Thursday, April 30, 2026
Thursday, April 30, 2026

Ripponpete Police ಕಾಡಿನ ದಾರಿಯಲ್ಲಿ ಬಿದ್ದಿದ್ದ ಬೈಕ್ ಸವಾರನಿಗೆ ಪ್ರಥಮ ಚಿಕಿತ್ಸೆ ನೀಡಿ ಉಪಚರಿಸಿ ಮಾನವೀಯತೆ ಮೆರೆದ ಪೊಲೀಸ್ ಸಿಬ್ಬಂದಿ

Date:

Ripponpete Police ತಲೆಗೆ ತೀವ್ರಗಾಯಗೊಂಡು ಗವಟೂರಿನ ಕಾಡಿನ ಮಾರ್ಗದಲ್ಲಿ ಬಿದ್ದಿದ್ದ ಯುವಕನನ್ನ ರಾಜ್ಯ ಹೆದ್ದಾರಿ ಗಸ್ತು ಪೊಲೀಸರು ಆಸ್ಪತ್ರೆಗೆ ದಾಖಲಿಸುವ ಮೂಲಕ ಕರ್ತವ್ಯ ಹಾಗೂ ಮಾನವೀಯತೆಯನ್ನ ಮೆರೆದಿದ್ದಾರೆ.

ಭಾಸ್ಕಾರ್ ಆಚಾರಿ (30) ಎಂಬ ಚಿಕ್ಕಜೇನಿ ನಿವಾಸಿ ರಿಪ್ಪನ್ ಪೇಟೆಯಿಂದ ಊರಿಗೆ ಹೋಗುತ್ತಿದ್ದ ವೇಳೆ ಮಾರ್ಗ ಮಧ್ಯದಲ್ಲಿ ಬಿದ್ದಿದ್ದಾನೆ. ಸ್ಥಳೀಯರ ಪ್ರಕಾರ ಆತ ಬೈಕ್ ನಿಂದ ಸ್ಕಿಡ್ ಆಗಿ ಬಿದ್ದು ತಲೆಗೆ ಗಾಯಮಾಡಿಕೊಂಡಿದ್ದಾನೆ ಎಂಬುದು ಅವರ ಮಾಹಿತಿಯಾಗಿದೆ.

ಈ ವೇಳೆ ಹೈವೆ ಗಸ್ತು ತಿರುತ್ತಿದ್ದ ಪೊಲೀಸರ ಕಣ್ಣಿಗೆ ಬಿದ್ದಿದ್ದಾನೆ. ತಕ್ಷಣವೇ ಸ್ಥಳೀಯರನ್ನ ಕರೆದುಕೊಂಡ ಪೊಲೀಸರು ತಮ್ಮ ವಾಹನದಲ್ಲಿದ್ದ Firstaid ಕಿಟ್ ಬಳಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆದ್ದಾರಿ ಗಸ್ತುವಾಹನದಲ್ಲಿಯೇ ರಿಪ್ಪನ್ ಪೇಟೆ ಆರೋಗ್ಯ ಪ್ರಾಥಮಿಕ ಕೇಂದ್ರಕ್ಕೆ ಕರೆದುಕೊಂಡುಹೋಗಿದ್ದಾರೆ.

Ripponpete Police ಹೈವೆ ಗಸ್ತಿನಲ್ಲಿದ್ದ ಎಎಸ್ಐ ಗಣಪತಿ ರಾವ್, ಚಾಲಕ ಗಿರೀಶ್ ಎಂದು ಗುರುತಿಸಲಾಗಿದೆ. ಇದರಿಂದ ಕರ್ತವ್ಯ ಮತ್ತು ಮಾನವೀಯತೆ ಮೆರೆದಿದ್ದಾರೆ. ಗಾಯಾಳು ಸಧ್ಯಕ್ಕೆ ರಿಪ್ಪನ್ ಪೇಟೆಯಿಂದ ಮೆಗ್ಗಾನ್ ಗೆ ಶಿಫ್ಟ್ ಆಗಿದ್ದಾನೆ. ಸಧ್ಯಕ್ಕೆ ಭಾಸ್ಕಾರ್ ಆಚಾರಿ ಪ್ರಾಣಾಪಾಯದಿಂದ ಬಜಾವ್ ಆಗಿದ್ದಾನೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Nalanda Chess Academy ನಳಂದಾಚೆಸ್ ಅಕಾಡೆಮಿಯಿಂದ ಚೆಸ್ ಬೇಸಿಕ್ ಸಮ್ಮರ್ ಕ್ಯಾಂಪ್

Nalanda Chess Academy ಶಿವಮೊಗ್ಗ ನಗರದ ಹೊಸಮನೆ ಬಡಾವಣೆಯಲ್ಲಿರುವ ನಳಂದಾ ಚೆಸ್...

Government Industrial Training Institute ತೀರ್ಥಹಳ್ಳಿ ಐಟಿಐ ಪ್ರವೇಶಕ್ಕೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ

Government Industrial Training Institute ತೀರ್ಥಹಳ್ಳಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯು...

Madhu Bangarappa ಹುಲಿಕಲ್ ಘಾಟ್ ಕುಸಿತ ಪ್ರಕರಣ: ಸಮಗ್ರ ವಿವರ ಪಡೆದು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ- ಮಧು ಬಂಗಾರಪ್ಪ

Madhu Bangarappa ಮಲೆನಾಡು ಮತ್ತು ಕರಾವಳಿಯನ್ನು ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿರುವ ಹೊಸನಗರ...

ಏಪ್ರಿಲ್ 30. ಮಾಚೇನಹಳ್ಳಿ ಜಯಂತಿ ಗ್ರಾಮ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ, ಮೆಸ್ಕಾಂ ಪ್ರಕಟಣೆ

ಶಿವಮೊಗ್ಗ ಮಾಚೇನಹಳ್ಳಿ 110/11ಕೆವಿ ವಿದ್ಯುತ್ ವಿತರಣಾ ಕೇಂದ್ರ ಮಾರ್ಗಗಳಲ್ಲಿ ರಸ್ತೆ ಅಗಲೀಕರಣ...