Thursday, March 19, 2026
Thursday, March 19, 2026
Home Blog Page 457

CM Siddharamaiah ಪೂಂಛ್ ನಲ್ಲಿ ಸೇನಾವಾಹನ ಅಪಘಾತದಲ್ಲಿ ರಾಜ್ಯದ ಯೋಧರ ಮರಣ. ಮುಖ್ಯಮಂತ್ರಿ ಶೋಕ

0

CM Siddharamaiah ಜಮ್ಮು ಕಾಶ್ಮೀರದ ಪೂಂಛ್ ಬಳಿ ಸೇನಾ ವಾಹನ ಅಪಘಾತಕ್ಕೀಡಾಗಿ ಕನ್ನಡಿಗ ಯೋಧರಾದ ದಯಾನಂದ ತಿರಕಣ್ಣವರ, ಅನೂಪ್ ಹಾಗೂ ಮಹೇಶ್ ಮರಿಗೊಂಡ ಅವರು ಹುತಾತ್ಮರಾದ ಸುದ್ದಿ ತಿಳಿದು ನೋವಾಯಿತು.
ಮೃತ ಯೋಧರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬವರ್ಗಕ್ಕೆ ಈ ನೋವು ಭರಿಸುವ ಶಕ್ತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.

CM Siddharamaiah ದೇಶ ಸೇವೆಗಾಗಿ ಜೀವ ಮುಡಿಪಿಟ್ಟ ಈ ಹುತಾತ್ಮ ಯೋಧರ ತ್ಯಾಗ, ಬಲಿದಾನವನ್ನು ನಾಡು ಸದಾಕಾಲ ಸ್ಮರಿಸಲಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

Karnataka Electricity Corporation ಶಿವಮೊಗ್ಗದ ಹಿರಿಯ ಸಮಾಜ ಸೇವಕ ಟಿ.ತಮ್ಮಯ್ಯ ನಿಧನ

0

Karnataka Electricity Corporation ಕರ್ನಾಟಕ ವಿದ್ಯುತ್ ನಿಗಮದಲ್ಲಿ ಕಾರ್ಯನಿರ್ವಾಹಕ ಅಧೀಕ್ಷಕರಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ. ಹಾಗೂ ರೋಟರಿ ಶಿವಮೊಗ್ಗ ಪೂರ್ವದ ಸದಸ್ಯರಾಗಿ ಮತ್ತು ವಿವೇಕ ಜಾಗೃತ ಬಳಗದ ಮಾಜಿ ಅಧ್ಯಕ್ಷರು ಸಕ್ರಿಯ ಸದಸ್ಯರು ಸಮಾಜ ಸೇವಕರಾದ ಟಿ.
ತಮ್ಮಯ್ಯ (80) ಅವರು ಇಂದು ಬೆಳಿಗ್ಗೆ ಶಿವಮೊಗ್ಗ ವಿನೋಬನಗರದ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಇವರಿಗೆ ಹೆಂಡತಿ ಮತ್ತು ಮೂರು ಜನ ಹೆಣ್ಣು ಮಕ್ಕಳು. ಒಬ್ಬ ಮಗನಿದ್ದು ಇವರ ಅಂತ್ಯ ಸಂಸ್ಕಾರವನ್ನು ಅವರ ಹುಟ್ಟೂರು ಆದ Karnataka Electricity Corporation ಅಮೃತಪುರದಲ್ಲಿ ನಾಳೆ ಬೆಳಿಗ್ಗೆ 11 ಗಂಟೆಗೆ ನೆರವೇರಿಸಲಾಗುವುದು. ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ ರೋಟರಿ ಶಿವಮೊಗ್ಗ ಪೂರ್ವದ ಅಧ್ಯಕ್ಷರು ಕಾರ್ಯದರ್ಶಿ ಪದಾಧಿಕಾರಿಗಳು ಮಾಜಿ ಸಹಾಯಕ ಗವರ್ನರ್ಗಳಾದ ಜಿ ವಿಜಯಕುಮಾರ್, ವಸಂತ್ ಹೋಬಳಿದಾರ್, ಡಾಕ್ಟರ್ ಗುಡದಪ್ಪ ಕಸಬಿ. ಚಂದ್ರಹಾಸ್ ರಾಯ್ಕರ್, ಅರುಣ್ ದೀಕ್ಷಿತ್, ಶಶಿಕಾಂತ್ ನಾಡಿಗ್,ಮಂಜುನಾಥ್ ರಾವ್ ಕದಂ, ಕಿಶೋರ್ ಕುಮಾರ್ ರವರುಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ

Eshwara Khandre ಕಸ್ತೂರಿ ರಂಗನ್ ವರದಿ ತಿರಸ್ಕರಿಸಲಾಗಿದೆ-ಸಚಿವ ಈಶ್ವರ ಖಂಡ್ರೆ

0

Eshwara Khandre “ಶತಮಾನಗಳಿಂದ ಜನರು ಅರಣ್ಯ ದಂಚಿನಲ್ಲಿ ವಾಸಿಸುತ್ತಿದ್ದು, ಇವರೇ ಅರಣ್ಯ ರಕ್ಷಿಸುತ್ತಿದ್ದಾರೆ. ಅರಣ್ಯ ರಕ್ಷಣೆಗೆ ಈಗಾಗಲೇ ನಮ್ಮಲ್ಲಿ ಯೋಜನೆಗಳಿವೆ. ಜನರ, ಜನಪ್ರತಿನಿಧಗಳ ಬೇಡಿಕೆಯಂತೆ ಕಸ್ತೂರಿ ರಂಗನ್ ವರದಿ ತಿರಸ್ಕಾರ ಮಾಡಿ ದ್ದೇವೆ ಎಂದು ಕೇಂದ್ರಕ್ಕೆ ಪುನರುಚ್ಚರಿ -ದ್ದೇವೆ,” ಎಂದು ರಾಜ್ಯ ಸರ್ಕಾರದ
ತೀರ್ಮಾನವನ್ನ ಕೇಂದ್ರಕ್ಕೆ ತಿಳಿಸಲಾಗಿದೆ.

