Thursday, March 19, 2026
Thursday, March 19, 2026
Home Blog Page 458

Dr. Krishna S. Bhatt ಹಿರಿಯ ಲೇಖಕ ಡಾ.ಕೃಷ್ಣ ಎಸ್.ಭಟ್ ಅವರಿಗೆ “ಹವ್ಯಕ ಸ್ಫೂರ್ತಿ ರತ್ನ” ಪ್ರಶಸ್ತಿ

0

Dr. Krishna S. Bhatt ಶಿವಮೊಗ್ಗದ ಹಿರಿಯ ವೈದ್ಯರಾದ ಡಾ.ಕೃಷ್ಣಭಟ್ ಅವರ ಹೆಸರು ಕೇಳದವರಿಲ್ಲ.
ಆರಂಭದಲ್ಲಿ ಭದ್ರಾವತಿಯಲ್ಲಿ ಸ್ಥಳೀಯ ವೈದ್ಯರಾಗಿ ಜನಪ್ರಿಯತೆ ಪಡೆದವರು. ವೈದ್ಯಕೀಯ ಸಾಹಿತ್ಯಕ್ಷೇತ್ರದಲ್ಲಿ ಲೇಖಕರಾಗಿ ಪುಸ್ತಕಗಳನ್ನ ಪ್ರಕಟಿಸಿದ್ದಾರೆ. ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಅವರ ವೈದ್ಯಕೀಯ ಲೇಖನಗಳು ಪ್ರಕಟವಾಗಿ ಜನ ಮೆಚ್ಚುಗೆಗೆ ಪಾತ್ರವಾಗಿವೆ.

ಆಕಾಶವಾಣಿ ಭದ್ರಾವತಿ ಕೇಂದ್ರದ ಮೂಲಕವೂ ಅವರ ವೈದ್ಯಕೀಯ ಭಾಷಣ,ಫೋನ್ ಇನ್ ಕಾರ್ಯಕ್ರಮ, ಚಿಂತನಗಳು ಪ್ರಸಾರವಾಗಿವೆ.

ಡಾ.ಕೃಷ್ಣಭಟ್ಟರ ಬಹುಮುಖಿ ಸಾಮಾಜಿಕ ಸೇವೆಯ ದ್ಯೋತಕವಾಗಿ
” ಡಾ.ಬಿ.ಸಿ.ರಾಯ್ ಪ್ರಶಸ್ತಿ ಸಂದಿದೆ.
ಭದ್ರಾವತಿಯಲ್ಲಿ ಹಲವು ಸಂಘಸಂಸ್ಥೆಗಳಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

Dr. Krishna S. Bhatt ಶಿವಮೊಗ್ಗ ಪ್ರದೇಶದ ಹವ್ಯಕ ಸಮುದಾಯದ ಸಮಾಜಪರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ.
ಈ ಬಾರಿ ವಿಶ್ವಹವ್ಯಕ ಸಮ್ಮೇಳನ ಬೆಂಗಳೂರಿನಲ್ಲಿ ಡಿಸೆಂಬರ್ 27 ರಿಂದ 29 ವರೆಗೆ ನಡೆಯಲಿದೆ.
ಸಮ್ಮೇಳನದಲ್ಲಿ ಡಾ.ಕೃಷ್ಣಭಟ್ಟರು ” ಹವ್ಯಕ ಸ್ಫೂರ್ತಿ ರತ್ನ”
ಪ್ರಶಸ್ತಿ‌ ಸ್ವೀಕರಿಸಲಿದ್ದಾರೆ.

ಶ್ರೀಯುತರಿಗೆ
ಕೆ ಲೈವ್ ಬಳಗ ಅಭಿನಂದಿಸುತ್ತದೆ.

Christmas Festival ಸೊರಬ ತಾಲ್ಲೂಕಿನಾದ್ಯಂತ ಕ್ರಿಸ್ಮಸ್ ಸಂಭ್ರಮ

0

Christmas Festival ಸೊರಬ ಪಟ್ಟಣ ಸೇರಿ ತಾಲೂಕಿನಾದ್ಯಂತ ಬುಧವಾರ ವಿಶ್ವಕ್ಕೆ ಶಾಂತಿಯ ಸಂದೇಶ ಸಾರಿದ ಏಸುಕ್ರಿಸ್ತನ ಜನ್ಮದಿನ ಕ್ರಿಸ್‌ಮಸ್ ಹಬ್ಬವನ್ನು ಕ್ರೈಸ್ತರು ಸಡಗರ-ಸಂಭ್ರಮದಿಂದ ಆಚರಿಸಿದರು.
ಬೆಳಗ್ಗೆಯಿಂದಲೇ ಮಕ್ಕಳು ಹೊಸಬಟ್ಟೆ ತೊಟ್ಟು ಸಂಭ್ರಮಿಸಿದರೆ, ಮನೆಗಳಲ್ಲಿ ಕ್ರಿಸ್‌ಮಸ್ ಟ್ರೀ ರಚಿಸಿ ವಿದ್ಯುತ್ ದೀಪ ಮತ್ತು ವಿವಿಧ ಬಣ್ಣಗಳ ಹಾಳೆಗಳಿಂದ ಶೃಂಗರಿಸಿದ ದೃಶ್ಯ ಕಂಡುಬಂದಿತು.
ಪಟ್ಟಣದ ಹೊಸಪೇಟೆ ಬಡಾವಣೆಯ ಸಂತ ಸೆಬಾಸ್ಟಿಯನ್ ಚರ್ಚ್ನ್ನು ವಿದ್ಯುತ್ ದೀಪಗಳಿಂದ ಶೃಂಗರಿಸಿ, ಚರ್ಚ್ನ ಮುಂಭಾಗದಲ್ಲಿ ನಿರ್ಮಿಸಿದ ಏಸುವಿನ ಜನ್ಮವೃತ್ತಾಂತ ಸಾರುವ ಗೋದಲಿ ಎಲ್ಲರ ಗಮನ ಸೆಳೆಯಿತು. ಕ್ರೈಸ್ತರು ವಿಶೇಷ ಪ್ರಾರ್ಥನೆ ಸಲ್ಲಿಸಿ, ಕೇಕ್ ಮತ್ತು ಸಿಸಿ ಹಂಚುವ ಮೂಲಕ ಸಂತಸ ಹಂಚಿಕೊಂಡರು
Christmas Festival ಸಂತ ಸೆಬಾಸ್ಟಿಯನ್ ಚರ್ಚ್ನ ಧರ್ಮಗುರು ಫಾದರ್ ರಾಬರ್ಟ್ ಡಿ’ಮೆಲ್ಲೊ ಧರ್ಮ ಸಂದೇಶ ನೀಡಿ, ಕ್ರಿಸ್‌ಮಸ್ ಹಬ್ಬ ಪ್ರೀತಿಯ ಸಂಕೇತವಾಗಿದೆ. ಜಾತಿ-ಮತ ತಾರತಮ್ಯವಿಲ್ಲದೇ ಸುಖ ಶಾಂತಿಯಿAದ ದೇಶೀಯ ಸಂಸ್ಕೃತಿಯಲ್ಲಿ ಬೆರೆತು ರಾಷ್ಟ್ರೀಯ ಏಕತೆಯನ್ನು ಉಂಟು ಮಾಡುತ್ತದೆ. ಅಂಧರಿಗೆ ದೃಷ್ಟಿದಾನ, ಶೋಷಿತರಿಗೆ ಸ್ವಾತಂತ್ರö್ಯ ನೀಡಲು ಏಸು ಕ್ರಿಸ್ತರು ನೀಡಿರುವ ಸಂದೇಶ ಪಾಲಿಸೋಣ, ನಾಡಿನಲ್ಲಿ ಉತ್ತಮ ಮಳೆ ಬೆಳೆಯಾಗಬೇಕು. ನಾಡು ಸಮೃದ್ಧವಾಗಿರಬೇಕು ಎಂದು ಪ್ರಾರ್ಥಿಸೋಣ ಎಂದರು.
ಆನವಟ್ಟಿಯ ಕ್ರಿಸ್ತುರಾಜ ಆಶ್ರಮ, ಇಂಡುವಳ್ಳಿಯ ಚರ್ಚ್ ಸೇರಿದಂತೆ ತಾಲೂಕಿನ ಎಲ್ಲಾ ಚರ್ಚ್ಗಳಲ್ಲೂ ವಿಶೇಷ ಪ್ರಾರ್ಥನೆಗಳು ಜರುಗಿದವು. ಕ್ರೈಸ್ತರ ಮನೆ ಮುಂಭಾಗದಲ್ಲಿ ಏಸುವಿನ ಜನ್ಮ ವೃತ್ತಾಂತ ಸಾರುವ ಗೋದಲಿಗಳನ್ನು ನಿರ್ಮಿಸಲಾಗಿತ್ತು. ಕ್ರೈಸ್ತರು ಮಾತ್ರವಲ್ಲದೇ ಸರ್ವ ಧರ್ಮಿಯರು ಕ್ರಿಸ್‌ಮಸ್ ಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

