು ಸ್ವತಃ ಶಂಕರನ ರಾಜಧಾನಿಯಾಗಿರುವ ಭಾರತದ ಹೃದಯವೆಂದರೆ ಅತಿಶಯೋಕ್ತಿಯಾಗಲಾರದು.

Klive Special Article ಇಂತಹ ಪರಮ ಪವಿತ್ರ ತೀರ್ಥಕ್ಷೇತ್ರಗಳನ್ನು ನನಗೆ ನೋಡುವ ಭಾಗ್ಯ ದೊರೆತಿದ್ದು ಒಂದು ಮನೆದೈವವಾದ ಆಂಜನೇಯನ ಕೃಪೆಯಾದರೆ, ಇನ್ನೊಂದು ನಮ್ಮ ಅತ್ತೆಯವರಿಂದ. ಮಾವನವರಿಲ್ಲದ ಕಾರಣ ಬೇರೆ ಯಾರೋ ಕಳೆದ ಬಾರಿ ಕಾಶಿಗೆ ಹೊರಟಿದ್ದರು ಅವರೊಂದಿಗೆ ನೀವು ಹೋಗುವಿರಾ ಎಂದರೆ ಏನೆಂದರೂ ಅತ್ತೆಯವರು ಒಪ್ಪಲೇ ಇಲ್ಲ. ಆದರೆ ಈ ಬಾರಿ ಶಿವಮೊಗ್ಗದಿಂದಲೇ ರೈಲು ಹೊರಟು ಇಲ್ಲಿಗೇ ಕರೆತಂದು ಬಿಡುತ್ತದೆ ಎಂದಾಗ ಅತ್ತೆಯವರು ನೀ ಬರುವುದಾದರೆ ನಾನು ಹೋಗುವೆ ಎಂದರು. ಹಾಗಾಗಿ ನಾನು ಕಾಲೇಜಿಗೆ ರಜೆ ಹಾಕಿ ಹೊರಡಬೇಕಾಯಿತು. ಮಗ ಸಿದ್ದಾರ್ಥನನ್ನು ಕರೆದುಕೊಂಡು ಹೋಗು ಎಂದು ಮನೆಯವರು ಹೇಳಿದಾಗ ಅವನ ಶಾಲೆಯಲ್ಲಿ ರಜೆ ನೀಡಿದ್ದರಿಂದ ಎಲ್ಲರೂ ಅಯೋಧ್ಯೆ ಕಾಶಿ ಯಾತ್ರೆ ಮಾಡುವಂತೆ ಆಯಿತು.

ಕರ್ನಾಟಕದ ಮಾಜಿ ಉಪ ಮುಖ್ಯಮಂತ್ರಿಗಳಾದ ಶ್ರೀಯುತ ಈಶ್ವರಪ್ಪನವರ ಕುರಿತಾಗಿ ಇಲ್ಲಿ ಹೇಳಲೇಬೇಕು. ಓಂ ಶಕ್ತಿ ಯಾತ್ರೆ ಮಾಡಿಸುವ ಮೂಲಕ ನಗರದ ಅನೇಕರಿಗೆ ಒಂದೊಳ್ಳೆ ತೀರ್ಥಯಾತ್ರೆ ಮಾಡಿ ಪುಣ್ಯ ಕಟ್ಟಿಕೊಂಡ ಅವರು ಅದ್ಯಾಕೋ ಮಗನೋಡಗೂಡಿ ಅಯೋಧ್ಯೆ ಕಾಶಿ ಯಾತ್ರೆ ಎಲ್ಲ ವರ್ಗದ ಜನರಿಗೂ ಮಾಡಿಸೋಣ ಎನಿಸುವ ಸಂಕಲ್ಪ ತೊಟ್ಟರು. ಅಯೋಧ್ಯೆಯ ಕರಸೇವೆ ಇತ್ಯಾದಿಗಳಲ್ಲಿ ಭಾಗವಹಿಸಿ ಪ್ರಭು ಶ್ರೀ ರಾಮನ ಆಶೀರ್ವಾದಕ್ಕೆ ಪಾತ್ರರಾದ ಅಪ್ಪಟ ಹಿಂದೂ ವಾದವನ್ನು ಹೊಂದಿರುವ ಅವರು ಹಾಗೂ ಅವರ ಮನೆಯವರ ಸಂಸ್ಕಾರ ಎಲ್ಲವೂ ಒಬ್ಬ ಮನೆಯ ಯಜಮಾನ ಮನೆಯವರಿಗೆಲ್ಲಾ ಯಾತ್ರೆ ಮಾಡಿಸಿದಂತೆ ತಾನೇ ನಿಂತು ಎಲ್ಲ ವ್ಯವಸ್ಥೆಯನ್ನು ಖುದ್ದಾಗಿ ಗಮನಿಸಿ ಒಂದಿನಿತೂ ಲೋಪವಾಗದಂತೆ ಯಾತ್ರೆ ಮಾಡಿಸಿದ ಮಹಾತ್ಮ. ಸ್ವತಃ ತಮ್ಮ ಕುಟುಂಬ ರೈಲಿನಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ಯಾತ್ರೆ ಮಾಡಿರುವುದು ಸಹ ವಿಶೇಷವೇ ಸರಿ.

