Monday, March 16, 2026
Monday, March 16, 2026
Home Blog Page 421

Doddapete Police ಅಪರಿಚಿತ ಮೃತವ್ಯಕ್ತಿಯ ಬಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆ ಪ್ರಕಟಣೆ

0

Doddapete Police ಜ.26 ರಂದು ಶಿವಮೊಗ್ಗ ನಗರದ ಸವರ್‌ಲೈನ್ ರಸ್ತೆಯ ಐಸಿರಿ ಹೋಟೆಲ್ ಹತ್ತಿರದ ಫುಟ್‌ಪಾತ್ ಮೇಲೆ ಸುಮಾರು 50-55 ವರ್ಷ ಗಂಡಸ್ಸು ಪ್ರಜ್ಞೆಯಿಲ್ಲದೆ ಬಿದ್ದಿದ್ದು, ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ಅಂಬ್ಯುಲೆನ್ಸ್ ಮೂಲಕ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ದೃಢಪಡಿಸಿರುತ್ತಾರೆ. ಈ ವ್ಯಕ್ತಿಯ ಹೆಸರು, ವಿಳಾಸ, ವಾರಸ್ಸುದಾರರ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ.

ಮೃತ ವ್ಯಕ್ತಿಯು 5.6 ಅಡಿ ಎತ್ತರ, ಕೋಲುಮುಖ, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದು, ಬಲ ಮಣಿಕಟ್ಟಿನ ಮೇಲ್ಭಾಗದಲ್ಲಿ ರಾಗಿ ಕಾಳು ಗಾತ್ರದ ಕಪ್ಪು ಮಚ್ಚೆ ಇರುತ್ತದೆ. ಎಡ ಮುಂಗೈ ಹೊರಭಾಗದಲ್ಲಿ ಸುಮಾರು ಅರ್ಧ ಇಂಚು ಉದ್ದಗಲದ ಅರ್ಧ ವಾಸಿಯಾಗಿರುವ ರಕ್ತ ಗಾಯದ ಗುರುತು ಇರುತ್ತದೆ.

Doddapete Police ಬಲ ಮುಂಗೈನ ಹೊರಭಾಗದಲ್ಲಿ 3 ರಿಂದ 4 ಇಂಚು ಉದ್ದದ ಹಳೇ ಗಾಯದ ಗುರುತು ಇರುತ್ತದೆ ಹಾಗೂ ಎಡಗಾಲಿನ ಮಂಡಿ ಚಿಪ್ಪಿಗೆ ಹಳೆ ಗಾಯದ ಗುರುತು ಇರುತ್ತದೆ. ಮೈಮೇಲೆ ಬಿಳಿ,ಕಪ್ಪು ಬಣ್ಣದ ಡಿಸೈನ್ ಇರುವ ಪ್ರಿಂಟೆಡ್ ತುಂಬು ತೋಳಿನ ಶರ್ಟ್, ಕಂದು ಬಣ್ಣದ ಚಡ್ಡಿ ಧರಿಸಿರುತ್ತಾರೆ.
ಈ ಮೃತ ವ್ಯಕ್ತಿಯ ವಾರಸ್ಸುದಾರರು ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.:08182-261414, 9916882544 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ತಿಳಿಸಿದೆ.