Amarashilpi Jakanachari ಜನವರಿ 1 ರಂದು ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ಕಾರ್ಯಕ್ರಮ

0

Amarashilpi Jakanachari ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ವಿಶ್ವಕರ್ಮ ಮಹಾಸಭಾ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಜ.01 ರ ಬೆಗಳಿಗ್ಗೆ 11 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯನ್ನು ಏರ್ಪಡಿಸಲಾಗಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ಇವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ತಂಗಡಗಿ ಶಿವರಾಜ್ ಸಂಗಪ್ಪ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು.

Amarashilpi Jakanachari ಶಾಸಕರಾದ ಎಸ್.ಎನ್.ಚನ್ನಬಸಪ್ಪ ಅಧ್ಯಕ್ಷತೆ ವಹಿಸುವರು. ಸಂಸದರು, ವಿಧಾನಸಭಾ ಮತ್ತು ವಿಧಾನ ಪರಿಷತ್ ಶಾಸಕರು, ವಿವಿಧ ನಿಗಮ, ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷರು, ಜಿಲ್ಲಾ ವಿಶ್ವಕರ್ಮ ಮಹಾಸಭಾ ಅಧ್ಯಕ್ಷರು, ಜಿಲ್ಲಾ ವಿಶ್ವಕರ್ಮ ಮಹಾಸಭಾ ಅಧ್ಯಕ್ಷರು, ಜಿಲ್ಲಾಧಿಕಾರಿಗಳು, ಜಿ.ಪಂ, ಸಿಇಓ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು, ಮಹಾನಗರಪಾಲಿಕೆ ಆಯುಕ್ತರು, ಜನಪ್ರತಿನಿಧಿಗಳು, ಅಧಿಕಾರಿಗಳು, ವಿವಿಧ ಸಂಘಟನೆಗಳು ಮುಖಂಡರು ಪಾಲ್ಗೊಳ್ಳುವರು.
ಚಿತ್ರದುರ್ಗ ರಾಷ್ಟ್ರೀಯ ವಿಶ್ವಕರ್ಮ ವಂಶಿ ಸೇನೆಯ ಜಿಲ್ಲಾಧ್ಯಕ್ಷ ಪಿ.ಜಿ.ಅನಿತಲಕ್ಷ್ಮೀ ಆಚಾರ್ಯ ಇವರು ವಿಶೇಷ ಉಪನ್ಯಾಸ ನೀಡುವರು.

Seema English School, Machenahalli ಡಿಸೆಂಬರ್ 26 & 27.ಮಾಚೇನಹಳ್ಳಿಯ ಸೀಮಾ ಆಂಗ್ಲಶಾಲೆಯಲ್ಲಿ ಸಹಪಠ್ಯ ಚಟುವಟಿಕೆ ಸ್ಪರ್ಧೆ

0

Seema English School, Machenahalli 2024-25ನೇ ಸಾಲಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆ ಕಾರ್ಯಕ್ರಮವನ್ನು ಡಿ. 26 ಮತ್ತು 27 ರಂದು ಬೆಳಗ್ಗೆ 10 ಗಂಟೆಗೆ ಸೀಮಾ ಆಂಗ್ಲ ಶಾಲೆ, ಮಲ್ನಾಡ್ ಲೇಔಟ್ ಮಾಚೇನಹಳ್ಳಿ ಇಲ್ಲಿ ಏರ್ಪಡಿಸಲಾಗಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಮಧು ಬಂಗಾರಪ್ಪರವರು ನೆರವೇರಿಸುವರು. ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯಗಳ ನಿಗಮದ ಅಧ್ಯಕ್ಷರು ಹಾಗೂ ಭದ್ರಾವತಿ ವಿಧಾನಸಭೆ ಶಾಸಕರಾದ ಬಿ.ಕೆ ಸಂಗಮೇಶ್ವರ ಮತ್ತು ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಯಮಿತ ಅಧ್ಯಕ್ಷರು ಹಾಗೂ ಸಾಗರ ವಿಧಾನಸಭೆ ಶಾಸಕರಾದ ಗೋಪಾಲಕೃಷ್ಣ ಬೇಳೂರು ಇವರ ಗೌರವ ಉಪಸ್ಥಿತಿ ಇರಲಿದ್ದು, ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಶಾರದಾ ಪೂರ್ಯಾನಾಯ್ಕ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಗೌರವಾನ್ವಿತ ಸಂಸದರು, ವಿಧಾನಸಭಾ, ವಿಧಾನಪರಿಷತ್ ಶಾಸಕರು, ವಿವಿಧ ನಿಗಮ ಮಂಡಳಿ, ಪ್ರಾಧಿಕಾರದ ಅಧ್ಯಕ್ಷರು ಸದಸ್ಯರುಗಳು, ನಿದಿಗೆ ಗ್ರಾ.ಪಂ ಅಧ್ಯಕ್ಷರು, ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು, ಜಿ.ಪಂ, ಸಿಇಓ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು, ಮಹಾನಗರಪಾಲಿಕೆ ಆಯುಕ್ತರು, ಅಧಿಕಾರಿಗಳು, ವಿವಿಧ ಶಿಕ್ಷಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಪಾಲ್ಗೊಳ್ಳುವರು.

