Thursday, March 12, 2026
Thursday, March 12, 2026
Home Blog Page 410

S.N Channabasappa ಶಾಸಕ ಚೆನ್ನಿ ಅವರಿಂದ ಶಿವಮೊಗ್ಗದ 2 ನೇ ವಾರ್ಡಿಗೆ ಭೇಟಿ. ಸಾರ್ವಜನಿಕ ಕುಂದು ಕೊರತೆ ಆಲಿಕೆ

0

S.N Channabasappa ಇಂದು ಬೆಳಿಗ್ಗೆ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂಬರ್ 02ರ ವೀರಭದ್ರೇಶ್ವರ ಬಡಾವಣೆ ಹಾಗೂ ಶ್ರೀ ಸಾಯಿ ಬಡಾವಣೆಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಸ್ಥಳೀಯ ನಿವಾಸಿಗಳ ಕುಂದು ಕೊರತೆಗಳನ್ನು ಆಲಿಸಿದರು.

S.N Channabasappa ಈ ಸಂದರ್ಭದಲ್ಲಿ ಬಡಾವಣೆಗಳಲ್ಲಿ ಇರುವಂತಹ ಸಮಸ್ಯೆಗಳನ್ನು ಶೀಘ್ರವೇ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

GT&TC Shivamogga ಮೋಟಾರು ಗಳ ಸುಸ್ಥಿತಿ ,ದುಸ್ಥಿತಿ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ‌ ಮೂಡಿಸಿದ ಸಾರಿಗೆ ಸಿಬ್ಬಂದಿ

0

GT&TC Shivamogga ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ಶಿವಮೊಗ್ಗ ಮತ್ತು ಆರ್‌ಟಿಓ ಕಚೇರಿ ವತಿಯಿಂದ ಜ.31 ರಂದು ರಂದು 36 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ ದಿನಾಚರಣೆ -2025 ಕಾರ್ಯಕ್ರಮವನ್ನು ನಡೆಸಲಾಯಿತು.
GT&TC Shivamogga ಈ ಸಂದರ್ಭದಲ್ಲಿ ಆರ್‌ಟಿಓ ಅಧಿಕಾರಿಗಳು, ವಿದ್ಯಾರ್ಥಿಗಳಿಗೆ ಮೋಟಾರ್‌ಗಳ ಸುಸ್ಥಿತಿ ಮತ್ತು ದುಸ್ಥಿತಿ ಕುರಿತು ಕಾಳಜಿ ವಹಿಸುವುದರ ಬಗ್ಗೆ ಮತ್ತು ಮೋಟಾರುಗಳಿಂದ ಪರಿಸರ ಮಾಲಿನ್ಯ ತಡೆಗಟ್ಟುವುದುರ ಬಗ್ಗೆ , ರಸ್ತೆಯಲ್ಲಿ ಅಪಘಾತಗಳನ್ನು ತಡೆಗಟ್ಟುವುದರಲ್ಲಿ ಯುವಜನತೆಯ ಮಹತ್ವದ ಬಗ್ಗೆ ಮತ್ತು ಆರ್ ಟಿ ಓ ಚಿಹ್ನೆಗಳ ವಿವರಣೆ ನೀಡಿದರು. ನಂತರ ಆರ್‌ಟಿಓ ಅಧಿಕಾರಿಗಳು ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಿ, ವಿಜೇತರಿಗೆ ಬಹುಮಾನವನ್ನು ವಿತರಣೆ ಮಾಡಿದರು. ಕಾರ್ಯಕ್ರಮದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಮುರಗೇಂದ್ರ ಬಿ. ಶಿರೋಲ್ಕರ್, ಹಿರಿಯ ಮೋಟಾರು ವಾಹನ ನಿರೀಕ್ಷಕ ಪಿ. ಎಮ್. ಮಲ್ಲೇಶಪ್ಪ, ಕಚೇರಿ ಅಧೀಕ್ಷಕ ರಾಮಚಂದ್ರಪ್ಪ ಎಚ್. ಸಿ., ಸಿಬ್ಬಂದಿ ವರ್ಗದವರು ಹಾಗೂ ಜಿ ಟಿ ಟಿ ಸಿ ಯ ಘಟಕ ಮುಖ್ಯಸ್ಥ ಎಚ್ ಪಿ ನಾಗರಾಜ, ಪ್ರಾಂಶುಪಾಲರಾದ ದೀಪಕ್ ಕುಮಾರ್ ವಿ ಆರ್ ಹಾಗೂ ಸಿಬ್ಬಂದಿ ವರ್ಗದ ಉಪಸ್ಥಿತರಿದ್ದರು.

Bhadra Dam ಮೈಲಾರಲಿಂಗೇಶ್ವರ ಜಾತ್ರೆಗೆ ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ನೀರು‌ ಬಿಡುಗಡೆ. ಸಾರ್ವಜನಿಕರಿಗೆ ತಿಳುವಳಿಕೆ ಪ್ರಕಟಣೆ

0

Bhadra Dam 2024-25 ನೇ ಸಾಲಿನ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಗ್ರಾಮದ ಶ್ರೀ ಮೈಲಾರ ಲಿಂಗೇಶ್ವರ ಸ್ವಾಮಿಯ ಕಾರ್ಣಿಕೋತ್ಸವ ಪ್ರಯುಕ್ತ ಭದ್ರಾ ಜಲಾಶಯದಿಂದ ತುಂಗ-ಭದ್ರಾ ನದಿಗೆ ದಿ: 05-02-2025 ರಿಂದ 11-02-2025 ರವರೆಗೆ 5800 ಕ್ಯೂಸೆಕ್ಸ್ ನೀರನ್ನು ಹರಿಸಲು ಆದೇಶಿಸಲಾಗಿರುತ್ತದೆ.
Bhadra Dam ಪ್ರಾದೇಶಿಕ ಆಯುಕ್ತರ ಆದೇಶದನ್ವಯ ದಿ: 05-02-2025 ರ ರಾತ್ರಿ 100 ಕ್ಯೂಸೆಕ್ಸ್ ಮತ್ತು ದಿ: 06-02-2025 ರಿಂದ 11-02-2025 ರವರೆಗೆ ಪ್ರತಿದಿನ 800 ಕ್ಯೂಸೆಕ್ಸ್ನಂತೆ ಒಟ್ಟು 5800 ಕ್ಯೂಸೆಕ್ಸ್ ಪ್ರಮಾಣದ ನೀರನ್ನು ಭದ್ರಾ ನದಿಗೆ ಹರಿಸಲಾಗುವುದು.
ಮೇಲೆ ತಿಳಿಸಿದ ಅವಧಿಯಲ್ಲಿ ನದಿಯಲ್ಲಿ ಸಾರ್ವಜನಿಕರು ಮತ್ತು ರೈತರು ತಿರುಗಾಡುವುದು, ದನ ಕರುಗಳನ್ನು ಮೇಯಿಸುವುದು ಮತ್ತು ತೋಟಗಾರಿಕೆಗೆ ಸಂಬAಧಿಸಿದ ಕೆಲಸ ಮಾಡುವುದು ಇತ್ಯಾದಿಗಳನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ಮತ್ತು ರೈತರು ನದಿ ದಂಡೆಯಲ್ಲಿ ಪಂಪ್ ಸೆಟ್ ಅಳವಡಿಸುವುದು ಮತ್ತು ಅನಧಿಕೃತವಾಗಿ ನೀರೆತ್ತುವುದನ್ನು ನಿಷೇಧಿಸಲಾಗಿದೆ ಎಂದು ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಕನೀನಿನಿ ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ಆರ್ ರವಿಚಂದ್ರ ತಿಳಿಸಿದ್ದಾರೆ.

