Thursday, March 19, 2026
Thursday, March 19, 2026
Home Blog Page 459

Sri Bhairava Swamy Temple  ಭಕ್ತರ ಕಣ್ಸೆಳೆದ ಕಾಲಭೈರವಸ್ವಾಮಿ ಅಷ್ಟಮಿಯ ಅಲಂಕಾರ

0

Sri Bhairava Swamy Temple  ಶರಾವತಿ ನಗರದ “ಶ್ರೀ ಕಾಲ ಬೈರವೇಶ್ವರಸ್ವಾಮಿ ದೇವಾಲಯ” ದಲ್ಲಿ ಸೋಮವಾರದಂದು ಕಾಲಭೈರವಾಷ್ಟಮಿ ಪ್ರಯುಕ್ತ ಆಯೋಜಿಸಲಾಗಿದ್ದ ಶ್ರೀ ಕಾಲಭೈರವೇಶ್ವರ ಸ್ವಾಮಿಗೆ ವಿವಿಧ ಬಗೆಯ ಸಿಹಿ, ಖಾಧ್ಯಗಳಿಂದ ಅಲಂಕಾರ ಮಾಡಲಾಯಿತು. ಪಂಚಾಮೃತ ಅಭಿಷೇಕ, ಕಾಲಭೈರವ ಹೋಮ, ಪಲ್ಲಕ್ಕಿಉತ್ಸವ,ಮಹಾ ಮಂಗಳಾರತಿ,ವಿಜೃಂಭಣೆಯಿಂದ ಆಚರಿಸಲಾಯಿತು. Sri Bhairava Swamy Temple  ವಿಶೇಷ ಪೂಜಾ ಕೈಂಕರ್ಯಗಳನ್ನು ಶ್ರೀ ಆದಿಚುಂಚನಗಿರಿ ಶಾಖಾ ಮಠದ ಪೂಜ್ಯ ಶ್ರೀ ಸಾಯಿನಾಥ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಪೂಜಾ ಕಾರ್ಯಕ್ರಮದಲ್ಲಿ ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾದರು.

Kumsi Mescom ಕುಂಸಿ ಮೆಸ್ಕಾಂ ಉಪವಿಭಾಗೀಯ ಕಚೇರಿಯಲ್ಲಿ ಡಿಸೆಂಬರ್ 27 ರಂದು ಸಾರ್ವಜನಿಕ ಸಂಪರ್ಕ ಸಭೆ

0

Kumsi Mescom ಕುಂಸಿ ಮೆಸ್ಕಾಂ ಉಪವಿಭಾಗೀಯ ಕಚೇರಿಯಲ್ಲಿ ಡಿಸೆಂಬರ್ 27 ರಂದು ಸಾರ್ವಜನಿಕ ಸಂಪರ್ಕ ಸಭೆ ಕುಂಸಿ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಡಿ.27 ರಂದು ಬೆಳಿಗ್ಗೆ 11.00 ರಿಂದ 01.00 ರವರೆಗೆ ಜನಸಂಪರ್ಕ ಸಭೆ ನಡೆಯಲ್ಲಿದೆ. ಈ ಸಭೆಯಲ್ಲಿ ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದು, ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಸಂಪರ್ಕಿಸಬಹುದಾದ ದೂರವಾಣಿಸಂಖ್ಯೆ;9480841340.

Anavatti MESCOM ಡಿಸೆಂಬರ್ 26. ಆನವಟ್ಟಿ ಮೆಸ್ಕಾಂ ಕಚೇರಿಯಲ್ಲಿ ಸಾರ್ವಜನಿಕ ಸಂಪರ್ಕ ಸಭೆ

0

Anavatti MESCOM ಆನವಟ್ಟಿ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ದಿನಾಂಕ ಡಿ.26 ರಂದು ಬೆಳಿಗ್ಗೆ 11.00 ರಿಂದ 01.00 ರವರೆಗೆ ಜನಸಂಪರ್ಕ ಸಭೆ ನಡೆಯಲ್ಲಿದೆ. ಈ ಸಭೆಯಲ್ಲಿ ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದು, ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಸಂಪರ್ಕಿಸಬಹುದಾದ ದೂರವಾಣಿಸಂಖ್ಯೆ;9448998783.

