Monday, March 16, 2026
Monday, March 16, 2026
Home Blog Page 420

Rotary Shimoga ವೃತ್ತಿಯಾವುದೇ ಇರಲಿ.ನಿಷ್ಠೆ & ಪ್ರಾಮಾಣಿಕ ಸೇವೆಗೈದಾಗ ಸಾರ್ಥಕತೆ- ಕೆ.ಬಿ.ಅಶೋಕ ನಾಯ್ಕ್

0

Rotary Shimoga ವೃತ್ತಿ ಯಾವುದೇ ಇರಲಿ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಮಾಡಿದಾಗ ಸಾರ್ಥಕತೆ ದೊರೆಯುತ್ತದೆ ಎಂದು ಮಾಜಿ ಶಾಸಕ ಅಶೋಕ್ ನಾಯ್ಕ್ ಹೇಳಿದರು.

ವೃತ್ತಿಯಲ್ಲಿ ಸಾರ್ಥಕ ಸೇವೆ ಸಲ್ಲಿಸಿದ 13 ಜನರಿಗೆ ರೋಟರಿ ಶಿವಮೊಗ್ಗ ಸೆಂಟ್ರಲ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವೃತ್ತಿ ಸೇವಾ ಪ್ರಶಸ್ತಿ ಪ್ರದಾನ ನೀಡಿ ಮಾತನಾಡಿ, ರೋಟರಿ ಸಂಸ್ಥೆ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವುದು ಉತ್ತಮ ಕಾರ್ಯ. ಇದರಿಂದ ಇತರರಿಗೂ ಪ್ರೇರಣೆ ಸಿಗುತ್ತದೆ ಎಂದು ತಿಳಿಸಿದರು.

ನಿಯೋಜಿತ ಜಿಲ್ಲಾ ಗವರ್ನರ್ ವಸಂತ ಹೋಬಳಿದಾರ್ ಮಾತನಾಡಿ, ಜನವರಿ ತಿಂಗಳಲ್ಲಿ ಪ್ರಪಂಚಾದ್ಯಂತ ರೋಟರಿ ಸಂಸ್ಥೆಗಳು ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಗೌರವಿಸುತ್ತೇವೆ. ಅಂತರಾಷ್ಟ್ರೀಯ ರೋಟರಿ ಸಂಸ್ಥೆ ಅತಿ ಹೆಚ್ಚು ಸೇವಾ ಕಾರ್ಯಗಳನ್ನು ಮಾಡುವುದರ ಮುಖಾಂತರ ಜನಮಾನಸ ತಲುಪಿದೆ. ಶಿವಮೊಗ್ಗ ಸೆಂಟ್ರಲ್ ಕ್ಲಬ್ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚು ಹೊತ್ತು ನೀಡಿದೆ ಎಂದರು.

ವೃತ್ತಿ ಸೇವಾ ಪ್ರಶಸ್ತಿ ಪ್ರಧಾನ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರೋಟರಿ ಶಿವಮೊಗ್ಗ ಸೆಂಟ್ರಲ್ ಕ್ಲಬ್ ಅಧ್ಯಕ್ಷ ಕಿರಣ್ ಮಾತನಾಡಿ, ಎಲ್ಲಾ ಕ್ಷೇತ್ರಗಳಲ್ಲಿ ಸೇವೆ ಮಾಡಿದ ಸಾಧಕರನ್ನು ಗುರುತಿಸಿ ಸನ್ಮಾನಿಸಿದ್ದೇವೆ. ಹೆಚ್ಚು ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ಕ್ಲಬ್ ವತಿಯಿಂದ ಆಯೋಜಿಸುತ್ತಿದ್ದೇವೆ ಎಂದು ಹೇಳಿದರು.

Rotary Shimoga ನಿಯೋಜಿತ ಸಹಾಯಕ ಗವರ್ನರ್ ಎಂ.ಬಿ.ಲಕ್ಷ್ಮಣ್ ಗೌಡ ಮಾತನಾಡಿ, ರೋಟರಿ ಸಂಸ್ಥೆಯು ಸಮಾಜಕ್ಕೆ ನಿಸ್ವಾರ್ಥ ಸೇವೆ ಮಾಡುತ್ತ ಮತ್ತು ಸಮಾಜದಲ್ಲಿ ಸೇವೆ ಮಾಡಿದವರನ್ನು ಗುರುತಿಸುತ್ತ ಉತ್ತಮ ಸಮಾಜ ನಿರ್ಮಾಣ ಮಾಡುವುದರಲ್ಲಿ ಮಹತ್ತರ ಪಾತ್ರ ವಹಿಸಿದೆ ಎಂದು ತಿಳಿಸಿದರು.