Department of Education in preventing child marriage ಬಾಲ್ಯವಿವಾಹ ತಡೆಗಟ್ಟುವಲ್ಲಿ ‌ ಶಿಕ್ಷಣಇಲಾಖೆ ಸಕ್ರೀಯವಾಗಬೇಕು-ನ್ಯಾ.ಎಂ.ಎಸ್. ಸಂತೋಷ್.

0

Department of Education in preventing child marriage ಬಾಲ್ಯ ವಿವಾಹ ತಡೆಗಟ್ಟುವಲ್ಲಿ ಶಿಕ್ಷಣ ಇಲಾಖೆ ಸಕ್ರಿಯವಾಗಿ ಕೆಲಸ ಮಾಡಬೇಕು. ಬಾಲ್ಯ ವಿವಾಹ ಮತ್ತು ಪೋಕ್ಸೋ ಪ್ರಕರಣ ತಗ್ಗಿಸಲು ಕೈಗೊಳ್ಳಬೇಕಾದ ಕ್ರಮದ ಕುರಿತು ಮುಕ್ತ ಚರ್ಚೆ ಆಗಬೇಕು. ಪೋಕ್ಸೋ ಪ್ರಕರಣ ಬಹಳ ಕಠಿಣ ಮತ್ತು ಕಟ್ಟುನಿಟ್ಟಾಗಿದೆ. ಎಂದು ಮುಖ್ಯ ಅತಿಥಿಗಳಾಗಿ‌ ಆಗಮಿಸಿದ್ದ ಹಿರಿಯ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ್ ಎಂ ಮಾತನಾಡಿದರು.
ವಿದ್ಯಾರ್ಥಿಗಳ ಗೈರನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಪೋಕ್ಸೋ ಪ್ರಕರಣವನ್ನು ವರದಿ ಮಾಡಲು ವಿಫಲರಾದವರು ಸಹ ಆರೋಪಿ ಆಗುತ್ತಾರೆ. ಆದ್ದರಿಂದ ವರದಿ ಮಾಡುವುದು ಬಹಳ ಮುಖ್ಯ ಎಂದ ಅವರು ಶಾಲಾ ಮಕ್ಕಳ ಪ್ರಾರ್ಥನೆ ವೇಳೆ ಮಕ್ಕಳಿಗೆ ಗುಡ್, ಬ್ಯಾಡ್ ಟಚ್, ಪೋಕ್ಸೋ ಕಾಯ್ದೆ ಕುರಿತು ಅರಿವು ಮೂಡಿಸಬೇಕೆಂದು ಈ ಕಾರ್ಯಾಗಾರದಲ್ಲಿ‌
ತಿಳಿಸಿದರು.

Department of Education in preventing child marriage ಡಯಟ್ ಕಾಲೇಜಿನ ಉಪನ್ಯಾಸಕರಾದ ಹರಿಪ್ರಸಾದ್ ಜಿ.ವಿ ಶಾಲೆಯಲ್ಲಿದೆ ಶಿಕ್ಷಣದ ಜೊತೆ ರಕ್ಷಣೆ ಮತ್ತು ಆರ್‌ಟಿಇ ಕಾಯ್ದೆ ಕುರಿತು ಮಾತನಾಡಿದರು.
ಸಭೆಯಲ್ಲಿ ಡಿಡಿಪಿಐ ಎಸ್.ಆರ್.ಮಂಜುನಾಥ್, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಯಾದ ಆರ್.ಮಂಜುನಾಥ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ತಾಜುದ್ದೀನ್ ಖಾನ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಶಾಲಾ ಮುಖ್ಯೋಪಾಧ್ಯಾಯರು, ಬಿಆರ್‌ಸಿ, ಸಿಆರ್‌ಸಿ, ಅನುದಾನಿಕ ಶಾಲೆ ಶಿಕ್ಷಕರು ಹಾಜರಿದ್ದರು.

Shimoga News ಶಿವಮೊಗ್ಗ ಮುಂದುವರೆದ ಜಿಲ್ಲೆ‌.ಹೆಚ್ಚು ಬಾಲ್ಯವಿವಾಹ ಪ್ರಕರಣಗಳ ವರದಿ ಆತಂಕ ಪಡುವಂತಿದೆ -ಅಪರ್ಣಾ ಎಂ.ಕೊಳ್ಳ

0

Shimoga News ಮಕ್ಕಳ ಮತ್ತು ಅವರ ಹಕ್ಕುಗಳ ರಕ್ಷಣೆ ಮಾಡಬೇಕಾದರೆ ಮುಖ್ಯವಾಗಿ ಮಕ್ಕಳ ಹಕ್ಕುಗಳ ರಕ್ಷಣೆ ಕಾಯ್ದೆ 2016 ಮತ್ತು ಮಕ್ಕಳ ರಕ್ಷಣೆ ನಿಯಮಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಅಪರ್ಣಾ ಎಂ ಕೊಳ್ಳ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಹಯೋಗದೊಂದಿಗೆ ‘ಶಾಲೆಯಲ್ಲಿದೆ ಶಿಕ್ಷಣದ ಜೊತೆ ರಕ್ಷಣೆ – ಆರ್ ಟಿ ಇ ಕಾಯ್ದೆ 2009 ಅನುಷ್ಟಾನ ಕುರಿತು ಜಿಲ್ಲಾ ಮಟ್ಟದ ಅಧಿಕಾರಿ, ಸಿಬ್ಬಂದಿಯವರೊAದಿಗೆ ಬಾಲ ನ್ಯಾಯ ಮಂಡಳಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಮಕ್ಕಳ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಕರ್ತವ್ಯ. ಮಕ್ಕಳು ಹೆಚ್ಚಿನ ಸಮಯ ಶಿಕ್ಷಣ ಸಂಸ್ಥೆಗಳಲ್ಲಿ ಕಳೆಯುತ್ತಾರೆ. ಆದ್ದರಿಂದ ಶಿಕ್ಷಣ ಸಂಸ್ಥೆ, ಇಲಾಖೆಯ ಜವಾಬ್ದಾರಿ ಹೆಚ್ಚಿರುತ್ತದೆ. ಆರ್‌ಟಿಇ ಕಾಯ್ದೆ 2009 ರಿಂದ ಜಾರಿಗೆ ಬಂದಿದೆ. ಇಲ್ಲಿಯವರೆಗೆ ಎಷ್ಟು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲಾಗಿದೆ ಎಂಬುದನ್ನು ನಾವು
ಶಿವಮೊಗ್ಗ ಮುಂದುವರಿದ ಜಿಲ್ಲೆಯಾಗಿದೆ. ಆದರೆ ರಾಜ್ಯದಲ್ಲೇ ಹೆಚ್ಚು ಬಾಲ್ಯ ವಿವಾಹ ಪ್ರಕರಣ ವರಿದಯಾಗುತ್ತಿರುವುದು ಆತಂಕಕಾರಿಯಾಗಿದೆ. ಹಾಗೂ ಪೋಕ್ಸೋ ಮತ್ತು ಬಾಲ್ಯ ವಿವಾಹದ ಶೇ.90 ಮಕ್ಕಳು ಸರ್ಕಾರಿ ಶಾಲೆಗಳ ಮಕ್ಕಳಾಗಿರುವುದು ಕೂಡ ಕಳಕಳಕಾರಿ.
ರಾಜ್ಯದಲ್ಲಿ 18 ಲಕ್ಷ ವಿದ್ಯಾರ್ಥಿಗಳ ಅಪಾರ ಅಪ್‌ಡೇಟ್ ಆಗಿಲ್ಲ. 8 ಲಕ್ಷ ವಿದ್ಯಾರ್ಥಿಗಳ ವರದಿ ಮಿಸ್ ಮ್ಯಾಚ್ ಆಗಿದೆ. ಜಿಲ್ಲೆಯಲ್ಲಿ 2.5 ಲಕ್ಷ ಮಕ್ಕಳ ಪೈಕಿ 50 ಸಾವಿರ ಮಕ್ಕ ಅಪ್‌ಡೇಟ್ ಆಗಿಲ್ಲ. ಶಿಕ್ಷಣ ಇಲಾಖೆಯನ್ನು ಇದಕ್ಕೆ ಹೊಣೆ ಮಾಡಬೇಕಾಗುತ್ತದೆ. ಇಲಾಖೆ ವಿದ್ಯಾರ್ಥಿಗಳ ದಾಖಲಾತಿಗಳನ್ನು ಸರಿಪಡಿಸಿ ಪಡೆಯಬೇಕು. ಸ್ಯಾಟ್ಸ್ ಅಪ್‌ಡೇಟ್ ಮಾಡಬೇಕು. ಜಿಲ್ಲೆಯಲ್ಲಿ ಡ್ರಾಪ್ ಔಟ್ ಮಕ್ಕಳ ಸಂಖ್ಯೆಯೂ ಹೆಚ್ಚಿದೆ. ಕೆಲ ಸಾಮಾಜಿಕ ಪಿಡುಗಗಳಿಗೆ ಕಾರಣ ಶಾಲೆಯಿಂದ ಹೊರಗುಳಿದ ಮಕ್ಕಳು. ಆದ್ದರಿಂದ ಡ್ರಾಪ್‌ಔಟ್‌ನ್ನು ತಗ್ಗಿಸಬೇಕು. ಗೈರು ಹಾಜರಾದ ಮಕ್ಕಳನ್ನು ಶಾಲೆಗೆ ಕರೆ ತರಬೇಕು. ಗುಣಮಟ್ಟದ ಆಹಾರವನ್ನೂ ನೀಡಬೇಕು ಎಂದು
ಶ್ರೀಮತಿ‌ ಅಪರ್ಣಾ ಕೊಳ್ಳ‌ ತಿಳಿಸಿದರು.