23ರ ಶನಿವಾರ ಬೆಳಗ್ಗೆ 6.30ಕ್ಕೆ ಜೈ ಶ್ರೀ ರಾಮ್ ಹರ ಹರ ಮಹಾದೇವ್ ಎಂಬ ಜೈಕಾರದೊಂದಿಗೆ ಆರಂಭವಾದ ನಮ್ಮ ಯಾತ್ರೆ ಹೋಗುವಾಗ ಭೋಗಿ ಭೋಗಿಗಳಲ್ಲಿ ವಿಷ್ಣು ಸಹಸ್ರನಾಮ ಲಲಿತಾ ಸಹಸ್ರನಾಮ ಪಾರಾಯಣವೇ ಮೊದಲಾಗಿ ರಾಮರಕ್ಷಾ ಸ್ತೋತ್ರ ಹನುಮಾನ್ ಚಾಲೀಸಾ ರಾಮ ತಾರಕ ಮಂತ್ರಗಳಿಂದ ಅಲ್ಲದೆ ಭಜನೆ ಕುಣಿತವೆ ಮೊದಲಾಗಿ ನಿಜವಾಗಿಯೂ ತೀರ್ಥಯಾತ್ರೆಗೆ ಒಂದು ಕಳೆ ಬಂದಿತ್ತು. ಎಲ್ಲೆಡೆಯೂ ಕೇಳಿ ಬರುತ್ತಿದ್ದ ರಾಮ ತಾರಕ ಮಂತ್ರ ಇಂಪಾಗಿ ಮಧುರವಾಗಿ ಆನಂದ ತರುವಂತಿತ್ತು. ಯಾತ್ರೆಗೆ ಹೊರಟದ್ದು 1450ಕ್ಕೂ ಹೆಚ್ಚು ಮಂದಿ 19 ಭೋಗಿಗಳಲ್ಲಿ ಜನ ಹೊರಟಿದ್ದೆವು. ಅದರಲ್ಲಿಯೂ ಮುಕ್ಕಾಲು ಪಾಲು ಜನರು ಮಹಿಳೆಯರೇ ಇದ್ದರು. ಆದರೂ ಒಬ್ಬರು ಕಿತ್ತಾಡದೆ ಜಗಳವಾಡದೆ ಯಾತ್ರೆ ಸಂಪನ್ನಗೊಳಿಸಿದರು. ವಿವಿಧ ಸಮುದಾಯದವರೆಲ್ಲ ಸೇರಿ ಹೊರಟ ಈ ಯಾತ್ರೆ, ನಾವೆಲ್ಲ ಹಿಂದೂ ನಾವೆಲ್ಲ ಬಂಧು ಎಂಬ ಭಾವ ಮೂಡಿಸುವಂತಿತ್ತು.
ನಮಗೆ ನೀಡಿದ ವ್ಯವಸ್ಥೆಗಳ ಕುರಿತಾಗಿ ಇಲ್ಲಿ ಹೇಳಲೇಬೇಕು. ನಾವು ನೀಡಿದ್ದು ಕೇವಲ ರೂ.7,500 ಗಳು ಮಾತ್ರ. ಪ್ರತಿ ಹೊತ್ತಿಗೂ ಕಾಫಿ ತಿಂಡಿ ಊಟಗಳ ಜೊತೆಗೆ ನೀರು ಹಣ್ಣು ಇವುಗಳನ್ನು ಒದಗಿಸಲಾಗಿತ್ತು. ಸಂಜೆ ಸ್ನಾಕ್ಸ್, ಚಾಕಲೇಟ್ ಹಾಗೆ ಜ್ಯೂಸ್ ಇತ್ಯಾದಿಗಳ ಸೇವೆಯನ್ನು ಸ್ಮರಿಸಿಕೊಳ್ಳಲೇಬೇಕು. ಪ್ರತೀ ಭೋಗಿಗೂ ಸಹ ಪ್ರಮುಖರನ್ನು ನೇಮಿಸಿ ಅವರು ಟ್ರೈನ್ ನಲ್ಲಿ ಈ ವ್ಯವಸ್ಥೆಗಳ ಕುರಿತಾಗಿ ಗಮನಿಸಿಕೊಳ್ಳುತ್ತಿದ್ದರು. ರೈಲಿನ ಪ್ರಯಾಣ ಸುಖಕರವಾಗಿರುವಂತೆ ನೋಡಿಕೊಳ್ಳುವಲ್ಲಿ ಅವರು ಯಶಸ್ವಿಯಾದರು. ಇವುಗಳೇ ಅಲ್ಲದೆ ಯಾತ್ರಿಕರು ತಂದ ತಿಂಡಿಯು ಸೇರಿ ಒಮ್ಮೊಮ್ಮೆ ರಾತ್ರಿ ಊಟವೇ ಬೇಡವೆನಿಸುವಷ್ಟು ಎನಿಸಿ ಹೋಗಿತ್ತು. ಪ್ರತಿ ಹೊತ್ತಿಗೂ ಒಂದು ಲೀಟರ್ ನೀರು ಹಾಗೂ ಬಾಳೆಹಣ್ಣಿನ ವ್ಯವಸ್ಥೆ ಮಾಡಲಾಗಿತ್ತು. ಇದು ಊಟದ್ದಾದರೆ ರೈಲಿನಲ್ಲಿ ಸಾವಿರಾರು ಜನರು ಪ್ರಯಾಣಿಸುವಾಗ ಸ್ವಚ್ಛತೆ, ನೀರಿನ ವ್ಯವಸ್ಥೆ ಇವುಗಳು ಸಹ ಪ್ರಮುಖ ಎನಿಸುತ್ತದೆ. ಅವುಗಳನ್ನು ಕೂಡ ಸಾಧ್ಯವಾದಷ್ಟು ಸರಿಯಾಗುವಂತೆ ಒದಗಿಸಿ ಕೊಟ್ಟರು.
ಒಂದಿನ ನೀರಿಗಾಗಿ ಅರ್ಧ ಗಂಟೆಗೂ ಹೆಚ್ಚು ನಿಲ್ಲದ ರೈಲು ಅಲ್ಲಿ ವ್ಯವಸ್ಥೆ ಏರುಪೇರಾಗಿದ್ದರಿಂದ ಅದು ಸರಿಯಾಗುವವರೆಗೂ ನಮ್ಮನ್ನು ಬಿಟ್ಟು ಹೊರಟಿರಲಿಲ್ಲ. ಎಲ್ಲವನ್ನು ಖುದ್ದಾಗಿ ಈಶ್ವರಪ್ಪ ಹಾಗೂ ಕಾಂತೇಶ್ ರವರೆ ಗಮನಿಸಿಕೊಳ್ಳುತ್ತಿದ್ದು ವಿಶೇಷವಾಗಿತ್ತು. ಪ್ರತಿ ಭೋಗಿಗಳಿಗೂ ತೆರಳಿ ತಂದೆ ಮಗ ಎಲ್ಲರ ಯೋಗಕ್ಷೇಮ ವಿಚಾರಿಸುತ್ತಿದ್ದರು. ಅಷ್ಟು ದೂರದ ಪ್ರಯಾಣ ಆರೋಗ್ಯ ಸಮಸ್ಯೆ ಬರಬಹುದೆಂದು ಒಬ್ಬ ವೈದ್ಯ ನರ್ಸ್ ಹಾಗೂ ಮೆಡಿಸಿನ್ ವ್ಯವಸ್ಥೆ ಕೂಡ ಮಾಡಲಾಗಿತ್ತು. ಯಾರಿಗಾದರೂ ತೊಂದರೆಯಾಗಿದೆ ಎಂದು ಹೇಳಿದ ಕೂಡಲೇ ಬಂದು ಅವರನ್ನು ತಪಾಸಣೆ ಮಾಡುತ್ತಿದ್ದು ಸಹ ವಿಶೇಷವೇ.
ಅಯೋಧ್ಯೆಗೆ ಹೋಗುವಾಗ ಟ್ರೈನ್ ಕ್ರಾಸಿಂಗ್ ನಿಂದಾಗಿ ತಡವಾಗುತ್ತಿದೆ ಎಂಬ ವಿಷಯ ತಿಳಿದ ಈಶ್ವರಪ್ಪನವರು ಕೂಡಲೇ ಅದಕ್ಕೆ ಬೇಕಾದ ಮಂತ್ರಿಗಳನ್ನು ಸಂಪರ್ಕಿಸಿ ಅವರಿಂದ ಅಗತ್ಯವಾದ ವ್ಯವಸ್ಥೆ ಮಾಡಿಸಿದ ಅವರ ಕಾಳಜಿ ನಿಜಕ್ಕೂ ಮೆಚ್ಚಲೇಬೇಕು. ಏಕೆಂದರೆ ಅಯೋಧ್ಯೆಗೆ ಹೋಗುವುದು ತಡವಾಗುತ್ತದೆ ಎಂದು ತಿಳಿದಾಗ ಅವರ ಚಡಪಡಿಕೆ ನೋಡಬೇಕಿತ್ತು, ಟ್ರೈನ್ ತಡವಾಗಿ ತೆರಳಿದರೆ ದರ್ಶನ ಇತ್ಯಾದಿ ಆಯೋಜಿತ ಕಾರ್ಯಕ್ರಮಗಳಿಗೆ ತೊಂದರೆಯಾಗುತ್ತಿತ್ತು ಎಂದೆನಿಸಿ ಅದ್ಯಾವುದಕ್ಕೂ ತೊಂದರೆಯಾಗದಂತೆ ಆ ಕ್ಷಣಕ್ಕೆ ಕಾರ್ಯಕ್ರಮದ ರೂಪುರೇಷೆಯನ್ನು ಹೊಂದಿಸುವ ವ್ಯವಸ್ಥೆ ಮಾಡಿದ್ದರು.
ಸೋಮವಾರ ಮಧ್ಯಾಹ್ನ 11ಕ್ಕೆ ಹೋಗಬೇಕಾದ ಟ್ರೈನ್ ಅಯೋಧ್ಯೆ ತಲುಪಿದ್ದು 12:30 ಆಗಿತ್ತು. ತಕ್ಷಣ ಆಟೋಗಳು ನಮಗಾಗಿ ಕಾದಿದ್ದವು ವ್ಯವಸ್ಥಿತವಾಗಿ ಏಳು ಜನರ ತಂಡ ಅದಕ್ಕೊಬ್ಬ ಮುಖ್ಯಸ್ಥನನ್ನಾಗಿ ಮಾಡಿ ಸರಯೂ ತೀರಕ್ಕೆ ಹೋಗಿ ಸ್ನಾನ ಮುಗಿಸಿ ಊಟಕ್ಕೆ ಬಂದೆವು. ಪವಿತ್ರ ಸರಯೂ ಸ್ನಾನ ನಮ್ಮನ್ನು ಪುಳಕಿತರನ್ನಾಗಿಸಿದ್ದರಿಂದ ಊಟದ ಹಸಿವು ಆಗದೆ ಮೊದಲು ರಾಮನನ್ನೇ ನೋಡೋಣ ಎಂದು ಹೊರಟು ಪ್ರಭು ಶ್ರೀರಾಮನ ದರ್ಶನ ಮಾಡಿ ಕಣ್ಣಾಲಿಗಳು ತುಂಬಿದವು. ನಂತರ ಪ್ರಸಾದ ತೆಗೆದುಕೊಂಡು ಹೊರಬರುವ ಕಡೆ, ಕಾಲು ನೋವಾಗಿರಬಹುದು ಎಂದು ಉಚಿತ ಮಾತ್ರೆಯ ವ್ಯವಸ್ಥೆಯನ್ನು ರಾಮಜನ್ಮಭೂಮಿ ಟ್ರಸ್ಟ್ ನವರೆ ಮಾಡಿದ್ದು ವಿಶೇಷ. ನಂತರ ಹನುಮಾನ್ ಗಡಿ ನೋಡಿ ಹಾಗೆ ಸೀದಾ ಗೋಪಾಲ್ ಜೀಯವರ ಮಾತುಗಳನ್ನು ಕೇಳಲು ಮರಳಿದೆವು. ಅಷ್ಟೊಂದು ಜನಜಂಗುಳಿಯ ಪ್ರದೇಶದಲ್ಲೂ ನಮ್ಮ ತಂಡದವರನ್ನು ಯಶಸ್ವಿಯಾಗಿ ಮುನ್ನಡೆಸಿದ ಶ್ರೀ ಮಂಜಣ್ಣನವರನ್ನು ನಾವು ಮರೆಯುವಂತೆಯೇ ಇಲ್ಲ.
ಗೋಪಾಲ್ ಜೀಯವರು ಮುಂದಿನ ದಿನಗಳ ಕಾರ್ಯ ಹಾಗೂ ಈಗಿನ ವ್ಯವಸ್ಥೆಯನ್ನು ಸಮಗ್ರವಾಗಿ ವಿವರಿಸಿದರು. ಲಕ್ಷ ಜನ ಬಂದರೂ ಒಂದು ಗಂಟೆಯೊಳಗೆ ದರ್ಶನದ ವ್ಯವಸ್ಥೆ ಮಾಡಲಾಗುವುದು ಎಂದಾಗ ಒಮ್ಮೆ ಅಚ್ಚರಿಯನಿಸಿದರರೂ ಅದು ಸಾಧ್ಯ ಅಲ್ಲಿ ಎಂದು ನಮಗೆ ಅನ್ನಿಸಿತ್ತು. , ಚಪ್ಪಲಿಗಳನ್ನಿಡುವ ಕೌಂಟರ್, ಹೈ ಸೆಕ್ಯೂರಿಟಿ ಚೆಕ್ ಎಲ್ಲ ಕಡೆಯೂ ಹೆಚ್ಚು ನಿಲ್ಲದೆ ಸಾಗಿದೆ ನಮಗೆ ಆ ಮಾತನ್ನು ಒಪ್ಪಲೇ ಬೇಕಾಯಿತು. ಅಲ್ಲಿ 60 ದಾಟಿದವರಿಗೆ ವೀಲ್ ಚೇರ್ನಲ್ಲಿ ನೇರ ರಾಮಲಲ್ಲಾನ ದರ್ಶನದ ವ್ಯವಸ್ಥೆ ಇದ್ದು ತಳ್ಳಿಕೊಂಡು ಹೋದವರಿಗೆ ಸ್ವಲ್ಪ ಹಣ ಕೊಟ್ಟರೆ ಸಾಕು. ಅತ್ತೆಗೆ ವಯಸ್ಸಾದುದರಿಂದ ಕೇಳಿದೆವು ಆದರೆ ದೇವಾಲಯದ ಸೊಬಗು ನೋಡಲಾಗುವುದಿಲ್ಲ ಎಂದು ನಮ್ಮೊಡನೆ ನಡೆದೇ ಸಾಗಿದ್ದು ವಿಶೇಷವಾಗಿತ್ತು.
ಇಷ್ಟೆಲ್ಲ ಮುಗಿಸಿ ಕೊನೆಗೆ ನಮಗೆ ಬೆಳಗ್ಗೆ ಕರೆ ತಂದ ಆಟೋ ಸಿದ್ದವಾಗಿ ನಿಂತಿತ್ತು ಊಟ ಮುಗಿಸಿ ರಾತ್ರಿ 11ಕ್ಕೆ ಅಯೋಧ್ಯೆಯಿಂದ ಹೊರಟು ಬೆಳಗ್ಗೆ 5.30ರ ಸುಮಾರಿಗೆ ಕಾಶಿ ತಲುಪಿದೆವು ಅಲ್ಲೂ ಸಹ 14 ಜನರ ತಂಡವನ್ನು ಮಾಡಿ ಕರೆದೊಯ್ದು ಜಂಗಮವಾಡಿ ಮಠಕ್ಕೆ ಬಿಡಲು ಟ್ರ್ಯಾಕ್ಸ್ ಗಳು ಸಿದ್ಧವಾಗಿ ನಿಂತಿತ್ತು. ನಂತರ ಮಠಕ್ಕೆ ತೆರಳಿ ಅಲ್ಲಿನ ವ್ಯವಸ್ಥೆಗಳು ಸಹ ಅಚ್ಚುಕಟ್ಟಾಗಿ ಮಾಡಲಾಗಿತ್ತು. ಇಡ್ಲಿ ಚಿತ್ರಾನ್ನ ತಿಂಡಿ ನಮಗಾಗಿ ಕಾದಿತ್ತು.