Republic Day ಕಾನೂನು ಪಾಲಿಸಿದರೆ ದೇಶವನ್ನೇ ಗೌರವಿಸಿದಂತೆ- ಎಸ್.ಎಸ್.ಜ್ಯೋತಿ ಪ್ರಕಾಶ್

0

Republic Day ಶಿವಮೊಗ್ಗ ನಗರದ ರಾಯಲ್ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಿ ವಿದ್ಯಾರ್ಥಿಗಳಿಗೆ ಪೋಷಕರಿಗೆ ಶಿಕ್ಷಕರಿಗೆ ಕಾನೂನುಗಳನ್ನು ನಾವು ಪಾಲಿಸಿದರೆ ಮಾತ್ರ ದೇಶಕ್ಕೆ ಗೌರವಿಸಿದಂತಾಗುತ್ತದೆ ಎಂದು ಶ್ರೀ ಎಸ್. ಎಸ್ ಜ್ಯೋತಿಪ್ರಕಾಶ್ ತಿಳಿಸಿಕೊಟ್ಟರು. ನಮ್ಮ ದೇಶದಲ್ಲಿ ಸಾಕಷ್ಟು ಕಾನೂನುಗಳಿವೆ ಆದರೆ ಸರಿಯಾದ ರೀತಿಯಲ್ಲಿ ಪಾಲನೆಯಾಗುತ್ತಿಲ್ಲ ಯಾವ ದೇಶದಲ್ಲಿ ಕಾನೂನಿಗೆ ಗೌರವಿಸಿ ಕಾನೂನನ್ನು ಪಾಲಿಸುವರೋ ಆದೇಶ ಖಂಡಿತ ಅಭಿವೃದ್ಧಿಯಾಗುವುದರಲ್ಲಿ ಸಂದೇಹವಿಲ್ಲ ಎಂದು ತಿಳಿಸಿದರು. Republic Day ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಕೃಷ್ಣಮೂರ್ತಿ ಆರೋಗ್ಯ ನಿರೀಕ್ಷಕರು ಮಹಾನಗರ ಪಾಲಿಕೆ ಶಿವಮೊಗ್ಗ ಇವರು ಮಾತನಾಡಿ ಪರಿಸರದ ಬಗ್ಗೆ ಜಾಗೃತಿ ಅತ್ಯಂತ ಅವಶ್ಯಕವಾಗಿದೆ ಮಕ್ಕಳು ಪೋಷಕರು ನಾವೆಲ್ಲ ನಮ್ಮ ನಮ್ಮ ಮನೆಯಲ್ಲಿ ಕಸವನ್ನು ವಿಂಗಡಿಸುವುದರ ಮೂಲಕ ಪರಿಸರ ಸಂರಕ್ಷಣೆಯನ್ನು ಮಾಡಬಹುದು ಪ್ಲಾಸ್ಟಿಕ್ ನಿಂದ ಆಗುತ್ತಿರುವ ಸಮಸ್ಯೆಗಳಿಗೆ ನಮ್ಮಲ್ಲಿಯೇ ಪರಿಹಾರವಿದೆ ನಾವು ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿ, ಅದರಿಂದ ಆಗತಕ್ಕಂತಹ ದುಷ್ಪರಿಣಾಮಗಳನ್ನು ತಡೆಯಬಹುದಾಗಿದೆ ಎಂದು ತಿಳಿಸಿದರು. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದಂತಹ ತಯಾರಿ ಕುರಿತು ತಿಳಿಸಿಕೊಟ್ಟರು. ಶಾಲೆಯ ಸಲಹಾ ಸಮಿತಿ ಸದಸ್ಯರಾದ ಡಾ.ನಾಗರಾಜ ಪರಿಸರ ಮಾತನಾಡುತ್ತಾ ಅಂಬೇಡ್ಕರ್ ಅವರ ಆಶಯದಂತೆ ಸಂವಿಧಾನಕ್ಕೆ ಪ್ರತಿಯೊಬ್ಬರು ನಾವು ಗೌರವಿಸಿ ಎಲ್ಲರನ್ನೂ ಪ್ರೀತಿಯಿಂದ ಕಾಣುವಂತಾಗಬೇಕು ನಾವು ಬೇರೆಯವರಿಗೆ ಗೌರವವನ್ನು ನೀಡಿದರೆ ನಮಗೂ ಸಹ ಗೌರವ ಖಂಡಿತ ಮರಳಿ ಬರುತ್ತದೆ ಎಂಬುದನ್ನು ನಾವು ಎಲ್ಲರೂ ತಿಳಿದುಕೊಳ್ಳಬೇಕು ಪ್ರತಿಯೊಬ್ಬರೂ ದೇಶಕ್ಕಾಗಿ ಬದುಕಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಪೂಜಾ ನಾಗರಾಜ್ ಪರಿಸರ, ಶ್ರೀಮತಿ ಸುಧಾ ಜ್ಯೋತಿಪ್ರಕಾಶ್, ಕುಮಾರಿ ವರ್ಷಿಣಿ, ತೇಜಸ್ವಿ ,ಮುಖ್ಯ ಶಿಕ್ಷಕರಾದ ಶ್ರೀ ವಿನಯ್ ಹಾಗೂ ಶಿಕ್ಷಕರು, ಪೋಷಕರು ಭಾಗವಹಿಸಿದ್ದರು.

Madhu Bangarappa ಶಿಕ್ಷಕರು ಮಕ್ಕಳ ಹಾಜರಾತಿ ಬಗ್ಗೆ ಗಮನ ಹರಿಸಿ. ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ದಾರಿ ಮಾಡಿಕೊಡಿ- ಮಧು ಬಂಗಾರಪ್ಪ

0

Madhu Bangarappa ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಬಡ ಕುಟುಂಬಗಳ ಸಹಕಾರಕ್ಕೆ ನಿಂತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ಹೇಳಿದರು.

ಸಾಗರ ತಾಲೂಕು ಕಾನಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನಲೆ ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರೂ.13.90 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶಾಲಾ ಕೊಠಡಿಯನ್ನು ಉದ್ಘಾಟಿಸಿ ಅವರು ಮಾತನಾಡಿ, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಕುಟುಂಬದಲ್ಲಿ ಓರ್ವ ದುಡಿಯುವ ವ್ಯಕ್ತಿ ರೀತಿಯಲ್ಲಿ ಬೆಂಬಲಕ್ಕೆ ನಿಂತಿವೆ ಎಂದರು.

ಮಕ್ಕಳಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ನಮ್ಮ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಒದಗಿಸಿದೆ. ಅದರ ಸದುಪಯೋಗವನ್ನು ಉತ್ತಮ ರೀತಿಯಲ್ಲಿ ಪಡೆದುಕೊಳ್ಳಬೇಕು. ಶಿಕ್ಷಕರು ಮಕ್ಕಳ ಹಾಜರಾತಿ ಬಗ್ಗೆ ಗಮನ ಹರಿಸಿ, ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ದಾರಿ ಮಾಡಿಕೊಡಬೇಕು ಎಂದರು.

Madhu Bangarappa ಮುಂದಿನ ದಿನಗಳಲ್ಲಿ ಅಭಿವೃದ್ದಿ ಕೆಲಸಗಳಿಗೆ ಚುರುಕು ನೀಡಲಾಗುವುದು. ಸಾರ್ವಜನಿಕರ ಭೇಟಿ ಮಾಡಿ ಕುಂದು ಕೊರತೆ ಅಹವಾಲು ಸ್ವೀಕರಿಸಿ, ಸಮಸ್ಯೆಗಳ ಪರಿಹಾರದ ಕಡೆ ಗಮನ ಹರಿಸಲಾಗುವುದು ಹಾಗೂ ಅಗತ್ಯವಿರುವ ಶಾಲೆಗಳಿಗೆ ಹೆಚ್ಚು ಅನುದಾನ ಒದಗಿಲಾಗುವುದು ಎಂದರು.

ಈ ಭಾಗದ ಜನರು ಕಾಗೋಡು ತಿಮ್ಮಪ್ಪ, ಬಂಗಾರಪ್ಪನವರನ್ನು, ಅವರು ಭೂ ಹಕ್ಕು ಕಾಯ್ದೆಗಾಗಿ ಮಾಡಿದ ಹೋರಾಟವನ್ನು ಸ್ಮರಿಸುತ್ತಾರೆ. ಅವರು ಮಾಡಿದ ಕೆಲಸಗಳು ಜೀವಂತವಾಗಿವೆ. ಅದೇ ನಿಟ್ಟಿನಲ್ಲಿ ನಾವು ಕೂಡ ಜನರು ನೆನೆಯುವ, ಜೀವಂತವಾಗಿರುವ ಕೆಲಸಗಳನ್ನು ಮಾಡಬೇಕು ಎಂದರು.