Shimoga News ಶಾಲೆಗಳಲ್ಲಿ ಮಕ್ಕಳ ರಕ್ಷಣಾ ನಿಯಮಗಳು ಸಮರ್ಪಕವಾಗಿ ಅನುಷ್ಟಾನವಾಗುತ್ತಿಲ್ಲ. ಬಾಲ್ಯ ವಿವಾಹ ನಿಷೇಧ ಕಾಯ್ದೆ ಅನುಷ್ಟಾನದಲ್ಲಿ ಶಿಕ್ಷಣ ಇಲಾಖೆ ನೋಡಲ್ ಇಲಾಖೆಯಾಗಿದೆ. ಆದರೆ ಇಲಾಖೆಯಿಂದ ಇದುವರೆಗೆ ಒಂದೂ ಎಫ್‌ಐಆರ್ ಆಗಿಲ್ಲ. ಯಾವುದೇ ಮಗು ಶಾಲೆಗೆ ಬರುತ್ತಿಲ್ಲ ಅಥವಾ ಏನಾದರೂ ಬದಲಾವಣೆ ಆಗಿದೆ ಎಂದರೆ ಮೊದಲು ಶಿಕ್ಷಕರಿಗೆ ಗೊತ್ತಾಗುತ್ತದೆ. ಮಕ್ಕಳ ವಿಷಯದಲ್ಲಿ ಶಿಕ್ಷಕರ ಜವಾಬ್ದಾರಿ ಹೆಚ್ಚಿರುತ್ತದೆ. ಇನ್ನು ಮುಂದೆ ಜಿಲ್ಲೆಯಲ್ಲಿ ಬಾಲ್ಯ ವಿವಾಹದ ಆಗದಂತೆ ಶಿಕ್ಷಣ ಇಲಾಖೆ, ಸಂಸ್ಥೆಗಳು ಕ್ರಮ ವಹಿಸಬೇಕು. ಇದು ನಿಮ್ಮ ಬಹು ದೊಡ್ಡ ಜವಾಬ್ದಾರಿ ಕೂಡ ಆಗಿದೆ ಎಂದು
ಅಪರ್ಣಾ ಎಂ ಕೊಳ್ಳ ಅವರು ಅಭಿಪ್ರಾಯ
ಹಂಚಿಕೊಂಡರು

Sharan Machideva Jayanti ಘನಜ್ಞಾನಿ, ಶರಣ ಮಡಿವಾಳ ಮಾಚದೇವರು.ಲೇ; ಎನ್.ಎನ್.ಕಬ್ಬೂರ್

0

Sharan Machideva Jayanti ಮಡಿವಾಳ ಮಾಚಿದೇವರ ಹುಟ್ಟಿದ ದಿನದ ಬಗ್ಗೆ ನಿಖರವಾದ ಮಾಹಿತಿ ಇಲ್ಲ, ಆದರೂ ಬಲ್ಲ ಮೂಲಗಳಿಂದ ಫೆಬ್ರವರಿ 1 ರಂದು ಇವರ ಜಯಂತಿಯನ್ನು ಆಚರಿಸಲಾಗುತ್ತದೆ. ಹನ್ನೆರಡನೇ ಶತಮಾನದ ಶರಣರ ಇತಿಹಾಸವು ವಿಶ್ವದ ಇತಿಹಾಸದಲ್ಲಿ ಒಂದು ಬೆಳ್ಳಿ ಚುಕ್ಕಿ. ಸಾಮಾನ್ಯ ಜನರಲ್ಲಿ ಇರುವ ಮೂಢನಂಬಿಕೆಗಳನ್ನು ಕಿತ್ತೆಸೆದು ಆತ್ಮಗೌರವ ಬೆಳೆಸಿಕೊಳ್ಳುವ ಧೈರ್ಯ ತುಂಬಿದವರೆಂದರೆ ಶರಣರು. ಅಂದು ಸಮಾಜದಲ್ಲಿ ತಾಂಡವವಾಡುತ್ತಿದ್ದ ಮೋಸ-ವಂಚನೆ, ಮೇಲು- ಕೀಳು ಎಂಬ ಭಾವನೆಯನ್ನು ತೊಡೆದುಹಾಕಿದರು. ಅಧ್ಯಾತ್ಮದಲ್ಲಿ ಗಂಡು-ಹೆಣ್ಣು ಸಮಾನರೆಂದು ತಮ್ಮ ವಚನಗಳಿಂದ ಸಾರಿದರು. ಕನ್ನಡ ನಾಡಿನಲ್ಲಿ ಧರ್ಮದ ಉಳಿವಿಗಾಗಿ ಸಾಮಾಜಿಕ ಕ್ರಾಂತಿಯ ಕೇಂದ್ರವ್ಯಕ್ತಿ ಬಸವಣ್ಣನವರಾದರೆ; ಅಲ್ಲಮ, ಸಿದ್ದರಾಮ, ಮಡಿವಾಳ ಮಾಚಿದೇವ, ಅಂಬಿಗರ ಚೌಡಯ್ಯ ಮುಂತಾದವರು ಈ ಕ್ರಾಂತಿಯಲ್ಲಿ ಧುಮುಕಿದವರೆನ್ನಬಹುದು. ಇವರು ಅನುಭವ ಮಂಟಪದಲ್ಲಿ ಸೇರಿ ವಿಚಾರಮಂಥನ ನಡೆಸಿ ಹೊಸ ಮೌಲ್ಯಗಳನ್ನು ನಿರ್ಣಯಿಸುತ್ತಿದ್ದರು. ಕಲ್ಯಾಣದಲ್ಲಿ ಲಕ್ಷದ ತೊಂಭತ್ತಾರು ಸಾವಿರ ಶಿವಶರಣರಿದ್ದರು.
ಬಸವಾದಿ ಪ್ರಥಮರಲ್ಲಿಯೇ ಬಸವಣ್ಣನವರಿಗೆ ಬಲಗೈಯಂತೆ ಇದ್ದವರು ಶರಣ ಮಡಿವಾಳ ಮಾಚಯ್ಯ. ಇವರು ವೀರಭದ್ರನ ಅವತಾರವೆಂದು, ಗಣಾಚಾರಿ ವೀರಘಂಟೆ ಮಾಚಿದೇವರೆಂದು ಹಲವು ನಾಮಗಳಿಂದ ಜನಪ್ರಿಯರಾಗಿದ್ದರು. ಅಲ್ಲದೆ ರುದ್ರಮೂರ್ತಿ, ಭಾಳಲೋಚನಾವತಾರಿ, ನರಲೋಕ ಕಲಿರುದ್ರ, ಧೀರಕಾಯಕದ ಹುರಿಯಾಳು, ಕಾರುಣ್ಯ ರತ್ನಾಕರ, ಜಂಗಮಹಿಮಾಚಲ, ಅಜೇಯವೀರ, ರಜಕರತ್ನ, ಶರಣರಕ್ಷಣಮಣಿ ಮುಂತಾದ ಬಿರುದಾಂಕಿತರಾಗಿಯೂ ಶರಣರ ಪರಂಪರೆಯಲ್ಲಿ ಮಿನುಗಿದವರು.