ನಂತರ ಅಲ್ಲಿಂದ ಎಲ್ಲರೂ ಒಬ್ಬೊಬ್ಬರಾಗಿ ಬೇರೆಡೆ ಸಾಗಿದರು ಕೆಲವರು ಗಂಗಾ ಸ್ನಾನ ವಿಶ್ವನಾಥನ ದರ್ಶನ ಎಂದು ಹೊರಟರೆ ಅವರವರು ಸ್ವತಂತ್ರವಾಗಿ ಗುಂಪು ಗುಂಪಾಗಿ ತೆರಳಲು ಮಾಹಿತಿ ನೀಡಿದ್ದರು. ಸಂಜೆ ಬೋಟ್ ವ್ಯವಸ್ಥೆ ಮಾಡಿಸಿ ಅಲ್ಲಿ ಗಂಗಾರತಿ ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಎಲ್ಲಾ ಘಾಟ್ ಗಳ ಪರಿಚಯ ಮಾಡಿ ಕಾಶಿ ಕಾರಿಡಾರ್ ನೋಡಿ ಅಲ್ಲೇ ಮೂಕ ವಿಸ್ಮಿತರಾಗಿ ಮೋದಿಯವರಿಗೊಂದು ಸಲ್ಯೂಟ್ ಹೊಡೆದು, ಮುಂದೆ ಹೋದರೆ ವಿಶ್ವನಾಥನ ದರ್ಶನ ಮಹಾಮಂಗಳಾರತಿಯೊಂದಿಗೆ ಆಗಿದ್ದೇ ನಮಗಾದ ಸಂತೋಷಗಳಲ್ಲಿ ಬಹು ಮುಖ್ಯವಾದದ್ದು. ಕಾಶಿಯ ಗಲ್ಲಿ ಗಲ್ಲಿಗಳಲ್ಲಿ ತಿರುಗಿ ಸಂತೋಷಪಟ್ಟೆವು. ಕಾಲಭೈರವನೇ ಮೊದಲಾಗಿ ಸಾಕ್ಷಿ ಗಣಪತಿ ವಿಶಾಲಾಕ್ಷಿ ಅನೇಕ ಮಂದಿರಗಳನ್ನು ದರ್ಶನ ಮಾಡಿ, ಸಂಗೀತ ಕಾರ್ಯಕ್ರಮ ಏರ್ಪಡಿಸಿದ್ದನ್ನು ನೋಡಿ ಮಲಗಿದೆವು.

ಮರುದಿನ ಬೆಳಗ್ಗೆ ಗಂಗಾ ಸ್ನಾನ ಮಾಡಿ ಪುನೀತರಾದೆವು. ಜಂಗಮವಾಡಿ ಮಠದಲ್ಲಿ ಕಾಶಿ ಜಗದ್ಗುರುಗಳು ಎಲ್ಲರನ್ನೂ ಅನುಗ್ರಹಿಸಿ ಆಶೀರ್ವದಿಸಿ ಎಲ್ಲರಿಗೂ ರುದ್ರಾಕ್ಷಿ ವಿತರಿಸಿದರು. ಪೇಣಿಯೊಂದಿಗೆ ವಿಶೇಷ ಊಟ ಸವಿದು ಒಂದಷ್ಟು ಮಾರ್ಕೆಟ್ ತಿರುಗಿ ಸಂಜೆ ಇತರ ನಂತರ ಮತ್ತೆ ನಮ್ಮೂರಿನೆಡೆಗೆ ಹೊರಟೆವು. ರಾತ್ರಿ 8:30ಕ್ಕೆ ಹೊರಟ ಟ್ರೈನ್ ಮತ್ತೆ ಶಿವಮೊಗ್ಗ ಕಡೆಗೆ ಹೊರಟಾಗ ಯಾತ್ರಿಗಳೆಲ್ಲರ ಮನದಲ್ಲಿ ಸಂತಸದ ಭಾವ. ಪುಣ್ಯ ಸಂಪಾದನೆಯ ಖುಷಿ ಎಲ್ಲರ ಮಾತುಗಳಲ್ಲಿತ್ತು. ಅಲ್ಲೇ ಅನೇಕರು ಈಶ್ವರಪ್ಪ ಹಾಗೂ ಕಾಂತೇಶ್ ರವರಿಗೆ ಕೃತಜ್ಞತೆ ಸಲ್ಲಿಸಿದರು.