Shivamogga Lokayukta Police ಇಂಡುವಳ್ಳಿ ‘ಗ್ರಾಪಂ’ಪಿಡಿಓ ಲೋಕಾಯುಕ್ತ ಬಲೆಗೆ

0

Shivamogga Lokayukta Police ಇ-ಖಾತೆ ಮಾಡಿಕೊಡಲು ರೂ. 5000/-ಗಳ ಲಂಚ ಪಡೆಯುತ್ತಿದ್ದ ಶಿವಮೊಗ್ಗ ಜಿಲ್ಲೆ, ಸೊರಬ ತಾಲ್ಲೂಕು, ಇಂಡುವಳ್ಳಿ ಗ್ರಾ.ಪಂ. ಯ ಪ್ರಭಾರ ಪಿಡಿಓ ಈಶ್ವರಪ್ಪರವನ್ನು ಟ್ರ‍್ಯಾಪ್ ಮಾಡಿ ಲಂಚದ ಹಣವನ್ನು ಜಪ್ತಿ ಪಡಿಸಿದ್ದು ಅಪಾದಿತ ಸರ್ಕಾರಿ ನೌಕರನನ್ನು ತನಿಖೆ ಸಂಬಂಧ ವಶಕ್ಕೆ ಪಡೆದ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಹೆಚ್.ಎಸ್.ಸುರೇಶ್ ರವರು ಪ್ರಕರಣದ ತನಿಖೆಯನ್ನು ಕೈಗೊಂಡಿರುತ್ತಾರೆ.
ಮಹಮ್ಮದ್ ಗೌಸ್ ರವರ ತಂದೆ ಭಾಷಾ ಸಾಬ್‌ನವರು ಇಂಡುವಳ್ಳಿ ಗ್ರಾಮದಲ್ಲಿ ಜಮೀನನ್ನು ಹೊಂದಿದ್ದು, ಅದರಲ್ಲಿ ಒಂದು ಮನೆಯನ್ನು ಕಟ್ಟಿಕೊಂಡಿರುತ್ತಾರೆ. ಆ ಮನೆಯ ಮೇಲೆ ಲೋನ್ ತೆಗೆದುಕೊಳ್ಳುವ ಸಂಬAಧ, ಮನೆ ಇರುವ ಜಾಗವನ್ನು ತನ್ನ ತಾಯಿ ಶ್ರೀಮತಿ ಮಮ್ರಾಜ್ ರವರ ಹೆಸರಿನಲ್ಲಿ ಈ-ಖಾತಾ ಮಾಡಿಕೊಡುವಂತೆ ಇಂಡುವಳ್ಳಿ ಗ್ರಾಮ ಪಂಚಾಯ್ತಿಗೆ ಅರ್ಜಿಯನ್ನು ಸಲ್ಲಿಸಿದ್ದು, ಇಂಡುವಳ್ಳಿ ಗ್ರಾಮದ ಪ್ರಭಾರ ಪಿಡಿಓ ರವರಾದ ಈಶ್ವರಪ್ಪ ರವರು ಮನೆ ಜಾಗಕ್ಕೆ ಬಂದು. ಅಳತೆ ಮಾಡಿಕೊಂಡು ಹೋಗಿದ್ದು, ಈ-ಖಾತಾ ಕೊಡುವಂತೆ ಹಲವಾರು ಬಾರಿ ಈಶ್ವರಪ್ಪ ರವರ ಹತ್ತಿರ ಕೇಳಿದಾಗ ಅವರು ಪಿರ್ಯಾದುದಾರರಿಗೆ ಈ-ಖಾತಾವನ್ನು ಕೊಟ್ಟಿರುವುದಿಲ್ಲ.
Shivamogga Lokayukta Police ಡಿ.20 ರಂದು ಈಶ್ವರಪ್ಪ ರವರು ಪಿರ್ಯಾದಿ ಬಳಿ ಈ ಸ್ವತ್ತು ಮಾಡಿಕೊಡಲು 5000/- ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದು, ಪಿರ್ಯಾದುದಾರರಿಗೆ ಲಂಚದ ಹಣ ನೀಡಲು ಇಷ್ಟವಿಲ್ಲದೆ ಈಶ್ವರಪನವರ ವಿರುದ್ಧ ಕ್ರಮಕ್ಕಾಗಿ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಾಗಿ ಡಿ.24 ರಂದು ಬೆಳಿಗ್ಗೆ ಸೊರಬ ಪೋಸ್ಟ್ ಆಫೀಸ್ ಕಛೇರಿ ಬಳಿ ಅಪಾದಿತ ಅಧಿಕಾರಿ ಪಿರ್ಯಾದಿಯಿಂದ 5000/- ಲಂಚದ ಹಣವನ್ನು ತೆಗೆದುಕೊಳ್ಳುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಈ ಕಾರ್ಯಾಚರಣೆಯನ್ನು ಮಂಜುನಾಥ ಚೌದರಿ. ಎಂ.ಹೆಚ್. ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ ರವರ ನೇತೃತ್ವದಲ್ಲಿ ನಡೆಸಲಾಗಿದ್ದು, ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್‌ಗಳಾದ ಹೆಚ್.ಎಸ್ ಸುರೇಶ್, ಸಿಬ್ಬಂದಿಯವರಾದ ಯೋಗೇಶ್ ಸಿ.ಹೆಚ್.ಸಿ, ಮಂಜುನಾಥ ಎಂ. ಸಿ.ಹೆಚ್.ಸಿ, ಸುರೇಂದ್ರ ಸಿ.ಹೆಚ್.ಸಿ, ಪ್ರಶಾಂತ್ ಕುಮಾರ್,ಹೆಚ್. ಸಿ.ಪಿ.ಸಿ. ಚೆನ್ನೇಶ್, ಸಿ.ಪಿ.ಸಿ ದೇವರಾಜ್, ಸಿ.ಪಿ.ಸಿ, ಅರುಣ್ ಕುಮಾರ್ ಯು.ಬಿ ಸಿ.ಪಿ.ಸಿ. ಅಂಜಲಿ, ಮ.ಪಿ.ಸಿ ಜಯಂತ್ ಎ.ಪಿ.ಸಿ ಮತ್ತು ಪ್ರದೀಪ್ ಎ.ಪಿ.ಸಿ. ರವರು ಪಾಲ್ಗೊಂಡಿರುತ್ತಾರೆ.

Ministry of Ayush ದೇಶಾದ್ಯಂತ ಶಾಲಾ ಕಾಲೇಜುಗಳಲ್ಲಿ “ಪ್ರಕೃತಿ ಪರೀಕ್ಷಾ ಅಭಿಯಾನ್

0

Ministry of Ayush “ಭಾರತ ಸರ್ಕಾರದ ಆಯುಷ್ ಇಲಾಖೆ ನವೆಂಬರ್ 26 ಸಂವಿಧಾನ ದಿನಾಚರಣೆಯ ದಿನದಿಂದ ಮಾಜಿ ಪ್ರದಾನಿ ವಾಜಪೇಯಿ ಇವರ ಹುಟ್ಟುಹಬ್ಬದ ದಿನಾಂಕ: ಡಿಸೆಂಬರ್ 25ರ ವರೆಗೆ ದೇಶಾದ್ಯಂತ ದೇಶ್ ಕಾ ಪ್ರಕೃತಿ ಪರೀಕ್ಷಾ ಅಭಿಯಾನ್ ಪ್ರಾರಂಭಗೊಂಡಿದೆ, ಇದರಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಅಭಿಯಾನದ ಕುರಿತು ಮಾಹಿತಿ, ಪ್ರಕೃತಿ ಪರೀಕ್ಷಾ ತಂತ್ರಾಂಶ ಉಪಯೋಗಿಸಿ ನಡೆಸಲಾಗುತ್ತಿದೆ. ಮಾನ್ಯ ರಾಷ್ಟಪತಿಯವರು ಈ ಅಭಿಯಾನವನ್ನು ಉದ್ಘಾಟನೆ ಮಾಡಿದ್ದಾರೆ.

