Wednesday, July 16, 2025
Wednesday, July 16, 2025

Shivamogga News ಬದುಕಿಗೆ ಹಣಕಾಸಿನ ವ್ಯವಸ್ಥೆ ಅತ್ಯವಶ್ಯಕ.‌ ಪ್ರಾಮಾಣಿಕವಾಗಿ ಸಂಸ್ಥೆ ನಡೆಸಿ- ಡಾ.ಮಹಾಂತ ಸ್ವಾಮೀಜಿ

Date:

Shivamogga News ಸಹಕಾರ ಮನೋಭಾವ ಮತ್ತು ಪರಸ್ಪರರಲ್ಲಿನ ನಂಬಿಕೆಯ ಅಡಿಯಲ್ಲಿ ಹಣಕಾಸು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಬದುಕಿಗೆ ಹಣಕಾಸಿನ ವ್ಯವಸ್ಥೆ ಅತ್ಯವಶ್ಯಕವಾಗಿದೆ ಎಂದು ಜಡೆ ಸಂಸ್ಥಾನ ಮಠ ಹಾಗೂ ಸೊರಬ ಮುರುಘಾ ಮಠದ ಶ್ರೀ ಡಾ. ಮಹಾಂತ ಸ್ವಾಮೀಜಿ ಹೇಳಿದರು.
ಬುಧವಾರ ತಾಲೂಕಿನ ಚಂದ್ರಗುತ್ತಿ ಗ್ರಾಮದ ಶ್ರೀ ರೇಣುಕಾಂಬ ಕಲ್ಯಾಣ ಮಂಟಪದಲ್ಲಿ ಶ್ರೀ ರೇಣುಕಾದೇವಿ ಮುಧೋಳ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಉದ್ಘಾಟನೆಯ ಸಭಾ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನೆಲೆ ಇರುವ ಚಂದ್ರಗುತ್ತಿ ಕ್ಷೇತ್ರದಲ್ಲಿ ಹಣಕಾಸು ಸಂಸ್ಥೆ ಆರಂಭವಾಗುತ್ತಿರುವುದು ಉತ್ತಮ ಬೆಳವಣಿಗೆ. ರೈತರು, ಉದ್ದಿಮೆದಾರರು, ವರ್ತಕರು ಹಾಗೂ ಸಾರ್ವಜನಿಕರ ವೃತ್ತಿಯ ಅಭಿವೃದ್ಧಿಗೆ ಹಣಕಾಸು ವ್ಯವಸ್ಥೆ ಅಗತ್ಯವಿದೆ. ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಆರಂಭವಾಗುತ್ತಿರುವ ಸಂಸ್ಥೆ ಆದರ್ಶವಾಗಿರಬೇಕು. ಸದಸ್ಯರು ವ್ಯವಸ್ಥೆಯನ್ನು ಸದ್ಬಳಕೆ ಮಾಡಿಕೊಂಡು ಉನ್ನತಿ ಹೊಂದಬೇಕು ಹಾಗೂ ಸಂಘದ ಬೆಳವಣಿಗೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ತಿಳಿಸಿದರು.
ತಾಪಂ ಮಾಜಿ ಸದಸ್ಯ ಎಚ್. ಗಣಪತಿ ಹುಲ್ತಿಕೊಪ್ಪ ಮಾತನಾಡಿ, ಆರಂಭದ ಹೊಸ್ತಿಲಲ್ಲಿ ಕೇವಲ ಲಾಭದಾಸೆಗೆ ಮುಂದಾಗದೇ ಹಣಕಾಸು ಸಂಸ್ಥೆಯಲ್ಲಿ ಸೇವೆಯನ್ನು ಸಹ ಒದಗಿಸಬೇಕು. ಖಾಸಗಿ ಲೇವಾದೇವಿ ವ್ಯವಹಾರಕ್ಕೆ ಸಹಕಾರ ಕ್ಷೇತ್ರದಿಂದ ಕಡಿವಾಣ ಹಾಕಲು ಸಾಧ್ಯವಿದೆ. ಸಂಸ್ಥೆಯು ಹಣಕಾಸು ವಹಿವಾಟು ಆರಂಭವಾದ ತರುವಾಯ ಸದಸ್ಯರಲ್ಲಿಯೂ ಗೌರವಯುತ ಬದುಕು ಕಾಣುವಂತಾಗಬೇಕು. ಸದಸ್ಯರು ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿದರೆ ಸಂಸ್ಥೆಯು ಉನ್ನತಿಯನ್ನು ಕಾಣಲು ಸಾಧ್ಯವಾಗುತ್ತದೆ. ಚಂದ್ರಗುತ್ತಿಯು ಪ್ರಮುಖ ಹೋಬಳಿ ಕೇಂದ್ರವಾಗಿದ್ದು, ಕ್ಷೇತ್ರದಲ್ಲಿ ಹಣಕಾಸು ಸಂಸ್ಥೆ ಆರಂಭವಾಗಿರುವುದು ಸ್ವಾಗತಾರ್ಹ ವಿಷಯ ಎಂದರು.