● ಪೌರಾಣಿಕ ಹಿನ್ನೆಲೆ:- ಒಮ್ಮೆ ಶಿವನು ಒಡ್ಡೋಲಗದಲ್ಲಿದ್ದಾಗ ಗಣೇಶ್ವರನು ದಕ್ಷಬ್ರಹ್ಮನ ಯಜ್ಞವನ್ನು ಧ್ವಂಸ ಮಾಡಿ ವಿಜಯೋನ್ಮತ್ತನಾಗಿ ಸಭೆಯೊಳಗೆ ಬರುತ್ತಿದ್ದ. ಆಗ ಆತನು ಹೊದೆದ ಶಲ್ಯವು ಅಲ್ಲಿ ನೆರೆದ ಗಣಂಗಳ ಮೈಮೇಲೆ ಹಾದುಬಂದಿತು. ಅದನ್ನು ಕಂಡು ನ್ಯಾಯನಿಷ್ಠುರ ಶಿವನು ಗಣೇಶ್ವರನನ್ನು ಕುರಿತು, ‘ಹತ್ತು ಜನ ನೆರೆದು ಕುಳಿತೆಡೆ ಹೇಗೆ ನಡೆದುಕೊಳ್ಳಬೇಕೆಂಬುದು ನಿನಗೆ ತಿಳಿಯದು. ಗಣಂಗಳಿಗೆ ಅಪಚಾರವೆಸಗಿರುವಿ. ಆದ್ದರಿಂದ ನೀನು ಭೂಮಿಗೆ ಹೋಗಿ ಜನಿಸು. ಅಲ್ಲಿ ಶರಣರ ವಸ್ತ್ರಗಳನ್ನು ತೊಳೆದು ಮಡಿ ಮಾಡು. ಆಗ ನಿನಗೆ ಮುಕ್ತಿ ಎಂದ. ಅಂತೆಯೇ ವೀರಭದ್ರನೇ ಜನಿಸಿ ಮಾಚಿದೇವನಾದನೆಂದು ಹೇಳಲಾಗುತ್ತದೆ.

● ಜನಪದ ಹಿನ್ನೆಲೆ:- ಶರಣ ಮಾಚಿದೇವ ಹನ್ನರಡನೇ ಶತಮಾನದಲ್ಲಿ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿಯ ಪರ್ವತಯ್ಯ-ಸುಗ್ಗಲವ್ವ ಶಿವಭಕ್ತ ದಂಪತಿಯ ಮಗನಾಗಿ ಜನಿಸಿದರು. ಮಾಚಯ್ಯನವರನ್ನು ವಿದ್ಯಾಭ್ಯಾಸಕ್ಕೆಂದು ಕುಲಗುರು ಕಲಿದೇವರ ಬಳಿ ತಂದೆ-ತಾಯಿ ಕಳಿಸಿದರು. ಶರಣ ಮಾಚಯ್ಯ ಅನುಭಾವದ ವಿದ್ಯೆ ಪಡೆದು, ಗುರುಗಳ ಆಶೀರ್ವಾದದಿಂದ ಕಲ್ಯಾಣಕ್ಕೆ ಬಂದರು. ಶರಣರ ಬಟ್ಟೆಯನ್ನು ತೊಳೆಯುವ ಕಾಯಕ ಮಾಡಿದರು. ಬಿಜ್ಜಳನ ಸೈನ್ಯದಲ್ಲಿ ಅಧಿಕಾರಿಯಾಗಿದ್ದು, ಬಸವಣ್ಣನವರ ಪ್ರಭಾವದಿಂದ ಶರಣರಾದರು.

● ಇಡೀ ಶರಣಧರ್ಮದಲ್ಲಿ ತನಗೊಂದು ಯೋಗ್ಯತೆ, ಅರ್ಹತೆ ಲಭ್ಯವಾಗಿದ್ದರೆ ಅದು ಶರಣ ಮಾಚಿದೇವನಿಂದ ಎಂದಿದ್ದಾರೆ ಬಸವಣ್ಣ. ‘ಕತ್ತಲೆಯೊಳಗೆ ಬೆಳಕು ಹೊಕ್ಕಂತಾಯಿತು ಶರಣ ಮಡಿವಾಳ ಮಾಚಿದೇವ ತಂದೆ ಕೃಪೆಯಿಂದ…’ ಎಂದು ಅಲ್ಲಮಪ್ರಭುಗಳು ಹೇಳಿರುವುದು ಮಾಚಿದೇವರ ಘನಜ್ಞಾನಕ್ಕೆ ಹಿಡಿದ ಕನ್ನಡಿ.

● ವಚನಗಳ ಸಂರಕ್ಷಕ:- ಕಲ್ಯಾಣದ ಕ್ರಾಂತಿಯ ಸಂದರ್ಭದಲ್ಲಿ ಶರಣರ ವಚನ ಸಾಹಿತ್ಯವನ್ನು ನಾಶಪಡಿಸುವ ಪ್ರಯತ್ನ ನಡೆಯಿತಷ್ಟೆ. ಆಗ ಚನ್ನಬಸವಣ್ಣನವರ ನೇತೃತ್ವದಲ್ಲಿ ಹನ್ನೆರಡು ಸಾವಿರ ಶರಣರ ತಂಡ ರಚನೆಯಾಯಿತು. ಮಾಚಿದೇವ ತಂಡದ ದಂಡನಾಯಕರಾಗಿ ವಚನ ಸಾಹಿತ್ಯವನ್ನು ಬೆನ್ನ ಮೇಲೆ, ತಲೆಯ ಮೇಲೆಯೇ ಹೊತ್ತು ಹೋರಾಡಿದರು. ಅಲ್ಲದೆ ವಚನ ಸಾಹಿತ್ಯದ ರಕ್ಷಣೆಗಾಗಿ ಮಾಚಿದೇವರು ಯುದ್ಧ ಮಾಡಿದರು. ಮುರುಗೋಡು ಯುದ್ಧದಲ್ಲಿ ಮೈಗೆ ಆದ ಗಾಯದಿಂದ ಬಳಲಿ ಇಷ್ಟಲಿಂಗದಲ್ಲಿ ತಲ್ಲೀನರಾಗಿ ಲಿಂಗೈಕ್ಯರಾದರು. ಹೀಗೆ ಶರಣರ ವಚನಸಾಹಿತ್ಯದ ರಕ್ಷಣೆಗಾಗಿ ಹೋರಾಡಿದ ಮಾಚಿದೇವರು ಅಮರರಾದರು. ಇಂದು ಅವರ ಜಯಂತಿಯನ್ನು ನಾಡಿನ ಎಲ್ಲೆಡೆ ಶ್ರದ್ಧೆಯಿಂದ ಆಚರಿಸಲಾಗುತ್ತಿದೆ.