ಎ.ಎಲ್.ಎನ್. ರಾವ್ ಮೆಮೋರಿಯಲ್ ಆಯುರ್ವೇದ ಮಹಾವಿದ್ಯಾಲಯ, ಕೊಪ್ಪ, ಇವರು ಈ ಯೋಜನೆಯನ್ನು ಚಿಕ್ಕಮಂಗಳೂರು ಮತ್ತು ಶಿವಮೊಗ್ಗ ಜಿಲ್ಲೆಯ ಸುಮಾರು 5೦ ಸಾವಿರ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಈ ತಂತ್ರಾಂಶ ಆಧರಿಸಿ ಆಯುರ್ವೇದದ ಮಹತ್ವ, ವಿದ್ಯಾರ್ಥಿಗಳ ದೇಹ ಪ್ರಕೃತಿ ಪರೀಕ್ಷೆ, ಜೀವ ಪದ್ದತಿಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಜೊತೆಗೆ ಮುಂದಿನ ದಿನಗಳಲ್ಲಿ ಆರೋಗ್ಯವನ್ನು ಹೇಗೆ ಕಾಪಾಡಿಕೊಂಡು ಹೋಗಬೇಕೆಂಬ ದಿನಚರಿಯ ಬಗ್ಗೆ ಪ್ರಮಾಣ ಪತ್ರವೂ ಸಹ ನೀಡಲಾಗುವುದೆಂದು ಡಾ|| ಅಲೋಕನಾಥ್, ಸಹಪ್ರಾಧ್ಯಾಪಕರು, ಎ.ಎಲ್.ಎನ್. ರಾವ್ ಮೆಮೋರಿಯಲ್ ಆಯುರ್ವೇದ ಮಹಾವಿದ್ಯಾಲಯ, ಕೊಪ್ಪ, ಇವರು ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ ನಡೆಸುತ್ತಿರುವ ಎಲ್ಲಾ ಅಂಗಸಂಸ್ಥೆಗಳಲ್ಲಿ ಈ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು.

Ministry of Ayush ಎಲ್.ಬಿ. ಮತ್ತು ಎಸ್.ಬಿ.ಎಸ್. ಕಾಲೇಜಿನ ಪ್ರಾಂಶುಪಾಲರಾದ ಡಾ. ಲಕ್ಷ್ಮೀಶ ಎ.ಎಸ್., ಎಂ.ಡಿ.ಎಫ್. ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಶಿಲ್ಪ ವಿ.ಎನ್., ಮತ್ತು ಸಂಸ್ಥೆಯ ಕೋಶಾಧ್ಯಕ್ಷರಾದ ಕವಲಕೋಡು ವೆಂಕಟೇಶ್ ಇವರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಡಾ|| ರಕ್ಷಿತಾ, ಸಹಪ್ರಾಧ್ಯಾಪಕರು, ಎ.ಎಲ್.ಎನ್. ರಾವ್ ಮೆಮೋರಿಯಲ್ ಆಯುರ್ವೇದ ಮಹಾವಿದ್ಯಾಲಯ, ಕೊಪ್ಪ ಮತ್ತು 26ಜನ ಆಯುರ್ವೇದ ಸ್ನಾತಕೋತ್ತರ ವಿದ್ಯಾರ್ಥಿಗಳು ಪಾಲ್ಗೊಂಡು ಎಲ್ಲಾ ವಿದ್ಯಾರ್ಥಿಗಳ ತಪಾಸಣೆ ನಡೆಸಿದರು.

The University of Agricultural and Horticultural Sciences ಕೃಷಿ ಕ್ಷೇತ್ರದಲ್ಲಿ ಕೂಲಿ ಕಾರ್ಮಿಕರ ಕೊರತೆ ಹೆಚ್ಚಾಗಿದೆ, ಯಾಂತ್ರೀಕೃತ ಕೃಷಿಗೆ ಆದ್ಯತೆ ನೀಡಿ- ಡಾ.ಆರ್.ಸಿ.ಜಗದೀಶ್

0

The University of Agricultural and Horticultural Sciences ಭಾರತೀಯ ಕೃಷಿ ಅನುಸಂಧಾನ ಪರಿಷತ್, ನವದೆಹಲಿ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ ವಿಸ್ತರಣಾ ನಿರ್ದೇಶನಾಲಯ, ಶಿವಮೊಗ್ಗ, ಮಂಗಳೂರು ಕೆಮಿಕಲ್ಸ್ ಫರ್ಟಿಲೈರ‍್ಸ್, ಶಿವಮೊಗ್ಗ, ಕ್ರಿಯಾಜೆನ್ ಮತ್ತು ಕುಟುಂಬ ಶಿಕ್ಷಣ ಸಂಸ್ಥೆ (ರಿ.), ಶಿವಮೊಗ್ಗ, ಐ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ‘ರಾಷ್ಟ್ರೀಯ ರೈತರ ದಿನಾಚರಣೆ’ ಮತ್ತು ‘ಸಮಗ್ರ ಕೃಷಿ ಪದ್ಧತಿ’ ಕುರಿತ ವಿಚಾರ ಸಂಕಿರಣವನ್ನು ಶಿವಮೊಗ್ಗ, ನವುಲೆ ಆವರಣದ ಸ್ವಾಮಿನಾಥನ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ರೈತಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಡಾ. ಸಿ. ಸುನಿಲ್, ಕೆ.ವಿ.ಕೆ.ಯ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ನಮ್ಮ ದೇಶದ ಬೆನ್ನಲುಬಾಗಿರುವ ರೈತರನ್ನು ಗುರುತಿಸಿ, ಗೌರವಿಸುವ ಉದ್ದೇಶದಿಂದ ಪ್ರತಿವರ್ಷ ಡಿಸೆಂಬರ್ 23 ರಂದು ರಾಷ್ಟ್ರೀಯ ರೈತರ ದಿನವನ್ನು ಆಚರಿಸಲಾಗುತ್ತದೆ. ದೇಶದ ಅಭಿವೃದ್ಧಿಯಲ್ಲಿ ರೈತರ ಪಾಲು ಮಹತ್ವದ್ದಾಗಿದೆ ಎಂದು ತಿಳಿಸುತ್ತಾ, ಕಾರ್ಯಕ್ರಮಕ್ಕೆ ಆಗಮಿಸಿ ಎಲ್ಲರನ್ನೂ ಸ್ವಾಗತಿಸಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ಆರ್. ಸಿ. ಜಗದೀಶ, ಗೌರವಾನ್ವಿತ ಕುಲಪತಿಗಳು, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ ಇವರು ಉದ್ಘಾಟಿಸಿ ಮಾತನಾಡುತ್ತಾ, ಈ ದಿನವು ರೈತ ಸಮುದಾವಯವನ್ನು ಉನ್ನತೀಕರಿಸುವ ಕೃಷಿ ಸುಧಾರಣೆಗಳು ಮತ್ತು ನೀತಿಯನ್ನು ಪ್ರತಿಪಾದಿಸುವ ಮಾಜಿ ಪ್ರಧಾನಿ ಮತ್ತು ಪ್ರಮುಖ ರೈತ ನಾಯಕ ಶ್ರೀ ಚೌಧರಿ ಚರಣ್ ಸಿಂಗ್ ಅವರ ಜನ್ಮ ವಾರ್ಷಿಕೋತ್ಸವವನ್ನು ಸ್ಮರಿಸುತ್ತದೆ. ಕೃಷಿಯಲ್ಲಿ ಕೂಲಿ ಕಾರ್ಮಿಕರ ಕೊರತೆ ಇತ್ತೀಚೆಗೆ ಹೆಚ್ಚಾಗಿರುವುದರಿಂದ ಕೃಷಿಯಲ್ಲಿ ಯಾಂತ್ರೀಕೃತ ಬೇಸಾಯಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕೆಂದು ತಿಳಿಸಿದರು.