Shivamogga News ಅಧ್ಯಕ್ಷತೆ ವಹಿಸಿದ್ದ ಶ್ರೀ ರೇಣುಕಾದೇವಿ ಮುಧೋಳ ಕ್ರೆಡಿಕ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ನಾಗರಾಜ ಡಿ. ಸಿರ್ಸಿಕರ್ ಮಾತನಾಡಿ, ಜನತೆಗೆ ಅನುಕೂಲ ಕಲ್ಪಿಸಲು ಮತ್ತು ಹಣಕಾಸಿನ ವ್ಯವಹಾರ ಕೈಗೊಳ್ಳುವ ಉದ್ದೇಶದಿಂದ ಸಂಸ್ಥೆಯನ್ನು ಆರಂಭಿಸಲಾಗಿದೆ. ಸಮಾನ ಮನಸ್ಕರರು ಒಗ್ಗೂಡಿದ್ದರಿಂದ ಹಣಕಾಸು ಸಂಸ್ಥೆಯ ಆರಂಭಕ್ಕೆ ಕಾರಣವಾಯಿತು. ಉತ್ತಮ ವಹಿವಾಟು ನಡೆಸುವ ಮೂಲಕ ಮಾದರಿಯ ಸಂಸ್ಥೆಯನ್ನಾಗಿ ಮುನ್ನೆಡೆಸಲಾಗುವುದು ಎಂದರು.
ಸಮಾಜ ಸೇವಕ ವಿನಾಯಕ ಸಿ. ನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಸರಿತಾ ಕೃಷ್ಣಪ್ಪ, ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಜಯಶೀಲ ಗೌಡ, ನ್ಯಾರ್ಶಿ ಗ್ರಾಪಂ ಅಧ್ಯಕ್ಷ ಧನಂಜಯ್ ಡಿ. ನಾಯ್ಕ್, ತಾಪಂ ಮಾಜಿ ಸದಸ್ಯ ಎನ್.ಜಿ. ನಾಗರಾಜ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಂಜುನಾಥ್ ಶೆಣೈ, ಪ್ರಮುಖರಾದ ಈಶ್ವರ ಚನ್ನಪಟ್ಟಣ, ಮರ‍್ಯಪ್ಪ ಬೆನ್ನೂರು, ಉಮಾಪತಿ, ಪ್ರಶಾಂತ್ ಶೇಟ್, ಶ್ರೀ ರೇಣುಕಾದೇವಿ ಮುಧೋಳ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ರಾಘವೇಂದ್ರ ಡಿ. ನಾಯ್ಕ್, ನಿರ್ದೇಶಕರಾದ ಶ್ರೀನಿವಾಸ ಎಂ. ಭಟ್, ಸತೀಶ್ ಎಂ. ನಾಯ್ಕ್, ಆರ್. ನಾಗೇಶ್, ಎಲ್. ಸುರೇಶ್, ಲೋಹಿತ್ ವಿ. ಗೌಡರ್, ಮೋಹನ್ ವಿ. ಕಾನಡೆ, ಗಿರೀಶ್ ಎನ್. ಶೇಟ್, ಎಚ್. ಮೂರ್ತಿ, ಸರಿತಾ ಎ. ಪಾಲೇಕರ್, ಎಂ. ಅರ್ಪಿತಾ, ಎಚ್. ಶಾಂತಾ, ಸಿಬ್ಬಂದಿ ಅಮರ್ ಜೋಗಳೇಕರ್, ರೋಮಿತ್ ವಿ. ನಾಯ್ಕ್, ಎನ್.ವಿ. ಆಶ್ರಿತಾ ಸೇರಿದಂತೆ ಮತ್ತಿತರರಿದ್ದರು.
ಫೋಟೋ
೦೪ ಸೊರಬ ೦೧: ಸೊರಬ ತಾಲೂಕಿನ ಚಂದ್ರಗುತ್ತಿ ಗ್ರಾಮದ ಶ್ರೀ ರೇಣುಕಾಂಬ ಕಲ್ಯಾಣ ಮಂಟಪದಲ್ಲಿ ಶ್ರೀ ರೇಣುಕಾದೇವಿ ಮುಧೋಳ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಆರಂಭದ ಸಭಾ ಕಾರ್ಯಕ್ರಮವನ್ನು ಜಡೆ ಸಂಸ್ಥಾನ ಮಠ ಹಾಗೂ ಸೊರಬ ಮುರುಘಾ ಮಠದ ಶ್ರೀ ಡಾ. ಮಹಾಂತ ಸ್ವಾಮೀಜಿ ಉದ್ಘಾಟಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddaramaiah ಸಿಎಂ ಸಿದ್ಧರಾಮಯ್ಯ ಅವರ ಪತ್ರಕ್ಕೆ ಕೇಂದ್ರ ಸಚಿವ ಗಡ್ಕರಿ ಅವರ ಪತ್ರ- ಪ್ರತಿಕ್ರಿಯೆ

CM Siddaramaiah ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿ,...