Department of Kannada and Culture ಕುಪ್ಪಳಿಯಲ್ಲಿ ಡಿಸೆಂಬರ್ 29 ರಂದುಕುವೆಂಪು ಜನ್ಮದಿನೋತ್ಸವ. ವಿವಿಧ ಕಾರ್ಯಕ್ರಮಗಳ ಆಯೋಜನೆ

0

Department of Kannada and Culture ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಶಿವಮೊಗ್ಗ ರಾಷ್ಟçಕವಿ ಕುವೆಂಪು ಪ್ರತಿಷ್ಟಾನ ಕುಪ್ಪಳಿ ಇವರ ಸಂಯುಕ್ತಾಶ್ರಯದಲ್ಲಿ ಕುವೆಂಪು ಅವರ 120 ನೇ ಜನ್ಮ ದಿನೋತ್ಸವ ಅಂಗವಾಗಿ ಡಿ. 29 ರಂದು ಬೆಳಗ್ಗೆ 10 ಗಂಟೆಗೆ ಕವಿ ಶೈಲದದಲ್ಲಿ ಕವಿ ನಮನ ಹಾಗೂ ಬೆಳಗ್ಗೆ 11 ಗಂಟೆಗೆ ಕುಪ್ಪಳಿಯ ಹೇಮಾಂಗಣದಲ್ಲಿ ವಿಶ್ವ ಮಾನವ ದಿನಾಚರಣೆ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಉದ್ಘಾಟನೆ ಮತ್ತು ಶ್ರೀ ರಾಮಾಯಣ ದರ್ಶನಂ ಕೃತಿ ಬಿಡುಗಡೆಯನ್ನು ರಾಜ್ಯದ ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ನೆರೆವೇರಿಸುವರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪರವರ ಘನ ಉಪಸ್ಥಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ತಂಗಡಗಿ ಶಿವರಾಜ್ ಸಂಗಪ್ಪ ಇವರ ವಿಶೇಷ ಉಪಸ್ಥಿತಿ ಇರಲಿದೆ. ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯಗಳ ನಿಗಮದ ಅಧ್ಯಕ್ಷರು ಹಾಗೂ ಭದ್ರಾವತಿ ವಿಧಾನಸಭೆ ಶಾಸಕರಾದ ಬಿ.ಕೆ ಸಂಗಮೇಶ್ವರ ಮತ್ತು ರಾಜ್ಯ ಅರಣ್ಯ ಕೈಗಾರಿಕ ನಿಗಮ ನಿಯಮಿತ ಅಧ್ಯಕ್ಷರು ಹಾಗೂ ಸಾಗರ ವಿಧಾನಸಭೆ ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದಾರೆ.

Department of Kannada and Culture ಕಾರ್ಯಕ್ರಮದಲ್ಲಿ ಜಿಲ್ಲೆಯ ಗೌರವಾನ್ವಿತ ಸಂಸದರು, ವಿಧಾನ ಸಭಾ, ವಿಧಾನ ಪರಿಷತ್ ಶಾಸಕರು, ವಿವಿಧ ನಿಗಮ ಮಂಡಳಿ, ಪ್ರಾಧಿಕಾರದ ಅಧ್ಯಕ್ಷರು, ದೇವಂಗಿ ಗ್ರಾ.ಪಂ ಅಧ್ಯಕ್ಷರು, ಸದಸ್ಯರುಗಳು, ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಳ್ಳುವರು.

ಡಿ. 29 ರಂದು ಸಂಜೆ 6 ಗಂಟೆಗೆ ತೀರ್ಥಹಳ್ಳಿಯ ಗೋಪಾಲಗೌಡ ರಂಗಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಕುವೆಂಪು ನಾಟಕಗಳನ್ನು ಪ್ರದರ್ಶಿಸಲಾಗುವುದು.

Guarantee Scheme ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೌಶಲ್ಯ & ಉದ್ಯಮಶೀಲತೆ ತರಬೇತಿ ಯುವನಿಧಿಯ ಧ್ಯೇಯ- ಚಂದ್ರಭೂಪಾಲ್

