Thursday, March 19, 2026
Thursday, March 19, 2026
Home Blog Page 460

Bharath Scout & Guides ಸ್ಕೌಟ್ & ಗೈಡ್ಸ್ ಚಳವಳಿ ಮನೆಮನೆಗೂ ತಲುಪಬೇಕು- ಜಿ.ವಿಜಯ ಕುಮಾರ್

0

Bharath Scout & Guides ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಪಾಲ್ಗೊಳ್ಳುವುದರಿಂದ ಮಕ್ಕಳಲ್ಲಿ ಕ್ರೀಯಾಶೀಲತೆ ಹಾಗೂ ನಾಯಕತ್ವ ಗುಣ ವೃದ್ಧಿಸುತ್ತದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ರೋವರ್ ವಿಭಾಗದ ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯಕುಮಾರ್ ಹೇಳಿದರು.
ಶಿವಮೊಗ್ಗ ಜಿಲ್ಲಾ ಸ್ಕೌಟ್ ಭವನದಲ್ಲಿ ರೋವರ್ ರೇಂಜರ್‌ಗಳಿಗೆ ಆಯೋಜಿಸಿದ್ದ ಮೂರು ದಿನಗಳ ಜಿಲ್ಲಾಮಟ್ಟದ ದಳ ನಿರ್ವಹಣೆ ಮತ್ತು ಚಾರಣ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ವಿತರಿಸಿ ಮಾತನಾಡಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಟೆಂಟ್ ನಿರ್ಮಾಣ ಮಾಡುವುದು, ನಾಟ್ ಹಾಕುವುದು ಸೇರಿದಂತೆ ವೈವಿಧ್ಯಮಯ ವಿಷಯಗಳನ್ನು ಕಲಿಸುತ್ತದೆ. ಸ್ಕೌಟ್ಸ್ ಮತ್ತು ಗೈಡ್ಸ್ ಚಳವಳಿ ಮನೆ ಮನೆಗಳಿಗೂ ತಲುಪಿಸಬೇಕು. ಸ್ಕೌಟ್ ವಿಶ್ವಾದ್ಯಂತ ಸ್ಕೌಟ್ ಚಳವಳಿ ತನ್ನದೇ ಆದ ವಿಶೇಷ ಸ್ಥಾನಮಾನ ಹೊಂದಿದೆ ಎಂದು ತಿಳಿಸಿದರು.
Bharath Scout & Guides ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಕುಪ್ಪಳ್ಳಿ, ಕವಲೇದುರ್ಗ, ಮೃಗವಧೆ ಚಾರಣ ಯಶಸ್ವಿಯಾಗಿ ಪೂರ್ಣಗೊಳಿಸಿದ ವಿಶೇಷ ಅನುಭವ ದೊರಕಿದೆ. ಮುಂದಿನ ದಿನಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಸ್ಕೌಟ್ಸ್ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವುದರ ಜತೆಗೆ ದಳಗಳನ್ನು ಸ್ಥಾಪಿಸಿ ಅವರಿಗೆ ಮಾಹಿತಿ ನೀಡಬೇಕು ಎಂದರು.
ಶಿಬಿರದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸ್ಕೌಟ್ ಆಯುಕ್ತ ಎಸ್.ಜಿ.ಆನಂದ್ ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳಿಂದ ಆಗಮಿಸಿದ ರೋವರ್ ರೇಂಜರ್‌ಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿ, ಮಕ್ಕಳು ವ್ಯಾಯಾಮ ಪ್ರತಿ ನಿತ್ಯ ಮಾಡಬೇಕು. ಸಕಾರಾತ್ಮಕ ಚಿಂತನೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ರೋವರ್ ವಿಭಾಗದ ಆಯುಕ್ತ ಕೆ.ರವಿ ಮಾತನಾಡಿ, ಮೂರು ದಿನದ ಶಿಬಿರ ಅತ್ಯಂತ ಯಶಸ್ವಿಗೊಳ್ಳಲು ತರಬೇತಿ ಆಯುಕ್ತರು ಪರಿಶ್ರಮ ಹಾಗೂ ಜಿಲ್ಲಾ ಕಚೇರಿ ಪದಾಧಿಕಾರಿಗಳ ಪ್ರಯತ್ನ ಕಾರಣ ಎಂದು ತಿಳಿಸಿದರು.
ತರಬೇತಿ ಆಯುಕ್ತ ಶಿವಶಂಕರ್, ಸಹ ಕಾರ್ಯದರ್ಶಿ ವೈ.ಆರ್.ವೀರೇಶಪ್ಪ, ಲಕ್ಷ್ಮೀ ರವಿ, ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರಯ್ಯ, ಕೇಂದ್ರ ಸ್ಥಾನಿಕ ಆಯುಕ್ತ ರಾಘವೇಂದ್ರ, ಪರಮೇಶ್ವರಯ್ಯ, ಪರಿಮಳಾ, ಅಶೋಕ್, ಶ್ರೇಯಾಂಕ, ಲೋಹಿತ್ ಮತ್ತಿತರರು ಉಪಸ್ಥಿತರಿದ್ದರು.