ಈ ವೇಳೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಅನೇಕ ಗಣ್ಯರು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Shivamogga Karnataka Sanga ಕರ್ನಾಟಕ ಸಂಘದ ಪುಸ್ತಕ ಬಹುಮಾನ ಸ್ಪರ್ಧೆ ಪ್ರಕಟಣೆ. ಅವಶ್ಯ ತಿಳಿಯಲೇ ಬೇಕಾದ ಮಾಹಿತಿ

0

Shivamogga Karnataka Sanga ರಾಜ್ಯ ಮತ್ತು ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಣೆಯ ಕೃಪೆಗಾಗಿ ಕರ್ನಾಟಕ ಸಂಘದ ಪುಸ್ತಕ ಬಹುಮಾನಕ್ಕೆ ಕೃತಿಗಳ ಆಹ್ವಾನ. ಪ್ರತಿ ವರ್ಷದಂತೆ ಶಿವಮೊಗ್ಗ ಕರ್ನಾಟಕ ಸಂಘವು 2024ನೆಯ ಸಾಲಿನಲ್ಲಿ ಮೊದಲ ಮುದ್ರಣವಾಗಿ ಪ್ರಕಟವಾದ ಕನ್ನಡ ಪುಸ್ತಕಗಳಿಗೆ ಬಹುಮಾನವನ್ನು ನೀಡಲು ಲೇಖಕರಿಂದ ಮತ್ತು ಪ್ರಕಾಶಕರಿಂದ ಕೆಳಕಂಡ ನಿಯಮಗಳಿಗೆ ಒಳಪಟ್ಟಂತೆ ಕೃತಿಗಳನ್ನು ಆಹ್ವಾನಿಸುತ್ತಿದೆ.

  1. ಮರುಮುದ್ರಣಗೊಂಡ ಕೃತಿಗಳಿಗೆ, ಹಸ್ತ ಪ್ರತಿಗಳಿಗೆ ಮತ್ತು ಸಂಪಾದಿತ ಕೃತಿಗಳಿಗೆ ಅವಕಾಶವಿರುವುದಿಲ್ಲ.

2.ಈ ಹಿಂದೆ ಕರ್ನಾಟಕ ಸಂಘದ ಬಹುಮಾನ ಪಡೆದವರು ಅದೇ ವಿಭಾಗದಲ್ಲಿ ಸ್ಪರ್ಧಿಸುವಂತಿಲ್ಲ, ಇನ್ನಿತರೆ ಯಾವುದೇ ವಿಭಾಗಕ್ಕೆ ಸ್ಪರ್ಧಿಸಬಹುದು.

3.ಕರ್ನಾಟಕ ಸಂಘದ ಸದಸ್ಯರು ಭಾಗವಹಿಸುವಂತಿಲ್ಲ.

4.ಪುಸ್ತಕ ಬಹುಮಾನಕ್ಕೆ ಪುಸ್ತಕದ ಒಟ್ಟು 04 ಪ್ರತಿಗಳನ್ನು ಕಳುಹಿಸಬೇಕು/ ಬಹುಮಾನಕ್ಕೆ ಕಳುಹಿಸಿದ ಪುಸ್ತಕಗಳನ್ನು ಹಿಂದಿರುಗಿಸಲಾಗುವುದಿಲ್ಲ.

5.ಅಂಕಣ ಬರಹಗಳು ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಬಗ್ಗೆ ಕಡ್ಡಾಯವಾಗಿ ದಾಖಲೆ ನೀಡಬೇಕು.

6.ಬರಹಗಾರರು/ ಪ್ರಕಾಶಕರು- ಪತ್ರದ ಮುಖೇನ ಸ್ವವಿವರ / ವಿಳಾಸ / ಮೊಬೈಲ್ ನಂ. ಮತ್ತು ಯಾವ ಪ್ರಕಾರಕ್ಕೆ ಸಲ್ಲಿಸುತ್ತಿರುವುದು ಎಂಬ ಬಗ್ಗೆ ಲಿಖಿತವಾಗಿ / ಮುದ್ರಿಸಿ ವಿವರವನ್ನು ಕಳುಹಿಸಬೇಕು.

7.ಒಂದು ಪ್ರಕಾರಕ್ಕೆ ಕನಿಷ್ಠ ೦೫ ಕೃತಿಗಳು ಬರದಿದ್ದರೆ ಬಹುಮಾನಕ್ಕೆ ಪರಿಗಣಿಸಲಾಗುವುದಿಲ್ಲ.

8.ವಿವಿಧ ಪ್ರಕಾರಕ್ಕೆ ಪುಸ್ತಕ ಕಳಿಸಿದಲ್ಲಿ ಒಂದೊಂದು ಪ್ರಕಾರಕ್ಕೂ 04 ಪುಸ್ತಕಗಳು ಪ್ರತ್ಯೇಕವಾಗಿರಬೇಕು.