0

Guarantee Scheme ಯುವ ನಿಧಿ ಯೋಜನೆ ಚಾಲನೆಗೊಂಡು ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದಿಂದ ವಿಶಿಷ್ಟ ಕಾರ್ಯಕ್ರಮ ರೂಪಿಸಲಾಗುವುದು ಎಂದು ಗ್ಯಾರಂಟಿ ಯೋಜನೆಯ ಅನುಷ್ಟಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸಿ.ಎಸ್.ಚಂದ್ರಭೂಪಾಲ ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಅನುಷ್ಟಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಮತ್ತು ಕೌಶಲ್ಯ ಅಭಿವೃದ್ದಿ ನಿಗಮದ ಜೊತೆಗೆ ವಿವಿಧ ತರಬೇತಿ ಪಡೆಯಲು ಯುವನಿಧಿ ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಯುವನಿಧಿ ಯೋಜನೆಯಲ್ಲಿ ಜಿಲ್ಲೆಯಲ್ಲಿ ನೋಂದಣಿಯಾಗಿರುವ ಫಲಾನುಭವಿಗಳಿಗೆ ವಿವಿಧ ತಾಂತ್ರಿಕ ತರಬೇತಿ ಉದ್ಯೋಗ ಹೊಂದಲು ಎಲ್ಲಾ ಫಲಾನುಭವಿಗಳಿಗೆ ಇಮೇಲ್ ಮುಖಾಂತರ ಮಾಹಿತಿ ನೀಡಲಾಗಿದೆ. ಯುವ ನಿಧಿ ಫಲಾನುಭವಿಗಳು ಇದರ ಸದುಪಯೋಗ ಪಡೆಯಬೇಕು. ಹಾಗೂ ಮುಂದಿನ ದಿನಗಳಲ್ಲಿ ಉದ್ಯೋಗ ಮೇಳವನ್ನೂ ಆಯೋಜಿಸಲು ಚಿಂತಿಸಲಾಗುತ್ತಿದೆ ಎಂದರು.
ಸಭೆಯಲ್ಲಿ ಕೆಎಸ್‌ಆರ್‌ಟಿಸಿ ಅಧಿಕಾರಿ ದಿನೇಶ್ ಮಾತನಾಡಿ, ಶಕ್ತಿ ಯೋಜನೆಯಡಿ ಇದುವರೆಗೆ 35064365 ಮಹಿಳೆಯರು ಪ್ರಯಾಣ ಮಾಡಿದ್ದು 122.70 ಕೋಟಿ ಆದಾಯ ನಿಗಮಕ್ಕೆ ಬಂದಿದೆ. ಶೇ.4 ರಷ್ಟು ಪ್ರವಾಸೋದ್ಯಮ, ಶೇ.10 ಧಾರ್ಮಿಕ ಸ್ಥಳ, ಶೇ.20 ರಷ್ಟು ಉದ್ಯೋಗಸ್ಥ ಮಹಿಳೆಯರು, ಶೇ27 ಶಾಲಾ ಕಾಲೇಜು ವಿದ್ಯಾರ್ಥಿಗಳು ಒಟ್ಟು ಶೇ.61 ರಷ್ಟು ಮಹಿಳೆಯರು ಸೌಲಭ್ಯ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.
ತೀರ್ಥಹಳ್ಳಿ ತಾಲ್ಲೂಕು ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷರು, ತೀರ್ಥಹಳ್ಳಿ ಯಿಂದ ಬಸವಾನಿ ಮಾರ್ಗದಲ್ಲಿ ಎರಡು ಬಸ್ ಬಿಡುವಂತೆ ಕೋರಿದರು. ಹೊಸನಗರ ತಾಲ್ಲೂಕು ಅಧ್ಯಕ್ಷರು ಹೊಸನಗರದಿಂದ ಸಾಗರ ಮಾರ್ಗವಾಗಿ ಓಡಾಡುವ ಬಸ್ ನ್ನು ಆಗಾಗ ನಿಲ್ಲಿಸಲಾಗುತ್ತದೆ ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಹೀಗಾಗದಂತೆ ನೋಡಿಕೊಳ್ಳಬೇಕೆಂದರು. ಜಿಲ್ಲಾ ಉಪಾಧ್ಯಕ್ಷರು ಶಿವಮೊಗ್ಗ ನಗರದೊಳಗೆ ಕೆಎಸ್‌ಆರ್‌ಟಿಸಿ ಸಿಟ್ ಬಸ್ ಓಡಾಟವಿಲ್ಲ. ಬಹುತೇಕ ಬಸ್‌ಗಳು ಶಿವಮೊಗ್ಗ-ಭದ್ರಾವತಿ ಮಾರ್ಗವಾಗಿದ್ದು, ನಗರದ ನಾಲ್ಕು ದಿಕ್ಕುಗಳಿಂದ ಬಸ್ ಓಡಾಟ ಆಗುವಂತೆ ಯೋಜಿಸಬೇಕೆಂದರು.
ಮಹಿಳಾ ಸದಸ್ಯರೋರ್ವರು ಅನೇಕ ವೇಳೆ ಮಹಿಳೆಯರು ಬಸ್ ನಿಲ್ದಾಣದಲ್ಲಿದ್ದರೆ ಬಸ್ ಖಾಲಿ ಇದ್ದರೂ ನಿಲ್ಲಿಸದೇ ಹೋಗುತ್ತಾರೆ ಎಂದಾಗ ಜಿಲ್ಲಾ ಅಧ್ಯಕ್ಷರು, ತಾವೂ ಇದನ್ನು ಗಮನಿಸಿದ್ದು ಹೀಗೆ ಮಾಡದಂತೆ ಸಿಬ್ಬಂದಿಗಳಿಗೆ ಸೂಚನೆ ನೀಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
Guarantee Scheme ಉಡುಪಿಯಿಂದ ಬರುವ ಕಡೆಯ ಬಸ್‌ನಲ್ಲಿ ಮಹಿಳೆಯರು ನಿಂತು ಪ್ರಯಾಣಿಸಲು ಸಹ ಸಿದ್ದರಿರುತ್ತಾರೆ. ಆದರೆ ಸೀಟ್ ಇಲ್ಲವೆಂದು ನಿಲ್ಲಿಸುವುದಿಲ್ಲ. ಬಸ್‌ನ್ನು ನಿಲ್ಲಿಸುವಂತೆ ಸದಸ್ಯರು ಕೋರಿದರು.
ಆಹಾರ ಇಲಾಖೆ ಉಪ ನಿರ್ದೇಶಕ ಅವಿನ್ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 488125 ಪಡಿತರ ಚೀಟಿಗಳಿದ್ದು 382802 ಕಾರ್ಡ್ಗು ಅನ್ನಭಾಗ್ಯ ಯೋಜನೆಯಡಿ ನೋಂದಣಿಯಾಗಿವೆ. ತಾಂತ್ರಿಕ ಕಾರಣದಿಂದ 8781 ಜನರಿಗೆ ಡಿಬಿಟಿ ಬಾಕಿ ಇದ್ದು ಇದುವೆಗೆ ರೂ.142.2 ಕೋಟಿ ಫಲಾನುಭವಿಗಳಿಗೆ ಸಂದಾಯವಾಗಿದೆ.