Rotary Club Shimoga ಪ್ರವಾಸವು ಮಕ್ಕಳಲ್ಲಿ ಒಗ್ಗಟ್ಟು,ಸಹಬಾಳ್ವೆ & ಪರಸ್ಪರ ಸಂತೋಷ,ಸಹಕಾರ ಬೆಳೆಸುತ್ತದೆ- ಜಿ.ಕಿರಣ್ ಕುಮಾರ್

0

Rotary Club Shimoga ಶೈಕ್ಷಣಿಕ ಪ್ರವಾಸವು ಮಕ್ಕಳಿಗೆ ವಿಶೇಷ ಮೌಲ್ಯಗಳನ್ನು ಕಲಿಸುತ್ತದೆ ಎಂದು ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಜಿ.ಕಿರಣ್ ಕುಮಾರ್ ಹೇಳಿದರು.

ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಶಾಲೆಯ ಮಕ್ಕಳಿಗೆ ಶಿಮುಲ್ ಡೈರಿಗೆ ಆಯೋಜಿಸಿದ್ದ ಶೈಕ್ಷಣಿಕ ಕ್ಷೇತ್ರ ಪ್ರವಾಸದಲ್ಲಿ ಮಾತನಾಡಿದರು.

ಮಕ್ಕಳಲ್ಲಿ ಒಗ್ಗಟ್ಟು ಸಹಬಾಳ್ವೆ ಮತ್ತು ಪರಸ್ಪರ ಸಂತೋಷ ಸಹಕಾರ ಹಂಚುವ ಭಾವನೆ ಹೆಚ್ಚುತ್ತದೆ. ಮಕ್ಕಳಿಗೆ ನಿತ್ಯದ ಶಾಲಾ ವಾತಾವರಣದಿಂದ ಹೊರಕರೆತಂದು ಆಕರ್ಷಣೀಯ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡುವುದರಲ್ಲಿ ಸಫಲವಾಗುತ್ತದೆ ಎಂದು ತಿಳಿಸಿದರು.

ರೋಟರಿ ಸಂಸ್ಥೆಯು ನಿರಂತರವಾಗಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದು, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ವಿಶೇಷವಾಗಿ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದೆ. ಉಚಿತ ಆರೋಗ್ಯ ಶಿಬಿರ, ಅರಿವು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಾರ್ಯಾಗಾರಗಳನ್ನು ನಡೆಸಿಕೊಂಡು ಬರುತ್ತಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಪೂರಕವಾದ ತರಬೇತಿ ನೀಡುತ್ತಿದೆ ಎಂದು ತಿಳಿಸಿದರು.

Rotary Club Shimoga ಡಿವಿಎಸ್ ಶಾಲೆಯ 80 ವಿದ್ಯಾರ್ಥಿಗಳು ಭೇಟಿ ನೀಡಿ ಡೈರಿಯಲ್ಲಿ ಉತ್ಪಾದಿಸುವ ವಿವಿಧ ಉತ್ಪನ್ನಗಳ ಬಗ್ಗೆ ಸಮಗ್ರ ಮಾಹಿತಿ ನೀಡಲಾಯಿತು. ಇದರಿಂದ ವಿದ್ಯಾರ್ಥಿಗಳಿಗೆ ಹಾಲಿನ ಉತ್ಪಾದನೆಗಳ ಬಗ್ಗೆ ಅಮೂಲ್ಯ ಜ್ಞಾನ ಪಡೆದರು.