ಪ್ರಕಾರ

ಇವರ ಹೆಸರಿನ ಬಹುಮಾನ

1.ಕಾದಂಬರಿ

ಕುವೆಂಪು

2.ಅನುವಾದ

.ಪ್ರೊ. ಎಸ್.ವಿ. ಪರಮೇಶ್ವರ ಭಟ್ಟ

3. ಮಹಿಳಾ ಸಾಹಿತ್ಯ

.ಶ್ರೀಮತಿ ಎಂ.ಕೆ. ಇಂದಿರಾ

4.ಮುಸ್ಲಿಂ ಬರಹಗಾರರು

ಶ್ರೀ ಪಿ. ಲಂಕೇಶ್

5.ಕವನ ಸಂಕಲನ

ಡಾ. ಜಿ. ಎಸ್. ಶಿವರುದ್ರಪ್ಪ

6.ಅಂಕಣ ಬರಹಗಾರರು

ಡಾ. ಹಾ. ಮಾ. ನಾಯಕ

7.ಸಣ್ಣ ಕಥಾ ಸಂಕಲನ

ಡಾ. ಯು. ಆರ್. ಅನಂತಮೂರ್ತಿ

8. ನಾಟಕ

ಡಾ. ಕೆ. ವಿ. ಸುಬ್ಬಣ್ಣ

9.ಪ್ರವಾಸ ಸಾಹಿತ್ಯ

ಶ್ರೀ ಕುಕ್ಕೆ ಸುಬ್ರಹ್ಮಣ್ಯ ಶಾಸ್ತಿç

10.ವಿಜ್ಞಾನ ಸಾಹಿತ್ಯ

ಶ್ರೀ ಹಸೂಡಿ ವೆಂಕಟಶಾಸ್ತಿç

11.ಮಕ್ಕಳ ಸಾಹಿತ್ಯ

ಡಾ. ನಾ. ಡಿಸೋಜ

12..ವೈದ್ಯ ಸಾಹಿತ್ಯ

ಡಾ. ಹೆಚ್. ಡಿ. ಚಂದ್ರಪ್ಪಗೌಡ

ಮೇಲ್ಕಂಡ ಪ್ರಕಾರಗಳ ಸಾಹಿತ್ಯ ಕೃತಿಗಳ ೦೪ (ನಾಲ್ಕು) ಪ್ರತಿಗಳನ್ನು ಸಲ್ಲಿಸಲು ದಿ: 25-03-2025 ರವರೆಗೆ ಕಾಲಾವಕಾಶವಿರುತ್ತದೆ, ನಂತರ ಬಂದ ಕೃತಿಗಳನ್ನು ಪರಿಗಣಿಸಲಾಗುವುದಿಲ್ಲ.

ಪುಸ್ತಕಗಳನ್ನು ಕಾರ್ಯದರ್ಶಿ, ಕರ್ನಾಟಕ ಸಂಘ, ಬಿ.ಹೆಚ್.ರಸ್ತೆ, ಶಿವಮೊಗ್ಗ-೫೭೭೨೦೧ ಇವರಿಗೆ ಅಂಚೆ/ಕೊರಿಯರ್ ಮೂಲಕ ಅಥವಾ ಖುದ್ದಾಗಿ ಸಲ್ಲಿಸಬೇಕು.

ಅತ್ಯುತ್ತಮವೆಂದು ಆಯ್ಕೆ ಆದ ಕೃತಿಗಳಿಗೆ ರೂ: 10,000- (ಹತ್ತು ಸಾವಿರ) ನಗದು ಬಹುಮಾನ ಮತ್ತು ಫಲಕವನ್ನು ನೀಡಿ ಗೌರವಿಸಲಾಗುವುದು. ಹೆಚ್ಚಿನ ವಿವರಗಳಿಗೆ ಕರ್ನಾಟಕ ಸಂಘದ ಕಛೇರಿಯನ್ನು ಸಂಪರ್ಕಿಸಲು ಕೋರಲಾಗಿದೆ. ಸಂಪರ್ಕ ಸಂಖ್ಯೆ : 9980159696 / 8310876277

Department of Animal Husbandry and Fisheries ಕೋಳಿ/ಜಾನುವಾರು ಆಹಾರ ತಯಾರಿಕಾ ಘಟಕಗಳು & ಮಾರಾಟಗಾರರಿಗೆ ಲೈಸನ್ಸ್ ಕಡ್ಡಾಯ

