Thursday, March 12, 2026
Thursday, March 12, 2026
Home Blog Page 409

Bengaluru Metropolitan Transport Corporation ಸಾರಿಗೆ ಸಚಿವರಿಂದ ನೌಕರರ ವಿಮಾ ಯೋಜನೆಯಲ್ಲಿ ಫಲಾನಭವಿಗಳಿಗೆ ಒಂದು‌ ಕೋಟಿ ರೂ‌.ವಿಮಾ ಚೆಕ್ ವಿತರಣೆ

0

Bengaluru Metropolitan Transport Corporation ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಕೇಂದ್ರ ಕಛೇರಿಯಲ್ಲಿ ಕೆನರಾ ಬ್ಯಾಂಕ್ ನೊಂದಿಗೆ ರೂ. 1.5 ಕೋಟಿ ಅಪಘಾತ ಪರಿಹಾರ ವಿಮಾ ಯೋಜನೆಯ ಒಡಂಬಡಿಕೆ ಮತ್ತು ಸಂಸ್ಥೆಯ ಸೇವೆಯಲ್ಲಿರುವಾಗ ಅಪಘಾತದಲ್ಲಿ ಮೃತಪಟ್ಟಿರುವ ಸಿಬ್ಬಂದಿಗಳ ನಾಮನಿರ್ದೇಶಿತರಿಗೆ ರೂ. 1 ಕೋಟಿ ಅಪಘಾತ ವಿಮಾ ಪರಿಹಾರ ಮೊತ್ತದ ಚೆಕ್ ಮತ್ತು ಸ್ವಾಭಾವಿಕವಾಗಿ ಮೃತಪಟ್ಟಿರುವ ಸಿಬ್ಬಂದಿಗಳ ನಾಮನಿರ್ದೇಶಿತರಿಗೆ ಸಂಸ್ಥೆಯ ಗುಂಪು ವಿಮಾ ಯೋಜನೆಯ ರೂ. 10 ಲಕ್ಷಗಳ ಚೆಕ್ ಅನ್ನು ಶ್ರೀ ರಾಮಲಿಂಗಾರೆಡ್ಡಿ, ಸನ್ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರು ವಿತರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

• ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ನೌಕರರುಗಳ ಕುಟುಂಬಕ್ಕೆ ಆರ್ಥಿಕ ಭದ್ರತೆಯನ್ನು ಒದಗಿಸುವ ಸದುದ್ದೇಶದಿಂದ, ಕೆನರಾ ಬ್ಯಾಂಕ್ನೊಂದಿಗೆ ಮೂರು ವರ್ಷಗಳ ಅವಧಿಗೆ ಒಡಂಬಡಿಕೆಯನ್ನು ಮಾಡಿಕೊಂಡಿದ್ದು, ಈ ಒಡಂಬಡಿಕೆಯನ್ವಯ ಬ್ಯಾಂಕ್ ನಲ್ಲಿ ವೇತನ ಖಾತೆ ಹೊಂದಿರುವ ಅಧಿಕಾರಿ/ನೌಕರರು ಅಪಘಾತ (ಕರ್ತವ್ಯ ನಿರತ ಅಥವಾ ವೈಯಕ್ತಿಕ ಅಪಘಾತ ಸೇರಿದಂತೆ) ಮೃತಪಟ್ಟಲ್ಲಿ, ಅವರ ನಾಮನಿರ್ದೇಶಿತರಿಗೆ ರೂ.1.00 ಕೋಟಿ ವಿಮಾ ಪರಿಹಾರ ಮೊತ್ತವನ್ನು ಪಾವತಿಸುವ ಯೋಜನೆಯನ್ನು ಜಾರಿಗೆ ತರಲಾಗಿದೆ. ಅದರಂತೆ, ಸಂಸ್ಥೆಯು 50 ಲಕ್ಷ ರೂಪಾಯಿಗಳನ್ನು ಸಹ ನೀಡುತ್ತಿದ್ದು, ಒಟ್ಟು 1.50 ಲಕ್ಷ ರೂಪಾಯಿಗಳನ್ನು ಮೃತ ಸಿಬ್ಬಂದಿಗಳ ಕುಟುಂಬಕ್ಕೆ ನೀಡಲಾಗುವುದು.

• ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಜಾರಿಯಲ್ಲಿದ್ದ ಗುಂಪು ವಿಮಾ ಯೋಜನೆಯನ್ನು ಪರಿಷ್ಕರಿಸಿ, ಅಧಿಕಾರಿ/ನೌಕರರ ವಂತಿಗೆ ರೂ.350/- ಮತ್ತು ಸಂಸ್ಥೆಯ ವಂತಿಗೆ ರೂ.150/- ಒಟ್ಟು ರೂ.500/-ಗಳ ವಂತಿಗೆಯೊಂದಿಗೆ ಅಪಘಾತದಿಂದ (ಕರ್ತವ್ಯ ನಿರತ ಅಥವಾ ವೈಯಕ್ತಿಕ ಅಪಘಾತ ಸೇರಿದಂತೆ) ಮೃತಪಟ್ಟಲ್ಲಿ ರೂ.50.00 ಲಕ್ಷ ಮತ್ತು ಸ್ವಾಭಾವಿಕ ಹಾಗೂ ಇನ್ನಿತರೆ ಕಾರಣಗಳಿಂದ ಮೃತಪಟ್ಟಲ್ಲಿ, ರೂ.10.00 ಲಕ್ಷ ವಿಮಾ ಪರಿಹಾರ ಮೊತ್ತವನ್ನು ಪಾವತಿಸುವ ಯೋಜನೆಯನ್ನು ದಿನಾಂಕ:19.02.2024 ರಿಂದ ಜಾರಿಗೆ ತರಲಾಗಿರುತ್ತದೆ.
• ದಿನಾಂಕ:19.02.2024 ರಿಂದ ಜನವರಿ-2025 ರವರೆಗೆ 86 ನೌಕರರುಗಳು ಮೃತಪಟ್ಟಿದ್ದು, ಅದರಲ್ಲಿ ಸ್ವಾಭಾವಿಕ ಹಾಗೂ ಇನ್ನಿತರೆ ಕಾರಣಗಳಿಂದ ಒಟ್ಟು 77 ನೌಕರರು ಮೃತಪಟ್ಟಿದ್ದು, ಅದರಲ್ಲಿ 46 ಮೃತ ನೌಕರರುಗಳ ನಾಮನಿರ್ದೇಶಿತರಿಗೆ ಸಂಸ್ಥೆಯ ಗುಂಪು ವಿಮಾ ಯೋಜನೆಯಡಿಯಲ್ಲಿ ತಲಾ ರೂ.10.00 ಲಕ್ಷದಂತೆ ಒಟ್ಟು ರೂ.4,60,00,000/- ಗಳನ್ನು ಪಾವತಿಸಲಾಗಿರುತ್ತದೆ. ಉಳಿದ 31 ಪ್ರಕರಣಗಳು ದಾಖಲಾತಿ ಪರಿಶೀಲನಾ ಹಂತದಲ್ಲಿರುತ್ತದೆ.