ಶಾಲೆಯ ಮಕ್ಕಳ ಜತೆ ಡಿವಿಎಸ್ ಶಾಲಾ ಶಿಕ್ಷಕರಾದ ಶ್ವೇತಾ, ಸಪ್ನಾ, ವೀಣಾ, ಪ್ರಭಾಕರ್, ಜಯಂತ್ ಅಶೋಕ್ ಹಾಗೂ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಕಾರ್ಯದರ್ಶಿ ಬಿ.ವಿ.ಈಶ್ವರ್, ಸಹ ಕಾರ್ಯದರ್ಶಿ ಜಯಶೀಲ ಶೆಟ್ಟಿ ಹಾಗೂ ಖಜಾಂಚಿ ಬಸವರಾಜ್.ಬಿ ಉಪಸ್ಥಿತರಿದ್ದರು.

Madhu Bangarappa ಬೆಳಗಾವಿಯಲ್ಲಿ ನಡೆಯಲಿರುವ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಸ್ಮರಣೆಯ ಕಾರ್ಯಕ್ರಮಕ್ಕೆ ಪೂವಭಾವಿ ಸಿದ್ಧತೆ

0

ಮಾನ್ಯ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರಾದ ಮಧು ಬಂಗಾರಪ್ಪನವರು ಬೆಳಗಾವಿಯಲ್ಲಿ ನಡೆಯಲಿರುವ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆ ಸಂಬಂಧ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರ ಗೃಹಕಚೇರಿ ಕೃಷ್ಣಾದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ, ಕಾರ್ಯಕ್ರಮದ ಸಿದ್ಧತೆಗಳ ಕುರಿತು ಚರ್ಚಿಸಿದರು.

Madhu Bangarappa ಬಳಿಕ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ “ಗಾಂಧೀ ಭಾರತ” ಶತಮಾನೋತ್ಸವ ಆಚರಣೆ ಅಂಗವಾಗಿ “2025 ನೇ ನೂತನ ವರ್ಷದ ಕ್ಯಾಲೆಂಡರ್ ಹಾಗೂ ಡೈರಿ”ಯನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಹಾಗೂ ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ ಶಿವಕುಮಾರ್ ಸೇರಿದಂತೆ ಅನೇಕ ಸಚಿವರುಗಳೊಂದಿಗೆ ಬಿಡುಗಡೆಗೊಳಿಸಲಾಯಿತು.

ಸಚಿವ ಸಂಪುಟ ಸದಸ್ಯರುಗಳಾದ ಶ್ರೀ ಡಾ.ಜಿ ಪರಮೇಶ್ವರ್, ಶ್ರೀ ಹೆಚ್.ಕೆ ಪಾಟೀಲ್, ಶ್ರೀ ಕೆ.ಜೆ ಜಾರ್ಜ್, ಶ್ರೀ ಪ್ರಿಯಾಂಕ್ ಖರ್ಗೆ, ಶ್ರೀ ಕೆ.ಹೆಚ್ ಮುನಿಯಪ್ಪ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಸಲೀಂ ಅಹ್ಮದ್, ಶ್ರೀ ಕೆ.ಗೋವಿಂದ್ ರಾಜ್, ಶ್ರೀ ಯು.ಬಿ ವೆಂಕಟೇಶ್, ನಜೀರ್ ಅಹಮದ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಚನ್ನಗಿರಿ ತಾಲ್ಲೂಕಿನ ಉಬ್ರಾಣಿ ಹೋಬಳಿಯ ದಿಲೀಪ್ ಕಾಣೆಯಾಗಿದ್ದಾರೆ. ಪೊಲೀಸ್ ಪ್ರಕಟಣೆ

0

ಚನ್ನಗಿರಿಯ ತಾವರೆಕೆರೆ ಗ್ರಾಮ, ಉಬ್ರಾಣಿ ಹೋಬಳಿ ವಾಸಿ ಓಂಕರಪ್ಪ ಎಂಬುವವರ ಮಗ ದಿಲೀಪ್ ಎಂಬ 35 ವರ್ಷದ ವ್ಯಕ್ತಿ ಅ. 14 ರಂದು ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದವರು ಆಸ್ಪತ್ರೆಯಿಂದ ಕಾಣೆಯಾಗಿದ್ದಾರೆ.