ಮರುದಿನ ಬೆಳಗ್ಗೆ ಎದ್ದು ಎಲ್ಲ ಭೋಗಿಗಳಿಗೂ ಓಡಾಡಿದಾಗ ಹೀಗೆ ಕುತೂಹಲಕ್ಕೆಂದು ಅನೇಕರನ್ನು ಮಾತನಾಡಿಸಿದೆ. ಅವರ ಸಂತೋಷ ನೋಡಿ ನನಗೆ ಧನ್ಯತೆಯ ಭಾವ ಮೂಡಿತ್ತು. ನಾವೇ ಮನೆಯವರು ತೆರಳಿದರೂ ಈ ರೀತಿಯ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲು ಸಾಧ್ಯವಾಗುತ್ತಿರಲಿಲ್ಲ ಕರಿಬಸಪ್ಪನವರು ಹೇಳಿದರೆ, ಸಂಸ್ಕೃತ ಟೀಮಿನಿಂದ ಬಂದ ಶ್ರೀಮತಿ ಮನು ಚವ್ಹಾಣ್ ದಂಪತಿಗಳು ಮಾತನಾಡಿ ಯಾವುದೇ ತರದ ಏನೂ ಕೊರತೆಯಾಗದೇ ಎಲ್ಲರೂ ಒಂದು ಕುಟುಂಬದವರ ಹಾಗೆ ಹೊಂದಿಕೊಂಡು ಹೋಗಿಬಂದೆವು ಎಂದು ಹೇಳಿದರು. ಅನೇಕರಿಗೆ ಸ್ವತಃ ಈಶ್ವರಪ್ಪನವರ ಕುಟುಂಬ ಜೊತೆಯಲ್ಲಿದ್ದು ಸಂತಸ ಮೂಡಿಸಿದರೆ, ಮಂತ್ರಿಯ ಸ್ಥಾನದಲ್ಲಿದ್ದು ಯಾರೂ ಮಾಡೋದನ್ನ ಇವರು ಮಾಡಿದ್ದಾರೆ ಎಂದು ಆನಂದ ಪಟ್ಟರು. ಹನ್ನೆರಡು ವರ್ಷಗಳ ಹಿಂದೆ ಹೋಗಿದ್ದರು ಇಂದು ಕಾಶಿ, ಮೋದಿಯವರ ಕಾರಣದಿಂದ ತುಂಬಾ ಚೆನ್ನಾಗಿ ಆಗಿದೆ ಎಂದು ರಾಜೇಶ್ವರಿ ಅವರು ಹೇಳಿದರು. ಭೋಗಿಯಲ್ಲಿದ್ದ ಯಾತ್ರಿಕರಲ್ಲೊಬ್ಬರಾದ ಸುರೇಶ್ ಅವರು ದೇವರ ದರ್ಶನ ಮಾಡಿ ಯಾವುದೇ ಅನಾರೋಗ್ಯ ಆಗದೆ ತಂದ ಮಾತ್ರೆಗಳನ್ನು ಹಾಗೆಯೇ ಕೊಂಡೊಯ್ಯುತ್ತಿದ್ದೇವೆ ಎಂದರು. ಶ್ರೀನಿವಾಸ್ ಎಂಬ ಪಾನಿಪುರಿ ವ್ಯಾಪಾರ ಮಾಡುವವರಂತೂ ಮಾತನಾಡಿ ತಮ್ಮ ತಂದೆಯ ಸ್ಥಾನದಲ್ಲಿ ನಿಂತು ಈಶ್ವರಪ್ಪನವರು ನಮಗೆ ಈ ಯಾತ್ರೆ ಮಾಡಿಸಿದ್ದಾರೆ ನಾವು ಅವರಿಗೆ ಬಹಳ ಋಣಿಯಾಗಿದ್ದೇವೆ ಎಂದು ಭಾವುಕರಾದರು. ದೇವಸ್ಥಾನದ ಬಳಿ ಹೂ ಮಾರುವವರು, ತಿಂಡಿಗಾಡಿಯವರು, ಕೃಷಿಕರು, ವ್ಯಾಪಾರಿಗಳು, ನರ್ಸಿಂಗ್ ಸ್ಟಾಫ್, ಶಿಕ್ಷಕರು, ಗೃಹಿಣಿ ಹೀಗೆ ಅನೇಕರ ಜೊತೆಗೆ, ವಿವಿಧ ಸ್ತರದ ಜನರು ಯಾತ್ರೆಯ ಕುರಿತಾಗಿ ಮಾತನಾಡಿ ಈಶ್ವರಪ್ಪನವರ ಈ ಕಾರ್ಯ ಶ್ಲಾಘನೀಯ ಎಂದರು. ಕೆಲವರಿಗೆ ಹಣ ಇರುತ್ತೆ ಸಮಯ ಇರಲ್ಲ, ಕೆಲವರಿಗೆ ಸಮಯ ಇರತ್ತೆ ಹಣ ಇರಲ್ಲ ಅಂತವರನ್ನೆಲ್ಲ ಒಟ್ಟಾಗಿಸಿ ಒಂದು ಒಳ್ಳೆಯ ಯಾತ್ರೆ ಮಾಡಿಸಿದ್ದಾರೆ ಈಶ್ವರಪ್ಪನವರು ಎಂದು ಗಾಂಧಿಬಜಾರ್ ನ ವರ್ತಕರಲ್ಲಿ ಒಬ್ಬರಾದ ಶ್ರೀ ರಾಜೇಂದ್ರ ಚೌದರಿ ಹೇಳಿದರು.

ಒಟ್ಟಾರೆಯಾಗಿ ಒಂದೊಳ್ಳೆ ಯಾತ್ರೆ ಮಾಡಿ ನಾವು ಪುನೀತರಾದೆವು. ಹಾಗೆ ಅನೇಕರ ಪರಿಚಯವಾಗಿ ಹಾಡು ಕುಣಿತ ಅಂತ್ಯಾಕ್ಷರಿ ಪಗಡೆಯಾಟ ಇತ್ಯಾದಿಗಳು ಎಲ್ಲರ ಮನಸ್ಸಲ್ಲೂ ಹಾಗೆಯೇ ಉಳಿಯುವಂತಾಯ್ತು. ಯಾತ್ರಾರ್ಥಿಯಲ್ಲಿ ಒಬ್ಬರಾದ ಕಮಲಕ್ಕನವರಂತೂ ಈಶ್ವರಪ್ಪ ಹಾಗೂ ಕಾಂತೇಶ್ ಕುಟುಂಬದವರ ಕುರಿತಾಗಿ ಕವನ ರಚಿಸಿ ಹಾಡಿ ಜನಮನ ಸೆಳೆದರು. ಶಬರೀಶಣ್ಣನ ಭಜನೆ, ಅವರ ತಾಯಿ ಭಾವುಕರಾದ ಕ್ಷಣ, ಅಲ್ಲದೇ ಎಲ್ಲರೂ ಸಾಮಾನ್ಯರಲ್ಲಿ ಸಾಮಾನ್ಯರಂತಿದ್ದು, ಎಲ್ಲರಿಗೂ ಸ್ಪಂದಿಸಿ ಯಾತ್ರೆ ಮಾಡಿದ ಈಶ್ವರಪ್ಪನವರ ಕುಟುಂಬ ಎಲ್ಲವೂ ಒಂದು ರೀತಿಯ ವಿಶೇಷವೇ ಸರಿ. ನಿಜವಾಗಿಯೂ ನಾಯಕ ಎಂದೆನಿಸಿಕೊಳ್ಳುವುದು ಕಷ್ಟ. ಅದರಲ್ಲೂ ಜನನಾಯಕ ಹೇಗಿರಬೇಕು ಎಂಬುದನ್ನು ತಾನು ಸ್ವತಃ ನಡೆದು ತೋರಿಸಿದ ಶ್ರೀಯುತ ಈಶ್ವರಪ್ಪನವರು ಎಲ್ಲರಿಗೂ ಆದರ್ಶಪ್ರಾಯರು. ಹಿಂದಿರುಗಿ ಬರುವಾಗ ಅಯೋಧ್ಯೆಯಲ್ಲಿ ಸೇವೆ ಮಾಡಿದ ಶ್ರೀನಿತಿನ್ ರಾಯ್ಕರ್ ಅವರ ಪರಿಚಯ ನಮಗೆ ಅಯೋಧ್ಯೆಯ ಕುರಿತಾಗಿ ಇನ್ನಷ್ಟು ಪ್ರದೇಶಗಳ ಪರಿಚಯವನ್ನು ನಮಗೆ ಮಾಡಿಸಿದರು. ಕೆಲವೊಂದು ಲೋಪದೋಷಗಳು ಕಂಡುಬಂದರೂ ಸಹ ಈ ವ್ಯವಸ್ಥೆಗೆ ಅವೆಲ್ಲವೂ ನಗಣ್ಯ. ಇನ್ನೂ ಅನೇಕ ನೆನಪಿನ ಬುತ್ತಿಗಳು ಒಡಲೊಳಗಿದ್ದರೂ ಈ ವರೆಗೆ ಯಾರೂ ಮಾಡಿಸದ ಇತಿಹಾಸ ನಿರ್ಮಿಸಿದ ಇಂತಹ ಸ್ಮರಣೀಯ ಯಾತ್ರೆಯನ್ನು ಮಾಡಿಸಿದ ಈಶ್ವರಪ್ಪನವರು ಹಾಗೂ ಅವರ ಕುಟುಂಬಕ್ಕೆ ಒಳಿತಾಗಲೆಂದು ಯಾತ್ರಾರ್ಥಿಗಳೆಲ್ಲರ ಪರವಾಗಿ ಈ ಮೂಲಕ ಪ್ರಾರ್ಥಿಸುವೆ.

ಡಾ. ಮೈತ್ರೇಯಿ ಆದಿತ್ಯ ಪ್ರಸಾದ್
ಉಪನ್ಯಾಸಕರು, ಪೇಸ್ ಕಾಲೇಜ್ ಶಿವಮೊಗ್ಗ

Vaddarse Raghurama Shetty ಪತ್ರಕರ್ತ ಡಿ.ಉಮಾಪತಿ ಅವರಿಗೆ ” ವಡ್ಡರ್ಸೆ ರಘುರಾಮ ಶೆಟ್ಟಿ” ಸ್ಮಾರಕ ಪ್ರಶಸ್ತಿ

0

Vaddarse Raghurama Shetty ವಡ್ಡರ್ಸೆ ರಘುರಾಮ ಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮʼ ಪ್ರಶಸ್ತಿಗೆ ಹೆಸರಾಂತ ಹಿರಿಯ ಪತ್ರಕರ್ತರಾದ ಡಿ. ಉಮಾಪತಿ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು 2 ಲಕ್ಷ ರೂ. ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.