ಕೃಷಿ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ದೊರಕದೇ ಇರುವುದು ರೈತರಿಗೆ ಸಮಸ್ಯೆಯಾಗಿದೆ. ರೈತರನ್ನು ವ್ಯಾಪಾರೀಕರಣ ಗೊಳಿಸಿಕೊಂಡು, ರೈತ ಉತ್ಪಾದಕರ ಸಂಘದ ಮೂಲಕ ಮಾರುಕಟ್ಟೆ ಮಾಡುವ ಮೂಲಕ ಹೆಚ್ಚಿನ ಲಾಭವನ್ನು ಪಡೆಯಬೇಕೆಂದು ತಿಳಿಸಿದರು. ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ನಿಶ್ಚಿತವಾದ ಬೆಲೆ ಸಿಕ್ಕರೆ ರೈತರ ಅಭಿವೃದ್ಧಿ ಆಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ, ಡಾ. ಕಿರಣ್ ಕುಮಾರ್, ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ಶಿವಮೊಗ್ಗ ಇವರು ಮಾತನಾಡುತ್ತಾ, ರೈತರನ್ನು ಪ್ರತಿದಿನ ನೆನಪಿಸಬೇಕಾಗುತ್ತದೆ. ಏರುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಪದಾರ್ಥಗಳನ್ನು ಒದಗಿಸುವಲ್ಲಿ ರೈತರ ಪಾತ್ರ ತುಂಬಾ ಮಹತ್ವವಾಗಿದೆ ಎಂದು ತಿಳಿಸಿದರು.

ರೈತರು ಸಮಗ್ರ ಕೃಷಿ ಪದ್ಧತಿ ಮತ್ತು ನೂತನ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಹೆಚ್ಚಿನ ಇಳುವರಿ ಮತ್ತು ಒಳ್ಳೆಯ ಬೆಲೆಯನ್ನು ಪಡೆಯಬೇಕೆಂದು ತಿಳಿಸಿದರು.
ಮತ್ತೋರ್ವ ಮುಖ್ಯ ಅತಿಥಿಗಳಾದ ಡಾ. ಶರತ್, ಪಿ. ಗೌಡ, ಜಿಲ್ಲಾಭಿವೃದ್ಧಿ ವ್ಯವಸ್ಥಾಪಕರು, ನಬಾರ್ಡ್, ಶಿವಮೊಗ್ಗ ಇವರು ಮಾತನಾಡುತ್ತಾ, ಸುಸ್ಥಿರ ಕೃಷಿಗಾಗಿ ರೈತರನ್ನು ಸಬಲೀಕರಣಗೊಳಿಸಲು ರೈತರು ನೂತನ ತಾಂತ್ರಿಕತೆ ಮತ್ತು ಇಲಾಖಾ ಸವಲತ್ತುಗಳು, ನಬಾರ್ಡ್ನಿಂದ ಸಹಾಯವನ್ನು ಪಡೆದು ರೈತ ಉತ್ಪಾದಕರ ಸಂಘಗಳ ಮೂಲಕ ಹೆಚ್ಚಿನ ಆರ್ಥಿಕ ಲಾಭವನ್ನು ಪಡೆಯಬೇಕೆಂದು ತಿಳಿಸಿದರು.

The University of Agricultural and Horticultural Sciences ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆಯ ಸಾಧಕ ರೈತರಿಗೆ ಗೌರವಿಸಿ ಸನ್ಮಾನಿಸಲಾಯಿತು. ಅವರುಗಳೆಂದರೆ, ಶ್ರೀಮತಿ ವೀಣಾ ಸತೀಶ್, ಪೌದಾ ನರ್ಸರಿಯ ಮಾಲೀಕರು, ಶಿವಮೊಗ್ಗ ತಾಲ್ಲೂಕು, ಶ್ರೀಯುತ ಟಿ. ಎಂ. ಈರಪ್ಪನಾಯಕ, ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡ ಪ್ರಗತಿಪರ ರೈತ, ಸೊರಬ ತಲ್ಲೂಕು, ಶ್ರೀ ಮದನ್ ಜಿ. ಎನ್., ದೇಸೀ ಗೋ ತಳಿಗಳನ್ನು ಸಂರಕ್ಷಿಸುತ್ತಿರುವ, ಸಮಗ್ರ ಕೃಷಿ ಪದ್ಧತಿ ಅನುಸರಿಸುತ್ತಿರುವ ರೈತ, ತೀರ್ಥಹಳ್ಳಿ ತಾಲ್ಲೂಕು, ಶ್ರೀಯುತ ಜಿ. ಎಂ. ರಘು, ಜಿ.ಎಂ.ಆರ್. ಬಯೋಟೆಕ್‌ಯ ಮಾಲೀಕರು, ಶಿವಮೊಗ್ಗ ತಾಲ್ಲೂಕು, ಶ್ರೀ ಸುರೇಶ್ ಎಂ. ಎಂ., ಸಮಗ್ರ ಕೃಷಿ ಪದ್ಧತಿ ಅನುಸರಿಸುತ್ತಿರುವ ಪ್ರಗತಿಪರ ರೈತ, ಶಿಕಾರಿಪುರ ತಾ||, ಶ್ರೀ ಮಂಜಪ್ಪ, ಗುಣಮಟ್ಟದ ಶುಂಠಿಯನ್ನು ತಾವೇ ಬೆಳೆದು ಸಂಸ್ಕರಿ ಮಾರಾಟ ಮಾಡುತ್ತಿರುವ ರೈತ, ಸಾಗರ ತಾಲ್ಲೂಕು.
ಕಾರ್ಯಕ್ರಮಕ್ಕೆ ಡಾ. ತಿಪ್ಪೇಶ, ಡಿ., ಡೀನ್ (ಕೃಷಿ), ಕೃಷಿ ಮಹಾವಿದ್ಯಾಲಯ, ಶಿವಮೊಗ್ಗ, ಡಾ. ಪ್ರದೀಪ್, ಎಸ್., ಸಹ ಸಂಶೋಧನಾ ನಿರ್ದೇಶಕರು, ವ.ಕೃ.ತೋ.ಸಂ.ಕೇಂದ್ರ, ಡಾ. ಬಿ. ಸಿ. ಹನುಮಂತಸ್ವಾಮಿ, ಸಹ ವಿಸ್ತರಣಾ ನಿರ್ದೇಶಕರು, ಕೆ.ಶಿ.ನಾ.ಕೃ.ತೋ.ವಿ.ವಿ., ಶಿವಮೊಗ್ಗ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಡಾ. ಅಂಜಲಿ, ಎಂ.ಸಿ., ವಿಜ್ಞಾನಿ (ಮಣ್ಣು ವಿಜ್ಞಾನ), ಈ ಕಾರ್ಯಕ್ರಮವನ್ನು ನಿರೂಪಿಸಿದರು. ವಂದನಾರ್ಪಣೆಯನ್ನು ಡಾ. ಗಿರೀಶ್, ಆರ್., ವಿಜ್ಞಾನಿ (ಸಸ್ಯ ಸಂರಕ್ಷಣೆ) ಕೆ.ವಿ.ಕೆ., ಶಿವಮೊಗ್ಗ ಇವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗದ ವಿಜ್ಞಾನಿಗಳು ಮತ್ತು ಸಿಬ್ಬಂದಿಗಳು ಉಪಸ್ತಿತರಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಸಾಧಕ ರೈತರ ಕಿರು ಪರಿಚಯವನ್ನು ಡಾ. ಸುಧಾರಾಣಿ, ಎನ್., ವಿಜ್ಞಾನಿ (ಗೃಹ ವಿಜ್ಞಾನಿ), ಕೆ.ವಿ.ಕೆ., ಶಿವಮೊಗ್ಗ ಇವರು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ರೈತರು, ರೈತ ಮಹಿಳೆಯರು, ಸ್ವಸಹಾಯ ಸಂಘದ ಸದಸ್ಯರು ಸೇರಿದಂತೆ ಒಟ್ಟು 200 ಜನರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.