ಈ ವ್ಯಕ್ತಿಯ ಚಹರೆ ಸುಮಾರು 5.7ಅಡಿ ಎತ್ತರ, ಎಣ್ಣೆಗೆಂಪು ಮೈ ಬಣ್ಣ, ಸಾದರಣ ಮೈಕಟ್ಟು, ದುಂಡುಮುಖ ಹೊಂದಿದ್ದು, ಕಪ್ಪು ಬಿಳಿ ಕುರುಚಲು ಗಡ್ಡ ಬಿಟ್ಟಿರುತ್ತಾರೆ. ಕಾಣೆಯಾಗುವ ಸಂದರ್ಭದಲ್ಲಿ ನೀಲಿ ಬಣ್ಣದ ತುಂಬ ತೋಳಿನ ಶರ್ಟ್, ಹಸಿರು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ.

ಎಡಕಾಲಿನ ಹೆಬ್ಬೆಟ್ಟು ಅರ್ಧ ತುಂಡಾಗಿರುತ್ತದೆ.
ಈ ಇಬ್ಬರು ವ್ಯಕ್ತಿಗಳ ಸುಳಿವು ಪತ್ತೆಯಾದರೆ ದೊಡ್ಡಪೇಟೆ ಪೋಲಿಸ್ ಠಾಣೆ ಸಂಖ್ಯೆ 08182-261414, 9916882544 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೋಲಿಸ್ ತಿಳಿಸಿದೆ.

Akhila Bharatiya Kannada Sahitya Sammelana ಸಾಹಿತ್ಯ ಸಮ್ಮೇಳನಕ್ಕೆ ಇಷ್ಟೊಂದು ಜನ ಸೇರುವುದು ಅಪರೂಪ. ಸಮ್ಮೇಳನಾಧ್ಯಕ್ಷ ಡಾ.ಗೊರುಚ ಪ್ರಶಂಸೆ

0

Akhila Bharatiya Kannada Sahitya Sammelana 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಮ್ಮೇಳನಾಧ್ಯಕ್ಷರು ಸಾಹಿತ್ಯ, ಸಂಸ್ಕೃತಿ ಸಂಬಂಧ ಸಮಾಜಕ್ಕೆ ದೊರೆತರೆ ವಿಶೇಷ ಪರಿಣಾಮ ಬೀರುತ್ತದೆ.

ಇಲ್ಲಿ ಬಹಳ ಸುಗಮವಾಗಿ ಸಮ್ಮೇಳನ ಜರುಗಿದೆ. ಸಾಹಿತ್ಯ ಕಾರ್ಯಕ್ರಮಕ್ಕೆ ಇಷ್ಟೊಂದು ಜನ ಸೇರುವುದು ಅಪರೂಪ ಎಂದು ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಶ್ರೀ ಗೊ.ರು.ಚನ್ನಬಸಪ್ಪ.
ತಮ್ಮ ಮೆಚ್ಚುಗೆ ನುಡಿಯಾಡಿದ್ದಾರೆ.

Q-Spiders Center for Training and Placement ದಾವಣಗೆರೆಯಲ್ಲಿ ಸಾಫ್ಟ್ ವೇರ್ ಕಂಪನಿ & ತರಬೇತಿ ಹಾಗೂ ಪ್ಲೇಸ್ ಮೆಂಟ್ ಕೇಂದ್ರ ಸ್ಥಾಪನೆಗೆ ಸಂಸದೆ ಪ್ರಯತ್ನ