‘ರಾಜ್ಯದ 31 ಜಿಲ್ಲೆಗಳಲ್ಲಿ ಜಂಟಿ F ನಡೆಸಲು ಸಮಿತಿಗಳನ್ನು ಚಿಸಲಾಗಿದೆ. ಅದರಂತೆ ಮುಂದಿನ – ತಿಂಗಳಲ್ಲಿ ಜಂಟಿ ಸರ್ವೆ ನಡೆಸಿ ದವದ ಬಗ್ಗೆ ಸರಕಾರಕ್ಕೆ ವರದಿ ಯಾಗಲಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದ ನಿಲುವು ಈ ಮೂಲಕ
ಪಶ್ಚಿಮ ಘಟ್ಟದ ಕುರಿತು ಹಿರಿಯ ವಿಜ್ಞಾನಿ ಡಾ.ಕಸ್ತೂರಿ ರಂಗನ್ ವರದಿ ಬಗೆಗಿನ ಆತಂಕ, ಗೊಂದಲಗಳನ್ನು ನಮ್ಮ ಸರಕಾರ ನಿವಾರಣೆ ಮಾಡಿದ್ದು, ಕಸ್ತೂರಿ ರಂಗನ್ ವರದಿಯನ್ನು ನಾವು ತಿರಸ್ಕರಿಸಿದ್ದೇವೆ ಎಂದರು.

Eshwara Khandre ಕರ್ನಾಟಕದಲ್ಲಿ ಅರಣ್ಯ ನಾಶವಾಗಿದೆ ಎಂಬ ವರದಿ 2021-23ರ ಮಾಚ್ ವರದಿ. ಆ ಸಮಯದಲ್ಲಿ ಈ ಹಿಂದಿನ ಸರ್ಕಾರ ಅಧಿಕಾರದಲ್ಲಿತ್ತು. ಈಗ ನಮ್ಮ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಅರಣ್ಯ ಹಸುರೀಕರಣ, ಅರಣ್ಯ ಉಳಿಸಲು ಹೆಚ್ಚಿನ ಯೋಜನೆ ರೂಪಿಸಲಾಗಿದೆ. ರಾಜ್ಯದಲ್ಲಿ ಅರಣ್ಯ ಪ್ರದೇಶ ಜಾಸ್ತಿಯಾ ಗುವ ವಿಶ್ವಾಸ ಇದೆ,” ಎಂದರು.

ಸಂಸದ ಸಾಗರ್ ಖಂಡ್ರೆ, ಡಿಸಿಎಫ್ ಆ್ಯಂಟನಿ ಮರಿಯಪ್ಪ, ಎಸಿಎಫ್ ಪ್ರವೀಣ್ ಕುಮಾರ್, ಆರ್‌ಎಫ್‌ಒಗ ಳಾದ ವಿಮಲ್ ಬಾಬು, ಮಂಜು ನಾಥ್, ಸಂದ್ಯಾ, ದೇವಳದ ಇಒ ಅರವಿಂದ ಅಯ್ಯಪ್ಪ ಸುತಗುಂಡಿ ಉಪಸ್ಥಿತರಿದ್ದರು.

H.D.Kumarswami ಭದ್ರಾವತಿ ವಿಐಎಸ್ ಎಲ್ ಬಗ್ಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರ ಸ್ವಾಮಿ

0

H.D.Kumarswami ಭದ್ರಾವತಿ ವಿಐಎಸ್ ಎಲ್ ಬಗ್ಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರ ಸ್ವಾಮಿ ಭದ್ರಾವತಿಯಲ್ಲಿರುವ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಸ್ಥಾವರವನ್ನು 15,000 ಕೋಟಿ ವೆಚ್ಚದಲ್ಲಿ ಪುನರುಜ್ಜೀವನಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಈ ಮೂಲಕ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಈ ಸಂಗತಿಯನ್ನ ಮಂಡ್ಯದಲ್ಲಿ ನಡೆದ87 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ತಿಳಿಸಿದರು.

Value Social Welfare Trust ಸರ್ಕಾರಿ ಶಾಲೆ ಉಳಿಸಿ ಬೆಳೆಸುವಲ್ಲಿ ದಾನಿಗಳ ಪಾತ್ರ ಅಪಾರ- ಶಾರದಾ ಪೂರ್ಯಾನಾಯಕ್. ಶಾಲೆ ಅಭಿವೃದ್ಧಿಗೆ ಪೂರ್ಣ ಸಹಕಾರ- ಡಾ.ಎ.ಕೆ.ಶ್ರೀನಿವಾಸ ಮೂರ್ತಿ

0

Value Social Welfare Trust ಸರ್ಕಾರಿ ಶಾಲೆಗಳ ಉಳಿಸಿ ಬೆಳೆಸುವಲ್ಲಿ ದಾನಿಗಳ ಪಾತ್ರ ಮಹತ್ತರ ಎಂದು ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ‍್ಯಾನಾಯ್ಕ್ ಹೇಳಿದರು.