CM Siddharamaiah ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 371ಜೆ ಜಾರಿ ದಶಮಾನೋತ್ಸವ. ಕಲಬುರ್ಗಿಯಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ಲೋಕಾರ್ಪಣೆ

0

CM Siddharamaiah ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 371 ಜೆ ಜಾರಿಯಾದ ದಶಮಾನೋತ್ಸವದ ಪ್ರಯುಕ್ತ 371 ಹಾಸಿಗೆಗಳ ಅತ್ಯುನ್ನತ ಆರೋಗ್ಯ ಸೌಕರ್ಯಗಳಿರುವ ಜಯದೇವ ಹೃದ್ರೋಗ ಆಸ್ಪತ್ರೆಯನ್ನು ಅತ್ಯಂತ ಸಂತೋಷದಿಂದ ಲೋಕಾರ್ಪಣೆಗೊಳಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.

ಅವರು ಕಲಬುರಗಿಯಲ್ಲಿ ನಿರ್ಮಾಣಗೊಂಡಿರುವ ಜಯದೇವ ಹೃದ್ರೋಗ ಆಸ್ಪತ್ರೆಯ ನೂತನ ಕಟ್ಟಡದ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು

ಬೆಂಗಳೂರು, ಮೈಸೂರಿನಲ್ಲಿರುವ ಜಯದೇವ ಹೃದ್ರೋಗ ಆಸ್ಪತ್ರೆ ಶುಚಿತ್ವ ಮತ್ತು ನಿರ್ವಹಣೆಯಲ್ಲಿ ಉತ್ತಮ ಗುಣಮಟ್ಟ ಕಾಯ್ದುಕೊಂಡಿದೆ. ಕಲಬುರಗಿಯ ಜಯದೇವ ಇವೆರಡೂ ಆಸ್ಪತ್ರೆಗಳಿಗಿಂತ ಇನ್ನೂ ಹೆಚ್ಚಿನ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು.

ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿರುವ ಜನತೆ ಹೃದ್ರೋಗ ಸಮಸ್ಯೆಗಳಿಗೆ ಈಗ ಬೆಂಗಳೂರಿಗೆ ಬರುವ ಅಗತ್ಯವೇ ಇಲ್ಲ. ಕಲಬುರಗಿಯಲ್ಲೇ ಜಯದೇವ ಆಸ್ಪತ್ರೆ ಲೋಕಾರ್ಪಣೆಗೊಳಿಸಿದ್ದೇವೆ.

ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಭಾಷಣದಲ್ಲಿ ಕೇಳಿದಂತೆ, “ಕಲಬುರಗಿಯಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು, ಈ ಬಗ್ಗೆ ಬೇಗ ತೀರ್ಮಾನ ತೆಗೆದುಕೊಳ್ಳುವಂತೆ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಅವರಿಗೆ ಸೂಚನೆ ನೀಡಲಾಗಿವುದು. ಮೈಸೂರಿಗೂ ನಿಮ್ಹಾನ್ಸ್ ಘಟಕದ ಅಗತ್ಯವಿದ್ದು ಅದನ್ನು ಪೂರೈಸುವ ಕಡೆ ಗಮನ ಹರಿಸಬೇಕು.

371 ಜೆ ಜಾರಿಯಿಂದ ಈ ಭಾಗದ ಸಹಸ್ರಾರು ವಿದ್ಯಾವಂತರು ಉತ್ತಮ ಹುದ್ದೆಗಳನ್ನು ಪಡೆಯಲು ಸಾಧ್ಯವಾಗಿದೆ. ನಮ್ಮ ಸರ್ಕಾರ ಉತ್ತರ ಕರ್ನಾಟಕ ಸೇರಿದಂತೆ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ನೀಲನಕ್ಷೆ ಸಿದ್ದಪಡಿಸಿಕೊಂಡಿದ್ದೇವೆ. ಇದು ನಮ್ಮ ಸರ್ಕಾರದ ಬದ್ಧತೆ.