ವೃತ್ತಿ ಶ್ರೇಷ್ಠ ಪ್ರಶಸ್ತಿ ವಿತರಣೆ: 1. ಮುತ್ತಮ್ಮ (ಮನೆ ಕೆಲಸ), 2. ದಿನೇಶ್ (ಕಾರ್ಪೊರೇಷನ್ ಮ್ಯಾನ್ ಡ್ರೈವರ್), 3. ಶ್ರೀನಿವಾಸ್ (ಜೆಂಟ್ಸ್ ಬ್ಯೂಟಿ ಪಾರ್ಲರ್), 4. ನಾಗರಾಜ್ (ಟೀ ಸಪ್ಲೈ), 5. ಬಸವರಾಜಪ್ಪ (ಪೋಸ್ಟ್ ಮ್ಯಾನ್), 6. ಕುಮಾರ್ ಜೆ (ಮೇಸ್ತ್ರಿ), 7. ಜಗದೀಶ್ (ಅಮೋಘ ಟಿವಿ), 8. ಮಾಲತೇಶ್ (ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ), 9. ಜೇಮ್ಸ್ ರತ್ನಂ {ಹೋಮ್ ನರ್ಸಿಂಗ್ ಸರ್ವಿಸ್), 10. ಈಶ್ವರ್ ಭಟ್ (ಶಾರದಾದೇವಿ ಅಂದರ ವಿಕಾಸ ಶಾಲೆಯ ಆಡಳಿತ ಅಧಿಕಾರಿ), 11. ಬಸವರಾಜ್ ಜೆಡಿ (ಮುಖ್ಯ ಶಿಕ್ಷಕರು), 12. ಲಕ್ಷ್ಮಣ್ (ಮುಖ್ಯ ಶಿಕ್ಷಕರು) ಹಾಗೂ 13. ರಮೇಶ್ (ಶಿಕ್ಷಕರು) ಅವರಿಗೆ ಸನ್ಮಾನಿಸಲಾಯಿತು.

ಜಿಲ್ಲಾ ಮಾಜಿ ಗವರ್ನರ್ ಜಿ.ಎನ್.ಪ್ರಕಾಶ್ ಮಾತನಾಡಿ, ವೃತ್ತಿ ಸೇವಾ ಪ್ರಶಸ್ತಿಯ ಬಗ್ಗೆ ವಿವರಣೆ ನೀಡಿದರು. ಮಾಜಿ ಸಹಾಯಕ ಗವರ್ನರ್ ರವಿ ಕೋಟೋಜಿ, ಜಿ.ವಿಜಯ್ ಕುಮಾರ್, ಚುಡಾಮಣಿ ಪವಾರ್, ಆನಂದ್ ಹಾಗೂ ಕ್ಲಬ್ ಕಾರ್ಯದರ್ಶಿ ಈಶ್ವರ್, ಬಸವರಾಜ್, ಗೀತಾ ಜಗದೀಶ್, ಶುಭಾ ಚಿದಾನಂದ ಇತರರಿದ್ದರು.

Prayagaraj Kumbamela ಮೌನಿ ಅಮಾವಾಸ್ಯೆ‌.ಅಮೃತ ಸ್ನಾನದ ಸಂದರ್ಭ ಕಾಲ್ತುಳಿತಕನಿಷ್ಠ ಮೂವತ್ತು ಮಂದಿಗೆ ಗಾಯ

0

Prayagaraj Kumbamela ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ‌ಮಹಾಕುಂಭ ಮೇಳದಲ್ಲಿ ಅಮೃತಸ್ನಾನಕ್ಕಾಗಿ ಪ್ರಾತಃಕಾಲ ಭಕ್ತಾದಿಗಳ ನೂಕುನುಗ್ಗಲಾಗಿ ಕಾಲ್ತುಳಿತ ಸಂಭವಿಸಿದೆ.

‘ಮೌನಿ ಅಮಾವಾಸ್ಯೆ’ಯಂದು ‘ಅಮೃತ ಸ್ನಾನ’ದ ಮೊದಲು ಬುಧವಾರ ಮುಂಜಾನೆ ಕಾಲ್ತುಳಿತದಂತಹ ಪರಿಸ್ಥಿತಿಯಿಂದ ಸಾವು ಸಂಭವಿಸಿರ ಬಹುದೆಂದು ಶಂಕಿಸಲಾಗಿದೆ.. ಅಧಿಕಾರಿಗಳ ಪ್ರಕಾರ, ಮೌನಿ ಅಮವಾಸ್ಯೆಯ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯ ಯಾತ್ರಾರ್ಥಿಗಳು ಪವಿತ್ರ ಸ್ನಾನಕ್ಕೆ ಬಂದರು, ಇದು ಕಾಲ್ತುಳಿತದಂತಹ ಪರಿಸ್ಥಿತಿಗೆ ಕಾರಣವಾಯಿತು ಮತ್ತು ಅನೇಕರು ಗಾಯಗೊಂಡರು.

Prayagaraj Kumbamela 30 ಮಹಿಳೆಯರು ಗಾಯಗೊಂಡಿದ್ದು, ಮೇಳ ಪ್ರದೇಶದಲ್ಲಿ ಸ್ಥಾಪಿಸಲಾದ ಕೇಂದ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ. ವರದಿಯಾಗಿದೆ.