0

Q-Spiders Center for Training and Placement ಬೆಂಗಳೂರಿನಲ್ಲಿ  ಕ್ಯೂ -ಸ್ಪೈಡರ್ಸ್ (Q-spiders) ಟ್ರೈನಿಂಗ್ ಮತ್ತು ಪ್ಲೇಸ್ಮೆಂಟ್ ನ ಕೇಂದ್ರ ಕಚೇರಿ ಹಾಗೂ ಟೆಸ್ಟ್ ಯಂತ್ರ ಸಾಫ್ಟವೇರ್ ಕಂಪನಿಗೆ  ದಾವಣಗೆರೆ ಸಂಸದೆ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್ ಭೇಟಿ ನೀಡಿದ್ದರು.. ಈ ವೇಳೆ ಯುವ ಸಾಫ್ಟವೇರ್ ಉದ್ಯೋಗಿಗಳನ್ನು ಭೇಟಿ ಮಾಡಿ ಸಂಸ್ಥೆಯ ಸಿಇಓ ಶ್ರೀ ಗಿರೀಶ್ ರಾಮಣ್ಣ ಅವರೊಂದಿಗೆ ದಾವಣಗೆರೆಯಲ್ಲಿ ಸಾಫ್ಟವೇರ್ ಕಂಪನಿ ಹಾಗೂ ಟ್ರೈನಿಂಗ್ ಮತ್ತು ಪ್ಲೇಸ್ಮೆಂಟ್ ಸೆಂಟರ್ ಸ್ಥಾಪನೆಗೆ ಬೇಕಾಗುವ ಮೂಲಭೂತ ಸೌಕರ್ಯಗಳ ಬಗ್ಗೆ ಚರ್ಚೆ ನಡೆಸಿದರು

CM Siddharamaiah ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಬೇಕು ಎಂಬ ಉದ್ದೇಶ ನಮಗೂ ಇದೆ- ಸಿದ್ಧರಾಮಯ್ಯ

0

CM Siddharamaiah ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಬೇಕು ಎನ್ನುವ ಬೇಡಿಕೆ ಬಹಳ ವರ್ಷಗಳಿಂದ ಇದೆ. ಈ ಭಾಗಕ್ಕೆ ಪ್ರತ್ಯೇಕ ಸಚಿವಾಲಯ ರಚಿಸುವ ಉದ್ದೇಶ ನಮ್ಮ ಸರ್ಕಾರಕ್ಕೂ ಇದೆ. ಉತ್ತರ ಕರ್ನಾಟಕ ವಿಮೋಚನಾ ದಿನದಂದೇ ಈ ಬಗ್ಗೆ ಹೇಳಿದ್ದೇವೆ‌ ಎಂದು ಮುಖ್ಯಮಂತ್ರಿಗಳು ತಿಳಸಿದ್ದಾರೆ

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಅವರು ಪ್ರತಿಕ್ರಿಯೆ ನೀಡುತ್ತಾ ಈ ವಿಷಯ ತಿಳಿಸಿದರು

ತೊಗರಿಗೆ ಪ್ರತ್ಯೇಕ ಪ್ಯಾಕೇಜ್ ಘೋಷಿಸಿ ಎನ್ನುವ ಬೇಡಿಕೆ ರೈತರಿಂದ ಇದೆ. ತೊಗರಿ ಬೆಳೆ ಸ್ಥಿತಿಗತಿ ಕುರಿತ ವರದಿ ಕೇಳಿದ್ದೇವೆ. ವರದಿ ಬಂದ ಬಳಿಕ ಆ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.

CM Siddharamaiah ಕಲ್ಯಾಣ ಕರ್ನಾಟಕದ ಆರೋಗ್ಯ ವ್ಯವಸ್ಥೆಯಲ್ಲಿ ಇಂದು ಉದ್ಘಾಟನೆಗೊಳ್ಳಲಿರುವ ಜಯದೇವ ಆಸ್ಪತ್ರೆ ಮಹತ್ವದ್ದು. ರಾಜ್ಯ ಸಭೆ ಪ್ರತಿಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರ ಹೋರಾಟದ ಫಲವಾಗಿ 371J ಜಾರಿಯಾಗಿದೆ. ಇದರ ಸ್ಮರಣಾರ್ಥ 371 ಬೆಡ್ ಗಳ ಆಸ್ಪತ್ರೆಯನ್ನು ಇಂದು ಉದ್ಘಾಟಿಸುತ್ತಿದ್ದೇವೆ.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸಿ.ಟಿ.ರವಿ ಬಳಸಿದ ಪದ ಅತ್ಯಂತ ಅನಾಗರಿಕವಾದದ್ದು. ಇದು ಕ್ರಿಮಿನಲ್ ಅಪರಾಧ. ಬಿಜೆಪಿಯ ರಾಷ್ಟ್ರೀಯ ಪದಾಧಿಕಾರಿ ಆಗಿದ್ದ ರವಿಯಂಥವರ ಬಾಯಲ್ಲಿ ಇಂಥಾ ಮಾತು ನಾಚಿಕೆಗೇಡಿನದ್ದು. ಇತರೆ ವಿಧಾನ ಪರಿಷತ್ ಸದಸ್ಯರು ರವಿ ಆ ಪದ ಬಳಸಿರುವುದನ್ನು ಕೇಳಿಸಿಕೊಂಡಿದ್ದಾರೆ. ರವಿ ಅತ್ಯಂತ ತುಚ್ಚವಾಗಿ ಮಾತಾಡಿರುವುದು ಸತ್ಯ ಎಂದು ಒಪ್ಪಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.