CM Siddharamaiah ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು. ಇಲ್ಲಿನ ವಿಶ್ವ ವಿದ್ಯಾಲಯಗಳಲ್ಲಿ ನೂತನ ಹೊಸ ಕೋರ್ಸ್ ಗಳನ್ನು ಆರಂಭಿಸುವುದು ಮತ್ತು ಖಾಲಿ ಇರುವ ಹುದ್ದೆಗಳನ್ನು ತುಂಬುವ ಕೆಲಸವನ್ನೂ ಮಾಡಲಾಗುವುದು.

ತೊಗರಿ ಬೆಳೆ ಪ್ಯಾಕೇಜ್ ಬಗ್ಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಅಜಯ್ ಸಿಂಗ್ ಮತ್ತು ಇಲ್ಲಿನ ಶಾಸಕರು, ಸಚಿವರು ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ವರದಿ ಕೇಳಿದ್ದೇನೆ. ವರದಿ ಬಂದ ಕೂಡಲೇ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.

ಈಗಾಗಲೇ ಅನುಭವ ಮಂಟಪ ನಿರ್ಮಾಣ ಅರ್ಧ ಮುಗಿದಿದೆ. ಪೂರ್ಣಗೊಳಿಸಲು ಅಗತ್ಯ ಹಣ ನೀಡಲಾಗಿದೆ. ಇನ್ನೂ ಅಗತ್ಯಬಿದ್ದರೆ ಹಣ ನೀಡಲಾಗುವುದು. ಹಣಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.

Department of Science and Technology ಗಣಿತದ ಬಗ್ಗೆ ಮಕ್ಕಳಲ್ಲಿನ ನಿರಾಸಕ್ತಿ ಭಯ ದೂರಗೊಳಿಸಿ- ಸೈಯದ್ ರಹಮತ್ ಪ್ಯಾರಿ

0

Department of Science and Technology ಗಣಿತ ಕ್ಷೇತ್ರಕ್ಕೆ ಆರ್ಯಭಟ, ಬ್ರಹ್ಮಗುಪ್ತ, ವರಹಮೀರ, ಭಾಸ್ಕರ, ಶ್ರೀರಾಮಾನುಜನ್ ಸೇರಿದಂತೆ ಭಾರತೀಯ ಮಹನೀಯರನೇಕರು ನೀಡಿದ ಕೊಡುಗೆಗಳಿಂದ ಗಣಿತಕ್ಷೇತ್ರ ಶ್ರೀಮಂತಗೊಂಡಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಶ್ರೀಮತಿ ಸೈಯದ್ ರಹಮತ್ ಪ್ಯಾರಿ ಅವರು ಹೇಳಿದರು.

ಅವರು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಜಿಲ್ಲಾ ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ದುರ್ಗಿಗುಡಿ ಸರ್ಕಾರಿ ಪ್ರೌಢಶಾಲೆಯ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಗಣಿತ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮಕ್ಕಳಲ್ಲಿ ಗಣಿತದ ಮಹತ್ವದ ಕುರಿತು ಅರಿವು ಮೂಡಿಸಲು ಕೇಂದ್ರ ಸರ್ಕಾರವು ಪ್ರತಿವರ್ಷ ಡಿಸೆಂಬರ್ 22ರಂದು ಗಣಿತ ದಿನಾಚರಣೆಯನ್ನಾಗಿ ಆಚರಿಸಲು ಮಾರ್ಗದರ್ಶನ ನೀಡಿದೆ ಎಂದ ಅವರು, ಪ್ರತಿ ವ್ಯಕ್ತಿಯ ದೈನಂದಿನ ಬದುಕು ಗಣಿತದೊಂದಿಗೆ ಆರಂಭಗೊಂಡು ಗಣಿತದೊಂದಿಗೆ ಅಂತ್ಯಗೊಳ್ಳುತ್ತದೆ. ಇಷ್ಟೊಂದು ಮಹತ್ವದ ವಿಷಯ ತಮಗೆ ಅರಿವಿಲ್ಲದಂತೆ ನಮ್ಮೆಲ್ಲರ ಬದುಕಿನೊಂದಿಗೆ ಮಿಳಿತಗೊಂಡಿದೆ ಎಂದವರು ನುಡಿದರು.

ಗಣಿತ ವಿಷಯವೆಂಬುದು ಬಹುಸಂಖ್ಯಾತ ವಿದ್ಯಾರ್ಥಿಗಳಿಗೆ ಕಬ್ಬಿಣದಂತಾಗಿದೆ. ಗಣಿತದ ಕಲಿಕೆಗೆ ತಾತ್ಸಾರ ಸಲ್ಲದು ಎಂದ ಅವರು, ಮಕ್ಕಳಲ್ಲಿ ಗಣಿತ ಕಲಿಕೆಯಲ್ಲಿನ ನಿರಾಸಕ್ತಿ – ಭಯವನ್ನು ದೂರಗೊಳಿಸಿ, ಸಕಾರಾತ್ಮಕ ಭಾವನೆ ಮೂಡಿಸುವ ಮೂಲಕ ಹಾಗೂ ನಿರಂತರ ಕಲಿಕೆಯಿಂದ ಗಣಿತವನ್ನು ಸರಳವಾಗಿ ಕಲಿಯಬಹುದಾಗಿದೆ. ಈ ವಿಷಯವನ್ನು ಸವಾಲಾಗಿ ಸ್ವೀಕರಿಸಿ ಸಾಧನೆಗೆ ಮುಂದಾದಲ್ಲಿ ವಿದ್ಯಾರ್ಥಿಗಳಿಗೆ ಖಂಡಿತಾ ಯಶಸ್ಸು ದೊರೆಯಲಿದೆ ಎಂದವರು ನುಡಿದರು.

Department of Science and Technology ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥ್ ಅವರು ಮಾತನಾಡಿ, ಗಣಿತದ ಅನೇಕ ಪ್ರಕಾರಗಳನ್ನು ಪ್ರಪಂಚಕ್ಕೆ ಪರಿಚಯಿಸಿದ ಗಣಿತಜ್ಞ ಶ್ರೀರಾಮಾನುಜನ್ ಅವರು ಭಾರತದ ಗಣಿತದ ಪಿತಾಮಹ ಎಂದೇ ಗುರುತಿಸಲ್ಪಡುತ್ತಾರೆ. ಈ ತಮ್ಮ ಅತ್ಯಲ್ಪ ಜೀವಿತಾವಧಿಯಲ್ಲಿ ಈ ಕ್ಷೇತ್ರಕ್ಕೆ ನೀಡಿದ ಕೊಡುಗೆ ಚಿರಂತನವಾದುದು ಎಂದರು.