Shivamogga City Corporation 2025 ನೇ ಇಸವಿ‌ ಶಿವಮೊಗ್ಗದಲ್ಲಿ ಯಾವ ದಿನಾಂಕ ಮಾಂಸ ಮಾರಾಟ ನಿಷಿದ್ಧ? ಮಾಹಿತಿ ಓದಿ

0

Shivamogga City Corporation ಶಿವಮೊಗ್ಗ ಮಹಾನಗರ ಪಾಲಿಕೆಯು ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ 2025ನೇ ಸಾಲಿನಲ್ಲಿ ಕೆಳಕಂಡ ದಿನಾಂಕಗಳಂದು ಮಾಂಸ ರಹಿತ ದಿನವೆಂದು ಘೋಷಿಸಿದೆ.

ಜನವರಿ 30 ರಂದು ಸರ್ವೋದಯ ದಿನ, ಫೆ. 26 ಮಹಾಶಿವರಾತ್ರಿ, ಏ.06 ರಂದು ಶ್ರೀರಾಮ ನವಮಿ ದಿನ, ಏ.10 ಮಹಾವೀರ ಜಯಂತಿ ದಿನ, ಮೇ.12 ಬುದ್ಧಪೂರ್ಣಿಮೆ ಜಯಂತಿ ದಿನ, ಆ.16 ಶ್ರೀ ಕೃಷ್ಣ ಜನ್ಮಾಷ್ಟಮಿ ದಿನ, ಆ.27 ರಂದು ಗಣೇಶ ಚತುರ್ಥಿ ದಿನ, ಅ.02 ರಂದು ಗಾಂಧಿ ಜಯಂತಿ ದಿನ ಹಾಗೂ ನ.25 ರಂದು ಸೈಂಟ್ ಟಿ.ಎಲ್. ವಾಸ್ವಾನಿ ಜನ್ಮದಿನ.

Shivamogga City Corporation ಶಿವಮೊಗ್ಗ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಈ ಎಲ್ಲಾ ದಿನಾಂಕಗಳಂದು ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ನಿಷೇಧಿಸಲಾಗಿದೆ. ಆದ್ದರಿಂದ ಮಾಂಸ ಮಾರಾಟದ ಮಾಲೀಕರು ಮೇಲ್ಕಂಡ ದಿನಾಂಕಗಳಂದು ತಮ್ಮ ಉದ್ದಿಮೆಯನ್ನು ಬಂದ್ ಮಾಡಿ ಸಹಕರಿಸಬೇಕು. ಆದೇಶ ಉಲ್ಲಂಘಿಸುವ ಅಂಗಡಿ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.

Royal English Medium School ಆರೋಗ್ಯದಲ್ಲಿ ತರಕಾರಿಗಳ ಮಹತ್ವ.‌ರಾಯಲ್ ಡೈಮಂಡ್ ಶಾಲೆಯಲ್ಲಿ‌ ವಿಶಿಷ್ಟ ಕಾರ್ಯಕ್ರಮ

0

Royal English Medium School ರಾಯಲ್ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ನೆಡದ ತರಕಾರಿಗಳ ಮೇಳ ಕಾರ್ಯಕ್ರಮ ನಡೆಯಿತು. ತರಕಾರಿಗಳ ಮಹತ್ವ ಅರಿತು ಹೆಚ್ಚು ಸೇವಿಸುವ ಮೂಲಕ ನಮ್ಮ ಆರೋಗ್ಯವನ್ನು ಉತ್ತಮಪಡಿಸಿಕೊಳ್ಳಬೇಕು. ಆರೋಗ್ಯ ದಿನಾಚರಣೆ ಅಂಗವಾಗಿ ತರಕಾರಿಗಳ ಮೇಳ ಕಾರ್ಯಕ್ರಮವನ್ನ ಏರ್ಪಡಿಸಲಾಗಿತ್ತು.

ತರಕಾರಿಗಳ ಸೇವನೆಯಿಂದ ಜೀರ್ಣಕ್ರಿಯೆ ಆರೋಗ್ಯವನ್ನು ಸುಧಾರಿಸುತ್ತದೆ. ರಕ್ತದ ಒತ್ತಡವನ್ನು ಸುಧಾರಿಸಿ , ಕಣ್ಣುಗಳಿಗೆ ಸಹಾಯ, ಕ್ಯಾನ್ಸರ್ ನಂತಹ ಮಾರಕ ರೋಗಗಳನ್ನು ಕಡಿಮೆ ಮಾಡಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಜೊತಗೆ ಮೆದುಳನ್ನು ಯೌವನ ವಾಗಿರಿಸಿಕೊಳ್ಳಲು ಸಹಾಯಕವಾಗಿದೆ.

ಚರ್ಮರೋಗವನ್ನು ಬಿಸಿಲಿನಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಎಂದು ಕನ್ನಡ ಭಾಷಾಸಹ ಶಿಕ್ಷಕರಾದ ಅರುಣ್ ಕುಮಾರ್ ಹೆಚ್ ಎಂ ರವರು ತಿಳಿಸಿದರು.