Bengaluru Metropolitan Transport Corporation 09 ನೌಕರರು ಅಪಘಾತದಿಂದ ಮೃತಪಟ್ಟಿದ್ದು, ಅದರಲ್ಲಿ 04 ಮೃತ ನೌಕರರ ನಾಮನಿರ್ದೇಶಿತರಿಗೆ ತಲಾ ರೂ.50.00 ಲಕ್ಷದಂತೆ ರೂ.2,00,00,000/-ಗಳ ವಿಮಾ ಪರಿಹಾರ ಮೊತ್ತವನ್ನು ದಿನಾಂಕ:01.02.2025 ರಂದು ಪಾವತಿಸಲಾಗುತ್ತಿದೆ. ಉಳಿದ ಪ್ರಕರಣಗಳ ದಾಖಲಾತಿಗಳ ಪರಿಶೀಲನಾ ಹಂತದಲ್ಲಿರುತ್ತದೆ.

• ಸಂಸ್ಥೆಯ ಗುಂಪು ವಿಮಾ ಯೋಜನೆಯಡಿಯಲ್ಲಿ ತಲಾ ರೂ.10.00 ಲಕ್ಷದಂತೆ ಈ ಕೆಳಕಂಡ ಮೃತಾವಲಂಬಿತರಿಗೆ ದಿನಾಂಕ:01.02.2025 ರಂದು ರೂ.10 ಲಕ್ಷದ ಚೆಕ್ ನೀಡಲಾಗುತ್ತಿದೆ.
 ಶ್ರೀ ಬನ್ನಪ್ಪ, ಸಂಚಾರ ನಿಯಂತ್ರಕರು, ಘಟಕ-07,
 ಶ್ರೀ ಕೆ.ವಿ.ಶ್ರೀನಿವಾಸ, ಕುಶಲಕರ್ಮಿ-3564, ಘಟಕ-17
 ಶ್ರೀ ಗೋಪಾಲಯ್ಯ ಎಸ್, ಚಾಲಕ-10460, ಘಟಕ-41
 ವರದರಾಜ.ಎಸ್, ಚಾಲಕ-ಕಂ-ನಿರ್ವಾಹಕ-31, ಘಟಕ-17
 ಹರ್ಷ ರಾವ್.ಸಿ, ಕಿರಿಯ ಸಹಾಯಕ, ಘಟಕ-02

• ಸದರಿ ಕಾರ್ಯಕ್ರಮದಲ್ಲಿ ಸಂಸ್ಥೆಯ ಮಾನ್ಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಮಚಂದ್ರನ್.ಆರ್‌, ಭಾ.ಆ.ಸೇ, ಶ್ರೀಮತಿ ಶಿಲ್ಪಾ.ಎಂ, ಭಾ.ಆ.ಸೇ, ನಿರ್ದೇಶಕರು (ಮಾ.ತಂ), ಶ್ರೀ ಮಹೇಶ್ ಪೈ, ಪ್ರಧಾನ ವ್ಯವಸ್ಥಾಪಕರು ಮತ್ತು ಕೆನರಾ ಬ್ಯಾಂಕಿನ ಸಿಬ್ಬಂದಿಗಳು ಮತ್ತು ಸಂಸ್ಥೆಯ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ನಾದಲೀಲೆ ವಿವಿಧ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಸಂಸ್ಥೆಯಾಗಿ ಬೆಳೆಯಲಿ- ಡಾ.ಕೆ.ಎಸ್.ಪವಿತ್ರಾ

0

ಸಂಗೀತ ನೃತ್ಯ ಸಂಭ್ರಮ “ನಾದಲೀಲೆ ರಾಜ್ಯ ಪ್ರಶಸ್ತಿ” ಪುರಸ್ಕಾರ, ಕನ್ನಡ ಕುವರ-ಕುವರಿ ಪ್ರಶಸ್ತಿ ಪ್ರಧಾನ ಸಮಾರಂಭವು ಡಾ. ಬಿ.ಆರ್.ಅಂಬೇಡ್ಕರ್ ಭವನ, ಶಿವಮೊಗ್ಗ ಇಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಕಲಾಕುಟುಂಬದಿಂದ ಕಲಾವಿದರನ್ನು ಗುರುತಿಸುವ ಹಾಗೂ ಸನಾತನ ಧರ್ಮ, ಸಂಸ್ಕೃತಿ, ಕಲೆ, ಸಾಹಿತ್ಯ ಬೆಳೆಸುವ ಹಿನ್ನೆಲೆಯಲ್ಲಿ ಉನ್ನತ ಮಟ್ಟಕ್ಕೆ ಬೆಳೆಸುವ ವಿವಿಧ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಸಂಸ್ಥೆಯಾಗಿ ಬೆಳೆಯಲೆಂದು ಖ್ಯಾತ ಮನೋವೈದ್ಯ, ಕಲಾವಿದೆ, ಲೇಖಕರಾದ ಡಾ. ಕೆ.ಎಸ್.ಪವಿತ್ರ ಅಭಿಪ್ರಾಯಪಟ್ಟರು.
ಶ್ರೀ ಎಸ್.ಎನ್.ಚನ್ನಬಸಪ್ಪ (ಚನ್ನಿ), ಸನ್ಮಾನ್ಯ ಶಾಸಕರು ವಿಧಾನಸಭೆ, ಶಿವಮೊಗ್ಗ ನಗರ ಕ್ಷೇತ್ರ ಇವರು ಸಂಸ್ಥೆಯು ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಪ್ರೋತ್ಸಾಹಿಸಿದರು.
ಇದೇ ಸಂದರ್ಭದಲ್ಲಿ ಯೋಗಾಚಾರ್ಯ ಡಾ. ಸಿ.ವಿ.ರುದ್ರಾರಾಧ್ಯ, ಶ್ರೀಮತಿ ಶಾಂತಾ ಎಸ್.ಶೆಟ್ಟಿ, ಡಾ. ಅಪೇಕ್ಷ ಮಂಜುನಾಥ್, ಶ್ರೀ ಡಾ. ರಾಜೇಂದ್ರ ಬುರಡಿಕಟ್ಟಿ ಇವರುಗಳಿಗೆ ನಾದಲೀಲೆ ರಾಜ್ಯಪ್ರಶಸ್ತಿ ಪ್ರಧಾನಮಾಡಲಾಯಿತು.
ಶ್ರೀಮತಿ ರೇವತಿ ರಾಹುಲ್, ಮೈಸೂರು ತಂಡದಿಂದ ಸುಗಮ ಸಂಗೀತ ನಡೆಯಿತು. ಹಾಗೂ ಭರತನಾಟ್ಯ ಪ್ರದರ್ಶನ ಡಾ. ಎಂ.ಎಸ್.ವಿದ್ಯಾಲಕ್ಷ್ಮಿ, ಕು.ಗೌರಿ ಮನೋಹರಿ ಬೆಂಗಳೂರು ಇವರಿಂದ ನಡೆಯಿತು.
ತಾಲ್ಲೂಕಿನ ಸರ್ಕಾರಿ ಮತ್ತು ಅನುದಾನ ಸಹಿತ ಶಾಲೆಯ ಎಸ್.ಎಸ್.ಎಲ್.ಸಿ ಪ್ರಥಮ ಭಾಷೆ ಕನ್ನಡದಲ್ಲಿ 125/125 ಅಂಕ ಪಡೆದ ಮಕ್ಕಳಿಗೆ ಕನ್ನಡ ಕುವರ-ಕುವರಿ ಪ್ರಶಸ್ತಿಯನ್ನು ನೀಡಲಾಯಿತು.
ಅಧ್ಯಕ್ಷರು ಶ್ರೀಮತಿ ಕೆ.ಎಸ್.ದಾಕ್ಷಾಯಣಿ ರಾಜ್‌ಕುಮಾರ್, ಕಾರ್ಯದರ್ಶಿ ಹೊಸೂರು ಶ್ರೀ ಕೆ.ರಾಜಕುಮಾರ್ ಇವರುಗಳು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ನಿರೂಪಣೆ ದೀರಜ್ ಬೆಳ್ಳಾರೆ, ವಂದನಾರ್ಪಣೆ ಕಾರ್ಯಕ್ರಮವನ್ನು ಆರ್.ಡಿ.ರೇವಂತ್ ರವರು ನಡೆಸಿಕೊಟ್ಟರು.