ಕಾರ್ಯಕ್ರಮಕ್ಕೂ ಮುನ್ನ ರಾಷ್ಟ್ರೀಯ ಗಣಿತ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಗಣಿತದ ಮಾದರಿಗಳನ್ನು ಗಣ್ಯರು ವೀಕ್ಷಿಸಿದರು. ಇದೇ ಸಂದರ್ಭದಲ್ಲಿ ಗಣಿತಜ್ಞ ಶ್ರೀರಾಮಾನುಜನ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯ ಕೆ.ಎಮ್.ಮೋಹನ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಡಿ.ವಿ.ಎಸ್.ಸಂಯುಕ್ತ ಪದವಿಪೂರ್ವ ಕಾಲೇಜಿನ ಗಣಿತ ಶಿಕ್ಷಕ ಕೇಶವಪ್ರಸಾದ್, ಭದ್ರಾವತಿ ಸಿಲ್ವರ್ ಜ್ಯುಬಿಲ್ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಶ್ರೀಮತಿ ಪೂರ್ಣಿಮಾ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ, ಪ್ರಾಯೋಗಿಕ ಪ್ರಾತ್ಯಕ್ಷಿತೆಗಳೊಂದಿಗೆ ವಿಶೇಷ ಉಪನ್ಯಾಸ ನೀಡಿದರು.

ಗಣಿತ ಕಲಿಕೆಯ ಸರಳ ವಿಧಾನಗಳನ್ನು ಪರಿಚಯಿಸಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮ ಸಂಯೋಜಕ ಶಂಕರ್, ಶಿಕ್ಷಕರಾದ ಗಂಗಾನಾಯ್ಕ್, ಶ್ರೀಮತಿ ಮೀನಾಕ್ಷಿ ಹೆಚ್.ಟಿ. ಶ್ರೀಮತಿ ಮಹಾದೇವಿ ಮತ್ತಿತರರು ಉಪಸ್ಥಿತರಿದ್ದರು.

Karnataka Rakshana Vedike ಕೇವಲ ಕನ್ನಡ ಹೋರಾಟಕ್ಕಷ್ಟೇ ಅಲ್ಲ. ಸಹಾಯದಲ್ಲೂ ಮುಂದೆ ಬಂದ ಕರವೇ ಸ್ವಾಭಿಮಾನಿ ಬಣ

0

Karnataka Rakshana Vedike ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ಅಶೋಕ ನಗರದಲ್ಲಿ ನಡೆದ 69ನೇ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ಭುವನಗಿರಿಯಿಂದ ಕನ್ನಡ ಜ್ಯೋತಿಯನ್ನು ತಂದು ಕಾರ್ಯಕ್ರಮದ ಉದ್ಘಾಟನೆ
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರವೇ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷರಾದ ಕೃಷ್ಣೇಗೌಡರು ಹಾಗೂ ಕರವೇ ಸ್ವಾಭಿಮಾನಿ ಬಣದ ಕಾನೂನು ಸಲಹೆಗಾರರಾದ ಟಿ.ಕೆ ಅನಿಲ್ ಕುಮಾರ್ ಹಾಗೂ ಮುಖ್ಯ ಅತಿಥಿಗಳಿಂದ ಕಾರ್ಯಕ್ರಮ ಉದ್ಘಾಟನೆ ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರು ಹಾಗೂ ಜೆಡಿಎಸ್ ನ ರಾಜ್ಯ ಉಪಾಧ್ಯಕ್ಷರಾದ ಶ್ರೀ ಕೆಬಿ ಪ್ರಸನ್ನ ಕುಮಾರ್. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ರಮೇಶ್ ರವರು ಹಾಗೂ ರೋಟರಿ ಅಧ್ಯಕ್ಷರು ಶಿವಮೊಗ್ಗ ಸೆಂಟ್ರಲ್ ನ ಶ್ರೀಯುತ ಕಿರಣ್ ಕುಮಾರ್ ಜಿ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷರಾದ ಎಚ್ಎಸ್ ಕಿರಣ್ ಕುಮಾರ್ ವಹಿಸಿದ್ದರು. ಕೇವಲ ಹೋರಾಟಕ್ಕೆ ಅಷ್ಟೇ ಸೀಮಿಕ ಸೀಮಿತವಾಗದೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಸಹಾಯದಲ್ಲೂ ಮುಂದಿದೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹೊಸಪಾಳ್ಯ ಗ್ರಾಮದ ಮಾರಿಕಾಂಬ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ 20 ಸಾವಿರ ರೂಪಾಯಿಗಳನ್ನು ದೇಣಿಗೆಯಾಗಿ ನೀಡಲಾಯಿತು ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಸೇವ ರತ್ನ ಪ್ರಶಸ್ತಿಯನ್ನು ನೀಡಲಾಯಿತು. Karnataka Rakshana Vedike ಸೇವ ರತ್ನ ಪ್ರಶಸ್ತಿ ವಿಜೇತರು ಶ್ರೀಯುತ ರೇವಣಸಿದ್ದಯ್ಯ ಅರಣ್ಯ ಇಲಾಖೆ ಶಿವಮೊಗ್ಗ ನಾಗರಾಜ್ ವನ್ಯಜೀವಿ ಮತ್ತು ಪತ್ರಿಕಾ ವಿಭಾಗ ಹಾಗೂ ದಾನಂ ಸಿನಿಮಾ ನಟ ಹಾಗೂ ಕಿರುಚಿತ್ರ ನಿರ್ಮಾಪಕರು ಮತ್ತು ಎಸ್ ಎಸ್ ಎಲ್ ಸಿ ಯಲ್ಲಿ ಕನ್ನಡ ವಿಭಾಗದಲ್ಲಿ ಅತಿ ಹೆಚ್ಚು ಅಂಕವನ್ನು ಪಡೆದ ವಿದ್ಯಾರ್ಥಿನಿ ಸಂಜನಾ ತಿವಾರಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕೇಂದ್ರಬಿಂದುವಾಗಿ ಪಂಚಭಾಷ ಚಲನಚಿತ್ರ ನಟ ರಘುರಾಜ್ ಮಲ್ನಾಡ್ ಅವರು ಭಾಗವಹಿಸಿದ್ದರು ಕೊನೆಯಲ್ಲಿ ಸಂಘದ ಪದಾಧಿಕಾರಿಗಳಿಗೆ ರಾಜ್ಯ ಅಧ್ಯಕ್ಷರ ಮುಖಾಂತರ ಆದರ್ಶ ಪತ್ರವನ್ನು ನೀಡಲಾಯಿತು ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾಗಿ ಶ್ರೀಯುತ ಕವಿತಾ .ಸಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತುಈ ಕಾರ್ಯಕ್ರಮದ ನಿರೂಪಕರಾಗಿ ಶಂಕರ್ ಚೀಲೂರವರು ನೆರವೇರಿಸಿದರು ಕಾರ್ಯಕ್ರಮದಲ್ಲಿ ಸಾರ್ವಜನಿಕವಾಗಿ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು ಮತ್ತು ಪ್ರೀತಂ ಮಲೋಡಿ ಆರ್ಕೆಸ್ಟ್ರಾ ಇವರಿಂದ ರಸಮಂಜರಿ ಕಾರ್ಯಕ್ರಮವನ್ನು ಸಹ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಪದಾಧಿಕಾರಿಗಳು ಸಾರ್ವಜನಿಕರು ಗಣ್ಯರು ಕನ್ನಡ ಅಭಿಮಾನಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು ಜಿಲ್ಲಾಧ್ಯಕ್ಷರುಕಿರಣ್ ಕುಮಾರ್ ಎಚ್ಎಸ್ ಅವರು ತಿಳಿಸಿದ್ದಾರೆ