ನಂತರ ವಿದ್ಯಾರ್ಥಿಗಳು ಐಶ್ವರ್ಯ ಹಿರೇಕಾಯಿ, ಬೃಂದಾ ಹೂ ಕೋಸು, ನುಗ್ಗೆ ಸೊಪ್ಪು ದೃತಿ, ಮೂಲಂಗಿ ಪ್ರೀತಮ್, ಕೊತ್ತಂಬರಿ ಸೊಪ್ಪು ಸಿಂಚನ, ಕ್ಯಾರೆಟ್ ಸೂರಜ್, ತೇಜಲ್ ಹಾಗಲಕಾಯಿ, ಗೆಡ್ಡೆಕೋಸು ಯಶಸ್, ಈ ವಿದ್ಯಾರ್ಥಿಗಳು ಉಪಯೋಗಗಳನ್ನು ಪರಿಚಯ ಮಾಡಿಕೊಟ್ಟರು. ಈ ತರಕಾರಿಗಳಲ್ಲಿ ಇರುವ ಎ, ಸಿ, ಜೀವಸತ್ವಗಳಿವೆ ಎಂಬುದನ್ನು ಪರಿಚಯಿಸಿದರು.

Royal English Medium School ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಪ್ರತಿನಿತ್ಯ ಬೆಳೆಸುವಂತಹ ತರಕಾರಿಗಳನ್ನು ಸಂಗ್ರಹಿಸಿದ್ದರು. ಹೀರೇಕಾಯಿ, ಹೂಕೋಸು ನುಗ್ಗೆ ಸೊಪ್ಪು, ಈರುಳ್ಳಿ , ಗೆಡ್ಡೆಕೋಸು ಬೀನ್ಸು, ಬೆಂಡೆಕಾಯಿ ಎಲೆಕೋಸು, ಕೆಂಪು ಬಿಟ್ರೋಟ್ ಮುಂತಾದ ತರಕಾರಿಗಳನ್ನು ಸಂಗ್ರಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ರಾಯಲ್ ಇಂಗ್ಲೀಷ್ ಮೇಡಂ ಶಾಲೆಯ ಕಾರ್ಯದರ್ಶಿಗಳಾದ ಶ್ರೀಮತಿ ಪೂಜಾ ನಾಗರಾಜ್ ಪರಿಸರ ಮೇಡಂ ಮಾತನಾಡಿ ವಿದ್ಯಾರ್ಥಿಗಳು ಪ್ರತಿನಿತ್ಯದ ಆಹಾರ ಸೇವನೆಯಲ್ಲಿ ತರಕಾರಿಗಳ ಮಹತ್ವವನ್ನ ತಿಳಿಸಿಕೊಟ್ಟರು. ವಿದ್ಯಾರ್ಥಿಗಳು ಸದೃಢವಾಗಿ ಇರಬೇಕಾದರೆ ಸದೃಢವಾದ ಆಹಾರ ಪದಾರ್ಥಗಳನ್ನು ಸೇವನೆ ಅವಶ್ಯಕ ಎಂದು ಹೇಳಿದರು. ಹಾಗೆ ಪ್ರತಿ ತರಕಾರಿಗಳನ್ನು ಯಾವ ರೀತಿಯಲ್ಲಿ ಬೆಳೆಯುತ್ತಾರೆ. ತರಕಾರಿಗಳನ್ನು ಬಳಸುವುದರಿಂದ ನಮ್ಮ ದೇಹದಲ್ಲಿ ಆಗುವಂತಹ ಬದಲಾವಣೆಗಳನ್ನು ಪರಿಚಯಿಸಿದರು.
ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ವಿನಯ್, ಶಿಕ್ಷಕಿಯಾದ ವಿಂಧ್ಯಾ ರವರು ಪಾಲ್ಗೊಂಡಿದ್ದರು.

Kudali Sringeri Shankaracharya ತುಂಗಭದ್ರಾ ಸಂಗಮ ಕೂಡಲಿಯಲ್ಲಿ ಶ್ರೀನರಸಿಂಹ ಭಾರತಿ ಸ್ವಾಮಿಗಳ ಆರಾಧನೆ

0

Kudali Sringeri Shankaracharya ಶ್ರೀ ಕೂಡಲಿ ಶೃಂಗೇರಿ ಶಂಕರಾಚಾರ್ಯ ದಕ್ಷಿಣಾಮ್ನಾಯ ಶ್ರೀ‌ಶಾರದಾ ಪೀಠಮ್ ಮಹಾಸಂಸ್ಥಾನದ 69ನೇ ಪೀಠಾಧಿಪತಿಗಳಾದ ಶ್ರೀ ಶ್ರೀ‌ ನರಸಿಂಹ ಭಾರತಿ ಸ್ವಾಮಿಗಳ‌ ಆರಾಧನೆಯನ್ನು ಇಂದು (ಜನವರಿ 27, ) ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
71ನೇ ಪೀಠಾಧಿಪತಿಗಳಾದ ಶ್ರೀ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಸ್ವಾಮಿಗಳು ಪೂಜಾ ಕೈಂಕರ್ಯಗಳನ್ನು ಶ್ರದ್ಧಾಪೂರ್ವಕವಾಗಿ ನೆರವೇರಿಸಿದರು.