ಡಿ.ಉಮಾಪತಿ ಅವರ ಪರಿಚಯ

ಮಾರ್ಚ್ 18, 1959 ರಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಜನಿಸಿದ ಡಿ. ಉಮಾಪತಿ ಅವರು ಮೈಸೂರು ಮಹಾರಾಜ ಕಾಲೇಜಿನಲ್ಲಿ ಆಂಗ್ಲ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಬಿ.ಎ, ಮೈಸೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಎರಡನೇ ರ‍್ಯಾಂಕ್‌ನಲ್ಲಿ ಪಡೆದವರು.

ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ಸಮೂಹ ಸಂಸ್ಥೆಯ ಕನ್ನಡಪ್ರಭ, ಈ ಟಿವಿಯ ದೆಹಲಿ ಕರೆಸ್ಪಾಂಡೆಂಟ್ ಅಗಿ 27 ವರ್ಷ ಪರಿಣಾಮಕಾರಿ ವರದಿಗಳಿಂದ ಹೆಸರು ಗಳಿಸಿದವರು.

Vaddarse Raghurama Shetty ಪಾರ್ಲಿಮೆಂಟ್ ವರದಿ, ಚುನಾವಣಾ ವಿಶ್ಲೇಷಣೆಗಳು , ಸುಪ್ರೀಂ ಕೋರ್ಟ್‌ಗಳಲ್ಲಿನ ನದಿ, ನೀರು ನ್ಯಾಯಾಧೀಕರಣ ವ್ಯಾಜ್ಯಗಳ, ರಾಷ್ಟ್ರಮಟ್ಟದ ರಾಜಕೀಯ ಬೆಳವಣಿಗೆಗಳು, ಮತ್ತು ವಿದೇಶಾಂಗ ಸಚಿವರ ವಿದೇಶ ಪ್ರವಾಸದ ಜೊತೆಗೂಡಿ ರಾಜತಾಂತ್ರಿಕ ವರದಿಗಾರಿಕೆಯಲ್ಲಿ ವಿಶಿಷ್ಟ ಅನುಭವ ಪಡೆದಿದ್ದಾರೆ.

ದೆಹಲಿಯಲ್ಲಿ ನೆಲೆಸಿರುವ ಡಿ. ಉಮಾಪತಿ ಅವರು ಆಂದೋಲನ, ರೈತ ಚಳವಳಿ, ವಿಜಯ ಕರ್ನಾಟಕ, ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ವಾರ್ತಾಭಾರತಿ ಪತ್ರಿಕೆಗಳಿಗೆ ಅಂಕಣ ಬರಹಗಾರರಾಗಿಯೂ. ಪ್ರಸ್ತುತ ’ನ್ಯಾಯಪಥ(ಗೌರಿ ಮಿಡಿಯಾ)’ ಮತ್ತು ’ಈದಿನ’ ವೆಬ್ ಜರ್ನಲ್ ಸಂದರ್ಶಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

’ದೆಹಲಿ ನೋಟ’, ’ಪದಕುಸಿಯೇ ನೆಲವಿಲ್ಲ’ ಉಮಾಪತಿ ಅವರ ಎರಡು ಮಹತ್ವದ ಕೃತಿಗಳಾಗಿವೆ.

Dr. Ambedkar Parinirvana Day ಜಿಲ್ಲಾಡಳಿತದಿಂದ ಡಾ.ಅಂಬೇಡ್ಕರ್ ಪರಿ ನಿರ್ವಾಣ ದಿನಾಚರಣೆ

0

Dr. Ambedkar Parinirvana Day ಮಾನ್ಯ ಜಿಲ್ಲಾಧಿಕಾರಿಗಳ ಕೋರ್ಟ್ ಸಭಾಂಗಣದಲ್ಲಿ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ 68ನೇ ಮಹಾ ಪರಿನಿರ್ವಾಣ ದಿನವನ್ನು ಪುಷ್ಪ ಅರ್ಪಿಸುವ ಮೂಲಕ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಎನ್ ಹೇಮಂತ್, ಸಮಾಜ ಕಲ್ಯಾಣಧಿಕಾರಿ ಮಲ್ಲೇಶಪ್ಪ, ಪರಿಶಿಷ್ಟ ಜಾತಿ ವರ್ಗಗಳ ಕಲ್ಯಾಣಧಿಕಾರಿ ಶ್ರೀನಿವಾಸ್, ಚಿನ್ನಯ್ಯ, ರುದ್ರಪ್ಪ, ಒಂಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

Yakshagana ಡಿಸೆಂಬರ್ 7. ಶಿವಮೊಗ್ಗದಲ್ಲಿಸಾಕೇತ ಕಲಾವಿದರಿಂದ “ಭೀಷ್ಮಪರ್ವ” ಯಕ್ಷಗಾನ

0

Yakshagana ಶಿವಮೊಗ್ಗ ಜಿಲ್ಲೆ ಸಾಗರದ ಹೆಗ್ಗೋಡು ಪ್ರಾಂತ್ಯದ ” ಸಾಕೇತ ಕಲಾವಿದರು” ಒಂದು ಹವ್ಯಾಸಿ ತಂಡವಾಗಿದೆ. ಸುಮಾರು 45 ವರ್ಷಗಳಿಂದ ಯಕ್ಷರಂಗದಲ್ಲಿ ವೈವಿಧ್ಯಮಯ ಪ್ರಸಂಗಗಳ ಪ್ರದರ್ಶನ‌ ಮಾಡಿ ಯಕ್ಷಗಾನ ರಸಿಕರ ಮನಸೂರೆಗೊಂಡಿದ್ದಾರೆ.
ಸಾಕೇತ ಕಲಾವಿದರ ಪ್ರಸಂಗಗಳೆಂದರೆ ಮಲೆನಾಡು ಸೀಮೆಯಲ್ಲಿ ಹೆಸರುವಾಸಿಯಾಗಿದೆ.
ಇದೇ ಡಿಸೆಂಬರ್ 7 ಶನಿವಾರ ಸಂಜೆ 6 ಕ್ಕೆ ಕಲಾವಿದರ ತಂಡದ ಪ್ರಸಿದ್ಧ ಪ್ರಸಂಗಗಳಲ್ಲಿ ಒಂದಾಗಿರುವ
Yakshagana “ಭೀಷ್ಮ ಪರ್ವ” ರಂಗ ಪದರ್ಶನವಿದೆ. ಸ್ಥಳ: ಸುವರ್ಣ ಸಂಸ್ಕೃತಿ ಭವನ ಶಿವಮೊಗ್ಗ.
ಅಂದು ಹೆಸರಾಂತ ಹಿರಿಯ ಯಕ್ಷಗಾನ ಭಾಗವತ ಶ್ರೀ ರಾಮರಾಯರಿಗೆ ಆತ್ಮೀಯ ಸನ್ಮಾನವನ್ನು ಏರ್ಪಡಿಸಲಾಗಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಯಕ್ಷಗಾನಾಭಿಮಾನಿಗಳು ಆಗಮಿಸಬೇಕೆಂದು
“ಸಾಕೇತ” ಸ್ನೇಹಿತರ ಪರವಾಗಿ ಹಿರಿಯ ಚಿಂತಕ ಲಕ್ಷ್ಮೀನಾರಾಯಣ ಕಾಶಿ ಅವರು ಕೆ ಲೈವ್ ಮಾಧ್ಯಮದ ಮೂಲಕ ಕೋರಿಕೊಂಡಿದ್ದಾರೆ.

Shimoga Smart City ಗಾಂಧಿ ಪಾರ್ಕ್ ಸ್ಮಾರ್ಟ್ ಸಿಟಿ‌ ಕಾಮಗಾರಿ ಶೀಘ್ರ ಪೂರೈಸಿ- ಶಾಸಕ ಚೆನ್ನಿ ಸೂಚನೆ

0

Shimoga Smart City ಇಂದು ಬೆಳಿಗ್ಗೆ ಶಿವಮೊಗ್ಗ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ನಗರದ ಮಧ್ಯ ಭಾಗದಲ್ಲಿರುವ ಗಾಂಧಿ ಪಾರ್ಕಿಗೆ ಭೇಟಿ ನೀಡಿ, ಸ್ಮಾರ್ಟ್ ಸಿಟಿ ಅಡಿಯಲ್ಲಿ ಸುಮಾರು 8.5 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿ ಪ್ರಗತಿಯನ್ನು ಅಧಿಕಾರಿಗಳೊಂದಿಗೆ ವೀಕ್ಷಿಸಿದರು.

Shimoga Smart City ಸುಮಾರು ಐದು ವರ್ಷಗಳಿಂದ ನಡೆಯುತ್ತಿರುವ ಈ ಕಾಮಗಾರಿಯೂ ಪೂರ್ಣ ಪ್ರಮಾಣದಲ್ಲಿ ಮುಗಿಯಾದ ಹಿನ್ನೆಲೆಯಲ್ಲಿ ಇಂದು ಸ್ಥಳಕ್ಕೆ ಭೇಟಿ ನೀಡಿ, ವಾಸ್ತವಿಕ ಸ್ಥಿತಿಯನ್ನು ಪರಿಶೀಲಿಸಿ, ಮೂರು ತಿಂಗಳೊಳಗೆ ಕಾಮಗಾರಿಯನ್ನು ಮುಗಿಸಿ ಸಾರ್ವಜನಿಕರ ಉಪಯೋಗಕ್ಕೆ ತೆರೆಯಲು ಸೂಚಿಸಿದರು.

ಈ ಸಂದರ್ಭದಲ್ಲಿ ಸ್ಮಾರ್ಟ್ ಸಿಟಿಯ ಎಂ.ಡಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Shivamogga News ಬದುಕಿಗೆ ಹಣಕಾಸಿನ ವ್ಯವಸ್ಥೆ ಅತ್ಯವಶ್ಯಕ.‌ ಪ್ರಾಮಾಣಿಕವಾಗಿ ಸಂಸ್ಥೆ ನಡೆಸಿ- ಡಾ.ಮಹಾಂತ ಸ್ವಾಮೀಜಿ

0

Shivamogga News ಸಹಕಾರ ಮನೋಭಾವ ಮತ್ತು ಪರಸ್ಪರರಲ್ಲಿನ ನಂಬಿಕೆಯ ಅಡಿಯಲ್ಲಿ ಹಣಕಾಸು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಬದುಕಿಗೆ ಹಣಕಾಸಿನ ವ್ಯವಸ್ಥೆ ಅತ್ಯವಶ್ಯಕವಾಗಿದೆ ಎಂದು ಜಡೆ ಸಂಸ್ಥಾನ ಮಠ ಹಾಗೂ ಸೊರಬ ಮುರುಘಾ ಮಠದ ಶ್ರೀ ಡಾ. ಮಹಾಂತ ಸ್ವಾಮೀಜಿ ಹೇಳಿದರು.
ಬುಧವಾರ ತಾಲೂಕಿನ ಚಂದ್ರಗುತ್ತಿ ಗ್ರಾಮದ ಶ್ರೀ ರೇಣುಕಾಂಬ ಕಲ್ಯಾಣ ಮಂಟಪದಲ್ಲಿ ಶ್ರೀ ರೇಣುಕಾದೇವಿ ಮುಧೋಳ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಉದ್ಘಾಟನೆಯ ಸಭಾ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನೆಲೆ ಇರುವ ಚಂದ್ರಗುತ್ತಿ ಕ್ಷೇತ್ರದಲ್ಲಿ ಹಣಕಾಸು ಸಂಸ್ಥೆ ಆರಂಭವಾಗುತ್ತಿರುವುದು ಉತ್ತಮ ಬೆಳವಣಿಗೆ. ರೈತರು, ಉದ್ದಿಮೆದಾರರು, ವರ್ತಕರು ಹಾಗೂ ಸಾರ್ವಜನಿಕರ ವೃತ್ತಿಯ ಅಭಿವೃದ್ಧಿಗೆ ಹಣಕಾಸು ವ್ಯವಸ್ಥೆ ಅಗತ್ಯವಿದೆ. ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಆರಂಭವಾಗುತ್ತಿರುವ ಸಂಸ್ಥೆ ಆದರ್ಶವಾಗಿರಬೇಕು. ಸದಸ್ಯರು ವ್ಯವಸ್ಥೆಯನ್ನು ಸದ್ಬಳಕೆ ಮಾಡಿಕೊಂಡು ಉನ್ನತಿ ಹೊಂದಬೇಕು ಹಾಗೂ ಸಂಘದ ಬೆಳವಣಿಗೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ತಿಳಿಸಿದರು.
ತಾಪಂ ಮಾಜಿ ಸದಸ್ಯ ಎಚ್. ಗಣಪತಿ ಹುಲ್ತಿಕೊಪ್ಪ ಮಾತನಾಡಿ, ಆರಂಭದ ಹೊಸ್ತಿಲಲ್ಲಿ ಕೇವಲ ಲಾಭದಾಸೆಗೆ ಮುಂದಾಗದೇ ಹಣಕಾಸು ಸಂಸ್ಥೆಯಲ್ಲಿ ಸೇವೆಯನ್ನು ಸಹ ಒದಗಿಸಬೇಕು. ಖಾಸಗಿ ಲೇವಾದೇವಿ ವ್ಯವಹಾರಕ್ಕೆ ಸಹಕಾರ ಕ್ಷೇತ್ರದಿಂದ ಕಡಿವಾಣ ಹಾಕಲು ಸಾಧ್ಯವಿದೆ. ಸಂಸ್ಥೆಯು ಹಣಕಾಸು ವಹಿವಾಟು ಆರಂಭವಾದ ತರುವಾಯ ಸದಸ್ಯರಲ್ಲಿಯೂ ಗೌರವಯುತ ಬದುಕು ಕಾಣುವಂತಾಗಬೇಕು. ಸದಸ್ಯರು ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿದರೆ ಸಂಸ್ಥೆಯು ಉನ್ನತಿಯನ್ನು ಕಾಣಲು ಸಾಧ್ಯವಾಗುತ್ತದೆ. ಚಂದ್ರಗುತ್ತಿಯು ಪ್ರಮುಖ ಹೋಬಳಿ ಕೇಂದ್ರವಾಗಿದ್ದು, ಕ್ಷೇತ್ರದಲ್ಲಿ ಹಣಕಾಸು ಸಂಸ್ಥೆ ಆರಂಭವಾಗಿರುವುದು ಸ್ವಾಗತಾರ್ಹ ವಿಷಯ ಎಂದರು.
Shivamogga News ಅಧ್ಯಕ್ಷತೆ ವಹಿಸಿದ್ದ ಶ್ರೀ ರೇಣುಕಾದೇವಿ ಮುಧೋಳ ಕ್ರೆಡಿಕ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ನಾಗರಾಜ ಡಿ. ಸಿರ್ಸಿಕರ್ ಮಾತನಾಡಿ, ಜನತೆಗೆ ಅನುಕೂಲ ಕಲ್ಪಿಸಲು ಮತ್ತು ಹಣಕಾಸಿನ ವ್ಯವಹಾರ ಕೈಗೊಳ್ಳುವ ಉದ್ದೇಶದಿಂದ ಸಂಸ್ಥೆಯನ್ನು ಆರಂಭಿಸಲಾಗಿದೆ. ಸಮಾನ ಮನಸ್ಕರರು ಒಗ್ಗೂಡಿದ್ದರಿಂದ ಹಣಕಾಸು ಸಂಸ್ಥೆಯ ಆರಂಭಕ್ಕೆ ಕಾರಣವಾಯಿತು. ಉತ್ತಮ ವಹಿವಾಟು ನಡೆಸುವ ಮೂಲಕ ಮಾದರಿಯ ಸಂಸ್ಥೆಯನ್ನಾಗಿ ಮುನ್ನೆಡೆಸಲಾಗುವುದು ಎಂದರು.
ಸಮಾಜ ಸೇವಕ ವಿನಾಯಕ ಸಿ. ನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಸರಿತಾ ಕೃಷ್ಣಪ್ಪ, ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಜಯಶೀಲ ಗೌಡ, ನ್ಯಾರ್ಶಿ ಗ್ರಾಪಂ ಅಧ್ಯಕ್ಷ ಧನಂಜಯ್ ಡಿ. ನಾಯ್ಕ್, ತಾಪಂ ಮಾಜಿ ಸದಸ್ಯ ಎನ್.ಜಿ. ನಾಗರಾಜ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಂಜುನಾಥ್ ಶೆಣೈ, ಪ್ರಮುಖರಾದ ಈಶ್ವರ ಚನ್ನಪಟ್ಟಣ, ಮರ‍್ಯಪ್ಪ ಬೆನ್ನೂರು, ಉಮಾಪತಿ, ಪ್ರಶಾಂತ್ ಶೇಟ್, ಶ್ರೀ ರೇಣುಕಾದೇವಿ ಮುಧೋಳ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ರಾಘವೇಂದ್ರ ಡಿ. ನಾಯ್ಕ್, ನಿರ್ದೇಶಕರಾದ ಶ್ರೀನಿವಾಸ ಎಂ. ಭಟ್, ಸತೀಶ್ ಎಂ. ನಾಯ್ಕ್, ಆರ್. ನಾಗೇಶ್, ಎಲ್. ಸುರೇಶ್, ಲೋಹಿತ್ ವಿ. ಗೌಡರ್, ಮೋಹನ್ ವಿ. ಕಾನಡೆ, ಗಿರೀಶ್ ಎನ್. ಶೇಟ್, ಎಚ್. ಮೂರ್ತಿ, ಸರಿತಾ ಎ. ಪಾಲೇಕರ್, ಎಂ. ಅರ್ಪಿತಾ, ಎಚ್. ಶಾಂತಾ, ಸಿಬ್ಬಂದಿ ಅಮರ್ ಜೋಗಳೇಕರ್, ರೋಮಿತ್ ವಿ. ನಾಯ್ಕ್, ಎನ್.ವಿ. ಆಶ್ರಿತಾ ಸೇರಿದಂತೆ ಮತ್ತಿತರರಿದ್ದರು.
ಫೋಟೋ
೦೪ ಸೊರಬ ೦೧: ಸೊರಬ ತಾಲೂಕಿನ ಚಂದ್ರಗುತ್ತಿ ಗ್ರಾಮದ ಶ್ರೀ ರೇಣುಕಾಂಬ ಕಲ್ಯಾಣ ಮಂಟಪದಲ್ಲಿ ಶ್ರೀ ರೇಣುಕಾದೇವಿ ಮುಧೋಳ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಆರಂಭದ ಸಭಾ ಕಾರ್ಯಕ್ರಮವನ್ನು ಜಡೆ ಸಂಸ್ಥಾನ ಮಠ ಹಾಗೂ ಸೊರಬ ಮುರುಘಾ ಮಠದ ಶ್ರೀ ಡಾ. ಮಹಾಂತ ಸ್ವಾಮೀಜಿ ಉದ್ಘಾಟಿಸಿದರು.

CEO Hemanth ಜಂತುಹುಳು ನಿವಾರಣೆ. ಶೇ100 ರಷ್ಟು ಸಾಧಿಸಿ- ಎನ್.ಹೇಮಂತ್

0

CEO Hemanth ಶಿವಮೊಗ್ಗ, ಡಿಸೆಂಬರ್ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನದಂದು ಜಿಲ್ಲೆಯ 1 ವರ್ಷದಿಂದ 19 ವರ್ಷದ ಎಲ್ಲಾ ಮಕ್ಕಳಿಗೆ ಉಚಿತವಾಗಿ ಜಂತುಹುಳು ನಿವಾರಣಾ ಮಾತ್ರೆ ನೀಡುವ ಮೂಲಕ ಶೇ.100 ರಷ್ಟು ಗುರಿಯನ್ನು ಸಾಧಿಸಬೇಕೆಂದು ಜಿಲ್ಲಾ ಪಂಚಾಯತ್ ಸಿಇಓ ಎನ್.ಹೇಮಂತ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ರಾಷ್ಟಿçÃಯ ಜಂತು ಹುಳು ನಿವಾರಣಾ ದಿನ ಕಾರ್ಯಕ್ರಮದ ಪೂರ್ವಸಿದ್ದತೆ ಮತ್ತು ಆರೋಗ್ಯ ಇಲಾಖೆಯ ಇತರೆ ಕಾರ್ಯಕ್ರಮಗಳ ಕುರಿತಾದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿ ಜಂತು ಹುಳು ನಿವಾರಣೆ ಮಾಡುವುದು ಅತಿ ಅಗತ್ಯ. ಅದರಿಂದ ಮಕ್ಕಳಲ್ಲಿನ ರಕ್ತಹೀನತೆ, ಏಕಾಗ್ರತೆ ಕೊರತೆಯನ್ನು ನೀಗಿಸಿ, ಕಲಿಕಾ ಸಾಮರ್ಥ್ಯ ಹೆಚ್ಚಿಸಬಹುದು. ಅಂಗನವಾಡಿ, ಶಾಲಾ-ಕಾಲೇಜಿನಲ್ಲಿ ಹಾಜರಾತಿ ಸುಧಾರಿಸಬಹುದು. ಕೆಲಸದ ಸಾಮರ್ಥ್ಯ ಹಾಗೂ ಜೀವನೋಪಾಯದ ಅವಕಾಶವನ್ನು ವೃದ್ದಿಸುತ್ತದೆ. ಆದ್ದರಿಂದ ಡಿ.09 ರ ರಾಷ್ಟಿçÃಯ ಜಂತು ಹುಳು ನಿವಾರಣಾ ದಿನದದಂದು ಅಂಗನವಾಡಿ, ಶಾಲೆಗಳು, ಪಿಯು, ಐಟಿಐ, ಟೆಕ್ನಿಕಲ್ ಕೋರ್ಸ್, ನರ್ಸಿಂಗ್ ಕಾಲೇಜು, ಪ್ರಥಮ ಪದವಿ, ಮೆಡಿಕಲ್ ಕಾಲೇಜು ಮತ್ತು ಆಯುರ್ವೇದಿಕ್ ಕಾಲೇಜುಗಳಲ್ಲಿ ಉಚಿತವಾಗಿ ಜಂತುಹುಳು ನಿವಾರಣಾ ಮಾತ್ರೆಯಾದ ಆಲ್ಬೆಂಡಜೋಲ್‌ನ್ನು ಉಚಿತವಾಗಿ ಮಕ್ಕಳಿಗೆ ನೀಡಲಾಗುವುದು.
CEO Hemanth ಡಿಡಿಪಿಐ, ಎಲ್ಲ ತಾಲ್ಲೂಕುಗಳ ಬಿಇಓ, ಆರೋಗ್ಯ ಅಧಿಕಾರಿಗಳು, ಸಿಡಿಪಿಓ, ಅಂಗನವಾಡಿ ಮೇಲ್ವಿಚಾರಕರು ಸಮನ್ವಯದೊಂದಿಗೆ ಎಲ್ಲ ಅಂಗನವಾಡಿ, ಶಾಲೆ, ಕಾಲೇಜುಗಳಲ್ಲಿ ಮಕ್ಕಳಿಗೆ ಮಾತ್ರೆಗಳನ್ನು ನೀಡಬೇಕು. ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರು ಪೋಷಕರಿಗೆ ಮೊದಲೇ ಮಾತ್ರೆ ನೀಡುವ ಬಗ್ಗೆ ಮಕ್ಕಳ ಮೂಲಕ ತಿಳಿಸಬೇಕು. ಹಾಗೂ ಆರೋಗ್ಯ ಇಲಾಖೆ ಸೂಚನೆಯಂತೆಯೇ ಮಾತ್ರೆಗಳನ್ನು ಮಕ್ಕಳಿಗೆ ತಮ್ಮ ಸಮ್ಮುಖದಲ್ಲೇ ನೀಡಬೇಕು ಎಂದು ಸೂಚಿಸಿದರು.
ಕಾರ್ಯಕ್ರಮದಲ್ಲಿ ಆರ್‌ಸಿಹೆಚ್ ಅಧಿಕಾರಿ ಡಾ.ಓ.ಮಲ್ಲಪ್ಪ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 470316 ಮಕ್ಕಳು ನೋಂದಣಿಯಾಗಿದ್ದು, ಡಿ.09 ರಂದು ಜಿಲ್ಲೆಯಾದ್ಯಂತ ಅಂಗನವಾಡಿ ಕೇಂದ್ರ, ಶಾಲಾ ಕಾಲೇಜುಗಳಲ್ಲಿ ಶಿಕ್ಷಕರು ಮತ್ತು ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಆಶಾ ಕಾರ್ಯಕರ್ತೆಯರು ಮನೆ ಭೇಟಿ ನೀಡುವ ಮೂಲಕ ಮಾತ್ರೆ ನೀಡಲಾಗುವುದು. ಅಂದು ಬಿಟ್ಟು ಹೋದ ಮಕ್ಕಳಿಗೆ ದಿ: 16-12-2024 ರಂದು ಮಾಪ್-ಅಪ್-ರೌಂಡ್‌ನಲ್ಲಿ ಮಾತ್ರೆ ನೀಡಿ ಶೇ.100 ಗುರಿ ಸಾಧನೆ ಮಾಡಲಾಗುವುದು. 1 ವರ್ಷದಿಂದ 2 ವರ್ಷದೊಳಗಿನ ಮಕ್ಕಳಿಗೆ ಅರ್ಧ ಮಾತ್ರೆ(ಪುಡಿ ಮಾಡಿ) ಮತ್ತು 2 ರಿಂದ 19 ವರ್ಷದೊಳಗಿನ ಮಕ್ಕಳಿಗೆ 1 ಮಾತ್ರೆಯನ್ನು ಜಗಿದು ನುಂಗಲು ನೀಡಲಾಗುವುದು ಎಂದು ತಿಳಿಸಿದರು.
ಸಿಇಓ ಮಾತನಾಡಿ, ಆರ್‌ಬಿಎಸ್‌ಕೆ ತಂಡ ಶಾಲಾ ಭೇಟಿಯನ್ನು ನಿಗದಿಯಂತೆ ನಿಯಮಿತವಾಗಿ ಮಾಡಬೇಕು ಹಾಗೂ ಸಮರ್ಪಕವಾಗಿ ಮಕ್ಕಳ ತಪಾಸಣೆ ನಡೆಸಬೇಕು. ವಡ್ಡಿನಕೊಪ್ಪದ ಶಾಲೆಗೆ ಭೇಟಿ ನೀಡಿದ ಆರ್‌ಬಿಎಸ್‌ಕೆ ತಂಡ ಸಮರ್ಪಕವಾಗಿ ತಪಾಸಣೆ ನಡೆಸದೇ ವರದಿ ನೀಡಿರುವುದು ಗಮನಕ್ಕೆ ಬಂದಿದ್ದು ಆ ತಂಡಕ್ಕೆ ನೋಟಿಸ್ ನೀಡುವಂತೆ ಸೂಚಿಸಿದರು.
ಜಿಲ್ಲಾ ಕ್ಷಯರೋಗ ನಿವಾರಣಾಧಿಕಾರಿ ಡಾ.ನಾಗೇಶ್ ಮಾತನಾಡಿ, ಜಿಲ್ಲಾದ್ಯಂತ ಡಿ.07 ರಿಂದ 2025 ರ ಮಾರ್ಚ್ 24 ರವರೆಗೆ ಒಟ್ಟು 100 ದಿನಗಳ ಕಾಲ ಕ್ಷಯ ರೋಗ ಕುರಿತು ಅರಿವು ಮೂಡಿಸುವ ಅಭಿಯಾನ ನಡೆಯಲಿದೆ. ಶೀಘ್ರ ರೋಗ ಪತ್ತೆ ಹಚ್ಚುವುದು, ಗುಣಪಡಿಸುವುದು ಹಾಗೂ ಸಾರ್ವಜನಿಕರಲ್ಲಿ ರೋಗ ಲಕ್ಷಣಗಳ ಬಗ್ಗೆ ಜಾಗೃತಿ ಮೂಡಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿರುತ್ತದೆ.
ಹಾಗೂ ಶೇ.80 ರಷ್ಟು ಖಾಯಿಲೆ ಹರಡುವುದನ್ನು ತಡೆಗಟ್ಟುವುದು, ಮರಣ ಪ್ರಮಾಣವನ್ನು ಶೇ.90 ರಷ್ಟು ಕಡಿತಗೊಳಿಸುವುದು ಹಾಗೂ ಟಿ.ಬಿ.ಪರೀಕ್ಷೆ ಮತ್ತು ಚಿಕಿತ್ಸೆಗೆ ತಗಲುವ ವೆಚ್ಚವನ್ನು ಶೂನ್ಯ ಮಾಡುವುದು ಅಭಿಯಾನದ ಉದ್ದೇಶವಾಗಿದೆ ಎಂದರು.
ಸಿಇಓ ಮಾತನಾಡಿ, ಅಭಿಯಾನವನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕು. ರೋಗಿಗಳ ಪತ್ತೆ ಹಚ್ಚುವುದು, ಸಮಾಜದಲ್ಲಿ ಸಾರ್ವಜನಿಕರಿಗೆ ಖಾಯಿಲೆ ಲಕ್ಷಣಗಳ ಬಗ್ಗೆ ಜಾಗೃತಿ ಮೂಡಿಸುವುದು, ನಿಕ್ಷಯ್ ಶಿಬಿರಗಳನ್ನು ನಡೆಸುವುದು, ಜಾಥಾ ನಡೆಸುವುದು ಹಾಗೂ ರೋಗಿಗಳಿಗೆ ಪೌಷ್ಟಿಕ ಆಹಾರ ಒದಗಿಸುವುದು ಮತ್ತು ಧಾರ್ಮಿಕ ನಾಯಕರಿಂದ ಸಮಾಜದಲ್ಲಿ ಖಾಯಿಲೆ ಬಗ್ಗೆ ಅರಿವು ಮೂಡಿಸುವುದು, ಪ್ರತಿಜ್ಞೆ ಪಡೆಯುವುದು ಹಾಗೂ ಭಿತ್ತಿ ಪತ್ರಗಳ ಮುಖಾಂತರ ಪ್ರಚಾರ ಮಾಡಬೇಕು. ಹಬ್ಬ ಹರಿದಿನಗಳಲ್ಲಿ ಹೆಚ್ಚಿನ ಪ್ರಚಾರ ಕೈಗೊಳ್ಳಬೇಕು, ಮಾಧ್ಯಮಗಳ ಮುಖಾಂತರ ಖಾಯಿಲೆ ಬಗ್ಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಡಿಎಲ್‌ಓ ಡಾ.ಕಿರಣ್ ಮಾತನಾಡಿ, ಅಂಧತ್ವ ಮುಕ್ತ ಶಿವಮೊಗ್ಗ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಕಣ್ಣಿನ ಪೊರೆ ಶಸ್ತçಚಿಕಿತ್ಸೆಗೆ 12950 ಗುರಿ ನೀಡಲಾಗಿದ್ದು, 9299 ಶಸ್ತçಚಿಕಿತ್ಸೆ ಮಾಡುವ ಮೂಲಕ ಶೇ.72 ಪ್ರಗತಿ ಸಾಧಿಸಲಾಗಿದೆ. 5 ಎನ್‌ಜಿಓ ಗಳ ಮೂಲಕ ಕಣ್ಣಿನ ಇತರೆ ಶಸ್ತçಚಕಿತ್ಸೆಗಳನ್ನು ಕೈಗೊಳ್ಳಲಾಗುತ್ತಿದ್ದು ಕಳೆದ ಸಾಲಿನಲ್ಲಿ 4380 ಗುರಿಯಲ್ಲಿ 3068 ಶಸ್ತçಚಿಕಿತ್ಸೆ ಮಾಡಲಾಗಿದೆ. ಪ್ರಸಕ್ತ ಸಾಲಿಗೆ 3400 ಶಸ್ತçಚಿಕಿತ್ಸೆಗಳ ಗುರಿ ನೀಡಲಾಗಿದ್ದು ಈಗಾಗಲೇ 2290 ಶಸ್ತçಚಿಕಿತ್ಸೆ ಆಗಿದೆ. ಕಣ್ಣಿನ ದೋಷ ಇರುವವರಿಗೆ 8000 ಕನ್ನಡಕಗಳನ್ನು ನೀಡಲಾಗಿದೆ. ಗ್ಲಾಕೋಮ, ಡಯಾಬಿಟಿಕ್ ರೆಟಿನೊಪಥಿ ಪ್ರಕರಣಗಳನ್ನು ಪತ್ತೆ ಹಚ್ಚಲಾಗುತ್ತಿದ್ದು ಸದರಿ ಸಮಸ್ಯೆಗಳ ಚಿಕಿತ್ಸೆಗೆ ಎನ್‌ಜಿಓ ಗಳು ಸಹಕರಿಸಬೇಕೆಂದರು.
ಸಭೆಯಲ್ಲಿ ಡಿಹೆಚ್‌ಓ ಡಾ.ನಟರಾಜ್, ವಿವಿಧ ಕಾರ್ಯಕ್ರಮ ಅನುಷ್ಟಾನಾಧಿಕಾರಿಗಳು, ಟಿಹೆಚ್‌ಓ ಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕ ಕೃಷ್ಣಪ್ಪ, ಡಿಡಿಪಿಯು