ಅಂತ್ಯೋದಯ ಮತ್ತು ಬಿಪಿಎಲ್ ವರ್ಗಕ್ಕೆ ಸೇರಲು 22339 ಅರ್ಜಿಗಳು ಸ್ವೀಕೃತವಾಗಿದ್ದು 20280 ಕಾರ್ಡ್ ವಿತರಿಸಲಾಗಿದೆ. ಹಾಗೂ 6 ತಿಂಗಳಿನಿAದ ಪಡಿತರ ಪಡೆಯದೇ ಹಾಗೂ ಆದಾಯ ತೆರಿಗೆ ಮೀರಿದ್ದ ಕ್ರಮವಾಗಿ 8046 ಮತ್ತು 2297 ಕಾರ್ಡುಗಳು ಎಪಿಎಲ್ ಆಗಿ ಪರಿವರ್ತನೆಯಾಗಿದ್ದು, ಸರ್ಕಾರದ ಆದೇಶದನ್ವಯ ಇವನ್ನು ಪುನಃ ಬಿಪಿಎಲ್ ಆಗಿ ಪರಿವರ್ತಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸದಸ್ಯರು ಮಾತನಾಡಿ, ಪಡಿತರ ಪಡೆಯುವ ಸಂಬAಧ, ಬಿಪಿಎಲ್ ಕಾರ್ಡುಗಳು ಎಪಿಎಲ್ ಆದ ಬಗ್ಗೆ ಮತ್ತು ಇನ್ನಿತರೆ ವಿಷಯ ಕುರಿತು ಆಹಾರ ನಿರೀಕ್ಷರಿಗೆ ನೀಡಲಾದ ದೂರುಗಳ ಕಡೆ ಗಮನ ಹರಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ಹಾಗೂ ಪಡಿತರ ಚೀಟಿ ತಿದ್ದುಪಡಿಗೆ ಸರ್ಕಾರ ಅವಕಾಶ ನೀಡಿರುವ ಬಗ್ಗೆ ಗ್ರಾ.ಪಂ ಗಳಿಗೆ, ನ್ಯಾಯಬೆಲೆ ಅಂಗಡಿಗಳ ಮುಂದೆ ಮತ್ತು ಪ್ರಾಧಿಕಾರಕ್ಕೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ತಾಲ್ಲೂಕು ಅಧ್ಯಕ್ಷರು, ಸದಸ್ಯರು ಮಾತನಾಡಿ, ಎಪಿಎಲ್ ಕಾರ್ಡ್ಗಳಾಗಿ ಪರಿವರ್ತನೆಯಾದ ಕಾರ್ಡುಗಳಲ್ಲಿ ಆದಾಯ ತೆರಿಗೆ /ಜಿಎಸ್ ಟಿ ಎಂದು ನಮೂದಾಗಿರುತ್ತದೆ. ಆದಾಯ ತೆರಿಗೆ ವರದಿ ಮಾಡಿದ ಕಾರಣಕ್ಕೋ, ಜಿಎಸ್‌ಟಿ ತುಂಬಿದ ಕಾರಣಕ್ಕೋ ಎಂದು ನಿಖರ ಮಾಹಿತಿ ಇಲ್ಲ. ಈ ಕುರಿತು ಜಿಎಸ್‌ಟಿ ಮತ್ತು ಆದಾಯ ತೆರಿಗೆ ಇಲಾಖೆಯಿಂದ ಮಾಹಿತಿ ಪಡೆದು ಕ್ರಮ ವಹಿಸಬೇಕೆಂದರು.
ಹೊಸನಗರ ತಾಲ್ಲೂಕು ಅಧ್ಯಕ್ಷರು, ಹೊಸನಗರದಲ್ಲಿ ಗ್ಯಾರಂಟಿ ಯೋಜನೆಗಳ ಕುರಿತು ಹೋಬಳಿಮಟ್ಟದಲ್ಲಿ ಸಮಾವೇಶ ಮಾಡುತ್ತಿದ್ದು ಜನರಿಗೆ ಉತ್ತರ ನೀಡಬೇಕಿರುವುದರಿಂದ, ಪಡಿತರ ಚೀಟಿ ಪರಿವರ್ತನೆ ಕುರಿತು ಸ್ಪಷ್ಟನೆ ನೀಡಬೇಕೆಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಕೃಷ್ಣಪ್ಪ ಮಾತನಾಡಿ, ಜಿಲ್ಲೆಯಲ್ಲಿ 385949 ಮಹಿಳೆಯರು ಗೃಹಲಕ್ಷಿö್ಮ ಯೋಜನೆಯಡಿ ನೋಂದಣಿಯಾಗಿದ್ದು, ಶೇ.90 ಮಹಿಳೆಯರು ನೋಂದಣಿಯಾಗಿದ್ದಾರೆ. ಮಾಸಿಕವಾಗಿ ರೂ.76.85 ಕೋಟಿ ಹಣ ಸಂದಾಯವಾಗುತ್ತಿದೆ. ಅಕ್ಟೋಬರ್ ಅಂತ್ಯದವರೆಗೆ ರೂ.2000 ಭತ್ಯೆ ಜಮೆಯಾಗಿದೆ. ಎನ್‌ಪಿಸಿಐ ತಾಂತ್ರಿಕ ತೊಂದರೆಯಿAದ 1755 ಫಲಾನುಭವಿಗಳಿಗೆ ಡಿಬಿಟಿ ಆಗಿರುವುದಿಲ್ಲ. ನಿರಂತರವಾಗಿ ಈ ತಾಂತ್ರಿಕ ದೋಷ ನಿವಾರಣೆ ಮಾಡಲಾಗುತ್ತಿರುತ್ತದೆ ಎಂದು ಮಾಹಿತಿ ನೀಡಿದರು.
ಉದ್ಯೋಗಾಧಿಕಾರಿ ಕಲಂದರ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಈವರೆಗೆ 4972 ವಿದ್ಯಾರ್ಥಿಗಳಿಗೆ ರೂ.7 ಕೋಟಿ ಭತ್ಯೆ ನೀಡಲಾಗಿದೆ. ಈ ಯೋಜನೆಯಡಿ ನೋಂದಣಿಯಾಗಿರುವ ಅಭ್ಯರ್ಥಿಗಳಿಗೆ ಕೌಶಲ್ಯಾಭಿವೃದ್ದಿ ತರಬೇತಿಯನ್ನು ನೀಡಲಾಗುವುದು ಎಂದರು.
ಇದೇ ವೇಳೆ ಯುವನಿಧಿ ಪೋಸ್ಟರ್ ಮತ್ತು ಬ್ಯಾನರ್‌ನ್ನು ಬಿಡುಗಡೆಗೊಳಿಸಲಾಯಿತು.
ಸಭೆಯಲ್ಲಿ ಗ್ಯಾರಂಟಿ ಅನುಷ್ಟಾನ ಪ್ರಾಧಿಕಾರದ ಜಿಲ್ಲಾ ಉಪಾಧ್ಯಕ್ಷರು, ಸದಸ್ಯರು, ತಾಲ್ಲೂಕು ಸಮಿತಿ ಅಧ್ಯಕ್ಷರು, ಸದಸ್ಯರು, ಜಿ.ಪಂ ಉಪ ಕಾರ್ಯದರ್ಶಿ ಸುಜಾತಾ ಕೆ ಆರ್, ಅಧಿಕಾರಿಗಳು ಹಾಜರಿದ್ದರು.