ಅಮೃತ್ ನೋನಿ ಅಂಗ ಸಂಸ್ಥೆಯಾದ ವ್ಯಾಲ್ಯೂ ಸೋಶಿಯಲ್ ವೇಲ್ಫೇರ್ ಟ್ರಸ್ಟ್ ವತಿಯಿಂದ 25 ಲಕ್ಷ ರೂ. ವೆಚ್ಚದಲ್ಲಿ ರಾಮೇನಕೊಪ್ಪದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಪುನರ್ ನಿರ್ಮಾಣದ ಗುದ್ದಲಿ ಪೂಜೆ ಕಾರ್ಯಕ್ರಮ ಮತ್ತು ದತ್ತು ಸ್ವೀಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಜ್ಯಾದ್ಯಂತ ಇರುವ ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಶಾಲೆಗಳಿಗೆ ಮೂಲಸೌಕರ್ಯ ಒದಗಿಸಲು ದಾನಿಗಳು ಮುಂದೆ ಬರಬೇಕು. ಇಂತಹ ಸಮಾಜಮುಖಿ ಕಾರ್ಯಗಳಿಂದ ಸರ್ಕಾರಿ ಶಾಲೆಗಳನ್ನು ಉಳಿಸುವ ಜತೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗಲಿದೆ. ಸರ್ಕಾರಿ ಶಾಲೆಯಲ್ಲಿರುವ ಪ್ರತಿಭಾವಂತ ಮಕ್ಕಳಿಗೆ ಉತ್ತಮ ಅವಕಾಶ ಕಲ್ಪಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಅಮೃತ್ ನೋನಿ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಎ.ಕೆ.ಶ್ರೀನಿವಾಸಮೂರ್ತಿ ಮಾತನಾಡಿ, ಅಮೃತ್ ನೋನಿ ಸಂಸ್ಥೆಯ ಭಾಗವಾಗಿರುವ ವ್ಯಾಲ್ಯೂ ಸೋಶಿಯಲ್ ವೇಲ್ಫೇರ್ ಟ್ರಸ್ಟ್ ಮೂಲಕ ರಾಮೇನಕೊಪ್ಪದಲ್ಲಿನ ಸರ್ಕಾರಿ ಶಾಲೆಯನ್ನು ಐದು ವರ್ಷಗಳ ಅವಧಿಗೆ ದತ್ತು ತೆಗೆದುಕೊಂಡಿದ್ದು, ಶಾಲೆ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಹೇಳಿದರು.

ರಾಮೇನಕೊಪ್ಪದಲ್ಲಿರುವ ಸರ್ಕಾರಿ ಶಾಲೆಯ ಮರು ನಿರ್ಮಾಣವನ್ನು 25 ಲಕ್ಷ ರೂ. ವೆಚ್ಚದಲ್ಲಿ ನಮ್ಮ ಟ್ರಸ್ಟ್ ಮೂಲಕ ಮಾಡಲಾಗುತ್ತಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ವ್ಯವಸ್ಥೆ ಒದಗಿಸುವುದು ಮುಖ್ಯ ಉದ್ದೇಶ. ಎಲ್ಲ ಮಕ್ಕಳಿಗೂ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು.

Value Social Welfare Trust ವ್ಯಾಲ್ಯೂ ಸೋಶಿಯಲ್ ವೇಲ್ಫೇರ್ ಟ್ರಸ್ಟ್ ಮೂಲಕ ಬಸವಾಪುರ ಶಾಲೆಗೆ ಅಗತ್ಯವಿರುವ ಮೂಲಸೌಕರ್ಯ ಒದಗಿಸಲಾಗಿದೆ. ರಾಮೇನಹಳ್ಳಿಯ ಉರ್ದು ಶಾಲೆಗೆ ಶೌಚಗೃಹ ಸೇರಿದಂತೆ ಮೂಲ ಸೌಕರ್ಯದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದು, ಅಗತ್ಯ ವ್ಯವಸ್ಥೆ ಮಾಡಲಾಗುವುದು ಎಂದರು.

ಅಮೃತ್ ನೋನಿ ಸಂಸ್ಥೆಯ ಡೈರೆಕ್ಟರ್ ಅಂಬುಜಾಕ್ಷಿ, ಮುಖ್ಯಸ್ಥ ಶಶಿಕಾಂತ್ ನಾಡಿಗ್, ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಸ್.ದತ್ತಾತ್ರಿ, ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್, ಅಗಸವಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ರಾಮೇನಕೊಪ್ಪದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಸೋಮಶೇಖರಪ್ಪ ಮತ್ತಿತರರು ಉಪಸ್ಥಿತರಿದ್ದರು.

HPR Institute Of Nursing Sciences ಸಂಸ್ಥೆಯಲ್ಲಿ ಮಕ್ಕಳ ಭವಿಷ್ಯಕ್ಕೆ ಯಾವುದೇ ರಾಜಿ ಇಲ್ಲದೇ ಉತ್ತಮಿಕೆಗೆ ಆದ್ಯತೆ-ಹರಿಪ್ರಸಾದ ರೈ

0

HPR Institute Of Nursing Sciences ಮಕ್ಕಳ ಶೈಕ್ಷಣಿಕ ಹಿತದೃಷ್ಠಿಯಿಂದ ಮಂಜುನಾಥ್ ಅವರನ್ನು ಸಂಸ್ಥೆಯಿಂದ ಅಮಾನತು ಮಾಡಲಾಗಿದೆ ಎಂದು ಎಚ್‌ಪಿಆರ್ ನರ್ಸಿಂಗ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಹರಿಪ್ರಸಾದ್ ರೈ ತಿಳಿಸಿದರು.

ಸೊರಬ ಪಟ್ಟಣದ ಎಚ್‌ಪಿಆರ್ ನರ್ಸಿಂಗ್ ಮತ್ತು ಅರೆವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂಸ್ಥೆಯಲ್ಲಿ ಮಕ್ಕಳ ಶಿಕ್ಷಣ ಮತ್ತು ಭವಿಷ್ಯಕ್ಕೆ ಯಾವುದೇ ರಾಜೀ ಇಲ್ಲದೇ ಉತ್ತಮ ಆದ್ಯತೆ ನೀಡಲಾಗುತ್ತಿದೆ. ಇತ್ತೀಚೆಗೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಡಳಿತ ಅಧಿಕಾರಿ ಮಂಜುನಾಥ್ ಅವರ ಮೇಲೆ ಪ್ರಕರಣವೊಂದು ದಾಖಲಾದ ಹಿನ್ನೆಲೆ ಅವರನ್ನು ಸಂಸ್ಥೆಯಿಂದ ವಜಾಗೊಳಿಸಲಾಗಿದೆ. ಅಲ್ಲದೇ, ಪ್ರಕರಣ ಕಾಲೇಜಿನ ಕ್ಯಾಂಪಸ್ ಆವರಣದಲ್ಲಿ ನಡೆಯದಿದ್ದರೂ ಸಹ ಮಕ್ಕಳ ರಕ್ಷಣೆ ನಮ್ಮ ಹೊಣೆಯಾಗಿದೆ ಎಂದು ಸ್ಪಷ್ಟಪಡಿಸಿದರು.

ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ಲಭಿಸಬೇಕು ಹಾಗೂ ಉದ್ಯೋಗವಕಾಶಗಳು ಲಭಿಸಬೇಕು ಎನ್ನುವ ಉದ್ದೇಶದಿಂದ ಸಂಸ್ಥೆಯನ್ನು ಆರಂಭಿಸಲಾಯಿತು. ಕಳೆದ ಎಂಟು ವರ್ಷಗಳಿಂದ ಪಟ್ಟಣದಲ್ಲಿ ಸಂಸ್ಥೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸಂಸ್ಥೆಯಲ್ಲಿ ಶಿಕ್ಷಣ ಪಡೆದವರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ವೈದ್ಯಕೀಯ ಸಂಸ್ಥೆಗಳಲ್ಲಿ ಉದ್ಯೋಗವಕಾಶ ಕಂಡುಕೊಂಡಿದ್ದಾರೆ. ಅಲ್ಲಿಯೂ ಸಹ ಉತ್ತಮ ಹೆಸರನ್ನು ಗಳಿಸಿದ್ದಾರೆ. ಆದರೆ, ಪಟ್ಟಣದಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಜುನಾಥ್ ಅವರನ್ನು ಸಂಸ್ಥೆಯಿಂದ ಅಮಾನತು ಮಾಡಲಾಗಿದ್ದು, ತತಕ್ಷಣದಿಂದ ಜಾರಿಗೆ ಬರುವಂತೆ ಅವರಿಗೂ ಹಾಗೂ ಸಂಸ್ಥೆಗೂ ಸಂಬಂಧವಿಲ್ಲ ಎಂದು ನೋಟಿಸ್ ಜಾರಿ ಮಾಡಲಾಗಿದೆ ಎಂದರು.

HPR Institute Of Nursing Sciences ಬೀದರ್, ಕಲಬುರ್ಗಿ, ಬೆಂಗಳೂರು, ಪುತ್ತೂರು, ಮಂಗಳೂರು, ಶಹಾಪುರ ಸೇರಿದಂತೆ ಒಟ್ಟು 12 ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಸಂಸ್ಥೆಯ ಸ್ಥಾಪನೆಯ ಉದ್ದೇಶ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉದ್ಯೋಗವಕಾಶಗಳು ಲಭಿಸಬೇಕು ಎನ್ನುವುದು. ಯಾವುದೇ ಸಿಬ್ಬಂದಿ ಮುಖ್ಯವಾಗದೇ ಸಂಸ್ಥೆಯ ಮತ್ತು ಮಕ್ಕಳ ಹಿತಾಸಕ್ತಿ ಮುಖ್ಯವಾಗಿರುತ್ತದೆ. ಪ್ರಸ್ತುತ ಉತ್ತಮ ನುರಿತ ಸಿಬ್ಬಂದಿ ಮತ್ತು ಅಧ್ಯಾಪಕ ವೃಂದ ಕಾರ್ಯನಿರ್ವಹಿಸುತ್ತಿದೆ. ಮಕ್ಕಳು ಲೈಂಗಿಕ ದೌರ್ಜನ್ಯದ ಕುರಿತು ಅರೋಪ ಮಾಡಿದ ಸಂದರ್ಭದಲ್ಲಿ ರಾಜೀಯಾಗಲು ಸಾಧ್ಯವಿಲ್ಲ. ದೇಶದ ಕಾನೂನಿಗೆ ಎಲ್ಲರೂ ತಲೆ ಭಾಗಲೇ ಬೇಕು. ಕಾನೂನಿನನ್ವಯ ತಗೆದುಕೊಳ್ಳುವ ನಿರ್ಧಾರಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

