Wednesday, April 23, 2025
Wednesday, April 23, 2025

Sahyadri Science College ಡಿ.05 ರಂದು ಜಿಲ್ಲಾ ಮಟ್ಟದ ಯುವಜನೋತ್ಸವ : ಯುವ ಕೃತಿ ಮತ್ತು ವಿಜ್ಞಾನ ಮೇಳ

Date:

Sahyadri Science College ಭಾರತ ಸರ್ಕಾರ, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಸಹ್ಯಾದ್ರಿ ವಿಜ್ಞಾನ ಕಾಲೇಜು ಇವರುಗಳ ಸಹಯೋಗ ದೊಂದಿಗೆ ಸಹ್ಯಾದ್ರಿ ವಿಜ್ಞಾನ ಕಾಲೇಜು ಜ್ಯೂಬಿಲಿ ಸಭಾಂಗಣದಲ್ಲಿ ಡಿ. 05 ರಂದು ಜಿಲ್ಲಾ ಮಟ್ಟದ ಯುವಜನೋತ್ಸವದ ಕಾರ್ಯಕ್ರಮದಡಿಯಲ್ಲಿ ಯುವ ಕೃತಿ ಮತ್ತು ವಿಜ್ಞಾನ ಮೇಳವನ್ನು ಏರ್ಪಡಿಸಲಾಗಿದೆ.
ಜಿಲ್ಲಾ ಮಟ್ಟದ ಯುವಜನೋತ್ಸವಕ್ಕೆ ಭಾಗವಹಿಸುವ ಯುವಕ, ಯುವತಿಯರು 15 ರಿಂದ 29 ವರ್ಷ ವಯೋಮಿತಿಗೆ ಒಳಪಟ್ಟಿರಬೇಕು.
ವಿಜ್ಞಾನ ಮೇಳ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಆಧುನಿಕತೆ ಎಂಬ ಪರಿಕಲ್ಪನೆ ಹೊಂದಿದ್ದು,
ತಂಡದ ಬಹುಮಾನ ಪ್ರಥಮ-7000/-, ದ್ವಿತೀಯ – 5000/- ಮತ್ತು ತೃತೀಯ-3000/- ನಗದು ಬಹುಮಾನ ನೀಡಲಾಗುವುದು.
ವೈಯಕ್ತಿಕ ಬಹುಮಾನ 3000/-, ದ್ವಿತೀಯ- 2000/- ಮತ್ತು ತೃತೀಯ-1500/- ನಗದು ಬಹುಮಾನ ನೀಡಲಾಗುವುದು.
ತಂಡದಲ್ಲಿ ಗರಿಷ್ಟ 5 ಜನ ಮತ್ತು ವೈಯಕ್ತಿಕ ಒಬ್ಬರು ಮಾತ್ರ ಭಾಗವಹಿಸಬಹುದು. ಆಧುನಿಕತೆಗೆ ಪ್ರಾಧಾನ್ಯತೆ ನೀಡಲಾಗುವುದು. ಸಕ್ರಿಯ ಮಾದರಿ ತಯಾರಿಕೆಯ ಪ್ರದರ್ಶನವಿರಬೇಕು.ನಿಷ್ಕ್ರಿಯ ಮಾದರಿ ತಯಾರಿಕೆಗೆ ಅವಕಾಶವಿಲ್ಲ. ಭಾಗವಹಿಸುವ ಸ್ಪರ್ಧಾಳುಗಳು ಅವಶ್ಯವಿರುವ ಅಗತ್ಯ ಸಾಮಗ್ರಿಗಳನ್ನು ತಾವೇ ತರಬೇಕು.
ಯುವ ಕೃತಿ ವಿಭಾಗದಲ್ಲಿ ಗುಡಿಕೈಗಾರಿಕೆ ಕಲಾ ಪ್ರಕಾರ, ನೇಕಾರಿಕೆ/ಜವಳಿ, ಕೃಷಿ ಉತ್ಪನ್ನಗಳನ್ನು ತಯಾರಿಸಬೇಕು. ಪ್ರತಿಯೊಂದರಲ್ಲೂ 7 ಜನ ಭಾಗವಹಿಸಬಹುದು. ಸ್ಪರ್ಧಾಳುಗಳು ಅಗತ್ಯ ಸಾಮಗ್ರಿಗಳನ್ನು ತಾವೇ ತರಬೇಕು. ಭಾಗವಹಿಸುವವರಿಗೆ ಗೌರವ ಧನ ನೀಡಲಾಗುವುದು.
Sahyadri Science College ಆಸಕ್ತರು ಸ್ಪರ್ಧೆಯಲ್ಲಿ ಭಾಗವಹಿಸುವ ಬಗ್ಗೆ ಮಾಹಿತಿಯನ್ನು ಡಿ.03 ರೊಳಗಾಗಿ ನೀಡಬೇಕು ಮತ್ತು ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಚೇರಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಅಥವಾ ಯುವ ಕೇಂದ್ರ ಕಚೇರಿ ಅಥವಾ ದೂರವಾಣಿ ಸಂಖ್ಯೆ 08182 220883 9961332968, 9900280416 ಸಂಪರ್ಕಿಸುವುದು. ಮತ್ತು MYBHARAT (my bharat.gov.in) ಪೋರ್ಟಲ್‌ನಲ್ಲಿ ್ಲ ರಿಜಿಸ್ಟೆçಷನ್ ಮಾಡಿಕೊಳ್ಳತಕ್ಕದ್ದು ಎಂದು ಯುವ ಅಧಿಕಾರಿ ಉಲ್ಲಾಸ್ ಕೆ.ಟಿ.ಕೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Nalanda Chess Academy ನಳಂದ ಚೆಸ್ ಸಂಸ್ಥೆಯಿಂದ ಬೇಸಿಗೆ ಚೆಸ್ ತರಬೇತಿ ಶಿಬಿರ

Nalanda Chess Academy ಶಿವಮೊಗ್ಗ ರವೀಂದ್ರನಗರ 2ನೇ ತಿರುವಿನಲ್ಲಿರುವ ಯಾದವ...