●ಘನಜ್ಞಾನಿ ಮಾಚಿದೇವ:- ಒಮ್ಮೆ ಬಸವಣ್ಣನವರು, ಬೇಡುವ ಭಕ್ತರಿಲ್ಲದೆ ಬಡವಾದೆ ಎಂದರಂತೆ. ಈ ಸುದ್ದಿ ಮಾಚಿದೇವರಿಗೆ ತಿಳಿಯಿತು. ‘ಶಿವ! ಶಿವಾ! ಬಸವಣ್ಣನವರ ಬಾಯಲ್ಲಿ ಇಂಥ ಮಾತೆ?’ ಎಂದು ಕಿವಿ ಮುಚ್ಚಿಕೊಂಡರು. ವಿಷಯ ತಿಳಿದ ಬಸವಣ್ಣ ಮಾಚಿದೇವರ ಬಳಿ ಬಂದು ‘ಮಾಚಯ್ಯ, ನೀನು ಅರಿವಿನ ತಿರುಳು. ನಾನು ಮರೆವೆಯಿಂದ ಮಾಡಿದ ತಪ್ಪನ್ನು ನೀನು ಅರಿವಿನಿಂದ ತಿದ್ದಬೇಕು’ ಎನ್ನುತ್ತಾರೆ. ಮಾಚಿದೇವರ ಘನಜ್ಞಾನದ ಕುರಿತು ಬಸವಣ್ಣನವರು ಹೀಗೆ ಬಣ್ಣಿಸಿದ್ದಾರೆ;
ಶರಣರ ವಸ್ತ್ರಗಳನ್ನು ಮಡಿ ಮಾಡುವ ಕಾಯಕದ ಮಾಚಿದೇವ, ‘ಅರಸುತನ ಮೇಲಲ್ಲ–ಅಗಸತನ ಕೀಳಲ್ಲ’ ಎಂಬುದನ್ನು ಸಾರಿದ ಅಚಲ ಕಾಯಕನಿಷ್ಠ ಶರಣ. ಮಡಿ ಬಟ್ಟೆ ಹೊತ್ತುಕೊಂಡು ‘ವೀರ ಘಂಟೆ’ ಬಾರಿಸುತ್ತ, ಭಕ್ತರಲ್ಲದವರು ತಮ್ಮನ್ನು ಮುಟ್ಟಬಾರದೆಂಬ ನಿಯಮವನ್ನು ಮಾಚಯ್ಯ ವಿಧಿಸಿಕೊಂಡಿದ್ದರು. ಕಾಯಕ ಮಾಡದ ಸೋಮಾರಿಗಳ – ಬಡವರನ್ನು ಶೋಷಿಸುವವರ, ದುರ್ಗುಣವುಳ್ಳವರ ಬಟ್ಟೆಗಳನ್ನು ಮುಟ್ಟದ ಮಾಚಿದೇವರು ವೀರಭದ್ರಾಂಶ ಸಂಭೂತ ಅವತಾರಪುರುಷ ಎಂಬ ಪ್ರತೀತಿಯಿದೆ.

Sharan Machideva Jayanti ● ವಚನಗಳ ರಚನೆ:- ಮಡಿವಾಳ ಮಾಚಿದೇವರು ಸಾವಿರಾರು ವಚನಗಳನ್ನು ಬರೆದಿರುವರೆಂಬ ಉಲ್ಲೇಖವಿದೆ. ಅವರು ಬರೆದಿರುವ 353 ವಚನಗಳು ಮಾತ್ರ ನಮಗೆ ಲಭ್ಯ. ಇವರ ವಚನಗಳಲ್ಲಿ ಉಪಮೆ, ರೂಪಕ ಮತ್ತು ನಾಣ್ಣುಡಿಗಳ ಬಳಕೆ ಹೇರಳವಾಗಿದೆ. ಅಲ್ಲದೆ ವಚನಗಳಲ್ಲಿ ದೃಷ್ಟಾಂತಗಳನ್ನೂ ಬಿಂಬಿಸಿದ್ದಾರೆ.
ಅಂಧಕಾರದ ದೆಸೆಯಿಂದ ಚಂದ್ರನ ಪ್ರಭೆಯಾಯಿತು.
ನಿಂದಕರ ನುಡಿಯ ಏಡಿಸಲ್ಕೆ ಶಿವಭಕ್ತಿಯ ಪ್ರಭೆಯಾಯಿತು. ಅಹುದೆಂದಡೆ ಅಲ್ಲವೆಂದತಿಗಳೆವರು.
ಕುತರ್ಕ ಶಾಸ್ತ್ರದಿಂದ ಯಮಗತಿಗರ ಕೂಡೆ
ನಾನಾ ಜನ್ಮಕ್ಕೇರದೆ, ಶಿವಾಚಾರದ ಪಥವ ತೋರಿಸಯ್ಯಾ ಕಲಿದೇವರದೇವ. ಇಲ್ಲಿ ಶಿವಭಕ್ತರು ಸತ್ವಪರೀಕ್ಷೆಗಳಿಂದ ಪರಿಶುದ್ಧರಾಗುತ್ತಾರೆ. ಆದರೆ ಹೀನಕೃತ್ಯಗಳನ್ನು ಮಾಡುವ ಜನರು ಹಲವು ಜನ್ಮಾಂತರಗಳಲ್ಲಿ ಬಳಲುತ್ತಾರೆ. ನನ್ನನ್ನು ಶಿವಭಕ್ತರಂತೆ ಶಿವಾಚಾರದ ಸನ್ಮಾರ್ಗ ತೋರಿಸೆಂಬ ಭಾವವು ಈ ವಚನದಿಂದ ವ್ಯಕ್ತವಾಗುತ್ತದೆ.