Innovative Kiddos ಆರೋಗ್ಯವಂತರಾಗಿರುವ ಪ್ರತಿಯೊಬ್ಬರೂ ರಕ್ತದಾನ ಮಾಡಬೇಕು-ಕ್ರಾಂತಿದೀಪ ಮಂಜುನಾಥ್

0

Innovative Kiddos Pre School  ಎಲ್ಲಾ ದಾನಗಳಿಗಿಂತ ರಕ್ತದಾನ ತುಂಬಾ ಶ್ರೇಷ್ಠವಾದ ದಾನ ಎಂದು ಕ್ರಾಂತಿ ದೀಪ ಪತ್ರಿಕೆಯ ಸಂಪಾದಕರು ಹಾಗೂ ಹಣಮಂತರಾಯ ಪ್ರಶಸ್ತಿ ಪುರಸ್ಕೃತರಾದ ಏನ್ ಮಂಜುನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು ಅವರು ಇಂದು ಸರ್ವಜ್ಞನಗರ 3ನೇ ಕ್ರಾಸ್ ಬೊಮ್ಮನಕಟ್ಟೆ ಇನ್ನ ವೇಟಿವ್ ಕೇಡ್ಡೋಸ್ ಪೂರ್ವ ಪ್ರಾಥಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾದ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಈ ಕೆಡ್ಡೂಸ್ ಶಾಲೆ ಆಟ ಪಾಠ ಶಿಕ್ಷಣದ ಜೊತೆಗೆ ಸಮಾಜಮುಖಿ ಕೆಲಸಗಳಿಗೆ ಸಾಕ್ಷಿಯಾಗಿದ್ದು ಇದರ ಅಂಗವಾಗಿ ಇಂದು ಪೋಷಕರಿಗೆ ಮತ್ತು ನಾಗರೀಕರಿಗೆ ಹಮ್ಮಿಕೊಳ್ಳಲಾದ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರವನ್ನು , ಆಯೋಜಿಸಿದ ಶಾಲೆಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರಿಗೆ ಮತ್ತು ಪೋಷಕರಿಗೆ ಅಭಿನಂದನೆ ಸಲ್ಲಿಸಿದರು ರಕ್ತದಾನ ಮಾಡುವುದರಿಂದ ಜೀವ ಉಳಿಸಿದ ಶ್ರೇಷ್ಠ ಕಾರ್ಯ ಆಗುತ್ತದೆ. ಆರೋಗ್ಯವಂತರಾಗಿರುವ ಪ್ರತಿಯೊಬ್ಬರು ರಕ್ತದಾನ ಮಾಡಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಪೋಷಕರಾದ ಶರತ್ ರಾಜ್ ಯೋಗೀಶ್ ವಿನೋದ್ ಪ್ರಥಮ ಬಾರಿಗೆ ರಕ್ತದಾನ ಮಾಡಿ ದೀಪ
ಬೆಳಗಿಸಿದರು
ಸ್ವಯಂ ಪ್ರೇರಿತ ರಕ್ತದಾನಿಗಳ ಸೇವಾ ಸಂಸ್ಥೆಯ ಮಾಜಿ ಅಧ್ಯಕ್ಷ ಜಿ.ವಿಜಯ್‌ಕುಮಾರ್ ಮಾತನಾಡಿ, ಎಲ್ಲ ದಾನಗಳಿಗಿಂತ ರಕ್ತದಾನ ಶ್ರೇಷ್ಠ. ರಕ್ತದಾನ ಮಾಡುವುದರಿಂದ ನಮ್ಮ ದೇಹದ ಆರೋಗ್ಯ ಸದೃಢ ಆಗುತ್ತದೆ. ಅನೇಕ ರೀತಿಯಲ್ಲಿ ಉಪಯೋಗವಾಗುತ್ತದೆ. ಆರೋಗ್ಯವಂತ ಯುವಜನರು ರಕ್ತದಾನ ಮಾಡಲು ಮುಂದಾಗಬೇಕು ಎಂದು ಹೇಳಿದರು.

Innovative Kiddos Pre School  116 ಬಾರಿ ರಕ್ತ ದಾನ ಮಾಡಿದ ರಕ್ತದಾನಿ ಧರಣೇಂದ್ರ ದಿನಕರ್ ಮಾತನಾಡಿ, ಪ್ರತಿ ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ರಕ್ತದ ಬೇಡಿಕೆ ಹೆಚ್ಚಿದ್ದು, ರಕ್ತದಾನ ಶಿಬಿರಗಳಿಂದ ಹೆಚ್ಚಿನ ಉಪಯೋಗ ಆಗುತ್ತಿದೆ. ಹೆಚ್ಚು ಬಾರಿ ರಕ್ತದಾನ ಮಾಡಬೇಕು. ತುರ್ತು ಸಂದರ್ಭಗಳಲ್ಲಿ ಅವಶ್ಯಕತೆ ಇರುವವರಿಗೆ ಸಹಕಾರಿ ಆಗುತ್ತದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಯರಾದ ಶ್ರೀ ರೇಖಾ ಬಸವರಾಜ್ ದಂಪತಿಗಳು 116 ಬಾರಿ ರಕ್ತ ದಾನ ಮಾಡಿದ ದಾನಿನ ಧರಣೇಂದ್ರ ದಿನಕರ್ ಅವರನ್ನು ಸನ್ಮಾನಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪೋಷಕರು ಶಿಕ್ಷಕರು ಸಾರ್ವಜನಿಕರು ರಕ್ತದಾನ ಮಾಡಿದರು ಸಮಾರಂಭದಲ್ಲಿ ಗುರುರಾಜ್. ಸುರೇಶ್. ರಕ್ತದಾನಿ ವಿಜಯಕುಮಾರ್ ವಸಂತ ಹೋಬಳಿದಾರ್
ಮತ್ತಿತರರು ಉಪಸ್ಥಿತರಿದ್ದರು.