CM Siddharamaiah ಮುಖ್ಯಮಂತ್ರಿಗಳಿಂದ ಅನುಸೂಚಿತ ಜಾತಿ & ಬುಡಕಟ್ಟುಗಳ ಮೇಲ್ವಿಚಾರಣಾ ಸಮಿತಿ ಸಭೆ

0

CM Siddharamaiah ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ ರಾಜ್ಯ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಮೇಲ್ವಿಚಾರಣಾ ಸಮಿತಿ ಸಭೆ ನಡೆಯಿತು.

CM Siddharamaiah ಈ ಸಭೆಯಲ್ಲಿ ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ.ಮಹಾದೇವಪ್ಪ, ಸಹಕಾರ ಸಚಿವ ರಾಜಣ್ಣ, ನಗರಾಭಿವೃದ್ಧಿ ಸಚಿವ ಸರೇಶ, ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ ರಾಜ್ಯ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಮೇಲ್ವಿಚಾರಣಾ ಸಮಿತಿ ಅಧ್ಯಕ್ಷ ನರೇಂದ್ರಸ್ವಾಮಿ, ವಿಧಾನ ಪರಿಷತ್ ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Shimoga Housing Co Operative Society ಶಿವಮೊಗ್ಗ‌ ಹೌಸಿಂಗ್ ಬೋರ್ಡ್ ಆಡಳಿತ ಮಂಡಳಿ ಅಧ್ಯಕ್ಷರಾಗಿ ಎಸ್.ಕೆ.ಮರಿಯಪ್ಪ ಆಯ್ಕೆ

0

Shimoga Housing Co Operative Society ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ಚುನಾವಣೆ – ಎಸ್ ಕೆ ಮರಿಯಪ್ಪ ,ಸಿ ಹೊನ್ನಪ್ಪ, ಕೆ ರಂಗನಾಥ್ ಗೆಲುವು ಶಿವಮೊಗ್ಗ ನಗರದ ಪ್ರತಿಷ್ಠಿತ ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿಯ 100ನೇ ವರ್ಷದ ಆಡಳಿತ ಮಂಡಳಿ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಸ್ ಕೆ ಮರಿಯಪ್ಪ, ಉಪಾಧ್ಯಕ್ಷರಾಗಿ ಸಿ ಹೊನ್ನಪ್ಪ, ಕೋಶಾಧ್ಯಕ್ಷರಾಗಿ ಕೆ ರಂಗನಾಥ್ ಜಯ ಸಾಧಿಸಿದ್ದಾರೆ ಆಡಳಿತ ಮಂಡಳಿಯ ಚುನಾವಣೆ ಪ್ರಕ್ರಿಯೆಯನ್ನು ಶಿವಮೊಗ್ಗ ಹೌಸಿಂಗ್ ಸೊಸೈಟಿಯ ಚುನಾವಣಾಧಿಕಾರಿ ಸಹಕಾರಿ ಸಂಘಗಳ ಸಹಾಯಕ ನಿಬಂಧಕರಾದ ಶ್ರೀನಿವಾಸ್ ರವರು ನಡೆಸಿಕೊಟ್ಟರು.

Mahasati Temple ಕಬಡ್ಡಿ ದೇಶೀಯ ಕ್ರೀಡೆ. ಅನೇಕ ಗ್ರಾಮೀಣ ಕ್ರೀಡಾಪಟುಗಳು ದೇಶವನ್ನ ಪ್ರತಿನಿಧಿಸುತ್ತಿದ್ದಾರೆ-ಲೋಕೇಶ್ ಯಲಸಿ