Sharan Machideva Jayanti 2025 ಶರಣ ಮಾಚಿದೇವರು ದೇಹದ ಶುಚಿತ್ವದ ಸಂಗಡ ಮನಸ್ಸಿನ ಶುಚಿತ್ವದ ಬಗ್ಗೆ ಅರಿವು ಮೂಡಿಸಿದವರು- ಶಾಸಕ ಚನ್ನಬಸಪ್ಪ

0

Sharan Machideva Jayanti 2025 ಮಡಿವಾಳ ಮಾಚಿದೇವ 12 ನೇ ಶತಮಾನದಲ್ಲಿ ಜಾತಿ ಪದ್ದತಿಯ ವಿರುದ್ಧ ಹೋರಾಡಿದರು. ಆ ಮೂಲಕ ಸರ್ವರಿಗೂ ಸಮಪಾಲು, ಸಮಬಾಳು ಎಂಬ ಆದರ್ಶದ ಮಾರ್ಗವನ್ನು ಹಾಕಿಕೊಟ್ಟವರು. ಪ್ರಸ್ತುತ ನಾವೆಲ್ಲರೂ ಅವರ ಜೀವನಾದರ್ಶಗಳನ್ನು ಅನುಸರಿಸಬೇಕು ಎಂದು ಶಾಸಕರಾದ ಎಸ್. ಎನ್. ಚನ್ನಬಸಪ್ಪ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಮಡಿವಾಳ ಸಮಾಜ ಸಂಘ ಸಹಯೋಗದೊಂದಿಗೆ ಶನಿವಾರ ನಗರದ ಕುವೆಂಪು ರಂಗಮAದಿರದಲ್ಲಿ ಆಯೋಜಿಸಿದ್ದ ಶ್ರೀ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಡಿವಾಳ ಮಾಚಿದೇವರು ಯಾವುದೇ ಜಾತಿ, ಜನಾಂಗ, ಧರ್ಮಕ್ಕೆ ಸಿಮೀತವಾಗದೆ ಇಡೀ ಮನುಕುಲದ ಒಳಿತಿಗಾಗಿ ದುಡಿದವರು. ಈ ಸಮಾಜಕ್ಕೆ ಯಾವುದು ಬೇಕು, ಬೇಡ ಎಂಬ ಚಿಂತನೆಯಲ್ಲಿ ತೊಡಗಿಕೊಂಡವರು. ಇದಲ್ಲದೆ ಸದಾ ಶೋಷಿತರು, ಅಸ್ಪೃಶ್ಯರು, ಶಿಕ್ಷಣದಿಂದ ವಂಚಿತರಾದವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದರು. ಮಾಚಿದೇವನು ಕೂಡ ಶಿಕ್ಷಣದಿಂದ ವಂಚಿತರಾದ ಸಮುದಾಯದಿಂದ ಬಂದವರು. ಆದರೆ ಅವರಿಗೆ ಮಲ್ಲಿಕಾರ್ಜುನ ಸ್ವಾಮಿ ಎಂಬ ಗುರು ಶಿಕ್ಷಣ ನೀಡಿದರು. ಅದರಿಂದ ಅವರಿಗೆ 3 ಲಕ್ಷಕ್ಕೂ ಹೆಚ್ಚು ವಚನಗಳನ್ನು ರಚಿಸಲು ಸಾಧ್ಯವಾಯಿತು. ಮಲ್ಲಿಕಾರ್ಜುನ ಸ್ವಾಮಿ ಇಲ್ಲದಿದ್ದರೆ ಮಾಚಿದೇವನಂತಹ ದಾರ್ಶನಿಕನನ್ನು ಈ ಸಮಾಜ ನೋಡುತ್ತಿರಲಿಲ್ಲ. ಗುರುಪರಂಪರೆ ಇಲ್ಲದೆ ಸಮಾಜವನ್ನು ಕಟ್ಟಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಮಾಚಿದೇವನು ವಚನಗಳ ಮೂಲಕ ಪ್ರಕಾಶಮಾನವಾಗಿ ಬೆಳೆದರು. ದೇಹದ ಶುಚಿತ್ವ ಬಗ್ಗೆ ಮಾತ್ರವಲ್ಲದೆ ಮನಸ್ಸಿನ ಶುಚಿತ್ವದ ಬಗ್ಗೆಯೂ ಅರಿವು ಮೂಡಿಸಿದರು. ಮಡಿ ಮೈಲಿಗೆಯ ತಾರತಮ್ಯದ ವಿರುದ್ಧ ಸಂಘಟಿಸಿದರು. ಕಾಯಕ, ಕಾರ್ಯ ಹೀಗೇ ಹತ್ತು ಹಲವಾರು ವಿಷಯಗಳನ್ನು ತಿಳಿಸಿಕೊಟ್ಟಿದ್ದಾರೆ. ಇವೆಲ್ಲವೂ ಮಾತಿಗೆ ಸೀಮಿತವಾಗದೇ ಅದನ್ನು ಅನುಸರಿಸಬೇಕು ಎಂದರು.
ವಿಧಾನ ಪರಿಷತ್ ಶಾಸಕರಾದ ಬಲ್ಕೀಶ್ ಬಾನು ಮಾತನಾಡಿ, ಯುವಕರಿಗೆ ಇಂತಹ ಮಹನೀಯರ ಪರಿಚಯವಾಗುವುದು ಇತ್ತೀಚಿನ ವಿದ್ಯಾಮಾನಗಳಲ್ಲಿ ಅಗತ್ಯವಾಗಿದೆ. ಯುವಜನತೆಯನ್ನು ಕೂಡ ಕಾರ್ಯಕ್ರಮದಲ್ಲಿ ಒಳಗೊಳ್ಳುವಂತೆ ಮಾಡಬೇಕು. ಆ ಮೂಲಕ ವಚನಕಾರರ ಸಂದೇಶವು ಇಡೀ ಸಮಾಜಕ್ಕೆ ತಲುಪಬೇಕು ಎಂದರು.
ಮಾಚಿದೇವ ಅಸ್ಪೃಶ್ಯತೆ, ತಾರತಮ್ಯದಂತಹ ಸಾಮಾಜಿಕ ಪಿಡುಗಗಳ ವಿರುದ್ಧ ಕ್ರಾಂತಿ ಮಾಡುತ್ತಿದ್ದರು. ಸಮಾಜದ ಪ್ರಾವಿತ್ಯತೆ ಕಾಪಾಡುವಲ್ಲಿ ಶ್ರಮಿಸಿದ್ದಾರೆ. ಕಾಯಕವೇ ಕೈಲಾಸ ತತ್ವದಲ್ಲಿ ನಂಬಿಕೆ ಇಟ್ಟಿಕೊಂಡಿದ್ದ ಇವರು ದೇಹ ಮಾತ್ರವಲ್ಲ ಮನಸ್ಸು ಕೂಡ ಶುದ್ದವಾಗಿರಬೇಕೆಂದು ಸಾರುತ್ತಿದ್ದರು ಎಂದರು.
Sharan Machideva Jayanti 2025 ಸೂಡಾ ಅಧ್ಯಕ್ಷರಾದ ಹೆಚ್.ಎಸ್. ಸುಂದರೇಶ್ ಮಾತನಾಡಿ, ಮಾಚಿದೇವ ಮನುಷ್ಯರಲ್ಲ. ಅವರು ದೈವ ಸಂಭೂತರು. 12 ನೇ ಶತಮಾನದಲ್ಲಿ ಸಮಾಜದಲ್ಲಿನ ಅಂಕುಡೊAಕು ತಿದ್ದಲು ಬಂದವರು. ಆ ಮೂಲಕ ವಚನ ಕ್ರಾಂತಿ ಆರಂಭಿಸಿ ಶೋಷಿತ ವರ್ಗಗಳ ಸುಧಾರಣೆ ಮಾಡಿದರು. ಶರಣರೆಲ್ಲರೂ ಒಂದುಗೂಡಿಕೊAಡು ಸಮಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದ್ದರು. ಈಗ ಅಂತಹ ಕಾರ್ಯವನ್ನು ಅಂಬೇಡ್ಕರ್ ಮಾಡಿದ್ದಾರೆ. ಶರಣರ ಮಾರ್ಗವನ್ನು ಅನುಸರಿಸಿದ ಅಂಬೇಡ್ಕರ್ ಎಲ್ಲರಿಗೂ ಸ್ವಾತಂತ್ರö್ಯ, ಸಮಾನವಾದ ಹಕ್ಕನನ್ನು ನೀಡಲು ಸಂವಿಧಾನವನ್ನು ರಚಿಸಿದರು. ಸಂಪತ್ತು ಎಲ್ಲ ವರ್ಗದವರಿಗೆ ಸಮಾನವಾಗಿ ಹಂಚಿಕೆ ಆಗಬೇಕೆಂಬ ಆಶಯ ಅವರದಾಗಿತ್ತು ಎಂದರು.
ನಿವೃತ್ತ ಪ್ರೌಢಶಾಲಾ ಶಿಕ್ಷಕರಾದ ಕೆ.ಬಿ.ಮಂಜಪ್ಪ ಉಪನ್ಯಾಸ ನೀಡಿ, ಶರಣರಲ್ಲಿ ಮಾಚಿದೇವ ಅಗ್ರಸ್ಥಾನ ಪಡೆದಿದ್ದರು. ಬಸವಣ್ಣ ಕಲ್ಯಾಣಕ್ಕೆ ಬಂದಾಗ ಮಾಚಿದೇವರನ್ನು ಮೆಚ್ಚಿ ಅನುಭವ ಮಂಟಪಕ್ಕೆ ಕರೆದುಕೊಂಡು ಹೋದರು. ಆ ಮೂಲಕ ಮಾಚಿದೇವ ಶರಣ ಸಂಘದಲ್ಲಿ ಸ್ಥಾನ ಪಡೆದುಕೊಂಡರು. ಆದರೆ ಅಲ್ಲಿಯೂ ತನ್ನ ಕಾಯಕ ವೃತ್ತಿಯನ್ನು ಮುಂದುವರೆಸಿದರು ಎಂದರು.
ಶರಣ ಸಮೂಹದಲ್ಲಿ ಹಿರಿಯರಾಗಿದ್ದ ಮಾಚಿದೇವ ವಿಶೇಷ ಸ್ಥಾನ ಗಳಿಸಿದ್ದರು. ತಮ್ಮ ಇಡೀ ಜೀವನÀವನ್ನು ಸಮಾಜಕ್ಕಾಗಿ ಮುಡಿಪಾಗಿಟ್ಟಿದ್ದರು. ಕಲ್ಯಾಣ ಕ್ರಾಂತಿ ನಂತರ ಅನೇಕ ಶರಣರನ್ನು ಮತ್ತು ಅವರ ವಚನಗಳನ್ನು ರಕ್ಷಣೆ ಮಾಡಿದರು. ಇದರಿಂದ ಅನೇಕ ಶರಣರ ವಚನಗಳು ಈಗಲೂ ನಮಗೆ ಓದಲು ಸಿಗುತ್ತಿದೆ. ವೃತ್ತಿಯ ಬಗ್ಗೆ ಬಹಳ ನಿಷ್ಠೆಯಿಂದ ಇದ್ದ ಮಾಚಿದೇವ ಅಗಸತನ ಕೀಳಲ್ಲ, ಅರಸತನ ಮೇಲಲ್ಲ. ಅವರವರ ವೃತ್ತಿಯಲ್ಲಿ ಅವರು ಅರಸರೇ ಎಂದು ತಿಳಿಸಿದ್ದರು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಡಿವಾಳ ಸಮಾಜ ಸಂಘದ ಅಧ್ಯಕ್ಷರಾದ ಹೆಚ್.ಎಸ್.ಸದಾಶಿವಪ್ಪ ಹಾಗೂ ಸಮಾಜದ ಮುಖಂಡರುಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಹೆಚ್ ಹಾಜರಿದ್ದರು.