Kote Gangur Government Junior Primary School ಮಕ್ಕಳು ವಿದ್ಯೆಯಲ್ಲಿ ಪರಿಪೂರ್ಣರಾಗ ಬೇಕಾದರೆ ಪೂರಕ ವಾತಾವರಣ ಇರಬೇಕು-ದಿವ್ಯಪ್ರೇಮ್

0

Kote Gangur Government Junior Primary School ನಾವು ಮಾಡುವ ದಾನ ಯಾವ ಪ್ರಮಾಣದ್ದೇ ಇರಬಹುದು ಅದು ಸರಿಯಾದ ಫಲಾನುಭವಿಗಳಿಗೆ ತಲುಪಿದಾಗ ಆ ದಾನದಿಂದ ಸಿಗುವ ತೃಪ್ತಿಯೇ ಬೇರೆ ಅದರಲ್ಲೂ ಶೈಕ್ಷಣಿಕ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳಿಗೆ ನಾವು ಮಾಡುವ ದಾನ ಸೇವೆ ಆ ಮಕ್ಕಳಲ್ಲಿ ಇರುವ ಪ್ರತಿಭೆ ಅನಾವರಣಗೊಳ್ಳಲು ಅವಕಾಶ ಕಲ್ಪಿಸಿ ಕೊಟ್ಟಂತಾಗುತ್ತದೆ ಎಂದು ಇನ್ನರ್ವಿಲ್ ಶಿವಮೊಗ್ಗ ಪೂರ್ವ ಸಂಸ್ಥೆಯ ನಿರ್ದೇಶಕರಾದ ದಿವ್ಯ ಪ್ರೇಮ್ ಅವರು ಅಭಿಮತ ವ್ಯಕ್ತಪಡಿಸಿದರು.

ಅವರು ಕೋಟೆ ಗಂಗೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ನಲಿಕಲಿ ಟೇಬಲ್ ಹಾಗೂ ಚೇರ್ ಗಳನ್ನು. ವಿತರಣೆ ಮಾಡಿ ಮಾತನಾಡಿದರು ಚಳಿಗಾಲ ಹಾಗೂ ಮಳೆಗಾಲದಲ್ಲಿ ನೆಲದ ಮೇಲೆ ಕುಂತು ಅಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಚೇರ್ ಮೇಲೆ ಕೂತು ಕಲಿಯುವಾಗ ಅವರ ಮುಖದಲ್ಲಿ ಮಂದಹಾಸ ನೋಡಿ ನಮ್ಮ ಸೇವೆ ಸಾರ್ಥಕವಾಯಿತು. ಎಂದು ನುಡಿದರು ಮಕ್ಕಳು ವಿದ್ಯಾಭ್ಯಾಸದಲ್ಲಿ ಪರಿಪೂರ್ಣತೆ ಹೊಂದಬೇಕಾದರೆ ವಿದ್ಯಾಭ್ಯಾಸಕ್ಕೆ ಪೂರಕವಾದ ವಾತಾವರಣ ಬೇಕು ಈ ನಿಟ್ಟಿನಲ್ಲಿ ಸರ್ಕಾರದ ಎಷ್ಟೇ ಸೌಲಭ್ಯಗಳು ಇದ್ದರೂ ಸಂಘ ಸಂಸ್ಥೆಗಳ ನೆರವು ತುಂಬಾ ಅಗತ್ಯ ಎಂದು ನುಡಿದರು.

Kote Gangur Government Junior Primary School ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇನ್ನರ್ ವೀಲ್ ಶಿವಮೊಗ್ಗಪೂರ್ವ ಸಂಸ್ಥೆಯ ಅಧ್ಯಕ್ಷರಾದ ವಾಗ್ದೇವಿ ಬಸವರಾಜ ಅವರು ವಹಿಸಿ ಈಗಾಗಲೇ ನಮ್ಮ ಇನ್ನರ್ ವೀಲ್ ಸಂಸ್ಥೆಯ ವತಿಯಿಂದ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಿಗೆ ಬೆಂಚು.ಡೆಸ್ಕೂ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಅಗತ್ಯ ಸಾಮಗ್ರಿಗಳನ್ನು ಒದಗಿಸುವುದರ ಜೊತೆಗೆ. ಆರ್ಥಿಕವಾಗಿ ಹಿಂದುಳಿದ ಮಕ್ಕಳನ್ನು ದತ್ತು ತೆಗೆದುಕೊಳ್ಳುವುದರ ಮುಖಾಂತರ ನಮ್ಮ ಇನ್ನರ್ ವೀಲ್ ಸದಸ್ಯರು ಮಾನವೀಯತೆಯನ್ನು ಮೆರೆದಿದ್ದಾರೆ ಜೊತೆಗೆ ಅಂಗವಿಕಲರಿಗೆ ನೆರವು ನೀಡುವುದರ ಮುಖಾಂತರ.ವೀಲ್ ಚೇರುಗಳನ್ನು ನೀಡಿ ಅವರಿಗೆ ಬದುಕನ್ನು ಕಟ್ಟಿ ಕೊಟ್ಟಿದ್ದಾರೆ ಈ ನಿಟ್ಟಿನಲ್ಲಿ. ಈ ಶಾಲೆಯನ್ನು ಪರಿಶೀಲಿಸಿ ಈ ಅಗತ್ಯ ವಸ್ತುಗಳನ್ನು ನಮ್ಮ ಸದಸ್ಯ ದಿವ್ಯ ಪ್ರೇಮ್. ಅವರು ದೇಣಿಗೆ ನೀಡಿದ್ದಾರೆಂದು ಅವರನ್ನು ಪ್ರಶಂಸಿಸಿದರು.. ಇನ್ನರ್ ವೀಲ್ ಕ್ಲಬ್ಬಿನ ಮಾಜಿ ಅಧ್ಯಕ್ಷರಾದ ಶ್ರೀಮತಿ ಬಿಂದು ವಿಜಯ ಕುಮಾರ್ ಮಾತನಾಡುತ್ತಾ ಗ್ರಾಮೀಣ ಪ್ರದೇಶದ ಮಕ್ಕಳಲ್ಲೂ ಸಾಕಷ್ಟು ಪ್ರತಿಭೆ ಇರುತ್ತೆ ಅವರಿಗೆ ಸೂಕ್ತವಾದ ವ್ಯವಸ್ಥೆ ಮಾಡಿದರೆ ಅವರು ಸದೃಢರಾಗಿ ಒಳ್ಳೆಯ ವ್ಯಕ್ತಿಗಳಾಗಿ ನಿರ್ಮಾಣಗೊಳ್ಳುತ್ತಾರೆ ಎಂದು ನುಡಿದರು.

ಮುಖ್ಯೋಪಾಧ್ಯಾಯ ಮಂಜಪ್ಪನವರು ಇನ್ನರ್ ವೀಲ್ ಸೇವೆಯನ್ನು ಸ್ಮರಿಸಿ. ದಾನಿಗಳನ್ನು ಅಭಿನಂದಿಸಿದರು ವೇದಿಕೆಯಲ್ಲಿ.. ಇನ್ನರ್ ವೀಲ್ ಶಿವಮೊಗ್ಗ ಪೂರ್ವದ ಕಾರ್ಯದರ್ಶಿ ಲತಾ ಸೋಮಶೇಖರ್
ಮಾಜಿ ಅಧ್ಯಕ್ಷ ರಾಧಾ ಜಯಂತಿ ವಾಲಿ ಶಿಕ್ಷಕರಾದ ತೇಜಸ್ವಿನಿ. ಮಂಜುನಾಥ್ ಯು ಬಿ
ಹಾಗೂ ಇನ್ನರ್ ವೀಲ್ ಸದಸ್ಯರು ಉಪಸ್ಥಿತರಿದ್ದರು.