0

Mahasati Temple ಗ್ರಾಮೀಣ ಭಾಗದ ಕ್ರೀಡೆಯಾದ ಕಬಡ್ಡಿ ಪ್ರಸ್ತುತ ದಿನಗಳಲ್ಲಿ ರಾಷ್ಟೀಯ ಮತ್ತು ಅಂತರಾಷ್ಟೀಯ ಮನ್ನಣೆಗಳಿಸಿದ್ದು, ಇಂತಹ ಕ್ರೀಡಾಕೂಟಗಳು ಯುವ ಪ್ರತಿಭೆಗಳನ್ನು ಗುರುತಿಸಲು ಸಹಕಾರಿ ಎಂದು ಯಲಸಿ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಲೋಕೇಶ್ ಯಲಸಿ ಹೇಳಿದರು.
ಸೊರಬ ತಾಲೂಕಿನ ಯಲಸಿ ಗ್ರಾಮದ ಶ್ರೀ ಮಹಾಸತಿ ದೇವಸ್ಥಾನದ ಆವರಣದಲ್ಲಿ ಶ್ರೀ ಮಾರಿಕಾಂಬ ಯುವ ವೇದಿಕೆ ದೇವನಗಿರಿ ಹಾಗೂ ಗ್ರಾಮಸ್ಥರ ವತಿಯಿಂದ ಗಣರಾಜ್ಯೋತ್ಸವ ನಿಮಿತ್ತ ಹಮ್ಮಿಕೊಂಡ ದ್ವಿತೀಯ ವರ್ಷದ ಹೊನಲು ಬೆಳಕಿನ ಪುರುಷರ ಮ್ಯಾಟ್ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.
Mahasati Temple ಕಬಡ್ಡಿ ದೇಶೀಯ ಕ್ರೀಡೆಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಅತ್ಯಂತ ಜನಪ್ರಿಯಗೊಳ್ಳುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಅನೇಕ ಕ್ರೀಡಾಪಟುಗಳು ದೇಶವನ್ನು ಪ್ರತಿನಿಧಿಸುವಂತಹ ಪ್ರತಿಭಾನ್ವಿತರಿದ್ದಾರೆ. ಅವರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವಾಗಬೇಕು. ಗ್ರಾಮೀಣ ಪ್ರದೇಶದಲ್ಲಿ ಆಯೋಜಕರು ಕ್ರೀಡಾಕೂಟವನ್ನು ಆಯೋಜಿಸಿರುವುದು ಸ್ವಾಗತಾರ್ಹ ಎಂದರು.
ಇತಿಹಾಸ ಸಂಶೋಧಕ ಶ್ರೀಪಾದ ಬಿಚ್ಚುಗತ್ತಿ ಮಾತನಾಡಿ, ಗ್ರಾಮೀಣ ಕ್ರೀಡೆ ಕಬಡ್ಡಿ ಆಗಿದ್ದು, ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಯುವ ಸಮುದಾಯದಲ್ಲಿದೆ. ದೇಶಿ ಕ್ರೀಡೆ ಕಬಡ್ಡಿ ಎಲ್ಲರ ಮನಗೆದ್ದಿದೆ. ಜೊತೆಗೆ ದೇಶದ ಹೆಮ್ಮೆಯ ಕ್ರೀಡೆಯೂ ಆಗಿದ್ದು, ಯುವಕರು ಕಬಡ್ಡಿ ಆಡುವ ಹಾಗೂ ಕಲಿಯುವ ಆಸಕ್ತಿ ರೂಡಿಸಿಕೊಳ್ಳಬೇಕು. ಇದರಿಂದ ಉತ್ತಮ ಆರೋಗ್ಯ ಹೊಂದಲು ಸಾಧ್ಯವಾಗುತ್ತದೆ ಜೊತೆಗೆ ಗ್ರಾಮದ ಯುವಕರು ಸುತ್ತಲಿನ ಪರಿಸರ ಸಂರಕ್ಷಣೆಯತ್ತ ಸಹ ಹೆಚ್ಚಿನ ಗಮನ ನೀಡಬೇಕು ಎಂದರು.
ಪಂದ್ಯಾವಳಿಯಲ್ಲಿ ಯಲಕುಂದ್ಲಿ ಸೆವೆನ್‌ಸ್ಟಾರ್ ತಂಡ ಪ್ರಥಮ, ಗದ್ದೆಮನೆ ತಂಡ ದ್ವಿತೀಯ, ಯಲಸಿ ಗೆಳೆಯರ ಬಳಗ ತೃತೀಯ ಹಾಗೂ ಹರಳಿಗೆ ಗ್ರಾಮದ ತಂಡ ನಾಲ್ಕನೇ ಬಹುಮಾನ ಪಡೆದವು.
ಗ್ರಾಮದ ಪ್ರಮುಖರಾದ ಮೊಹಮ್ಮದ್ ಇಸಾಕ್, ಧರ್ಮಪ್ಪ, ಬಿ.ಕೆ. ಅರುಣ್ ಕುಮಾರ್, ರವಿ ಹೊನ್ನಪ್ಪ, ಆರ್. ಮಹೇಶ್, ಬಿ. ಶಿವಣ್ಣ ಸೇರಿದಂತೆ ಶ್ರೀ ಮಾರಿಕಾಂಬ ಯುವ ವೇದಿಕೆ ದೇವನಗಿರಿಯ ಪದಾಧಿಕಾರಿಗಳು ಮತ್ತು ಊರ ಗ್ರಾಮಸ್ಥರು ಇದ್ದರು.