Shivamogga City Corporation ಶಿವಮೊಗ್ಗ ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಸ್.ಎಸ್.ಸತೀಶ್ ನಿಧನ. ಗಣ್ಯರ ಸಂತಾಪ

0

Shivamogga City Corporation ಮಾಜಿ ಸೂಡ ಅಧ್ಯಕ್ಷರಾದ ಎಸ್ ಎಸ್ ಜ್ಯೋತಿ ಪ್ರಕಾಶ್ ಇವರ ಸ್ವಂತ ಸಹೋದರ ಶಿವಮೊಗ್ಗ ಗಾಂಧಿನಗರ ವಾರ್ಡಿನ ಮಾಜಿ ಕಾರ್ಪೊರೇಟರ್ ಹಾಗೂ ಶಿವಮೊಗ್ಗ ಜಿಲ್ಲಾ ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ಹಾಲಿ ಉಪಾಧ್ಯಕ್ಷರಾದ ಮತ್ತು ಕವಿತಾ ಪೆಟ್ರೋಲ್ ಬಂಕ್ ಮಾಲೀಕರು. ಶಿವಮೊಗ್ಗ ಸಿಟಿ ಕ್ಲಬ್ಬಿನ ಸದಸ್ಯರು ಹಾಗೂ ಶಿವಮೊಗ್ಗ ನಗರದ ಹಲವಾರು ಸಂಘಟನೆಗಳಲ್ಲಿ ಅಧ್ಯಕ್ಷರು ಕಾರ್ಯದರ್ಶಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಎಸ್ ಎಸ್ ಸತೀಶ್(61) ಅವರು ಇಂದು ಬೆಳಿಗ್ಗೆ ತೀರ್ವ ಹೃದಯಘಾತದಿಂದ ಅವರ ಗಾಂಧಿನಗರದ ಸ್ವಗೃಹದಲ್ಲಿ ನಿಧನರಾಗಿದ್ದಾರೆ ಇವರಿಗೆ ಎರಡು ಜನ ಹೆಣ್ಣು ಮಕ್ಕಳಿದ್ದು ಇವರ ಇಚ್ಛೆಯಂತೆ ತಮ್ಮ ಎರಡು ಕಣ್ಣುಗಳನ್ನು ಶಂಕರ ನೇತ್ರಾಲಯಕ್ಕೆ ದಾನ ಮಾಡಲಾಯಿತು ಅಪಾರ ಸ್ನೇಹಿತರು ಬಂಧು ಮಿತ್ರರು Shivamogga City Corporation ಕುಟುಂಬ ವರ್ಗದವರನ್ನು ಅಗಲಿದ ಸತೀಶ್ ಅವರ ಆತ್ಮಕ್ಕೆ ಚಿರಶಾಂತಿಯನ್ನು ಶಿವಮೊಗ್ಗ ನಗರದ ಶಾಸಕರಾದ ಎಸ್ ಎಸ್ ಚನ್ನಬಸಪ್ಪ.ಡಾಕ್ಟರ್ ಧನಂಜಯ ಸರ್ಜಿ. ಭದ್ರಾವತಿ ಶಾಸಕ ಸಂಗಮೇಶ್. ಡಿ ಎಸ್ ಅರುಣ್. ಶಿವಮೊಗ್ಗ ಜಿಲ್ಲಾ ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ ವಿಜಯಕುಮಾರ್ ಮತ್ತು ಸಂಘದ ಪದಾಧಿಕಾರಿಗಳು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ. ಜಿಲ್ಲಾ ಅಧ್ಯಕ್ಷ ಎಸ್ಎಂ ರುದ್ರಮುನಿ ಸಜ್ಜನ್ ಪ್ರೊಫೆಸರ್ ಎಎಸ್ ಚಂದ್ರಶೇಖರ್ ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷರೂ ಪದಾಧಿಕಾರಿಗಳು ಶಿವಗಂಗಾ ಯೋಗ ಕೇಂದ್ರದ ಯೋಗಚಾರ್ಯ ಸಿವಿ ರುದ್ರರಾಧ್ಯ ರವರು ಸಂಸದ ಎಂಪಿ ರಾಘವೇಂದ್ರ. ಮಾಜಿ ಶಾಶಕ ಕೆಬಿ ಅಶೋಕ್ ನಾಯಕ್.. ರುದ್ರೇಗೌಡ ತೀರ್ವ ಸಂತಾಪ ಕೋರಿದ್ದಾರೆ.