Shivamogga Rangayana ನ.30 ರಂದು ರಂಗಾಯಣದಲ್ಲಿ ಏಕಲವ್ಯ ನಾಟಕ ಪ್ರದರ್ಶನ

0

Shivamogga Rangayana ಶಿವಮೊಗ್ಗ ರಂಗಾಯಣವು ನ.30 ರಂದು ಸಂಜೆ 6.30 ಕ್ಕೆ ಕಾಲೇಜು ರಂಗೋತ್ಸವ 2024-25 ರಲ್ಲಿ ಏಕಲವ್ಯ ನಾಟಕವನ್ನು ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಇಲ್ಲಿ ಪ್ರದರ್ಶಿಸಲಿದೆ.
ಡಾ. ಸಿದ್ದಲಿಂಗಯ್ಯ ರಚನೆಯ, ಪ್ರಮೊದ್ ಶಿಗ್ಗಾಂವ್ ವಿನ್ಯಾಸ ಮತ್ತು ನಿರ್ದೇಶನದ, ನಾಗರ್ಜುನ ಕಾಲೇಜ್ ಆಫ್ ಮ್ಯಾನೆಜ್‌ಮೆಂಟ್ ಸ್ಟಡೀಸ್, ಚಿಕ್ಕ ಮರಳಿ, ಚಿಕ್ಕಬಳ್ಳಾಪುರ ಜಿಲ್ಲೆ ಅಭಿನಯಿಸುವ ಏಕಲವ್ಯ ನಾಟಕವು ಮೂಡಲಪಾಯ ಶೈಲಿಯಲ್ಲಿ ನ.30 ರ ಸಂಜೆ Shivamogga Rangayana 6.45 ಕ್ಕೆ ಪ್ರದರ್ಶನಗೊಳ್ಳಲಿದೆ. ಟಿಕೆಟ್ ದರ ಒಬ್ಬರಿಗೆ ರೂ. 30. ಗಳನ್ನು ನಿಗದಿಪಡಿಸಲಾಗಿದೆ ಎಂದು ರಂಗಾಯಣ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

MESCOM ನ. 29 ರಂದು ವಿದ್ಯುತ್ ವ್ಯತ್ಯಯ

0

MESCOM ಶಿವಮೊಗ್ಗ ನಗರ ಉಪವಿಭಾಗ-1ರ ಘಟಕ-3ರ ವ್ಯಾಪ್ತಿಯಲ್ಲಿ ತ್ಯಾವರೆಚಟ್ನಹಳ್ಳಿ, ಈಶ್ವರ್ ರೈಸ್ ಮಿಲ್ ಹತ್ತಿರ ಎಲ್.ಟಿ. ವಿದ್ಯುತ್ ಮಾರ್ಗ ಬದಲಾಯಿಸುವ ಕಾಮಗಾರಿ ಇರುವುದರಿಂದ ನ.29 ರಂದು ಬೆಳಗ್ಗೆ 10.00 ರಿಂದ ಸಂಜೆ 6.00ರವರೆಗೆ MESCOM ತ್ಯಾವರೆಚಟ್ನಹಳ್ಳಿ, ವಿಜಯಲಕ್ಷ್ಮೀ ರೈಸ್ ಮಿಲ್, ಈಶ್ವರ್ ರೈಸ್ ಮಿಲ್, ತರಳಬಾಳು ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.