Rabindra Kalakshetra Bangalore ಹಾಸ್ಯಕಲಾವಿದೆ ಶಿವಮೊಗ್ಗದ ಕವಿತಾ ಸುಧೀಂದ್ರ ಅವರಿಗೆ ಕರ್ನಾಟಕ ವಿಭೂಷಣ ಪ್ರಶಸ್ತಿ

0

Rabindra Kalakshetra Bangalore ಶಿವಮೊಗ್ಗ ನಗರದ ಹಾಸ್ಯ ಕಲಾವಿದೆ ಕವಿತಾ ಸುಧೀಂದ್ರ ಅವರು ಕರ್ನಾಟಕ ವಿಭೂಷಣ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದು, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಡಿಸೆಂಬರ್ 27ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಕರ್ನಾಟಕ ವಿಭೂಷಣ ರಾಜ್ಯ ಪ್ರಶಸ್ತಿಗೆ ಭಾಜನರಾಗಿರುವ ಶಿವಮೊಗ್ಗದ ಹಾಸ್ಯ ಕಲಾವಿದೆ ಕವಿತಾ ಸುಧೀಂದ್ರ ಅವರಿಗೆ ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಎಂ.ವೆಂಕಟೇಶ್ ಮತ್ತು ಜಿಲ್ಲಾ ಘಟಕದ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಶಿವಮೊಗ್ಗದ ಕವಿತಾ ಸುಧೀಂದ್ರ ಅವರು ಮಹಿಳಾ ಹಾಸ್ಯ ಕಲಾವಿದರಾಗಿದ್ದು, ವಿವಿಧ ಚಾನಲ್‌ಗಳಲ್ಲಿ ಹಾಗೂ ರಾಜ್ಯಾದ್ಯಂತ ವಿವಿಧ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡುವ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಜೀವನ ಕೌಶಲ್ಯ ಹಾಗೂ ಮೌಲ್ಯ ಕುರಿತು ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. ತೀರ್ಥಹಳ್ಳಿ ಬಿ.ಇ.ಒ .ಕಚೇರಿಯಲ್ಲಿ ವಿಶೇಷ ಮಕ್ಕಳಿಗೆ ಸಮನ್ವಯ ಸಂಪನ್ಮೂಲ ಶಿಕ್ಷಕಿಯಾಗಿ ವಿಕಲಚೇತನ ಮಕ್ಕಳ ಮಧ್ಯೆ ಸೇವೆ ಸಲ್ಲಿಸುತ್ತಿದ್ದಾರೆ. ಉಪನ್ಯಾಸಕರಾಗಿದ್ದಾರೆ.
ಎನ್‌ಎಸ್‌ಎಸ್ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. ನೃತ್ಯ ಕಲಾವಿದೆ, ಹಾಡುಗಾರ್ತಿ, ಬರಹಗಾರ್ತಿಯಾಗಿದ್ದಾರೆ.

Rabindra Kalakshetra Bangalore ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿ ಡಿಸೆಂಬರ್ 27ರಂದು ಸಂಜೆ 5ರಿಂದ 9.30ರವರೆಗೆ ಸುರ್ವೆ ಕಲ್ಚರಲ್ ಅಕಾಡೆಮಿಯಿಂದ ಅಖಿಲ ಭಾರತ ಕನ್ನಡ ಕವಿಗಳ ಸಮ್ಮೇಳನದ 11ನೇ ಆವೃತ್ತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕರ್ನಾಟಕ ಸಾಂಸ್ಕೃತಿಕ ಪರಂಪರೆಗೆ ಕನ್ನಡದ ಮಹಾಕಾವ್ಯಗಳ ಕೊಡುಗೆ ಕುರಿತು ವಿಚಾರ ಸಂಕಿರಣ ನಡೆಯಲಿದೆ.
ಅಖಿಲ ಭಾರತ ಕನ್ನಡ ಕವಿಗಳ ಕಾವ್ಯ ಪರಿಷತ್ ಉದ್ಘಾಟನೆ ಹಾಗೂ ಅಕಾಡೆಮಿ ವತಿಯಿಂದ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಹಿರಿಯ ರಂಗಭೂಮಿ ಕಲಾವಿದೆ, ಸುರ್ವೆ ಕಲ್ಚರಲ್ ಅಕಾಡೆಮಿ ಗೌರವಾಧ್ಯಕ್ಷೆ ಡಾ. ಸುಮತಿಶ್ರೀ ನವಲಿ ಹಿರೇಮಠ, ಅಕಾಡೆಮಿ ಅಧ್ಯಕ್ಷ ಕಿಶನ್ ಸುರ್ವೆ, ಸ್ಥಾಪಕ ಅಧ್ಯಕ್ಷ ರಮೇಶ ಸುರ್ವೆ ಉಪಸ್ಥಿತರಿರುವರು.