ಟಿವಿ ರಿಮೋಟ್ ಕೊಡದಿದ್ದಕ್ಕೆ ಬಾಲಕಿ ಆತ್ಮಹತ್ಯೆ

0

ಟಿವಿ ರಿಮೋಟ್ ಕೊಡದಿದ್ದಕ್ಕೆ ಬಾಲಕಿ ಆತ್ಮಹತ್ಯೆ ಇಲಿ ಪಾಷಣ ಸೇವಿಸಿ ಬಾಲಕಿ ಆತ್ಮಹತ್ಯೆಗೆ ಶರಣಾದ ಘಟನೆ ಶಿವಮೊಗ್ಗದ ಸೂಳೇ ಬೈಲಿನಲ್ಲಿ ನಡೆದಿದೆ.

ಭದ್ರಾವತಿ ತಾಲೂಕಿನ ಕಲ್ಲಿಹಾಳ್ ಗ್ರಾಮದ ಸಹನಾ(16)ಎಂಬ ಬಾಲಕಿ ಮೃತ ಪಟ್ಟಿದ್ದಾಳೆ. ಟಿವಿ ರಿಮೋಟ್ ಗಾಗಿ ಮಕ್ಕಳ ನಡುವೆ ಗಲಾಟೆ ನಡೆದಿದ್ದು ಈ ವೇಳೆ ಮೊಮ್ಮಗಳಿಗೆ ಅಜ್ಜಿ ಬೈದಿದ್ದರಂತೆ. ಅಜ್ಜಿ ಬೈದಿದ್ದಕ್ಕೆ ಮನನೊಂದು ಬಾಲಕಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ತಿಳಿದು ಬಂದಿದೆ.

ಈ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Shivamogga Breaking News ಕೌಟುಂಬಿಕ ಕಲಹ.ಪತಿಯಿಂದಲೇ ಪತ್ನಿಯ ಬರ್ಬರ ಕೊಲೆ

0

ಶಿವಮೊಗ್ಗ ನಗರದ ವಾದಿ-ಎ-ಹುದಾ ಬಡಾವಣೆಯಲ್ಲಿ ಪತಿಯಿಂದಲೇ ಪತ್ನಿಯ ಬರ್ಬರಹತ್ಯೆಯಾಗಿರುವ ಘಟನೆ ನಡೆದಿದೆ.

ವಾದಿ-ಎ-ಹುದಾ ಬಡಾವಣೆಯ 5ನೇ ಅರ್ಧ ರಸ್ತೆಯಲ್ಲಿ ವಾಸವಾಗಿದ್ದ ಯೂಸುಫ್ ಎಂಬುವವರು ತಮ್ಮ ಪತ್ನಿ ರುಕ್ಸಾನಾ(38) ಇವರ ಕೊಲೆಗೈದಿದ್ದಾರೆ.
ಕೌಟುಂಬಿಕ ಕಲಹದ ಹಿನ್ನೆಲೆ ಪತ್ನಿ ರುಕ್ಸಾನಾಳನ್ನು ಕೊಂದ ಯೂಸುಫ್ ಮೆಕ್ಯಾನಿಕ್ ಕೆಲಸ ಮಾಡಿಕೊಂಡಿದ್ದರು.
ಆರೋಪಿ ಯೂಸುಫ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಘಟನಾ ಸ್ಥಳಕ್ಕೆತುಂಗಾ ನಗರ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.