DVS College ಪಠ್ಯ ಚಟುವಟಿಕೆ ಜೊತೆ ವಿದ್ಯಾರ್ಥಿಗಳ ಆಸಕ್ತಿ ಹೆಚ್ಚಿಸುವ ಕ್ರಿಯಾತ್ಮಕ ಆಲೋಚನೆ ವೃದ್ಧಿಸುವ ಸ್ಪರ್ಧೆಗಳು ಉಪಯುಕ್ತ- ಅಸಂತ ಸಿಕ್ವೆರಾ

0

DVS College ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಇಂಧನ ರಹಿತ ಅಡುಗೆ ಸ್ಪರ್ಧೆ ವೈವಿಧ್ಯಮಯ ಆಹಾರ ಪದಾರ್ಥಗಳಿಂದ ಗಮನ ಸೆಳೆಯಿತು. ನಗರದ ದೇಶಿಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.
ದೇಶೀಯ ವಿದ್ಯಾಶಾಲಾ ಸಮಿತಿ ಕಾರ್ಯದರ್ಶಿ ಎಸ್.ರಾಜಶೇಖರ್ ಮಾತನಾಡಿ, ಪಠ್ಯ ಚಟುವಟಿಕೆಗಳ ಜತೆಯಲ್ಲಿ ವಿದ್ಯಾರ್ಥಿಗಳಲ್ಲಿ ಆಸಕ್ತಿ ಹೆಚ್ಚಿಸುವ, ಕ್ರೀಯಾತ್ಮಕ ಆಲೋಚನೆ ವೃದ್ಧಿಸುವ ದೃಷ್ಟಿಯಿಂದ ಆಯೋಜಿಸುವ ಸ್ಪರ್ಧೆಗಳು ಉಪಯುಕ್ತ ಆಗಿರುತ್ತವೆ ಎಂದು ಹೇಳಿದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯ ಅಸಂತ ಸಿಕ್ವೇರ ಮಾತನಾಡಿ, ಇಂಧನರಹಿತ ಅಡುಗೆ ಸ್ಪರ್ಧೆಯಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿರುವುದು ತುಂಬಾ ಸಂತಸದ ಸಂಗತಿ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಹೊಸ ಹೊಸ ರೀತಿ ಚಾಟ್ಸ್, ತಿಂಡಿ ತಿನಿಸುಗಳನ್ನು ತಯಾರಿಸಿದ್ದರು. ಆಸಕ್ತಿ ವಹಿಸಿ ವಿದ್ಯಾರ್ಥಿಗಳ ತಂಡಗಳು ವಿಶೇಷ ವಿಭಿನ್ನವಾಗಿ ಅಡುಗೆ ಸಿದ್ಧಪಡಿಸಿದ್ದರು. ತರಕಾರಿ, ಹಣ್ಣು, ಮಂಡಕ್ಕಿ, ಪಾನಿಪೂರಿ, ಸೊಪ್ಪು, ಬಿಸ್ಕಟ್ ಸೇರಿ ವಿವಿಧ ಬಗೆಯ ಅಡುಗೆಗೆ ಬೇಕಾಗುವ ವಸ್ತುಗಳನ್ನು ವಿದ್ಯಾರ್ಥಿಗಳು ತಂದಿದ್ದರು. ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು.
DVS College ಇಂಧನರಹಿತ ಅಡುಗೆ ಸ್ಪರ್ಧೆಯಲ್ಲಿ 400ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು. ಮೂರು ಗುಂಪುಗಳಾಗಿ ವಿಂಗಡಿಸಿ ಸ್ಪರ್ಧೆ ನಡೆಸಲಾಯಿತು. 8ನೇ ತರಗತಿ, 9ನೇ ತರಗತಿ ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಸ್ಪರ್ಧೆ ನಡೆಸಲಾಯಿತು.
ತಿಂಡಿ ತಿನಿಸು ತಯಾರಿಕೆಗೆ ವಿದ್ಯಾರ್ಥಿಗಳಿಗೆ ಸ್ವಲ್ಪ ಸಮಯ ಅವಕಾಶ ನೀಡಲಾಗಿತ್ತು. ಫೋಟೊ ತೆಗೆದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ನಂತರ ತೀರ್ಪುಗಾರರು ವಿದ್ಯಾರ್ಥಿಗಳ ಗುಂಪುಗಳು ತಯಾರಿಸಿದ್ದ ಅಡುಗೆ ರುಚಿ ಸವಿದು 8ನೇ, 9ನೇ ಹಾಗೂ 10ನೇ ತರಗತಿಯ ಪ್ರತಿ ವಿಭಾಗದಲ್ಲೂ ವಿಜೇತರನ್ನು ಆಯ್ಕೆ ಮಾಡಿದರು.
ದೇಶಿಯ ವಿದ್ಯಾಶಾಲಾ ಸಮಿತಿ ಆಡಳಿತ ಮಂಡಳಿಯ ಹರೀಶ್.ಎಸ್., ಪ್ರೌಢಶಾಲಾ ವಿಭಾಗದ ಉಪಪ್ರಾಚಾರ್ಯ ಸಿ.ಕೆ.ಶ್ರೀಧರ್, ಶಿಕ್ಷಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.