Indian Red Cross Organisation 44 ಬಾರಿ ರಕ್ತದಾನ ಮಾಡಿ ಹಾಲಪ್ಪನವರು ಎಲ್ಲರಿಗೂ ಮಾದರಿಯಾಗಿದ್ದಾರೆ- ತಾರಾನಾಥ್

0

Indian Red Cross Organisation ವೃತ್ತಿಯ ಜತೆಗೆ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ರಕ್ತದಾನಿ, ಪರಿಸರ ಪ್ರೇಮಿ, ಸಮಾಜ ಸೇವಕ, ಭದ್ರಾವತಿ ಟ್ರಾಫಿಕ್ ಹೆಡ್ ಕಾನ್ಸ್ಟೇಬಲ್ ಹಾಲೇಶಪ್ಪ ಅವರಿಗೆ ಶಿವಮೊಗ್ಗ ರೆಡ್‌ಕ್ರಾಸ್ ಸಂಜೀವಿನಿ ರಕ್ತನಿಧಿಯಲ್ಲಿ ಸ್ಪಂದನ ಹೆಲ್ತ್ ಫೌಂಡೇಷನ್, ಸಂಜೀವಿನಿ ರಕ್ತನಿಧಿ ಹಾಗೂ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.

ಸ್ಪಂದನ ಹೆಲ್ತ್ ಫೌಂಡೇಷನ್ ಅಧ್ಯಕ್ಷ, ರೆಡ್‌ಕ್ರಾಸ್ ಸಂಜೀವಿನಿ ರಕ್ತನಿಧಿ ಉಪಾಧ್ಯಕ್ಷ ತಾರಾನಾಥ್ ಮಾತನಾಡಿ, ಹಾಲೇಶಪ್ಪ ಅವರು ಈಗಾಗಲೇ 44 ಬಾರಿ ರಕ್ತದಾನ ಮಾಡಿ ತುರ್ತು ಸಂದರ್ಭದಲ್ಲಿ ಜೀವ ಉಳಿಸುವ ಪುಣ್ಯದ ಕಾರ್ಯ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಹೇಳಿದರು.

ರಕ್ತದಾನಿ ಹಾಲೇಶಪ್ಪ ಅವರು ರಕ್ತದಾನದ ಜತೆಯಲ್ಲಿ ಪರಿಸರ ಸಂರಕ್ಷಣೆ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡುತ್ತಾರೆ. ಇಂತಹ ಉತ್ತಮ ವ್ಯಕ್ತಿಗಳಿಂದ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.

Indian Red Cross Organisation ಸನ್ಮಾನ ಸ್ವೀಕರಿಸಿ ಮಾತನಾಡಿದ ಹಾಲೇಶಪ್ಪ ಅವರು, ಮನುಷ್ಯನಾಗಿ ಜನಿಸಿದ ಬಳಿಕ ಸಮಾಜದ ಋಣ ತೀರಿಸುವ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಪೊಲೀಸ್ ಠಾಣೆ ಸೇರಿದಂತೆ ವಿವಿಧೆಡೆಗಳಲ್ಲಿ ರಕ್ತದಾನ ಶಿಬಿರ ಆಯೋಜಿಸುವ ಜತೆಯಲ್ಲಿ ರಕ್ತದಾನದ ಮಹತ್ವ ತಿಳಿಸಿಕೊಡುವ ಕೆಲಸ ಮಾಡಿರುವ ಹೆಮ್ಮೆ ಇದೆ ಎಂದು ಹೇಳಿದರು.

ರೆಡ್‌ಕ್ರಾಸ್ ಕಾರ್ಯದರ್ಶಿ ಡಾ. ದಿನೇಶ್ ಮಾತನಾಡಿ, ರಕ್ತದಾನದಿಂದ ಆಗುವ ಪ್ರಯೋಜನಗಳು ಹಾಗೂ ರಕ್ತದ ಕುರಿತ ಮಾಹಿತಿಗಳನ್ನು ವಿವರಿಸಿದರು. ಸ್ವಯಂಪ್ರೇರಿತ ರಕ್ತದಾನಿಗಳ ಸೇವಾ ಸಂಸ್ಥೆ ಅಧ್ಯಕ್ಷ ಧರಣೇಂದ್ರ ದಿನಕರ್, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಡಾ. ದಿನಕರ್, ಶೃತಿ, ರೆಡ್‌ಕ್ರಾಸ್ ನಿರ್ದೇಶಕ ನವೀನ್.ಜಿ.ಪಿ., ಲಕ್ಷ್ಮೀ, ಪೂಜಾ, ಸಿಂಧು, ಕವಿತಾ, ಟ್ರಾಫಿಕ್ ಎಎಸ್‌ಐ ತಿಪ್ಪೇಶ್ ಉಪಸ್ಥಿತರಿದ್ದರು.

B.Y.Raghavendra ಜಿಲ್ಲೆಯ ಬಹುತೇಕ ಬ್ಯಾಂಕುಗಳು ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನ & ಸಾಲ ಸೌಲಭ್ಯ ನೀಡಿಕೆ ತೃಪ್ತಿಕರ- ಬಿ.ವೈ.ರಾಘವೇಂದ್ರ

0

B.Y.Raghavendra ಪಿ.ಎಂ.ಮುದ್ರಾ, ಪಿ.ಎಂ.ಎಫ್.ಎಂ.ಇ., ಪಿ.ಎಂ.ವಿಶ್ವಕರ್ಮ, ಪಿ.ಎಂ.ಸ್ವನಿಧಿ, ಪಿ.ಎಂ.ಇ.ಜಿ.ಪಿ., ಪಿ.ಎಂ.ಸೂರ್ಯಘರ್, ಎನ್.ಯು.ಎಲ್.ಎಂ. ಸ್ವಸಹಾಯ ಸಂಘಗಳ ಗುಂಪು ಮತ್ತು ವೈಯಕ್ತಿಕ ಸಾಲ ಮತ್ತಿತರ ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನದಲ್ಲಿ ಫಲಾನುಭವಿಗಳಿಗೆ ಸಾಲಸೌಲಭ್ಯ ಒದಗಿಸುವಲ್ಲಿ ಜಿಲ್ಲೆಯ ಬಹುತೇಕ ಬ್ಯಾಂಕುಗಳ ಸಾಧನೆ ಅತ್ಯಂತ ತೃಪ್ತಿಕರವಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹರ್ಷ ವ್ಯಕ್ತಪಡಿಸಿದರು.