Republic Day ರಾಜ್ಯ ಮಟ್ಟದ ಬಾಕ್ಸಿಂಗ್ ಸ್ಪರ್ಧೆ ಪದಕ ವಿಜೇತ‌‌ ಸೈಯದ್ ಕಲೀಂ ಗೆ ಸನ್ಮಾನ

0

Republic Day 76ನೇ ಗಣರಾಜ್ಯೋತ್ಸವದ ಅಂಗವಾಗಿ ಶಿವಮೊಗ್ಗ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಶಿವಮೊಗ್ಗದ ಬೊಮ್ಮನಕಟ್ಟೆಯ ಶ್ರೀಮತಿ ಯಾಸ್ಮಿನ್ ಮತ್ತು ಸೈಯದ್ ಪೀರ್ ದಂಪತಿಗಳ ಪುತ್ರ ಹಾಗೂ ಜಿಕೆ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಸೈಯದ್ ಕಲೀಮ್ ರವರಿಗೆ 2024ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆ ರಾಜ್ಯ ಮಟ್ಟದ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಪದಕ ಪಡೆದ ಸಲುವಾಗಿ ಸನ್ಮಾನಿಸಲಾಯಿತು. Republic Day ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಿಕ್ಷಣ ಸಚಿವರಾದ ಶ್ರೀ ಮಧು ಬಂಗಾರಪ್ಪ ಸೇರಿದಂತೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು ಸನ್ಮಾನಿತ ಕ್ರೀಡಾಪಟು ಕಲೀಮ್ ಗೆ ಶಿವಮೊಗ್ಗ ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಅಧ್ಯಕ್ಷ ಶಿವಮೊಗ್ಗ ವಿನೋದ್ ಮತ್ತು ಕೋಚ್ ಮೀನಾಕ್ಷಿ ಶುಭಕೋರಿದ್ದಾರೆ .

Republic Day ವಿಐಎಸ್ಎಲ್ ನಲ್ಲಿ ಗಣರಾಜ್ಯೋತ್ಸವ. ಜವಾಹರ್ ಲಾಲ್ ನೆಹರು, ಡಾ.ಅಂಬೇಡ್ಕರ್ ಪ್ರಶಸ್ತಿ ವಿತರಣೆ

0


Republic Day ವಿಐಎಸ್‌ಎಲ್ ಸಿಲ್ವರ್ ಜ್ಯೂಬಿಲಿ ಸ್ಟೇಡಿಯಂನಲ್ಲಿ 26ನೇ ಜನವರಿ 2025ರಂದು ರಾಷ್ಟದ 76ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಕಾರ್ಯಪಾಲಕ ನಿರ್ದೇಶಕರಾದ ಶ್ರೀಯುತ ಬಿ.ಎಲ್. ಚಂದ್ವಾನಿ ಅವರು ರಾಷ್ಟçಧ್ವಜ ಅನಾವರಣ ಮಾಡಿದರು.

ವಿಐಎಸ್‌ಎಲ್ ಸೆಕ್ಯುರಿಟಿ, ಭದ್ರಾವತಿಯ ಪ್ರೌಢ ಮತ್ತು ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಪಥಸಂಚಲನದಲ್ಲಿ ಭಾಗವಹಿಸಿದ್ದರು.

ಲಿಟ್ಲಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸೈಂಟ್ ಚಾರ್ಲ್ಸ್ ಆಂಗ್ಲ ಪ್ರೌಢಶಾಲೆಯ ವಿದ್ಯಾರ್ಥಿಗಳು ರಾಷ್ಟೀಯ ಐಕ್ಯತೆ ಮತ್ತು ದೇಶಪ್ರೇಮ ವಿಷಯಗಳ ಕುರಿತು ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದರು ಮತ್ತು ಸಮೂಹಗಾನ ಹಾಡಿದರು.

ವಿಐಎಸ್‌ಎಲ್ ಉದ್ಯೋಗಿಗಳು ಕಳೆದ ವರ್ಷದಲ್ಲಿ ಮಾಡಿದ ವಿಶೇಷ ಸಾಧನೆಗಾಗಿ ವಿಶೇಷ ಪ್ರಶಸ್ತಿ, ಜವಹಾರ್, ನೆಹರು ಮತ್ತು ಡಾ|| ಬಿ.ಆರ್. ಅಂಬೇಡ್ಕರ್ ಪ್ರಶಸ್ತಿಗಳನ್ನು ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ ತಂಡಗಳಿಗೆ ಹಾಗೂ ಮಿಕ್ಕ ಎಲ್ಲಾ ಪಥಸಂಚಲನ ತಂಡಗಳಿಗೆ ಈ ಸಂದರ್ಭದಲ್ಲಿ ಆಕರ್ಷಕ ಟ್ರೋಫಿಗಳನ್ನು ನೀಡಲಾಯಿತು.