0

Department of Animal Husbandry and Fisheries ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಕರ್ನಾಟಕ ಕುಕ್ಕುಟ, ಜಾನುವಾರು ಆಹಾರ (ತಯಾರಿಕೆ ಮತ್ತು ಮಾರಾಟ ನಿಯಂತ್ರಣ) ಆಜ್ಞೆ 1987 ರ ಪ್ರಕಾರ ಕುಕ್ಕುಟ (ಕೋಳಿ) ಮತ್ತು ಜಾನುವಾರು (ಪಶು) ಆಹಾರ ತಯಾರಿಕಾ ಘಟಕಗಳು ಮತ್ತು ಮಾರಾಟ ಮಾಡುವ ಅಂಗಡಿ ಹಾಗೂ ಸಂಘ ಸಂಸ್ಥೆಗಳು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಕುಕ್ಕುಟ/ಪಶು ಆಹಾರ ಉತ್ಪಾದಿಸಲು ಮತ್ತು ಮಾರಾಟ ಮಾಡಲು ಪರವಾನಗಿ (ಲೈಸೆನ್ಸ್) ಪಡೆಯುವುದು ಕಡ್ಡಾಯವಾಗಿದೆ.
ಈಗಾಗಲೆ ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ಮತ್ತು ಸ್ಥಳೀಯವಾಗಿ ಕೈಗಾರಿಕಾ ಇಲಾಖೆಯಿಂದ ಪರವಾನಗಿ ಪಡೆದಿದ್ದರೂ ಕೂಡ ಸರ್ಕಾರದ ಮೇಲ್ಕಾಣಿಸಿದ ಆಜ್ಞೆಯ ಪ್ರಕಾರ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ. ಮತ್ತು ಈ ರೀತಿ ಪಡೆದ ಪರವಾನಗಿಯು ಪ್ರತಿ ವರ್ಷ ಡಿಸೆಂಬರ್-31 ಕ್ಕೆ ಮುಕ್ತಾಯವಾಗುವುದರಿಂದ ನವೀಕರಣವನ್ನು 2025 ರ ಜನವರಿ 01 ರಿಂದ ಪಡೆಯಬೇಕಾಗಿರುತ್ತದೆ.
Department of Animal Husbandry and Fisheries ಪ್ರಸ್ತುತ ವರ್ಷ 2025ನೇ ಸಾಲಿಗೆ ಕುಕ್ಕುಟ ಮತ್ತು ಜಾನುವಾರು ಆಹಾರ ಉತ್ಪಾದಕರು ಮತ್ತು ಮಾರಾಟಗಾರರು ನೂತನ ಪರವಾನಗಿ ಪಡೆಯಲು ಮತ್ತು ನವೀಕರಿಸಲು ಸೇವಾ ಸಿಂಧು ಪೋರ್ಟಲ್ sevasindhusevices.karnataka.gov.in ಮೂಲಕ ಆನ್‌ಲೈನ್‌ನಲ್ಲಿ ಸೂಕ್ತ ದಾಖಲಾತಿಗಳನ್ನು ಅಪ್‌ಲೋಡ್ ಮಾಡಿ ಪರವಾನಗಿ ಪಡೆಯಲು ಕೋರಲಾಗಿದೆ.
ಪರವಾನಗಿ ಪಡೆಯದೇ ಇದ್ದಲ್ಲಿ, ಅಂತಹ ಕುಕ್ಕುಟ ಮತ್ತು ಜಾನುವಾರು ಆಹಾರ ಉತ್ಪಾದಕರು ಮತ್ತು ಮಾರಾಟಗಾರರ ಮೇಲೆ, (ಉತ್ಪಾದನೆ ಮತ್ತು ಮಾರಾಟ ನಿಯಂತ್ರಣ) ಆಜ್ಞೆ 1987 ರ ಕಂಡಿಕೆ 8, 9(1) ಹಾಗೂ 1!(1)(ಸಿ) ಪ್ರಕಾರ ಕ್ರಮಕೈಗೊಳ್ಳಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಮೀಪದ ಪಶುಪಾಲನಾ ಇಲಾಖೆಯ ಸಂಸ್ಥೆಗಳನ್ನು ಸಂಪರ್ಕಿಸಬಹುದೆAದು ಜಿಲ್ಲಾ ಪಶು ಆಸ್ಪತ್ರೆ, ಪಾಲಿಕ್ಲಿನಿಕ್‌ನ ಪರವಾನಗಿ ಪ್ರಾಧಿಕಾರ ಮತ್ತು ಉಪನಿರ್ದೇಶಕರು ತಿಳಿಸಿದ್ದಾರೆ.

CM Siddharamaiah ಡಾ.ಶಿವರಾಜ್ ಕುಮಾರ್ ಅವರನ್ನ ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದ ಸಿಎಂ ಸಿದ್ಧರಾಮಯ್ಯ

0

CM Siddharamaiah ಮುಖ್ಯಮಂತ್ರಿ ಸಿದ್ಧರಾಮಯ್ಯನವರು ವಿದೇಶದಲ್ಲಿ ಕ್ಯಾನ್ಸರ್ ಗೆ ಶಸ್ತ್ರಚಿಕಿತ್ಸೆಗೆ ಪಡೆದು ಗುಣಮುಖರಾಗಿ ಬಂದಿರುವ ಚಿತ್ರರಂಗದ ಖ್ಯಾತ ನಟ, ಆತ್ಮೀಯರು ಆದ ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗಿ, ಆರೋಗ್ಯ ವಿಚಾರಿಸಿದರು.

CM Siddharamaiah ಶಿವರಾಜ್ ಕುಮಾರ್ ಅವರು ಮತ್ತೆ ಹಿಂದಿನಂತೆ ಕ್ರಿಯಾಶೀಲರಾಗಿರುವುದು ಕಂಡು ಖುಷಿಯಾಗಿದೆ
ಅಭಿಮಾನಿಗಳ ಹರಕೆ – ಹಾರೈಕೆ, ಆತ್ಮಬಲದಿಂದ ಅನಾರೋಗ್ಯವನ್ನು ಗೆದ್ದು ಬಂದಿರುವ ಶಿವರಾಜ್ ಕುಮಾರ್ ಅವರ ಮುಂದಿನ ಜೀವನ ಸುಖ – ಶಾಂತಿಯಿಂದ ಕೂಡಿರಲಿ‌ ಎಂದು ಮುಖ್ಯಮಂತ್ರಿಗಳು ಹಾರೈಸಿದರು.

DIPR Karnataka ಲಕ್ಕುಂಡಿ ಶಿಲ್ಪಕಲೆಯ ತೊಟ್ಟಿಲು”ಸ್ಥಬ್ಧ ಚಿತ್ರಕ್ಕೆ ಆನ್ ಲೈನ್ ವೋಟಿಂಗ್ ಮಾಡಲು ಅವಕಾಶ

0

DIPR Karnataka ದೆಹಲಿಯಲ್ಲಿ ಜನವರಿ 26 ರಂದು ನಡೆದ 76ನೇ ಗಣರಾಜ್ಯೋತ್ಸವದ ಅಂಗವಾಗಿ ಪಥ ಸಂಚಲನದಲ್ಲಿ ಭಾಗವಹಿಸಿದ್ದ ವಿವಿಧ ರಾಜ್ಯಗಳ ಸ್ತಬ್ಧಚಿತ್ರಗಳನ್ನು ಜನಾಭಿಪ್ರಾಯ ಆಧರಿಸಿ ಪ್ರಶಸ್ತಿಗೆ ಪರಿಗಣಿಸಲು ಕೇಂದ್ರ ಸರ್ಕಾರದ ರಕ್ಷಣಾ ಸಚಿವಾಲಯವು ಆನ್ಲೈನ್ ನಲ್ಲಿ ಓಟ್ ಮಾಡಲು ಅವಕಾಶ ಕಲ್ಪಿಸಿದೆ. ಈ ಬಾರಿ ಕರ್ನಾಟಕವು ‘ಲಕ್ಕುಂಡಿ: ಶಿಲ್ಪಕಲೆಯ ತೊಟ್ಟಿಲುʼ ಸ್ತಬ್ಧಚಿತ್ರದೊಂದಿಗೆ ಭಾಗವಹಿಸಿತ್ತು.