ಅವರು ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್‌ಸಾಬ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಬ್ಯಾಂಕುಗಳು ತಮ್ಮ ವ್ಯಾಪ್ತಿಯಲ್ಲಿ ನೀಡುವ ಆರ್ಥಿಕ ನೆರವಿನ ಪ್ರಮಾಣ ಶೇ. 82ರಿಂದ 86ಕ್ಕೆ ಏರಿಕೆ ಕಂಡಿದೆ. ಅದಕ್ಕಾಗಿ ಶ್ರಮಿಸಿದ ಎಲ್ಲ ಬ್ಯಾಂಕುಗಳ ವ್ಯವಸ್ಥಾಪಕರು ಅಭಿನಂದನಾರ್ಹರು ಎಂದರು. ಕೇಂದ್ರದ ಜನಪರ ಯೋಜನೆಗಳನ್ನು ಗ್ರಾಮೀಣ ಪ್ರದೇಶದ ಜನಸಾಮಾನ್ಯರಿಗೆ ತಲುಪಿಸುವಲ್ಲಿ ಬ್ಯಾಂಕುಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ಭಾರತ ಇಂದು ವಿಶ್ವದ ಮೂರನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿರುವ ಈ ಸಂದರ್ಭದಲ್ಲಿ ವಿಶ್ವವೇ ಬೆರಗಾಗುವಂತಹ ಆರ್ಥಿಕ ವಹಿವಾಟನ್ನು ಹೊಂದಿದೆ. ಎಲ್ಲಾ ರೀತಿಯ ಅಭಿವೃದ್ಧಿಗೆ ಭಾರತ ತಯಾರಾಗಿದೆ ಎಂದದ ಅವರು, ಜನಸಾಮಾನ್ಯರ ನಿರೀಕ್ಷೆಗೆ ತಲುಪುವಂತೆ ಬ್ಯಾಂಕುಗಳು ಕಾರ್ಯನಿರ್ವಹಿಸಬೇಕು. ಹೆಚ್ಚಿನ ರೈತರು, ಉದ್ಯಮಿಗಳಿಗೆ ಹೆಚ್ಚಿನ ಆರ್ಥಿಕ ಶಕ್ತಿ ಒದಗಿಸುವಲ್ಲಿ ಜಿಲ್ಲೆಯ ಬ್ಯಾಂಕುಗಳ ಅಗ್ರಪಂಕ್ತಿಯಲ್ಲಿ ಗುರುತಿಸಿಕೊಳ್ಳುವಂತಾಗಬೇಕೆಂದು ನುಡಿದರು.

ಸ್ವಸಹಾಯ ಗುಂಪುಗಳಿಗೆ ಪ್ರಸ್ತುತ ನೀಡುತ್ತಿರುವ ಸಾಲದ ಪ್ರಮಾಣ ಆಶಾದಾಯಕವಾಗಿಲ್ಲ, ಸದಸ್ಯರ ನಿರೀಕ್ಷೆಯಷ್ಟು ಪ್ರಮಾಣದ ಸಾಲಸೌಲಭ್ಯವನ್ನು ನೀಡಬೇಕು. ಪಿ.ಎಂ.ವಿಶ್ವಕರ್ಮ ಯೋಜನೆಯಡಿ ಫಲಾನುಭವಿಗಳಿಂದ ಪಡೆಯುತ್ತಿರುವ ಸೇವಾಶುಲ್ಕ ರೂ.500/-ರ ಮಿತಿಯನ್ನು ದಾಟದಂತೆ ನಿಗಧಿಪಡಿಸಬೇಕು ಎಂದರು. ಜಿಲ್ಲೆಯಲ್ಲಿ ನಿರುದ್ಯೋಗಿ ಯುವಕರಿಗೆ ಸ್ವಯಂ ಉದ್ಯೋಗ ಆರಂಭಿಸುವ ನಿಟ್ಟಿನಲ್ಲಿ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳಿಂದ ನೀಡುತ್ತಿರುವ ಕೌಶಲ್ಯಾಭಿವೃದ್ಧಿ ತರಬೇತಿಗಳ ಪ್ರಮಾಣ ಅತ್ಯಂತ ಕಡಿಮೆ ಪ್ರಮಾಣದಲ್ಲಿದ್ದು, ನಿರೀಕ್ಷೆಯಂತೆ ತರಬೇತಿ ಕಾರ್ಯಾಗಾರಗಳು ನಡೆಯದಿರುವುದು ಅತ್ಯಂತ ಬೇಸರದ ಸಂಗತಿ. ಮುಂದಿನ ದಿನಗಳಲ್ಲಿ ಕೌಶಲ್ಯಾಭಿವೃದ್ಧಿ ನೀಡುವಲ್ಲಿ ಜಿಲ್ಲೆಯ ಸಾಧನೆ ಗುರುತಿಸಿಕೊಳ್ಳುವಂತಾಗಬೇಕುತಪ್ಪಿದಲ್ಲಿ ಸಂಬಂಧಿಸಿದ ವ್ಯಕ್ತಿ ಅಥವಾ ಸಂಸ್ಥೆಗಳ ಮುಖ್ಯಸ್ಥರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು.

B.Y.Raghavendra ಕೇಂದ್ರದ ಜನಪರ ಯೋಜನೆಗಳ ಅನುಷ್ಠಾನದಲ್ಲಿ ಸೌತ್ ಇಂಡಿಯನ್ ಬ್ಯಾಂಕ್ ಸೇರಿದಂತೆ ಇನ್ನೂ ಕೆಲವು ಬ್ಯಾಂಕುಗಳ ಪ್ರಗತಿ ಅತ್ಯಂತ ಕಳಪೆಯಾಗಿದೆ. ಮುಂದಿನ ದಿನಗಳಲ್ಲಿ ವಿಶಾಲವಾದ ಜಿಲ್ಲೆಯಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ, ಸೌಲಭ್ಯ ನೀಡಲು ಮುಂದಾಗದಿದ್ದಲ್ಲಿ ಅಂತಹ ಬ್ಯಾಂಕುಗಳ ವ್ಯವಸ್ಥಾಪಕರ ವಿರುದ್ಧ ಕ್ರಮ ಅನಿವಾರ್ಯವಾಗಲಿದೆ ಎಂದವರು ಎಚ್ಚರಿಸಿದರು. ಸಭೆಯಲ್ಲಿ ವಿಭಾಗೀಯ ವ್ಯವಸ್ಥಾಪಕ ದೇವರಾಜ್, ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ವ್ಯವಸ್ಥಾಪಕ ಚಂದ್ರಶೇಖರ್, ಎಸ್.ಬಿ.ಐ. ವಿಭಾಗೀಯ ಅಧಿಕಾರಿ ವಿಜಯ್‌ಸಾಯಿ, ಆರ್.ಬಿ.ಐ.ನ ವೆಂಕಟರಾಮಯ್ಯ, ಯೂನಿಯನ್ ಬ್ಯಾಂಕಿನ ವ್ಯವಸ್ಥಾಪಕ ವಿಶುಕುಮಾರ್, ಶ್ರೀಮತಿ ಶಾರದಮ್ಮ, ನಾಗಭೂಷಣ ಸೇರಿದಂತೆ ಜಿಲ್ಲೆಯ ಎಲ್ಲಾ ಬ್ಯಾಂಕುಗಳ ಅಧಿಕಾರಿ-ಸಿಬ್ಬಂಧಿಗಳು ಉಪಸ್ಥಿತರಿದ್ದರು.

Chandrashekhara Shivacharya ಕಾಶಿಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯರಿಂದ ಶಿವ ತತ್ವ ಚಿಂತನ ಕಾರ್ಯಕ್ರಮ

0

Chandrashekhara Shivacharya ಕಾಶಿ ಪೀಠದ ಜಗದ್ಗುರುಗಳಾದ ಡಾಕ್ಟರ್ ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಎಂಟು ದಿನಗಳ ಆಧ್ಯಾತ್ಮಿಕ ಪ್ರವಚನ ಶಿವತತ್ವ ಚಿಂತನೆ ಕಾರ್ಯಕ್ರಮಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ನಗರ ಘಟಕದ ಅಧ್ಯಕ್ಷರಾದ ಶ್ರೀಯುತ ವೇದಮೂರ್ತಿ ಪ್ರದೀಪ್ ಚಂದ್ರ ಸಿಂಗಟಗೆರೆ ಮಠ ಇವರ ಮನೆಗೆ ಆಗಮಿಸಿ ಪಾದಪೂಜೆ ನೆರವೇರಿಸಿ ಎಲ್ಲಾ ಭಕ್ತರಿಗೆ ಪ್ರಸಾದ ವಿತರಿಸಿ ಅಲ್ಲಿಂದ ಬೈಕ್ ಹಾಗೂ ಕಾರ್ ಗಳ ಮುಖಾಂತರ ತೆರಳಿ ನಂತರ ಪೂರ್ಣ ಕುಂಭ ಸ್ವಾಗತದೊಂದಿಗೆ ಆಗಮಿಸಿ ಎಲ್ಲರಿಗೂ ಆಶೀರ್ವದಿಸಿದರು. Chandrashekhara Shivacharya ಕಾರ್ಯಕ್ರಮದಲ್ಲಿ ಸಿ ಎ ಹಿರೇಮಠ ಮಹಾಲಿಂಗ ಶಾಸ್ತ್ರಿಗಳು, ಕಾಟನ್ ಜಗದೀಶ್, ಜಂಗಮ ಸಮಾಜದ ಅಧ್ಯಕ್ಷರರಾದ ಚಂದ್ರಯ್ಯನವರು, ಕಾರ್ಯದರ್ಶಿ ವೇ ಪುಟ್ಟಣ್ಣ ಹಿರೇಮಠ ವೇ ರುದ್ರಪ್ರಸಾದ್ ಮಲ್ಲಿಕಾರ್ಜುನ್, ಸೋಮನಾಥ್ ಕೆ.ಆರ್,ಜಿ ವಿಜಯಕುಮಾರ್ ಬಾಪೂಜಿ ಮಲ್ಲಿಕಾರ್ಜುನ್ ಕಾನೂರ್. ಹಿರೇಮಠ್ ಹಾಗೂ ನೂರಾರು ಸಂಖ್ಯೆಯಲ್ಲಿ ಭಕ್ತರು ಉಪಸ್ಥಿತರಿದ್ದರು.