ಶ್ರೀ ನಿತಿನ್ ಜೋಸ್, ಸಹಾಯಕ ಮಹಾಪ್ರಬಂಧಕರು (ಸಿ ಅಂಡ್ ಐಟಿ) ರವರು ಕೇರಳದಲ್ಲಿ ನಡೆದ ೭ನೇ ಕೇರಳ ರಾಜ್ಯ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಸಿಂಗಲ್ಸ್ ವಿಭಾಗದಲ್ಲಿ ಕಂಚಿನ ಪದಕ ಮತ್ತು ಡಬಲ್ಸ್ ವಿಭಾಗದಲ್ಲಿ ಬೆಳ್ಳಿ ಪದಕ (SU-೫) ವಿಭಾಗದಲ್ಲಿ ಪಡೆದಿದ್ದು ಹಾಗೂ ರಾಷ್ಟಮಟ್ಟದಲ್ಲಿ ಕೇರಳವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಕ್ಕಾಗಿ ಅವರನ್ನು ಅಭಿನಂದಿಸಲಾಯಿತು. ವಿಐಎಸ್‌ಎಲ್ ಕಾರ್ಮಿಕರ ಸಂಘ ಮತ್ತು ವಿಐಎಸ್‌ಎಲ್ ಅಧಿಕಾರಿಗಳ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಇಸ್ಪಾತ್ ಮಹಿಳಾ ಸಮಾಜದ ಸದಸ್ಯರು, ಕಾರ್ಮಿಕರು, ಗುತ್ತಿಗೆ ಕಾರ್ಮಿಕರು, ಶಾಲಾ ಮಕ್ಕಳು, ಪೋಷಕರು, ಅಧ್ಯಾಪಕ ವೃಂದದವರು, ಭದ್ರಾವತಿಯ ನಾಗರೀಕರು ಕಾಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ೫೦೦ ಪಪ್ಪಾಯ, ನುಗ್ಗೆ, ಹಲಸು ಮತ್ತು ಅಡಿಕೆ ಸಸಿಗಳನ್ನು ವಿಐಎಸ್‌ಎಲ್‌ನ ಉದ್ಯೋಗಿಗಳು, ಗುತ್ತಿಗೆ ಕಾರ್ಮಿಕರು ಮತ್ತು ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಲಾಯಿತು.

Republic Day ವಿಐಎಸ್‌ಎಲ್‌ನ ಸಿಲ್ವರ್ ಜ್ಯುಬಿಲಿ ಕ್ರೀಡಾಂಗಣದಲ್ಲಿರುವ ಪ್ಲಾಟಿನಮ್ ಜ್ಯುಬಿಲಿ ವೇದಿಕೆಯ ಬಳಿ ಇರುವ ವಿಐಎಸ್‌ಎಲ್ ವಸ್ತುಪ್ರದರ್ಶನ ಮಳಿಗೆಯನ್ನು ಶ್ರೀ ಬಿ.ಎಲ್. ಚಂದ್ವಾನಿ, ಕಾರ್ಯಪಾಲಕ ನಿರ್ದೇಶಕರು ಉದ್ಘಾಟಿಸಿದರು ಅವರೊಂದಿಗೆ ಶ್ರೀ ಕೆ.ಎಸ್.ಸುರೇಶ್, ಮುಖ್ಯ ಮಹಾಪ್ರಬಂಧಕರು (ಸ್ಥಾವರ) ಹಾಗೂ ಅಧ್ಯಕ್ಷರು ಪ್ರಧಾನ ವ್ಯವಸ್ಥಾಪಕ ಸಮಿತಿ, ಶ್ರೀ ಮೋಹನ್ ರಾಜ್ ಶೆಟ್ಟಿ, ಮಹಾಪ್ರಬಂಧಕರು (ನಗರಾಡಳಿತ), ಶ್ರೀಮತಿ ಶೋಭ ಶಿವಶಂಕರನ್, ಮಹಾಪ್ರಬಂಧಕರು (ಹಣಕಾಸು ಮತ್ತು ಲೆಕ್ಖ), ಶ್ರೀ ಎಲ್. ಪ್ರವೀಣ್ ಕುಮಾರ್, ಮಹಾಪ್ರಬಂಧಕರು (ಹೆಚ್.ಆರ್ ಮತ್ತು ಸಾರ್ವಜನಿಕ ಸಂಪರ್ಕ), ಶ್ರೀ ಜೆ. ಜಗದೀಶ, ಅಧ್ಯಕ್ಷರು, ವಿಐಎಸ್ ಎಲ್ ಕಾರ್ಮಿಕರ ಸಂಘ ಮತ್ತು ಶ್ರೀ ಪಾರ್ಥಸಾರಥಿ ಮಿಶ್ರಾ, ಅಧ್ಯಕ್ಷರು, ವಿಐಎಸ್‌ಎಲ್ ಅಧಿಕಾರಿಗಳ ಸಂಘ ಉಪಸ್ಥಿತರಿದ್ದರು.

ಶ್ರೀಮತಿ ಶೋಭ.ಕೆ.ಎಸ್, ಉಪ ಪ್ರಬಂಧಕರು (ಹೆಚ್.ಆರ್) ಮತ್ತು ಶ್ರೀ ಎಮ್.ಎಲ್. ಯೋಗೀಶ್, ಕಿರಿಯ ಪ್ರಬಂಧಕರು (ಹೆಚ್.ಆರ್ ಮತ್ತು ಹೆಚ್.ಆರ್ ಎಲ್&ಡಿ)ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಈ ಕಾರ್ಯಕ್ರಮದ ಸಂಯೋಜನೆಯನ್ನು ವಿಐಎಸ್‌ಎಲ್‌ನ ಸಾರ್ವಜನಿಕ ಸಂಪರ್ಕ, ನಗರಾಡಳಿತ ಮತ್ತು ರಕ್ಷಣಾ ವಿಭಾಗದವರು ಮಾಡಿದ್ದರು.