ಅಪಾರ ಜನರ ಮೆಚ್ಚುಗೆಗೆ ಪಾತ್ರವಾಗಿರುವ ನಮ್ಮ ರಾಜ್ಯದ ಸ್ತಬ್ಧಚಿತ್ರವನ್ನು ಓಟ್ ಮಾಡಿ ಬೆಂಬಲಿಸುವಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹೇಮಂತ್ ಎಂ. ನಿಂಬಾಳ್ಕರ್ ಅವರು ಮನವಿ ಮಾಡಿದ್ದಾರೆ.

DIPR Karnataka ಕೇಂದ್ರ ಸರ್ಕಾರವು ಅತ್ಯುತ್ತಮ ಸ್ತಬ್ಧಚಿತ್ರದ ಆಯ್ಕೆಗಾಗಿ ಸಾರ್ವಜನಿಕರು ಆನ್ ಲೈನ್, ಇಮೇಲ್ ಮತ್ತು ಎಸ್ಎಂಎಸ್ ಮೂಲಕ ಓಟ್ ಮಾಡಲು ಅವಕಾಶ ಕಲ್ಪಿಸಿದೆ. ಜನವರಿ 28ರ ಮಧ್ಯರಾತ್ರಿ 12ರ ವರೆಗೆ ಓಟ್ ಮಾಡಲು ಅವಕಾಶವಿದೆ. ಸಾರ್ವಜನಿಕರು ನಿಗದಿತ ಅವಧಿಯೊಳಗೆ ಓಟ್ ಮಾಡಿ ರಾಜ್ಯದ ಸ್ತಬ್ಧಚಿತ್ರವನ್ನು ಬೆಂಬಲಿಸುವಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಓಟ್ ಮಾಡುವ ವಿಧಾನದ ಬಗ್ಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕಿರುಚಿತ್ರವನ್ನು ಸಹ ಬಿಡುಗಡೆಗೊಳಿಸಿದೆ. ಇದನ್ನು ಅನುಸರಿಸಿ, Lakkundi Cradle of stone Craft ವಿಷಯದ ಸ್ತಬ್ಧಚಿತ್ರಕ್ಕೆ ಹೆಚ್ಚು ಹೆಚ್ಚು ಓಟ್ ಮಾಡುವ ಮೂಲಕ ಬೆಂಬಲ ಹಾಗೂ ಮೆಚ್ಚುಗೆ ಸೂಚಿಸಬೇಕೆಂದೂ ಎಂದು ಅವರು ಕೋರಿದ್ದಾರೆ.

https://www.mygov.in/group-poll/vote-your-favourite-tableau-and-marching-contingent-republic-day-parade-2025/ ಕೊಂಡಿಯನ್ನು ಕ್ಲಿಕ್ ಮಾಡಿ, Login to participate ಮೇಲೆ ಕ್ಲಿಕ್ ಮಾಡಿ, ತಮ್ಮ ನೋಂದಾಯಿತ ಮೊಬೈಲ್ ನಂಬರ್ ಅಥವಾ ಇಮೇಲ್ ವಿವರ ನಮೂದಿಸಿ, ತಾವು ಸ್ವೀಕರಿಸುವ ಒಟಿಪಿ ನಮೂದಿಸಿ, ನಂತರ Resend. OTP/ Submitted ಇದರಲ್ಲಿ submitt ಕ್ಲಿಕ್ ಮಾಡಿ, ಎಲ್ಲಾ ಸ್ತಬ್ಧಚಿತ್ರಗಳ ಮಾಹಿತಿ ಕಾಣುತ್ತದೆ.Lakkundi : cradle of stone craft ಕ್ಲಿಕ್ ಮಾಡಿ ತಮ್ಮ ಮತವನ್ನು ದಾಖಲಿಸಬಹುದು.

ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ MYGOVPOLL 357037,12 ಟೈಫ್ ಮಾಡಿ 7738299899 ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಮೂಲಕ ಓಟ ಮಾಡಬಹುದಾಗಿದೆ.

RM Manjunatha Gowda ಮಲೆನಾಡು ಅಭಿವೃದ್ಧಿ ಮಂಡಳಿಯ ಬಾಕಿ ಕಾಮಗಾರಿಗಳು‌ ಮಾರ್ಚ್ ಒಳಗೆ ಶೀಘ್ರ ಪೂರ್ಣಗೊಳ್ಳಬೇಕಿದೆ- ಆರ್.ಎಂ.ಮಂಜುನಾಥ ಗೌಡ

0

RM Manjunatha ಕಳೆದ ಸಾಲಿನಲ್ಲಿ ಮಂಡಳಿ ವತಿಯಿಂದ ಮಂಜೂರಾಗಿರುವ ಕಾಮಗಾರಿಗಳನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಬೇಕಿದೆ ಎಂದು ಮಲೆನಾಡು ಪ್ರದೇಶ ಅಭಿವೃದ್ದಿ ಮಂಡಳಿ ಅಧ್ಯಕ್ಷರಾದ ಆರ್.ಎಂ.ಮಂಜುನಾಥ ಗೌಡ ಹೇಳಿದರು.
ಇತ್ತೀಚೆಗೆ ಮಲೆನಾಡು ಪ್ರದೇಶ ಅಭಿವೃದ್ದಿ ಮಂಡಳಿ ಕಚೇರಿಯಲ್ಲಿ ಮಲೆನಾಡು ಪ್ರದೇಶ ಅಭಿವೃದ್ದಿ ಮಂಡಳಿಯ 2025-26ನೇ ಸಾಲಿನ ಹೊಸ ದಿನಚರಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಕಳೆದ ಸಾಲಿನಲ್ಲಿ ಮಂಜೂರಾದ 954 ಕಾಮಗಾರಿಗಳ ಪೈಕಿ 335 ಕಾಮಗಾರಿಗಳು ಪೂರ್ಣಗೊಂಡಿವೆ. ಪೂರ್ಣಗೊಂಡ ಕೆಲವು ಕಾಮಗಾರಿಗಳಿಗೆ ಪಾವತಿಯೂ ಆಗಿದೆ. 282 ಕಾಮಗಾರಿಗಳಿಗೆ ಅನುಮೋದನೆ ನೀಡಿ ಏಜೆನ್ಸಿ ನಿಗದಿಗೊಳಿಸಲಾಗಿದೆ. ಮಾರ್ಚ್ ಒಳಗೆ ಬಾಕಿ ಉಳಿದ ಕಾಮಗಾರಿಗಳು ಪೂರ್ಣಗೊಳ್ಳಬೇಕಿದೆ. ಮಂಡಳಿಯಲ್ಲಿ ಸುಮಾರು ರೂ. 60 ರಿಂದ 70 ಕೋಟಿ ಅನುದಾನವೂ ಇದೆ. ಕಾಮಗಾರಿಗಳು ಶೀಘ್ರವಾಗಿ ಪೂರ್ಣಗೊಳ್ಳಬೇಕಿದೆ. ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವ ಸಂಬಂಧ ಶಾಸಕರಿಗೆ ಪತ್ರ ಬರೆಯಲಾಗಿದೆ ಎಂದರು.
RM Manjunatha ಜಿಲ್ಲೆಯಲ್ಲಿ ಮಂಡಳಿ ವತಿಯಿಂದ ಕಾಲುಸಂಕಗಳು, ಪೆವಿಲಿಯನ್, ಕುಂದಾದ್ರಿ ಬೆಟ್ಟದ ಬಳಿ, ಹುಂಚದಲ್ಲಿ ರಸ್ತೆ ಕಾಮಗಾರಿಗಳು ಸೇರಿದಂತೆ ಸುಮಾರು 1200 ಕಾಮಗಾರಿಗಳು ಪ್ರಗತಿಯಲ್ಲಿವೆ. ಕಾಮಗಾರಿಗಳ ವೀಕ್ಷಣೆಗೆ ಜಿಲ್ಲಾ ಪ್ರವಾಸ ಕೈಗೊಳ್ಳಲಾಗುವುದು.
ಜಿಲ್ಲೆಯಲ್ಲಿ ಕಾಲುಸಂಕ, ಸೇತುವೆ ಮತ್ತು ಇತರೆ ಕಾಮಗಾರಿಗಳಿಗೆ ರೂ.200 ಕೋಟಿ ನಬಾರ್ಡ್ ಅನುದಾನಕ್ಕೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಮಂಜೂರಾದಲ್ಲಿ ಮುಂದಿನ ವರ್ಷದಿಂದ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು. ಹಾಗೂ ಈ ಬಾರಿ ಪ್ರತಿ ಶಾಸಕರಿಗೆ ಮಂಡಳಿಯಿAದ ತಲಾ ರೂ.1 ಕೋಟಿ ಅನುದಾನ ನೀಡುವಂತೆ ಕೋರಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ಎಸ್.ಕೆ.ಮರಿಯಪ್ಪ, ಮಂಡಳಿ ಕಾರ್ಯದರ್ಶಿಗಳಾದ ಮೊಹಮ್ಮದ್ ನಜೀರ್, ಅಧೀನ ಕಾರ್ಯದರ್ಶಿ ಹನುಮಾನಾಯ್ಕ್, ಉಪ ನಿರ್ದೇಶಕ ಶಿವಾನಂದ ಕುದ್ರಿ, ಕಾರ್ಯಪಾಲಕ ಅಭಿಯಂತರ ವಿಜಯಕುಮಾರ್ ಹಾಜರಿದ್ದರು.

Shimoga Yakshagana ಫೆಬ್ರವರಿ 22 ರಿಂದ ಶಂಭುಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ – ಶಿವಾನಂದ‌‌ ಹೆಗಡೆ

0

Shimoga Yakshagana “ಕೋವಿಡ್ ನಂತರದ ಕಾಲಾವಧಿಯಲ್ಲಿ‌ ಯಕ್ಷಗಾನ ಕಲಾಕೇಂದ್ರ ಆರ್ಥಿಕ ಸಂಕಷ್ಟದಿಂದ ಮುಂಚಿನಂತೆ ಕ್ರಿಯಾಶೀಲವಾಗಲಿಲ್ಲ. ಆದರೂ‌ ಪ್ರೋತ್ಸಾಹಕರು,‌ದಾನಿಗಳು ,ಆತ್ಮೀಯರಿಂದ‌ ಕೆರೆಮನೆ ಶಂಭುಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ‌‌ ವರ್ಷದಿಂದ‌ ವರ್ಷಕ್ಕೆ
ಹೊಸ ಮೆರುಗು ಪಡೆಯುತ್ತಿದೆ.
ಇಡಗುಂಜಿಯ ಮಹಾಗಣಪತಿ ಯಕ್ಷಗಾನ ಮಂಡಳಿಗೆ ಪ್ರಸ್ತುತ
ಯುನೆಸ್ಕೊ ಮಾನ್ಯತೆ ಲಭಿಸಿದೆ. ಈ ಯಶಸ್ಸಿಗೆ ಕೆರೆಮನೆ ಕುಟುಂಬದ ಹಿರಯರು ಮಂಡಳಿಯ ಕಲಾವಿದರು ಹಾಗೂ‌‌ ಯಕ್ಷಗಾನ ಪ್ರೇಮಿಗಳ ಸಂಘಟಿತ ಪ್ರಯತ್ನವೇ ಕಾರಣ ” ಎಂದು ಮಂಡಳಿಯ ನಿರ್ದೇಶಕ ಶಿವಾನಂದ ಹೆಗಡೆ ಹೇಳಿದರು.

Shimoga Yakshagana ಶಿವಮೊಗ್ಗದ ಅಭ್ಯುದಯ‌ ಮತ್ತು ಶ್ರೀಮಯ 90. ಸಾರಥಿಗಳ‌ ಆಶ್ರಯದಲ್ಲಿ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ‌ ಹೆಗಡೆ ಮಾತನಾಡುತ್ತಿದ್ದರು.
ನಮ್ಮ ಹಿರಿಯರು
ಕೇವಲ ಹನ್ನೆರಡು ರೂಪಾಯಿಗಳಿಂದ ಮಂಡಳಿಯನ್ನ ಆರಂಭ ಮಾಡಿದ್ದರು.
ಆದರೆ ಹಣಕ್ಕೆ ‌ಪ್ರಧಾನ್ಯತೆ ಕೊಡದೇ ಕಲೆಗೆ ಪ್ರಾಮುಖ್ಯತೆ ನೀಡಿದ್ದರಿಂದ‌ ಮಂಡಳಿ‌ ಇಂದಿನ ಹಂತ ಮುಟ್ಟಿದೆ. ತೊಂಭತ್ತು ವಸಂತಗಳನ್ಮ ಸಾರ್ಥಕತೆ‌‌ ದಕ್ಕಿದೆ.
ಸಂಕಷ್ಟದ ದಿನಗಳಲ್ಲಿ‌‌ ಶಿವಮೊಗ್ಗದ ‌ಯಕ್ಷಗಾನ ಪ್ರೇಮಿಗಳು,ಆಪ್ತರು‌
ಕಲೆಗೆ ನೀರೆರೆದು ಪೋಷಿಸಿದರು.
ಇಂತಹ ಕಲಾಸಂಘಟನೆ ತೊಂಭತ್ತು ವರ್ಷದ ಹರ್ಷದಲ್ಲಿದೆ. ಫೆಬ್ರವರಿ 22 ರಿಂದ‌ ಮಾರ್ಚ್ 2 ರವರೆಗೆ ‌ನಡೆಯಲಿರುವ ‌ಶಂಭುಹೆಗಡೆ ರಾಷ್ಡ್ರೀಯ ನಾಟ್ಯೋತ್ಸವಕ್ಕೆ‌‌ ಎಲ್ಲರೂ ಬನ್ನಿ‌ ಎಂದು
ಶಿವಾನಂದ ಹೆಗಡೆ ತಮ್ಮ ಸನ್ಮಾನಕ್ಕೆ ಉತ್ತರಿಸಿ ಮಾತನಾಡಿದರು.

ಅಭ್ಯುದಯ ಸಂಸ್ಥೆಯ ಲಕ್ಷ್ಮೀನಾರಾಯಣ ಕಾಶಿ ಎಲ್ಲರಿಗೂ ಸ್ವಾಗತ ಕೋರಿದರು.
ಡಾ.ರತ್ನಾಕರ್ ಶಿವಾನಂದ ಹೆಗಡೆ ಅವರನ್ನು ಆತ್ಮೀಯವಾಗಿ ಪರಿಚಯಿಸಿದರು.
ಸಂಘಟಕರಾದ ಬಾಬಣ್ಣ, ಡಾ.ಕೃಷ್ಣ ಎಸ್ ಭಟ್, ಡಾ.ಸಂಜಯ್, ಐತಾಳ್, ರಾಮಚಂದ್ರ,ಮುಂತಾದವರು‌ ಉಪಸ್ಥಿತರಿದ್ದರು.
ವಿಶೇಷ ಆಕರ್ಷಣೆಯಾಗಿ ಇಡಗುಂಜಿ ಮೇಳದವರಿಂದ
“ಸೀತಾಪಹರಣ” ಪ್ರಸಂಗದ ಪ್ರದರ್ಶನ ಏರ್ಪಡಿಸಲಾಗಿತ್ತು.

ABVP Shimoga ಜನವರಿ‌ 31 ರಿಂದ ಫೆಬ್ರವರಿ 2. ಶಿವಮೊಗ್ಗದಲ್ಲಿ ವಿದ್ಯಾರ್ಥಿ ಪರಿಷತ್44ನೇ ಪ್ರಾಂತೀಯ ಸಮ್ಮೇಳನ

0

ABVP Shimoga ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಂಘಟನೆಯ 44ನೇ ಪ್ರಾಂತ ಸಮ್ಮೇಳನ ಜನವರಿ 31 ರಿಂದ ಫೆಬ್ರುವರಿ 2 ರವರೆಗೆ ಮೂರು ದಿನಗಳ ಕಾಲ ಶಿವಮೊಗ್ಗದಲ್ಲಿ ನಡೆಯಲಿದೆ.
ನಗರದ ಅಲ್ಲಮ ಪ್ರಭು ಮೈದಾನದಲ್ಲಿ
ಬೃಹತ್ ವೇದಿಕೆ ನಿರ್ಮಾಣವಾಗಲಿದೆ.
ವೇದಿಕೆ ನಿರ್ಮಾಣದ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಶಾಸಕ ಚನ್ನಬಸಪ್ಪ ಪಾಲ್ಗೊಂಡಿದ್ದರು.

ಈ ಸಂಧರ್ಭದಲ್ಲಿ ಸಂಘ-ಪರಿವಾರದ ಪ್ರಮುಖರು, ಸಂಸದರು, ಶಾಸಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.