Channagiri Keshava Murthy ವಿಶ್ವಮಟ್ಟದ ಕ್ರಿಕೆಟ್ ಅಂಕಿ ಅಂಶ ತಜ್ಞ ಚನ್ನಗಿರಿ ಕೇಶವಮೂರ್ತಿ‌‌ ಅವರ ಪುಸ್ತಕ ಲೋಕಾರ್ಪಣೆ

0

Channagiri Keshava Murthy ವಿಶ್ವಮಾನ್ಯ ಕ್ರಿಕೆಟ್ ಅಂಕಿ ಅಂಶ ತಜ್ಞ ಚನ್ನಗಿರಿ ಕೇಶವಮೂರ್ತಿ ಅವರ ಜೀವನ ಸಾಧನೆಯ ‘ಸಾಹಿತ್ಯವೇ ಹಸಿರು ಕ್ರಿಕೆಟೇ ಉಸಿರು’ ಯಶೋಗಾಥೆ ಪುಸ್ತಕ ಲೋಕಾರ್ಪಣೆಗೊಂಡಿತು.

ವಿಶ್ವ ವಿಖ್ಯಾತ ಕ್ರಿಕೆಟ್‌ನ ಸ್ಪಿನ್ ಮಾಂತ್ರಿಕ ಬಿ.ಎಸ್. ಚಂದ್ರಶೇಖರ್ ಅವರು ಜಯನಗರದ ತಮ್ಮ ಸ್ವಗೃಹದಲ್ಲಿ ಪುಸ್ತಕ ಬಿಡುಗಡೆ ಮಾಡಿದರು.

ಚನ್ನಗಿರಿ ಕೇಶವಮೂರ್ತಿ ಅವರ ಸಾಹಿತ್ಯ ಮತ್ತು ಕ್ರಿಕೆಟ್ ಸೇವೆ ಮಾದರಿಯಾಗಿದ್ದು, ಅವರೊಬ್ಬ ಶ್ರೇಷ್ಠ ಕ್ರಿಕೆಟ್ ಅಂಕಿ ಅಂಶ ತಜ್ಞರಾಗಿರುವುದು ನಮ್ಮ ಕರ್ನಾಟಕದ ಹೆಮ್ಮೆ ಎಂದು ಅವರು ಪ್ರಶಂಸಿಸಿದರು.

ಕೇಶವಮೂರ್ತಿ ಕುರಿತ ‘ಸಾಹಿತ್ಯವೇ ಹಸಿರು ಕ್ರಿಕೆಟೇ ಉಸಿರು’ ಪುಸ್ತಕ ಸಾಹಿತ್ಯ ಹಾಗೂ ಕ್ರಿಕೆಟ್ ಆಸಕ್ತರಿಗೆ ಮಾರ್ಗದರ್ಶಿಯಾಗಿದೆ ಎಂದು ಅವರು ತಿಳಿಸಿದರು.

Channagiri Keshava Murthy ಪತ್ತೇದಾರಿ ಕಾದಂಬರಿಗಳನ್ನೂ ಬರೆದಿರುವ ಕೇಶವಮೂರ್ತಿ ಅವರು ಕ್ರಿಕೆಟ್ ಕುರಿತು ಪುಸ್ತಕಗಳ ರಚನೆ ಮಾಡಿರುವುದು ಕ್ರೀಡಾ ಸಾಹಿತ್ಯಕ್ಕೆ ಅನನ್ಯ ಕೊಡುಗೆಗಳಾಗಿವೆ ಎಂದು ಸಂಧ್ಯಾ ಚಂದ್ರಶೇಖರ್ ಹೇಳಿದರು.

85ರ ಇಳಿವಯಸ್ಸಿನಲ್ಲೂ ಚನ್ನಗಿರಿ ಕೇಶವಮೂರ್ತಿ ಅವರು ಇವತ್ತಿಗೂ ಕ್ರಿಕೆಟ್ ಅಂಕಿ ಅಂಶ ದಾಖಲು ಮಾಡುತ್ತಿರುವುದು ಅಪರೂಪ ಎಂದು ಚಂದ್ರಶೇಖರ್ ದಂಪತಿಗಳು ಶುಭ ಹಾರೈಸಿದರು.

ಪುಸ್ತಕದ ಸಂಪಾದಕ ಕಗ್ಗೆರೆ ಪ್ರಕಾಶ್, ಸಿಕೆಎಂ ಮಗ ಸಂಜಯ್ ಚನ್ನಗಿರಿ, ಮಗಳು ಸವಿತಾ ಉಪಸ್ಥಿತರಿದ್ದರು.

Klive Special Article ಕೊನೇ ಹಂತದ ಕ್ಯಾನ್ಸರ್ ಭಯ ಬೇಡ- ಡಾ.ಅಪರ್ಣಾ ಶ್ರೀವತ್ಸ

0

ಫೆಬ್ರವರಿ 4. ಕ್ಯಾನ್ಸರ್ ಜಾಗೃತಿ ದಿನ.
ದಿನೇದಿನೆ ಕ್ಯಾನ್ಸರ್‌ಗೆ ಬಹಳ ಮಂದಿ ತುತ್ತಾಗುತ್ತಿದ್ದಾರೆ . ಕ್ಯಾನ್ಸರ್ ಬಗ್ಗೆ ‌ಮಾಹಿತಿ‌ ತಿಳಿಸುವ ಉದ್ದೇಶದಿಂದ‌ ಶಿವಮೊಗ್ಗದ ಸಹ್ಯಾದ್ರಿ
ನಾರಾಯಣ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಸಲಹಾ ತಜ್ಞೆಯಾಗಿರುವ ಡಾ. ಅಪರ್ಣ ಶ್ರೀವತ್ಸ ಅವರಿಂದ ನಿಮಗಾಗಿ ಲೇಖನ.

Klive Special Article ಕ್ಯಾನ್ಸರ್ ಆರಂಭಿಕ ಹಂತಗಳಲ್ಲಿ ಪತ್ತೆ ಆದರೆ ಸಂಪೂರ್ಣ ಪಡಿಸಬಹುದಾದ ಅಂದರೆ ಕ್ಯೂರ್ ಮಾಡಬಹುದಾದ ಕಾಯಿಲೆ ಆದರೆ ಭಾರತದಲ್ಲಿ ಪತ್ತೆ ಆಗುವ ಬಹುತೇಕ ಕ್ಯಾನ್ಸರ್ ರೋಗಿಗಳು ಅಂತಿಮ ಹಂತಗಳಲ್ಲಿ ಪತ್ತೆ ಆಗುತ್ತಿರುವುದು ದುರದೃಷ್ಟಕರ ಸಂಗತಿ ಕ್ಯಾನ್ಸರ್‌ನ ರೋಗಲಕ್ಷಣಗಳ ಬಗೆಗೆ ಅರಿವಿಲ್ಲದ ಕಾರಣ, ಆರಂಭಿಕ ಹಂತದಲ್ಲಿ ಕ್ಯಾನ್ಸರ್ ಲಕ್ಷಣಗಳನ್ನು ನಿರ್ಲಕ್ಷಿಸಿದ ರೋಗಿಗಳು ಅಂತಿಮ ಹಂತದ ಕ್ಯಾನ್ಸರ್ ಪತ್ತೆಯಾದಾಗ ಹತಾಶರಾಗುತ್ತಾರೆ. ಕ್ಯಾನ್ಸರ್‌ನ ರೋಗ ಲಕ್ಷಣಗಳು ಪ್ರತಿಯೊಬ್ಬರಿಗೂ ಗೊತ್ತಿರಲೇಬೇಕು. ದೇಹದ ಯಾವುದೇ ಭಾಗದಲ್ಲಿ ಗೆಡ್ಡೆ ಕಾಣಿಸಿಕೊಳ್ಳುವುದು ರಕ್ತಸ್ರಾವ (ಮೂಗಿನಿಂದ, ಕಫದಲ್ಲಿ, ಮಲದಲ್ಲಿ, ಅನಿಯಮಿತ ಋತುಸ್ರಾವ), ಹುಣ್ಣು ಹೊಟ್ಟೆ ಉಬ್ಬರ, ಭೇದಿ ಅಥವಾ ಮಲಬದ್ಧತೆ, ದ್ವನಿ ಬದಲಾವಣೆ, ಕೆಮ್ಮು, ಎದುಸಿರು ಇಂತಹ ಲಕ್ಷಣಗಳು ಎರಡು ವಾರಕ್ಕಿಂತ ಹೆಚ್ಚಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.
Klive Special Article ಕ್ಯಾನ್ಸರ್ ಕೊನೆಯ ಹಂತದಲ್ಲಿ ಪತ್ತೆಯಾದರೂ ಸಹ ಅದನ್ನು ನಿಯಂತ್ರಿಸಲು ಅನೇಕ ಉಪಾಯಗಳಿವೆ ಒಂದು ಕಾಲದಲ್ಲಿ ಅಂತಿಮ ಹಂತದ ಕ್ಯಾನ್ಸರ್‌ಗೆ ಕೀಮೋಥರಪಿ ಒಂದೇ ದಾರಿ ಆಗಿತ್ತು. ಆದರೆ ಇಂದು ಕೀಮೋಥರಪಿಗಿಂತ ಕಡಿಮೆ ಅಡ್ಡಪರಿಣಾಮಗಳನ್ನು ಉಂಟುಮಾಡುವ, ಹಾಗೂ ಅದಕ್ಕಿಂತ ಹೆಚ್ಚು ಕ್ಯಾನ್ಸರ್ ಕರಗಿಸಬಲ್ಲ ಅನೇಕ ಅತ್ಯಾದುನಿಕÀ ಚಿಕಿತ್ಸೆಗಳಿವೆ.
ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಕೊನೆಯ ಹಂತದ ಕ್ಯಾನ್ಸರ್‌ಗಳಿಗೆ ಟಾರ್ಗೆಟ್‌ಥೆರಪಿ, ಇಮ್ಯೂನೋಥೆರಪಿ, ಹಾರ್ಮೋನ್‌ಥೆರಪಿಗಳ ಸಹಾಯದಿಂದ ಅಡ್ಡ ಪರಿಣಾಮಗಳಿಲ್ಲದೆ ಚಿಕಿತ್ಸೆ ನೀಡಲಾಗುತ್ತಿದೆ. ಕೊನೆಯ ಹಂತದ ಕ್ಯಾನ್ಸರ್‌ನಲ್ಲಿ ನೋವು ನಿವಾರಣೆಗೆ ಅತ್ಯಂತ ಪರಿಣಾಮಕಾರಿ ಔಷದಗಳನ್ನು ಉಪಯೋಗಿಸಲಾಗುತ್ತಿದೆ ಆರಂಭಿಕ ಹಂತಗಳ ಕ್ಯಾನ್ಸರ್ ಚಿಕಿತ್ಸೆಯಲ್ಲಿ “ನೋವುರಹಿತ ಕೀಮೋಥರಪಿ” ನೀಡಲು ಪಿಕ್‌ಲೈನ್ ಅನ್ನು ಅಳವಡಿಸಿ ರೋಗಿಯ ಕ್ಯಾನ್ಸರ್ ಸಮರವನ್ನು ಆರಾಮದಾಯಕವಾಗಿಸಿದೆ. ಇಂತಹ ಚಿಕಿತ್ಸೆಗಳಿಂದ ಕೊನೆಯ ಹಂತದ ಕ್ಯಾನ್ಸರ್ ರೋಗಿಗಳು ಆಶಾದಾಯಕ ಹಾಗೂ ಸಕ್ರಿಯ ಜೀವನ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ. ಕ್ಯಾನ್ಸರ್ ರೋಗ ಲಕ್ಷಣಗಳ ಅರಿವು ಪ್ರತಿಯೊಬ್ಬರಿಗೂ ಅತ್ಯಗತ್ಯ ಕೊನೆ ಹಂತದ ಕ್ಯಾನ್ಸರ್ ಬಗ್ಗೆ ರೋಗಿಗಳಿಗೆ ಭಯ ಬೇಡ ಆಶಾವಾದದಿಂದ ಚಿಕಿತ್ಸೆಗೆ ಮುಂದಾಗುವುದು ಸೂಕ್ತ.

– ಡಾ. ಅಪರ್ಣ ಶ್ರೀವತ್ಸ ಮೆಡಿಕಲ್ ಅಂಕಲಜಿಸ್ಟ್, ಸಹ್ಯಾದ್ರಿ ನಾರಾಯಣ ಆಸ್ಪತ್ರೆ, ಶಿವಮೊಗ್ಗ

Shankara Eye Hospital ಶಂಕರ ನೇತ್ರ ಕೇಂದ್ರದ‌ ಮೂಲಕ ಹೆಚ್ಚಿನ‌ ಜನರಿಗೆ ‌ಚಿಕಿತ್ಸಾ ಸೇವೆ ಸಿಗಲಿ-ಎನ್.ಹೇಮಂತ್

0

Shankara Eye Hospital ಶಂಕರ ಕಣ್ಣಿನ ಆಸ್ಪತ್ರೆ, ಶಿವಮೊಗ್ಗ ಸಂಸ್ಥೆಯ ನೂತನ ‘ಶಂಕರ ನೇತ್ರ ಕೇಂದ್ರ’ವನ್ನು ಶಿವಮೊಗ್ಗದ ಹೃದಯ ಭಾಗ ದುರ್ಗಿಗುಡಿಯಲ್ಲಿ ಶುಭಾರಂಭಗೊಳಿಸಲಾಯಿತು. ಶಂಕರ ಕಣ್ಣಿನ ಆಸ್ಪತ್ರೆಯು ಮಲೆನಾಡಿನ ಜನತೆಗೆ ಹಾಗೂ ಸುತ್ತಲಿನ ಜಿಲ್ಲೆಗಳಲ್ಲಿ ಕಳೆದ 16 ವರ್ಷಗಳಿಂದ ನಿರಂತರ ನೇತ್ರ ಚಿಕಿತ್ಸಾ ಸೇವೆಯನ್ನು ಒದಗಿಸುತ್ತಾ ಬಂದಿದ್ದು, ಈಗ ಶಿವಮೊಗ್ಗದ ನಗರ ಕೇಂದ್ರ ಭಾಗದಲ್ಲಿ ಹೊರ ರೋಗಿ ವಿಭಾಗವನ್ನು ಆರಂಭಿಸಿ, ಅತ್ಯಾಧುನಿಕ ಉಪಕರಣಗಳನ್ನು ಒಳಗೊಂಡ ಪೂರ್ಣ ಪ್ರಮಾಣದ ಸೇವೆಯನ್ನು ವಿಸ್ತೃತಗೊಳಿಸಿದೆ.

ಕಾರ್ಯಕ್ರಮದಲ್ಲಿ ಆಹ್ವಾನಿಸಿದ ಗಣ್ಯರಿಗೆ ಡಾ|| ನರೇಂದ್ರ ಭಟ್‌ ರವರು ಸ್ವಾಗತವನ್ನು ಕೋರಿದರು, ಡಾ||ಮಹೇಶ್‌ ಎಸ್‌, ಮುಖ್ಯ ವೈದ್ಯಾಧಿಕಾರಿಗಳು ಶಂಕರ ಸಂಸ್ಥೆ ನಡೆದು ಬಂದ ದಾರಿಯನ್ನು ವಿವರಿಸಿದರು.

ಡಾ||ಮಲ್ಲಿಕಾರ್ಜುನ್‌, ಎಮ್‌ ಹೆಚ್‌, ಕಾರ್ನಿಯಾ ತಜ್ಞರು ಸಿಟಿ ಸೆಂಟರ್‌ ನ ಧ್ಯೇಯ & ಕಾರ್ಯಕ್ರಮಗಳ ವಿವರಣೆಯನ್ನು ನೀಡಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಜಿ.ಕೆ.ಮಿಥುನ್‌ ಕುಮಾರ್‌, IPS ಶಿವಮೊಗ್ಗ ಜಿಲ್ಲಾ ಪೋಲೀಸ್‌ ವರಿಷ್ಟಾಧಿಕಾರಿಗಳು ಉಪಸ್ಥಿತರಿದ್ದು, ಅವರು ಸಂಸ್ಥೆಯ ಕಾರ್ಯಾವೈಕರಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು ಹಾಗೂ ನೂತನ ನೇತ್ರ ಕೇಂದ್ರಕ್ಕೆ ಶುಭ ಕೋರಿದರು.

ಶ್ರೀ ಹೇಮಂತ್‌ ಏನ್‌, IAS ಜಿಲ್ಲಾ ಪಂಚಾಯತ್‌, ಶಿವಮೊಗ್ಗ ಇವರು ಶಂಕರ ಸಂಸ್ಥೆಯ ಸಮಗ್ರ ಸೇವೆ ಶಿವಮೊಗ್ಗದಲ್ಲಿರುವುದು ಹೆಮ್ಮೆಯ ಸಂಗತಿ, ಶಂಕರ ನೇತ್ರ ಕೇಂದ್ರದ ಮೂಲಕ ಇನ್ನು ಹೆಚ್ಚಿನ ಜನರಿಗೆ ನೇತ್ರ ಚಿಕಿತ್ಸಾ ಸೇವೆ ತಲುಪುವಂತೆ ಆಶಿಸಿದರು, ಹಾಗೂ ಡಾ||ನಟರಾಜ್‌ ಕೆ ಎಸ್‌, ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣಾಧಿಕಾರಿಗಳು, ಶಿವಮೊಗ್ಗ ಇವರು ಶಂಕರ ಸಲ್ಲಿಸುತ್ತಿರುವ ಸೇವೆಯು ನಿತ್ಯನೂತನವಾದುದು, ಜಿಲ್ಲಾ ಅಂಧತ್ವ ಮುಕ್ತ ಅಭಿಯಾನ ಕಾರ್ಯಾಕ್ರಮಕ್ಕೆ ಕೈಜೊಡಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

Shankara Eye Hospital ನಿರಂತರ ಸೇವೆಯು ಸಮಾಜಕ್ಕೆ ಅಗತ್ಯವಾದುದಾಗಿದೆ ಎಂದು ತಿಳಿಸಿದರು. ಡಾ|| ಕಿರಣ್‌ ಕುಮಾರ್‌, DBCS ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು, ಶಿವಮೊಗ್ಗ, ಇವರು DBCS ಕಾರ್ಯಾಕ್ರಮದ ಅಡಿಯಲ್ಲಿ ಶಂಕರ ಕಣ್ಣಿನ ಆಸ್ಪತ್ರೆಯ ಸಹಕಾರದಿಂದ ಗ್ರಾಮೀಣ ಪ್ರದೇಶದ ಆರ್ಥಿಕ ಹಿಂದುಳಿದ ಜನರಿಗೆ ಉಚಿತ ನೇತ್ರ ಶಸ್ತ್ರಚಿಕಿತ್ಸೆ ವರದಾನವಾಗಿದ್ದು, ಸಂಸ್ಥೆಯ ಸೇವೆಯನ್ನು ಶ್ಲಾಘಿಸಿದರು. ಡಾ|| ರವಿಶಂಕರ ಹೆಚ್‌ ಎನ್‌, ರೆಟಿನಾ ತಜ್ಞರು ಕಾರ್ಯಕ್ರಮಕ್ಕೆ ಆಗಮಿಸಿದ ಸಮಸ್ತರಿಗೆ ವಂದನೆಗಳನ್ನು ಸಲ್ಲಿಸಿದರು.

ಡಾ||ವೃಂದಾ ಭಟ್‌ ರವರು ಸಂಪೂರ್ಣ ಕಾರ್ಯಕ್ರಮದ ನಿರೂಪಣೆ ಕಾರ್ಯವನ್ನು ನೆರವೇರಿಸಿದರು.
ಕಾರ್ಯಕ್ರಮಕ್ಕೆ ಶಂಕರ ಆಸ್ಪತ್ರೆಯ ಪೋಷಕರುಗಳಾದ ಡಾ|| ನರೇಂದ್ರ ಭಟ್‌, ಡಾ||ವೃಂದಾ ಭಟ್‌, ಡಾ||ಮಂಜುನಾಥ, ಹಾಗೂ ಡಾ|| ವೆಂಕಟೇಶ್‌ ಮೂರ್ತಿ, ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿಗಳಾದ ಶ್ರೀಮತಿ ಗಾಯತ್ರಿ ಶಾಂತರಾಮ್‌ ಮತ್ತು ಶ್ರೀಮತಿ ಅನಿತಾ, ಅಲ್ಲದೇ ಆಸ್ಪತ್ರೆಯ ವೈದ್ಯ ವೃಂದ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Puttana Kangal ಫೆಬ್ರವರಿ 9. ಪುಟ್ಟಣ ನೆನಪಿನಲ್ಲಿ ” ಬೆಳ್ಳಿ ಮೋಡದಂಚಿನ‌ ಬಂಗಾರದ ಹಾಡು”

0

Puttana Kangal ಚಿತ್ರದ ನಿರ್ದೇಶಕರು ಯಾರು ಅಂತ ನೋಡಿಕೊಂದು ಚಿತ್ರ ಮಂದಿರಕ್ಕೆ ಜನ ಹೋಗುವ ಹೊಸ trend ಕನ್ನಡದಲ್ಲಿ ಹುಟ್ಟು ಹಾಕಿದವರು ಎಂದರೆ ಅದು undoubtedly ಪುಟ್ಟಣ್ಣಕಣಗಾಲ್ ! ಅವರು ಅವತ್ತಿನ ಅವರ ಕಾಲಮಾನದ ಗತಿಗಿಂತ ವೇಗವಾಗಿದ್ದವರು!

Certainly He was ahead of time !!! ಪುಟ್ಟಣ್ಣನವರ ಹೊಸ ಸಿನಿಮಾಗಳು ಇಲ್ಲಿ release ಆದ್ರೆ ಅದನ್ನ ನೋಡಕ್ಕೋಸ್ಕರ ತಮಿಳು ನಾಡು – ಆಂದ್ರದಿಂದ ಜನ ಬಂದ್ ನೋಡ್ತಿದ್ರಂತೆ!!

ಬಹುಶಃ ಪುಟ್ಟಣ್ಣ ತಮ್ಮ ಚಿತ್ರಗಳ ಮೂಲಕ Karnataka tourism promote ಮಾಡಿದಷ್ಟು ಯಾರೂ ಮಾಡಿಲ್ಲ ಅಲ್ವಾ ! ಕನ್ನಡತನ, ಸಾಹಿತ್ಯ-ಸಂಸ್ಕೃತಿಯ ರಾಯಭಾರಿಯಾಗಿದ್ದರು ಪುಟ್ಟಣ್ಣ.

Puttana Kangal ಚಿತ್ರ ರಸಿಕರ ಅಭಿರುಚಿಯನ್ನು ತಮ್ಮ ಮನೋಜ್ಞವಾದ ಚಿತ್ರಗಳ ಮೂಲಕ ನಮ್ಮ ಅಭಿರುಚಿಯನ್ನೇ ಪರಿಷ್ಕರಿಸಿದ ಪುಟ್ಟಣ ಕಣಗಾಲ್ ಅವರಿಗೊಂದು ಗೀತ ನಮನ ಬರುವ ಫೆಬ್ರುವರಿ 9ರ ಭಾನುವಾರ ಸಂಜೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಡೆಯಲಿದೆ ….. ಸಾಹಿತ್ಯ ಹಾಗು ಸಂಗೀತದ ಸುವರ್ಣಯುಗದ ಮಧುರ ಗೀತೆಗಳನ್ನು
ನಮ್ಮ ನಡುವಿನ ಖ್ಯಾತ ಕಲಾವಿದರು ಹಾಡಲಿದ್ದಾರೆ .

ಶಿವಮೊಗ್ಗದ ಪ್ರತಿಷ್ಠಿತ ಸಂಸ್ಥೆ “ಅಭಿರುಚಿ” ಹಮ್ಮಿಕೊಂಡಿರುವ ಮನಸ್ಸು ಹಗುರಾಗುವ ಈ ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ನಗರಿ ಶಿವಮೊಗ್ಗೆಯ ಎಲ್ಲಾ ಸಹೃದಯರಿಗೆ ಆತ್ಮೀಯ ಸ್ವಾಗತ . ಬೆಳ್ಳಿಮೋಡದಂಚಿನ_ಬಂಗಾರದಹಾಡು

~ ವಿನಯ್ ಶಿವಮೊಗ್ಗ

MESCOM ಶಿವಮೊಗ್ಗದ ಗಾಂಧಿ ಬಜಾರ್ ಸುತ್ತಮುತ್ತ ಫೆ.03ರಂದು ವಿದ್ಯುತ್ ವ್ಯತ್ಯಯ

0

MESCOM ಶಿವಮೊಗ್ಗ ನಗರದ ಗಾಂಧಿಬಜಾರ್‌ನ ಸೊಪ್ಪಿನ ಮಾರುಕಟ್ಟೆ ಬಳಿ ವಿದ್ಯುತ್ ಪರಿಕರಗಳ ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಗಾಂಧಿಬಜಾರ್, ಬಿ.ಹೆಚ್.ರಸ್ತೆ, ಭರಮಪ್ಪನಗರ, ಉಪ್ಪಾರಕೇರಿ, ಹರಳೆಣ್ಣೆಕೇರಿ, ಕಸ್ತೂರಿ ಬಾ ರಸ್ತೆ. ಎಂ.ಕೆ.ಕೆ.ರಸ್ತೆ, ನಾಗಪ್ಪ ಕೇರಿ, ಸಾವರ್ಕರ್‌ನಗರ, ಎಲೆರೇವಣ್ಣಕೇರಿ, ಮೀನು ಮಾರುಕಟ್ಟೆ, ಯಾಲಕಪ್ಪಕೇರಿ, ಲಷ್ಕರ್ ಮೊಹಲ್ಲಾ, MESCOM ಆನವೇರಪ್ಪಕೇರಿ, ಧರ್ಮರಾಯನಕೇರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ವ್ಯಾಪ್ತಿಯಲ್ಲಿ ಫೆ.03 ರಂದು ಬೆಳಗ್ಗೆ 09.00 ಘಂಟೆಯಿಂದ ಸಂಜೆ 6.00 ಘಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಕೋರಿದೆ.

BY Raghavendra “ಅಕ್ಕ”ನ ಉಡುತಡಿ‌ ಕ್ಷೇತ್ರಕ್ಕೆ ಅಭಿವೃದ್ಧಿ‌ ಅನುದಾನಕ್ಕೆ ಬಿ.ವೈ.ರಾಘವೇಂದ್ರ‌ ಕೋರಿಕೆ

0

BY Raghavendra ಇತ್ತೀಚೆಗೆ ನವದೆಹಲಿಯಲ್ಲಿ ಕರ್ನಾಟಕ ಸರ್ಕಾರದ ಉಪಮುಖ್ಯಮಂತ್ರಿಗಳಾದ ಶ್ರೀ ಡಿ. ಕೆ. ಶಿವಕುಮಾರ್ ರವರನ್ನು ಶಿವಮೊಗ್ಗ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಭೇಟಿ ಮಾಡಿದ್ದರು. ಉಡುತಡಿಯ ಅಕ್ಕಮಹಾದೇವಿ ಯೋಜನೆಯನ್ನು ಪೂರ್ಣಗೊಳಿಸಲು ಅಗತ್ಯ ಅನುದಾನವನ್ನು ಬಿಡುಗಡೆ ಮಾಡಲು ಕೋರಿಕೊಂಡರು

CM Siddaramaiah ಕರ್ನಾಟಕದ ಬೇಡಿಕೆಗೆ ಸ್ಪಂದಿಸದ‌ಮೋದಿ ಸರ್ಕಾರ- ಸಿಎಂ ಸಿದ್ದರಾಮಯ್ಯ

CM Siddaramaiah ನೀರು ಇಲ್ಲ‌. ಅಭಿವೃದ್ಧಿ ಇಲ್ಲ-
ಕರ್ನಾಟಕಕ್ಕೆ ಸ್ಪಂದಿಸದ ಮೋದಿ ಸರ್ಕಾರ! ಎಂದು ರಾಜ್ಯದ ಮುಖ್ಯಮಂತ್ರಿ‌ ಸಿದ್ಧರಾಮಯ್ಯ ಜಾಲತಾಣದಲ್ಲಿ‌ ಪ್ರತಿಕ್ರಿಯೆ ಹಂಚಿಕೊಂಡಿದ್ದಾರೆ.

ಕರ್ನಾಟಕದ ಪ್ರಮುಖ ಜಲ ಯೋಜನೆಗಳು ಬತ್ತಿ ಹೋಗಿವೆ:

  • ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆ ಎಂದು ಘೋಷಿಸಲಾಗಿದೆ, ಆದರೆ ಶೂನ್ಯ ಹಣ!
  • ಮೇಕೆದಾಟು – ಅನುಮೋದನೆ ಇಲ್ಲ, ಬೆಂಬಲವಿಲ್ಲ!
  • ಕೃಷ್ಣಾ ಮೇಲ್ದಂಡೆ‌ ಯೋಜನೆ . ಕ್ಲಿಯರೆನ್ಸ್ ಇಲ್ಲ, ಹಣವಿಲ್ಲ!
  • ಕಳಸಾ-ಬಂಡೂರಿ – ಅನುಮತಿಯಿಲ್ಲದೆ ತಡೆಗೆ ಸಿಲುಕಿದೆ!

CM Siddaramaiah ಬಿಜೆಪಿ ಇತರೆ ರಾಜ್ಯಗಳಿಗೆ ಹಣ ಹೊಂಚುತ್ತಿದೆ. ಕರ್ನಾಟಕದ ನೀರಿನ ಸಂಕಷ್ಟತೆಯನ್ನ ಕಡೆಗಣಿಸಲಾಗಿದೆ
ಎಂದು ತೀಕ್ಷ್ಣ ಟೀಕಿಸಿದ್ದಾರೆ.

Mentally retarded children ಬುದ್ದಿಮಾಂದ್ಯ ಮಕ್ಕಳು ದೈವ ಸ್ವರೂಪಿ-ಎಚ್.ವಿ.ಕುಮಾರ ಸ್ವಾಮಿ

0

Mentally retarded children ಸಮಾಜ ಸೇವಕ ಹಾಗೂ ಹೈಕೋರ್ಟ್ ವಕೀಲ ಎಚ್.ವಿ. ಕುಮಾರಸ್ವಾಮಿ ಅವರು ತಮ್ಮ ಜನ್ಮ ದಿನವನ್ನು ವಿಶೇಷವಾಗಿ ಪಟ್ಟಣದ ಹೊರವಲಯದ ಹೊಸಪೇಟೆ ಬಡಾವಣೆಯಲ್ಲಿರುವ ನವಚೇತನ ಬುದ್ದಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಭಾನುವಾರ ಆಚರಿಸಿದರು.
ಈ ವೇಳೆ ಮಾತನಾಡಿದ ಎಚ್.ವಿ. ಕುಮಾರ ಸ್ವಾಮಿ ಅವರು, ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ಅಧಿಕಾರದಲ್ಲಿ ಇರಲೀ, ಇಲ್ಲದೇ ಇರಲೀ ಸದಾ ಬಡವರ ಪರ ಕಾಳಜಿ ಹೊಂದಿದ್ದರು. ಎಸ್. ಮಧು ಬಂಗಾರಪ್ಪ ಅವರು ಸಹ ತಂದೆಯವರ ಹಾದಿಯಲ್ಲಿಯೇ ನಡೆಯುತ್ತಿದ್ದಾರೆ. ಇವುಗಳೇ ತಮಗೆ ಪ್ರೇರಣೆ ಎಂದ ಅವರು, ದುಡಿಮೆಯ ಕೊಂಚ ಆದಾಯವನ್ನು ಸಮಾಜಕ್ಕಾಗಿ ವಿನಿಯೋಗ ಮಾಡಿದರೆ ದೈವ ಮೆಚ್ಚುತ್ತಾನೆ ಎಂದರು.
ಜನ್ಮದಿನದ ಹೆಸರಿನಲ್ಲಿ ದುಂದು ವೆಚ್ಚ ಮಾಡುವ ಬದಲು ಸಮಾಜದಲ್ಲಿ ಹಿಂದುಳಿದವರು, ನಿರ್ಗತಿಕರು ಹಾಗೂ ವಿಶೇಷಚೇತನ ಮಕ್ಕಳಿಗೆ ಸಹಾಯ ಮಾಡುವ ಮೂಲಕ ಆಚರಿಸಿಕೊಂಡರೆ ಆತ್ಮ ತೃಪ್ತಿ ದೊರೆಯುತ್ತದೆ. ಇಷ್ಟು ವರ್ಷದಲ್ಲಿ ಇದೇ ಮೊದಲು ಈ ರೀತಿಯ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವುದು ಸಾರ್ಥಕ ಮನೋಭಾವ ತೋರುತ್ತಿದೆ. ಈಗಾಗಲೇ ಬುದ್ದಿಮಾಂದ್ಯ ಮಕ್ಕಳ ವಸತಿ ಶಾಲೆಗೆ ತಮ್ಮ ಕೈಲಾದ ಸಹಾಯವನ್ನು ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಹಾಯ ಮಾಡುವ ಅಭಿಲಾಷೆಯೂ ಇದೆ. ಈ ಮಕ್ಕಳನ್ನು ನೋಡುತ್ತಿದರೆ ದೈವ ಸ್ವರೂಪಿ ಎನಿಸುತ್ತಿದ್ದು, ಅವರೊಂದಿಗೆ ಜನ್ಮ ಆಚರಿಸಿಕೊಳ್ಳಲು ಪುಣ್ಯ ಮಾಡಿರಬೇಕು ಎಂದರು.
ಸಂಸ್ಥೆಯ ಮುಖ್ಯ ಶಿಕ್ಷಕ ರವೀಂದ್ರ ಮಾತನಾಡಿ, ಎಚ್.ವಿ. ಕುಮಾರಸ್ವಾಮಿ ಅವರು ಹೈಕೋರ್ಟ್ನಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಡತನದ ಹಾದಿಯಲ್ಲಿ ಬೆಳೆದರು. ಆದರೂ ನೆಡೆದು ಬಂದ ಹಾದಿಯನ್ನು ಮರೆಯದೇ ಮುನ್ನೆಡೆಯುತ್ತಿದ್ದಾರೆ. ತಮ್ಮ ಸ್ನೇಹಿತರು ಮತ್ತು ಆಪ್ತ ವಲಯದೊಂದಿಗೆ ನಂಟನ್ನು ಹೊಂದಿದ್ದಾರೆ. ಅವರು ಅಪರೂಪದ ವ್ಯಕ್ತಿತ್ವವನ್ನು ಹೊಂದಿದ್ದಾರೆ ಎಂದು ಬಣ್ಣಿಸಿದರು.
Mentally retarded children ಈ ಸಂದರ್ಭದಲ್ಲಿ ಪ್ರಮುಖರಾದ ಕುಶಾಲ್ ಆರೇಕೊಪ್ಪ, ಬಿ. ಪ್ರಕಾಶ, ಬಿ. ನಾಗೇಶ್, ಡಿ. ಪ್ರಶಾಂತ್, ಎಚ್.ಪಿ. ರಾಜೇಶ್, ಎಂ.ಸಿ. ಜೀವೇಶ, ಅರುಣ, ರಾಜು, ಆನಂದ, ನವೀನ ಶಿಗ್ಗಾ, ಗಾಗಣ್ಣ, ಸೇರಿದಂತೆ ಸಂಸ್ಥೆಯ ಅಧ್ಯಾಪಕ ವೃಂದದವರು ಹಾಗೂ ಎಚ್.ವಿ. ಕುಮಾರಸ್ವಾಮಿ ಅಭಿಮಾನಿ ಬಳಗದವರು ಉಪಸ್ಥಿತರರಿದ್ದರು.ಸೊರಬ ಪಟ್ಟಣದ ಹೊರವಲಯದ ಹೊಸಪೇಟೆ ಬಡಾವಣೆಯಲ್ಲಿರುವ ನವಚೇತನ ಬುದ್ದಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಹೈಕೋರ್ಟ್ ವಕೀಲ ಎಚ್.ವಿ. ಕುಮಾರಸ್ವಾಮಿ ಅವರನ್ನು ಅಭಿನಂದಿಸಲಾಯಿತು.
೦೨ ಸೊರಬ ೦೧ಬಿ: ಸೊರಬ ಪಟ್ಟಣದ ಹೊರವಲಯದ ಹೊಸಪೇಟೆ ಬಡಾವಣೆಯಲ್ಲಿರುವ ನವಚೇತನ ಬುದ್ದಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ವಿಶೇಷಚೇತನ ಮಕ್ಕಳೊಂದಿಗೆ ಹೈಕೋರ್ಟ್ ವಕೀಲ ಎಚ್.ವಿ. ಕುಮಾರಸ್ವಾಮಿ ಅವರು ತಮ್ಮ ಜನ್ಮ ದಿನವನ್ನು ಆಚರಿಸಿಕೊಂಡರು.