SN Channabasappa ಶಾಸಕ ಚನ್ನಬಸಪ್ಪ ಅವರಿಂದ ಉಚಿತ ಮೀನುಗಾರಿಕೆ ಕಿಟ್ ವಿತರಣೆ

0

SN Channabasappa ಜಿಲ್ಲಾ ಪಂಚಾಯತ್ ಹಾಗೂ ಮೀನುಗಾರಿಕೆ ಇಲಾಖೆಯ ವತಿಯಿಂದ ನಗರದ ಮೀನುಗಾರಿಕೆ ಉಪ ನಿರ್ದೇಶಕರ ಕಚೇರಿ ಆವರಣದಲ್ಲಿ 2024-25 ಸಾಲಿನ ರಾಜ್ಯ ವಲಯ ಯೋಜನೆ ಅಡಿಯಲ್ಲಿ 10 ವೃತ್ತಿಪರ ಮೀನುಗಾರರಿಗೆ ಉಚಿತವಾಗಿ ಮೀನುಗಾರಿಕೆ ಸಲಕರಣೆ ಕಿಟ್ ಹಾಗೂ ಫೈಬರ್ ಗ್ಲಾಸ್ ಹರಿಗೋಲನ್ನು ಶಿವಮೊಗ್ಗ ನಗರ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ವಿತರಿಸಿ, ಇಲಾಖೆ ಯೋಜನೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಮೀನುಗಾರರಿಗೆ ಸಲಹೆಗಳನ್ನು ನೀಡಿದರು.

SN Channabasappa ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಎನ್ ಕೆ ಜಗದೀಶ್ ಮಾಜಿ ಮಹಾನಗರ ಪಾಲಿಕೆಯ ಸದಸ್ಯರಾದ ಪ್ರಭಾಕರ್ ಪಿ, ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Shimoga News ಎಂಎಸ್‌ಎಂಇ ಕ್ಷೇತ್ರಕ್ಕೆ ಆಶಾದಾಯಕ ಬಜೆಟ್- ಬಿ.ಗೋಪಿನಾಥ್

0

Shimoga News ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಎಂಎಸ್‌ಎಂಇ ಕ್ಷೇತ್ರದ ಬೆಳವಣಿಗೆಗೆ ಆಶಾದಾಯಕವಾಗಿದೆ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದ್ದಾರೆ.

ದೇಶದಲ್ಲಿ ಇರುವ ಒಂದು ಕೋಟಿಗೂ ಅಧಿಕ ಎಂಎಸ್‌ಎಂಇ ಒಳಗೊಂಡು ಗ್ಲೋಬಲ್ ಮ್ಯಾನುಫ್ಯಾಕ್ಚರಿಂಗ್ ಹಬ್ ನಿರ್ಮಿಸಲು ಮುಂದಾಗುತ್ತಿರುವುದು ಅಭಿನಂದನೀಯ. ಎಂಎಸ್‌ಎಂಇ ಕ್ಷೇತ್ರದ ಉದ್ಯಮಕ್ಕೆ 5 ಕೋಟಿ ರೂ.ನಿಂದ 10 ಕೋಟಿ ರೂ. ಸಾಲಸೌಲಭ್ಯ ಮೊತ್ತ ಹೆಚ್ಚಿಸಿರುವುದು ಸಹಕಾರಿಯಾಗಲಿದೆ. ಹೊಸದಾಗಿ ಉದ್ಯಮ ಆರಂಭಿಸುವವರಿಗೆ 20 ಕೋಟಿ ರೂ.ವರೆಗೆ ಸಾಲಸೌಲಭ್ಯ ನೀಡುವ ನಿರ್ಧಾರ ಸ್ವಾಗತಾರ್ಹ. ಐದು ಲಕ್ಷ ರೂ.ವರೆಗೆ ಕಸ್ಟಮೈಸ್ಡ್ ಕ್ರೆಡಿಟ್ ಕಾರ್ಡ್ ಸೌಲಭ್ಯ ನೀಡುತ್ತಿರುವುದು ಹೆಚ್ಚಿನ ಅನುಕೂಲ ಒದಗಿಸಲಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Shimoga News ಉಡಾನ್ ಸ್ಕೀಂ ಯೋಜನೆ ವಿಸ್ತಾರಗೊಳಿಸುತ್ತಿರುವುದು 4 ಕೋಟಿಗೂ ಅಧಿಕ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಐಐಟಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಿರುವುದು, ಆಹಾರ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುತ್ತಿರುವುದು, ಜಿಲ್ಲಾಸ್ಪತ್ರೆಗಳಲ್ಲಿ ಕ್ಯಾನ್ಸರ್ ಘಟಕ ಆರಂಭಿಸಲು ಮುಂದಾಗುತ್ತಿರುವುದು ಉತ್ತಮ ನಿರ್ಧಾರವಾಗಿದೆ ಎಂದು ತಿಳಿಸಿದ್ದಾರೆ.

ಮಹಿಳಾ ಉದ್ಯಮಿಗಳಿಗೆ ಸಾಲ ಸೌಲಭ್ಯ ಹೆಚ್ಚಿಸುತ್ತಿರುವುದು, ಚರ್ಮೋದ್ಯಮ ಪ್ರೋತ್ಸಾಹಕ್ಕೆ ಫೋಕಸ್ ಪ್ರಾಡಕ್ಟ್ ಸ್ಕೀಂ, ಪಿಪಿಪಿ ಸ್ಕೀಂಗೆ ಉತ್ತೇಜನ, ಮುದ್ರಾ ಲೋನ್‌ನಿಂದ ಅನೇಕ ಪ್ರಯೋಜನ, ಜೀವ ಉಳಿಸಬಲ್ಲ 36 ಔಷಧಗಳಿಗೆ ತೆರಿಗೆ ಆಮದು ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

Davanagere News ಕುಹಕಿಗಳು ತಮ್ಮ ಅಜ್ಞಾನದಿಂದ ಸನಾತನ ಚಿಂತನೆಗಳನ್ನೇ ತಪ್ಪಾಗಿ‌ ಅರ್ಥೈಸುತ್ತಾರೆ- ಡಾ.ಎಚ್.ಬಿ.ಮಂಜುನಾಥ್

0

Davanagere News  ತನ್ನನ್ನು ತಾನು ಯತಾರ್ಥವಾಗಿ ಅರ್ಥಮಾಡಿಕೊಳ್ಳುವ ಅರಿವೇ ಅಧ್ಯಾತ್ಮವಾಗಿದ್ದು ಇದು ಎಷ್ಟು ಕಷ್ಟವೆಂದು ಭಾವಿಸುತ್ತಾರೋ ಅಷ್ಟೇ ಸುಲಭವೂ ಆಗಿದೆ ಎಂದು ಹಿರಿಯ ಪತ್ರಕರ್ತ ಡಾ.ಎಚ್ ಬಿ ಮಂಜುನಾಥ ಅಭಿಪ್ರಾಯ ಪಟ್ಟರು.

ದಾವಣಗೆರೆ ನಗರದ ದೇವರಾಜ ಅರಸು ಬಡಾವಣೆಯಲ್ಲಿರುವ ಶ್ರೀ ಮಾತಾ ಅನ್ನಪೂರ್ಣೇಶ್ವರಿ ದೇವಸ್ಥಾನದ 27ನೇ ವಾರ್ಷಿಕೋತ್ಸವದ ಅಂಗವಾಗಿ ಏರ್ಪಾಡಾಗಿದ್ದ ಧಾರ್ಮಿಕ ಮತ್ತು ಆಧ್ಯಾತ್ಮಿಕ ವಿಷಯವಾಗಿ ಉಪನ್ಯಾಸ ನೀಡುತ್ತಾ ತನ್ನ ಆತ್ಮದ ಅರಿವಾದಾಗ ನಾಮ ರೂಪಾತ್ಮಕವಾಗಿ ಬೇರೆ ಬೇರೆಯಾದರೂ ಎಲ್ಲರಲ್ಲಿರುವುದು ತನ್ನಂತಹುದೇ ಆತ್ಮ ಎಂಬುದು ವೇದ್ಯವಾಗುತ್ತದೆ, ಇದು ಪರಮಾತ್ಮವನ್ನು ಅರಿವಿಗೆ ತಂದುಕೊಳ್ಳಲು ಸಾಧನ ಸೋಪಾನವಾಗುತ್ತದೆ, ಇಂತಹ ಪ್ರಕ್ರಿಯೆಗಳು ಪ್ರಪಂಚದಲ್ಲಿ ಭಾರತ ದೇಶದಲ್ಲಿ ಮಾತ್ರವೇ ಸಾಧ್ಯ, ಕಾರಣ ನಮ್ಮ ಸನಾತನ ಚಿಂತನೆಗಳು ಇದಕ್ಕೆಲ್ಲ ಮಾರ್ಗಸೂಚಿಗಳಾಗಿವೆ, ಆದರೆ ಕುಹಕಿಗಳು ನಮ್ಮ ಸನಾತನ ಚಿಂತನೆಗಳನ್ನೇ ತಪ್ಪಾಗಿ ಅರ್ಥೈಸುತ್ತಾರೆ, ಇದಕ್ಕೆ ಅವರ ಅಜ್ಞಾನ ಅಥವಾ ಪೂರ್ವಗ್ರಹಗಳೇ ಕಾರಣವಾಗಿವೆ, ಆಧ್ಯಾತ್ಮಿಕ ಚಿಂತನೆಯ ಹಾದಿಯಲ್ಲಿರುವವರ ದಾರಿ ತಪ್ಪಿಸಲು ಹೊರಟವರು ತಾವೇ ದಾರಿ ತಪ್ಪಿ ಕಂಗಾಲಾಗಿ ಕೊನೆಗೆ ದಾರಿ ಕಾಣಲು ತಾವು ಧಿಕ್ಕರಿಸಿದ ಅಧ್ಯಾತ್ಮಕ್ಕೆ ಮೊರೆ ಹೋಗುತ್ತಾರೆ ಎಂಬುದನ್ನು ಸ್ವಾರಸ್ಯಕರ ಉದಾಹರಣೆಗಳ ಮೂಲಕ ವಿವರಿಸಿದರು.

Davanagere News ಲಯನ್ಸ್ ಭವನದ ಹೊರಾವರಣದಲ್ಲಿ ನೆರವೇರಿದ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ದೀಪಾ ಮಾಡಿದರೆ ಪ್ರಾರ್ಥನೆಯನ್ನು ವಿದುಷಿ ಶೀಲಾ ನಟರಾಜ ಹಾಡಿದರು. ಸ್ವಾಗತವನ್ನು ಕಾರ್ಯಕಾರಿ ಸಮಿತಿ ಅಧ್ಯಕ್ಷ ಪ್ರಕಾಶ್ ಪಾಟೀಲ್ ಕೋರಿದರು. ಗೌರವಾಧ್ಯಕ್ಷ ಆರ್ ಜಿ ನಾಗೇಂದ್ರ ಪ್ರಕಾಶ್ ಪ್ರಾಸ್ತಾವಿಕ ನುಡಿಗಳ ನಾಡಿದರು. ಕಾರ್ಯದರ್ಶಿ ವಿ ವೀರಭದ್ರರಾವ್, ಖಜಾಂಚಿಗಳಾದ ನಾಗಭೂಷಣ್ ಕಡೆ ಕೊಪ್ಪ, ತಾತಾ ಕೆ ಜಯಂತ್ ಹಾಗೂ ಶ್ರೀಮತಿ ಪ್ರಭಾ ಉಪಸ್ಥಿತರಿದ್ದರು.