Ripponpete Police ಕಾಡಿನ ದಾರಿಯಲ್ಲಿ ಬಿದ್ದಿದ್ದ ಬೈಕ್ ಸವಾರನಿಗೆ ಪ್ರಥಮ ಚಿಕಿತ್ಸೆ ನೀಡಿ ಉಪಚರಿಸಿ ಮಾನವೀಯತೆ ಮೆರೆದ ಪೊಲೀಸ್ ಸಿಬ್ಬಂದಿ

0

Ripponpete Police ತಲೆಗೆ ತೀವ್ರಗಾಯಗೊಂಡು ಗವಟೂರಿನ ಕಾಡಿನ ಮಾರ್ಗದಲ್ಲಿ ಬಿದ್ದಿದ್ದ ಯುವಕನನ್ನ ರಾಜ್ಯ ಹೆದ್ದಾರಿ ಗಸ್ತು ಪೊಲೀಸರು ಆಸ್ಪತ್ರೆಗೆ ದಾಖಲಿಸುವ ಮೂಲಕ ಕರ್ತವ್ಯ ಹಾಗೂ ಮಾನವೀಯತೆಯನ್ನ ಮೆರೆದಿದ್ದಾರೆ.

ಭಾಸ್ಕಾರ್ ಆಚಾರಿ (30) ಎಂಬ ಚಿಕ್ಕಜೇನಿ ನಿವಾಸಿ ರಿಪ್ಪನ್ ಪೇಟೆಯಿಂದ ಊರಿಗೆ ಹೋಗುತ್ತಿದ್ದ ವೇಳೆ ಮಾರ್ಗ ಮಧ್ಯದಲ್ಲಿ ಬಿದ್ದಿದ್ದಾನೆ. ಸ್ಥಳೀಯರ ಪ್ರಕಾರ ಆತ ಬೈಕ್ ನಿಂದ ಸ್ಕಿಡ್ ಆಗಿ ಬಿದ್ದು ತಲೆಗೆ ಗಾಯಮಾಡಿಕೊಂಡಿದ್ದಾನೆ ಎಂಬುದು ಅವರ ಮಾಹಿತಿಯಾಗಿದೆ.

ಈ ವೇಳೆ ಹೈವೆ ಗಸ್ತು ತಿರುತ್ತಿದ್ದ ಪೊಲೀಸರ ಕಣ್ಣಿಗೆ ಬಿದ್ದಿದ್ದಾನೆ. ತಕ್ಷಣವೇ ಸ್ಥಳೀಯರನ್ನ ಕರೆದುಕೊಂಡ ಪೊಲೀಸರು ತಮ್ಮ ವಾಹನದಲ್ಲಿದ್ದ Firstaid ಕಿಟ್ ಬಳಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆದ್ದಾರಿ ಗಸ್ತುವಾಹನದಲ್ಲಿಯೇ ರಿಪ್ಪನ್ ಪೇಟೆ ಆರೋಗ್ಯ ಪ್ರಾಥಮಿಕ ಕೇಂದ್ರಕ್ಕೆ ಕರೆದುಕೊಂಡುಹೋಗಿದ್ದಾರೆ.

Ripponpete Police ಹೈವೆ ಗಸ್ತಿನಲ್ಲಿದ್ದ ಎಎಸ್ಐ ಗಣಪತಿ ರಾವ್, ಚಾಲಕ ಗಿರೀಶ್ ಎಂದು ಗುರುತಿಸಲಾಗಿದೆ. ಇದರಿಂದ ಕರ್ತವ್ಯ ಮತ್ತು ಮಾನವೀಯತೆ ಮೆರೆದಿದ್ದಾರೆ. ಗಾಯಾಳು ಸಧ್ಯಕ್ಕೆ ರಿಪ್ಪನ್ ಪೇಟೆಯಿಂದ ಮೆಗ್ಗಾನ್ ಗೆ ಶಿಫ್ಟ್ ಆಗಿದ್ದಾನೆ. ಸಧ್ಯಕ್ಕೆ ಭಾಸ್ಕಾರ್ ಆಚಾರಿ ಪ್ರಾಣಾಪಾಯದಿಂದ ಬಜಾವ್ ಆಗಿದ್ದಾನೆ.

Sri Bhairava Swamy Temple  ಭಕ್ತರ ಕಣ್ಸೆಳೆದ ಕಾಲಭೈರವಸ್ವಾಮಿ ಅಷ್ಟಮಿಯ ಅಲಂಕಾರ

0

Sri Bhairava Swamy Temple  ಶರಾವತಿ ನಗರದ “ಶ್ರೀ ಕಾಲ ಬೈರವೇಶ್ವರಸ್ವಾಮಿ ದೇವಾಲಯ” ದಲ್ಲಿ ಸೋಮವಾರದಂದು ಕಾಲಭೈರವಾಷ್ಟಮಿ ಪ್ರಯುಕ್ತ ಆಯೋಜಿಸಲಾಗಿದ್ದ ಶ್ರೀ ಕಾಲಭೈರವೇಶ್ವರ ಸ್ವಾಮಿಗೆ ವಿವಿಧ ಬಗೆಯ ಸಿಹಿ, ಖಾಧ್ಯಗಳಿಂದ ಅಲಂಕಾರ ಮಾಡಲಾಯಿತು. ಪಂಚಾಮೃತ ಅಭಿಷೇಕ, ಕಾಲಭೈರವ ಹೋಮ, ಪಲ್ಲಕ್ಕಿಉತ್ಸವ,ಮಹಾ ಮಂಗಳಾರತಿ,ವಿಜೃಂಭಣೆಯಿಂದ ಆಚರಿಸಲಾಯಿತು. Sri Bhairava Swamy Temple  ವಿಶೇಷ ಪೂಜಾ ಕೈಂಕರ್ಯಗಳನ್ನು ಶ್ರೀ ಆದಿಚುಂಚನಗಿರಿ ಶಾಖಾ ಮಠದ ಪೂಜ್ಯ ಶ್ರೀ ಸಾಯಿನಾಥ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಪೂಜಾ ಕಾರ್ಯಕ್ರಮದಲ್ಲಿ ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾದರು.